Tag: tumkuru

  • ಯಡಿಯೂರು ಸಿದ್ದಲಿಂಗೇಶ್ವರನಿಗೆ ಬಿಎಸ್‍ವೈ ಪೂಜೆ – ಕೆಲವೇ ಕ್ಷಣಗಳಲ್ಲಿ 2ನೇ ದಿನದ ಯಾತ್ರೆ

    ಯಡಿಯೂರು ಸಿದ್ದಲಿಂಗೇಶ್ವರನಿಗೆ ಬಿಎಸ್‍ವೈ ಪೂಜೆ – ಕೆಲವೇ ಕ್ಷಣಗಳಲ್ಲಿ 2ನೇ ದಿನದ ಯಾತ್ರೆ

    ತುಮಕೂರು: ಬಿಜೆಪಿಯ ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗೆ ಇಂದು 2ನೇ ದಿನ. ಇಂದು ತುಮಕೂರು ಜಿಲ್ಲೆಯ ತುರುವೇಕೆರೆ ಚಿಕ್ಕನಾಯಕನಹಳ್ಳಿಯ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿವರ್ತನಾ ಯಾತ್ರೆ ಸಂಚರಿಸಲಿದೆ.

    ಗುರುವಾರ ರಾತ್ರಿ ಬಿ.ಎಸ್ ಯಡಿಯೂರಪ್ಪ ಮತ್ತವರ ಟೀಂ ಯಡಿಯೂರು ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿದ್ರು. ಇಂದು ಬೆಳಗ್ಗೆ ಯಡಿಯೂರು ಕ್ಷೇತ್ರದಲ್ಲಿ ಮನೆ ದೇವರು ಸಿದ್ದಲಿಂಗೇಶ್ವರರಿಗೆ ಬಿಎಸ್‍ವೈ ವಿಶೇಷ ಪೂಜೆ ಸಲ್ಲಿಸಿದ್ರು. ಬೆಳಗಿನ ಉಪಹಾರದ ಬಳಿಕ ಬಿಜೆಪಿ ರಥದಲ್ಲಿ ಯಡಿಯೂರಿನಿಂದ ತುರುವೇಕೆರೆಗೆ ತೆರಳಲಿದ್ದಾರೆ.

    ಮಧ್ಯಾಹ್ನ 3 ಗಂಟೆಗೆ ಚಿಕ್ಕನಾಯಕನ ಹಳ್ಳಿಯಲ್ಲಿ ಯಾತ್ರೆ ಕೈಗೊಂಡು ಸಂಜೆ 6 ಗಂಟೆ ವೇಳೆಗೆ ತುಮಕೂರು ಗ್ರಾಮಾಂತರಕ್ಕೆ ತಲುಪಲಿದ್ದಾರೆ.

    ಇಂದು ರಾತ್ರಿ ತುಮಕೂರಿನಲ್ಲೇ ಬಿಎಸ್ ಯಡಿಯೂರಪ್ಪ ವಾಸ್ತವ್ಯ ಹೂಡಲಿದ್ದಾರೆ.

     

  • ನಾಪತ್ತೆಯಾಗಿರೋ ಕಾನೂನು ಸಚಿವರನ್ನು ಹುಡುಕಿಕೊಡಿ: ಶಿರಾ ಗ್ರಾಮಸ್ಥರ ಮನವಿ

    ನಾಪತ್ತೆಯಾಗಿರೋ ಕಾನೂನು ಸಚಿವರನ್ನು ಹುಡುಕಿಕೊಡಿ: ಶಿರಾ ಗ್ರಾಮಸ್ಥರ ಮನವಿ

    ತುಮಕೂರು: ಶಿರಾ ತಾಲ್ಲೂಕಿನ ಕುಂಬಾರಹಳ್ಳಿ ಗ್ರಾಮಸ್ಥರು, ಕಾನೂನು ಸಚಿವ ಟಿ ಬಿ ಜಯಚಂದ್ರ ಅವರನ್ನು ಹುಡುಕಿಕೊಡುವಂತೆ ಸಾಮಾಜಿಕ ಜಾಲತಾಣ ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿ ಮನವಿ ಮಾಡಿದ್ದಾರೆ.

    ಓಟು ಕೇಳಲು ಬಂದಾಗ ಗ್ರಾಮಕ್ಕೆ ನೀರು, ರಸ್ತೆ ನೀಡುವುದಾಗಿ ಭರವಸೆ ನೀಡಿದ್ದರು. ಇದುವರೆಗೂ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿ, ಸಚಿವರನ್ನು ಹುಡಕಿಕೊಡುವಂತೆ ನರಸಿಂಹಮೂರ್ತಿ ಕುಂಬಾರಹಳ್ಳಿ ಎಂಬವರು ಪೋಸ್ಟ್ ಮಾಡಿದ್ದಾರೆ.

    ಗ್ರಾಮದ ಪಕ್ಕದಲ್ಲೇ ಇರುವ ತಮ್ಮ ಜಮಿನಿಗೆ ರಸ್ತೆ ಮಾಡಿಕೊಂಡಿದ್ದಾರೆ. ಆದರೆ ಜಮಿನಿಂದ ಎರಡು ಕಿ.ಮೀ ದೂರದ ನಮ್ಮ ಹಳ್ಳಿಗೆ ರಸ್ತೆ ಮಾಡಿಲ್ಲ ಎಂದು ಆರೋಪಿಸಿ, ಸಚಿವರ ಈ ಕಾರ್ಯಕ್ಕೆ ಅಸಮಧಾನಗೊಂಡ ಗ್ರಾಮಸ್ಥರು ಫೇಸ್ ಬುಕ್‍ನಲ್ಲಿ ಸಚಿವರನ್ನು ಹುಡುಕಿಕೊಡುವಂತೆ ಪೋಸ್ಟ್ ಮಾಡಿದ್ದಾರೆ.

    ಎಫ್‍ಬಿಯಲ್ಲಿ ಏನಿದೆ?
    ಶಿರಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಪ್ರಭಾವಿ ಕಾನೂನು ಮಂತ್ರಿಗಳಾದ ಜಯಚಂದ್ರ ರವರನ್ನು ಹುಡುಕಿ ಕೊಡಿ ಅಂತ ಕುಂಬಾರಹಳ್ಳಿಯ ಗ್ರಾಮಸ್ಥರ ಅಳಲು.

    ಇವರು ಸುಮಾರು ನಾಲ್ಕುವರೆ ವರ್ಷದ ಹಿಂದೆ ನಮ್ಮೂರಿಗೆ ಓಟು ಕೇಳಲು ಬಂದಾಗ ಮೂಲಭೂತ ಸೌಕರ್ಯಗಳಾದ ನೀರು, ರಸ್ತೆ ಇತ್ಯಾದಿ ಭರವಸೆಗಳನ್ನು ಕೊಟ್ಟು ಕೊಟ್ಟು ನಾಪತ್ತೆಯಾಗಿದ್ದಾರೆ. ಜೆ ಹೊಸಹಳ್ಳಿ, ಜುಂಜಪ್ಪ ದೇವಸ್ಥಾನದ ಹತ್ತಿರ ಸಚಿವರ ಜಮೀನು ಇದ್ದು. ಅವರ ಜಮೀನಿಗೆ ಹೋಗಲು ಕಳುವರಹಳ್ಳಿಯ ಕಡೆಯಿಂದ, ಕೆಇಬಿ ಕಡೆಯಿಂದ ಮತ್ತು ಬೂತಪ್ಪನ ದೇವಸ್ಥಾನದ ಕಡೆಯಿಂದಲೂ ಡಾಂಬರ್ ರಸ್ತೆ ನಿರ್ಮಿಸಿಕೊಂಡಿದ್ದಾರೆ.

    ಇದೇ ಸಚಿವರ ಜಮೀನಿಗೆ ಸುಮಾರು 2 ಕಿಲೋ ಮೀಟರ್ ಹತ್ತಿರ ಇರುವ ನಮ್ಮ ಊರು ಅವರ ಕಣ್ಣಿಗೆ ಕಂಡಿಲ್ಲ. ಭೂತಪ್ಪನ ಗುಡಿಯಿಂದ, ಕುಂಬಾರಹಳ್ಳಿ ಹಾಗೂ ಕುಂಬಾರಹಳ್ಳಿಯಿಂದ ಹೊನ್ನೇನಹಳ್ಳಿಯ ವರೆಗೆ ಮಳೆ ಬಂದರೆ ಓಡಾಡುವ ಗೋಳು ಆ ಶಿವನಿಗೇ ಮುಟ್ಟಬೇಕು. ಸುಮಾರು 40 ರಿಂದ 50 ವಿದ್ಯಾರ್ಥಿಗಳು ಬೂತಪ್ಪನ ಗುಡಿ ಹೈಸ್ಕೂಲ್ ಹಾಗೂ ತಾವರೆಕೆರೆ, ಶಿರಾ ಕಾಲೇಜುಗಳಿಗೆ ನಿತ್ಯ ಓಡಾಡುತ್ತಾರೆ. ಅದ್ದರಿಂದ ನೀವು ಕೊಟ್ಟ ಆಶ್ವಾಸನೆ ಇನ್ನೂ ಈಡೇರಿಲ್ಲ.

  • ಶೌಚಾಲಯಕ್ಕಾಗಿ ಧರಣಿ ಕುಳಿತ ತಾಲೂಕ್ ಪಂಚಾಯತ್ ಅಧಿಕಾರಿ!

    ಶೌಚಾಲಯಕ್ಕಾಗಿ ಧರಣಿ ಕುಳಿತ ತಾಲೂಕ್ ಪಂಚಾಯತ್ ಅಧಿಕಾರಿ!

    ತುಮಕೂರು: ತಮ್ಮ ಮನೆಯಲ್ಲಿ ಶೌಚಾಲಯ ಇಲ್ಲ ಎಂದು ಹೇಳಿ ಮಹಿಳೆಯರು ಮತ್ತು ಮಕ್ಕಳು ಧರಣಿ ಮಾಡಿರುವುದು ನೋಡಿದ್ದೇವೆ. ಆದರೆ ತಾಲೂಕಿನ ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿಯೇ ಶೌಚಾಲಯ ಕಟ್ಟಿಸಿಕೊಳ್ಳದ ಜನರ ವಿರುದ್ದ ಧರಣಿ ಕುಳಿತ ಘಟನೆ ತುಮಕೂರಿನಲ್ಲಿ ನಡೆದಿದೆ.

    ಇಒ ಡಾ. ಕೆ.ನಾಗಣ್ಣ ಬೆಳದರ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಕ್ಕೆನಳ್ಳಿಯಲ್ಲಿ ಧರಣಿ ಕುಳಿತಿದ್ದರು. ಈ ಗ್ರಾಮದಲ್ಲಿ 200 ಮನೆಗಳಿದ್ದು 85 ಮನೆಗಳಲ್ಲಿ ಶೌಚಾಲಯ ಇರಲಿಲ್ಲ. ಕಾರ್ಯಾದೇಶ ಕೊಟ್ಟರೂ ಮನೆಯವರು ಶೌಚಾಲಯ ಕಟ್ಟಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಇದರಿಂದಾಗಿ ಸ್ವಚ್ಚ ಭಾರತ ಮಿಷನ್ ಯೋಜನೆಗೆ ಹಿನ್ನಡೆಯಾಗುತಿತ್ತು.

    ಜನರ ವಿರುದ್ಧ ಅಸಮಾಧಾನಗೊಂಡ ಇಒ ನಾಗಣ್ಣ ಜನರ ವಿರುದ್ಧ ಧರಣಿ ಕುಳಿತಿದ್ದರು. ಬಳಿಕ ಶೌಚಾಲಯ ಕಟ್ಟಿಸಿಕೊಳ್ಳದ ಮನೆಯವರು ಬಂದು ಕಟ್ಟಿಸಿಕೊಳ್ಳುವ ಭರವಸೆ ಕೊಟ್ರು. ನಂತರ ಅಂದ್ರೆ ಶನಿವಾರ ಮಧ್ಯಾಹ್ನದ ವೇಳೆಗೆ ಧರಣಿ ವಾಪಸ್ ತೆಗೆದುಕೊಂಡಿದ್ದಾರೆ. ಶಾಲಾ ವಿದ್ಯಾರ್ಥಿಗಳು ಕೂಡಾ ಬಂದು ತಮ್ಮ ಮನೆಯಲ್ಲಿ ಶೌಚಾಲಯ ಕಟ್ಟಿಸಿಕೊಳ್ಳುತ್ತೇವೆ ಎಂದು ಇಒ ನಾಗಣ್ಣರಿಗೆ ಭರವಸೆ ನೀಡಿದ್ದರು.

     

  • ಪತ್ನಿ, ಮಗಳು, ಅತ್ತೆ ಮೇಲೆ ಮಚ್ಚಿನಿಂದ ಹಲ್ಲೆಗೈದ ಬ್ಯಾಂಕ್ ಉದ್ಯೋಗಿ

    ಪತ್ನಿ, ಮಗಳು, ಅತ್ತೆ ಮೇಲೆ ಮಚ್ಚಿನಿಂದ ಹಲ್ಲೆಗೈದ ಬ್ಯಾಂಕ್ ಉದ್ಯೋಗಿ

    ತುಮಕೂರು: ಮಾನಸಿಕ ಖಿನ್ನತೆಗೊಳಗಾಗಿದ್ದ ಬ್ಯಾಂಕ್ ಉದ್ಯೋಗಿಯೊಬ್ಬ ತನ್ನ ಪತ್ನಿ, ಮಗಳು ಹಾಗೂ ಅತ್ತೆ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಡೆದಿದೆ.

    ಪಾವಗಡದ ರೇನ್ ಗೇಜ್ ಬಡಾವಣೆಯಲ್ಲಿ ವಾಸವಿದ್ದ ಎಸ್‍ಬಿಐ ಬ್ಯಾಂಕ್ ನ ಉದ್ಯೋಗಿ ರವಿ ಎಂಬಾತ ತನ್ನ ಪತ್ನಿ ಮಾಧವಿ, ಅತ್ತೆ ಪದ್ಮಾವತಿ ಹಾಗೂ ಮಗಳು ಪ್ರಳವಿಕಾ ಮೇಲೆ ಮನಸೋ ಇಚ್ಚೆಯಂತೆ ಮಚ್ಚಿನಿಂದ ಹೊಡೆದು ಹಲ್ಲೆ ನಡೆಸಿದ್ದಾನೆ.

    ತಡರಾತ್ರಿ ನಿದ್ದೆಯಲ್ಲಿದ್ದ ಪತ್ನಿ ಮಾಧವಿ ಮೇಲೆ ಏಕಾಏಕಿ ಹಲ್ಲೆ ನಡೆಸಲು ಮುಂದಾಗಿದ್ದು, ತಡೆಯಲು ಹೋದ ಮಗಳು ಹಾಗೂ ಅತ್ತೆಗೂ ಸಹ ಮಚ್ಚು ಬೀಸಿದ್ದಾನೆ. ತೀವ್ರವಾಗಿ ಗಾಯಗೊಂಡ ಮೂವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಎಸ್‍ಬಿಐ ನಲ್ಲಿ ಕ್ಯಾಶಿಯರ್ ಆಗಿರುವ ರವಿ ಕಳೆದ ಎರಡು ತಿಂಗಳಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಅಲ್ಲದೆ ಇತ್ತೀಚೆಗೆ ಬೇರೆಡೆ ವರ್ಗವಾಗಿದ್ದರೂ ಸಹ ಹೋಗಿರಲಿಲ್ಲ. ಈ ಬಗ್ಗೆ ಪತ್ನಿ ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ. ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕ್ವಾಲಿಸ್ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಸ್ಥಳದಲ್ಲಿ ತಂದೆ, ಮಗ ಸಾವು

    ಕ್ವಾಲಿಸ್ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಸ್ಥಳದಲ್ಲಿ ತಂದೆ, ಮಗ ಸಾವು

    ತುಮಕೂರು: ಕ್ವಾಲಿಸ್ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕ್ವಾಲಿಸ್ ವಾಹನದಲ್ಲಿದ್ದ ತಂದೆ-ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಜಲ್ಲೆಯಲ್ಲಿ ನಡೆದಿದೆ.

    ತುಮಕೂರು ತಾಲೂಕಿನ ನರುಗನಹಳ್ಳಿ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ. ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್ ಸಿ ಕುಮಾರ್ ಹಾಗೂ ಅವರ ಮಗ ಜೀವನ ಮೃತಪಟ್ಟಿದ್ದಾರೆ.

    ತಂದೆ ಮಗ ಸೇರಿ ಹೊನ್ನುಡಿಕೆಯಿಂದ ತುಮಕೂರಿಗೆ ಬರುತಿದ್ದ ವೇಳೆ ದಾರಿ ಮಧ್ಯೆ ನರುಗನಹಳ್ಳಿ ಬಳಿ ಘಟನೆ ಸಂಭವಿಸಿದೆ. ಕುಣಿಗಲ್ ಕಡೆಗೆ ಹೋಗುತಿದ್ದ ಎಸ್‍ಆರ್‍ಎಸ್ ಖಾಸಗಿ ಬಸ್ ಚಾಲಕ ತನ್ನ ಮುಂದಿದ್ದ ವಾಹನಕ್ಕೆ ಓವರ್ ಟೇಕ್ ಮಾಡಲು ಹೋಗಿ ಎದುರಿಗೆ ಬಂದ ಕ್ವಾಲಿಸ್ ಗೆ ಡಿಕ್ಕಿ ಹೊಡೆದಿದ್ದಾನೆ.

    ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

     

  • ತುಮಕೂರು: ಗೋಣಿಚೀಲದಲ್ಲಿ ಕರುಗಳನ್ನು ಕಟ್ಟಿ ಕಸಾಯಿಖಾನೆಗೆ ಸಾಗಾಟ

    ತುಮಕೂರು: ಗೋಣಿಚೀಲದಲ್ಲಿ ಕರುಗಳನ್ನು ಕಟ್ಟಿ ಕಸಾಯಿಖಾನೆಗೆ ಸಾಗಾಟ

    ತುಮಕೂರು: ಜಿಲ್ಲೆಯಲ್ಲಿ ಜಾನುವಾರುಗಳನ್ನು ಅಮಾನವೀಯವಾಗಿ ಕೈ ಕಾಲುಗಳನ್ನು ಮುರಿದು ಗೋಣಿಚೀಲದಲ್ಲಿ ಹಾಕಿ ಕಸಾಯಿ ಖಾನೆಗೆ ಸಾಗಾಟ ಮಾಡುತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

    ಹುಲಿಯೂರು ದುರ್ಗದ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ರೀತಿ ನಿರ್ಧಯವಾಗಿ ದನಗಳ ಕರುಗಳನ್ನು ಕಸಾಯಿಖಾನೆಗೆ ಸಾಗಿಸುವರ ಸಂಖ್ಯೆ ಹೆಚ್ಚಾಗಿದೆ. ಸುತ್ತಮುತ್ತಲಿನ ಹಳ್ಳಿಗಳಿಂದ ಗಂಡು ಕರುಗಳನ್ನು ಕಡಿಮೆ ದುಡ್ಡಿಗೆ ಖರೀದಿಸಿ ಅವುಗಳ ಕೈಕಾಲು ಮುರಿದು ಚೀಲದಲ್ಲಿ ಕಟ್ಟಿ ಸಾಗಿಸಲಾಗುತ್ತಿದೆ.

    ದ್ವಿಚಕ್ರ ವಾಹನದಲ್ಲಿ ರಾಜರೋಷವಾಗಿ ಪ್ರತಿದಿನ ಕಸಾಯಿಖಾನೆಗೆ ಸಾಗಾಟ ಮಾಡಲಾಗುತ್ತಿದೆ. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಾಗೂ ಪೊಲೀಸರಿಗೆ ಈ ವಿಷಯ ತಿಳಿದಿದ್ದರೂ ಮೌನವಾಗಿದ್ದಾರೆಂದು ಇಲ್ಲಿನ ಸ್ಥಳೀಯರು ಆರೋಪಿಸುತ್ತಿದ್ದಾರೆ.

    ಹುಲಿಯೂರುದುರ್ಗ ಪೊಲೀಸ್ ಠಾಣೆ ಎದುರೇ ಕರುಗಳನ್ನು ಸಾಗಿಸಲಾಗುತ್ತದೆ. ಆದರೆ ಈವರೆಗೂ ಯಾರನ್ನು ಬಂಧಿಸಿಲ್ಲ. ಕುಣಿಗಲ್ ತಾಲೂಕಿನ ಹಲವೆಡೆ ಈ ರೀತಿ ಕರುಗಳನ್ನು ಸಾಗಾಟ ಮಾಡಲಾಗುತ್ತಿದೆ.

    ಹೆಣ್ಣು ಕರುಗಳನ್ನು ಸಾಕುವ ರೈತರು, ಗಂಡು ಕರುಗಳು ನಿರುಪಯುಕ್ತ ಎಂದು ಮಾರಾಟ ಮಾಡುತ್ತಿದ್ದಾರೆ. ಕರುಗಳ ಕೈ ಕಾಲು ಮುರಿದು ಚೀಲದಲ್ಲಿ ತರುವ ದೃಶ್ಯ ನೋಡಿದರೆ ಎಲ್ಲರ ಮನ ಕಲುಕುವಂತಿದೆ.

     

  • ಶೀಘ್ರದಲ್ಲೇ ರಾಜ್ಯಸರ್ಕಾರದಿಂದ ಬಡವರಿಗೆ ಸಿಗಲಿದೆ ಗುಡ್‍ನ್ಯೂಸ್

    ಶೀಘ್ರದಲ್ಲೇ ರಾಜ್ಯಸರ್ಕಾರದಿಂದ ಬಡವರಿಗೆ ಸಿಗಲಿದೆ ಗುಡ್‍ನ್ಯೂಸ್

    ತುಮಕೂರು: ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸಲು ಸರ್ಕಾರ ಚಿಂತನೆ ಮಾಡಿದ್ದು ಅಧಿಕೃತ ಆದೇಶವಷ್ಟೆ ಬಾಕಿ ಉಳಿದಿದೆ ಎಂದು ಸಚಿವ ಟಿಬಿ ಜಯಚಂದ್ರ ತುಮಕೂರಿನಲ್ಲಿ ಹೇಳಿದ್ದಾರೆ.

    ರಾಜ್ಯದ 10 ಲಕ್ಷ ಬಿಪಿಎಲ್ ಕುಟುಂಬಕ್ಕೆ ಉಚಿತವಾಗಿ ಗ್ಯಾಸ್ ಸಂಪರ್ಕ ನೀಡಲು ನಿರ್ಧರಿಸಲಾಗಿದೆ. ಅಡುಗೆ ಸ್ಟೌವ್ ಮತ್ತು ಸಿಲಿಂಡರ್‍ನ್ನು ಉಚಿತವಾಗಿ ಬಡವರಿಗೆ ನೀಡಲಾಗುತ್ತಿದೆ.

    ಶೀಘ್ರದಲ್ಲಿ ಈ ಯೋಜನೆ ಜಾರಿಯಾಗಲಿದ್ದು, ಪ್ರತಿ ಕುಟುಂಬಕ್ಕೆ 3 ಸಾವಿರ ರೂ. ಖರ್ಚಾಗುತ್ತದೆ. ಇದಕ್ಕಾಗಿ ರಾಜ್ಯ ಸರ್ಕಾರ 300 ಕೋಟಿ ರೂ. ವ್ಯಯಿಸಲಿದೆ ಎಂದು ಸಚಿವ ಜಯಚಂದ್ರ ಅವರು ಹೇಳಿದರು.

    ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ (ಎಲ್‍ಪಿಜಿ) ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಲಿರುವ ಯೋಜನೆಗೆ `ಮುಖ್ಯಮಂತ್ರಿ ಅನಿಲ ಭಾಗ್ಯ’ ಎಂದು ಹೆಸರಿಡಲಾಗಿದೆ. ಕೇಂದ್ರ ಸರ್ಕಾರದ `ಉಜ್ವಲ’ ಯೋಜನೆಯಡಿ ಅನಿಲ ಸಂಪರ್ಕ ದೊರೆಯದ ಫಲಾನುಭವಿಗಳಿಗೆ ಅನಿಲ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ.

    ಉಜ್ವಲದಲ್ಲಿ ಕೇವಲ ಅನಿಲ ಸಂಪರ್ಕ ಮಾತ್ರ ನೀಡಲಾಗುತ್ತದೆ. ಆದರೆ, ರಾಜ್ಯ ಸರ್ಕಾರದ ಯೋಜನೆಯಲ್ಲಿ ಸ್ಟೌ ಕೂಡಾ ವಿತರಣೆಯಾಗಲಿದೆ. ಆದರೆ ಯಾವುದಾದರೂ ಒಂದು ಯೋಜನೆಯಡಿ ಮಾತ್ರ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ. ಉಜ್ವಲದಲ್ಲಿ ಸಂಪರ್ಕ ಪಡೆಯಲು ಇಚ್ಚಿಸದವರು ರಾಜ್ಯ ಸರ್ಕಾರದ ಯೋಜನೆ ಆಯ್ಕೆ ಮಾಡಿಕೊಳ್ಳಬಹುದು ಎಂದು ಈ ಹಿಂದೆ ಆಹಾರ ಸಚಿವ ಯುಟಿ ಖಾದರ್ ತಿಳಿಸಿದ್ದರು.

  • ತುಮಕೂರು: ಕಿಡಿಗೇಡಿಗಳಿಂದ ರಾಷ್ಟ್ರಧ್ವಜದಲ್ಲಿ ವಾಮಾಚಾರ

    ತುಮಕೂರು: ಕಿಡಿಗೇಡಿಗಳಿಂದ ರಾಷ್ಟ್ರಧ್ವಜದಲ್ಲಿ ವಾಮಾಚಾರ

    ತುಮಕೂರು: ರಾಷ್ಟ್ರಧ್ವಜದಲ್ಲಿ ಮಾಟ-ಮಂತ್ರ ಮಾಡುವ ಮೂಲಕ ಧ್ವಜಕ್ಕೆ ಅವಮಾನ ಎಸಗಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹಾಲ್ಬೂರಿನಲ್ಲಿ ನಡೆದಿದೆ.

    ತ್ರಿವರ್ಣ ಧ್ವಜದಲ್ಲಿ ನಿಂಬೆ ಹಣ್ಣು, ಕುಡಿಕೆ, ಕುಂಕುಮಗಳನ್ನು ಇಟ್ಟು ವಾಮಾಚಾರ ಮಾಡಲಾಗಿದೆ. ಮೊದಲು ಹಸಿರು ಬಟ್ಟೆಯಲ್ಲಿ ಮಾಟ ಮಂತ್ರದ ವಸ್ತುಗಳನ್ನು ಕಟ್ಟಿ ಬಳಿಕ ಅದಕ್ಕೆ ರಾಷ್ಟ್ರದ್ವಜ ಸುತ್ತಲಾಗಿದೆ. ಹೀಗೆ ಕಟ್ಟಿದ ಪೊಟ್ಟಣವನ್ನು ಹಾಲ್ಬೂರು ಕೆರೆಯ ಮಲೀನ ಪ್ರದೇಶದಲ್ಲಿ ಎಸೆದು ಅವಮಾನ ಮಾಡಲಾಗಿದೆ. ಇದನ್ನು ಕಂಡ ಗ್ರಾಮಸ್ಥರು ಧ್ವಜವನ್ನು ಬೇರ್ಪಡಿಸಿ ಮನೆಗೆ ಕೊಂಡೊಯ್ದಿದ್ದಾರೆ.

    ನೊಣವಿನಕೆರೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ನಕಲಿ ನೋಟು ಕೊಟ್ಟಿದ್ದಕ್ಕೆ ಪ್ರಶ್ನಿಸಿದ ಗ್ರಾಹಕನ ಮೇಲೆ ಹಲ್ಲೆಗೆ ಮುಂದಾದ ಅಂಗಡಿ ಮಾಲೀಕ!

    ನಕಲಿ ನೋಟು ಕೊಟ್ಟಿದ್ದಕ್ಕೆ ಪ್ರಶ್ನಿಸಿದ ಗ್ರಾಹಕನ ಮೇಲೆ ಹಲ್ಲೆಗೆ ಮುಂದಾದ ಅಂಗಡಿ ಮಾಲೀಕ!

    ತುಮಕೂರು: ಜಿಲ್ಲೆಯ ಪಾವಗಡದಲಲ್ಲಿ 100 ರೂ ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿವೆ.

    ವೈಎನ್ ಹೊಸಕೋಟೆಯ ನ್ಯೂ ಪ್ರಾವಿಜನ್ ಸ್ಟೋರ್ಸ್ ನಲ್ಲಿ ಈ ನೋಟುಗಳು ಪತ್ತೆಯಾಗಿದ್ದು, ಅಂಗಡಿ ಮಾಲೀಕ ಧಾದಪೀರ್ ಬಳಿ ಹಲವಾರು ನಕಲಿ ನೋಟುಗಳು ಇರುವುದು ಕಂಡುಬಂದಿದೆ.

    ಈ ಬಗ್ಗೆ ಈಗಾಗಲೇ ಹಲವು ಬಾರಿ ದೂರು ದಾಖಲಾಗಿದ್ದರೂ ಮತ್ತೆ ಆತನ ಅಂಗಡಿಯಿಂದಲೇ ಖೊಟಾ ನೋಟುಗಳು ಚಲಾವಣೆಯಾಗುತ್ತಿರುವುದರಿಂದ ಇದೀಗ ಸಾರ್ವಜನಿಕರು ರೊಚ್ಚಿಗೆದ್ದಿದ್ದಾರೆ.

    ಗ್ರಾಹಕ ನಾಗೇಶ್ ಎಂಬವರಿಗೆ ಅಂಗಡಿ ಮಾಲೀಕ ದಾಧಪಿರ್ 2000 ರೂ ಗೆ ಚಿಲ್ಲರೆ ನೀಡುವಾಗ 100ರ ಮುಖಬೆಲೆಯ 9 ನಕಲಿ ನೋಟು ನೀಡಿದ್ದಾನೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ದಾದಫಿರ್ ಮತ್ತು ಆತನ ಸಹಚರರು ನಾಗೇಶ್ ಮತ್ತು ಸ್ನೇಹಿತರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

    ಈ ಬಗ್ಗೆ ವೈ ಎನ್ ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ: ವೈದ್ಯರು ಹೇಳಿದ್ದೇನು?

    ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ: ವೈದ್ಯರು ಹೇಳಿದ್ದೇನು?

    ಬೆಂಗಳೂರು: ನಡೆದಾಡುವ ದೇವರು ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ಪಿತ್ತನಾಳದಲ್ಲಿ ಅಳವಡಿಸಿದ್ದ ಸ್ಟೆಂಟ್‍ಗೆ ಸೋಂಕು ತಗಲಿದ ಪರಿಣಾಮ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಸುಮಾರು ಒಂದು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಲಾಯ್ತು.

    ಖ್ಯಾತ ವೈದ್ಯ ಗ್ಯಾಸ್ಟ್ರೋ ಎಂಟಾಲಾಜಿಸ್ಟ್ ಡಾ.ರವೀಂದ್ರ ನೇತೃತ್ವದಲ್ಲಿ ಎಂಡೋಸ್ಕೊಪಿ ಮೂಲಕ ಸ್ಟೆಂಟ್ ಬದಲಾವಣೆ ಮಾಡಲಾಯ್ತು. ಸದ್ಯ ಶ್ರೀಗಳನ್ನು ಜನರಲ್ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದ್ದು, ಇನ್ನು 24 ಗಂಟೆಗಳಲ್ಲಿ ಶ್ರೀಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ. ಶನಿವಾರ ಸಂಜೆ ವೇಳೆಗೆ ಸಿದ್ದಗಂಗಾ ಮಠಕ್ಕೆ ತೆರಳುವ ಸಾಧ್ಯತೆಯಿದೆ.

    ಇದಕ್ಕೂ ಮುನ್ನ ಶ್ರೀಗಳು, ನನಗೆ ಮಠದಲ್ಲೇ ಚಿಕಿತ್ಸೆ ನೀಡಿ ಅಂತ ಒತ್ತಾಯ ಮಾಡಿದ್ರು. ಕಡೆಗೆ ವೈದ್ಯರು ಮನವೊಲಿಸಿ ಶಸ್ತ್ರಚಿಕಿತ್ಸೆಗೆ ಒಪ್ಪಿಸಿದ್ರು. ಶ್ರೀಗಳು ಬಿಜಿಎಸ್ ಆಸ್ಪತ್ರೆಗೆ ದಾಖಲಾಗ್ತಿದ್ದಂತೆ, ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ಸುತ್ತೂರು ದೇಶಿಕೇಂದ್ರ ಶ್ರೀಗಳು, ಕೊಳದಮಠ ಸ್ವಾಮೀಜಿ, ವಿ. ಸೋಮಣ್ಣ, ನಟ ಗಣೇಶ್ ದಂಪತಿ ಸೇರಿದಂತೆ ಹಲವು ಗಣ್ಯರು ಶ್ರೀಗಳ ಆರೋಗ್ಯ ವಿಚಾರಿಸಿದ್ರು.

    ವೈದ್ಯರು ಹೇಳಿದ್ದೇನು?
    ಶ್ರೀಗಳ ಪಿತ್ತನಾಳ ಬ್ಲಾಕ್ ಆಗಿತ್ತು. ಯೂರಿನ್, ನಿಮೋನಿಯ ಇನ್ಫೆಕ್ಷನ್ ಆಗಿತ್ತು. ಸ್ಟೆಂಟ್ ಒಳಗೆಯೇ ಮತ್ತೊಂದು ಸ್ಟೆಂಟ್ ಅಳವಡಿಸಲಾಗಿದೆ. ಕಳೆದ ಬಾರಿಯಂತೆ ಮೆಟಲ್ ಸ್ಟೆಂಟ್ ಅಳವಡಿಸಲಾಗಿದೆ. ಸ್ವಾಮೀಜಿ ಅವರಿಗೆ 110 ವಯಸ್ಸಾಗಿರೋದ್ರಿಂದ ಅನಸ್ತೇಶಿಯಾ ನೀಡಿ ಸರ್ಜರಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಮೈಲ್ಡ್ ಅನಸ್ತೇಶಿಯಾ ನೀಡಿ ಎಂಡೋಸ್ಕೊಪಿ ಮೂಲಕ ಸ್ಟೆಂಟ್ ಅಳವಡಿಸಲಾಗಿದೆ. 24 ಗಂಟೆಯಲ್ಲಿ ಸ್ವಾಮೀಜಿ ಚೇತರಿಸಿಕೊಳ್ಳಲಿದ್ದಾರೆ. ದೇವರ ಆಶೀರ್ವಾದದಿಂದ ಚಿಕಿತ್ಸೆ ಸಫಲ ಆಗಿದೆ. ಮೆಟಲ್ ಸ್ಟೆಂಟ್ ಒಂದು ವರ್ಷದ ಕಾಲ ಅವಧಿ ಇರಲಿದೆ. ಕಳೆದ ಒಂದು ವಾರದಿಂದ ಶ್ರೀಗಳು ಜ್ವರದಿಂದ ಬಳಲುತ್ತಿದ್ದರು. ಅವರಿಗೆ ವಯೋಸಹಜ ಬಳಲಿಕೆ ಇದ್ದು ಗುರುವಾರ ಮಠದಲ್ಲಿ ಅವರಿಗೆ ಔಷಧಿ ನೀಡಿದ್ದೇವು ಎಂದು ಶಸ್ತ್ರ ಚಿಕಿತ್ಸೆಯ ನೇತೃತ್ವ ವಹಿಸಿದ್ದ ಡಾ.ರವೀಂದ್ರ ತಿಳಿಸಿದರು.