Tag: twin children

  • ಅವಳಿ ಮಕ್ಕಳ ಪಾದ ಹಿಡಿದು ಮುದ್ದಾಡಿದ ಅಮೂಲ್ಯ: ಫ್ಯಾನ್ಸ್ ಬೇಸರ

    ಅವಳಿ ಮಕ್ಕಳ ಪಾದ ಹಿಡಿದು ಮುದ್ದಾಡಿದ ಅಮೂಲ್ಯ: ಫ್ಯಾನ್ಸ್ ಬೇಸರ

    ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಮೊದಲ ಬಾರಿಗೆ ತಮ್ಮ ಮುದ್ದು ಮಕ್ಕಳ ಫೋಟೋ ಶೇರ್ ಮಾಡಿ, ಸುದ್ದಿಯಲ್ಲಿದ್ದಾರೆ. ಮಾರ್ಚ್‌ನಲ್ಲಿ ಅವಳಿ ಮಕ್ಕಳಿಗೆ ತಾಯಿಯಾದ ಅಮೂಲ್ಯ ಇಲ್ಲಿಯವರೆಗೆ ಮಕ್ಕಳ ಯಾವುದೇ ಫೋಟೋ ಹಂಚಿಕೊಂಡಿರಲಿಲ್ಲ. ಇದೀಗ ನಟಿ ಶೇರ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಬಾಲನಟಿಯಾಗಿ, ಚಂದನವನದ ಗೋಲ್ಡನ್ ಕ್ವೀನ್ ಆಗಿ ಸಾಕಷ್ಟು ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದ ನಟಿ ಅಮೂಲ್ಯ, ಗಾಂಧಿನಗರದಲ್ಲಿ ಡಿಮ್ಯಾಂಡ್ ಇರುವಾಗಲೇ 2017ರಲ್ಲಿ ಜಗದೀಶ್ ಆರ್. ಚಂದ್ರ ಜೊತೆ ಹಸೆಮಣೆ ಏರಿದ್ದರು. ಬಳಿಕ ಮದುವೆ, ಸಂಸಾರ ಅಂತಾ ಬ್ಯುಸಿಯಿದ್ದ ನಟಿ ಈ ವರ್ಷ ಮಾರ್ಚ್‌ನಲ್ಲಿ ಅವಳಿ ಮಕ್ಕಳಿಗೆ ತಾಯಿಯಾದರು. ಇದೀಗ ಮೊದಲ ಬಾರಿಗೆ ಮಕ್ಕಳ ಜೊತೆಯಿರುವ ಫೋಟೋ ರಿವೀಲ್ ಮಾಡಿದ್ದಾರೆ. ಆದರೆ ಈ ವೇಳೆ ಕೆಲ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿಂಪಲ್ ಸ್ಟಾರ್ ಹೊಸ ಚಿತ್ರ ಅನೌನ್ಸ್: ಕನ್ನಡದಲ್ಲಿ ಬರಲಿದೆ `ಆರ್‌ಆರ್‌ಆರ್’ ಚಿತ್ರ

     

    View this post on Instagram

     

    A post shared by Amulya (@nimmaamulya)

    ಸದ್ಯ ನಟಿ ಅಮೂಲ್ಯ ಮಕ್ಕಳ ಪಾದ ಕಾಣುವಂತೆ ಫೋಟೋ ಹಾಕಿದ್ದಾರೆ. ಅವರು ಮಕ್ಕಳ ಮುಖ ತೋರಿಸಿಲ್ಲ. ಇದು ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿದೆ. ಮಕ್ಕಳ ಮುಖ ತೋರಿಸುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಮಕ್ಕಳ ಪಾದ ಹಿಡಿದು ಮುದ್ದಾಡುತ್ತಿರುವ ಅಮೂಲ್ಯ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

  • ತನ್ನ ಅವಳಿ ಮಕ್ಕಳನ್ನ ಎತ್ತಿ ಮುದ್ದಾಡಿದ ಇರೋಮ್ ಶರ್ಮಿಳಾ

    ತನ್ನ ಅವಳಿ ಮಕ್ಕಳನ್ನ ಎತ್ತಿ ಮುದ್ದಾಡಿದ ಇರೋಮ್ ಶರ್ಮಿಳಾ

    – ಮಕ್ಕಳಿಗೆ ನಿಕ್ಸ್ ಶಖಿ, ಆಟುಮನ್ ಎಂದು ನಾಮಕರಣ

    ಬೆಂಗಳೂರು: ಉಕ್ಕಿನ ಮಹಿಳೆ ಖ್ಯಾತಿಯ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಚಾನು ಅವರು ತಮ್ಮ ಅವಳಿ ಮಕ್ಕಳ ಜೊತೆ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.

    ಇರೋಮ್ ಶರ್ಮಿಳಾ ಅವರು ಅವಳಿ ಹೆಣ್ಣು ಮಕ್ಕಳನ್ನು ಎತ್ತಿ ಮುದ್ದಾಡಿದ್ದಾರೆ. ಆ ಮಕ್ಕಳಿಗೆ ನಿಕ್ಸ್ ಶಖಿ ಮತ್ತು ಆಟುಮನ್ ಎಂದು ನಾಮಕರಣ ಮಾಡಿದ್ದಾರೆ. ನಿಕ್ಸ್ ಶಖಿ 2.16 ಕೆಜಿ ಹಾಗೂ ಆಟುಮನ್ 2.14 ಕೆಜಿ ತೂಕವಿದ್ದು, ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ.

    ಮಣಿಪುರದ ಇರೋಮ್ ಶರ್ಮಿಳಾ ಅವರು ಗರ್ಭಿಣಿಯಾದಾಗಿನಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ವಿಶ್ವ ಅಮ್ಮಂದಿರ ದಿನವೇ (ಮೇ 12) ರಂದು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಆಸ್ಪತ್ರೆಯ ವೈದ್ಯರಾದ ಡಾ. ಶ್ರೀಪಾದ ವೀಣೆಕರ್ ಮತ್ತು ತಂಡದಿಂದ ಹೆರಿಗೆ ಮಾಡಿಸಿದ್ದರು.

    ಇರೋಮ್ ಶರ್ಮಿಳಾ ಚಾನು ತಮ್ಮ ಬಹುಕಾಲದ ಸಂಗಾತಿ ಡೆಸ್ಮಂಡ್ ಕುಟಿನ್ಹೊ ಅವರನ್ನು 2017ರಲ್ಲಿ ವಿವಾಹವಾಗಿದ್ದರು. ಡೆಸ್ಮಂಡ್ ಕುಟಿನ್ಹೊ ಮೂಲತಃ ಬ್ರಿಟಿಷ್ ನಾಗರೀಕರಾಗಿದ್ದು, ವಿಶೇಷ ವಿವಾಹ ಕಾಯ್ದೆ ಅಡಿ ಇರೋಮ್ ಶರ್ಮಿಳಾ ಅವರನ್ನು ಆಗ ಉಪ ನೋಂದಣಾಧಿಕಾರಿಯಾಗಿದ್ದ ರಾಧಾಕೃಷ್ಣನ್ ಅವರ ಸಮ್ಮುಖದಲ್ಲಿ ವಿವಾಹವಾಗಿದ್ದರು.

    ಇರೋಮ್ ಶರ್ಮಿಳಾ ಅವರ ಹುಟ್ಟೂರು ಇಂಫಾಲ್. ಅವರು ಮಣಿಪುರದ ಉಕ್ಕಿನ ಮಹಿಳೆ, ನಾಗರಿಕ ಹಕ್ಕುಗಳ ಕಾರ್ಯಕರ್ತೆ, ಕವಯಿತ್ರಿಯಾಗಿ ಗುರುತಿಸಿಕೊಂಡಿದ್ದಾರೆ. ಸಶಸ್ತ್ರಪಡೆಯ (ವಿಶೇಷ ಅಧಿಕಾರ) ಕಾಯಿದೆ 1958 ಅನ್ನು ವಾಪಸ್ ಪಡೆಯಲು ಆಗ್ರಹಿಸಿ 2000 ನವೆಂಬರ್ 3ರಿಂದ ನಿರಶನ ಆರಂಭಿಸಿ 15 ವರ್ಷಗಳ ಕಾಲ ಮುಂದುವರಿಸಿ ಗಟ್ಟಿತನ ತೋರಿದ್ದರು. ರಾಜ್ಯದಲ್ಲಿ ಸಶಸ್ತ್ರಪಡೆಯು ವಿಶೇಷಾಧಿಕಾರ ಬಳಸಿಕೊಂಡು ಮಹಿಳೆಯರ ಮೇಲೆ ಅತ್ಯಾಚಾರ, ಅಮಾಯಕರ ಹತ್ಯೆಯಲ್ಲಿ ತೊಡಗಿರುವುದರ ವಿರುದ್ಧ ಸಿಡಿದೆದ್ದು ಏಕಾಂಗಿಯಾಗಿ ಅಹಿಂಸಾತ್ಮಕ ಪ್ರತಿಭಟನೆ ಕೈಗೊಂಡಿದ್ದರು.

    2014ರ ಆಗಸ್ಟ್ 9ರಂದು ಇರೋಮ್ ಶರ್ಮಿಳಾ ತಮ್ಮ ಉಪವಾಸ ಅಂತ್ಯಗೊಳಿಸಿ ವಿಧಾನಸಭಾ ಚುನಾವಣೆಗೆ ನಿಂತಿದ್ದರು. ಆದರೆ ಕೇವಲ 90 ಮತಗಳನ್ನು ಪಡೆದು ಹೀನಾಯ ಸೋಲು ಕಂಡಿದ್ದರು. ಅದಾದ ಬಳಿಕ ಅವರು ರಾಜಕೀಯದಿಂದಲೇ ಬಹುತೇಕ ದೂರ ಸರಿದರು.

  • ಸೋದರ ಮಾವನಿಂದಲೇ ಅವಳಿ ಮಕ್ಕಳ ಹತ್ಯೆ!

    ಸೋದರ ಮಾವನಿಂದಲೇ ಅವಳಿ ಮಕ್ಕಳ ಹತ್ಯೆ!

    ಹೈದರಾಬಾದ್: ಇಬ್ಬರು ಬುದ್ಧಿಮಾಂದ್ಯ ಮಕ್ಕಳನ್ನು ಸೋದರಮಾವನೇ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಹೈದರಾಬಾದ್‍ನ ಚೈತನ್ಯಪುರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    12 ವರ್ಷದ ಸೃಜನಾ ರೆಡ್ಡಿ ಹಾಗೂ ವಿಷ್ಣುವರ್ಧನ ರೆಡ್ಡಿ ಕೊಲೆಯಾದ ಅವಳಿ ಮಕ್ಕಳು. ಶುಕ್ರವಾರ ಅವಳಿ ಮಕ್ಕಳನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ತನ್ನ ಸೋದರ ಮಾವನೇ ಮಕ್ಕಳನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಮಲ್ಲಿಕಾರ್ಜುನ ರೆಡ್ಡಿಯು ಹೈದರಾಬಾದ್‍ನ ಚೈತನ್ಯಪುರದ ಬಾಡಿಗೆ ಮನೆಯ ವಾಸಿಯಾಗಿದ್ದು, ಶುಕ್ರವಾರ ತನ್ನ ತಂಗಿ ಮಕ್ಕಳನ್ನು ಈಜು ಕಲಿಸುವುದಾಗಿ ಹೇಳಿ ನಲ್ಗೋಂಡ ಜಿಲ್ಲೆಯಿಂದ ಕರೆದುಕೊಂಡು ಬಂದಿದ್ದಾನೆ. ಮನೆಗೆ ಬಂದ ಮಕ್ಕಳನ್ನು ತನ್ನ ಸ್ನೇಹಿತ, ಮನೆಯಲ್ಲಿದ್ದ ಜೊತೆಗಾರ ಟ್ಯಾಕ್ಸಿ ಚಾಲಕನೊಂದಿಗೆ ಸೇರಿ ಹತ್ಯೆ ಮಾಡಿದ್ದಾನೆ. ಇಂದು ಬೆಳಗ್ಗೆ ಮಕ್ಕಳ ಮೃತದೇಹವನ್ನು ಕಾರಿನಲ್ಲಿ ಸಾಗಿಸುವಾಗ ಮನೆಯ ಮಾಲೀಕ ಗಮನಿಸಿ ಪೊಲೀಸರಿಗೆ ಸುದ್ದಿ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಪೊಲೀಸರು ಹತ್ಯೆಯ ಹಿಂದೆ ಪೋಷಕರ ಕೈವಾಡ ಶಂಕೆ ವ್ಯಕ್ತವಾಗಿ ಲಕ್ಷ್ಮೀ ಹಾಗೂ ಶ್ರೀನಿವಾಸ್‍ರವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ತನ್ನ ಅಣ್ಣ ಈಜು ಕಲಿಸುವ ಸಲುವಾಗಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾನೆ. ಇಬ್ಬರೂ ಅವಳಿ ಮಕ್ಕಳಾಗಿದ್ದು ಹುಟ್ಟಿನಿಂದಲೂ ಬುದ್ಧಿಮಾಂದ್ಯರಾಗಿದ್ದರು, ಅಲ್ಲದೇ ಇಬ್ಬರಿಗೂ ಮಾತು ಸಹ ಬರುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, ಶನಿವಾರ ಬೆಳಗ್ಗೆ ಮಕ್ಕಳ ಹತ್ಯೆ ಕುರಿತು ಆರೋಪಿ ಮಲ್ಲಿಕಾರ್ಜುನ ರೆಡ್ಡಿ ಹಾಗೂ ಕೃತ್ಯಕ್ಕೆ ಸಹಾಯ ಮಾಡಿದ ಟ್ಯಾಕ್ಸಿ ಚಾಲಕನನ್ನು ಬಂಧಿಸಿದ್ದೇವೆ. ಕೃತ್ಯದಲ್ಲಿ ಆರೋಪಿ ತಂಗಿಯ ಕೈವಾಡ ಶಂಕೆ ವ್ಯಕ್ತವಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ನಂತರ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

  • 20 ಮುಂಬೈ ವೈದ್ಯರು, 12 ಗಂಟೆ ನಿರಂತರ ಸರ್ಜರಿ ಮಾಡಿ ಸಯಾಮಿ ಮಕ್ಕಳನ್ನ ಬೇರೆ ಮಾಡಿದ್ರು!

    20 ಮುಂಬೈ ವೈದ್ಯರು, 12 ಗಂಟೆ ನಿರಂತರ ಸರ್ಜರಿ ಮಾಡಿ ಸಯಾಮಿ ಮಕ್ಕಳನ್ನ ಬೇರೆ ಮಾಡಿದ್ರು!

    ಮುಂಬೈ: ಒಂದು ವರ್ಷಗಳ ಕಾಲ ಅಂಟಿಕೊಂಟಿದ್ದ ಸಯಾಮಿ ಮಕ್ಕಳನ್ನು 20 ವೈದ್ಯರು 12 ಗಂಟೆಗಳ ಕಾಲ ನಿರಂತರವಾಗಿ ಸರ್ಜರಿ ಮಾಡಿ ಬೇರೆ ಬೇರೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ.

    ಪ್ರೀತಿ ಮತ್ತು ರಾಣಿ ಅಂಟಿಕೊಂಡಿದ್ದ ಅವಳಿ ಮಕ್ಕಳು. ವಾಡಿಯಾ ಆಸ್ಪತ್ರೆಯ 20 ವೈದ್ಯರು ಸೇರಿ ಮಂಗಳವಾರ ಆಪರೇಷನ್ ಮಾಡಿ ಬೇರೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ಆಸ್ಪತ್ರೆ ಎರಡನೇ ಬಾರಿ ಈ ರೀತಿಯ ಶಸ್ತ್ರಚಿಕಿತ್ಸೆ ಮಾಡಿ ಯಶಸ್ಸು ಕಂಡಿರುವುದು ವಿಶೇಷ.

    ಗರ್ಭಿಣಿಯಾಗಿ 5 ತಿಂಗಳಾದ ಮೇಲೆ ಭ್ರೂಣದಲ್ಲಿ ಅವಳಿ ಮಕ್ಕಳು ಇರುವುದು ನನಗೆ ಗೊತ್ತಾಯಿತು. ಅಷ್ಟೇ ಅಲ್ಲದೇ ಇಬ್ಬರ ದೇಹ ಅಂಟಿಕೊಂಡಿರುವ ವಿಚಾರವೂ ತಿಳಿಯಿತು. 2016 ಸೆಪ್ಟಂಬರ್ 19 ರಂದು ನಾನು ಇಬ್ಬರು ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದೆ. ಈ ಸಂದರ್ಭದಲ್ಲಿ ಯಕೃತ್, ಕರಳು ಮತ್ತು ಮೂತ್ರಕೋಶವನ್ನ ಮಕ್ಕಳು ಹಂಚಿಕೊಂಡಿರುವುದು ತಿಳಿಯಿತು. ಹೀಗಾಗಿ ಅವರ ಆರೋಗ್ಯದ ಬಗ್ಗೆ ನಾನು ಭಯಪಟ್ಟಿದ್ದೆ. ಆದರೆ ಮಕ್ಕಳಿಗೆ ಈ ಶಸ್ತ್ರಚಿಕಿತ್ಸೆ ಮಾಡುವ ಮೊದಲು ವಿಶೇಷ ಪರೀಕ್ಷೆ ನಡೆಸಲಾಗಿತ್ತು ಎಂದು ತಾಯಿ ಶೀತಲ್ ಜಾಲ್ಟೆ ತಿಳಿಸಿದರು.

    1 ವರ್ಷ 3 ತಿಂಗಳ ಪ್ರೀತಿ ಮತ್ತು ರಾಣಿ ಅವಳಿ ಮಕ್ಕಳು ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯಕ್ಕೆ ಈ ಮಕ್ಕಳು ಐಸಿಯುನಲ್ಲಿ ಇದ್ದು, ಕೆಲ ಕೆಲವು ದಿನಗಳವರೆಗೆ ಇಲ್ಲೇ ಇರಬೇಕಾಗುತ್ತದೆ. ನಂತರ ಅವರ ಆರೋಗ್ಯ ಸ್ಥಿತಿಯನ್ನ ತಿಳಿದುಕೊಳ್ಳಲು ಅನೇಕ ಶಸ್ತ್ರಚಿಕಿತ್ಸೆ ಮಾಡಬೇಕಿದೆ. ಮಕ್ಕಳನ್ನು ಚರ್ಮದ ಮೂಲಕ ಕವರ್ ಮಾಡುವುದು ನಮಗೆ ಸವಾಲಿನ ಕೆಲಸವಾಗಿತ್ತು. ಇಂತಹ ಅಪರೂಪದ ಶಸ್ತ್ರಚಿಕಿತ್ಸೆಯಾದ ಬಳಿಕ ಘಾಟ್ಕೋಪಾರ್‍ದಲ್ಲಿರುವ ಜಾಲ್ಟೆ ಕುಟುಂಬ ಇಬ್ಬರು ಮಕ್ಕಳನ್ನು ನೋಡಿ ತುಂಬಾ ಸಂತೋಷಗೊಂಡಿದ್ದಾರೆ ಎಂದು ವಾಡಿಯಾ ಆಸ್ಪತ್ರೆಯ ಸಿಇಓ ಡಾ. ಮಿನ್ನೆ ಬೊಧಾನ್ವಾಲಾ ಹೇಳಿದರು.