Tag: tunga bhadra dam

  • ತುಂಗಭದ್ರಾ ಡ್ಯಾಂಗೆ ಪರಮೇಶ್ವರ್ ಭೇಟಿ – ಕೊಚ್ಚಿ ಹೋಗಿದ್ದ ಕ್ರಸ್ಟ್ ಗೇಟ್ ಸ್ಥಳ ವೀಕ್ಷಣೆ

    ತುಂಗಭದ್ರಾ ಡ್ಯಾಂಗೆ ಪರಮೇಶ್ವರ್ ಭೇಟಿ – ಕೊಚ್ಚಿ ಹೋಗಿದ್ದ ಕ್ರಸ್ಟ್ ಗೇಟ್ ಸ್ಥಳ ವೀಕ್ಷಣೆ

    ಕೊಪ್ಪಳ/ಬಳ್ಳಾರಿ: ವಿಜಯನಗರ (Vijayanagar) ಜಿಲ್ಲೆಯ ಹೊಸಪೇಟೆಯ ಹಾಗೂ ಕೊಪ್ಪಳದ (Koppal) ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯಕ್ಕೆ (Tungabhadra) ಗೃಹ ಸಚಿವ ಡಾ ಜಿ.ಪರಮೇಶ್ವರ್ (G.Parameshwar) ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಇಂದು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಶಿರೂರು ಗ್ರಾಮದಲ್ಲಿ ಜಲಸಂಪನ್ಮೂಲ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ದಿ.ಕೆ ಹೆಚ್.ಪಾಟೀಲ್ ಅವರ ಮೂರ್ತಿ ಅನಾವರಣಗೊಳಿಸಿದರು. ಬಳಿಕ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದರು.ಇದನ್ನೂ ಓದಿ: America Strikes | ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಬೆಂಬಲಿಸಿದ್ದ ಪಾಕ್‌ನಿಂದ ಇರಾನ್‌ ಮೇಲಿನ ದಾಳಿ ಖಂಡನೆ

    ಕಳೆದ ವರ್ಷ ಆಗಸ್ಟ್‌ನಲ್ಲಿ ಕೊಚ್ಚಿ ಹೋಗಿದ್ದ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಜಾಗಕ್ಕೆ ತೆರಳಿ ಪರಿಶೀಲಿಸಿದರು. ಅಳವಡಿಸಲಾಗಿರುವ ಸ್ಟಾಪ್ ಲಾಗ್ ಗೇಟ್‌ನ್ನು ವೀಕ್ಷಣೆ ಮಾಡಿದರು. ಬಳಿಕ ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ರೈತರಿಗೆ ಬೆಳೆ ಬೆಳೆಯಲು ಯಾವುದೇ ಸಮಸ್ಯೆ ಆಗದಂತೆ ಆದಷ್ಟು ಬೇಗ ಶಾಶ್ವತ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಗೃಹ ಸಚಿವರಿಗೆ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಸಾಥ್ ನೀಡಿದರು.

    ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ನನಗೆ ಗೊತ್ತಿಲ್ಲ. ಇನ್ನೂ ಬಿ.ಆರ್.ಪಾಟೀಲ್ ಲಂಚದ ಆರೋಪ ಆಡಿಯೋ ವಿಚಾರವಾಗಿ ಅವರು ಹೇಳಿರುವುದು ಗಂಭೀರ ಆರೋಪ ಅಲ್ಲ. ಅವರು ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಲಿ. ಪೊಲೀಸರಿಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಹೆಚ್.ಕೆ ಪಾಟೀಲ್ ಗಣಿ ಅಕ್ರಮ ಪತ್ರದ ವಿಚಾರವಾಗಿ ಮಾತನಾಡಿ, ಗಣಿ ಅಕ್ರಮದಲ್ಲಿ 1.5 ಲಕ್ಷ ಕೋಟಿ ರೂ. ದುರುಪಯೋಗವಾಗಿದೆ. ಈ ಕುರಿತು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಲೂಟಿ ಮಾಡಿದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಲಹೆ ನೀಡಿದ್ದಾರೆ. ಈಗ ಪತ್ರ ಬರೆದಿದ್ದಾರೆ. ಕ್ರಮ ಕೈಗೊಳ್ಳಲಾಗುವುದು ಎಂದರು.

    ಕರ್ನಾಟಕ ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಹೊರಟಿದ್ದೇವೆ. ಆನೆಗೊಂದಿ ಭಾಗದಲ್ಲಿ ಡ್ರಗ್ಸ್ ತಡೆಯುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಅವಶ್ಯಕತೆಯಿದ್ದರೆ ಅಲ್ಲಿಯೇ ಸ್ಟೇಷನ್ ಮಾಡುತ್ತೇವೆ. ರಾಯರೆಡ್ಡಿಯವರು ಗಂಗಾವತಿ ಕರ್ನಾಟಕ ಹಬ್ ಆಗಿದೆ ಎಂದಿದ್ದಾರೆ. ಅವರ ಸಲಹೆ ಹಾಗೂ ದೂರನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು. ಪೊಲೀಸರಿಗೆ ಮುಕ್ತವಾಗಿ ಕೆಲಸ ಮಾಡಲು ಹೇಳಿದ್ದೇವೆ. ರಾಜ್ಯ ಸರ್ಕಾರ ಎರಡು ವರ್ಷದಿಂದ ಜನಪರ ಕೆಲಸ ಮಾಡುತ್ತಿದೆ. ಜೊತೆಗೆ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಿಲ್ಲ. ಸಬ್ ಇನ್ಸ್ಪೆಕ್ಟರ್ ಹಗರಣದ ನಂತರ ನೇಮಕಾತಿಯಾಗಿಲ್ಲ. ರಾಜ್ಯದಲ್ಲಿ ಸಾವಿರಾರು ಪಿಎಗಳ ಸ್ಥಾನ ಖಾಲಿಯಾಗಿವೆ ಎಂದು ತಿಳಿಸಿದರು.ಇದನ್ನೂ ಓದಿ: ಮಳೆ ಅಬ್ಬರ – ಮುರುಡೇಶ್ವರದಲ್ಲಿ ಕಡಲ ತೀರಕ್ಕೆ ನಿಷೇಧ

     

  • ತುಂಗಭದ್ರಾ ಡ್ಯಾಂ ಭರ್ತಿಗಾಗಿ ಉಪವಾಸ ಕುಳಿತ ಸೋಮಶೇಖರ ರೆಡ್ಡಿ

    ತುಂಗಭದ್ರಾ ಡ್ಯಾಂ ಭರ್ತಿಗಾಗಿ ಉಪವಾಸ ಕುಳಿತ ಸೋಮಶೇಖರ ರೆಡ್ಡಿ

    ಬಳ್ಳಾರಿ: ತುಂಗಭದ್ರಾ ಅಣೆಕಟ್ಟು ತುಂಬಲೆಂದು ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಹರಕೆ ಹೊತ್ತು ಉಪವಾಸ ವೃತ ಆರಂಭಿಸಿದ್ದಾರೆ.

    ಇಂದು ಬೆಳಗ್ಗೆ ಡ್ಯಾಂ ಬಳಿಯ ಆಂಜನೇಯ ದೇವಸ್ಥಾನದಲ್ಲಿ ಸೋಮಶೇಖರ ರೆಡ್ಡಿ ಅವರು ವಿಶೇಷ ಪೂಜೆಯನ್ನು ನೆರವೇರಿಸಿದ್ದಾರೆ. ಪೂಜೆ ಬಳಿಕ ಉಪವಾಸ ವ್ರತ ಆಚರಣೆ ಆರಂಭಿಸಿದ್ದಾರೆ. ಈ ಹಿಂದೆಯೂ 2009ರಲ್ಲಿ ಡ್ಯಾಂ ತುಂಬಲೆಂದು ರೆಡ್ಡಿ ಉಪವಾಸ ಮಾಡಿದ್ದರು. ಆ ಸಂದರ್ಭದಲ್ಲಿ 18 ದಿನಗಳ ಉಪವಾಸದ ಬಳಿಕ ಡ್ಯಾಂ ತುಂಬಿತ್ತು. ಪರಿಣಾಮ ಸುತ್ತಮುತ್ತಲಿನ ರೈತರಿಗೆ ಒಳ್ಳೆಯ ಬೆಳೆ ಬೆಳೆಯಲು ಸಾಧ್ಯವಾಗಿತ್ತು.

    ಈ ಬಾರಿ ಮಳೆ ಜಿಲ್ಲೆಯಲ್ಲಿ ಸರಿಯಾಗಿ ಬರುತ್ತಿಲ್ಲ. ಮುಂಗಾರು ಮುಕ್ತಾಯವಾದರೂ ಜಿಲ್ಲೆಯಲ್ಲಿ ಮಳೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಉಪವಾಸ ಕುಳಿತರೆ ದೇವರು ಮಳೆಯನ್ನು ಕರುಣಿಸುವನು ಎಂಬ ಭರವೆಸಯಿಂದ ಶಾಸಕರು ಈ ನಿರ್ಧಾರ ಕೈಗೊಂಡಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]