Tag: tweet

  • ಹಿಜಬ್ ಭರವಸೆ ಬಲವಾಗಿದೆ – ನ್ಯಾ. ದುಲಿಯಾ ತೀರ್ಪಿಗೆ ಆಲಿಯಾ ಅಸ್ಸಾದಿ ಮೆಚ್ಚುಗೆ

    ಹಿಜಬ್ ಭರವಸೆ ಬಲವಾಗಿದೆ – ನ್ಯಾ. ದುಲಿಯಾ ತೀರ್ಪಿಗೆ ಆಲಿಯಾ ಅಸ್ಸಾದಿ ಮೆಚ್ಚುಗೆ

    ಉಡುಪಿ: ಹಿಜಬ್‌ (Hijab) ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ (Supreme Court) ಭಿನ್ನ ತೀರ್ಪು ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ದುಲಿಯಾ ಅವರು ನೀಡಿದ ತೀರ್ಪಿನ ಬಗ್ಗೆ ಹಿಜಬ್‌ ಪರ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಉಡುಪಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಹಿಜಬ್ ಹೋರಾಟದ ನೇತೃತ್ವ ವಹಿಸಿದ ವಿದ್ಯಾರ್ಥಿನಿ. ಮಾರ್ಚ್ 15ರ ಹೈಕೋರ್ಟ್ (High Court) ತೀರ್ಪಿನ ನಂತರ ಆಲಿಯಾ ಮತ್ತು ತಂಡ ಉಡುಪಿಯಲ್ಲಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿಲ್ಲ. ಇದೀಗ ಸುಪ್ರೀಂಕೋರ್ಟ್‍ನಲ್ಲಿ ದ್ವಿಸದಸ್ಯ ಪೀಠದಿಂದ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ. ಈ ಸಂಬಂಧ ವಿದ್ಯಾರ್ಥಿನಿ ಭರವೆಸಯ ಟ್ವೀಟ್‌ ಮಾಡಿದ್ದಾರೆ.  ಇದನ್ನೂ  ಓದಿ: ಹಿಜಬ್‌ ಆಯ್ಕೆಯ ವಿಷಯ: ನ್ಯಾ.ಹೇಮಂತ್ ಗುಪ್ತಾ, ನ್ಯಾ. ಧುಲಿಯಾ ಆದೇಶದಲ್ಲಿ ಏನಿದೆ?

    ಈ ತೀರ್ಪು ಸಂತ್ರಸ್ತ ಹೆಣ್ಣು ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿದಿದೆ. ಗೌರವಾನ್ವಿತ ನ್ಯಾಯಮೂರ್ತಿ ದುಲಿಯಾ ಅವರ ಹೇಳಿಕೆಯು ನ್ಯಾಯಯುತ ತೀರ್ಪಿನಲ್ಲಿನ ನಮ್ಮ ಭರವಸೆಯನ್ನು ಮತ್ತಷ್ಟು ಬಲಪಡಿಸಿದೆ. ಕನಿಷ್ಠ ಪಕ್ಷದಲ್ಲಿ ಸಾಂವಿಧಾನಿಕ ಮೌಲ್ಯವನ್ನು ಮುಂದುವರೆಸಿದೆ. ಸಾವಿರಾರು ವಿದ್ಯಾರ್ಥಿನಿಯರು ತಮ್ಮ ಶಿಕ್ಷಣವನ್ನು ಪುನರಾರಂಭಿಸಲು ಕಾಯುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಹಿಜಬ್‌ ಕೇಸ್‌- ಸುಪ್ರೀಂನಿಂದ ಭಿನ್ನ ತೀರ್ಪು ಪ್ರಕಟ

    Live Tv
    [brid partner=56869869 player=32851 video=960834 autoplay=true]

  • ಕೇರಳ ದುರಂತಕ್ಕೆ ಮೋದಿ ಸಂತಾಪ – ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ

    ಕೇರಳ ದುರಂತಕ್ಕೆ ಮೋದಿ ಸಂತಾಪ – ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ

    ತಿರುವನಂತಪುರಂ: ಕೇರಳದ (Kerala) ಪಾಲಕ್ಕಾಡ್ (Palakkad) ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತ ದುರಂತದಲ್ಲಿ ಸಾವನ್ನಪ್ಪಿದವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (NrendraModi) ಅವರು ಸಂತಾಪ ಸೂಚಿಸಿದ್ದಾರೆ. ಜೊತೆಗೆ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ನರೇಂದ್ರ ಮೋದಿ ಅವರು, ಮೃತರ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಗಾಯಾಳುಗಳು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‍ಆರ್‌ಎಫ್)ನಿಂದ ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂ.ಗಳನ್ನು ಮತ್ತು ಗಾಯಾಳುಗಳಿಗೆ ರೂ. 50,000 ರೂ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆಎಸ್‍ಆರ್‌ಟಿಸಿಗೆ ಶಾಲಾ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬಸ್ ಡಿಕ್ಕಿ – 9 ಮಂದಿ ಸಾವು, 40 ಜನರಿಗೆ ಗಾಯ

    ಶಾಲೆಯ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬಸ್, ಕೆಎಸ್‍ಆರ್‌ಟಿಸಿ ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿರುವ ಘಟನೆ ವಡಕ್ಕೆಂಚೇರಿಯಲ್ಲಿ ನಡೆದಿದೆ.  ಇದನ್ನೂ ಓದಿ: ನ. 1 ರಿಂದ ಜೆಡಿಎಸ್ ಜನತಾ ಪಂಚರತ್ನ ಯಾತ್ರೆ ಆರಂಭ – ಪಕ್ಷ ಸಂಘಟನೆಗೆ ಒತ್ತು: ಹೆಚ್‍ಡಿಕೆ

    ವಾಳಯಾರ್-ವಡಕ್ಕೆಂಚೇರಿ (Walayar-Vadakkencherry) ರಾಷ್ಟ್ರೀಯ ಹೆದ್ದಾರಿಯ ಅಂಜುಮೂರ್ತಿ ಮಂಗಲಂ ಬಸ್ ನಿಲ್ದಾಣದ ಬಳಿ ಈ ಅಪಘಾತ ನಡೆದಿದ್ದು, ಕಾರನ್ನು ಓವರ್ ಟೇಕ್ ಮಾಡಲು ಹೋಗಿ ಕೆಎಸ್‍ಆರ್‌ಟಿಸಿ ಬಸ್‍ಗೆ ಹಿಂಬದಿಯಿಂದ ಟೂರಿಸ್ಟ್ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ನಿಯಂತ್ರಣ ತಪ್ಪಿ ಟೂರಿಸ್ಟ್ ಬಸ್ ಪಲ್ಟಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬೆಳಗ್ಗೆ ಎದ್ದಾಗ್ಲೇ ಬಿಕ್ಕಳಿಕೆ- ಯಾರೋ ಮಿಸ್ ಮಾಡಿಕೊಳ್ತಿದ್ದಾರೆ ಅಂದ್ರು ರಶ್ಮಿಕಾ

    ಬೆಳಗ್ಗೆ ಎದ್ದಾಗ್ಲೇ ಬಿಕ್ಕಳಿಕೆ- ಯಾರೋ ಮಿಸ್ ಮಾಡಿಕೊಳ್ತಿದ್ದಾರೆ ಅಂದ್ರು ರಶ್ಮಿಕಾ

    ಟಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಮಧ್ಯೆ ಬೆಳಗ್ಗೆನೇ ಯಾರೋ ನನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಹೌದು. ಸತತವಾಗಿ ಚಿತ್ರೀಕರಣದಲ್ಲಿ ತೊಡಗಿರುವ ಕಾರಣದಿಂದಾಗಿ ರಶ್ಮಿಕಾ ಅವರು ಮೊಣಕಾಲು ನೋವಿನ (Knee Pain) ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಅವರು ಹೈದರಾಬಾದ್ ನ ಪ್ರತಿಷ್ಠಿತ ಆಸ್ಪತ್ರೆಗೆ (Hyderabad Hospital) ದಾಖಲಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ನಟಿ ಇದೀಗ ಟ್ವೀಟ್ (Tweet) ಒಂದನ್ನು ಮಾಡಿದ್ದಾರೆ.

    ಇಂದು ಬೆಳಗ್ಗೆ ಎದ್ದ ಕೂಡಲೇ ನನಗೆ ತುಂಬಾ ಬಿಕ್ಕಳಿಕೆ ಬಂದಿದೆ. ನನಗ ಅಚ್ಚರಿಯಾಗಿದ್ದು, ಯಾರೋ ನನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಯಾರಾಗಿರಬಹುದು ಎಂದು ಯೋಚನೆ ಮಾಡುವ ಸಿಂಬಲ್ ಹಾಕಿ ತಮ್ಮ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಸ್ಪತ್ರೆ ದಾಖಲು: ಅಭಿಮಾನಿಗಳಿಗೆ ಹೆಚ್ಚಿದೆ ಆತಂಕ

    ಆಸ್ಪತ್ರೆಗೆ ದಾಖಲಾದ ನಟಿಗೆ ಆರ್ಥೋ ಸ್ಪೆಷಲಿಸ್ಟ್ ಗುರುವಾ ರೆಡ್ಡಿ ಅವರು ರಶ್ಮಿಕಾಗೆ ಚಿಕಿತ್ಸೆ ನೀಡಿದ್ದು, ತಮಾಷೆಯಾಗಿ `ಸಾಮಿ ಸಾಮಿ ಅಂತ ಮೊಣಕಾಲಿಗೆ ಭಾರ ಹಾಕಿ ಡಾನ್ಸ್ ಮಾಡಿದ್ದೀರಿ. ಅದಕ್ಕಾಗಿ ಈ ನೋವು ಬಂದಿದೆ’ ಎಂದು ಬರೆದುಕೊಂಡಿದ್ದರು.

    ಮೊಣಕಾಲಿನ ನೋವು ಅತಿಯಾದ ಕಾರಣದಿಂದಾಗಿ ಚಿಕಿತ್ಸೆ ಪಡೆಯಲು ರಶ್ಮಿಕಾ ಬಂದಿದ್ದರು. ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ್ದೇವೆ. ಸದ್ಯ ಅವರು ಸುಧಾರಿಸಿಕೊಳ್ಳುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಸರಿ ಹೋಗುತ್ತಾರೆ. ಎಂದಿನಂತೆ ಮತ್ತೆ ಸಿನಿಮಾಗಳ ಶೂಟಿಂಗ್ (Film Shooting) ನಲ್ಲೂ ಅವರು ಭಾಗಿಯಾಗಲಿದ್ದಾರೆ. ಹೆಚ್ಚು ಮೊಣಕಾಲಿಗೆ ಕೆಲಸ ಕೊಟ್ಟಿರುವ ಕಾರಣದಿಂದಾಗಿಯೇ ಈ ನೋವು ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಮ್ಮ ಪ್ರಯತ್ನದಿಂದಾಗಿ ಚೀತಾ ಭಾರತಕ್ಕೆ ಬಂದಿವೆ: ಕಾಂಗ್ರೆಸ್

    ನಮ್ಮ ಪ್ರಯತ್ನದಿಂದಾಗಿ ಚೀತಾ ಭಾರತಕ್ಕೆ ಬಂದಿವೆ: ಕಾಂಗ್ರೆಸ್

    ನವದೆಹಲಿ: ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನವನಕ್ಕೆ ನಮೀಬಿಯಾದಿಂದ ವಿಶೇಷ ವಿಮಾನದಲ್ಲಿ ತರಲಾದ 8 ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಾಡಿಗೆ ಬಿಡುವುದಕ್ಕೂ ಮುಂಚೆ, ಮನಮೋಹನ್ ಸಿಂಗ್ ಅವರು 2008-2009ರಲ್ಲಿಯೇ ಆಪರೇಷನ್ ಚೀತಾ ಪ್ರಸ್ತಾವನೆಯನ್ನು ಮಾಡಿದ್ದರು ಎಂದು ಎಐಸಿಸಿ ಮಾಧ್ಯಮ ಮುಖ್ಯಸ್ಥ ಜೈರಾಮ್ ರಮೇಶ್ ಹೇಳಿದ್ದಾರೆ.

    ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ತಮಾಷೆ ಮಾಡುತ್ತಿದ್ದಾರೆ. 2009-11ರಲ್ಲಿಯೇ ಚೀತಾ ಪ್ರಾಜೆಕ್ಟ್ ಅನ್ನು ಕಾಂಗ್ರೆಸ್ ಕೈಗೆತ್ತಿಕೊಂಡಿತ್ತು. 2010ರ ಏಪ್ರಿಲ್ 25ರಂದು ಕೇಪ್ ಟೌನ್ ಹೋಗಿ ಚೀತಾಗಳನ್ನು ಭಾರತಕ್ಕೆ ತರಲು ಮಾತುಕತೆ ನಡೆಸಿತ್ತು. ಕಾಂಗ್ರೆಸ್ ಪ್ರಯತ್ನದ ಭಾಗವಾಗಿ ಭಾರತಕ್ಕೆ ಚೀತಾಗಳು ಬಂದಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ಇದೊಂದು ಅನಗತ್ಯ ತಮಾಷೆ ಆಗಿದೆ. ರಾಷ್ಟ್ರೀಯ ಸಮಸ್ಯೆಗಳು, ಭಾರತ್ ಜೋಡೋ ಅಭಿಯಾನ ಮರೆಮಾಚಲು ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಅವರಿಗೆ 72ರ ಸಂಭ್ರಮ – ನಮೀಬಿಯಾದಿಂದ ಭಾರತಕ್ಕೆ 8 ಚೀತಾ

    ಇಂದು ಪ್ರಧಾನಿ ನರೇಂದ್ರ ಮೋದಿಯವರ 72ನೇ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ 8 ಚೀತಾಗಳನ್ನು ಭಾರತಕ್ಕೆ ತರಲಾಗಿದೆ. ಇದನ್ನೂ ಓದಿ: 70 ವರ್ಷಗಳ ನಂತರ ಭಾರತಕ್ಕೆ ಮರಳಿದ ಚೀತಾ – ನಮೀಬಿಯಾದ 8 ಚೀತಾಗಳನ್ನು ಬಿಡುಗಡೆ ಮಾಡಿದ ಮೋದಿ

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನ ಸಂಕಷ್ಟಕ್ಕೆ ಭ್ರಷ್ಟರಾಮಯ್ಯರೇ ನೇರಕಾರಣ – ಬಿಜೆಪಿ ತಿರುಗೇಟು

    ಬೆಂಗಳೂರಿನ ಸಂಕಷ್ಟಕ್ಕೆ ಭ್ರಷ್ಟರಾಮಯ್ಯರೇ ನೇರಕಾರಣ – ಬಿಜೆಪಿ ತಿರುಗೇಟು

    ಬೆಂಗಳೂರು: ಬೆಂಗಳೂರಿನ ರಾಜಕಾಲುವೆ (Bengaluru Rajkaluve) ವಿಚಾರಕ್ಕೆ ಸಂಬಂಧಿಸಿದಂತೆ #ಭ್ರಷ್ಟರಾಮಯ್ಯ ಹ್ಯಾಶ್‌ಟ್ಯಾಗ್‌ನೊಂದಿಗೆ ಸರಣೀ ಟ್ವೀಟ್‌ಗಳನ್ನು ಮಾಡಿರುವ ಬಿಜೆಪಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಕಿಡಿಕಾರಿದೆ.

    ಅಷ್ಟಕ್ಕೂ ಬೆಂಗಳೂರಿನ (Bengaluru) ಸಂಕಷ್ಟದ ದಿನಗಳಿಗೆ #ಭ್ರಷ್ಟರಾಮಯ್ಯ ಅವರೇ ನೇರ ಕಾರಣ ಎಂದು ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ಉಗ್ರನ ಶವವನ್ನು ಹೊರತೆಗೆದು ಅಂತ್ಯಸಂಸ್ಕಾರಕ್ಕೆ ಅವಕಾಶ ಕೋರಿದ್ದ ಅರ್ಜಿ ವಜಾ

    ಟ್ವೀಟ್‌ನಲ್ಲಿ ಏನಿದೆ?
    ಕೆರೆಗಳನ್ನು ಡಿನೋಟಿಫೈ ಮಾಡಲು ತಡೆಯಿದ್ದ ಕಾಯ್ದೆಯನ್ನೇ ಅಂದು ಬದಲಾವಣೆ ಮಾಡಿ ಅನುಮೋದನೆ ನೀಡಿದ್ದು ಏಕೆ? ಅಕ್ರಮ ಒತ್ತುವರಿಗೆ ಕಾಂಗ್ರೆಸ್ (Congress) ಸರ್ಕಾರವೇ ನೇರ ಕಾರಣ. ಅಂದು ಸಮಸ್ಯೆ ಸೃಷ್ಟಿಸಿ ಇಂದು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದವಲ್ಲವೇ?

    ಕೆರೆಗಳನ್ನು ಡಿ-ನೋಟಿಫಿಕೇಶನ್ ಮಾಡಲು ಅವಕಾಶ ಇಲ್ಲವೆಂದು ಅಧಿಕಾರಿಗಳು ತಿಳಿಸಿದರೂ #ಭ್ರಷ್ಟರಾಮಯ್ಯ ಸರ್ಕಾರ ಕಾಯ್ದೆಯನ್ನೇ ತಿದ್ದುಪಡಿ ಮಾಡಿತು. ಈ ಜನವಿರೋಧಿ ನಿರ್ಧಾರದ ಮೂಲಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ ಪಡೆದ ಕಪ್ಪಕಾಣಿಕೆ ಎಷ್ಟು?

    bjP

    ಇತ್ತೀಚೆಗೆ ಬೆಂಗಳೂರಿನಲ್ಲಿ ಸುರಿದ ಅಕಾಲಿಕ ಮಳೆಯ ಸಂದರ್ಭದಲ್ಲಿ, ಮೊಳಕಾಲುದ್ದ ನೀರಿನಲ್ಲೂ ಬೋಟ್ ರೈಡ್ ಮೂಲಕ ನೆರೆ ಪ್ರದೇಶಕ್ಕೆ ತೆರಳಿ ಜನ ಸ್ಪಂದನೆಯ ನಾಟಕ ಮಾಡಿದ್ದನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಷ್ಟಕ್ಕೂ ಬೆಂಗಳೂರಿನ ಮೊನ್ನೆಯ ಸಂಕಷ್ಟದ ದಿನಗಳಿಗೆ #ಭ್ರಷ್ಟರಾಮಯ್ಯ ಅವರೇ ನೇರ ಕಾರಣ ಎಂದು ಆರೋಪಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಪಾರ್ಸೆಲ್ ಮಾಡಿರೋ 10 ದೋಸೆ ನನಗೆ ಬಂದಿಲ್ಲ, ಇದರಲ್ಲೂ ಮೋಸ: ಕಾಂಗ್ರೆಸ್ ವಿರುದ್ಧ ತೇಜಸ್ವಿ ಸೂರ್ಯ ಕಿಡಿ

    ಪಾರ್ಸೆಲ್ ಮಾಡಿರೋ 10 ದೋಸೆ ನನಗೆ ಬಂದಿಲ್ಲ, ಇದರಲ್ಲೂ ಮೋಸ: ಕಾಂಗ್ರೆಸ್ ವಿರುದ್ಧ ತೇಜಸ್ವಿ ಸೂರ್ಯ ಕಿಡಿ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಟಾಪ್ ಹೋಟೆಲ್‍ಗಳಿಂದ 10 ವಿವಿಧ ರೀತಿಯ ದೋಸೆಗಳನ್ನು ಕಾಂಗ್ರೆಸ್ ಕಾರ್ಯಕರ್ತರು ನನಗೆ ಕಳುಹಿಸಿದ್ದಾರೆ. ಆದರೆ ಇಲ್ಲಿಯವರೆಗೂ ನನಗೆ ಯಾವುದೇ ದೋಸೆ ಪಾರ್ಸೆಲ್ ಬಂದಿಲ್ಲ ಎಂದು ಹೇಳುವ ಮೂಲಕ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ನಗರದಲ್ಲಿ ಮಳೆಹಾನಿಯಿಂದಾಗಿ ಜನ ಪರದಾಡುತ್ತಿದ್ದ ಸಂದರ್ಭದಲ್ಲಿ ಸಂಸದ ತೇಜಸ್ವಿಸೂರ್ಯ ದೋಸೆ ಸವಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದರಿಂದ ತೇಜಸ್ವಿ ಸೂರ್ಯ ಸಾಕಷ್ಟು ಟ್ರೋಲ್‍ಗೆ ಒಳಗಾಗಿದ್ದರು. ಈ ಮಧ್ಯೆ ಕಾಂಗ್ರೆಸ್ ಪಕ್ಷವು ಬೆಂಗಳೂರಿನಲ್ಲಿ ಮಳೆ ಹಾನಿಯಿಂದ ಜನರ ಪರದಾಡುತ್ತಿದ್ದರೆ ಸಂಸದರು ಹೋಟೆಲ್‍ನಲ್ಲಿ ದೋಸೆ ತಿನ್ನುವುದರಲ್ಲಿ ಬ್ಯುಸಿಯಾಗಿದ್ದಾರೆ. ಇದು ಇವರ ಬೇಜವಾಬ್ದಾರಿ ತನವನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿತ್ತು. ಇದನ್ನೂ ಓದಿ: ಮಿಸ್ಸಿಂಗ್ ಮಿನಿಸ್ಟರ್ಸ್ – ಬೆಂಗಳೂರು ಮಂತ್ರಿ, ಸಂಸದರ ವಿರುದ್ಧ ಕಾಂಗ್ರೆಸ್ ಕಿಡಿ

    ಇದೀಗ ಈ ಕುರಿತಂತೆ ತೇಜಸ್ವಿ ಸೂರ್ಯ ಅವರು ತಮ್ಮ ಟ್ವಿಟ್ಟರ್‌ನಲ್ಲಿ ದೋಸೆ ತಿನ್ನುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದು, ಕಾಂಗ್ರೆಸ್ ಕಾರ್ಯಕರ್ತರು ನನ್ನ ಮನೆಗೆ ಮಸಾಲೆ ದೋಸೆ ಪಾರ್ಸೆಲ್ ಕಳುಹಿಸಿದ್ದಾರೆ. ಆದರೆ 24 ಗಂಟೆಗಿಂತಲೂ ಹೆಚ್ಚು ಕಾಲ ಕಳೆದಿದೆ. ಇನ್ನೂ ದೋಸೆ ಬಂದಿಲ್ಲ. ಇದರಲ್ಲಿಯೂ ಮೋಸ ಮಾಡಿದ್ದಾರೆ. ದೋಸೆಯನ್ನು ಸರಿಯಾಗಿ ಕಳುಹಿಸಲು ಕೂಡ ಅವರಿಗೆ ಸಾಧ್ಯವಾಗಲಿಲ್ಲ. ಇವರು ಆಡಳಿತವನ್ನು ನಡೆಸುವ ಕನಸು ಕಾಣುತ್ತಿದ್ದಾರೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಳ್ಳುವ ಮೂಲಕ ವ್ಯಂಗ್ಯವಾಡಿದ್ದಾರೆ.

    ತೇಜಸ್ವಿ ಸೂರ್ಯ ಅವರು ಮಸಾಲೆ ದೋಸೆ ತಿನ್ನುತ್ತಿರುವ ವೀಡಿಯೋವನ್ನು ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಹಂಚಿಕೊಂಡಿದ್ದರು. ಇದೇ ವೇಳೆ ನಗರದ ಬಹುತೇಕ ಭಾಗಗಳು ಪ್ರವಾಹದಲ್ಲಿ ಜಲಾವೃತಗೊಂಡಿದ್ದ ವೀಡಿಯೊವನ್ನು ಹಂಚಿಕೊಂಡಿದ್ದರು. ಇದನ್ನೂ ಓದಿ: ತೇಜಸ್ವಿ ಸೂರ್ಯ ದೋಸೆ ಸವಿದಿದ್ದನ್ನು ಟೀಕಿಸಿದ್ದ ಕಾಂಗ್ರೆಸ್‍ಗೆ ಬಿಜೆಪಿ ತಿರುಗೇಟು

    ಇದರ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದರು, ನನ್ನ ಕ್ಷೇತ್ರದಲ್ಲಿ ಬೊಮ್ಮನಹಳ್ಳಿಯಲ್ಲಿ ಮಾತ್ರ ಸ್ವಲ್ಪ ಮಳೆ ಸಮಸ್ಯೆ ಆಗಿದೆ ಬೇರೆ ಕ್ಷೇತ್ರದಲ್ಲಿ ಜನ ಜೀವನ ಯಥಾಸ್ಥಿತಿ ನಡೆದುಕೊಂಡು ಬರುತ್ತಿದೆ. ನಾನು ನನ್ನ ಕ್ಷೇತ್ರದಲ್ಲಿ ದೋಸೆ ಅಂಗಡಿ ಉದ್ಘಾಟನೆ ಮಾಡಿದೆ. ನನ್ನ ಕ್ಷೇತ್ರದಲ್ಲಿ ಇರುವ ಅಂಗಡಿ ಉದ್ಘಾಟನೆ ನನ್ನ ಕರ್ತವ್ಯ, ಅದನ್ನು ನಿರ್ವಹಣೆ ಮಾಡಿರುವುದಾಗಿ ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ನಮಗೆ ಸವಾಲು ಹಾಕುವ ಧಮ್ ನಿಮಗೆ ಇಲ್ಲ: ಬೊಮ್ಮಾಯಿ ವಿರುದ್ಧ ಸಿದ್ದು ಕಿಡಿ

    ನಮಗೆ ಸವಾಲು ಹಾಕುವ ಧಮ್ ನಿಮಗೆ ಇಲ್ಲ: ಬೊಮ್ಮಾಯಿ ವಿರುದ್ಧ ಸಿದ್ದು ಕಿಡಿ

    ಬೆಂಗಳೂರು: ನಮಗೆ ಸವಾಲು ಹಾಕುವ ಧಮ್ ನಿಮಗೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.

    ಜನ ಸ್ಪಂದನ ಕಾರ್ಯಕ್ರಮದ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಜನಮರ್ದನ’ ಅಲ್ಲಲ್ಲ, `ಜನಸ್ಪಂದನ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ವೀರಾವೇಶದ ಭಾಷಣ ಕೇಳಿ ಖುಷಿಯಾಯಿತು. ಸಂಘ ಪರಿವಾರ ಇಂತಹ ಜೋರು ಮಾತುಗಳನ್ನು ಸಹಿಸವುದಿಲ್ಲ, ಇದೇ ರೀತಿ ಮಾತನಾಡಿಯೇ ಪಾಪ ಯಡಿಯೂರಪ್ಪ ಜೈಲು ಸೇರಿದ್ದು ಎನ್ನುವುದು ನೆನಪಿರಲಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಲಕ್ನೋ ಅಗ್ನಿ ದುರಂತ – ನಿರ್ಲಕ್ಷ್ಯವಹಿಸಿದ 15 ಅಧಿಕಾರಿಗಳನ್ನು ಅಮಾನತುಗೊಳಿಸಿದ ಯೋಗಿ

    ಧಮ್ ಇದ್ದರೆ ಯಾತ್ರೆ ನಿಲ್ಲಿಸಿ ಎಂಬ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ನಾವು ಯಾಕೆ ಹಿಮ್ಮೆಟ್ಟಿಸಬೇಕು. ಸಮಾವೇಶದಲ್ಲಿ ಖಾಲಿ ಕುರ್ಚಿ ನೋಡಿದರೆ, ನಿಮ್ಮ ಜಾತ್ರೆಯನ್ನು ನಮ್ಮ ಜನರೇ ಹಿಮ್ಮೆಟ್ಟಿಸಿದ್ದಾರೆ ಅಂತ ಅನಿಸಲ್ವಾ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನಮಗೆ ಸವಾಲು ಹಾಕುವ ಧಮ್ ನಿಮಗೆ ಇಲ್ಲ. ನಿಮಗೆ ನಿಜವಾದ ಧಮ್ ಇದ್ದರೆ ಖಾಲಿ ಸ್ಥಾನಗಳನ್ನು ಮೊದಲು ತುಂಬಿ. ಯತ್ನಾಳ್ ವಿರುದ್ಧ ಕ್ರಮ ತೆಗದುಕೊಳ್ಳಿ. ಆಮೇಲೆ ನಿಮ್ಮ ಧಮ್ ನೋಡೋಣ ಎಂದು ಸವಾಲೊಡ್ಡಿದ್ದಾರೆ.

    ನನ್ನ ಆಡಳಿತ ಕಾಲದ ಹಗರಣ ತನಿಖೆ ಬಯಲಿಗೆಳೆಯುತ್ತೇನೆ ಎಂದು ಹೇಳುತ್ತಿದ್ದಾರೆ. ಮೊನ್ನೆ ಮಾಜಿ ಸಿಎಂ ಬಿಎಸ್‍ವೈ ನೋಟಿಸ್ ಕೊಟ್ಟಿದ್ದು ನೋಡಿದರೆ, ನೀವು ಹೇಳಿದ್ದು ನನಗೋ, ಯಡಿಯೂರಪ್ಪನವರಿಗೆ ಎಂದು ಗೊಂದಲವಾಗುತ್ತಿದೆ ಅಂತ ವ್ಯಂಗ್ಯವಾಡಿದ್ದಾರೆ.  ಇದನ್ನೂ ಓದಿ: ಕಾಂಗ್ರೆಸ್ಸಿನವರಿಗೆ ತಾಕತ್, ಧಮ್ ಇದ್ದರೇ ನಮ್ಮನ್ನು ತಡೆಯಲಿ: ಬೊಮ್ಮಾಯಿ ಸವಾಲು

    ನನ್ನ ಅಧಿಕಾರವಧಿಯ ಹಗರಣಗಳನ್ನ ಬಯಲಿಗೆಳೆಯುತ್ತೇವೆ ಎಂದು ಧಮ್ಕಿ ಹಾಕುತ್ತಿದ್ದೀರಾ. ನಿಮಗೆ ಧಮ್ ಇದ್ದರೆ ಮೊದಲು ತನಿಖೆ ಮಾಡಿಸಿ. ಆ ಸವಾಲು ಸ್ವೀಕಾರ ಮಾಡಲು ನಾನು ಸಿದ್ಧ. ಈ ಬ್ಲಾಕ್ ಮೇಲ್ ತಂತ್ರಗಳನ್ನ ನಿಮ್ಮವರು ಮೇಲೆ ಬಳಸಿಕೊಳ್ಳಿ ಎಂದು ಹರಿಹಾಯ್ದಿದ್ದಾರೆ.

    ನಮ್ಮ ಸರ್ಕಾರದ ಹಗರಣವನ್ನು ಬಯಲಿಗೆಳೆಯುವ ಮೊದಲು ಬಿಜೆಪಿ ನಾಯಕರ ಮೇಲೆ ನ್ಯಾಯಾಲಯದಲ್ಲಿ ಇರುವ ಸಾಲು ಸಾಲು ಹಗರಣಗಳನ್ನು ಮೊದಲು ನೀವು ಇತ್ಯರ್ಥಪಡಿಸಿಕೊಂಡು ಬನ್ನಿ. ಬೀಸುವ ಕತ್ತಿ ನಿಮ್ಮ ಕುತ್ತಿಗೆಯನ್ನೇ ಕೊಯ್ಯದಿರಲಿ ಎಂದಿದ್ದಾರೆ.

    ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕ ಚರ್ಚೆಗೆ ನೀವು ಸಿದ್ಧರಿದ್ದಿರಾ ಬೊಮ್ಮಾಯಿ ಅವರೇ? ನಮ್ಮ ಪಕ್ಷ ಸಿದ್ಧ ಇದೆ. ನೀವು ಸಿದ್ಧ ಇದ್ದರೆ ಸಾರ್ವಜನಿಕ ಚರ್ಚೆಗೆ ಸ್ಥಳ-ಸಮಯ ನೀವೇ ನಿರ್ಧರಿಸಿ ತಿಳಿಸಿ ನಾನು ಬರುತ್ತೇನೆ. ಧಮ್ ಎಂದರೆ ಧಮ್ ಬಿರಿಯಾನಿ ಎಂದು ನೀವು ತಿಳಿದುಕೊಂಡ ಹಾಗಿದೆ. ಭ್ರಷ್ಟಾಚಾರವನ್ನೇ ವಿಷಯವನ್ನಾಗಿಟ್ಟು ಚುನಾವಣೆ ಎದುರಿಸುವ ಧಮ್ ನಿಮಗಿದೆಯೇ ಬೊಮ್ಮಾಯಿ ಅವರೇ? ನಿಮಗೆ ಆ ಧಮ್ ಇಲ್ಲ. ಕೊನೆಗೆ ಹಿಂದೂ-ಮುಸ್ಲಿಂ, ಮಂದಿರ ಮಸೀದಿ, ಹಿಜಾಬ್ – ಕೇಸರಿ ಶಾಲುಗಳ ವಿವಾದದಲ್ಲಿಯೆ ನಿಮ್ಮ ಪ್ರಚಾರ ಕೊನೆಗೊಳ್ಳುವುದು. ಬೇರೆ ದಾರಿ ನಿಮಗಿಲ್ಲ. ಇದು ಜನಮರ್ದನ ಸರ್ಕಾರ ಎಂದು ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಿಸ್ಸಿಂಗ್ ಮಿನಿಸ್ಟರ್ಸ್ – ಬೆಂಗಳೂರು ಮಂತ್ರಿ, ಸಂಸದರ ವಿರುದ್ಧ ಕಾಂಗ್ರೆಸ್ ಕಿಡಿ

    ಮಿಸ್ಸಿಂಗ್ ಮಿನಿಸ್ಟರ್ಸ್ – ಬೆಂಗಳೂರು ಮಂತ್ರಿ, ಸಂಸದರ ವಿರುದ್ಧ ಕಾಂಗ್ರೆಸ್ ಕಿಡಿ

    ಬೆಂಗಳೂರು: ವರುಣನ ಆರ್ಭಟಕ್ಕೆ ಬೆಂಗಳೂರಿನ ಸ್ಥಿತಿ ಅಧೋಗತಿ ತಲುಪಿದೆ. ಈ ನಡುವೆ `ಬೆಂಗಳೂರು ರಕ್ಷಿಸಬೇಕಾದ ಬೆಂಗಳೂರು ಸಚಿವರು ಕಾಣೆಯಾಗಿದ್ದಾರೆ’ ಎಂದು ಮಿಸ್ಸಿಂಗ್ ಮಿನಿಸ್ಟರ್ಸ್ ಹ್ಯಾಷ್‍ಟ್ಯಾಗ್‍ನಡಿ ಬಿಜೆಪಿ ಸಚಿವರು, ಸಂಸದರ ವಿರುದ್ಧ ಕಾಂಗ್ರೆಸ್ ಸರಣಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದೆ.

    ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಕೋವಿಡ್ ಕಾಲದಲ್ಲಿ ಸ್ವಿಮ್ಮಿಂಗ್ ಪೂಲ್‍ನಲ್ಲಿ ಸ್ವಿಮ್ಮಿಂಗ್ ಮಾಡುತ್ತಿದ್ದರು. ಈಗ ಬೆಂಗಳೂರು ಸ್ವಿಮ್ಮಿಂಗ್ ಪೂಲ್ ಆಗಿದೆ, ಜನತೆ ಸ್ವಿಮ್ಮಿಂಗ್ ಮಾಡುವ ಸ್ಥಿತಿ ಇದೆ, ಸಚಿವರು ನಾಪತ್ತೆಯಾಗಿದ್ದಾರೆ. ಜನತೆಗೆ ಜಲೋತ್ಸವದ ಸಂಕಟ, ಬಿಜೆಪಿಗೆ ಜನೋತ್ಸವದ ಚೆಲ್ಲಾಟ ಎಂದು ವ್ಯಂಗ್ಯವಾಡಿದ್ದಾರೆ.

    ಕಳೆದ ಒಂದು ವಾರದಿಂದ ಮಳೆಯಲ್ಲಿ ಜನತೆ ಮುಳುಗಲು ಶುರುವಾದಾಗಿನಿಂದ ರಾಜ್ಯದ ಗೃಹಸಚಿವರು ನೆರೆ ಪೀಡಿತ ಪ್ರದೇಶದಲ್ಲಾಗಲಿ, ಬೆಂಗಳೂರಿನಲ್ಲಾಗಲಿ, ವಿಧಾನಸೌಧದಲ್ಲಾಗಲಿ ಕಾಣಿಸಲಿಲ್ಲ. ಸ್ವಕ್ಷೇತ್ರದಲ್ಲಿ ಠಿಕಾಣಿ ಹೂಡಿದ ಆರಗ ಜ್ಞಾನೇಂದ್ರ ಅವರು ಗೃಹಸಚಿವರಾಗಿ ಕೆಲಸ ಮಾಡಲು ಆರಂಭಿಸುವುದು ಯಾವಾಗ ಎಂದು ಪ್ರಶ್ನಿಸಿದ್ದಾರೆ.

    ಬೆಂಗಳೂರಿನ ಜನರು ಕೊಟ್ಟ ಅಧಿಕಾರವನ್ನು ಅನುಭವಿಸುತ್ತಿರುವ ಆರ್. ಅಶೋಕ್ ಅವರು ಯಾವ ಬಡಾವಣೆ, ಗಲ್ಲಿಗಳಲ್ಲೂ ಕಾಣಿಸಿಕೊಳ್ಳಲಿಲ್ಲ, ಜನತೆಯ ನೆರವಿಗೆ ನಿಂತಿದ್ದು ಕಾಣಲಿಲ್ಲ. ಜನರಿಗೆ ಕಷ್ಟದ ಸಮಯವೆಂದರೆ ಬಿಜೆಪಿಗೆ ವಿಶ್ರಾಂತಿಯ ಸಮಯ, ಮಳೆ ಮುಗಿದ ನಂತರ ಹಿಜಾಬ್, ಹಲಾಲ್‍ಗಳಿಗೆ ಕ್ರಿಯಾಶೀಲರಾಗುತ್ತಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಮಹಾ ಮಳೆಗೆ ವ್ಯಂಗ್ಯ – #LeaveBengaluru ಅಭಿಯಾನ ಆರಂಭಿಸಿದ ಕನ್ನಡಿಗರು

    ಬೆಂಗಳೂರಿನ ಜನತೆಯ ಮತಬಿಕ್ಷೆ ಪಡೆದು ಜನತೆಗೇ ದ್ರೋಹವೆಸಗುವುದು ಸರಿಯೇ ಸಚಿವರೇ? ಬೆಂಗಳೂರಿನ ಜನತೆ ಮಳೆಯಿಂದ ಕಂಗೆಟ್ಟಿರುವಾಗ ‘ನಾನೇ ಸಿಎಂ’ ಎನ್ನುವ ಸಚಿವರು ನಾಪತ್ತೆಯಾಗಿದ್ದಾರೆ. “ಗಂಡಸ್ಥನವನ್ನು ಕೆಲಸದಲ್ಲಿ ತೋರಿಸಿ” ಎಂದವರೇ ಕೆಲಸ ಮಾಡದಿದ್ದರೆ ಏನೆಂದು ಕರೆಯಬೇಕು ಡಾ. ಅಶ್ವಥ್‍ನಾರಾಯಣ್ ಅವರೇ ಎಂದು ವಾಗ್ದಾಳಿ ನಡೆಸಿದ್ದಾರೆ.

    ಸಂಸದ ತೇಜಸ್ವಿ ಸೂರ್ಯ ಅವರನ್ನು ಸಂಸದರನ್ನಾಗಿಸಿದ್ದು, ಆಡುವ ಮಕ್ಕಳನ್ನು ಶಾಲೆಗೆ ಸೇರಿಸಿದಂತಾಗಿದೆ. ಹಿಂದೆ ಕೋವಿಡ್ ಕಾಲದಲ್ಲಿ ಫುಟ್ಬಾಲ್ ಆಡಲು ಹೋಗಿದ್ದರು, ಅತಿವೃಷ್ಟಿಯ ಕಾಲದಲ್ಲಿ ದೋಸೆ ತಿನ್ನಲು ಹೋಗಿದ್ದಾರೆ. ಕೆಲಸಕ್ಕೆ ಕರೆಯಬೇಡಿ, ದೋಸೆ ತಿನ್ನೋಕೆ ಕರೆಯೋದು ಮರೆಯಬೇಡಿ ಎಂಬುದು ಇವರ ಮನವಿ ಎಂದು ಕಾಲೆಳೆದಿದ್ದಾರೆ.

    ಬೆಂಗಳೂರನ್ನು ಪ್ರತಿನಿಧಿಸುವ ಮತ್ತೊಬ್ಬ ಸಚಿವ ಎಸ್.ಟಿ. ಸೋಮಶೇಖರ್ ಮಳೆ ಅವಾಂತರದಿಂದ ನಲುಗಿದ ಯಾವುದೇ ಏರಿಯಾಗಳಲ್ಲಿ ಇದುವರೆಗೂ ಕಾಣಿಸಿಕೊಂಡಿಲ್ಲ. ಜನತೆ ಹುಡುಕುತ್ತಿದ್ದಾರೆ. ಜನರ ಮನೆಯಲ್ಲಿ ಮಳೆ ನೀರು ನುಗ್ಗಿದರೆ, ಇವರ ಮನದಲ್ಲಿ ಸನ್ಮಾನದ ಆಸೆ ನುಗ್ಗಿದೆ. ಸಚಿವರೇ ಜನರತ್ತ ನೋಡುವುದು ಯಾವಾಗ ಎಂದಿದ್ದಾರೆ.

    ಬೆಂಗಳೂರಲ್ಲೇ ಬೆಳೆದು, ಬೆಂಗಳೂರಲ್ಲೇ ಅಧಿಕಾರ, ಆಸ್ತಿ, ಅಂತಸ್ತು ಕಂಡುಕೊಂಡ ಸಚಿವ ವಿ. ಸೋಮಣ್ಣ ಅವರು ಬೆಂಗಳೂರನ್ನೇ ಕಡೆಗಣಿಸಿದರೆ ಹೇಗೆ? ಬೆಂಗಳೂರು ಉಸ್ತುವಾರಿಗಾಗಿ ಹಂಬಲಿಸುವ ಇವರ ಮನ ಜನರ ಕಷ್ಟಕ್ಕೆ ಮಿಡಿಯದಿರುವುದೇಕೆ? ಜನರಿಗೆ ಕಷ್ಟ ಬಂದಾಗ ಬಿಜೆಪಿಗರಿಗೆ ವಿಶ್ರಾಂತಿಯ ಸಮಯವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸೋತಿದ್ದಕ್ಕೆ ಕ್ರೀಡಾಂಗಣದಲ್ಲಿ ಅಫ್ಘಾನ್‌ ಅಭಿಮಾನಿಗಳ ಹುಚ್ಚಾಟ – ಚಯರ್‌ನಲ್ಲೇ ಪಾಕಿಗಳ ಮೇಲೆ ಹಲ್ಲೆ

    ಬೆಂಗಳೂರಿನ ಜನರ ಋಣ ಹೊತ್ತಿರುವ ಸಚಿವರಾದ ಗೋಪಾಲಯ್ಯ.ಕೆ ಇದುವರೆಗೂ ಯಾವುದೇ ನೆರೆ ಸಂತ್ರಸ್ತ ಜನರ ಬಳಿ ಹೋಗಿದ್ದು ಎಲ್ಲೂ ಕಾಣಲಿಲ್ಲ. ಪರಿಹಾರ ಕಾರ್ಯಗಳನ್ನು ನಡೆಸಬೇಕಾದವರು ನಾಪತ್ತೆಯಾಗಿದ್ದೆಲ್ಲಿ? ಸಿಎಂ ಸಚಿವರೆಲ್ಲರನ್ನೂ ‘ಮಳೆಯಲಿ, ಚಳಿಯಲ್ಲಿ, ಬೆಚ್ಚಗೆ ಮಲಗಲಿ’ ಎಂಬಂತೆ ಬಿಟ್ಟಿದ್ದಾರೆಯೇ ಎಂದು ಕಿಡಿಕಾರಿದ್ದಾರೆ.

    ಒಂದೇ ಒಂದು ಬಾರಿ ಸಿಎಂ ಜೊತೆಯಲ್ಲಿ ನೆಪಮಾತ್ರದ ಸಿಟಿ ರೌಂಡ್ಸ್ ಹೊಡೆದಿದ್ದು ಬಿಟ್ಟರೆ ಬೆಂಗಳೂರಿನ ಸಚಿವರಾದ ಭೈರತಿ ಬಸರಾಜ ಅವರು ಮತ್ತೆ ಎಲ್ಲಿಯೂ ಕಾಣಿಸಿಕೊಳಲಿಲ್ಲ. ನೀರು ನುಗ್ಗಿದ ಮನೆಗಳಿಗೆ ಪರಿಹಾರವೇನು? ನೀರು ನಿಂತ ರಸ್ತೆಗಳಿಗೆ ಮುಕ್ತಿ ಏನು? ಸಚಿವರು ಜನರ ಕಷ್ಟ ಆಲಿಸಲು ಹೋಗದಿರುವುದೇಕೆ ಎಂದು ಹರಿಹಾಯ್ದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿಮ್ಮ ಸರ್ಕಾರದಲ್ಲಿ ದಿಂಬು, ಚೆಂಬು ಖರೀದಿಯಲ್ಲೂ ನಡೆದ ಭ್ರಷ್ಟಾಚಾರ ನೆನಪಿಸಿಕೊಳ್ಳಿ- ಸಿದ್ದುಗೆ ಸುನಿಲ್ ತಿರುಗೇಟು

    ನಿಮ್ಮ ಸರ್ಕಾರದಲ್ಲಿ ದಿಂಬು, ಚೆಂಬು ಖರೀದಿಯಲ್ಲೂ ನಡೆದ ಭ್ರಷ್ಟಾಚಾರ ನೆನಪಿಸಿಕೊಳ್ಳಿ- ಸಿದ್ದುಗೆ ಸುನಿಲ್ ತಿರುಗೇಟು

    ಬೆಂಗಳೂರು: ನಿಮ್ಮ ಸರ್ಕಾರದ ಅವಧಿಯಲ್ಲಿ ಪರಿಶಿಷ್ಠ ಜಾತಿ, ಪಂಗಡದ ಹಾಸ್ಟೆಲ್‍ಗಳಲ್ಲಿ ದಿಂಬು, ಚೆಂಬು ಖರೀದಿಯಲ್ಲೂ ನಡೆದ ಭ್ರಷ್ಟಾಚಾರವನ್ನು ಸ್ವಲ್ಪ ನೆನಪಿಸಿಕೊಳ್ಳಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಸಚಿವ ಸುನಿಲ್ ಕುಮಾರ್ ತಿರುಗೇಟು ನೀಡಿದರು.

    ಇಂಧನ ಇಲಾಖೆ ಯೋಜನೆಗಳ ಸಂಬಂಧ ಸಿದ್ದರಾಮಯ್ಯರಿಂದ ಟ್ವೀಟ್ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರೇ, ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ನೀವು ಸಮಾಜವನ್ನು ಕೊಂಡೊಯ್ಯುವುದು ಯಾವಾಗ?, ಪರಿಶಿಷ್ಠ ಜಾತಿ ಹಾಗೂ ಪಂಗಡದ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ 75 ಯುನಿಟ್ ವಿದ್ಯುತ್ ನೀಡುವ ಆದೇಶವನ್ನು ವಾಪಸ್ ಪಡೆಯಲಾಗಿದೆ ಎಂದು ಸುಳ್ಳು ಪ್ರಚಾರ ಮಾಡಿ ನೀವು ಸಾಧಿಸುವ ಸಾಮಾಜಿಕ ನ್ಯಾಯವಾದರೂ ಏನು ಎಂದು ಪ್ರಶ್ನಿಸಿದರು.

    ಹಿಂದಿನ ಆದೇಶ ವಾಪಸ್ ಪಡೆಯುವುದಕ್ಕೂ, ಘೋಷಿತ ಯೋಜನೆ ಸ್ಥಗಿತಗೊಳಿಸುವುದಕ್ಕೂ ಇರುವ ಆಡಳಿತಾತ್ಮಕ ವ್ಯತ್ಯಾಸವೂ ಗೊತ್ತಿಲ್ಲದಷ್ಟು ಅಜ್ಞಾನ ನಿಮ್ಮನ್ನು ಕಾಡುತ್ತಿದೆಯೇ?, ನಿಮ್ಮ ಪಕ್ಷದ ಸಾಮಾಜಿಕ ಜಾಲತಾಣದ ಕೆಲ “ಪೆದ್ದರು” ಕೊಟ್ಟ ದಾಖಲೆಯನ್ನೇ ಆಧಾರವಾಗಿಟ್ಟುಕೊಂಡು ಜನರನ್ನು ಹಾದಿ ತಪ್ಪಿಸಲು ಹೊರಟಿದ್ದೀರಿ ಎಂದು ಕಿಡಿಕಾರಿದರು. ಇದನ್ನೂ ಓದಿ: 2024ರಲ್ಲಿ ಬಿಜೆಪಿಯೇತರ ಸರ್ಕಾರ ಬಂದ್ರೆ ರೈತರಿಗೆ ಉಚಿತ ವಿದ್ಯುತ್ – ಕೆಸಿಆರ್ ಭರವಸೆ

    ಇರಲಿ ಪರವಾಗಿಲ್ಲ, ಆದರೆ ನಿಮ್ಮ ಸರ್ಕಾರದ ಅವಧಿಯಲ್ಲಿ ಪರಿಶಿಷ್ಠ ಜಾತಿ, ಪಂಗಡದ ಹಾಸ್ಟೆಲ್ ಗಳಲ್ಲಿ ದಿಂಬು, ಚೆಂಬು ಖರೀದಿಯಲ್ಲೂ ನಡೆದ ಭ್ರಷ್ಟಾಚಾರವನ್ನು ಸ್ವಲ್ಪ ನೆನಪಿಸಿಕೊಳ್ಳಿ. ಆಗ ನಿಮ್ಮ ಜೇಬಿಗೆ ಸೇರಿದ ಕಮಿಷನ್ ಎಷ್ಟು ಪರ್ಸೆಂಟ್? ಎಂದು ವಿವರಿಸಬಹುದೇ ಎಂದು ಸಿದ್ದರಾಮಯ್ಯ ಅವರನ್ನು ಸುನಿಲ್ ಕುಮಾರ್ ಪ್ರಶ್ನಿಸಿದರು.

    Live Tv
    [brid partner=56869869 player=32851 video=960834 autoplay=true]

  • ಹೇಳಿದ್ದನ್ನೇ ಹೇಳೋ ಕಿಸಬಾಯಿ ದಾಸನಂತೆ ಸುಳ್ಳು ಭಾಷಣ ಬಿಟ್ಟು ಸತ್ಯ ಮಾತಾಡ್ತೀರಾ: ಮೋದಿಗೆ ಗುಂಡೂರಾವ್ ಪ್ರಶ್ನೆ

    ಹೇಳಿದ್ದನ್ನೇ ಹೇಳೋ ಕಿಸಬಾಯಿ ದಾಸನಂತೆ ಸುಳ್ಳು ಭಾಷಣ ಬಿಟ್ಟು ಸತ್ಯ ಮಾತಾಡ್ತೀರಾ: ಮೋದಿಗೆ ಗುಂಡೂರಾವ್ ಪ್ರಶ್ನೆ

    ಬೆಂಗಳೂರು: ಮೋದಿಯವರೇ ಇಂದಾದರೂ ಹೇಳಿದ್ದನ್ನೇ ಹೇಳುವ ಕಿಸಬಾಯಿ ದಾಸ ಎಂಬಂತೆ ಸುಳ್ಳು ಭಾಷಣ ಬಿಟ್ಟು ಸತ್ಯ ಮಾತನಾಡುತ್ತೀರಾ ಎಂದು ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

    ಪ್ರಧಾನಿ ಮೋದಿ ಅವರು ಇಂದು ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆ ಸರಣಿ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ಅವರು, ಇಂದು ಮಂಗಳೂರಿಗೆ ಬರುತ್ತಿರುವ ಮೋದಿಯವರಿಗೆ ಸ್ವಾಗತ. ಯಥಾಪ್ರಕಾರ ಇಂದೂ ಕೂಡ ಮೋದಿಯವರ ಬುರುಡೆ ಭಾಷಣ ಚರ್ವಿತ ಚರ್ವಣದಂತೆ ರಿಪೀಟ್ ಆಗಲಿದೆ. ಆದರೂ ಮೋದಿಯವರ ಬುರುಡೆ ಭಾಷಣ ಕೇಳುವ ಅನಿವಾರ್ಯ ಕರ್ಮ ಕನ್ನಡಿಗರದ್ದು. ಮೋದಿಯವರೇ ಇಂದಾದರೂ ಹೇಳಿದ್ದನ್ನೇ ಹೇಳುವ ಕಿಸಬಾಯಿ ದಾಸ ಎಂಬಂತೆ ಸುಳ್ಳು ಭಾಷಣ ಬಿಟ್ಟು ಸತ್ಯ ಮಾತನಾಡುತ್ತೀರಾ ಎಂದು ವ್ಯಂಗ್ಯವಾಡಿದ್ದಾರೆ.

    ಮೋದಿಯವರೇ, ಇಂದಿನ ನಿಮ್ಮ ಭಾಷಣದಲ್ಲಿ ರಾಜ್ಯ ಬಿಜೆಪಿ ಸರ್ಕಾರದ 40% ಕಮಿಷನ್ ದಂಧೆ, ಪಿಎಸ್‍ಐ ಹಗರಣ, ಕೆಪಿಟಿಸಿಎಲ್ ನೇಮಕಾತಿ ಹಗರಣ, ಉಪನ್ಯಾಸಕರ ನೇಮಕಾತಿ ಹಗರಣ, ಜ್ಯೂ.ಇಂಜಿನಿಯರ್ ನೇಮಕಾತಿ ಹಗರಣ ಹಾಗೂ ನಿಮ್ಮ ಪಕ್ಷ 2018ರ ಪ್ರಣಾಳಿಕೆಯಲ್ಲಿ 600 ವಚನ ಕೊಟ್ಟು ಒಂದನ್ನೂ ಈಡೇರಿಸದೇ ವಚನ ವಂಚನೆಯ ಬಗ್ಗೆ ಮಾತಾಡುವಿರಾ? ನಿಮ್ಮ ಪಾರದರ್ಶಕತೆಗೆ ಸವಾಲು ಇದು ಎಂದಿದ್ದಾರೆ.

    ಮೋದಿಯವರೇ, ಇಂದಿನ ನಿಮ್ಮ ಭಾಷಣದಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಜಿಎಸ್‍ಟಿ ಬಾಕಿ ಯಾಕೆ ಕೊಟ್ಟಿಲ್ಲ, 15ನೇ ಹಣಕಾಸು ಆಯೋಗ ನೀಡಿದ್ದ ವಿಶೇಷ ಅನುದಾನ ರಾಜ್ಯಕ್ಕೆ ಕೊಡದಿರುವುದು ಯಾಕೆ? 2014ರಲ್ಲಿ 52 ಲಕ್ಷ ಕೋಟಿ ಇದ್ದ ದೇಶದ ಸಾಲ ನಿಮ್ಮ ಅಧಿಕಾರಾವಧಿಯಲ್ಲಿ 1.42 ಲಕ್ಷ ಕೋಟಿ ಏರಿಕೆಯಾಗಿದ್ದು ಯಾಕೆ? ಎಂಬ ಬಗ್ಗೆ ದಯವಿಟ್ಟು ಮಾತನಾಡುವಿರಾ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ವಜ್ರಕುಮಾರ್ ಇನ್ನಿಲ್ಲ

    ಮೋದಿಯವರೇ, ಇಂದಿನ ನಿಮ್ಮ ಭಾಷಣದಲ್ಲಿ ತೈಲಬೆಲೆ ಯದ್ವಾತದ್ವಾ ಏರಿಕೆಯಾಗಿದ್ದು ಯಾಕೆ? 80 ರೂ. ಇದ್ದ ಅಡುಗೆ ಎಣ್ಣೆ 180 ರೂ. ಗಡಿ ದಾಟಿದ್ದು ಯಾಕೆ? 400 ರೂ. ಇದ್ದ ಸಿಲಿಂಡರ್ ಬೆಲೆ ಸಾವಿರ ತಲುಪಿದ್ದು ಹೇಗೆ? 30 ರೂ. ಇದ್ದ ಸಾಬೂನು 60 ರೂ. ಆಗಿದ್ದು ಹೇಗೆ? ತಿನ್ನುವ ಅನ್ನಕ್ಕೂ ನಿಮ್ಮ ಸರ್ಕಾರ GST ಹಾಕಿ ದೋಚುತ್ತಿರುವ ಬಗ್ಗೆ ಮಾತನಾಡುವಿರಾ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಳ್ಳುವುದು ಲೈಂಗಿಕ ಉದ್ದೇಶವನ್ನು ಸೂಚಿಸುತ್ತದೆ: ಮುಂಬೈ ಕೋರ್ಟ್

    ಮೋದಿಯವರೆ, ಇಂದಿನ ನಿಮ್ಮ ಭಾಷಣದಲ್ಲಿ ಪಿಎಂ ಕೇರ್ಸ್ ಹೆಸರಲ್ಲಿ ಸಂಗ್ರಹಿಸಿದ ಸಾವಿರಾರು ಕೋಟಿ ಹಣ ಎಲ್ಲಿ ಹೋಯಿತು? ಆಪರೇಷನ್ ಕಮಲಕ್ಕೆ ಬಳಕೆಯಾಗುವ ದುಡ್ಡಿನ ಮೂಲ ಯಾವುದು? ಬಿಜೆಪಿಯವರ ಮೇಲೆ ಇಡಿ, ಐಟಿ & ಸಿಬಿಐ ದಾಳಿ ನಡೆಯದ ರಹಸ್ಯವೇನು? ರೈತರ ಸಾಲ ಮನ್ನಾ ಮಾಡದೇ ಕಾರ್ಪೋರೆಟ್ ಕುಳಗಳ ಲಕ್ಷ ಲಕ್ಷ ಕೋಟಿ ತೆರಿಗೆ ಮನ್ನಾ ಮಾಡಿದ ಬಗ್ಗೆ ಮಾತನಾಡುವಿರಾ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]