Tag: Twins Baby

  • ಅವಳಿ ಮಕ್ಕಳಿಗೆ ವರ್ಷದ ಅಂತರ!- ಅಚ್ಚರಿಯಾದ್ರೂ ಇದು ಸತ್ಯ

    ಅವಳಿ ಮಕ್ಕಳಿಗೆ ವರ್ಷದ ಅಂತರ!- ಅಚ್ಚರಿಯಾದ್ರೂ ಇದು ಸತ್ಯ

    ಸ್ಯಾಕ್ರಮೆಂಟೊ: ಕ್ಯಾಲಿಫೋರ್ನಿಯಾದ ಮಹಿಳೆ ಕೇವಲ 15 ನಿಮಿಷಗಳಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದರಲ್ಲೇನಿದೆ ಅಂತಹ ವಿಶೇಷ ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಬಹುದು. ಆ ಎರಡೂ ಮಕ್ಕಳೂ ಬೇರೆ ಬೇರೆ ವರ್ಷಗಳಲ್ಲಿ ಜನ್ಮ ಪಡೆದಿದ್ದಾರೆ ಎಂಬುದೇ ವಿಶೇಷ.

    ಕ್ಯಾಲಿಫೋರ್ನಿಯಾದ ಫಾತಿಮಾ ಮಾಡ್ರಿಗಲ್ ಎಂಬ ಮಹಿಳೆ ನಾಟಿವಿಡಾಡ್ ಮೆಡಿಕಲ್ ಸೆಂಟರ್‌ನಲ್ಲಿ 15 ನಿಮಿಷಗಳ ಅಂತರದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಹೆರಿಗೆ ವಿಶೇಷವಾದುದು ಎಂದು ಆಸ್ಪತ್ರೆ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: ಪರ್ಷಿಯನ್ ಬೆಕ್ಕುಗಳಿಗೆ ಸೀಮಂತ ಮಾಡಿ ಸುದ್ದಿಯಾದ ಉದ್ಯಮಿ!

    ಆಯ್ಲಿನ್ ಹಾಗೂ ಆಲ್ಫ್ರೆಡೋ ಕೇವಲ 15 ನಿಮಿಷಗಳ ಅಂತರದಲ್ಲಿ ಜನಿಸಿದ್ದಾರೆ. ಆದರೆ ಅವರಿಬ್ಬರೂ ಬೇರೆ ಬೇರೆ ವರ್ಷಗಳಲ್ಲಿ ಜನಿಸಿದ್ದಾರೆ. ಅವಳಿ ಸಹೋದರರಲ್ಲಿ ಮೊದಲನೆಯವ 31 ಡಿಸೆಂಬರ್ 2021ರ ರಾತ್ರಿ 11:45 ಕ್ಕೆ ಜನಿಸಿದರೆ, ಆತನ ಅವಳಿ ಸಹೋದರ 1 ಜನವರಿ 2022ರಂದು ಮಧ್ಯರಾತ್ರಿ 12 ಗಂಟೆಗೆ ಜನಿಸಿದ್ದಾನೆ ಎಂದು ಆಸ್ಪತ್ರೆಯ ಫೇಸ್‌ಬುಕ್ ಪುಟದಲ್ಲಿ ತಿಳಿಸಿದೆ. ಇದನ್ನೂ ಓದಿ: BBMP ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ

    ಈ ಪೋಸ್ಟ್ಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುದ್ದಾದ ಅವಳಿ ಮಕ್ಕಳಿಗೆ ಪ್ರೀತಿ ಹಾಗೂ ಶುಭಾಶಯ ಸುರಿಮಳೆ ಹರಿಸಿದ್ದಾರೆ.

  • ಮದ್ವೆಗೂ ಮುನ್ನ 4 ಮಕ್ಕಳ ತಂದೆಯಾಗಿರೋ ರೊನಾಲ್ಡೋ ಮತ್ತೆ ಟ್ವಿನ್ಸ್ ನೀರಿಕ್ಷೆಯಲ್ಲಿ

    ಮದ್ವೆಗೂ ಮುನ್ನ 4 ಮಕ್ಕಳ ತಂದೆಯಾಗಿರೋ ರೊನಾಲ್ಡೋ ಮತ್ತೆ ಟ್ವಿನ್ಸ್ ನೀರಿಕ್ಷೆಯಲ್ಲಿ

    ವಾಷಿಂಗ್ಟನ್: ಫುಟ್ಬಾಲ್ ಆಟಗಾರ ಕ್ರಿಸ್ಟಿಯನೋ ರೊನಾಲ್ಡೋ ಎಲ್ಲರಿಗೂ ಗೊತ್ತು. ಇವರು ಮದುವೆ ಆಗುವ ಮುನ್ನವೇ 4 ಮಕ್ಕಳ ತಂದೆ ಎಂಬುದು ಕೂಡ ಹಳೇ ಸುದ್ದಿಯಾಗಿದೆ. ಆದರೆ ಈಗ ರೆನಾಲ್ಡೋ ಗರ್ಲಫ್ರೆಂಡ್ ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ. ಇವರು ಅವಳಿ ಮಕ್ಕಳ ನೀರಿಕ್ಷೆಯಲ್ಲಿದ್ದಾರೆ.

    ಗರ್ಲ್‍ಫ್ರೆಂಡ್ ಜಾರ್ಜಿನಾ ರೋಡ್ರಿಗಸ್ ಜೊತೆಗಿನ ಫೋಟೋವೊಂದನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡು ಅವಳಿ ಮಗು ಪಡೆಯುವ ನೀರಿಕ್ಷೆಯಲ್ಲಿ ಇದ್ದೇವೆ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ರೊನಾಲ್ಡೋ ಇದಕ್ಕೂ ಮೊದಲೇ ತಮ್ಮ ಇತರೆ ಗೆಳತಿಯರೊಂದಿಗೆ ನಾಲ್ಕು ಮಕ್ಕಳನ್ನು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    ನಾವು 6ನೇ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ನಮಗೆ ಬಹಳ ಸಂತೋಷ ಆಗುತ್ತಿದೆ ಎಂದು ಬರೆದುಕೊಂಡಿದ್ದ ರೊನಾಲ್ಡೋ, ತನ್ನ 4 ಮಕ್ಕಳೊಂದಿಗೆ ಸ್ವಿಮ್ಮಿಂಗ್ ಪೂಲ್‍ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋ ಕೂಡ ಶೇರ್ ಮಾಡಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು

     

    View this post on Instagram

     

    A post shared by Cristiano Ronaldo (@cristiano)

    ರೊನಾಲ್ಡೋ ಇರುವರೆಗೂ ಯಾರನ್ನೂ ಮದುವೆಯಾಗಿಲ್ಲ. ಹೀಗಿರುವಾಗ ಬೇರೆ ಬೇರೆ ಗೆಳತಿಯರೊಂದಿಗೆ 4 ಮಕ್ಕಳ ತಂದೆಯಾಗಿದ್ದಾರೆ. ಈಗ ಹಲವು ವರ್ಷಗಳಿಂದ ಡೇಟ್ ಮಾಡುತ್ತಿರುವ ಜಾರ್ಜಿನಾ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದಾರೆ.

    ಜಾರ್ಜಿನಾ ಮಾಡೆಲ್. ರೋನಾಲ್ಡೋ ಮತ್ತು ಜಾರ್ನಿನಾ ಮೊದಲ ಬಾರಿಗೆ ಸ್ಪೇನ್‍ನಲ್ಲಿ ಭೇಟಿಯಾಗಿದ್ದರು. ಅವರು 2016ರಲ್ಲಿ ಭೇಟಿ ಪರಿಚಯಕ್ಕೆ ತಿರುಗಿ ಡೇಟಿಂಗ್ ಶುರು ಮಾಡಿದ್ದರು. ಇದೀಗ ಜಾರ್ಜಿನಾ ರೋನಾಲ್ಡೋ ಅವರ ಅವಳಿ ಮಕ್ಕಳಿಗೆ ತಾಯಿ ಆಗುವ ನೀರಿಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: ತಂದೆಯ ಮೂಢನಂಬಿಕೆ, ನಿರ್ಲಕ್ಷ್ಯಕ್ಕೆ ಪ್ರಾಣ ಬಿಟ್ಟ ಬಾಲಕಿ

    ಮೊದಲು ರೊನಾಲ್ಡೋ ಕಿಮ್ ಕರ್ದಿಶಿಯಾ, ಜಯೀನಾ ಜಯಿನಾ, ಮಿರಾಲ್ ಗ್ರೀಸ್‍ಲೆಸ್, ರೊಮ್ಯಾರಿಯಾ, ಎಲಿಸಾ ಗುಡಾವಿನಾ ಸೇರಿದಂತೆ ಹಲವರ ಜೊತೆ ಲವ್‍ನಲ್ಲಿದ್ದರು. ಸದ್ಯ ರೊನಾಲ್ಡೋ ಎಲ್ಲಾ ಮಕ್ಕಳನ್ನ ಜಾರ್ಜಿನಾ ನೋಡಿಕೊಳ್ಳುತ್ತಿದ್ದಾರೆ.

  • ಮಗುವಿಗೆ ಜನ್ಮ ನೀಡಿ 11 ವಾರದಲ್ಲಿ ಎರಡನೇ ಬಾರಿ ತಾಯಿಯಾದ ಲಿಲಿಯಾ

    ಮಗುವಿಗೆ ಜನ್ಮ ನೀಡಿ 11 ವಾರದಲ್ಲಿ ಎರಡನೇ ಬಾರಿ ತಾಯಿಯಾದ ಲಿಲಿಯಾ

    ನೂರ್ ಸುಲ್ತಾನ್: ಮಹಿಳೆಯೊಬ್ಬರು ಮೊದಲ ಮಗುವಿಗೆ ಜನ್ಮ ನೀಡಿ 11 ವಾರದಲ್ಲೇ ಮತ್ತೊಂದು ಶಿಶುವಿಗೆ ಜನ್ಮ ನೀಡಿದ ಘಟನೆ ಕಜಾಖಸ್ತಾನದಲ್ಲಿ ನಡೆದಿದೆ.

    ಲಿಲಿಯಾ ಕೋನೋವಾಲೋವಾ ಮೊದಲ ಮಗುವಿಗೆ ಜನ್ಮ ನೀಡಿದ 11 ವಾರದಲ್ಲೇ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಅಂದರೆ ಇಬ್ಬರು ಅವಳಿ ಮಕ್ಕಳು. ಲಿಲಿಯಾ ಆರೋಗ್ಯದ ಪರಿಸ್ಥಿತಿ ತಿಳಿದ ವೈದ್ಯರು ಡೆಲಿವರಿಗೆ ಮೊದಲೇ ಎಲ್ಲಾ ತಯಾರಿ ನಡೆಸಿದ್ದರು. ಈಗಾಗಲೇ ಲಿಲಿಯಾ ಅವರಿಗೆ 7 ವರ್ಷದ ಮಗಳಿದ್ದಾಳೆ. ಲಿಲಿಯಾ ಮೊದಲ ಬಾರಿಗೆ ಗರ್ಭಿಣಿಯಾಗಿದ್ದಾಗ, ಅವರಿಗೆ ಎರಡು ಗರ್ಭಕೋಶ ಇರುವುದಾಗಿ ವೈದ್ಯರು ಹೇಳಿದ್ದರು.

    ಎರಡನೇ ಬಾರಿಗೆ ಲಿಲಿಯಾ ಗರ್ಭಿಣಿಯಾಗಿದ್ದಾಗ, ಅವಳಿ ಮಕ್ಕಳಿಗೆ ಜನ್ಮ ನೀಡುವುದಾಗಿ ವೈದ್ಯರು ತಿಳಿಸಿದ್ದರು. ಇಬ್ಬರು ಮಕ್ಕಳು ಲಿಲಿಯಾಳ ಬೇರೆ ಬೇರೆ ಗರ್ಭದಲ್ಲಿ ಬೆಳೆಯುತ್ತಿತ್ತು. ಮೇ 24ರಂದು ಲಿಲಿಯಾ 6 ತಿಂಗಳ ಗರ್ಭಿಣಿಯಾಗಿದ್ದಾಗಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಗ ಮಗುವಿನ ತೂಕ ಕೇವಲ 850 ಗ್ರಾಂ ಇತ್ತು. ಲಿಲಿಯಾ ಅವರ ಮತ್ತೊಂದು ಗರ್ಭದಲ್ಲಿ ಬೆಳೆಯುತ್ತಿದ್ದ ಮಗು 9 ತಿಂಗಳು ನಂತರ ಜನಿಸಿದೆ. ಇಬ್ಬರು ಮಕ್ಕಳು ಈಗ ಆರೋಗ್ಯದಿಂದ ಇದ್ದಾರೆ.

    ವೈದ್ಯರು ನನ್ನ ಆರೋಗ್ಯದ ಸ್ಥಿತಿ ಬಗ್ಗೆ ಹೇಳಿದ್ದಾಗ ನಾನು ಆತಂಕಗೊಂಡಿದೆ. 9 ತಿಂಗಳು ಆಗುವ ಮೊದಲೇ ಮಗಳು ಜನಿಸಿದರಿಂದ ನಾನು ಚಿಂತೆಗೊಳಗಾಗಿದೆ. ಆದರೆ ವೈದ್ಯರು ದೊಡ್ಡವರು. ಅವರು ನನ್ನ ಮಗುವನ್ನು ಉಳಿಸಿದರು. ಅಗಸ್ಟ್ 9ರಂದು ನಾನು ಗಂಡು ಮಗುವಿಗೆ ಜನ್ಮ ನೀಡಿದ್ದೇನೆ. ನಾನು ಈಗ ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತೇನೆ ಎಂದು ಲಿಲಿಯಾ ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

    ಬೇರೆ ಬೇರೆ ಸಮಯದಲ್ಲಿ ಅವಳಿ ಮಕ್ಕಳು ಜನಿಸಿರುವುದು ಇದು ಕಜಾಖಸ್ತಾನದ ಇತಿಹಾಸದಲ್ಲೇ ಮೊದಲ ಬಾರಿ ಆಗಿದೆ. ಅವಳಿ ಮಕ್ಕಳು ಇಬ್ಬರು ಅಣ್ಣ-ತಂಗಿಯಾಗಿದ್ದು, ಇಬ್ಬರ ನಡುವೆ 11 ವಾರ ಅಂತರವಿದೆ. ತಾಯಿ ಹಾಗೂ ಇಬ್ಬರು ಮಕ್ಕಳು ಕ್ಷೇಮವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

  • ಅವಳಿ ಮಕ್ಕಳಿಗಾಗಿ ಹೋಟೆಲ್‍ನಲ್ಲಿ ಸೌಟು ಹಿಡಿದ ಸನ್ನಿ

    ಅವಳಿ ಮಕ್ಕಳಿಗಾಗಿ ಹೋಟೆಲ್‍ನಲ್ಲಿ ಸೌಟು ಹಿಡಿದ ಸನ್ನಿ

    ಮುಂಬೈ: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ತನ್ನ ಅವಳಿ ಮಕ್ಕಳಿಗಾಗಿ ಹೋಟೆಲ್‍ವೊಂದರಲ್ಲಿ ಅಡುಗೆ ಮಾಡಿದ್ದಾರೆ. ತಾವು ಅಡುಗೆ ಮಾಡುತ್ತಿರುವ ಫೋಟೋವನ್ನು ಸ್ವತಃ ಸನ್ನಿ ಲಿಯೋನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಸನ್ನಿ ಲಿಯೋನ್ ಖಾಸಗಿ ವಾಹಿನಿಯ ಪ್ರಸಾರವಾಗುವ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಈ ಶೂಟಿಂಗ್‍ಗಾಗಿ ಸನ್ನಿ ಲಿಯೋನ್ ತಮ್ಮ ಅವಳಿ ಮಕ್ಕಳಾದ ನೋಹಾ ಹಾಗೂ ಅಶ್‍ಹರ್ ರನ್ನು ಕರೆದುಕೊಂಡು ಹೋಗಿದ್ದಾರೆ.

    ಈ ರಿಯಾಲಿಟಿ ಶೋಗಾಗಿ ಸನ್ನಿ ಲಿಯೋನ್ ತಮ್ಮ ಮಕ್ಕಳ ಜೊತೆ ಹೋಟೆಲಿನಲ್ಲಿ ತಂಗಿದ್ದಾರೆ. ಈ ವೇಳೆ ಅವರು ಅಲ್ಲಿನ ಹೋಟೆಲ್‍ನಲ್ಲಿ ತಮ್ಮ ಮಕ್ಕಳಿಗಾಗಿ ಅಡುಗೆ ಮಾಡಿದ್ದಾರೆ. ಸನ್ನಿ ಅಡುಗೆ ಮಾಡುತ್ತಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಸನ್ನಿ ಫೋಟೋ ಹಾಕಿ ಅದಕ್ಕೆ, “ನಾನು ನನ್ನ ಮಕ್ಕಳಾದ ನೋಹಾ ಹಾಗೂ ಅಶ್‍ಹರ್ ಗಾಗಿ ಬನಾನಾ ವೀಟ್ ಪ್ಯಾನ್‍ಕೇಕ್ ಹಾಗೂ ಆ್ಯಪಲ್ ಸಾಸ್ ತಯಾರಿಸುತ್ತಿದ್ದೇನೆ. ತಾಯಿಯ ಜೀವನ ಎಂದು ಹ್ಯಾಶ್‍ಟ್ಯಾಗ್ ಬಳಸಿ ಇಲ್ಲಿನ ಸಿಬ್ಬಂದಿ ಮಕ್ಕಳಿಗಾಗಿ ಅಡುಗೆ ಮಾಡಲು ನನಗೆ ಅನುಮತಿ ನೀಡಿದ್ದಾರೆ” ಎಂದು ಪೋಸ್ಟ್ ಮಾಡಿದ್ದಾರೆ.

    ಕಳೆದ ವರ್ಷ ಬಾಡಿಗೆ ತಾಯಿ ಮೂಲಕ ಸನ್ನಿ ಲಿಯೋನ್ ಹಾಗೂ ಅವರ ಪತಿ ಡೇನಿಯಲ್ ವೆಬರ್ ಇಬ್ಬರು ಅವಳಿ ಗಂಡು ಮಕ್ಕಳನ್ನು ಪಡೆದಿದ್ದರು. ಅಲ್ಲದೆ ಸನ್ನಿ 2017ರಲ್ಲಿ ಮಹಾರಾಷ್ಟ್ರದ ಲಾತೂರಿನಲ್ಲಿ ನಿಶಾಳನ್ನು ದತ್ತು ಪಡೆದುಕೊಂಡಿದ್ದರು.

  • ಮೊದಲ ಮಗುವಾದ 26 ದಿನಕ್ಕೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

    ಮೊದಲ ಮಗುವಾದ 26 ದಿನಕ್ಕೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

    ಢಾಕಾ: ಬಾಂಗ್ಲಾದೇಶದ ತಾಯಿಯೊಬ್ಬರು ಮೊದಲ ಮಗುವಿಗೆ ಜನ್ಮ ನೀಡಿ 26 ದಿನಕ್ಕೆ ಅವಳಿ ಮಕ್ಕಳಿಗೆ ಜನ್ಮ ನೀಡುವುದರ ಮೂಲಕ ವೈದ್ಯರಿಗೆ ಅಚ್ಚರಿ ನೀಡಿದ್ದಾರೆ.

    ಅರಿಫಾ ಸುಲ್ತಾನ(20) ಕಳೆದ ತಿಂಗಳು ನಾರ್ಮಲ್ ಡೆಲಿವರಿ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮೊದಲ ಮಗುವಿನ ಡೆಲಿವರಿ ಮಾಡುವ ವೇಳೆ ವೈದ್ಯರು ಮಹಿಳೆ ದೇಹದಲ್ಲಿ ಎರಡನೇ ಗರ್ಭಾಶಯ ಇರುವುದನ್ನು ಗಮನಿಸಿರಲಿಲ್ಲ.

    ಅರಿಫಾ ಅವರಿಗೂ ನಾನು ಅವಳಿ ಮಕ್ಕಳ ಗರ್ಭಿಣಿ ಎಂಬ ವಿಷಯ ಗೊತ್ತಿರಲಿಲ್ಲ. ಆಕೆ ಮೊದಲ ಮಗುವಿಗೆ ಜನ್ಮ ನೀಡಿ 26 ದಿನದ ಬಳಿಕ ಆಕೆಯ ಹೊಟ್ಟೆಯಲ್ಲಿದ್ದ ನೀರು ಒಡೆದಿದೆ. ಆಗ ಅರಿಫಾ ಆಸ್ಪತ್ರೆಗೆ ದಾಖಲಾದರು ಎಂದು ಸ್ತ್ರೀರೋಗ ತಜ್ಞೆ ಶೀಲಾ ಪೊದರ್ ತಿಳಿಸಿದ್ದಾರೆ.

    ಕಳೆದ ಶುಕ್ರವಾರ ಅರಿಫಾ ಆಸ್ಪತ್ರೆಗೆ ಬಂದ ತಕ್ಷಣ ವೈದ್ಯೆ ಶೀಲಾ ಸಿಸೇರಿಯನ್ ಮಾಡಿ ಅವಳಿ ಮಕ್ಕಳಾದ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವನ್ನು ಹೊರತೆಗೆದಿದ್ದಾರೆ. ಮಕ್ಕಳಿಬ್ಬರು ಆರೋಗ್ಯವಾಗಿದ್ದು, ಮಂಗಳವಾರ ತಾಯಿ- ಮಕ್ಕಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

    ನಾನು ನನ್ನ 30 ವರ್ಷದ ವೈದ್ಯಕೀಯದ ಅನುಭವದಲ್ಲಿ ಇಂತಹ ಕೇಸ್ ನೋಡಿಲ್ಲ ಎಂದು ಜೆಸ್ಸೋರ್ ಜಿಲ್ಲಾಸ್ಪತ್ರೆಯ ವೈದ್ಯ ದಿಲೀಪ್ ರಾಯ್ ಹೇಳಿದ್ದಾರೆ. ಅಲ್ಲದೆ ಅರಿಫಾಳ ಎರಡನೇ ಗರ್ಭಧಾರಣವನ್ನು ಪತ್ತೆ ಹಚ್ಚದ ಕಾರಣ ಖುಲ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರ ವಿರುದ್ಧ ದಿಲೀಪ್ ಕ್ರಮಕೈಗೊಂಡಿದ್ದಾರೆ.

    ನನ್ನ ಪತಿ ಕಾರ್ಮಿಕನಾಗಿದ್ದು, ಪ್ರತಿ ತಿಂಗಳು 5 ಸಾವಿರ ರೂ. ದುಡಿಯುತ್ತಾರೆ. ನನಗೆ ಮೂವರು ಮಕ್ಕಳು ಹುಟ್ಟಿರುವುದು ಸಂತೋಷ. ಆದರೆ ಅವರನ್ನು ಹೇಗೆ ನೋಡಿಕೊಳ್ಳುವುದು ಎಂಬ ಚಿಂತೆ ಶುರುವಾಗಿದೆ ಎಂದು ಅರಿಫಾ ಹೇಳಿದ್ದಾರೆ. ಅಲ್ಲಾನ ಚಮತ್ಕಾರದಿಂದ ನನ್ನ ಮೂವರು ಮಕ್ಕಳು ಆರೋಗ್ಯವಾಗಿದ್ದಾರೆ. ನನ್ನ ಮಕ್ಕಳನ್ನು ಖುಷಿಯಾಗಿ ಇಡಲು ನಾನು ಪ್ರಯತ್ನಪಡುತ್ತೇನೆ ಎಂದು ಅರಿಫಾ ಪತಿ ಸುಮೋನ್ ಬಿಸ್ವಾಸ್ ತಿಳಿಸಿದ್ದಾರೆ.