Tag: Tungabhadra Dam

  • Tungabhadra Dam | ನನ್ನ ಕಡೆಯಿಂದ ಪ್ರತಿ ಕಾರ್ಮಿಕನಿಗೆ 50 ಸಾವಿರ : ಜಮೀರ್‌ ಘೋಷಣೆ

    Tungabhadra Dam | ನನ್ನ ಕಡೆಯಿಂದ ಪ್ರತಿ ಕಾರ್ಮಿಕನಿಗೆ 50 ಸಾವಿರ : ಜಮೀರ್‌ ಘೋಷಣೆ

    ಬಳ್ಳಾರಿ: ತುಂಗಭದ್ರಾ ಜಲಾಶಯ (Tungabhadra Dam) ಸ್ಟಾಪ್‌ಲಾಗ್‌ ಗೇಟ್‌ ಅಳವಡಿಸುವ ಜಾಗಕ್ಕೆ ಇಂದು ವಿಜಯನಗರ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ (Zameer Ahmad) ಭೇಟಿ ನೀಡಿ ಕೆಲಸಗಾರರ ಜೊತೆ ಮಾತನಾಡಿ ಧೈರ್ಯ ತುಂಬಿದ್ದಾರೆ.

    ಈ ವೇಳೆ ಮಾತನಾಡಿದ ಅವರು, ಧೈರ್ಯ ಕಳೆದುಕೊಳ್ಳದೇ ಕೆಲಸ ಮಾಡಿ. ನಾಳೆ ಗೇಟ್ ಕೂಡಿಸಿ ಕಾರ್ಯ ಯಶಸ್ವಿ ಮಾಡಿ. ನನ್ನ ಕಡೆಯಿಂದ ಪ್ರತಿ ಕಾರ್ಮಿಕನಿಗೆ 50 ಸಾವಿರ ರೂ. ಕೊಡುತ್ತೇನೆ. ಧೈರ್ಯವಾಗಿ ಕೆಲಸ ಮಾಡಿ ಎಂದು ಹೇಳಿದರು.

    ಸ್ಟಾಪ್ ಲಾಗ್ ಗೇಟ್ ಕೂರಿಸಲು ಕನ್ನಯ್ಯ ಮತ್ತು ತಂಡದ ಸದಸ್ಯರು ಇಂದು ಹರಸಾಹಸ ಪಟ್ಟಿದ್ದಾರೆ. ಸಚಿವ ಜಮೀರ್ ಅಹ್ಮದ್ 50 ಸಾವಿರ ರೂ. ಕೊಡುತ್ತೇನೆ ಎಂದಿದ್ದಕ್ಕೆ ಕಾರ್ಮಿಕರು ಸಂತಸಪಟ್ಟಿದ್ದಾರೆ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ – ಪತಿ, ಮಕ್ಕಳ ವಿರುದ್ಧ ಕೊಲೆ ಆರೋಪ

     

    ಶುಕ್ರವಾರ ಮತ್ತೆ ಪ್ರಯತ್ನ
    ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್ ಕೊಚ್ಚಿ ಹೋಗಿ ಐದು ದಿನಗಳಾಗಿದೆ. ಅದರ ಜಾಗದಲ್ಲಿ ಇಂದು ತಾತ್ಕಾಲಿಕ ಗೇಟ್ ಕೂರಿಸುವ ಪ್ರಯತ್ನ ಫಲ ಕೊಡಲಿಲ್ಲ. ಗೇಟ್ ಎಲಿಮೆಂಟ್‌ನಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ಗ್ಯಾರಂಟಿಗಳ ಭಾರದಿಂದ ಕಂಗೆಟ್ಟ ಸರ್ಕಾರ – ಶೀ‍ಘ್ರವೇ ಆಪರೇಷನ್ ಬಿಪಿಎಲ್ ಕಾರ್ಡ್‌

    ಶುಕ್ರವಾರ ಮತ್ತೊಮ್ಮೆ ಪ್ರಯತ್ನ ನಡೆಸಲಾಗುತ್ತದೆ. ಮೊದಲ ಎಲಿಮೆಂಟ್ ಅಳವಡಿಕೆ ಯಶಸ್ವಿಯಾದಲ್ಲಿ 25 ಟಿಎಂಸಿ ನೀರು ಜಲಾಶಯದಿಂದ ಹೊರಹೋಗುವುದನ್ನು ತಪ್ಪಿಸಿದಂತಾಗುತ್ತದೆ. ಮೊನ್ನೆಯವರೆಗೂ 25 ಸಾವಿರ ಕ್ಯೂಸೆಕ್‌ಗಿಂತ ಕಡಿಮೆ ಇದ್ದ ಒಳಹರಿವು ನಿನ್ನೆಯಿಂದ 35ಸಾವಿರ ಕ್ಯೂಸೆಕ್‌ಗೆ ಹೆಚ್ಚಿದೆ.

     

  • ಟಿಬಿಡ್ಯಾಂಗೆ ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯ ಸ್ಥಗಿತ – 3 ಬಾರಿ ಯತ್ನಿಸಿ ವಿಫಲರಾದ ತಜ್ಞರ ತಂಡ

    ಟಿಬಿಡ್ಯಾಂಗೆ ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯ ಸ್ಥಗಿತ – 3 ಬಾರಿ ಯತ್ನಿಸಿ ವಿಫಲರಾದ ತಜ್ಞರ ತಂಡ

    – ನಾಳೆಗೆ ಗೇಟ್ ಅಳವಡಿಕೆ ಕಾರ್ಯ ಮುಂದೂಡಿಕೆ

    ಬಳ್ಳಾರಿ: ತುಂಗಭದ್ರಾ ಜಲಾಶಯದ (Tungabhadra Dam) 19ನೇ ಗೇಟ್ ಕೊಚ್ಚಿ ಹೋಗಿ ಐದು ದಿನಗಳಾಗಿದ್ದು, ಇಂದು ಆರಂಭಗೊಂಡಿದ್ದ ಜಲಾಶಯಕ್ಕೆ ತಾತ್ಕಾಲಿಕ ಗೇಟ್ ಅಳವಡಿಸುವ ಕಾರ್ಯ ಸ್ಥಗಿತಗೊಂಡಿದೆ. ಎರಡು ಮೂರು ಬಾರಿ ಪ್ರಯತ್ನಿಸಿ ತಜ್ಞರು ವಿಫಲರಾಗಿದ್ದಾರೆ. ಗೇಟ್‍ನಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಸಿಬ್ಬಂದಿ ಸ್ಥಗಿತಗೊಳಿಸಿದ್ದಾರೆ. ಇದೀಗ ಶುಕ್ರವಾರ ಗೇಟ್ ಅಳವಡಿಕೆ ಕಾರ್ಯ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸ್ಟಾಪ್ ಲಾಗ್ ಗೇಟ್ ಕೂರಿಸುವಾಗ ಸಣ್ಣ ಮಟ್ಟದ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಈ ವೇಳೆ ನೀರಿಗಿಳಿದು ತಾಂತ್ರಿಕ ಸಿಬ್ಬಂದಿ ಸಮಸ್ಯೆ ಸರಿಪಡಿಸಿ ಕೆಲಸ ಆರಂಭಿಸಿದ್ದರು. ಅಲ್ಲದೇ ಎರಡು ಬೃಹತ್ ಕ್ರೇನ್‍ಗಳ ಮೂಲಕ ಸ್ಟಾಪ್ ಲಾಗ್ ಗೇಟ್ ಇಳಿಸಿ, ಇದೇ ಮಾದರಿಯಲ್ಲಿ 5 ಎಲಿಮೆಂಟ್‍ಗಳನ್ನು ಇಳಿಸಿ ಕೂರಿಸುವ ಯೋಜನೆ ಹಾಕಿಕೊಂಡಿದ್ದರು.

    ಕಾರ್ಯಚರಣೆಯಲ್ಲಿ 80ಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದಾರೆ. ಮೊದಲ ಎಲಿಮೆಂಟ್ ಅಳವಡಿಕೆ ಯಶಸ್ವಿಯಾದಲ್ಲಿ 25 ಟಿಎಂಸಿ ನೀರು ಜಲಾಶಯದಿಂದ ಹೊರಹೋಗುವುದನ್ನು ತಪ್ಪಿಸಿದಂತಾಗುತ್ತದೆ. ಈ ಮಧ್ಯೆ ನಾಳೆ ಹೊತ್ತಿಗೆಲ್ಲಾ ಶುಭ ಸುದ್ದಿ ಕೊಡುತ್ತೇನೆ ಎಂದು ಡ್ಯಾಂ ಗೇಟ್ ನಿಪುಣ ಕನ್ನಯ್ಯ ನಾಯ್ಡು ಭರವಸೆ ನೀಡಿದ್ದರು. ಇದೊಂದು ದೊಡ್ಡ ಚಾಲೇಂಜ್ ಆಗಿದ್ದು, ಇದೇ ಮೊದಲ ಬಾರಿಗೆ ಈ ರೀತಿ ಪ್ರಯತ್ನ ಮಾಡತ್ತಿದ್ದೇವೆ ಎಂದಿದ್ದರು.

    ಸ್ಥಳದಲ್ಲೇ ಬೀಡು ಬಿಟ್ಟಿರುವ ತಜ್ಞ ಕನ್ನಯ್ಯ ನಾಯ್ಡು (Kannaiah Naidu) ನೇತೃತ್ವದ ತಂಡ ಈ ಕಾರ್ಯವನ್ನು ಶುಕ್ರವಾರ ಮುಂದುವರಿಸಲಿದೆ.

  • ತುಂಗಭದ್ರಾ ಜಲಾಶಯದಲ್ಲಿ ಭರದಿಂದ ಸಾಗಿದ ಗೇಟ್ ಅಳವಡಿಕೆ ಕಾರ್ಯ

    ತುಂಗಭದ್ರಾ ಜಲಾಶಯದಲ್ಲಿ ಭರದಿಂದ ಸಾಗಿದ ಗೇಟ್ ಅಳವಡಿಕೆ ಕಾರ್ಯ

    ಶುಕ್ರವಾರ ಶುಭ ಸುದ್ದಿ ಕೊಡ್ತೇವೆ: ಡ್ಯಾಂ ತಜ್ಞ ಕನ್ನಯ್ಯ ನಾಯ್ಡು

    ಬಳ್ಳಾರಿ: ಕೊಚ್ಚಿ ಹೋಗಿರುವ ತುಂಗಭದ್ರಾ ಡ್ಯಾಂನ (Tungabhadra Dam) 19ನೇ ಕ್ರಸ್ಟ್ ಗೇಟ್ ಜಾಗಕ್ಕೆ ಸ್ಟಾಪ್ ಲಾಗ್ ಗೇಟ್ ಅಳವಡಿಸುವ ಕೆಲಸ ಭರದಿಂದ ಸಾಗಿದೆ. ಗೇಟ್‍ನಿಂದ ಹೊರಹರಿವನ್ನು ತಡೆಯಲು ಜಿಂದಾಲ್‍ನಿಂದ ಮೂರು ಸ್ಟಾಪ್ ಲಾಗ್ ಗೇಟ್‍ಗಳು ಪೊಲೀಸ್ ಸರ್ಪಗಾವಲಿನಲ್ಲಿ ಜಲಾಶಯಕ್ಕೆ ಬಂದಿದ್ದು, ಮಧ್ಯಾಹ್ನದ ವೇಳೆಗೆ ಕೆಲಸ ಗೇಟ್ ಅಳವಡಿಸುವ ಕೆಲಸ ಆರಂಭವಾಗಲಿದೆ.

    ತಡರಾತ್ರಿ ಬರಬೇಕಿದ್ದ ಸ್ಟಾಪ್ ಲಾಗ್ ಗೇಟ್‍ಗಳಿಗೆ ಮಳೆ ಅಡ್ಡಿಯಾಗಿತ್ತು. ಇದರಿಂದಾಗಿ ಬೆಳಗ್ಗೆ ಗೇಟ್‍ಗಳನ್ನು ತರಲಾಯಿತು. ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಗೇಟ್ ಕೂರಿಸಲು ಕೊಟ್ಟ ಮೂರು ದಿನದ ಯೋಜನೆಯ ಸಿದ್ಧತೆ ಮಾಡಿಟ್ಟುಕೊಳ್ಳಲಾಗಿದೆ.

    ಒಂದು ಸ್ಟಾಪ್ ಲಾಗ್ ಗೇಟ್ ಹಾಕಿದ ಬಳಿಕ ವೆಲ್ಡಿಂಗ್ ಮಾಡಬೇಕು. ಅದು 40 ನಿಮಿಷದ ಒಳಗೆ ವೆಲ್ಡಿಂಗ್ ಮುಗಿಸಿ ಮತ್ತೊಂದು ಸ್ಟಾಪ್ ಲಾಗ್ ಗೇಟ್ ಹಾಕಬೇಕು. ಇಲ್ಲದೇ ಇದ್ದರೇ ಮತ್ತೇ ಮಾಡಿದ ಕೆಲಸವೆಲ್ಲಾ ವ್ಯರ್ಥ ಆಗಲಿದೆ. ಹೀಗಾಗಿ ಎಲ್ಲಾ ರೀತಿಯ ಪೂರ್ವ ಸಿದ್ಧತೆ ಕಾರ್ಯಗಳನ್ನ ಮುಗಿಸಿಕೊಂಡು, ಸ್ಟಾಪ್ ಲಾಗ್ ಗೇಟ್ ಅಳವಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು (Kannaiah Naidu), ಶುಕ್ರವಾರ ಶುಭ ಸುದ್ದಿ ಕೊಡುತ್ತೇನೆ ಎಂದು ಆತ್ಮವಿಶ್ವಾಸದಿಂದ ಮಾತನ್ನಾಡಿದ್ದಾರೆ. ಮೊದಲ ಗೇಟ್ ಕೂರಿಸೋದು ದೊಡ್ಡ ಚಾಲೆಂಜ್ ಆಗಿದೆ. ಅದನ್ನ ಹಾಕಿದ ನಂತರದಲ್ಲಿ ಅಷ್ಟೊಂದು ಕಷ್ಟ ಆಗಲ್ಲ. ನನ್ನ ಜೀವನದಲ್ಲಿ ಇದೊಂದು ದೊಡ್ಡ ಚಾಲೆಂಜ್. ಇದೇ ಮೊದಲ ಬಾರಿಗೆ ಈ ರೀತಿ ಪ್ರಯತ್ನ ಮಾಡುತ್ತಿದ್ದೇನೆ. ಎಲ್ಲಾ ಒಳ್ಳೆಯದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಒಟ್ಟು 5 ಸ್ಟಾಪ್ ಲಾಗ್ ಗೇಟ್‍ಗಳನ್ನ ಅಳವಡಿಕೆ ಮಾಡಲು ಕಾರ್ಯ ಪ್ರಾರಂಭ ಮಾಡಿದ್ದೇವೆ. ಒಂದು ಸ್ಟಾಪ್ ಲಾಗ್ ಗೇಟ್ 25 ಟಿಎಂಸಿ ನೀರನ್ನ ತಡೆಯುತ್ತದೆ. ಒಟ್ಟು 5 ಗೇಟ್‍ಗಳನ್ನ ಅಳವಡಿಕೆ ಮಾಡಲಾಗುತ್ತದೆ. ಅವಶ್ಯಕತೆ ಇದ್ದರೆ ಇನ್ನೂ ಮೂರು ಗೇಟ್‍ಗಳನ್ನ ಅಳವಡಿಕೆ ಮಾಡುತ್ತೇವೆ. ಒಟ್ಟು 90 ಟಿಎಂಸಿ ನೀರನ್ನು ಸಂಗ್ರಹ ಮಾಡಲು ಪ್ರಯತ್ನ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

  • ತುಂಗಭದ್ರಾ ಡ್ಯಾಂ ಕ್ರಸ್ಟ್‌ ಗೇಟ್ ಅಳವಡಿಕೆಗೆ ಮಳೆ ಭೀತಿ

    ತುಂಗಭದ್ರಾ ಡ್ಯಾಂ ಕ್ರಸ್ಟ್‌ ಗೇಟ್ ಅಳವಡಿಕೆಗೆ ಮಳೆ ಭೀತಿ

    ಕೊಪ್ಪಳ: ತುಂಗಭದ್ರಾ ಜಲಾಶಯದ (Tungabhadra Dam) ಕ್ರಸ್ಟ್‌ ಗೇಟ್‌ ಅಳವಡಿಕೆಗೆ ಮಳೆ ಭೀತಿ ಎದುರಾಗಿದೆ. ಆಗಸ್ಟ್‌ 17ರಿಂದ ಜಲಾನಯನ, ಮಲೆನಾಡಿನಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಕೊಟ್ಟಿದೆ.

    ಮಳೆ ಬಂದರೆ ತುಂಗಭದ್ರಾ ಜಲಾಶಯಕ್ಕೆ ಮತ್ತೆ ಒಳಹರಿವು ಹೆಚ್ಚಳವಾಗಲಿದೆ. ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದರೆ ಗೇಟ್ ಅಳವಡಿಕೆ ಸವಾಲಿನ ಕೆಲಸ ಆಗಲಿದೆ. ಮಳೆ ಮುನ್ಸೂಚನೆಯಿಂದ ಟಿಬಿ ಡ್ಯಾಂ ಬೋರ್ಡ್‌ ಮತ್ತು ತಜ್ಞರು ಚಿಂತಿತರಾಗಿದ್ದಾರೆ. ಇದನ್ನೂ ಓದಿ: ಟಿಬಿ ಡ್ಯಾಂಗೆ ಸ್ಟಾಪ್ ಲಾಗ್ ಗೇಟ್ ಅಳವಡಿಸಲು ಪ್ಲಾನ್ – ಏನೇನು ತಯಾರಿ ನಡೆಯುತ್ತಿದೆ?

    ಆ.16 ರ ಒಳಗೆ ಕೆಲಸ ಮುಗಿಸಲು ಪ್ಲಾನ್ ‌ಮಾಡಲಾಗಿತ್ತು. ಎರಡು ದಿನಗಳಲ್ಲಿ ಕೆಲಸ ಪೂರ್ಣಗೊಳಿಸಲು ಶತಪ್ರಯತ್ನ ಮಾಡಲಾಗಿತ್ತು. ಈಗಾಗಲೇ ತುಂಗಭದ್ರಾ ಜಲಾಶಯದ 19 ನೇ ಕ್ರಸ್ಟ್‌ ಗೇಟ್ ಅಳವಡಿಕೆಗೆ ಸಿದ್ಧವಾಗಿದೆ.

    ಅಧಿಕಾರಿಗಳು ನಿನ್ನೆ ಸಂಜೆಯಿಂದಲೇ ಗೇಟ್‌ಗಳ ಬಿಡಿ ಭಾಗಗಳನ್ನು ಜಲಾಶಯಕ್ಕೆ ಸಾಗಿಸಿದ್ದಾರೆ. ತಜ್ಞ ಕನ್ನಯ್ಯನಾಯ್ಡು ನೇತೃತ್ವದಲ್ಲಿ ಗೇಟ್‌ ಅಳವಡಿಕೆ ಕಾರ್ಯ ನಡೆಯಲಿದೆ. ಇಂದು ಬೆಳಗ್ಗೆಯೇ ತಜ್ಞರು ಮತ್ತು ಕಾರ್ಮಿಕರು ಜಲಾಶಯಕ್ಕೆ ಬಂದಿದ್ದಾರೆ. ಇಂದಿನಿಂದ ಗೇಟ್‌ ಅಳವಡಿಕೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಹೆಚ್ಚುವರಿ ನೀರು ಲೆಕ್ಕಕ್ಕೆ ಪರಿಗಣಿಸಿ – CWRC ಮುಂದೆ ಕರ್ನಾಟಕದ ಮನವಿ

  • ಟಿಬಿ ಡ್ಯಾಂಗೆ ಸ್ಟಾಪ್ ಲಾಗ್ ಗೇಟ್ ಅಳವಡಿಸಲು ಪ್ಲಾನ್ – ಏನೇನು ತಯಾರಿ ನಡೆಯುತ್ತಿದೆ?

    ಟಿಬಿ ಡ್ಯಾಂಗೆ ಸ್ಟಾಪ್ ಲಾಗ್ ಗೇಟ್ ಅಳವಡಿಸಲು ಪ್ಲಾನ್ – ಏನೇನು ತಯಾರಿ ನಡೆಯುತ್ತಿದೆ?

    – ನೀರಿನಲ್ಲೇ ಮೊದಲ ಬಾರಿಗೆ ಕಾರ್ಯಾಚರಣೆ

    ಬೆಂಗಳೂರು: ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟ್‌ ಗೇಟ್ ಕೊಚ್ಚಿಹೋಗಿ ಬರೋಬ್ಬರಿ 70 ಗಂಟೆ ಕಳೆದಿದೆ. ಇದೀಗ 19ನೇ ಗೇಟ್ ಜಾಗದಲ್ಲಿ ಸ್ಟಾಪ್‌ಲಾಗ್ ಗೇಟ್ ಅಳವಡಿಕೆ ಪ್ರಯತ್ನಗಳು ನಡೆದಿವೆ. ಜಲಾಶಯದ ನೀರನ್ನು ಕ್ರಸ್ಟ್ ಗೇಟ್ ಕೆಳಗಿನವರೆಗೂ ಖಾಲಿ ಮಾಡದೇ, ಅದಕ್ಕೂ ಮೊದಲೇ ಸ್ಟಾಪ್‌ಲಾಗ್ ಗೇಟ್ ಅಳವಡಿಕೆಗೆ ತುಂಗಾಭದ್ರಾ ಬೋರ್ಡ್, ಕರ್ನಾಟಕ (Karnataka) ಮತ್ತು ಆಂಧ್ರ (Andra Pradesh) ಅಧಿಕಾರಿಗಳು ತೀರ್ಮಾನಿಸಿದ್ದಾರೆ.

    ಸ್ಟಾಪ್ ಲಾಗ್‌ನ 10 ಪುಟಗಳ ನೀಲಿನಕ್ಷೆ ಆಧರಿಸಿ ಸಮರೋಪಾದಿಯಲ್ಲಿ ಐದು ಎಂಜಿನಿಯರಿಂಗ್ ಕಂಪನಿಗಳು ಗೇಟ್‌ಗಳನ್ನು ನಿರ್ಮಿಸುತ್ತಿವೆ. 20 ಅಡಿ ಎತ್ತರ, 60 ಅಡಿ ಅಗಲ, 48 ಟನ್ ಭಾರದ ಸ್ಟಾಪ್ ಲಾಗ್‌ಗೇಟನ್ನು ಏಕಕಾಲದಲ್ಲಿ ಡ್ಯಾಂ ಮೇಲೆ ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ತುರ್ತು ಗೇಟನ್ನು ಐದು ಭಾಗಗಳಾಗಿ ತಯಾರಿಸಲಾಗ್ತಿದೆ. ನಂತರ ಇದನ್ನು ಡ್ಯಾಂ ಮೇಲೆ ಕೊಂಡೊಯ್ದು, 18 ಮತ್ತು 19ನೇ ಪಿಯರ್‌ಗಳ ನಡುವೆ ಹಂತ ಹಂತವಾಗಿ ಎಲಿಮೆಂಟ್‌ಗಳನ್ನು ಇಳಿಸಿ ತುರ್ತು ಗೇಟ್ ನಿರ್ಮಿಸಲಾಗುತ್ತದೆ.

    ಬುಧವಾರ ಈ ಪ್ರಕ್ರಿಯೆ ಆರಂಭ ಆಗಲಿದ್ದು, ತುರ್ತು ಗೇಟ್ ಅಳವಡಿಕೆ ಕೆಲಸ ಮುಗಿಯಲು ಮೂರ್ನಾಲ್ಕು ದಿನ ಹಿಡಿಯಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಆಗಸ್ಟ್ 17ರಿಂದ ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಅಷ್ಟರೊಳಗೆ ಗೇಟ್ ಅಳವಡಿಸುವ ಗುರಿಯನ್ನು ಅಧಿಕಾರಿಗಳು ಹೊಂದಿದ್ದಾರೆ. ನೀರಿನಲ್ಲಿಯೇ ಗೇಟ್ ಅಳವಡಿಕೆ ಕಾರ್ಯಕ್ಕೆ ಮುಂದಾಗಿರುವುದು ದೇಶದ ಇತಿಹಾಸಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ.  ಇದನ್ನೂ ಓದಿ: ಹೆಚ್ಚುವರಿ ನೀರು ಲೆಕ್ಕಕ್ಕೆ ಪರಿಗಣಿಸಿ – CWRC ಮುಂದೆ ಕರ್ನಾಟಕದ ಮನವಿ

    ಈ ಕಾರ್ಯಾಚರಣೆ ನೇತೃತ್ವವನ್ನು ಡ್ಯಾಂ ಗೇಟ್‌ಗಳ ತಜ್ಞ ಕನ್ನಯ್ಯ ನಾಯ್ಡು ವಹಿಸಿದ್ದಾರೆ. ಮುಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಪಡೆಗಳು ಬೀಡುಬಿಟ್ಟಿವೆ. ಅಂದ ಹಾಗೇ, ಡ್ಯಾಂನಿಂದ ಈಗಾಗಲೇ 30ಕ್ಕೂ ಹೆಚ್ಚು ಟಿಎಂಸಿ ನೀರು ಹೊರಗೆ ಹರಿದಿದೆ. ಇಂದು ಹೊರಹರಿವಿನ ಪ್ರಮಾಣವನ್ನು 1.40 ಲಕ್ಷ ಕ್ಯುಸೆಕ್‌ಗೆ ಹೆಚ್ಚಿಸಲಾಗಿದೆ.

     

    ಗೇಟ್ ಅಳವಡಿಕೆಗೆ ಏನೆಲ್ಲಾ ತಯಾರಿ?
    19ನೇ ಗೇಟ್ ಜಾಗದಲ್ಲಿ ಸ್ಟಾಪ್‌ಲಾಗ್ ಅಳವಡಿಕೆ ಪ್ರಯತ್ನ ಮಾಡಲಾಗುತ್ತದೆ. 20 ಅಡಿ ಎತ್ತರ, 60 ಅಡಿ ಅಗಲ, 48 ಟನ್ ಭಾರದ ಸ್ಟಾಪ್‌ಲಾಗ್ ಗೇಟ್‌ ಅನ್ನು ಒಂದೇ ಬಾರಿಗೆ ಡ್ಯಾಂ ಮೇಲೆ ಕೊಂಡೊಯ್ಯುವುದು ಕಷ್ಟ ಸಾಧ್ಯ. ಹೀಗಾಗಿ ಗೇಟನ್ನು ಐದು ಭಾಗಗಳಾಗಿ ವಿಭಜಿಸಿ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ.

    ಮೊದಲ ಎಲಿಮೆಂಟ್‌ನ ಎತ್ತರ 2 ಅಡಿ, 2ನೇ ಎಲಿಮೆಂಟ್‌ನ ಎತ್ತರ 4 ಅಡಿ, 3ನೇ ಎಲಿಮೆಂಟ್‌ನ ಎತ್ತರ 6 ಅಡಿ, 4 ಮತ್ತು 5ನೇ ಎಲಿಮೆಂಟ್‌ನ ಎತ್ತರ ತಲಾ 4 ಅಡಿ ಇರಲಿದೆ. ಗೇಟ್‌ಗಳ ಎಲ್ಲಾ ಎಲಿಮೆಂಟ್‌ಗಳ ಅಗಲ 60 ಅಡಿ ಇರಲಿದ್ದು 2 ಕಡೆ ರೋಲರ್ ಅಳವಡಿಸಲಾಗುತ್ತದೆ. ಇದನ್ನೂ ಓದಿ: ಈಗ ನೀರು ಹರಿಸಿದ್ರೂ ಅಕ್ಟೋಬರ್‌ ವೇಳೆಗೆ ಡ್ಯಾಂ ತುಂಬುವ ಸಾಧ್ಯತೆಯಿದೆ – ಸಿದ್ದರಾಮಯ್ಯ ವಿಶ್ವಾಸ

    ಕ್ರೇನ್ ಸಹಾಯದಿಂದ ಗೇಟ್‌ನ ಐದು ಎಲಿಮೆಂಟ್‌ಗಳ ಅಳವಡಿಸಲಾಗುತ್ತದೆ. 18 ಮತ್ತು 19ನೇ ಪಿಯರ್‌ಗಳ ನಡುವೆ 5 ಹಂತಗಳಲ್ಲಿ ಎಲಿಮೆಂಟ್‌ಗಳ ಇಳಿಸಿ ಸ್ಟಾಪ್‌ಲಾಗ್ ಗೇಟ್‌ ಹಾಕಲಾಗುತ್ತದೆ.

  • Tungabhadra Dam| ಗೇಟ್‌ ಕೊಚ್ಚಿ ಹೋದ ಪ್ರಕರಣದ ತನಿಖೆಯಾಗಲಿ: ಹೆಚ್‌ಡಿಕೆ ಆಗ್ರಹ

    Tungabhadra Dam| ಗೇಟ್‌ ಕೊಚ್ಚಿ ಹೋದ ಪ್ರಕರಣದ ತನಿಖೆಯಾಗಲಿ: ಹೆಚ್‌ಡಿಕೆ ಆಗ್ರಹ

    ಬೆಂಗಳೂರು: ತುಂಗಭದ್ರಾ ಡ್ಯಾಂ (Tungabhadra Dam) ಗೇಟ್ ಕೊಚ್ಚಿ ಹೋದ ಆದ ಪ್ರಕರಣದ ತನಿಖೆಯಾಗಬೇಕು ಎಂದು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಕುಮಾರಸ್ವಾಮಿ (HD Kumaraswamy) ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ‌.‌

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ತುಂಗಭದ್ರಾ ಡ್ಯಾಂ 70 ವರ್ಷಗಳ ಹಳೆಯದ್ದು. ಡ್ಯಾಂ ಸೇಫ್ಟಿ ವರದಿ ನೀಡಲು ಮಾಡಿದ್ದ ಸಮಿತಿಗಳು ಸರಿಯಾಗಿ ಮಾಹಿತಿ ಕೊಟ್ಟಿಲ್ಲ. 133 ಟಿಎಂಸಿ ನೀರು ರಾಜ್ಯಕ್ಕೆ ಪಡೆಯಲು ಡ್ಯಾಂ ಕಟ್ಟಿದ್ದು.73 ಟಿಎಂಸಿ ಆಂದ್ರಕ್ಕೆ ಅಂತ ಆಗಿದೆ. 133 ಟಿಎಂಸಿಯಲ್ಲಿ ಈಗ 33 ಟಿಎಂಸಿ ಹೂಳು ತುಂಬಿಕೊಂಡಿದೆ. ಈಗ ಗೇಟ್ ಕೊಚ್ಚಿ ಹೋಗಿದೆ. ಡ್ಯಾಂ ಸೇಫ್ಟಿಗಾಗಿ ಇರುವ ಸಮಿತಿ ಎಲ್ಲವನ್ನು ಪರಿಶೀಲನೆ ಮಾಡಬೇಕು. ಸೇಫ್ಟಿ ಕಮಿಟಿ ಸಮಿತಿ ಮಾಹಿತಿ ಸರಿಯಾಗಿ ಕೊಟ್ಟಿಲ್ಲ ಎಂದು ಆರೋಪ ಮಾಡಿದರು.  ಇದನ್ನೂ ಓದಿ: ತುಂಗಭದ್ರಾ ಡ್ಯಾಂ ವಾರ್ಷಿಕ ನಿರ್ವಹಣಾ ಗುತ್ತಿಗೆಗೆ ಎಷ್ಟು ಕೋಟಿ ಹಣ ಸಂದಾಯವಾಗಿದೆ? – ಜನಾರ್ದನ ರೆಡ್ಡಿ ಪ್ರಶ್ನೆ

    ಈ ಸರ್ಕಾರದಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡೋಕೆ ಹಣ ನೀಡುವ ವ್ಯವಸ್ಥೆಯನ್ನು ಮೊದಲು ನಿಲ್ಲಿಸಿ. ಚೀಫ್ ಎಂಜಿನಿಯರ್ ಪೋಸ್ಟಿಂಗ್ ಮಾಡಲು ಎಷ್ಟು ಫಿಕ್ಸ್ ಮಾಡಿದ್ದೀರಿ? ನಾನು 14 ತಿಂಗಳು ಇವರ ಜೊತೆ ಇದ್ದು ಅನುಭವಿಸಿದ್ದೇನೆ. ಅವರು ಹೇಳಿದಂತೆ ನಾನು ಕೇಳಿದ್ದೇನೆ. ಚೀಫ್‌ ಎಂಜಿನಿಯರ್ ಸೇರಿ ಎಲ್ಲಾ ಪೋಸ್ಟ್ ಗೆ ಇಷ್ಟು ಹಣ ಅಂತ ನಿಗದಿ ಮಾಡಿ ಬಿಟ್ಟಿದ್ದಾರೆ‌. ಹಣ ಕೊಟ್ಟವನಿಗೆ ಗೇಟ್ ಏನಾದರೆ ಏನು? ಅವನು ಹಣ ಮಾಡಲು ಹೋಗುತ್ತಾನೆ ಎಂದು ಆರೋಪ ಮಾಡಿದರು.  ಇದನ್ನೂ ಓದಿ: ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ

    ತುಂಗಭದ್ರಾ ಡ್ಯಾಂ ಗೇಟ್ ತುಂಡಾದ ಪ್ರಕರಣ ತನಿಖೆಗೆ ಕೊಡಬೇಕು. ಸರ್ಕಾರ ಈಗ ತರಾತುರಿಯಲ್ಲಿ ಏನು ಮಾಡಲು ಹೋಗಬೇಡಿ. ತರಾತುರಿಯಲ್ಲಿ ಮಾಡಿ ಮುಂದೆ ಅನಾಹುತ ಮಾಡಿಕೊಳ್ಳಬೇಡಿ. ತಜ್ಞರ ನೇಮಕ ಮಾಡಿ ಸಮಸ್ಯೆ ಪರಿಹಾರ ಮಾಡಿ. ರೈತರಿಗೆ ವಿಶ್ವಾಸ ತುಂಬಿ ಬೆಳೆ ನಷ್ಟ ಆಗದಂತೆ ಕ್ರಮವಹಿಸಬೇಕು. ಪ್ರತಿ ವರ್ಷ ಎರಡು ಬೆಳೆ ಬೆಳೆಯುತ್ತಿದ್ದರು. ಈ ಬಾರಿ ಎರಡು ಬೆಳೆ ಸಾಧ್ಯವಾಗುವುದಿಲ್ಲ. ಒಂದು ಬೆಳೆ ಮಾತ್ರ ಈ ಬಾರಿ‌ ಬೆಳೆಯಲು ಸಾಧ್ಯ. ಇದನ್ನ ಸರಿಯಾಗಿ ಮಾಡುವ ಕೆಲಸ ಮಾಡಿ ಎಂದರು.

     

  • ಡ್ಯಾಂ ವಿಚಾರದಲ್ಲಿ ರಾಜಕೀಯ ಬೆರಸಬಾರದು – ಸಚಿವ ಪ್ರಿಯಾಂಕ್ ಖರ್ಗೆ

    ಡ್ಯಾಂ ವಿಚಾರದಲ್ಲಿ ರಾಜಕೀಯ ಬೆರಸಬಾರದು – ಸಚಿವ ಪ್ರಿಯಾಂಕ್ ಖರ್ಗೆ

    ಕಲಬುರಗಿ: ಬಿಜೆಪಿಯವರು (BJP) ಡ್ಯಾಂ ವಿಚಾರದಲ್ಲಿ ರಾಜಕೀಯ ಬೆರಸಬಾರದು.  ತಮ್ಮ ಆಡಳಿತ ಅವಧಿಯಲ್ಲಿ ಎಷ್ಟು ಡ್ಯಾಂಗಳ ಸ್ಟ್ರೆಂತ್ ಪರಿಶೀಲನೆ ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರಶ್ನೆ ಮಾಡಿದ್ದಾರೆ.

    ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಣೆಕಟ್ಟು ಬಹಳ ಹಳೆಯದಾಗಿ ಕ್ರಸ್ಟ್ ಗೇಟ್ ಕಳಚಿರಬಹುದು, ಬಿಜೆಪಿಯವರು ತಮ್ಮ ಆಡಳಿತ ಅವಧಿಯಲ್ಲಿ ಎಷ್ಟು ಡ್ಯಾಂಗಳ ಸ್ಟ್ರೆಂತ್ ಪರಿಶೀಲನೆ ಮಾಡಿದ್ದಾರೆ? ಅದರ ವರದಿಯ ದಾಖಲೆ ಕೊಡಲಿ. ಅವರ ವರದಿಯನ್ನು ನಾವು ನಿರ್ಲಕ್ಷ್ಯ ಮಾಡಿದ್ದರೆ ಆರೋಪ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.

    ನವಲಿ ಸಮಾನಾಂತರ ಜಲಾಯಶಕ್ಕೆ ಇನ್ನು ಮುಂದೆ ಗಮನ ಹರಿಸುತ್ತೇವೆ. ಅದರ ಬಗ್ಗೆ ನಮ್ಮ ಸರ್ಕಾರ ಯೋಚನೆ ಮಾಡುತ್ತದೆ. ರಾಜ್ಯದ ಎಲ್ಲಾ ಡ್ಯಾಂಗಳ ಸ್ಟ್ರೆಂತ್ ಬಗ್ಗೆ ಪರೀಶಿಲನೆ ಮಾಡುತ್ತೇವೆ. ಮುಡಾ ಕೇಸ್ ನಲ್ಲಿ ಸ್ಪಷ್ಟವಾಗಿ ರಾಜಕೀಯ ದುರುದ್ದೇಶವಿದೆ. ರಾಜ್ಯಪಾಲರ ಕಚೇರಿಯನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಸೇರಿ ರಾಜ್ಯಪಾಲರ ಕಚೇರಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಅನೇಕ ಕಡೆ ದುರುಪಯೋಗ ಮಾಡಿದ್ದಾರೆ. ನಾವು ಸ್ಪಷ್ಟನೆ ನೀಡಿದರೂ 24 ಗಂಟೆಯೊಳಗೆ ಯಾರೋ ದೂರು ಕೊಟ್ಟಿದ್ದಾರೆ ಎಂದು ನೋಟಿಸ್ ನೀಡಿದ್ದಾರೆ ಎಂದು ಖರ್ಗೆ ಹೇಳಿಕೆ ನೀಡಿದ್ದಾರೆ.

    ಇನ್ನೂ ಮುಡಾ ಹಗರಣ (Muda Case) ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮುಡಾ ಕೇಸ್ ಪಿಸಿ ಆಕ್ಟ್‌ನಲ್ಲಿಯೇ ಬರುವುದಿಲ್ಲ, ಆದರೂ ರಾಜ್ಯಪಾಲರು ನೋಟಿಸ್ ನೀಡಿದ್ದಾರೆ. ರಾಜ್ಯಪಾಲರು ಅವರ ಕೈಗೊಂಬೆಯಾಗಿದ್ದಾರೆ ಎಂದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ. ರಾಜ್ಯದಲ್ಲಿ ಬಿಜೆಪಿ V/s ಬಿಜೆಪಿಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಅಶೋಕ ನಾಯಕತ್ವ ಒಪ್ಪುತ್ತಿಲ್ಲ. ಬಿಜೆಪಿಯವರೇ ಅವರ ನಾಯಕತ್ವ ಒಪ್ಪುತ್ತಿಲ್ಲ. ಬಿಜೆಪಿಯವರು ʻದೆಹಲಿ ಚಲೋʼ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಕುಟುಕಿದ್ದಾರೆ.

    ಜುಲೈ 27 ರಂದು ಪಿಎಸ್‌ಐ ಪರಶುರಾಮ ನನನ್ನ್ನು ಭೇಟಿಯಾಗಿದ್ದು ನಿಜ. ಯಾದಗಿರಿ ಆಗುವುದಿಲ್ಲವೆಂದರೆ ನಮ್ಮಲ್ಲಿ ಬನ್ನಿ ಎಂದಿದ್ದರು. ನಾನು ಆ ಶಾಸಕರಿಗೆ ಮನವಿ ಮಾಡಿದ್ದೆ. ಆದರೆ ನಾವು ಬೇರೆಯವರ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಪಿಎಸ್‌ಐ ಸಾವಿನ ಬಗ್ಗೆ ನಿಷ್ಪಕ್ಷಪಾತ ತನೀಖೆ ಮಾಡುತ್ತಿದ್ದೆವೆ ಎಂದರು.

  • ಜಲಾಶಯ ನಿರ್ವಹಣೆಗೆ ಕೇಂದ್ರ ಸಮಿತಿ ಸಲಹೆ ಧಿಕ್ಕರಿಸಿದೆ ರಾಜ್ಯ ಸರ್ಕಾರ: ಜೋಶಿ ಆರೋಪ

    ಜಲಾಶಯ ನಿರ್ವಹಣೆಗೆ ಕೇಂದ್ರ ಸಮಿತಿ ಸಲಹೆ ಧಿಕ್ಕರಿಸಿದೆ ರಾಜ್ಯ ಸರ್ಕಾರ: ಜೋಶಿ ಆರೋಪ

    – ರಾಜ್ಯದ ಜಲಾಶಯಗಳ ವ್ಯವಸ್ಥಿತ ನಿರ್ವಹಣೆಯನ್ನು ಗಂಭೀರವಾಗಿ ಪರಿಗಣಿಸಲು ಸಲಹೆ

    ಹುಬ್ಬಳ್ಳಿ: ಜಲಾಶಯಗಳ (Reservoir)  ಸಮರ್ಪಕ ನಿರ್ವಹಣೆಗೆ ಕೇಂದ್ರ ಸಮಿತಿ ನೀಡಿದ ಸಲಹೆಗಳನ್ನು ರಾಜ್ಯ ಸರ್ಕಾರ ಧಿಕ್ಕರಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Pralhad Joshi) ಆರೋಪಿಸಿದ್ದಾರೆ.

    ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ (Crest Gate) ಬಿರುಕು ಬಿಟ್ಟು ಆತಂಕ ಸೃಷ್ಟಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ಜಲಾಶಯಗಳ ನಿರ್ವಹಣೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಟ್ರೈನಿ ವೈದ್ಯೆ ಹತ್ಯೆ ಪ್ರಕರಣ: ಆರೋಪಿಯ ಹೊಡೆತಕ್ಕೆ ಕನ್ನಡಕ ಒಡೆದು ಬಿದ್ದ ಗಾಜಿನಿಂದ ಕಣ್ಣಲ್ಲಿ ರಕ್ತ!

    ಬೇಸಿಗೆಯಲ್ಲಿ ಜಲಾಶಯ ಖಾಲಿ ಇದ್ದಾಗಲೆ ನಿರ್ವಹಣೆ ಕಾರ್ಯ ಕೈಗೊಳ್ಳಬೇಕಿತ್ತು. ಆದರೆ, ರಾಜ್ಯ ಸರ್ಕಾರ ಉದಾಸೀನ ತೋರಿದೆ. ಈಗದರ ಪರಿಣಾಮ ಎದುರಿಸುವಂತಾಗಿದೆ. ಕಳೆದ ಆರು ತಿಂಗಳ ಕಾಲ ಜಲಾಶಯ ಖಾಲಿ ಆಗಿತ್ತು. ರಾಜ್ಯ ಸರ್ಕಾರ ಆಗಲೇ ಸಮರ್ಪಕ ನಿರ್ವಹಣೆ ಕೈಗೊಳ್ಳಬೇಕಿತ್ತು. ಆದ್ರೆ ಅದನ್ನ ಮಾಡಲಿಲ್ಲ, ಕೇಂದ್ರ ಸರ್ಕಾರದ ಸಲಹೆಗಳನ್ನೂ ಪಾಲಿಸದೇ ಧಿಕ್ಕರಿಸಿತು. ಸರ್ಕಾರ ಮತ್ತು ನಿರ್ವಹಣೆ ಹೊಣೆ ಹೊತ್ತವರ ತೀವ್ರ ನಿರ್ಲಕ್ಷ ತೋರಿದ್ದರಿಂದಲೇ ಈ ಅವಘಡ ಸಂಭವಿಸಿದೆ ಎಂದು ಜೋಶಿ ಆರೋಪಿಸಿದ್ದಾರೆ.

    ರಸ್ತೆ ರಿಪೇರಿಗೂ ಹಣವಿಲ್ಲ:
    ರಾಜ್ಯ ಸರ್ಕಾರದ ಬಳಿ ರಸ್ತೆ ರಿಪೇರಿಗೂ ಹಣವಿಲ್ಲ. ಇನ್ನು ಸಮಾನಾಂತರ ಜಲಾಶಯ ಹೇಗೆ ನಿರ್ಮಾಣ ಮಾಡುತ್ತಾರೆ? ಎಂದು ಸಚಿವ ಜೋಶಿ ಪ್ರಶ್ನಿಸಿದ್ದಾರೆ.

    ಬೇಕಾಬಿಟ್ಟಿ ಆಡಳಿತ, ಭ್ರಷ್ಟಾಚಾರದ ಫಲವಾಗಿ ರಾಜ್ಯ ಸರ್ಕಾರ ದಿವಾಳಿಯಾಗಿದೆ. ಹಾಗಾಗಿ ಜಲಾಶಯಗಳ ವ್ಯವಸ್ಥಿತ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿದ್ದಾರೆ.

    10 ಸಾವಿರ ಕೋಟಿ ಎಲ್ಲಿ?
    ಹಿಂದೆ ಸಿದ್ದರಾಮಯ್ಯ (Siddaramaiah) ಅವರೇ ಮುಖ್ಯಮಂತ್ರಿ ಆಗಿದ್ದಾಗ ಜಲಾಶಯಗಳ ನಿರ್ವಹಣೆಗೆ ಪ್ರತಿ ವರ್ಷ 10,000 ಕೋಟಿ ವೆಚ್ಚ ಮಾಡುವುದಾಗಿ ಹೇಳಿದ್ದರು. ಆದರೆ, ಪ್ರತಿ ವರ್ಷವಲ್ಲ ಆಡಳಿತದ 5 ವರ್ಷವೂ ಹತ್ತು ಸಾವಿರ ಕೋಟಿ ಖರ್ಚು ಮಾಡಲಿಲ್ಲ ಎಂದು ಹೇಳಿದ್ದಾರೆ.

    ರಾಜ್ಯ ಸರ್ಕಾರ ಇನ್ನಾದರೂ ತುಂಗಭದ್ರಾ ಡ್ಯಾಂ ಸೇರಿದಂತೆ ರಾಜ್ಯದ ಎಲ್ಲಾ ಜಲಾಶಯಗಳ ನಿರ್ವಹಣೆಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Tumkur | ವಯಸ್ಸಾಗ್ತಿದೆ ಅಂತ ಆತುರಪಟ್ರೆ ಮಕ್ಮೇಲ್‌ ಟೋಪಿ – 3 ವರ್ಷದಲ್ಲಿ 5 ಮದ್ವೆಯಾಗಿದ್ದ ಐನಾತಿ ಮಹಿಳೆ ಅರೆಸ್ಟ್

    ರೈತರಿಗೆ ಅನುಕೂಲ ಕಲ್ಪಿಸಲಿ:
    ರಾಜ್ಯ ಸರ್ಕಾರ ಕೂಡಲೇ ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ಸರಿಪಡಿಸಲು ಮುಂದಾಗಬೇಕು. ಈ ಮೂಲಕ ರೈತರಿಗೆ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಬೇಕು ಎಂದು ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.‌

  • ಟಿಬಿ ಡ್ಯಾಂ ನೀರು ಉಳಿಸಲು ಹರಸಾಹಸ – ಇಂದೇ ತಾತ್ಕಾಲಿಕ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ

    ಟಿಬಿ ಡ್ಯಾಂ ನೀರು ಉಳಿಸಲು ಹರಸಾಹಸ – ಇಂದೇ ತಾತ್ಕಾಲಿಕ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ

    – 48 ಟನ್ ತೂಕದ ಗೇಟ್ ಸಿದ್ಧ, ತಯಾರಾದ ಗೇಟ್ ವೀಕ್ಷಿಸಲಿರುವ ಸಿಎಂ

    ಕೊಪ್ಪಳ: ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟ್‌ ನೂತನ ಗೇಟ್ ಅಳವಡಿಸುವ ಕಾರ್ಯ ಮಂಗಳವಾರ ಸಂಜೆಯಿಂದ ಆರಂಭವಾಗಲಿದೆ.

    ಸದ್ಯ ತಾತ್ಕಾಲಿಕ ಗೇಟ್ ಅಳವಡಿಕೆಗೆ ನಿರ್ಧರಿಸಲಾಗಿದ್ದು, ಸಂಜೆಯಿಂದಲೇ ಹೊಸ ಗೇಟ್ ಅಳವಡಿಕೆ ಕಾರ್ಯ ಆರಂಭವಾಗಲಿದೆ. ನೀರು ಖಾಲಿಯಾಗುತ್ತಿರುವ ಹಿನ್ನೆಲೆ ಮೊದಲೇ ತಾತ್ಕಾಲಿಕ ಗೇಟ್ ಅಳವಡಿಕೆ ಮಾಡಲು ಯತ್ನಿಸಲಾಗುತ್ತದೆ. ನೀರಲ್ಲಿಯೇ ಗೇಟ್ ಇಳಿಸಿ ಅಳವಡಿಕೆಗೆ ತಂತ್ರಜ್ಞರ ತಂಡ ಯತ್ನಿಸಲಿದೆ ಎಂದು ತಿಳಿದುಬಂದಿದೆ.

    ಹೊಸಪೇಟೆ ಮತ್ತು ಹೊಸಳ್ಳಿಯಲ್ಲಿ ಹೊಸ ಗೇಟ್ ತಯಾರಾಗುತ್ತಿದ್ದು, ನಾರಾಯಣ ಎಂಜಿನಿಯರ್ಸ್, ಹಿಂದೂಸ್ತಾನ್ ಎಂಜಿನಿಯರ್ಸ್, ಜಿಂದಾಲ್‍ನ ತಂತ್ರಜ್ಞರ ತಂಡದಿಂದ ಕೆಲಸ ನಡೆಯುತ್ತಿದೆ. ಕನ್ನಯ್ಯನಾಯ್ಡು ನೇತೃತ್ವದಲ್ಲಿ 20 ಅಡಿ ಅಗಲ 60 ಅಡಿ ಎತ್ತರದ ಗೇಟ್ ತಯಾರಾಗುತ್ತಿದೆ. ಹಂತ ಹಂತವಾಗಿ 4 ಅಡಿ ಅಗಲ, 12 ಅಡಿ ಎತ್ತರದ ಕಬ್ಬಿಣದ ಐದು ಹಲಗೆಗಳನ್ನು ತಯಾರು ಮಾಡಲಾಗಿದೆ. 48 ಟನ್ ತೂಕದ ಗೇಟ್‍ನ್ನು ಡ್ಯಾಂ ನಲ್ಲಿ ತೆಗೆದುಕೊಂಡು ಹೋಗಲು ಅಸಾಧ್ಯ. ಈ ಕಾರಣಕ್ಕಾಗಿಯೇ 5 ಭಾಗಗಳಲ್ಲಿ ಗೇಟ್ ಸಿದ್ಧತೆ ಕಾರ್ಯ ನಡೆಯುತ್ತಿದೆ. ಗೇಟ್ ಅಳವಡಿಕೆ ಯಶಸ್ವಿಯಾದ್ರೆ ಅಪಾರ ಪ್ರಮಾಣದ ನೀರು ಉಳಿಯಲಿದೆ. ಈಗಾಗಲೇ ಡ್ಯಾಂನಿಂದ ನದಿಗಳ ಮೂಲಕ 22 ಟಿಎಂಸಿ ನೀರು ಹರಿದು ಹೋಗಿದೆ ಎಂದು ತಜ್ಞರು ತಿಳಿಸಿದ್ದಾರೆ.

    ಇನ್ನೂ ತಯಾರಾದ ಗೇಟ್‍ಗಳನ್ನು ಸಿಎಂ ಸಿದ್ದರಾಮಯ್ಯ (Siddaramaiah) ಇಂದು (ಮಂಗಳವಾರ) ವೀಕ್ಷಿಸಲಿದ್ದಾರೆ. ಬಳಿಕ ತಯಾರಾದ ಹಲಗೆಗಳ ಜೋಡಣೆ, ಜಲಾಶಯಕ್ಕೆ ಅಳವಡಿಸುವ ಬಗ್ಗೆ ಅಧಿಕಾರಿಗಳು ಹಾಗೂ ತಂತ್ರಜ್ಞರ ತಂಡದ ಜೊತೆ ಚರ್ಚಿಸಲಿದ್ದಾರೆ.

    ಡ್ಯಾಂ ಗೇಟ್‌ ದುರಸ್ತಿಗೆ 2 ಪ್ಲ್ಯಾನ್‌

    ಪ್ಲ್ಯಾನ್‌ 1: ನೀರಿಗಿಳಿದು ದುರಸ್ತಿ ಕಾರ್ಯ ನಡೆಸುವುದಾಗಿ ಜಿಂದಾಲ್‌ ತಂಡ ಮುಂದೆ ಬಂದಿದೆ. ಈ ಯೋಜನೆಗೆ ಮೊದಲ ಆದ್ಯತೆ.

    ಪ್ಲ್ಯಾನ್‌ 2: ನೀರಿನ ರಭಸ ಜಾಸ್ತಿಯಾಗಿ ನೀರಿಗಿಳಿಯಲು ಸಾಧ್ಯವಾಗದೆ ಇದ್ರೆ, ಅರ್ಧ ನೀರು ಖಾಲಿ ಮಾಡಿ ದುರಸ್ತಿ ಕಾರ್ಯ

  • ಟಿಬಿ ಡ್ಯಾಂನ 19ನೇ ಗೇಟ್ ಕೊಚ್ಚಿ ಹೋಗಿ 46 ಗಂಟೆ; ಶರವೇಗದಲ್ಲಿ ಹೊಸ ಗೇಟ್‌ಗಳ ನಿರ್ಮಾಣ ಕಾರ್ಯ

    ಟಿಬಿ ಡ್ಯಾಂನ 19ನೇ ಗೇಟ್ ಕೊಚ್ಚಿ ಹೋಗಿ 46 ಗಂಟೆ; ಶರವೇಗದಲ್ಲಿ ಹೊಸ ಗೇಟ್‌ಗಳ ನಿರ್ಮಾಣ ಕಾರ್ಯ

    – ಈವರೆಗೂ 21 ಟಿಎಂಸಿ ನೀರು ಹೊರಕ್ಕೆ

    ಬೆಂಗಳೂರು: ಕರ್ನಾಟಕ, ಆಂಧ್ರ, ತೆಲಂಗಾಣದ 17 ಲಕ್ಷ ಎಕರೆಗೆ ನೀರುಣಿಸುವ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ (Tungabhadra Dam) ಕಳೆದ ಏಳು ದಶಕಗಳಲ್ಲಿ ಹಿಂದೆಂದೂ ಬಂದೊದಗದ ಅಪಾಯ ಎದುರಾಗಿದೆ. ಟಿಬಿ ಡ್ಯಾಂನ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿ ಈ ಕ್ಷಣಕ್ಕೆ ಭರ್ತಿ 46 ಗಂಟೆ.

    19ನೇ ಗೇಟ್ ಮೇಲೆ ಒತ್ತಡ ಬೀಳುತ್ತೆ ಎಂಬ ಕಾರಣಕ್ಕೆ ಎಲ್ಲಾ 32 ಕ್ರಸ್ಟ್ ಗೇಟ್‌ಗಳಿಂದ 99,567 ಕ್ಯೂಸೆಕ್ ನೀರು ಬಿಡಲಾಗ್ತಿದೆ. ಸದ್ಯ ಡ್ಯಾಂ ಒಳಹರಿವು 25,100 ಕ್ಯೂಸೆಕ್ ಇದೆ. ಈವರೆಗೂ 21 ಟಿಎಂಸಿ ನೀರನ್ನು ಜಲಾಶಯದಿಂದ ಹೊರಗೆ ಬಿಡಲಾಗಿದೆ. ಆಂಧ್ರದ ಶ್ರೀಶೈಲಂ, ನಾಗಾರ್ಜುನಸಾಗರ್, ಪ್ರಕಾಶಂ ಬ್ಯಾರೇಜ್‌ಗಳು ಈಗಾಗಲೇ ಭರ್ತಿ ಆಗಿರುವ ಕಾರಣ ಈ ನೀರೆಲ್ಲಾ ವೃಥಾ ಸಮುದ್ರ ಸೇರುತ್ತಿದೆ. ಇದನ್ನೂ ಓದಿ: ತುಂಗಭದ್ರಾ ಡ್ಯಾಂ ವಾರ್ಷಿಕ ನಿರ್ವಹಣಾ ಗುತ್ತಿಗೆಗೆ ಎಷ್ಟು ಕೋಟಿ ಹಣ ಸಂದಾಯವಾಗಿದೆ? – ಜನಾರ್ದನ ರೆಡ್ಡಿ ಪ್ರಶ್ನೆ

    ಗೇಟ್ ಕೊಚ್ಚಿಹೋದ ಸ್ಥಳದಲ್ಲಿ ಕೆಲಸ ಆರಂಭಿಸಬೇಕು ಎಂದರೆ ಡ್ಯಾಂ ಕ್ರಸ್ಟ್‌ಗೇಟ್‌ಗಿಂತ ಸ್ವಲ ಕೆಳಗಿನವರೆಗೂ ನೀರನ್ನು ಖಾಲಿ ಮಾಡಬೇಕು. ಅಂದರೆ, ಒಟ್ಟು 61 ಟಿಎಂಸಿ ನೀರು ಖಾಲಿ ಆಗಬೇಕು. ಈಗಾಗಲೇ 21 ಟಿಎಂಸಿ ನೀರು ಖಾಲಿ ಆಗಿದ್ದು, ಉಳಿದ ನೀರು ಖಾಲಿ ಆಗಲು ಕನಿಷ್ಠ ನಾಲ್ಕು ದಿನ ಬೇಕಾಗಬಹುದು ಎಂದು ಹೇಳಲಾಗ್ತಿದೆ. ಸರ್ಕಾರದ ಸೂಚನೆ ಮೇರೆಗೆ ಹೊಸಪೇಟೆಯ ನಾರಾಯಣ ಎಂಜಿನಿಯರಿಂಗ್ ವರ್ಕ್ಸ್, ಹೊಸಹಳ್ಳಿಯ ಹಿಂದೂಸ್ತಾನ್ ಎಂಜಿನಿಯರಿಂಗ್ ವರ್ಕ್ಸ್, ಹಮೀದ್ ಗ್ರೂಪ್ ಮತ್ತು ಜಿಂದಾಲ್‌ನಲ್ಲಿ ಸಮರೋಪಾದಿಯಲ್ಲಿ 4 ಹೊಸ ಗೇಟ್ ನಿರ್ಮಿಸುವ ಕೆಲಸ ನಡೆದಿದೆ.

    ಈ ಗೇಟ್‌ಗಳು ರೆಡಿಯಾಗಿ, ಅವುಗಳ ಪೈಕಿ ಒಂದನ್ನು ಆಯ್ಕೆ ಮಾಡಿ ಅದನ್ನು ಡ್ಯಾಂಗೆ ಅಳವಡಿಸಲು ಕನಿಷ್ಠ 7ರಿಂದ 10 ದಿನ ಹಿಡಿಯಬಹುದು ಎನ್ನಲಾಗ್ತಿದೆ. ಇದರ ನಡುವೆಯೇ ರೈತರ ಬೆಳೆ ಉಳಿಸುವ ಭರವಸೆಯನ್ನು ಜಲಸಂಪನ್ಮೂಲ ಮಂತ್ರಿಯೂ ಆಗಿರುವ ಡಿಸಿಎಂ ನೀಡಿದ್ದಾರೆ. ನಾಳೆ ಸಿಎಂ ಸಿದ್ದರಾಮಯ್ಯ ಡ್ಯಾಂಗೆ ಭೇಟಿ ಕೊಡಲಿದ್ದಾರೆ. ಇದನ್ನೂ ಓದಿ: Tungabhadra Dam | 5 ದಿನಗಳಲ್ಲಿ ಗೇಟ್‌ ರಿಪೇರಿ – ಸರ್ಕಾರಕ್ಕೆ ಅಧಿಕಾರಿಗಳ ಭರವಸೆ