Tag: turkey

  • Boycott Turkey – ಸೇಬು, ಚೆರ‍್ರಿ, ಮಾರ್ಬಲ್‌ಗಳ ಆಮದು ಬ್ಯಾನ್‌ಗೆ ನಿರ್ಧಾರ

    Boycott Turkey – ಸೇಬು, ಚೆರ‍್ರಿ, ಮಾರ್ಬಲ್‌ಗಳ ಆಮದು ಬ್ಯಾನ್‌ಗೆ ನಿರ್ಧಾರ

    – ಭಾರತದಿಂದ ಟರ್ಕಿ ಪ್ರವಾಸಕ್ಕೆ ಬಹಿಷ್ಕಾರ
    – ಚಿತ್ರೀಕರಣ ಕೂಡ ಬ್ಯಾನ್

    ನವದೆಹಲಿ: ಪಾಕಿಸ್ತಾನದ (Pakistan) ಬೆನ್ನಿಗೆ ನಿಂತ ಟರ್ಕಿಗೆ (Turkey) ಭಾರತೀಯರು ದೇಶಾದ್ಯಾಂತ ಸರಿಯಾದ ಬುದ್ಧಿ ಕಲಿಸುತ್ತಿದ್ದಾರೆ. ಟರ್ಕಿ ದೇಶದ ವಿರುದ್ಧ ಭಾರತದಿಂದ ಬಾಯ್ಕಾಟ್ (Boycott Turkey) ಅಭಿಯಾನ ಜೋರಾಗಿದೆ. ಸೇಬು, ಚೆರ‍್ರಿ, ಆಲಿವ್ ಆಯಿಲ್, ಮಾರ್ಬಲ್ಸ್, ಎಲೆಕ್ಟ್ರಾನಿಕ್ ವಸ್ತುಗಳು, ಫ್ಯಾಷನ್ ಉತ್ಪನ್ನಗಳು ಬ್ಯಾನ್ ಮಾಡಲು ನಿರ್ಧರಿಸಲಾಗಿದೆ.

    ಪಾಪಿ ಪಾಕ್ ಬೆನ್ನಿಗೆ ನಿಂತ ಟರ್ಕಿ ವಿರುದ್ಧ ಮಂಗಳವಾರ ಪುಣೆಯ ಹೋಲ್‌ಸೆಲ್, ರೀಟೇಲ್ ವ್ಯಾಪಾರಸ್ಥರು ಸೇಬು ಹಣ್ಣು ಆಮದು ಮಾಡಿಕೊಳ್ಳುವುದನ್ನು ಬಹಿಷ್ಕರಿಸಿದ್ದರು. ಇದೀಗ ಉದಯಪುರದ ಮಾರ್ಬಲ್ ಅಸೋಸಿಯೇಷನ್ ಕೂಡ ಟರ್ಕಿ ಮಾರ್ಬಲ್‌ಗಳ ಆಮದು ಬ್ಯಾನ್ ಮಾಡಲು ನಿರ್ಧರಿಸಿದೆ. ಭಾರತದಲ್ಲಿ ಮೂರು ತಿಂಗಳಿಗೆ ಸುಮಾರು 1,200 ರಿಂದ 1,500 ಕೋಟಿ ರೂಪಾಯಿ ಮೌಲ್ಯದ ಟರ್ಕಿ ಸೇಬನ್ನು ಖರೀದಿ ಮಾಡಲಾಗುತ್ತಿತ್ತು. ಇದೀಗ ಬ್ಯಾನ್‌ನಿಂದ ಟರ್ಕಿಗೆ ಶಾಕ್ ಎದುರಾಗಿದೆ. ಇದನ್ನೂ ಓದಿ: ನರೇಗಾ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟಾಟಾ ಏಸ್ ಪಲ್ಟಿ – 31 ಜನರಿಗೆ ಗಾಯ

    ಇತ್ತ ಟರ್ಕಿಯ ಮಾರ್ಬಲ್‌ಗಳನ್ನು ಬ್ಯಾನ್ ಮಾಡಿರುವ ಭಾರತದ ವ್ಯಾಪಾರಿಗಳು ಟರ್ಕಿಯ ಹಲವು ಉತ್ಪನ್ನ ಮತ್ತು ಪ್ರವಾಸವನ್ನು ಬಹಿಷ್ಕರಿಸಿದ್ದಾರೆ. ಪಾಕಿಸ್ತಾನವನ್ನು ಬೆಂಬಲಿಸಿದ್ದಕ್ಕೆ ಟರ್ಕಿ ಆರ್ಥಿಕ ಹೊಡೆತದ ಭೀತಿ ಎದುರಿಸುವಂತಾಗಿದೆ. ಟರ್ಕಿಗೆ 2024ರಲ್ಲಿ 3.3 ಲಕ್ಷ ಭಾರತೀಯ ಪ್ರವಾಸಿಗರು ಭೇಟಿ ಕೊಟ್ಟಿದ್ದರು. ಸಾವಿರಾರು ಭಾರತೀಯರು ಈಗಾಗಲೇ ತಮ್ಮ ಟರ್ಕಿ ಪ್ರವಾಸವನ್ನು ರದ್ದು ಮಾಡುತ್ತಿದ್ದಾರೆ. ಟರ್ಕಿ, ಅಜರ್‌ಬೈಜಾನ್ ದೇಶಕ್ಕೆ ಹೋಗುವ ಭಾರತೀಯರ ಸಂಖ್ಯೆಯಲ್ಲಿ ಕುಸಿತವಾಗಿದೆ. ಈಸಿ ಮೈ ಟ್ರಿಪ್ (EaseMyTrip) ಕೂಡ ಪಾಕ್ ಬೆಂಬಲಿಸಿದ ಟರ್ಕಿ, ಅಜರ್‌ಬೈಜಾನ್ ವಿರುದ್ಧ ಬಾಯ್ಕಾಟ್ ಅಭಿಯಾನಕ್ಕೆ ಕೈ ಜೋಡಿಸಿದೆ. ಪ್ರವಾಸಿಗರ ಈ ಬಾಯ್ಕಾಟ್‌ನಿಂದ ಟರ್ಕಿ, ಅಜರ್‌ಬೈಜಾನ್ ಸುಮಾರು 3 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗುತ್ತಿದೆ. ಇದನ್ನೂ ಓದಿ: ಪ್ಲೀಸ್‌ ನೀರು ಹರಿಸಿ – ಸಿಂಧೂ ಜಲ ಒಪ್ಪಂದವನ್ನು ಪರಿಶೀಲಿಸುವಂತೆ ಪಾಕ್‌ ಪತ್ರ

    ಇದಷ್ಟೇ ಅಲ್ಲದೇ ಭಾರತೀಯ ಚಿತ್ರೋದ್ಯಮ ಕೂಡ ಟರ್ಕಿಗೆ ಶಾಕ್ ಕೊಟ್ಟಿದೆ. ಇನ್ನುಮುಂದೆ ಯಾವುದೇ ಸಿನಿಮಾ ಚಿತ್ರೀಕರಣಕ್ಕೆ ಟರ್ಕಿಗೆ ತೆರಳದಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ.‌  ಇದನ್ನೂ ಓದಿ:  ಭಾರತದಲ್ಲಿ ಕಾಂಗ್ರೆಸ್ ಉಗ್ರರನ್ನು ಸಾಕುತ್ತಿದೆ: ರವಿಕುಮಾರ್ ಕಿಡಿ

  • ಪಾಕ್‌ಗೆ ಬೆಂಬಲ ನೀಡಿದ ಟರ್ಕಿ, ಅಜೆರ್ಬೈಜಾನ್‌ಗೆ ಭಾರತ ಪೆಟ್ಟು – 2 ದೇಶಗಳಿಗೆ ಟೂರ್‌ ಪ್ಯಾಕೇಜ್‌ ಸ್ಥಗಿತ

    ಪಾಕ್‌ಗೆ ಬೆಂಬಲ ನೀಡಿದ ಟರ್ಕಿ, ಅಜೆರ್ಬೈಜಾನ್‌ಗೆ ಭಾರತ ಪೆಟ್ಟು – 2 ದೇಶಗಳಿಗೆ ಟೂರ್‌ ಪ್ಯಾಕೇಜ್‌ ಸ್ಥಗಿತ

    ನವದೆಹಲಿ: ಉಗ್ರರ ಪೋಷಕ ಪಾಕಿಸ್ತಾನಕ್ಕೆ (Pakistan) ಬೆಂಬಲ ನೀಡಿದ ಟರ್ಕಿ (Turkey) ಮತ್ತು ಅಜೆರ್ಬೈಜಾನ್‌ಗೆ (Azerbaijan) ಭಾರತ ಪೆಟ್ಟು ನೀಡಿದೆ. ಪ್ರಮುಖ ಪ್ರಯಾಣ ಕಂಪನಿಗಳು ಈ ಎರಡೂ ದೇಶಗಳಿಗೆ ಎಲ್ಲಾ ಪ್ಯಾಕೇಜ್‌ಗಳನ್ನು ಸ್ಥಗಿತಗೊಳಿಸಿವೆ.

    ಭಯೋತ್ಪಾದನೆ ವಿರುದ್ಧ ಭಾರತ ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆ ನಡೆಸುತ್ತಿದೆ. ಪರಿಣಾಮವಾಗಿ ಭಾರತ ಮತ್ತು ಪಾಕ್‌ ನಡುವೆ ಉದ್ವಿಗ್ನತೆ ತೀವ್ರಗೊಂಡಿದೆ. ಇಂತಹ ಸನ್ನಿವೇಶದಲ್ಲಿ ಉಗ್ರರ ಬೆಂಬಲಿಸುವ ಪಾಕಿಸ್ತಾನಕ್ಕೆ ಈ ಎರಡು ದೇಶಗಳು ಬೆಂಬಲ ಘೋಷಿಸಿವೆ. ಅದರ ಬೆನ್ನಲ್ಲೇ ಈ ಕ್ರಮಕೈಗೊಳ್ಳಲಾಗಿದೆ. ಇದನ್ನೂ ಓದಿ: ದಾಳಿ ವೇಳೆ ಕುತಂತ್ರ ಮಾಡಿದ್ರೂ ಭಾರತದ ಉತ್ತರಕ್ಕೆ ಪಾಕ್‌ ತತ್ತರ!

    TURKEY PRESIDENT

    ಈಸ್‌ಮೈಟ್ರಿಪ್, ಕಾಕ್ಸ್ & ಕಿಂಗ್ಸ್ ಹಾಗೂ ಟ್ರಾವೊಮಿಂಟ್, ಟರ್ಕಿ ಮತ್ತು ಅಜೆರ್ಬೈಜಾನ್‌ಗೆ ಬುಕಿಂಗ್‌ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿವೆ. ಇದು ರಾಷ್ಟ್ರೀಯ ಭಾವನೆಗೆ ಅನುಗುಣವಾಗಿ ಮತ್ತು ಸುರಕ್ಷತೆ ಮತ್ತು ರಾಜತಾಂತ್ರಿಕ ಪರಿಣಾಮಗಳ ಬಗ್ಗೆ ಹೆಚ್ಚುತ್ತಿರುವ ಕಳವಳವನ್ನು ಪ್ರತಿಬಿಂಬಿಸುತ್ತದೆ.

    ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಅಜೆರ್ಬೈಜಾನ್, ಉಜ್ಬೇಕಿಸ್ತಾನ್ ಮತ್ತು ಟರ್ಕಿಗೆ ಎಲ್ಲಾ ಹೊಸ ಪ್ರಯಾಣ ಕೊಡುಗೆಗಳನ್ನು ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೇವೆ. ನಮಗೆ ಮತ್ತು ನಮ್ಮ ದೇಶದ ಜನರಿಗೆ ಬದ್ಧತೆಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ” ಎಂದು ಕಾಕ್ಸ್ & ಕಿಂಗ್ಸ್‌ನ ನಿರ್ದೇಶಕ ಕರಣ್ ಅಗರ್ವಾಲ್ ಹೇಳಿದ್ದಾರೆ. ಇದನ್ನೂ ಓದಿ: ದೇಶದ ಕರೆಗೆ ಹನಿಮೂನ್‌ ಮೊಟಕುಗೊಳಿಸಿ ಸೇವೆಗೆ ತೆರಳಿದ ಯೋಧ

    ಪರಿಸ್ಥಿತಿ ಸ್ಪಷ್ಟವಾಗುವವರೆಗೆ ಈ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸುವಂತೆ ಅವರು ಭಾರತೀಯ ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ. ಈ ಅನಿಶ್ಚಿತ ಸನ್ನಿವೇಶದಲ್ಲಿ ಪ್ರಯಾಣಿಕರ ಸುರಕ್ಷತೆಯ ಮಹತ್ವವನ್ನು ಈಸ್‌ಮೈಟ್ರಿಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ನಿಶಾಂತ್ ಪಿಟ್ಟಿ ಒತ್ತಿ ಹೇಳಿದ್ದಾರೆ.

  • ಪಾಕಿಸ್ತಾನಕ್ಕೆ ನಾವು ಶಸ್ತ್ರಾಸ್ತ್ರಗಳನ್ನು ಕಳುಹಿಸಿಲ್ಲ: ಟರ್ಕಿ ಸ್ಪಷ್ಟನೆ

    ಪಾಕಿಸ್ತಾನಕ್ಕೆ ನಾವು ಶಸ್ತ್ರಾಸ್ತ್ರಗಳನ್ನು ಕಳುಹಿಸಿಲ್ಲ: ಟರ್ಕಿ ಸ್ಪಷ್ಟನೆ

    – ಇಂಧನ ತುಂಬಿಸಲು ಸರಕು ವಿಮಾನ ಪಾಕ್‌ನಲ್ಲಿ ಇಳಿದಿತ್ತು ಎಂದ ಟರ್ಕಿ ರಕ್ಷಣಾ ಸಚಿವಾಲಯ

    ಅಂಕಾರಾ: ಭಾರತದ (India) ಜೊತೆಗಿನ ಉದ್ವಿಗ್ನತೆ ಮಧ್ಯೆ ಪಾಕಿಸ್ತಾನಕ್ಕೆ (Pakistan) ಶಸ್ತ್ರಾಸ್ತ್ರಗಳನ್ನು ಕಳುಹಿಸಲು ಟರ್ಕಿ (Turkey) ತಿರಸ್ಕರಿಸಿದೆ.

    ಪಾಕಿಸ್ತಾನಕ್ಕೆ ಆರು ಶಸ್ತ್ರಾಸ್ತ್ರ ವಿಮಾನಗಳನ್ನು ಟರ್ಕಿ ಕಳುಹಿಸಿದೆ ಎಂಬ ಹೇಳಿಕೆಯನ್ನು ಸೋಮವಾರ ಅಧ್ಯಕ್ಷೀಯ ಸಂವಹನ ನಿರ್ದೇಶನಾಲಯ ನಿರಾಕರಿಸಿದೆ. ಇದನ್ನೂ ಓದಿ: ರಕ್ಷಣಾ ಸಾಮಾಗ್ರಿ ಹೊತ್ತುಕೊಂಡು ಟರ್ಕಿ ವಿಮಾನ ಪಾಕ್‌ನಲ್ಲಿ ಲ್ಯಾಂಡ್‌

    ಟರ್ಕಿಯಿಂದ ಬಂದ ಸರಕು ವಿಮಾನವು ಇಂಧನ ತುಂಬಿಸಲು ಪಾಕಿಸ್ತಾನದಲ್ಲಿ ಇಳಿಯಿತು. ನಂತರ ಅದು ತನ್ನ ಮಾರ್ಗದಲ್ಲಿ ಮುಂದುವರಿಯಿತು. ಅಧಿಕೃತ ಸಂಸ್ಥೆಗಳು ಬಿಟ್ಟು ಬೇರೆ ಯಾರಿಂದಲಾದರೂ ಊಹಾತ್ಮಕ ಹೇಳಿಕೆಗಳು, ಸುದ್ದಿಗಳು ಬಂದರೆ ಅವುಗಳನ್ನು ಪರಿಗಣಿಸಬಾರದು ಎಂದು ಟರ್ಕಿ ರಕ್ಷಣಾ ಸಚಿವಾಲಯ ತಿಳಿಸಿದೆ.

    ಟರ್ಕಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಿದೆ ಎಂದು ಹಲವಾರು ಸುದ್ದಿವಾಹಿನಿಗಳು ವರದಿ ಮಾಡಿದ್ದವು. ಬಳಿಕ ಟರ್ಕಿ ಸರಕು ವಿಮಾನದ ಚಿತ್ರವನ್ನು ಪೋಸ್ಟ್ ಮಾಡಿ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: Pahalgam Attack | ಟಿಆರ್‌ಎಫ್‌ಗೆ ಭಾರತೀಯ ಯುವಕರೇ ಟಾರ್ಗೆಟ್‌ – ಈ ಭಯೋತ್ಪಾದಕ ಗುಂಪು ಹೇಗೆ ಕೆಲಸ ಮಾಡುತ್ತೆ?

    ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಅಂಕಾರಾ ಖಂಡಿಸಿತ್ತು. ಈ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ್ದರು, ಅನೇಕರು ಗಾಯಗೊಂಡಿದ್ದರು.

    ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಬಹುಸಂಖ್ಯಾತ ಪ್ರದೇಶವು ಬಹಳ ಹಿಂದಿನಿಂದಲೂ ಭಾರತ ಮತ್ತು ಪಾಕಿಸ್ತಾನದ ನಡುವಿನ ಕಹಿ ಪ್ರಾದೇಶಿಕ ವಿವಾದದ ಕೇಂದ್ರಬಿಂದುವಾಗಿದೆ. ಪರಮಾಣು ಶಸ್ತ್ರಸಜ್ಜಿತ ಪ್ರತಿಸ್ಪರ್ಧಿಗಳ ನಡುವಿನ ಸಂಬಂಧಗಳು ಹದಗೆಟ್ಟಿದೆ. ಸಂಭಾವ್ಯ ಮಿಲಿಟರಿ ಕ್ರಮದ ಬಗ್ಗೆ ಕಳವಳ ಹುಟ್ಟುಹಾಕಿದೆ. ಇದನ್ನೂ ಓದಿ: ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಮೇಲೆ ಬಾಂಬ್‌ ಸ್ಫೋಟ – 7 ಮಂದಿ ದುರ್ಮರಣ

  • ರಕ್ಷಣಾ ಸಾಮಾಗ್ರಿ ಹೊತ್ತುಕೊಂಡು ಟರ್ಕಿ ವಿಮಾನ ಪಾಕ್‌ನಲ್ಲಿ ಲ್ಯಾಂಡ್‌

    ರಕ್ಷಣಾ ಸಾಮಾಗ್ರಿ ಹೊತ್ತುಕೊಂಡು ಟರ್ಕಿ ವಿಮಾನ ಪಾಕ್‌ನಲ್ಲಿ ಲ್ಯಾಂಡ್‌

    ಇಸ್ಲಾಮಾಬಾದ್‌: ಪಹಲ್ಗಾಮ್‌ ಉಗ್ರರ ದಾಳಿ (Pahalgam Terror Attack) ಬಳಿಕ ಭಾರತದ (India) ವಿರುದ್ಧ ವಿಷ ಕಾರುತ್ತಿರುವ ಪಾಕಿಸ್ತಾನಕ್ಕೆ ಟರ್ಕಿ(Turkey) ಬೆಂಬಲ ನೀಡಿದೆ.

    ಯುದ್ಧ ಉಪಕರಣಗಳನ್ನು ಹೊತ್ತುಕೊಂಡು ಟರ್ಕಿಶ್ ವಾಯುಪಡೆಯ ಸಿ -130 ಹರ್ಕ್ಯುಲಸ್ ಮಿಲಿಟರಿ ಸಾರಿಗೆ ವಿಮಾನವು ಭಾನುವಾರ ಕರಾಚಿಯಲ್ಲಿ ಲ್ಯಾಂಡ್‌ ಆಗಿದೆ.

    ಕರಾಚಿಯನ್ನು ಹೊರತುಪಡಿಸಿ ಆರು ಟರ್ಕಿಶ್ ಸಿ -130 ವಿಮಾನಗಳು ಇಸ್ಲಾಮಾಬಾದ್‌ನ ಮಿಲಿಟರಿ ನೆಲೆಯಲ್ಲಿ ಬಂದಿಳಿದಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭಾರತ ತೊರೆಯದ ಪಾಕ್‌ ಪ್ರಜೆಗಳಿಗೆ 3 ವರ್ಷ ಜೈಲು, 3 ಲಕ್ಷ ದಂಡ


    ಭಾರತದ ವಿಚಾರ ಬಂದಾಗ ಟರ್ಕಿ ಮೊದಲಿನಿಂದಲೂ ಪಾಕಿಸ್ತಾನದ ಪರವೇ ತನ್ನ ನಿರ್ಧಾರವನ್ನು ಪ್ರಕಟಿಸಿಕೊಂಡೇ ಬಂದಿದೆ. ವಿಶ್ವಸಂಸ್ಥೆಯಲ್ಲಿ ಪಾಕ್‌ ಪರವೇ ಮತವನ್ನು ಚಲಾಯಿಸುತ್ತಿದೆ.

    ಎರಡು ವಾರಗಳ ಹಿಂದೆ ಪಾಕ್‌ ಪ್ರಧಾನಿ ಶೆಹಬಾಜ್‌ ಶರೀಫ್‌ ಟರ್ಕಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಈ ಹಿಂದೆ ಮದ್ದು ಗುಂಡುಗಳು, ಡ್ರೋನ್‌ ಸೇರಿದಂತೆ ಹಲವಾರು ರಕ್ಷಣಾ ಸಾಮಾಗ್ರಿಗಳನ್ನು ಟರ್ಕಿ ಪಾಕ್‌ಗೆ ಈ ಹಿಂದೆ ನೀಡಿತ್ತು.

  • ಟರ್ಕಿ ರೆಸಾರ್ಟ್‌ನಲ್ಲಿ ಅಗ್ನಿ ದುರಂತ – ಸಾವಿನ ಸಂಖ್ಯೆ 76ಕ್ಕೆ ಏರಿಕೆ

    ಟರ್ಕಿ ರೆಸಾರ್ಟ್‌ನಲ್ಲಿ ಅಗ್ನಿ ದುರಂತ – ಸಾವಿನ ಸಂಖ್ಯೆ 76ಕ್ಕೆ ಏರಿಕೆ

    ಇಸ್ತಾಂಬುಲ್:‌ ವಾಯುವ್ಯ ಟರ್ಕಿಯ ಸ್ಕೀ ರೆಸಾರ್ಟ್‌ನಲ್ಲಿರುವ (Turkey Ski Resort) ಹೋಟೆಲ್‌ನಲ್ಲಿ ಮಂಗಳವಾರ ಸಂಭವಿಸಿದ ಅಗ್ನಿ ದುರಂತರದಲ್ಲಿ ಮೃತಪಟ್ಟವರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ. 51 ಮಂದಿ ಗಾಯಗೊಂಡಿದ್ದಾರೆ.

    ಶಾಲೆ ಸೆಮಿಸ್ಟರ್‌ ಹಾಲಿಡೇಸ್‌ ಸಮಯದಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದಾಗಲೇ ಈ ಘಟನೆ ನಡೆದಿದೆ. 12 ಅಂತಸ್ತಿನ ಹೋಟೆನಲ್ಲಿ 234 ಅತಿಥಿಗಳಿಗೆ ಆತಿಥ್ಯ ವಹಿಸಲಾಗಿತ್ತು. ಸದ್ಯ ತನಿಖೆ ಆರಂಭಿಸಿರುವ ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಅಗ್ನಿ ಅವಘಡಕ್ಕೆ ನಿಖರ ಕಾರಣ ಏನೇಂಬುದನ್ನು ಪರಿಶೀಲಿಸುತ್ತಿದ್ದಾರೆ. ಅಲ್ಲದೇ 76 ಶವಗಳನ್ನು ಹೊರತೆಗೆಯಲಾಗಿದ್ದು, 45 ಶವಗಳನ್ನು ಮಾತ್ರ ಗುರುತಿಸಲಾಗಿದೆ. ಉಳಿದ ಶವಗಳ ಗುರುತು ಪತ್ತೆ ಮಾಡುವ ಕೆಲಸವನ್ನೂ ಅಧಿಕಾರಿಗಳು ಮಾಡುತ್ತಿದ್ದಾರೆ.

    ರಾಜಧಾನಿ ಅಂಕಾರಾದ ವಾಯುವ್ಯಕ್ಕೆ 170 ಕಿಲೋಮೀಟರ್ (100 ಮೈಲುಗಳು) ದೂರದಲ್ಲಿರುವ ಕರ್ತಲ್ಕಯಾ ರೆಸಾರ್ಟ್‌ಗೆ ಹಲವಾರು ಸಚಿವರು ಧಾವಿಸಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಘಟನೆಗೆ ಆಂತರಿಕ ಸಚಿವ ಅಲಿ ಯೆರ್ಲಿಕಾಯಾ ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬ್ರಹ್ಮಪುತ್ರದ ನದಿಗೆ ಬೃಹತ್ ಡ್ಯಾಮ್‌ ಕಟ್ಟಲು ಮುಂದಾದ ಚೀನಾ – ಭಾರತದ ಆತಂಕವೇನು?

    ಮರದಿಂದಲೇ ಮಾಡಲಾಗಿರುವ 12 ಅಂತಸ್ತಿನ ಗ್ರ್ಯಾಂಡ್ ಕಾರ್ತಾಲ್ ಹೋಟೆಲ್‌ನಲ್ಲಿ ಬೆಳಗಿನ ಜಾವ 3:27ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಂಕಿ ಅವಘಡದಿಂದ ಪಾರಾಗಲು ಅನೇಕರು ಹೋಟೆಲ್‌ನ ಕಿಟಕಿಯಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಟ್ರಂಪ್‌ ಆಡಳಿತದ ಮೊದಲ ಕ್ವಾಡ್‌ ಸಭೆಯಲ್ಲಿ ಸಚಿವ ಎಸ್.‌ ಜೈಶಂಕರ್‌ ಭಾಗಿ

  • ಟರ್ಕಿ ಸ್ಕೀ ರೆಸಾರ್ಟ್‌ನಲ್ಲಿ ಬೆಂಕಿ ಅವಘಡ; 66 ಮಂದಿ ದುರ್ಮರಣ

    ಟರ್ಕಿ ಸ್ಕೀ ರೆಸಾರ್ಟ್‌ನಲ್ಲಿ ಬೆಂಕಿ ಅವಘಡ; 66 ಮಂದಿ ದುರ್ಮರಣ

    – ಪ್ರಾಣ ರಕ್ಷಣೆಗೆ ಹೋಟೆಲ್‌ನ ಕಿಟಕಿಗಳಿಂದ ಹಾರಿದ ಅನೇಕರು ಸಾವು

    ಇಸ್ತಾಂಬುಲ್:‌ ವಾಯುವ್ಯ ಟರ್ಕಿಯ ಸ್ಕೀ ರೆಸಾರ್ಟ್‌ನಲ್ಲಿರುವ (Turkey Ski Resort) ಹೋಟೆಲ್‌ನಲ್ಲಿ ಮಂಗಳವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ 66 ಮಂದಿ ಸಾವನ್ನಪ್ಪಿದ್ದಾರೆ.

    ರಾಜಧಾನಿ ಅಂಕಾರಾದ ವಾಯುವ್ಯಕ್ಕೆ 170 ಕಿಲೋಮೀಟರ್ (100 ಮೈಲುಗಳು) ದೂರದಲ್ಲಿರುವ ಕರ್ತಲ್ಕಯಾ ರೆಸಾರ್ಟ್‌ಗೆ ಹಲವಾರು ಸಚಿವರು ಧಾವಿಸಿದ್ದಾರೆ. ಬೆಂಕಿಯನ್ನು ಈಗ ನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 10 ವರ್ಷದ ಮಗನ ಮೇಲೆ 5 ನಿಮಿಷ ಕುಳಿತು ಹತ್ಯೆ ಮಾಡಿದ 154 ಕೆಜಿ ತೂಕದ ತಾಯಿ

    ಅವಘಡದಿಂದ ಆಗಿರುವ ಪ್ರಾಣಹಾನಿಗೆ ತುಂಬಾ ನೋವಾಗಿದೆ. 66 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. 51 ಜನರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವ ಅಲಿ ಯೆರ್ಲಿಕಾಯಾ ವಿಷಾದ ವ್ಯಕ್ತಪಡಿಸಿದ್ದಾರೆ.

    ಮರದಿಂದಲೇ ಮಾಡಲಾಗಿರುವ 12 ಅಂತಸ್ತಿನ ಗ್ರ್ಯಾಂಡ್ ಕಾರ್ತಾಲ್ ಹೋಟೆಲ್‌ನಲ್ಲಿ ಬೆಳಗಿನ ಜಾವ 3:27 ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಂಕಿ ಅವಘಡದಿಂದ ಪಾರಾಗಲು ಅನೇಕರು ಹೋಟೆಲ್‌ನ ಕಿಟಕಿಯಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಅಮೆರಿಕದ ಏಳ್ಗೆಗಾಗಿ ವಿದೇಶಗಳಿಗೆ ತೆರಿಗೆ, ಫೆಡರಲ್‌ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ರದ್ದು; ಮಹತ್ವದ ಆದೇಶಗಳಿಗೆ ಟ್ರಂಪ್‌ ಸಹಿ

    ಹೋಟೆಲ್‌ನಲ್ಲಿ ಸುಮಾರು 238 ಅತಿಥಿಗಳು ತಂಗಿದ್ದರು. ಎರಡು ವಾರಗಳ ಶಾಲಾ ರಜೆಯಿಂದಾಗಿ ಹೋಟೆಲ್‌ನಲ್ಲಿ ತಂಗಿದವರ ಸಂಖ್ಯೆ ಹೆಚ್ಚಾಗಿತ್ತು. ಬೆಂಕಿ ರೆಸಾರ್ಟ್‌ನಿಂದ ಪ್ರಾರಂಭವಾಗಿ ಬೇಗನೆ ಹರಡಿತ್ತು.

  • ಮದುವೆಗೆ ರಜೆ ಕೊಡದ ಬಾಸ್ – ವಿಡಿಯೋ ಕಾಲ್‌ನಲ್ಲಿ ಮದುವೆ

    ಮದುವೆಗೆ ರಜೆ ಕೊಡದ ಬಾಸ್ – ವಿಡಿಯೋ ಕಾಲ್‌ನಲ್ಲಿ ಮದುವೆ

    ಶಿಮ್ಲಾ: ಮದುವೆಗೆ ಬಾಸ್ ರಜೆ ಕೊಡದ ಕಾರಣ ವರ ಹಾಗೂ ವಧು ವಿಡಿಯೋ ಕಾಲ್‌ನಲ್ಲಿ ವಿವಾಹವಾಗಿರುವ ಸಂಗತಿಯೊಂದು ನಡೆದಿದೆ.

    ಭಾರತೀಯ ಮೂಲದ ವ್ಯಕ್ತಿ ಟರ್ಕಿಯಲ್ಲಿದ್ದರು (Turkey). ಆತನ ಮದುವೆಗಾಗಿ ಬಾಸ್ ರಜೆ ಕೊಡದ ಕಾರಣ ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ (Mandi) ವಧುವಿನೊಂದಿಗೆ ವಿಡಿಯೋ ಕಾಲ್ ಮೂಲಕ ವಿವಾಹವಾಗಿದ್ದಾರೆ.

    ವಧುವಿನ ಅಜ್ಜನಿಗೆ ಅನಾರೋಗ್ಯದ ಹಿನ್ನೆಲೆ ವರನನ್ನು ಬೇಗ ಮದುವೆಯಾಗು ಎಂದು ವಧುವಿನ ಕುಟುಂಬಸ್ಥರು ಒತ್ತಾಯಿಸಿದ್ದರು. ಈ ಕಾರಣದಿಂದ ವರ ಮದುವೆಗಾಗಿ ಬಾಸ್ ಬಳಿ ರಜೆ ಕೋರಿದ್ದರು. ಆದರೆ ಬಾಸ್ ರಜೆಯನ್ನು ನಿರಾಕರಿಸಿದ್ದರು. ಇದರಿಂದ ಈ ವಿಷಯವನ್ನು ತಿಳಿದ ಕುಟುಂಬಸ್ಥರು ವರ್ಚುವಲ್ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ.ಇದನ್ನೂ ಓದಿ: ಸಲ್ಮಾನ್‌ ಖಾನ್‌ಗೆ ಮತ್ತೆ ಜೀವ ಬೆದರಿಕೆ – ಬಿಷ್ಣೋಯ್‌ ಗ್ಯಾಂಗ್‌ನಿಂದ 5 ಕೋಟಿಗೆ ಬೇಡಿಕೆ

    ಬಿಲಾಸ್‌ಪುರದ ನಿವಾಸಿಯಾಗಿರುವ ವರ ಅದ್ನಾನ್ ಮುಹಮ್ಮದ್ ಅವರ ಕುಟುಂಬವು ಭಾನುವಾರ ಮಂಡಿಗೆ ತಲುಪಿದರು. ಬಳಿಕ ಸೋಮವಾರ ವಿಡಿಯೋ ಕರೆಯ ಮೂಲಕ ವಿವಾಹವಾಗಿದ್ದು, ಖಾಜಿಯೊಬ್ಬರು ಕುಬೂಲ್ ಹೈ ಎಂದಾಗ ಮೂರು ಬಾರಿ ಹೇಳುವ ಮೂಲಕ ಧಾರ್ಮಿಕ ಕ್ರಿಯೆಗಳು ನೆರವೇರಿದವು.

    ಈ ಕುರಿತು ಮಾತನಾಡಿದ ವಧುವಿನ ಚಿಕ್ಕಪ್ಪ ಅಕ್ರಂ ಮೊಹಮ್ಮದ್, ಅತ್ಯಾಧುನಿಕ ತಂತ್ರಜ್ಞಾನದಿAದ ಮದುವೆ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಕಳೆದ ವರ್ಷ ಜುಲೈನಲ್ಲಿ, ಹಿಮಾಚಲ ಪ್ರದೇಶದಲ್ಲಿ (Himachal Pradesh) ಭಾರೀ ಭೂಕುಸಿತ ಮತ್ತು ಪ್ರವಾಹದಿಂದಾಗಿ ವರನ ಮನೆಯವರು ವಧುವಿನ ಮನೆಗೆ ತಲುಪದ ಕಾರಣ ಶಿಮ್ಲಾದ ಕೋಟ್‌ಗಢ್‌ನ ಆಶಿಶ್ ಸಿಂಘಾ ಹಾಗೂ ಕುಲುವಿನ ಭುಂತರ್‌ನಲ್ಲಿದ್ದ ಶಿವಾನಿ ಠಾಕೂರ್ ಅವರನ್ನು ವಿಡಿಯೋ ಕಾಲ್ ಮೂಲಕ ವಿವಾಹವಾಗಿದ್ದರು.ಇದನ್ನೂ ಓದಿ: ಕೊತ್ವಾಲ್‌ ಬಳಿ 100 ರೂ.ಗೆ ಕೆಲಸ ಮಾಡ್ತಿದ್ದ ಡಿಕೆ ಕಣ್ಣೀರು ಹಾಕಿರೋದು ನೋಡಿದ್ದೀರಾ? – ಹೆಚ್‌ಡಿಡಿ

  • ಏರೋಸ್ಪೇಸ್‌ ಕಚೇರಿ ದಾಳಿಗೆ ಪ್ರತೀಕಾರ – ಇರಾಕ್‌, ಸಿರಿಯಾದಲ್ಲಿರುವ ಉಗ್ರರ ನೆಲೆ ಮೇಲೆ ಟರ್ಕಿ ಏರ್‌ಸ್ಟ್ರೈಕ್‌

    ಏರೋಸ್ಪೇಸ್‌ ಕಚೇರಿ ದಾಳಿಗೆ ಪ್ರತೀಕಾರ – ಇರಾಕ್‌, ಸಿರಿಯಾದಲ್ಲಿರುವ ಉಗ್ರರ ನೆಲೆ ಮೇಲೆ ಟರ್ಕಿ ಏರ್‌ಸ್ಟ್ರೈಕ್‌

    ಅಂಕಾರಾ: ಟರ್ಕಿಶ್ ಏರೋಸ್ಪೇಸ್ ಇಂಡಸ್ಟ್ರೀಸ್ (TUSAS) ಪ್ರಧಾನ ಕಚೇರಿ ಮೇಲೆ ದಾಳಿ (Terror Attack) ನಡೆಸಿದ್ದಕ್ಕೆ ಪ್ರತಿಯಾಗಿ ಟರ್ಕಿ ವಾಯುಪಡೆಯು ಬುಧವಾರ ಇರಾಕ್ (Iraq) ಮತ್ತು ಸಿರಿಯಾದಲ್ಲಿನ (Syria) ಕುರ್ದಿಶ್ ಉಗ್ರಗಾಮಿಗಳ ಮೇಲೆ ವಾಯು ದಾಳಿ (Airstrikes) ನಡೆಸಿದೆ.

    ಈ ವೈಮಾನಿಕ ದಾಳಿಯಲ್ಲಿ 30ಕ್ಕೂ ಹೆಚ್ಚು ಗುರಿಗಳನ್ನು ನಾಶಗೊಳಿಸಲಾಗಿದೆ ಎಂದು ಟರ್ಕಿಯ (Turkey) ರಕ್ಷಣಾ ಸಚಿವಾಲಯ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.

    ಕುರ್ದಿಶ್ ಉಗ್ರಗಾಮಿಗಳು (Kurdish Militants) ಏರೋಸ್ಪೇಸ್ ಕಚೇರಿ ಮೇಲೆ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿರುವುದು ವಿಶೇಷ. ರಕ್ಷಣಾ ಕಂಪನಿಯ ಮೇಲಿನ ದಾಳಿಯ ಹಿಂದೆ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ ಅಥವಾ ಪಿಕೆಕೆ ಕೈವಾಡವಿದೆ ಟರ್ಕಿ ರಕ್ಷಣಾ ಸಚಿವ ಯಾಸರ್ ಗುಲೇರ್ ಹೇಳಿದ್ದಾರೆ.

    ಇರಾಕ್‌ನಲ್ಲಿ ನೆಲೆ ಹೊಂದಿರುವ ಪಿಕೆಕೆ ಮತ್ತು ಸಿರಿಯಾದಲ್ಲಿರುವ ಕುರ್ದಿಶ್‌ ಉಗ್ರರ ಮೇಲೆ ಟರ್ಕಿ ನಿಯಮಿತವಾಗಿ ವಾಯುದಾಳಿಗಳನ್ನು ನಡೆಸಿಕೊಂಡೇ ಬಂದಿದೆ. ಕೊನೆಯ ಉಗ್ರನನ್ನು ನಿರ್ಮೂಲನೆ ಮಾಡುವರೆಗೂ ನಾವು ದಾಳಿ ನಡೆಸುತ್ತೇವೆ ಎಂದು ಗುಲೇರ್ ತಿಳಿಸಿದ್ದಾರೆ. ಇದನ್ನೂ ಓದಿ: ಬೈರೂತ್‌ ಮೇಲೆ ಇಸ್ರೇಲ್‌ ಮತ್ತೊಂದು ದಾಳಿ; ಮೂರೇ ಸೆಕೆಂಡುಗಳಲ್ಲಿ ದೈತ್ಯ ಕಟ್ಟಡಗಳು ಧ್ವಂಸ

    ಬ್ರಿಕ್ಸ್‌ ಸಭೆಯಲ್ಲಿ ಭಾಗಿಯಾಗಿರುವ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್, ನಾನು ಈ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

    TUSAS ಸಂಸ್ಥೆ ನಾಗರಿಕ ಮತ್ತು ಮಿಲಿಟರಿ ವಿಮಾನಗಳು, ಮಾನವರಹಿತ ವೈಮಾನಿಕ ವಾಹನಗಳು, ರಕ್ಷಣಾ ಉಪಕರಣಗಳನ್ನು ಅಭಿವೃದ್ಧಿಪಡಿಸಿ ಜೋಡಿಸುತ್ತದೆ. ಕುರ್ದಿಶ್ ಉಗ್ರಗಾಮಿಗಳ ವಿರುದ್ಧದ ಹೋರಾಟದಲ್ಲಿ ಟರ್ಕಿ ಮೇಲುಗೈ ಸಾಧಿಸುವಲ್ಲಿ ಅದರ UAV ಗಳು ಪ್ರಮುಖ ಪಾತ್ರವಹಿಸಿದ್ದು ಸುಮಾರು 10 ಸಾವಿರ ಮಂದಿ ಉದ್ಯೋಗ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಇಬ್ಬರು ಉಗ್ರರು ಈ ಸಂಸ್ಥೆಯ ಮೇಲೆ ದಾಳಿ ನಡೆಸಿದ್ದಾರೆ.

     

    1980 ರ ದಶಕದಿಂದಲೂ ಕುರ್ದಿಶ್‌ಗಳು ಆಗ್ನೇಯ ಟರ್ಕಿಯಲ್ಲಿ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಡುತ್ತಿದ್ದಾರೆ. ಇದನ್ನು ಟರ್ಕಿ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಇದನ್ನು ಉಗ್ರ ಸಂಘಟನೆ ಎಂದು ಕರೆದಿವೆ.

     


    ಬುಧವಾರ ಶಸ್ತ್ರಸಜ್ಜಿತರಾಗಿ ಓರ್ವ ಪುರುಷ, ಮಹಿಳೆ TUSAS ಕಾಂಪ್ಲೆಕ್ಸ್‌ಗೆ ಆಗಮಿಸಿ ಮನಸ್ಸಿಗೆ ಬಂದಂತೆ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ 5 ಮಂದಿ ಸಾವನ್ನಪ್ಪಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕೊನೆಗೆ ಭದ್ರತಾ ಪಡೆ ಇಬ್ಬರು ಹತ್ಯೆ ಮಾಡಿದ್ದಾರೆ.

  • ಟರ್ಕಿಯಲ್ಲಿ ಉಗ್ರರ ದಾಳಿ – ಮೂವರು ನಾಗರಿಕರ ಸಾವು, 14 ಮಂದಿಗೆ ಗಾಯ 

    ಟರ್ಕಿಯಲ್ಲಿ ಉಗ್ರರ ದಾಳಿ – ಮೂವರು ನಾಗರಿಕರ ಸಾವು, 14 ಮಂದಿಗೆ ಗಾಯ 

    – ಕಚೇರಿ ಒಳಗೆ ಸ್ಫೋಟಿಸಿಕೊಂಡ ಉಗ್ರ, ಮತ್ತೋರ್ವ ಪೊಲೀಸರ ಗುಂಡಿಗೆ ಬಲಿ 

    ಅಂಕಾರ: ಟರ್ಕಿಯ ರಾಜಧಾನಿ ಅಂಕಾರಾದ ಬಳಿಯ ಟರ್ಕಿಶ್ ಏರೋಸ್ಪೇಸ್ ಇಂಡಸ್ಟ್ರೀಸ್‌ನ (ಟಿಎಐ) ಪ್ರಧಾನ ಕಚೇರಿಯ ಹೊರಗೆ ಇಂದು ಸಂಜೆ (ಬುಧವಾರ) ನಡೆದ ಭಯೋತ್ಪಾದಕ ದಾಳಿಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ಟಿಎಐ ಕಚೇರಿ ಬಳಿ ಬೃಹತ್ ಸ್ಫೋಟದಿಂದ 3 ಜನ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದಾರೆ. ಉಗ್ರರ ಗುಂಪು ಕಟ್ಟಡದ ಒಳಗೆ ಬಂದಿದೆ. ಈ ವೇಳೆ ಓರ್ವ ಉಗ್ರ ತನ್ನನ್ನು ಸ್ಪೋಟಿಸಿಕೊಂಡಿದ್ದಾನೆ. ಓರ್ವ ಉಗ್ರನನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ಅಲ್ಲಿನ ಕಂಪನಿಗಳಲ್ಲಿನ ಉದ್ಯೋಗಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಂಕಾರಾದಿಂದ ಉತ್ತರಕ್ಕೆ 40 ಕಿಲೋಮೀಟರ್ ದೂರದಲ್ಲಿರುವ ಸಣ್ಣ ಪಟ್ಟಣವಾದ ಕಹ್ರಾಮಂಕಾಜಾನ್‌ನಲ್ಲಿ ಈ ದಾಳಿ ನಡೆದಿದೆ. ಸುದ್ದಿ ಮಾಧ್ಯಮಗಳ ವರದಿಯಲ್ಲಿ ದೊಡ್ಡ ಪ್ರಮಾಣದ ಬೆಂಕಿ ಮತ್ತು ಹೊಗೆಯನ್ನು ತೋರಿಸಿವೆ.

    ಉಕ್ರೇನ್‌ನ ಉನ್ನತ ರಾಜತಾಂತ್ರಿಕರು ರಕ್ಷಣಾ ಒಪ್ಪಂದದ ಭಾಗವಾಗಿ ಈ ವಾರ ಇಲ್ಲಿಗೆ ಭೇಟಿ ನೀಡಿದ್ದರು. ಟರ್ಕಿಯ ರಕ್ಷಣಾ ವಲಯವು ಅದರ ಬೈರಕ್ತರ್ ಡ್ರೋನ್‌ಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿದೆ. ದೇಶದ ರಫ್ತು ಆದಾಯದ ಸುಮಾರು 80 ಪ್ರತಿಶತವನ್ನು ಹೊಂದಿದೆ.

  • ಇಸ್ತಾಂಬುಲ್ ನೈಟ್‍ಕ್ಲಬ್‍ನಲ್ಲಿ ಅಗ್ನಿ ದುರಂತ – 29 ಮಂದಿ ದುರ್ಮರಣ

    ಇಸ್ತಾಂಬುಲ್ ನೈಟ್‍ಕ್ಲಬ್‍ನಲ್ಲಿ ಅಗ್ನಿ ದುರಂತ – 29 ಮಂದಿ ದುರ್ಮರಣ

    ಇಸ್ತಾಂಬುಲ್: ಇಲ್ಲಿನ 16 ಅಂತಸ್ತಿನ ವಸತಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ (Istanbul Fire Accident) ಕನಿಷ್ಠ 29 ಜನ ಸಾವನ್ನಪ್ಪಿದ್ದಾರೆ ಎಂದು ಎಂದು ವರದಿಯಾಗಿದೆ.

    ಆರಂಭದಲ್ಲಿ 10 ಜನ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿದ್ದರು. ಇದೀಗ ಮೃತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಓರ್ವ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಅಲ್ಲಿನ ಗವರ್ನರ್ ದಾವುತ್ ಗುಲ್ ತಿಳಿಸಿದ್ದಾರೆ.

    ಬೆಂಕಿಯು ಮಧ್ಯಾಹ್ನ 12:47ಕ್ಕೆ ಕಾಣಿಸಿಕೊಂಡಿದೆ. ಭಾರೀ ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹರಸಾಹಸಪಟ್ಟಿದೆ. ನೈಟ್‍ಕ್ಲಬ್‍ನ್ನು ಹೊಂದಿದ್ದ ಅಂಡರ್‌ಗ್ರೌಂಡ್ (ನೆಲಮಾಳಿಗೆ) ಮೊದಲ ಮತ್ತು 2ನೇ ಮಹಡಿ ನಿರ್ಮಾಣ ಕಾರ್ಯದ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡ ವೇಳೆ ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

    ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಘಟನಾ ಸ್ಥಳದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಇಸ್ತಾನ್‍ಬುಲ್‍ನ ಮೇಯರ್ ಎಕ್ರೆಮ್ ಇಮಾಮೊಗ್ಲು, ಬೆಂಕಿಯನ್ನು ನಿಯಂತ್ರಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಮೃತರಿಗೆ ಸಂತಾಪ ಸೂಚಿಸಿದ್ದಾರೆ.