Tag: Twist

  • ತಲೆ ಕೂದಲು ಉದುರಿದ್ದಕ್ಕೆ ಯುವತಿ ಆತ್ಮಹತ್ಯೆ: ನಿಜವಾಗಿ ಆಗಿದ್ದೇನು? ಆಡಿಯೋದಲ್ಲಿ ಏನಿದೆ?

    ತಲೆ ಕೂದಲು ಉದುರಿದ್ದಕ್ಕೆ ಯುವತಿ ಆತ್ಮಹತ್ಯೆ: ನಿಜವಾಗಿ ಆಗಿದ್ದೇನು? ಆಡಿಯೋದಲ್ಲಿ ಏನಿದೆ?

    ಮಡಿಕೇರಿ: ಹೇರ್ ಸ್ಟ್ರೈಟ್ನಿಂಗ್ ನಿಂದ ಕೂದಲು ಕಳೆದುಕೊಂಡು ಮಡಿಕೇರಿ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆಕೆಯ ಕೊನೆಯ ಮಾತುಗಳು ಏನು ಹಾಗೂ ಪಾರ್ಲರ್ ಗೆ ಬಂದಿದ್ದ ಆಕೆ ಬ್ಯೂಟಿಷನ್ ಜೊತೆ ಹೇಳಿದ್ದೇನು ಎಂಬುದು ಆಡಿಯೋದಲ್ಲಿ ರಿವಿಲ್ ಆಗಿದೆ.

    ಕರ್ನಾಟಕ ಬ್ಯೂಟಿಷನ್ ಅಧ್ಯಕ್ಷೆ ಅನಿತಾ ಶೆರ್ಲಿ ಜೊತೆ ಮಡಿಕೇರಿ ಬ್ಯೂಟಿಷನ್ ಮಾತಾನಾಡಿರುವ ಆಡಿಯೋ ಬಿಡುಗಡೆಯಾಗಿದ್ದು, ಘಟನೆಯ ಬಗ್ಗೆ ಬ್ಯೂಟಿಷನ್ ಮಾತನಾಡಿದ್ದಾರೆ. ನೇಹಾಳ ಹೇರ್ ತುಂಬಾ ತುಂಬಾ ಕರ್ಲಿಯಾಗಿತ್ತು. ಮೊದಲು ನೇಹಾ ಇಡೀ ಕೂದಲು ಸ್ಟ್ರೈಟ್ ಮಾಡಿ ಎಂದು ಹೇಳಿದ್ದಳು, ನಂತರ ಫ್ರಂಟ್ ಸೈಡ್ ಮಾತ್ರ ಸಾಕು ಎಂದಳು. ಸಾಮಾನ್ಯವಾಗಿ ಬ್ಯೂಟಿಷನ್ ಈ ರೀತಿ ಮಾಡೋದೆ ಇಲ್ಲ. ಪರ್ಮೆನೆಂಟ್ ಸ್ಟ್ರೈಟ್ನಿಂಗ್ ಮಾಡುವ ಸಂದರ್ಭದಲ್ಲಿ ಇಡೀ ಕೂದಲು ಸಂಪೂರ್ಣ ಮಾಡಬೇಕಾಗುತ್ತೆ. ಅಲ್ಲದೇ ಸ್ಟ್ರೈಟ್ನಿಂಗ್ ಮಾಡುವವರು ತುಂಬಾ ಎಕ್ಸ್ಪರ್ಟ್ ಇರಬೇಕಾಗುತ್ತೆ. ಆದರೆ ಇಲ್ಲಿ ಆಕೆ ಅಸಿಸ್ಟೆಂಟ್ ಈ ಕೆಲಸವನ್ನು ಮಾಡಿದ್ದಾರೆ.

    ಕೂದಲು ಸ್ಟ್ರೈಟ್ನಿಂಗ್ ಮಾಡಿಸಿದ ಮರುದಿನ ಮತ್ತೆ ಬಂದಿರುವ ನೇಹಾ ಇದು ಚೆನ್ನಾಗಿ ಕಾಣುತ್ತಿಲ್ಲ ಎಂದು ಫ್ರೆಂಡ್ಸ್ ತಮಾಷೆ ಮಾಡುತ್ತಿದ್ದಾರೆ. ಮತ್ತೆ ಹೇರ್ ಸ್ಮೂತ್ನಿಂಗ್ ಮಾಡಿ ಅಂತಾ ಕೇಳಿದ್ದಾಳೆ. ಆದರೆ ನಿನ್ನೆಯೇ ನಾನು ಫ್ರೆಂಟ್ ಹೇರ್ ಸ್ಟ್ರೈಟ್ ಮಾಡಿರೋದರಿಂದ ಇದು ಮಾಡೋಕೆ ಸಾಧ್ಯವಿಲ್ಲ. ಎರಡು ಮೂರು ದಿನ ನೀರು ತಾಕಿಸುವಂತಿಲ್ಲ ಅಂತಾ ಹೇಳಿದೆ. ಈ ಮಾತು ಹೇಳಿ ನಾನು ಬೇರೆ ಕೆಲಸಕ್ಕೆ ತೆರಳಿದೆ. ಆಗ ಆಕೆ ನನ್ನ ಆಸಿಸ್ಟೆಂಟ್ ಜೊತೆ ಮಾತಾನಾಡಿ ಮತ್ತೆ ಹೇರ್ ಡ್ರೈ ಮಾಡಿಸಿಕೊಂಡಿಸಿಕೊಂಡಿದ್ದಾಳೆ ಎಂಬ ಸತ್ಯ ಬ್ಯೂಟಿಷನ್ ಆಡಿಯೋದಿಂದಲೇ ಬಯಲಾಗಿದೆ. ಎರಡು ಮೂರು ದಿನ ಕೂದಲಿಗೆ ನೀರು ತಾಕಿಸಬಾರದು, ಸ್ಮೂತ್ನಿಂಗ್ ಮಾಡಬಾರದು ಅಂತಾ ಇದ್ರೂ ಆಕೆಯ ಆಸಿಸ್ಟೆಂಟ್ ಮಾಡಿರುವ ಎಡವಟ್ಟಿಗೆ ಕೂದಲು ಸಂಪೂರ್ಣ ಉದುರಿಹೋಗಿರುವ ಸಾಧ್ಯತೆ ಇದೆ. ಸದ್ಯ ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬ್ಯೂಟಿಪಾರ್ಲರ್ ಓನರ್ ರೋಹಿಣಿ ಮತ್ತು ಬ್ಯೂಟಿಷಿಯನ್ ಸಂಘದ ಅಧ್ಯಕ್ಷೆ ಅನಿತಾ ಶೆರ್ಲಿ ಮಾತನಾಡಿದ ಆಡಿಯೋ ಪಬ್ಲಿಕ್ ಟಿವಿಗೆ ಸಿಕ್ಕಿದ್ದು ಇಬ್ಬರ ಸಂಭಾಷಣೆಯನ್ನು ಇಲ್ಲಿ ನೀಡಲಾಗಿದೆ. ಇದನ್ನೂ ಓದಿ: ತಲೆ ಕೂದಲು ಮೇಲಿನ ಪ್ರೀತಿಗೆ ಯುವತಿ ಆತ್ಮಹತ್ಯೆ

    ಆಡಿಯೋದಲ್ಲಿ ಏನಿದೆ?
    ರೋಹಿಣಿ: ಮೊನ್ನೆ ಅವರು ನನ್ನ ಹತ್ತಿರ ಬಂದು ಹೇಳಿದ್ದೆ ಬೇರೆ. ಈಗ ನೀಡುತ್ತಿರುವ ಹೇಳಿಕೆಯೇ ಬೇರೆ.
    ಅನಿತಾ ಶೆರ್ಲಿ: ಏನು ಹೇಳಿದ್ರು? ಈಗ ಏನು ಹೇಳುತ್ತಿದ್ದಾರೆ?
    ರೋಹಿಣಿ: ಕಳೆದ ತಿಂಗಳು ಯುವತಿ ನನ್ನ ಪಾರ್ಲರ್ ಗೆ ಸ್ಮೂತ್ನಿಂಗ್‍ಗೆ ಬಂದಿದ್ಲು. ಎಷ್ಟು ದುಡ್ಡು ಆಗುತ್ತೆ ಅಂತಾ ಕೇಳಿದ್ರು. ಸ್ಮೂತ್ನಿಂಗ್‍ಗೆ 5 ಸಾವಿರ ಆಗುತ್ತೆ ಅಂತಾ ಹೇಳಿದೆ.
    ಅನಿತಾ ಶೆರ್ಲಿ: ಯಾವಾಗ ಬಂದಿದ್ದಳು?
    ರೋಹಿಣಿ: ಕಳೆದ ತಿಂಗಳು 10 ರಿಂದ 13 ನೇ ತಾರಿಖು ಹಂಗೆ ಬಂದಿದ್ಲು. ಡೈರಿಯಲ್ಲಿ ಫುಲ್ ಡಿಟೇಲ್ ಇದೆ.
    ರೋಹಿಣಿ: ನಾನು ಹೇಳಿದೆ 5 ಸಾವಿರ ಆಗುತ್ತೆ ಅಂತಾ. ಅವಳ ಸ್ನೇಹಿತೆಯರು ಹೇಳಿದ್ರು ಅಂತಾ ನನ್ನ ಪಾರ್ಲರ್ ಗೆ ಬಂದಿದ್ದಳು. ಅಕ್ಕ ಡಿಸ್ಕೌಂಟ್ ಮಾಡಿ ಕೊಡ್ತಾರೆ ಕೇಳಿ ನೋಡು ಅಂತಾ ಹೇಳಿದ್ರಂತೆ. ನನ್ನ ಹತ್ತಿರ ಅಷ್ಟು ದುಡ್ಡಿಲ್ಲ. ಕಡಿಮೆ ಇದೆ ಅಂತಾ ಹೇಳಿದ್ಲು. ನಾನು ಬೇರೆ ಪಾರ್ಲರ್ ಅಲ್ಲಿ ಕೇಳಿದೆ. ಜಾಸ್ತಿ ಹೇಳಿದ್ದಾರೆ ಅಂತಾ ಹೇಳಿದ್ಲು.
    ಅನಿತಾ ಶೆರ್ಲಿ: ಎಷ್ಟು ಚಾರ್ಜ್ ಮಾಡಿದ್ರಿ?
    ರೋಹಿಣಿ: 3 ಸಾವಿರ ಹೇಳಿದೆ.
    ರೋಹಿಣಿ: ಅವಳ ಕೂದಲು ತುಂಬಾ ಶಾರ್ಟ್ ಇತ್ತು, ತುಂಬಾ ಕರ್ಲಿ ಇತ್ತು. ನಾನು ಮೊದಲು ಬೇರೆ ಪಾರ್ಲರ್ ಅಲ್ಲಿ ಮಾಡಿಸಿಕೊಂಡಿದ್ದೆ. ತುಂಬಾ ಹೇರ್ ಫಾಲ್ ಇತ್ತು. ನನ್ನ ಫ್ರೆಂಡ್ಸ್ ಹೇಳಿದ್ರು. ಎಲ್ಲಾರೂ ಚೆನ್ನಾಗಿದೆ ಅಂತಾ ಹೇಳಿದ್ರು ಅಂದ್ಲು.
    ರೋಹಿಣಿ: ಒಳಗೆ ಕಳಿಸಿದೆ. ಅಲ್ಲಿ ಡೇರ್ ಡ್ರಸರ್ಸ್ ಹತ್ತಿರ ಹೇಳಿದ್ದಾಳೆ. ಪೂರ್ತಿ ಬೇಡ ಫ್ರೆಂಟ್ ಲುಕ್ ಮಾತ್ರ ಬೇಕು ಅಂದ್ಲು. ಅದು ಚೆನ್ನಾಗಿ ಕಾಣಲ್ಲ ಅಂತಾ ಹೇಳಿದ್ರೂ, ಫ್ರೆಂಟ್ ಮಾತ್ರ ಸ್ಮೂತ್ನಿಂಗ್ ಮಾಡಿಸಿಕೊಂಡು ಹೋಗಿದ್ದಾಳೆ. ಅದಕ್ಕೆ 1.500 ರೂ ಕೊಟ್ಟಿದ್ದಾಳೆ.
    ರೋಹಿಣಿ: ನಾಳೆ ಬೆಳಗ್ಗೆ 9.30ಕ್ಕೆ ಬಂದು ಎಲ್ಲಾ ಚೆನ್ನಾಗಿಲ್ಲ ಅಂತಿದ್ದಾರೆ ಏನಾದ್ರೂ ಮಾಡಬೋದಾ ಅಂತಾ ಕೇಳಿದ್ದಾಳೆ. ಆಗಲ್ಲ. ಮೇಡಮ್‍ನ ಪರ್ಮಿಷನ್ ಇಲ್ಲದೇ ಮಾಡಕ್ಕೆ ಆಗಲ್ಲ ಅಂತಾ ಹೇಳಿದ್ದಾರೆ. ನನಗೆ ಕೇಳಿದ್ಲು. ಬ್ಯಾಕ್ ಹೇರ್ ಟಚ್ ಮಾಡಕ್ಕೆ ಆಗಲ್ಲ. ಬೇಜಾರು ಮಾಡ್ಕೊಬೇಡಾ ಅಂತಾ ಹೇಳಿದೆ. ಸ್ಟ್ರೈಟ್‍ನಿಂಗ್ ಮಾಡಿ, ಬ್ಲೋ ಡ್ರೈ ಆದ್ರೂ ಮಾಡಿಸಿಕೊಡಿ ಅಂತಾ ಹೇಳಿ, ಡ್ರೈ ಮಾಡಿಸಿಕೊಂಡು ಹೋಗಿದ್ದಾಳೆ.
    ರೋಹಿಣಿ: 3 ದಿನ ಆದ್ಮೇಲೆ 2 ಸಾವಿರ ಕೊಟ್ಟು ಸ್ಮೂತ್ನಿಂಗ್ ಮಾಡಿಸಿಕೊಂಡು ಹೋಗಿದ್ದಾಳೆ.
    ರೋಹಿಣಿ: ಲಾಸ್ಟ್ ಕಾಲ್ ಮಾಡಿರೋದು ನಾನು. ಅವಳಲ್ಲ
    ಅನಿತಾ ಶೆರ್ಲಿ: ಯಾವ ಪ್ರಾಡಕ್ಟ್ ಯೂಸ್ ಮಾಡಿದ್ರಿ?
    ರೋಹಿಣಿ: ಮ್ಯಾಟ್ರಿಕ್ಸ್ ಪ್ರಾಡಕ್ಟ್ ಯೂಸ್ ಮಾಡಿರೋದು ನಾನು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=gB2YZWuuAJM&feature=youtu.be

  • ಉದ್ಯಮಿಗಳ ಕಗ್ಗೊಲೆ ಕೇಸ್- ಬಿಜೆಪಿ ಮುಖಂಡರ ಜೊತೆಗಿದ್ದ ಆರೋಪಿ ಫೋಟೋ ವೈರಲ್!

    ಉದ್ಯಮಿಗಳ ಕಗ್ಗೊಲೆ ಕೇಸ್- ಬಿಜೆಪಿ ಮುಖಂಡರ ಜೊತೆಗಿದ್ದ ಆರೋಪಿ ಫೋಟೋ ವೈರಲ್!

    ಬೆಂಗಳೂರು: ಇಬ್ಬರು ಉದ್ಯಮಿಗಳನ್ನು ಕಗ್ಗೊಲೆಗೈದ ಕೇಸ್‍ಗೆ ಟ್ವಿಸ್ಟ್ ಸಿಕ್ಕಿದೆ. ಕೊಲೆಗಡುಕ ಆರೋಪಿ ಬೆಂಗಳೂರಿನ ಯುವ ಬಿಜೆಪಿ ಮುಖಂಡನೆಂದು ತಿಳಿದುಬಂದಿದೆ.

    ಬಿಜೆಪಿ ಯುವ ಮೋರ್ಚಾದಲ್ಲಿ ಸಕ್ರಿಯನಾಗಿದ್ದ ಬಂಧಿತ ಆರೋಪಿ ತೇಜಸ್, ಮಾಜಿ ಮೇಯರ್ ಎಸ್ ಕೆ ನಟರಾಜು, ಮಾಜಿ ಡಿಸಿಎಂ ಆರ್ ಅಶೋಕ್ ಜೊತೆಗೂ ಗುರುತಿಸಿಕೊಂಡಿದ್ದನು. ಇದೀಗ ಆರೋಪಿ ಆರ್ ಅಶೋಕ್ ಜೊತೆಯಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಹಿಂದೆ ಪೊಲೀಸರು ತೇಜಸ್ ನನ್ನು ವಿಚಾರಣೆಗೆ ಕರೆದ ಸಮಯದಲ್ಲಿ ಬಿಜೆಪಿ ನಾಯಕರುಗಳ ಜೊತೆ ತೆರಳುತ್ತಿದ್ದನು. ಅಲ್ಲದೇ ಮೂರ್ನಾಲ್ಕು ಬಾರಿ ಎಸ್.ಕೆ ನಟರಾಜು ಅರೋಪಿ ಜೊತೆ ಪೊಲೀಸ್ ಠಾಣೆಗೆ ತೆರಳಿದ್ದನೆಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ಏನಿದು ಪ್ರಕರಣ?:
    ಕಳೆದ ಜೂನ್ 27ರಂದು ಉದ್ಯಮಿ ಪ್ರಸಾದ್ ಬಾಬು ಅವರನ್ನು ಆರ್ ಆರ್ ನಗರದಲ್ಲಿ ಹಾಗೂ ಇನ್ನೊಬ್ಬ ಉದ್ಯಮಿ ಬಾಲಾಜಿ ಅವರನ್ನು ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ಕಿಡ್ನಾಪ್ ಮಾಡಲಾಗಿತ್ತು. ಈ ಇಬ್ಬರು ಉದ್ಯಮಿಗಳನ್ನು ಕೂಡ ಸುಪಾರಿ ಪಡೆದು ಒಂದೇ ತಂಡ ಅಪಹರಣ ಮಾಡಿದ್ದು, ಅಲ್ಲದೇ ಇಬ್ಬರನ್ನೂ ಕೂಡ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಜಯನಗರ ಎಸಿಪಿ ನೇತೃತ್ವದಲ್ಲಿ ಕೊಲೆ ಮಾಡಿದ್ದ ತೇಜಸ್, ಮಣಿ ಹಾಗೂ ಅನಿಲ್ ಎಂಬ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆರೋಪಿಗಳನ್ನು ಬಂಧಿಸಿದ ಬಳಿಕ ಗಿರಿನಗರ ಪೊಲೀಸ್ ಠಾಣೆಗೆ ಕರೆದೊಯ್ದು ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ ನೃತೃತ್ವದಲ್ಲಿ ವಿಚಾರಣೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಗಂಡ ಡ್ಯೂಟಿಯಲ್ಲಿ, ಪತ್ನಿ ಇನ್ಸ್ ಪೆಕ್ಟರ್ ತೆಕ್ಕೆಯಲ್ಲಿ ಪ್ರಕರಣಕ್ಕೆ ಹೊಸ ಟಿಸ್ಟ್!

    ಗಂಡ ಡ್ಯೂಟಿಯಲ್ಲಿ, ಪತ್ನಿ ಇನ್ಸ್ ಪೆಕ್ಟರ್ ತೆಕ್ಕೆಯಲ್ಲಿ ಪ್ರಕರಣಕ್ಕೆ ಹೊಸ ಟಿಸ್ಟ್!

    ಬಳ್ಳಾರಿ: ಪೊಲೀಸ್ ಪೇದೆ ಡ್ಯೂಟಿಯಲ್ಲಿದ್ದಾಗ ಆತನ ಪತ್ನಿಯೊಂದಿಗೆ ಪಲ್ಲಂಗದಾಟವಾಡಿದ ಪೊಲೀಸ್ ಇನ್ಸಪೆಕ್ಟರ್ ಸುದ್ದಿಯನ್ನು ನಿಮ್ಮ ಪಬ್ಲಿಕ್ ಟಿವಿ ಇಂದು ಬೆಳಗ್ಗೆ ಸುದ್ದಿ ಬಿತ್ತರ ಮಾಡಿತ್ತು. ಆದ್ರೆ ಪಿಎಸ್‍ಐಯೊಂದಿಗಿನ ಅನೈತಿಕ ಸಂಬಂಧವನ್ನು ಪೇದೆ ಪತ್ನಿ ಸಮರ್ಥನೆ ಮಾಡಿಕೊಂಡ ವಿಚಾರ ಇದೀಗ ಬಯಲಿಗೆ ಬಂದಿದೆ.

    ಪಲ್ಲಂಗದಾಟದ ವೇಳೆ ಕ್ವಾರ್ಟರ್ಸ್ ಸುಟ್ಟ ಪ್ರಕರಣದ ಬಗ್ಗೆ ತನಿಖೆ ನಡೆಸಲು ಹೋದ ಅಧಿಕಾರಿಗಳ ಮುಂದೆ ಪೇದೆಯ ಪತ್ನಿ ಶಿಲ್ಪಾ ರಂಪಾಟ ನಡೆಸಿದ ವಿಚಾರ ಇದೀಗ ಬಯಲಾಗಿದೆ. ಕ್ವಾರ್ಟರ್ಸ್ ಗೆ ಬೆಂಕಿ ಬಿದ್ದ ನಂತರ ವಿಚಾರಣೆಗೆ ಹೋದ ಅಧಿಕಾರಿಗಳ ಮುಂದೆ ಇದು ನನ್ನ ವೈಯಕ್ತಿಯ ವಿಚಾರ. ನಾನು ಏನಾದ್ರೂ ಮಾಡ್ಕೋತೇನಿ ನಿಮಗ್ಯಾಕೆ ಅಂತಾ ತನಿಖಾಧಿಕಾರಿಗಳನ್ನೆ ತರಾಟೆಗೆ ತೆಗೆದುಕೊಂಡು ಅನೈತಿಕ ಸಂಬಂಧವನ್ನು ಸಮರ್ಥನೆ ಮಾಡಿಕೊಡಿದ್ದಾರೆ.

    ಏನಿದು ಘಟನೆ?
    ಕಿರಣ ಸಾಮ್ರಾಟ್ ಬಳ್ಳಾರಿ ಪೊಲೀಸ್ ಇಲಾಖೆಯ ವೈರ್ ಲೆಸ್ ವಿಭಾಗದ ಪಿಎಸ್‍ಐಯಾಗಿದ್ದು, ಈತ ಪೊಲೀಸ್ ಪೇದೆಯೊಬ್ಬರ ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದನು. ಇಬ್ಬರು ಪೊಲೀಸ್ ಇಲಾಖೆಯ ಡಿಆರ್ ಕ್ವಾರ್ಟರ್ಸ್ ನ ಮನೆಯಲ್ಲಿ ಕುಡಿದು ಸಿಗರೇಟ್ ಸೇದಿ ಮನೆತುಂಬಾ ಬಿಸಾಕಿ ಪಲ್ಲಂಗದಾಟವಾಡುತ್ತಿದ್ದರಂತೆ. ಈ ವೇಳೆ ಕ್ವಾರ್ಟರ್ಸ್ ಗೆ ಬೆಂಕಿ ಬಿದ್ದಿದ್ದು, ಮನೆಯೆಲ್ಲಾ ಸುಟ್ಟು ಹೋಗಿದೆ.

    ಪಿಎಸ್‍ಐ ಕಿರಣ ಸಾಮ್ರಾಟ್ ಹಾಗೂ ಪೇದೆಯ ಪತ್ನಿಯ ಮಧ್ಯೆ ಹಲವಾರು ದಿನಗಳಿಂದ ಅನೈತಿಕ ಸಂಬಂಧವಿತ್ತು. ಇಬ್ಬರ ಮಧ್ಯೆ ಇತ್ತೀಚೆಗೆ ಸಣ್ಣ ಮಟ್ಟದ ಮನಸ್ತಾಪ ಸಹ ಏರ್ಪಟ್ಟಿತ್ತು. ಹೀಗಾಗಿ ಪಿಎಸ್‍ಐ ಕಿರಣ ಸಾಮ್ರಾಟರ ಮನೆಯಲ್ಲಿ ಎರಡು ದಿನಗಳ ಕಾಲ ಪೇದೆಯ ಪತ್ನಿ ವಾಸವಿದ್ದಳು. ಆಗ ಆಕೆಯನ್ನು ಸಮಾಧಾನಪಡಿಸಿದ ಪಿಎಸ್‍ಐ ಆಕೆಯೊಂದಿಗೆ ಕುಡಿದು ಸಿಗರೇಟ್ ಸೇದಿ ಮನೆ ತುಂಬಾ ಬಿಸಾಡಿದ್ದಾನೆ ಎಂದು ಹೇಳಲಾಗುತ್ತಿದೆ.

    ಈ ಹಿನ್ನೆಲೆಯಲ್ಲಿ ಕ್ವಾರ್ಟರ್ಸ್ ನಲ್ಲಿದ್ದ ಸೋಪಾಗೆ ಬೆಂಕಿ ಹೊತ್ತಿಕೊಂಡು ಮನೆಯಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗೆ ಆಹುತಿಯಾಗಿದೆ. ಅಲ್ಲದೇ ಬೆಂಕಿ ಅನಾಹುತದಿಂದ ಅಕ್ಕಪಕ್ಕದಲ್ಲಿದ್ದ ಇತರೆ ಅಧಿಕಾರಿಗಳ ಕುಟುಂಬದವರ ಆಪತ್ತಿಗೂ ಕಾರಣವಾಗಿದೆ. ಹೀಗಾಗಿ ಇಬ್ಬರ ಅನೈತಿಕ ಸಂಬಂಧದಿಂದ ಪೊಲೀಸ್ ಕ್ವಾರ್ಟರ್ಸ್ ಸುಟ್ಟು ಹೋದ ಪರಿಣಾಮ ಹಿರಿಯ ಅಧಿಕಾರಿಗಳು ಪಿಎಸ್‍ಐ ಕಿರಣ ಸಾಮ್ರಾಟ್ ಹಾಗೂ ಪೇದೆಯ ಪತ್ನಿ ವಿರುದ್ಧ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ.

  • ಮಂಗಳೂರು ನೈತಿಕ ಪೊಲೀಸ್‍ಗಿರಿ ಪ್ರಕರಣಕ್ಕೆ ಟ್ವಿಸ್ಟ್!

    ಮಂಗಳೂರು ನೈತಿಕ ಪೊಲೀಸ್‍ಗಿರಿ ಪ್ರಕರಣಕ್ಕೆ ಟ್ವಿಸ್ಟ್!

    ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ಬಳಿ ತಣ್ಣೀರುಬಾವಿಯ ಬೀಚ್ ಬಳಿ ನಡೆದಿದೆ ಎನ್ನಲಾದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

    ತಣ್ಣೀರುಬಾವಿಯ ಫಾತಿಮಾ ಬೀಚ್ ಬಳಿಯ ಗ್ರಾಮಸ್ಥರು ಮಂಗಳೂರು ಆಯುಕ್ತರನ್ನು ಭೇಟಿಯಾಗಿದ್ದು, ವಿದ್ಯಾರ್ಥಿಗಳು ಸ್ಥಳೀಯರ ಜೊತೆ ಅಸಹ್ಯವಾಗುವಂತೆ ವರ್ತಿಸಿದ್ದಾರೆ. ಇದನ್ನು ಪ್ರಶ್ನಿಸಿ ಅಲ್ಲಿಂದ ತೆರಳುವಂತೆ ಸ್ಥಳೀಯರು ಸೂಚಿಸಿದ್ದನ್ನೇ ತಿರುಚಿ ರಾತ್ರಿ ಯಾರದ್ದೋ ಒತ್ತಡಕ್ಕೆ ಮಣಿದು ಪೊಲೀಸ್ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ.

    ಅಮಾಯಕ ಹುಡುಗರ ವಿರುದ್ಧ ಪೊಲೀಸರು ಡಕಾಯಿತಿ, ದರೋಡೆ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸ್ಥಳೀಯ ಮಹಿಳೆಯರು ಆರೋಪಿಸಿದ್ದಾರೆ. ಈ ನಡುವೆ ಹಲ್ಲೆಗೊಳಗಾದ ಹುಡುಗರಿಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಇದರೊಂದಿಗೆ ಹಿಂದು ಸಂಘಟನೆ ಕಾರ್ಯಕರ್ತರ ಮೇಲಿದ್ದ ನೈತಿಕ ಪೊಲೀಸ್ ಗಿರಿ ಆರೋಪ ಬೇರೆಯದ್ದೇ ರೂಪ ಪಡೆದುಕೊಂಡಿದೆ. ಬರ್ತ್ ಡೇ ಆಚರಣೆ ಮಾಡಿದ್ದಕ್ಕೆ ತಮಗೆ ಹೊಡೆದಿದ್ದಲ್ಲ. ಮುಸ್ಲಿಮರು ಎಂಬ ಕಾರಣಕ್ಕೆ ಹೊಡೆದಿದ್ದಾರೆ. ತಮ್ಮ ಜೊತೆಗಿದ್ದ ನಿತೇಶ್ ಬಳಿ ನೀನು ಮುಸ್ಲಿಮರಿಗೆ ಯಾಕೆ ಸಪೋರ್ಟ್ ಮಾಡ್ತೀಯಾ ಎಂದು ಕೇಳಿ ಹೊಡೆದಿದ್ದಾರೆ ಅಂತಾ ಪೆಟ್ಟು ತಿಂದ ಹುಡುಗರು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಬೀಚ್ ಬಳಿ ಬರ್ತ್‍ಡೇ ಆಚರಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಿಂದೂ ಕಾರ್ಯಕರ್ತರಿಂದ ಹಲ್ಲೆ!