Tag: Two Workers Falls In Borewell in Savadi Village

  • ರಿ ಬೋರ್ ತೆಗೆಯುವ ವೇಳೆ ದುರಂತ: ಕೊಳವೆ ಬಾವಿಗೆ ಬಿದ್ದು ಇಬ್ಬರು ಬಲಿ

    ರಿ ಬೋರ್ ತೆಗೆಯುವ ವೇಳೆ ದುರಂತ: ಕೊಳವೆ ಬಾವಿಗೆ ಬಿದ್ದು ಇಬ್ಬರು ಬಲಿ

     

    ಗದಗ: ರಿ ಬೋರ್ ತೆಗೆಯುವ ವೇಳೆ ಕೊಳವೆ ಬಾವಿಗೆ ಇಬ್ಬರು ವ್ಯಕ್ತಿಗಳು ಬಿದ್ದು ಮೃತ ಪಟ್ಟಿರುವ ಧಾರುಣ ಘಟನೆ ರೋಣ ತಾಲೂಕಿನ ಸವಡಿ ಗ್ರಾಮದ ಜಮೀನಿನಲ್ಲಿ ಸಂಭವಿಸಿದೆ.

    ಬಸವರಾಜ್ (32) ಶಂಕ್ರಪ್ಪ (30) ಕೊಳವೆ ಬಾವಿಗೆ ಬಿದ್ದ ದುರ್ದೈವಿಗಳು. ಬತ್ತಿದ ಕೊಳವೆ ಬಾವಿಯಿಂದ ಕೇಸಿಂಗ್ ಪೈಪ್ ತೆಗೆಯುವಾಗ ಮಣ್ಣು ಕುಸಿದು ಅವಘಡ ಸಂಭವಿಸಿದೆ.

    ಘಟನೆ ಹೇಗಾಯ್ತು?
    ಮಲ್ಲಪ್ಪ ಬಾಣದ ಎಂಬುವರು ಜಮೀನಿನಲ್ಲಿ ಈ ಹಿಂದೆ ಬೋರ್‍ವೆಲ್ ಕೊರೆಸಿದ್ದರು. ಈ ಬೋರ್‍ವೆಲ್‍ನಲ್ಲಿ ನೀರು ಸಿಗದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಕೇಸಿಂಗ್ ಪೈಪ್ ತೆಗೆಯುವ ಕೆಲಸ ಮಾಡುತ್ತಿದ್ದರು. ಇಂದು 25 ಅಡಿ ಉದ್ದದ ಕೇಸಿಂಗ್ ಪೈಪನ್ನು ತೆಗೆದಿದ್ದಾರೆ. ತೆಗೆದ ಬಳಿಕ ಅವರು ಕೇಸಿಂಗ್ ಪೈಪ್ ತೆಗೆದ ಜಾಗದ ಬಳಿ ಬಸವರಾಜ್, ಶಂಕ್ರಪ್ಪ ನಿಂತಿದ್ದಾರೆ. ಈ ವೇಳೆ ಮಣ್ಣು ಕುಸಿದು ಇಬ್ಬರು ಕೆಳಕ್ಕೆ ಜಾರಿದ್ದಾರೆ. ಕೊಳವೆ ಬಾವಿಗೆ ಬಿದ್ದ ಬಳಿಕ ಇವರ ಮೇಲೆ ಮಣ್ಣು ಬಿದ್ದಿದೆ.

    ಈಗಾಗಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ಆಗಮಿಸಿದ್ದಾರೆ. ಸ್ಥಳದಲ್ಲಿ ನೂರಕ್ಕೂ ಅಧಿಕ ಜನ ಸೇರಿದ್ದಾರೆ. ದೇಹದ ಮಣ್ಣು ಬಿದ್ದ ಹಿನ್ನೆಲೆಯಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ.

    https://www.youtube.com/watch?v=TESplnWdMrU