Tag: twitter release

  • ‘ಪಡ್ಡೆಹುಲಿ’ಯ ಫಸ್ಟ್ ಲುಕ್ ರಿಲೀಸ್ ಮಾಡಿದ ಹೆಬ್ಬುಲಿ!

    ‘ಪಡ್ಡೆಹುಲಿ’ಯ ಫಸ್ಟ್ ಲುಕ್ ರಿಲೀಸ್ ಮಾಡಿದ ಹೆಬ್ಬುಲಿ!

    ಬೆಂಗಳೂರು: `ಪಡ್ಡೆಹುಲಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ನಾಯಕನಾಗಿರುವ ಪಡ್ಡೆಹುಲಿ ಫಸ್ಟ್ ಲುಕ್ ಟ್ವಿಟ್ಟರ್ ಮೂಲಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅನಾವರಣಗೊಳಿಸಿದರು.

    ಅದೆಷ್ಟೇ ಒತ್ತಡವಿದ್ದರೂ ಹೊಸ ಪ್ರಯತ್ನಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿರುವವರು ಸುದೀಪ್. ಅವರಿಂದು ಆಕರ್ಷಕವಾದ ಪಡ್ಡೆ ಹುಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ಬಿಡುಗಡೆಗೊಳಿಸಿದ್ದಾರೆ. ಪೋಸ್ಟರಿನಲ್ಲಿ ಹೊಸತನವನ್ನು ಹೊಮ್ಮಿಸುವಂತಿರೋ ಈ ಚಿತ್ರ ಅಂಥಾದ್ದೇ ಹೊಸತನದೊಂದಿಗೆ ಮೂಡಿ ಬಂದು ಗೆಲುವು ಕಾಣಲಿ ಅಂತ ಶುಭ ಹಾರೈಸಿದ್ದಾರೆ.

    ಎಂ ರಮೇಶ್ ರೆಡ್ಡಿ ನಿರ್ಮಾಣದ ಈ ಚಿತ್ರವನ್ನು ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದಾರೆ. ಖ್ಯಾತ ನಿರ್ಮಾಪಕ ಕೆ.ಮಂಜು ಅವರ ಮಗನನ್ನು ಲಾಂಚ್ ಮಾಡುವ ಸಲುವಾಗಿ ಗುರು ದೇಶಪಾಂಡೆ ಚೇತೋಹಾರಿಯಾದ ಕಥೆಯನ್ನು ಸಿದ್ಧಪಡಿಸಿಕೊಂಡೇ ಅಖಾಡಕ್ಕಿಳಿದಿದ್ದಾರೆ. ಮಗನನ್ನು ಲಾಂಚ್ ಮಾಡೋ ವಿಚಾರದಲ್ಲಿ ಸಂಯಮದಿಂದಲೇ ವರ್ತಿಸಿ, ಅಳೆದೂ ತೂಗಿ ಈ ಪ್ರಾಜೆಕ್ಟಿಗೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಮಂಜು, ಈ ಚಿತ್ರದ ಮೂಲಕವೇ ಮಗನನ್ನು ನೆಲೆ ನಿಲ್ಲಿಸುವ ಪಣ ತೊಟ್ಟಿದ್ದಾರೆ. ಈಗಾಗಲೇ ಕಿಚ್ಚ ಸುದೀಪ್ ಬಿಡುಗಡೆ ಮಾಡಿರುವ ಪಡ್ಡೆಹುಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪಡ್ಡೆಹುಲಿಯ ಚಿತ್ರೀಕರಣ ಸದ್ಯದಲ್ಲೇ ಶುರುವಾಗಲಿದೆ.