Tag: Turkey-Syria Earthquake

  • ಟರ್ಕಿ-ಸಿರಿಯಾ ಭೀಕರ ಭೂಕಂಪ: ನೆರವಿಗೆ ನಿಂತ ಸನ್ನಿ ಲಿಯೋನ್

    ಟರ್ಕಿ-ಸಿರಿಯಾ ಭೀಕರ ಭೂಕಂಪ: ನೆರವಿಗೆ ನಿಂತ ಸನ್ನಿ ಲಿಯೋನ್

    ಬಾಲಿವುಡ್ (Bollywood) ನಟಿ ಸನ್ನಿ ಲಿಯೋನ್ (Sunny Leone) ಅವರು ಸಿನಿಮಾಗಳಿಗಷ್ಟೇ ಸೀಮಿತರಲ್ಲ ಸಮಾಜಮುಖಿ ಕಾರ್ಯಗಳ ಮೂಲಕ ಕೂಡ ಗುರುತಿಸಿಕೊಂಡಿದ್ದಾರೆ. ಟರ್ಕಿ ಮತ್ತು ಸಿರಿಯಾದಲ್ಲಿ ಭೀಕರ ಭೂಕಂಪ (Earthquake) ಸಂಭವಿಸಿದ್ದು, ಇದೀಗ ನೆರವಿಗೆ ಸನ್ನಿ ಲಿಯೋನ್ ನಿಂತಿದ್ದಾರೆ. ಜೊತೆಗೆ ಸಂಕಷ್ಟದಲ್ಲಿರುವವರಿಗೆ ಸಹಾಯಕ್ಕೆ ನಿಲ್ಲಿ ಎಂದು ನಟಿ ಮನವಿ ಮಾಡಿದ್ದಾರೆ.

    ಟರ್ಕಿ-ಸಿರಿಯಾ ಭೀಕರ ಭೂಕಂಪ: ನೆರವಿಗೆ ನಿಂತ ಸನ್ನಿ ಲಿಯೋನ್

    ಇತ್ತೀಚಿಗೆ ಟರ್ಕಿ ಮತ್ತು ಸಿರಿಯಾದಲ್ಲಿ (Turkey- Syria) ಭೀಕರ ಭೂಕಂಪ ಸಂಭವಿಸಿದೆ. ಸಾವು- ನೋವಿನ ಮಧ್ಯೆ ಜನರು ಹೋರಾಡುತ್ತಿದ್ದಾರೆ. ಫೆ.6ರಂದು 7.8ರಷ್ಟು ತೀವ್ರತೆಯ ಭೂಕಂಪ ಅಲ್ಲಿ ಸಂಭವಿಸಿತ್ತು. ಸಾವಿನ ಸಂಖ್ಯೆ 40000 ಸಾವಿರ ದಾಟಿದೆ. ಇಂದಿಗೂ ಅವಶೇಷಗಳಡಿ ಬದುಕುಳಿದವರ ರಕ್ಷಣೆ ಮಾಡಲಾಗತ್ತಿದೆ. ಇಂಥದ್ದೊಂದು ಪ್ರಬಲ ಭೂಕಂಪಕ್ಕೆ ತುತ್ತಾಗಿರುವ ಟರ್ಕಿ ಮತ್ತು ಸಿರಿಯಾ ದೇಶಗಳು ಮತ್ತೆ ಚೇತರಿಸಿಕೊಳ್ಳಲು ಇನ್ನೂ ಸಾಕಷ್ಟು ಸಮಯ ಬೇಕಾಗಿದೆ. ಇಂತಹ ಸಂಕಷ್ಟದ ವೇಳೆಯಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ದಂಪತಿ ಕೂಡ ಟರ್ಕಿ ಮತ್ತು ಸಿರಿಯಾಕ್ಕೆ ನೆರವು ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ:ʻಮಾರ್ಟಿನ್‌ʼ ಹೀರೋ ಧ್ರುವ ಸರ್ಜಾ ಮನೆ ಮುಂದೆ ಜನ ಜಾತ್ರೆ

    ಟರ್ಕಿ-ಸಿರಿಯಾ ಭೀಕರ ಭೂಕಂಪ: ನೆರವಿಗೆ ನಿಂತ ಸನ್ನಿ ಲಿಯೋನ್ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಬಳಿಕ ಸನ್ನಿ ಲಿಯೋನ್ , ಸಿರಿಯಾ ಮತ್ತು ಟರ್ಕಿ ಜನರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಯಾವುದಾರೂ ರೂಪದಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ, ನಿಮ್ಮ ನೆರವಿನ ಅವಶ್ಯಕತೆ ಅವರಿಗಿದೆ ಎಂದು ನಟಿ ತಿಳಿಸಿದ್ದಾರೆ. ಈಗ ಸನ್ನಿ ಲಿಯೋನ್ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟರ್ಕಿ, ಸಿರಿಯಾ ಬೆನ್ನಲ್ಲೇ ಭಾರತದಲ್ಲೂ ಹೆಚ್ಚುತ್ತಿದೆ ಭೂಕಂಪನ

    ಶ್ರೀನಗರ: ಟರ್ಕಿ ಮತ್ತು ಸಿರಿಯಾದಲ್ಲಿ (Turkey, Syria) ಭಾರೀ ಭೂಕಂಪ ಸಂಭವಿಸಿದ ಬೆನ್ನಲ್ಲೇ ಇದೀಗ ಭಾರತದಲ್ಲೂ ಅಲ್ಲಲ್ಲಿ ಭೂಕಂಪನ (Earthquake) ವರದಿಯಾಗುತ್ತಿದೆ. ಶುಕ್ರವಾರ (ಫೆ.17) ಬೆಳ್ಳಂಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ (Jammu And Kashmir) ಕತ್ರಾದಲ್ಲಿ 3.6 ತೀವ್ರತೆಯ ಭೂಕಂಪನ ಸಂಭವಿಸಿದೆ.

    ಮುಂಜಾನೆ 5:10ರ ವೇಳೆಗೆ 10 ಕಿಮೀ ಆಳದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಇದನ್ನೂ ಓದಿ: ಟರ್ಕಿ, ಸಿರಿಯಾ ಬೆನ್ನಲ್ಲೇ ಭಾರತದಲ್ಲೂ ಭೂಕಂಪನ

    ಸಾಮಾನ್ಯ ಭೂಕಂಪನ ಉಂಟಾಗಿರುವುದರಿಂದ ಯಾವುದೇ ಪ್ರಾಣಹಾನಿ, ಆಸ್ತಿಪಾಸ್ತಿ ಸಂಭವಿಸಿಲ್ಲ. ಭೂಕಂಪನದ ಕೇಂದ್ರ ಬಿಂದು ಕತ್ರಾದಿಂದ ಪೂರ್ವಕ್ಕೆ 97 ಕಿಮೀ ದೂರದಲ್ಲಿ ಕಂಡುಬಂದಿದೆ. ಭೂಕಂಪದ ಅಕ್ಷಾಂಶ ಮತ್ತು ರೇಖಾಂಶಗಳು ಕ್ರಮವಾಗಿ 33.10 ಡಿಗ್ರಿ ಮತ್ತು 75.97 ಡಿಗ್ರಿಯಲ್ಲಿ ಕಂಡುಬಂದಿದೆ ಎಂದು ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

    ಫೆಬ್ರವರಿ 13 ರಂದು ಸಿಕ್ಕಿಂ ರಾಜ್ಯದಲ್ಲಿ 4.3 ತೀವ್ರತೆಯ ಭೂಕಂಪನ ಉಂಟಾಗಿತ್ತು. ಇದಕ್ಕೂ ಮುನ್ನಾದಿನ 4.0 ತೀವ್ರತೆಯಲ್ಲಿ ಅಸ್ಸಾಂನಲ್ಲಿ ಹಾಗೂ 3.8 ತೀವ್ರತೆಯಲ್ಲಿ ಗುಜರಾತ್‌ನ ಸೂರತ್‌ನಲ್ಲಿ ಭೂಕಂಪನ ಸಂಭವಿಸಿತ್ತು. ಇದನ್ನೂ ಓದಿ: 

    ಇತ್ತೀಚೆಗೆ ಟರ್ಕಿ, ಸಿರಿಯಾದಲ್ಲಿ ಭಾರೀ ಭೂಕಂಪ ಸಂಭವಿಸಿ ಈಗಾಗಲೇ 40 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಟರ್ಕಿಯಲ್ಲಿ 1939ರಲ್ಲಿ ಸಂಭವಿಸಿದ ಭೂಕಂಪದಲ್ಲಿ 33 ಸಾವಿರ ಮಂದಿ ಮೃತಪಟ್ಟಿದ್ದರು. ಇದು ಈವರೆಗಿನ ದೊಡ್ಡ ಪ್ರಮಾಣದ ಭೂಕಂಪ ಎಂದು ಹೇಳಲಾಗಿತ್ತು. ಆದರೆ 2023ರಲ್ಲಿ ಸಂಭವಿಸಿದ ಭೂಕಂಪ 40 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದ್ದು, ಕರಾಳ ವರ್ಷವನ್ನಾಗಿ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟರ್ಕಿಯಲ್ಲಿ ಪ್ರಬಲ ಭೂಕಂಪ – ನಿರಾಶ್ರಿತರಿಗೆ ಬೆಂಗಳೂರಿನ ಆರೋಗ್ಯ ಸೇವಾ ಸಂಸ್ಥೆಯಿಂದ ನೆರವು

    ಟರ್ಕಿಯಲ್ಲಿ ಪ್ರಬಲ ಭೂಕಂಪ – ನಿರಾಶ್ರಿತರಿಗೆ ಬೆಂಗಳೂರಿನ ಆರೋಗ್ಯ ಸೇವಾ ಸಂಸ್ಥೆಯಿಂದ ನೆರವು

    ನವದೆಹಲಿ: ಭಾರಿ ಭೂಕಂಪನದಿಂದ ನಿರಾಶ್ರಿತರಾದ ಟರ್ಕಿ (Turkey) ಜನರಿಗೆ ಬೆಂಗಳೂರಿನ ಆರೋಗ್ಯ ಸೇವಾ ಸಂಸ್ಥೆ (Aarogya Seva Samsthe) ಸಹಾಯ ಹಸ್ತ ಚಾಚಿದೆ. ದೆಹಲಿಯಲ್ಲಿರುವ ಟರ್ಕಿ ರಾಯಭಾರಿ ಕಚೇರಿಗೆ ಸಾವಿರಕ್ಕೂ ಅಧಿಕ ಕಂಬಳಿಗಳನ್ನು ನೀಡಿದ್ದು, ಮತ್ತಷ್ಟು ಅಗತ್ಯ ವಸ್ತುಗಳನ್ನು ಪೂರೈಸುವ ಭರವಸೆ ನೀಡಿದೆ.

    ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುವ ಸಮಾನ ಮನಸ್ಕರ ಗುಂಪು ಸೂರ್ಯ ಫೌಂಡೇಶನ್ ಅಡಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಟರ್ಕಿ ಮತ್ತು ಸಿರಿಯಾದಲ್ಲಿ (Turkey-Syria Earthquake) ಭಾರಿ ಭೂಕಂಪವಾದ ಹಿನ್ನೆಲೆ ನಿರಾಶ್ರಿತರಿಗೆ ಆರೋಗ್ಯ ಸೇವಾ ಸಂಸ್ಥೆ ನೇತೃತ್ವದಲ್ಲಿ ಅಗತ್ಯ ವಸ್ತುಗಳನ್ನು ನೀಡಲು ನಿರ್ಧರಿಸಿದ್ದರು‌. ಇದನ್ನೂ ಓದಿ: ಟರ್ಕಿ, ಸಿರಿಯಾ ಭೂಕಂಪ- ಸಾವಿನ ಸಂಖ್ಯೆ 41 ಸಾವಿರಕ್ಕೆ ಏರಿಕೆ

    ಟರ್ಕಿ ಮತ್ತು ಸಿರಿಯಾ ರಾಯಭಾರಿ ಕಚೇರಿಯನ್ನು ಸಂಪರ್ಕ ಮಾಡಿದ ಆರೋಗ್ಯ ಸೇವಾ ಸಂಸ್ಥೆ, ಅಗತ್ಯವಿರುವ ವಸ್ತುಗಳ ಮಾಹಿತಿಯನ್ನು ಪಡೆದುಕೊಂಡು ಬಳಿಕ ಟರ್ಕಿಗೆ ಸಾವಿರ ಕಂಬಳಿಗಳನ್ನು ಮೊದಲ ಹಂತದಲ್ಲಿ ನೀಡಿದೆ. ಎರಡನೇ ಹಂತದಲ್ಲಿ ವೈದ್ಯಕೀಯ ವಸ್ತುಗಳನ್ನು ನೀಡಲು ತಯಾರಿ ಮಾಡಿಕೊಳ್ಳಲಾಗಿದೆ‌. ಸಿರಿಯಾ ಹಣಕಾಸಿನ ನೆರವು ಕೇಳಿದ್ದು, ಅದರ ಕ್ರೋಢೀಕರಣವನ್ನು ಮಾಡಲಾಗುತ್ತಿದೆ.

    ಈ ಬಗ್ಗೆ ಮಾತನಾಡಿರುವ ಸೂರ್ಯ ಫೌಂಡೇಶನ್ ಸದಸ್ಯ ಪುನೀತ್, ಪ್ರಕೃತಿ ವಿಕೋಪಗಳು, ದೊಡ್ಡ ಪ್ರಮಾಣದಲ್ಲಿ ಅನಾಹುತಗಳು ಸಂಭವಿಸಿದ ವೇಳೆ ಬೇರೆ ಬೇರೆ ರಾಜ್ಯಗಳು ಸೇರಿದಂತೆ ಹಲವು ದೇಶಗಳಿಗೆ ಆರೋಗ್ಯ ಸೇವಾ ಸಂಸ್ಥೆ ನೆರವು ನೀಡಿದೆ. ಸೂರ್ಯ ಫೌಂಡೇಶನ್ ಅಡಿಯಲ್ಲೂ ಹಲವು ಕಾರ್ಯಗಳನ್ನು ಮಾಡಿದೆ. ಈಗ ಟರ್ಕಿ, ಸಿರಿಯಾಗೆ ಅಗತ್ಯವಿರುವ ವಸ್ತುಗಳನ್ನು ರಾಯಭಾರಿ ಕಚೇರಿ ಮೂಲಕ ತಲುಪಿಸುತ್ತಿದ್ದೇವೆ ಎಂದರು. ಇದನ್ನೂ ಓದಿ: PublicTV Explainer: ಟರ್ಕಿಯಲ್ಲೇ ಹೆಚ್ಚು ಭೂಕಂಪ ಯಾಕೆ? – ಇಲ್ಲಿದೆ ವೈಜ್ಞಾನಿಕ ಕಾರಣ..

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾನು ಚಾಕೊಲೇಟ್‌ ಖರೀದಿಸದಿದ್ದರೂ ಪರ್ವಾಗಿಲ್ಲ..: ಕೂಡಿಟ್ಟಿದ್ದ ಹಣವನ್ನು ಟರ್ಕಿ ಭೂಕಂಪ ಸಂತ್ರಸ್ತರಿಗೆ ನೀಡಿದ 9ರ ಬಾಲಕ

    ನಾನು ಚಾಕೊಲೇಟ್‌ ಖರೀದಿಸದಿದ್ದರೂ ಪರ್ವಾಗಿಲ್ಲ..: ಕೂಡಿಟ್ಟಿದ್ದ ಹಣವನ್ನು ಟರ್ಕಿ ಭೂಕಂಪ ಸಂತ್ರಸ್ತರಿಗೆ ನೀಡಿದ 9ರ ಬಾಲಕ

    ಅಂಕಾರಾ: 9 ವರ್ಷ ವಯಸ್ಸಿನ ಬಾಲಕನೊಬ್ಬ, ತಾನು ಕೂಡಿಟ್ಟಿದ್ದ ಹಣವನ್ನು ಟರ್ಕಿ ಭೂಕಂಪದಿಂದ (Turkey Earthquake) ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರ ನೆರವಿಗಾಗಿ ನೀಡಿ ಗಮನ ಸೆಳೆದಿದ್ದಾನೆ. ಕಳೆದ ವರ್ಷ ಈ ಬಾಲಕನು ಸಹ ಭೂಕಂಪಕ್ಕೆ ಸಿಲುಕಿ ಬದುಕುಳಿದಿದ್ದ.

    ಕಳೆದ ವರ್ಷ ನವೆಂಬರ್‌ನಲ್ಲಿ ವಾಯುವ್ಯ ಡಜ್ ಪ್ರಾಂತ್ಯದಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದ್ದ ಸಂದರ್ಭದಲ್ಲಿ ಬಾಲಕನನ್ನು ರಕ್ಷಿಸಲಾಗಿತ್ತು. ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರೆಸಿಡೆನ್ಸಿ (ಎಎಫ್‌ಎಡಿ) ಸ್ಥಾಪಿಸಿದ್ದ ಟೆಂಟ್‌ನಲ್ಲಿ ಬಾಲಕನ ಆರೈಕೆ ಮಾಡಲಾಗಿತ್ತು. ಇದನ್ನೂ ಓದಿ: PublicTV Explainer: ಟರ್ಕಿಯಲ್ಲೇ ಹೆಚ್ಚು ಭೂಕಂಪ ಯಾಕೆ? – ಇಲ್ಲಿದೆ ವೈಜ್ಞಾನಿಕ ಕಾರಣ..

    ಭೂಕಂಪದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಹಾಯ ಮಾಡುವ ಇಂಗಿತವನ್ನು ಬಾಲಕ ತನ್ನ ತಾಯಿಯೊಂದಿಗೆ ವ್ಯಕ್ತಪಡಿಸಿದ್ದ. ತಾನು ಕೂಡಿಟ್ಟಿದ್ದ ಹಣವನ್ನು ಸಂತ್ರಸ್ತರಿಗಾಗಿ ನೀಡಿದ್ದಾನೆ. “ಡಜ್‌ನಲ್ಲಿ ಭೂಕಂಪವಾದಾಗ ನಾನು ತುಂಬಾ ಹೆದರುತ್ತಿದ್ದೆ. ನಮ್ಮ ಅನೇಕ ನಗರಗಳಲ್ಲಿ ಉಂಟಾಗುವ ಭೂಕಂಪನದ ಬಗ್ಗೆ ಕೇಳಿದಾಗ ನನಗೆ ಅದೇ ಭಯವಿತ್ತು. ಅದಕ್ಕೆ ಹಿರಿಯರು ಕೊಡುವ ಪಾಕೆಟ್ ಮನಿಯನ್ನು ಅಲ್ಲಿನ ಮಕ್ಕಳಿಗೆ ಕಳುಹಿಸಲು ನಿರ್ಧರಿಸಿದೆ” ಎಂದು ಬಾಲಕ ತಿಳಿಸಿದ್ದಾನೆ.

    “ನಾನು ಚಾಕೊಲೇಟ್ ಖರೀದಿಸದಿದ್ದರೂ ಪರವಾಗಿಲ್ಲ. ಅಲ್ಲಿನ ಮಕ್ಕಳು ಚಳಿ ಮತ್ತು ಹಸಿವಿನಿಂದ ಇರಬಾರದು. ಅಲ್ಲಿನ ಮಕ್ಕಳಿಗೆ ನನ್ನ ಬಟ್ಟೆ, ಆಟಿಕೆಗಳನ್ನು ಕಳುಹಿಸುತ್ತೇನೆ” ಎಂದು ಬಾಲಕ ಹೇಳಿದ್ದಾನೆ. ಇದನ್ನೂ ಓದಿ: ಟರ್ಕಿ ಭೂಕಂಪ- ಎಂಟು ವರ್ಷದ ಬಾಲಕಿಯನ್ನು ರಕ್ಷಿಸಿದ NDRF

    ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿರುವ ವಿನಾಶಕಾರಿ ಭೂಕಂಪದಿಂದ ಈವರೆಗೆ 28,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಕರ್ತರು ಕೊರೆವ ಚಳಿಯ ನಡುವೆಯೂ, ಅವಶೇಷಗಳಡಿ ಸಿಲುಕಿರುವ ಸಂತ್ರಸ್ತರ ರಕ್ಷಣೆ ಕಾರ್ಯ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • PublicTV Explainer: ಟರ್ಕಿಯಲ್ಲೇ ಹೆಚ್ಚು ಭೂಕಂಪ ಯಾಕೆ? – ಇಲ್ಲಿದೆ ವೈಜ್ಞಾನಿಕ ಕಾರಣ..

    PublicTV Explainer: ಟರ್ಕಿಯಲ್ಲೇ ಹೆಚ್ಚು ಭೂಕಂಪ ಯಾಕೆ? – ಇಲ್ಲಿದೆ ವೈಜ್ಞಾನಿಕ ಕಾರಣ..

    ರಗೆಲೆಯಂತೆ ಉದುರಿದ ಕಟ್ಟಡಗಳು. ಒಂದೆಡೆ ಅವಶೇಷಗಳಡಿ ಸಿಲುಕಿರುವ ಸಾವಿರಾರು ಜೀವಗಳ ಚೀತ್ಕಾರ. ಮತ್ತೊಂದೆಡೆ ತನ್ನವರನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ಜನ. ಮಗದೊಂದೆಡೆ ಅವಶೇಷಗಳಡಿಯೇ ಸಮಾಧಿಯಾದ ಜೀವಗಳು. ಸೂರು ಕಳೆದುಕೊಂಡು ಬೀದಿಪಾಲಾದ ಬದುಕು. ಹೆತ್ತವರ ಕಳೆದುಕೊಂಡು ಅನಾಥರಾದ ಮಕ್ಕಳ ಆಕ್ರಂದನ.. ಈ ಕರುಣಾಜನಕ ದೃಶ್ಯ ಎಂಥವರ ಕಣ್ಣಲ್ಲೂ ನೀರು ತರಿಸದೇ ಇರದು. ಇದು ಟರ್ಕಿ, ಸಿರಿಯಾ ರಾಷ್ಟ್ರಗಳ ದುರಂತ ಕಥೆ. ಪ್ರಕೃತಿ ಮುನಿಸು ಅದೆಷ್ಟು ಭಯಾನಕ?

    ಟರ್ಕಿ ಮತ್ತು ಸಿರಿಯಾ (Turkey-Syria earthquake) ರಾಷ್ಟ್ರಗಳು ಭೂಕಂಪಕ್ಕೆ ನಲುಗಿ ಹೋಗಿವೆ. ಭೀಕರ ಭೂಕಂಪದಿಂದಾಗಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈವರೆಗೆ ಸುಮಾರು 25,000 ಜನರು ಬಲಿಯಾಗಿದ್ದು, ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಭೂಕಂಪಕ್ಕೆ ನೂರಾರು ಕಟ್ಟಡಗಳು ನೆಲಸಮಗೊಂಡಿವೆ. ಅವಶೇಷಗಳಡಿ ಜೀವಗಳ ಚೀತ್ಕಾರ ಕೇಳಿ ಬರುತ್ತಿದೆ. ಟರ್ಕಿ (Turkey) ಮತ್ತು ಸಿರಿಯಾದಲ್ಲಿ (Syria) ಅಕ್ಷರಶಃ ಸ್ಮಾಶನ ಸದೃಶ ವಾತಾವರಣ ಸೃಷ್ಟಿಯಾಗಿದೆ. ಇದನ್ನೂ ಓದಿ: ಟರ್ಕಿ ಭೂಕಂಪ- ಎಂಟು ವರ್ಷದ ಬಾಲಕಿಯನ್ನು ರಕ್ಷಿಸಿದ NDRF

    ಕೇವಲ 11 ಗಂಟೆ ಅವಧಿಯಲ್ಲಿ 3 ಪ್ರಬಲ ಭೂಕಂಪ
    1939ರಲ್ಲಿ ಟರ್ಕಿಯಲ್ಲೇ ಎರ್ಜಿಂಕನ್‌ನಲ್ಲಿ ಪ್ರಬಲ ಭೂಕಂಪ ಉಂಟಾಗಿತ್ತು. ಆ ವೇಳೆ 33,000 ಮಂದಿ ಬಲಿಯಾಗಿದ್ದರು. ಅದಾದ ದಶಕಗಳ ಬಳಿಕ ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪ ಇದಾಗಿದೆ. ಫೆ.6 ರಂದು ದಕ್ಷಿಣ ಟರ್ಕಿ ಪ್ರಾಂತ್ಯದ ಒಸ್ಮಾನಿಯೆದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತು. ಮತ್ತೆ 2ನೇ ಭೂಕಂಪವು ಮಧ್ಯಾಹ್ನದ ವೇಳೆಗೆ ಸಂಭವಿಸಿತು. ಆಗ ತೀವ್ರತೆ 7.5 ರಷ್ಟು ದಾಖಲಾಯಿತು. ಪುನಃ ಸಂಜೆ ವೇಳೆಗೆ 6.0 ತೀವ್ರತೆಯ ಮತ್ತೊಂದು ಭೂಕಂಪ ಉಂಟಾಯಿತು. ಇದೇ ವೇಳೆ ಸಿರಿಯಾದಲ್ಲೂ ಭೂಕಂಪ ಸಂಭವಿಸಿತು. ಕೇವಲ 11 ಗಂಟೆಗಳ ಅವಧಿಯಲ್ಲಿ ಒಂದರ ಹಿಂದೆ ಒಂದರಂತೆ ಭೂಕಂಪವಾಗಿ ಅಪಾರ ಪ್ರಮಾಣದ ಜೀವ, ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಯಿತು.

    ಟರ್ಕಿ, ಸಿರಿಯಾ ದೇಶಗಳಲ್ಲಿ ಭೂಕಂಪ ಅನ್ನೋದು ಸಾಮಾನ್ಯ. ಈ ದೇಶಗಳೇ ಭೂಕಂಪಕ್ಕೆ ಹೆಚ್ಚು ತುತ್ತಾಗುತ್ತವೆ ಯಾಕೆ? ಭಯಾನಕ, ಹಾನಿಕಾರಕ ಭೂಕಂಪ ಆಗೋದಕ್ಕೆ ವೈಜ್ಞಾನಿಕ ಕಾರಣಗಳೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ. ಇದನ್ನೂ ಓದಿ: ಟರ್ಕಿ ಭೂಕಂಪ – ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಟೆಕ್ಕಿ ಪಾಸ್‌ಪೋರ್ಟ್ ಪತ್ತೆ

    ಭೂಕಂಪಗಳ ತೀವ್ರತೆ ಅಳೆಯುವುದು ಹೇಗೆ?
    ರಿಕ್ಟರ್‌ ಮಾಪಕ ಬಳಸಿ ಭೂಕಂಪಗಳ ತೀವ್ರತೆಯನ್ನು ಅಳೆಯಲಾಗುತ್ತದೆ. 1 ರಿಂದ 10ರ ಪ್ರಮಾಣದಲ್ಲಿ ಭೂಕಂಪನಗಳನ್ನು ಅಳೆಯುತ್ತಾರೆ. ಮೊದಲ 3ರ ತೀವ್ರತೆಯ ಭೂಕಂಪವು ಅಷ್ಟಾಗಿ ಅನುಭವಕ್ಕೆ ಬರುವುದಿಲ್ಲ. 4ರ ತೀವ್ರತೆಯಲ್ಲಿ ಕಿಟಕಿಗಳು ಕಂಪಿಸಬಹುದು. 6ರ ತೀವ್ರತೆಯ ಭೂಕಂಪವನ್ನು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಇದಕ್ಕೂ ಹೆಚ್ಚಿನ ಪ್ರಮಾಣದ ಭೂಕಂಪಗಳು ಭಾರೀ ಪ್ರಮಾಣದ ಹಾನಿ, ವ್ಯಾಪಕ ವಿನಾಶವನ್ನು ಉಂಟು ಮಾಡಬಹುದು. ಈಗ ಟರ್ಕಿಯಲ್ಲಿ ಆಗಿರುವುದು 7.8 ತೀವ್ರತೆಯ ಭೂಕಂಪ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಜೀವ, ಆಸ್ತಿಪಾಸ್ತಿಗಳಿಗೆ ಹಾನಿ ಸಂಭವಿಸಿದೆ.

    ಟರ್ಕಿಯಲ್ಲೇ ಭೂಕಂಪ ಹೆಚ್ಚು ಯಾಕೆ?
    ವಿಶ್ವದ ಅತ್ಯಂತ ಸಕ್ರಿಯ ಭೂಕಂಪನ ರಾಷ್ಟ್ರಗಳಲ್ಲಿ ಟರ್ಕಿ ಪ್ರಮುಖವಾದದ್ದು. ಕಾರಣ, ಟರ್ಕಿ ಹಲವಾರು ಭೂದೋಷ ಇರುವಂತಹ ರೇಖೆಗಳ ಮೇಲೆ ಕುಳಿತಿದೆ. ಭೂಮಿಯ ಅಡಿಯಲ್ಲಿ ಹಲವಾರು ಪದರಗಳಿದ್ದು, ಇವನ್ನು ಟೆಕ್ಟಾನಿಕ್‌ ಪ್ಲೇಟ್‌ಗಳು ಎನ್ನುತ್ತಾರೆ. ಇವುಗಳ ಚಲನೆಯಿಂದ ಭೂಕಂಪಗಳು ಸಂಭವಿಸುತ್ತವೆ. ಟರ್ಕಿಯ ಹೆಚ್ಚು ಭೂಪ್ರದೇಶವು ಅನಾಟೋಲಿಯನ್‌ ಟೆಕ್ಟಾನಿಕ್‌ ಫಲಕದಲ್ಲಿದೆ. ಇದು ಯುರೇಷಿಯನ್‌ ಮತ್ತು ಆಫ್ರಿಕನ್‌ ಎಂಬ 2 ಪ್ರಮುಖ ಪ್ಲೇಟ್‌ಗಳು ಹಾಗೂ ಅರೇಬಿಯನ್‌ ಪ್ಲೇಟ್‌ಗಳ ನಡುವೆ ಇದೆ. ಇದನ್ನೂ ಓದಿ: ಟರ್ಕಿ ಭೀಕರ ಭೂಕಂಪದಲ್ಲಿ ಸಿಲುಕಿದ್ದ ಬೆಂಗಳೂರು ಮೂಲದ ಕಂಪನಿಯ ಟೆಕ್ಕಿ ಸಾವು – ಅವಶೇಷಗಳಡಿ ಮೃತದೇಹ ಪತ್ತೆ

    ಟರ್ಕಿಯ ಭೂಪ್ರದೇಶ ಭಾಗದ ಕೆಳಗಿರುವ ಅನಾಟೋಲಿಯನ್‌ ಟೆಕ್ಟಾನಿಕ್‌ ಪ್ಲೇಟ್‌ ಪ್ರದಕ್ಷಿಣಾಕಾರಕ್ಕೆ ವಿರುದ್ಧವಾಗಿ ಚಲಿಸುತ್ತದೆ. ಅದೇ ಸಮಯಕ್ಕೆ ಅರೇಬಿಯನ್‌ ಪ್ಲೇಟ್‌ ಎಂಬುದು ಅನಾಟೋಲಿಯನ್‌ ಪ್ಲೇಟ್‌ ಅನ್ನು ತಳ್ಳುತ್ತದೆ. ತಿರುಗುವ ಅನಾಟೋಲಿಯನ್‌ ಪ್ಲೇಟ್‌ ಅನ್ನು ಅರೇಬಿಯನ್‌ ಪ್ಲೇಟ್‌ ತಳ್ಳಿದಾಗ, ಅದು ಯುರೇಷಿಯನ್‌ ಫಲಕದೊಂದಿಗೆ ಡಿಕ್ಕಿ ಹೊಡೆಯುತ್ತದೆ. ಈ ಫಲಕಗಳ ಘರ್ಷಣೆಯು ಭೂಕಂಪಗಳನ್ನು ಉಂಟು ಮಾಡುತ್ತದೆ. ಇಂತಹ 4 ಟೆಕ್ಟಾನಿಕ್‌ ಫಲಕಗಳು ಸೇರುವಲ್ಲಿ ಟರ್ಕಿ ನೆಲೆಗೊಂಡಿದೆ. ಆದ್ದರಿಂದಲೇ ಇಲ್ಲಿ ಅತಿ ಹೆಚ್ಚು ಭೂಕಂಪಗಳು ಸಂಭವಿಸುತ್ತವೆ. ಇಲ್ಲಿನ ಭೂಕಂಪ ತೀವ್ರತೆ ಪ್ರಮಾಣ ಹಾನಿಕಾರಕವಾಗಿರುತ್ತದೆ.

    ಮಿಸೌರಿ ವಿಶ್ವವಿದ್ಯಾಲಯದ ಭೂಕಂಪಶಾಸ್ತ್ರಜ್ಞ ಎರಿಕ್ ಸ್ಯಾಂಡ್ವೋಲ್ ತಿಳಿಸಿರುವಂತೆ, ಟರ್ಕಿಯಲ್ಲಿ ಸಂಭವಿಸಿರುವುದು ಸ್ಟ್ರೈಕ್-ಸ್ಲಿಪ್ ಭೂಕಂಪ (ಅಲ್ಲಿ ಎರಡು ಟೆಕ್ಟಾನಿಕ್‌ ಪ್ಲೇಟ್‌ಗಳು ಪರಸ್ಪರ ವಿರುದ್ಧ ದಿಕ್ಕಿಗೆ ಜಾರುತ್ತವೆ). ಈ ಸಂದರ್ಭದಲ್ಲಿ ಭೂಮಿ ವಿವಿಧ ಭಾಗಗಳಾಗಿ ವಿಂಗಡಣೆಯಾಗುತ್ತದೆ. ಈ ಭಾಗಗಳು ಭೂದೋಷ ರೇಖೆಗಳಲ್ಲಿ ಸಂಧಿಸುತ್ತವೆ. ಅಲ್ಲಿ ಪ್ಲೇಟ್‌ಗಳು ಒಂದಕ್ಕೊಂದು ವೇಗವಾಗಿ ಡಿಕ್ಕಿ ಹೊಡೆಯುತ್ತವೆ. ಈ ವೇಳೆ ಹೆಚ್ಚಿನ ಪ್ರಮಾಣದ ಶಕ್ತಿ ಬಿಡುಗಡೆಯಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Turkey, Syria Earthquakeː ವರ್ಲ್ಡ್ ಬ್ಯಾಂಕ್‌ನಿಂದ 1.78 ಬಿಲಿಯನ್ ಡಾಲರ್ ನೆರವು ಘೋಷಣೆ

    ಈ ಭೂಕಂಪ ಏಕೆ ವಿನಾಶಕಾರಿಯಾಗಿತ್ತು?
    ಟರ್ಕಿಯ ಪ್ರಮುಖ ನಗರ ಮತ್ತು ಪ್ರಾಂತೀಯ ರಾಜಧಾನಿಯಾದ ಜಾಜಿಯಾಂಟೆಪ್‌ ಬಳಿ ಪ್ರಬಲ ಭೂಕಂಪ ಸಂಭವಿಸಿದೆ. ಇದು ಹೆಚ್ಚು ಜನನಿಬಿಡ ಪ್ರದೇಶವಾಗಿತ್ತು. ಅಷ್ಟೇ ಅಲ್ಲ, ಈಗ ಭೂಕಂಪಕ್ಕೆ ಒಳಗಾದ ಈ ಪ್ರದೇಶಗಳು ದುರ್ಬಲ ಕಟ್ಟಡಗಳಿಗೆ ನೆಲೆಯಾಗಿದೆ. ದಕ್ಷಿಣ ಟರ್ಕಿಯ ಈ ಪ್ರದೇಶವು ಅನೇಕ ಹಳೆಯ ಎತ್ತರದ ಕಟ್ಟಡಗಳನ್ನು ಹೊಂದಿದೆ ಎಂದು ಯುಎಸ್‌ಜಿಎಸ್ ಸ್ಟ್ರಕ್ಚರಲ್ ಇಂಜಿನಿಯರ್ ಕಿಶೋರ್ ಜೈಸ್ವಾಲ್ ಹೇಳಿದ್ದಾರೆ.

    ಟರ್ಕಿ ಭೂಕಂಪ ಇತಿಹಾಸ
    1939 ರಲ್ಲೂ ಟರ್ಕಿಯ ಎರ್ಜಿಂಕನ್‌ನಲ್ಲಿ 7.8 ರ ಪ್ರಮಾಣದಲ್ಲಿ ಉಂಟಾದ ಕಂಪನದಿಂದಾಗಿ 33,000 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು. 1999 ರಲ್ಲಿ ಟರ್ಕಿಯ ಇಜ್ಮಿತ್‌ನಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ 17,000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. 1784 ರಂದು ಎರ್ಜಿಂಕನ್‌ನಲ್ಲಿ ಉಂಟಾಗಿದ್ದ 7.6 ತೀವ್ರತೆ ಭೂಕಂಪಕ್ಕೆ ಸುಮಾರು 5,000 ರಿಂದ 10,000 ಜನರು ಬಲಿಯಾಗಿದ್ದರು. ಇದೇ ರೀತಿ 1509ರಿಂದ ಈವರೆಗೂ ಹಲವಾರು ಬಾರಿ ಟರ್ಕಿಯಲ್ಲಿ ಭೂಕಂಪ ಸಂಭವಿಸಿದ್ದು, ಲಕ್ಷಾಂತರ ಮಂದಿಯನ್ನು ಬಲಿ ಪಡೆದಿದೆ. ಇದನ್ನೂ ಓದಿ: Turkey, Syria Earthquakeː ಮೈಕ್ರೋಫೋನ್, ಡ್ರೋನ್, ರೊಬೋಟ್ ತಂತ್ರಜ್ಞಾನ ಬಳಸಿ ಜನರ ರಕ್ಷಣೆ

    ಇತರೆ ರಾಷ್ಟ್ರಗಳಲ್ಲಿ ಸಂಭವಿಸಿದ ಭೀಕರ ಭೂಕಂಪಗಳ ಪಟ್ಟಿ
    1999ರ ಆಗಸ್ಟ್‌ನಲ್ಲಿ ಪಶ್ಚಿಮ ಟರ್ಕಿಯಲ್ಲಿ ಸಂಭವಿಸಿದ್ದ 7.6 ತೀವ್ರತೆಯ ಭೀಕರ ಭೂಕಂಪದಲ್ಲಿ ಸುಮಾರು 17,000 ಮಂದಿ ಸಾವನ್ನಪ್ಪಿದ್ದರು. 2010ರ ಮಾರ್ಚ್‌ನಲ್ಲಿ ಮತ್ತೆ ಪಶ್ಚಿಮ ಟರ್ಕಿಯಲ್ಲಿ ಉಂಟಾಗಿದ್ದ 6 ತೀವ್ರತೆ ಭೂಕಂಪಕ್ಕೆ 51 ಮಂದಿ ಮೃತಪಟ್ಟಿದ್ದರು. 2021ರ ಅಕ್ಟೋಬರ್‌ನಲ್ಲಿ ಪೂರ್ವ ಟರ್ಕಿಯ ವ್ಯಾನ್ ಪ್ರಾಂತ್ಯವು ಇರಾನ್‌ನ ಗಡಿಗೆ ಹತ್ತಿರದ ಪ್ರದೇಶದಲ್ಲಿ ಉಂಟಾದ 7.2 ತೀವ್ರತೆ ಭೂಕಂಪಕ್ಕೆ 138 ಮಂದಿ ಬಲಿಯಾಗಿದ್ದರು. 2020ರ ಅಕ್ಟೋಬರ್‌ನಲ್ಲಿ ಏಜಿಯನ್ ಸಮುದ್ರದ ಗ್ರೀಕ್ ದ್ವೀಪ ಸಮೋಸ್‌ನಲ್ಲಿ ಸಂಭವಿಸಿದ 7 ತೀವ್ರತೆಯ ಭೂಕಂಪದಲ್ಲಿ 24 ಮಂದಿ ಸಾವನ್ನಪ್ಪಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Turkey, Syria Earthquake: 7,900ಕ್ಕೇರಿದ ಸಾವಿನ ಸಂಖ್ಯೆ – ಅವಶೇಷಗಳಡಿ ಕೇಳುತ್ತಿದೆ ಸಂತ್ರಸ್ತರ ಚೀತ್ಕಾರ

    Turkey, Syria Earthquake: 7,900ಕ್ಕೇರಿದ ಸಾವಿನ ಸಂಖ್ಯೆ – ಅವಶೇಷಗಳಡಿ ಕೇಳುತ್ತಿದೆ ಸಂತ್ರಸ್ತರ ಚೀತ್ಕಾರ

    ಅಂಕಾರಾ: ಟರ್ಕಿ ಮತ್ತು ಸಿರಿಯಾದಲ್ಲಿ (Turkey, Syria Earthquake) ಸಂಭವಿಸಿದ ಭೀಕರ ಭೂಕಂಪಕ್ಕೆ ಜನಜೀವನ ತತ್ತರಿಸಿ ಹೋಗಿದೆ. ಕಟ್ಟಡಗಳು ಧರೆಗುರುಳಿದ್ದು, ಅವಶೇಷಗಳಡಿ ಸಿಲುಕಿ ಮೃತಪಟ್ಟವರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. ಈವರೆಗೆ ದುರಂತದಲ್ಲಿ ಮಡಿದವರ 7,900ಕ್ಕೆ ಏರಿದೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

    ಮೃತರ ಸಂಖ್ಯೆ ಇನ್ನಷ್ಟು ಏರಿಕೆಯಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿ ಜೀವನ್ಮರಣದ ನಡುವೆ ಹೋರಾಡುತ್ತಿರುವವರ ರಕ್ಷಣೆ ಕಾರ್ಯಾಚರಣೆ ಭರದಿಂದ ಸಾಗಿದ್ದು, ಕೊರೆಯುವ ಚಳಿಗೆ ರಕ್ಷಣಾ ಸಿಬ್ಬಂದಿ ಕೂಡ ಗಢಗಢ ನಡುಗುತ್ತಿದ್ದಾರೆ. ಆದರೂ ಕೂಡ ಹಗಲಿರುಳೆನ್ನದೇ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಮತ್ತೆ ಪಾಕ್‌ನಿಂದ ದುರ್ಬುದ್ಧಿ – ಟರ್ಕಿಗೆ ಹೊರಟಿದ್ದ NDRF ವಿಮಾನಕ್ಕೆ ನಿರ್ಬಂಧ

    ಸಿರಿಯಾದಲ್ಲಿ ಭೂಕಂಪದ ದುರಂತ ಸನ್ನಿವೇಶದಲ್ಲಿ ಕಟ್ಟಡಗಳ ಅವಶೇಷಗಳಡಿ ಸಿಲುಕಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿ ಮೃತಪಟ್ಟಿದ್ದರು. ಅದೃಷ್ಟವಶಾತ್‌ ನವಜಾತ ಶಿಶು ಬದುಕುಳಿದಿತ್ತು. ರಕ್ಷಣೆ ವೇಳೆ ಮಗುವಿನ ಹೊಕ್ಕುಳಬಳ್ಳಿ ತಾಯಿಯ ಕರುಳಿಗೆ ಹಾಗೆಯೇ ಕಟ್ಟಿಕೊಂಡಿತ್ತು. ಈ ದೃಶ್ಯ ಕಣ್ಣಾಲಿಗಳಲ್ಲಿ ನೀರು ತರಿಸುವಂತಿತ್ತು.

    “ನಾವು ಅವಶೇಷಗಳನ್ನು ತೆರವುಗೊಳಿಸುತ್ತಿದ್ದಾಗ ಮಗುವಿನ ಚೀತ್ಕಾರದ ಧ್ವನಿ ಕೇಳಿಸಿತು. ತಕ್ಷಣ ಎಲ್ಲವನ್ನೂ ತೆರವುಗೊಳಿಸಿ ನೋಡಿದಾಗ, ಹೆತ್ತಮ್ಮನ ಕರುಳಿಗೆ ಮಗುವಿನ ಹೊಕ್ಕುಳ ಬಳ್ಳಿ ಹಾಗೆಯೇ ಸುತ್ತಿಕೊಂಡಿತ್ತು. ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ಆದರೆ ಮಗುವಿನ ತಾಯಿ ಬದುಕಿರಲಿಲ್ಲ. ತನ್ನ ಇಡೀ ಕುಟುಂಬದಲ್ಲಿ ಬದುಕುಳಿದಿರುವ ಏಕೈಕ ಮಗು ಇದು” ಎಂದು ರಕ್ಷಣಾ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: Turkey – Syria Earthquake- ಕಟ್ಟಡದ ಅವಶೇಷಗಳಡಿಯೇ ಮಗುವಿಗೆ ಜನ್ಮ ನೀಡಿ ಮಹಿಳೆ ಸಾವು

    ಸೋಮವಾರ 7.8 ತೀವ್ರತೆಯಲ್ಲಿ ಭೂಕಂಪ ಸಂಭವಿಸಿ ಅಪಾರ ಹಾನಿಯನ್ನುಂಟು ಮಾಡಿದೆ. ಟರ್ಕಿಯ (Turkey) ನಗರಗಳಾದ ಗಾಜಿಯಾಂಟೆಪ್ ಮತ್ತು ಕಹ್ರಮನ್ಮರಸ್ ಭಾರಿ ವಿನಾಶ ಸಂಭವಿಸಿದೆ. ಕಟ್ಟಡಗಳು ಧರೆಗುರುಳಿವೆ.

    ಟರ್ಕಿ ಮತ್ತು ಸಿರಿಯಾ (Syria) ಭೂಕಂಪ ಪ್ರದೇಶದ ದೃಶ್ಯಗಳು ಸ್ಮಶಾನ ಸದೃಶವಾಗಿವೆ. ಕಟ್ಟಡದ ಅವಶೇಷಗಳಿಗೆ ಚೀತ್ಕಾರಗಳು ಇನ್ನೂ ಕೇಳಿಬರುತ್ತಿವೆ. ಹಗಲಿರುಳೆನ್ನದೇ, ಕೊರೆವ ಚಳಿಯನ್ನೂ ಲೆಕ್ಕಿಸದೇ ರಕ್ಷಣಾ ಸಿಬ್ಬಂದಿ ರಕ್ಷಣೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಟರ್ಕಿ ಮತ್ತು ಸಿರಿಯಾ ದುರಂತಕ್ಕೆ ಮರುಕ ವ್ಯಕ್ತಪಡಿಸಿರುವ ಮಿತ್ರ ರಾಷ್ಟ್ರಗಳು ನೆರವಿನ ಹಸ್ತ ಚಾಚಿವೆ. ಇದನ್ನೂ ಓದಿ: Turkey – Syria Earthquakeː5 ಸಾವಿರಕ್ಕೇರಿದ ಸಾವಿನ ಸಂಖ್ಯೆ – ಟರ್ಕಿ ತಲುಪಿದ IAF C19 ವಿಮಾನ – ಭಾರತದ ನೆರವಿನ ಹಸ್ತ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k