Tag: turkey

  • ಟರ್ಕಿ ಭೂಕಂಪ – ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಟೆಕ್ಕಿ ಪಾಸ್‌ಪೋರ್ಟ್ ಪತ್ತೆ

    ಟರ್ಕಿ ಭೂಕಂಪ – ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಟೆಕ್ಕಿ ಪಾಸ್‌ಪೋರ್ಟ್ ಪತ್ತೆ

    ನವದೆಹಲಿ: ಟರ್ಕಿಯಲ್ಲಿ (Turkey) ಸಂಭವಿಸಿದ ಪ್ರಬಲ ಭೂಕಂಪದಲ್ಲಿ ನಾಪತ್ತೆಯಾಗಿದ್ದ ಬೆಂಗಳೂರು (Bengaluru) ಮೂಲದ ಟೆಕ್ಕಿ ವಿಜಯ್ ಕುಮಾರ್ ಪಾಸ್‌ಪೋರ್ಟ್ ಪತ್ತೆಯಾಗಿದೆ. ಪೂರ್ವ ಟರ್ಕಿಯ ಅನಾಟೋಲಿಯಾ ಪ್ರದೇಶದ ಮಲತ್ಯದಲ್ಲಿರುವ ಅವಸರ್ ಹೋಟೆಲ್‌ನ ಅವಶೇಷಗಳ ತೆರವು ಕಾರ್ಯಾಚರಣೆ ವೇಳೆ ಪಾಸ್‌ಪೋರ್ಟ್ (Passport) ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

    24 ಅಂತಸ್ತಿನ ಅವಸರ್ ಹೋಟೆಲ್‌ನ (Hotel) ಎರಡನೇ ಮಹಡಿಯಲ್ಲಿ ವಿಜಯ್ ಕುಮಾರ್ ತಂಗಿದ್ದ ಎನ್ನಲಾಗಿದ್ದು, ಅವರ ಪಾಸ್‌ಪೋರ್ಟ್ ಜೊತೆಗೆ ಕೆಲವು ವಸ್ತುಗಳು ಲಭ್ಯವಾಗಿವೆ. ಕಟ್ಟಡ ತೆರವು ಕಾರ್ಯಚರಣೆ ವೇಳೆ ವಸ್ತುಗಳು ಹೊರೆತು ಯಾವುದೇ ಮೃತದೇಹಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ವಿಜಯ್ ಕುಮಾರ್ ಇನ್ನು ಜೀವಂತವಾಗಿರಬಹುದು ಎಂದು ಭರವಸೆ ವ್ಯಕ್ತಪಡಿಸಲಾಗುತ್ತಿದೆ. ಇದನ್ನೂ ಓದಿ: ನಿರಾಣಿ ಬೆಂಬಲಿಗರಿಂದ ಮುಂದುವರಿದ ಗಿಫ್ಟ್ ಪಾಲಿಟಿಕ್ಸ್- ಸಕ್ಕರೆ ತಿರಸ್ಕರಿಸಿದ ಮತ್ತೊಬ್ಬ ವ್ಯಕ್ತಿ!

    ಸದ್ಯ ಭಾರತದ ರಕ್ಷಣಾ ತಂಡಗಳು ವಿಜಯ್ ಕುಮಾರ್ ಹುಡುಕಾಟ ನಡೆಸಿದ್ದು, ಇನ್ನು ಅವರು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆಗಳಲ್ಲಿ ಅವರ ಹುಡುಕಾಟ ಮುಂದುವರಿದಿದೆ. ಉತ್ತರಾಖಂಡ್‌ನ ಪೌರಿ ಗರ್ವಾಲ್‌ನ ವಿಜಯ್ ಕುಮಾರ್ ಮತ್ತು ಬೆಂಗಳೂರು ಮೂಲದ ಕಂಪನಿಯೊಂದರ ಉದ್ಯೋಗಿಯಾಗಿದ್ದರು. ಸದ್ಯ ಡೆಹ್ರಾಡೋನ್‌ನಲ್ಲಿ ನೆಲೆಯಾಗಿರುವ ಕುಟುಂಬ ವಿಜಯ್ ಕುಮಾರ್ ಜೀವಂತವಾಗಿ ವಾಪಸ್ ಬರಲಿ ಎಂದು ಪ್ರಾರ್ಥಿಸುತ್ತಿದೆ. ಇದನ್ನೂ ಓದಿ: ದೇವಿ ಜಾತ್ರೆಗೆ ಹೋಗಿ ವಾಪಸ್‌ ಬರುವಾಗ ಅಪರಿಚಿತ ವಾಹನ ಡಿಕ್ಕಿ – ಮೂವರು ಸ್ಥಳದಲ್ಲೇ ಸಾವು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟರ್ಕಿ ಮಾರಣಾಂತಿಕ ಭೂಕಂಪ – ಬೆಂಗಳೂರಿನ ಕಂಪನಿಯ ಉದ್ಯೋಗಿ ನಾಪತ್ತೆ

    ಟರ್ಕಿ ಮಾರಣಾಂತಿಕ ಭೂಕಂಪ – ಬೆಂಗಳೂರಿನ ಕಂಪನಿಯ ಉದ್ಯೋಗಿ ನಾಪತ್ತೆ

    – ದೂರದ ಪ್ರದೇಶದಲ್ಲಿ ಸಿಲುಕಿದ್ದಾರೆ 10 ಭಾರತೀಯರು
    – ಸಾವಿನ ಸಂಖ್ಯೆ 11,200ಕ್ಕೆ ಏರಿಕೆ

    ನವದೆಹಲಿ/ಅಂಕಾರಾ: ಭೀಕರ ಭೂಕಂಪದಿಂದಾಗಿ (Earthquake) ನಲುಗಿರುವ ಟರ್ಕಿ (Turkey) ಹಾಗೂ ಸಿರಿಯಾ (Syria) ದೇಶಗಳಲ್ಲಿ ಇಲ್ಲಿಯವರೆಗೆ ಸಾವಿನ ಸಂಖ್ಯೆ 11,200ಕ್ಕೇರಿದೆ. ಈ ನಡುವೆ ಒರ್ವ ಭಾರತೀಯ (Indian) ನಾಪತ್ತೆಯಾಗಿದ್ದು, ಇನ್ನೂ 10 ಜನರು ದೂರದ ಪ್ರದೇಶದಲ್ಲಿ ಸಿಲುಕಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಬುಧವಾರ ತಿಳಿಸಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಎಂಇಎ ಕಾರ್ಯದರ್ಶಿ ಸಂಜಯ್ ವರ್ಮಾ, ಟರ್ಕಿಯ ಅದಾನದಲ್ಲಿ ಭಾರತದ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಭೂಕಂಪ ಪೀಡಿತ ಪ್ರದೇಶದ ದೂರದ ಭಾಗಗಳಲ್ಲಿ 10 ಭಾರತೀಯರು (Indians) ಸಿಲುಕಿಕೊಂಡಿದ್ದಾರೆ. ಅದೃಷ್ಟವಶಾತ್ ಅವರೆಲ್ಲರೂ ಸುರಕ್ಷಿತರಾಗಿದ್ದಾರೆ. ಆದರೆ ವ್ಯಾಪಾರದ ಹಿನ್ನೆಲೆ ಟರ್ಕಿಗೆ ಭೇಟಿ ನೀಡಿದ್ದ ಒಬ್ಬ ಭಾರತೀಯ ಪ್ರಜೆ ನಾಪತ್ತೆಯಾಗಿದ್ದಾರೆ. ನಾವು ಅವರ ಕುಟುಂಬದೊಂದಿಗೆ ಹಾಗೂ ಅವರು ಉದ್ಯೋಗಿಯಾಗಿರುವ ಬೆಂಗಳೂರಿನ ಕಂಪನಿಯೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಮಾಹಿತಿ ನೀಡಿದರು.

    ಸುಮಾರು 3,000 ಭಾರತೀಯರು ಟರ್ಕಿಯಲ್ಲಿ ವಾಸವಿದ್ದು, ಅವರಲ್ಲಿ 75 ಜನರು ಸಹಾಯವನ್ನು ಕೋರಿ ಕರೆ ಮಾಡಿರುವುದಾಗಿ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಹೊಲದಲ್ಲಿ ಟ್ರ್ಯಾಕ್ಟರ್‌ ಓಡಿಸಿದ ಧೋನಿ

    ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿರುವ ಭೂಕಂಪದಿಂದಾಗಿ ಅಲ್ಲಿನ ಜನಜೀವನ ತತ್ತರಿಸಿ ಹೋಗಿದೆ. ಕಟ್ಟಡಗಳು ಧರೆಗುರುಳಿದ್ದು, ಅವಶೇಷಗಳಡಿ ಸಿಲುಕಿ ಮೃತಪಟ್ಟವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಲ್ಲಿಯವರೆಗೆ 11,200 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಕೂಡಾ ಅವಶೇಷಗಳಡಿಯಿಂದ ಜನರ ಚೀರಾಟ ಕೇಳಿಸುತ್ತಿದ್ದು, ಅವರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.

    ಭಾರತ ಈಗಾಗಲೇ ಭೂಕಂಪ ಪೀಡಿತ ದೇಶಕ್ಕೆ ವೈದ್ಯಕೀಯ ಸರಬರಾಜು, ವಿಶೇಷ ಶೋಧ ತಂಡ ಸೇರಿದಂತೆ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿದೆ. ದೇಶದಲ್ಲಿ ಸರಣಿ ಭೂಕಂಪವಾಗುತ್ತಿರುವ ಹಿನ್ನೆಲೆ ಸಹಾಯ ಮಾಡಲು ಎರಡು ಸಿ-12 ಗ್ಲೋಬ್‌ಮಾಸ್ಟರ್ ಮಿಲಿಟರಿ ವಿಮಾನಗಳಲ್ಲಿ ಈ ಎಲ್ಲಾ ಸಹಾಯವನ್ನು ಕಳುಹಿಸಲಾಗಿದೆ. ಇದನ್ನೂ ಓದಿ: ಯುಪಿಎ ಅವಧಿಯದ್ದು ಭ್ರಷ್ಟಾಚಾರದ ದಶಕ, ನಮ್ಮದು ಭಾರತದ ದಶಕ: ನರೇಂದ್ರ ಮೋದಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Turkey, Syria Earthquake: 7,900ಕ್ಕೇರಿದ ಸಾವಿನ ಸಂಖ್ಯೆ – ಅವಶೇಷಗಳಡಿ ಕೇಳುತ್ತಿದೆ ಸಂತ್ರಸ್ತರ ಚೀತ್ಕಾರ

    Turkey, Syria Earthquake: 7,900ಕ್ಕೇರಿದ ಸಾವಿನ ಸಂಖ್ಯೆ – ಅವಶೇಷಗಳಡಿ ಕೇಳುತ್ತಿದೆ ಸಂತ್ರಸ್ತರ ಚೀತ್ಕಾರ

    ಅಂಕಾರಾ: ಟರ್ಕಿ ಮತ್ತು ಸಿರಿಯಾದಲ್ಲಿ (Turkey, Syria Earthquake) ಸಂಭವಿಸಿದ ಭೀಕರ ಭೂಕಂಪಕ್ಕೆ ಜನಜೀವನ ತತ್ತರಿಸಿ ಹೋಗಿದೆ. ಕಟ್ಟಡಗಳು ಧರೆಗುರುಳಿದ್ದು, ಅವಶೇಷಗಳಡಿ ಸಿಲುಕಿ ಮೃತಪಟ್ಟವರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. ಈವರೆಗೆ ದುರಂತದಲ್ಲಿ ಮಡಿದವರ 7,900ಕ್ಕೆ ಏರಿದೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

    ಮೃತರ ಸಂಖ್ಯೆ ಇನ್ನಷ್ಟು ಏರಿಕೆಯಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿ ಜೀವನ್ಮರಣದ ನಡುವೆ ಹೋರಾಡುತ್ತಿರುವವರ ರಕ್ಷಣೆ ಕಾರ್ಯಾಚರಣೆ ಭರದಿಂದ ಸಾಗಿದ್ದು, ಕೊರೆಯುವ ಚಳಿಗೆ ರಕ್ಷಣಾ ಸಿಬ್ಬಂದಿ ಕೂಡ ಗಢಗಢ ನಡುಗುತ್ತಿದ್ದಾರೆ. ಆದರೂ ಕೂಡ ಹಗಲಿರುಳೆನ್ನದೇ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಮತ್ತೆ ಪಾಕ್‌ನಿಂದ ದುರ್ಬುದ್ಧಿ – ಟರ್ಕಿಗೆ ಹೊರಟಿದ್ದ NDRF ವಿಮಾನಕ್ಕೆ ನಿರ್ಬಂಧ

    ಸಿರಿಯಾದಲ್ಲಿ ಭೂಕಂಪದ ದುರಂತ ಸನ್ನಿವೇಶದಲ್ಲಿ ಕಟ್ಟಡಗಳ ಅವಶೇಷಗಳಡಿ ಸಿಲುಕಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿ ಮೃತಪಟ್ಟಿದ್ದರು. ಅದೃಷ್ಟವಶಾತ್‌ ನವಜಾತ ಶಿಶು ಬದುಕುಳಿದಿತ್ತು. ರಕ್ಷಣೆ ವೇಳೆ ಮಗುವಿನ ಹೊಕ್ಕುಳಬಳ್ಳಿ ತಾಯಿಯ ಕರುಳಿಗೆ ಹಾಗೆಯೇ ಕಟ್ಟಿಕೊಂಡಿತ್ತು. ಈ ದೃಶ್ಯ ಕಣ್ಣಾಲಿಗಳಲ್ಲಿ ನೀರು ತರಿಸುವಂತಿತ್ತು.

    “ನಾವು ಅವಶೇಷಗಳನ್ನು ತೆರವುಗೊಳಿಸುತ್ತಿದ್ದಾಗ ಮಗುವಿನ ಚೀತ್ಕಾರದ ಧ್ವನಿ ಕೇಳಿಸಿತು. ತಕ್ಷಣ ಎಲ್ಲವನ್ನೂ ತೆರವುಗೊಳಿಸಿ ನೋಡಿದಾಗ, ಹೆತ್ತಮ್ಮನ ಕರುಳಿಗೆ ಮಗುವಿನ ಹೊಕ್ಕುಳ ಬಳ್ಳಿ ಹಾಗೆಯೇ ಸುತ್ತಿಕೊಂಡಿತ್ತು. ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ಆದರೆ ಮಗುವಿನ ತಾಯಿ ಬದುಕಿರಲಿಲ್ಲ. ತನ್ನ ಇಡೀ ಕುಟುಂಬದಲ್ಲಿ ಬದುಕುಳಿದಿರುವ ಏಕೈಕ ಮಗು ಇದು” ಎಂದು ರಕ್ಷಣಾ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: Turkey – Syria Earthquake- ಕಟ್ಟಡದ ಅವಶೇಷಗಳಡಿಯೇ ಮಗುವಿಗೆ ಜನ್ಮ ನೀಡಿ ಮಹಿಳೆ ಸಾವು

    ಸೋಮವಾರ 7.8 ತೀವ್ರತೆಯಲ್ಲಿ ಭೂಕಂಪ ಸಂಭವಿಸಿ ಅಪಾರ ಹಾನಿಯನ್ನುಂಟು ಮಾಡಿದೆ. ಟರ್ಕಿಯ (Turkey) ನಗರಗಳಾದ ಗಾಜಿಯಾಂಟೆಪ್ ಮತ್ತು ಕಹ್ರಮನ್ಮರಸ್ ಭಾರಿ ವಿನಾಶ ಸಂಭವಿಸಿದೆ. ಕಟ್ಟಡಗಳು ಧರೆಗುರುಳಿವೆ.

    ಟರ್ಕಿ ಮತ್ತು ಸಿರಿಯಾ (Syria) ಭೂಕಂಪ ಪ್ರದೇಶದ ದೃಶ್ಯಗಳು ಸ್ಮಶಾನ ಸದೃಶವಾಗಿವೆ. ಕಟ್ಟಡದ ಅವಶೇಷಗಳಿಗೆ ಚೀತ್ಕಾರಗಳು ಇನ್ನೂ ಕೇಳಿಬರುತ್ತಿವೆ. ಹಗಲಿರುಳೆನ್ನದೇ, ಕೊರೆವ ಚಳಿಯನ್ನೂ ಲೆಕ್ಕಿಸದೇ ರಕ್ಷಣಾ ಸಿಬ್ಬಂದಿ ರಕ್ಷಣೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಟರ್ಕಿ ಮತ್ತು ಸಿರಿಯಾ ದುರಂತಕ್ಕೆ ಮರುಕ ವ್ಯಕ್ತಪಡಿಸಿರುವ ಮಿತ್ರ ರಾಷ್ಟ್ರಗಳು ನೆರವಿನ ಹಸ್ತ ಚಾಚಿವೆ. ಇದನ್ನೂ ಓದಿ: Turkey – Syria Earthquakeː5 ಸಾವಿರಕ್ಕೇರಿದ ಸಾವಿನ ಸಂಖ್ಯೆ – ಟರ್ಕಿ ತಲುಪಿದ IAF C19 ವಿಮಾನ – ಭಾರತದ ನೆರವಿನ ಹಸ್ತ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮತ್ತೆ ಪಾಕ್‌ನಿಂದ ದುರ್ಬುದ್ಧಿ – ಟರ್ಕಿಗೆ ಹೊರಟಿದ್ದ NDRF ವಿಮಾನಕ್ಕೆ ನಿರ್ಬಂಧ

    ಮತ್ತೆ ಪಾಕ್‌ನಿಂದ ದುರ್ಬುದ್ಧಿ – ಟರ್ಕಿಗೆ ಹೊರಟಿದ್ದ NDRF ವಿಮಾನಕ್ಕೆ ನಿರ್ಬಂಧ

    ನವದೆಹಲಿ: ಭೂಕಂಪ (Earthquake) ಪೀಡಿತ ಟರ್ಕಿಗೆ (Turkey) ಭಾರತೀಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡವನ್ನು ಕಳುಹಿಸಲು ಭಾರತೀಯ ವಾಯುಪಡೆ ವಿಮಾನಕ್ಕೆ ತನ್ನ ವಾಯು ಪ್ರದೇಶದಲ್ಲಿ ಸಂಚರಿಸಲು ಪಾಕಿಸ್ತಾನ (Pakistan) ನಿರ್ಬಂಧ ಹೇರಿದೆ.

    ಮಂಗಳವಾರ ಮುಂಜಾನೆ ಟರ್ಕಿಗೆ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆ ವಿಮಾನಗಳಿಗೆ ಪಾಕಿಸ್ತಾನ ತನ್ನ ವಾಯು ಪ್ರದೇಶವನ್ನು ನಿರಾಕರಿಸಿದೆ ಎಂದು ವರದಿಗಳು ತಿಳಿಸಿವೆ. ಭಾರತ ಅಗತ್ಯವಿರುವ ದೇಶಗಳಿಗೆ ನೆರವನ್ನು ನೀಡಲು ಮುಂದಾದಾಗ ಅದನ್ನು ತಡೆಯಲು ಪಾಕಿಸ್ತಾನ ಮಾಡಿರುವ 2ನೇ ಪ್ರಯತ್ನ ಇದಾಗಿದೆ.

    ಸೋಮವಾರ ಟರ್ಕಿ ಹಾಗೂ ಸಿರಿಯಾದಲ್ಲಿ 7.9 ತೀವ್ರತೆಯ ಭಾರೀ ಭೂಕಂಪದಿಂದಾದ ದೇಶಗಳು ತತ್ತರಿಸಿ ಹೋಗಿವೆ. ಇದು ಪಶ್ಚಿಮ ಏಷ್ಯಾದ ಇತಿಹಾಸದಲ್ಲಿಯೇ ಅತ್ಯಂತ ವಿನಾಶಕಾರಿ ಭೂಕಂಪ ಎಂದು ಪರಿಗಣಿಸಲಾಗಿದೆ. ಭೀಕರ ಭೂಕಂಪದಿಂದಾಗಿ 5 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇನ್ನೂ ಸಾವಿರಾರು ಜನರು ಶಿಥಿಲಗೊಂಡಿರುವ ಕಟ್ಟಡಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: Turkey – Syria Earthquakeː5 ಸಾವಿರಕ್ಕೇರಿದ ಸಾವಿನ ಸಂಖ್ಯೆ – ಟರ್ಕಿ ತಲುಪಿದ IAF C19 ವಿಮಾನ – ಭಾರತದ ನೆರವಿನ ಹಸ್ತ

    ಎನ್‌ಡಿಆರ್‌ಎಫ್ ತಂಡಗಳು ಈಗಾಗಲೇ ಭೂಕಂಪ ಪೀಡಿತ ದೇಶಗಳಿಗೆ ಸಹಾಯ ಮಾಡಲು ವೈದ್ಯರು ಹಾಗೂ ಇನ್ನಿತರ ಸೌಲಭ್ಯಗಳೊಂದಿಗೆ ಅದಾನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಆದರೆ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಬಳಸಲು ಭಾರತದ ವಿಮಾನಕ್ಕೆ ಅನುಮತಿಯನ್ನು ನಿರಾಕರಿಸಿದೆ.

    ಕಳೆದ ಬಾರಿ 2021 ರಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಭಾರತ ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವಿನ ಭಾಗವಾಗಿ 50,000 ಮೆಟ್ರಿಕ್ ಟನ್ ಗೋಧಿಯನ್ನು ಕಳುಹಿಸಲು ನಿರ್ಧರಿಸಿತ್ತು. ಆದರೆ ಪಾಕಿಸ್ತಾನ ಭಾರತಕ್ಕೆ ತನ್ನ ಭೂಪ್ರದೇಶವನ್ನು ಬಳಸದಂತೆ ತಡೆದಿತ್ತು. ಇದನ್ನೂ ಓದಿ: Turkey – Syria Earthquake- ಕಟ್ಟಡದ ಅವಶೇಷಗಳಡಿಯೇ ಮಗುವಿಗೆ ಜನ್ಮ ನೀಡಿ ಮಹಿಳೆ ಸಾವು

    ಭಾರತದಿಂದ ಅಫ್ಘಾನಿಸ್ತಾನಕ್ಕೆ ಸರಕುಗಳನ್ನು ಕಳುಹಿಸಲು ವಾಘಾ ಗಡಿಯಿಂದ ಪಾಕಿಸ್ತಾನದ ಮಾರ್ಗವಾಗಿ ಟ್ರಕ್‌ಗಳಲ್ಲಿ ಕಳುಹಿಸಲು ಮಾತುಕತೆ ನಡೆಸಿತ್ತು. ಮಾನವೀಯ ನೆರವಿನ ಹಿನ್ನೆಲೆಯಾಗಿ ಬಳಿಕ ಪಾಕಿಸ್ತಾನ ತನ್ನ ಮಾರ್ಗದ ಮೂಲಕ ಟ್ರಕ್‌ಗಳಿಗೆ ನೆರವನ್ನು ಸಾಗಿಸಲು ಅನುಮತಿ ನೀಡಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟರ್ಕಿಗೆ 100 ಮಂದಿಯ NDRF ತಂಡವನ್ನು ಕಳುಹಿಸಲಿದೆ ಭಾರತ

    ಟರ್ಕಿಗೆ 100 ಮಂದಿಯ NDRF ತಂಡವನ್ನು ಕಳುಹಿಸಲಿದೆ ಭಾರತ

    ನವದೆಹಲಿ: ಭೀಕರ ಭೂಕಂಪಕ್ಕೆ(Earthquake) ತುತ್ತಾಗಿರುವ ಟರ್ಕಿಗೆ ನೆರವು ನೀಡಲು ಭಾರತ ಸರ್ಕಾರ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (NDRF) ಮತ್ತು ವೈದ್ಯಕೀಯ ತಂಡ, ಪರಿಹಾರ ಸಾಮಾಗ್ರಿಗಳೊಂದಿಗೆ ಟರ್ಕಿಗೆ (Turkey) ತೆರಳಲಿದೆ.

    ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ ನೇತೃತ್ವದಲ್ಲಿ ಪ್ರಧಾನಮಂತ್ರಿಗಳ ಕಚೇರಿಯಲ್ಲಿ (PMO) ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

    ವಿಶೇಷ ತರಬೇತಿ ಪಡೆದ ಶ್ವಾನದಳ ಮತ್ತು ಅಗತ್ಯ ಉಪಕರಣಗಳೊಂದಿಗೆ 100 ಸಿಬ್ಬಂದಿಯನ್ನು ಒಳಗೊಂಡ ಎರಡು ಎನ್‌ಡಿಆರ್‌ಎಫ್ (NDRF) ತಂಡಗಳು ಭೂಕಂಪ ಪೀಡಿತ ಪ್ರದೇಶಗಳಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ತೆರಳಲಿವೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    https://twitter.com/_DoguPala/status/1622490169709416452

    “ತರಬೇತಿ ಪಡೆದ ವೈದ್ಯರು ಮತ್ತು ಅರೆವೈದ್ಯರೊಂದಿಗೆ ಅಗತ್ಯ ಔಷಧಿಗಳೊಂದಿಗೆ ವೈದ್ಯಕೀಯ ತಂಡಗಳನ್ನು ಸಹ ಸಿದ್ಧಪಡಿಸಲಾಗುತ್ತಿದೆ. ಟರ್ಕಿ ಸರ್ಕಾರ ಮತ್ತು ಅಂಕಾರಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಇಸ್ತಾನ್‌ಬುಲ್‌ನಲ್ಲಿರುವ ಕಾನ್ಸುಲೇಟ್ ಜನರಲ್ ಕಚೇರಿಯೊಂದಿಗೆ ಸಮನ್ವಯದೊಂದಿಗೆ ಪರಿಹಾರ ಸಾಮಗ್ರಿಗಳನ್ನು ರವಾನಿಸಲಾಗುವುದು” ಎಂದು ಪಿಎಂಒ ಹೇಳಿದೆ. ಇದನ್ನೂ ಓದಿ: ಎಲೆಕ್ಟ್ರಾನಿಕ್‌ ಸಿಟಿ ಫ್ಲೈಓವರ್‌ನಲ್ಲಿ ಬೈಕ್‌ ಸವಾರನ ಹುಚ್ಚಾಟ

    ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ (Narendra Modi) ಭೂಕಂಪದಲ್ಲಿ ಸಾವನ್ನಪ್ಪಿದ್ದವರಿಗೆ ಸಂತಾಪ ಸೂಚಿಸಿದ್ದರು. ಸಂತ್ರಸ್ತರ ಕುಟುಂಬಗಳಿಗೆ ನನ್ನ ಪ್ರಾಮಾಣಿಕ ಸಂತಾಪ. ಈ ಕಷ್ಟದ ಸಮಯದಲ್ಲಿ ನೆರವು ಮತ್ತು ಬೆಂಬಲವನ್ನು ನೀಡಲು ಬದ್ಧರಾಗಿದ್ದೇವೆ ಎಂದು ಹೇಳಿದರು.

    ಮಧ್ಯ ಟರ್ಕಿ ಮತ್ತು ವಾಯುವ್ಯ ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು 1600ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ದೊಡ್ಡ ಕಟ್ಟಡಗಳು ಧರೆಗೆ ಉರುಳಿದ್ದು ಹಲವು ಮಂದಿ ಅವಶೇಷದ ಒಳಗಡೆ ಸಿಲುಕಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿರಿಯಾ, ಟರ್ಕಿಯಲ್ಲಿ 7.8 ತೀವ್ರತೆಯಲ್ಲಿ ಭೂಕಂಪನ – 90 ಮಂದಿ ಸಾವು

    ಸಿರಿಯಾ, ಟರ್ಕಿಯಲ್ಲಿ 7.8 ತೀವ್ರತೆಯಲ್ಲಿ ಭೂಕಂಪನ – 90 ಮಂದಿ ಸಾವು

    ಇಸ್ತಾಂಬುಲ್: ದಕ್ಷಿಣ ಟಿರ್ಕಿ ಪ್ರಾಂತ್ಯದ ಒಸ್ಮಾನಿಯೆದಲ್ಲಿ 7.8 ತೀವ್ರತೆಯ ಭೂಕಂಪನ (Earthquake) ಸಂಭವಿಸಿ 90 ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ.

    ಸಿರಿಯಾ ಟರ್ಕಿಯ ಸುಮಾರು 17.9 ಕಿ.ಮೀವರೆಗೆ  ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಭೂಕಂಪನದಿಂದಾಗಿ ಸುಮಾರು 34 ಕಟ್ಟಡಗಳು ನಾಶವಾಗಿವೆ.

    ಗಜಿಯಾಂಟೆಪ್‍ನ ದಕ್ಷಿಣ ಪ್ರದೇಶವು ಟರ್ಕಿಯ (Turkey) ಪ್ರಮುಖ ಕೈಗಾರಿಕಾ ಹಾಗೂ ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿದೆ. ಜೊತೆಗೆ ಈ ಪ್ರದೇಶವು ಸಿರಿಯಾದ ಗಡಿಯಾಗಿದೆ. ಮೂಲಗಳ ಪ್ರಕಾರ ಸಿರಿಯಾ ಹಾಗೂ ಸೈಪ್ರಸ್‍ನಲ್ಲಿಯೂ ಭೂಕಂಪನದ ಅನುಭವವಾಗಿದೆ. ಇದನ್ನೂ ಓದಿ: ರಂಗೇರಿದ ಚಾಮುಂಡೇಶ್ವರಿ ಕ್ಷೇತ್ರ- ಸಿದ್ದರಾಮಯ್ಯ ಬೆಂಬಲಿಗರಿಗೆ ಜಿಟಿಡಿ ಸೆಡ್ಡು

    ಟರ್ಕಿ ವಿಶ್ವದ ಅತ್ಯಂತ ಸಕ್ರಿಯ ಭೂಕಂಪನ ವಲಯಗಳಲ್ಲಿ ಒಂದಾಗಿದೆ. 1999ರಲ್ಲಿ 7.4 ತೀವ್ರತೆಯ ಭೂಕಂಪನದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಡಜ್ಸ್ ಒಂದಾಗಿದೆ. 2020ರ ಜನವರಿಯಲ್ಲಿ ಎಲಾಜಿಗ್‍ನಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿ 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಮೋದಿ ಆಗಮನ ಎಫೆಕ್ಟ್, ನೆಲಮಂಗಲ ಬಳಿ ಗುಂಡಿ ಮುಕ್ತ ಭಾಗ್ಯ- ಜನಾಕ್ರೋಶ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟರ್ಕಿ ಸ್ಫೋಟ – ಸಾವಿನ ಸಂಖ್ಯೆ 6ಕ್ಕೆ ಏರಿಕೆ, ಶಂಕಿತ ಅರೆಸ್ಟ್

    ಟರ್ಕಿ ಸ್ಫೋಟ – ಸಾವಿನ ಸಂಖ್ಯೆ 6ಕ್ಕೆ ಏರಿಕೆ, ಶಂಕಿತ ಅರೆಸ್ಟ್

    ಅಂಕಾರಾ: ಟರ್ಕಿಯ (Turkey) ಇಸ್ತಾಂಬುಲ್‌ನಲ್ಲಿ (Istanbul) ಭಾನುವಾರ ನಡೆದ ಭೀಕರ ಸ್ಫೋಟದಲ್ಲಿ (Blast) 6 ಜನರು ಸಾವನ್ನಪ್ಪಿದ್ದಾರೆ. 81 ಜನರು ಗಾಯಗೊಂಡಿದ್ದಾರೆ. ಇದೀಗ ಸ್ಫೋಟಕ್ಕೆ ಸಂಬಂಧಿಸಿದಂತೆ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಟರ್ಕಿಯ ಆಂತರಿಕ ಸಚಿವ ಸುಲೇಮಾನ್ ಸೊಯ್ಲು ಹೇಳಿದ್ದಾರೆ.

    ಭಾನುವಾರ ಮಧ್ಯಾಹ್ನದ ವೇಳೆ ಇಸ್ತಾಂಬುಲ್‌ನ ಇಸ್ತಿಕ್‌ಲಾಲ್‌ನಲ್ಲಿರುವ (Istiklal) ಮಾರುಕಟ್ಟೆ ಪ್ರದೇಶದಲ್ಲಿ ಸ್ಫೋಟ ಸಂಭವಿಸಿತ್ತು. ಜನನಿಬಿಡ ಪ್ರದೇಶವಾದ್ದರಿಂದ ಹೆಚ್ಚಿನ ಸಂಖ್ಯೆಯ ಜನರು ಗಾಯಗೊಂಡಿದ್ದಾರೆ. 6 ಜನರು ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ.

    ಇದೀಗ ಶಂಕಿತನನ್ನು ಪೊಲೀಸರು ಬಂಧಿಸಿದ್ದು, ದಾಳಿಯ ಹಿಂದಿನ ಉದ್ದೇಶ ಹಾಗೂ ಕೃತ್ಯದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಬಗ್ಗೆ ಭಯೋತ್ಪಾದನೆಯ ಶಂಕೆ ವ್ಯಕ್ತವಾಗಿದೆ. ಘಟನಾ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್ ವಿರೋಧಿ ಪ್ರತಿಭಟನೆ- ಮೊದಲ ಮರಣದಂಡನೆ ಶಿಕ್ಷೆ

    ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಫೋಟ ಸಂಭವಿಸಿದ ಸನ್ನಿವೇಶದ ವೀಡಿಯೋಗಳು ಹರಿದಾಡುತ್ತಿವೆ. ಜನನಿಬಿಡ ಪಾದಾಚಾರಿ ರಸ್ತೆಯಲ್ಲಿ ಸ್ಫೋಟ ಸಂಭವಿಸಿದ್ದು, ಜನರು ಭಾರೀ ಸದ್ದಿಗೆ ವಿಚಲಿತರಾಗಿ ಚೆಲ್ಲಾಪಿಲ್ಲಿಯಾಗಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ಪಾಕಿಸ್ತಾನಿ ಮಹಿಳೆಯ ಹೆಸರು!

    Live Tv
    [brid partner=56869869 player=32851 video=960834 autoplay=true]

  • ಟರ್ಕಿಯ ಜನನಿಬಿಡ ಪ್ರದೇಶದಲ್ಲಿ ಬಾಂಬ್ ಸ್ಫೋಟ – 4 ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ

    ಟರ್ಕಿಯ ಜನನಿಬಿಡ ಪ್ರದೇಶದಲ್ಲಿ ಬಾಂಬ್ ಸ್ಫೋಟ – 4 ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ

    ಅಂಕಾರಾ: ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಭಾರೀ ಸ್ಫೋಟ (Blast) ಉಂಟಾಗಿ 4 ಜನರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಭಾನುವಾರ ಟರ್ಕಿಯ (Turkey) ಇಸ್ತಾಂಬುಲ್‌ನಲ್ಲಿ (Istanbul) ನಡೆದಿದೆ. ಘಟನೆಯಲ್ಲಿ 30 ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದಾಗಿ ವರದಿಗಳು ತಿಳಿಸಿವೆ.

    ಇಸ್ತಾಂಬುಲ್‌ನ ಇಸ್ತಿಕ್‌ಲಾಲ್‌ನಲ್ಲಿರುವ (Istiklal) ಮಾರುಕಟ್ಟೆ ಪ್ರದೇಶದಲ್ಲಿ ಇಂದು ಮಧ್ಯಾಹ್ನದ ವೇಳೆ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಿಲ್ಲ.

    ಪ್ರಾಥಮಿಕ ಮಾಹಿತಿಯ ಪ್ರಕಾರ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. 38 ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ತಾಂಬುಲ್ ಗವರ್ನರ್ ಅಲಿ ಯರ್ಲಿಕಾಯಾ ಟ್ವೀಟ್ ಮಾಡಿದ್ದಾರೆ. ಸ್ಫೋಟ ಸಂಭವಿಸಿದ ಪ್ರದೇಶಕ್ಕೆ ಜನರು ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದ್ದು, ಭದ್ರತಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: 2019 ಏಕದಿನ ವಿಶ್ವಕಪ್ ನೆನೆಪಿಸಿದ ಬೆನ್‍ಸ್ಟೋಕ್ಸ್ – ನಿಜವಾದ ಮ್ಯಾಚ್ ವಿನ್ನರ್ ಎಂದ ಫ್ಯಾನ್ಸ್

    2015-16ರ ಸಮಯದಲ್ಲಿ ಇಸ್ತಾಂಬುಲ್ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿತ್ತು. ಆ ವೇಳೆ ಇಸ್ತಿಕ್‌ಲಾಲ್ ಸ್ಟ್ರೀಟ್ ಕೂಡಾ ದಾಳಿಯನ್ನು ಎದುರಿಸಿತ್ತು. ಸುಮಾರು 500 ಜನರು ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದರೆ, 2,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದನ್ನೂ ಓದಿ: ರೈಲ್ವೇ ಹಳಿಯಲ್ಲಿ ಬಿರುಕು, ಭಾರೀ ಸ್ಫೋಟಕ ಪತ್ತೆ – ಉಗ್ರ ಕೃತ್ಯ ಶಂಕೆ

    Live Tv
    [brid partner=56869869 player=32851 video=960834 autoplay=true]

  • ಹಿಜಬ್‌ ವಿರುದ್ಧ ಪ್ರತಿಭಟನೆ – ವೇದಿಕೆಯಲ್ಲೇ ಕೂದಲು ಕತ್ತರಿಸಿದ ಟರ್ಕಿ ಗಾಯಕಿ

    ಹಿಜಬ್‌ ವಿರುದ್ಧ ಪ್ರತಿಭಟನೆ – ವೇದಿಕೆಯಲ್ಲೇ ಕೂದಲು ಕತ್ತರಿಸಿದ ಟರ್ಕಿ ಗಾಯಕಿ

    ಟೆಹರಾನ್‌: ಇರಾನಿನಾದ್ಯಂತ ಮಹಿಳೆಯರು ಹಿಜಬ್‌ (Hijab) ಧರಿಸದೇ ತಮ್ಮ ತಲೆ ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ಟರ್ಕಿಯ (Turkey) ಪ್ರಸಿದ್ಧ ಗಾಯಕಿ (Singer) ವೇದಿಕೆಯಲ್ಲಿ ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

    ಟರ್ಕಿಶ್‌ನ ಪ್ರಸಿದ್ಧ ಗಾಯಕಿ ಮಾಲೆಕ್‌ ಮೊಸ್ಸೋ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಪ್ರದರ್ಶನದ ಸಮಯದಲ್ಲಿ ಪ್ರೇಕ್ಷಕರು ಗಾಯಕಿಯನ್ನು ಶ್ಲಾಘಿಸಿದಾಗ ಮೆಲೆಕ್ ಮೊಸ್ಸೊ ತಮ್ಮ ಕೂದಲನ್ನು ಕತ್ತರಿಸಿಕೊಂಡು ಇರಾನ್‌ ಮಹಿಳೆಯರ ಪ್ರತಿಭಟನೆಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

    ಮೊಸ್ಸೊ ಅವರು ಮಹಿಳಾ ಹಕ್ಕುಗಳ ಬೆಂಬಲಕ್ಕಾಗಿ ಈಗಾಗಲೇ ಅನೇಕ ಬಾರಿ ಹೋರಾಡಿದ್ದಾರೆ. 2020ರಲ್ಲಿ ಟರ್ಕಿಯಲ್ಲಿ ಅತ್ಯಾಚಾರಿ ಪೊಲೀಸ್ ಅಧಿಕಾರಿಯ ಬಿಡುಗಡೆ ಕುರಿತು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಗಾಯಕಿಯನ್ನು ವೇದಿಕೆಯಿಂದ ಕೆಳಗಿಳಿಸಲಾಗಿತ್ತು. ಈ ಬಗ್ಗೆ ಮಾತನಾಡಿ, ಈ ಅತ್ಯಾಚಾರ ಮತ್ತು ಕೊಲೆಗಳ ವಿರುದ್ಧ ಮಾತನಾಡಿದ್ದಕ್ಕಾಗಿ ನನ್ನನ್ನು ವೇದಿಕೆಯಿಂದ ಕೆಳಗಿಳಿಸಲಾಗಿದೆ. ಇದು ಯಾವ ರೀತಿಯ ವ್ಯವಸ್ಥೆ ಎಂದು ಕಿಡಿಕಾರಿದ್ದರು.

    ಹಿಜಬ್‌ ಧರಿಸಿಲ್ಲ ಎಂಬ ಕಾರಣಕ್ಕೆ 22 ವಯಸ್ಸಿನ ಯುವತಿ (Iranian Women) ಮಹ್ಸಾ ಆಮಿನಿ (Mahsa Amini), ನೈತಿಕ ಪೊಲೀಸ್‌ಗಿರಿಗೆ ಬಲಿಯಾಗಿದ್ದಳು. ಆಕೆಯನ್ನು ಹಿಜಬ್‌ಧಾರಿ ಮಹಿಳೆಯರೇ ಥಳಿಸಿದ್ದರು. ನಂತರ ಬಲವಂತವಾಗಿ ಪೊಲೀಸರು ಕಾರಿಗೆ ನೂಕಿ ದೌರ್ಜನ್ಯ ನಡೆಸಿದ್ದರು. ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಇದರಿಂದ ಗಂಭೀರ ಸ್ಥಿತಿಯಲ್ಲಿದ್ದ ಯುವತಿ ಸಾವನ್ನಪ್ಪಿದ್ದಳು. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್ ಹೋರಾಟ – 60 ಮಹಿಳೆಯರು ಸೇರಿ 700ಕ್ಕೂ ಹೆಚ್ಚು ಮಂದಿ ಅರೆಸ್ಟ್

    ಇದನ್ನು ವಿರೋಧಿಸಿ ಇರಾನ್‌ನಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಬುಧವಾರ ಹನ್ನೆರಡನೇ ದಿನಕ್ಕೆ ಕಾಲಿಟ್ಟಿದೆ. ಈ ಹಿಂಸಾತ್ಮಕ ಪ್ರತಿಭಟನೆಯಲ್ಲಿ (Protest), 700ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು (Police) ಬಂಧಿಸಿದ್ದಾರೆ. ಇದನ್ನೂ ಓದಿ: ಪತ್ರಕರ್ತೆ ಹಿಜಬ್ ಧರಿಸದ್ದಕ್ಕೆ ಸಂದರ್ಶನವನ್ನೇ ರದ್ದುಗೊಳಿಸಿದ ಇರಾನ್ ಅಧ್ಯಕ್ಷ

    Live Tv
    [brid partner=56869869 player=32851 video=960834 autoplay=true]

  • ಸಿರಿಯಾ ಗಡಿಯಲ್ಲಿ ಟರ್ಕಿಯ ವೈಮಾನಿಕ ದಾಳಿ – 17 ಸೈನಿಕರ ಸಾವು

    ಸಿರಿಯಾ ಗಡಿಯಲ್ಲಿ ಟರ್ಕಿಯ ವೈಮಾನಿಕ ದಾಳಿ – 17 ಸೈನಿಕರ ಸಾವು

    ಡಮಾಸ್ಕಸ್: ಸಿರಿಯಾ ಗಡಿ ಪೋಸ್ಟ್‌ಗಳ ಮೇಲೆ ಟರ್ಕಿಯ ಆಡಳಿತ ಪಡೆಗಳು ವೈಮಾನಿಕ ದಾಳಿಕ ನಡೆಸಿರುವ ಪರಿಣಾಮ 17 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಸಿರಿಯಾ ಗಡಿ ಬಳಿಯ ಹಲವಾರು ಆಡಳಿತದ ಹೊರಠಾಣೆಗಳ ಮೇಲೆ ಟರ್ಕಿಯ ವೈಮಾನಿಕ ದಾಳಿ ನಡೆದಿದ್ದು, ಘಟನೆಯಲ್ಲಿ 17 ಯೋಧರು ಮೃತಪಟ್ಟಿದ್ದಾರೆ ಎಂದು ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗ್ತಿದ್ದಂತೆಯೇ ಸ್ಥಾನ ತೊರೆದ ಗುಲಾಂ ನಬಿ ಆಜಾದ್

    ಬಲಿಪಶುಗಳು ಸಿರಿಯಾ ಅಥವಾ ಕುರ್ದಿಶ್ ಪಡೆಗಳೊಂದಿಗೆ ಸಂಬಂಧ ಹೊಂದಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಟರ್ಕಿಯ ದಾಳಿಯಲ್ಲಿ ಮೂವರು ಸಿರಿಯಾದ ಸೈನಿಕರು ಮೃತಪಟ್ಟಿದ್ದಾರೆ ಹಾಗೂ 6 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಟರ್ಕಿಯ ಪಡೆಗಳು ಹಾಗೂ ಕುರ್ದಿಶ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್(ಎಸ್‌ಡಿಎಫ್) ನಡುವೆ ಕುರ್ದಿಶ್ ಹಿಡಿತದಲ್ಲಿರುವ ಕೊಬಾನ್ ಪಟ್ಟಣದಲ್ಲಿ ಘರ್ಷಣೆ ನಡೆದಿದೆ. ಕುರ್ದಿಷ್ ಪಡೆಗಳು ರಾತ್ರಿಯಿಡೀ ಟರ್ಕಿಯ ಪ್ರದೇಶದೊಳಗೆ ದಾಳಿ ಮಾಡಿ, ಒಬ್ಬ ಸೈನಿಕನನ್ನು ಕೊಂದಿದ್ದಾರೆ ಎಂದು ಟರ್ಕಿಯ ರಕ್ಷಣಾ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಸಹಜ ಸ್ಥಿತಿಯತ್ತ ಶಿವಮೊಗ್ಗ: ಇಂದಿನಿಂದ ಶಾಲಾ-ಕಾಲೇಜು ಓಪನ್

    ಟರ್ಕಿ 2016ರಿಂದ ಕುರ್ದಿಶ್ ಪಡೆಗಳು ಹಾಗೂ ಇಸ್ಲಾಮಿಕ್ ರಾಜ್ಯಗಳ ಗುಂಪನ್ನು ಗುರಿಯಾಗಿಸಿಕೊಂಡು ಆಕ್ರಮಣಗಳನ್ನು ನಡೆಸುತ್ತಿವೆ. ಆದರೆ ದಾಳಿಗೆ ಸಿರಿಯಾದ ಸೈನಿಕರೂ ಬಲಿಯಾಗುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]