Tag: tunga river

  • ಚಾಲಕನ ನಿಯಂತ್ರಣ ತಪ್ಪಿ ತುಂಗಾ ನದಿಯ ಉಪನದಿಗೆ ಬಿದ್ದ ಕಾರು – ನಾಲ್ವರು ಪಾರು

    ಚಾಲಕನ ನಿಯಂತ್ರಣ ತಪ್ಪಿ ತುಂಗಾ ನದಿಯ ಉಪನದಿಗೆ ಬಿದ್ದ ಕಾರು – ನಾಲ್ವರು ಪಾರು

    ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು (Car) ತುಂಗಾ ನದಿಯ (Tunga River) ಉಪನದಿಗೆ ಬಿದ್ದ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಶೃಂಗೇರಿ (Sringeri) ತಾಲೂಕಿನ ಗುಲಗಂಜಿ ಗ್ರಾಮದ ಬಳಿ ನಡೆದಿದೆ.

    ಕುದುರೆಮುಖ ರಾಷ್ಟ್ರೀಯ ಉದ್ಯಾನವನವದ ವ್ಯಾಪ್ತಿಯಲ್ಲಿರೋ ಗುಲಗಂಜಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 169ನಲ್ಲಿ ಘಟನೆ ಸಂಭವಿಸಿದೆ. ಕಾರ್ಕಳದಿಂದ ಶೃಂಗೇರಿಗೆ ಆಗಮಿಸುತ್ತಿದ್ದ ಕಾರು ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಉಪನದಿಗೆ ಬಿದ್ದಿದೆ. ಇದನ್ನೂ ಓದಿ: ಆಸ್ಟ್ರೋನೊಮರ್‌ ಸಿಇಒ ತಬ್ಬಿಕೊಂಡಿದ್ದ ಮಹಿಳೆ ಬಾಳಲ್ಲಿ ಬಿರುಕು – ಮಾಜಿ ಹೆಚ್‌ಆರ್‌ಗೆ ಡಿವೋರ್ಸ್‌ ಕೊಟ್ಟ ಪತಿ

    ನಾಲ್ವರು ಕಾರಿನಲ್ಲಿ ರಾತ್ರಿ ಕಾರ್ಕಳದಿಂದ ಶೃಂಗೇರಿಗೆ ಆಗಮಿಸುತ್ತಿದ್ದ ವೇಳೆ ಉಪನದಿಗಿದ್ದ ತಡೆಗೋಡೆ ಮುರಿದು ಕಾರು ನದಿಗೆ ಬಿದ್ದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ, ಯಾರೂ ಹಣದ ಆಮಿಷ ಒಡ್ಡಿಲ್ಲ: ಯೂಟ್ಯೂಬರ್ ಅಭಿಷೇಕ್ ತಂದೆ

  • Shivamogga | ಪ್ರೀತಿಸಲು ಹುಡುಗಿ ಸಿಗಲಿಲ್ಲ ಅಂತ ತುಂಗಾ ನದಿಗೆ ಹಾರಿ ಯುವಕ ಆತ್ಮಹತ್ಯೆ!

    Shivamogga | ಪ್ರೀತಿಸಲು ಹುಡುಗಿ ಸಿಗಲಿಲ್ಲ ಅಂತ ತುಂಗಾ ನದಿಗೆ ಹಾರಿ ಯುವಕ ಆತ್ಮಹತ್ಯೆ!

    ಶಿವಮೊಗ್ಗ: ಪ್ರೀತಿಸಲು (Love) ಹುಡುಗಿ ಸಿಗಲಿಲ್ಲ ಅಂತ ಹೇಳಿ, ಪದವಿ ವ್ಯಾಸಂಗ ಮಾಡ್ತಿದ್ದ ಯುವಕನೋರ್ವ ವಾಟ್ಸಪ್ ಸ್ಟೇಟಸ್‌ನಲ್ಲಿ ಡೆತ್‌ನೋಟ್‌ ಬರೆದಿಟ್ಟು ತುಂಗಾ ನದಿಗೆ (Tunga River) ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಜಯದೀಪ್ (24) ಎಂದು ಗುರುತಿಸಲಾಗಿದೆ.

    ತೀರ್ಥಹಳ್ಳಿಯ ಪದವಿ ಕಾಲೇಜಿನಲ್ಲಿ‌ ಪದವಿ ವ್ಯಾಸಂಗ ಮಾಡ್ತಿದ್ದ ಯುವಕ ಜಯದೀಪ್ ತೀರ್ಥಹಳ್ಳಿ ತಾಲೂಕಿನ ಇಂದಾವರ ಗ್ರಾಮದ ನಿವಾಸಿ. ಮೃತ ಯುವಕ ಜಯದೀಪ್ ಕಳೆದ ಶನಿವಾರ ತನ್ನ ಬೈಕಿನಲ್ಲಿ ತುಂಗಾನದಿ ಬಳಿ ಆಗಮಿಸಿ ನದಿಯ ದಡದಲ್ಲಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದ. ಯುವಕನ ಬೈಕ್, ಆತನ ವಸ್ತುಗಳು ನದಿ ಬಳಿ ದೊರೆತಿದ್ದರಿಂದ ಕುಟುಂಬಸ್ಥರು ಆತ್ಮಹತ್ಯೆಯ ಶಂಕೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಅಧಿಕೃತವಾಗಿ ‘ಬಿಗ್ ಬಾಸ್’ ಮನೆಗೆ ಕಾಲಿಟ್ಟ ಕಂಟೆಸ್ಟೆಂಟ್ : ನಟ ನಾಗಾರ್ಜುನ ಬದಲಾಗಲಿಲ್ಲ

    ತುಂಗಾ ನದಿ ಬಳಿ ಯುವಕನ ಬೈಕ್, ಆತನಿಗೆ ಸೇರಿದ ವಸ್ತುಗಳು ಪತ್ತೆಯಾಗಿದ್ದ ಪರಿಣಾಮ ತೀರ್ಥಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಗ್ನಿಶಾಮಕ ಸಿಬ್ಬಂದಿ ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದರು. ಸೋಮವಾರ ಯುವಕನ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: MUDA Scam | ಸಿಎಂ ಸಿದ್ದರಾಮಯ್ಯಗೆ ಮಧ್ಯಂತರ ರಿಲೀಫ್ –‌ ಸೆ.9ಕ್ಕೆ ಮತ್ತೆ ವಿಚಾರಣೆ ಮುಂದೂಡಿಕೆ!

    ಮೃತ ಯುವಕ ಜಯದೀಪ್ ಓದಿನಲ್ಲಿ ಮುಂದಿದ್ದ. ಆದರೆ ತನಗೆ ಪ್ರೀತಿ ಮಾಡಲು ಯುವತಿ ಸಿಗುತ್ತಿಲ್ಲ ಅಂತಾ ನೊಂದಿದ್ದ. ಜೊತೆಗೆ ಆನ್‌ಲೈನ್‌ನಲ್ಲಿ ಹಣ ತೊಡಗಿಸಲು ಸಾಲ ಮಾಡಿಕೊಂಡಿದ್ದ. ಈಗಾಗಿ ಮನನೊಂದ ಯುವಕ ವಾಟ್ಸಪ್ ಸ್ಟೇಟಸ್‌ನಲ್ಲಿ ಡೆತ್‌ ಹಂಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತುಂಗಾನದಿಯಿಂದ ಮೃತದೇಹ ಹೊರ ತೆಗೆದು, ಮರಣೋತ್ತರ ಶವ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಘಟನೆ ಕುರಿತು ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Paris Paralympics | ಡಿಸ್ಕಸ್ ಥ್ರೋನಲ್ಲಿ ಭಾರತದ ಯೋಗೇಶ್‌ ಕಥುನಿಯಾಗೆ ಬೆಳ್ಳಿ

  • ತುಂಗಾ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು

    ತುಂಗಾ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು

    ಶಿವಮೊಗ್ಗ: ತುಂಗಾ ನದಿಯಲ್ಲಿ (Tunga River) ಮೀನು ಹಿಡಿಯಲು (Fishing) ತೆರಳಿದ್ದ ಇಬ್ಬರು ಯುವಕರು (Youths) ನೀರು ಪಾಲಾದ ಘಟನೆ ಶಿವಮೊಗ್ಗದ (Shivamogga) ಕುರುಬರಪಾಳ್ಯ ಬಳಿ ನಡೆದಿದೆ.

    ತುಂಗಾನದಿಯಲ್ಲಿ ನೀರು ಪಾಲಾದವರನ್ನು ಮಹಮ್ಮದ್ ಫೈಸಲ್ (19) ಹಾಗೂ ಅಂಜುಂಖಾನ್ (19) ಎಂದು ಗುರುತಿಸಲಾಗಿದೆ. ಸವಾಯಿಪಾಳ್ಯದ ಮಹಮ್ಮದ್ ಫೈಸಲ್ ಹಾಗೂ ಇಲಿಯಾಜ್ ನಗರದ ಅಂಜುಂಖಾನ್ ಪದವಿ ವಿದ್ಯಾರ್ಥಿಗಳಾಗಿದ್ದು, ಇಬ್ಬರೂ ಸ್ನೇಹಿತರಾಗಿದ್ದರು. ಇದನ್ನೂ ಓದಿ: ಚೈತ್ರಾ ಕುಂದಾಪುರ ಮೇಲೆ ಮತ್ತೊಂದು FIR – ಸನಾತನ ಧರ್ಮ ಬಟ್ಟೆ ಮಳಿಗೆ ಪ್ರಕರಣದಲ್ಲೂ ವಂಚನೆ

    ಸೋಮವಾರ ಮಧ್ಯಾಹ್ನ ತುಂಗಾನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ವೇಳೆ ಇಬ್ಬರೂ ನೀರು ಪಾಲಾಗಿದ್ದು, ಮಹಮ್ಮದ್ ಫೈಸಲ್ ಮೃತದೇಹ ಪತ್ತೆಯಾಗಿದೆ. ಅಂಜುಂಖಾನ್ ಮೃತದೇಹಕ್ಕಾಗಿ ನದಿಯಲ್ಲಿ ಶೋಧಕಾರ್ಯ ಮುಂದುವರೆದಿದೆ. ಇದನ್ನೂ ಓದಿ: ರಸ್ತೆಬದಿ ನಿಲ್ಲಿಸಿದ್ದ ಕಂಟೈನರ್‌ಗೆ ಕಾರು ಡಿಕ್ಕಿ – ನಾಲ್ವರು ಸಾವು

    ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ನದಿಯಲ್ಲಿ ಶೋಧಕಾರ್ಯ ನಡೆಸುತ್ತಿದ್ದಾರೆ. ಘಟನೆಯಿಂದ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ. ಈ ಕುರಿತು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಿಂತಿದ್ದ ಲಾರಿಗೆ ಹಿಂಬದಿಯಿಂದ ಟ್ರಕ್ ಡಿಕ್ಕಿ – ಓರ್ವ ಸಾವು, ನಾಲ್ವರು ಗಂಭೀರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತುಂಗಾನದಿಯಲ್ಲಿ ಈಜಲು ಹೋಗಿ ನೀರುಪಾಲಾದ ಇಬ್ಬರು ಉಪನ್ಯಾಸಕರು

    ತುಂಗಾನದಿಯಲ್ಲಿ ಈಜಲು ಹೋಗಿ ನೀರುಪಾಲಾದ ಇಬ್ಬರು ಉಪನ್ಯಾಸಕರು

    ಶಿವಮೊಗ್ಗ: ತುಂಗಾನದಿಯಲ್ಲಿ (Tunga River) ಈಜಲು (Swimming) ತೆರಳಿದ್ದ ಉಪನ್ಯಾಸಕರಿಬ್ಬರು (Lecturers) ನೀರುಪಾಲಾದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ (Thirthahalli) ತಾಲೂಕಿನ ತೀರ್ಥಮತ್ತೂರು ಗ್ರಾಮದಲ್ಲಿ ನಡೆದಿದೆ.

    ಪುನೀತ್ (38), ಬಾಲಾಜಿ (36) ನೀರುಪಾಲಾದ ಉಪನ್ಯಾಸಕರು. ಇವರಿಬ್ಬರೂ ಕಾರ್ಕಳದ (Karkala) ನಿಟ್ಟೆ (Nitte) ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇಬ್ಬರೂ ಜೊತೆಯಾಗಿ ತುಂಗಾನದಿಯಲ್ಲಿ ಈಜಲು ತೆರಳಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮುಳುಗಿದ ಇಬ್ಬರಲ್ಲಿ ಓರ್ವ ಉಪನ್ಯಾಸಕನ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಮೀನು ಹಿಡಿಯಲು ತೆರಳಿದ್ದ ಮೂವರು ಬಾಲಕರು ನೀರುಪಾಲು

    ಇನ್ನೋರ್ವ ಉಪನ್ಯಾಸಕನ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದು, ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮತ್ತೋರ್ವ ಯುವಕ ಬಲಿ

  • ತುಂಗಾನದಿಗೆ ಅಲ್ಯುಮಿನಿಯಂ ಅಂಶ ಸೇರ್ಪಡೆ – ಪ್ರಯೋಗಾಲಯದಿಂದ ನೀರಿನ ವರದಿ ಬಹಿರಂಗ

    ತುಂಗಾನದಿಗೆ ಅಲ್ಯುಮಿನಿಯಂ ಅಂಶ ಸೇರ್ಪಡೆ – ಪ್ರಯೋಗಾಲಯದಿಂದ ನೀರಿನ ವರದಿ ಬಹಿರಂಗ

    – ಆರೋಗ್ಯಕ್ಕೆ ತುಂಗಾಪಾನ ಅಪಾಯ?

    ಶಿವಮೊಗ್ಗ: ಮಲೆನಾಡಿನ ಜೀವನದಿ ತುಂಗಾನದಿ. ಗಂಗಾ ಸ್ನಾನ – ತುಂಗಾ ಪಾನ ಎಂಬುದು ಪ್ರಸಿದ್ಧ ನಾಣ್ಣುಡಿ. ಆದರೆ ಇನ್ನು ಮುಂದೆ ತುಂಗೆಯ ನೀರನ್ನು ಕುಡಿಯುವ ಮೊದಲು ಯೋಚಿಸಬೇಕಿದೆ. ಇದಕ್ಕೆ ಕಾರಣ ಪ್ರಯೋಗಾಲಯದ ವರದಿ.

    ಮಲೆನಾಡಿನ ಜಿಲ್ಲೆ ಶಿವಮೊಗ್ಗ (Shivamogga) ಸೇರಿದಂತೆ ದಾವಣಗೆರೆ ಜಿಲ್ಲೆಯ ಹಲವು ಗ್ರಾಮಗಳಿಗೆ ಕುಡಿಯಲು ತುಂಗಾ ನದಿ (Tunga River) ನೀರೆ ಆಸರೆ. ಆದರೆ ಇತ್ತೀಚಿಗೆ ತುಂಗಾನದಿ ನೀರು ಮಲಿನವಾಗುತ್ತಿದೆ (Water Pollution) ಎಂಬ ಅಂಶ ಪ್ರಯೋಗಾಲಯದ ವರದಿಯಿಂದ ಬಹಿರಂಗಗೊಂಡಿದೆ. ಇದು ಮಲೆನಾಡಿನ ಜನತೆಯನ್ನು ಬೆಚ್ಚಿ ಬೀಳಿಸಿದೆ.

    ತುಂಗಾ ನದಿ ನೀರು ಗಾಜನೂರು ಜಲಾಶಯದಿಂದ ಮುಂದೆ ಹರಿಯುವಾಗ ಮಲಿನಗೊಳ್ಳುತ್ತಿದೆ. ಅದರಲ್ಲೂ ಜಿಲ್ಲಾ ಕೇಂದ್ರ ತಲುಪುತ್ತಿದ್ದಂತೆ ಮತ್ತಷ್ಟು ವಿಷಕಾರಕ ಅಂಶಗಳು ನೀರಿಗೆ ಸೇರುತ್ತಿದೆ. ತುಂಗಾನದಿ ನೀರಿನಲ್ಲಿ ಅಲ್ಯುಮಿನಿಯಂ ಅಂಶ ಹೆಚ್ಚಿರುವುದು ದೃಢಪಟ್ಟಿದೆ.

    ಗುಣಮಟ್ಟದ ನೀರಿನಲ್ಲಿ ಎಲ್ಲಾ ಖನಿಜಾಂಶಗಳು ನಿಗದಿತ ಪ್ರಮಾಣದಲ್ಲಿ ಇರಬೇಕು. ಆಗ ಮಾತ್ರ ಅದು ಕುಡಿಯಲು ಹಾಗೂ ಆರೋಗ್ಯಕ್ಕೆ ಪೂರಕವಾಗಿ ಇರುತ್ತದೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಖನಿಜಾಂಶ ಹೆಚ್ಚಳವಾದರೂ ಆರೋಗ್ಯಕ್ಕೆ ಅಪಾಯಕಾರಿ. ಈಗ ತುಂಗೆಯ ಸ್ಥಿತಿಯು ಅಪಾಯಕಾರಿ ಹಂತ ತಲುಪಿದೆ.

    ಶಿವಮೊಗ್ಗದ ಕೆಲವು ಪರಿಸರ ಆಸಕ್ತರು ಸೇರಿಕೊಂಡು ನಿರ್ಮಲ ತುಂಗಾ ಅಭಿಯಾನ ಆರಂಭಿಸಿದ್ದರು. ಈ ತಂಡ ಜಲಾಶಯದ ಮಧ್ಯ ಭಾಗದಿಂದ ನದಿ ನೀರು ಹಾಗೂ ನೀರು ಶುದ್ಧೀಕರಣ ಘಟಕದಿಂದ ನಾಗರಿಕರಿಗೆ ಪೂರೈಕೆಯಾಗುವ ನೀರು ಎರಡನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಬೆಂಗಳೂರಿನ ಯುರೋಪಿನ್ಸ್ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿತ್ತು. ಇದೀಗ ಪ್ರಯೋಗಾಲಯದಿಂದ ವರದಿ ಬಂದಿದ್ದು ತುಂಗಾ ನದಿಯಲ್ಲಿ ಅಲ್ಯುಮಿನಿಯಂ ಅಂಶ ಇರುವುದು ಪತ್ತೆಯಾಗಿದೆ.

    ಸಾಮಾನ್ಯವಾಗಿ ಕುಡಿಯುವ ಪ್ರತಿ ಲೀಟರ್ ನೀರಿನಲ್ಲಿ ಅಲ್ಯುಮಿನಿಯಂ ಪ್ರಮಾಣ 0.2 – 0.03 ಮಿಲಿ ಗ್ರಾಂ ಇರಬೇಕು. ಆದರೆ ತುಂಗಾ ನದಿಯ ನೀರಿನಲ್ಲಿ ಇದರ ಪ್ರಮಾಣ 0.205 ಮಿಲಿಗ್ರಾಂ ಇರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಇದು ನದಿ ನೀರಿನ ಮಲಿನಕ್ಕೆ ಉದಾಹರಣೆಯಾಗಿದೆ. ಇದನ್ನೂ ಓದಿ: ಪಿಎಫ್‌ಐ ನಿಷೇಧಕ್ಕೆ ಪ್ರತೀಕಾರ – ವಿಧ್ವಂಸಕ ಕೃತ್ಯಕ್ಕೆ ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ಪ್ಲ್ಯಾನ್‌

    ಅಲ್ಯುಮಿನಿಯಂ ಪ್ರಮಾಣ ಹೆಚ್ಚಿರುವ ನೀರು ಸೇವಿಸಿದರೆ ಕ್ರಮೇಣ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿಯೂ ನರಸಂಬಂಧಿ ಕಾಯಿಲೆಗಳು ಭಾಧಿಸುವ ಅಪಾಯ ಇರುತ್ತದೆ. ಇಂತಹ ನೀರು ಸೇವಿಸಿದರೆ ಅಡ್ಡ ಪರಿಣಾಮಗಳು ಇವೆ ಎಂಬುದು ಆತಂಕದ ಸಂಗತಿಯಾಗಿದೆ.

    ತುಂಗಾ ನದಿ ನೀರಿನಲ್ಲಿ ಅಲ್ಯುಮಿನಿಯಂ ಅಂಶ ಮಾತ್ರ ಹೆಚ್ಚಳವಾಗಿರದೇ, ಈ ನೀರಿನಲ್ಲಿ ಇತರೆ ಲೋಹದ ಅಂಶಗಳು ಇವೆ. ಆದರೆ ಅವುಗಳು ನಿಗದಿತ ಪ್ರಮಾಣ ಮೀರಿಲ್ಲ ಎಂಬುದೇ ಸಮಾಧಾನಕರ ಸಂಗತಿ. ಬೇರಿಯಂ, ಬೋರಾನ್, ಕ್ಲೋರೈಡ್, ಮ್ಯಾಗ್ನೇಶಿಯಂ, ಕ್ಯಾಡ್ಮಿಯಂ, ಪಾದರಸ ಇರುವುದು ಪ್ರಯೋಗಾಲಯದ ವರದಿಯಲ್ಲಿ ಬಹಿರಂಗವಾಗಿದೆ.

    ಒಟ್ಟಿನಲ್ಲಿ ತುಂಗಾನದಿಯಲ್ಲಿ ಅಲ್ಯುಮಿನಿಯಂ ಅಂಶ ಸೇರುತ್ತಿರುವುದರ ಜೊತೆಗೆ ನಾಗರಿಕರು ಸಹ ಕಸ ಹಾಗೂ ತ್ಯಾಜ್ಯವನ್ನು ಹಾಕುತ್ತಿದ್ದಾರೆ. ಇದು ಸಹ ನದಿ ಮಲಿನವಾಗಲು ಕಾರಣವಾಗುತ್ತಿದೆ. ಇನ್ನಾದರೂ ನಾಗರಿಕರು ಎಚ್ಚೆತ್ತುಕೊಂಡು ನದಿಗೆ ಕಸ ಎಸೆಯದಂತೆ, ತ್ಯಾಜ್ಯ ಸುರಿಯದಂತೆ ಕ್ರಮ ವಹಿಸಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಪಾಯವಂತು ಕಟ್ಟಿಟ್ಟ ಬುತ್ತಿ. ಇದನ್ನೂ ಓದಿ: ವಂದೇ ಭಾರತ್‌ ಸೆಮಿಸ್ಪೀಡ್‌ ರೈಲಿನಲ್ಲಿ ಓಡಾಡ್ಬೇಕು ಎಂಬ ಉತ್ತರ ಕರ್ನಾಟಕ ಜನರ ಕನಸು ಶೀಘ್ರವೇ ನನಸು!

  • ಹಾವು ತಪ್ಪಿಸಲು ಹೋಗಿ ತುಂಗಾ ನಾಲೆಗೆ ಬಿದ್ದ ಕಾರು – ಮಹಿಳೆ ಸಾವು

    ಹಾವು ತಪ್ಪಿಸಲು ಹೋಗಿ ತುಂಗಾ ನಾಲೆಗೆ ಬಿದ್ದ ಕಾರು – ಮಹಿಳೆ ಸಾವು

    ಶಿವಮೊಗ್ಗ: ರಸ್ತೆಯಲ್ಲಿ ಅಡ್ಡಲಾಗಿ ಬಂದ ಹಾವು ತಪ್ಪಿಸಲು ಹೋಗಿ ಕಾರೊಂದು ತುಂಗಾ ನಾಲೆಗೆ ಬಿದ್ದಿದ್ದು, ಕಾರಿನಲ್ಲಿದ್ದ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಘಟನೆ ಶಿವಮೊಗ್ಗ ತಾಲೂಕಿನ ಗಾಜನೂರು ಬಳಿ ಬೆಳಗಿನ ಜಾವ ನಡೆದಿದೆ.

    ಸುಷ್ಮಾ (28) ಮೃತ ದುರ್ದೈವಿ. ಚಾಲಕ ಚೇತನ್ ಕುಮಾರ್‌ ಅವರು ತನ್ನ ತಾಯಿಯ ಅನಾರೋಗ್ಯದ ಹಿನ್ನೆಲೆ ಗಾಜನೂರಿನಿಂದ ತುಮಕೂರಿಗೆ ತೆರಳುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಅಡ್ಡಲಾಗಿ ಹಾವು ಬಂದ ಪರಿಣಾಮ ಕಾರಿನ ಬ್ರೇಕ್ ಹಾಕಿದ್ದಾರೆ. ಕಾರು ನಿಯಂತ್ರಣಕ್ಕೆ ಸಿಗದೇ ತುಂಗಾ ನಾಲೆಗೆ ಪಲ್ಟಿಯಾಗಿ ಬಿದ್ದಿದೆ. ಈ ಸಂದರ್ಭದಲ್ಲಿ ಚಾಲಕ ಕಾರು ನಾಲೆಗೆ ಪಲ್ಟಿಯಾಗುತ್ತಿದ್ದಂತೆ ಸ್ಥಳೀಯ ಜನರನ್ನು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಇದನ್ನೂ ಓದಿ: ತೈಲ ಖರೀದಿಸಲು ಶ್ರೀಲಂಕಾಗೆ 3 ಸಾವಿರ ಕೋಟಿ ಸಾಲ ನೀಡಿದ ಭಾರತ

    ಜನರು ಬೆಳಗಿನ ಜಾವ ಆಗಿದ್ದರಿಂದ ಸಹಾಯಕ್ಕಾಗಿ ಯಾರೂ ಬಂದಿರಲಿಲ್ಲ. ಮುಂಜಾನೆ ಜನರು ಸ್ಥಳಕ್ಕೆ ಹೋಗಿ ಸಹಾಯ ಮಾಡುವಷ್ಟರಲ್ಲಿ ಚೇತನ್ ಕುಮಾರ್ ಅವರ ಪತ್ನಿ ಸುಷ್ಮಾ ಸಾವನ್ನಪ್ಪಿದ್ದಾರೆ. ಸ್ಥಳೀಯರು ಚಾಲಕ ಚೇತನ್‍ರವರನ್ನು ಸುರಕ್ಷಿತವಾಗಿ ದಡಕ್ಕೆ ಸೇರಿಸಿದ್ದಾರೆ. ಇದನ್ನೂ ಓದಿ: ಅಜ್ಮೀರ್ ದರ್ಗಾಕ್ಕೆ ಚಾದರ ಕಳಿಸಿಕೊಟ್ಟ ಪ್ರಧಾನಿ ಮೋದಿ

    ಘಟನೆ ಕುರಿತು ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ನಾಲೆಯಲ್ಲಿ ಬಿದ್ದಿದ್ದ ಕಾರನ್ನು ಮೇಲಕ್ಕೆ ಎತ್ತಿಸಿದ್ದಾರೆ.

  • ನದಿಗೆ ಗಾಳ ಹಾಕಿದ್ದು ಮೀನಿಗಾಗಿ ಆದ್ರೆ ಸಿಕ್ಕಿದ್ದು ಮೊಸಳೆ ಮರಿ

    ನದಿಗೆ ಗಾಳ ಹಾಕಿದ್ದು ಮೀನಿಗಾಗಿ ಆದ್ರೆ ಸಿಕ್ಕಿದ್ದು ಮೊಸಳೆ ಮರಿ

    ಶಿವಮೊಗ್ಗ : ತುಂಗಾ ನದಿಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿಯ ಗಾಳಕ್ಕೆ ಮೀನಿನ ಬದಲು ಮೊಸಳೆ ಮರಿ ಬಿದ್ದಿರುವ ಘಟನೆ ಶಿವಮೊಗ್ಗ ಸಮೀಪದ ಪಿಳ್ಳಂಗೆರೆ ಸಮೀಪ ನಡೆದಿದೆ.

    ಪಿಳ್ಳಂಗೆರೆಯ ಲಕ್ಷ್ಮಿನಾರಾಯಣ ಸ್ವಾಮಿ ದೇವಸ್ಥಾನದ ಹಿಂಭಾಗದ ತುಂಗಾ ನದಿಯಲ್ಲಿ ರಶೀದ್ ಅವರು ಮೀನು ಹಿಡಿಯಲು ತೆರಳಿದ್ದಾರೆ. ಈ ವೇಳೆ ಮೀನು ಹಿಡಿಯಲು ಗಾಳ ಹಾಕಿದ್ದ ರಶೀದ್ ಅವರಿಗೆ ಮೀನಿನ ಬದಲು ಮೊಸಳೆ ಮರಿ ಸಿಕ್ಕಿದೆ. ಇದನ್ನೂ ಓದಿ: ಪ್ರಧಾನಿ ಭದ್ರತೆ ವಿಚಾರದಲ್ಲಿ ಅವರಿಗೇಕೆ ಮಾಹಿತಿ ನೀಡಬೇಕು? – ಚರಣ್‍ಜಿತ್ ಸಿಂಗ್ ಚನ್ನಿ ವಿರುದ್ಧ ಬಿಜೆಪಿ ಕಿಡಿ

    Crocodile

    ದೇವಸ್ಥಾನದ ಹಿಂಭಾಗದಲ್ಲಿ ಇರುವ ನದಿಗೆ ನೀರು ಕುಡಿಯಲು ಜಾನುವಾರುಗಳು ಬರುತ್ತವೆ. ಅಲ್ಲದೇ ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಗ್ರಾಮಸ್ಥರು ಕೈ, ಕಾಲು ತೊಳೆಯಲು ನದಿಗೆ ಇಳಿಯುತ್ತಾರೆ. ಹೀಗಾಗಿ ಈ ಭಾಗದಲ್ಲಿ ಮೊಸಳೆ ಮರಿ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಮೊಸಳೆ ಮರಿ ಪತ್ತೆಯಾಗಿರುವುದರಿಂದ ಈ ಭಾಗದಲ್ಲಿ ದೊಡ್ಡ ಮೊಸಳೆಯು ಇರಬಹುದು ಎಂಬ ಅನುಮಾನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ 2ನೇ ದಿನದ ವೀಕೆಂಡ್ ಕರ್ಫ್ಯೂ ಬಹುತೇಕ ಯಶಸ್ವಿ

  • ತುಂಗಾ ಜಲಾಶಯ ಭರ್ತಿ- ಬಾಗಿನ ಅರ್ಪಿಸಿದ ಈಶ್ವರಪ್ಪ

    ತುಂಗಾ ಜಲಾಶಯ ಭರ್ತಿ- ಬಾಗಿನ ಅರ್ಪಿಸಿದ ಈಶ್ವರಪ್ಪ

    ಶಿವಮೊಗ್ಗ: ಕಳೆದೊಂದು ವಾರದಿಂದ ಮಲೆನಾಡಿನ ತವರು ಶಿವಮೊಗ್ಗದಲ್ಲಿ ಒಂದೇ ಸಮನೆ ವರುಣ ಅಬ್ಬರಿಸಿದ್ದು, ಆಗಾಗ್ಗೆ ಮಳೆ ಸುರಿಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ತುಂಗಾ ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ ನೀರು ಹೊರಕ್ಕೆ ಬಿಡಲಾಗುತ್ತಿದೆ. ನಿರಂತರವಾಗಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗುತ್ತಿದ್ದು, ಜಿಲ್ಲೆಯ ಜನರಲ್ಲಿ ಹರ್ಷ ಮನೆ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತುಂಬಿದ ತುಂಗೆಗೆ ಬಾಗಿನ ಸಮರ್ಪಿಸಿದ್ದಾರೆ.

    ಜಿಲ್ಲೆಯ ಗಾಜನೂರು ತುಂಗಾ ಜಲಾಶಯ ಪ್ರತಿ ವರ್ಷ ಬೇಗ ಭರ್ತಿಯಾಗುವ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ಒಂದು ವಾರದಿಂದ ಮಲೆನಾಡು ಭಾಗದಲ್ಲಿ ಬಿಟ್ಟು ಬಿಡದೆ ಮಳೆಯಾಗುತ್ತಿದೆ. ಹೀಗಾಗಿ ಹಳ್ಳ-ಕೊಳ್ಳ, ನದಿಗಳು ಮೈದುಂಬಿ ಹರಿಯುತ್ತಿವೆ. ಅಂತೆಯೇ ತುಂಗಾ ನದಿ ಕೂಡ ತುಂಬಿ ಹರಿಯುತ್ತಿದ್ದು, ಗಾಜನೂರು ಜಲಾಶಯ ಭರ್ತಿಯಾಗಿದೆ. ಹೀಗಾಗಿ ಅಣೆಕಟ್ಟಿನಿಂದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಇದನ್ನೂ ಓದಿ: ಮಲೆನಾಡಲ್ಲಿ ಮುಂಗಾರು ಚುರುಕು- ಜೋಗಕ್ಕೆ ಜೀವದ ಕಳೆ

    588.24 ಮೀಟರ್ ಎತ್ತರ ಇರುವ ಗಾಜನೂರು ಜಲಾಶಯದಲ್ಲಿ ನೀರಿನ ಮಟ್ಟ 587.69 ಮೀಟರ್ ತಲುಪಿದ ಕಾರಣ ಎಲ್ಲ ಗೇಟ್ ಗಳಿಂದ ನೀರು ಹೊರ ಬಿಡಲಾಗಿದೆ. ಈ ತುಂಗಾ ಜಲಾಶಯ 3.25 ಟಿಎಂಸಿ ಸಾಮಥ್ರ್ಯದ್ದಾಗಿದೆ. ಶೃಂಗೇರಿ, ತೀರ್ಥಹಳ್ಳಿ ಭಾಗಗಳಲ್ಲಿ ಮಳೆ ಬೀಳುತ್ತಿರುವ ಕಾರಣ ಜಲಾಶಯಕ್ಕೆ ನಿರಂತರವಾಗಿ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ, ಡ್ಯಾಂ ಭರ್ತಿಯಾಗಿ ನಳನಳಿಸುತ್ತಿದ್ದು, ಸಚಿವ ಕೆ.ಎಸ್.ಈಶ್ವರಪ್ಪ ಕುಟುಂಬ ಸಮೇತ ತುಂಗಾ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ್ದಾರೆ.

    ಮಲೆನಾಡಿನ ತವರು ಎಂದೆನಿಸಿಕೊಳ್ಳುವ ಶಿವಮೊಗ್ಗದ ಕೇಂದ್ರ ಬಿಂದುವಾಗಿರುವ ಗಾಜನೂರು ಜಲಾಶಯ ಇದೀಗ ಸುಂದರವಾಗಿ ಕಂಗೊಳಿಸುತ್ತಿದ್ದು, ನಿರಂತರ ಮಳೆ ಹಿನ್ನೆಲೆಯಲ್ಲಿ ಡ್ಯಾಂ ನಿಂದ ನೀರು ಹೊರಕ್ಕೆ ಬಿಡುತ್ತಿರುವ ಪರಿಣಾಮ ಡ್ಯಾಂ ಗೆ ಮತ್ತಷ್ಟು ಜೀವ ಕಳೆ ಬಂದಂತಾಗಿದೆ. ತುಂಗೆಯ ಮೂಲ ಸೆಲೆಯಾಗಿರುವ ಶೃಂಗೇರಿ, ಕೊಪ್ಪ ಭಾಗದ ಪ್ರದೇಶದಲ್ಲಿ ಯಥೇಚ್ಛ ಮಳೆಯಾಗುತ್ತಿರುವ ಕಾರಣ ರಾಜ್ಯದಲ್ಲಿಯೇ ಭರ್ತಿಯಾಗಿರುವ ಪ್ರಥಮ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟು 22 ಕ್ರಸ್ಟ್ ಗೇಟ್ ಗಳಿದ್ದು, ಎಲ್ಲ ಗೇಟುಗಳಿಂದ ನದಿಗೆ ನೀರು ಹರಿಬಿಡಲಾಗಿದೆ. ಕೊರೊನಾ ಕಾಟದಿಂದ ಪ್ರವಾಸಿಗರಿಗೆ ಪ್ರವೇಶ ನಿಷಿದ್ಧವಾಗಿದ್ದು, ಇದರಿಂದ ಪ್ರವಾಸಿಗರಿಗೆ ನಿರಾಸೆಯಾಗಿದೆ.

    ಜಿಲ್ಲೆಯ ಮಲೆನಾಡು ಪ್ರದೇಶಗಳಾದ ಸಾಗರ, ತೀರ್ಥಹಳ್ಳಿ, ಹೊಸನಗರ, ಸೊರಬ ತಾಲೂಕಿನಾದ್ಯಂತ ಮಳೆ ಬಿರುಸಾಗಿದ್ದು, ಹಳ್ಳ-ಕೊಳ್ಳ ನದಿಗಳಿಗೆ ನೀರು ಹರಿದು ಬಂದಿದೆ. ತುಂಗಾ, ಭದ್ರಾ, ಮಾಲತಿ, ಶರಾವತಿ, ವರದಾ, ಕುಮುದ್ವತಿ ನದಿಗಳು ಸೇರಿದಂತೆ, ದೊಡ್ಡ, ದೊಡ್ಡ ಹಳ್ಳಗಳು ನೀರಿನಿಂದ ತುಂಬಿವೆ. ಹೀಗಾಗಿ ಜಿಲ್ಲೆಯ ರೈತರು ಹಾಗೂ ನಾಗರೀಕರಲ್ಲಿ ಹರ್ಷ ಮನೆ ಮಾಡಿದೆ.

  • ಚಲಿಸುತ್ತಿದ್ದ ರೈಲಿನಿಂದ ಕಾಲು ಜಾರಿ ತುಂಗಾ ನದಿಗೆ ಬಿದ್ದಿದ್ದ ಯುವತಿಯ ಶವ ಪತ್ತೆ

    ಚಲಿಸುತ್ತಿದ್ದ ರೈಲಿನಿಂದ ಕಾಲು ಜಾರಿ ತುಂಗಾ ನದಿಗೆ ಬಿದ್ದಿದ್ದ ಯುವತಿಯ ಶವ ಪತ್ತೆ

    ಶಿವಮೊಗ್ಗ; ಚಲಿಸುತ್ತಿದ್ದ ರೈಲಿನಿಂದ ಯುವತಿವೋರ್ವಳು ಕಾಲು ಜಾರಿ ತುಂಗಾ ನದಿಗೆ ಬಿದ್ದಿದ್ದ ಘಟನೆ ಕಳೆದ ಎರಡು ದಿನದ ಹಿಂದೆ ಶಿವಮೊಗ್ಗದಲ್ಲಿ ನಡೆದಿತ್ತು.

    ನದಿಗೆ ಬಿದ್ದಿದ್ದ ಯುವತಿಯನ್ನು ಶಿವಮೊಗ್ಗ ಗಾಡಿಕೊಪ್ಪದ ಸಹನಾ (24) ಎಂದು ಗುರುತಿಸಲಾಗಿತ್ತು. ಯುವತಿಯ ಶವಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಕಳೆದ ಎರಡು ದಿನದಿಂದಲೂ ತುಂಗಾನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದರು. ಇಂದು ಮುಂಜಾನೆ ಯುವತಿಯ ಶವ ತುಂಗಾನದಿಯಲ್ಲಿ ಪತ್ತೆಯಾಗಿದೆ

    ಮೃತ ಯುವತಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತಾಯಿ ಜೊತೆ ಇಂಟರ್ ಸಿಟಿ ರೈಲಿನಲ್ಲಿ ಬರುತ್ತಿದ್ದಳು. ವೇಳೆ ಈ ಅವಘಡ ಜರುಗಿತ್ತು. ಶಿವಮೊಗ್ಗ ನಗರದ ತುಂಗಾ ನದಿಯ ರೈಲ್ವೆ ಬ್ರಿಡ್ಜ್ ಮೇಲೆ ರೈಲು ಸಂಚರಿಸುತ್ತಿದ್ದಾಗ ಯುವತಿ ಬಾಗಿಲ ಬಳಿ ನಿಂತು ಮೊಬೈಲ್‍ನಲ್ಲಿ ಮಾತನಾಡುತ್ತಿದ್ದಳು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಾಳೆ ಎಂದು ಯುವತಿಯ ತಾಯಿ ತಿಳಿಸಿದ್ದರು.

    ಈ ಬಗ್ಗೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

  • ಚಲಿಸುತ್ತಿದ್ದ ರೈಲಿನಿಂದ ತುಂಗಾ ನದಿಗೆ ಬಿದ್ದ ಯುವತಿ!

    ಚಲಿಸುತ್ತಿದ್ದ ರೈಲಿನಿಂದ ತುಂಗಾ ನದಿಗೆ ಬಿದ್ದ ಯುವತಿ!

    ಶಿವಮೊಗ್ಗ: ಚಲಿಸುತ್ತಿದ್ದ ರೈಲಿನಿಂದ ಯುವತಿಯೋರ್ವಳು ಆಕಸ್ಮಿಕವಾಗಿ ತುಂಗಾ ನದಿಗೆ ಬಿದ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಯುವತಿಯನ್ನು ಶಿವಮೊಗ್ಗದ ಗಾಡಿಕೊಪ್ಪದ ಸಹನಾ(24) ಎಂದು ಗುರುತಿಸಲಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತಾಯಿ ಜೊತೆ ಇಂಟರ್ ಸಿಟಿ ರೈಲಿನಲ್ಲಿ ಬರುತ್ತಿದ್ದ ವೇಳೆ ಈ ದುರ್ಘಟನೆ ಜರುಗಿದೆ.

    ಶಿವಮೊಗ್ಗ ನಗರದ ತುಂಗಾ ನದಿಯ ಬ್ರಿಡ್ಜ್ ಮೇಲೆ ರೈಲು ಸಂಚರಿಸುತ್ತಿದ್ದಾಗ ಯುವತಿ ಬಾಗಿಲ ಬಳಿ ನಿಂತು ಮೊಬೈಲ್ ನಲ್ಲಿ ಮಾತನಾಡುತ್ತಿದ್ದಳಂತೆ. ಈ ವೇಳೆ ಆಕಸ್ಮಿಕವಾಗಿ ನದಿಗೆ ಬಿದ್ದಿದ್ದಾಳೆ ಎಂದು ಯುವತಿಯ ತಾಯಿ ತಿಳಿಸಿದ್ದಾರೆ.

    ಈ ಬಗ್ಗೆ ಪೋಷಕರು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿಸಿದ್ದು, ಘಟನೆ ನಂತರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ತುಂಗಾನದಿಯಲ್ಲಿ ಯುವತಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.