Tag: Two wheel riders

  • ಸರ್ವಿಸ್ ರಸ್ತೆಯಲ್ಲಿ ಗುಂಡಿ ಗಂಡಾಂತರ: ಹೆದ್ದಾರಿಯಲ್ಲಿ ಕುಸಿದ ಬೃಹತ್ ಸ್ಲಾಬ್‌ಗಳು

    ಸರ್ವಿಸ್ ರಸ್ತೆಯಲ್ಲಿ ಗುಂಡಿ ಗಂಡಾಂತರ: ಹೆದ್ದಾರಿಯಲ್ಲಿ ಕುಸಿದ ಬೃಹತ್ ಸ್ಲಾಬ್‌ಗಳು

    ನೆಲಮಂಗಲ: ಸಿಲಿಕಾನ್ ಸಿಟಿಯಲ್ಲಿ ವಾಹನ ಚಾಲಕರಿಗೆ ಯಾವಾಗಲೂ ಟ್ರಾಫಿಕ್ ಸಮಸ್ಯೆ, ಮಳೆಯ ಸಂದರ್ಭದಲ್ಲಿ ಗುಂಡಿಯ ಸಮಸ್ಯೆ. ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇರುತ್ತದೆ.

    ಕೆಲ ವರ್ಷಗಳ ಹಿಂದೆ ದಾಸರಹಳ್ಳಿಯ (Dasarahalli) ಎಂಟನೇ ಮೈಲಿ ಬಳಿ ಫ್ಲೈಓವರ್‌ ರಸ್ತೆಯ ಪಿಲ್ಲರ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ವಾಹನಗಳಿಗೆ ನಿಷೇಧ ಹೇರಲಾಯಿತು. ಇದರಿಂದಾಗಿ ಸಾಕಷ್ಟು ಸಮಸ್ಯೆಯಾಗಿ ಪ್ರತಿನಿತ್ಯ ಟ್ರಾಫಿಕ್ ಜಾಮ್‌ನಿಂದಾಗಿ ಸವಾರರು ಪರಿತಪ್ಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿ ಸುದ್ದಿಗೆ ಕಾರಣವಾಗಿತ್ತು. ಇತ್ತೀಚೆಗಷ್ಟೇ ನೆಲಮಂಗಲ (Nelamangala) ಹಾಗೂ ಗೊರಗುಂಟೆಪಾಳ್ಯ (Gorguntepalya) ನಡುವಿನ ರಾಷ್ಟ್ರೀಯ ಹೆದ್ದಾರಿಯು ಈ ಟ್ರಾಫಿಕ್ ಸಮಸ್ಯೆಗಳಿನ್ನು ತೆರವುಗೊಳಿಸಿ, ವಾಹನಗಳಿಗೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿತ್ತು.ಇದನ್ನೂ ಓದಿ: ಪಶ್ಚಿಮ ಬಂಗಾಳದ ʼಅಪರಾಜಿತ ಬಿಲ್‌ʼ ಪೋಕ್ಸೊಗಿಂತ ಭಿನ್ನ ಹೇಗೆ?

    ಇಗೀಗ ಟೋಲ್ ಕಂಪನಿಯ ನಿರ್ಲಕ್ಷ್ಯದಿಂದ ಮತ್ತೊಂದು ಭಾರೀ ಅನಾಹುತಕ್ಕೆ ಕಾರಣವಾಗಿದೆ. ನೆಲಮಂಗಲದ ಕುಣಿಗಲ್ ಬೈಪಾಸ್, ಮಾಕಳಿ, ಮಾದನಾಯಕನಹಳ್ಳಿ, ಮಾದಾವಾರ ರಸ್ತೆಯ ಬಳಿ ಬೃಹತ್ ಗುಂಡಿಗಳಿಂದ ಸವಾರರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದ ಪರಿಣಾಮ ರಸ್ತೆಯ ಪಕ್ಕದ ಬೃಹತ್ ಸ್ಲಾಬ್‌ಗಳು ಕುಸಿದು ವಾಹನ ಸವಾರರ ಜೀವಕ್ಕೆ ಮೃತ್ಯು ಕೂಪವಾಗಿ ಪರಿಣಮಿಸಿವೆ.

    ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುವ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ರಾಜ್ಯದ ಸುಮಾರು 17 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೃಹತ್ ಗುಂಡಿಗಳ ಗಂಡಾಂತರದಿಂದ ಪರಿಸ್ಥಿತಿ ಹದಗೆಟ್ಟಿದೆ. ದ್ವಿಚಕ್ರ ವಾಹನ ಸವಾರರು ಸ್ವಲ್ಪ ಯಾಮಾರಿದರೂ ಜೀವಕ್ಕೆ ಸಂಚಕಾರ ತರಲಿದೆ.ಇದನ್ನೂ ಓದಿ: Breaking | ರೇಣುಕಾಸ್ವಾಮಿ ಕೊಲೆ ಕೇಸ್‌ – ದರ್ಶನ್‌ & ಗ್ಯಾಂಗ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

    ಪ್ರತಿನಿತ್ಯ ಲಕ್ಷಾಂತರ ರೂಪಾಯಿ ಟೋಲ್ ಹಣ ಸಂಗ್ರಹಿಸುವ ಟೋಲ್ ಕಂಪನಿ ನಿರ್ವಹಣೆ ಮಾಡಬೇಕಿದ್ದು, ಸವಾರರ ಜೀವದ ಜೊತೆಗೆ ಚಲ್ಲಾಟವಾಡುತ್ತಿದ್ದಾರೆ ಎಂದು ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಸಮಸ್ಯೆಗಳ ಆಗರವಾಗಿರುವ ನೆಲಮಂಗಲ ಗೊರಗುಂಟೆಪಾಳ್ಯ ನಡುವಿನ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಒಂದಲ್ಲ ಒಂದು ಸಮಸ್ಯೆ ಸವಾರರ ಜೀವಕ್ಕೆ ಯಮಸ್ವರೂಪಿಯಾಗಿದೆ.

  • ಸ್ಲಿಪ್ಪರ್ ಹಾಕಿ ಬೈಕ್ ಓಡಿಸಿದ್ರೆ ಬೀಳುತ್ತೆ ಭಾರೀ ದಂಡ!

    ಸ್ಲಿಪ್ಪರ್ ಹಾಕಿ ಬೈಕ್ ಓಡಿಸಿದ್ರೆ ಬೀಳುತ್ತೆ ಭಾರೀ ದಂಡ!

    ಬೆಂಗಳೂರು: ಹೊಸ ಟ್ರಾಫಿಟ್ ದಂಡ ಜಾರಿಯಿಂದಾಗಿ ವಾಹನ ಸವಾರರು ಶಾಕ್‍ಗೆ ಒಳಗಾಗಿದ್ದಾರೆ. ಸವಾರರು ಬೈಕ್‍ಗಳನ್ನು ಮನೆಯಿಂದ ಹೊರಗೆ ತರುವುದಕ್ಕೂ ಹಿಂದೇಟು ಹಾಕುವಂತಾಗಿದೆ. ಈ ಬೆನ್ನಲ್ಲೇ ಸಂಚಾರ ನಿಯಮವೊಂದು ಸವಾರರು ಬೆಚ್ಚಿ ಬೀಳುವಂತೆ ಮಾಡಿದೆ.

    ಸವಾರರು ಸ್ಲಿಪ್ಪರ್, ಹವಾಯಿ ಚಪ್ಪಲ್ ಹಾಕಿಕೊಂಡು ಗೇರ್ ಹೊಂದಿರುವ ದ್ವಿಚಕ್ರ ವಾಹನ ಓಡಿಸುವಂತಿಲ್ಲ. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ಭಾರೀ ದಂಡಕ್ಕೆ ಗುರಿಯಾಗಬೇಕಾಗುತ್ತದೆ. ದಂಡದ ಮೊತ್ತವು 1,000 ರೂ. ಆಗಿದ್ದು, ಈ ತಪ್ಪು ಮರುಕಳಿಸಿದರೆ ದಂಡದ ಜೊತೆಗೆ 15 ದಿನಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇದನ್ನೂ ಓದಿ: ಸಂಚಾರ ನಿಯಮ ಉಲ್ಲಂಘಿಸಿ 86,500 ರೂ. ದಂಡ ತೆತ್ತ ಲಾರಿ ಚಾಲಕ

    ಸ್ಲಿಪ್ಪರ್, ಹವಾಯಿ ಚಪ್ಪಲಿ ಹಾಕಿದರೆ ದ್ವಿಚಕ್ರ ವಾಹನದ ಗೇರ್ ಬದಲಾಯಿಸಲು, ವಾಹನ ನಿಯಂತ್ರಣಕ್ಕೆ, ಪಾರ್ಕ್ ಮಾಡಲು, ಪಾರ್ಕಿಂಗ್‍ನಿಂದ ವಾಹನ ತೆಗೆಯಲು ಸಮಸ್ಯೆ ಆಗಲಿದೆ. ಜೊತೆಗೆ ಅಪಘಾತದವಾದಾಗ ಕಾಲಿಗೆ ಗಾಯವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಸವಾರರು ಶೂ ಧರಿಸಿದರೆ ಉತ್ತಮ ಎಂಬುದು ನಿಯಮದ ಉದ್ದೇಶವಾಗಿದೆ. 1988ರ ಮೋಟಾರು ವಾಹನ ಕಾಯ್ದೆಯಲ್ಲೇ ಇದನ್ನು ಉಲ್ಲೇಖಿಸಲಾಗಿದೆ. ಇಲ್ಲಿಯವರೆಗೆ ಈ ನಿಯಮವನ್ನು ಗಂಭೀರವಾಗಿ ಟ್ರಾಫಿಕ್ ಪೊಲೀಸರು ಗಮನಿಸುತ್ತಿರಲಿಲ್ಲ. ಆದರೆ ಈಗ ದೇಶದ ವಿವಿಧ ಕಡೆಗಳಲ್ಲಿ ಈ ನಿಯಮವನ್ನು ಪಾಲಿಸಲು ಮುಂದಾಗಿದ್ದು ಹಲವು ನಗರಗಳಲ್ಲಿ ಸವಾರರು ಈ ಪ್ರಕರಣದ ಅಡಿ ದಂಡ ಪಾವತಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ವಾಹನ ಚಾಲಕನಿಗೂ ಬಿತ್ತು 1 ಸಾವಿರ ರೂ. ದಂಡ

    ಹೊಸ ಟ್ರಾಫಿಟ್ ದಂಡ ಜಾರಿಯಾದ ಬಳಿಕ ಟ್ರಾಫಿಕ್ ಪೊಲೀಸರು ಕೂಡ ಫುಲ್ ಆ್ಯಕ್ಟೀವ್ ಆಗಿದ್ದು, ಲೈಸನ್ಸ್, ಹೆಲ್ಮೆಟ್, ಲೈಸನ್ಸ್ ಸೇರಿ ಎಲ್ಲ ರೀತಿಯ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಹೀಗಾಗಿ ದಂಡದ ಮೊತ್ತವು ಭಾರೀ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ.