Tag: Twitter Trending

  • ಟ್ವಿಟ್ಟರ್ ಟ್ರೇಂಡಿಂಗ್‌ನಲ್ಲಿ ಪೂಜಾ ಹೆಗ್ಡೆ:‌ ಕಾನ್ ಫೆಸ್ಟಿವಲ್‌ನಲ್ಲಿ ಪೂಜಾ ಮಿಂಚಿಂಗ್

    ಟ್ವಿಟ್ಟರ್ ಟ್ರೇಂಡಿಂಗ್‌ನಲ್ಲಿ ಪೂಜಾ ಹೆಗ್ಡೆ:‌ ಕಾನ್ ಫೆಸ್ಟಿವಲ್‌ನಲ್ಲಿ ಪೂಜಾ ಮಿಂಚಿಂಗ್

    ವಿಶ್ವದ ಅತ್ಯಂತ ಪ್ರಸಿದ್ಧ ಸಿನಿಮೋತ್ಸವ ಕಾನ್ ಫೆಸ್ಟಿವಲ್ ಈಗಾಗಲೇ ಶುರುವಾಗಿದೆ. ಈ ಕಾನ್ ಫೆಸ್ಟಿವಲ್‌ನಲ್ಲಿ ಭಾರತೀಯ ಸಿನಿಮಾ ರಂಗದ ಖ್ಯಾತ ತಾರೆಯರು ಭಾಗಿಯಾಗಿದ್ದಾರೆ. ಇದೀಗ ಕಾನ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿರುವ ದಕ್ಷಿಣ ಭಾರತದ ನಟಿ ಪೂಜಾ ಹೆಗ್ಡೆ ಫೋಟೋಗಳು ಟ್ವಿಟ್ಟರ್‌ನಲ್ಲಿ ಟ್ರೇಂಡಿಂಗ್‌ನಲ್ಲಿದೆ. ಪೂಜಾ ಲುಕ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

     

    View this post on Instagram

     

    A post shared by Pooja Hegde (@hegdepooja)

    ಟಾಲಿವುಡ್ ಮತ್ತು ಬಾಲಿವುಡ್ ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಪೂಜಾ ಹೆಗ್ಡೆ ಕಾನ್ ಫೆಸ್ಟಿವಲ್‌ನಲ್ಲಿ ಭಾಗಿದ್ದಾರೆ. ಕಾನ್ ಫೆಸ್ಟಿವಲ್‌ನ ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಂಡಿರೋ ಫೋಟೋ ಮತ್ತು ವಿಡಿಯೋ ಸಿನಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಲಾಂಗ್ ಗೌನ್‌ನಲ್ಲಿ ಪೂಜಾ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ವಿವಾಹ: ಆದಿ ಪಿನಿಸೆಟ್ಟಿ ಜತೆ ನಿಕ್ಕಿ ಮದುವೆ

     

    View this post on Instagram

     

    A post shared by Pooja Hegde (@hegdepooja)

    ಈಗಾಗಲೇ ದಕ್ಷಿಣ ಭಾರತದ ಸಾಕಷ್ಟು ತಾರೆಯರ ಜತೆ ಪೂಜಾ ಹೆಗ್ಡೆ ಕೂಡ ಕಾಣಿಸಿಕೊಂಡಿದ್ದು, ಚೆಂದದ ಡ್ರೇಸ್ ತೊಟ್ಟು ಮಿರ ಮಿರ ಅಂತಾ ಮಿಂಚಿದ್ದಾರೆ. ಇನ್ನು ಕಾನ್ ಫೆಸ್ಟಿವಲ್‌ನಲ್ಲಿ ಮತ್ತೊಂದು ವಿಶೇಷ ಅಂದ್ರೆ ಬಾಲಿವುಡ್ ನಟಿ ಕನ್ನಡತಿ ದೀಪಿಕಾ ಪಡುಕೋಣೆ ಕಾನ್ ಚಲನಚಿತ್ರೋತ್ಸವ ಜ್ಯೂರಿಯಾಗಿ ಆಯ್ಕೆಯಾಗಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಯ ಚಿತ್ರಗಳು ಕಾನ್ ಫೆಸ್ಟಿವಲ್ ಪ್ರದರ್ಶನಗೊಳ್ಳಲಿದೆ.

  • `ಕೆಜಿಎಫ್ 2′ ವೈಲೆನ್ಸ್ ಸ್ಟೈಲ್‌ನಲ್ಲಿ  ಉದಯ್‌ಪುರ ರೇಂಜ್ ಪೊಲೀಸರ ಪೋಸ್ಟ್ ವೈರಲ್!

    `ಕೆಜಿಎಫ್ 2′ ವೈಲೆನ್ಸ್ ಸ್ಟೈಲ್‌ನಲ್ಲಿ  ಉದಯ್‌ಪುರ ರೇಂಜ್ ಪೊಲೀಸರ ಪೋಸ್ಟ್ ವೈರಲ್!

    ಸಿನಿಮಾರಂಗದಲ್ಲಿ ಸದ್ಯ ಧೂಳೆಬ್ಬಿಸುತ್ತಿರುವ ಸಿನಿಮಾ ಅಂದ್ರೆ ಯಶ್ ನಟನೆಯ `ಕೆಜಿಎಫ್ 2′ ಚಿತ್ರ. ಸ್ಯಾಂಡಲ್‌ವುಡ್, ಕಾಲಿವುಡ್, ಬಾಲಿವುಡ್ ಹೀಗೆ ಎಲ್ಲಾ ವುಡ್‌ನಲ್ಲೂ ಯಶ್ ಚಿತ್ರ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ಅದರಲ್ಲೂ ಚಿತ್ರದ ವೈಲೆನ್ಸ್ ಡೈಲಾಗ್ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಈಗ ಉದಯ್‌ಪುರ ರೇಂಜ್ ಪೊಲೀಸರು `ವೈಲೆನ್ಸ್’ ಡೈಲಾಗ್‌ನ ನಾಮಫಲಕ ನೋಡುಗರನ್ನ ಅಟ್ರಾಕ್ಟ್ ಮಾಡುತ್ತಿದೆ.

    ಒಂದ್ ಕಡೆ `ಕೆಜಿಎಫ್ 2′ ಸಿನಿಮಾ ಸೌಂಡ್ ಮಾಡ್ತಿದ್ರೆ ಇನ್ನೊಂದ್ ಕಡೆ ಚಿತ್ರ ಡೈಲಾಗ್ ಫ್ಯಾನ್ಸ್ಗೆ ಕಿಕ್ ಕೊಡ್ತಿದೆ. ಇಷ್ಟು ದಿನ ಫ್ಯಾನ್ಸ್, ಸೆಲೆಬ್ರೆಟಿಸ್ ವೈಲೆನ್ಸ್ ಡೈಲಾಗನ್ನ ಅವರದ್ದೇ ಆದ ಸ್ಟೈಲಿನಲ್ಲಿ ಹೇಳ್ತಿದ್ದರು. ಈಗ ಪೊಲೀಸರು ಕೂಡ ಅಪರಾಧ ಮಾಡುವವರಿಗೆ ಡೈಲಾಗ್ ಎಚ್ಚರಿಕೆಯನ್ನ ಕೊಟ್ಟಿದ್ದಾರೆ.

    ಉದಯ್‌ಪುರ ರೇಂಜ್ ಪೊಲೀಸರು ಟ್ವಿಟರ್‌ನಲ್ಲಿ ರಾಕಿ, ಗರುಡ ಮತ್ತು ಅಧೀರ ಯಾರೇ ಅಪರಾಧಿ ಕಾನೂನನ್ನ ಯಾರು ಉಲ್ಲಂಘಿಸಿದರು ಖಾಕಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. 100 ಅಥವಾ 112 ನಂಬರ್‌ಗೆ ಡಯಲ್ ಮಾಡಿ, ಮಾಹಿತಿ ನೀಡಿ ಅಫರಾಧಿಗಳನ್ನು ಹಿಡಿಯಿರಿ ಎಂದು ಟ್ವಿಟ್ ಮಾಡಿರುವುದಲ್ಲದೇ ಸ್ಟಾಪ್ ಕ್ರೈಂ ಕಂಪ್ಲೇಂಟ್, ಕಂಪ್ಲೇಂಟ್, ಕಂಪ್ಲೇಂಟ್ ವಿ ಡೋಂಟ್ ಅವಾರ್ಡ್ ವಿ ಟೇಕ್ ರಿಯಾಕ್ಷನ್ ಪೋಸ್ಟ್ ಹಾಕಿ ʻಕೆಜಿಎಫ್ 2ʼ ಸ್ಟೈಲ್‌ನಲ್ಲಿ ತಿಳಿಸಿದ್ದಾರೆ. ಸದ್ಯ ಈ ಪೋಸ್ಟ್ ಟ್ವಿಟರ್‌ನಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

    ವಿಶ್ವದ ಮೂಲೆ ಮೂಲೆಯಲ್ಲೂ `ಕೆಜಿಎಫ್ 2′ ಚಿತ್ರ ನೋಡಿ ಫಿದಾ ಆಗಿರೋ ಅಭಿಮಾನಿಗಳಿಗೆ. ಪೊಲೀಸರು ಕೂಡ ಅಪರಾಧ ಮಾಡುವವರಿಗೆ ವೈಲೆನ್ಸ್ ಡೈಲಾಗ್ ಮೂಲಕ ಎಚ್ಚರಿಕೆಯನ್ನ ಕೊಟ್ಟಿದ್ದಾರೆ. ಉದಯ್‌ಪುರ ರೇಂಜ್ ಪೊಲೀಸರ ಈ ಟ್ವೀಟ್ ಗಮನ ಸೆಳೆಯುತ್ತಿದೆ.

  • ಟ್ರೆಂಡಿಂಗ್ ಆಯ್ತು ಬೆಂಗಳೂರು ಹೋಟೆಲಿನ ಐಸ್ ಕ್ಯಾಂಡಿ ಇಡ್ಲಿ

    ಟ್ರೆಂಡಿಂಗ್ ಆಯ್ತು ಬೆಂಗಳೂರು ಹೋಟೆಲಿನ ಐಸ್ ಕ್ಯಾಂಡಿ ಇಡ್ಲಿ

    – ಆನಂದ್ ಮಹೀಂದ್ರಾ ಟ್ವೀಟ್‍ಗೆ ಭರ್ಜರಿ ಪ್ರತಿಕ್ರಿಯೆ

    ಬೆಂಗಳೂರು: ಗ್ರಾಹಕರನ್ನು ಸೆಳೆಯಲು ಹೋಟೆಲ್‍ಗಳು ವಿವಿಧ ರೀತಿಯ ಐಡಿಯಾಗಳನ್ನು ಮಾಡುತ್ತವೆ. ಅದೇ ರೀತಿ ಇಲ್ಲೊಂದು ಹೋಟೆಲ್ ಐಸ್ ಕ್ಯಾಂಡಿ ಆಕಾರದಲ್ಲಿ ಇಡ್ಲಿ ಮಾಡಿದ್ದು, ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್‍ನಲ್ಲಿದೆ.

    ಈ ವಿಶೇಷ ಇಡ್ಲಿಯ ಫೋಟೋವನ್ನು ಮಹೀಂದ್ರಾ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಟ್ವೀಟ್ ಮಾಡಿದ್ದಾರೆ. ಫೋಟೋಗೆ ಅದ್ಭುತ ಸಾಲು ಬರೆದಿರುವ ಅವರು, ಬೆಂಗಳೂರು ಭಾರತದ ಇನೋವೇಶನ್ ಕ್ಯಾಪಿಟಲ್, ಹಲವು ಅನಿರೀಕ್ಷಿತ ವಲಯಗಳಲ್ಲಿ ಇದರ ಕ್ರಿಯೇಟಿವಿಟಿಯನ್ನು ತಡೆಯಲು ಎಂದಿಗೂ ಸಾಧ್ಯವಿಲ್ಲ.  ಐಸ್ ಕಡ್ಡಿಯ ಮೇಲೆ ಇಡ್ಲಿ, ಸಾಂಬಾರ್ ಹಾಗೂ ಚಟ್ನಿಯಲ್ಲಿ ಅದ್ದಿಕೊಂಡು ತಿನ್ನುವುದು. ಯಾರು ಇದರ ಪರವಾಗಿದ್ದೀರಿ, ಯಾರು ಇದರ ವಿರುದ್ಧವಾಗಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಕಾಲದಲ್ಲೂ ಮಾದಪ್ಪನ ಹುಂಡಿಯಲ್ಲಿ 2.62 ಕೋಟಿ ಸಂಗ್ರಹ

    ಹೀಗೆ ಪ್ರಶ್ನೆ ಕೇಳಿದ್ದೇ ತಡ, ಹಲವರು ವಿವಿಧ ರೀತಿಯಲ್ಲಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಹೀಗಾಗಿ ಟ್ವಿಟ್ಟರ್ ನಲ್ಲಿ ಫುಲ್ ಟ್ರೆಂಡ್ ಆಗಿದೆ. ಇಡ್ಲಿ ಕುರಿತು ಇದೀಗ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಪರ ವಿರೋಧದ ಕಮೆಂಟ್‍ಗಳು ಬರುತ್ತಿವೆ.

    ತಟ್ಟೆಯಲ್ಲಿ ಮೂರು ಇಡ್ಲಿ ಇಡಲಾಗಿದ್ದು, ಇನ್ನೊಂದನ್ನು ಸಾಂಬಾರ್ ಕಪ್‍ನಲ್ಲಿ ಅದ್ದಿ ಇಡಲಾಗಿದೆ. ಇದರ ಪಕ್ಕ ಚಟ್ನಿಯ ಕಪ್ ಸಹ ಇಡಲಾಗಿದೆ. ಈ ಚಿತ್ರವನ್ನು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.