Tag: Tungabhadra Dam

  • 2ನೇ ಬಾರಿಗೆ ತುಂಗಭದ್ರಾ ಜಲಾಶಯ ಭರ್ತಿ – ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆ

    2ನೇ ಬಾರಿಗೆ ತುಂಗಭದ್ರಾ ಜಲಾಶಯ ಭರ್ತಿ – ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆ

    ವಿಜಯನಗರ: 2ನೇ ಬಾರಿಗೆ ತುಂಗಭದ್ರಾ ಜಲಾಶಯ (Tungabhadra Dam) ಭರ್ತಿಯಾದ ಹಿನ್ನೆಲೆ ಇಂದು (ಭಾನುವಾರ) ಸಿಎಂ ಸಿದ್ದರಾಮಯ್ಯ (Siddaramaiah) ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ.

    ವಿಜಯನಗರ ಜಿಲ್ಲೆ ಹೊಸಪೇಟೆ ಬಳಿ ಇರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್‌ಗೆ ತಾತ್ಕಾಲಿಕ ಗೇಟ್ ಅಳವಳಡಿಕೆಯ 25 ದಿನಗಳ ಬಳಿಕ ಡ್ಯಾಂ ಭರ್ತಿಯಾಗಿದೆ. ಕಲ್ಯಾಣ- ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯ ಮತ್ತೆ ಭರ್ತಿ ಹಿನ್ನೆಲೆ ಸಿದ್ದರಾಮಯ್ಯ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಬಾಗಿನ ಅರ್ಪಣೆ ಕಾರ್ಯಕ್ರಮದ ಸಲುವಾಗಿ ತುಂಗಭದ್ರಾ ಜಲಾಶಯ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಜಲಾಶಯದ ಸೇತುವೆಯ ಮೇಲೆ ಕನ್ನಡ ಧ್ವಜಗಳು ರಾರಾಜಿಸುತ್ತಿವೆ. ಅಲ್ಲದೇ ತಳಿರು ತೋರಣ, ಬಾಳೆಯಿಂದ ಜಲಾಶಯಯವನ್ನು ಅಲಂಕರಿಸಲಾಗಿದೆ. ಇದನ್ನೂ ಓದಿ: Bengaluru | ಹೇಗೆ ನಡೆಯುತ್ತೆ ಭೀಕರ ಕೊಲೆಯ ಮರಣೋತ್ತರ ಪರೀಕ್ಷೆ?

    ಕ್ರಸ್ಟ್ ಗೇಟ್ ಕಿತ್ತುಹೋದ ಸಂದರ್ಭದಲ್ಲಿ ಸಿಎಂ ವೀಕ್ಷಣೆಗೆ ಆಗಮಿಸಿದ್ದರು. ಈ ವೇಳೆ ಮತ್ತೆ ಜಲಾಶಯ ತುಂಬುತ್ತೆ. ನಾನು ಬಾಗಿನ ಅರ್ಪಣೆ ಮಾಡಲು ಬರುವೆ ಎಂದು ಹೇಳಿದ್ದರು. ಅದೇ ರೀತಿ ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ಇಂದು ಬಾಗಿನ ಅರ್ಪಿಸಲಿದ್ದಾರೆ. ಬೆಳಗ್ಗೆ 11:0ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಜೊತೆ ಡಿಸಿಎಂ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಸೇರಿದಂತೆ ಹಲವು ಸಚಿವರು, ಶಾಸಕರು, ಸಂಸದರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಡಿಜಿಟಲ್ ಪೇಮೆಂಟ್‌ನಲ್ಲಿ ಬೆಂಗಳೂರಿಗರೇ ಫಸ್ಟ್ – ಸೆಪ್ಟೆಂಬರ್‌ನಲ್ಲಿ ಬಿಎಂಟಿಸಿಗೆ ಬರೋಬ್ಬರಿ 8 ಕೋಟಿ ಆದಾಯ

    ಬಾಗಿನ ಅರ್ಪಣೆ ಬಳಿಕ 19ನೇ ಕ್ರಸ್ಟ್ಗೇಟ್ ಅಳವಡಿಕೆ ಕಾಮಗಾರಿಯಲ್ಲಿ ಭಾಗಿಯಾದ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಕೊಪ್ಪಳದ ಮುನಿರಾಬಾದ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬೆಳಗ್ಗೆ 11:55 ಕ್ಕೆ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮ ಮುಕ್ತಾಯದ ಬಳಿಕ ಸಂಜೆ 4 ಗಂಟೆಗೆ ಸಿದ್ದರಾಮಯ್ಯ ಬೆಂಗಳೂರಿಗೆ ತೆರಳಲಿದ್ದಾರೆ. ಇದನ್ನೂ ಓದಿ: BBMP ವ್ಯಾಪ್ತಿಯ 110 ಹಳ್ಳಿ ಜನರ ಕನಸು ಶೀಘ್ರ ನನಸು – ಮುಂದಿನ ವಾರದಲ್ಲೇ ಮನೆಗಳಿಗೆ ಬರಲಿದೆ ಕಾವೇರಿ!

  • ತುಂಗಭದ್ರಾ ಜಲಾಶಯ ಭರ್ತಿಯಾದರೂ 1.75 ಲಕ್ಷ ಎಕರೆ ಜಮೀನಿಗೆ ನೀರಿಲ್ಲ – ರೈತರಿಂದ ಪ್ರತಿಭಟನೆ

    ತುಂಗಭದ್ರಾ ಜಲಾಶಯ ಭರ್ತಿಯಾದರೂ 1.75 ಲಕ್ಷ ಎಕರೆ ಜಮೀನಿಗೆ ನೀರಿಲ್ಲ – ರೈತರಿಂದ ಪ್ರತಿಭಟನೆ

    ರಾಯಚೂರು: ಜಿಲ್ಲೆಯ ತುಂಗಭದ್ರಾ ಎಡದಂಡೆ ಕಾಲುವೆ (Tungabhadra canal) ಕೆಳಭಾಗಕ್ಕೆ ತುಂಗಭದ್ರಾ ಜಲಾಶಯದ ನೀರು ತಲುಪದ ಹಿನ್ನೆಲೆ ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ರೈತರು ಬೃಹತ್ ಹೋರಾಟ (Farmers Protest) ನಡೆಸಿದ್ದಾರೆ. ಪಟ್ಟಣದ ಬಳಿ ಕಾಲುವೆ 85ನೇ ಮೈಲ್‌ ನಲ್ಲಿ ನೂರಾರು ರೈತರು ರಸ್ತೆ ತಡೆದು ಪ್ರತಿಭಟನೆ ಮಾಡಿದರು.

    ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಟ್ಟು ಎರಡು ತಿಂಗಳುಗಳು ಕಳೆದಿದೆ, ತುಂಗಭದ್ರ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಿದ್ದು ನದಿಗೆ ಪ್ರತಿ ನಿತ್ಯ 25 ಸಾವಿರ ಕ್ಯುಸೆಕ್‌ ನೀರು ಬಿಡಲಾಗುತ್ತಿದೆ. ಜಲಾಶಯದ ಒಳಹರಿವು ಕೂಡ ಉತ್ತಮವಾಗಿದೆ. ಇಷ್ಟಿದ್ದರೂ ಮಾನ್ವಿ ಮತ್ತು ಸಿರವಾರ ಭಾಗದ ಮೈಲ್ 85 ,82, 90, 92, 89ರ ವ್ಯಾಪ್ತಿಯ ಕೆಳ ಭಾಗದ ರೈತರ ಜಮೀನುಗಳಿಗೆ ಇನ್ನೂ ಕೂಡ ವಾರಬಂದಿಯಂತೆ ನೀರು ದೊರೆಯುತ್ತಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮುನಿರತ್ನ, ಹೆಚ್‌ಡಿಕೆ ವಿರುದ್ಧದ ಪ್ರಕರಣಗಳ ತನಿಖೆಗೆ ಒಕ್ಕಲಿಗ ಸಚಿವರು, ಶಾಸಕರ ನಿಯೋಗದಿಂದ ಸಿಎಂಗೆ ಮನವಿ

    ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಳಭಾಗದ 1 ಲಕ್ಷ 75 ಸಾವಿರ ಎಕರೆ ಜಮೀನಿಗೆ ನೀರು ದೊರೆಯುತ್ತಿಲ್ಲ. ಕೆಳಭಾಗದ ರೈತರು ಹಾಕಿದ ಬೆಳೆಗಳು ಒಣಗುತ್ತಿವೆ ಅಂತ ರೈತರು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮತ್ತೊಂದು ಬಾಲಿವುಡ್ ಪ್ರಾಜೆಕ್ಟ್ ಒಪ್ಪಿಕೊಂಡ ನಟಿ- ‘ಆಶಿಕಿ 2’ ಹೀರೋಗೆ ಸಮಂತಾ ಜೋಡಿ

  • ಟಿಬಿ ಡ್ಯಾಂ ಮೇಲೆ ಪ್ರೀ ವೆಡ್ಡಿಂಗ್ ಫೋಟೋಶೂಟ್

    ಟಿಬಿ ಡ್ಯಾಂ ಮೇಲೆ ಪ್ರೀ ವೆಡ್ಡಿಂಗ್ ಫೋಟೋಶೂಟ್

    – ನಿಷೇಧವಿದ್ದರೂ ಕ್ರಸ್ಟ್ ಗೇಟ್ ಮೇಲ್ಭಾಗದಲ್ಲಿಯೇ ಫೋಟೋಶೂಟ್ ಮಾಡಿಸಿಕೊಂಡ ಜೋಡಿ
    – ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ; ತನಿಖೆಗೆ ಆಗ್ರಹ

    ಕೊಪ್ಪಳ: ನಿಷೇಧವಿದ್ದರೂ ತುಂಗಭದ್ರಾ ಡ್ಯಾಂ (Tungabhadra Dam) ಬಳಿ ಜೋಡಿಯೊಂದು ಪ್ರೀ ವೆಡ್ಡಿಂಗ್ ಫೋಟೋಶೂಟ್ (Pre-Wedding Photoshoot) ಮಾಡಿಸಿಕೊಂಡಿದ್ದು, ಸ್ಥಳೀಯರು ಆಕ್ರೋಶಕ್ಕೆ ಕಾರಣವಾಗಿದೆ.

    ಹೊಸಪೇಟೆ (Hosapete) ಮೂಲದ ಜೋಡಿ ಫೋಟೋಶೂಟ್ ಮಾಡಿಸಿಕೊಂಡವರು ಎಂದು ತಿಳಿದುಬಂದಿದೆ. ಬುಧವಾರ (ಸೆ.4) ಬೆಳ್ಳಂಬೆಳಗ್ಗೆ ಫೋಟೋ ಹಾಗೂ ವಿಡಿಯೋ ಶೂಟ್ ಮಾಡಿಸಿಕೊಂಡಿದ್ದಾರೆ. ಸದ್ಯ ಪ್ರೀ ವೆಡ್ಡಿಂಗ್ ಶೂಟ್ ಫೋಟೋಸ್ ವೈರಲ್ ಆಗಿವೆ.ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಚಾಲನೆ ಹಿನ್ನೆಲೆ ಹೋಮ – 9 ಪೂರ್ಣ ಕುಂಭಗಳಿಗೆ ಪೂಜೆ ಸಲ್ಲಿಸಿದ ಡಿಕೆಶಿ

    ಕೆಎ-01 ಎಂ ವೈ 2174 ನಂಬರ್ ಹೊಂದಿರುವ ಕಾರಿನಲ್ಲಿ ಕೂತು ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡಿದ್ದಾರೆ. ಮೊನ್ನೆಯಷ್ಟೇ ರಿಪೇರಿಗೊಂಡ ಕ್ರಸ್ಟ್ ಗೇಟ್ ಆಪರೇಟರ್ ಸಿಸ್ಟಮ್ ಪಕ್ಕದಲ್ಲಿಯೇ ಕುಳಿತು ಫೋಟೋಶೂಟ್ ಮಾಡಿಸಿದ್ದಾರೆ.

    ಟಿಬಿ ಡ್ಯಾಂನ 19ನೇ ಕ್ರಸ್ಟ್ ಗೇಟ್ ಕಿತ್ತುಹೋದ ಪ್ರಕರಣ ಬಳಿಕ ಡ್ಯಾಂ ಮೇಲೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಸಾರ್ವಜನಿಕರು ಸೇರಿದಂತೆ ಮಾಧ್ಯಮದವರಿಗೂ ಪ್ರವೇಶವನ್ನು ನಿಷೇಧಿಸಲಾಗಿದೆ. ನಿಷೇಧವಿದ್ದರೂ ಜೋಡಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡಿದ್ದು ಹೇಗೆ ಎಂದು ಪ್ರಶ್ನೆ ವ್ಯಕ್ತವಾಗಿದೆ.ಇದನ್ನೂ ಓದಿ: ಗಣೇಶ ಮತ್ತೆ ಬಂದ.. ಪರಿಸರ ಸ್ನೇಹಿ ಮೂರ್ತಿಯ ಪ್ರಯೋಜನ ನಿಮಗೆಷ್ಟು ಗೊತ್ತು?

    ವೈರಲ್ ಆದ ಫೋಟೋಸ್‌ನಲ್ಲಿ ಜೋಡಿ ಇದ್ದ ಕಾರಿನ ಹಿಂದೆ ಇನ್ನೊಂದು ಕಾರು ನಿಂತಿರುವುದು ಕಾಣಿಸಿದೆ. ಫೋಟೋಶೂಟ್‌ಗೆ ಅಧಿಕಾರಿಗಳು ಸಾಥ್ ನೀಡಿದ್ದಾರಾ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ನಿಷೇಧಿತ ಸ್ಥಳದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ನಡೆದಿರುವ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

  • ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿ

    ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿ

    ಬಳ್ಳಾರಿ: ತುಂಗಭದ್ರಾ ಜಲಾಶಯದ (Tungabhadra Dam) ಕ್ರಸ್ಟ್ ಗೇಟ್ ಸಂಖ್ಯೆ 19ಕ್ಕೆ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ.

    ಕೊಚ್ಚಿ ಹೋಗಿದ್ದ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್‌ಗೆ ಎಲಿಮೆಂಟ್ ಅಳವಡಿಕೆ ಮಾಡಲಾಗಿತ್ತು. 19ನೇ ಗೇಟ್ ಸಂಪೂರ್ಣ ಬಂದ್ ಆಗಿದ್ದು, ಸೋರಿಕೆಯಾಗುತ್ತಿದ್ದ ನೀರಿಗೆ ಬ್ರೇಕ್ ಹಾಕಿದ್ದಾರೆ.  ಇನ್ನೂ ಇದೆ: ನಕಲಿ ಎನ್‍ಸಿಸಿ ಶಿಬಿರ ಆಯೋಜಿಸಿ 13 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ – 11 ಮಂದಿ ಅರೆಸ್ಟ್  

    ಆಗಸ್ಟ್ 17 ರಂದು ಸಂಜೆ ಸ್ಟಾಪ್ ಲಾಗ್ ಗೇಟ್‌ನ ಐದು ಎಲಿಮೆಂಟ್‌ಗಳನ್ನು ಜೋಡಿಸಲಾಗಿತ್ತು. ಎಲಿಮೆಂಟ್‌ಗಳ ಸಂದುಗಳಿಂದ ಸುಮಾರು 509 ಕ್ಯೂಸೆಕ್ ನಷ್ಟು ನೀರು ಹೊರ ಹರಿಯುತ್ತಿತ್ತು. ಸಿಬ್ಬಂದಿಗಳು ದುರಸ್ತಿ ಕಾರ್ಯ ಮುಂದುವರೆಸಿ ಗೇಟ್‌ನ ಸಂದುಗಳನ್ನು ಮುಚ್ಚಿ ಸೋರಿಕೆ ತಡೆದಿದ್ದಾರೆ. ಇದರೊಂದಿಗೆ ಡ್ಯಾಂನಿಂದ 10,700 ಕ್ಯೂಸೆಕ್ ನೀರು ಮಾತ್ರ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ಹರಿಸಲಾಗುತ್ತಿದೆ. ಈಗಾಗಲೇ ಜಲಾಶಯದಲ್ಲಿ ನೀರಿನ ಸಂಗ್ರಹಣೆ ಏರಿಕೆಯಾಗುತ್ತಿದೆ. ಇನ್ನೂ ಇದೆ: ಭಾರತೀಯರು ಜನಸಂಖ್ಯೆ ನಿಯಂತ್ರಣಕ್ಕೆ ಹೆಚ್ಚು ಗಮನ ಹರಿಸುತ್ತಿಲ್ಲ: ನಾರಾಯಣ ಮೂರ್ತಿ

    ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಬಳಿಕ ಭಾನುವಾರ ರಾತ್ರಿ 8 ಗಂಟೆ ವೇಳೆಗೆ ಸುಮಾರು 2 ಟಿಎಂಸಿ ನೀರು ಸಂಗ್ರಹವಾಗಿದೆ. ಗೇಟ್ ದುರಸ್ತಿ ಕಾಮಗಾರಿ ಯಶಸ್ವಿಯಾಗಿರುವ ಹಿನ್ನೆಲೆ ಜಲಾಶಯಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನೂ ಇದೆ: ಡ್ರಾಪ್‌ ನೆಪದಲ್ಲಿ ಲೈಂಗಿಕ ದೌರ್ಜನ್ಯ – ಡ್ಯಾನ್ಸ್‌ ಕೊರಿಯೋಗ್ರಾಫರ್‌ ಅರೆಸ್ಟ್‌

  • TB Dam | ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿ – ತಾಂತ್ರಿಕ ತಂಡಕ್ಕೆ 2 ಲಕ್ಷ ಬಹುಮಾನ

    TB Dam | ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿ – ತಾಂತ್ರಿಕ ತಂಡಕ್ಕೆ 2 ಲಕ್ಷ ಬಹುಮಾನ

    – ತಾತ್ಕಾಲಿಕವಾಗಿ ಅಳವಡಿಸಿದ ಗೇಟ್‌ಗಳಿಗೆ ನೀರಲ್ಲೇ ವೆಲ್ಡಿಂಗ್

    ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ (Tungabhadra Dam) ತಾತ್ಕಾಲಿಕ ಸ್ಟಾಪ್ ಲಾಗ್ ಗೇಟ್ (Stop Log Gate) ಅಳವಡಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾದ ತಾಂತ್ರಿಕ ವರ್ಗಕ್ಕೆ 2 ಲಕ್ಷ ರೂ. ಬಹುಮಾನ ನೀಡಿ ಕೊಪ್ಪಳ (Koppal) ಸಂಸದ ರಾಜಶೇಖರ ಹಿಟ್ನಾಳ್ (Rajashekar Hitnal) ಗೌರವಿಸಿದ್ದಾರೆ.

    ತುಂಗಭದ್ರಾ ಜಲಾಶಯದಲ್ಲಿ ಕೊಚ್ಚಿಹೋಗಿದ್ದ 19ನೇ ಗೇಟ್‌ನಲ್ಲಿ ಎಲ್ಲಾ 5 ಸ್ಟಾಪ್ ಲಾಗ್ ಅಳವಡಿಕೆ ಯಶಸ್ವಿಯಾಗಿದೆ. ಈ ಮೂಲಕ ಪೋಲಾಗುತ್ತಿದ್ದ ನೀರನ್ನು ಸಂಪೂರ್ಣವಾಗಿ ನಿಲ್ಲಿಸುವಲ್ಲಿ ತಜ್ಞರ ತಂಡ ಯಶಸ್ವಿಯಾಗಿದೆ. ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಕಾರ್ಯಾಚರಣೆಯಲ್ಲಿ ಭಾಗಿಯಾದ ತಾಂತ್ರಿಕ ವರ್ಗಕ್ಕೆ (Technical Team) 2 ಲಕ್ಷ ರೂ. ಬಹುಮಾನ ನೀಡಿ ಗೌರವಿಸಿದ್ದಾರೆ.ಇದನ್ನೂ ಓದಿ: TB Dam- ಎಲ್ಲಾ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿ

    ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಸೇರಿ ಇಡೀ ಕಾರ್ಯಾಚರಣೆಯಲ್ಲಿ ಭಾಗಿಯಾದ ತಂಡದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕ್ರಸ್ಟ್ ಗೇಟ್‌ಗೆ ಸ್ಟಾಪ್ ಲಾಗ್ ಎಲಿಮೆಂಟ್ ಅಳವಡಿಕೆ ಅಪರೇಷನ್ ಸಕ್ಸಸ್ ಹಿನ್ನೆಲೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ (J N Ganesh) ಅವರ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ಅಲ್ಲದೇ ಸಚಿವ ಜಮೀರ್ ಅಹಮ್ಮದ್ ಭರವಸೆ ನೀಡಿದಂತೆ ಕಾರ್ಯಕ್ರಮದಲ್ಲಿ ತಲಾ 50 ಸಾವಿರ ರೂ. ನಗದು ನೀಡಿ ಗೌರವಿಸಿದ್ದಾರೆ. ಜೊತೆಗೆ ನಾರಾಯಣ್ ಎಂಜಿನಿಯರಿಂಗ್, ಹಿಂದೂಸ್ತಾನಿ ಎಂಜಿನಿಯರಿಂಗ್ ಹಾಗೂ ಜಿಂದಾಲ್ ಕಂಪನಿ ಪ್ರತಿನಿಧಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಇದನ್ನೂ ಓದಿ : TB Dam| ಮೊದಲ ಎಲಿಮೆಂಟ್ ಅಳವಡಿಸುವ ಕಾರ್ಯ ಯಶಸ್ವಿ

    ತಾತ್ಕಾಲಿಕವಾಗಿ ಅಳವಡಿಸಿದ ಗೇಟ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ಲೀಕ್ ಆಗುತ್ತಿತ್ತು. ಆದರಿಂದ ತಾತ್ಕಾಲಿಕವಾಗಿ ಅಳವಡಿಸಿದ ಗೇಟ್‌ಗಳಿಗೆ ನೀರಲ್ಲೆ ವೆಲ್ಡಿಂಗ್ ಮಾಡುವ ಕೆಲಸ ಆರಂಭಿಸಿದ್ದಾರೆ. ಆಕ್ಸಿಜನ್ ಕಿಟ್‌ಗಳನ್ನು ಹಾಕಿಕೊಂಡು ಜೀವದ ಹಂಗು ತೊರೆದು ಸಿಬ್ಬಂದಿ ಗೇಟ್ ವೆಲ್ಡಿಂಗ್ ಮಾಡುತ್ತಿರುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಟಿಬಿ ಡ್ಯಾಂ ಮಂಡಳಿ ತಿಳಿಸಿದೆ.

  • TB Dam- ಎಲ್ಲಾ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿ

    TB Dam- ಎಲ್ಲಾ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿ

    – ತಿಮ್ಮಪ್ಪನ ಆಶೀರ್ವಾದದಿಂದ ಯಶಸ್ಸು: ಕನ್ನಯ್ಯ ನಾಯ್ಡು

    ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ (Tungabhadra Dam) ಮುರಿದಿದ್ದ 19ನೇ ಗೇಟ್‍ನಲ್ಲಿ ಎಲ್ಲಾ 5 ಸ್ಟಾಪ್ ಲಾಗ್ (Stop Log Gate) ಅಳವಡಿಕೆ ಯಶಸ್ವಿಯಾಗಿದೆ. ಈ ಮೂಲಕ ಪೋಲಾಗುತ್ತಿದ್ದ ನೀರನ್ನು ಸಂಪೂರ್ಣವಾಗಿ ನಿಲ್ಲಿಸುವಲ್ಲಿ ತಜ್ಞರ ತಂಡ ಯಶಸ್ವಿಯಾಗಿದೆ. ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ತಂಡ ಮೂರು ದಿನಗಳಿಂದ ಸ್ಟಾಪ್ ಲಾಗ್ ಗೇಟ್ ಅಳವಡಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿತ್ತು.

    ಅ.16 ರಂದು ಮೊದಲ ಎಲಿಮೆಂಟ್ ಅಳವಡಿಸಲಾಗಿತ್ತು. ಇದೀಗ ಶನಿವಾರ ಸಂಜೆ ಎಲ್ಲಾ ಸ್ಟಾಪ್ ಲಾಗ್ ಅಳವಡಿಕೆಯಿಂದಾಗಿ ಡ್ಯಾಂನಿಂದ ಹೊರ ಹೋಗುತ್ತಿದ್ದ ನೀರು ಬಂದ್ ಆಗಿದೆ. ಸದ್ಯ ಜಲಾಶಲಯದ ಎಲ್ಲ 33 ಗೇಟ್‍ಗಳನ್ನು ಮುಚ್ಚಲಾಗಿದೆ ಎಂದು ಟಿಬಿ ಡ್ಯಾಂ ಮಂಡಳಿ ತಿಳಿಸಿದೆ. ಸ್ಟಾಪ್ ಲಾಗ್ ಅಳವಡಿಕೆಯಿಂದಾಗಿ 70 ಟಿಎಂಸಿಯಷ್ಟು ನೀರು ಉಳಿಸಲು ಸಾಧ್ಯವಾಗಿದೆ. ಇನ್ನು ಆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಇದುವರೆಗೆ ಪೋಲಾದ ನೀರು ಮತ್ತೆ ತುಂಬಿಕೊಳ್ಳುವ ವಿಶ್ವಾಸ ಮೂಡಿದೆ. ಸದ್ಯ ಜಲಾಶಯಕ್ಕೆ 41 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು, ರೈತರ ಬದುಕು ಹಸನುಗೊಳಿಸಲು ನಾನು ಈ ಇಳಿವಯಸ್ಸಿನಲ್ಲೂ ದೂರದ ಹೈದರಾಬಾದ್‍ನಿಂದ ಆಗಮಿಸಿ ಸ್ಟಾಪ್ ಲಾಗ್ ಗೇಟ್ ಅಳವಡಿಸಿರುವೆ. ಹರಿಯುವ ನೀರಿನಲ್ಲೇ ಗೇಟ್ ಅಳವಡಿಕೆ ಸವಾಲಿನ ಕೆಲಸ ಆಗಿತ್ತು. ಆದರೂ ನಮ್ಮ ಮನೆ ದೇವರಾದ ತಿರುಪತಿ ತಿಮ್ಮಪ್ಪನ ಆಶೀರ್ವಾದದಿಂದ ಯಶಸ್ಸು ಸಾಧಿಸಿದ್ದೇವೆ. ನನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಟಿಬಿ ಡ್ಯಾಂನ 19ನೇ ಗೇಟ್ ನಲ್ಲಿ ಸ್ಟಾಪ್ ಲಾಗ್ ಅಳವಡಿಸುವ ಪ್ರಕ್ರಿಯೆ ಯಶಸ್ವಿಯಾಗಿ ಮುಗಿದಿದೆ. ಸದ್ಯ ಡ್ಯಾಂನಿಂದ ಪೋಲಾಗುತ್ತಿದ್ದ ನೀರನ್ನು ನಿಲ್ಲಿಸುವಲ್ಲಿ ತಂಡ ಯಶಸ್ವಿಯಾಗಿದೆ. ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ದುರಸ್ತಿ ಕಾರ್ಯ ಮಾಡಿದ್ದಾರೆ. ಆ ಎಲ್ಲಾ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ.

    70 ವರ್ಷದ ನಂತರ ಟಿಬಿ ಡ್ಯಾಂನಲ್ಲಿ ಇದೇ ಮೊದಲ ಬಾರಿಗೆ ಗೇಟ್ ತುಂಡಾಗಿದೆ. ಇದರಿಂದ 30ಕ್ಕೂ ಹೆಚ್ಚು ಟಿಎಂಸಿ ನೀರು ಪೋಲಾಗಿತ್ತು. ನೀರಿನ ರಭಸಕ್ಕೆ ಗೇಟ್ ಕೊಚ್ಚಿ ಹೋಗಿದೆ ಎಂದು ಭಾವಿಸಲಾಗಿತ್ತು. ಆದರೆ ಗೇಟ್ ಡ್ಯಾಂನ ಸಮೀಪದಲ್ಲೇ ತುಂಡಾಗಿ ಬಿದ್ದಿರುವುದು ಗೋಚರಿಸಿದೆ.

  • TB Dam | ಮೂರನೇ ಸ್ಟಾಪ್‌ ಗೇಟ್‌ ಅಳವಡಿಕೆ ಯಶಸ್ವಿ – ಎಲ್ಲಾ ಗೇಟ್‌ ಬಂದ್‌

    TB Dam | ಮೂರನೇ ಸ್ಟಾಪ್‌ ಗೇಟ್‌ ಅಳವಡಿಕೆ ಯಶಸ್ವಿ – ಎಲ್ಲಾ ಗೇಟ್‌ ಬಂದ್‌

    ಬಳ್ಳಾರಿ: ತುಂಗಭದ್ರಾ ಜಲಾಶಯದ (Tungabhadra Dam) ಮೂರನೇ ಸ್ಟಾಪ್‌ ಲಾಗ್‌ ಗೇಟ್ (Stop Log Gate) ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ. ಗೇಟ್‌ ಅಳವಡಿಕೆ ಯಶಸ್ವಿಯಾದ ಬೆನ್ನಲ್ಲೇ ಜಲಾಶಯದ ಎಲ್ಲಾ 32 ಗೇಟ್‌ಗಳನ್ನು ಸಿಬ್ಬಂದಿ ಬಂದ್ ಮಾಡಿ ನೀರು ಹರಿಯುವುದನ್ನು ನಿಲ್ಲಿಸಿದ್ದಾರೆ.

    ಈಗ ಕೇವಲ ಗೇಟ್‌ 19 ರಿಂದ ಅಲ್ಪ ಪ್ರಮಾಣದ ನೀರು ಮಾತ್ರ ಹೊರ ಹೋಗುತ್ತಿದೆ. ಸದ್ಯ 70 ಟಿಎಂಸಿ ನೀರು ಜಲಾಶಯದಲ್ಲಿದೆ. 105 ಟಿಎಂಸಿ ನೀರು ನಿಲ್ಲಿಸಲು ಐದು ಸ್ಟಾಪ್‌ ಗೇಟ್‌ಗಳನ್ನು ಅಳವಡಿಲು ಟಿಬಿ ಬೋರ್ಡ್‌ ಮುಂದಾಗಿದ್ದು ಇಂದು ಅಥವಾ ನಾಳೆ ಸಂಪೂರ್ಣ ಗೇಟ್ ಅಳವಡಿಕೆ ಕಾರ್ಯ ಮುಕ್ತಾಯವಾಗಲಿದೆ.

     

    1,633 ಅಡಿ ಎತ್ತರದ ಜಲಾಶಯದಲ್ಲಿ ಈಗ  1625 ಅಡಿ ನೀರು ಸಂಗ್ರಹವಾಗಿದೆ. 105 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಈಗ 72 ಟಿಎಂಸಿ ನೀರು ಸಂಗ್ರಹವಾಗಿದೆ. 84,796 ಕ್ಯೂಸೆಕ್ ಒಳಹರಿವು ಇದೆ.

    19ನೇ ಕ್ರಸ್ಟ್‌ಗೇಟ್‌ ಕೊಚ್ಚಿ ಹೋಗಿದ್ದರಿಂದ ಒಟ್ಟು ಐದು ಗೇಟ್‌ ಅಳವಡಿಸುವ ಕಾರ್ಯ ಆರಂಭವಾಗಿದೆ. ಶುಕ್ರವಾರ ರಾತ್ರಿ ಮೊದಲ ಸ್ಟಾಪ್‌ಗೇಟ್‌ ಅನ್ನು ಯಶಸ್ವಿಯಾಗಿ ಅಳವಡಿಸಲಾಗಿತ್ತು.

  • TB Dam| ಮೊದಲ ಎಲಿಮೆಂಟ್ ಅಳವಡಿಸುವ ಕಾರ್ಯ ಯಶಸ್ವಿ

    TB Dam| ಮೊದಲ ಎಲಿಮೆಂಟ್ ಅಳವಡಿಸುವ ಕಾರ್ಯ ಯಶಸ್ವಿ

    ಬಳ್ಳಾರಿ: ತುಂಗಭದ್ರಾ ಜಲಾಶಯದ (Tungabhadra Dam) ಸ್ಟಾಪ್ ಲಾಗ್ ಗೇಟ್ ಅಳವಡಿಸುವ ಪ್ರಯತ್ನಕ್ಕೆ ಫಲ ಸಿಕ್ಕಿದ್ದು, ಇಂದು ರಾತ್ರಿ ಮೊದಲ ಎಲಿಮೆಂಟ್‌ ಅನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.

    ಮೊದಲ ಎಲಿಮೆಂಟ್‌ನ ಮೇಲ್ಭಾಗದಿಂದ ಈಗ ನೀರು ಹರಿಯುತ್ತಿದೆ. ಇನ್ನೂ ನಾಲ್ಕು ಗೇಟ್ ಅಳವಡಿಸುವ ಪ್ರಕ್ರಿಯೆ ಬಾಕಿಯಿದೆ. ಕನ್ನಯ್ಯ ನಾಯ್ಡು ನೇತೃತ್ವದ ತಂಡದಿಂದ ತಾತ್ಕಾಲಿಕ ಗೇಟ್ ಕೂರಿಸುವ ಕಾರ್ಯಾಚರಣೆ ನಡೆಯುತ್ತಿದ್ದು ಈಗ ಎರಡನೇ ಇದೀಗ ಎರಡನೇ ಎಲಿಮೆಂಟ್ ಅಳವಡಿಸುವ ಕೆಲಸ ಆರಂಭವಾಗಿದೆ.

    ರಭಸದಿಂದ ಹರಿವ ನೀರಿನಲ್ಲೇ ಗೇಟ್ ಎಲಿಮೆಂಟ್ ಕೂರಿಸಲು ತಜ್ಞರು ನಡೆಸುತ್ತಿರುವ ಪ್ರಯತ್ನ ಕೊನೆಗೂ ಫಲ ನೀಡಿದ್ದು ಸಚಿವ ಶಿವರಾಜ್‌ ತಂಗಡಗಿ ಅವರು ಕಾರ್ಮಿಕರ ಜೊತೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

    ಗುರುವಾರ ಜಿಂದಾಲ್ ಕಂಪನಿ (Jindal Company) ನಿರ್ಮಿಸಿದ್ದ ಗೇಟ್ ಅಳವಡಿಸಲು ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಹೀಗಾಗಿ ಇಂದು ಹೊಸ ಗೇಟ್ ಕೂರಿಸುವ ಪ್ರಯತ್ನ ನಡೆಯಿತು. ಕ್ರೇನ್ ಚಲನೆಗೆ 19ನೇ ಗೇಟ್ ಮೇಲ್ಭಾಗದಲ್ಲಿದ್ದ ಸ್ಕೈವಾಕ್‌ ಅಡ್ಡಿಯಾಗಿದ್ದು, ಅದನ್ನು ತೆರವು ಮಾಡಿ ಈಗ ಎಲಿಮೆಂಟ್‌ ಅಳವಡಿಸಲಾಗಿದೆ.

    ತುಂಗಭದ್ರಾ ಜಲಾಶಯದ ನೀರಿನ ಮಟ್ಟ 65 ಟಿಎಂಸಿಗೆ ಇಳಿದಿದೆ. ಹೊರಹರಿವಿನ ಪ್ರಮಾಣವನ್ನು 86 ಸಾವಿರ ಕ್ಯೂಸೆಕ್‌ಗೆ ಇಳಿಸಲಾಗಿದೆ. ಒಳಹರಿವು 33 ಸಾವಿರ ಕ್ಯೂಸೆಕ್ ಇದೆ.

  • Tungabhadra Dam |ಈವರೆಗೂ ಸಾಧ್ಯವಾಗಿಲ್ಲ ತಾತ್ಕಾಲಿಕ ಗೇಟ್- ಮಾಧ್ಯಮಗಳ ಚಿತ್ರೀಕರಣಕ್ಕೆ ನಿರ್ಬಂಧ

    Tungabhadra Dam |ಈವರೆಗೂ ಸಾಧ್ಯವಾಗಿಲ್ಲ ತಾತ್ಕಾಲಿಕ ಗೇಟ್- ಮಾಧ್ಯಮಗಳ ಚಿತ್ರೀಕರಣಕ್ಕೆ ನಿರ್ಬಂಧ

    ಬಳ್ಳಾರಿ: ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟ್‌ ಗೇಟ್‌ ಕೊಚ್ಚಿ ಹೋಗಿ ಇಂದಿಗೆ ಆರು ದಿನ ಕಳೆದಿದ್ದು ಈವರೆಗೂ ಸ್ಟಾಪ್ ಲಾಗ್ ಗೇಟ್ ಅಳವಡಿಸಲು ಸಾಧ್ಯವಾಗಿಲ್ಲ.

    ಈವರೆಗೂ 40 ಟಿಎಂಸಿ ನೀರು ಖಾಲಿ ಆಗಿದೆ. ರಭಸದಿಂದ ಹರಿವ ನೀರಿನಲ್ಲೇ ಗೇಟ್ ಎಲಿಮೆಂಟ್ ಕೂರಿಸಲು ತಜ್ಞರು ನಡೆಸುತ್ತಿರುವ ಪ್ರಯತ್ನ ಇನ್ನೂ ಫಲ ಕೊಟ್ಟಿಲ್ಲ. ಇದು ತುಂಗಭದ್ರೆಯನ್ನೇ ನಂಬಿಕೊಂಡಿರೋ ರೈತರ (Farmers) ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ನಾಳೆ ರಾಜ್ಯಾದ್ಯಂತ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಸೇವೆ ಬಂದ್ – ದಿನೇಶ್ ಗುಂಡೂರಾವ್ ಪರೋಕ್ಷ ಬೆಂಬಲ

     

    ಗುರುವಾರ ಜಿಂದಾಲ್ ಕಂಪನಿ (Jindal Company) ನಿರ್ಮಿಸಿದ್ದ ಗೇಟ್ ಅಳವಡಿಸಲು ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಹೀಗಾಗಿ ಇಂದು ಹೊಸ ಗೇಟ್ ಕೂರಿಸುವ ಪ್ರಯತ್ನ ನಡೆಯಿತು. ಕ್ರೇನ್ ಚಲನೆಗೆ 19ನೇ ಗೇಟ್ ಮೇಲ್ಭಾಗದಲ್ಲಿದ್ದ ಸ್ಕೈವಾಕ್‌ ಅಡ್ಡಿಯಾಗಿದ್ದು, ಅದನ್ನು ತೆರವು ಮಾಡಲಾಗಿದೆ. ಇದನ್ನೂ ಓದಿ: ಪಶ್ಚಿಮ ಘಟ್ಟದಲ್ಲಿ ಭೂಪರಿವರ್ತನೆಗೆ ತಾತ್ಕಾಲಿಕ ತಡೆ: ಈಶ್ವರ ಖಂಡ್ರೆ


    ಈ ಮಧ್ಯೆ ಕಾರ್ಯಾಚರಣೆ ನೇತೃತ್ವ ವಹಿಸಿರುವ ಕನ್ನಯ್ಯ ನಾಯ್ಡು, ರಾಜ್ಯದ ಮಾಧ್ಯಮಗಳನ್ನು (Media) ದೂರ ಇಟ್ಟಿದ್ದಾರೆ. ಖುದ್ದು ಜಿಲ್ಲಾಡಳಿತ ಫೋಟೋ ವೀಡಿಯೋಗೆ ನಿರ್ಬಂಧ ಹೇರಿದೆ. ಡ್ಯಾಂ ಅವರಣವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಿದೆ. ಆದರೆ ಕವರೇಜ್ ಮಾಡಲು ತೆಲುಗು ಮೀಡಿಯಾಗಳಿಗೆ ಅವಕಾಶ ಕೊಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದು ಚರ್ಚೆಗೆ ಗ್ರಾಸವಾಗಿದೆ.

    ತುಂಗಭದ್ರಾ ಜಲಾಶಯದ ನೀರಿನ ಮಟ್ಟ 65 ಟಿಎಂಸಿಗೆ ಇಳಿದಿದೆ. ಹೊರಹರಿವಿನ ಪ್ರಮಾಣವನ್ನು 86 ಸಾವಿರ ಕ್ಯೂಸೆಕ್‌ಗೆ ಇಳಿಸಲಾಗಿದೆ. ಒಳಹರಿವು 33 ಸಾವಿರ ಕ್ಯೂಸೆಕ್ ಇದೆ.

  • ತುಂಗಭದ್ರಾ ಡ್ಯಾಂ: ಗೇಟ್‌ ಅಳವಡಿಕೆ ಮೊದಲ ಯತ್ನ ವಿಫಲ!

    ತುಂಗಭದ್ರಾ ಡ್ಯಾಂ: ಗೇಟ್‌ ಅಳವಡಿಕೆ ಮೊದಲ ಯತ್ನ ವಿಫಲ!

    – 2ನೇ ಪ್ಲಾನ್‌ ಮಾಡಿಕೊಂಡಿರೋ ತಜ್ಞರು; ಇಂದು ಮತ್ತೆ ಗೇಟ್‌ ಅಳವಡಿಕೆ ಕಾರ್ಯ

    ಬಳ್ಳಾರಿ: ತುಂಗಭದ್ರಾ ಡ್ಯಾಂನ 19ನೇ ತೂಬಿನಲ್ಲಿ ಗೇಟ್‌ ಅಳವಡಿಸುವ ಮೊದಲ ಪ್ರಯತ್ನ ವಿಫಲವಾಗಿದೆ. ಎರಡನೇ ಪ್ಲಾನ್‌ ಮಾಡಿಕೊಂಡಿರುವ ತಜ್ಞರು ಇಂದು ಗೇಟ್‌ ಅಳವಡಿಸುವ ಕಾರ್ಯ ನಡೆಸಲಿದ್ದಾರೆ.

    ಮೊದಲ ಪ್ರಯತ್ನದಲ್ಲಿ ಜಿಂದಾಲ್‌ ಕಂಪನಿಯ ಗೇಟ್‌ ಎಲಿಮೆಂಟ್‌ನ ಕೊಂಡಿಗಳು 19ನೇ ತೂಬಿನ ಕಲ್ಲಿನ ಪಿಲ್ಲರ್‌ನ ಕೊಂಡಿಗಳಿಗೆ ಸರಿಯಾಗಿ ಹೊಂದಾಣಿಕೆ ಆಗಿಲ್ಲ. ಹೀಗಾಗಿ ಹೊಸಳ್ಳಿಯಲ್ಲಿ ಸಿದ್ಧಪಡಿಸಲಾದ ಗೇಟ್‌ ಎಲಿಮೆಂಟ್‌ ತಂದಿರಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    1,625 ಅಡಿ ಎತ್ತರದಲ್ಲಿ ಡ್ಯಾಂ ನೀರು ಇರುವಾಗ ಸ್ಟಾಪ್ ಲಾಗ್ ಅಳವಡಿಸಲು ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ತಾಂತ್ರಿಕ ತೊಂದರೆಯಿಂದಾಗಿ ನಿನ್ನೆ ಸ್ಪಾಪ್ ಲಾಗ್‌ನ ಒಂದು ಎಲಿಮೆಂಟ್ ಅಳವಡಿಸಲು ಆಗಲಿಲ್ಲ. ಮತ್ತೆ 1,621 ಅಡಿಗೆ ನೀರಿನ ಮಟ್ಟ ಬಂದಾಗ ಸ್ಟಾಪ್ ಲಾಗ್ ಅಳವಡಿಸಲು ಚಿಂತನೆ ನಡೆಸಲಾಗಿದೆ.

    ಮೊದಲು ಎರಡು ಹಂತದಲ್ಲಿ ಪ್ರಯತ್ನಿಸಲು ತಜ್ಞರು ಚಿಂತಿಸಿದ್ದರು. ಈ ಕುರಿತು ಟಿಬಿ ಬೋರ್ಡ್‌ನಿಂದ ಸಿಎಂಗೆ ನೀಡಿದ ಮಾಹಿತಿಯಲ್ಲಿ ನಮೂದಿಸಲಾಗಿದೆ. ಇಂದು ಮತ್ತೆ ಗೇಟ್ ಅಳವಡಿಕೆ ಯತ್ನ ನಡೆಸುವ ಸಾಧ್ಯತೆ ಇದೆ.