Tag: turkey

  • ಟರ್ಕಿಯಲ್ಲಿ ಸ್ವಿಮ್ ಸೂಟ್ ನಲ್ಲಿ ಕಾಣಿಸಿಕೊಂಡ ನಟಿ ಪ್ರಣೀತಾ

    ಟರ್ಕಿಯಲ್ಲಿ ಸ್ವಿಮ್ ಸೂಟ್ ನಲ್ಲಿ ಕಾಣಿಸಿಕೊಂಡ ನಟಿ ಪ್ರಣೀತಾ

    ಕ್ಷಿಣ ಭಾರತದ ಹೆಸರಾಂತ ನಟಿ, ಕನ್ನಡತಿ ಪ್ರಣೀತಾ ಸುಭಾಷ್ ಟರ್ಕಿ (Turkey) ಪ್ರವಾಸದಲ್ಲಿ ಇದ್ದಾರೆ. ಕುಟುಂಬದೊಂದಿಗೆ ಟರ್ಕಿ ಪ್ರವಾಸದಲ್ಲಿರುವ ಅವರು, ತಿಳಿನೀಲಿ ಕಡಲು ಕಿನಾರೆಯಲ್ಲಿ ಸ್ವಿಮ್ ಸೂಟ್ (swimsuit) ಹಾಕಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲೂ ಅವರು ಹಂಚಿಕೊಂಡಿದ್ದಾರೆ. ಒಂದು ಕಡೆ ಪ್ರವಾಸದಲ್ಲಿ ನಟಿ ಬ್ಯುಸಿಯಾಗಿದ್ದರೆ, ಮತ್ತೊಂದು ಕಡೆ ರಿಷಿ ನಟನೆಯ ಸಿನಿಮಾದಲ್ಲೂ ಅವರು ನಟಿಸಿದ್ದಾರೆ.

    ಮೊನ್ನೆಯಷ್ಟೇ ರಿಷಿ ಹಾಗೂ ಪ್ರಣೀತಾ  ನಟನೆಯ ಬಹು ನಿರೀಕ್ಷಿತ ಸಿನಿಮಾ ರಾಮನ ಅವತಾರದ ಹಾಡು ರಿಲೀಸ್ ಆಗಿದೆ. ಅದು ರಾಮನ ಅವತಾರ ಸಿನಿಮಾದ ಎರಡನೇ ಹಾಡು (Song) ಆಗಿದ್ದು,  ಸಿಂಪಲ್ ಸುನಿ ಸಾಹಿತ್ಯದ ಮನಸ್ಸು ಬೇರೆ ದಿಕ್ಕಿಗೆ ಸಾಗಲು ಹಾಡಿಗೆ ಸಂಚಿತ್ ಹೆಗ್ಡೆ ಧ್ವನಿಯಾಗಿದ್ದು, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದಾರೆ.  ಉಡುಪಿ ಬೀಚ್ ನಲ್ಲಿ ಇಡೀ ಹಾಡನ್ನು ಚಿತ್ರೀಕರಿಸಲಾಗಿದೆ. ಸೊಗಸಾದ ಈ ಪ್ರೇಮಗೀತೆಯಲ್ಲಿ ರಿಷಿ ಹಾಗೂ ಪ್ರಣೀತಾ (Pranitha) ಜೋಡಿ ನೋಡುಗರ ಗಮನಸೆಳೆಯುತ್ತಿದೆ.

    ರಾಮನ ಅವತಾರ ಸಿನಿಮಾದಲ್ಲಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದು, ಅರುಣ್ ಸಾಗರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ತಮ್ಮದೇ ನಾಟಿ ಫ್ಯಾಕ್ಟರಿ ಯೂಟ್ಯೂಬ್ ಚಾನೆಲ್ ಮೂಲಕ ಹೆಸರು ಪಡೆದಿರುವ ವಿಕಾಸ್ ಪಂಪಾಪತಿ ರಾಮನ ಅವತಾರ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ವಿಕಾಸ್ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ.

     

    ಸ್ಟಾರ್ ಫ್ಯಾಬ್ ಪ್ರೊಡಕ್ಷನ್ ನಡಿ ಆಪರೇಷನ್ ಅಲಮೇಲಮ್ಮ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಕೈಚಳಕವಿದ್ದು, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದು, ಅಮರನಾಥ್ ಸಂಲಕನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್ ನಡೆಸಲಾಗಿದೆ. ರಾಮನ ಅವತಾರ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಸದ್ಯ ಸೆನ್ಸಾರ್ ಅಂಗಳಕ್ಕೆ ಹೊರಡಲು ಸಜ್ಜಾಗಿದೆ.

  • ಹೋಟೆಲಿನಲ್ಲಿ ಸ್ಕ್ರೂಡ್ರೈವರ್‌ನಿಂದ 41 ಬಾರಿ ಇರಿದು ಪತ್ನಿಯ ಹತ್ಯೆಗೈದ ಪತಿ

    ಹೋಟೆಲಿನಲ್ಲಿ ಸ್ಕ್ರೂಡ್ರೈವರ್‌ನಿಂದ 41 ಬಾರಿ ಇರಿದು ಪತ್ನಿಯ ಹತ್ಯೆಗೈದ ಪತಿ

    ಅಂಕಾರಾ: ಬ್ರಿಟನ್ (Britain) ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿಗೆ 41 ಬಾರಿ ಸ್ಕ್ರೂಡ್ರೈವರ್‍ನಿಂದ ಇರಿದು ಹತ್ಯೆಗೈದ ಘಟನೆ ಟರ್ಕಿಯ (Turkey) ಇಸ್ತಾಂಬುಲ್‍ನ ಹೋಟೆಲ್‍ನಲ್ಲಿ ನಡೆದಿದೆ.

    ಆರೋಪಿಯನ್ನು ಬಂಧಿಸಲಾಗಿದ್ದು, ಅಹ್ಮತ್ ಯಾಸಿನ್ (28) ಎಂದು ಗುರುತಿಸಲಾಗಿದೆ. ಆರೋಪಿ ತನ್ನ ಪತ್ನಿಗೆ ಸ್ಕ್ರೂಡ್ರೈವರ್ ಇರಿದು ಹತ್ಯೆಗೈದಿರುವುದು ದೃಢವಾಗಿದೆ. ಮಹಿಳೆಯ ಕಿರುಚಾಟ ಕೇಳಿ ಹೋಟೆಲ್ ಸಿಬ್ಬಂದಿ ಕೊಠಡಿಗೆ ಪ್ರವೇಶಿಸಿದಾಗ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಇದನ್ನೂ ಓದಿ: ಬೈಕ್‌ಗೆ ಖಾಸಗಿ ಬಸ್ ಡಿಕ್ಕಿ – ಮಗಳ ಮನೆಗೆ ತೆರಳುತ್ತಿದ್ದ ಮಹಿಳೆ ದಾರುಣ ಸಾವು

    ದಂಪತಿ ಇಂಗ್ಲೆಂಡ್‍ನಿಂದ ಬಂದು ಹೊಟೆಲ್‍ನಲ್ಲಿ ತಂಗಿದ್ದರು ಎಂದು ತಿಳಿದು ಬಂದಿದೆ. ಡ್ರಗ್ಸ್ ಸೇವಿಸಿದ ಬಳಿಕ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಹತ್ಯೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

    ಮಹಿಳೆಯ ಹತ್ಯೆಯ ಬಳಿಕ ಆರೋಪಿ ಸ್ಕ್ರೂಡ್ರೈವರ್‍ನ್ನು ಎಸೆದಿದ್ದು, ಸಾಕ್ಷ ನಾಶಕ್ಕೆ ಯತ್ನಿಸಿದ್ದಾನೆ. ಆತನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಸೂಕ್ತ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಾಜಿ ಸೈನಿಕನಿಗೆ ಗುಂಡಿಕ್ಕಿ ಹತ್ಯೆ – ಆರೋಪಿಗಳನ್ನು ಬಡಿದು ಕೊಂದ ಗ್ರಾಮಸ್ಥರು

  • ಗಾಜಾ ನಗರವನ್ನೇ ವಿಭಜಿಸಿದ ಇಸ್ರೇಲ್‌ – 2 ನಗರಗಳ ಮಧ್ಯೆ ಸಂಪರ್ಕ ಕಡಿತ

    ಗಾಜಾ ನಗರವನ್ನೇ ವಿಭಜಿಸಿದ ಇಸ್ರೇಲ್‌ – 2 ನಗರಗಳ ಮಧ್ಯೆ ಸಂಪರ್ಕ ಕಡಿತ

    ಟೆಲ್‌ ಅವೀವ್‌/ ಅಂಕಾರಾ: ಹಮಾಸ್ ಉಗ್ರರನ್ನು (Hamas Terrorist) ಸರ್ವನಾಶ ಮಾಡುವ ಗುರಿಯೊಂದಿಗೆ ಮುನ್ನುಗ್ಗುತ್ತಿರುವ ಇಸ್ರೇಲ್ (Israel) ಗಾಜಾ ಮೇಲೆ ಭೀಕರ ದಾಳಿಯನ್ನು ಮುಂದುವರೆಸಿದೆ. ಈ ಹೊತ್ತಲ್ಲಿಯೇ ಮಹತ್ವದ ಬೆಳವಣಿಗೆ ನಡೆದಿದ್ದು ಗಾಜಾ ನಗರವನ್ನು ಎರಡಾಗಿ ವಿಭಜಿಸಿರುವುದಾಗಿ (Split Gaza in Two) ಇಸ್ರೇಲ್ ಸೇನೆ ಘೋಷಿಸಿದೆ.

    ಇದು ಅತ್ಯಂತ ಪ್ರಮುಖ ಘಟ್ಟ. ನಾವು ಇನ್ನಷ್ಟು ಜೋರಾಗಿ ದಾಳಿ ಮಾಡಲಿದ್ದೇವೆ ಎಂದು ಪ್ರಕಟಿಸಿದೆ. ಈಗಾಗಲೇ ದಕ್ಷಿಣ ಗಾಜಾ ಪ್ರಾಂತ್ಯವನ್ನು ತಲುಪಿರುವ ಐಡಿಎಫ್ (IDF) ಮುಂದಿನ 48 ಗಂಟೆಯಲ್ಲಿ ಉತ್ತರ ದಿಕ್ಕಿನಿಂದಲೂ ಗಾಜಾವನ್ನು ಪ್ರವೇಶಿಸುವ ಸಾಧ್ಯತೆಯಿದೆ. ನಾವು ಗೆಲ್ಲುವವರೆಗೂ ಯುದ್ಧ ನಿಲ್ಲಿಸುವುದಿಲ್ಲ ಎಂದು ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಘೋಷಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ರಿಯರ್‌ ಅಡ್ಮಿರಲ್‌ ಡೆನಿಯಲ್‌ ಹಗರಿ, ಇಸ್ರೇಲ್ ಸೇನೆಯು ಗಾಜಾ ನಗರವನ್ನು ಸುತ್ತುವರೆದಿದೆ. ಮುತ್ತಿಗೆ ಹಾಕಿದ ನಂತರ ಉತ್ತರ ಗಾಜಾ ಮತ್ತು ದಕ್ಷಿಣ ಗಾಜಾ ಎಂದು ವಿಭಜಿಸಲಾಗಿದೆ. ಎರಡು ನಗರಗಳ ಮಧ್ಯೆ ಸಂಪರ್ಕ ಕಡಿತ ಮಾಡಲಾಗಿದೆ. ಹಮಾಸ್‌ ವಿರುದ್ಧದ ಯುದ್ಧದಲ್ಲಿ ಇದು ಮಹತ್ವದ ಹಂತ ಎಂದು ಹೇಳಿದರು.

    ಇಸ್ರೇಲ್‌ ಮಾಧ್ಯಮಗಳ ಪ್ರಕಾರ ಮುಂದಿನ 48 ಗಂಟೆಯಲ್ಲಿ ಇಸ್ರೇಲ್‌ ಸೇನೆ ಗಾಜಾ ನಗರದ ಮೇಲೆ ದಾಳಿ ನಡೆಸಬಹುದು ಎಂದು ತಿಳಿಸಿದೆ. ಇದನ್ನೂ ಓದಿ: ಪತ್ನಿಗೆ 17 ಬಾರಿ ಇರಿದು, ದೇಹದ ಮೇಲೆ ಗಾಡಿ ಓಡಿಸಿದ್ದ ಕೇರಳದ ವ್ಯಕ್ತಿಗೆ ಅಮೆರಿಕದಲ್ಲಿ ಜೀವಾವಧಿ ಶಿಕ್ಷೆ

    ಟರ್ಕಿಯಲ್ಲಿ ದಾಳಿ: ಹಮಾಸ್-ಇಸ್ರೇಲ್ ಯುದ್ಧದ ಪ್ರಭಾವ ಟರ್ಕಿಯಲ್ಲಿ (Turkey) ಕಾಣಿಸತೊಡಗಿದೆ. ಟರ್ಕಿಯಲ್ಲಿ ಪ್ಯಾಲೆಸ್ತೇನ್ ಬೆಂಬಲಿಗರು ಅಮೆರಿಕಾದ ವಾಯುನೆಲೆ (USA Airbase) ಮೇಲೆ ದಾಳಿಗೆ ಯತ್ನಿಸಿದ್ದಾರೆ. ನೂರಾರು ಸಂಖ್ಯೆಯ ಪ್ರತಿಭಟನಾಕಾರರು ಏರ್‌ಬೇಸ್‌ಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

     

    ಬ್ಯಾರಿಕೇಡ್‌ಗಳನ್ನು ದಾಟಲು ಪ್ರಯತ್ನಿಸುತ್ತಾ, ಪೊಲೀಸರ ಮೇಲೆ ಕಲ್ಲು, ಕುರ್ಚಿಗಳನ್ನು ಎಸೆದಿದ್ದಾರೆ. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಟಿಯರ್ ಗ್ಯಾಸ್, ಜಲಫಿರಂಗಿ ಬಳಸಿದ್ದಾರೆ. ಅಮೆರಿಕ ವಿದೇಶಾಂಗ ಮಂತ್ರಿ ಆಂಟನಿ ಬ್ಲಿಂಕನ್ ಅಂಕಾರಾಗೆ ಕಾಲಿಡುವ ಸಮಯದಲ್ಲೇ ಈ ಬೆಳವಣಿಗೆ ನಡೆದಿರುವುದು ವಿಶೇಷ.

  • ಗಾಜಾ ಮೇಲೆ ಅಣ್ವಸ್ತ್ರ ಪ್ರಯೋಗವಾಗಬೇಕು ಎಂದ ಇಸ್ರೇಲ್‌ ಸಂಸದೆ – ಅಮೆರಿಕಕ್ಕೆ ಟರ್ಕಿ ಎಚ್ಚರಿಕೆ: 3ನೇ ಮಹಾಯುದ್ಧ ನಡೆಯುತ್ತಾ?

    ಗಾಜಾ ಮೇಲೆ ಅಣ್ವಸ್ತ್ರ ಪ್ರಯೋಗವಾಗಬೇಕು ಎಂದ ಇಸ್ರೇಲ್‌ ಸಂಸದೆ – ಅಮೆರಿಕಕ್ಕೆ ಟರ್ಕಿ ಎಚ್ಚರಿಕೆ: 3ನೇ ಮಹಾಯುದ್ಧ ನಡೆಯುತ್ತಾ?

    ಟೆಲ್‌ ಅವೀವ್‌: ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಿಂದ ಪಶ್ಚಿಮ ಏಷ್ಯಾ ರಣಾಂಗಣವಾಗಿ ಮಾರ್ಪಟ್ಟಿದ್ದು, ದಿನೇ ದಿನೇ ಯುದ್ಧದ ತೀವ್ರತೆ ಅಧಿಕವಾಗುತ್ತಿದೆ. ಈಗಾಗಲೇ ಗಾಜಾಪಟ್ಟಿಗೆ (Gaza Strip) ಅಷ್ಟದಿಗ್ಬಂಧನ ವಿಧಿಸಿರುವ ಇಸ್ರೇಲ್ (Israel) ಗಾಜಾ ನಗರದ ಮೇಲೆ ವೈಮಾನಿಕ ದಾಳಿ ಮೂಲಕ ಮುಗಿಬಿದ್ದಿದೆ.

    ಹಮಾಸ್ (Hamas) ಕೂಡ ನಿರಂತರವಾಗಿ ಇಸ್ರೇಲ್ ಕಡೆ ರಾಕೆಟ್ ದಾಳಿ ನಡೆಸುತ್ತಲೇ ಇದೆ. ಮತ್ತೊಂದು ಕಡೆ ಸಿರಿಯಾ, ಲೆಬನಾನ್ ಕಡೆಯಿಂದ ಉಗ್ರರು ಇಸ್ರೇಲ್ ಮೇಲೆ ಮುಗಿಬೀಳುತ್ತಿದ್ದಾರೆ. ಹೀಗಾಗಿ ಇಸ್ರೇಲ್‌ನಲ್ಲಿ ಸೈರನ್ ಮೊರೆತ ನಿಲ್ಲುತ್ತಲೇ ಇಲ್ಲ. ಇದರಿಂದ ಯುದ್ಧದ ಸ್ವರೂಪ ಮತ್ತು ವ್ಯಾಪ್ತಿ ಇನ್ನಷ್ಟು ವಿಸ್ತರಣೆ ಆಗುವ ಆತಂಕ ಎದುರಾಗಿದೆ.

    https://twitter.com/Israel/status/1712456473303826874

    ಇಸ್ರೇಲ್-ಪ್ಯಾಲೆಸ್ಟೈನ್‌ (Israel Palestine) ಯುದ್ಧದಲ್ಲಿ ಇತರರು ಮೂಗು ತೂರಿಸಬಾರದು ಎಂದು ಅಮೆರಿಕ (USA) ನೀಡುತ್ತಿರುವ ಎಚ್ಚರಿಕೆಯನ್ನು ಅರಬ್ ದೇಶಗಳು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಯಾರು ಮಧ್ಯಪ್ರವೇಶ ಮಾಡಬಾರದು ಎನ್ನುವ ಅಮೆರಿಕ ಸ್ವತಃ ಇಸ್ರೇಲ್‌ಗೆ ಒಂದು ವಿಮಾನ ಭರ್ತಿ ಶಸ್ತಾಸ್ತ್ರ ಕಳಿಸಿದೆ. ಅಷ್ಟೇ ಅಲ್ಲದೇ ಇಂದು ಟೆಲ್ ಅವೀವ್‌ಗೆ ಅಮೆರಿಕ ಮತ್ತು ಬ್ರಿಟನ್ ವಿದೇಶಾಂಗ ಮಂತ್ರಿ ಭೇಟಿ ನೀಡಿದ್ದಾರೆ.

    ಒಫಾಕಿಮ್‌ನಲ್ಲಿ ಕೇಳಿಬಂದ ಸೈರನ್ ಸದ್ದು ಮತ್ತು ರಾಕೆಟ್ ನುಗ್ಗಿ ಬಂದಿದ್ದನ್ನು ನೋಡಿ ಬ್ರಿಟನ್ ಮಂತ್ರಿ ಜೇಮ್ಸ್ ಪ್ರಾಣಭಯದಿಂದ ದಿಕ್ಕೆಟ್ಟು ಓಡಿದ್ದಾರೆ. ಈ ಮೂಲಕ ಇಸ್ರೇಲ್ ಬೆಂಬಲಕ್ಕೆ ನಿಂತಿದ್ದಾರೆ. ಇದೀಗ ಇಸ್ರೇಲ್‌ನಲ್ಲಿ ಸರ್ವಪಕ್ಷ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.  ಇದನ್ನೂ ಓದಿ: ಹೊಸಪೇಟೆಯಲ್ಲಿ ಹಮಾಸ್ ಉಗ್ರರ ಪರ ಸ್ಟೇಟಸ್ ಹಾಕಿದ್ದ ಯುವಕ ವಶಕ್ಕೆ

    ಇಸ್ರೇಲ್ ಸಂಸದೆ ತಾಲಿ ಗಾಟ್ಲಿಟ್ ಟ್ವೀಟ್ ಮಾಡಿ, ಗಾಜಾ ಮೇಲೆ ಅಣ್ವಸ್ತ್ರ ಪ್ರಯೋಗ ಆಗ್ಬೇಕು ಅಂತಿದ್ದಾರೆ. ಪ್ರಳಯವನ್ನು ಸೃಷ್ಟಿಸುವ ಆಯುಧವನ್ನು ವಿನಿಯೋಗಿಸಬೇಕು. ಈಗ ಡೂಮ್ಸ್ ಡೇಯನ್ನು ಮುದ್ದಾಡುವ ಸಮಯ ಬಂದಿದೆ. ದೇವರೇ ನಮ್ಮ ಶಕ್ತಿಯನ್ನು ಕಾಪಾಡು ಎಂದು ಟ್ವೀಟ್‌ ಮಾಡಿದ್ದಾರೆ. ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಈ ಯುದ್ಧ ಮೂರನೇ ಮಹಾ ಯುದ್ಧಕ್ಕೆ ದಾರಿ ಮಾಡಿಕೊಡಬಹುದಾ ಎಂಬ ಚರ್ಚೆಗಳು ಶುರುವಾಗಿವೆ.

     

    ಮೂರನೇ ಮಹಾ ಯುದ್ಧ ನಡೆಯುತ್ತಾ?
    ಇಸ್ರೇಲ್ ಮೇಲೆ ಪ್ಯಾಲೆಸ್ಟೈನ್‌, ಸಿರಿಯಾ, ಲೆಬನಾನ್ ಕಡೆಯಿಂದ ದಾಳಿ ಆರಂಭವಾಗಿದೆ. ಪ್ಯಾಲೆಸ್ಟೈನ್‌ ಬೆಂಬಲಕ್ಕೆ ಇರಾನ್, ಸೌದಿ, ಕತಾರ್‌, ಕುವೈತ್, ದಕ್ಷಿಣ ಆಫ್ರಿಕಾ ಬೆಂಬಲ ನೀಡಿದೆ. ಇಸ್ರೇಲ್ ಬೆಂಬಲಕ್ಕೆ ಅಮೆರಿಕ, ಐರೋಪ್ಯ ಒಕ್ಕೂಟ, ಬ್ರಿಟನ್, ಭಾರತ, ಆಸ್ಟ್ರೇಲಿಯಾ ನಿಂತಿದೆ.

    ಅಮೆರಿಕ ಯುದ್ಧ ವಿಮಾನ, ಯುದ್ಧನೌಕೆ ಕಳಿಸಿದ್ದಕ್ಕೆ ಟರ್ಕಿ ಗರಂ ಆಗಿದ್ದು ಮಾರಣಕಾಂಡಕ್ಕೆ ದಾರಿ ಆಗಲಿದೆ ಎಂದು ಎಚ್ಚರಿಕೆ ನೀಡಿದೆ. ಅಮೆರಿಕದ ಸ್ಥಾವರಗಳ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಿದ ಇರಾಕ್‌ನ ಉಗ್ರ ಸಂಘಟನೆ ಕತೈಬ್ ಹೆಜ್ಬುಲ್ಲಾ ಮಿಲಿಷಿಯಾ. ಇಸ್ರೇಲ್-ಪ್ಯಾಲೆಸ್ಟೈನ್‌ ಯುದ್ಧ ತಡೆಯುವ ಸಂಬಂಧ ಇರಾನ್-ಸೌದಿ ನಾಯಕರು ಮಾತುಕತೆ ನಡೆಸಿದ್ದಾರೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟರ್ಕಿ ಹಡಗು ಹೈಜಾಕ್- ಕಾರ್ಯಾಚರಣೆಗಿಳಿದ ಇಟಲಿ ಸೇನಾ ಪಡೆ

    ಟರ್ಕಿ ಹಡಗು ಹೈಜಾಕ್- ಕಾರ್ಯಾಚರಣೆಗಿಳಿದ ಇಟಲಿ ಸೇನಾ ಪಡೆ

    ರೋಮ್: ದುಷ್ಕರ್ಮಿಗಳಿಂದ ಹೈಜಾಕ್  (Hijack) ಆಗಿದ್ದ ಟರ್ಕಿಶ್ ಹಡಗನ್ನು (Turkish Ship) ಇಟಾಲಿಯನ್ ವಿಶೇಷ ಸೇನಾ ಪಡೆ (Italian Forces) ನಿಯಂತ್ರಣಕ್ಕೆ ಪಡೆದಿದೆ.

    ಅಕ್ರಮ ವಲಸಿಗರು ಹಡಗನ್ನು ಹೈಜಾಕ್ ಮಾಡಿದ್ದು, ಹಡಗನ್ನು ನಿಯಂತ್ರಣಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಹಡಗಿನಲ್ಲಿ 22 ಸಿಬ್ಬಂದಿಯಿದ್ದು, ಅವರ ಸುರಕ್ಷತೆಯ ವಿಚಾರವನ್ನು ಶೀಘ್ರದಲ್ಲೇ ದೃಢಪಡಿಸಲಾಗುವುದು ಎಂದು ಇಟಲಿಯ (Italy) ರಕ್ಷಣಾ ಸಚಿವ ಗೈಡೊ ಕ್ರೊಸೆಟ್ಟೊ ತಿಳಿಸಿದ್ದಾರೆ.

    ವಾಹನಗಳನ್ನು ಸಾಗಿಸುವ ಮತ್ತು ನೌಕಾಯಾನದ ಹಡಗು ಜೂನ್ 7 ರಂದು ಟರ್ಕಿಯ (Turkey) ಟೊಪ್ಯುಲರ್‌ನಿಂದ ಹೊರಟು ದಕ್ಷಿಣ ಫ್ರಾನ್ಸ್‍ನ ಸೆಟೆಗೆ ಹೊರಟಿತ್ತು. ಅದನ್ನು ಅಕ್ರಮ ವಲಸಿಗರು ಅಪಹರಿಸಿದ್ದರು. ಶೀಘ್ರದಲ್ಲೇ ದುಷ್ಕರ್ಮಿಗಳಿಂದ ಹಡಗನ್ನು ವಶಕ್ಕೆ ಪಡೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.

    ಹಡಗನ್ನು ಮುಕ್ತಗೊಳಿಸಲು ಇಟಾಲಿಯನ್ ವಿಶೇಷ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಟರ್ಕಿ-ಸಿರಿಯಾದಲ್ಲಿ ಮತ್ತೆ ಭೂಕಂಪ; 8 ಸಾವು, 290ಕ್ಕೂ ಹೆಚ್ಚು ಮಂದಿಗೆ ಗಾಯ

    ಟರ್ಕಿ-ಸಿರಿಯಾದಲ್ಲಿ ಮತ್ತೆ ಭೂಕಂಪ; 8 ಸಾವು, 290ಕ್ಕೂ ಹೆಚ್ಚು ಮಂದಿಗೆ ಗಾಯ

    ಅಂಕಾರಾ: ಟರ್ಕಿ-ಸಿರಿಯಾ (Turkey – Syria) ಗಡಿಯಲ್ಲಿ ಮತ್ತೆ ಭೂಕಂಪ ಸಂಭವಿಸಿದ್ದು, ಸಾವಿನ ಸಂಖ್ಯೆ 8ಕ್ಕೆ ಏರಿದೆ. ವರದಿಯ ಪ್ರಕಾರ ಈ ಭೂಕಂಪದ ತೀವ್ರತೆಯು 6.4ರಷ್ಟಿತ್ತು. ಇದರಿಂದಾಗಿ 294 ಜನರು ಗಾಯಗೊಂಡಿದ್ದು, ಅವರ ಪೈಕಿ 18 ಜನರು ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

    ಸಿರಿಯಾದ ಹಮಾ ಮತ್ತು ಟಾರ್ಟಸ್ ಪ್ರಾಂತ್ಯಗಳಲ್ಲಿ ಭೂಕಂಪ (Earthquake) ಸಂಭವಿಸಿದ ಸಮಯದಲ್ಲಿ ಭಯಭೀತರಾಗಿ ಓರ್ವ ಮಹಿಳೆ ಮತ್ತು ಬಾಲಕಿ ಸಾವನ್ನಪ್ಪಿದ್ದಾರೆ.  ಇದನ್ನೂ ಓದಿ: ಮುಂಬೈ ದಾಳಿಯ ದುಷ್ಕರ್ಮಿಗಳು ಇನ್ನೂ ಮುಕ್ತವಾಗಿ ಓಡಾಡಿಕೊಂಡಿದ್ದಾರೆ – ಪಾಕ್ ನೆಲದಲ್ಲೇ ಜಾವೇದ್ ಅಖ್ತರ್ ಕಿಡಿ

    Turkey Syria Earthquake

    ಭೂಕಂಪದ ಕೇಂದ್ರಬಿಂದು ಸಿರಿಯಾದ ಗಡಿಯುದ್ದಕ್ಕೂ ಇರುವ ಟರ್ಕಿಯ ಹಟೇ ಪ್ರಾಂತ್ಯದ ಡೆಫ್ನೆ ಪಟ್ಟಣದಲ್ಲಿದೆ. ಜೋಡಾನ್, ಸೈಪ್ರಸ್, ಇಸ್ರೇಲ್, ಲೆಬನಾನ್ ಮತ್ತು ದೂರದ ಈಜಿಪ್ಟ್ ನಲ್ಲೂ ಈ ಭೂಕಂಪದ ಅನುಭವವಾಗಿತ್ತು. ಇದನ್ನೂ ಓದಿ: ಟರ್ಕಿ, ಸಿರಿಯಾದಲ್ಲಿ ಮತ್ತೆ ಭಾರೀ ಭೂಕಂಪ – ಭೂಮಿಯೇ ಹೋಳಾಗೋ ಭೀತಿಯಲ್ಲಿದ್ದಾರೆ ಜನ

    ಫೆಬ್ರವರಿ 6ರಂದು 7.8 ತೀವ್ರತೆಯ ಭೂಕಂಪವು ಟರ್ಕಿ ಮತ್ತು ಸಿರಿಯಾ ದೇಶವನ್ನು ಕಂಗೆಡಿಸಿತ್ತು. ಈ ಸಂದರ್ಭದಲ್ಲಿ ಟರ್ಕಿಯ ಹಟೇ ಪ್ರಾಂತ್ಯವು ಅತ್ಯಂತ ಹೆಚ್ಚು ಹಾನಿಗೊಳಗಾಗಿ, ಸಾವಿರಾರು ಕಟ್ಟಡಗಳು ನೆಲಕ್ಕುರುಳಿದ್ದವು. ಎರಡನೇ ಭೂಕಂಪವು ಮತ್ತಷ್ಟು ಹಾನಿಯನ್ನುಂಟು ಮಾಡಿತ್ತು. ಹಟೇ ಪ್ರಾಂತ್ಯದಲ್ಲಿದ್ದ ರಾಜ್ಯಪಾಲರ ಕಚೇರಿಯೂ ಹಾನಿಗೊಳಗಾಗಿದೆ ಎಂದು ವರದಿಗಳು ತಿಳಿಸಿವೆ.

    Turkey Earthquake 1

    ಫೆಬ್ರವರಿ 6ರಂದು ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಟರ್ಕಿಯಲ್ಲಿ ಕನಿಷ್ಠ 41,156 ಜನರು ಸಾವನ್ನಪ್ಪಿದ್ದಾರೆ. ಭೂಕಂಪದ ಕೇಂದ್ರಬಿಂದು ದಕ್ಷಿಣ ಕಹ್ರಮನ್ನರಸ್ ಪ್ರಾಂತ್ಯದಲ್ಲಿದೆ. ಟರ್ಕಿಯಲ್ಲಿ 11 ಪ್ರಾಂತ್ಯದಲ್ಲಿ ಭೂಕಂಪ ಸಂಭವಿಸಿದ್ದು, 1,10,000ಕ್ಕೂ ಹೆಚ್ಚು ಕಟ್ಟಡಗಳು ನಾಶವಾಗಿವೆ.

    ಈ ಕುರಿತು ಮಾಹಿತಿ ನೀಡಿದ ವಾಯುವ್ಯ ಸಿರಿಯಾದ ನಾಗರಿಕ ರಕ್ಷಣಾ ಸಂಸ್ಥೆ, ಈ ಭೂಕಂಪದಲ್ಲಿ 190 ಜನರು ಗಾಯಗೊಂಡಿದ್ದಾರೆ. ಅವಶೇಷಗಳಡಿ ಜನರು ಸಿಲುಕಿಕೊಂಡ ಯಾವುದೇ ಪ್ರಕರಣಗಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟರ್ಕಿ, ಸಿರಿಯಾದಲ್ಲಿ ಮತ್ತೆ ಭಾರೀ ಭೂಕಂಪ – ಭೂಮಿಯೇ ಹೋಳಾಗೋ ಭೀತಿಯಲ್ಲಿದ್ದಾರೆ ಜನ

    ಟರ್ಕಿ, ಸಿರಿಯಾದಲ್ಲಿ ಮತ್ತೆ ಭಾರೀ ಭೂಕಂಪ – ಭೂಮಿಯೇ ಹೋಳಾಗೋ ಭೀತಿಯಲ್ಲಿದ್ದಾರೆ ಜನ

    – 3 ಸಾವು, 200ಕ್ಕೂ ಹೆಚ್ಚು ಜನರಿಗೆ ಗಾಯ
    – 2 ವಾರದಿಂದ 47,000 ಜನ ಬಲಿ

    ಅಂಕಾರ: 2 ವಾರಗಳ ಹಿಂದೆ ಟರ್ಕಿ (Turkey) ಹಾಗೂ ಸಿರಿಯಾದಲ್ಲಿ (Syria) ಸಂಭವಿಸಿರುವ ಭೀಕರ ಭೂಕಂಪದಿಂದಾಗಿ (Earthquake) ಎರಡೂ ದೇಶಗಳು ತತ್ತರಿಸಿ ಹೋಗಿದೆ. 2 ವಾರಗಳಿಂದ 47 ಸಾವಿರ ಜನರು ಬಲಿಯಾಗಿದ್ದಾರೆ. ಸಾವು ನೋವುಗಳ ಭೀಕರತೆಯನ್ನು ಅರಗಿಸಿಕೊಳ್ಳುವುದಕ್ಕೂ ಮೊದಲೇ ಟರ್ಕಿ ಹಾಗೂ ಸಿರಿಯಾದಲ್ಲಿ ಮತ್ತೆ ಸೋಮವಾರ ಭಾರೀ ಭೂಕಂಪವಾಗಿದೆ.

    ಸೋಮವಾರ ಸಂಭವಿಸಿದ ಭೂಕಂಪ ಟರ್ಕಿಯ ಹಟಾಯ್ ಪ್ರದೇಶದ ಡೆಫ್ನೆ ಪಟ್ಟಣದಲ್ಲಿ ಭೂಮಿಯಿಂದ 10 ಕಿ.ಮೀ ಆಳದಲ್ಲಿ ಅದರ ಕೇಂದ್ರ ಬಿಂದುವನ್ನು ಪತ್ತೆಹಚ್ಚಲಾಗಿದೆ. ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯ ಭೂಕಂಪ ದಾಖಲಾಗಿದ್ದು, ಘಟನೆಯಲ್ಲಿ 3 ಜನರು ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಜೋರ್ಡಾನ್, ಸೈಪ್ರಸ್, ಇಸ್ರೇಲ್ ಹಾಗೂ ಈಜಿಪ್ಟ್ನಲ್ಲೂ ಕಂಪನದ ಅನುಭವವಾಗಿರುವುದಾಗಿ ವರದಿಗಳು ತಿಳಿಸಿವೆ.

    ಇದೀಗ ಜನಜೀವನವೇ ಛಿದ್ರಗೊಂಡಿರುವ ಟರ್ಕಿ ಹಾಗೂ ಸಿರಿಯಾದ ನಿವಾಸಿಗಳು ಭೂಮಿಯೇ 2 ಭಾಗವಾಗುತ್ತದೆ ಎಂದು ಭೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ನನ್ನ ಕಾಲುಗಳ ಕೆಳಗಡೆ ಭೂಮಿ ಭಾಗವಾಗುತ್ತದೆ ಎಂದು ನನಗೆ ಭೀತಿಯುಂಟಾಗಿದೆ ಎಂದು ಟರ್ಕಿಯ ಅಂಟಾಕ್ಯಾ ನಗರದ ನಿವಾಸಿಯೊಬ್ಬರು ತಮ್ಮ ಭಯಾನಕ ಅನುಭವವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಾಸಕನ ಪುತ್ರನಿಂದ ಗಾಯಕ ಸೋನು ನಿಗಮ್ ಮೇಲೆ ಹಲ್ಲೆ : ದೂರು ದಾಖಲು

    2 ವಾರಗಳಿಂದ ಟರ್ಕಿ ಹಾಗೂ ಸಿರಿಯಾದಲ್ಲಿ ಉಂಟಾಗುತ್ತಿರುವ ಭೂಕಂಪಗಳಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 47 ಸಾವಿರಕ್ಕೆ ಏರಿಕೆಯಾಗಿದೆ. ಇದೀಗ ಮತ್ತೆ ಮತ್ತೆ ಭೂಕಂಪಗಳು ಸಂಭವಿಸುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯೂ ಇದೆ. ಟರ್ಕಿಯ 11 ಭೂಕಂಪ ಪೀಡಿತ ಪ್ರದೇಶಗಳಲ್ಲಿ ಸುಮಾರು 3,65,000 ಕಟ್ಟಡಗಳು ನಾಶ ಹಾಗೂ ಗಂಭೀರವಾಗಿ ಹಾನಿಗೊಳಗಾಗಿವೆ. ಇನ್ನೂ ಅನೇಕರು ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: 10 ವರ್ಷದ ಫೀಸ್ ಕಟ್ಟೋಕೆ ಶಾಲೆಗಳಿಂದ ಆಫರ್ – ನಯಾ ಪ್ಲ್ಯಾನ್‍ಗೆ ಪೋಷಕರು ಕಂಗಾಲು

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭಾರತ ಈಗ ಕುಸಿಯುತ್ತಿದೆ: ಮೋದಿಯನ್ನು ಟೀಕಿಸಿದ ಜಾರ್ಜ್ ಸೊರಸ್ ಯಾರು?

    ಭಾರತ ಈಗ ಕುಸಿಯುತ್ತಿದೆ: ಮೋದಿಯನ್ನು ಟೀಕಿಸಿದ ಜಾರ್ಜ್ ಸೊರಸ್ ಯಾರು?

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯನ್ನು (Narendra Modi) ಟೀಕಿಸಿ, ಉದ್ಯಮಿ ಗೌತಮ್ ಅದಾನಿ ಕುರಿತಾದ ಹಿಂಡನ್‍ಬರ್ಗ್ (Hindenburg) ಕುರಿತಾದ ವರದಿ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಕೋಟ್ಯಧಿಪತಿ ಜಾರ್ಜ್ ಸೊರಸ್ (George Soros) ಅವರನ್ನು ಕೇಂದ್ರ ಸರ್ಕಾರ ಇಂದು ತರಾಟೆಗೆ ತೆಗೆದುಕೊಂಡಿದೆ.

    ಜಾರ್ಜ್ ಸೊರಸ್ ಮ್ಯೂನಿಚ್ ಸೆಕ್ಯುರಿಟಿ ಕಾನ್ಫ್‍ರೆನ್ಸ್‍ನಲ್ಲಿ ಸೊರೊಸ್ ಅದಾನಿ ಕಂಪನಿಗಳ ವಂಚನೆ ಹಾಗೂ ಈ ಕುರಿತು ಪ್ರಧಾನಿ ಮೋದಿಯವರ ಮೌನದ ಕುರಿತು ಅವರು ಧ್ವನಿ ಎತ್ತಿದ್ದರು. ಮೋದಿಯವರ ಅಡಳಿತದ ಭಾರತವು ಕೆಳಮಟ್ಟಕ್ಕೆ ಕುಸಿಯುತ್ತಿದೆ. ಭಾರತ ಕ್ವಾಡ್ ದೇಶವಾಗಿದ್ದರೂ ರಷ್ಯಾದಿಂದ ತೈಲ ಖರೀದಿಸುತ್ತಿದೆ. ಭಾರತದಲ್ಲಿ ಪ್ರಜಾಸತ್ತಾತ್ಮಕ ಸುಧಾರಣೆಗಳನ್ನು ನಾನು ಬಯಸುತ್ತೇನೆ ಎಂದು ಸೊರಸ್ ಅಭಿಪ್ರಾಯ ಪಟ್ಟಿದ್ದರು. ಇದನ್ನೂ ಓದಿ: ಬಜೆಟ್‌ನಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ಅನುದಾನ: ಬೊಮ್ಮಾಯಿ ಭರವಸೆ

    ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani), ಭಾರತವನ್ನು ಸಹಿಸಲಾಗದೆ ವಿದೇಶಿ ಶಕ್ತಿಗಳು ದಾಳಿ ನಡೆಸುತ್ತಿವೆ. ಇದರ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಪ್ರತಿಕ್ರಿಯಿಸುವ ಅಗತ್ಯವಿದೆ ಎಂದಿದ್ದಾರೆ.

    ಯಾರು ಈ ಸೊರಸ್?
    92 ವರ್ಷದ ಸೊರಸ್ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಯಹೂದಿ ಕುಟುಂಬದಲ್ಲಿ ಜನಿಸಿದ್ದ ಇವರು 17 ವರ್ಷದವರಿದ್ದಾಗ ನಾಝಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಹಂಗೇರಿಯನ್ನು ತೊರೆದು 1947ರಲ್ಲಿ ಲಂಡನ್ ಸೇರಿದ್ದರು. ನಂತರ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ತತ್ವಶಾಸ್ತ್ರ ಅಧ್ಯಯನ ಮಾಡಿದ್ದರು.

     

    ವಿದ್ಯಾಭ್ಯಾಸದ ನಂತರ ಲಂಡನ್ ಮರ್ಚೆಂಟ್ ಬ್ಯಾಂಕ್ ಸಿಂಗರ್ ಮತ್ತು ಫ್ರೈಡ್‍ಲ್ಯಾಂಡರ್‍ಗೆ ಸೇರಿದರು. 1956ರಲ್ಲಿ ನ್ಯೂಯಾರ್ಕ್‍ಗೆ ತೆರಳಿದ ಅವರು ಯುರೋಪಿಯನ್ ಸೆಕ್ಯುರಿಟಿ ವಿಶ್ಲೇಷಕರಾಗಿ ಸೇರಿಕೊಂಡರು. 1973ರಲ್ಲಿ ಹೂಡಿಕೆ ಸಂಸ್ಥೆಯನ್ನು ಸ್ಥಾಪಿಸಿ ವಿದೇಶದ ಕಂಪನಿಗಳಲ್ಲಿ ಹಣ ಹೂಡಿ ಅದರಲ್ಲಿ ಯಶಸ್ಸು ಕಂಡರು.

    ಸೊರಸ್ 8.5 ಶತಕೋಟಿ ಡಾಲರ್ ಒಡೆಯರಾಗಿದ್ದಾರೆ. ಪ್ರಜಾಪ್ರಭುತ್ವ ಹಾಗೂ ವಾಕ್ ಸ್ವಾತಂತ್ರ್ಯವನ್ನು ಉತ್ತೇಜಿಸುವ ಸಂಘಟನೆಗಳು ಹಾಗೂ ವ್ಯಕ್ತಿಗಳಿಗೆ ಅನುದಾನ ನೀಡುವ ಓಪನ್ ಸೊಸೈಟಿ ಫೌಂಡೇಶನ್‍ಗಳನ್ನು ಅವರು ಸ್ಥಾಪಿಸಿದ್ದಾರೆ. ಭಾರತದ ಹಲವು ಮಾಧ್ಯಮ ಸಂಸ್ಥೆಗಳಿಗೆ ಓಪನ್ ಸೊಸೈಟಿ ಅನುದಾನ ನೀಡುತ್ತಿದೆ. ಇದನ್ನೂ ಓದಿ: ನಕಲು ತಡೆಗೆ ಕಠಿಣ ಕ್ರಮ – ವಾರ್ಷಿಕ ಪರೀಕ್ಷೆಯ ಮೊದಲ ದಿನವೇ 4 ಲಕ್ಷ ವಿದ್ಯಾರ್ಥಿಗಳು ಗೈರು

    ಶೀತಲ ಸಮರದ ಅಂತ್ಯದ ವೇಳೆಗೆ ಜೆಕಾಸ್ಲೋವಾಕಿಯ, ಪೋಲೆಂಡ್, ರಷ್ಯಾ ಮತ್ತು ಯುಗೊಸ್ಲಾವಿಯಾದಲ್ಲಿ ತಮ್ಮ ಸಂಸ್ಥೆಯನ್ನು ಸ್ಥಾಪಿಸಿದರು. ಇಂದು ಒಪನ್ ಸೊಸೈಟಿ ಫೌಂಡೇಶನ್ 70ಕ್ಕೂ ಹೆಚ್ಚು ದೇಶಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ರಾಜಕೀಯ ಚಳುವಳಿಯಲ್ಲಿ ಭಾಗವಹಿಸುವ ಅವರು ಬರಾಕ್ ಒಬಾಮ (Barack Obama), ಹಿಲರಿ ಕ್ಲಿಂಟನ್ ಮತ್ತು ಜೋ ಬೈಡನ್ (Joe Biden) ಅವರನ್ನು ಬೆಂಬಲಿಸಿದ್ದರು. ಹಾಗೆ ಚೀನಾ ಅಧ್ಯಕ್ಷ ಜಿನ್‍ಪಿಂಗ್, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಟರ್ಕಿ (Turkey) ಅಧ್ಯಕ್ಷ ಎರ್ಡೋಗನ್ ಅವರನ್ನು ವಿರೋಧಿಸಿದ್ದರು.

    ಕಳೆದ ತಿಂಗಳು ಅಮೆರಿಕದ ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡನ್‍ಬರ್ಗ್ ಸಂಸ್ಥೆ ಅದಾನಿ ಕಂಪನಿಯ ವಂಚನೆ ಕುರಿತಾದ ಸಂಶೋಧನ ವರದಿಯೊಂದನ್ನು ಪ್ರಕಟಿಸಿತ್ತು. ಇದಾದ ನಂತರ ಅದಾನಿ ಕಂಪನಿಯ ಷೇರುಗಳು ಕುಸಿತ ಕಂಡಿದ್ದವು. ಆದರೆ ಹಿಂಡನ್‍ಬರ್ಗ್ ವರದಿಯನ್ನು ಅದಾನಿ ಸಂಸ್ಥೆ ಅಲ್ಲಗಳೆದು ದೀರ್ಘವಾದ ಉತ್ತರ ನೀಡಿತ್ತು.

    ಸೊರಸ್ ಮೋದಿ ವಿರುದ್ಧ ಟೀಕೆ ಮಾಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ಹಲವು ವೇದಿಕೆಗಳಲ್ಲಿ ಬಹಿರಂಗವಾಗಿಯೇ ಟೀಕೆ ಮಾಡಿದ್ದರು. ಇದನ್ನೂ ಓದಿ: ಪಕ್ಷಾತೀತ, ಭಯರಹಿತ ಪತ್ರಿಕೋದ್ಯಮ ಮುಂದುವರಿಸುತ್ತೇವೆ – ಆರ್ಥಿಕ ಸಮೀಕ್ಷೆ ಬಳಿಕ BBC ಹೇಳಿಕೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟರ್ಕಿ, ಸಿರಿಯಾ ಭೂಕಂಪ- ಸಾವಿನ ಸಂಖ್ಯೆ 41 ಸಾವಿರಕ್ಕೆ ಏರಿಕೆ

    ಟರ್ಕಿ, ಸಿರಿಯಾ ಭೂಕಂಪ- ಸಾವಿನ ಸಂಖ್ಯೆ 41 ಸಾವಿರಕ್ಕೆ ಏರಿಕೆ

    ಅಂಕಾರ: ಫೆಬ್ರವರಿ 6 ರಂದು ಸಂಭವಿಸಿದ ಮಾರಣಾಂತಿಕ ಭೂಕಂಪದಿಂದಾಗಿ (Earthquake) ಟರ್ಕಿ (Turkey) ಹಾಗೂ ಸಿರಿಯಾ (Syria) ದೇಶಗಳು ಅಕ್ಷರಶಃ ನಲುಗಿ ಹೋಗಿದೆ. ಇದೀಗ ಸಾವಿನ ಸಂಖ್ಯೆ 41,000 ತಲುಪಿದೆ. ಅವಶೇಷಗಳಡಿಯಿಂದ ಬದುಕುಳಿದವರ ಚೀರಾಟ ಇನ್ನೂ ಕೂಡಾ ಕೇಳಿಬರುತ್ತಿದೆ. ಬದುಕುಳಿದವರನ್ನು ರಕ್ಷಿಸಲು ರಕ್ಷಣಾ ತಂಡಗಳು ಕಳೆದೊಂದು ವಾರದಿಂದ ಹಗಲು ರಾತ್ರಿಯೆನ್ನದೇ ಶ್ರಮಿಸುತ್ತಿವೆ.

    ಮಂಗಳವಾರ ಟರ್ಕಿಯಲ್ಲಿ ಅವಶೇಷಗಳಡಿಯಿಂದ 9 ಜನ ಬದುಕುಳಿದವರನ್ನು ರಕ್ಷಿಸಲಾಗಿದೆ. ನಿರಾಶ್ರಿತರು ಈಗ ಕೊರೆಯುವ ಚಳಿಯಲ್ಲಿ ಹಾಗೂ ಆಹಾರದ ಕೊರತೆಯಿಂದಾಗಿ ಹೆಣಗಾಡುತ್ತಿದ್ದಾರೆ. ನಗರವಿಡೀ ಸತ್ತ ಜನರ ವಾಸನೆ ಬರುತ್ತಿದೆ. ಅವಶೇಷಗಳಡಿ ಇನ್ನೂ ಹಲವರು ಜೀವಂತವಾಗಿರುವ ಸಾಧ್ಯತೆಯಿದ್ದು, ಎಲ್ಲರನ್ನೂ ರಕ್ಷಿಸುವ ಪ್ರಯತ್ನ ಮಾಡಲಾಗುತ್ತಿದೆ.

    ಈಗಾಗಲೇ ಸುಮಾರು 2 ಕೋಟಿ ಜನರು ಭೂಕಂಪ ಪೀಡಿತ ಪ್ರದೇಶವನ್ನು ತೊರೆದಿದ್ದಾರೆ. ಭೂಕಂಪ ಪೀಡಿತ ಪ್ರದೇಶದಲ್ಲಿ ಇನ್ನೂ ನೂರಾರು ಕಟ್ಟಡಗಳು ವಾಸಕ್ಕೆ ಯೋಗ್ಯವಾಗಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಭಾರತೀಯ ಸೇನೆಯಲ್ಲಿ ಮುಸ್ಲಿಮರಿಗೆ ಶೇ.30 ಮೀಸಲಾತಿ ಕೊಡಿ: ಜೆಡಿಯು ನಾಯಕ ಒತ್ತಾಯ

    ಭಾರತ ಆಪರೇಷನ್ ದೋಸ್ತ್ ಅಡಿಯಲ್ಲಿ ಭೂಕಂಪ ಪೀಡಿತ ಟರ್ಕಿ ಹಾಗೂ ಸಿರಿಯಾಗೆ ಮಾನವೀಯ ವೈದ್ಯಕೀಯ ನೆರವು ನೀಡುವುದನ್ನು ಮುಂದುವರಿಸಿದೆ. ಔಷಧಗಳು, ರಕ್ಷಣಾತ್ಮಕ ವಸ್ತುಗಳು, 7 ಕೋಟಿ ರೂ. ಗೂ ಅಧಿಕ ಮೌಲ್ಯದ ಕ್ರಿಟಲ್ ಕೇರ್ ಉಪಕರಣಗಳನ್ನೊಳಗೊಂಡಂತೆ ತುರ್ತು ಪರಿಹಾರ ಸಾಮಾಗ್ರಿಗಳನ್ನು ರವಾನಿಸಿದೆ. ಇದನ್ನೂ ಓದಿ: Shivamogga Airport ನಾಮಕರಣ ವಿವಾದ- ಉದ್ಘಾಟನೆಗೆ ಡೇಟ್ ಫಿಕ್ಸ್ ಆದ್ರೂ ಫೈನಲ್ ಆಗಿಲ್ಲ ಹೆಸರು!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟರ್ಕಿ ಭೂಕಂಪ- ಎಂಟು ವರ್ಷದ ಬಾಲಕಿಯನ್ನು ರಕ್ಷಿಸಿದ NDRF

    ಟರ್ಕಿ ಭೂಕಂಪ- ಎಂಟು ವರ್ಷದ ಬಾಲಕಿಯನ್ನು ರಕ್ಷಿಸಿದ NDRF

    ನವದೆಹಲಿ: ಪ್ರಬಲ ಭೂಕಂಪದಿಂದ ನಾಶಗೊಂಡಿರುವ ಟರ್ಕಿ (Turkey) ಯಲ್ಲಿ ಎನ್‍ಡಿಆರ್ ಎಫ್ (NDRF) ತಂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಇಂದು ಎಂಟು ವರ್ಷದ ಬಾಲಕಿಯನ್ನು ರಕ್ಷಿಸಿದೆ. ಟರ್ಕಿಯ ನೂರ್ಡಗಿ, ಗಾಜಿಯಾಂಟೆಪ್‍ನಲ್ಲಿ ಭೂಕಂಪದಿಂದ ನೆಲಸಮವಾದ ಕಟ್ಟಡದ ಅವಶೇಷಗಳಡಿಯಲ್ಲಿ ಬಾಲಕಿ ಜೀವಂತವಾಗಿ ಸಿಲುಕಿದ್ದಳು.

    ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿದ್ದ ಬಾಲಕಿಯನ್ನು ಟರ್ಕಿಶ್ ಸೇನಾ ನೆರವಿನೊಂದಿಗೆ ವಿಶೇಷ ರಕ್ಷಣಾ ಕಾರ್ಯಾಚರಣೆ ಮಾಡಿದ ತಂಡ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಎನ್‍ಡಿಆರ್ ಎಫ್, ಕಠಿಣ ಪರಿಶ್ರಮದೊಂದಿಗೆ ಬಾಲಕಿಯನ್ನು ರಕ್ಷಿಸಿದೆ ಎಂದು ಫೋಟೋ ಹಂಚಿಕೊಂಡಿದೆ.

    ಪ್ರಬಲ ಭೂಕಂಪದಿಂದಾಗಿ ಈವರೆಗೂ ಟರ್ಕಿ ಮತ್ತು ಸಿರಿಯಾ (Siriya) ದಲ್ಲಿ 24,000 ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಭೂಕಂಪದ ನಂತರ ಎರಡು ದೇಶಗಳಲ್ಲಿ ಕನಿಷ್ಠ 8,70,000 ಜನರಿಗೆ ತುರ್ತಾಗಿ ಆಹಾರದ ಅಗತ್ಯವಿದೆ. ಸಿರಿಯಾದಲ್ಲಿ ಭೂಕಂಪ 53 ಲಕ್ಷ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ ಎಂದು ಯುಎನ್ ಎಚ್ಚರಿಸಿದೆ.

    ಟರ್ಕಿ ಮತ್ತು ಸಿರಿಯಾಕ್ಕೆ ಅಂತಾರಾಷ್ಟ್ರೀಯ ಮಟ್ಟದಿಂದ ನೆರವು ಹರಿದು ಬರುತ್ತಿದೆ. ಯುನೈಟೆಡ್ ನೇಷನ್ಸ್ ವಲ್ರ್ಡ್ ಫುಡ್ ಪ್ರೋಗ್ರಾಂ ಟರ್ಕಿಯಲ್ಲಿ ಕನಿಷ್ಠ 590,000 ಮತ್ತು ಸಿರಿಯಾದಲ್ಲಿ 284,000 ಹೊಸದಾಗಿ ಸ್ಥಳಾಂತರಗೊಂಡ ಜನರಿಗೆ ಆಹಾರ ಪಡಿತರವನ್ನು ಒದಗಿಸಲು 635 ಕೋಟಿ ನೆರವಿಗೆ ಮನವಿ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k