Tag: two-wheelers

  • ಬಿಆರ್‌ ಹಿಲ್ಸ್‌ಗೆ ಜ.15, 16 ರಂದು ದ್ವಿಚಕ್ರ ವಾಹನ ಸಂಚಾರಕ್ಕೆ ನಿರ್ಬಂಧ

    ಬಿಆರ್‌ ಹಿಲ್ಸ್‌ಗೆ ಜ.15, 16 ರಂದು ದ್ವಿಚಕ್ರ ವಾಹನ ಸಂಚಾರಕ್ಕೆ ನಿರ್ಬಂಧ

    ಚಾಮರಾಜನಗರ: ಸಂಕ್ರಾಂತಿ (Makar Sankranti) ಹಬ್ಬದಂದು ಯಳಂದೂರು ತಾಲೂಕಿನಲ್ಲಿರುವ ಬಿಳಿಗಿರಿ ರಂಗನಬೆಟ್ಟಕ್ಕೆ (Biligiriranga Hills) ದ್ವಿಚಕ್ರ ವಾಹನಗಳ (Two wheelers) ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

    ಸಂಕ್ರಾಂತಿ ಹಾಗೂ ಚಿಕ್ಕಜಾತ್ರೆ ಹಿನ್ನಲೆಯಲ್ಲಿ ಜ.15 ಹಾಗೂ 16 ರಂದು ಬೈಕ್‌ಗಳಿಗೆ ನಿರ್ಬಂಧ ಹೇರಿ ಡಿಸಿ ಶಿಲ್ಪಾ ನಾಗ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಮೂಲ Vs ವಲಸಿಗ : ಬೆಳಗಾವಿಯಲ್ಲಿ ಬಿಜೆಪಿ ಸಂಘರ್ಷ ಜೋರು

    ಈ ಎರಡು ದಿನ ವಾಹನ ದಟ್ಟನೆ ಹೆಚ್ಚಾಗುವ ಸಾಧ್ಯತೆ ಇದ್ದು ಬೆಟ್ಟದ ರಸ್ತೆ ಕಿರಿದು ಹಾಗೂ ಕಡಿದಾದ ಕಾರಣ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಕೈಗೊಂಡಿದೆ. ಗುಂಬಳ್ಳಿ ಮತ್ತು ಹೊಂಡರಬಾಳು ಎರಡು ಅರಣ್ಯ ಇಲಾಖೆಯ ಚೆಕ್‌ ಪೋಸ್ಟ್ ಗಳಲ್ಲಿಯೂ ನಿರ್ಬಂಧ ವಿಧಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಹುಟ್ಟು ಮುಸ್ಲಿಂ ಆಗದಿದ್ರೂ, ಟೋಪಿ ಹಾಕಿದಾಗ ಒರಿಜಿನಲ್‌ ಮುಸ್ಲಿಂ ಥರ ಕಾಣ್ತಾರೆ: ಸಿ.ಟಿ.ರವಿ

     

  • ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ

    ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ

    ಬೆಂಗಳೂರು: ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರಕ್ಕೆ ನೈಸ್ ಸಂಸ್ಥೆ ನಿರ್ಬಂಧ ಹೇರಲಾಗಿದೆ.

    ನೈಸ್ ಸಂಸ್ಥೆ ಈ ಕುರಿತು ಮಾಧ್ಯಮ ಪ್ರಕಟಣೆ ಮಾಡಿದ್ದು, ಸುರಕ್ಷತಾ ಕಾರಣಗಳಿಂದಾಗಿ ರಾತ್ರಿ ಸಮಯದಲ್ಲಿ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಪಾದಯಾತ್ರೆ ಕೈ ಬಿಡುವಂತೆ ಸಿದ್ದರಾಮಯ್ಯ, ಡಿಕೆಶಿಗೆ ಸಿಎಂ ಬೊಮ್ಮಾಯಿ ಪತ್ರ

    ನೈಸ್ ಆಡಳಿತ ಮಂಡಳಿಯು, ಬೆಂಗಳೂರು ನಗರ ಸಂಚಾರ ಜಂಟಿ ಆಯುಕ್ತರ ಸೂಚನೆ ಮೇರೆಗೆ ಹಾಗೂ ಪ್ರಯಾಣಿಕರ ಸುರಕ್ಷತೆಯ ದೃಷ್ಠಿಯಿಂದ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ನಿರ್ಬಂಧ ಹೇರಲಾಗಿದೆ.

     

    ಜನವರಿ 16ರಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೂ ಪ್ರತಿನಿತ್ಯ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ:  ಯುಪಿಯಲ್ಲಿ 50-100 ಕ್ಷೇತ್ರಗಳಲ್ಲಿ ಶಿವಸೇನೆ ಸ್ಪರ್ಧೆ- ಮೈತ್ರಿ ಮಾಡಲ್ಲ ಎಂದ ರಾವತ್

  • 20 ವರ್ಷದಲ್ಲಿ 1,500 ಬೈಕ್ ಎಗರಿಸಿದ್ದ ಕಳ್ಳ ಅರೆಸ್ಟ್

    20 ವರ್ಷದಲ್ಲಿ 1,500 ಬೈಕ್ ಎಗರಿಸಿದ್ದ ಕಳ್ಳ ಅರೆಸ್ಟ್

    – ಎಷ್ಟೇ ಪ್ರಯತ್ನ ಪಟ್ರೂ ಕಸಬು ಬಿಡೋಕೆ ಆಗ್ತೀಲ್ಲ ಅಂದ ಆರೋಪಿ

    ಗಾಂಧಿನಗರ್: 20 ವರ್ಷಗಳಲ್ಲಿ 1,500 ಬೈಕ್‍ಗಳನ್ನು ಎಗರಿಸಿದ್ದ ಮೋಸ್ಟ್ ವಾಂಟೆಡ್ ಕಳ್ಳನನ್ನು ಗುಜರಾತ್‍ನ ಗೋಧ್ರಾ ನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.

    ಅರವಿಂದ್ ಕುಮಾರ್ ಜಯಂತಿಲಾಲ್ ವ್ಯಾಸ್ (50) ಬಂಧಿತ ಆರೋಪಿ. ಬೈಕ್ ಮೇಲೆ ಗೋಧ್ರಾ ನಗರದಲ್ಲಿ ಸುತ್ತಾಡುತ್ತಿದ್ದ ವ್ಯಾಸ್‍ನನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಯಲಾಗಿದೆ.

    ಇಲ್ಲಿಯವರೆಗೆ ಎಷ್ಟು ಬೈಕ್ ಕಳ್ಳತನ ಮಾಡಿದ್ದೀಯಾ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಈ ವೇಳೆ ಯಾವುದೇ ತಪ್ಪನ್ನು ಮುಚ್ಚಿಡದೆ ವ್ಯಾಸ್ ನೀಡಿದ್ದ ಅಂಕಿ-ಸಂಖ್ಯೆ ಕೇಳಿ ಪೊಲೀಸರೇ ಒಂದು ಕ್ಷಣ ತಬ್ಬಿಬ್ಬಾಗಿದ್ದರಂತೆ. ಕಳೆದ 20 ವರ್ಷಗಳಲ್ಲಿ ನಾನು 1,500 ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದೇನೆ. ಈ ಕಸಬನ್ನು ಕೈಬಿಡಲು ಪ್ರಯತ್ನಿಸಿದರೂ ಆಗುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾನೆ.

    ಈ ಹಿಂದೆಯು ವ್ಯಾಸ್ ಬೈಕ್ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದು ಬಂಧನಕ್ಕೆ ಒಳಗಾಗಿದ್ದ. ಆದರೆ ದೀಪಾವಳಿ ವೇಳೆ ಬೇಲ್ ಪಡೆದು ಜೈಲಿನಿಂದ ಹೊರಬಂದಿದ್ದ. ಬಳಿಕವೂ ತನ್ನ ಕೈಚಳಕವನ್ನು ಮುಂದುವರಿಸಿದ್ದ ವ್ಯಾಸ್, ಜೈಲಿನಿಂದ ಬಂದ ಮೇಲೆ 19 ಬೈಕ್‍ಗಳನ್ನು ಕಳ್ಳತನ ಮಾಡಿದ್ದಾನೆ. ಅವುಗಳನ್ನು ವಶಕ್ಕೆ ಪಡೆದು ವ್ಯಾಸ್‍ನನ್ನು ಬಂಧಿಸಿದ್ದೇವೆ ಎಂದು ಗೋಧ್ರಾ ಡಿಎಸ್‍ಪಿ ಆರ್.ಐ.ದೇಸಾಯಿ ತಿಳಿಸಿದ್ದಾರೆ.

    ಮದ್ಯದ ಚಟಕ್ಕೆ ಒಳಗಾಗಿರುವ ವ್ಯಾಸ್‍ಗೆ ಇಬ್ಬರು ಪತ್ನಿಯರಿದ್ದಾರೆ. ಆದರೆ ಮಕ್ಕಳಾಗಿಲ್ಲ. ವಡೋದರಾ ನಗರ ವ್ಯಾಪ್ತಿಯಲ್ಲಿಯೇ ಹೆಚ್ಚಾಗಿ ವ್ಯಾಸ್ ತನ್ನ ಕೈಚಳಕ ತೋರಿಸುತ್ತಿದ್ದ. ಕದ್ದು ತಂದ ಬೈಕ್‍ಗಳನ್ನು ಬಿಚ್ಚಿ ಬಿಡಿಭಾಗಗಳನ್ನು ವ್ಯಾಸ್ ಮಾರಾಟ ಮಾಡುತ್ತಿದ್ದ ಎಂದು ದೇಸಾಯಿ ಹೇಳಿದ್ದಾರೆ.

    ಎಲ್ಲ ರೀತಿಯ ಬೈಕ್ ಗಳಿಗೆ ಬರುವಂತೆ ವಿವಿಧ ಬಗೆಯ ಕೀಗಳನ್ನು ವ್ಯಾಸ್ ಹೊಂದಿದ್ದ. ವಾಹನಗಳು ಹೆಚ್ಚಾಗಿ ನಿಲ್ಲುತ್ತಿದ್ದ ಜಾಗಕ್ಕೆ ತೆರಳಿ. ಯಾವ ವಾಹನಕ್ಕೆ ಕೀ ಸರಿಹೋಗುತ್ತದೇಯೋ ಅದನ್ನು ಎಗರಿಸುತ್ತಿದ್ದ ಎಂದು ಡಿಎಸ್‍ಪಿ ಮಾಹಿತಿ ನೀಡಿದ್ದಾರೆ.

    ಎಷ್ಟೋ ಬಾರಿ ನಾನು ಕಳ್ಳತನ ಮಾಡಬಾರದು ಅಂತ ನಿರ್ಧಾರ ಮಾಡಿದ್ದೆ. ಆದರೆ ಸಮಾಜ ಮಾತ್ರ ನನ್ನನ್ನು ಒಳ್ಳೆಯವನಾಗಿ ಇರಲು ಬಿಡುತ್ತಿಲ್ಲ. ಹೀಗಾಗಿ ನಾನು ಮತ್ತೆ ಬೈಕ್ ಕಳ್ಳತನಕ್ಕೆ ಇಳಿದುಬಿಟ್ಟೆ ಎಂದು ಬಂಧಿತ ಆರೋಪಿ ವ್ಯಾಸ್ ಹೇಳಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv