Tag: Tunnel Road

  • ಡಿಕೆಶಿ ಕನಸಿನ ಟನಲ್‌ ರೋಡ್‌ ಡಿಪಿಆರ್‌ನಲ್ಲಿ ಲೋಪದೋಷ!

    ಡಿಕೆಶಿ ಕನಸಿನ ಟನಲ್‌ ರೋಡ್‌ ಡಿಪಿಆರ್‌ನಲ್ಲಿ ಲೋಪದೋಷ!

    – ರಾಜ್ಯ ಸರ್ಕಾರವೇ ನೇಮಕ ಮಾಡಿದ ತಜ್ಞರ ಸಮಿತಿಯಿಂದ ವರದಿ

    ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರ ಕನಸಿನ ಕೂಸು ಸುರಂಗ ರಸ್ತೆ (Tunnel Road) ನಿರ್ಮಾಣ ಮಾಡಲು ಸಿದ್ಧತೆ ಮಾಡಿದ ಸಮಗ್ರ ಯೋಜನಾ ವರದಿಯಲ್ಲಿ (DPR) ಲೋಪದೋಷಗಳಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಸಂಚಾರ ದಟ್ಟಣೆ ತಡೆಗಟ್ಟಲು 18 ಸಾವಿರ ಕೋಟಿ ರೂ. ವೆಚ್ಚದಲ್ಲಿ ಹೆಬ್ಬಾಳದಿಂದ (Hebbala) ಸಿಲ್ಕ್ ಬೋರ್ಡ್‌ವರೆಗೆ (Silk Board) 19 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಡಿಪಿಆರ್‌ ಮಾಡಲಾಗಿದೆ.

    ಈ ಟನಲ್‌ ರಸ್ತೆಗೆ ವಿವಾದ ಜೋರಾಗುತ್ತಿದ್ದಂತೆ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಕಾರ್ಯನಿರ್ವಾಹಕ ನಿರ್ದೇಶಕ (ಸಿವಿಲ್) ಸಿದ್ದನಗೌಡ ಹೆಗರಡ್ಡಿ ನೇತೃತ್ವದಲ್ಲಿ ಐವರ ತಜ್ಞರ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಡಿಪಿಆರ್‌ ಅಧ್ಯಯನ ಮಾಡಿ ಹಲವು ದೋಷಗಳನ್ನು ಎತ್ತಿ ತೋರಿಸಿದೆ. ಇದನ್ನೂ ಓದಿ:  ಟ್ರಂಪ್‌ ಭಾಷಣಕ್ಕೆ ಅಡ್ಡಿ – ಇಬ್ಬರು ಇಸ್ರೇಲ್‌ ಸಂಸದರನ್ನು ಹೊರದಬ್ಬಿದ ಸಿಬ್ಬಂದಿ

    ಡಿಪಿಆರ್‌ನಲ್ಲಿರುವ ಲೋಪ ದೋಷಗಳೇನು?
    ತರಾತುರಿಯಲ್ಲಿ ಡಿಪಿಆರ್ ತಯಾರಿಕೆ ಮಾಡಲಾಗಿದೆ. ಸುರಂಗ ರಸ್ತೆ ಯೋಜನೆ ದೊಡ್ಡ ಯೋಜನೆಯಾಗಿದ್ದು 4 ಕಡೆ ಮಾತ್ರ ಮಣ್ಣಿನ ಪರೀಕ್ಷೆ ಮಾಡಲಾಗಿದೆ. 4 ಕಡೆ ಮಣ್ಣಿನ ಪರೀಕ್ಷೆ ಮಾಡಿ ಈ ಯೋಜನೆ ಮಾಡುವುದು ಸಾಧುವಲ್ಲ. ಇದನ್ನೂ ಓದಿ: ದೇಶದ ಮೊದಲ ಆದಾಯ ಸಮೀಕ್ಷೆ ಫೆಬ್ರವರಿಯಲ್ಲಿ ಆರಂಭ

    ಹೆಬ್ಬಾಳ ಟು ಸಿಲ್ಕ್ ಬೋರ್ಡ್‌ವರೆಗೆ ರೆಡ್ ಲೈನ್ ಮೆಟ್ರೋ ಮಾರ್ಗ ಬರುತ್ತಿದೆ. ಲಾಲ್‌ಬಾಗ್ ಬಳಿ ಮೆಟ್ರೋ ಮಾರ್ಗ ಬರಬೇಕಾದ್ರೆ ಟನಲ್ ಯಾಕೆ?

    ಪೀಕ್ ಅವರ್ ಟ್ರಾಫಿಕ್ ಗಣನೆಗೆ ತೆಗೆದುಕೊಂಡಿಲ್ಲ ಮತ್ತು ಹೆಬ್ಬಾಳ ನಾಲಾ ಡೈವರ್ಷನ್ ಸರಿಯಿಲ್ಲ. ಬೃಹತ್ ಯೋಜನೆಗೆ 10 ವರ್ಷ ಅಲ್ಲ 25 ವರ್ಷ ಬೇಕಾಗಬಹುದು. ಪಾದಚಾರಿ ಮಾರ್ಗ, ನೀರಿನ ಒಳಚರಂಡಿ ಸೇರಿದಂತೆ ಹೈಡ್ರಾಲಿಕ್ ವಿನ್ಯಾಸ, ವಿಪತ್ತು ನಿರ್ವಹಣೆ ಬಗ್ಗೆ ಉಲ್ಲೇಖ ಇಲ್ಲ.

    ಭೂಸ್ವಾಧಿನ ಹೇಗೆ ಎನ್ನುವುದರ ಬಗ್ಗೆ ಉಲ್ಲೇಖ ಆಗಿಲ್ಲ. ಪರಿಸರ ಕಾಳಜಿ, ಸಾರಿಗೆ ವ್ಯವಸ್ಥೆ ನಿರ್ವಹಣೆ ಮಾಹಿತಿ ಇಲ್ಲ. ಸಂಚಾರ ಸಂಬಂಧ ಮೂಲಭೂತವಾಗಿ ದೋಷಪೂರಿತವಾಗಿದೆ. ದುರ್ಬಲ ಸಂಚಾರ ಅಧ್ಯಯನ ಮತ್ತು ಪ್ರಾಥಮಿಕ ಡೇಟಾ ಕೊರತೆಯಿದೆ. ಬಿಎಂಟಿಸಿ, ಮೆಟ್ರೋ, ಉಪನಗರ ರೈಲುಗಳ ಅನುಕೂಲದ ಮಾಹಿತಿ ಉಲ್ಲೇಖಿಸಿಲ್ಲ.

  • ದಿನಕ್ಕೆ 45ಕ್ಕೂ ಹೆಚ್ಚು ನಿಮಿಷ ಉಳಿಸಬಹುದು – ಸುರಂಗ ಮಾರ್ಗದ ಉಪಯೋಗ ತಿಳಿಸಿದ ಡಿಕೆಶಿ

    ದಿನಕ್ಕೆ 45ಕ್ಕೂ ಹೆಚ್ಚು ನಿಮಿಷ ಉಳಿಸಬಹುದು – ಸುರಂಗ ಮಾರ್ಗದ ಉಪಯೋಗ ತಿಳಿಸಿದ ಡಿಕೆಶಿ

    – ಬೆಂಗಳೂರು ಟ್ರಾಫಿಕ್‌ಗೆ ಇದು ಪರಿಹಾರವಲ್ಲ ಎಂದ ತೇಜಸ್ವಿ ಸೂರ್ಯ
    – ಇಡೀ ರಾಜ್ಯಕ್ಕೆ ಮಾಡ್ಲಿ ಎಂದು ಹೆಚ್‌ಡಿಕೆ ವ್ಯಂಗ್ಯ

    ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಕನಸು ಕಂಡಿರುವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಟನಲ್ ರೋಡ್‌ನಿಂದ (Tunnel Road) ಏನೇನು ಉಪಯೋಗ ಆಗುತ್ತದೆ ಎಂದು ಎಕ್ಸ್ ಮೂಲಕ ಹಂಚಿಕೊಂಡಿದ್ದಾರೆ.

    ನಿಮ್ಮ ಸಮಯ, ನಿಮ್ಮನ್ನು ಗಮನದಲ್ಲಿಟ್ಟುಕೊಂಡು ಸುರಂಗ ನಿರ್ಮಾಣ ಮಾಡುತ್ತಿದ್ದೇವೆ. ಹೆಬ್ಬಾಳ ಟು ಸಿಲ್ಕ್ ಬೋರ್ಡ್ 25ಕ್ಕೂ ಹೆಚ್ಚು ಅಡಚಣೆ ತಪ್ಪಿಸಬಹುದು. ದಿನಕ್ಕೆ 45ಕ್ಕೂ ಹೆಚ್ಚು ನಿಮಿಷ ಉಳಿಸಬಹುದು. 16.75 ಕಿ.ಮೀ ತಡೆರಹಿತ, ಸಿಗ್ನಲ್-ಮುಕ್ತವಾಗಿ ಪ್ರಯಾಣಿಸಬಹುದು. ಐಟಿ ಕಾರಿಡಾರ್‌ಗೆ ನೇರ ಪ್ರವೇಶ ಸಿಗಲಿದೆ. ವೇಗವಾದ ಸ್ಮಾರ್ಟ್ ಬೆಂಗಳೂರು ತನ್ನ ಹಾದಿಯಲ್ಲಿದೆ ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: Israel-Iran tensions: ರಷ್ಯಾ, ಅಮೆರಿಕದಿಂದ ತೈಲ ಆಮದು ಹೆಚ್ಚಿಸಿದ ಭಾರತ

    ಇನ್ನು ಈ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಎಕ್ಸ್ನಲ್ಲಿ ಪೋಸ್ಟ್ ಮಾಡಿ, ಬೆಂಗಳೂರಿನ ಸಂಚಾರ ಸಮಸ್ಯೆಗಳಿಗೆ ಸುರಂಗ ರಸ್ತೆ ಒಂದು ಅವೈಜ್ಞಾನಿಕ ಪರಿಹಾರ. ತೆರಿಗೆದಾರರ 18,000 ಕೋಟಿ ಹಣ ಖರ್ಚು ಮಾಡಿ ಯೋಜನೆ ವಿಫಲಗೊಳ್ಳುವುದು ಖಚಿತ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ನಾನು ಹೆಲ್ಮೆಟ್ ಹಾಕಲ್ಲ ಏನಿವಾಗ – ಜೆಡಿಎಸ್ ಅಧ್ಯಕ್ಷ ಎಂದವನ ಜೈಲಿಗಟ್ಟಿದ ಪೊಲೀಸರು

    ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಕೂಡ ಡಿಕೆಶಿಗೆ ತಿರುಗೇಟು ಕೊಟ್ಟಿದ್ದಾರೆ. ಟನಲ್ ರೋಡನ್ನು ಬೆಂಗಳೂರು ಮಾತ್ರ ಅಲ್ಲ, ಇಡೀ ರಾಜ್ಯಕ್ಕೆ ಮಾಡಲಿ. ಯಾವ ಟನಲ್ ಮಾಡುತ್ತಾರೆ ನೋಡೋಣ ಎಂದು ವ್ಯಂಗ್ಯವಾಡಿದ್ದಾರೆ.  ಇದನ್ನೂ ಓದಿ: ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಅಕ್ರಮ – ಶಾಸಕ ಬಿಆರ್ ಪಾಟೀಲ್ ಮತ್ತೊಂದು ಬಾಂಬ್

  • ಟನಲ್ ರಸ್ತೆ ಯೋಜನೆ ಬೆಂಗಳೂರಿಗೆ ಪರಿಹಾರವಲ್ಲ: ಅಶ್ವಿನಿ ವೈಷ್ಣವ್

    ಟನಲ್ ರಸ್ತೆ ಯೋಜನೆ ಬೆಂಗಳೂರಿಗೆ ಪರಿಹಾರವಲ್ಲ: ಅಶ್ವಿನಿ ವೈಷ್ಣವ್

    ಬೆಂಗೂರು: ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರ ಕನಸಿನ ಸುರಂಗ ರಸ್ತೆ(Tunnel Road) ಯೋಜನೆಗೆ ಕೇಂದ್ರ ಸರ್ಕಾರ ಕೊಕ್ಕೆ ಹಾಕಿದಂತೆ ಕಾಣುತ್ತಿದೆ.

    ಟನೆಲ್ ರಸ್ತೆಗಳು ಎಲ್ಲೂ ಸಂಚಾರ ದಟ್ಟಣೆಗೆ ಪರಿಹಾರ ಅಲ್ಲ ಎಂದು ನಗರ ತಜ್ಞರೇ ಎಲ್ಲ ಕಡೆ ಹೇಳಿದ್ದಾರೆ. ಇದು ಇದು ಬೆಂಗಳೂರಿಗೂ (Bengaluru) ಅನ್ವಯವಾಗುತ್ತದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnaw) ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಆರಂಭವಾಗಲಿದೆ ಮೊಬೈಲ್ ತಯಾರಿಕಾ ಘಟಕ, ಸಿಗಲಿದೆ 50 ಸಾವಿರ ಜನರಿಗೆ ಉದ್ಯೋಗ: ಅಶ್ವಿನಿ ವೈಷ್ಣವ್‌

     

    ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟ್ರಾಫಿಕ್ ಸಮಸ್ಯೆಗೆ (Traffic Problem) ಟನಲ್‌ ರಸ್ತೆ ಪರಿಹಾರವಲ್ಲ.ರೈಲ್ವೇ ಆಧಾರಿತ ಯೋಜನಗಳೇ ಇದಕ್ಕೆ ಪರಿಹಾರ ಎಂದಿದ್ದಾರೆ.

    ಬೆಂಗಳೂರಿಗೆ ಸರ್ಕ್ಯೂಲರ್‌ ರೈಲು ಯೋಜನೆಯನ್ನು ತರಲಿದ್ದು ಸದ್ಯವೇ ಸಮಗ್ರ ಯೋಜನಾ ವರದಿ (DPR) ಮಾಡುತ್ತೇವೆ. ಏಳು ದಿಕ್ಕುಗಳಿಂದಲೂ ರೈಲು ಮಾರ್ಗಗಳ ಸಂಪರ್ಕವವನ್ನು ಬೆಂಗಳೂರಿಗೆ ನೀಡುತ್ತೇವೆ ಎಂದು ವೈಷ್ಣವ್ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರವೇ ಹೊಣೆ: ಅಶ್ವಿನಿ ವೈಷ್ಣವ್‌

    ಈ ಸಂದರ್ಭದಲ್ಲೇ ಸಬ್‌ ಅರ್ಬನ್ ರೈಲು ಯೋಜನೆಗೆ ರಾಜ್ಯದ ಸ್ಪಂದನೆ ತೃಪ್ತಿದಾಯಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  • ಟನಲ್ ರೋಡ್‌ಗೆ ಬಿಜೆಪಿ ವಿರೋಧ – ಸಂಸದರಿಂದ ಬಿಬಿಎಂಪಿ ಆಯುಕ್ತರಿಗೆ ಪತ್ರ

    ಟನಲ್ ರೋಡ್‌ಗೆ ಬಿಜೆಪಿ ವಿರೋಧ – ಸಂಸದರಿಂದ ಬಿಬಿಎಂಪಿ ಆಯುಕ್ತರಿಗೆ ಪತ್ರ

    – ಡಿಕೆಶಿ ಕನಸಿಗೆ ವಿಘ್ನ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಟ್ರಾಫಿಕ್ ಜಾಮ್‌ಗೆ (Traffic Jam) ಪರಿಹಾರ ಎಂದು ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಸಿಲ್ಕ್ ಬೋರ್ಡ್‌ವರೆಗೆ ಸುರಂಗ ಮಾರ್ಗ ನಿರ್ಮಾಣಕ್ಕೆ ಡಿಸಿಎಂ ಡಿಕೆಶಿ ಪಟ್ಟು ಹಿಡಿದಿದ್ದಾರೆ. ಡಿಪಿಆರ್ ಕೂಡ ಸಿದ್ಧವಾಗಿದೆ. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿ, ಟನಲ್ ಪ್ರಾಜೆಕ್ಟ್ (Tunnel Project) ರದ್ದು ಮಾಡುವಂತೆ ಅಭಿಯಾನ ಶುರುಮಾಡಿದೆ.

    ಸಂಸದ ಪಿಸಿ ಮೋಹನ್ ಬಿಬಿಎಂಪಿ (BBMP) ಕಮೀಷನರ್‌ಗೆ ಪತ್ರ ಬರೆದು ಇದೊಂದು ಅವೈಜ್ಞಾನಿಕ ನಿರ್ಧಾರ. ಟನಲ್ ಬೇಡ, ಮೆಟ್ರೋ ಬೇಕು ಎಂದು ಹೇಳಿದ್ದಾರೆ. ಡಿಪಿಆರ್‌ನಲ್ಲಿ ಸಾಕಷ್ಟು ಲೋಪದೋಷ ಹೊಂದಿರುವ ಈ ಪ್ರಾಜೆಕ್ಟ್ ಬೆಂಗಳೂರಿಗೆ ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಸಲ್ಲ ಎಂಬುದು ಸಂಸದರ ವಾದ. ಅಲ್ಲದೇ ಸಾವಿರಾರು ಕೋಟಿ ವ್ಯಯಿಸುವ ಬದಲು ಮೆಟ್ರೋ, ಬಿಎಂಟಿಸಿಯಂತಹ ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಯಾವ ಪವರ್ ಇಲ್ಲ, ಯಾವ ಶೇರಿಂಗ್ ಇಲ್ಲ.. 5 ವರ್ಷ ಕಾಂಗ್ರೆಸ್ ಸರ್ಕಾರ ಇರುತ್ತೆ: ಡಿಕೆಶಿ

    ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ತಜ್ಞರು ಟನಲ್‌ಗೆ ನೋ ಎಂದಿದ್ದಾರೆ. ಇದರ ಮಧ್ಯೆ ಈಗ ಬಿಜೆಪಿಯೂ ಟೀಕಿಸಿದೆ. ಆದರೆ ಸರ್ಕಾರ ಮಾತ್ರ ಈ ಯೋಜನೆ ಅನಿವಾರ್ಯ ಎನ್ನುತ್ತಿದೆ. ಇದನ್ನೂ ಓದಿ: ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ – ಮೂವರ ಬಾಳಿಗೆ ಬೆಳಕು

  • ಬೆಂಗ್ಳೂರಲ್ಲಿ 12,690 ಕೋಟಿ ರೂ. ವೆಚ್ಚದ ಸುರಂಗ ರಸ್ತೆ ಯೋಜನೆಗೆ ಸಂಪುಟ ಸಭೆ ಅಸ್ತು

    ಬೆಂಗ್ಳೂರಲ್ಲಿ 12,690 ಕೋಟಿ ರೂ. ವೆಚ್ಚದ ಸುರಂಗ ರಸ್ತೆ ಯೋಜನೆಗೆ ಸಂಪುಟ ಸಭೆ ಅಸ್ತು

    -500 ಕೋಟಿ ರೂ. ವೆಚ್ಚದಲ್ಲಿ ಸ್ಕೈಡೆಕ್ ನಿರ್ಮಾಣ

    ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು (Brand Bengaluru) ಕನಸಿನ ಭಾಗವಾಗಿ ಗುರುವಾರ ಸಂಪುಟ ಸಭೆಯಲ್ಲಿ ಹಲವು ನಿರ್ಣಯ ಕೈಗೊಳ್ಳಲಾಗಿದೆ. 12,690 ಕೋಟಿ ರೂ. ವೆಚ್ಚದಲ್ಲಿ ಹೆಬ್ಬಾಳದಿಂದ (Hebbala) ಸಿಲ್ಕ್ ಬೋರ್ಡ್‌ವರೆಗೆ (Silk Board) ಸುರಂಗ ರಸ್ತೆ ನಿರ್ಮಿಸುವ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿದೆ. ಅಲ್ಲದೇ, 500 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಲ್ಲಿ 250 ಅಡಿ ಎತ್ತರದ ಸ್ಕೈಡೆಕ್ (Sky Deck) ನಿರ್ಮಾಣಕ್ಕೂ ಅನುಮೋದನೆ ನೀಡಿದೆ.

    ಅಲ್ಲದೇ, ಮೈಸೂರು ಮಿನರಲ್ ಸಂಸ್ಥೆ ಎ.ವೃಂದದ ಅಧಿಕಾರಿಗಳಿಗೆ 4ನೇ ವೇತನ ಆಯೋಗದ ಶಿಫಾರಸ್ಸಿನಂತೆ ಬಾಕಿ ವೇತನ ಬಿಡುಗಡೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಎಂಎಸ್‌ಎಂಇ ಕೈಗಾರಿಕೆಗಳಿಗೆ ವೇಗ ನೀಡಲು ಕೈಗಾರಿಕಾ ನಿಯಮಗಳ ತಿದ್ದುಪಡಿಗೆ ಒಪ್ಪಿಗೆ ಸೂಚಿಸಿದೆ. ಅಲ್ಲದೇ, ಸಂಡೂರಿನಲ್ಲಿರುವ 3,724 ಎಕರೆ ಭೂಮಿಯನ್ನು ಜೆಎಸ್‌ಡಬ್ಲ್ಯೂ ಸಂಸ್ಥೆಗೆ ಕ್ರಯಪತ್ರ ಮಾಡಿಕೊಡಲು ಸಮ್ಮತಿ ಸೂಚಿಸಿದೆ. ಅಲ್ಲದೇ, ಸಹಕಾರಿ ಸಂಸ್ಥೆಗೆ 1,600 ಕೋಟಿ ರೂ. ಸಾಲ ಪಡೆಯಲು ಖಾತರಿಯನ್ನು ನೀಡಲು ಮುಂದಾಗಿದೆ. ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆಗೆ ಸಿಎಂ ಸೂಚನೆ

    ಏನಿದು ಟನೆಲ್ ರೋಡ್ ಯೋಜನೆ?
    * ಹೆಬ್ಬಾಳ – ಸಿಲ್ಕ್‌ಬೋರ್ಡ್ 18 ಕಿ.ಮೀ ಸುರಂಗ
    * ಬೋಟ್ ಶೈಲಿಯ ಸುರಂಗ ಮಾರ್ಗ ರಸ್ತೆ
    * ಇದು ಡಬಲ್ ಡೆಕ್ ರಸ್ತೆಗಳನ್ನು ಒಳಗೊಂಡಿರುತ್ತದೆ
    * ವಾಹನಗಳಿಗೆ ಐದು ಎಂಟ್ರಿ, ಐದು ಎಕ್ಸಿಟ್ ಪಾಯಿಂಟ್
    * ಎಸ್ಟೀಮ್ ಮಾಲ್, ಪ್ಯಾಲೇಸ್ ಗ್ರೌಂಡ್, ಗಾಲ್ಫ್ ಕ್ಲಬ್, ಲಾಲ್‌ಬಾಗ್, ಸಿಲ್ಕ್ಬೋಡ್ ಬಳಿ ಎಂಟ್ರಿ-ಎಕ್ಸಿಟ್
    * ಉದ್ದೇಶಿತ ನಮ್ಮ ಮೆಟ್ರೋಗೆ ಸಮನಾಂತರವಾಗಿ ಸುರಂಗ ರಸ್ತೆ (ಸರ್ಜಾಪುರ ರೋಡ್-ಹೆಬ್ಬಾಳ ಮೆಟ್ರೋ ಯೋಜನೆ)
    * ಈ ಯೋಜನೆಗೆ ಭೂಸ್ವಾಧೀನದ ಅಗತ್ಯ ಬೀಳಲ್ಲ

    ಮೊದಲು ಈ ಯೋಜನೆಗೆ 8,000 ಕೋಟಿ ರೂ. ಅಂದಾಜು ವೆಚ್ಚ ಎಂದು ಹೇಳಲಾಗಿತ್ತು ಆದರೀಗ ಈ ಮೊತ್ತ ಒಂದೂವರೆ ಪಟ್ಟು ಹೆಚ್ಚಾಗಿದೆ. ಅಂದರೆ 12,690 ಕೋಟಿ ರೂ.ಗೆ ಏರಿಕೆಯಾಗಿದೆ. ಅಂದಾಜು ಒಂದು ಕಿಲೋಮೀಟರ್ ಸುರಂಗ ರಸ್ತೆಗೆ ಅಂದಾಜು 705 ಕೋಟಿ ರೂ. ವೆಚ್ಚವಾಗಲಿದೆ. ಇದನ್ನೂ ಓದಿ: POCSO Case | ಬಿಎಸ್‌ವೈ ಬಂಧನ ತೆರವಿಗೆ ಕಾನೂನು ಹೋರಾಟ; ಆ.30ರವರೆಗೆ ಮದ್ಯಂತರ ಆದೇಶ ಮುಂದುವರಿಕೆ

  • 1 ಕಿ.ಮೀಗೆ 450 ಕೋಟಿ ರೂ. – ಡಿಕೆಶಿಯ ಕನಸಿನ ಸುರಂಗ ಯೋಜನೆ ಬೆಂಗಳೂರಿಗೆ ಬೇಕಾ? ಬೇಡ್ವಾ?

    1 ಕಿ.ಮೀಗೆ 450 ಕೋಟಿ ರೂ. – ಡಿಕೆಶಿಯ ಕನಸಿನ ಸುರಂಗ ಯೋಜನೆ ಬೆಂಗಳೂರಿಗೆ ಬೇಕಾ? ಬೇಡ್ವಾ?

    ಬೆಂಗಳೂರು: ಸಿಲಿಕಾನ್‌ ಸಿಟಿಯ ಟ್ರಾಫಿಕ್ ಕಿರಿಕಿರಿ (Traffic Problem) ತಪ್ಪಿಸಲು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರು ಸುರಂಗ ಮಾರ್ಗದ (Tunnel Road) ಯೋಜನೆ ರೂಪಿಸಿದ್ದಾರೆ. ಇದು ಬೆಂಗಳೂರು (Bengaluru) ಅಭಿವೃದ್ಧಿ ಮಂತ್ರಿಯ ಕನಸಿನ ಯೋಜನೆ ಎಂದೇ ಬಣ್ಣಿಸಲಾಗುತ್ತಿದೆ. ಆದರೆ ಈ ದುಬಾರಿ ಯೋಜನೆಗೆ ರಾಜ್ಯ ಬಿಜೆಪಿ ನಾಯಕರಿಂದ ತೀವ್ರ ವಿರೋಧ ವ್ಯಕವಾಗಿದೆ.

    ಗುರುವಾರ ರಾತ್ರಿ ಬೆಂಗಳೂರು ಅಭಿವೃದ್ಧಿ ಮಂತ್ರಿಯನ್ನು ಸಂಸದ ತೇಜಸ್ವಿ ಸೂರ್ಯ (Tejasvi surya) ಭೇಟಿ ಮಾಡಿ ಸುರಂಗ ಮಾಡುವುದು ಬೇಡ ಎಂದು ಮನವಿ ಮಾಡಿದರು. ಟನಲ್ ಬದಲು ಸಾರ್ವಜನಿಕ ಸಾರಿಗೆಗೆ ಹೆಚ್ಚು ಒತ್ತು ಕೊಟ್ಟರೆ ಬೆಂಗಳೂರು ಟ್ರಾಫಿಕ್ ಸಮಸ್ಯೆ ಬಗೆಹರಿಯಲಿದೆ ಅಂತಾ ಡಿಕೆ ಶಿವಕುಮಾರ್‌ಗೆ ಸಂಸದ ತೇಜಸ್ವಿ ಸೂರ್ಯ ಸಲಹೆ ನೀಡಿದ್ದಾರೆ.

     

    ಈ ವೇಳೆ ಬೆಂಗಳೂರು ಅಭಿವೃದ್ದಿ ದೃಷ್ಟಿಯಿಂದ ಡಿಸಿಎಂ ಮುಂದೆ ಹಲವು ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಡಿಕೆ ಶಿವಕುಮಾರ್‌ಗೆ ತೇಜಸ್ವಿ ಸೂರ್ಯ ನೀಡಿದ್ದಾರೆ. ಇದಕ್ಕೆ ಉಪ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅನುದಾನ ತಾರತಮ್ಯ, ಆರ್‌ಆರ್‌ ನಗರದಲ್ಲಿ ಅರ್ಧಕ್ಕೆ ನಿಂತಿವೆ ಕಾಮಗಾರಿಗಳು – ಬಿಎಸ್‌ವೈಯಿಂದ 3 ದಿನ ಸತ್ಯಾಗ್ರಹದ ಎಚ್ಚರಿಕೆ

    ಬೆಂಗಳೂರು ಟನಲ್ – ಬೇಕಾ? ಬೇಡ್ವಾ?
    ಬೆಂಗಳೂರಿನ ಅತಿ ದಟ್ಟಣೆ ರಸ್ತೆಗಳಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಡಿಕೆ ಶಿವಕುಮಾರ್‌ ಮುಂದಾಗಿದ್ದಾರೆ. ಮೊದಲ ಹಂತದಲ್ಲಿ 65 ಕಿಲೋ ಮೀಟರ್ ಸುರಂಗ ಪಥಕ್ಕೆ ಚಿಂತನೆ ನಡೆದಿದ್ದು ಪ್ರತಿ ಕಿಲೋಮೀಟರ್‌ಗೆ 450 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

     

    ಸುರಂಗದಲ್ಲಿ ಒಟ್ಟು 6 ಪಥಗಳನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಬಳ್ಳಾರಿ ರಸ್ತೆ, ಎಸ್ಟೀಮ್ ಮಾಲ್, ಹಳೇ ಮದ್ರಾಸ್ ರಸ್ತೆ, ಟ್ರಿನಿಟಿ ರಸ್ತೆ, ಸರ್ಜಾಪುರ ರಸ್ತೆ, ಮೇಖ್ರಿ ಸರ್ಕಲ್, ಮಿಲ್ಲರ್ ರಸ್ತೆ, ಹೊಸೂರು ರಸ್ತೆ, ಕನಕಪುರ ರಸ್ತೆಯಿಂದ ಕೃಷ್ಣರಾವ್ ಪಾರ್ಕ್, ಮೈಸೂರು ರಸ್ತೆ, ಸಿರ್ಸಿ ಸರ್ಕಲ್, ಮಾಗಡಿ ರಸ್ತೆ, ತುಮಕೂರು ರಸ್ತೆ, ಯಶವಂತಪುರ, ಗೊರಗುಂಟೆ ಪಾಳ್ಯ, ಕೆ.ಆರ್.ಪುರ, ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ಸುರಂಗ ನಿರ್ಮಿಸಲು ಚಿಂತನೆ ನಡೆದಿದೆ.

    ಈಗ ಸುರಂಗ ಮಾರ್ಗದ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ ಆರಂಭವಾಗಿದೆ. ಈ ಸುರಂಗ ಮಾರ್ಗದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಮೆಂಟ್‌ ಮಾಡಿ