Tag: turtle

  • ಆಮೆ ಕರಿ ಸರಿಯಾಗಿ ಮಾಡಿಲ್ಲವೆಂದು ಪತ್ನಿಯನ್ನೇ ಕೊಂದು ಹಿತ್ತಲಲ್ಲಿ ಹೂತು ಹಾಕಿದ

    ಆಮೆ ಕರಿ ಸರಿಯಾಗಿ ಮಾಡಿಲ್ಲವೆಂದು ಪತ್ನಿಯನ್ನೇ ಕೊಂದು ಹಿತ್ತಲಲ್ಲಿ ಹೂತು ಹಾಕಿದ

    ಭುವನೇಶ್ವರ್: ಸುಟ್ಟು ಹೊಗಿದ್ದ ಹೋಗಿದ್ದ ಆಮೆ (Turtle) ಕರಿಯನ್ನು ಹಾಕಿದ್ದಕ್ಕೆ ಮದ್ಯವ್ಯಸನಿಯೊಬ್ಬ ಪತ್ನಿಯೊಂದಿಗೆ (Wife) ಜಗಳವಾಡಿ ಆಕೆಯನ್ನು ಕೊಂದು ಮನೆಯ ಹಿತ್ತಲಿನಲ್ಲಿ ಹೂತಿಟ್ಟ ಘಟನೆ ಪಶ್ಚಿಮ ಓಡಿಶಾದ (Odisha) ಸಂಬಲ್‍ಪುರ ಜಿಲ್ಲೆಯಲ್ಲಿ ನಡೆದಿದೆ.

    ರಂಜನ್ ಬಡಿಂಗ್ (36) ಎಂಬಾತ ಪತ್ನಿ ಸಾಬಿತ್ರಿ (35)ಯನ್ನು ಕೊಲೆ ಮಾಡಿದ್ದಾನೆ. ಈತ ಬದ್ಮಾಲ್ ಪಂಚಾಯತ್‍ನ ರೌತ್‍ಪಾರಾ ಗ್ರಾಮದ ತನ್ನ ಮನೆಗೆ ಆಮೆಯನ್ನು ತಂದಿದ್ದನು. ಇದಾದ ಬಳಿಕ ಸಾಬಿತ್ರಿ ಬಳಿ ಕರಿ ಮಾಡಿಕೊಡಲು ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಸಾಬಿತ್ರಿ ಕರಿ ಮಾಡುವಾಗ ಆಮೆಯ ಮಾಂಸ ಸ್ವಲ್ಪ ಸುಟ್ಟು ಹೋಗಿತ್ತು. ಈ ಹಿನ್ನೆಲೆಯಲ್ಲಿ ವಾಗ್ವಾದ ನಡೆದಿದೆ.

    crime

    ಘಟನೆಗೆ ಸಂಬಂಧಿಸಿ ಆಕೆಯನ್ನು ರಂಜನ್ ತೀವ್ರವಾಗಿ ಥಳಿಸಿದ್ದಾನೆ. ಇದರಿಂದಾಗಿ ಆಕೆ ಪ್ರಜ್ಞಾ ಹೀನಸ್ಥಿತಿಗೆ ತಲುಪಿದ್ದಾಳೆ. ಇದಾದ ಬಳಿಕ ಆತ ಮನೆಯಿಂದ ಹೊರಬಂದಿದ್ದಾನೆ. ಸ್ವಲ್ಪ ಸಮಯದ ನಂತರ ಮನೆಗೆ ಬಂದಾಗ ಆಕೆ ಮೃತ ಪಟ್ಟಿರುವುದನ್ನು ರಂಜನ್ ಗಮನಿಸಿದ್ದಾನೆ. ಇದಾದ ಬಳಿಕ ಯಾರಿಗೂ ತಿಳಿಯದಂತೆ ರಂಜನ್ ಶವವನ್ನು ಹಿತ್ತಲಿನಲ್ಲಿ ಹೂತು ಹಾಕಿದ್ದಾನೆ. ನಂತರ ಸಾಬಿತ್ರಿ ಕೋಪದಿಂದ ಹೊರಟು ಹೋಗಿದ್ದಾಳೆ ಎಂದು ಪ್ರಚಾರ ಮಾಡಿದ್ದಾನೆ. ಇದನ್ನೂ ಓದಿ: ಕಳ್ಳತನಕ್ಕೆ ಬಂದ ಮನೆಯಲ್ಲೇ ಖದೀಮ ಆತ್ಮಹತ್ಯೆ

    ಘಟನೆಗೆ ಸಂಬಂಧಿಸಿ ಸಾಬಿತ್ರಿ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಂಜನ್‍ನ್ನು ವಿಚಾರಣೆ ನಡೆಸಿದಾಗ ಆತ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಗ್ರಾಮಸ್ಥರು ಆತನನ್ನು ಹಿಡಿದು ಪೊಲೀಸರಿಗೆ ಕೊಟ್ಟಿದ್ದಾರೆ. ಈ ವೇಳೆ ರಂಜನ್ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ – ಟ್ರಕ್‍ಗೆ ಗುದ್ದಿದ ಬಸ್ 14 ಸಾವು, 40 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಕಡಲಾಮೆ, ಸಾಗರ ಪಕ್ಷಿಗೆ ಮರುಜೀವ ನೀಡಿದ ಅರಣ್ಯ ಇಲಾಖೆ

    ಕಡಲಾಮೆ, ಸಾಗರ ಪಕ್ಷಿಗೆ ಮರುಜೀವ ನೀಡಿದ ಅರಣ್ಯ ಇಲಾಖೆ

    ಉಡುಪಿ: ಕಡಲ ಆಮೆ ಮತ್ತು ಸೀಬರ್ಡ್ ಗೆ ಜಿಲ್ಲೆಯ ಅರಣ್ಯ ಇಲಾಖೆ ಸಿಬ್ಬಂದಿ ಮರುಜೀವ ನೀಡಿದ್ದಾರೆ.

    ಒಂದು ತಿಂಗಳ ಹಿಂದೆ ಬೀಜಾಡಿ ಕಡಲತೀರದಲ್ಲಿ ಗಾಯಗೊಂಡ ಸುಮಾರು 20 ಕೆ.ಜಿ.ಯ ಕಡಲಾಮೆ ಮೀನುಗಾರರಿಗೆ ಸಿಕ್ಕಿತ್ತು. ಹರಿತವಾದ ಬಲೆ ಕಡಲ ಆಮೆಯ ಕಾಲಿಗೆ ಗಾಸಿ ಮಾಡಿತ್ತು. ಮೀನುಗಾರರು ಕಡಲಾಮೆಯ ರಕ್ಷಣೆ ಮಾಡಿ ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದರು. ಸುಮಾರು ಒಂದು ತಿಂಗಳ ಕಾಲ ಪಾಲನೆ-ಪೋಷಣೆ ಮಾಡಿದ ಅರಣ್ಯ ಇಲಾಖೆ, ಕಾಲಿನ ಗಾಯವನ್ನು ಗುಣಪಡಿಸಿದೆ. ಸಾಗರ ಜೀವಿಗಳ ತಜ್ಞ ಬೆಂಗಳೂರಿನ ಡಾ. ಶಂತನು ವಿಶೇಷ ಮುತುವರ್ಜಿಯಲ್ಲಿ ಚಿಕಿತ್ಸೆ ಕೊಟ್ಟಿದ್ದರು.

    ಈ ಮೂಲಕ ಸುಮಾರು 250 ವರ್ಷ ಆಯಸ್ಸು ಇರುವ ಆಮೆಗೆ ಮರುಜೀವ ಸಿಕ್ಕಿದೆ. ಗುಣಪಡಿಸಲಾದ ಆಮೆಯನ್ನು ಇದೀಗ ಮರಳಿ ಸಮುದ್ರಕ್ಕೆ ಬಿಡಲಾಗಿದೆ.

    ಇದಾದ ಬಳಿಕ 15 ದಿನಗಳ ಹಿಂದೆ ಹಾರಲಾಗದೆ ಒದ್ದಾಡುತ್ತಿದ್ದ ಸಮುದ್ರ ಪಕ್ಷಿ ಮೀನುಗಾರರಿಗೆ ಸಿಕ್ಕಿತ್ತು. ಪಕ್ಷಿಯನ್ನು ಮೀನುಗಾರರು ಅರಣ್ಯ ಇಲಾಖೆಗೆ ನೀಡಿದ್ದರು. ಸಮುದ್ರ ಪಕ್ಷಿಗೆ ಶುಶ್ರೂಷೆ ಮಾಡಿದ ಅರಣ್ಯ ಇಲಾಖೆ ಕೆಲ ದಿನಗಳ ಹಿಂದೆ ಸಮುದ್ರ ತೀರದಲ್ಲಿ ಸ್ವಚ್ಛಂದವಾಗಿ ಹಾರಲು ಬಿಟ್ಟಿದ್ದರು. ಆದರೆ ಹಕ್ಕಿ ಹಾರದೆ ಹಿಂದೆ ಬಂದಿತ್ತು. ಇದೀಗ ಅರಣ್ಯ ಇಲಾಖೆ ಕಡಲತಡಿಯಿಂದ ಒಂದು ಕಿಲೋಮೀಟರ್ ದೂರ ಹೋಗಿ ಬಿಟ್ಟು ಬಂದಿದ್ದಾರೆ.

    ಕಡಲ ಆಮೆ ಮತ್ತು ಸಾಗರ ಪಕ್ಷಿ ವನ್ಯಜೀವಿ ವ್ಯಾಪ್ತಿಗೆ ಬರುತ್ತದೆ. ಈ ವರ್ಷ ಎಂಟು ಆಮೆ ರಕ್ಷಣೆ ಮಾಡಿದ್ದೇವೆ. ಮಳೆಗಾಲದಲದಲ್ಲಿ ಕಡಲಬ್ಬರಕ್ಕೆ ಸಿಕ್ಕಿ ಪ್ರತಿ ವರ್ಷ ಕಡಲಾಮೆ, ಪಕ್ಷಿಗಳನ್ನು ಮೀನುಗಾರರು ರಕ್ಷಣೆ ಮಾಡುತ್ತಾರೆ. ನಾವು ಶುಶ್ರೂಷೆ ಮಾಡುತ್ತೇವೆ ಎಂದು ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

  • ನಕ್ಷತ್ರ ಆಮೆ ಜೊತೆಗೆ ಅಪರೂಪದ ಆಮೆ ಮಾರಾಟಕ್ಕೆ ಯತ್ನ – ಆರೋಪಿ ಬಂಧನ

    ನಕ್ಷತ್ರ ಆಮೆ ಜೊತೆಗೆ ಅಪರೂಪದ ಆಮೆ ಮಾರಾಟಕ್ಕೆ ಯತ್ನ – ಆರೋಪಿ ಬಂಧನ

    ಮಡಿಕೇರಿ: ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆ ಜೊತೆಗೆ ಮತ್ತೊಂದು ಅಪರೂಪದ ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಮಡಿಕೇರಿ ಅರಣ್ಯ ಪೊಲೀಸರು ಬಂಧಿಸಿದ್ದಾರೆ.

    ಅಬ್ದುಲ್ ಹಮೀದ್ ಬಂಧಿತ ಆರೋಪಿ. ಮಡಿಕೇರಿ ತಾಲೂಕಿನ ಎಂ.ಬಾಡಗ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಅಬ್ದುಲ್ ಹಮೀದ್ ಒಂದು ಜೀವಂತ ನಕ್ಷತ್ರ ಆಮೆ ಮತ್ತು ಮತ್ತೊಂದು ಜೀವಂತ ಅಪರೂಪದ ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಎನ್ನಲಾಗಿದೆ.

    ಖಚಿತ ಮಾಹಿತಿ ಆಧಾರದ ಮೇರೆಗೆ ಎಚ್ಚೆತ್ತುಕೊಂಡ ಮಡಿಕೇರಿ ಅರಣ್ಯ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೇ ಎರಡು ಆಮೆಯನ್ನು ರಕ್ಷಣೆ ಮಾಡಲಾಗಿದೆ.

    ಈ ಕುರಿತು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

  • ಆಮೆ ಕೊಳ್ಳುವವರ ವೇಷದಲ್ಲಿ ಅರಣ್ಯಾಧಿಕಾರಿಗಳು- 5 ಲಕ್ಷಕ್ಕೆ ಮಾರಲು ಬಂದವ ಅಂದರ್

    ಆಮೆ ಕೊಳ್ಳುವವರ ವೇಷದಲ್ಲಿ ಅರಣ್ಯಾಧಿಕಾರಿಗಳು- 5 ಲಕ್ಷಕ್ಕೆ ಮಾರಲು ಬಂದವ ಅಂದರ್

    ಬೆಳಗಾವಿ: ಅನಧಿಕೃತವಾಗಿ ಆಮೆಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬೆಳಗಾವಿ ವಲಯ ಅರಣ್ಯಾಧಿಕಾರಿಗಳು ತಡರಾತ್ರಿ ವಶಕ್ಕೆ ಪಡೆದಿದ್ದಾರೆ.

    ತಾಲೂಕಿನ ಬಿಜಗರಣಿ ಮತ್ತು ರಾಕಸಕೊಪ್ಪ ಮದ್ಯದಲ್ಲಿ ಆರ್.ಎಫ್.ಓ ಆರ್.ಎಚ್. ಡೊಂಬರಗಿ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆಮೆ ಕೊಳ್ಳುವವರ ಸೋಗಿನಲ್ಲಿ DRFO ವಿನಯ್ ಗೌಡರ, ರಮೇಶ್ ಗಿರಿಯಪ್ಪನವರ ಮತ್ತು ಅರಣ್ಯ ಸಿಬ್ಬಂದಿ ಮೊಹಮ್ಮದ ಕಿಲ್ಲೇದಾರ ತಪಾಸಣೆ ನಡೆಸಿದ್ದರು. ಈ ವೇಳೆ ಆರೋಪಿ ಪ್ರತಿ ಆಮೆಗೆ 5 ಲಕ್ಷ ರೂ.ಗೆ ಅರಣ್ಯಾಧಿಕಾರಿಗಳಿಗೆ ಮಾರಾಟ ಮಾಡಲು ಯತ್ನಿಸಿದ್ದಾನೆ. ಆರೋಪಿ ಸಹಿತ ಬೈಕ್ ಮತ್ತು ಆಮೆ ವಶಕ್ಕೆ ಪಡೆಯಲಾಗಿದೆ.

    ಆರೋಪಿ ಅಮೃತ ಶಿವಾಜಿ ಬೆನಕೆ(45) ಈತ ಮಹಾರಾಷ್ಟ್ರದ ಚಂದಗಡ ತಾಲೂಕಿನ ಡೆಕೊಳಿ ಗ್ರಾಮದವನಾಗಿದ್ದಾನೆ. ಸಿಸಿಎಫ್ ಪಿ.ಬಿ. ಕರುಣಾಕರ್, ಡಿಸಿಎಫ್ ಎಂ.ವಿ. ಅಮರನಾಥ್ ಹಾಗೂ ಎಸಿಎಫ್ ಎಸ್.ಎಂ.ಸಂಗೊಳ್ಳಿ ಕಾರ್ಯಚರಣೆಗೆ ಮಾರ್ಗದರ್ಶನ ನೀಡಿದರು.

  • ಆಮೆಯ ಹೊಟ್ಟೆಯಿಂದ 915 ನಾಣ್ಯಗಳನ್ನ ಹೊರತೆಗೆದ ವೈದ್ಯರು

    ಆಮೆಯ ಹೊಟ್ಟೆಯಿಂದ 915 ನಾಣ್ಯಗಳನ್ನ ಹೊರತೆಗೆದ ವೈದ್ಯರು

    ಬ್ಯಾಂಕಾಕ್: ಆಮೆಯೊಂದರ ಹೊಟ್ಟೆಯಿಂದ 915 ನಾಣ್ಯಗಳನ್ನು ಹೊರತೆಗೆಯುವಲ್ಲಿ ಥೈಲ್ಯಾಂಡ್‍ನ ಪಶುವೈದ್ಯರು ಯಶಸ್ವಿಯಾಗಿದ್ದಾರೆ.

    25 ವರ್ಷದ ಓಮ್ಸಿನ್ ಹೆಸರಿನ ಆಮೆಗೆ ಸೋಮವಾರದಂದು 7 ಗಂಟೆಗಳ ಕಾಲ ಸರ್ಜರಿ ಮಾಡಿ 5 ಕೆಜಿ ತೂಕದ ನಾಣ್ಯಗಳನ್ನ ಹೊರತೆಗೆದಿದ್ದಾರೆ.

    ಆಮೆಯ ಮೇಲ್ಮೈನ ಚಿಪ್ಪಿನಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಅದನ್ನು ಪಶುವೈದ್ಯರ ಬಳಿ ತೆಗೆದುಕೊಂಡು ಹೋಗಲಾಗಿತ್ತು, ವೈದ್ಯರು ಆಮೆಯ ಎಕ್ಸ್‍ರೇ ತೆಗೆದು ನೋಡಿದಾಗ ಅದರ ಹೊಟ್ಟೆಯಲ್ಲಿ ನಾಣ್ಯಗಳಿದ್ದಿದ್ದು ಗೊತ್ತಾಯ್ತು.

    ಆಮೆಯ ಹೊಟ್ಟೆಯಲ್ಲಿ 915 ನಾಣ್ಯಗಳಿದ್ದವು. ಅವನ್ನು ಒಂದೊಂದಾಗಿ ಹೊರತೆಗೆದಿದ್ದೇವೆ ಎಂದು ತಿಳಿಸಿರೋ ವೈದ್ಯರು ಈ ರೀತಿಯ ಸರ್ಜರಿ ಮಾಡಿದ್ದು ಇದೇ ಮೊದಲು ಎಂದಿದ್ದಾರೆ.

    ಆಮೆಯ ಹೊಟ್ಟೆಗೆ ನಾಣ್ಯ ಹೋಗಿದ್ದು ಹೇಗೆ?: ಈ ಆಮೆ ಇಲ್ಲಿನ ಚೋನ್ಬುರಿ ಪ್ರಾಂತ್ಯದಲ್ಲಿರುವ ಚಿಕ್ಕ ಪಾರ್ಕ್‍ವೊಂದರ ಕೊಳದಲ್ಲಿ ಎರಡು ದಶಕಗಳಿಂದ ಜೀವಿಸುತ್ತಿದೆ. ಇಲ್ಲಿಗೆ ಬರುವ ಜನ ಕೊಳಕ್ಕೆ ನಾಣ್ಯಗಳನ್ನ ಎಸೆದು ಅದೃಷ್ಟ ಬರಲಿ/ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳುವ ರೂಢಿಯಿದೆ. ಹೀಗೆ ಕೊಳಕ್ಕೆ ಬಿದ್ದ ನಾಣ್ಯಗಳನ್ನ ಆಮೆ ನುಂಗಿದ್ದು ಅದರ ಹೊಟ್ಟೆಯಲ್ಲಿದ್ದ ಒಟ್ಟು 915 ನಾಣ್ಯಗಳನ್ನು ಈಗ ಹೊರತೆಗೆಯಲಾಗಿದೆ.

    ಆಮೆಗಳು ಕನಿಷ್ಠ ಎಂದರೂ 80 ವರ್ಷಗಳ ಕಾಲ ಬದುಕುತ್ತವೆ. ಹೀಗಾಗಿ ಆಮೆಗಳಿರುವ ಕೊಳಕ್ಕೆ ನಾಣ್ಯ ಎಸೆಯುವವರು ದೀರ್ಘ ಕಾಲ ಬದುಕುತ್ತಾರೆ ಎಂಬ ನಂಬಿಕೆಯಿದೆ. ಆದ್ರೆ ನಾಣ್ಯ ಎಸೆಯುವುದು ಪ್ರಾಣಿ ಹಿಂಸೆ ಎಂದು ಚೌಲಾಲೊಂಗ್‍ಕೊರ್ನ್‍ನ ಪಶು ವಿಜ್ಞಾನ ವಿಭಾಗದ ಡೀನ್ ರುಂಗ್ರೊಜ್ ಹೇಳಿದ್ದಾರೆ.