Tag: tweet

  • ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು- ಸಿದ್ದುಗೆ ಸಿ.ಟಿ.ರವಿ ಪ್ರಶ್ನೆ

    ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು- ಸಿದ್ದುಗೆ ಸಿ.ಟಿ.ರವಿ ಪ್ರಶ್ನೆ

    ಬೆಂಗಳೂರು: ಹಾನಗಲ್, ಸಿಂದಗಿ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಹಿನ್ನೆಲೆಯಲ್ಲಿ ‘ಕಂಬಳಿ’ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಕುರುಬ ಸಮುದಾಯದ ಸಂಕೇತವಾಗಿರುವ ಕಂಬಳಿ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ನಾಯಕರು ಹಗ್ಗಜಗ್ಗಾಟ ನಡೆಸುತ್ತಿದ್ದಾರೆ.

    C.T.RAVI TWEET

    ಸಮಾವೇಶವೊಂದರಲ್ಲಿ ಕಂಬಳಿಯನ್ನು ಹೊದ್ದುಕೊಂಡು ಸಮುದಾಯಕ್ಕೆ ಭರವಸೆ ನುಡಿಗಳನ್ನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು, ಮುಸಲ್ಮಾನ ಸಮುದಾಯದ ಟೋಪಿ ಹಾಕಿರುವ ಸಿದ್ದರಾಮಯ್ಯ ಅವರ ಫೋಟೊವನ್ನು ಟ್ವಿಟರ್‍ನಲ್ಲಿ ಹಂಚಿಕೊಂಡು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಿಎಂ ಆಗ್ಲೇಬೇಕುಂತ ರಗ್ಗು ಹೊದ್ದು ಮಲಗಿದ್ದ ಸಿದ್ದರಾಮಯ್ಯರನ್ನು ಕರ್ಕೊಂಡು ಬಂದಿದ್ದು ನಾನು: ಹೆಚ್‍ಡಿಕೆ

    siddaramaiah

    “ಕಂಬಳಿ ಹಾಕಲು ಕುರುಬ ಜಾತಿಯವರೆ ಆಗಬೇಕು ಅನ್ನುವ ನಿಮ್ಮ ವಾದದ ಪ್ರಕಾರ ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೇ?” ಎಂದು ಕುಟುಕಿದ್ದಾರೆ.

    ಟೀಕಿಸುವ ಭರದಲ್ಲಿ ಸಿ.ಟಿ.ರವಿ ಅವರು ಕೀಳುಮಟ್ಟದ ಪದ ಬಳಸಿ ವಿವಾದಕ್ಕೆ ಗುರಿಯಾಗಿದ್ದಾರೆ. ಹಾನಗಲ್, ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ಪರಸ್ಪರ ಕೀಳುಮಟ್ಟದ ಭಾಷೆ ಬಳಸಿ ವಾಕ್ಸಮರ ನಡೆಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಪಕ್ಷದಲ್ಲಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕುವವರು ತಾಯಿ ದ್ರೋಹಿಗಳು: ಸಿದ್ದರಾಮಯ್ಯ

  • ಡಿಕೆಶಿ ಸಿಎಂ ಕನಸಿಗೆ ಎಳ್ಳು ನೀರು ಬಿಡಲು ಸಿದ್ದರಾಮಯ್ಯ ಸಿದ್ಧ: ಬಿಜೆಪಿ ವ್ಯಂಗ್ಯ

    ಡಿಕೆಶಿ ಸಿಎಂ ಕನಸಿಗೆ ಎಳ್ಳು ನೀರು ಬಿಡಲು ಸಿದ್ದರಾಮಯ್ಯ ಸಿದ್ಧ: ಬಿಜೆಪಿ ವ್ಯಂಗ್ಯ

    ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರೇ, ಸಿದ್ದರಾಮಯ್ಯ ಮತ್ತೆ ತಮ್ಮ ವರಸೆ ಶುರು ಮಾಡಿದ್ದಾರೆ. ನೀವು ಎಷ್ಟೇ ತಂತ್ರಗಾರಿಕೆ ನಡೆಸಿದರೂ ಪ್ರಯೋಜನವಿಲ್ಲ. ನಿಮ್ಮ ಮುಖ್ಯಮಂತ್ರಿ ಕನಸಿಗೆ ಎಳ್ಳು ನೀರು ಬಿಡಲು ಸಿದ್ದರಾಮಯ್ಯ ಸಿದ್ಧರಾಗಿದ್ದಾರೆ. ನಿಮ್ಮದೀಗ ‘ಬಗಲ್ ಮೆ ದುಷ್ಮನ್ ಪರಿಸ್ಥಿತಿ’ ಎಂದು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.

    ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದರೆ ಹಲವು ಉಚಿತ ಪಡಿತರ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಲಾಗುವುದು ಎಂಬ ಸಿದ್ದರಾಮಯ್ಯ ಆಶ್ವಾಸನೆಗೆ, ಸರಣಿ ಟ್ವೀಟ್ ಮೂಲಕ ಬಿಜೆಪಿ ಟಾಂಗ್ ನೀಡಿದೆ. “ಡಿಕೆಶಿ ಕಾಸು-ಸಿದ್ದರಾಮಯ್ಯ ಬಾಸು” ಎಂಬಂತಾಗಿದೆ ಕರ್ನಾಟಕ ಕಾಂಗ್ರೆಸ್ ಪರಿಸ್ಥಿತಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಏನೇನು ಮಾಡುತ್ತೇವೆ ಎಂದು ಆಶ್ವಾಸನೆ ನೀಡುತ್ತಲೇ ಸಾಗುತ್ತಿರುವ ಸಿದ್ದರಾಮಯ್ಯ, ಪರೋಕ್ಷವಾಗಿ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಡಿಕೆಶಿಯವರದ್ದು ಬರೇ ಕನಸೇ? ಎಂದು ಬಿಜೆಪಿ ಕುಟುಕಿದೆ.

    siddaramaiah

    ಟ್ವೀಟ್‍ನಲ್ಲೇನಿದೆ..?
    ಬಿಜೆಪಿ ಜಾತಿವಾರು ಸಮಾವೇಶಗಳನ್ನು ನಡೆಸಿ ವೋಟುಗಳಿಸಲು ತಂತ್ರ ರೂಪಿಸಿದೆ ಎಂಬ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಅಲ್ಪಸಂಖ್ಯಾತರಿಗೆ 3 ಸಾವಿರ ಕೋಟಿ, ಕಸೂತಿಗೆ 100 ಕೋಟಿ. ಅದಕ್ಕಿಷ್ಟು, ಇದಕ್ಕಿಷ್ಟು, ಸಂಪುಟದಲ್ಲಿ ಇಂತಿಂಥವರೇ ಇರುತ್ತಾರೆ. ಈ ರೀತಿ ಸಿದ್ದರಾಮಯ್ಯ ಸ್ವಯಂ ಘೋಷಣೆ ಮಾಡುತ್ತಲೇ ಇದ್ದಾರೆ. ಅಂದರೆ ತಾವೇ ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ನಿಮ್ಮ ಕಥೆಯೇನು ಡಿಕೆಶಿ ಎಂದು ಪ್ರಶ್ನಿಸಿದೆ.

    ಯಡಿಯೂರಪ್ಪನವರು ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಮಠಾಧೀಶರನ್ನು ಮನೆಗೆ ಕರೆಸಿ ದುಡ್ಡು ಹಂಚಿದರು ಎನ್ನುವ ಮೂಲಕ ಸಿದ್ದರಾಮಯ್ಯ ಮಠಾಧೀಶರಿಗೆ ಅವಮಾನ ಮಾಡಿದ್ದಾರೆ. ಒಂದು ಸಮುದಾಯವನ್ನು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ನಿಂದಿಸುವುದು ಹಾಗೂ ಒಡೆಯುವುದು ಸಿದ್ದರಾಮಯ್ಯ ಅವರಿಗೆ ಚಾಳಿಯಾಗಿಬಿಟ್ಟಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ಸಮ್ಮಿಶ್ರ ಸರ್ಕಾರ ಪತನಗೊಂಡ ರಹಸ್ಯ ಬಿಚ್ಚಿಟ್ಟ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

    ಜಾತಿ ರಹಿತ, ವರ್ಗ ರಹಿತ ಸಮಾಜ ಸ್ಥಾಪನೆಯೇ ಬಿಜೆಪಿಯ ಉದ್ದೇಶ. ಆದರೆ ಹಾಲಿನಂಥ ಸಮಾಜವನ್ನು ಒಡೆಯುವುದು ಜಾತಿವಾದಿ ಸಿದ್ದರಾಮಯ್ಯ ಅವರ ಗುರಿ. ಗಡಿಗೆಯಲ್ಲಿ ತುಂಬಿರುವ ಹಾಲನ್ನು ಕೆಡಿಸುವುದಕ್ಕೆ ಒಂದು ಹನಿ ಹುಳಿ ಸಾಕಲ್ಲವೇ ? ಹಾಗೆಯೇ ಸಮಾಜ ವಿಭಜನೆಗೆ ಸಿದ್ದರಾಮಯ್ಯ ಅವರ ದ್ವೇಷದ ನುಡಿ ಸಾಕು ಎಂದು ಟೀಕಿಸಿದೆ.

    bjp - congress

    ರಾಜಕೀಯ ಏಳಿಗೆಗಾಗಿ ಸಿದ್ದರಾಮಯ್ಯ ಹಿಂದೂ ಧರ್ಮ ಒಡೆಯುವ ಪ್ರಯತ್ನ ನಡೆಸಿದರು. ಲಿಂಗಾಯತ ಪ್ರತ್ಯೇಕ ಧರ್ಮದ ಅಸ್ತ್ರ ಪ್ರಯೋಗಿಸಿ ಎಂ.ಬಿ.ಪಾಟೀಲರನ್ನು ಬಲಿಪಶುವಾಗಿಸಿದರು. ಸಿದ್ದರಾಮಯ್ಯನವರೇ, ವೀರಶೈವ- ಲಿಂಗಾಯಿತ ಸಮುದಾಯ ಬಿಜೆಪಿ ಜೊತೆ ನಿಲ್ಲುವುದನ್ನು ತಡೆಯುವುದಕ್ಕಾಗಿ ಧರ್ಮ ವಿಭಜನೆಗೆ ಮುಂದಾಗಿದ್ದಲ್ಲವೇ?

    ವೀರಶೈವ- ಲಿಂಗಾಯತ ಸಮುದಾಯದ ಸ್ವಾಮೀಜಿಗಳ ಬಗ್ಗೆ ಸಿದ್ದರಾಮಯ್ಯ ಎಂದಾದರೂ ಗೌರವ ವ್ಯಕ್ತಪಡಿಸಿದ ಉದಾಹರಣೆ ಇದೆಯೇ? ಧರ್ಮ ವಿಭಜನೆಯ ಪ್ರಯತ್ನ ಮಾಡುವಾಗ “ಲಿಂಗಾಯತ ಸ್ವಾಮೀಜಿಗಳು ನೀಡಿದ ಮನವಿ” ಪ್ರಕಾರ ಪ್ರತ್ಯೇಕ ಧರ್ಮದ ಪ್ರಸ್ತಾಪವನ್ನು ಕೇಂದ್ರಕ್ಕೆ ಕಳುಹಿಸಿದ್ದೆ ಎಂದು ಜಾರಿಕೊಂಡಿದ್ದು ನೆನಪಿಲ್ಲವೇ ಎಂದು ಪ್ರಶ್ನಿಸಿದೆ.

    ಬೊಮ್ಮಾಯಿ ಜಾತಿಯವರು ಕಂಬಳಿ ನೇಯ್ತಾರಾ? ಕಾಗೇರಿ ಜಾತಿಯವರು ಕುರಿ ಕಾಯ್ತಾರಾ? ಎಂದು ಪ್ರಶ್ನಿಸುವ ಮೂಲಕ ಸಮಾಜವನ್ನು ಯಾವ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದೀರಿ ಸಿದ್ದರಾಮಯ್ಯ? ಹಾಲಿನಂಥ ಸಮಾಜದಲ್ಲಿ ಜಾತಿ ಹುಳಿ ಹಿಂಡಿ ಒಡೆಯುವುದೇ ನಿಮ್ಮ ರಾಜಕೀಯ ಧರ್ಮ. ಸಮಾಜ ಒಟ್ಟಾಗಿದ್ದರೆ ಈ ಮಜವಾದಿಗೆ ಸಂಕಟವಾಗುತ್ತದೆ. ಸಿದ್ದರಾಮಯ್ಯ ಅವರೇ, ವೀರಶೈವ – ಲಿಂಗಾಯತ ಸಮುದಾಯದ ಮೇಲೆ ನಿಮಗೇಕೆ ದ್ವೇಷ? ಹಿಂದೆ ಧರ್ಮ ಒಡೆಯಲು ಹೋಗಿ ಆ ಸಮುದಾಯದ ಭಾವನೆ ಕೆರಳಿಸಿದಿರಿ. ಈಗ ಬೊಮ್ಮಾಯಿ ಜಾತಿಯವರು ಕಂಬಳಿ ನೇಯುತ್ತಾರಾ ಎಂದು ಪ್ರಶ್ನಿಸುವ ಮೂಲಕ ಕಾಯಕ ಧರ್ಮವನ್ನು ಅಪಮಾನ ಮಾಡುತ್ತಿದ್ದೀರಿ. ಇದನ್ನೂ ಓದಿ: ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ: ಬಿಜೆಪಿ ವಾಗ್ದಾಳಿ

    ಸಮಾಜವಾದದ ಹೆಸರಿನಲ್ಲಿ ಜಾತಿವಾದ ನಡೆಸುತ್ತಿರುವ ಸಿದ್ದರಾಮಯ್ಯ ಅವರಿಗೆ ಈಗ ರಾಜ್ಯದ ಯಾವ ಕ್ಷೇತ್ರದಲ್ಲೂ ನೆಲೆಯಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ಚಾಮರಾಜಪೇಟೆಗೆ ವಲಸೆ ಹೋಗಲು ಸಿದ್ದತೆ ನಡೆಸಿರುವ ಸಿದ್ದರಾಮಯ್ಯ ಈಗ ಒಂದು ವರ್ಗದ ಓಲೈಕೆಗಾಗಿ ಹಿಂದೂ ಧರ್ಮದ ಅವಹೇಳನಕ್ಕೆ ಮುಂದಾಗಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದೆ.

  • ಕಾಂಗ್ರೆಸ್ಸಿಗೆ ದ್ರೋಹ ಮಾಡಿರುವ ಸುಧಾಕರ್ ಅಧಿಕಾರದ ಮದದಿಂದ ವರ್ತಿಸ್ತಿದ್ದಾರೆ: ಸಿದ್ದರಾಮಯ್ಯ

    ಕಾಂಗ್ರೆಸ್ಸಿಗೆ ದ್ರೋಹ ಮಾಡಿರುವ ಸುಧಾಕರ್ ಅಧಿಕಾರದ ಮದದಿಂದ ವರ್ತಿಸ್ತಿದ್ದಾರೆ: ಸಿದ್ದರಾಮಯ್ಯ

    ಬೆಂಗಳೂರು: ಕಾಂಗ್ರೆಸ್ಸಿಗೆ ದ್ರೋಹ ಮಾಡಿ ಬಿಜೆಪಿ ಸೇರಿ ಮಂತ್ರಿಯಾಗಿರುವ ಕೆ. ಸುಧಾಕರ್ ಅಧಿಕಾರದ ಮದದಿಂದ ವರ್ತಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

    ಇಂದು ಸರಣಿ ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ಅವರು ಮತ್ತೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಆರ್‍ಎಸ್‍ಎಸ್ ನವರನ್ನು ಹಾಗೂ ಕೇಸರಿ ಕಂಡರೆ ನನಗ್ಯಾಕೆ ಭಯ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಮಾಜಿ ಸಿಎಂ ಟ್ವೀಟ್ ವಾರ್ ಮುಂದುವರಿಸಿದ್ದಾರೆ.

    ಟ್ವೀಟ್‍ನಲ್ಲೇನಿದೆ..?
    ಹಣ, ಅಧಿಕಾರದ ಆಸೆಗೆ ಕಾಂಗ್ರೆಸ್ ಗೆ ದ್ರೋಹ ಮಾಡಿ ಬಿಜೆಪಿ ಪಕ್ಷ ಸೇರಿ ಮಂತ್ರಿಯಾಗಿರುವ ಕೆ ಸುಧಾಕರ್ ಅಧಿಕಾರದ ಮದದಿಂದ ವರ್ತಿಸುತ್ತಿದ್ದಾರೆ. ಈ ಅಧಿಕಾರ ಶಾಶ್ವತವಲ್ಲ. 2023 ಕ್ಕೆ ಚುನಾವಣೆ ಬರುತ್ತೆ, ಯಾರು ಯಾರನ್ನು ಜೈಲಿಗೆ ಕಳಿಸ್ತಾರೆ ಎಂಬುದನ್ನು ನಾವೂ ನೋಡ್ತೀವಿ. ಇದನ್ನೂ ಓದಿ: ಹತಾಶೆ ಹಾಗೂ ಪ್ರಚಾರಕ್ಕಾಗಿ ಕಟೀಲ್ ಟೀಕೆ: ಪ್ರಿಯಾಂಕ್ ಖರ್ಗೆ

    ಉಪ ಚುನಾವಣೆ ಆಗಲೀ, ಸಾರ್ವತ್ರಿಕ ಚುನಾವಣೆಯೇ ಆಗಲಿ ಎಲ್ಲಾ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಗೆಲುವಿಗಾಗಿ ಹೋರಾಟ ಮಾಡುತ್ತೇನೆ. ಕಳೆದ ಉಪಚುನಾವಣೆಯಲ್ಲಿ ಕೂಡ 15 ಕ್ಷೇತ್ರಗಳಲ್ಲಿ ನಿರಂತರ ಪ್ರಚಾರ ಮಾಡಿದ್ದೆ. ನಮ್ಮ ಪಕ್ಷದ ಪ್ರತಿ ಅಭ್ಯರ್ಥಿಯ ಗೆಲುವು ನನಗೆ ಮುಖ್ಯ. ಇದನ್ನೂ ಓದಿ: ಉತ್ತರಾಖಂಡ್ ಮೇಘ ಸ್ಫೋಟ – ಸಾವಿನ ಸಂಖ್ಯೆ 52ಕ್ಕೆ ಏರಿಕೆ 5 ಮಂದಿ ನಾಪತ್ತೆ

    ಬೆಲೆಯೇರಿಕೆ ವಿರುದ್ಧ ಜನರು ತಿರುಗಿ ಬೀಳುವವರೆಗೆ ನಿರಂತರವಾಗಿ ಸರ್ಕಾರಗಳು ಬೆಲೆ ಹೆಚ್ಚು ಮಾಡುತ್ತಲೇ ಇರುತ್ತವೆ. ವಿರೋಧ ಪಕ್ಷವಾಗಿ ನಾವು ಶಕ್ತಿಮೀರಿ ಹೋರಾಟ ಮಾಡುತ್ತಲೇ ಇದ್ದೇವೆ, ಜನ ಬೀದಿಗಿಳಿದಾಗ ಮಾತ್ರ ನಮ್ಮ ಹೋರಾಟಕ್ಕೆ ಬಲ ಬರುವುದು. ಇದನ್ನೂ ಓದಿ: ಭಾರತದ ಐತಿಹಾಸಿಕ ಸಾಧನೆ- ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆ ವಿತರಿಸಲಾಗಿದೆ?

    ಕೇಸರಿ ಕಂಡರೆ, ಆರ್.ಎಸ್.ಎಸ್ ನವರನ್ನು ಕಂಡರೆ ನನಗ್ಯಾಕೆ ಭಯ? ನನಗೆ ಸಮಾಜದ ಬಗ್ಗೆ ಕಾಳಜಿ ಇದೆ. ಸಂಘ ಪರಿವಾರದವರು ಅಶಾಂತಿ ನಿರ್ಮಾಣದ ಮೂಲಕ ಸಮಾಜ ಒಡೆಯುವ ಕೆಲಸ ಮಾಡ್ತಾರೆ ಎಂಬ ಭಯವಿದೆ. ಸೌಹಾರ್ದತೆಗೆ ಧಕ್ಕೆಯಾಗದ ಮನಸಿಗೆ ನೋವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

  • ನಿಮ್ಮ ಹೊಟ್ಟೆಕಿಚ್ಚಿನಿಂದ ಹಾಳಾಗ್ತಿರೋದು ನೀವೇ ಸಿದ್ದರಾಮಯ್ಯ ಅಲ್ಲ – ಹೆಚ್‍ಡಿಕೆ ವಿರುದ್ಧ ಜಮೀರ್ ಗುಡುಗು

    ನಿಮ್ಮ ಹೊಟ್ಟೆಕಿಚ್ಚಿನಿಂದ ಹಾಳಾಗ್ತಿರೋದು ನೀವೇ ಸಿದ್ದರಾಮಯ್ಯ ಅಲ್ಲ – ಹೆಚ್‍ಡಿಕೆ ವಿರುದ್ಧ ಜಮೀರ್ ಗುಡುಗು

    ಬೆಂಗಳೂರು: ಸಿದ್ದರಾಮಯ್ಯ ಅಲ್ಪಸಂಖ್ಯಾತರ ಟರ್ಮಿನೇಟರ್ ಎಂದಿದ್ದ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ವಿರುದ್ಧ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

    ಜಮೀರ್ ಅಹ್ಮದ್ ಖಾನ್ ಅವರು ಟ್ವೀಟ​ರ್‌​ನಲ್ಲಿ, ನಿಜ, ಚಕ್ರ ತಿರುಗುತ್ತಿದೆ. ನಿಮ್ಮ ಒಂದೊಂದೇ ಬಣ್ಣ ಬಯಲಾಗಲು ಆರಂಭವಾಗಿದೆ. ಸಿದ್ದರಾಮಯ್ಯ ಅವರ ಬಗೆಗಿನ ನಿಮ್ಮ ಹೊಟ್ಟೆಕಿಚ್ಚಿನಿಂದ ಹಾಳಾಗುತ್ತಿರೋದು ನೀವೇ ಹೊರತು ಸಿದ್ದರಾಮಯ್ಯ ಅವರಲ್ಲ. “ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು ಕೂಡಲ ಸಂಗಮ ದೇವ” ಆಗಾಗ ಇದನ್ನು ಓದಿ. ಕುಮಾರಸ್ವಾಮಿ ಸಾಧ್ಯವಾದರೆ ಬದಲಾಗಿ ಎಂದು ಬಸವಣ್ಣನ ವಚನದ ಮೂಲಕ ಹೆಚ್‍ಡಿಕೆ ವಿರುದ್ಧ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ. ಇದನ್ನೂ ಓದಿ: ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ – ಸಿದ್ದರಾಮಯ್ಯ ವಿರುದ್ಧ ಹೆಚ್‍ಡಿಕೆ ಟ್ವೀಟ್ ವಾರ್

    ಮತ್ತೊಂದೆಡೆ ಇದೇ ವಿಚಾರವಾಗಿ ಸಿದ್ದರಾಮಯ್ಯ ಅವರು ತಮ್ಮ ಟ್ವೀಟ​ರ್‌​ನಲ್ಲಿ, ಮಹಾತ್ಮ ಗಾಂಧೀಜಿ ಅವರನ್ನು ಹಿಂದೂ ವಿರೋಧಿ ಎನ್ನುತ್ತಿದ್ದ ಹಿಂದೂಗಳು, ದಲಿತ ವಿರೋಧಿ ಎನ್ನುತ್ತಿದ್ದ ದಲಿತರು, ಮುಸ್ಲಿಂ ವಿರೋಧಿ ಎನ್ನುತ್ತಿದ್ದ ಮುಸ್ಲಿಂರು ಇದ್ದರು. ಮಹಾತ್ಮರ ಬೆನ್ನು ಬಿಡದ ಟೀಕಾಕಾರರು, ನನ್ನಂತಹ ಹುಲುಮಾನವರನ್ನು ಬಿಡುತ್ತಾರೆಯೇ? ಸಬ್ ಕೋ ಸನ್ಮತಿ ದೇ ಭಗವಾನ್ ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಮಾತು ವೇದವಾಕ್ಯ ಅಲ್ಲ: ಸಿದ್ದರಾಮಯ್ಯ

    ಮಾಜಿ ಸಿಎಂ ಹೆಚ್‍ಡಿ. ಕುಮಾರಸ್ವಾಮಿ ಅವರು ನಿನ್ನೆ, ಅಲ್ಪಸಂಖ್ಯಾತರ ಕಲ್ಯಾಣದ ಪೇಟೆಂಟ್ ತೆಗೆದುಕೊಂಡಂತೆ ಪೋಸು ಕೊಡುವ ‘ಸಿದ್ದಹಸ್ತ’ ಶೂರನ ನಿಜಬಣ್ಣ ಬಯಲು ಮಾಡುವ ಸಂದರ್ಭ ಬಂದಿದೆ. ಸ್ವಾರ್ಥ, ಸ್ವಜನ ಪಕ್ಷಪಾತ, ತಮ್ಮ ಬೆಂಬಲಿಗರ ರಾಜಕೀಯ ಅಭಿವೃದ್ಧಿಗಾಗಿ ಪಕ್ಷಕ್ಕಾಗಿ ಅಹರ್ನಿಷಿ ದುಡಿದ ಅಲ್ಪಸಂಖ್ಯಾತ ನಾಯಕರನ್ನು ಗುರಿ ಇಟ್ಟು ಮುಗಿಸಲಾಗುತ್ತಿದೆ. ತನ್ನೆಲ್ಲ ಸಿದ್ದಕಲೆ, ಸಿದ್ದಸೂತ್ರಗಳೆನ್ನೆಲ್ಲ ಪೋಣಿಸಿ ‘ಅಹಿಂದ’ ಎಂದು ಜನರನ್ನು ಅಡ್ಡದಾರಿ ಹಿಡಿಸಿದ ‘ಸಿದ್ದಹಸ್ತ ಶೂರರು’ ತಮ್ಮ ಸ್ವಪಕ್ಷದಲ್ಲೇ ಮುಸ್ಲಿಂ ನಾಯಕರನ್ನು ಒಬ್ಬೊಬ್ಬರನ್ನಾಗಿಯೇ ಟಾರ್ಗೆಟ್ ಮಾಡುತ್ತಾ ಅಲ್ಪಸಂಖ್ಯಾತರ ಅಂತ್ಯ ರಾಜಕಾರಣದ ಟರ್ಮಿನೇಟರ್ ಆಗಿ ಹೊರಹೊಮ್ಮಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು.

  • ನಿಮ್ಮಂಥ ‘ಮನೆಮುರುಕರು’ ಏಕವಚನ ಪ್ರಯೋಗವನ್ನೇ ಗ್ರಾಮೀಣ ಸಂಸ್ಕಾರ ಅಂದ್ಕೊಂಡಿದ್ದಾರೆ – ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿ

    ನಿಮ್ಮಂಥ ‘ಮನೆಮುರುಕರು’ ಏಕವಚನ ಪ್ರಯೋಗವನ್ನೇ ಗ್ರಾಮೀಣ ಸಂಸ್ಕಾರ ಅಂದ್ಕೊಂಡಿದ್ದಾರೆ – ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿ

    ಬೆಂಗಳೂರು: ಸಿದ್ದರಾಮಯ್ಯ ಒಬ್ಬ ಮನೆ ಮುರುಕ ಎಂದು ಸರಣಿ ಟ್ವೀಟ್ ಮಾಡುವ ಮೂಲಕ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

    ಹಾನಗಲ್ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಪರ ಪ್ರಚಾರ ನಡೆಸಿ ಭಾಷಣ ಮಾಡಿದ್ದ ಸಿದ್ದರಾಮಯ್ಯ ಅವರು, ‘ಪ್ರಧಾನಿ ಮೋದಿ ವಿರುದ್ಧ ಮಾತಾಡಿದರೆ ದೇಶದ್ರೋಹಿಯಂತೆ, ಯಾವನ್ರಿ ಇವನು ಪ್ರಧಾನ ಮಂತ್ರಿ? ಇಂಥವರೆಲ್ಲ ಪ್ರಧಾನಿ ಆಗೋಕೆ ಲಾಯಕ್ಕೇನ್ರಿ? ನನಗೆ ವೈಯಕ್ತಿಕವಾಗಿ ಯಾರ ಮೇಲೂ ಕೋಪ ಇಲ್ಲ. ಅವರು ಮಾಡ್ತಿರೋದನ್ನು ನೋಡಿ ಕೋಪ ಬರ್ತಿದೆ ಎಂದು ಗುಡುಗಿದ್ದರು.

    ಈ ಕುರಿತಂತೆ ಬಿಜೆಪಿ ತನ್ನ ಅಧಿಕೃತ ಟ್ವೀಟ​ರ್‌​ನಲ್ಲಿ, ಮಾತೆತ್ತಿದರೆ ನಾನು ಹಳ್ಳಿಯವನು ಅಂತೀರ, ನಾನು ಮಾತನಾಡುವ ಶೈಲಿ ಹೀಗೆ ಅಂತೀರಾ, ನಿಮಗೆ ಗ್ರಾಮೀಣ ಸಂಸ್ಕೃತಿಯ ಅರಿವೇ ಇಲ್ಲ. ಅನ್ಯರನ್ನು ಪ್ರೀತಿ, ಬಹುವಚನ, ಆದರದಿಂದ ಮಾತನಾಡುವುದು ಗ್ರಾಮೀಣ ಸಂಸ್ಕೃತಿ. ಆದರೆ ನಿಮ್ಮಂಥ ‘ಮನೆಮುರುಕರು’ ಏಕವಚನ ಪ್ರಯೋಗವನ್ನೇ ಗ್ರಾಮೀಣ ಸಂಸ್ಕಾರ ಎಂದುಕೊಂಡಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಉದಾಸಿ, ಸಜ್ಜನರ್ ಸೇರಿ ಖಾಲಿ ಚೀಲಗಳನ್ನೂ ಬಿಡದಂತೆ ಸಕ್ಕರೆ ಕಾರ್ಖಾನೆ ನುಂಗಿದ್ದಾರೆ: ಸಿದ್ದರಾಮಯ್ಯ

    ನಿರಂತರ 20 ವರ್ಷಗಳಿಂದ ಜನರಿಂದ ಆಯ್ಕೆಯಾಗಿ ಸಾಂವಿಧಾನಿಕ ಹುದ್ದೆಯಲ್ಲಿರುವ ಪ್ರಧಾನಿಯವರ ಕುರಿತು ಏಕವಚನದಲ್ಲಿ ಮಾತನಾಡುವ ಮುನ್ನ ಎಚ್ಚರವಹಿಸಿ. ನಿಮ್ಮ ದುರಹಂಕಾರ, ದಾಷ್ಟ್ರ್ಯಕ್ಕಾಗಿ ಮಾಜಿ ಮುಖ್ಯಮಂತ್ರಿಯೊಬ್ಬರಿಂದ ನಿಮ್ಮ ಸಾಂವಿಧಾನಿಕ ಹುದ್ದೆಯ ಮೇಲೆ ಪ್ರಯೋಗವಾದ ಪದವನ್ನು ಹೇಗೆ ಅರಗಿಸಿಕೊಂಡಿರಿ? ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಾನಗಲ್ ಉಪಚುನಾವಣೆ- ಅಂತಿಮ ಕಣದಲ್ಲಿ 13 ಅಭ್ಯರ್ಥಿಗಳು

    siddaramaia

    ಜನರಿಂದ ನಿರಂತರ ಎರಡನೇ ಅವಧಿಗೆ ಆಯ್ಕೆಯಾದ ಪ್ರಧಾನ ಸೇವಕ ಅಲಂಕರಿಸಿರುವ ಪ್ರಧಾನಿ ಆ ಹುದ್ದೆಯ ಕುರಿತು ಕೀಳು ಮಟ್ಟದಲ್ಲಿ ಮಾತನಾಡಿ ನಿಮ್ಮ ಕೀಳು ಸಂಸ್ಕಾರ ಅನಾವರಣ ಮಾಡಿಕೊಂಡಿದ್ದೀರಿ. ಸರ್ಕಾರಿ ಬಂಗಲೆಯಲ್ಲೇ ಉಳಿಯಬೇಕೆಂಬ ಹಟಕ್ಕೆ ಪ್ರತಿಪಕ್ಷ ಸ್ಥಾನ ಪಟ್ಟು ಹಿಡಿದು ಉಳಿಸಿಕೊಂಡ ನಿಮ್ಮಂತವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ಪ್ರಶ್ನಿಸುವ ಮೂಲಕ ಕೆಂಡಕಾರಿದ್ದಾರೆ. ಇದನ್ನೂ ಓದಿ: ಗಾಂಧಿಯನ್ನೇ ಟೀಕಾಕಾರರು ಬಿಡ್ಲಿಲ್ಲ, ನನ್ನಂತ ಹುಲು ಮಾನವನನ್ನು ಬಿಡ್ತಾರಾ? – ಹೆಚ್‍ಡಿಕೆ ವಿರುದ್ಧ ಸಿದ್ದರಾಮಯ್ಯ ಟ್ವೀಟ್

    ಅಪ್ಪ, ಅಜ್ಜಿ, ಮುತ್ತಾತ ಪ್ರಧಾನಿಯಾಗಿದ್ದರೆಂಬ ಕಾರಣಕ್ಕೆ ತಾನು ಪ್ರಧಾನಿಯಾಗಬೇಕೆಂದು ಓರ್ವ “ಹೆಬ್ಬೆಟ್ಟು” ಗಿರಾಕಿ ಕನಸು ಕಾಣುತ್ತಿದ್ದಾನೆ. ಸಿದ್ದರಾಮಯ್ಯನವರೇ, ಆತನ ಯೋಗ್ಯತೆ, ಅರ್ಹತೆ ಏನು ಎಂದು ವಿಚಾರಿಸಿ. ನಿಮ್ಮ ಶಾಶ್ವತ ಪ್ರಧಾನಿ ಅಭ್ಯರ್ಥಿಯ ಬಗ್ಗೆಯೂ ಹೀಗೇ ಮಾತನಾಡುತ್ತೀರಾ ನೀವು? ರಾಹುಲ್ ಗಾಂಧಿ ಹೆಸರು ಪ್ರಸ್ತಾಪಿಸಿ ಬಿಜೆಪಿ ತಿರುಗೇಟು ನೀಡಿದೆ. ಇದನ್ನೂ ಓದಿ: ಸಿದ್ದರಾಮಯ್ಯ ನಮ್ಮ ಪಕ್ಷದ ಬಗ್ಗೆ ಮಾತನಾಡುವುದನ್ನು ಮೊದಲು ನಿಲ್ಲಿಸಲಿ: ಎಚ್‍ಡಿಕೆ

  • ಗಾಂಧಿಯನ್ನೇ ಟೀಕಾಕಾರರು ಬಿಡ್ಲಿಲ್ಲ, ನನ್ನಂತ ಹುಲು ಮಾನವನನ್ನು ಬಿಡ್ತಾರಾ? – ಹೆಚ್‍ಡಿಕೆ ವಿರುದ್ಧ ಸಿದ್ದರಾಮಯ್ಯ ಟ್ವೀಟ್

    ಗಾಂಧಿಯನ್ನೇ ಟೀಕಾಕಾರರು ಬಿಡ್ಲಿಲ್ಲ, ನನ್ನಂತ ಹುಲು ಮಾನವನನ್ನು ಬಿಡ್ತಾರಾ? – ಹೆಚ್‍ಡಿಕೆ ವಿರುದ್ಧ ಸಿದ್ದರಾಮಯ್ಯ ಟ್ವೀಟ್

    ಬೆಂಗಳೂರು: ಸಿದ್ದರಾಮಯ್ಯ ಅಲ್ಪಸಂಖ್ಯಾತರ ಟರ್ಮಿನೇಟರ್ ಎಂದಿದ್ದ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ವಿರುದ್ಧ ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

    ಈ ವಿಚಾರವಾಗಿ ಸಿದ್ದರಾಮಯ್ಯ ಅವರು ತಮ್ಮ ಟ್ವೀಟ​ರ್‌​ನಲ್ಲಿ, ಮಹಾತ್ಮ ಗಾಂಧೀಜಿ ಅವರನ್ನು ಹಿಂದೂ ವಿರೋಧಿ ಎನ್ನುತ್ತಿದ್ದ ಹಿಂದೂಗಳು, ದಲಿತ ವಿರೋಧಿ ಎನ್ನುತ್ತಿದ್ದ ದಲಿತರು, ಮುಸ್ಲಿಂ ವಿರೋಧಿ ಎನ್ನುತ್ತಿದ್ದ ಮುಸ್ಲಿಂರು ಇದ್ದರು. ಮಹಾತ್ಮರ ಬೆನ್ನು ಬಿಡದ ಟೀಕಾಕಾರರು, ನನ್ನಂತಹ ಹುಲುಮಾನವರನ್ನು ಬಿಡುತ್ತಾರೆಯೇ? ಸಬ್ ಕೋ ಸನ್ಮತಿ ದೇ ಭಗವಾನ್ ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ – ಸಿದ್ದರಾಮಯ್ಯ ವಿರುದ್ಧ ಹೆಚ್‍ಡಿಕೆ ಟ್ವೀಟ್ ವಾರ್

    ಮಾಜಿ ಸಿಎಂ ಹೆಚ್‍ಡಿ. ಕುಮಾರಸ್ವಾಮಿ ಅವರು ನಿನ್ನೆ, ಅಲ್ಪಸಂಖ್ಯಾತರ ಕಲ್ಯಾಣದ ಪೇಟೆಂಟ್ ತೆಗೆದುಕೊಂಡಂತೆ ಪೋಸು ಕೊಡುವ ‘ಸಿದ್ದಹಸ್ತ’ ಶೂರನ ನಿಜಬಣ್ಣ ಬಯಲು ಮಾಡುವ ಸಂದರ್ಭ ಬಂದಿದೆ. ಸ್ವಾರ್ಥ, ಸ್ವಜನ ಪಕ್ಷಪಾತ, ತಮ್ಮ ಬೆಂಬಲಿಗರ ರಾಜಕೀಯ ಅಭಿವೃದ್ಧಿಗಾಗಿ ಪಕ್ಷಕ್ಕಾಗಿ ಅಹರ್ನಿಷಿ ದುಡಿದ ಅಲ್ಪಸಂಖ್ಯಾತ ನಾಯಕರನ್ನು ಗುರಿ ಇಟ್ಟು ಮುಗಿಸಲಾಗುತ್ತಿದೆ. ತನ್ನೆಲ್ಲ ಸಿದ್ದಕಲೆ, ಸಿದ್ದಸೂತ್ರಗಳೆನ್ನೆಲ್ಲ ಪೋಣಿಸಿ ‘ಅಹಿಂದ’ ಎಂದು ಜನರನ್ನು ಅಡ್ಡದಾರಿ ಹಿಡಿಸಿದ ‘ಸಿದ್ದಹಸ್ತ ಶೂರರು’ ತಮ್ಮ ಸ್ವಪಕ್ಷದಲ್ಲೇ ಮುಸ್ಲಿಂ ನಾಯಕರನ್ನು ಒಬ್ಬೊಬ್ಬರನ್ನಾಗಿಯೇ ಟಾರ್ಗೆಟ್ ಮಾಡುತ್ತಾ ಅಲ್ಪಸಂಖ್ಯಾತರ ಅಂತ್ಯ ರಾಜಕಾರಣದ ಟರ್ಮಿನೇಟರ್ ಆಗಿ ಹೊರಹೊಮ್ಮಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿ: ಕುಮಾರಸ್ವಾಮಿ ಮಾತು ವೇದವಾಕ್ಯ ಅಲ್ಲ: ಸಿದ್ದರಾಮಯ್ಯ

  • ಬಾಂಗ್ಲಾ ದೇಶದಲ್ಲಿ ಇಸ್ಕಾನ್ ದೇವಾಲಯ ಧ್ವಂಸ – ದೇಗುಲದ ಸದಸ್ಯನ ಹತ್ಯೆ

    ಬಾಂಗ್ಲಾ ದೇಶದಲ್ಲಿ ಇಸ್ಕಾನ್ ದೇವಾಲಯ ಧ್ವಂಸ – ದೇಗುಲದ ಸದಸ್ಯನ ಹತ್ಯೆ

    ಢಾಕಾ: ಬಾಂಗ್ಲಾ ದೇಶದ ನೋಖಾಲಿ ಪ್ರದೇಶದಲ್ಲಿರುವ ಇಸ್ಕಾನ್ ದೇವಾಲಯವನ್ನು ಗುಂಪೊಂದು ಧ್ವಂಸಗೊಳಿಸಿ ದೇಗುಲದ ಸದಸ್ಯನ ಹತ್ಯೆ ಮಾಡಿದ್ದಾರೆ.

     ISKCON

    ಶುಕ್ರವಾರ ರಾತ್ರಿ ಈ ದಾಳಿಯನ್ನು ಉಗ್ರರ ಗುಂಪು ನಡೆಸಿದೆ ಎಂದು ಇಸ್ಕಾನ್ ಆರೋಪಿಸಿದೆ. ಘಟನೆಯಲ್ಲಿ 200ಕ್ಕೂ ಹೆಚ್ಚು ಜನರಿದ್ದ ಗುಂಪು ಇಸ್ಕಾನ್ ಸದಸ್ಯ ಪಾರ್ಥದಾಸ್‍ರನ್ನು ಕೊಂದಿದ್ದಾರೆ  ಮತ್ತು ಅವರ ಮೃತದೇಹ ದೇವಾಲಯದ ಪಕ್ಕದಲ್ಲಿರುವ ಕೊಳದಲ್ಲಿ ಪತ್ತೆಯಾಗಿದೆ ಎಂದು ದೇವಾಲಯದ ಅಧಿಕಾರಿಗಳು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ವಿತರಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸೂರಪ್ಪ ಬಾಬು

     ISKCON

    ಧ್ವಂಸಗೊಂಡಿರುವ ದೇವಾಲಯದ ಫೋಟೋವನ್ನು ಇಸ್ಕಾನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇಸ್ಕಾನ್ ದೇವಸ್ಥಾನ ಮತ್ತು ಭಕ್ತರು ಇಂದು ಬಾಂಗ್ಲಾದೇಶದ ನೋಖಾಲಿಯಲ್ಲಿ ಒಂದು ಗುಂಪಿನಿಂದ ಹಿಂಸಾತ್ಮಕವಾಗಿ ದಾಳಿಗೊಳಗಾದರು. ದೇವಸ್ಥಾನವು ಗಮನಾರ್ಹ ಹಾನಿಯನ್ನು ಅನುಭವಿಸಿದೆ ಮತ್ತು ಭಕ್ತರ ಸ್ಥಿತಿ ಗಂಭೀರವಾಗಿದೆ. ಎಲ್ಲಾ ಹಿಂದೂಗಳ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಅಪರಾಧಿಗಳನ್ನು ಶಿಕ್ಷಿಸಲು ನಾವು ಬಾಂಗ್ಲಾದೇಶ ಸರ್ಕಾರವನ್ನು ಕೋರುತ್ತೇವೆ ಎಂದು ಟ್ವೀಟ್ ಮಾಡಿದೆ.  ಇದನ್ನೂ ಓದಿ: ಬರ್ತ್‍ಡೇ ಪಾರ್ಟಿಯಲ್ಲಿ ವೈದ್ಯೆ ಮೇಲೆ ಸಹೋದ್ಯೋಗಿಯಿಂದ ಅತ್ಯಾಚಾರ

    ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ, ಇತ್ತೀಚೆಗಷ್ಟೇ ದುರ್ಗಾ ಪೂಜೆ ವೇಳೆ ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿದವರನ್ನು ಆದಷ್ಟು ಬೇಗ ಪತ್ತೆ ಮಾಡಿ ಬಂಧಿಸುವುದಾಗಿ ಹಿಂದೂ ಸಮುದಾಯಕ್ಕೆ ಭರವಸೆ ನೀಡಿದ್ದರು, ಇದಾದ ಕೆಲವು ಗಂಟೆಗಳಲ್ಲಿಯೇ ಇಸ್ಕಾನ್ ದೇವಾಲಯದ ಮೇಲೆ ದಾಳಿ ನಡೆದಿದೆ.

    ಕೊಮಿಲ್ಲಾದ ಪೂಜಾ ಸ್ಥಳದಲ್ಲಿ ಪವಿತ್ರ ಕುರಾನ್ ಅನ್ನು ಅಪವಿತ್ರಗೊಳಿಸಿದ ಆರೋಪದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆದ ನಂತರ ಬುಧವಾರ ಕೊಮಿಲ್ಲಾದಲ್ಲಿ ಸ್ಥಳೀಯರ ಒಂದು ಬಣದ ನಡುವೆ ಉದ್ವಿಗ್ನತೆ ಉಂಟಾಯಿತು.

    ಇದೇ ರೀತಿಯ ಘಟನೆಗಳು ಬುಧವಾರ ಮತ್ತು ಗುರುವಾರ ಸುಮಾರು 22 ಜಿಲ್ಲೆಗಳ ದೇವಾಲಯಗಳ ಮೇಲೆ ಅಪರಿಚಿತರು ದಾಳಿ ನಡೆಸಿ, ದೇಗುಲಗಳನ್ನು ಧ್ವಂಸಗೊಳಿಸಿದ್ದರು. ದುರ್ಗಾ ದೇವಿಯ ದೇವಸ್ಥಾನದಲ್ಲಿ ಹಿಂಸಾಚಾರ ನಡೆದ ಬಳಿಕ ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಟ್ಟಿದ್ದರು. ಇದೇ ವೇಳೆ ಬಾಂಗ್ಲಾದೇಶದ ಚಂದ್ ಪುರದ ಹಜಿಗಂಜ್, ಚತ್ತೋಗ್ರಾಂನ ಬಾಂಶ್ ಖಲಿ ಮತ್ತು ಕಾಕ್ಸ್ ಬಜಾರ್‍ನ ಪೆಕುವಾದಲ್ಲಿ ಕೂಡ ಹಿಂದೂ ದೇವಾಲಯಗಳಲ್ಲಿ ದಾಂಧಲೆ ಎಬ್ಬಿಸಿರುವ ಘಟನೆ ವರದಿಯಾಗಿದೆ.

  • ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ – ಸಿದ್ದರಾಮಯ್ಯ ವಿರುದ್ಧ ಹೆಚ್‍ಡಿಕೆ ಟ್ವೀಟ್ ವಾರ್

    ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ – ಸಿದ್ದರಾಮಯ್ಯ ವಿರುದ್ಧ ಹೆಚ್‍ಡಿಕೆ ಟ್ವೀಟ್ ವಾರ್

    – ಅಲ್ಪಸಂಖ್ಯಾತರ ಕಲ್ಯಾಣದ ಪೇಟೆಂಟ್ ತೆಗೆದುಕೊಂಡಂತೆ ಪೋಸು
    – ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ ಸಿದ್ದಹಸ್ತ ಸೂತ್ರಧಾರಿ
    – ತೊಟ್ಟಿಲನ್ನೂ ತೂಗಿ, ಮಗು ಚಿವುಟುತ್ತಾ, ಕತ್ತು ಕುಯ್ಯುವ ರಾಜಕಾರಣ
    – ಸಿದ್ದಹಸ್ತರೇ ನಿಮಗೆ ಪಾಠ ಕಲಿಸುವ ಜನತಾಪರ್ವ ಆರಂಭವಾಗಿದೆ

    ಬೆಂಗಳೂರು: ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ವಾರ್ ಮುಂದುವರಿಸಿದ್ದಾರೆ. ಅಲ್ಪಸಂಖ್ಯಾತರಿಗೆ ಸಿದ್ದರಾಮಯ್ಯ, ಕಾಂಗ್ರೆಸ್ ಮೋಸ ಮಾಡುತ್ತಿದೆ ಎಂದು ಎಚ್‍ಡಿಕೆ ಸರಣಿ ಟ್ವೀಟ್ ಮೂಲಕ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಅಲ್ಪಸಂಖ್ಯಾತರ ಕಲ್ಯಾಣದ ಪೇಟೆಂಟ್ ತೆಗೆದುಕೊಂಡಂತೆ ಪೋಸು ಕೊಡುವ ‘ಸಿದ್ದಹಸ್ತ’ ಶೂರನ ನಿಜಬಣ್ಣ ಬಯಲು ಮಾಡುವ ಸಂದರ್ಭ ಬಂದಿದೆ. ಸ್ವಾರ್ಥ, ಸ್ವಜನ ಪಕ್ಷಪಾತ, ತಮ್ಮ ಬೆಂಬಲಿಗರ ರಾಜಕೀಯ ಅಭಿವೃದ್ಧಿಗಾಗಿ ಪಕ್ಷಕ್ಕಾಗಿ ಅಹರ್ನಿಷಿ ದುಡಿದ ಅಲ್ಪಸಂಖ್ಯಾತ ನಾಯಕರನ್ನು ಗುರಿ ಇಟ್ಟು ಮುಗಿಸಲಾಗುತ್ತಿದೆ. ತನ್ನೆಲ್ಲ ಸಿದ್ದಕಲೆ, ಸಿದ್ದಸೂತ್ರಗಳೆನ್ನೆಲ್ಲ ಪೋಣಿಸಿ ‘ಅಹಿಂದ’ ಎಂದು ಜನರನ್ನು ಅಡ್ಡದಾರಿ ಹಿಡಿಸಿದ ‘ಸಿದ್ದಹಸ್ತ ಶೂರರು’ ತಮ್ಮ ಸ್ವಪಕ್ಷದಲ್ಲೇ ಮುಸ್ಲೀಂ ನಾಯಕರನ್ನು ಒಬ್ಬೊಬ್ಬರನ್ನಾಗಿಯೇ ಟಾರ್ಗೆಟ್ ಮಾಡುತ್ತಾ ಅಲ್ಪಸಂಖ್ಯಾತರ ಅಂತ್ಯ ರಾಜಕಾರಣದ ಟರ್ಮಿನೇಟರ್ ಆಗಿ ಹೊರಹೊಮ್ಮಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ವಿತರಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸೂರಪ್ಪ ಬಾಬು

    ನಂಬಿ ಅಧಿಕಾರ ಕೊಟ್ಟ ಪಕ್ಷದ ಕತ್ತನ್ನೇ ಕುಯ್ಯುವ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ ಸಿದ್ದಹಸ್ತ ಸೂತ್ರಧಾರಿಯ ಒಳ ರಾಜಕೀಯಕ್ಕೆ ಬಲಿಯಾಗುತ್ತಿರುವ ಅಲ್ಪಸಂಖ್ಯಾತ ನಾಯಕರ ದೊಡ್ಡ ಪಟ್ಟಿಯೇ ಇದೆ. ಕಾಂಗ್ರೆಸ್‍ನಲ್ಲಿ ನಡೆದಿರುವ ಅಲ್ಪಸಂಖ್ಯಾತ ನಾಯಕರ ರಾಜಕೀಯ ನರಮೇಧಕ್ಕೆ ಯಾರು ಕಾರಣ ಎಂದು ಜನರಿಗೆ ಗೊತ್ತಾಗಲಿ. 2012ರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹಮದ್ ಸರಡಗಿ ಸೋಲುತ್ತಾರೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ಭೈರತಿ ಸುರೇಶ್ ತಮ್ಮ ಗೆಲುವಿಗೆ ಬೇಕಿದ್ದ 19 ಮತ ಮೀರಿ 23 ಮತ ಪಡೆದು ಗೆಲ್ಲುತ್ತಾರೆ. ಇಲ್ಲಿ ಸರಡಗಿ ಸೋಲಿಗೆ, ಬೈರತಿ ಸುರೇಶ್ ಗೆಲುವಿಗೆ ಕಾರಣವಾದ ಸಿದ್ದಸೂತ್ರ ಹಣೆದಿದ್ದು ಯಾರು? ಎಂದು ಕ್ರಾಂಂಗ್ರೆಸ್ ಪಕ್ಷವನ್ನು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಹಬ್ಬದಂದು ಹಳೆಯ ಫೋಟೋ ಹಂಚಿಕೊಂಡ ರಮ್ಯಾ- ಅಭಿಮಾನಿಗಳು ಹೇಳಿದ್ದೇನು?

    ಈ ಸಿದ್ದಹಸ್ತರ ಸಿದ್ದಸೂತ್ರ ಅಲ್ಲಿಗೇ ನಿಲ್ಲುವುದಿಲ್ಲ. 2016ರಲ್ಲಿ ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹಿರಿಯ ನಾಯಕ ಸಿ.ಕೆ.ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ ಅವರಿಗೆ ಅಧಿಕೃತ ಟಿಕೆಟ್ ಕೊಡುತ್ತದೆ. ಆಗ ಭೈರತಿ ಸುರೇಶ್ ಪರ ಲಾಬಿ ಮಾಡಿದ್ದ ಸಿದ್ಧಕಲೆ ಸೂತ್ರಧಾರರು, ಅವರನ್ನೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಒಳಸುಳಿ ಸೃಷ್ಟಿಸಿ ಷರೀಫರ ಮೊಮ್ಮಗನನ್ನು ಸೋಲಿಸುತ್ತಾರೆ. 2023ರ ಚುನಾವಣೆಯಲ್ಲಿ ಭೈರತಿ ಸುರೇಶ್‍ಗೇ ಹೆಬ್ಬಾಳದ ಕಾಂಗ್ರೆಸ್ ಟಿಕೆಟ್ ಗ್ಯಾರಂಟಿ. ಹಾಗಾದರೆ ಜಾಫರ್ ಷರೀಫರ ಮೊಮ್ಮಗನ ಕಥೆ ಏನು? ಎಂದು ಕಾಂಗ್ರೆಸ್‍ಗೆ ಪ್ರಶ್ನೆಗಳ ಬಾಣವನ್ನು ಬಿಟ್ಟಿದ್ದಾರೆ.

    ಕಳೆದ ಲೋಕಸಭೆ ಚುನಾವಣೆ ನಂತರ ತಮಗೆ ಆಗುತ್ತಿರುವ ಅನ್ಯಾಯ ಪ್ರಶ್ನಿಸಿದ ರೋಷನ್ ಬೇಗ್‍ಗೆ ಶೋಕಾಸ್ ನೊಟೀಸ್ ನೀಡಿ, ತಮ್ಮನ್ನು ಬಹಿರಂಗವಾಗಿ ಪ್ರಶ್ನಿಸಿದರು ಎಂಬ ಕಾರಣಕ್ಕೆ ಅವರನ್ನು ಬೇಕಾಬಿಟ್ಟಿ ನಡೆಸಿಕೊಂಡು ಅಪಮಾನ ಮಾಡುತ್ತಾರೆ ಸಿದ್ದಹಸ್ತರು. ಕೊನೆಗೆ ರೋಷನ್ ಬೇಗ್ ಕಾಂಗ್ರೆಸ್ ಪಕ್ಷದಿಂದಲೇ ದೂರವಾಗುತ್ತಾರೆ. ಮೈಸೂರಿನ ಹಿರಿಯ ನಾಯಕ ತನ್ವೀರ್ ಸೇಠ್ ಅವರನ್ನು ಅಪಮಾನಕರವಾಗಿ ನಡೆಸಿಕೊಂಡಿದ್ದು ಇದೇ ಸಿದ್ದಹಸ್ತರು. ಅಲ್ಲಿನ ಪಾಲಿಕೆಯಲ್ಲಿ ಜಾತ್ಯತೀತ ಶಕ್ತಿಗಳನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸಿದ ತನ್ವೀರ್ ಮೇಲೆ ಕೂಗಾಡಿದ ಸಿದ್ದಸೂತ್ರ ಪ್ರವೀಣರು, ಇನ್ನಿಲ್ಲದ ಅಪಮಾನ ಮಾಡಿ ನಿಂದಿಸುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನವದುರ್ಗೆಯರ ವಿಸರ್ಜನಾ ಕಾರ್ಯಕ್ರಮದೊಂದಿಗೆ ಮಂಗಳೂರು ದಸರಾಕ್ಕೆ ತೆರೆ

    ಈಗ ಆಡಿಯೋ ನೆಪದಲ್ಲಿ ಸಲೀಂ ಮೊಹಮದ್ ಬಲಿ ಪಡೆದಾಗಿದೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟು ದೊಡ್ಡವರ ರಕ್ಷಣೆ ಮಾಡಲಾಗಿದೆ. ಸಲೀಂ ಹೇಳಿದ್ದೆಲ್ಲವನ್ನೂ ಕೇಳಿಕೊಂಡು ರಸಸ್ವಾದ ಮಾಡಿ ಪುಕ್ಕಟೆ ಮನರಂಜನೆ ಪಡೆದ ವ್ಯಕ್ತಿಗೆ ರಕ್ಷಣೆ ನೀಡಿ ಓರ್ವ ಅಲ್ಪಸಂಖ್ಯಾತ ನಾಯಕನನ್ನು 6 ವರ್ಷ ಉಚ್ಚಾಟಿಸಲಾಗಿದೆ. ಇದು ಯಾವ ಸೀಮೆ ನ್ಯಾಯ? ಅಲ್ಪಸಂಖ್ಯಾತರ ಕಲ್ಯಾಣ ಎಂದರೆ ಇದೇನಾ ಸಿದ್ದಹಸ್ತರೇ? ತೊಟ್ಟಿಲನ್ನೂ ತೂಗುತ್ತಾ, ಮಗುವನ್ನೂ ಚಿವುಟುತ್ತಾ, ಸಾಧ್ಯವಾದರೆ ಆ ಮಗುವಿನ ಕತ್ತನ್ನೂ ಕುಯ್ಯುತ್ತಾ ನಡೆಸುತ್ತಿರುವ ಇಂಥ ನೀಚ ರಾಜರಾರಣ, ಮುಸ್ಲೀಂ ಬಾಂಧವರಿಗೆ ಈಗ ಗೊತ್ತಾಗಿಬಿಟ್ಟಿದೆ ಎಂದು ಕಾಂಗ್ರೆಸ್ ನಡೆ ಕುರಿತಾಗಿ ಮಾತನಾಡಿ ಆಕ್ರೋಶ ಹೊರಹಾಕಿದ್ದಾರೆ.

    ಇಕ್ಬಾಲ್ ಸರಡಗಿ ಅವರನ್ನು ಸೋಲಿಸಿದಿರಿ, ಜಾಫರ್ ಷರೀಫರ ಮೊಮ್ಮಗನನ್ನು ಮುಗಿಸಿದಿರಿ, ರೋಷನ್ ಬೇಗ್ ವಿರುದ್ಧ ರೋಷ ತೀರಿಸಿಕೊಂಡಿರಿ, ತನ್ವೀರ್ ಸೇಠ್ ಮೇಲೆ ಹಗೆ ಸಾಧಿಸಿದಿರಿ, ಇನ್ನೊಬ್ಬರ ಮೇಲಿನ ಸೇಡನ್ನು ಬಡಪಾಯಿ ಸಲೀಂ ಮೇಲೆ ತಿರುಗಿಸಿ ಒಂದೇ ಕಲ್ಲಿನಲ್ಲಿ 2 ಹಕ್ಕಿ ಹೊಡೆದು ಕಿರಾತಕ ರಾಜಕಾರಣ ಮಾಡಿದಿರಿ. ಚಕ್ರ ತಿರುಗುತ್ತಿದೆ, ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ. ಅಲ್ಪಸಂಖ್ಯಾತ ಬಾಂಧವರಿಗೆ ನಿಮ್ಮ ನಿಜಬಣ್ಣ ಗೊತ್ತಾಗಿದೆ. ಸಿದ್ದಹಸ್ತರೇ ನಿಮಗೆ ಪಾಠ ಕಲಿಸುವ ಜನತಾಪರ್ವ ಈಗಷ್ಟೇ ಆರಂಭವಾಗಿದೆ. ಕಾದು ನೋಡಿ ಎಂದು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.

  • ನಾಳೆ ಕೋಟಿಗೊಬ್ಬ-3 ಸಿನಿಮಾ ರಿಲೀಸ್

    ನಾಳೆ ಕೋಟಿಗೊಬ್ಬ-3 ಸಿನಿಮಾ ರಿಲೀಸ್

    ಬೆಂಗಳೂರು: ಕಾರಣಾಂತರಗಳಿಂದ ರದ್ದುಗೊಳಿಸಲಾಗಿದ್ದ ಕಿಚ್ಚ ಸುದಿಪ್ ಅಭಿನಯದ ಬಹು ನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆಕಾಣಲಿದೆ.

    2 ವರ್ಷಗಳ ನಂತರ ಸ್ಕ್ರೀನ್ ಮೇಲೆ ಕಿಚ್ಚನನ್ನು ನೋಡಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದ್ದು, ಹಲವಾರು ಚಿತ್ರಮಂದಿರ ಬಳಿ ಜಮಾಯಿಸಿದ್ದ ಅಭಿಮಾನಿಗಳು ಸಿನಿಮಾ ವೀಕ್ಷಿಸಲು ಆಗದೇ ಗಲಾಟೆ ಮಾಡಲು ಶುರುಮಾಡಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಕಿಚ್ಚ ಟ್ವೀಟ್ ಮಾಡುವ ಮೂಲಕ ಶಾಂತಿಯನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.  ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿಳಂಬ- ಅಭಿಮಾನಿಗಳಲ್ಲಿ ಕಿಚ್ಚ ಕ್ಷಮೆ

    ಈ ವಿಚಾರವಾಗಿ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಕೋಟಿಗೊಬ್ಬ-3 ವೀಕ್ಷಿಸಲು ಚಿತ್ರಮಂದಿರಗಳಿಗೆ ಬಂದಿರುವವರಿಗೆ, ಬರುತ್ತಿರುವವರಿಗೆ, ಚಿತ್ರದ ಪ್ರದರ್ಶನ ತಡವಾಗುತ್ತಿರುವ ಬಗ್ಗೆ ತಿಳಿಸಲು ವಿಷಾದಿಸುತ್ತೇನೆ. ಈ ಸಮಸ್ಯೆಗೆ ಕಾರಣಕರ್ತರಾದವರ ಪರವಾಗಿ ನಾನು ವೈಯಕ್ತಿಕವಾಗಿ ಕ್ಷಮೆ ಯಾಚಿಸುತ್ತೇನೆ. ಇದರಲ್ಲಿ ಚಿತ್ರಮಂದಿರಗಳಿಂದ ಯಾವುದೇ ರೀತಿಯ ತಪ್ಪು ನಡೆದಿಲ್ಲ. ನಾನೂ ಕೂಡ ನನ್ನ ಚಿತ್ರವೊಂದು ಎರಡು ವರ್ಷಗಳ ನಂತರ ಬಿಡುಗಡೆ ಆಗುತ್ತಿರುವ ಬಗ್ಗೆ ನಿಮ್ಮಷ್ಟೇ ಉತ್ಸುಕನಾಗಿದ್ದೆ. ನಿಮ್ಮೆಲ್ಲರ ಪ್ರೀತಿ ಹಾಗೂ ತಾಳ್ಮೆಯೇ ನನ್ನ ಅತಿ ದೊಡ್ಡ ಶಕ್ತಿ. ಆದಷ್ಟು ಬೇಗ ಚಿತ್ರದ ಪ್ರದರ್ಶನದ ಬಗ್ಗೆ ಮಾಹಿತಿ ಕೊಡುತ್ತೇನೆ ಹಾಗೂ ಮುಂದಿನ ನನ್ನ ಚಿತ್ರಗಳಿಗೆ ಹೀಗಾಗದ ಹಾಗೇ ನೋಡಿಕೊಳ್ಳುತ್ತೇನೆ. ಅಲ್ಲಿಯವರೆಗೂ ಯಾವುದೇ ರೀತಿಯ ಹಾನಿಗೆ ಕಾರಣರಾಗದೆ, ಶಾಂತಿಯನ್ನು ಕಾಪಾಡಿಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕಿಚ್ಚನ ಅಭಿಮಾನಿಗಳಲ್ಲಿ ಸೂರಪ್ಪ ಬಾಬು ಕ್ಷಮೆ

    ಕೋಟಿಗೊಬ್ಬ-3 ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ಕಿಚ್ಚ ಧೈರ್ಯ ತುಂಬಿದ್ದು, ಈ ಸಂಬಂಧ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಬಾಬು ಅವರು ಅಪ್ಲೋಡ್ ಮಾಡಿದ ವೀಡಿಯೋ ನಾನು ನೋಡಿದೆ. ನೀವೊಬ್ಬರೇ ಅಲ್ಲ ನಿಮ್ಮ ಜೊತೆ ನಾವಿದ್ದೇವೆ. ಯಾರಿಂದ ತೊಂದರೆ ಆಗಿದೆ, ಯಾರು ಮಾಡಿದ್ದಾರೆ ಅನ್ನೋದು ನಮಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಕಾಲವೇ ಉತ್ತರ ಕೊಡುತ್ತದೆ. ನಾಳೆಯಿಂದ ಪ್ರದರ್ಶನ ಕಾಣುತ್ತದೆ. ಭರ್ಜರಿಯಾಗಿ ಹೋಗುತ್ತದೆ ಅನ್ನೋದ್ರಲ್ಲಿ ಅನುಮಾನ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ನಿಮ್ಮ ಜೊತೆ ನಾವಿದ್ದೇವೆ – ಸೂರಪ್ಪ ಬಾಬುಗೆ ಧೈರ್ಯ ತುಂಬಿದ ಕಿಚ್ಚ

    ರಾಜ್ಯಾದ್ಯಂತ ಇಂದು 300 ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ- 3 ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ತಾಂತ್ರಿಕ ದೋಷದಿಂದ ಶೋ ರದ್ದಾಗಿದ್ದು, ರಾಜ್ಯಾದ್ಯಂತ ಕಿಚ್ಚನ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ತಮ್ಮ ನೆಚ್ಚಿನ ನಟನ ಚಿತ್ರಕ್ಕಾಗಿ ಕಾದು ಕುಳಿತಿದ್ದ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ.

  • ಮನಮೋಹನ್ ಸಿಂಗ್ ಆರೋಗ್ಯ ಚೇತರಿಕೆಗಾಗಿ ಮೋದಿ ಹಾರೈಕೆ

    ಮನಮೋಹನ್ ಸಿಂಗ್ ಆರೋಗ್ಯ ಚೇತರಿಕೆಗಾಗಿ ಮೋದಿ ಹಾರೈಕೆ

    ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದಾರೆ.

    ತೀವ್ರ ಜ್ವರದಿಂದ ಬಳಲುತ್ತಿದ್ದ ಮನಮೋಹನ್ ಸಿಂಗ್ ಅವರನ್ನು ಅಕ್ಟೋಬರ್ 13ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಮನಮೋಹನ್ ಸಿಂಗ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಏಮ್ಸ್ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾದ ಮನಮೋಹನ್ ಸಿಂಗ್

    ಈ ಕುರಿತಂತೆ ನರೇಂದ್ರ ಮೋದಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಮನಮೋಹನ್ ಸಿಂಗ್ ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಮನಮೋಹನ್ ಸಿಂಗ್ ಅವರಿಗೆ ದೇವರು ಉತ್ತಮ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿಳಂಬ- ಅಭಿಮಾನಿಗಳಲ್ಲಿ ಕಿಚ್ಚ ಕ್ಷಮೆ

    ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಲು ಮತ್ತು ಅವರ ಆರೋಗ್ಯ ವಿಚಾರಿಸಲು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಕೂಡ ಗುರುವಾರ ಬೆಳಗ್ಗೆ ಏಮ್ಸ್ ಗೆ ಭೇಟಿ ನೀಡಿದ್ದರು. ಅಲ್ಲದೇ ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಕೂಡ, ಮಾಜಿ ಪ್ರಧಾನಿಯವರು ಶೀಘ್ರವಾಗಿ ಮತ್ತು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.