Tag: turkey

  • ಪಶ್ಚಿಮ ಟರ್ಕಿಯಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ: ಕಟ್ಟಡಗಳು ನೆಲಸಮ

    ಪಶ್ಚಿಮ ಟರ್ಕಿಯಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ: ಕಟ್ಟಡಗಳು ನೆಲಸಮ

    ಅಂಕಾರಾ: ಪಶ್ಚಿಮ ಟರ್ಕಿಯ (Turkey) ಬಲಿಕೇಸಿರ್ ಪ್ರಾಂತ್ಯದ ಸಿಂದಿರ್ಗಿ ಪಟ್ಟಣದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಪರಿಣಾಮ ಕಟ್ಟಡಗಳು ನೆಲಸಮಗೊಂಡಿವೆ.

    ಸೋಮವಾರ (ಅ.27) ಪಶ್ಚಿಮ ಟರ್ಕಿಯಲ್ಲಿ ಸಂಭವಿಸಿದ್ದ ಭೂಕಂಪದಿಂದಾಗಿ ಮೂರು ಕಟ್ಟಡಗಳು ನೆಲಸಮಗೊಂಡಿದ್ದು, ಜನರು ಭಯದಿಂದ ಮನೆಯಿಂದಾಚೆ ಓಡಿಹೋಗಿದ್ದಾರೆ. ಕಳೆದ ಬಾರಿ ಸಂಭವಿಸಿದ್ದ ಭೂಕಂಪದಿಂದಾಗಿ ದುರ್ಬಲಗೊಂಡಿದ್ದ ಮೂರು ಕಟ್ಟಡಗಳು ಹಾಗೂ ಎರಡು ಅಂತಸ್ತಿನ ಅಂಗಡಿ ನೆಲಸಮಗೊಂಡಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ:ಮೊಂಥಾ ಚಂಡಮಾರುತ ಎಫೆಕ್ಟ್: ಕರ್ನಾಟಕ, ಆಂಧ್ರ, ತೆಲಂಗಾಣದ ಗಡಿಜಿಲ್ಲೆಗಳಲ್ಲಿ ವರುರ್ಣಾಭಟ

    ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿ ಪ್ರಕಾರ, ಬಾಲಿಕೇಸಿರ್ ಪ್ರಾಂತ್ಯದ ಸಿಂದಿರ್ಗಿ ಪಟ್ಟಣದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ. ಸ್ಥಳೀಯ ಸಮಯ ರಾತ್ರಿ 10:48ರ ಸುಮಾರಿಗೆ ಸುಮಾರು 6 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ.

    ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಇಸ್ತಾನ್‌ಬುಲ್, ಬುರ್ಸಾ, ಮನಿಸಾ, ಇಜ್ಮಿರ್ ಸೇರಿದಂತೆ ಹತ್ತಿರದ ಪ್ರಾಂತ್ಯಗಳಲ್ಲಿ ಭೂಮಿ ಕಂಪಿಸಿದೆ.ಇದನ್ನೂ ಓದಿ: ಇನ್ಶೂರೆನ್ಸ್‌ ಏಜೆಂಟ್‌ ಕೊಲೆ ಮಾಡಿ ಚರಂಡಿಗೆ ಎಸೆದ ಕೇಸ್;‌ ಯುವತಿ, ಆಕೆಗೆ ನಿಶ್ಚಯವಾಗಿದ್ದ ವರ ಬಂಧನ

  • ಟರ್ಕಿಯಲ್ಲಿ 6.1 ತೀವ್ರತೆಯ ಭೂಕಂಪ – ಓರ್ವ ಸಾವು, 29 ಮಂದಿಗೆ ಗಾಯ

    ಟರ್ಕಿಯಲ್ಲಿ 6.1 ತೀವ್ರತೆಯ ಭೂಕಂಪ – ಓರ್ವ ಸಾವು, 29 ಮಂದಿಗೆ ಗಾಯ

    – ಇಸ್ತಾಂಬುಲ್‌ನಲ್ಲೂ ಕಂಪಿಸಿದ ಭೂಮಿ

    ಅಂಕಾರಾ: ಭೂಕಂಪ ಪೀಡಿತ ರಾಷ್ಟ್ರವಾದ ಟರ್ಕಿಯ (Turkey) ವಾಯುವ್ಯ ಪ್ರಾಂತ್ಯ ಬಲಿಕೆಸಿರ್ (Balikesir) ಎಂಬಲ್ಲಿ ಭಾನುವಾರ ಸಂಜೆ (ಆ.10) 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಪರಿಣಾಮ ಓರ್ವ ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದಾರೆ.

    ಬಲಿಕೆಸಿರ್ ಪ್ರಾಂತ್ಯದ ಸಿಂದಿರಗಿಯಲ್ಲಿ 11 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಪರಿಣಾಮ 200 ಕಿ.ಮೀ. ದೂರದ ಇಸ್ತಾಂಬುಲ್ ಮತ್ತು ಇಜ್ಜಿರ್‌ನಲ್ಲೂ ಕಂಪನದ ಅನುಭವ ಆಗಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ದರ್ಶನ್ ಸಿನಿ ಜರ್ನಿಗೆ 28 ವರ್ಷ: ‘ಡಿ’ ಫ್ಯಾನ್ಸ್ ಸಂಭ್ರಮ

    ಪ್ರಬಲ ಭೂಕಂಪದ ಬೆನ್ನಲ್ಲೇ ಟರ್ಕಿಯ ವಿಪತ್ತು ಮತ್ತು ತುರ್ತುಸ್ಥಿತಿ ನಿರ್ವಹಣಾ ಸಂಸ್ಥೆ, ಸುರಕ್ಷತೆಯ ದೃಷ್ಟಿಯಿಂದ ನೆಲಕಚ್ಚಿದ ಕಟ್ಟಡಗಳನ್ನು ಪ್ರವೇಶಿಸದಂತೆ ಸಾರ್ವಜನಿಕರಿಗೆ ಸೂಚಿಸಿದೆ.

    ಸಿಂದಿರಗಿಯಲ್ಲಿ 14ಕ್ಕೂ ಅಧಿಕ ಕಟ್ಟಡಗಳು ಧರೆಗುರುಳಿದ್ದು, ಅವುಗಳಲ್ಲಿದ್ದ 4 ಜನರನ್ನು ಈಗಾಗಲೇ ರಕ್ಷಿಸಲಾಗಿದೆ. ಅವಶೇಷಗಳ ಅಡಿ ಸಿಲುಕಿರುವ 2 ಮಂದಿಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. 81 ವರ್ಷದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದಾರೆ.ಇದನ್ನೂ ಓದಿ: ರಾಯರು ಸಶರೀರರಾಗಿ ವೃಂದಾವನಸ್ಥರಾಗಿ ಇಂದಿಗೆ 354 ವರ್ಷ: ಮಂತ್ರಾಲಯದಲ್ಲಿ ಮಧ್ಯಾರಾಧನೆ ಸಂಭ್ರಮ

  • ಪಾಕ್‌ ಬೆಂಬಲಿಸಿದ ಟರ್ಕಿಗೆ ಶಾಕ್‌ – ಭಾರತೀಯ ಪ್ರವಾಸಿಗರ ಸಂಖ್ಯೆ ಭಾರೀ ಕುಸಿತ

    ಪಾಕ್‌ ಬೆಂಬಲಿಸಿದ ಟರ್ಕಿಗೆ ಶಾಕ್‌ – ಭಾರತೀಯ ಪ್ರವಾಸಿಗರ ಸಂಖ್ಯೆ ಭಾರೀ ಕುಸಿತ

    ನವದೆಹಲಿ: Boycott Turkey ಅಭಿಯಾನ ಯಶಸ್ವಿಯಾಗಿದ್ದು ಟರ್ಕಿಗೆ (Turkey) ಭೇಟಿ ನೀಡುವ ಭಾರತೀಯ ಪ್ರವಾಸಿಗರ (Indian Tourist) ಸಂಖ್ಯೆ ಭಾರೀ ಇಳಿಕೆಯಾಗಿದೆ.

    ಹೌದು. ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆ ವೇಳೆ ಪಾಕಿಸ್ತಾನವನ್ನು (Pakistan) ಬೆಂಬಲಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಾಟ್‌ ಟರ್ಕಿ ಅಭಿಯಾನವನ್ನು ಆರಂಭಿಸಲಾಗಿದೆ. ಪರಿಣಾಮ ಜೂನ್‌ ತಿಂಗಳಿನಲ್ಲಿ ಟರ್ಕಿಗೆ ತೆರಳುವ ಭಾರತೀಯ ಸಂಖ್ಯೆ 37% ಕಡಿಮೆಯಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಸಾಮಾನ್ಯವಾಗಿ ಜೂನ್‌ ತಿಂಗಳಿನಲ್ಲಿ ಟರ್ಕಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಭೇಟಿ ನೀಡುತ್ತಾರೆ. ಟರ್ಕಿಯ ಅಧಿಕೃತ ಪ್ರವಾಸೋದ್ಯಮ ಅಂಕಿಅಂಶಗಳ ಪ್ರಕಾರ, ಜೂನ್‌ನಲ್ಲಿ ಕೇವಲ 24,250 ಭಾರತೀಯರು ಭೇಟಿ ನೀಡಿದ್ದಾರೆ. ಕಳೆದ ವರ್ಷ 38,307 ಭಾರತೀಯರು ಭೇಟಿ ನೀಡಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 37% ಇಳಿಕೆಯಾಗಿದೆ. ಇದನ್ನೂ ಓದಿ: Boycott Turkey| ಟರ್ಕಿಗೆ ದೊಡ್ಡ ಹೊಡೆತ – ಸೆಲೆಬಿ ಲೈಸೆನ್ಸ್‌ ರದ್ದು!

     

    ಮೇ ತಿಂಗಳಿನಲ್ಲೂ ಭಾರತೀಯ ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿದೆ. ಈ ಮೇನಲ್ಲಿ 31,659 ಭಾರತೀಯ ಪ್ರವಾಸಿಗರು ಟರ್ಕಿಗೆ ಹೋಗಿದ್ದರೆ ಕಳೆದ ಮೇನಲ್ಲಿ 41,554 ಭಾರತೀಯರು ತೆರಳಿದ್ದರು.

    ಆಪರೇಷನ್‌ ಸಿಂಧೂರದ ಕಾರ್ಯಾಚರಣೆ ವೇಳೆ ಟರ್ಕಿ ನಿರ್ಮಿತ ಡ್ರೋನ್‌ಗಳನ್ನು ಪಾಕ್‌ ಬಳಸಿದ ವಿಚಾರ ಬೆಳಕಿಗೆ ಬಂದ ನಂತರ Boycott Turkey ಅಭಿಯಾನ ತೀವ್ರಗೊಂಡಿತ್ತು. ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳ ಪೈಕಿ ಚೀನಾ, ಟರ್ಕಿ, ಅಜರ್‌ಬೈಜಾನ್ ಮಾತ್ರ ಪಾಕ್‌ಗೆ ಬೆಂಬಲ ವ್ಯಕ್ತಪಡಿಸಿವೆ. ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಮೇಲೆ ದಾಳಿ ನಡೆಸಿದಾಗ ಈ ಮೂರು ದೇಶಗಳು ಮಾತ್ರ ಪಾಕಿಸ್ತಾನದ ಪರವಾಗಿ ಹೇಳಿಕೆಗಳನ್ನು ನೀಡಿದ್ದವು. ಇದನ್ನೂ ಓದಿ: ಪಾಕ್‌ಗೆ ಡ್ರೋನ್ ಸಪ್ಲೈ ಮಾಡಿದ ಟರ್ಕಿಗೆ ಕಂಟಕ – ಟರ್ಕಿ ಮಾರ್ಬಲ್‌ಗೆ ಬೆಂಗಳೂರಲ್ಲಿ ಬಹಿಷ್ಕಾರ

    ಮೇಕ್‌ಮೈಟ್ರಿಪ್, ಈಸ್‌ಮೈಟ್ರಿಪ್ ಮತ್ತು ಕ್ಲಿಯರ್‌ಟ್ರಿಪ್‌ನಂತಹ ಪ್ರಯಾಣ ಪೋರ್ಟಲ್‌ಗಳು ಟರ್ಕಿ ಪ್ರವಾಸ ಪ್ಯಾಕೇಜ್‌ಗಳನ್ನು ಪ್ರಚಾರ ಮಾಡುವುದಿಲ್ಲ ಎಂದು ಹೇಳಿವೆ.

    ಸಾಮಾನ್ಯವಾಗಿ ಏಪ್ರಿಲ್‌, ಮೇ, ಜೂನ್‌ ತಿಂಗಳಿನಲ್ಲಿ ಮಕ್ಕಳಿಗೆ ರಜೆ ಇರುವ ಕಾರಣ ಹೆಚ್ಚಿನ ಸಂಖ್ಯೆಯ ಸಂಖ್ಯೆಯ ಭಾರತೀಯರು ಈ ಅವಧಿಯಲ್ಲಿ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ.

    ಭಾರತೀಯ ಪ್ರವಾಸಿಗರು ಸಾಮಾನ್ಯವಾಗಿ ತಮ್ಮ ರಜೆಗಳನ್ನು ಬಹಳ ಮುಂಚಿತವಾಗಿ ಕಾಯ್ದಿರಿಸುತ್ತಾರೆ, ಆದ್ದರಿಂದ ಟರ್ಕಿ ಪ್ರವಾಸೋದ್ಯಮದ ಮೇಲೆ ಆಗಿರುವ ನಿಜವಾದ ಪರಿಣಾಮ ಜೂನ್‌ ನಂತರ ತಿಂಗಳಿನಲ್ಲಿ ತಿಳಿಯಲಿದೆ.

    ಟರ್ಕಿಯ ಜಿಡಿಪಿಗೆ ಪ್ರವಾಸೋದ್ಯಮ 12% ಕೊಡುಗೆ ನೀಡುತ್ತಿದೆ. ವಿಶ್ವದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಟಾಪ್‌ 10 ದೇಶಗಳ ಪೈಕಿ ಟರ್ಕಿಗೆ ನಾಲ್ಕನೇ ಸ್ಥಾನವಿದೆ.

     

  • ಒಂದು ಗಡಿ, ಮೂರು ವಿರೋಧಿಗಳು; ಆಪರೇಷನ್‌ ಸಿಂಧೂರದಲ್ಲಿ ಪಾಕ್‌-ಚೀನಾ-ಟರ್ಕಿ ನಂಟು ಬಹಿರಂಗಪಡಿಸಿದ ಸೇನಾ ಉಪಮುಖ್ಯಸ್ಥ

    ಒಂದು ಗಡಿ, ಮೂರು ವಿರೋಧಿಗಳು; ಆಪರೇಷನ್‌ ಸಿಂಧೂರದಲ್ಲಿ ಪಾಕ್‌-ಚೀನಾ-ಟರ್ಕಿ ನಂಟು ಬಹಿರಂಗಪಡಿಸಿದ ಸೇನಾ ಉಪಮುಖ್ಯಸ್ಥ

    ನವದೆಹಲಿ: ಭಾರತದ ಉತ್ತರ ಮತ್ತು ಈಶಾನ್ಯ ಗಡಿಗಳಲ್ಲಿ ಚೀನಾದ (China) ಆಕ್ರಮಣಕಾರಿ ಚಟುವಟಿಕೆಗಳು, ಪಾಕಿಸ್ತಾನದಿಂದ (Pakistan) ನಿರಂತರ ಉಗ್ರವಾದದ ಬೆಂಬಲ, ಮತ್ತು ಟರ್ಕಿಯಿಂದ (Turkey) ರಾಜತಾಂತ್ರಿಕ ಹಾಗೂ ಮಿಲಿಟರಿ ಕ್ಷೇತ್ರದಲ್ಲಿ ಸಂಭವನೀಯ ಸಹಕಾರವು ಭಾರತಕ್ಕೆ ಸವಾಲು ಒಡ್ಡುತ್ತಿದೆ. ಒಂದು ಗಡಿಯಲ್ಲಿ ಮೂರು ವಿರೋಧಿಗಳ ಸಂಯೋಜಿತ ಕಾರ್ಯತಂತ್ರವು ಭಾರತದ ಭದ್ರತೆಗೆ ಬೆದರಿಕೆಯಾಗಿದೆ ಎಂದು ಡೆಪ್ಯೂಟಿ ಚೀಫ್ ಆಫ್ ಆರ್ಮಿ ಸ್ಟಾಫ್ ರಾಹುಲ್ ಆರ್‌. ಸಿಂಗ್ (Rahul R Singh) ಕಳವಳ ವ್ಯಕ್ತಪಡಿಸಿದರು.

    ಹೊಸ ಯುಗದ ಮಿಲಿಟರಿ ತಂತ್ರಜ್ಞಾನಗಳ ಕುರಿತು FICCI ಆಯೋಜಿಸಿದ್ದ ಉನ್ನತ ಮಟ್ಟದ ರಕ್ಷಣಾ ಕಾರ್ಯಕ್ರಮದಲ್ಲಿ (New Age Military Technologies) ಮಾತನಾಡಿದ ಅವರು, ಪಾಕಿಸ್ತಾನ, ಚೀನಾ ಮತ್ತು ಟರ್ಕಿ ನಡುವಿನ ಬೆಳೆಯುತ್ತಿರುವ ಮಿಲಿಟರಿ ಸಹಯೋಗದ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದರು. ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಮಯದಲ್ಲಿ ಕಂಡುಬಂದ ಆಧುನಿಕ ಯುದ್ಧ ಸವಾಲುಗಳ ಬಳಿಕ ಭಾರತವು ತನ್ನ ವಾಯು ರಕ್ಷಣೆ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಬಲಪಡಿಸುವ ತುರ್ತು ಅಗತ್ಯವಿದೆ ಎಂದು ಹೇಳಿದರು. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿಗೆ ಮಹಿಳಾ ಸಾರಥ್ಯ?

    ಆಪರೇಷನ್ ಸಿಂಧೂರ ಸಮಯದಲ್ಲಿ, ಪಾಕಿಸ್ತಾನವು ಚೀನಾದಿಂದ ನೇರ ಗುಪ್ತಚರ ಮಾಹಿತಿ ಪಡೆಯುತ್ತಿತ್ತು ಮತ್ತು ಭಾರತದ ನಿರ್ಣಾಯಕ ಮಿಲಿಟರಿ ನಿಯೋಜನೆಗಳ ಕುರಿತು ನೈಜ-ಸಮಯದ ಮಾಹಿತಿಯನ್ನು ಚೀನಾ ಒದಗಿಸುತ್ತಿತ್ತು. ಡಿಜಿಎಂಒ ಮಟ್ಟದ ಮಾತುಕತೆಗಳು ನಡೆಯುತ್ತಿರುವಾಗ, ನಮ್ಮ ಪ್ರಮುಖ ನೆಲೆಗಳ ಮಾಹಿತಿ‌ ಚೀನಾ ನೀಡಿತ್ತು ಎಂದು ಪಾಕಿಸ್ತಾನವು ಬಹಿರಂಗವಾಗಿ ಹೇಳಿದೆ. ಪಾಕಿಸ್ತಾನ ಮತ್ತು ಚೀನಾ ನೈಜ ಸಮಯದಲ್ಲಿ ಹೇಗೆ ಸಮನ್ವಯ ಸಾಧಿಸುತ್ತಿವೆ ಎಂಬುದಕ್ಕೆ ಈ ಪರಿಸ್ಥಿತಿ ಸ್ಪಷ್ಟ ಉದಾಹರಣೆಯಾಗಿದೆ. ಇದನ್ನೂ ಓದಿ: Custodial Death Case | ದೇಹದ ಮೇಲೆ 44 ಗಾಯದ ಗುರುತು, ಮೆದುಳಿನಲ್ಲಿ ರಕ್ತಸ್ರಾವ – ಮರಣೋತ್ತರ ಪರೀಕ್ಷಾ ವರದಿ ಔಟ್‌

    ಸಂಘರ್ಷದ ಸಮಯದಲ್ಲಿ ಪಾಕಿಸ್ತಾನಕ್ಕೆ ಟರ್ಕಿ ಕೂಡ ಗಮನಾರ್ಹ ಬೆಂಬಲ ನೀಡಿದೆ. ಟರ್ಕಿ ಬೇರಕ್ತಾರ್ ಡ್ರೋನ್‌ಗಳು ಮತ್ತು ಹಲವಾರು ಇತರ ಮಾನವರಹಿತ ವೈಮಾನಿಕ ವ್ಯವಸ್ಥೆಗಳನ್ನು ಮತ್ತು ನೆಲದ ಮೇಲೆ ತರಬೇತಿ ಪಡೆದ ಸೈನಿಕರನ್ನು ಪೂರೈಸಿದೆ. ವಿರೋಧಿಗಳು ಮುಂದುವರಿದ ಡ್ರೋನ್ ತಂತ್ರಜ್ಞಾನದ ಬಳಕೆಯು ಆಧುನಿಕ ಯುದ್ಧಭೂಮಿಗಳಿಗೆ ಸಂಕೀರ್ಣತೆ ಹೆಚ್ಚಿಸಿದೆ, ಇದು ಭಾರತವು ತನ್ನ ವಾಯು ರಕ್ಷಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಮತ್ತಷ್ಟು ಒತ್ತಿಹೇಳುತ್ತದೆ ಎಂದರು. ಇದನ್ನೂ ಓದಿ: ಶಾಹಿ ಈದ್ಗಾ ಮಸೀದಿಯನ್ನ ʻವಿವಾದಿತ ರಚನೆʼ ಅಂತ ಉಲ್ಲೇಖಿಸುವಂತೆ ಮನವಿ – ಹಿಂದೂ ಪರ ವಕೀಲರ ಅರ್ಜಿ ವಜಾ

    ಭಾರತವು ಒಂದೇ ಗಡಿಯಲ್ಲಿ ಮೂರು ವಿರೋಧಿಗಳೊಂದಿಗೆ ವ್ಯವಹರಿಸುತ್ತಿದೆ, ಪಾಕಿಸ್ತಾನವು ಮುಂಚೂಣಿಯಲ್ಲಿತ್ತು, ಚೀನಾ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತಿತ್ತು ಮತ್ತು ಟರ್ಕಿಯ ಒಳಗೊಳ್ಳುವಿಕೆ ಸ್ಪಷ್ಟವಾಗಿತ್ತು. ಪಾಕಿಸ್ತಾನದ ಮಿಲಿಟರಿ ಹಾರ್ಡ್‌ವೇರ್‌ನಲ್ಲಿ ಶೇ. 81 ರಷ್ಟು ಚೀನಾದಿಂದಲೇ ಬರುತ್ತಿದೆ. ಪಾಕಿಸ್ತಾನವನ್ನು ಚೀನಾದ ರಕ್ಷಣಾ ತಂತ್ರಜ್ಞಾನದ ಪರೀಕ್ಷಾ ಮೈದಾನವನ್ನಾಗಿ ಪರಿವರ್ತಿಸಿದೆ. ಚೀನಾ ತನ್ನ ಶಸ್ತ್ರಾಸ್ತ್ರಗಳನ್ನು ಇತರ ಶಸ್ತ್ರಾಸ್ತ್ರಗಳ ವಿರುದ್ಧ ಪರೀಕ್ಷಿಸಲು ವೇದಿಕೆ ಮಾಡಿಕೊಂಡಿದೆ.

    ಕಾರ್ಯಾಚರಣೆಯ ಸಮಯದಲ್ಲಿ ನಮ್ಮ ವಾಯು ರಕ್ಷಣೆ ನಿರ್ಣಾಯಕ ಪಾತ್ರ ವಹಿಸಿದೆ. ಆದರೆ ಮುಂದಿನ ಬಾರಿ ಭಾರತದ ಜನಸಂಖ್ಯಾ ಕೇಂದ್ರಗಳನ್ನು ಗುರಿಯಾಗಿಸಬಹುದು. ಈ ಬಾರಿ ನಮ್ಮ ಜನಸಂಖ್ಯಾ ಕೇಂದ್ರಗಳನ್ನು ಸಂಪೂರ್ಣವಾಗಿ ಗಮನಿಸಲಾಗಿಲ್ಲ, ಆದರೆ ಮುಂದಿನ ಬಾರಿ, ನಾವು ಅದಕ್ಕೆ ಸಿದ್ಧರಾಗಿರಬೇಕು. ಡ್ರೋನ್‌ಗಳ ಹೆಚ್ಚುತ್ತಿರುವ ಬೆದರಿಕೆ ಮತ್ತು ಆಧುನಿಕ ಯುದ್ಧ ತಂತ್ರಗಳನ್ನು ಎದುರಿಸಲು ಬಲಿಷ್ಠ, ತಾಂತ್ರಿಕವಾಗಿ ಮುಂದುವರಿದ ವಾಯು ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ಕರೆ ನೀಡಿದರು. ಇದನ್ನೂ ಓದಿ: ದೆಹಲಿ ಸರ್ಕಾರದಿಂದ ಯೂಟರ್ನ್ – ಅವಧಿ ಮೀರಿದ ವಾಹನಗಳಿಗೆ ಹೇರಿದ್ದ ಇಂಧನ ನಿಷೇಧ ಆದೇಶ ವಾಪಸ್

  • ಟರ್ಕಿಯಲ್ಲಿ 2 ಏರ್ ಬಲೂನ್ ಅವಘಡ- ಪೈಲಟ್ ಸಾವು, 31 ಪ್ರವಾಸಿಗರಿಗೆ ಗಾಯ

    ಟರ್ಕಿಯಲ್ಲಿ 2 ಏರ್ ಬಲೂನ್ ಅವಘಡ- ಪೈಲಟ್ ಸಾವು, 31 ಪ್ರವಾಸಿಗರಿಗೆ ಗಾಯ

    ಅಂಕಾರಾ: ಟರ್ಕಿಯಲ್ಲಿ (Turkey)ಪ್ರತ್ಯೇಕ 2 ಹಾಟ್ ಏರ್ ಬಲೂನ್ ಅಪಘಾತದಲ್ಲಿ ಓರ್ವ ಪೈಲಟ್ ಸಾವನ್ನಪ್ಪಿದ್ದು, 31 ಪ್ರವಾಸಿಗರು ಗಾಯಗೊಂಡಿದ್ದಾರೆ.

    ಮೊದಲಿಗೆ ಇಂಡೋನೇಷ್ಯಾದ 19 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಏರ್ ಬಲೂನ್ (Air Ballon) ಗಾಳಿಯ ಹೊಡೆತಕ್ಕೆ ಸಿಲುಕಿ ನಿಯಂತ್ರಣ ಕಳೆದುಕೊಂಡಿತ್ತು. ಬಳಿಕ ಪೈಲಟ್ ಏರ್ ಬಲೂನ್‌ನನ್ನು ತುರ್ತು ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದರೂ, ಪ್ರವಾಸಿಗಲು ಏರ್ ಬಲೂನ್‌ನ ಬುಟ್ಟಿಯಿಂದ ಬಿದ್ದು, ಹಗ್ಗಗಳಲ್ಲಿ ಸಿಲುಕಿಕೊಂಡು ಗಾಯಗೊಂಡರು. ಆದರೆ ದುರಾದೃಷ್ಟವಶಾತ್ ಏರ್ ಬಲೂನ್‌ನ ಬುಟ್ಟಿಯಲ್ಲಿಯೇ ಸಿಲುಕಿ ಪೈಲಟ್ ಮೃತಪಟ್ಟರು. ಇದನ್ನೂ ಓದಿ: ಜ್ವಾಲಾಮುಖಿ ಸ್ಫೋಟ – ದೆಹಲಿಯಿಂದ ಬಾಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ವಾಪಸ್

    ಈ ಘಟನೆ ನಡೆದ ಬಳಿಕ ಅದೇ ಸ್ಥಳದಿಂದ ಹೊರಟ ಹಾಟ್ ಏರ್ ಬಲೂನ್ ಹಾರ್ಡ್ ಲ್ಯಾಂಡಿಂಗ್‌ನಿಂದಾಗಿ ಏರ್ ಬಲೂನ್‌ನಲ್ಲಿದ್ದ 12 ಪ್ರವಾಸಿಗರು ಗಾಯಗೊಂಡರು ಎಂದು ವರದಿಯಾಗಿದೆ. ಇದನ್ನೂ ಓದಿ: ʼYou Are The Bestʼ – ಜಿ-7 ಶೃಂಗಸಭೆಯಲ್ಲಿ ಮೆಲೋಡಿ ಮೊಮೆಂಟ್

    ಟರ್ಕಿಯಲ್ಲಿ ಹಾಟ್ ಏರ್ ಬಲೂನಿಂಗ್ ಒಂದು ಜನಪ್ರಿಯ ಪ್ರವಾಸಿ ಚಟುವಟಿಕೆಯಾಗಿದ್ದು, ಪ್ರವಾಸಿಗರು ಹೆಚ್ಚಾಗಿ ಏರ್ ಬಲೂನಿಂಗ್‌ನಲ್ಲಿ ಭಾಗವಹಿಸುತ್ತಾರೆ. ಆದರೆ ಇದು ಸುರಕ್ಷಿತವಾಗಿದ್ದರೂ, ಈ ಹಿಂದೆ ಹವಾಮಾನ ಬದಲಾವಣೆ, ಹಾರ್ಡ್ ಲ್ಯಾಂಡಿಂಗ್‌ಗಳು ಹಾಗೂ ಮಿಡ್-ಏರ್ ಡಿಕ್ಕಿಯಿಂದ ಅಪಘಾತಗಳು ಸಂಭವಿಸಿವೆ. ಇದನ್ನೂ ಓದಿ: ಮದುವೆಯಾಗಲು ಗೋವಾಕ್ಕೆ ತೆರಳಿದ್ದ ಜೋಡಿ – ಗಂಟಲು ಸೀಳಿ ಪ್ರೇಯಸಿಯ ಕೊಲೆ

    ಕಳೆದ ತಿಂಗಳು, ಮೆಕ್ಸಿಕನ್‌ನ 40 ವರ್ಷದ ವ್ಯಕ್ತಿಯೊಬ್ಬರು ಹಾಟ್ ಏರ್ ಬಲೂನ್ ದುರಂತದಲ್ಲಿ ಸಾವನ್ನಪ್ಪಿದ್ದರು. ಘಟನೆಯ ದೃಶ್ಯವು ಪ್ರವಾಸಿಗರ ಕ್ಯಾಮೆರಾವೊಂದರಲ್ಲಿ ಸೆರೆಯಾಗಿತ್ತು.

  • ಭಾರತದ ಮೇಲೆ ಪಾಕ್‌ ಹಾರಿಸಿದ್ದ ಅತ್ಯಾಧುನಿಕ AMRAAM ಮಿಸೈಲ್‌ ಟರ್ಕಿಗೆ ಪೂರೈಸಲು ಅಮೆರಿಕ ಡೀಲ್‌!

    ಭಾರತದ ಮೇಲೆ ಪಾಕ್‌ ಹಾರಿಸಿದ್ದ ಅತ್ಯಾಧುನಿಕ AMRAAM ಮಿಸೈಲ್‌ ಟರ್ಕಿಗೆ ಪೂರೈಸಲು ಅಮೆರಿಕ ಡೀಲ್‌!

    – ಸುಮಾರು 19,000 ಕೋಟಿ ಮೌಲ್ಯದ ಒಪ್ಪಂದಕ್ಕೆ ದೊಡ್ಡಣ್ಣ ಅಸ್ತು

    ಇತ್ತೀಚೆಗೆ ಭಾರತ ನಡೆಸಿದ ʻಆಪರೇಷನ್‌ ಸಿಂಧೂರʼ ಸಂದರ್ಭದಲ್ಲಿ ಪಾಕಿಸ್ತಾನದ ಬೆನ್ನಿಗೆ ನಿಂತ ಟರ್ಕಿಗೆ ಬಹಿಷ್ಕಾರ ಹೇರುವ ಮೂಲಕ ಭಾರತ ಬಿಸಿ ಮುಟ್ಟಿಸಿದೆ. ಪಾಕಿಸ್ತಾನಕ್ಕೆ ಬೆಂಬಲ ನೀಡಿದ ನಂತರ ಟರ್ಕಿಯಿಂದ ಆಮದಾಗುತ್ತಿದ್ದ ಅಮೃತ ಶಿಲೆಗಳು, ತಾಜಾ ಸೇಬು, ಚಿನ್ನ, ತರಕಾರಿ, ಸುಣ್ಣ, ಸಿಮೆಂಟ್‌, ಖನಿಜ ತೈಲ ಇತರ ಎಲ್ಲಾ ಉತ್ಪನ್ನಗಳ ಮೇಲೆ ನಿರ್ಬಂಧ ಹೇರಿದೆ. ಅಲ್ಲದೇ ಟರ್ಕಿ ಪ್ರವಾಸೋದ್ಯಮ, ಟರ್ಕಿಯಲ್ಲಿ ಸಿನಿಮಾ ಚಿತ್ರೀಕರಣವನ್ನೂ ನಿಷೇಧಿಸಿ ದೊಡ್ಡ ಆರ್ಥಿಕ ಹೊಡೆತ ನೀಡಿದೆ.

    ಆದ್ರೆ ಇತ್ತ ನನ್ನಿಂದಲೇ ಭಾರತ-ಪಾಕ್‌ ನಡುವಿನ ಕದನ ವಿರಾಮ ಏರ್ಪಟ್ಟಿದ್ದು ಅಂತ ಬೊಬ್ಬೆ ಹೊಡೆದುಕೊಳ್ಳುತ್ತಿರೋ ಟ್ರಂಪ್‌ ಸರ್ಕಾರ ಹಿಂಬಾಗಿಲಿನಿಂದ ಟರ್ಕಿಗೆ ಮಿಲಿಟರಿ ಸಹಾಯ ನೀಡಲು ಮುಂದಾಗಿದೆ. ಹೌದು. ಟರ್ಕಿಗೆ AIM-120C-8 ಸುಧಾರಿತ ಮಧ್ಯಮ-ಶ್ರೇಣಿಯ ಏರ್-ಟು-ಏರ್ ಮಿಸೈಲ್‌ (AMRAAMs) ಪೂರೈಸುವ 225 ಮಿಲಿಯನ್‌ ಡಾಲರ್‌ (ಸುಮಾರು 19 ಸಾವಿರ ಕೋಟಿ) ಒಪ್ಪಂದಕ್ಕೆ ಅಮೆರಿಕ ಅನುಮೋದನೆ ನೀಡಿದೆ. ಇದು ಭಾರತದ ಕಳವಳ ಹೆಚ್ಚಿಸಿದೆ.

    ಏನಿದು AMRAAN ಮಿಸೈಲ್‌ ಒಪ್ಪಂದ?
    ವರದಿಗಳ ಪ್ರಕಾರ, ಟರ್ಕಿಯು 53 AIM-120C-8 AMRAAM ಕ್ಷಿಪಣಿ ಮತ್ತು 6 AIM-120C-8 AMRAAM ಗೈಡೆನ್ಸ್‌ ವಿಭಾಗಗಳ ಬೆಂಬಲ ಕೇಳಿದೆ. ಇದರ ವೆಚ್ಚ 225 ಮಿಲಿಯನ್‌ ಡಾಲರ್‌ ಆಗಲಿದೆ. ಜೊತೆಗೆ ಒಟ್ಟು 79.1 ಮಿಲಿಯನ್‌ ಡಾಲರ್‌ ವೆಚ್ಚದಲ್ಲಿ 60 AIM-9X ಸೈಡ್‌ವೈಂಡರ್ ಬ್ಲಾಕ್-II ಆಲ್ ಅಪ್ ರೌಂಡ್ ಮಿಸೈಲ್‌ ಮತ್ತು 11 AIM-9X ಬ್ಲಾಕ್-II ಟ್ಯಾಕ್ಟಿಕಲ್ ಗೈಡೆನ್ಸ್‌ ಯೂನಿಟ್‌ಗಳನ್ನ ಪಡೆಯಲು ಒಪ್ಪಂದ ಮಾಡಿಕೊಂಡಿದೆ.

    ಅಮೆರಿಕದ ಬಳಿಕ NATO ಮೈತ್ರಿಕೂಟದಲ್ಲಿ 2ನೇ ಅತಿದೊಡ್ಡ ಸಶಸ್ತ್ರ ಪಡೆಗಳನ್ನು ಹೊಂದಿರುವ ಟರ್ಕಿ ಇದೀಗ ಅತ್ಯಾಧುನಿಕ AIM-120C-8 AMRAAM ಗಳು ಮತ್ತು AIM-9X ಸೈಡ್‌ವೈಂಡರ್‌ಗಳನ್ನ ಉಡಾಯಿಸಬಲ್ಲ ಎಫ್‌-16 ವಿಮಾನಗಳ ಸಮೂಹವನ್ನೂ ಹೊಂದಿದೆ. AIM-120C-8 ಕ್ಷಿಪಣಿಯು ತನ್ನ ವ್ಯಾಪ್ತಿಗೂ ಮೀರಿದ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಒಟ್ಟಾರೆಯಾಗಿ ಈ ಶಸ್ತ್ರಾಸ್ತ್ರ ಒಪ್ಪಂದವು ಟರ್ಕಿಯ ವಾಯು ರಕ್ಷಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಹಾಯಕವಾಗಲಿದೆ.

    ನಿರಂತರ ಅಭಿವೃದ್ಧಿ
    ಟರ್ಕಿಯ ರಾಜಧಾನಿ ಅಂಕಾರ ತನ್ನ ವಾಯು ರಕ್ಷಣಾ ಸಾಮರ್ಥ್ಯವನ್ನು ಕಾಲಕಾಲಕ್ಕೆ ಮೇಲ್ದರ್ಜೆಗೆ ಏರಿಸುತ್ತಿದೆ. ಈ ನಡುವೆ ಅಮೆರಿಕ ಜೊತೆಗಿನ ಈ ಮಹತ್ವದ ಒಪ್ಪಂದ ನಡೆದಿದೆ. ಅಮೆರಿಕ ಸರಬರಾಜು ಮಾಡಲಿರುವ ಈ ಕ್ಷಿಪಣಿಗಳು ಅಂಕಾರಾದ ವಾಯುಪ್ರದೇಶವನ್ನ ಸುರಕ್ಷಿತಗೊಳಿಸುವ ಮತ್ತು ತನ್ನ ನೆಲದಲ್ಲಿ ನೆಲೆಸಿರುವ ಯುಎಸ್ ಸಿಬ್ಬಂದಿಯನ್ನ ರಕ್ಷಿಸುವುದಕ್ಕೂ ಸದುಪಯೋಗವಾದಂತಾಗಿದೆ.

    2019ರಲ್ಲಿ ಟರ್ಕಿಯು ರಷ್ಯಾ ನಿರ್ಮಿತ ಎಸ್‌-400 ಡಿಫೆನ್ಸ್‌ ಸಿಸ್ಟಮ್‌ ಅನ್ನು ಖರೀದಿ ಮಾಡಿತ್ತು. ಇದರಿಂದ ಕೆರಳಿದ್ದ ಅಮೆರಿಕ ಕಾಟ್ಸಾ (CAATSA) ಕಾಯ್ದೆ ಅಡಿಯಲ್ಲಿ ಟರ್ಕಿಗೆ ನಿರ್ಬಂಧ ಹೇರಿತ್ತು. ಇದರಿಂದ ಟರ್ಕಿಯು ಅಮೆರಿಕದ F-35 ಫೈಟರ್ ಜೆಟ್ ಕಾರ್ಯಕ್ರಮದಿಂದ ಹೊರಗುಳಿಯಬೇಕಾಗಿತ್ತು. ಇದೀಗ ಭಾರತ-ಪಾಕ್‌ ಉದ್ವಿಗ್ನತೆ ನಡುವೆ ಮತ್ತೆ ಟರ್ಕಿಗೆ ಶಸ್ತ್ರಾಸ್ತ್ರ ಕಳಿಸಿಕೊಡಲು ಅಮೆರಿಕ ಮುಂದಾಗಿರುವುದು ಕಳವಳಕಾರಿಯಾಗಿದೆ.

    ಟರ್ಕಿಗೆ ನೀಡಲು ಮುಂದಾಗಿರುವ AMRAAM ಏರ್‌-ಟು-ಏರ್‌ ಮಿಸೈಲ್‌ ವಿಶ್ವದ ಅತ್ಯಂತ ಅತ್ಯಾಧುನಿಕ ವಾಯು ರಕ್ಷಣಾ ಪ್ರಾಬಲ್ಯ ಆಯುಧ ಎಂದು ಬಣ್ಣಿಸಲಾಗಿದೆ. ಇದನ್ನ 4,900ಕ್ಕೂ ಹೆಚ್ಚು ಲೈವ್-ಫೈರ್ ಸನ್ನಿವೇಶಗಳಲ್ಲಿ ಪರೀಕ್ಷಿಸಲಾಗಿದೆ. ಈ ಕ್ಷಿಪಣಿಯನ್ನು F-15, F-16, F/A-18, F-22 ರಾಪ್ಟರ್, ಯೂರೋಫೈಟರ್ ಟೈಫೂನ್, ಗ್ರಿಪೆನ್, ಟೊರ್ನಾಡೊ, ಹ್ಯಾರಿಯರ್ ಮತ್ತು F-35ನ ಎಲ್ಲಾ ರೂಪಾಂತರಗಳು ಸೇರಿದಂತೆ ಬಹು ಯುದ್ಧ ವಿಮಾನಗಳ ಮೂಲಕ ಹಾರಿಸಬಹುದಾಗಿದೆ.

    ಭಾರತದ ಮೇಲೆ ಪಾಕ್‌ ಬಳಸಿದ್ದ ಮಿಸೈಲ್‌ ಈಗ ಟರ್ಕಿಗೆ
    2019ರ ಫೆಬ್ರವರಿ 19ರಂದು ನಡೆದ ಪುಲ್ವಾಮಾ ದಾಳಿಯ ಬಳಿಕ ಭಾರತ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿತ್ತು. ಈ ಸಂದರ್ಭದಲ್ಲಿ ಎಫ್‌-16 ಫೈಟರ್‌ ಜೆಟ್‌ ಮೂಲಕ ಪಾಕಿಸ್ತಾನ ಈಗ ಟರ್ಕಿಗೆ ನೀಡಲು ಮುಂದಾಗಿರುವ AMRAAM ಕ್ಷಿಪಣಿಗಳನ್ನ ಹಾರಿಸಿತ್ತು. ಪಾಕ್‌ ಈ ಕ್ಷಿಪಣಿ ಬಳಸಿತ್ತು ಎಂಬುದಕ್ಕೆ ಭಾರತ ಅಮೆರಿಕಕ್ಕೆ ಸಾಕ್ಷ್ಯವನ್ನೂ ನೀಡಿತ್ತು. ಇದೀಗ ಅದೇ ಮಿಸೈಲ್‌ ಅನ್ನು ಟರ್ಕಿಗೆ ಕೊಡಲು ಅಮೆರಿಕ ಒಪ್ಪಂದ ಮಾಡಿಕೊಂಡಿದೆ.

    ಅಮೆರಿಕ – ಟರ್ಕಿ ಸಂಬಂಧ ಹೇಗಿದೆ?
    ಅಮೆರಿಕ ಮತ್ತು ಟರ್ಕಿ ನಡುವಿನ ಮಿಲಿಟರಿ ಸಹಕಾರ ಈಗಲೂ ಮುಂದುವರೆದಿದೆ. ಏಕೆಂದರೆ ದಶಕಗಳಿಂದ, ಟರ್ಕಿಯು ಅಮೆರಿಕದ ರಕ್ಷಣಾ ರಫ್ತುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದು ಹಳೆಯ ಎಫ್ -4 ಫ್ಯಾಂಟಮ್‌ಗಳು ಮತ್ತು ಬ್ಲ್ಯಾಕ್ ಹಾಕ್ ಮತ್ತು ಚಿನೂಕ್‌ನಂತಹ ಅಮೆರಿಕನ್‌ ಚಾಪರ್‌ಗಳ ಜೊತೆಗೆ ಎಫ್-16 ಜೆಟ್‌ಗಳಂತಹ ದೊಡ್ಡ ಯುದ್ಧ ವಿಮಾನಗಳನ್ನೂ ಪಡೆದುಕೊಂಡಿದೆ. ಭೂಮಿ ಮತ್ತು ಸಮುದ್ರದಲ್ಲಿ, M60 ಪ್ಯಾಟನ್ ಯುದ್ಧ ಟ್ಯಾಂಕರ್‌ಗಳು, M113 ಶಸ್ತ್ರಸಜ್ಜಿತ ವಾಹನಗಳು ಸೇರಿದಂತೆ ಯುಎಸ್‌ ನಿರ್ಮಿತ ಉಪಕರಣಗಳನ್ನ ಟರ್ಕಿ ತನ್ನ ಸೇನೆಗೆ ನಿಯೋಜಿಸಿದೆ. ಸೈಡ್‌ವಿಂಡರ್ ಮತ್ತು ಮಾವೆರಿಕ್‌ನಂತಹ ಕ್ಷಿಪಣಿಗಳನ್ನ ವಾಯುಪಡೆಗೆ ನಿಯೋಜಿಸಿದೆ.

    ಅಮೆರಿಕವು ಟರ್ಕಿಗೆ C-130 ಹರ್ಕ್ಯುಲಸ್ ಸಾರಿಗೆ ವಿಮಾನ ಮತ್ತು KC-135 ಇಂಧನ ತುಂಬುವ ಟ್ಯಾಂಕರ್‌ಗಳನ್ನ ಸಹ ಪೂರೈಸಿದೆ. ಟರ್ಕಿಯು ಡ್ರೋನ್ ಅಭಿವೃದ್ಧಿಯಲ್ಲಿ ಪ್ರಗತಿ ಸಾಧಿಸಿದ್ದರೂ, ಅದು ಮೊದಲು ಅಮೆರಿಕ ನಿರ್ಮಿತ ಕಣ್ಗಾವಲು UAV ಗಳನ್ನು (Unmanned Aerial Vehicle) ಅವಲಂಬಿಸಿದೆ. ಮುಂದಿನ ದಿನಗಳಲ್ಲಿ ವಿಮಾನ ಖರೀದಿಗಾಗಿ ಬೋಯಿಂಗ್‌ ಜೊತೆಗೆ ಮಾತುಕತೆ ನಡೆಸುತ್ತಿದೆ.

    ಒಟ್ಟಾರೆಯಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದ ಅಮೆರಿಕ ಇದೀಗ ಟರ್ಕಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಪೂರೈಸಲು ಒಪ್ಪಂದ ಮಾಡಿಕೊಂಡಿರುವುದು ಟ್ರಂಪ್‌ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತವಾಗುವಂತೆ ಮಾಡಿದೆ.

  • ಪಾಕ್‌ಗೆ ಡ್ರೋನ್ ಸಪ್ಲೈ ಮಾಡಿದ ಟರ್ಕಿಗೆ ಕಂಟಕ – ಟರ್ಕಿ ಮಾರ್ಬಲ್‌ಗೆ ಬೆಂಗಳೂರಲ್ಲಿ ಬಹಿಷ್ಕಾರ

    ಪಾಕ್‌ಗೆ ಡ್ರೋನ್ ಸಪ್ಲೈ ಮಾಡಿದ ಟರ್ಕಿಗೆ ಕಂಟಕ – ಟರ್ಕಿ ಮಾರ್ಬಲ್‌ಗೆ ಬೆಂಗಳೂರಲ್ಲಿ ಬಹಿಷ್ಕಾರ

    – ಭಾರತೀಯರಿಂದ ಟರ್ಕಿಗೆ ಬ್ಯಾನ್ ಬಿಸಿ

    ಬೆಂಗಳೂರು: ಆಪರೇಷನ್ ಸಿಂಧೂರ (Operation Sindoor) ಸೇನಾ ಕಾರ್ಯಾಚರಣೆಯಲ್ಲಿ ಪಾಕ್‌ಗೆ ಟರ್ಕಿ (Turkey) ಡ್ರೋನ್‌ಗಳನ್ನು ನೀಡಿತ್ತು. ಈ ಹಿನ್ನೆಲೆ ಟರ್ಕಿ ವಿರೋಧಿ ಅಲೆ ಭಾರತದಲ್ಲಿ ಹೆಚ್ಚಾಗಿದೆ. ಟರ್ಕಿ ಮಾರ್ಬಲ್ (Marble) ಬ್ಯಾನ್ ಆಗಿದ್ದು, ಬೆಂಗಳೂರಿಗೆ (Bengaluru) ಬರುತ್ತಿಲ್ಲ.

    ಭಾರತ ಹಾಗೂ ಪಾಕ್ ನಡುವೆ ನಡೆದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ, ಶತ್ರು ದೇಶಕ್ಕೆ ಸಹಾಯ ಮಾಡಿದ ಟರ್ಕಿ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಭಾರತದಿಂದ ಸಹಾಯ ಪಡೆದ ಟರ್ಕಿಗೆ ಭಾರತ ಮಾಡಿದ ಸಹಾಯ ಸಹ ಮರೆತು ಪಾಕ್‌ನ್ನು ಬೆಂಬಲಿಸಿದ್ದು, ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಟರ್ಕಿ ದೇಶದಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು ಬ್ಯಾನ್ ಮಾಡಬೇಕು ಎಂಬ ಒತ್ತಾಯ ಕೇಳಿಬರ್ತಿದೆ. ಇದನ್ನೂ ಓದಿ: S-500 ಏರ್ ಡಿಫೆನ್ಸ್ ಸಿಸ್ಟಂ ಬಂದ್ರೆ ವಿಶ್ವದಲ್ಲಿ ಭಾರತವೇ ಪವರ್‌ಫುಲ್‌

    ಅದರಲ್ಲಿ ಟರ್ಕಿ ಸಪ್ಲೈ ಮಾಡುತ್ತಿದ್ದ ಪ್ರಮುಖ ಆಮದು ವಸ್ತುಗಳಲ್ಲಿ ಮಾರ್ಬಲ್ ಗಳು ಸಹ ಒಂದು.ಈಗಾಗಲೇ ಉದಯಪುರ ಮಾರ್ಬಲ್ ಪ್ರೊಸೆಸರ್ಸ್ ಅಸೋಸಿಯೇಷನ್ ಟರ್ಕಿಯಿಂದ ಅಮೃತಶಿಲೆಯ ಆಮದನ್ನು ಸ್ಥಗಿತಗೊಳಿಸಿದೆ. ಅದರಂತೆ ಬೆಂಗಳೂರಿಗೂ ಕಳೆದ ನಾಲ್ಕೈದು ದಿನಗಳಿಂದ ಟರ್ಕಿ ಮಾರ್ಬಲ್‌ಗಳು ಬರುತ್ತಿಲ್ಲ.

    ಭಾರತವು ಪ್ರತಿ ವರ್ಷ 14-18 ಲಕ್ಷ ಟನ್ ಟರ್ಕಿ ಮಾರ್ಬಲ್ ಅನ್ನು ಆಮದು ಮಾಡಿಕೊಳ್ಳುತ್ತದೆ. ಈ ಪೈಕಿ ಶೇ. 70 ರಷ್ಟು ಅಮೃತಶಿಲೆಯನ್ನು ಟರ್ಕಿ ದೇಶವೊಂದರಿಂದಲೇ ಆಮದು ಮಾಡಿಕೊಳ್ಳಲಾಗುತ್ತದೆ. ಈ ವ್ಯಾಪಾರದ ಮೌಲ್ಯ ಸುಮಾರು 2,500 ರಿಂದ 3,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಬರೋಬ್ಬರಿ 600 ಡ್ರೋನ್‌ಗಳಿಂದ ಪಾಕ್‌ ದಾಳಿ – ಎಲ್ಲವನ್ನೂ ಹೊಡೆದುರುಳಿಸಿದ್ದ ಭಾರತ

    ಸಾಮಾನ್ಯವಾಗಿ ಟರ್ಕಿ ಮಾರ್ಬಲ್‌ಗಳನ್ನು ಪ್ಲೋರಿಂಗ್‌ಗೆ ಬಳಸಲಾಗುತ್ತಿತ್ತು. ಆದರೆ, ಪಾಕ್‌ಗೆ ಟರ್ಕಿ ಸಹಾಯ ಮಾಡಿದ ಹಿನ್ನೆಲೆ ಟರ್ಕಿ ಮಾರ್ಬಲ್ ಬ್ಯಾನ್ ಮಾಡಲಾಗಿದೆ. ಈ ದೇಶದ ಮಾರ್ಬಲ್‌ಗಳ ಬದಲಾಗಿ ಇಟಲಿ, ವಿಯೆಟ್ನಾಂ, ಇರಾನ್ ಜೊತೆಗೆ ಭಾರತದ ಒಳಗೆ ಉತ್ಪಾದನೆಯಾಗುವ ಮಾರ್ಬಲ್, ಗ್ರಾನೈಟ್‌ಗಳನ್ನು ಜನ ಕೊಳ್ಳುತ್ತಿದ್ದಾರೆ. ಹೀಗಾಗಿ, ಟರ್ಕಿ ಮಾರ್ಬಲ್‌ಗಳಿಗೆ ಡಿಮ್ಯಾಂಡ್ ಕುಗ್ಗಿದೆ.

  • ಟರ್ಕಿಗೆ ಬೆಂಗಳೂರು ಶಾಕ್‌ – ಸೆಲೆಬಿ ಏವಿಯೇಷನ್‌ ಏರ್‌ಪೋರ್ಟ್‌ ಸೇವೆ ಸ್ಥಗಿತ

    ಟರ್ಕಿಗೆ ಬೆಂಗಳೂರು ಶಾಕ್‌ – ಸೆಲೆಬಿ ಏವಿಯೇಷನ್‌ ಏರ್‌ಪೋರ್ಟ್‌ ಸೇವೆ ಸ್ಥಗಿತ

    ಬೆಂಗಳೂರು: ಉಗ್ರರ ಪೋಷಕ ಪಾಕಿಸ್ತಾನಕ್ಕೆ (Pakistan) ಬೆಂಬಲ ಘೋಷಿಸಿದ ಟರ್ಕಿಗೆ ಶಾಕ್‌ ಮೇಲೆ ಶಾಕ್‌ ಎದುರಾಗಿದೆ. ಭಾರತದಾದ್ಯಂತ ಟರ್ಕಿ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದ್ದು, ಈಗ ಆ ಸಾಲಿಗೆ ಬೆಂಗಳೂರು ಕೂಡ ಸೇರಿಕೊಂಡಿದೆ.

    ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಕಿಯ ಸೆಲೆಬಿ ಏವಿಯೇಷನ್‌ ಏರ್​​ಪೋರ್ಟ್ ಸೇವೆಗಳನ್ನು ಗುರುವಾರ ತಡರಾತ್ರಿಯಿಂದಲೇ ಸ್ಥಗಿತಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಆದೇಶದ ಬೆನ್ನಲ್ಲೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೂ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: Boycott Turkey| ಟರ್ಕಿಗೆ ದೊಡ್ಡ ಹೊಡೆತ – ಸೆಲೆಬಿ ಲೈಸೆನ್ಸ್‌ ರದ್ದು!

    TURKEY PRESIDENT

    ಟರ್ಕಿಯ ಕಂಪನಿಗೆ ಬೆಂಗಳೂರಿನಲ್ಲಿಯೂ ಭಾರಿ ಹೊಡೆತ ಬಿದ್ದಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿನಿತ್ಯ 15 ಅಂತಾರಾಷ್ಟ್ರೀಯ ವಿಮಾನಗಳು ಮತ್ತು ಕಾರ್ಗೋ ವಿಮಾನಗಳನ್ನು ಸೆಲೆಬಿ ಏವಿಯೇಷನ್‌ ನಿರ್ವಹಣೆ ಮಾಡುತ್ತಿತ್ತು. ಅವುಗಳನ್ನು ಗುರುವಾರ ರಾತ್ರಿಯಿಂದಲೇ ಬೇರೆ ಏರ್ ಸರ್ವೀಸಸ್ ಕಂಪನಿಗಳ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ ಅಂತಾ ಪ್ರಕಟಣೆಯಲ್ಲಿ ತಿಳಿಸಿದೆ.

    ದೇಶದ 9 ವಿಮಾನ ನಿಲ್ದಾಣಗಳಲ್ಲಿ ಪ್ರಾಥಮಿಕ ಹಂತದ ಸೇವೆಗಳನ್ನು ನೀಡುತ್ತಿದ್ದ ಟರ್ಕಿಯ ಸೆಲೆಬಿ (Celebi) ಏವಿಯೇಷನ್ ಕಂಪನಿಗೆ ನೀಡಲಾಗಿದ್ದ ಸೇವಾ ಲೈಸನ್ಸ್ ಗಳನ್ನು ಭಾರತೀಯ ನಾಗರಿಕ ವಿಮಾನಯಾನ ಸುರಕ್ಷಾ ಬ್ಯೂರೋ (ಬಿಸಿಸಿಎಸ್) ರದ್ದು ಮಾಡಿದೆ. ರಾಷ್ಟ್ರೀಯ ಭದ್ರತಾ ಕಾಳಜಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆದೇಶಿಸಲಾಗಿತ್ತು. ಇದನ್ನೂ ಓದಿ: ಜಮ್ಮು & ಕಾಶ್ಮೀರದಲ್ಲಿ 2 ಎನ್‌ಕೌಂಟರ್‌ – ಭಾರತೀಯ ಸೇನೆ 6 ಉಗ್ರರನ್ನು ಹೊಡೆದುರುಳಿಸಿದ್ದು ಹೇಗೆ?

    ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್‌, ಕೊಚ್ಚಿನ್‌, ಕಣ್ಣೂರು, ಚೆನ್ನೈ, ಗೋವಾದಲ್ಲಿ ಈ ಕಂಪನಿ ಪ್ರಾಥಮಿಕ ಸೇವೆ ನೀಡುತ್ತಿತ್ತು. ಸದ್ಯವೇ ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ಪ್ರಾಥಮಿಕ ಸೇವೆಗಳನ್ನು ನೀಡುವ ಗುತ್ತಿಗೆಯ ಆ ಕಂಪನಿ ಪಡೆಯಲು ಸಿದ್ಧತೆ ನಡೆಸಿತ್ತು. ಅಷ್ಟರಲ್ಲೇ ಭಾರತ ಸರ್ಕಾರ ಸೆಲೆಬಿಗೆ ನೀಡಲಾಗಿದ್ದ ಸೇವಾ ಲೈಸೆನ್ಸ್‌ ರದ್ದುಗೊಳಿಸಿದೆ.

    ಸೆಲೆಬಿ ಏವಿಯೇಷನ್ ​​ಎರಡು ಪ್ರತ್ಯೇಕ ಘಟಕಗಳನ್ನು ಹೊಂದಿದೆ. ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್ ಇಂಡಿಯಾ ವಿಮಾನ ನಿಲ್ದಾಣ ನಿರ್ವಹಣೆ ಕಾರ್ಯಾಚರಣೆ ನಡೆಸುತ್ತಿದ್ದರೆ ಸೆಲೆಬಿ ದೆಹಲಿ ಕಾರ್ಗೋ ಟರ್ಮಿನಲ್ ಮ್ಯಾನೇಜ್‌ಮೆಂಟ್ ಇಂಡಿಯಾ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಕು ಸೇವೆಗಳನ್ನು ಮೇಲ್ವಿಚಾರಣೆ ಮಾಡುತ್ತಿತ್ತು. ಇದನ್ನೂ ಓದಿ: `ಆಪರೇಷನ್ ಸಿಂಧೂರ’ ಇನ್ನೂ ಮುಗಿದಿಲ್ಲ, ಇದು ಟ್ರೇಲರ್ ಅಷ್ಟೇ – ರಾಜನಾಥ್ ಸಿಂಗ್

    ಸೆಲೆಬಿ 2008 ರಲ್ಲಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಂಟಿ ಉದ್ಯಮದ ಮೂಲಕ ಭಾರತವನ್ನು ಪ್ರವೇಶಿಸಿತು. ಸೆಲೆಬಿ ಕಂಪನಿಗೆ ಕೆಲಸ ನಿರ್ವಹಿಸಲು ಯುಪಿಎ ಸರ್ಕಾರ ಅನುಮತಿ ನೀಡಿತ್ತು.

  • Boycott Turkey| ಟರ್ಕಿಗೆ ದೊಡ್ಡ ಹೊಡೆತ – ಸೆಲೆಬಿ ಲೈಸೆನ್ಸ್‌ ರದ್ದು!

    Boycott Turkey| ಟರ್ಕಿಗೆ ದೊಡ್ಡ ಹೊಡೆತ – ಸೆಲೆಬಿ ಲೈಸೆನ್ಸ್‌ ರದ್ದು!

    – 9 ವಿಮಾನ ನಿಲ್ದಾಣಗಳಲ್ಲಿ ಸೇವೆ ನೀಡುತ್ತಿದ್ದ ಕಂಪನಿ

    ನವದೆಹಲಿ: ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆ ವೇಳೆ ಪಾಕಿಸ್ತಾನಕ್ಕೆ (Pakistan) ನೆರವು ನೀಡಿದ್ದ ಟರ್ಕಿ (Turkey) ವಿರುದ್ಧ ನಡೆಸಲಾಗುತ್ತಿರುವ Boycott Turkey ಅಭಿಯಾನ ಜೋರಾಗುತ್ತಿದೆ. ಒಂದು ಕಡೆಯಲ್ಲಿ ಜನರು ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡುತ್ತಿದ್ದರೆ ಇನ್ನೊಂದು ಕಡೆ ಕೇಂದ್ರ ಸರ್ಕಾರವೇ ಟರ್ಕಿಗೆ ಶಾಕ್‌ ನೀಡಿದೆ.

    ದೇಶದ 9 ವಿಮಾನ ನಿಲ್ದಾಣಗಳಲ್ಲಿ ಪ್ರಾಥಮಿಕ ಹಂತದ ಸೇವೆಗಳನ್ನು ನೀಡುತ್ತಿದ್ದ ಟರ್ಕಿಯ ಸೆಲೆಬಿ (Celebi) ಏವಿಯೇಷನ್ ಕಂಪನಿಗೆ ನೀಡಲಾಗಿದ್ದ ಸೇವಾ ಲೈಸನ್ಸ್ ಗಳನ್ನು ಭಾರತೀಯ ನಾಗರಿಕ ವಿಮಾನಯಾನ ಸುರಕ್ಷಾ ಬ್ಯೂರೋ (ಬಿಸಿಸಿಎಸ್) ರದ್ದು ಮಾಡಿದೆ. ರಾಷ್ಟ್ರೀಯ ಭದ್ರತಾ ಕಾಳಜಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

    ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್‌, ಕೊಚ್ಚಿನ್‌, ಕಣ್ಣೂರು, ಚೆನ್ನೈ, ಗೋವಾದಲ್ಲಿ ಈ ಕಂಪನಿ ಪ್ರಾಥಮಿಕ ಸೇವೆ ನೀಡುತ್ತಿತ್ತು. ಸದ್ಯವೇ ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ಪ್ರಾಥಮಿಕ ಸೇವೆಗಳನ್ನು ನೀಡುವ ಗುತ್ತಿಗೆಯ ಆ ಕಂಪನಿ ಪಡೆಯಲು ಸಿದ್ಧತೆ ನಡೆಸಿತ್ತು. ಅಷ್ಟರಲ್ಲೇ ಭಾರತ ಸರ್ಕಾರ ಸೆಲೆಬಿಗೆ ನೀಡಲಾಗಿದ್ದ ಸೇವಾ ಲೈಸೆನ್ಸ್‌ ರದ್ದುಗೊಳಿಸಿದೆ. ಇದನ್ನೂ ಓದಿ: ಡಮ್ಮಿ ಜೆಟ್‌, 15 ಬ್ರಹ್ಮೋಸ್‌ ಕ್ಷಿಪಣಿ ದಾಳಿ, 11 ಏರ್‌ಬೇಸ್‌ ಧ್ವಂಸ – ಪಾಕ್‌ ಕರೆಯ ಹಿಂದಿದೆ ಭಾರತದ ಪರಾಕ್ರಮದ ಕಥೆ

    ಸೆಲೆಬಿ ಏವಿಯೇಷನ್ ​​ಎರಡು ಪ್ರತ್ಯೇಕ ಘಟಕಗಳನ್ನು ಹೊಂದಿದೆ. ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್ ಇಂಡಿಯಾ ವಿಮಾನ ನಿಲ್ದಾಣ ನಿರ್ವಹಣೆ ಕಾರ್ಯಾಚರಣೆ ನಡೆಸುತ್ತಿದ್ದರೆ ಸೆಲೆಬಿ ದೆಹಲಿ ಕಾರ್ಗೋ ಟರ್ಮಿನಲ್ ಮ್ಯಾನೇಜ್‌ಮೆಂಟ್ ಇಂಡಿಯಾ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಕು ಸೇವೆಗಳನ್ನು ಮೇಲ್ವಿಚಾರಣೆ ಮಾಡುತ್ತಿತ್ತು

    ಸೆಲೆಬಿ 2008 ರಲ್ಲಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಂಟಿ ಉದ್ಯಮದ ಮೂಲಕ ಭಾರತವನ್ನು ಪ್ರವೇಶಿಸಿತು. ಸೆಲೆಬಿ ಕಂಪನಿಗೆ ಕೆಲಸ ನಿರ್ವಹಿಸಲು ಯುಪಿಎ ಸರ್ಕಾರ ಅನುಮತಿ ನೀಡಿತ್ತು. ಇದನ್ನೂ ಓದಿ: ಮಲಯಾಳಂ ಚಿತ್ರರಂಗ ನನ್ನ ವೃತ್ತಿಜೀವನವನ್ನೇ ಬದಲಿಸಿದೆ: ಕಮಲ್ ಹಾಸನ್

    ಮುಂಬೈ ದಾಳಿಯಾದ ನಂತರ ಬಾಳಾಸಾಹೇಬ್ ಠಾಕ್ರೆ ನೇತೃತ್ವದಲ್ಲಿ ಶಿವಸೇನೆಗೆ ಸಂಯೋಜಿತವಾಗಿರುವ ಅನೇಕ ವಾಯುಯಾನ ಕಾರ್ಮಿಕ ಸಂಘಗಳು, ಭಾರತದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಸೆಲೆಬಿಗೆ ಅನುಮತಿ ನೀಡಿದ್ದನ್ನು ಭಾರೀ ವಿರೋಧಿಸಿದ್ದವು.

  • ಪಾಕ್‌ಗೆ ಬೆಂಬಲಿಸಿದ ಟರ್ಕಿಯಲ್ಲಿ ಸಿನಿಮಾ ಶೂಟಿಂಗ್ ಬೇಡ – ಭಾರತೀಯ ಚಿತ್ರರಂಗ ನಿರ್ಧಾರ

    ಪಾಕ್‌ಗೆ ಬೆಂಬಲಿಸಿದ ಟರ್ಕಿಯಲ್ಲಿ ಸಿನಿಮಾ ಶೂಟಿಂಗ್ ಬೇಡ – ಭಾರತೀಯ ಚಿತ್ರರಂಗ ನಿರ್ಧಾರ

    – ಸಿನಿಮಾಗಿಂತಲೂ ದೇಶವೇ ಮುಖ್ಯ ಅಂತ ಖಡಕ್ ಸಂದೇಶ ರವಾನೆ

    ‘ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆಯಲ್ಲಿ ಉಗ್ರ ಪೋಷಕ ಪಾಕಿಸ್ತಾನಕ್ಕೆ (Pakistan) ಬೆಂಬಲಿಸಿದ ಟರ್ಕಿಗೆ (Turkey) ಭಾರತೀಯ ಚಿತ್ರರಂಗ ಬಿಸಿ ಮುಟ್ಟಿಸಲು ಮುಂದಾಗಿದೆ. ಟರ್ಕಿ ಮತ್ತು ಅಜರ್‌ಬೈಜಾನ್ ಕುತಂತ್ರದ ಬೆನ್ನಲ್ಲೇ ಸಿನಿಮಾ ರಂಗ ಮಹತ್ವದ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ:ಕುಂಭಮೇಳದ ನೀಲಿ ಕಂಗಳ ಚೆಲುವೆಗೆ ಬಿಗ್ ಚಾನ್ಸ್- ಫ್ಯಾನ್ಸ್‌ಗೆ ಗುಡ್ ನ್ಯೂಸ್

    ಪಾಕ್ ಬೆಂಬಲಕ್ಕೆ ನಿಂತಿರೋ ಟರ್ಕಿಗೆ ಭಾರತ ಪಾಠ ಕಲಿಸಲು ಮುಂದಾಗಿದೆ. ಟರ್ಕಿ ಮತ್ತು ಅಜರ್‌ಬೈಜಾನ್‌ನಲ್ಲಿ ಯಾವುದೇ ಸಿನಿಮಾದ ಶೂಟಿಂಗ್ ಮಾಡದಿರಲು ‘ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯಿಸ್’ ಕಡೆಯಿಂದ ಭಾರತೀಯ ಚಿತ್ರರಂಗ ನಿರ್ಮಾಪಕರಿಗೆ ಪತ್ರದ ಮೂಲಕ ತಿಳಿಸಲಾಗಿದೆ. ಇದನ್ನೂ ಓದಿ:13 ವರ್ಷಗಳ ಬಳಿಕ ಟಾಲಿವುಡ್‌ಗೆ ಕನ್ನಡದ ‘ಸತ್ಯ ಇನ್ ಲವ್’ ನಟಿ

    ಈ ಎರಡು ದೇಶಗಳ ಜೊತೆ ನಂಟು ಇಟ್ಟುಕೊಳ್ಳದಂತೆ ನಿರ್ದೇಶಕ, ನಿರ್ಮಾಪಕರಿಗೆ ತಿಳಿಸಲಾಗಿದೆ. ಸಿನಿಮಾಗಿಂತಲೂ ದೇಶವೇ ಮುಖ್ಯ. ಟರ್ಕಿ ಜೊತೆ ನಂಟು ಇಟ್ಟುಕೊಂಡರೆ, ಇದರಿಂದ ಭಾರತದ ಭದ್ರತೆ ತೊಂದರೆ ಅಂತ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಚಿತ್ರರಂಗ ಕೂಡ ಸಾಥ್ ನೀಡಿದೆ.

    ಈಗಾಗಲೇ ಪಾಕ್ ಕಲಾವಿದರು, ತಂತ್ರಜ್ಞರು ಭಾರತೀಯ ಸಿನಿಮಾಗಳಲ್ಲಿ ಕೆಲಸ ಮಾಡದಂತೆ ಬ್ಯಾನ್ ಮಾಡಲಾಗಿದೆ. ಈ ಬೆನ್ನಲ್ಲೇ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.