Tag: TV Actress

  • ಸ್ನೇಹಿತೆಯ ಖಾಸಗಿ ವೀಡಿಯೋ ಕದ್ದು ಹಂಚಿ ಬ್ಲ್ಯಾಕ್‌ಮೇಲ್‌ ಆರೋಪ; ಕಿರುತೆರೆ ನಟಿ ವಿರುದ್ಧ FIR

    ಸ್ನೇಹಿತೆಯ ಖಾಸಗಿ ವೀಡಿಯೋ ಕದ್ದು ಹಂಚಿ ಬ್ಲ್ಯಾಕ್‌ಮೇಲ್‌ ಆರೋಪ; ಕಿರುತೆರೆ ನಟಿ ವಿರುದ್ಧ FIR

    ಕನ್ನಡದ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಖ್ಯಾತ ಕಿರುತೆರೆ ನಟಿ ವಿರುದ್ಧ ಈಗ ಬ್ಲ್ಯಾಕ್‌ಮೇಲ್‌ (BlackMali) ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

    ಸ್ನೇಹಿತೆಯ ಖಾಸಗಿ ವಿಡಿಯೋ ಹಾಗೂ ಫೋಟೋಗಳನ್ನ ಕದ್ದು ಹಂಚಿಕೆ ಮಾಡಿದ್ದಾರೆ ಹಾಗೂ 2 ಕೋಟಿ ರೂ.ಗೆ ಬ್ಲ್ಯಾಕ್‌ಮೇಲ್‌ ಮಾಡಲು ಪ್ರಚೋದನೆ ನೀಡಿದ ಆರೋಪದ ಮೇಲೆ ಶೃಂಗೇರಿ ಶಾರದಾ ಪೀಠದ ಜೋಯಿಸ್ ಕುಟುಂಬ ಸದಸ್ಯೆ ಹಾಗೂ ಕಿರುತೆರೆ ನಟಿ ಆಶಾ ಜೋಯಿಸ್‌ (Asha Jois) ವಿರುದ್ಧ ಪ್ರಕರಣ ದಾಖಲಾಗಿದೆ. 61 ವರ್ಷದ ಪಾರ್ವತಿ ಎಂಬವವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಾಗಿದೆ. ಆಶಾ 2016ರಲ್ಲಿ ಮಿಸ್ ಇಂಡಿಯಾ ಪ್ಲಾನೆಟ್ ಸ್ಪರ್ಧಿಯಾಗಿದ್ದರು.

    ಗಂಡನ ಬ್ಲ್ಯಾಕ್‌ಮೇಲ್‌ಗೆ ನಟಿಯಿಂದ ಪ್ರಚೋದನೆ!
    ಕೆಲ ದಿನಗಳ ಹಿಂದೆ ಪಾರ್ವತಿಗೆ ಆಶಾ ಜೋಯಿಸ್‌ ಪರಿಚಯವಾಗಿದೆ. ತಾನು ಶೃಂಗೇರಿ ಮಠದ ಜೋಯಿಸ್ ಕುಟುಂಬದವಳು ಹಾಗೂ ಸೀರಿಯಲ್‌ ನಟಿ ಅಂತ ಹೇಳಿಕೊಂಡು ಪರಿಚಯವಾಗಿದ್ದಳು. ಪಾರ್ವತಿ ತಾನು ಕೆಲಸ ಮಾಡುವ ಕಂಪನಿ ಮಾಲೀಕರನ್ನೇ ಮದುವೆಯಾಗಿದ್ದರು. ಈ ವಿಚಾರ ತಿಳಿದ ಆಶಾ ಪತಿಗೆ ಬ್ಲ್ಯಾಕ್‌ ಮೇಲ್‌ ಮಾಡಲು ಪದೇ ಪದೇ ಪ್ರಚೋದನೆ ನೀಡಿದ್ದಾಳೆ.

    ಎರಡು ಕೋಟಿ ಹಣಕ್ಕೆ ಬ್ಲ್ಯಾಕ್‌ಮೇಲ್‌ ಮಾಡಲು ಬಲವಂತ ಮಾಡ್ತಿದ್ದಳಂತೆ. ಇದನ್ನ ಪಾರ್ವತಿ ನಿರಾಕರಿಸಿದ್ದರು. ಇದೇ ದ್ವೇಷಕ್ಕೆ ಪಾರ್ವತಿ ಅವರ ಫೋನ್‌ನಿಂದ ಖಾಸಗಿ ವಿಡಿಯೋಗಳು, ವಾಯ್ಸ್ ರೆಕಾರ್ಡ್ ಹಾಗೂ ಖಾಸಗಿ ಫೋಟೋಗಳನ್ನ ಕದ್ದು ಪಾವರ್ತಿ ಅವರ ಪರಿಚಯಸ್ಥರಿಗೆ ಕಳಿಸಿದ್ದಾಳೆ. ಈ ಹಿನ್ನೆಲೆ ತನ್ನ ಘನತೆಗೆ ಕುಂದುಂಟಾಗಿದೆ ಹಾಗೂ ತನ್ನ ಖಾಸಗಿ ಡೇಟಾ ಕದ್ದಿದ್ದಾರೆ ಎಂದು ಆರೋಪಿಸಿ ಪಾರ್ವತಿ ದೂರು ನೀಡಿದ್ದಾರೆ.

    ನಟಿಯ ವಿರುದ್ಧ ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

  • ಬಿಗ್‌ಬಾಸ್ ಸ್ಪರ್ಧಿಯಾಗಿ ಕಿರುತೆರೆ ನಟಿ ಮಂಜು ಭಾಷಿಣಿ

    ಬಿಗ್‌ಬಾಸ್ ಸ್ಪರ್ಧಿಯಾಗಿ ಕಿರುತೆರೆ ನಟಿ ಮಂಜು ಭಾಷಿಣಿ

    ಹಲವಾರು ಸೀರಿಯಲ್‌ನಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡು ಮನೆ ಮಾತಾಗಿರುವ ಮಂಜು ಭಾಷಿಣಿ ಇದೀಗ ಹೊಸ ಜರ್ನಿ ಆರಂಭಿಸಿದ್ದಾರೆ.

    ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿಯಾಗಿ ಎಂಟ್ರಿಕೊಡುತ್ತಿದ್ದಾರೆ ಮಂಜು ಭಾಷಿಣಿ. ಈ ಬಗ್ಗೆ ವಿಡಿಯೋ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಬಿಗ್‌ಬಾಸ್ ಮನೆಗೆ ಎಂಟ್ರಿಕೊಡುವ ಬಗ್ಗೆ ಸ್ವತಃ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

    ಬಿಗ್‌ಬಾಸ್ ಸೀಸನ್-12 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಒಬ್ಬೊಬ್ಬರಾಗಿ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿಕೊಡುತ್ತಿದ್ದಾರೆ. ಈ ದಿನ ಸಂಜೆ ಯಾರೆಲ್ಲ ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧೆ ನೀಡಲಿದ್ದಾರೆ ಅನ್ನೋ ಕ್ಯೂರಿಯಾಸಿಟಿಗೆ ತೆರೆಬೀಳಲಿದೆ. ಅಲ್ಲಿಯವರೆಗೂ ಬಿಗ್‌ಬಾಸ್ ಹೌಸ್‌ನಿಂದ ಬರುವನ ಒಂದೊಂದೇ ಸುದ್ದಿಯನ್ನ ನೋಡಿ ಎಂಜಾಯ್ ಮಾಡುತ್ತಾ ಇರಿ.

    ಬಿಗ್‌ಬಾಸ್‌ನ ಮೊದಲ ಸ್ಪರ್ಧಿಯಾಗಿ ಕಾಕ್ರೋಚ್ ಸುಧೀ ಎಂಟ್ರಿಕೊಡುತ್ತಿದ್ದಾರೆ. ಮಾಸ್ಕ್ ಧರಿಸಿಕೊಂಡು ಪಬ್ಲಿಕ್‌ನಲ್ಲಿ ಓಪಿನಿಯನ್ ಪಡೆದುಕೊಂಡಿದ್ದ ಸುಧೀ ಮೊದಲ ಸ್ಪರ್ಧಿಯಾಗಿ ಗ್ರ್ಯಾಂಡ್‌ ಆಗಿ ಎಂಟ್ರಿಕೊಡ್ತಿದ್ದಾರೆ. ಇನ್ನು ಸುದೀಪ್ ಮೊದಲ ದಿನ ಯಾವ ರೀತಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಹೇಗೆ ಮಾತಾಡಲಿದ್ದಾರೆ ಅಂತಾ ನೋಡಲು ಕಾದು ಕುಳಿತಿದೆ ಅಭಿಮಾನಿ ವರ್ಗ.

  • ಶೂಟಿಂಗ್ ಸೆಟ್‌ನಲ್ಲಿ ತುನೀಶಾ ಆತ್ಮಹತ್ಯೆ – ಸಹ ನಟ ಶೀಜಾನ್ ಬಂಧನ

    ಶೂಟಿಂಗ್ ಸೆಟ್‌ನಲ್ಲಿ ತುನೀಶಾ ಆತ್ಮಹತ್ಯೆ – ಸಹ ನಟ ಶೀಜಾನ್ ಬಂಧನ

    ಮುಂಬೈ: ಟಿವಿ ಕಾರ್ಯಕ್ರಮದ ಸೆಟ್‌ನಲ್ಲಿ ನಟಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ (Suicide) ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿರುವ ಆರೋಪದ ಮೇಲೆ ಸಹ ನಟನನ್ನು ಬಂಧಿಸಲಾಗಿದೆ.

    ಮಹಾರಾಷ್ಟ್ರದ (Maharashtra) ಪಾಲ್ಘರ್ ಜಿಲ್ಲೆಯ ವಸೈ ಎಂಬಲ್ಲಿ ಶನಿವಾರ ಶೂಟಿಂಗ್ ಸೆಟ್‌ನಲ್ಲಿಯೇ (Shooting Set) ಕಿರುತೆರೆ ನಟಿ ತುನೀಶಾ ಶರ್ಮಾ (Tunisha Sharma)(20) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಸಹ ನಟ ಶೀಜಾನ್ ಮೊಹಮ್ಮದ್ ಖಾನ್ (Sheezan Mohammed Khan) ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಈಗ ಬಂಧಿಸಲಾಗಿದೆ.

    ತುನೀಶಾ ತಾಯಿ ಶೀಜಾನ್ ವಿರುದ್ಧ ಈ ಬಗ್ಗೆ ದೂರು ನೀಡಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. ಸೋಮವಾರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಆತ್ಮಹತ್ಯೆಗೆ ಶರಣಾದ ನಟಿಯ ಮರಣೋತ್ತರ ಪರೀಕ್ಷೆ ಇಂದು ಮುಂಜಾನೆ ನೈಗಾಂವ್‌ನ ಜೆಜೆ ಆಸ್ಪತ್ರೆಯಲ್ಲಿ ನಡೆಸಲಾಗಿದೆ.

    ನಟಿ ಶೂಟಿಂಗ್ ಸೆಟ್‌ನಲ್ಲಿ ಚಹಾದ ವಿರಾಮದ ಬಳಿಕ ವಾಶ್‌ರೂಮ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ತುನೀಶಾ ಶರ್ಮಾ ಶವ ಪತ್ತೆಯಾಗಿತ್ತು. ಆಕೆ ಎಷ್ಟು ಹೊತ್ತಾದರೂ ಹೊರಗೆ ಬಾರದ ಹಿನ್ನೆಲೆ ಸೆಟ್‌ನಲ್ಲಿದ್ದವರು ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಬಳಿಕ ಅವರನ್ನು ಮಧ್ಯರಾತ್ರಿ 1:30ರ ವೇಳೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ. ಇದನ್ನೂ ಓದಿ: ಸೆಟ್‌ನಲ್ಲೇ ಸೀರಿಯಲ್ ಖ್ಯಾತ ನಟಿ ಆತ್ಮಹತ್ಯೆ

    ತುನಿಶಾ ಶರ್ಮಾ ಅವರ ಸಹೋದ್ಯೋಗಿಗಳು ಅವರು ಆತ್ಮಹತ್ಯೆಯಿಂದ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಪೊಲೀಸರು ಸ್ಥಳದಲ್ಲಿ ತನಿಖೆ ನಡೆಸಿದ್ದಾರೆ. ಆದರೆ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ ಎಂದಿದ್ದಾರೆ. ಆಕೆಯ ಸಾವನ್ನು ಕೊಲೆ ಹಾಗೂ ಆತ್ಮಹತ್ಯೆ ಎರಡೂ ಕೋನಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ತುನಿಶಾ ಶರ್ಮಾ ‘ಭಾರತ್ ಕಾ ವೀರ್ ಪುತ್ರ – ಮಹಾರಾಣಾ ಪ್ರತಾಪ್’ ಧಾರವಾಹಿಯಲ್ಲಿ ಬಾಲ ನಟಿಯಾಗಿ ಚಂದ್ ಕನ್ವರ್ ಪಾತ್ರವನ್ನು ನಿರ್ವಹಿಸುವ ಮೂಲಕ ನಟನಾ ವೃತ್ತಿಯನ್ನು ಪ್ರಾರಂಭಿಸಿದ್ದರು. ಅಂದಿನಿಂದ ಅವರು ಹಲವು ಶೋಗಳಲ್ಲಿ ಹಾಗೂ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಇಷ್ಕ್ ಸುಭಾನ್ ಅಲ್ಲಾ’, ‘ಗಬ್ಬರ್ ಪೂಚ್‌ವಾಲಾ’, ಶೇರ್-ಎ-ಪಂಜಾಬ್: ಮಹಾರಾಜ ರಂಜಿತ್ ಸಿಂಗ್’ ಹಾಗೂ ‘ಚಕ್ರವರ್ತಿ ಅಶೋಕ ಸಾಮ್ರಾಟ್’ ಶೋಗಳಲ್ಲೂ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ದೊಡ್ಮನೆಯಲ್ಲಿ ಡಬಲ್ ಎಲಿಮಿನೇಷನ್: ಅಮೂಲ್ಯ, ಅರುಣ್ ಸಾಗರ್ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್

    Live Tv
    [brid partner=56869869 player=32851 video=960834 autoplay=true]

  • ಕಿರುತೆರೆ ನಟಿ ರಶ್ಮಿ ರೇಖಾ ಓಜಾ ಆತ್ಮಹತ್ಯೆ.!

    ಕಿರುತೆರೆ ನಟಿ ರಶ್ಮಿ ರೇಖಾ ಓಜಾ ಆತ್ಮಹತ್ಯೆ.!

    ಇತ್ತೀಚೆಗೆ ಟಿವಿ ಲೋಕದಲ್ಲಿ ಒಂದಾದ ಮೇಲೆ ಒಂದು ಶಾಕ್ ಎದುರಾಗುತ್ತಲೇ ಇದೆ. ಸಾಕಷ್ಟು ಕಿರುತೆರೆ ನಟಿ ಮತ್ತು ಮಾಡೆಲ್ ಅನುಮಾನಾಸ್ಪದ ಸಾವಾಗುತ್ತಿದೆ. ಈಗ ಒಡಿಶಾದ ಖ್ಯಾತ ಕಿರುತೆರೆ ನಟಿ 23ರ ರಶ್ಮಿ ರೇಖಾ ಓಜಾ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಅವರ ಸಾವಿಗೆ ಬಾಯ್‌ಫ್ರೆಂಡ್ ಸಂತೋಷ್ ಕೈವಾಡವಿದೆ ಅಂತಾ ನಟಿಯ ಪೋಷಕರು ಆರೋಪಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಒಡಿಶಾದ ಸಾಕಷ್ಟು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ ನಟಿ ರಶ್ಮಿರೇಖಾಗೆ ಅಪಾರ ಅಭಿಮಾನಿಗಳ ಬಳಗವಿದೆ. ರಶ್ಮಿಯ ಅಕಾಲಿಕ ಸಾವು ಪೋಷಕರಿಗೆ, ಸ್ನೇಹಿತರಿಗೆ ಶಾಕ್ ನೀಡಿದೆ. ಭುವನೇಶ್ವರದ ನಯಪಿಳ್ಳಿ ಭಾಗದಲ್ಲಿ ರಶ್ಮಿ ರೇಖಾ ಓಜಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದೆ. ಅಸಹಜ ಸಾವು ಅಂತಾ ಪೊಲೀಸರು ಕೇಸ್ ದಾಖಾಲಿಸಿಕೊಂಡಿದ್ದಾರೆ. ಮುಂಚೆ ಆತ್ಮಹತ್ಯೆ ಎಂದು ಪರಿಗಣಿಸಲು ಪೊಲೀಸರು ನಿರ್ಧರಿಸಿದ್ದರು. ಈ ಬೆನ್ನಲ್ಲೇ ರಶ್ಮಿ ಸಾವಿಗೆ ಬಾಯ್‌ಫ್ರೆಂಡ್ ಸಂತೋಷ್ ಕೈವಾಡವಿದೆ ಅಂತಾ ನಟಿಯ ಪೋಷಕರು ಆರೋಪಿಸಿದ ಬಳಿಕ ತನಿಖೆ ಕೈಗೊಳ್ಳಲಾಗಿದೆ. ಇದನ್ನೂ ಓದಿ:ಶೋಭಿತಾ ಧುಲಿಪಾಲ ಜೊತೆ ನಾಗ ಚೈತನ್ಯ ಡೇಟಿಂಗ್: ಸ್ಯಾಮ್ ಖಡಕ್ ರಿಯಾಕ್ಷನ್

    ಸದ್ಯ ನಟಿ ರೇಖಾ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಯ ಬಳಿಕ ನಟಿಯ ಸಾವಿಗೆ ಅಸಲಿ ವಿಚಾರ ಎನು ಎಂಬುದು ಬೆಳಕಿಗೆ ಬರಲಿದೆ. ಪ್ರಾಥಮಿಕ ತನಿಖೆಯಿಂದ ಆತ್ಮಹತ್ಯೆ ಎನ್ನಲಾಗುತ್ತಿದೆ. ರಶ್ಮಿ ಸಾವಿಗೂ ಮುನ್ನ ನನ್ನ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ಮಾಡುವುದಾಗಿ ಭುವನೇಶ್ವರ ಡಿಸಿಪಿ ಮಾಹಿತಿ ನೀಡಿದ್ದಾರೆ.

    Live Tv

  • ಹಸೆಮಣೆ ಏರಿದ `ಕನ್ಯಾಕುಮಾರಿ’ ಧಾರಾವಾಹಿ ನಟಿ ರಶ್ಮಿತಾ ಶೆಟ್ಟಿ

    ಹಸೆಮಣೆ ಏರಿದ `ಕನ್ಯಾಕುಮಾರಿ’ ಧಾರಾವಾಹಿ ನಟಿ ರಶ್ಮಿತಾ ಶೆಟ್ಟಿ

    ಕಿರುತೆರೆ ನಟಿ ರಶ್ಮಿತಾ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವತ್ತಿರುವ ಕನ್ಯಾಕುಮಾರಿ ಧಾರಾವಾಹಿ ನಟಿ ಯಾಮಿನಿ ಅಲಿಯಾಸ್ ರಶ್ಮಿತಾ ಶೆಟ್ಟಿ ಹಸೆಮಣೆ ಏರಿದ್ದಾರೆ. ಈ ಅದ್ದೂರಿ ಮದುವೆಗೆ ಕಿರುತೆರೆ ನಟ ನಟಿರು ಸಾಕ್ಷಿಯಾಗಿದ್ದಾರೆ.

    ತ್ರಿವೇಣಿ ಸಂಗಮ, ಸುಬ್ಬಲಕ್ಷ್ಮಿ ಸಂಸಾರ, ಬ್ರಹ್ಮಾಸ್ತ್ರ, ಹೀಗೆ ಸಾಕಷ್ಟು ಧಾರಾವಾಹಿ ಮೂಲಕ ಮೋಡಿ ಮಾಡಿರುವ ನಟಿ ರಶ್ಮಿತಾ ಜೆ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಸ್ತುತ ಕನ್ಯಾಕುಮಾರಿ ಧಾರಾವಾಹಿಯಲ್ಲಿ ಮಿಂಚ್ತಿರುವ ರಶ್ಮಿತಾ ಖಳನಾಯಕಿಯಾಗಿ ಯಾಮಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2019ರ `ಕೃಷ್ಣ ಗಾರ್ಮೆಟ್ಸ್’ ಚಿತ್ರದಲ್ಲೂ ನಟಿಸಿ ರಶ್ಮಿತಾ ಸೈ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ನಾಳೆ ಉಪೇಂದ್ರ ಹೊಸ ಸಿನಿಮಾಗೆ ಮುಹೂರ್ತ : ಅತಿಥಿಗಳಾದ ನಾಲ್ವರು ಸ್ಟಾರ್ ನಟರು

    ರಶ್ಮಿತಾ ಶೆಟ್ಟಿ ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದು, ಇದೀಗ ಮದುವೆಯ ಫೋಟೋಗಳು ಭಾರೀ ವೈರಲ್ ಆಗುತ್ತಿದೆ. ಈ ಮದುವೆ ಕನ್ಯಾಕುಮಾರಿ ಧಾರಾವಾಹಿ ತಂಡ ಕೂಡ ಸಾಕ್ಷಿಯಾಗಿದೆ. ಸಾಕಷ್ಟು ಕಿರುತೆರೆ ಕಲಾವಿದರು ನವದಂಪತಿಗೆ ಶುಭಹಾರೈಸಿದ್ದಾರೆ.

  • ಪ್ರೀತಿ ಅರಸಿ ಬಂದ ಲವರ್- ಸುತ್ತಿಗೆಯಿಂದ ತಲೆ ಜಜ್ಜಿ ಕೊಲೆಗೈದ ಕಲಾವಿದೆ

    ಪ್ರೀತಿ ಅರಸಿ ಬಂದ ಲವರ್- ಸುತ್ತಿಗೆಯಿಂದ ತಲೆ ಜಜ್ಜಿ ಕೊಲೆಗೈದ ಕಲಾವಿದೆ

    ಚೆನ್ನೈ: ಕಿರುತೆರೆ ಕಲಾವಿದೆಯೊಬ್ಬಳು ತನ್ನ ಪ್ರೀತಿ ಅರಸಿ ಬಂದಿದ್ದ ಪ್ರಿಯಕರನ ಮೇಲೆ ಹಲ್ಲೆ ನಡೆಸಿ, ಸುತ್ತಿಗೆ ಹಾಗೂ ದೊಣ್ಣೆಯಿಂದ ಆತನ ತಲೆ ಜಜ್ಜಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಕೃತ್ಯವೆಸೆಗಿದ ಕಿರುತೆರೆ ಕಲಾವಿದೆಯನ್ನು ಎಸ್. ದೇವಿ(42) ಎಂದು ಗುರುತಿಸಲಾಗಿದ್ದು, ಈಕೆ ಹಲವು ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾಳೆ. ಈಕೆ ತನ್ನ ಪತಿ ಶಂಕರ್, ತಂಗಿ ಲಕ್ಷ್ಮಿ(40), ತಂಗಿ ಪತಿ ಸಾವರಿಯಾರ್(53) ಸಹಾಯದಿಂದ ಫಿಲಂ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಎಂ ರವಿ(38) ಅನ್ನು ಬರ್ಬರವಾಗಿ ಕೊಲೆಗೈದಿದ್ದಾಳೆ.

    ರವಿ ಮಧುರೈ ಮೂಲದವನಾಗಿದ್ದು ಕಳೆದ 8 ವರ್ಷಗಳಿಂದ ಚೆನ್ನೈನಲ್ಲಿ ನೆಲೆಸಿದ್ದನು. ದೇವಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ವೇಳೆ ರವಿ ಹಾಗೂ ಆಕೆ ನಡುವೆ ಸ್ನೇಹ ಬೆಳೆದಿತ್ತು. ಈ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಪ್ರೀತಿಸುತ್ತಿದ್ದರು. ಆದರೆ ಈ ಬಗ್ಗೆ ಕಳೆದ 2 ವರ್ಷದ ಹಿಂದೆ ದೇವಿ ಪತಿ ಶಂಕರ್ ಗೆ  ತಿಳಿದು ರವಿಯಿಂದ ಆಕೆಯನ್ನು ದೂರ ಮಾಡಿದ್ದನು.

    ಆ ಬಳಿಕ ದೇವಿಗೆ ಪತಿ ಹೊಲಿಗೆ ಮಷಿನ್ ತಂದು ಕೊಟ್ಟು ಆಕೆ ಬಟ್ಟೆ ಹೊಲಿಯುವುದರಲ್ಲಿ ಬ್ಯುಸಿಯಾಗುವಂತೆ ಮಾಡಿದನು. ಇತ್ತ ತಾನು ಫರ್ನಿಚರ್ ಅಂಗಡಿ ಇಟ್ಟುಕೊಂಡಿದ್ದನು. ಹೀಗೆ ಇಬ್ಬರು ಜೀವನ ನಡೆಸುತ್ತಿದ್ದರು.

    ಆದರೆ ದೇವಿ ಬಗ್ಗೆ ತಿಳಿಯದೆ ರವಿ ನೊಂದಿದ್ದನು. ಸೋಮವಾರ ಲಕ್ಷ್ಮಿ ಮನೆಗೆ ಬಂದು ದೇವಿ ಬಗ್ಗೆ ವಿಚಾರಿಸಿದ್ದನು. ನಾನು ದೇವಿ ಒಂದಾಗಲು ಸಹಾಯ ಮಾಡು ಎಂದು ಲಕ್ಷ್ಮಿ ಬಳಿ ಕೇಳಿಕೊಂಡಿದ್ದನು. ಹೀಗಾಗಿ ಲಕ್ಷ್ಮಿ ದೇವಿ, ಶಂಕರ್ ಹಾಗೂ ತನ್ನ ಪತಿಗೆ ವಿಷಯ ತಿಳಿಸಿ ಮನೆಗೆ ಬರಲು ಹೇಳಿದಳು.

    ಮನೆಗೆ ಎಲ್ಲರೂ ಬಂದ ಮೇಲೆ ದೇವಿಯನ್ನು ಬಿಟ್ಟುಬಿಡು ಎಂದು ಶಂಕರ್, ಲಕ್ಷ್ಮಿ ಹಾಗೂ ಆಕೆಯ ಪತಿ ತಿಳಿ ಹೇಳಿದರೂ ರವಿ ಕೇಳಿರಲಿಲ್ಲ. ದೇವಿ ನನಗೆ ಬೇಕು ಎಂದು ರವಿ ಪಟ್ಟು ಹಿಡಿದು ಕುಳಿತಿದ್ದನು. ಈ ವೇಳೆ ಅವರ ನಡುವೆ ಮತಿಗೆ ಮಾತು ಬೆಳೆದು ಜಗಳವಾಗಿದ್ದು, ಈ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ.

    ರವಿ ತಮ್ಮ ಮಾತು ಕೇಳದಿದ್ದಾಗ ದೇವಿ ಹಾಗೂ ಆಕೆಯ ಮನೆಯವರು ಆತನ ಮೇಲೆ ಹಲ್ಲೆ ನಡೆಸಿದ್ದು, ಕೈಗೆ ಸಿಕ್ಕ ಸುತ್ತಿಗೆ ಹಾಗೂ ದೊಣ್ಣೆಯಿಂದ ರವಿಯ ತಲೆಗೆ ಬಲವಾಗಿ ಹೊಡೆದು ಆತನನ್ನು ಕೊಲೆ ಮಾಡಿದ್ದಾರೆ. ಬಳಿಕ ದೇವಿಗೆ ತನ್ನ ತಪ್ಪಿನ ಅರಿವಾಗಿದ್ದು ಪೊಲೀಸರಿಗೆ ಶರಣಾಗಿದ್ದಾಳೆ. ಅಲ್ಲದೆ ನಡೆದ ವಿಚಾರವನ್ನು ಪೊಲೀಸರಿಗೆ ತಿಳಿಸಿ ತಪ್ಪೊಪ್ಪಿಕೊಂಡಿದ್ದಾಳೆ.

    ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ರವಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ರವಿ ಸಾವನ್ನಪ್ಪಿದ್ದನು. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಪ್ರಸಿದ್ಧ ಧಾರಾವಾಹಿ ನಟಿ ಮೇಲೆ ಪೆಟ್ರೋಲ್ ಬಂಕ್ ಸಿಬ್ಬಂದಿ ದೌರ್ಜನ್ಯ

    ಪ್ರಸಿದ್ಧ ಧಾರಾವಾಹಿ ನಟಿ ಮೇಲೆ ಪೆಟ್ರೋಲ್ ಬಂಕ್ ಸಿಬ್ಬಂದಿ ದೌರ್ಜನ್ಯ

    ಕೋಲ್ಕತ್ತಾ: ಮಾಡೆಲ್, ಬೆಂಗಾಲಿ ಸೀರಿಯಲ್ ನಟಿಯ ಮೇಲೆ ಪೆಟ್ರೋಲ್ ಬಂಕ್ ಸಿಬ್ಬಂದಿ ದೌರ್ಜನ್ಯ ಎಸಗಿರುವ ಘಟನೆ ಭಾನುವಾರ ಬೆಳಗ್ಗೆ ದಕ್ಷಿಣ ಕೋಲ್ಕತ್ತಾದಲ್ಲಿ ನಡೆದಿದೆ.

    ತಾನು ಹೇಳಿದ್ದಕ್ಕಿಂತ ಜಾಸ್ತಿ ಪೆಟ್ರೋಲ್ ಹಾಕಿದ್ದನ್ನು ಪ್ರಶ್ನಿಸಿದಾಗ ಸಿಬ್ಬಂದಿ ನಟಿ ಜೂಹಿ ಸೆನ್ ಗುಪ್ತಾ ಮೇಲೆ ದೌರ್ಜನ್ಯವೆಸಗಿದ್ದಾರೆ. ಮತ್ತು ಆಕೆಯ ತಂದೆಯ ಮೇಲೆಯೂ ಹಲ್ಲೆ ಮಾಡಲು ಮುಂದಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ನಡೆದಿದ್ದೇನು?
    ಭಾನುವಾರ ಬೆಳಗ್ಗೆ ನಟಿ, ಪೋಷಕರೊಂದಿಗೆ ಕಸ್ಬಾ ಪ್ರದೇಶದಲ್ಲಿರುವ ಬಂಕ್ ಬಳಿ ತನ್ನ ಕಾರಿಗೆ ಪೆಟ್ರೋಲ್ ತುಂಬಿಸಲೆಂದು ತೆರಳಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ನಟಿ ಹೇಳಿದ್ದಕ್ಕಿಂತ ಹೆಚ್ಚು ಅಂದರೆ, 1,500 ರೂ. ಪೆಟ್ರೋಲ್ ಹಾಕುವ ಮೂಲಕ ಟ್ಯಾಂಕ್ ನಿಂದ ಪೆಟ್ರೋಲ್ ಸೋರುವಂತೆ ಮಾಡಿದ್ದಾರೆ.

    ಈ ವಿಚಾರ ನಟಿ ಗಮನಕ್ಕೆ ಬಂದಿದ್ದು, ಅಲ್ಲಿನ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಅವರು ತನ್ನ ತಪ್ಪನ್ನು ಒಪ್ಪಿಕೊಂಡು ಹೆಚ್ಚುವರಿ ಪೆಟ್ರೋಲಿನ ಹಣವನ್ನು ತಾವೇ ಭರಿಸುವುದಾಗಿ ಹೇಳಿದ್ದಾರೆ. ಆದರೆ ಈ ವಿಚಾರವನ್ನು ನಟಿ ತಂದೆ ನಿರಾಕರಿಸಿದ್ದಾರೆ. ಈ ಸಂದರ್ಭದಲ್ಲಿ ಸಿಬ್ಬಂದಿ ಮತ್ತು ನಟಿ, ತಂದೆಯ ಮಧ್ಯೆ ವಾಗ್ವಾದ ನಡೆದಿದೆ. ಜಗಳ ತಾರಕ್ಕೇರಿ ನಟಿ ತಂದೆಯ ಮೇಲೆ ಸಿಬ್ಬಂದಿ ಹಲ್ಲೆ ಮಾಡಲು ಯತ್ನಿಸಿದ್ದಾರೆ.

    ಇಷ್ಟು ಮಾತ್ರವಲ್ಲದೆ ಕಾರಿನ ಕೀಯನ್ನು ಕೂಡ ತೆಗೆದುಕೊಂಡಿದ್ದಾರೆ. ಪರಿಣಾಮ ಜಗಳ ತಾರಕ್ಕೇರಿದೆ. ಪರಿಸ್ಥಿತಿಯನ್ನು ಅರಿತು ಕೂಡಲೇ ಪೊಲೀಸರಿಗೆ ಕರೆ ಮಾಡಿರುವುದುದಾಗಿ ನಟಿ ಹೇಳಿದ್ದಾರೆ. ನಟಿ ಆರೋಪವನ್ನು ಸಿಬ್ಬಂದಿ ತಳ್ಳಿಹಾಕಿದ್ದಾರೆ.

    ಈ ಎಲ್ಲಾ ಘಟನೆಯನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಯುತ್ತಿದ್ದು, ಇದುವರೆಗೂ ಯಾರನ್ನು ಬಂಧಿಸಿಲ್ಲ. ಪೆಟ್ರೋಲ್ ಬಂಕ್ ನಲ್ಲಿರುವ ಸಿಸಿಟಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

  • ವೈರಲ್ ಆಯ್ತು ಕಿರುತೆರೆ ನಟಿಯ ಟಾಪ್‍ಲೆಸ್ ಯೋಗಾ ಪೋಸ್

    ವೈರಲ್ ಆಯ್ತು ಕಿರುತೆರೆ ನಟಿಯ ಟಾಪ್‍ಲೆಸ್ ಯೋಗಾ ಪೋಸ್

    ಮುಂಬೈ: ಕಿರುತೆರೆ ನಟಿ ಹಾಗೂ ನಚ್ ಬಲ್ಲಿಯೆ ಸೀಸನ್ 8ರ ಸ್ಪರ್ಧಿ ಅಬಿಗೈಲ್ ಪಾಂಡೆ ಟಾಪ್‍ಲೆಸ್ ಯೋಗಾ ಪೋಸ್‍ನಿಂದಾಗಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗಿದ್ದಾರೆ.

    ಟಾಪ್‍ಲೆಸ್ ಆಗಿ ಯೋಗ ಮಾಡಿದ ಬ್ಯಾಕ್ ಪೋಸ್ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅಬಿಗೈಲ್ ಪಾಂಡೆ ಹಂಚಿಕೊಂಡಿದ್ದು, ಈ ಪೋಸ್ಟ್ ಸದ್ಯ ಸಖತ್ ವೈರಲ್ ಆಗಿದೆ. ಯೋಗಾಸನ ಆರೋಗ್ಯಕ್ಕೆ ಒಳ್ಳೆಯದು ಎಂದು ಪ್ರೇರೆಪಿಸಲು ಈ ರೀತಿ ಪೋಸ್ಟ್ ಮಾಡಿದ್ದಾರೆ.

    https://www.instagram.com/p/B0dnspZnTQk/?utm_source=ig_embed

    ಫೋಟೋದಲ್ಲಿ ನಟಿ ಟಾಪ್‍ಲೆಸ್ ಆಗಿ ಬೆನ್ನಿನ ಹಿಂದೆ ಎರಡು ಕೈಗಳಿಂದ ನಮಸ್ಕಾರ ಮಾಡಿದ್ದಾರೆ. ಜೊತೆಗೆ ಈ ಪೋಸ್‍ನಲ್ಲಿ ನಾನು ಇನ್ನಷ್ಟು ಸುಂದರವಾಗಿ ಕಾಣುತ್ತಿದ್ದೇನೆ ಎಂದು ಕ್ಯಾಪ್ಷನ್ ಕೂಡ ಹಾಕಿದ್ದಾರೆ. ನ್ಯೂಡ್ ಯೋಗಾ ಗರ್ಲ್ ಏನು ಮಾಡುತ್ತಿದ್ದಾಳೆ ಎನ್ನುವುದನ್ನ ನನ್ನ ಮಾತುಗಳು ಅರ್ಥೈಸಲು ಸಾಧ್ಯವಾಗದಿರಬಹುದು. ಮೊದಲು ಈ ಫೋಟೋ ತೆಗೆಸಿಕೊಂಡು ಪೋಸ್ಟ್ ಮಾಡುವಾಗ ಸಂಕೋಚವಾಯ್ತು. ಬೇರೆಯವರು ಏನು ತಿಳಿಯುತ್ತಾರೆ ಎಂದು ಯೋಚನೆ ಬಂತು. ಆಗ ನನ್ನ ಸ್ನೇಹಿತ ಧೈರ್ಯ ತುಂಬಿದ. ಫೋಟೋ ಕ್ಲಿಕ್ಕಿಸುವ ವೇಳೆ ಯಾರು ನನ್ನನ್ನು ನೋಡುತ್ತಿಲ್ಲ ಅಂತ ತಿಳಿದಿತ್ತು. ಆದರೂ ಎಲ್ಲೋ ಸಂಕೋಚ, ಭಯ ಕಾಡುತಿತ್ತು. ಬಳಿಕ ಧೈರ್ಯದಿಂದ ಇದನ್ನು ಅಪ್‍ಲೋಡ್ ಮಾಡಿದ್ದೇನೆ. ಇದು ನನ್ನ ಕಥೆ ನಿಮ್ಮ ಕಥೆ ಏನು ಎಂದು ಇನ್‍ಸ್ಟಾ ಪೋಸ್ಟ್ ನಲ್ಲಿ ನಟಿ ಬರೆದುಕೊಂಡಿದ್ದಾರೆ.

    ಕೆಲವು ದಿನಗಳ ಹಿಂದೆ, ಅಬಿಗೈಲ್ ಅವರ ಆಪ್ತ ಸ್ನೇಹಿತೆ ಆಶ್ಕಾ ಗೊರಾಡಿಯಾ ಅವರು ಯೋಗ ಬ್ಲಾಗರ್ ನ್ಯೂಡ್ ಯೋಗಾಗರ್ಲ್ ಫೋಟೋ ಹಾಕಿದ್ದರು.

  • ಫ್ಯಾನ್ ಗೆ ನೇಣುಬಿಗಿದ ಸ್ಥಿತಿಯಲ್ಲಿ ಕಿರುತೆರೆ ನಟಿಯ ಶವ ಪತ್ತೆ

    ಫ್ಯಾನ್ ಗೆ ನೇಣುಬಿಗಿದ ಸ್ಥಿತಿಯಲ್ಲಿ ಕಿರುತೆರೆ ನಟಿಯ ಶವ ಪತ್ತೆ

    ಕೋಲ್ಕತ್ತಾ: ಇಲ್ಲಿನ ಅಶೋಕ ನಗರದಲ್ಲಿರೋ ತನ್ನ ಕೋಣೆಯ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಬೆಂಗಾಲಿ ಕಿರುತೆರೆ ನಟಿಯೊಬ್ಬರ ಮೃತದೇಹ ಪತ್ತೆಯಾಗಿದೆ.

    23 ವರ್ಷದ ಮೌಮಿತ ಸಹಾ ಅವರು ದಕ್ಷಿಣ ಕೋಲ್ಕತ್ತಾದ ಅಶೋಕ ನಗರದ ರೀಜೆಂಟ್ ಪಾರ್ಕ್ ಪ್ರದೇಶದ ಫ್ಲಾಟ್ ನಲ್ಲಿ ಬಾಡಿಗೆಗೆ ಒಬ್ಬರೇ ವಾಸಿಸುತ್ತಿದ್ದರು ಎಂಬುದಾಗಿ ವರದಿಯಾಗಿದೆ.

    ಶುಕ್ರವಾರ ರಾತ್ರಿ ಮೌಮಿತಾ ಅವರ ತಂದೆ ಮಗಳಿಗೆ ಕರೆ ಮಾಡಿದ್ದಾರೆ. ಆದ್ರೆ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿರಲಿಲ್ಲ. ಇದರಿಂದ ಆತಂಕಗೊಂಡ ಮೌಮಿತಾ ತಂದೆ ಮನೆ ಮಾಲೀಕನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಮನೆ ಮಾಲೀಕ 10 ಗಂಟೆ ಸುಮಾರಿಗೆ ಮೌಮಿತಾ ಇದ್ದ ರೂಮ್ ನ ಬಾಗಿಲು ಒಡೆದಿದ್ದಾರೆ. ಈ ವೇಳೆ ಮೌಮಿತಾ ಫ್ಯಾನ್ ಗೆ ತನ್ನ ದುಪ್ಪಟ್ಟದಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಕೋಣೆಯಲ್ಲಿ ಆತ್ಮಹತ್ಯಾ ಪತ್ರವೊಂದು ಪೊಲೀಸರ ಕೈಗೆ ಸಿಕ್ಕಿದೆ. ಪತ್ರದಲ್ಲಿ ತಾನು ಮಾಡುತ್ತಿರುವ ವೃತ್ತಿಯಲ್ಲಿ ಯಾವುದೇ ಯಶಸ್ಸು ಕಾಣದಿರುವುದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಬರೆದುಕೊಂಡಿದ್ದಾರೆ. ಆದ್ರೆ ಈ ಬಗ್ಗೆ ಯಾವುದೇ ಕೇಸು ದಾಖಲಾಗಿಲ್ಲ. ಸದ್ಯ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಕಳುಹಿಸಲಾಗಿದ್ದು, ಅಸಹಜ ಸಾವು ಎಂದು ಶಂಕಿಸಲಾಗಿದೆ ಅಂತ ಉಪ ಪೊಲೀಸ್ ಆಯುಕ್ತ ನಿಂಬಾಳ್ಕರ್ ಸಂತೋಷ್ ಉತ್ತಮ್‍ರಾವ್ ತಿಳಿಸಿದ್ದಾರೆ.

    ಮೌಮಿತಾ ಅವರ ಮೊಬೈಲ್ ಫೋನನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕರೆಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಒಟ್ಟಿನಲ್ಲಿ ಮರಣೋತ್ತರ ಪರೀಕ್ಷೆಯ ವರದಿಯ ಬಳಿಕವಷ್ಟೇ ಹೆಚ್ಚಿನ ಮಾಹಿತಿ ತಿಳಿಯಬಹುದಾಗಿದೆ ಎನ್ನಲಾಗಿದೆ.

    ಚಿತ್ರರಂಗದಲ್ಲಿ ಅವರು ಯಶಸ್ಸು ಕಾಣದೇ ಇದ್ದ ಹಿನ್ನೆಲೆಯಲ್ಲಿ ಮೌಮಿತಾ ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂದು ಅವರ ಆಪ್ತ ವಲಯದ ಮಾಹಿತಿಯನ್ನು ಉಲ್ಲೇಖಿಸಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದೆ.

  • ಸೆಕ್ಸ್ ರ‍್ಯಾಕೆಟ್: ಇಬ್ಬರು ನಟಿಯರು ಸೇರಿ ಐವರ ಬಂಧನ-ಕಾಂಡೋಮ್, ಹಣ ಪತ್ತೆ

    ಸೆಕ್ಸ್ ರ‍್ಯಾಕೆಟ್: ಇಬ್ಬರು ನಟಿಯರು ಸೇರಿ ಐವರ ಬಂಧನ-ಕಾಂಡೋಮ್, ಹಣ ಪತ್ತೆ

    ಹೈದರಾಬಾದ್: ಎರಡು ದಿನಗಳ ಹಿಂದೆ ನಗರದಲ್ಲಿ ಪೊಲೀಸರು ಹೈ ಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ್ದು, ಇಬ್ಬರೂ ನಟಿಯರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

    ರಿಚಾ ಸೆಕ್ಸೆನಾ ಮತ್ತು ಶುಭ್ರಾ ಚಟರ್ಜಿ ಸೆಕ್ಸ್ ದಂಧೆಯಲ್ಲಿಯಲ್ಲಿ ಬಂಧಿತರಾದ ನಟಿಯರು. ಇಬ್ಬರೂ ತೆಲಗು ಮತ್ತು ಬಂಗಾಳಿ ಸಿನಿಮಾಗಳ ನಟಿಯರಾಗಿದ್ದು, ಹೈದರಾಬಾದ್ ನ ತಾಜ್ ಡೆಕ್ಕನ್ ಹೋಟೆಲ್ ನಲ್ಲಿ ರೂಮ್ ಬಾಡಿಗೆಗೆ ಪಡೆದುಕೊಂಡು ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದರು. ಪಿಂಪ್ (ದಲ್ಲಾಳಿ) ಒಬ್ಬ ಆನ್‍ಲೈನ್ ಮೂಲಕ ಗಿರಾಕಿಗಳನ್ನು ಬುಕ್ ಮಾಡಿ ಇವರತ್ತ ಕಳುಹಿಸುತ್ತಿದ್ದನು. ಪೊಲೀಸರು ಐಪಿ ಅಡ್ರೆಸ್ ಮೂಲಕ ಪಿಂಪ್ ವಿಳಾಸವನ್ನು ಪತ್ತೆ ಹಚ್ಚಿ, ಸಿವಿಲ್ ಡ್ರೆಸ್ ನಲ್ಲಿ ಬಂದು ನಟಿಯರನ್ನು ಬಂಧಿಸಿದ್ದಾರೆ.

    ದಾಳಿ ವೇಳೆ ಪೊಲೀಸರಿಗೆ ಹೋಟೆಲ್ ನಲ್ಲಿ 50 ಸಾವಿರ ನಗದು, ಮೊಬೈಲ್ ಫೋನ್ ಮತ್ತು ಕೆಲವು ಕಾಂಡೋಮ್ ಗಳು ಸಿಕ್ಕಿವೆ. ಬಂಧಿತರಲ್ಲಿ ಇಬ್ಬರು ನಟಿಯರಾದ್ರೆ, ದಂಧೆಯ ಸಂಘಟಕ, ಮತ್ತೊಬ್ಬ ಬಾಲಿವುಡ್ ಸಿನಿಮಾ ನಿರ್ದೇಶಕ ಮೊನಿಶಾ ಕಾಡಕೈ, ಇನ್ನೊಬ್ಬ ಆಂಧ್ರ ಪ್ರದೇಶದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವೆಂಕಟ್ ರಾವ್ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೋಟೆಲ್ ನ ಇಬ್ಬರೂ ಮ್ಯಾನೇಜರ್ ಗಳನ್ನು ಸಹ ಬಂಧಿಸಿದ್ದಾರೆ. ನಟಿಯರ ರೂಮಿಗೆ ಪುರುಷರನ್ನು ಕಳುಹಿಸುತ್ತಿದ್ದ ಪಿಂಪ್ ನಾಪತ್ತೆಯಾಗಿದ್ದಾನೆ.

    ಇಬ್ಬರೂ ನಟಿಯರು ಹೋಟೆಲ್ ನ ಎರಡು ಬೇರೆ ರೂಮಿನಲ್ಲಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಮೂಲದ ಇಬ್ಬರೂ ನಟಿಯರನ್ನು ಪೊಲೀಸರು ಬಂಧಿಸಿದ್ದು, ಮೊಬೈಲ್ ಫೋನ್, ಹಣ, ಅಶ್ಲೀಲ ಫೋಟೋಗಳು, ನಟಿಯರ ಫೋನ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಈ ಸೆಕ್ಸ್ ರ‍್ಯಾಕೆಟ್ ಪಿಂಪ್ ಗಳು ನಗರದ ಶ್ರೀಮಂತ ವ್ಯಕ್ತಿಗಳಿಗೆ ಬಲೆಯನ್ನು ಬೀಸುತ್ತಿದ್ದರು. ಒಂದು ರಾತ್ರಿಗೆ ಒಂದು ಲಕ್ಷ ರೂ. ರೇಟ್ ಫಿಕ್ಸ್ ಮಾಡಿದ್ದರು. ಆದರೆ ವೇಶ್ಯಾವಾಟಿಕೆಯ ಮುಖ್ಯಸ್ಥ ಮಾತ್ರ ಗಿರಾಕಿಗಳಿಂದ ಭಾರೀ ಮೊತ್ತದ ಹಣವನ್ನು ಪಡೆದುಕೊಂಡು, ನಟಿಯರಿಗೆ ಕಡಿಮೆ ಹಣವನ್ನು ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಪಿಂಪ್ ಗಳು ನಟಿಯರಿಗೆ ಸಿನಿಮಾದಲ್ಲಿ ಇದಕ್ಕೂ ಹೆಚ್ಚಿನ ಹಣವನ್ನು ಗಳಿಸಬಹುದು ಎಂದು ನಂಬಿಸಿದ್ದರು.