Tag: TV Show

  • ಜೀ ಕನ್ನಡ ಕಾಮಿಡಿ ಕಿಲಾಡಿಗಳು: ಹೊಸ ರೂಪದೊಂದಿಗೆ ರೆಡಿ

    ಜೀ ಕನ್ನಡ ಕಾಮಿಡಿ ಕಿಲಾಡಿಗಳು: ಹೊಸ ರೂಪದೊಂದಿಗೆ ರೆಡಿ

    ನ್ನ ಹೊಸತನದಿಂದ ಯಾವಾಗಲೂ ವೀಕ್ಷಕರಿಗೆ ಹೊಸತನವನ್ನು ಕೊಟ್ಟು ಮನರಂಜಿಸುವ ಜೀ ಕನ್ನಡ (Zee Kannada) ಈಗ ಎಲ್ಲರ ಅಚ್ಚುಮೆಚ್ಚಿನ ನಾನ್-ಫಿಕ್ಷನ್ ಶೋ ಕಾಮಿಡಿ (Comedy Khiladigalu) ಕಿಲಾಡಿಗಳನ್ನು ಮತ್ತೆ ತಂದಿದೆ. ಇಡೀ ರಾಜ್ಯವನ್ನೇ ನಗಿಸಿದ ಯಶಸ್ವಿ ಸೀಸನ್‌ಗಳನ್ನು ನೀಡಿದ ನಂತರ, ಕಾಮಿಡಿಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ವಾಹಿನಿ ಸಿದ್ಧವಾಗಿದೆ. ಇನ್ನು ಎಲ್ಲರೂ ಕಾತುರತೆಯಿಂದ ಕಾಯುತ್ತಿರುವ ಕಾಮಿಡಿ ಕಿಲಾಡಿಗಳು ಅಕ್ಟೋಬರ್ 25 ರಂದು ರಾತ್ರಿ 9 ಗಂಟೆಗೆ ಶುರುವಾಗಲಿದ್ದು, ಪ್ರತಿ ವಾರಾಂತ್ಯದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

    ತರ್ಲೆ ಮಾತು, ವಿಭಿನ್ನ ನಿರೂಪಣಾ ಶೈಲಿಯಿಂದ ಕನ್ನಡಿಗರ ಮನಗೆದ್ದ ನಿರಂಜನ್ ದೇಶಪಾಂಡೆ ಅವರು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ನಿರೂಪಣಾ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇನ್ನು ಈ ನಗುವಿನ ಪಯಣದ ಸಾರಥಿಗಳಾಗಿ ಅತ್ಯುತ್ತಮ ಸಿನೆಮಾಗಳನ್ನು ನೀಡಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ ಕಾಮಿಡಿ ಕಿಂಗ್ ಜಗ್ಗೇಶ್ ಮತ್ತು ಹೆಸರಾಂತ ನಿರ್ದೇಶಕ ಯೋಗರಾಜ್ ಭಟ್, ಎಲ್ಲರ ಅಚ್ಚುಮೆಚ್ಚಿನ ಹಿರಿಯ ನಟಿ ತಾರಾ ಅನುರಾಧ ಇರಲಿದ್ದಾರೆ. ಒಟ್ಟಾರೆಯಾಗಿ ಇವೆರಲ್ಲರೂ ನಿಮ್ಮ ನಗುವನ್ನು ಡಬಲ್ ಮಾಡೋದರಲ್ಲಿ ಯಾವುದೇ ಸಂದೇಹವಿಲ್ಲ. ಇದನ್ನೂ ಓದಿ: ಮೂರೇ ವಾರಕ್ಕೆ ಕಾಂತಾರ ಚಾಪ್ಟರ್-1 ಹೊಸ ಮೈಲಿಗಲ್ಲು

    ಸತತ 19 ವರ್ಷಗಳಿಂದ ಜೀ ಕನ್ನಡ ವಾಹಿನಿ ಕನ್ನಡಿಗರನ್ನು ಮನರಂಜಿಸುವಲ್ಲಿ ಮುಂಚೂಣಿಯಲ್ಲಿದೆ. ಇದೀಗ ಈ ಪರಂಪರೆಯನ್ನು ಮುಂದುವರೆಸುತ್ತ ಜೀ ಕನ್ನಡ ವಾಹಿನಿ ಪ್ರೇಕ್ಷಕರನ್ನು ನಕ್ಕು ನಗಿಸಲು ‘ಕಾಮಿಡಿ ಕಿಲಾಡಿಗಳು’ ಹೊಚ್ಚ ಹೊಸ ಸೀಸನ್ ಅನ್ನು ತರಲು ಸಜ್ಜಾಗಿದೆ. ಈ ಶೋನಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಪ್ರತಿಭಾನ್ವಿತ ನವಹಾಸ್ಯನಟರು ಪಾಲ್ಗೊಳ್ಳಲಿದ್ದು, ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಲಿದ್ದಾರೆ. ಹಾಸ್ಯಮಯ, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ನೂತನ ಸ್ಕಿಟ್ ಗಳನ್ನೂ ಈ ಪ್ರತಿಭೆಗಳು ಪ್ರದರ್ಶಿಸಲಿದ್ದಾರೆ.

    ಈ ಸೀಸನ್ ನ ಕಾಮಿಡಿ ಕಿಲಾಡಿಗಳು ಕ್ರಿಯೇಟಿವಿಟಿ ಮತ್ತು ಹೊಸತನದ ಪ್ರತಿರೂಪವಾಗಿದೆ. ಇನ್ನು ಪ್ರತಿಸಂಚಿಕೆಯಲ್ಲೂ ಹಾಸ್ಯ, ತರ್ಲೆ, ನಗುವಿನ ಚಟಾಕಿ ಇರಲಿದೆ. ಹೊಸಪ್ರತಿಭೆಗಳು ಕಾಮಿಡಿ ಸ್ಕಿಟ್ ಗಳ ಮೂಲಕ ಕನ್ನಡಿಗರ ಮನಕ್ಕೆ ಲಗ್ಗೆ ಇಡಲು ಸಜ್ಜಾಗಿದ್ದಾರೆ. ಇದೇ ಅಕ್ಟೋಬರ್ 25 ರಿಂದ, ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಶೋ ಪ್ರಸಾರವಾಗಲಿದೆ.

  • BBK 12 | ಬಿಗ್‌ಬಾಸ್ ಸೀಸನ್-12 – ಈ ಸಲ ಕಿಚ್ಚು ಹೆಚ್ಚು!

    BBK 12 | ಬಿಗ್‌ಬಾಸ್ ಸೀಸನ್-12 – ಈ ಸಲ ಕಿಚ್ಚು ಹೆಚ್ಚು!

    ಬಿಗ್‌ಬಾಸ್ ಈಸ್ ಬ್ಯಾಕ್… ಹೌದು ಕನ್ನಡದ ಬಿಗ್‌ಬಾಸ್ (Bigg Boss Kannada) ಮತ್ತೆ ಬರುತ್ತಿದೆ. ಈ ಬಾರಿ ಪ್ರಸಾರವಾಗ್ತಿರುವ ಎಪಿಸೋಡ್ ಸೀಸನ್ 12 ಆಗಿರಲಿದೆ.

    ಅದರಲ್ಲೂ ಕಿಚ್ಚ ಸುದೀಪ್ (Kiccha Sudeep) ನಿರೂಪಣೆಯಲ್ಲೇ ಈ ಬಾರಿಯೂ ಬಿಬಿಕೆ ಮೂಡಿಬರ್ತಿರೋದು ವಿಶೇಷ. ವಿದಾಯ ಹೇಳಿದ್ದ ಕಿಚ್ಚ ಸುದೀಪ್ ತಾವೇ ಒಪ್ಪಿ ಮತ್ತೆ ಬಿಗ್‌ಬಾಸ್ ವೇದಿಕೆಯಲ್ಲಿ ಕಾಣಿಸ್ಕೊಳ್ಳಲು ತಯಾರಿ ಮಾಡ್ಕೊಂಡಿದ್ದಾರೆ. ಯಾವಾಗ ಶುರುವಾಗುತ್ತೆ? ಇದನ್ನೂ ಓದಿ: ದರ್ಶನ್ ಮತ್ತೆ ಜೈಲಿಗೆ; ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದ ನಟಿ ಉಮಾಶ್ರೀ

    ಈ ಬಾರಿ ಯಾವ ಬದಲಾವಣೆಯೊಂದಿಗೆ ಬರುತ್ತಿದೆ? ಎಲ್ಲಾ ಪ್ರಶ್ನೆಗಳಿಗೂ ಕೆಲವೇ ದಿನಗಳಲ್ಲಿ ಉತ್ತರ ಸಿಗೋದಂತೂ ಗ್ಯಾರಂಟಿ. ಏಕೆಂದರೆ ಇದೀಗ ಅಧಿಕೃತ ಫಸ್ಟ್ ಲುಕ್ ಪ್ರೋಮೋ (Bigg Boss Promo) ರಿಲೀಸ್ ಆಗಿದೆ. ಈ ಬಾರಿಯ ಲೋಗೋ ಕೂಡ ತುಂಬಾ ಸ್ಪೆಷಲ್‌ ಆಗಿದೆ. ಇದನ್ನೂ ಓದಿ: ದುನಿಯಾ ವಿಜಯ್ ಜೊತೆಯಾದ ಡೇರ್ ಡೆವಿಲ್ ಹೀರೋ

    ರಿಯಾಲಿಟಿ ಶೋಗಳ ರಾಜಾ ಎಂದು ಕರೆಸಿಕೊಳ್ಳುವ ಬಿಗ್‌ಬಾಸ್ ಶೋ ಈ ಸಪ್ಟೆಂಬರ್ ಕೊನೆಯ ವಾರದಿಂದ ಪ್ರಾರಂಭವಾಗುವ ಸಾಧ್ಯತೆ ಇದೆ. ಸೀಸನ್ 12ರ ಫಸ್ಟ್ ಲುಕ್ ಪ್ರೋಮೋ ವಿಶೇಷ ರೀತಿಯಲ್ಲಿ ಡಿಸೈನ್ ಮಾಡಲಾಗಿದೆ. ಆದರೆ ಗಮನ ಸೆಳೆದಿದ್ದು ಅಡಿಬರಹ, ಈ ಸಲ ಕಿಚ್ಚು ಹೆಚ್ಚು ಎಂದು ಹೇಳುವ ಮೂಲಕ ಜಬರ್ದಸ್ತ್ ಕಂಟೆಸ್ಟಂಟ್‌ಗಳನ್ನ ಮನೆಯೊಳಗೆ ಕಳಿಸುವ ಸುಳಿವು ನೀಡಿದೆ ಬಿಗ್‌ಬಾಸ್ ಟೀಮ್. ಇದೇ ಕಿಚ್ಚು ಹೆಚ್ಚು ಅನ್ನೋದ್ರ ಸೂಚನೆ ಆಗಿರಬಹುದು.

    ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಇದೀಗ ಕಂಟೆಸ್ಟಂಟ್‌ಗಳ ಆಯ್ಕೆಯ ಫಸ್ಟ್ ಲಿಸ್ಟ್ ಸಿದ್ಧವಾಗಿದ್ದು, ಕಿಚ್ಚ ಸುದೀಪ್ ಪ್ರೋಮೋ ಶೂಟ್‌ನಲ್ಲಿ ಶೀಘ್ರದಲ್ಲೇ ಭಾಗಿಯಾಗ್ತಾರೆ. ಬಿಗ್ ಹೌಸ್ ಕೂಡ ವಿನೂತನವಾಗಿ ಆಲ್ಟ್ರೇಷನ್‌ ಆಗ್ತಿದೆ. ಬಿಗ್ ಮನೆಯಲ್ಲಿ ಕಿಚ್ಚು ಹಚ್ಚಲು ಯಾರೆಲ್ಲಾ ಬರ್ತಾರೆ ಅನ್ನೋದ್ರ ಸುಳಿವು ಹಂತ ಹಂತವಾಗಿ ಸಿಗಲಿದೆ. ಇದನ್ನೂ ಓದಿ: ದರ್ಶನ್ ಜೈಲಿಗೆ ಹೋಗಿದ್ದು ಬೇಸರ ತಂದಿದೆ, ಅಕ್ಕಪಕ್ಕದವ್ರ ಸಹವಾಸ ಬಿಡ್ಬೇಕು – ರಮ್ಯಾ ಸಾಫ್ಟ್ ಕಾರ್ನರ್

  • ಜೋಗಿ ನಿರ್ಮಾಪಕರಿಂದ ಮತ್ತೊಂದು ಹೊಸ ಸಾಹಸದ ಸಂಕಲ್ಪ

    ಜೋಗಿ ನಿರ್ಮಾಪಕರಿಂದ ಮತ್ತೊಂದು ಹೊಸ ಸಾಹಸದ ಸಂಕಲ್ಪ

    ಳೆದ 40 ವರ್ಷಗಳಿಂದ ಅಶ್ವಿನಿ ಆಡಿಯೋ ಕಂಪನಿ ನಡೆಸಿಕೊಂಡು ಬರುತ್ತಿರುವ ಅಶ್ವಿನಿ ರಾಮಪ್ರಸಾದ್ (Ashwini Ramprasad) ಅವರೀಗ ಕಿರುತೆರೆ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿದ್ದಾರೆ.

    ದಶಕಗಳ ಹಿಂದೆ ಸಾವಿರಾರು ಜಾನಪದ, ಭಕ್ತಿಗೀತೆಗಳನ್ನು ತಮ್ಮ ಆಡಿಯೋ ಕಂಪನಿ ಮೂಲಕ ಜನರಿಗೆ ಕೇಳಿಸಿದ ರಾಮ್ ಪ್ರಸಾದ್ ಅವರಿಗೆ ಮೊದಲಿಂದಲೂ ಕಿರುತೆರೆ ಬಗ್ಗೆ ಆಸಕ್ತಿಯಿತ್ತು. ಆದಕ್ಕೆ ಸುವರ್ಣ ವಾಹಿನಿ (Star Suvarna) ಒಂದು ವೇದಿಕೆ ಕಲ್ಪಿಸಿಕೊಟ್ಟಿದೆ. ಇದನ್ನೂ ಓದಿ: ನಟಿ ಭಾವನಾ ರಾಮಣ್ಣ ಸೀಮಂತ ಶಾಸ್ತ್ರ

    ಶಿವಣ್ಣ, ಪ್ರೇಮ್ ಕಾಂಬಿನೇಶನ್‌ನ ಜೋಗಿ ಚಿತ್ರ ನಿರ್ಮಿಸುವ ಮೂಲಕ ದಾಖಲೆ ಬರೆದ ಅಶ್ವಿನಿ ರಾಮ್ ಪ್ರಸಾದ್ ಅನಂತರವೂ ಹಲವಾರು ಯಶಸ್ವಿ ಚಲನಚಿತ್ರಗಳನ್ನು ನಿರ್ಮಿಸಿದ್ದರು. ಅಲ್ಲದೆ ಘಾರ್ಗ ಚಿತ್ರದ ಮೂಲಕ ತಮ್ಮ ಪುತ್ರನನ್ನೂ ಹೀರೋ ಮಾಡುತ್ತಿದ್ದಾರೆ. ಇದನ್ನೂ ಓದಿ: ಕನ್ನಡ, ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಣವಾಗಲಿದೆ ರಿಷಬ್ ಶೆಟ್ಟಿ ಹೊಸ ಚಿತ್ರ

    ಇದೆಲ್ಲದರ ನಡುವೆ ಇದೀಗ ಧಾರ್ಮಿಕ ಹಾಗೂ ವಾಸ್ತುಶಾಸ್ತ್ರದ ಹಿನ್ನೆಲೆಯ `ಸುವರ್ಣ ಸಂಕಲ್ಪ ಅಮೃತಘಳಿಗೆ’ (Suvarna Sankalpa Amrutha Ghalige) ಕಾರ್ಯಕ್ರಮ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಈ ಕಾರ್ಯಕ್ರಮವನ್ನು ಕರ್ನಾಟಕ ಜ್ಯೋತಿಷ್ಯರತ್ನ ಪ್ರಶಸ್ತಿ ಪುರಸ್ಕೃತರಾದ ವಿಶ್ವನಾಥ ಭಾಗವತ ಗುರೂಜಿಯವರು ನಡೆಸಿಕೊಡಲಿದ್ದಾರೆ. ಗಾಯಕಿಯೂ ಆದ ಅಖಿಲಾ ಪಜಿಮಣ್ಣು ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ. ಆಗಸ್ಟ್ 4ರಿಂದ ಪ್ರತಿದಿನ ಬೆಳಗ್ಗೆ 7:30ಕ್ಕೆ ಸುವರ್ಣ ಸಂಕಲ್ಪ ಅಮೃತಘಳಿಗೆ ಪ್ರಸಾರವಾಗಲಿದೆ. ಇದನ್ನೂ ಓದಿ: ಟೀಕೆಯಿಂದ ಖಿನ್ನತೆಗೆ ಜಾರಿದ್ದೆ, ಆತ್ಮಹತ್ಯೆಗೆ ಯೋಚಿಸಿದ್ದೆ – ಮೌನ ಮುರಿದ ಚಹಲ್‌

    ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ರಾಮ್ ಪ್ರಸಾದ್ ಅವರು ಮಾತನಾಡಿ, ಈಗಾಗಲೇ 6 ವರ್ಷಗಳಿಂದ ನಡೆದುಕೊಂಡು ಬಂದಿರುವ ಕಾರ್ಯಕ್ರಮವಿದು. ಇದರ ನಂತರ ನಾವೇನು ಮಾಡಬೇಕು ಅಂತ ಪ್ಲಾನ್ ಮಾಡುತ್ತಿದ್ದೇವೆ. ರಾಜ್ಯದ, ದೇಶದ ಎಲ್ಲಾ ಪ್ರಖ್ಯಾತ ದೇವಸ್ಥಾನಗಳಿಗೂ ಭೇಟಿ ನೀಡಬೇಕೆಂದು ಯೋಜನೆಯಿದೆ. ಅಲ್ಲದೆ ನಮಗೆ ಯಾರೇ ಕರೆ ಮಾಡಿದರೂ ಬಡವ, ಬಲ್ಲಿದ ಅಂತ ನೋಡದೆ ಅವರ ಮನೆಗಳಿಗೆ ಹೋಗಿ ವಾಸ್ತು ಪರಿಹಾರ ಸೂಚಿಸುತ್ತೇವೆ ಎಂದು ಹೇಳಿದ್ದಾರೆ.

    ಇದರ ಜೊತೆಗೆ ಸಂಜೀವಿನಿ ಸಂಕಲ್ಪ, ಯೋಗ ಸಂಕಲ್ಪ, ಮಂತ್ರ ಸಂಕಲ್ಪ ಹೀಗೆ ಅನೇಕ ಶೀರ್ಷಿಕೆಯಡಿ ಈ ಕಾರ್ಯಕ್ರಮ ನಡೆಯಲಿದೆ. ವೇದಿಕೆಯಲ್ಲಿ ವಿಶ್ವನಾಥ ಗುರೂಜಿ, ನಿರೂಪಕಿ ಅಖಿಲಾ ಪಜಿಮಣ್ಣು ಹಾಗೂ ಸುವರ್ಣ ವಾಹಿನಿಯ ಮುಖ್ಯಸ್ಥರೂ ಸುವರ್ಣ ಸಂಕಲ್ಪ ಅಮೃತಘಳಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ.

  • ದ್ರೌಪದಿಗೆ ಕೃಷ್ಣ ಸಹಾಯ ಮಾಡಿದಂತೆ ನಮಗೆ ಸಹಾಯ ಮಾಡಿ: ಮೋದಿಗೆ ಕಂಗನಾ ಮನವಿ

    ದ್ರೌಪದಿಗೆ ಕೃಷ್ಣ ಸಹಾಯ ಮಾಡಿದಂತೆ ನಮಗೆ ಸಹಾಯ ಮಾಡಿ: ಮೋದಿಗೆ ಕಂಗನಾ ಮನವಿ

    ಮುಂಬೈ: ನಟಿ ತುನಿಷಾ ಶರ್ಮಾ (Tunisha Sharma) ಅವರ ಸಾವಿನ ಪ್ರಕರಣದಲ್ಲಿ ಈಗಾಗಲೇ ಅನೇಕ ರೋಚಕ ಸತ್ಯಗಳು ಹೊರಬಿದ್ದಿವೆ. ತನಿಖೆ ನಡೆಯುವ ಸಂದರ್ಭದಲ್ಲಿ ತುನಿಷಾ ಗರ್ಭಿಣಿ (Pregnant Women) ಎಂದು ಹೇಳಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರು ಗರ್ಭಿಣಿ ಆಗಿರಲಿಲ್ಲ ಎಂದು ಸಾಬೀತಾಯಿತು. ಈ ಕುರಿತು ಮತ್ತೆ ತುನಿಷಾ ಸ್ನೇಹಿತೆ ರಯ್ಯಾ ಲಬೀಬ್ ಅಚ್ಚರಿಯ ಹೇಳಿಕೆ ನೀಡಿದ್ದು, ಆಕೆ ಗರ್ಭಿಣಿಯಾಗಿದ್ದು ನಿಜ. ಅಬಾರ್ಷನ್ ಮಾಡಿಸಿಕೊಂಡಿದ್ದಳು ಎಂದು ಹೇಳಿಕೆ ನೀಡಿದ್ದ.

    ನಟಿ ತುನಿಷಾ ಶರ್ಮಾ ಆತ್ಮಹತ್ಯೆ (Suicide) ಮಾಡಿಕೊಳ್ಳುವ ಹದಿನೈದು ದಿನ ಮುನ್ನ ಬಾಯ್ ಫ್ರೆಂಡ್ ಶಿಜಾನ್ ಜೊತೆ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದಳು ಎಂದು ಹೇಳಲಾಗಿದ್ದು, ಈ ಲವ್ ಬ್ರೇಕ್ ಅಪ್ ಗೆ ಕಾರಣ ಲವ್ ಜಿಹಾದ್ (Love Jihad) ಭಯ ಮತ್ತು ಶ್ರದ್ಧಾ ವಾಕರ್ ಕೊಲೆಯಿಂದ ಬೇಸತ್ತು ದೂರವಾಗಿದ್ದನು ಎಂದು ಹೇಳಿಕೊಂಡಿದ್ದ. ಈ ಪ್ರಕರಣದ ಕುರಿತಾಗಿ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಹಲವೆಡೆ ಸ್ಫೋಟ – 5 ಸಾವು, 10 ಮಂದಿಗೆ ಗಾಯ

    ಈ ಬೆನ್ನಲ್ಲೇ ನಟಿ ಕಂಗನಾ ರಣಾವತ್ (Kangana Ranaut) ಸಹ ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ಭಾವುಕ ಪೋಸ್ಟ್ ವೊಂದನ್ನು ಬರೆದುಕೊಂಡಿದ್ದಾರೆ. `ಮಹಿಳೆ ಎಲ್ಲವನ್ನೂ ನಿಭಾಯಿಸಬಲ್ಲಳು, ಕಳೆದುಕೊಂಡ ಪ್ರೀತಿ, ಮದುವೆ, ಸಂಬಂಧ ಹೀಗೆ ಎಲ್ಲವನ್ನೂ ನಿಭಾಯಿಸಬಹುದು. ಆದರೆ ಅವಳ ಲವ್ ಸ್ಟೋರಿ ಎಂದಿಗೂ ಪ್ರೀತಿಯನ್ನು ಹೊಂದಿಲ್ಲ ಎಂಬ ಅಂಶವನ್ನು ಅವಳು ಎಂದಿಗೂ ನಿಭಾಯಿಸಲು ಸಾಧ್ಯವಿಲ್ಲ. ನಾನು ಗೌರವಾನ್ವಿತ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರಲ್ಲಿ ವಿನಂತಿಸುತ್ತೇನೆ. ಕೃಷ್ಣ ದ್ರೌಪದಿಗೆ ಸಹಾಯ ಮಾಡಿದಂತೆ, ನಾವು ನಿಮ್ಮಲ್ಲಿ ಒಪ್ಪಿಗೆ ಇಲ್ಲದ ಬಹುಪತ್ನಿತ್ವ ವಿರುದ್ಧ ಬಲವಾದ ಕಾನೂನು ಮಾಡುತ್ತೀರಿ ಎಂದು ನಿರೀಕ್ಷೆ ಇಟ್ಟಿದ್ದೀವಿ. ಮಹಿಳೆಯರ ಮೇಲೆ ಆ ಸಿಡ್ ದಾಳಿ, ಮಹಿಳೆಯನ್ನು ಅನೇಕ ತುಂಡು ತುಂಡುಗಳಾಗಿ ಕತ್ತರಿಸುವುದು ಇಂತವರಿಗೆ ತಕ್ಷಣ ಮರಣದಂಡನೆ ಶಿಕ್ಷೆ ವಿಧಿಸಬೇಕು’ ಎಂದು ಮನವಿ ಮಾಡಿದ್ದಾರೆ.

    ಇತ್ತೀಚೆಗಷ್ಟೇ 20 ವರ್ಷದ ತುನಿಷಾ ಶರ್ಮಾ ಶೂಟಿಂಗ್ ಸೆಟ್‌ನಲ್ಲೇ ಮೇಕಪ್ ರೂಮ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿನ ಬಳಿಕ ಆಕೆಯ ಬಾಯ್‌ಫ್ರೆಂಡ್ ಶೀಜಾನ್ ಖಾನ್ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣ ಈಗ ಲವ್ ಜಿಹಾದ್ ಆಯಾಮ ಪಡೆದುಕೊಳ್ಳುತ್ತಿದೆ. ಈ ನಡುವೆ ಕಂಗನಾ ಟ್ವೀಟ್ ವೈರಲ್ ಆಗಿದೆ. ಇದನ್ನೂ ಓದಿ: ಲವ್ ಜಿಹಾದ್’ ಗೆ ಹೆದರಿಕೊಂಡು ತುನಿಷಾ ಶರ್ಮಾಳಿಂದ ದೂರವಾಗಿದ್ದ ಬಾಯ್ ಫ್ರೆಂಡ್

    Live Tv
    [brid partner=56869869 player=32851 video=960834 autoplay=true]

  • `ಕಮಲಿ’ ಖ್ಯಾತಿಯ ಅಮೂಲ್ಯಗೌಡರ ಹಾಟ್ ಫೋಟೋ ವೈರಲ್

    `ಕಮಲಿ’ ಖ್ಯಾತಿಯ ಅಮೂಲ್ಯಗೌಡರ ಹಾಟ್ ಫೋಟೋ ವೈರಲ್

    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ `ಕಮಲಿ'(Kamali) ಈ ಸೀರಿಯಲ್‌ನಲ್ಲಿ ಕಮಲಿಯಾಗಿ ಅಭಿನಯಿಸಿರೋ ಅಮೂಲ್ಯ ಗೌಡ (Amulya Gowda) ಹೆಸರು ಚಿರಪರಿಚಿತ.

    ಕಿರುತೆರೆಯಲ್ಲಿ ಪಕ್ಕಾ ಹಳ್ಳಿ ಹುಡ್ಗಿಯಾಗಿ (Village Girl) ಕಾಣಿಸಿಕೊಂಡಿರುವ ಅಮೂಲ್ಯ ಗೌಡರ ಹಾಟ್‌ಫೋಟೋಗಳು (Hot Photos) ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ಭಾರೀ ಸದ್ದು ಮಾಡ್ತಿವೆ. ಇದನ್ನೂ ಓದಿ: ಬೆಳಗ್ಗೆ ಎದ್ದಾಗ್ಲೇ ಬಿಕ್ಕಳಿಕೆ- ಯಾರೋ ಮಿಸ್ ಮಾಡಿಕೊಳ್ತಿದ್ದಾರೆ ಅಂದ್ರು ರಶ್ಮಿಕಾ

    `ಕಮಲಿ’ ಸೀರಿಯಲ್ ನಲ್ಲಿ ಲಂಗ ದಾವಣಿ, ಎರಡು ಜಡೆ ಹಾಕಿಕೊಳ್ಳೊ ಅಮೂಲ್ಯ ಗೌಡ ನಿಜ ಜೀವನದಲ್ಲಂತೂ ಅದಕ್ಕೆ ಪಕ್ಕಾ ಆಪೊಸಿಟ್ ಆಗಿದ್ದಾರೆ. ರಿಯಲ್ ಲೈಫ್‌ನಲ್ಲಿ ಅಮೂಲ್ಯ ಗೌಡ ಪಕ್ಕಾ ಮಾಡರ್ನ್ ಹುಡುಗಿ ಎಂಬುದಕ್ಕೆ ಈ ಫೋಟೋಗಳಿಗಿಂತ ಬೇರೆ ಸಾಕ್ಷಿ ಬೇಕಿಲ್ಲ. ಇದನ್ನೂ ಓದಿ: Bigg Boss Special- ಈ ಬಾರಿ ಬಿಗ್ ಬಾಸ್ 9 ಮನೆ ಪ್ರವೇಶ ಮಾಡಿರುವ ಖ್ಯಾತ ಕಿರುತೆರೆ ನಟಿಯರಿವರು

    ಮೂಲತಃ ಮೈಸೂರಿನವರೇ ಆದ ಅಮೂಲ್ಯ ಸ್ವಾತಿ ಮುತ್ತು ಧಾರಾವಾಹಿಯಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಜೀ ವಾಹಿನಿಯ ಕಮಲಿ ಧಾರವಾಹಿ ಇವರಿಗೆ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿತು. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮೂರು ಅಚ್ಚರಿಯ ಹೆಸರುಗಳು

    ಅಷ್ಟೇ ಅಲ್ಲ ಪುನರ್ ವಿವಾಹ, ಅರಮನೆ ಸೇರಿದಂತೆ ಹಲವು ಕನ್ನಡ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ತೆಲುಗಿನ ಕಾರ್ತಿಕ ದೀಪಂ ಧಾರಾವಾಹಿಯಲ್ಲೂ ನಟಿಸಿದ್ದಾರೆ. ಇವರ ಪೂರ್ತಿ ಹೆಸರು ಅಮೂಲ್ಯ ಓಂಕಾರ ಗೌಡ. ಇದೀಗ ಅಮೂಲ್ಯ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದು, ಈ ಬೆನ್ನಲ್ಲೇ ಅಮೂಲ್ಯಗೌರಡ ಹಾಟ್‌ ಫೋಟೋಗಳು ವೈರಲ್ ಆಗಿವೆ.

    Live Tv
    [brid partner=56869869 player=32851 video=960834 autoplay=true]

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಕಮಲಿ’ ಖ್ಯಾತಿಯ ಅಂಕಿತಾ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಕಮಲಿ’ ಖ್ಯಾತಿಯ ಅಂಕಿತಾ

    ಕಿರುತೆರೆಯ ಜನಪ್ರಿಯ ಸೀರಿಯಲ್ `ಕಮಲಿ’ ಖ್ಯಾತಿ ನಿಂಗಿ ಅಲಿಯಾಸ್ ಅಂಕಿತಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಹಾಸ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    `ಕಮಲಿ’ ಧಾರಾವಾಹಿ ಮೂಲಕ ಮನೆಮಾತಾದ ನಟಿ ಅಂಕಿತಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. ನಟಿಯ ಮದುವೆಗೆ ಕಮಲಿ ಧಾರಾವಾಹಿ ತಂಡ ಕೂಡ ಕಾಣಿಸಿಕೊಂಡು, ನವಜೋಡಿಗೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: `ಬ್ರಹ್ಮಾಸ್ತ್ರ’ ಚಿತ್ರ ರಿಲೀಸ್ ಬೆನ್ನಲ್ಲೇ ಇಟಲಿಗೆ ಹಾರಿದ ರಣ್‌ಬೀರ್ ಕಪೂರ್ ದಂಪತಿ

     

    View this post on Instagram

     

    A post shared by Gabriella Smith (@gabby_ella_smith)

    ವರ್ಷಗಳ ಹಿಂದೆಯೇ ಅಂಕಿತಾ ಹಾಗೂ ಸುಹಾಸ್ ಎನ್ನುವವರ ನಿಶ್ಚಿತಾರ್ಥ ನಡೆದಿತ್ತು. ನಿಶ್ಚಿತಾರ್ಥ ಆಗಿ ಸರಿಯಾಗಿ ಒಂದು ವರ್ಷ ಆದನಂತರದಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಸುಹಾಸ್ ಕುಮಾರಸ್ವಾಮಿ ಎಂಬುವವರ ಜೊತೆ ಅಂಕಿತಾ ಮದುವೆ ನಡೆದಿದೆ. ಕೆನಡಾದಲ್ಲಿ ಸುಹಾಸ್ ನೆಲೆಸಿದ್ದು, ಫೋಟೋಗ್ರಾಫರ್ ಆಗಿ ಸುಹಾಸ್ ಕೆಲಸ ಮಾಡುತ್ತಿದ್ದಾರೆ. ಇನ್ನು ನೆಚ್ಚಿನ ನಟಿಯ ಹೊಸ ಬಾಳಿಗೆ ಫ್ಯಾನ್ಸ್ ಕೂಡ ಶುಭಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಸದಾನಂದ ವಿವಾಹ

    `ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಸದಾನಂದ ವಿವಾಹ

    ಕಿರುತೆರೆಯ ಸೂಪರ್ ಹಿಟ್ `ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದ ನಟ ಸದಾನಂದ ಹಸೆಮಣೆ ಏರಿದ್ದಾರೆ. ಇದೀಗನಟ ಸದಾನಂದ ಮದುವೆಯ ಫೋಟೋಗಳ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

    ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕು ಸುಲ್ತಾನ್‌ಪುರ ಗ್ರಾಮದ ಪ್ರತಿಭೆ ಸದಾನಂದ ದುರ್ಗಪ್ಪ ಕಾಳೆ ಅವರು ಖಾಸಗಿ ಚಾನೆಲ್‌ನ್ನ ಕಾಮಿಡಿ ಕಿಲಾಡಿಗಳು ಶೋ ಮೂಲಕ ಗುರುತಿಸಿಕೊಂಡಿದ್ದರು. ತಮ್ಮ ಅಮೋಘ ನಟನೆಯಿಂದ ಗಮನ ಸೆಳೆದಿದ್ದ ನಟ ಸದಾನಂದ ಇಂದು ಸರಳವಾಗಿ ವಿವಾಹವಾಗಿದ್ದಾರೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ನಟ ವಿಜಯ್ ಬಾಬು ಪಾಸ್‌ಪೋರ್ಟ್ ಸೀಜ್

    ಸಾಕಷ್ಟು ಸೀರಿಯಲ್ ಮತ್ತು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸದಾನಂದ ಸರಳವಾಗಿ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ. ನೆಚ್ಚಿನ ನಟನ ಹೊಸ ಬಾಳಿಗೆ ಸ್ನೇಹಿತರು ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

  • ರಾಮಾಯಣ, ಮಹಾಭಾರತದ ನಂತರ ಮತ್ತೆ ಎಂಟ್ರಿ ಕೊಡ್ತಿದ್ದಾನೆ ಶಕ್ತಿಮಾನ್

    ರಾಮಾಯಣ, ಮಹಾಭಾರತದ ನಂತರ ಮತ್ತೆ ಎಂಟ್ರಿ ಕೊಡ್ತಿದ್ದಾನೆ ಶಕ್ತಿಮಾನ್

    ನವದೆಹಲಿ: ಭಾರತದ ಪ್ರಪ್ರಥಮ ಸೂಪರ್ ಹೀರೋ ಧಾರಾವಾಹಿ, 90ರ ದಶಕದ ಮಕ್ಕಳ ಅಚ್ಚುಮೆಚ್ಚಿನ ಶಕ್ತಿಮಾನ್ ಶೋ ಮತ್ತೆ ಪ್ರಸಾರ ಮಾಡಲು ದೂರದರ್ಶನ ಸಕಲ ಸಿದ್ಧತೆ ಮಾಡಿಕೊಂಡಿದೆ.

    ಮುಖೇಶ್ ಖನ್ನಾ ನಟನೆಯ ಈ ಧಾರಾವಾಹಿಯನ್ನು ಡಿಡಿ ನ್ಯಾಷನಲ್ ವಾಹಿನಿಯಲ್ಲಿ ಪ್ರತಿ ದಿನ ಒಂದು ತಾಸು ಪ್ರಸಾರ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಏಪ್ರಿಲ್‍ನಿಂದ ಮಧ್ಯಾಹ್ನ 1ಗಂಟೆಗೆ ಈ ಶೋ ಪ್ರಸಾರವಾಗಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಮೂಲಕ ಶಕ್ತಿಮಾನ್‍ನ ಸಾಹಸಗಳನ್ನು ಮಕ್ಕಳೊಂದಿಗೆ ಮತ್ತೆ ಎಂಜಾಯ್ ಮಾಡಬಹುದಾಗಿದೆ.

    ಮುಖೇಶ್ ಖನ್ನಾ ಅವರು ಈ ಧಾರಾವಾಹಿಯಲ್ಲಿ ಶಕ್ತಿಮಾನ್ ಪಾತ್ರ ನಿರ್ವಹಿಸಿದ್ದರು. ಕೇವಲ ಮನರಂಜನೆ ಮಾತ್ರವಲ್ಲದೆ ತಮ್ಮ ಅದ್ಭುತ ಶಕ್ತಿ ಮೂಲಕ ಶಕ್ತಿಮಾನ್ ಜೀವನದ ಪಾಠಗಳನ್ನು ಕಲಿಸುತ್ತಿದ್ದ. ಹೀಗಾಗಿ ಪ್ರತಿ ಭಾನುವಾರ ಒಂದು ಗಂಟೆ ಕಾಲ ಪ್ರಸಾರವಾಗುತ್ತಿದ್ದ ಶಕ್ತಿಮಾನ್ ಧಾರವಾಹಿಯನ್ನು ಕುಟುಂಬ ಸಮೇತರಾಗಿ ನೋಡುತ್ತಿದ್ದರು. ಇದೀಗ ಮತ್ತೆ ಪ್ರಸಾರ ಮಾಡಲು ನಿರ್ಧರಿಸಲಾಗಿದೆ.

    ರಾಮಾಯಣ, ಮಹಾಭಾರತವನ್ನು ಮರು ಪ್ರಸಾರ ಮಾಡಲು ತೀರ್ಮಾನ ಕೈಗೊಂಡ ನಂತರ ಶಕ್ತಿಮಾನ್ ಧಾರವಾಹಿಯನ್ನೂ ಮರು ಪ್ರಸಾರ ಮಾಡುವಂತೆ ಒತ್ತಡ ಕೇಳಿ ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಮಾತ್ರವಲ್ಲದೆ ಈ ಹಿಂದೆ ಶಕ್ತಿಮಾನ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಇದರ ಮುಂದುವರಿದ ಭಾಗವನ್ನು ರಚಿಸಲು ಮುಖೇಶ್ ಖನ್ನಾ ಚಿಂತನೆ ನಡೆಸಿದ್ದಾರಂತೆ. ಇದರಲ್ಲಿ ಮುಖೇಶ್ ಶಕ್ತಿಮಾನ್ ಪಾತ್ರ ನಿರ್ವಹಿಸುವುದು ಮಾತ್ರವಲ್ಲದೆ, ಕಥೆ ರಚಿಸುವ ಪ್ರಯತ್ನದಲ್ಲಿಯೂ ತೊಡಗಿದ್ದಾರಂತೆ.

    ಈ ಕುರಿತು ಇಂಗ್ಲಿಷ್ ಪತ್ರಿಕೆಯೊಂದರ ಸಂದರ್ಶನದಲ್ಲಿ ಮುಖೇಶ್ ಖನ್ನಾ ಮಾಹಿತಿ ನೀಡಿದ್ದು, ಶಕ್ತಿಮಾನ್ ಮುಂದುವರಿದ ಭಾಗದ ಕುರಿತು ಕೆಲಸ ಮಾಡುತ್ತಿದ್ದೇವೆ. ಶಕ್ತಿಮಾನ್‍ನ ಎರಡನೇ ಭಾಗವನ್ನು ತೆರೆ ಮೇಲೆ ತರಲು ಕಳೆದ ಮೂರು ವರ್ಷಗಳಿಂದ ಸಿದ್ಧತೆ ನಡೆಸಿದ್ದೇವೆ. ಇದು ಸಮಕಾಲೀನವಾಗಿದ್ದು, ಮೌಲ್ಯಗಳನ್ನು ಎತ್ತಿ ಹಿಡಿಯಲಿದೆ. ಹೀಗಾಗಿ ಅದರ ಎರಡನೇ ಭಾಗದ ತಯಾರಿಯಲ್ಲಿ ತೊಡಗಿದ್ದೇವೆ. ಅಲ್ಲದೆ ಜನ ಸಹ ಮುಂದೇನಾಗುತ್ತದೆ ಎಂಬುದನ್ನು ತಿಳಿಯಲು ಕುತೂಹಲದಿಂದ ಕಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಕೊರೊನಾ ಭೀತಿ ಎಲ್ಲ ತಿಳಿಯಾದ ನಂತರ ಕೆಲಸ ಚುರುಕಾಗಲಿದೆ. ಆದರೆ ಯಾವಾಗಿಂದ ಮತ್ತೆ ಕೆಲಸ ಮಾಡುತ್ತೇವೆ ಎಂಬ ನಿರ್ದಿಷ್ಟ ಸಮಯವನ್ನು ಹೇಳಲು ಸಾಧ್ಯವಿಲ್ಲ. ಹಿಂದೆಂದಿಗಿಂತಲೂ ಇದೀಗ ತುಂಬಾ ಬೇಡಿಕೆ ಬರುತ್ತಿದೆ. ಹೀಗಾಗಿ ಎರಡನೇ ಭಾಗವನ್ನು ತೆರೆ ಮೇಲೆ ತರಲು ಇದು ಸೂಕ್ತ ಸಮಯ ಎಂದು ನಾನು ಭಾವಿಸಿದ್ದೇನೆ. ಇದಕ್ಕೂ ಮುನ್ನ ಮುಖೇಶ್ ಅವರು ಸೂಪರ್ ಹೀರೋ ಕುರಿತು ಚಿತ್ರ ಮಾಡುವ ಇಂಗಿತವನ್ನು ಹೊರ ಹಾಕಿದ್ದರು. ನಾನು ಶಕ್ತಿಮಾನ್ ನನ್ನು ಪೂರ್ಣ ಪ್ರಮಾಣದ ಚಲನಚಿತ್ರವನ್ನಾಗಿಸಲು ಬಯಸಿದ್ದೆ. ಆದರೆ ಟೆಲಿಫಿಲಂನೊಂದಿಗೆ ಹಣಕಾಸು ಹೊಂದಾಣಿಕೆ ಏರ್ಪಡಲಿಲ್ಲ. ಹೀಗಾಗಿ ಈ ಯೋಜನೆ ಈಡೇರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.

    ಅಲ್ಲದೆ ಶಕ್ತಿಮಾನ್ 3ಡಿ ಆ್ಯನಿಮೇಟೆಡ್ ಸಿರೀಸ್ ಕೂಡ ಘೋಷಣೆಯಾಗಿದ್ದು, ಇದರ ಟ್ರೈಲರ್ ನ್ನು ಕಳೆದ ವರ್ಷ ಕಾಮಿಕ್-ಕಾನ್ ಇಂಡಿಯಾದಲ್ಲಿ ಬಿಡುಗಡೆ ಮಾಡಲಾಗಿದೆ.

    ಕೊರೊನಾ ವೈರಸ್ ಲಾಕ್‍ಡೌನ್ ಸಂದರ್ಭದಲ್ಲಿ ಕಾಲ ಕಳೆಯಲು ಅನುಕೂಲವಾಗುವಂತೆ ಇತ್ತೀಚೆಗಷ್ಟೇ ಹಳೆಯ ರಾಮಾಯಣ, ಮಹಾಭಾರತ ಧಾರಾವಾಹಿಗಳನ್ನು ಪ್ರಸಾರ ಮಾಡಲು ಸರ್ಕಾರ ಮುಂದಾಗಿದೆ. ಇವೆರಡೂ ಧಾರವಾಹಿ ಸಹ ಒಂದಾನೊಂದು ಕಾಲದಲ್ಲಿ ದೇಶದ ಜನತೆಯ ಪ್ರೈಮ್ ಟೈಮ್ ಫೇವರಿಟ್ ಶೋಗಳಾಗಿದ್ದವು. ಹೀಗಾಗಿ ಸಾರ್ವಜನಿಕರಲ್ಲಿ ಸಾಮರಸ್ಯ ಕಾಪಾಡಲು ಈ ಧಾರವಾಹಿಗಳನ್ನು ಸರ್ಕಾರ ಮರು ಪ್ರಸಾರ ಮಾಡುವ ನಿರ್ಧಾರ ಕೈಗೊಂಡಿದೆ.

  • ಟಿವಿ ಕ್ರೈಂ ಶೋದಿಂದ ಪ್ರೇರಣೆ- 2 ವರ್ಷದ ತಮ್ಮನನ್ನೇ ಕೊಂದ 14ರ ಅಕ್ಕ

    ಟಿವಿ ಕ್ರೈಂ ಶೋದಿಂದ ಪ್ರೇರಣೆ- 2 ವರ್ಷದ ತಮ್ಮನನ್ನೇ ಕೊಂದ 14ರ ಅಕ್ಕ

    ಡೆಹ್ರಾಡೂನ್: ಟಿವಿಯಲ್ಲಿ ಪ್ರಸಾರವಾಗುವ ಕ್ರೈಂ ಶೋ ನೋಡಿ ಪ್ರೇರಣೆಗೊಂಡು ಇಬ್ಬರು ಅಪ್ರಾಪ್ತೆಯರು ಎರಡು ವರ್ಷದ ಸಹೋದರನನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

    ಉತ್ತರಾಖಂಡ್‍ನ ಹರಿದ್ವಾರದ ಜವಲಪುರದಲ್ಲಿ ಘಟನೆ ನಡೆದಿದೆ. ಇಬ್ಬರು ಅಪ್ರಾಪ್ತೆಯರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಕೊಲೆ ಮಾಡಲು ಹೇಗೆ ಪ್ಲಾನ್ ಮಾಡಿದಿರಿ ಎಂಬ ಪ್ರಶ್ನೆಗೆ ಬಾಲಕಿಯರು ಆಘಾತಕಾರಿ ಉತ್ತರ ನೀಡಿದ್ದಾರೆ. ಟಿವಿಯಲ್ಲಿ ಬರುತ್ತಿದ್ದ ಕ್ರೈಂ ಶೋ ನೋಡಿಯೇ ಸಹೋದರನ ಕೊಲೆಗೆ ಸಂಚು ರೂಪಿಸಿದೆವು ಎಂದು ಒಪ್ಪಿಕೊಂಡಿದ್ದಾರೆ.

    ನವೆಂಬರ್ 29ರಂದು ಮಗುವಿನ ದೇಹವು ಗಂಗಾ ನದಿಯಲ್ಲಿ ತೇಲುತ್ತಿರುವುದನ್ನು ಕಂಡ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಎಚ್ಚರಗೊಂಡಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಪ್ರಾಥಮಿಕ ತನಿಖೆ ನಡೆಸಲಾಗಿದ್ದು, ಮೊದಲು ಮಗುವಿನ ಕುಟುಂಬದವರನ್ನೇ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಸತ್ಯ ಬಯಲಾಗಿದ್ದು, 14 ವರ್ಷದ ಸಹೋದರಿ ಹಾಗೂ 13 ವರ್ಷದ ಸೋದರ ಸಂಬಂಧಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

    ನಂತರ ಇಬ್ಬರೂ ಅಪ್ರಾಪ್ತೆಯರನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಕಥೆಯ ರೀತಿಯಲ್ಲಿ ಘಟನೆಯನ್ನು ವಿವರಿಸಿದ್ದಾರೆ. ಮಗುವಿನ ಅಕ್ಕ ಮಾಹಿತಿ ನೀಡಿ, ತಮ್ಮನನ್ನು ನೋಡಿಕೊಳ್ಳುವುದು ಕಿರಿಕಿರಿ ಎನ್ನಿಸುತ್ತಿತ್ತು. ಹೀಗಾಗಿ ಕಾಟ ತಾಳಲಾರದೆ ಕೊಲೆ ಮಾಡಲು ನಿರ್ಧರಿಸಿದೆ. ಟಿವಿಯಲ್ಲಿ ಕ್ರೈಂ ಶೋ ನೋಡಿದ್ದರಿಂದ ಅದರಂತೆ ನಾನು ಮಾಡಿದೆ. ಬೇಸಿಗೆಯ ರಜಾ ದಿನಗಳಲ್ಲಿ ಅಜ್ಜಿಯ ಮನೆಗೆ ಹೋಗುತ್ತಿದ್ದೆ. ಆಗ ಟಿವಿಯಲ್ಲಿ ಹೆಚ್ಚು ಕ್ರೈಂ ಶೋಗಳನ್ನು ನೋಡುತ್ತಿದ್ದೆ. ಇದರಿಂದ ಪ್ರೇರಿತಳಾಗಿ ಸಹೋದರನನ್ನು ನದಿಯಲ್ಲಿ ಮುಳುಗಿಸಿ ಕೊಲ್ಲಲು ಯೋಜನೆ ರೂಪಿಸಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾಳೆ.

    ಅಲ್ಲದೆ ತಮ್ಮನಿಗೆ ಹಾಕಲು ನಿದ್ರೆ ಮಾತ್ರೆಗಳನ್ನು ಪಡೆಯುವಲ್ಲಿ ನಾವಿಬ್ಬರು ಯಶಸ್ವಿಯಾಗಿವು. ಮಾತ್ರೆಗಳನ್ನು ತಮ್ಮ ಕುಡಿಯುವ ಹಾಲಿನಲ್ಲಿ ಬೆರೆಸಿದೆವು. ಅಲ್ಲದೆ ಗಂಗಾನದಿಯಲ್ಲಿ ಮುಳುಗಿಸುವುದಕ್ಕೂ ಮುನ್ನ ತಮ್ಮನನ್ನು ನಿದ್ರಾಹೀನಗೊಳಿಸಿದ್ದೆವು. ಅವನು ನಿದ್ರೆಗೆ ಜಾರಿರುವುದು ಖಚಿತವಾಗುತ್ತಿದ್ದಂತೆ ನಾವಿಬ್ಬರು ಅವನನ್ನು ಚೀಲದಲ್ಲಿ ಹಾಕಿಕೊಂಡು ಸೈಕಲ್‍ನಲ್ಲಿ ಹೋಗಿ ಸುಮಾರು 800 ಮೀ. ದೂರದಲ್ಲಿದ್ದ ಗಂಗಾ ನದಿಗೆ ಹಾಕಿದೆವು. ನದಿಗೆ ಹಾಕಿ 20 ನಿಮಿಷಗಳ ನಂತರ ಮನೆಗೆ ಬಂದೆವು. ನಂತರ ಎಲ್ಲವೂ ಸಹಜವಾಗಿದೆ ಎಂಬಂತೆ ನಟಿಸಿದೆವು ಎಂದು ತಿಳಿಸಿದ್ದಾಳೆ.

    ಘಟನೆ ನಡೆದ ಮರುದಿನ ಬೆಳಗ್ಗೆ ಮಗು ಕಾಣದಿರುವುದನ್ನು ಕಂಡು ಮನೆಯವರು ಗಾಬರಿಯಾಗಿ ಈ ಕುರಿತು ದೂರು ದಾಖಲಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಲು ಮುಂದಾದಾಗ, ಬಾಲಕಿಯು ಆರಂಭದಲ್ಲಿ ತನ್ನ ಚಿಕ್ಕಮ್ಮನ ಮೇಲೆ ಆರೋಪ ಹೊರಿಸಲು ಮುಂದಾಗಿದ್ದಳು. ಆದರೆ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಘಟನೆ ಕುರಿತು ಬಾಯ್ಬಿಟ್ಟಿದ್ದಾಳೆ.

  • ಬೆಸೆದ ಬಂಧಗಳನ್ನು ಗಟ್ಟಿ ಮಾಡೋಕೆ 4 ವರ್ಷ ನಂತರ ಟಿವಿಯಲ್ಲಿ ಬರ್ತಿದ್ದಾರೆ ಅಪ್ಪು!

    ಬೆಸೆದ ಬಂಧಗಳನ್ನು ಗಟ್ಟಿ ಮಾಡೋಕೆ 4 ವರ್ಷ ನಂತರ ಟಿವಿಯಲ್ಲಿ ಬರ್ತಿದ್ದಾರೆ ಅಪ್ಪು!

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 4 ವರ್ಷಗಳ ಬ್ರೇಕ್ ಬಳಿಕ ಟಿವಿ ಶೋ ನಡೆಸಲು ಬರುತ್ತಿದ್ದಾರೆ. ಈ ಹೊಸ ಫ್ಯಾಮಿಲಿ ಶೋ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದ್ದು ಈ ಕಾರ್ಯಕ್ರಮದ ಪ್ರೋಮೋ ಶೂಟನ್ನು ಪುನೀತ್ ರಾಜ್ ಕುಮಾರ್ ಈಗಾಗಲೇ ಮುಗಿಸಿದ್ದಾರೆ. ಕಲರ್ಸ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ಈ ಕಾರ್ಯಕ್ರಮದ 5 ನಿಮಿಷಗಳ ಪ್ರೋಮೋ ರಿಲೀಸ್ ಆಗಿದೆ. ಈಗಾಗಲೇ 4 ಲಕ್ಷಕ್ಕೂ ಅಧಿಕ ಬಾರಿ ಜನರು ಈ ಪ್ರೋಮೋ ನೋಡಿದ್ದಾರೆ.

    ನೂತನ ಶೋದ ಹೆಸರು ಹಾಗೂ ವಿಶೇಷತೆಯನ್ನು ಚಾನೆಲ್ ಎಲ್ಲೂ ಬಿಟ್ಟುಕೊಟ್ಟಿಲ್ಲ.ಜೊತೆಯಲ್ಲಿ ಪುನೀತ್ ಅವರೂ ಹೇಳಲಿಲ್ಲ. ಆದರೆ ಈ ಪ್ರೋಮೋದ ಕೊನೆಯಲ್ಲಿ ಮಾತ್ರ ಬರ್ತಿದೆ ಬೆಸೆದ ಸಂಬಂಧಗಳನ್ನು ಗಟ್ಟಿ ಮಾಡೋ ಹೊಸ ಶೋ ಎಂಬ ಧ್ವನಿ ಕೇಳಿಸುತ್ತಿದೆ.

    ತುಂಬಾ ಸೀಕ್ರೆಟ್ ಆಗಿ ಕಾರ್ಯಕ್ರಮದ ಶೂಟ್ ನಡೆಯುತ್ತಿದೆ. ಈ ಹೊಸ ಶೋಗಾಗಿ ಪುನೀತ್ ರಾಜ್ ಕುಮಾರ್ ಫೋಟೋ ಶೂಟ್ ಕೂಡಾ ನಡೆಯಿತು.

    ಟಿವಿ ಕಮ್ ಬ್ಯಾಕ್ ಬಗ್ಗೆ ಮಾತನಾಡಿದ ಪುನೀತ್ ರಾಜ್ ಕುಮಾರ್ ನನಗೆ ಎಕ್ಸೈಟ್ಮೆಂಟ್ ಅಂತೂ ಇದ್ದೇ ಇದೆ. ಶೋ ಯಾವ ಥರಾ ಇರುತ್ತೆ, ಹೇಗೆ ನಡೆಸ್ಕೊಂಡು ಹೋಗ್ತೀವಿ. ಗೆಸ್ಟ್ ಗಳು ಏನೆಲ್ಲಾ ಹೇಳ್ತಾರೆ ಅನ್ನೋದೇ ಒಂಥರಾ ಥ್ರಿಲ್ ಎಂದರು. ಶೋನ ಪ್ರೋಮೋದಲ್ಲೇ ಎಕ್ಸೈಟ್ಮೆಂಟ್ ಇದೆ. ಪಾಸಿಟಿವ್ ಎನರ್ಜಿ ಕಾಣಿಸಿಕೊಂಡಿದೆ. ಇದೊಂದು ಫ್ಯಾಮಿಲಿ ಶೋ. ಈ ಶೋ ನೋಡಿ ಪ್ರೇಕ್ಷಕರು ಏನ್ ಹೇಳ್ತಾರೆ ಅಂತಾ ನೋಡೋದಕ್ಕೆ ನಾನು ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿದರು.

    https://twitter.com/ColorsKannada/status/915790820376141824