Tag: tweet

  • ನಿಮ್ಮ ಸೈನ್ಯವನ್ನು ಸೇರಿಕೊಳ್ಳಲು ಕಾಯಲು ಆಗುತ್ತಿಲ್ಲ – ಜೂ.ಎನ್‍ಟಿಆರ್

    ನಿಮ್ಮ ಸೈನ್ಯವನ್ನು ಸೇರಿಕೊಳ್ಳಲು ಕಾಯಲು ಆಗುತ್ತಿಲ್ಲ – ಜೂ.ಎನ್‍ಟಿಆರ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್‍ಗೆ ಇಂದು 41ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ನಿರ್ದೆಶಕ ಪ್ರಶಾಂತ್ ನೀಲ್‍ಗೆ ಚಂದನವನದ ನಟರಷ್ಟೇ ಅಲ್ಲದೆ ಟಾಲಿವುಡ್‍ನ ಬಿಗ್ ಸ್ಟಾರ್‌‍ಗಳು ಶುಭಾಶಯ ತಿಳಿಸಿದ್ದಾರೆ.

     

    View this post on Instagram

     

    A post shared by SriiMurali (@sriimurali)

    ಉಗ್ರಂ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಟ ಶ್ರೀ ಮುರುಳಿಯವರಿಗೆ ಮತ್ತೆ ಬ್ರೇಕ್ ತಂದು ಕೊಟ್ಟ ಪ್ರಶಾಂತ್ ನೀಲ್ ರಾಕಿಂಗ್ ಸ್ಟಾರ್ ಕೆಜಿಎಫ್ ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಸಿನಿಮಾದ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಕನ್ನಡದತ್ತ ನೋಡುವಂತೆ ಕೆಜಿಎಫ್ ಬಹುದೊಡ್ಡ ಸಕ್ಸಸ್ ತಂದುಕೊಟ್ಟಿತ್ತು. ಅಲ್ಲದೆ ರಾಕಿಂಗ್ ಸ್ಟಾರ್ ಯಶ್‍ಗೆ ನ್ಯಾಷನಲ್ ಪಟ್ಟಕ್ಕೇರಿಸಿತು.

    ಈ ವಿಶೇಷ ದಿನದಂದು ಟಾಲಿವುಡ್ ನಟ ಜ್ಯೂನಿಯರ್ ಎನ್‍ಟಿಆರ್, ಹುಟ್ಟು ಹಬ್ಬದ ಶುಭಾಶಯ ಸೋದರ ಪ್ರಶಾಂತ್ ನೀಲ್. ಎಂದಿಂಗೂ ಅದ್ಬುತವಾಗಿರಿ, ನಿಮ್ಮ ಸೈನ್ಯವನ್ನು ಸೇರಿಕೊಳ್ಳಲು ಕಾಯಲು ಆಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ಇನ್ಮುಂದೆ ಯಾವುದೇ ದಾನ ಸ್ವೀಕರಿಸಲ್ಲ: ಉಪೇಂದ್ರ

    ಬಾಹುಬಲಿ ಖ್ಯಾತಿಯ ನಟ ಪ್ರಭಾಸ್, ನಮ್ಮ ಸಲರ್ ನಿರ್ದೇಶಕ ಪ್ರಶಾಂತ್ ನೀಲ್‍ರವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ. ಸ್ಯಾಂಡಲ್‍ವುಡ್ ನಟ ಶ್ರೀಮುರಳಿ, ಕನ್ನಡದ ಪ್ರಸಿದ್ಧ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್, ಮೈತ್ರಿ ಮೂವಿ ಮೇಕರ್ಸ್ ಸೇರಿದಂತೆ ಅನೇಕ ಗಣ್ಯರು ಶುಭ ಕೋರಿದ್ದಾರೆ.

    ಸದ್ಯ ನಿರ್ದೇಶಕ ಪ್ರಶಾಂತ್ ನೀಲ್ ಪ್ಯಾನ್ ಇಂಡಿಯಾ ಮೂವಿ ನಟ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದನ್ನು ಓದಿ: ಹಿರಿಯ ಕಲಾವಿದೆ ಬಿ.ಜಯಾ ನಿಧನ

  • ಕೊರೊನೋತ್ತರ ಆರೋಗ್ಯ ಸಮಸ್ಯೆ – ಕೇಂದ್ರ ಸಚಿವ ಪೋಖ್ರಿಯಾಲ್ ಆಸ್ಪತ್ರೆಗೆ ದಾಖಲು

    ಕೊರೊನೋತ್ತರ ಆರೋಗ್ಯ ಸಮಸ್ಯೆ – ಕೇಂದ್ರ ಸಚಿವ ಪೋಖ್ರಿಯಾಲ್ ಆಸ್ಪತ್ರೆಗೆ ದಾಖಲು

    ನವದೆಹಲಿ: ಕೋವಿಡ್‍ನಿಂದ ಚೇತರಿಸಿಕೊಂಡಿದ್ದ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರು ಮತ್ತೆ ಅನಾರೋಗ್ಯಕ್ಕೆ ಒಳಗಾಗಿದ್ದು ದೆಹಲಿಯ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಆಸ್ಪತ್ರೆಗೆ ದಾಖಲಾಗಿದ್ದಾರೆ.

    ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನೀರಜ್ ನಿಶ್ಚಲ್ ನೇತೃತ್ವದ ತಂಡ ರಮೇಶ್ ಪೋಖ್ರಿಯಾಲ್ ಅವರಿಗೆ ಚಿಕಿತ್ಸೆ ನೀಡುತ್ತಿದೆ ಎಂದು ವರದಿಯಾಗಿದೆ.

    ಈ ಹಿಂದೆ ಏಪ್ರಿಲ್ 21 ರಂದು ಪೋಖ್ರಿಯಾಲ್ ಅವರಿಗೆ ಕೊರೊನಾ ದೃಢಪಟ್ಟಿತ್ತು. ನನಗೆ ಕೊರೊನಾ ಪಾಸಿಟವ್ ವರದಿ ಬಂದಿದೆ ಎಂದು ನಿಮಗೆ ತಿಳಿಸುತ್ತೇನೆ. ವೈದ್ಯರ ಸಲಹೆಯ ಮೇರೆಗೆ ಔಷಧಿ ಮತ್ತು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕದಲ್ಲಿದ್ದವರೆಲ್ಲ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ವಿನಂತಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.

    ಚಿಕಿತ್ಸೆ ಬಳಿಕ ಕೊರೊನಾದಿಂದ ಚೇತರಿಸಿಕೊಂಡು ಕೆಲಸಕ್ಕೆ ಮರಳಿದ್ದರು. ಆದರೆ ಇದೀಗ ಮತ್ತೆ ಅನಾರೋಗ್ಯದ ಕಾರಣ ರಮೇಶ್ ಪೋಖ್ರಿಯಾಲ್‍ರವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನು ಓದಿ: 1,200 ಕಿ.ಮೀ ಸೈಕಲಿನಲ್ಲೇ ಮಗಳೊಂದಿಗೆ ಕ್ರಮಿಸಿ ಸುದ್ದಿಯಾಗಿದ್ದ ವ್ಯಕ್ತಿ ಸಾವು

  • ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅಂಬಿ ಮಾಮ: ಸುದೀಪ್

    ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅಂಬಿ ಮಾಮ: ಸುದೀಪ್

    – ಸುಮಲತಾ, ಅಭಿಷೇಕ್ ಹೇಳಿದ್ದೇನು..?

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ 69ನೇ ಹುಟ್ಟುಹಬ್ಬಕ್ಕೆ ಕಿಚ್ಚ ಸುದೀಪ್, ರಮೇಶ್ ಅರವಿಂದ್, ದರ್ಶನ್ ಸೇರಿದಂತೆ ಇತರೆ ಸ್ಯಾಂಡಲ್‍ವುಡ್ ಮಂದಿ ಶುಭ ಕೋರಿದ್ದಾರೆ. ಅಂಬಿ ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತದ್ದೇವೆ ಎಂಬುದನ್ನು ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ.

    ನಿಜಕ್ಕೂ ಮಿಸ್ ಯೂ ಮಾಮ ಎಂದು ಬರೆದುಕೊಂಡು ಅಂಬರೀಶ್ ಅವರ ಕೆಲವು ಫೊಟೋಗಳನ್ನು ಟ್ವೀಟ್ ಮಾಡುವಮೂಲಕವಾಗಿ ತಾವು ಎಷ್ಟು ಅಂಬಿ ಅವರುನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನ್ನುವುದನ್ನು ಕೆಲವು ಪದಗಳ ಮೂಲಕವಾಗಿ ಸುದೀಪ್ ಹೇಳಿದ್ದಾರೆ.

    ಅಜರಾಮರ ನೆನಪುಗಳು, ಚಿರಂತನ ಚೈತನ್ಯ, ಅಪಾರ ಅಕ್ಕರೆ, ಸಂಜೀವಿನಿ ಸ್ನೇಹ, ಎಲ್ಲರನ್ನೂ ಎಲ್ಲವನ್ನೂ ಪ್ರೀತಿಸಿ ಹೃದಯವಂತಿಕೆ ಶಾಶ್ವತ ನಲ್ಮೆ, ಧನ್ಯ ಬದುಕು ಎಂದು ಸುಮಲತಾ ಅಂಬರೀಶ್ ಟ್ವೀಟ್ ಮೂಲಕ ಪತಿಯನ್ನು ಸ್ಮರಿಸಿದ್ದಾರೆ. ಅಪ್ಪನ ಹುಟ್ಟುಹಬ್ಬಕ್ಕೆ ಇನ್‍ಸ್ಟಾಗ್ರಾಮ್‍ನಲ್ಲಿ ಶುಭಕೋರಿರುವ ಅಭಿಷೇಕ್, ಹ್ಯಾಪಿ ಬರ್ತ್ ಡೇ ಲೆಜೆಂಡ್ ಎಂದು ಅಪ್ಪನ ಜೊತೆಗಿರುವ ಫೋಟೋ ಹಂಚಿಕೊಂಡು ಶುಭಾಶಯ ಕೋರಿದ್ದಾರೆ.

    ಅಂಬರೀಶಣ್ಣ ಅಮರ, ಅಜರಾಮರ ಎಂದು ನಿರ್ದೇಶಕ ಪವನ್ ಒಡೆಯರ್ ಶುಭಕೋರಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಸಹ ಅಂಬಿಗೆ ವಿಶ್ ಮಾಡಿದ್ದು, ಇಂದು “ರೆಬೆಲ್ ಸ್ಟಾರ್” ಅಂಬರೀಷ್ ರವರ ಜನ್ಮ ದಿನ… ಅವರ ನಟನೆ..ಕೆಲಸ.,ಮಾತು ..ನೆನಪು ಎಂದಿಗು ಮರೆಯೋಕೆ ಚಾನ್ಸೆ ಇಲ್ಲ… No way ಎಂದಿದ್ದಾರೆ. ಇದನ್ನೂ ಓದಿ: ಅಪ್ಪಾಜಿಯ ಭಾಷಾಭಿಮಾನ, ಖಡಕ್ ಜೀವನ ಶೈಲಿ ಎಲ್ಲರಿಗೂ ಸ್ಫೂರ್ತಿ: ದರ್ಶನ್

     

    View this post on Instagram

     

    A post shared by Abishek Ambareesh (@abishekambareesh)

    ಅಂಬರೀಶ್ ಜೊತೆ ಕಾರಿನಲ್ಲಿ ಪ್ರಯಾಣ ಮಾಡುತ್ತಿರುವ ಫೋಟೋವನ್ನು ದರ್ಶನ್ ಹಂಚಿಕೊಂಡಿದ್ದಾರೆ. ಎಂದಿಗೂ ಮಾಸದ ಅಂಬಿ ಅಪ್ಪಾಜಿಯ ಸವಿನೆನಪು. ಅವರ ಭಾಷಾಭಿಮಾನ, ಖಡಕ್ ಜೀವನ ಶೈಲಿ ಎಲ್ಲರಿಗೂ ಸ್ಫೂರ್ತಿಯಾಗಿರುತ್ತದೆ. ಮತ್ತೊಮ್ಮೆ ಕರುನಾಡಲ್ಲೇ ಹುಟ್ಟಿಬರಲಿ ನಮ್ಮ ನೆಚ್ಚಿನ ಮಂಡ್ಯದ ಗಂಡು ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ. ಕುರುಕ್ಷೇತ್ರ, ಅಂಬರೀಶ್ ಬುಲ್‍ಬುಲ್ ಮುಂತಾದ ಸಿನಿಮಾಗಳಲ್ಲಿ ದರ್ಶನ್ ಮತ್ತು ಅಂಬರೀಶ್ ಜೊತೆಯಾಗಿ ನಟಿಸಿದ್ದರು.

    ಅಂಬರೀಶ್ ಜನ್ಮದಿನದ ಪ್ರಯುಕ್ತ ಇಂದು ಸಂಸದೆ ಸುಮಲತಾ ಅಂಬರೀಶ್ ಅವರು ಹಲವು ಕೆಲಸಗಳನ್ನು ಮಾಡುತ್ತಿದ್ದಾರೆ. ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಇರುವ ಅಂಬರೀಶ್ ಸಮಾಧಿಗೆ ಅವರು ಕುಟುಂಬಸ್ಥರ ಜೊತೆ ಪೂಜೆ ಸಲ್ಲಿಸಿದ್ದಾರೆ. ಎಲ್ಲವೂ ಸುಸ್ಥಿತಿಯಲ್ಲಿದ್ದರೆ ಅಂಬಿ ಜನ್ಮದಿನವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸುತ್ತಿದ್ದರು. ಅನೇಕ ಕಡೆಗಳಲ್ಲಿ ಅನ್ನಸಂತರ್ಪಣೆ ನಡೆಯುತ್ತಿತ್ತು. ಕೆಲವು ಕಡೆಗಳಲ್ಲಿ ಅಂಬಿ ಕಟೌಟ್ ಹಾಕಿ ಹಾಲಿನ ಅಭಿಷೇಕ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಸರ್ಕಾರ ಕೊವಿರೊನಾ ಇರುವುದರಿಂದ ಯಾರೊಬ್ಬರೂ ಮನೆಯಿಂದ ಹೊರ ಬರೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಯಾರೂ ಅಂಬರೀಷ್ ಜನ್ಮದಿನ ಆಚರಣೆ ಮಾಡುವುದು ಬೇಡ ಎಂದು ಸುಮಲತಾ ಹೇಳಿದ್ದಾರೆ. ಇದನ್ನೂ ಓದಿ: ಇಂದು ಅಂಬರೀಶ್ ಜನ್ಮದಿನ, ಯಾವುದೇ ಸಂಭ್ರಮಾಚರಣೆ ಬೇಡ: ಸುಮಲತಾ

    ನಮ್ಮೆಲ್ಲರ ಪ್ರೀತಿಯ ಅಂಬರೀಶ್ ಅವರ 69ನೇ ಜನ್ಮ ಜಯಂತಿ ಸಂಭ್ರಮದಿಂದ ಆಚರಿಸಲು ನೀವೆಲ್ಲರೂ ಕಾಯುತ್ತಿರುತ್ತೀರಿ. ಆದರೆ ಕೊರೊನಾ ತಡೆಯಲು ದೇಶವೆಲ್ಲ ಶ್ರಮಿಸುತ್ತಿರುವಾಗ ನಾವು ಯಾವುದೇ ಸಾರ್ವಜನಿಕ ಆಚರಣೆ ಅಥವಾ ಸಮಾರಂಭ ಮಾಡುವುದು ಬೇಡವೆಂದು ನನ್ನ ವಿನಮ್ರ ಮನವಿ. ಈ ವರ್ಷ ಅವರನ್ನು ನಮ್ಮ ಮನೆ-ಮನಗಳಲ್ಲೇ ಆಚರಿಸೋಣ ಎಂದು ಸುಮಲತಾ ಮೊದಲೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಅಭಿಮಾನಿಗಳಲ್ಲಿ ಮನವಿಮಾಡಿದ್ದರು.

  • ನೆರೆ ಮನೆ ಬೆಂಕಿಯಲ್ಲಿ ಬೇಳೆ ಬೇಯಿಸುವುದು ಕಾಂಗ್ರೆಸ್‍ನ ಜಾಡ್ಯ: ಹೆಚ್‍ಡಿಕೆ

    ನೆರೆ ಮನೆ ಬೆಂಕಿಯಲ್ಲಿ ಬೇಳೆ ಬೇಯಿಸುವುದು ಕಾಂಗ್ರೆಸ್‍ನ ಜಾಡ್ಯ: ಹೆಚ್‍ಡಿಕೆ

    ಬೆಂಗಳೂರು: ಮಾಜಿ ಸಿಎಂಗಳಾದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ಮತ್ತೊಮ್ಮೆ ಟ್ವೀಟ್ ವಾರ್ ಶುರುವಾಗಿದೆ. ಲಸಿಕೆ ಕುರಿತು ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ಸರಣಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಮತ್ತು ಮಾಜಿ ಸಿಎಂ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

    ಶಾಂತಿ ಕಾಲದಲ್ಲಿ ಕಲಹಕ್ಕೆ ಬರುವುದು, ನೆರೆ ಮನೆ ಬೆಂಕಿಯಲ್ಲಿ ಬೇಳೆ ಬೇಯಿಸುವುದು ಕಾಂಗ್ರೆಸ್ಸಿನ ಜಾಡ್ಯ. ಈ ಅಂಟುರೋಗಕ್ಕೆ ಒಳಗಾದವರು ಸಿದ್ದರಾಮಯ್ಯ. ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ಸಿನ ಆತ್ಮವಂಚನೆ ನೆನಪಿಸಿದ್ದಕ್ಕೆ ಸಿದ್ದರಾಮಯ್ಯ ನನ್ನ ವಿರುದ್ಧ ಕಾಲು ಕೆರೆದುಕೊಂಡು ಬಂದಿದ್ದಾರೆ. ಅವರ ಪ್ರತಿ ಎಸೆತಕ್ಕೆ ಸಿಕ್ಸರ್ ಕೊಡಬೇಕೆನಿಸಿದೆ.

    ಕೋವಿಡ್ ಲಸಿಕೆ ವಿಚಾರದಲ್ಲಿನ ಕಾಂಗ್ರೆಸ್ಸಿನ ಆತ್ಮವಂಚನೆಯನ್ನು ಪ್ರಸ್ತಾಪಿಸಿದ್ದಕ್ಕೆ ನಾನು ಸ್ವಯಂ ಗೋಲು ಹೊಡೆದುಕೊಂಡಿರುವುದಾಗಿ ನೀವು ಹೇಳಿದ್ದೀರಿ. ಸಿದ್ದರಾಮಯ್ಯನವರೇ ಲಸಿಕೆ ವಿಚಾರದಲ್ಲಿ ರಾಷ್ಟ್ರದ ಎದುರು ಬೆತ್ತಲಾಗಿ, ನಿಂತಿರುವುದು ಕಾಂಗ್ರೆಸ್. ಈ ವಿಚಾರದಲ್ಲಿ ನನ್ನನ್ನು ಟೀಕಿಸಲು ಬಂದು ನೀವು ಹಿಟ್ ವಿಕೆಟ್ ಆಗಿದ್ದೀರಿ.

    ಲಸಿಕೆ ವಿಚಾರವಾಗಿ ಕಾಂಗ್ರೆಸ್ ಅನುಮಾನದ ಮಾತುಗಳನ್ನು ಆಡಲಿಲ್ಲವೇ? ಭಾರತದ್ದೇ ಕೋವ್ಯಾಕ್ಸಿನ್‍ನ ಬಗ್ಗೆ ಅಪಪ್ರಚಾರ ಮಾಡಲಿಲ್ಲವೇ? ನಮ್ಮದೇ ಲಸಿಕೆಯನ್ನು ನೀವು ಪ್ರೋತ್ಸಾಹಿಸಬೇಕಿತ್ತೋ ಇಲ್ಲವೋ? ಅದು ಬಿಟ್ಟು ನೀವು ಮಾಡಿದ್ದೇನು? ಅಡಿಗಡಿಗೆ ಲಸಿಕೆ ಮೇಲೆ ಅನುಮಾನ. ಈ ಮೂಲಕ ಭಾರತೀಯ ವಿಜ್ಞಾನಿಗಳ ಅಪಮಾನ. ಇದನ್ನೇ ಅಲ್ಲವೇ ನಾನು ಹೇಳಿದ್ದು? ಎಂದು ಪ್ರಶ್ನಿಸಿದರು.

    ಕಾಂಗ್ರೆಸ್ಸಿನ ಲಸಿಕೆ ರಾಜಕಾರಣವನ್ನು ನಾನು ವಿವರಿಸಿದ್ದೇನೆ. ಕಾಂಗ್ರೆಸ್ಸಿನ ಅಪಪ್ರಚಾರದಿಂದ ಜನ ಲಸಿಕೆ ಹಾಕಿಸಿಕೊಳ್ಳುತ್ತಿಲ್ಲ ಎಂದು ನಾನು ಹೇಳಿಲ್ಲ. ಲಸಿಕೆಗಾಗಿ ಜನರು ಸಿದ್ಧರಾಗಿಯೇ ಇದ್ದಾರೆ. ಕಾಂಗ್ರೆಸ್ ಹೇಳಿದ ಮಾತ್ರಕ್ಕೆ ಜನ ಲಸಿಕೆಯಿಂದ ವಿಮುಖರಾಗಿಲ್ಲ. ಜನ ಕಾಂಗ್ರೆಸ್ ಮಾತು ಕೇಳುತ್ತಾರೆ ಎಂಬ ಭ್ರಮೆ ಸಿದ್ದರಾಮಯ್ಯನವರಿಗೆ ಬೇಡ ಎಂದರು.

    ಲಸಿಕೆಯೊಂದು ಸಿಕ್ಕಾಗ ಅದನ್ನು ಮೊದಲಿಗೆ ಮುಂಚೂಣಿ ಹೋರಾಟಗಾರರಿಗೆ ನೀಡಲಾಗುತ್ತದೆ.ಇದು ನಿಮಗೆ ತಿಳಿದಿರಲಿ.ದೇಶದಲ್ಲಿ ಮೊದಲು ಕೋವಿಡ್ ವಾರಿಯರ್‍ಗಳಿಗೆ ಲಸಿಕೆ ನೀಡಲಾಯಿತು. ನನ್ನ ಸರದಿ ಬಂದಾಗ ನಾನು ಲಸಿಕೆ ಪಡೆದೆ. ಇಲ್ಲಿ ಕಾಂಗ್ರೆಸ್ ಮಾತು ನಂಬಿ ಕೂರುವಂಥದ್ದೇನಿತ್ತು. ಕಾಂಗ್ರೆಸ್ ಮಾತನ್ನು 50 ವರ್ಷದಿಂದಲೂ ಕೇಳದ ಕುಟುಂಬ ನಮ್ಮದು ಎಂದು ಕೆಂಡಕಾರಿದ್ದಾರೆ.

    ದೇಶದಲ್ಲಿ ಸರ್ವರಿಗೂ ಉಚಿತ ಲಸಿಕೆ ಹಾಕುವಂತೆ ಸೋನಿಯಾ ಗಾಂಧಿ ಅವರ ಜೊತೆಗೂಡಿ ಎಚ್.ಡಿ ದೇವೇಗೌಡರು ಪ್ರಧಾನಿಗೆ ಪತ್ರ ಬರೆದರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯನವರೇ, ದೇಶದ ಹಲವು ವಿರೋಧಪಕ್ಷಗಳ ನಾಯಕರ ಜೊತೆಗೂಡಿ ದೇವೇಗೌಡರು ಪ್ರಧಾನಿಗೆ ಪತ್ರ ಬರೆದರೇ ಹೊರತು, ಸೋನಿಯಾ ಗಾಂಧಿ ಅವರ ಜೊತೆಗೂಡಿ ಪತ್ರ ಬರೆಯಲಿಲ್ಲ ನೆನಪಿರಲಿ ಎಂದು ಹೇಳಿದರು.

    ಅಷ್ಟಕ್ಕೂ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರಕ್ಕೆ ಸಹಿ ಮಾಡುವಂತೆ ದೇವೇಗೌಡರಿಗೆ ಯಾರೆಲ್ಲ ವಿನಂತಿಸಿದ್ದರು, ಎಷ್ಟು ಬೇಡಾಡಿದರು ಎಂಬುದು ಸಿದ್ದರಾಮಯ್ಯನವರಿಗೆ ಗೊತ್ತಿದೆಯೇ? ದೆಹಲಿಗೆ ಹೋಗಿ ಈ ವಿಚಾರವಾಗಿ ಸಿದ್ದರಾಮಯ್ಯನವರು ಮಾಹಿತಿ ಪಡೆದು ಬರಲಿ. ಮಾಹಿತಿ ಇಲ್ಲದೇ ಮಾತಾಡುವುದು ಸಿದ್ದರಾಮಯ್ಯನವರಿಗಿರುವ ದೊಡ್ಡ ಸಮಸ್ಯೆ ಎಂದು ನುಡಿದರು.

    ಅಸಮರ್ಪಕ ಲಸಿಕೆ ಅಭಿಯಾನ ವಿರುದ್ಧ ನಮ್ಮದೂ ಆಕ್ಷೇಪಣೆಗಳಿವೆ. ಆದರೆ ಲಸಿಕೆ ವಿರುದ್ಧ ನಮ್ಮ ನಿಲುವು ಇಲ್ಲ. ಲಸಿಕೆ ಅಭಿಯಾನ ಸಮರ್ಪಕವಾಗಿ ನಡೆಯಬೇಕೆಂದು ಒತ್ತಾಯಿಸಿ ನಾನು ಸರ್ಕಾರಗಳಿಗೆ ಹಲವು ಸಲಹೆ ನೀಡಿದ್ದೇನೆ. ಆದರೆ, ಕಾಂಗ್ರೆಸ್ ಲಸಿಕೆ ವಿರುದ್ಧವೇ ಮಾತಾಡಿತು. ಈಗ ಲಸಿಕೆ, ಲಸಿಕೆ ಎನ್ನುತ್ತಿದೆ. ಇದು ಕಾಂಗ್ರೆಸ್ಸಿನ ಇಬ್ಬಗೆ ನೀತಿ ಎಂದು ವಾಗ್ದಾಳಿ ನಡೆಸಿದರು.

    ಸೋಂಕು ಹೆಚ್ಚುತ್ತಿದ್ದರೂ, ಲಾಕ್‍ಡೌನ್ ಜಾರಿಯಲ್ಲಿ ಇದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಬೀದಿಗೆ ಬಿದ್ದಿದ್ದಾರೆ. ಜನರಿಗೆ ನೆರವಾಗುವುದು ಇವರ ಉದ್ದೇಶವಲ್ಲ. ರಾಜಕೀಯ ಮೈಲೇಜ್ ಪಡೆಯುವುದು ಇವರ ಉದ್ದೇಶ. ಜೊತೆಗೆ ಸಿಎಂ ಆಗುವ ಕನಸುಗಳು. ಶಾಂತಿ ಕಾಲದಲ್ಲಿ ಕಾಂಗ್ರೆಸ್ ಕಲಹಕ್ಕೆ ಇಳಿದು ಲಾಭ ಪಡೆಯುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಹರಿಹಾಯ್ದಿದ್ದಾರೆ.

    ಲಸಿಕೆಗಾಗಿ 100 ಕೋಟಿ ಕೊಟ್ಟಿದ್ದಾಗಿ ಕಾಂಗ್ರೆಸ್ ಹೇಳುತ್ತಿದೆ. ಇದೇನು ಸಿದ್ದರಾಮಯ್ಯನವರ ಮನೆ ಗಂಟೇ? ಕಾಂಗ್ರೆಸ್ ಜನಪ್ರತಿನಿಧಿಗಳ ಕ್ಷೇತ್ರಾಭಿವೃದ್ಧಿ ನಿಧಿಯಲ್ಲವೇ? ಕ್ಷೇತ್ರಾಭಿವೃದ್ಧಿ ನಿಧಿಯನ್ನು ಸರ್ಕಾರಕ್ಕೇ ನೀಡಿರುವುದಾಗಿ ಹೇಳಬೇಕಿದ್ದ ಕಾಂಗ್ರೆಸ್, ಲಸಿಕೆಗಾಗಿ ಕೈಯಿಂದ 100 ಕೋಟಿ ಕೊಟ್ಟಂತೆ ಹೇಳಿದೆ. ಎಂಥ ವಂಚಕ ನಡೆ? ಎಂದು ಪ್ರಶ್ನಿಸಿದ್ದಾರೆ.

    ನಾನು ದೇವೇಗೌಡರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು ಎಂದು ನೀವು ಹೇಳಿದ್ದೀರಿ. ದೇವೇಗೌಡರ ಸಲಹೆಯಂತೇ ನಾನು ಸೇರಿದಂತೆ ಪಕ್ಷ ನಡೆಯುತ್ತೇವೆ. ಅದನ್ನು ಹೇಳುತ್ತಿರುವ ತಾವು ಗೌಡರ ಸಲಹೆಯಂತೆ ನಡೆದುಕೊಂಡಿದ್ದೀರೇ ಸಿದ್ದರಾಮಯ್ಯನವರೇ ಹೇಳಲು ಬಹಳಷ್ಟಿದೆ. ನಾನು ಸುಳ್ಳಾಡಲಾರೆ. ಅದು ನಿಮಗೆ ಹೇಗೆ ಕಾಣುತ್ತದೆ ಎಂಬುದು ನನಗೆ ಅಪ್ರಸ್ತುತ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

  • ಉತ್ತರ ಪ್ರದೇಶದ ಸಚಿವ ವಿಜಯ್ ಕಶ್ಯಪ್ ಕೊರೊನಾಗೆ ಬಲಿ

    ಉತ್ತರ ಪ್ರದೇಶದ ಸಚಿವ ವಿಜಯ್ ಕಶ್ಯಪ್ ಕೊರೊನಾಗೆ ಬಲಿ

    ಲಕ್ನೋ: ಉತ್ತರ ಪ್ರದೇಶದ ಕಂದಾಯ ಮತ್ತು ಪ್ರವಾಹ ನಿಯಂತ್ರಣ ಸಚಿವ ವಿಜಯ್ ಕಶ್ಯಪ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

    ಮುಜಫರ್‍ನಗರದ ಚಾರ್ತವಾಲ್ ಅಸೆಂಬ್ಲಿ ಶಾಸಕರಾಗಿದ್ದ ಕಶ್ಯಪ್(56) ಗುರಗಾಂವ್‍ನ ಮೆದಂತ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಇವರು ಕೊರೊನಾ ಸೋಂಕಿಗೆ ಬಲಿಯಾದ ಮೂರನೇ ಯುಪಿ ಸಚಿವರಾಗಿದ್ದು, ಕಳೆದ ವರ್ಷ ಉತ್ತರ ಪ್ರದೇಶದ ಮಂತ್ರಿಗಳಾದ ಕಮಲ್ ರಾಣಿ ವರುಣ್ ಮತ್ತು ಚೇತನ್ ಚೌಹಾನ್ ಸೋಂಕಿನಿಂದ ಸಾವನ್ನಪ್ಪಿದ್ದರು.

    ವಿಜಯ್ ಕಶ್ಯಪ್‍ರವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರದ ಬಿಜೆಪಿ ಮುಖಂಡ ಮತ್ತು ಸಚಿವರಾದ ವಿಜಯ್ ಕಶ್ಯಪ್‍ರವರ ಸಾವಿನ ಸುದ್ದಿ ಬಹಳ ದುಃಖವನ್ನುಂಟು ಮಾಡಿದೆ. ಅವರು ತಳಮಟ್ಟದವರೊಂದಿಗೆ ಸಂಪರ್ಕ ಹೊಂದಿದ್ದನಾಯಕರಾಗಿದ್ದರು ಹಾಗೂ ಯಾವಾಗಲೂ ಸಾರ್ವಜನಿಕ ಹಿತಾಸಕ್ತಿ ಕಾರ್ಯಗಳನ್ನು ಮಾಡುವಲ್ಲಿ ತೊಡಗಿಸಿಕೊಂಡಿದ್ದರು. ದುಃಖದ ಈ ಕ್ಷಣದಲ್ಲಿ ಅವರ ಕುಟುಂಬ ಹಾಗೂ ಬೆಂಬಲಿಗರಿಗೆ ನನ್ನ ಸಂತಾಪ. ಓಂ ಶಾಂತಿ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

    ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಕೂಡ ವಿಜಯ್ ಕಶ್ಯಪ್‍ರವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

  • ಸ್ವಾರ್ಥ ಮೋಸ ಧನದಾಹಿ ಜಗತ್ತು, ಒಳ್ಳೆಯವರಿಗಲ್ಲ ಇಂದಿನ ಜಗತ್ತು : ಜಗ್ಗೇಶ್

    ಸ್ವಾರ್ಥ ಮೋಸ ಧನದಾಹಿ ಜಗತ್ತು, ಒಳ್ಳೆಯವರಿಗಲ್ಲ ಇಂದಿನ ಜಗತ್ತು : ಜಗ್ಗೇಶ್

    ಬೆಂಗಳೂರು: ಕೊರೊನಾ ಮಹಾಮಾರಿ ಮನುಜ ಕುಲ ನಾಶವಾಗುತ್ತಿದೆ. ಈ ಕುರಿತಾಗಿ ನವರಸ ನಾಯಕ ಜಗ್ಗೇಶ್ ಅವರ ಆತ್ಮೀಯರನ್ನು ಕಳೆದುಕೊಂಡ ದುಃಖವನ್ನು ಟ್ವೀಟ್ ಮಾಡುವ ಮೂಲಕವಾಗಿ ಹೊರಹಾಕಿದ್ದಾರೆ.

    ಬಹುವರ್ಷಗಳಿಂದ ಜಗ್ಗೇಶ್ ಅವರ ಜೊತೆಯಲ್ಲಿರುವ ಅವರ ಮೇಕಪ್ ಕಲಾವಿದ ಮಾದೇಗೌಡ, ಜಗ್ಗೇಶ್ ಅವರಿಗೆ ತುಂಬಾ ಆತ್ಮೀಯರು. ಇದೀಗ ಮಾದೇಗೌಡ ಮಗ ಕೊರೊನಾಗೆ ಬಲಿಯಾಗಿದ್ದಾರೆ. ಈ ದುಃಖವನ್ನು ಜಗ್ಗೇಶ್ ಅವರು ಸಾಲು ಸಾಲು ಟ್ವೀಟ್ ಮಾಡುವ ಮೂಲಕವಾಗಿ ಜನರಿಗೆ ಜಾಗೃತಿಯನ್ನು ಮೂಡಿಸಿದ್ದಾರೆ.

    ನನ್ನಉಸಿರಿನಂತೆ ಬೆನ್ನಿಗೆ ನಿಂತು ನನ್ನಬದುಕಿನ ಬಹುಭಾಗ ಒಡಹುಟ್ಟಿದವನಂತೆ ಬಾಳಿದವ ಮಾದೇಗೌಡ. ಅವನ ಮಗನನ್ನು ಈ ಪೀಡೆರೋಗ ನುಂಗಿಹಾಕಿದೆ. ಇದ್ದವನು ಒಬ್ಬನೇ ಮಗ ಮಸಣಸೇರಿಬಿಟ್ಟ. ಬಹಳ ನೊಂದು ಹೋಗಿರುವೆ, ನನ್ನ ಮಗನಿಗಿಂತ 1ವರ್ಷ ಕಿರಿಯವನಾಗಿದ್ದನು. ಅವನಿಗೆ ಮಗಳು ಹುಟ್ಟಿ6ತಿಂಗಳು ಆಗಿದೆ. ಈ ದುಃಖವನ್ನು ಮಾದೆಗೌಡ ಹೇಗೆ ಸಹಿಸುತ್ತಾನೆ..? ನನ್ನದೇಹವೆ ಸುಟ್ಟಂತೆ ಆಗಿದೆ.ಕ್ರೂರವಿಧಿ ಎಂದು ಬರೆದುಕೊಂಡು ಕಣ್ಣೀರು ಹಾಕಿದ್ದಾರೆ.

    ಕೆಲದಿನ ನಾ ಇಲ್ಲಿಂದ ದೂರ ಉಳಿಯುವೆ. ಮಾದೇಗೌಡನ ಮಗನ ಸಾವಿನಿಂದ ನನ್ನಮನಸ್ಸು ಒಡೆದು ಚೂರಾಗಿದೆ. ಏನು ಮಾಡಿದರು ಸಮಾಧಾನ ಆಗುತ್ತಿಲ್ಲ. ಬಂಗಾರದಂತ ನನ್ನ ಆತ್ಮೀಯ ಹೃದಯಗಳೇ ನಿಮ್ಮ ನೀವು ಕಾಪಾಡಿಕೊಳ್ಳಿ ಯಾರು ನಮಗಾಗಿ ಬರುವುದಿಲ್ಲ. ಇಂದಿನ ಯಾಂತ್ರಿಕ ಚಿಂತನೆ ಜಗದಲ್ಲಿ. ಸ್ವಾರ್ಥ ಮೋಸ ಧನದಾಹಿ ಜಗತ್ತು. ಒಳ್ಳೆಯವರಿಗಲ್ಲ ಇಂದಿನ ಜಗತ್ತು..ಕ್ಷಮೆಯಿರಲಿ ಎಂದು ಬರೆದುಕೊಂಡು ಆಪ್ತನ ಮಗನನ್ನುಕಳೆದುಕೊಂಡಿರುವ ದುಃಖದ ನುಡಿಗಳನ್ನಾಡಿದ್ದಾರೆ.

  • ಉಪ್ಪಿ ಫೌಂಡೇಷನ್‍ಗೆ ದೇಣಿಗೆ ನೀಡಿದ ಬಾಲ ನಟ

    ಉಪ್ಪಿ ಫೌಂಡೇಷನ್‍ಗೆ ದೇಣಿಗೆ ನೀಡಿದ ಬಾಲ ನಟ

    ಬೆಂಗಳೂರು: ಉತ್ತಮ ಪ್ರಜಾಕೀಯ ಪಕ್ಷದ ನಾಯಕ ಮತ್ತು ಸ್ಯಾಂಡಲ್‍ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರರವರ ಉಪ್ಪಿ ಫೌಂಡೇಶನ್‍ಗೆ ಬಾಲ ನಟನೊಬ್ಬ 10,000ರೂ ದೇಣಿಗೆ ನೀಡಿದ್ದಾನೆ. ಈ ಬಗ್ಗೆ ನಟ ಉಪೇಂದ್ರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಕೊರೊನಾದ ಸಂಕಷ್ಟದಲ್ಲಿರುವ ಜನರಿಗೆ ಹಲವಾರು ಸೆಲೆಬ್ರೆಟಿಗಳು ಸಹಾಯ ಮಾಡುತ್ತಿದ್ದಾರೆ. ಉಪೇಂದ್ರರವರು ಕೂಡ ಉಪ್ಪಿ ಫೌಂಡೇಷನ್ ಮೂಲಕ ದೇಣಿಗೆ ಸಂಗ್ರಹಿಸುತ್ತಿದ್ದು, ಬಾಲ ನಟ ಅನೀಶ್ ಸಾಗರ್ 10 ಸಾವಿರ ರೂ. ಸಹಾಯ ಮಾಡಿದ್ದಾರೆ.

    ಈ ಬಗ್ಗೆ ಉಪೇಂದ್ರರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಜೀವನಾನೆ ನಾಟಕ ಸ್ವಾಮಿ ಮತ್ತು ಸಾಲುಗಾರ ಎಂಬ ಶಾರ್ಟ್ ಮೂವಿಯಲ್ಲಿ ನಟಿಸಿದ್ದ ಮಾಸ್ಟರ್ ಅನೀಶ್ ಸಾಗರ್ ನಾಯ್ಡು ತನಗೆ ಬಂದ ಸಂಭಾವನೆಯಲ್ಲಿ 10,000ರೂ.ವನ್ನು ಕೊರೊನಾ ಸಂಕಷ್ಟದಲ್ಲಿರುವವರಿಗೆ ದಾನ ಮಾಡಿದ್ದಾನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದಿದ್ದಾರೆ.

  • ಕನ್ನಡಿಗರೇನು ತಬ್ಬಲಿ ಮಕ್ಕಳೇ..?- ಕೇಂದ್ರದ ವಿರುದ್ಧ ಮತ್ತೆ ಸಿಡಿದೆದ್ರು ಹೆಚ್‍ಡಿಕೆ

    ಕನ್ನಡಿಗರೇನು ತಬ್ಬಲಿ ಮಕ್ಕಳೇ..?- ಕೇಂದ್ರದ ವಿರುದ್ಧ ಮತ್ತೆ ಸಿಡಿದೆದ್ರು ಹೆಚ್‍ಡಿಕೆ

    ಬೆಂಗಳೂರು: ರಾಜ್ಯದಲ್ಲಿ ಇದುವರೆಗೆ ಬೆಡ್, ವೆಂಟಿಲೇಟರ್ ಅಂತ ಜನ ಪರದಾಡುತ್ತಿದ್ದರೆ ಸದ್ಯ ಆಕ್ಸಿಜನ್ ಗಾಗಿ ಜನ ನರಳಾಡುತ್ತಿದ್ದಾರೆ. ಈ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.

    ಸರಣಿ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಹೆಚ್‍ಡಿಕಡ ಕನ್ನಡಿಗರೇನು ತಬ್ಬಲಿ ಮಕ್ಕಳೇ ಎಂದು ಪ್ರಶ್ನಿಸಿದ್ದಾರೆ.

    ಟ್ವೀಟ್‍ನಲ್ಲೇನಿದೆ..?
    ಕರ್ನಾಟಕಕ್ಕೆ ನಿತ್ಯ 1200 ಮೆಟ್ರಿಕ್ ಟನ್(MT) ಆಮ್ಲಜನಕ ಪೂರೈಸಬೇಕು ಎಂಬ ಕೋರ್ಟ್ ಆದೇಶದ ನಂತರವೂ ಕೇಂದ್ರ ರಾಜ್ಯಕ್ಕೆ ಪೂರೈಸಿದ್ದು 120ಒಖಿ ಮಾತ್ರ. ಅತ್ತ, ನಮಗಿಂತ ಕಡಿಮೆ ಪ್ರಕರಣಗಳಿರುವ ಉತ್ತರ ಪ್ರದೇಶಕ್ಕೆ 1680MT ಪೂರೈಸಿರುವ ಕೇಂದ್ರ ಸರ್ಕಾರ ತಾರತಮ್ಯದಲ್ಲಿ ಪಾರಮ್ಯ ಮೆರೆದಿದೆ. ಈ ಒಕ್ಕೂಟದಲ್ಲಿ ಕನ್ನಡಿಗರೇನು ತಬ್ಬಲಿ ಮಕ್ಕಳೇ?

    ಕರ್ನಾಟಕದ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿರುವುದು ಸರ್ಕಾರವೇ ನೀಡಿರುವ ಅಂಕಿ-ಅಂಶಗಳಿಂದ ಬಯಲಾಗಿದೆ. ಕರ್ನಾಟಕ, ಕನ್ನಡಿಗರ ವಿಚಾರದಲ್ಲಿ ಕೇಂದ್ರಕ್ಕೆ ಈ ಮಟ್ಟಿಗಿನ ತಾತ್ಸಾರ ಏಕೆ? ಇಲ್ಲಿ ಬಿಜೆಪಿಯದ್ದೇ ಸರ್ಕಾರ ಇರುವುದಕ್ಕೋ? ಅತಿ ಹೆಚ್ಚು ಸಂಸದರು ಆಯ್ಕೆಯಾಗಿರುವುದಕ್ಕೋ? ಅಥವಾ ಯಡಿಯೂರಪ್ಪರನ್ನು ಖಳನಾಯಕರಾಗಿಸಲೋ?

    ಕರ್ನಾಟಕದ ವಿಚಾರದಲ್ಲಿ ಹೇಳತೀರದ ತಾರತಮ್ಯ ಮಾಡುತ್ತಿರುವ ಕೇಂದ್ರ ಸರ್ಕಾರ ಒಂದು ವಿಷಯ ಸ್ಪಷ್ಟವಾಗಿ ಅರಿಯಬೇಕು. ಇದು ಒಕ್ಕೂಟ ವ್ಯವಸ್ಥೆ. ಒಕ್ಕೂಟ ಸರ್ಕಾರ ನಡೆಸುತ್ತಿರುವವರು ಎಲ್ಲ ರಾಜ್ಯಗಳಿಗೂ ಸಮಾನ ಆದ್ಯತೆ ನೀಡಬೇಕು. ಅನಿವಾರ್ಯದಲ್ಲಿರುವವರ ಅಗತ್ಯಗಳನ್ನು ಮೊದಲು ಪೂರೈಸಬೇಕು. ಅದನ್ನು ಬಿಟ್ಟು ತಾತ್ಸಾರ ಮಾಡಿದರೆ ಜನ ದಂಗೆ ಎದ್ದಾರು.

    ಲಸಿಕೆ ವಿಚಾರದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರೇ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ‘3ಕೋಟಿ ಲಸಿಕೆಗೆ ಕೇಳಿದ್ದೇವೆ. 7 ಲಕ್ಷ ಡೋಸ್ ಸಿಕ್ಕಿದೆ. ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ಆದ್ಯತೆ. ಮೊದಲ ಡೋಸ್ ಪಡೆಯುವವರು ಕಾಯಬೇಕು’ ಎಂದಿದ್ದಾರೆ. ಲಸಿಕೆಯ ವಿಚಾರದಲ್ಲಿಯೂ ಕೇಂದ್ರ ತಾರತಮ್ಯ ಮಾಡುತ್ತಿರುವುದು ಇದರಿಂದ ಸ್ಪಷ್ಟವಾಗಿದೆ.

    ಬಿಜೆಪಿಯ ಪ್ರತಿಯೊಂದು ಧೋರಣೆಯನ್ನೂ ಬೆಂಬಲಿಸುವವರು, ಸಮರ್ಥಿಸಿಕೊಳ್ಳುತ್ತಿರುವವರು, ವಿರೋಧ ಪಕ್ಷಗಳ ನ್ಯಾಯಯುತ ಸಲಹೆ, ಬೇಡಿಕೆಗಳನ್ನು ಅಡಿಗಡಿಗೂ ಟೀಕಿಸುವವರು ಕರ್ನಾಟಕಕ್ಕೆ, ಕನ್ನಡಿಗರಿಗೆ ಆಗುತ್ತಿರುವ ಈ ಅನ್ಯಾಯವನ್ನು ಸಮರ್ಥಿಸಿಕೊಳ್ಳುವರೇ? ಆಮ್ಲಜನಕವಿಲ್ಲದೇ ಪ್ರಾಣ ಕಳೆದುಕೊಳ್ಳುತ್ತಿರುವ ಕನ್ನಡಿಗರ ಸಾವಿನ ಹೊಣೆಯನ್ನು ಹೊರುವರೇ?

    ನ್ಯಾಯಾಲಯ ಹೇಳಿದ್ದ 1200MT ಬದಲಿಗೆ 120MT ಆಮ್ಲಜನಕ ಪೂರೈಸಿದ್ದಕ್ಕೆ ಮುಖ್ಯಮಂತ್ರಿ, ಕೇಂದ್ರದ ಸಚಿವರು, ಬಿಜೆಪಿ ಸಂಸದರು ಮುಗಿಬಿದ್ದು ಕೇಂದ್ರ, ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ. ನಮಗೆ ಸಿಗಬೇಕಾಗಿದ್ದರಲ್ಲಿ ಮುರಿದುಕೊಂಡು ಕೊಟ್ಟದ್ದಕ್ಕೆ ಧನ್ಯವಾದ ಏಕೆ? ಬಿಜೆಪಿ ನಾಯಕರು, ಬಿಜೆಪಿ ಬೆಂಬಲಿಗರು ಈ ಗುಲಾಮಗಿರಿ ಬಿಡಬೇಕು.

    ಕೇಂದ್ರ ಸರ್ಕಾರ ತಾರತಮ್ಯ ಬಿಟ್ಟು ಕರ್ನಾಟಕದ ಅಗತ್ಯವನ್ನು ಪೂರೈಸಬೇಕು. ತಾನು ಸರ್ವಶಕ್ತ ಆಡಳಿತ ನಡೆಸುತ್ತಿರುವ ದಿಮಾಕನ್ನು ಕೇಂದ್ರ ಬಿಡಬೇಕು. ಒಕ್ಕೂಟ ಸರ್ಕಾರ ನಡೆಸುತ್ತಿರುವ ವಾಸ್ತವ ಅರಿಯಬೇಕು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ತಪ್ಪನ್ನು ಇಲ್ಲಿ ಸಮರ್ಥಿಸಿಕೊಳ್ಳುತ್ತಿರುವವರು ಮೊದಲು ತಾವು ಕನ್ನಡಿಗರು ಎಂಬುದು ಅರಿಯಬೇಕು.

    ಆಮ್ಲಜನಕ ಕರ್ನಾಟಕದ ಈ ಹೊತ್ತಿನ ಅಗತ್ಯ. ಈ ವಿಚಾರದಲ್ಲಿ ಆಗುತ್ತಿರುವ ತಾರತಮ್ಯವನ್ನೇ ಕನ್ನಡಿಗರಾಗಿ ನಾವು ಪ್ರಶ್ನೆ ಮಾಡದೇ ಹೋದರೆ ಇನ್ನ್ಯಾವ ವಿಚಾರದಲ್ಲಿ ನಾವು ನ್ಯಾಯ ಪಡೆಯಲು ಸಾಧ್ಯ. ಪರಿಹಾರ, ಅನುದಾನಗಳಲ್ಲಿ ಕರ್ನಾಟಕಕ್ಕೆ ಈಗ ಆಗಿರುವ ಅನ್ಯಾಯ ಸಹಿಸಿದ್ದಾಗಿದೆ. ಜೀವದ ವಿಚಾರದಲ್ಲಿ ನಡೆಯುತ್ತಿರುವ ಈ ತಾರತಮ್ಯ ಸಹಿಸುವುದು ಬೇಡ ಎಂದು ಹೆಚ್‍ಡಿಕೆ ತಿಳಿಸಿದ್ದಾರೆ.

  • ತೆಲಂಗಾಣದಲ್ಲಿ ನಾಳೆಯಿಂದ 10 ದಿನಗಳ ಕಾಲ ಲಾಕ್‍ಡೌನ್

    ತೆಲಂಗಾಣದಲ್ಲಿ ನಾಳೆಯಿಂದ 10 ದಿನಗಳ ಕಾಲ ಲಾಕ್‍ಡೌನ್

    ಹೈದರಾಬಾದ್: ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸಲು ತೆಲಂಗಾಣ ಸರ್ಕಾರ ರಾಜ್ಯದಲ್ಲಿ 10 ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್‍ಗೊಳಿಸಿಲು ನಿರ್ಧರಿಸಿದೆ.

    ಈ ನಿರ್ಬಂಧಗಳು ಮೇ 12ರ ಬುಧವಾರದಿಂದ ಜಾರಿಗೆ ಬರಲಿದ್ದು, ಮೇ 22ರವರೆಗೂ ಮುಂದುವರಿಯುತ್ತದೆ. ನಾಳೆಯಿಂದ ಬೆಳಗ್ಗೆ 10 ಗಂಟೆಯಿಂದ ಹತ್ತು ದಿನಗಳ ಕಾಲ ರಾಜ್ಯದಲ್ಲಿ ಲಾಕ್‍ಡೌನ್ ಜಾರಿಗೆ ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಕಚೇರಿ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ಕಳೆದ ವಾರ ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್‍ರವರು ಲಾಕ್‍ಡೌನ್‍ಗೊಳಿಸುವುದನ್ನು ಮುಂದೂಡಿದರು. ಅದರಿಂದ ಜನರು ಜೀವನ ನಡೆಸಲು ಕಷ್ಟವಾಗುತ್ತದೆ ಮತ್ತು ಆರ್ಥಿಕತೆಯು ಸಂಪೂರ್ಣ ಕುಸಿಯುತ್ತದೆ. ಲಾಕ್‍ಡೌನ್ ಹೇರುವುದರಿಂದ ಯಾವುದೇ ಪ್ರಯೋಜನವಿಲ್ಲ. ತೆಲಂಗಾಣದಲ್ಲಿ 25 ರಿಂದ 30 ಲಕ್ಷ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೊನಾ ಮೊದಲನೇ ಅಲೆಯ ಸಮಯದಲ್ಲಿ ಲಾಕ್‍ಡೌನ್ ಕಾರ್ಮಿಕರ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರಿದ್ದನ್ನು ನಾವು ನೋಡಿದ್ದೇವೆ. ಅವರು ಇದೀಗ ಸ್ಥಳಾಂತರವಾದರೆ ಮತ್ತೆ ಅವರು ಹಿಂದಿರುಗುವುದಿಲ್ಲ ಎಂದಿದ್ದರು.

  • ಟ್ವಿಟ್ಟರ್ ಇಲ್ಲ ಅಂದ್ರೆ ಬೇರೆ ವೇದಿಕೆಯಲ್ಲಿ ನನ್ನ ಧ್ವನಿ ಎತ್ತುವೆ: ಕಂಗನಾ ರಣಾವತ್

    ಟ್ವಿಟ್ಟರ್ ಇಲ್ಲ ಅಂದ್ರೆ ಬೇರೆ ವೇದಿಕೆಯಲ್ಲಿ ನನ್ನ ಧ್ವನಿ ಎತ್ತುವೆ: ಕಂಗನಾ ರಣಾವತ್

    ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಲಾಗಿದೆ ಈ ಕುರಿತು ಕಂಗನಾ ಬೇರೆ ವೇದಿಕೆಯಲ್ಲಿ ನನ್ನ ಧ್ವನಿ ಎತ್ತುವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

    ಟ್ವಿಟ್ಟರ್ ಮಂದಿ ಅಮೆರಿಕನ್ನರು ಅಂತ ಸಾಬೀತುಪಡಿಸಿದೆ. ಬಿಳಿ ಜನರು ಕಂದು ಬಣ್ಣದವರನ್ನು ಗುಲಾಮರನ್ನಾಗಿ ಮಾಡಿಕೊಂಡು, ನೀವು ಏನು ಮಾಡಬೇಕು, ಏನು ಹೇಳಬೇಕು, ಏನು ಯೋಚಿಸಬೇಕು ಅಂತ ಹೇಳಲು ಇಷ್ಟಪಡುತ್ತಾರೆ. ಸಿನಿಮಾ ರೂಪದಲ್ಲಿ ನನ್ನ ಧ್ವನಿ ಎತ್ತಲು ನನಗೆ ಸಾಕಷ್ಟು ವೇದಿಕೆಯಿದೆ. ಈ ದೇಶದಲ್ಲಿ ಯಾರಿಗೆ ಹಿಂಸೆ, ದೌರ್ಜನ್ಯ ಸಿಕ್ಕಿದೆಯೋ ಅವರಿಗೆ ಗುಲಾಮತನದಲ್ಲಿ ಬದುಕುತ್ತಿರುವವರಿಗೆ ನನ್ನ ಹೃದಯ ಸದಾ ಮಿಡಿಯುತ್ತಿರುತ್ತದೆ ಎಂದು ಕಂಗನಾ ರಣಾವತ್ ಹೇಳಿದ್ದಾರೆ.

     

    View this post on Instagram

     

    A post shared by Kangana Ranaut (@kanganaranaut)

    ಹಿಂಸಾಚಾರಕ್ಕೆ ಪುಷ್ಠಿ ಕೊಡುವ, ಬೇರೆಯವರ ಮೇಲೆ ದೌರ್ಜನ್ಯ ಮಾಡುವ, ಸಾವನ್ನು ಬಯಸುವ, ಆಶಿಸುವ, ಹಾರೈಸುವ ನಡವಳಿಕೆ ಕಂಡು ಬಂದರೆ ಟ್ವಿಟ್ಟರ್ ಆ ಅಕೌಂಟ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಎಂದು ಟ್ವಿಟ್ಟರ್ ವಕ್ತಾರರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಸಮಾಜದಲ್ಲಿ ಸಾಕಷ್ಟು ಘಟನೆಗಳು ನಡೆದಾಗ ಆ ಕುರಿತು ಕಂಗನಾ ಮಾತನಾಡಿದ್ದರು. ಅಷ್ಟೇ ಅಲ್ಲದೆ ತನಿಖೆ ಆಗುವ ಮುಂಚೆ ಶಿಕ್ಷೆಗೆ ಆಗ್ರಹಿಸಿದ್ದರು. ಹೀಗಾಗಿ ಕಂಗನಾ ಅವರ ಅಕೌಂಟ್‍ಅನ್ನು ನಿಷ್ಕ್ರಿಯಗೊಳಿಸಲಾಗಿದೆ. ಇದನ್ನು ಓದಿ: ಕಂಗನಾ ಟ್ವಿಟ್ಟರ್ ಖಾತೆ ಸಸ್ಪೆಂಡ್