Tag: Turbo

  • ಮಮ್ಮುಟ್ಟಿ ಜೊತೆ ರಾಜ್ ಬಿ ಶೆಟ್ಟಿ: ಗಮನ ಸೆಳೆದ ‘ಟರ್ಬೋ’ ಟ್ರೈಲರ್

    ಮಮ್ಮುಟ್ಟಿ ಜೊತೆ ರಾಜ್ ಬಿ ಶೆಟ್ಟಿ: ಗಮನ ಸೆಳೆದ ‘ಟರ್ಬೋ’ ಟ್ರೈಲರ್

    ನ್ನಡದ ಖ್ಯಾತ ನಟ – ನಿರ್ದೇಶಕ ರಾಜ್ ಬಿ ಶೆಟ್ಟಿ (Raj B. Shetty) ಗರುಡ ಗಮನ ವೃಷಭ ವಾಹನದಂತಹ ಮಾಸ್ ಚಿತ್ರ ಮತ್ತು ಸ್ವಾತಿ ಮುತ್ತಿನ ಮಳೆ ಹನಿಯೇ ಎಂಬ ಕ್ಲಾಸ್ ಚಿತ್ರಗಳನ್ನು ಕನ್ನಡದಲ್ಲಿ ಒಂದರ ಇನ್ನೊಂದರಂತೆ ನೀಡುವ ಮೂಲಕ ದೇಶದಾದ್ಯಂತ ಜನರನ್ನು ಬೆರಗುಗೊಳಿಸಿ ಇದೀಗ ಮಲಯಾಳಂ ನಲ್ಲಿ ನಟಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

    ಭಾರತದ ಕೆಲವೇ ಉತ್ತಮ ನಟರಲ್ಲಿ ಒಬ್ಬರಾದ ಮಮ್ಮುಟ್ಟಿ ಅವರು ಸ್ವತಃ ನಿರ್ಮಿಸಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ‘ಟರ್ಬೋ’ (Turbo) ಚಿತ್ರದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುದು ಎಲ್ಲರ ಕುತೂಹಲವನ್ನು ಹುಟ್ಟುವಾಕುವಂತೆ  ಮಾಡಿದ್ದಾರೆ. ನೆನ್ನೆ ದುಬೈನಲ್ಲಿ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು, ಮಲಯಾಳಂ ನಲ್ಲಿ ಪುಲಿಮುರುಗನ್, ಮಧುರೈ ರಾಜದಂತಹ ಸೂಪರ್ ಡೂಪರ್ ಚಿತ್ರಗಳನ್ನು ನೀಡಿದ ನಿರ್ದೇಶಕರಾದ ವೈಶಾಕ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ, ಖ್ಯಾತ ಬರಹಗಾರರಾಂತ ಮಿಥುನ್ ಮ್ಯಾನುವಲ್ ಥಾಮಸ್ ಅವರು ಬರೆದಿದ್ದಾರೆ.

     

    ಮಮ್ಮುಟ್ಟಿಯವರ ಒಡೆತನದ ‘ಮಮ್ಮುಟ್ಟಿ ಕಂಪನಿ’ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಅಂಜನ ಜಯಪ್ರಕಾಶ್, ತೆಲುಗಿನ ಸುನಿಲ್, ಶಬರೀಶ್ ವರ್ಮಾ, ದಿಲೀಶ್ ಪೋತನ್ ಇನ್ನಿತರರ ದೊಡ್ಡ ತಾರಾಗಣವೇ ಇರಲಿದೆ. ಈ ಚಿತ್ರವನ್ನು ಕನ್ನಡದಲ್ಲಿ ರಾಜ್ ಬಿ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯಾದ ‘ ಲೈಟರ್ ಬುದ್ಧ ಫಿಲಂಸ್’ ಹಂಚಿಕೆ ಮಾಡುತ್ತಿದೆ.

  • ಮಲಯಾಳಂ ಸ್ಟಾರ್ ಚಿತ್ರ ಒಪ್ಪಿಕೊಂಡ ರಾಜ್ ಬಿ ಶೆಟ್ಟಿ

    ಮಲಯಾಳಂ ಸ್ಟಾರ್ ಚಿತ್ರ ಒಪ್ಪಿಕೊಂಡ ರಾಜ್ ಬಿ ಶೆಟ್ಟಿ

    ರುಧೀರಂ ಸಿನಿಮಾ ಮೂಲಕ ಈಗಾಗಲೇ ಮಲಯಾಳಂ (Malayalam) ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರುವ ಕನ್ನಡದ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ (Raj B Shetty) ಇದೀಗ ಮತ್ತೊಂದು ಮಲಯಾಳಂ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಸ್ಟಾರ್ ನಟ ಮಮ್ಮಟ್ಟಿ  (Mammootty) ನಾಯಕನಾಗಿ ನಟಿಸುತ್ತಿರುವ ಟರ್ಬೋ (Turbo) ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ವಿಶೇಷ ಪಾತ್ರವನ್ನು ಮಾಡಲಿದ್ದಾರೆ. ಸ್ವತಃ ಚಿತ್ರತಂಡವೇ ಈ ಮಾಹಿತಿಯನ್ನು ಹೊರ ಹಾಕಿದೆ.

    ಒಂದು ಕಡೆ ಎರಡೆರಡು ಮಲೆಯಾಳಂ ಸಿನಿಮಾದಲ್ಲಿ ರಾಜ್ ನಟಿಸುತ್ತಿದ್ದರೆ, ಮತ್ತೊಂದು ಕಡೆ ಮಲಯಾಳಂ ಸಿನಿಮಾವೊಂದನ್ನು ಅವರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾಹಿತಿಯೂ ಸಿಕ್ಕಿದೆ. ದುಲ್ಕರ್ ಸಲ್ಮಾನ್ ಗಾಗಿ ರಾಜ್ ಶೆಟ್ಟಿ ಚಿತ್ರವೊಂದನ್ನು ನಿರ್ದೇಶನ (Direction) ಮಾಡಲಿದ್ದಾರೆ.

    ಈ ಅಚ್ಚರಿಯ ಸುದ್ದಿಯನ್ನು ಹಂಚಿಕೊಂಡಿದ್ದು ಸ್ವತಃ ದುಲ್ಕರ್ ಸಲ್ಮಾನ್ (Dulquer Salmaan). ಅವರದ್ದೇ ನಿರ್ಮಾಣ ಸಂಸ್ಥೆಯಿಂದ ಈ ಚಿತ್ರ ಮೂಡಿ ಬರಲಿದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಅಲ್ಲಿಗೆ ರಾಜ್ ಬಿ ಶೆಟ್ಟಿ ಮಲಯಾಳಂ ಚಿತ್ರರಂಗಕ್ಕೆ ನಿರ್ದೇಶಕರಾಗಿ ಹಾರಲಿದ್ದಾರೆ ಎನ್ನುವುದು ಲೇಟೆಸ್ಟ್ ಮಾಹಿತಿ.

    ರಾಜ್ ಬಿ ಶೆಟ್ಟಿ (Raj B Shetty)ಅವರ ನಿರ್ದೇಶನದಲ್ಲಿ ಕೆಲಸ ಮಾಡುವುದಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ದುಲ್ಕರ್ ಮಾತನಾಡಿದ್ದು, ಉಳಿದಂತೆ ಯಾವ ವಿಚಾರವನ್ನೂ ಅವರು ಹಂಚಿಕೊಂಡಿಲ್ಲ. ಬಟ್, ರಾಜ್ ಬಿ ಶೆಟ್ಟಿ ಮಲಯಾಳಂ ಚಿತ್ರೋದ್ಯಮಕ್ಕೆ ನಿರ್ದೇಶಕರಾಗಿ ಬರುವುದು ಪಕ್ಕಾ ಎನ್ನುವುದನ್ನು ಖಚಿತ ಪಡಿಸಿದ್ದಾರೆ.

     

    ಸದ್ಯ ಶೆಟ್ಟರು ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಟೋಬಿ ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕು. ಅದರ ನಡುವೆ ರಮ್ಯಾಗಾಗಿ ಒಂದು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶಿವರಾಜ್ ಕುಮಾರ್ ಜೊತೆ ಒಂದು ಸಿನಿಮಾ ಮಾಡಬೇಕಿದೆ. ಈ ಮಧ್ಯ ಯಾವಾಗ ನಿರ್ದೇಶನ ಮಾಡುತ್ತಾರೋ ಕಾದು ನೋಡಬೇಕು.