Tag: tweeter

  • ತುಲಾಭಾರ ಸೇವೆ ವೇಳೆ ಗಾಯಗೊಂಡ ಶಶಿ ತರೂರ್- ನೆಟ್ಟಿಗರಿಂದ ಟ್ರೋಲ್

    ತುಲಾಭಾರ ಸೇವೆ ವೇಳೆ ಗಾಯಗೊಂಡ ಶಶಿ ತರೂರ್- ನೆಟ್ಟಿಗರಿಂದ ಟ್ರೋಲ್

    ತಿರುವನಂತಪುರಂ: ದೇವಾಲಯದಲ್ಲಿ ತುಲಾಭಾರ ಸೇವೆ ನೀಡಲು ಮುಂದಾಗಿ ತಲೆಗೆ ಪೆಟ್ಟು ಮಾಡಿಕೊಂಡಿದ್ದ ಕಾಂಗ್ರೆಸ್ ನಾಯಕ ಶಶಿತರೂರ್ ರನ್ನು ಟ್ವಿಟ್ಟಿಗರು ಕಾಲೆಳೆದಿದ್ದು, ಹೆಲ್ಮೆಟ್ ಧರಿಸಿ ದೇವರ ಸೇವೆ ಮಾಡುವಂತೆ ಸಲಹೆ ನೀಡಿದ್ದಾರೆ. ಇದರ ನಡುವೆ ಮುಂದಿನ ಸಮಯದಲ್ಲಿ ಹೆಲ್ಮೆಟ್ ಧರಿಸಿ ತುಲಾಭಾರ ಮಾಡಿಸಿಕೊಳ್ಳುವಂತೆ ಕುಟುಂಬಸ್ಥರು ಕೋರುತ್ತಿದ್ದಾರೆ ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

    ತುಲಾಭಾರ ಸೇವೆ ವೇಳೆ ನಡೆದ ಅವಘಡದಲ್ಲಿ ಗಾಯಗೊಂಡಿದ್ದ ಶಶಿ ತರೂರ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿ ಕೆಲ ಮಂದಿ ಕಾಲೆಳೆದಿದ್ದರು. ತುಲಾಭಾರ ಮಾಡುವ ವೇಳೆ ಹೆಲ್ಮೆಟ್ ಧರಿಸುವಂತೆ ಫೋಟೋ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಸ್ಕ್ರೀನ್ ಶಾಟ್ ಶೇರ್ ಮಾಡಿರುವ ಶಶಿ ತರೂರ್ ನನ್ನ ಕುಟುಂಬ ಕೂಡ ಮುಂದಿನ ಬಾರಿ ಇದನ್ನೇ ಬಯಸುತ್ತಿದೆ ಎಂದು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

    ಇತ್ತ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ರಾಜಕೀಯ ಪ್ರಚಾರ ವೇಳೆಯೇ ಶಶಿ ತರೂರ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ತಿರುವನಂತಪುರಂನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿದ್ದ ಅವರು, ಶಶಿ ತರೂರ್ ಅವರ ಆರೋಗ್ಯ ವಿಚಾರಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿ ಫೋಟೋ ಪೋಸ್ಟ್ ಮಾಡಿರುವ ಶಶಿ ತರೂರ್, ನಿರ್ಮಲಾ ಅವರ ಸೌಜನ್ಯಕ್ಕೆ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.

  • ಟ್ವಿಟ್ಟರ್‌ನಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಎಚ್‍ಡಿಡಿ ಶುಭಾಶಯ

    ಟ್ವಿಟ್ಟರ್‌ನಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಎಚ್‍ಡಿಡಿ ಶುಭಾಶಯ

    ಬೆಂಗಳೂರು: ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಟ್ವೀಟ್ ಮಾಡಿ ಸಮ್ಮಿಶ್ರ ಸರ್ಕಾರಕ್ಕೆ ಶುಭ ಹಾರೈಸಿದ್ದಾರೆ.

    ಅಧಿಕಾರಕ್ಕಾಗಿ ಮೈತ್ರಿ ಮಾಡ್ಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆಯ ಕೊರತೆ ಇದ್ರೂ ದೋಸ್ತಿ ಸರ್ಕಾರ ತೆವಳಿಕೊಂಡೇ ಶತದಿನೋತ್ಸವ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಎಚ್.ಡಿ. ದೇವೇಗೌಡ ಅವರು ಟ್ವಿಟ್ಟರ್ ನಲ್ಲಿ ಶುಭಾಶಯ ಕೋರಿದ್ದಾರೆ.

    ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಸರ್ಕಾರ ಶತದಿನಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಮೈತ್ರಿಕೂಟದಲ್ಲಿರುವ ಸಚಿವರು ಹಾಗೂ ಶಾಸಕರೆಲ್ಲರಿಗೂ ಶುಭ ಕೋರುತ್ತೇನೆ. ಈ ಸರ್ಕಾರ ಐದು ವರ್ಷಗಳ ಕಾಲ ಜನಪರವಾಗಿ ಆಡಳಿತ ನಡೆಸುವ ಮೂಲಕ ರಾಜ್ಯದ ಅಭಿವೃದ್ಧಿ ಹೊಸ ಎತ್ತರಕ್ಕೇರಲೆಂದು ಹಾರೈಸುತ್ತೇನೆ ಎಂದು ಟ್ಟೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಂಜಾಬ್ ಪೊಲೀಸರ ಗ್ರೂಪ್ ಫೋಟೋ ವೈರಲ್: ನೆಟ್ಟಿಗರಿಂದ ಭಾರೀ ಕಮೆಂಟ್ಸ್

    ಪಂಜಾಬ್ ಪೊಲೀಸರ ಗ್ರೂಪ್ ಫೋಟೋ ವೈರಲ್: ನೆಟ್ಟಿಗರಿಂದ ಭಾರೀ ಕಮೆಂಟ್ಸ್

    ಚಂಡೀಗಢ: ಕಳ್ಳರನ್ನು ಹಿಡಿದ ಮೇಲೆ ಪೊಲೀಸರು ಗ್ರೂಪ್ ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಪಂಜಾಬ್ ಪೊಲೀಸರು ಈಗ ಇಂತಹದ್ದೇ ಗ್ರೂಪ್ ಫೋಟೋ ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆಗಿದ್ದು, ಪರ ಹಾಗೂ ವಿರೋಧ ಕಮೆಂಟ್ಸ್‍ಗಳು ಹರಿದಾಡುತ್ತಿವೆ.

    ಏನಿದೆ ಫೋಟೋದಲ್ಲಿ?
    ಗ್ರೂಪ್ ಫೋಟೋ ತೆಗೆಸುತ್ತಿರುವ ವೇಳೆ ಆರೋಪಿಗಳನ್ನು ಕುರ್ಚಿ ಮೇಲೆ ಕೂರಿಸಲಾಗಿರುತ್ತದೆ. ಆದರೆ ತಮ್ಮ ತಪ್ಪಿನಿಂದ ಎಚ್ಚೆತ್ತ ಪೊಲೀಸರು ಪುನಃ ಆರೋಪಿಗಳನ್ನು ಕೆಳಗೆ ಕೂರಿಸಿ ಫೋಟೋ ತೆಗೆಸಿಕೊಂಡಿದ್ದಾರೆ. ಈ ಎರಡು ಫೋಟೋಗಳನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದ್ದು, ನೆಟ್ಟಿಗರಿಂದ ಭಾರೀ ಕಮೆಂಟ್ಸ್ ಕೇಳಿಬರುತ್ತಿವೆ.

    ಪಂಜಾಬ್ ಪೊಲೀಸರು ಇಂತಹದಕ್ಕೆ ಉತ್ತಮರು. ದರೋಢೆಕೊರರ ಜೊತೆ ಪೂರ್ಣ ಗೌರವ ನೀಡುವ ಗ್ರೂಪ್ ಫೋಟೋ ತಗೆಸಿಕೊಂಡಿದ್ದಾರೆ ಎಂದು ಬರೆದು ಅಮನ್ ಸಿಂಗ್ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.

    ಇದರಲ್ಲಿ ಯಾವುದೇ ತಪ್ಪಿಲ್ಲ. ಇದೊಂದು ಸೌಜನ್ಯದ ಸಂಕೇತ. ಆರೋಪ ಸಾಬೀತು ಆಗುವವರೆಗೆ ಅವರು ಮುಗ್ಧರು ಎಂದು ಕಾನೂನಿನಲ್ಲಿದೆ ಎಂದು ಬರೆದು ಗುರ್ಸಾಟಿಂದರ್ ಸಿಂಗ್ ಟ್ವೀಟ್ ಮಾಡಿ, ಪೊಲೀಸರನ್ನು ಬೆಂಬಲಿಸಿದ್ದಾರೆ.

    https://twitter.com/Gursatinder68/status/1019808763258081280

  • ಪ್ಲಾಸ್ಟಿಕ್ ನಿಷೇಧದಲ್ಲಿ ಕಾಂಡೋಮ್ ಸೇರಿದೆಯಾ? ಪೂನಂ Just asking

    ಪ್ಲಾಸ್ಟಿಕ್ ನಿಷೇಧದಲ್ಲಿ ಕಾಂಡೋಮ್ ಸೇರಿದೆಯಾ? ಪೂನಂ Just asking

    ಮುಂಬೈ: ಸದಾ ತಮ್ಮ ಹೇಳಿಕೆಗಳಿಂದಲೇ ಸುದ್ದಿಯಾಗುವ ಮಾಡೆಲ್, ನಟಿ ಪೂನಂ ಪಾಂಡೆ ಸದ್ಯ ಮಹಾರಾಷ್ಟ್ರ ಸರ್ಕಾರ ಕೈಗೊಂಡಿರುವ ಪ್ಲಾಸ್ಟಿಕ್ ಬ್ಯಾನ್ ನಲ್ಲಿ ಕಾಂಡೋಮ್ ಕೂಡ ಸೇರಿದೆಯಾ ಎಂದು ಪ್ರಶ್ನಿಸಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಕುರಿತು ಜಸ್ಟ್ ಆಸ್ಕಿಂಗ್ ಎಂದು ಟ್ವೀಟ್ ಮಾಡಿರುವ ನಟಿ ಪೂನಂ ಪಾಂಡೆ ಪ್ಲಾಸ್ಟಿಕ್ ನಿಷೇಧದಲ್ಲಿ ಕಾಂಡೋಮ್ ಸಹ ಸೇರಿದೆಯಾ ಎಂದು ಬರೆದುಕೊಂಡಿದ್ದಾರೆ.

    ಸದ್ಯ ಮಹಾರಾಷ್ಟ್ರದ ಪ್ಲಾಸ್ಟಿಕ್ ನಿಷೇಧದ ಕುರಿತಂತೆ ಪೂನಂ ಪಾಂಡೆ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಈ ಹಿಂದೆಯೂ ಮಹಾರಾಷ್ಟ್ರ ಸರ್ಕಾರದ ಪ್ಲಾಸ್ಟಿಕ್ ಬ್ಯಾನ್ ಕುರಿತು ಟ್ವೀಟ್ ಮಾಡಿದ್ದ ಪೂನಂ, ಪ್ಲಾಸ್ಟಿಕ ನಿಷೇಧವಾಗಿದೆ, ಯಾರು ಯಾರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೀರೋ ಅವರೆಲ್ಲಾ ರಸ್ತೆಯಲ್ಲಿ ತಿರುಗಾಡಬೇಡಿ ಎಂದು ಟ್ವೀಟ್ ಮಾಡಿದ್ದರು.

  • ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಪ್ರಧಾನಿ ಮೋದಿ

    ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಪ್ರಧಾನಿ ಮೋದಿ

    ನವದೆಹಲಿ: 48ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಎಐಸಿಸಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್ ನಲ್ಲಿ ಕಳೆದ ಬಾರಿಯಂತೆ ಶುಭಕೋರಿದ್ದಾರೆ.

    ರಾಹುಲ್ ಗಾಂಧಿ ಅವರಿಗೆ ಜನ್ಮದಿನದ ಶುಭಾಶಯಗಳು. ಅವರಿಗೆ ದೀರ್ಘ ಆಯಸ್ಸು ಹಾಗೂ ಆರೋಗ್ಯ ಸಿಗಲೆಂದು ನಾನು ಪ್ರಾರ್ಥಿಸುತ್ತೇನೆ ಎಂದು ಬರೆದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.

    2017 ರಲ್ಲಿಯೂ ನರೇಂದ್ರ ಮೋದಿ ಅವರು, ಇದೇ ಸಂದೇಶವನ್ನು ಬರೆದು ಟ್ವೀಟ್ ಮಾಡಿದ್ದರು. ಎಐಸಿಸಿ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಾಹುಲ್ ಗಾಂಧಿ ಅವರು ಮೊದಲ ಬಾರಿಯ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.

    ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ) ಮುಖಂಡರು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರ ಮನೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೇ ಗುರಿಯಾಗಿಸಿಕೊಂಡ ರಾಹುಲ್ ಗಾಂಧಿ, ಪ್ರಧಾನ ಮಂತ್ರಿಗಳು ಜನರನ್ನು ಅನಾಗರೀಕತೆ ಕಡೆಗೆ ಕರೆದೊಯ್ಯುತ್ತಿದ್ದಾರೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ನರೇಂದ್ರ ಮೋದಿ ಅವರ ನಾಟಕೀಯ ಬೆಳವಣಿಗೆಯಿಂದ ದೆಹಲಿಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬರೆದು ಟ್ವೀಟ್ ಮಾಡುವ ಮೂಲಕ ವಾಗ್ದಾಳಿ ನಡೆಸಿದ್ದರು.

    ಈ ಬೆಳವಣಿಗೆಯ ನಂತರದ ಕೆಲವೇ ಗಂಟೆಗಳಲ್ಲಿ ಪ್ರಧಾನಿ ಶುಭಕೋರಿದ್ದಾರೆ. ಕಳೆದ ವರ್ಷ ರಾಹುಲ್ ಗಾಂಧಿ ಅವರು ತಮ್ಮ ಜನ್ಮದಿನವನ್ನು ಇಟಲಿಯಲ್ಲಿರುವ ತಮ್ಮ 93 ವರ್ಷದ ಅಜ್ಜಿಯೊಂದಿಗೆ ಆಚರಿಸಿಕೊಂಡಿದ್ದರು.

  • ಬಿಜೆಪಿ ವಿರುದ್ಧ ಕಿಡಿಕಾರಲು ಹೋಗಿ ಎಡವಟ್ಟು: ಕ್ಷಮೆ ಕೇಳಿದ ದಿಗ್ವಿಜಯ್ ಸಿಂಗ್

    ಬಿಜೆಪಿ ವಿರುದ್ಧ ಕಿಡಿಕಾರಲು ಹೋಗಿ ಎಡವಟ್ಟು: ಕ್ಷಮೆ ಕೇಳಿದ ದಿಗ್ವಿಜಯ್ ಸಿಂಗ್

    ನವದೆಹಲಿ: ಭೋಪಾಲ್ ನಗರ ಮೆಟ್ರೋ ಸೇತುವೆ ಚಿತ್ರ ಎಂದು ಫೇಕ್ ಫೋಟೋವನ್ನು ಟ್ವೀಟ್ ಮಾಡಿದ್ದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದಾರೆ.

    ತಮ್ಮ ಟ್ವಿಟ್ಟರ್ ಖಾತೆಯಿಂದ ಫೋಟೋವೊಂದನ್ನು ಶನಿವಾರ ಟ್ವೀಟ್ ಮಾಡಿದ್ದ ಅವರು, ಇದು ಮಧ್ಯಪ್ರದೇಶದ ಭೋಪಾಲ್ ನಗರದ ಸೇತುವೆಯಾಗಿದ್ದು, ಈಗಾಗಲೇ ಸೇತುವೆಗೆ ಡ್ಯಾಮೇಜ್ ಆಗಿದೆ. ಬಿಜೆಪಿ ನಾಯಕರು ಕೇವಲ ಸಿದ್ಧಾಂತಗಳನ್ನು ಮಾತನಾಡುತ್ತಾರೆ. ಆದರೆ ಇದು ಅವರಿಗೆ ತಿಳಿಯುವುದಿಲ್ಲ ಎಂದು ಬರೆದುಕೊಂಡಿದ್ದರು. ಅಲ್ಲದೇ ತಮ್ಮ ಟ್ವೀಟ್ ನಲ್ಲಿ ವಾರಣಾಸಿ ಸೇತುವೆ ಕುಸಿತ ಕುರಿತು ಉಲ್ಲೇಖಿಸಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸಲು ಕೋರಿದ್ದರು.

    https://twitter.com/digvijaya_28/status/1005679859732008961

    ಈ ಫೋಟೋ ಹಿಂದಿನ ಸತ್ಯಾಂಶವನ್ನು ಬಿಚ್ಚಿಟ್ಟ ಹಿರಿಯ ಪತ್ರಕರ್ತರೊಬ್ಬರು 2016ರ ಚಿತ್ರವನ್ನು ನೀವು ಅಪ್ಲೋಡ್ ಮಾಡಿದ್ದೀರಿ. ಪಾಕಿಸ್ತಾನದ ರಾವಲ್ಪಿಂಡಿ ಮೆಟ್ರೋ ಸೇತುವೆ ಚಿತ್ರ ಎಂದು ಮರು ಟ್ವೀಟ್ ಮಾಡಿದ್ದರು. ಅಲ್ಲದೇ ತೆಲಂಗಾಣ ಸಚಿವ, ತೆಲಂಗಾಣ ರಾಷ್ಟ್ರ ಸಮಿತಿಯ ನಾಯಕ ಕೆಟಿ ರಾಮರಾವ್ ಅವರು ಸಹ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿದ್ದರು.

    ಪತ್ರಕರ್ತರ ಸ್ಪಷ್ಟನೆ ಕೇಳುತ್ತಿದಂತೆ ಎಚ್ಚೆತ್ತ ದಿಗ್ವಿಜಯ್ ಸಿಂಗ್ ಅವರು ತನ್ನ ಸ್ನೇಹಿತ ಕಳುಹಿಸಿದ ಚಿತ್ರವನ್ನು ತಾನು ಟ್ವೀಟ್ ಮಾಡಿದ್ದು, ಈ ಕುರಿತು ಮಾಹಿತಿ ಪಡೆದಿರಲಿಲ್ಲ ಎಂದು ಕ್ಷಮೆ ಕೇಳಿದ್ದಾರೆ.

    ಇದೇ ಮೊದಲಲ್ಲ: ಈ ಹಿಂದೆಯೂ ಕಾಂಗ್ರೆಸ್ ಹಿರಿಯ ನಾಯಕರಾದ ದಿಗ್ವಿಜಯ್ ಸಿಂಗ್ ಅವರು ಟ್ವೀಟ್‍ರಲ್ಲಿ ಪೋಸ್ಟ್ ಮಾಡಿ ಹಲವು ಎಡವಟ್ಟುಗಳನ್ನು ಮಾಡಿಕೊಂಡಿದ್ದರು. ಒಮ್ಮೆ ಕಾಂಗ್ರೆಸ್ ಸಂಸದೆ ರಾಜಕುಮಾರಿ ರತ್ನಾಸಿಂಗ್ ಅವರ ಬಗ್ಗೆ ಟ್ವೀಟ್ ಮಾಡಿ ರಾಜೀವ್ ಗಾಂಧಿ ಬದಲಾಗಿ ರಾಹುಲ್ ಗಾಂಧಿ ಸಂಪುಟದಲ್ಲಿ ಕಾರ್ಯನಿರ್ವಹಿಸಿದ್ದರು ಎಂದು ಟ್ವೀಟ್ ಮಾಡಿ ಬಳಿಕ ಡಿಲೀಟ್ ಮಾಡಿದ್ದರು. ಅಲ್ಲದೇ ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ಪೋಪ್ ಕುರಿತ ಫೇಕ್ ವಿಡಿಯೋ ಟ್ವೀಟ್ ಮಾಡಿ ಪ್ರಮಾದ ಎಸಗಿದ್ದರು.

  • ಭಾರತೀಯರಲ್ಲಿ ಕ್ಷಮೆ ಕೇಳಿದ ಪ್ರಿಯಾಂಕಾ ಚೋಪ್ರಾ

    ಭಾರತೀಯರಲ್ಲಿ ಕ್ಷಮೆ ಕೇಳಿದ ಪ್ರಿಯಾಂಕಾ ಚೋಪ್ರಾ

    ನವದೆಹಲಿ: ಕ್ವಾಂಟಿಕೋ ಸಂಚಿಕೆಯಲ್ಲಿ ಉದ್ದೇಶ ಪೂರ್ವಕವಾಗಿ ಭಾರತೀಯರನ್ನು ಹಿಂದೂ ಉಗ್ರಗಾಮಿಗಳೆಂದು ಬಿಂಬಿಸಿಲ್ಲ. ಈ ಅಹಿತಕರ ಬೆಳವಣಿಗೆಗೆ ನಾನು ಭಾರತೀಯರಲ್ಲಿ ಕ್ಷಮೆ ಕೇಳುತ್ತೇನೆ ಎಂದು ನಟಿ ಪ್ರಿಯಾಂಕಾ ಚೋಪ್ರಾ ಟ್ವಟ್ಟರ್‍ನಲ್ಲಿ ಬರೆದುಕೊಂಡಿದ್ದಾರೆ.

    ಅಮೆರಿಕ ಎಬಿಸಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕ್ವಾಂಟಿಕೋದಲ್ಲಿ ಬಾಲಿವುಡ್‍ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾರವರು ಅಭಿನಯಿಸಿದ್ದಾರೆ. ಹೀಗಾಗಿ ತಮ್ಮ ಟ್ವೀಟರ್ ಖಾತೆಯಲ್ಲಿ “ನನ್ನ ಅಭಿನಯದ ಕ್ವಾಂಟಿಕೋ ಸಂಚಿಕೆಯಲ್ಲಿ ಭಾರತೀಯರ ಭಾವನೆಗೆ ಧಕ್ಕೆ ತರುವ ಸನ್ನಿವೇಶ ದುಃಖ ತಂದಿದೆ. ಉದ್ದೇಶ ಪೂರ್ವಕವಾಗಿ ಹಾಗೇ ಬಿಂಬಿಸಿಲ್ಲ. ಈ ಅಹಿತಕರ ಘಟನೆಗೆ ನಾನು ಭಾರತೀಯರಲ್ಲಿ ಕ್ಷಮೆ ಕೇಳುತ್ತೇನೆ. ಅಲ್ಲದೇ ನಾನು ಎಂದೆಂದಿಗೂ ಭಾರತೀಯಳು. ಭಾರತೀಯಳೆಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ:  ಪ್ರಿಯಾಂಕ ಚೋಪ್ರಾ ಅಭಿನಯದ ಕ್ವಾಂಟಿಕೋ ಸಂಚಿಕೆಯಲ್ಲಿ ಹಿಂದೂಗಳಿಗೆ ಉಗ್ರ ಪಟ್ಟ: ಕ್ಷಮೆ ಕೇಳಿದ ಅಮೆರಿಕಾ ಟಿವಿ ಮಾಧ್ಯಮ!

    ಕ್ವಾಂಟಿಕೋ ಸಂಚಿಕೆಯಲ್ಲಿ ಪ್ರಿಯಾಂಕಾ ಚೋಪ್ರಾರವರು ಎಫ್‍ಬಿಐನ ಏಜೆಂಟ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದು, ಕಳೆದ ವಾರ ಬಿಡುಗಡೆಗೊಂಡ ಸಂಚಿಕೆಯಲ್ಲಿ ಭಾರತೀಯರನ್ನು ಹಿಂದೂ ಉಗ್ರರೆಂದು ಬಿಂಬಿಸಲಾಗಿತ್ತು. ಪ್ರಸಾರವಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಅಲ್ಲದೇ ನಟಿ ಪ್ರಿಯಾಂಕಾ ಚೋಪ್ರಾ ವಿರುದ್ಧವೂ ಟ್ವೀಟರ್ ನಲ್ಲಿ ಭಾರೀ ಟೀಕೆಗಳು ಕೇಳಿಬಂದಿದ್ದವು.

    ಹಣಕ್ಕೋಸ್ಕರ ಭಾರತೀಯರನ್ನು ಅವಮಾನಿಸುವ ಕೃತ್ಯಕ್ಕೆ ಕೈ ಹಾಕಿದ್ದಿರಿ, ಇಂತಹ ಪಾತ್ರಗಳಲ್ಲಿ ಅಭಿನಯಿಸುವ ನಿಮಗೆ ನಾಚಿಕೆಯಾಗಬೇಕು ಎಂದು ಆರೋಪಿಸಿ, ಕೂಡಲೇ ಭಾರತೀಯರಲ್ಲಿ ಕ್ಷಮೆಯಾಚಿಸಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

    ಇದಕ್ಕೂ ಮುನ್ನ ಎಬಿಸಿ ಸಂಸ್ಥೆ “ಸಂಚಿಕೆಯಲ್ಲಿ ಬರುವ ಸನ್ನಿವೇಶಕ್ಕೂ ನಟಿ ಪ್ರಿಯಾಂಕ ಚೋಪ್ರಾಗೂ ಯಾವುದೇ ಸಂಬಂಧವಿಲ್ಲ, ಕೇವಲ ಅವರು ಪಾತ್ರ ನಿರ್ವಹಿಸಿದ್ದಾರೆ.” ಅಲ್ಲದೇ ಸಂಚಿಕೆಯ ಯಾವುದೇ ತಯಾರಿಯಲ್ಲಿ ಅವರು ಭಾಗವಹಿಸಿಲ್ಲ. ಭಾರತೀಯರ ಭಾವನೆಗೆ ಧಕ್ಕೆಯಾದ ಹಿನ್ನೆಲೆಯಲ್ಲಿ ನಾವು ಕ್ಷಮೆಯಾಚಿಸುತ್ತಿದ್ದೇವೆ ಎಂದು ಕ್ಷಮೆ ಕೇಳಿದ್ದರು.

  • ರೈಲ್ವೇ ಜೊತೆ  ಕ್ಷಮೆ ಕೇಳಿದ ಹಿರಿಯ ನಟಿ ಶಬಾನಾ ಅಜ್ಮಿ

    ರೈಲ್ವೇ ಜೊತೆ ಕ್ಷಮೆ ಕೇಳಿದ ಹಿರಿಯ ನಟಿ ಶಬಾನಾ ಅಜ್ಮಿ

    ನವದೆಹಲಿ: ರೈಲ್ವೇ ಸಿಬ್ಬಂದಿ ಕೊಳಚೆ ನೀರಿನಲ್ಲಿ ಪಾತ್ರೆ ತೊಳೆಯುತ್ತಿದ್ದಾರೆ ಎನ್ನುವ ವಿಡಿಯೋವನ್ನು ಟ್ವೀಟ್ ಮಾಡಿದ್ದ ಹಿರಿಯ ನಟಿ ಶಬಾನಾ ಅಜ್ಮಿ ಈಗ ಕ್ಷಮೆ ಕೇಳಿದ್ದಾರೆ.

    ಸೋಮವಾರ ಹಿರಿಯ ನಟಿ ಅಜ್ಮಿ ಅವರು, ರೈಲ್ವೇ ಸಿಬ್ಬಂದಿ ಕೊಳಚೆ ನೀರಿನಲ್ಲಿ ಪಾತ್ರೆ ತೊಳೆಯುತ್ತಿದ್ದ 30 ಸೆಕೆಂಡ್ ವಿಡಿಯೋ ಟ್ವೀಟ್ ಮಾಡಿದ್ದರು. ಅಲ್ಲದೇ ಇದನ್ನು ನೋಡಿ ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್ ಹಾಗೂ ರೈಲ್ವೇ ಸಚಿವಾಲಯಕ್ಕೆ ಟ್ಯಾಗ್ ಮಾಡಿದ್ದರು.

    ಅಜ್ಮಿ ಅವರ ಟ್ವೀಟ್‍ನಿಂದ ತಬ್ಬಿಬ್ಬಾದ ರೈಲ್ವೇ ಸಚಿವಾಲಯ ವಿಡಿಯೋ ಎಲ್ಲಿದೆಂದು ಪತ್ತೆಹಚ್ಚಿ, ಬುಧವಾರ ಸಂಜೆ ತಮ್ಮ ಉತ್ತರವನ್ನು ಟ್ವೀಟ್ ಮಾಡಿದ್ದಾರೆ. “ಮೇಡಂ ನೀವು ಟ್ಯಾಗ್ ಮಾಡಿರುವ ಕೊಳಚೆ ನೀರಿನಲ್ಲಿ ಪಾತ್ರೆ ತೊಳೆಯುತ್ತಿವ ವಿಡಿಯೋ ಮಲೇಷ್ಯಾದ ಉಪಹಾರ ಗೃಹಕ್ಕೆ ಸೇರಿದ್ದು” ಎಂದು ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದೆ.

    ಸಚಿವಾಲಯ ಟ್ವೀಟ್ ನೋಡಿದ ಬಳಿಕ ಎಚ್ಚೆತ್ತ ಹಿರಿಯ ನಟಿ, ನನ್ನಿಂದ ತಪ್ಪಾಗಿದೆ ಕ್ಷಮಿಸಿ ಹಾಗೂ ಮಾಹಿತಿ ನೀಡಿದ್ದಕ್ಕೆ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.

    ಶಬಾನಾ ಅಜ್ಮಿ ಅವರ ಟ್ವೀಟ್ ಗೆ ಟ್ವಿಟ್ಟರ್ ನಲ್ಲಿ ಜನ ತರಾಟೆಗೆ ತೆಗೆದುಕೊಂಡಿದ್ದು, ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಕ್ಕೆ ರೈಲ್ವೇ ಸಚಿವಾಲಯವು ಅಜ್ಮಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಬೇಕೆಂದು ಆಗ್ರಹಿಸಿದ್ದಾರೆ.

  • ಫಿಟ್‍ನೆಸ್ ಚಾಲೆಂಜ್ – ಯಶ್ ಪರ ಚಿರಂಜೀವಿ ಸರ್ಜಾ ಬ್ಯಾಟಿಂಗ್

    ಫಿಟ್‍ನೆಸ್ ಚಾಲೆಂಜ್ – ಯಶ್ ಪರ ಚಿರಂಜೀವಿ ಸರ್ಜಾ ಬ್ಯಾಟಿಂಗ್

    ದಾವಣಗೆರೆ: ಫಿಟ್ನೆಸ್ ಚಾಲೆಂಜ್ ನಲ್ಲಿ ಯಶ್ ಸುದೀಪ್ ಹೆಸರನ್ನು ಏಕವಚನದಲ್ಲಿ ಬಳಕೆ ಮಾಡಿದ್ದು ತಪ್ಪಲ್ಲ. ಫ್ರೆಂಡ್ಸ್ ಅಂತ ಬಂದಾಗ ಹೆಸರು ಇಟ್ಟು ಕರೆದದ್ದು ತಪ್ಪೇನಲ್ಲ ಎಂದು ನಟ ಚಿರಂಜೀವಿ ಸರ್ಜಾ ಹೇಳಿಕೆ ನೀಡಿದ್ದಾರೆ.

    ತಮ್ಮ ನಟನೆಯ ‘ಅಮ್ಮ ಐ ಲವ್ ಯು’ ಸಿನಿಮಾ ಪ್ರಚಾರಕ್ಕಾಗಿ ನಗರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಯಶ್ ಗಿಂತ ಸುದೀಪ್ ಸೀನಿಯರ್, ಸೀನಿಯರ್ ಎಂದರೇ ಗೌರವ ನೀಡಬೇಕಾಗುತ್ತದೆ. ಹಾಗಂತ ಹೆಸರಿನಿಂದ ಕರೆದರೆ ಗೌರವ ಕೊಟ್ಟಿಲ್ಲವೆಂದಲ್ಲ. ಇದೊಂದು ಕಂಪರ್ಟ್ ಜೋನ್, ಈ ಬಗ್ಗೆ ಸುದೀಪ್ ಅವರ ಟ್ವೀಟ್ ನೋಡಿದಾಗಲೂ ಯಾವುದೇ ಗೊಂದಲವಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಪ್ರೀತಿ ಲಿಮಿಟ್ ಇಲ್ಲ. ಅವರವರ ಹೀರೋಗೆ ಅವರೇ ದೊಡ್ಡ ಹೀರೋ. ಇಂತಹ ವಿಚಾರ ತುಂಬಾ ಸೆನ್ಸಿಟಿವ್, ಈ ಕುರಿತು ನಾನು ಮಾತನಾಡುವುದು ಅಷ್ಟು ಸರಿಯಲ್ಲ ಎಂದು ಅವರು ತಿಳಿಸಿದರು. ಇದನ್ನು ಓದಿ: ಯಶ್ ವಿರುದ್ಧ ಗರಂ ಆಗಿರೋ ಅಭಿಮಾನಿಗಳಿಗೆ ಸುದೀಪ್ ಮನವಿ!

    https://twitter.com/NimmaYash/status/1003581840563638272

    ದ್ವಾರಕೀಶ್ ನಿರ್ದೇಶನ ಹಾಗೂ ನನ್ನ ನಟನೆಯ ಅಮ್ಮ ಐ ಲವ್ ಯು ಸಿನಿಮಾ ಇದೆ ತಿಂಗಳ 15 ರಂದು ಸುಮಾರು 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಎಲ್ಲರೂ ಸಿನಿಮಾ ನೋಡಿ ಎಂದು ಜನರಿಗೆ ಅವರು ಮನವಿ ಮಾಡಿಕೊಂಡರು.

  • ಅಮ್ಮ ಬಂದ್ರು ಅಂತಾ ಪತ್ನಿ ಪಾದ ತೊಳೆದಿದ್ದ ನೀರನ್ನೇ ತಲೆ ಮೇಲೆ ಹಾಕ್ಕೊಂಡ- ವಿಡಿಯೋ ವೈರಲ್

    ಅಮ್ಮ ಬಂದ್ರು ಅಂತಾ ಪತ್ನಿ ಪಾದ ತೊಳೆದಿದ್ದ ನೀರನ್ನೇ ತಲೆ ಮೇಲೆ ಹಾಕ್ಕೊಂಡ- ವಿಡಿಯೋ ವೈರಲ್

    ಮುಂಬೈ: ಭಯ ಎನ್ನುವ ಸಾರ್ವತ್ರಿಕ ಸಮಸ್ಯೆ. ಅದರಲ್ಲೂ ಅತ್ತೆಯ ಭಯ ಜಗತ್ತಿನ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ ಎನ್ನುವ ಸಂದೇಶ ಹೊತ್ತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪತ್ನಿಯ ಪಾದಗಳನ್ನು ತೊಳೆಯುತ್ತಿರುವ ವ್ಯಕ್ತಿಯೊಬ್ಬ ತನ್ನ ತಾಯಿಯು ಮನೆ ಒಳಗೆ ಬಂದಿದ್ದು ತಿಳಿದು ಹೆದರಿ ತಬ್ಬಿಬ್ಬಾಗುತ್ತಾನೆ. ಅವನ ಹಾಗೂ ಪತ್ನಿಯ ವರ್ತನೆ ನೋಡುಗರಲ್ಲಿ ಭಾರೀ ನಗುವನ್ನು ತರಿಸುತ್ತದೆ. ಅಲ್ಲದೇ ಈ ವಿಡಿಯೋ ಕೆಲವೊಬ್ಬರ ಅನುಭವವನ್ನು ಕೆರಳಿಸುತ್ತದೆ.

    ವಿಡಿಯೋದಲ್ಲಿ ಏನಿದೆ?:
    ಮನೆಯಲ್ಲಿ ಯಾರು ಇಲ್ಲದಿರುವಾಗ ವ್ಯಕ್ತಿಯೊಬ್ಬ ಟಬ್ ನಲ್ಲಿ ನೀರು ತುಂಬಿಕೊಂಡು ಅದರಲ್ಲಿ ತನ್ನ ಹೆಂಡತಿಯ ಪಾದಗಳನ್ನು ತೊಳೆಯುತ್ತಿರುತ್ತಾನೆ. ದಂಪತಿ ಏಕಾಂತದಲ್ಲಿ ಏನ್ನನೋ ಮಾತನಾಡುತ್ತ ಕಾಲ ಕಳೆಯುತ್ತಿರುತ್ತಾರೆ. ಈ ವೇಳೆ ಸಡನ್ ಆಗಿ ಅತ್ತೆ ಒಳಗೆ ಬರುತ್ತಾರೆ. ಅತ್ತೆ ಬಂದಿರುವುದನ್ನು ಗಮನಿಸಿದ ಸೊಸೆ ತನ್ನ ಕಾಲನ್ನು ಟಬ್ ನಿಂದ ಹಿಂದಕ್ಕೆ ತಗೆಯುತ್ತಾಳೆ. ಇತ್ತ ವ್ಯಕ್ತಿಯೂ ಕೂಡ ತನ್ನ ತಾಯಿಗೆ ಯಾವುದೇ ರೀತಿಯ ಸಂದೇಹ ಬಾರದಿರಲಿ ಎಂದು ಹೆದರಿಕೆಯಿಂದ ಪತ್ನಿಯ ಪಾದ ತೊಳೆದ ನೀರನ್ನು ತಲೆ ಮೇಲೆ ಹಾಕಿಕೊಳ್ಳುತ್ತಾನೆ. ಇದಕ್ಕೆ ಪತ್ನಿಯೂ ಕೂಡ ಸಹಾಯ ಮಾಡುತ್ತಾಳೆ.

    https://twitter.com/FarooqFantastic/status/1001350970234818560

    ಈ ದೃಶ್ಯವು ಕೆಲವರಿಗೆ ಅಷ್ಟೊಂದು ಪರಿಣಾಮಕಾರಿ ಅಲ್ಲ ಅನಿಸಬಹುದು. ಆದರೆ ಯಾವುದೇ ತಾಯಿಯು ಮಗ ಹೀಗೆ ಮಾಡುವುದನ್ನು ಇಷ್ಟಪಡುವುದಿಲ್ಲ. ಅಲ್ಲದೇ ಸೊಸೆ ಕೂಡಾ ಅತ್ತೆಗೆ ಹೆದರುತ್ತಾಳೆ ಎನ್ನುವುದನ್ನು ವಿಡಿಯೋ ಹೇಳುತ್ತದೆ.

    ಸದ್ಯ ಈ ವಿಡಿಯೋ ಫೇಸ್ ಬುಕ್, ವ್ಯಾಟ್ಸಪ್, ಟ್ವೀಟ್ಟರ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.