Tag: tumkuru

  • ದಾರಿ ಮಧ್ಯೆಯೇ ಇಬ್ಬರು ಇಳಿದಿದ್ದು ಕಂಡು ಬಸ್ಸಿನಲ್ಲಿ ಬಾಂಬ್ ಇದೆ ಅಂತ ಭಯಗೊಂಡ ಪ್ರಯಾಣಿಕರು

    ದಾರಿ ಮಧ್ಯೆಯೇ ಇಬ್ಬರು ಇಳಿದಿದ್ದು ಕಂಡು ಬಸ್ಸಿನಲ್ಲಿ ಬಾಂಬ್ ಇದೆ ಅಂತ ಭಯಗೊಂಡ ಪ್ರಯಾಣಿಕರು

    ತುಮಕೂರು: ಇಬ್ಬರು ಪ್ರಯಾಣಿಕರು ದಾರಿ ಮಧ್ಯೆ ಇಳಿದಿದ್ದನ್ನು ಕಂಡು ಖಾಸಗಿ ಬಸ್ಸಿನಲ್ಲಿ ಬಾಂಬ್ ಇದೆ ಎಂದು ಇತರೆ ಪ್ರಯಾಣಿಕರು ಭಯಗೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ.

    ಬೆಂಗಳೂರಿನಿಂದ ಸಿಂದಗಿಗೆ ಬಸ್ ಹೊರಟಿದ್ದು, ದಾರಿ ಮಧ್ಯೆ ತುಮಕೂರಿನ ಕ್ಯಾತಸಂದ್ರ ಬಳಿ ಇಬ್ಬರು ಪ್ರಯಾಣಿಕರು ಬಸ್‍ನಿಂದ ಇಳಿದ್ದರು. ಇಬ್ಬರು ಪ್ರಯಾಣಿಕರು ಬಸ್ಸಿನಿಂದ ಇಳಿದಿದ್ದನ್ನ ಕಂಡು ಬಾಂಬ್ ಇದೆ ಎಂದು ಇತರೆ ಪ್ರಯಾಣಿಕರು ಭಯಗೊಂಡರು.

    ಇಬ್ಬರು ಪ್ರಯಾಣಿಕರು ಸಿಂದಗಿಗೆ ಹೋಗಲೆಂದೇ ಬಸ್ ಹತ್ತಿದ್ದರು. ದಾರಿ ಮಧ್ಯೆ ಇಳಿದು ವಾಪಸ್ ಬಾರದೇ ಇದ್ದಾಗ ಇತರೆ ಪ್ರಯಾಣಿಕರು ಅನುಮಾನಗೊಂಡು ಬಾಂಬ್ ಇಟ್ಟಿರಬಹುದು ಎಂದು ತಮಗೆ ತಾವೇ ಅನುಮಾನಗೊಂಡರು.

    ತುಮಕೂರು ಹೊಸಬಡಾವಣೆ ಠಾಣೆಗೆ ಬಂದು ಪರಿಶೀಲಿಸಿದಾಗ ಪ್ರಯಾಣಿಕರ ಅನುಮಾನಕ್ಕೆ ತೆರೆ ಬಿದಿದ್ದೆ. ಪೊಲೀಸರು ಬಾಂಬ್ ಅನುಮಾನಕ್ಕೆ ತೆರೆ ಎಳೆದ ನಂತರ ಪ್ರಯಾಣಿಕರು ಸುರಕ್ಷಿತವಾಗಿ ಸಿಂದಗಿಯತ್ತ ಹೊರಟರು.

  • ಕ್ಷೇತ್ರದ ಜನರು ಪೊರಕೆ ಏಟು ನೀಡಿದರೂ ಸ್ವೀಕರಿಸುತ್ತೇನೆ :ಡಿಕೆಶಿ

    ಕ್ಷೇತ್ರದ ಜನರು ಪೊರಕೆ ಏಟು ನೀಡಿದರೂ ಸ್ವೀಕರಿಸುತ್ತೇನೆ :ಡಿಕೆಶಿ

    ತುಮಕೂರು: ಜನರು ಬೇಕಾದರೆ ಪೊರಕೆ ಏಟು ನೀಡಲಿ, ಅವರು ಯಾವಾಗ ಬೇಕಾದರೂ ಹೊಡೆಯಲಿ ನಾನು ತಿನ್ನುತ್ತೇನೆ. ಇದು ರಾಜಕೀಯ ಬದ್ಧತೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಚನ್ನಪಟ್ಟಣವನ್ನು ನಾನು ರಾಜಕೀಯವಾಗಿ ಮದುವೆಯಾಗಿದ್ದೇನೆ ಎಂದು ಬುಧವಾರ ಡಿಕೆ ಶಿವ ಕುಮಾರ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಟೀಕಿಸಿ ಯೋಗೇಶ್ವರ್, ಮಹಿಳೆಯಿಂದ ಪೊರಕೆಯಲ್ಲಿ ಡಿಕೆಶಿಗೆ ಹೊಡೆಸುತ್ತೇನೆ ಎಂದು ಹೇಳಿದ್ದಕ್ಕೆ ಸಚಿವರು ಈ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ.

    ತುಮಕೂರಿನ ತುರುವೇಕೆರೆಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣದ ಒಂದು ಹೋಬಳಿಯ ಜನತೆ ನನ್ನನ್ನು ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಹಾಗಾಗಿ ಅಲ್ಲಿಯ ಜನರ ನಡುವೆ ಉತ್ತಮ ಬಾಂಧವ್ಯವಿದೆ. ಅದು ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧವಾಗಿದ್ದು, ಮದುವೆ ಎಂದರೇ ರಾಜಕೀಯ ಮದುವೆ ಅವರ ಹಾಗೇ ಮದುವೆಯಲ್ಲ. ನನ್ನದು ರಾಜಕೀಯ ಬದ್ಧತೆ. ಜನರು ಬೇಕಾದರೆ ಪೊರಕೆ ಏಟು ನೀಡಲಿ ನಾನು ತಿನ್ನುತ್ತೇನೆ, ಅವರು ಯಾವಾಗ ಬೇಕಾದರೂ ಹೊಡೆಯಲಿ ಎಂದು ಹೇಳಿದರು.

    ಡಿಕೆಶಿ ವಿರುದ್ಧ ಸಾಮಾನ್ಯ ಅಭ್ಯರ್ಥಿ ನಿಲ್ಲಿಸಿ ಗೆಲ್ಲಿಸಿ ತರುತ್ತೇನೆ ಎಂಬ ಸಿಪಿ ಯೋಗೇಶ್ವರ್ ಮಾತಿಗೆ ಸಿಡಿಮಿಡಿಕೊಂಡ ಅವರು, ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಮೊದಲು ಗೆಲ್ಲಲಿ. ಬಳಿಕ ನನ್ನ ವಿರುದ್ಧ ಸಾಮಾನ್ಯರನ್ನು ನಿಲ್ಲಿಸಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಮಹಿಳೆಯಿಂದ ಕೊರಳಪಟ್ಟಿ ಹಿಡಿಸಿ ಪೊರಕೆಯಲ್ಲಿ ಹೊಡೆಸ್ತೀನಿ- ಡಿಕೆಶಿ ವಿರುದ್ಧ ಶಾಸಕ ಯೋಗೇಶ್ವರ್ ವಾಗ್ದಾಳಿ

    ದಲಿತರ ಹತ್ಯೆ ಕುರಿತ ಸಿಪಿ ಯೋಗೇಶ್ವರ್ ಆರೋಪಕ್ಕೆ ಕಿಡಿಕಾರಿದ ಸಚಿವರು, ದಲಿತರ ಹತ್ಯೆ ಮಾಡಿದ್ದಾರೆ ಎನ್ನುವುದಕ್ಕೆ ಅವರು ಸಾಕ್ಷ್ಯ ತೋರಿಸಲಿ, ಬೇಕಾದರೆ ಕೇಸ್ ಹಾಕಲಿ. ಏಕವಚನದಲ್ಲಿ ಮಾತನಾಡುವುದು ಅವರ ಸಂಸ್ಕøತಿಯನ್ನು ತೋರಿಸುತ್ತದೆ. ಅವರು ಸಿನಿಮಾ ನಟರು, ನಮ್ಮ ಯೋಗೀಶಣ್ಣ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಅಭ್ಯರ್ಥಿ ಇಲ್ಲಿ ನೆಪ ಮಾತ್ರ, ನಾನು-ಡಿ.ಕೆ.ಸುರೇಶ್ ಇಲ್ಲಿನ ನಿಜವಾದ ಅಭ್ಯರ್ಥಿಗಳು ನೆನಪಿರಲಿ: ಚನ್ನಪಟ್ಟಣದಲ್ಲಿ ಡಿಕೆಶಿ ಅಬ್ಬರ

     

  • ಬೆಳ್ಳಿ ತಟ್ಟೆಯಲ್ಲಿ ಸಿಎಂ ಸಿದ್ದರಾಮಯ್ಯ ಉಪಹಾರ ಸೇವನೆ- ಶಾಸಕ ಕೆ.ಎನ್ ರಾಜಣ್ಣರಿಂದ ರಾಜಾತಿಥ್ಯ

    ಬೆಳ್ಳಿ ತಟ್ಟೆಯಲ್ಲಿ ಸಿಎಂ ಸಿದ್ದರಾಮಯ್ಯ ಉಪಹಾರ ಸೇವನೆ- ಶಾಸಕ ಕೆ.ಎನ್ ರಾಜಣ್ಣರಿಂದ ರಾಜಾತಿಥ್ಯ

    ತುಮಕೂರು: ಜಿಲ್ಲೆಯ ಮಧುಗಿರಿ ಕ್ಷೇತ್ರ ಶಾಸಕದ ಕೆ.ಎನ್ ರಾಜಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ರಾಜಾತಿಥ್ಯವನ್ನು ನೀಡಿದ್ದು, ಸಿಎಂ ಬೆಳ್ಳಿ ತಟ್ಟೆಯಲ್ಲಿ ಉಪಹಾರ ಸೇವಿಸಿದ್ದಾರೆ.

    ಗುರುವಾರ ಜಿಲ್ಲೆಯಲ್ಲಿ ಏರ್ಪಡಿಸಲಾಗಿದ್ದ ಸರ್ಕಾರದ ಸಾಧನಾ ಸಮಾವೇಶದಲ್ಲಿ ಭಾಗವಹಿಸಲು ಸಿಎಂ ಸಿದ್ದರಾಮಯ್ಯ ಶಿರಾಗೆ ಆಗಮಿಸಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಭಾವಹಿಸುವ ಮುನ್ನ ಕ್ಯಾತಸಂದ್ರದಲ್ಲಿರುವ ಮಧುಗಿರಿಯ ಶಾಸಕ ಕೆ.ಎನ್ ರಾಜಣ್ಣ ಅವರ ಮನೆಯಲ್ಲಿ ಬೆಳ್ಳಿ ತಟ್ಟೆ, ಲೋಟಾದಲ್ಲಿ ಉಪಹಾರ ಸೇವನೆ ಮಾಡಿದ್ದರು. ಅಲ್ಲದೇ ಸಿಎಂ ಕಾಫಿ ಹಾಗೂ ಡ್ರೈಫ್ರೂಟ್ ಸೇವಿಸಲು ನೀಡಿದ್ದ ವಸ್ತುಗಳು ಬೆಳ್ಳಿಯಿಂದ ತಯಾರು ಮಾಡಿದ್ದವು.

     

    ಸಿಎಂ ಸಿದ್ದರಾಮಯ್ಯ ಅವರು ಸರಳ ಜೀವನ ಹಾಗೂ ಸಮಾಜವಾದಿ ಹಿನ್ನೆಲೆಯಿಂದ ಬೆಳೆದು ಬಂದ ನಾಯಕರಗಿದ್ದೂ, ಪ್ರಸ್ತುತ ಅವರು ಸ್ವೀಕರಿಸಿರುವ ರಾಜಾತಿಥ್ಯ ಭಾರೀ ಚರ್ಚೆಗೆ ಕಾರಣವಾಗಿದೆ.

    ಕಳೆದ ಡಿಸೆಂಬರ್ 17 ರಂದು ಕಲಬುರಗಿಯಲ್ಲಿ ನಡೆದ ಸಾಧನಾ ಸಮಾವೇಶ ಮುಗಿದ ನಂತರ ಸಿಎಂ ಸಿದ್ದರಾಮಯ್ಯದ ಹಾಗೂ ಸಹೋದ್ಯೋಗಿಗಳ ಭೋಜನಕ್ಕೆ ಬೆಳ್ಳಿ ತಟ್ಟೆಯನ್ನು ಬಳಕೆ ಮಾಡಲಾಗಿದ್ದು, ಈ ಭೋಜನ ಕೂಟಕ್ಕಾಗಿ ಸುಮಾರು 10ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ಕಲಬುರುಗಿ ಬಿಜೆಪಿ ಘಟಕದ ಮಾಜಿ ಜಿಲ್ಲಾಧ್ಯಕ್ಷ ರಾಜಕುಮಾರ್ ತೇಲ್ಕೂರ ಆರೋಪ ಮಾಡಿದ್ದರು. ಆದರೆ ಜಿಲ್ಲಾಡಳಿತ ಈ ಆರೋಪವನ್ನು ತಿರಸ್ಕರಿಸಿ ಭೋಜನ ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಸಮಿಸಿ ಆಯೋಜಿಸಿತ್ತು ಎಂದು ಹೇಳಿತ್ತು.

    https://www.youtube.com/watch?v=gszg55IJ6cE

  • ಸೇತುವೆಗೆ ಡಿಕ್ಕಿ ಹೊಡೆದ ಕ್ರೂಸರ್ – ಸ್ಥಳದಲ್ಲೇ ಇಬ್ಬರ ಸಾವು

    ಸೇತುವೆಗೆ ಡಿಕ್ಕಿ ಹೊಡೆದ ಕ್ರೂಸರ್ – ಸ್ಥಳದಲ್ಲೇ ಇಬ್ಬರ ಸಾವು

    ತುಮಕೂರು: ಕ್ರೂಸರ್ ವಾಹನ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ.

    ಮಂಜುನಾಥ್(35), ಮೊಹಮ್ಮದ್ ನೇಮತ್ ಉಲ್ಲಾ (42) ಮೃತ ದುರ್ದೈವಿಗಳಾಗಿದ್ದು, ಮೂಲತಃ ಶಿವಮೊಗ್ಗ ಮೂಲದವರು ಎಂದು ತಿಳಿದು ಬಂದಿದೆ.

    ಹಿರಿಯೂರು ಕಡೆಯಿಂದ ಬರುತ್ತಿದ್ದ ಕ್ರೂಸರ್ ವಾಹನ ಶಿರಾ ಪಟ್ಟಣ ಆಂಜನೇಯ ದೇವಾಲಯದ ಬಳಿ ಇರುವ ಸೇತುವೆಗೆ ಡಿಕ್ಕಿ ಹೊಡೆದಿದೆ. ಕ್ರೂಸರ್ ಚಾಲಕನ ಅತಿ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಕ್ರೂಸರ್ ವಾಹನದಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಈ ವೇಳೆ ಕ್ರೂಸರ್ ನಲ್ಲಿ ಐದು ಜನ ಪ್ರಯಾಣಿಸುತ್ತಿದ್ದು, ಶೇಖ್ ಅಬ್ದುಲ್ಲಾ, ಅಫ್ರಿದ್, ಖಲಂದರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಕುರಿತು ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ರಾಹುಲ್ ಗಾಂಧಿ ನಾಯಕತ್ವಕ್ಕೆ ಪ್ರೋತ್ಸಾಹ ಸಿಕ್ಕಿದೆ, ವಿಶ್ವಾಸ ಹೆಚ್ಚಿದೆ: ಜಿ. ಪರಮೇಶ್ವರ್

    ರಾಹುಲ್ ಗಾಂಧಿ ನಾಯಕತ್ವಕ್ಕೆ ಪ್ರೋತ್ಸಾಹ ಸಿಕ್ಕಿದೆ, ವಿಶ್ವಾಸ ಹೆಚ್ಚಿದೆ: ಜಿ. ಪರಮೇಶ್ವರ್

    ತುಮಕೂರು: ಗುಜರಾತ್ ನಲ್ಲಿ ರಾಹುಲ್ ಗಾಂಧಿ ನಾಯಕತ್ವಕ್ಕೆ ಪ್ರೋತ್ಸಾಹ ಸಿಕ್ಕಿದೆ ಎಂದು ತುಮಕೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದರು.

    ಗುಜರಾತ್ ನಲ್ಲಿ ರಾಹುಲ್ ಗಾಂಧಿ ನಾಯಕತ್ವಕ್ಕೆ ಪ್ರೋತ್ಸಾಹ ಸಿಕ್ಕಿದೆ ಹಾಗೂ ಅವರಿಗೂ ಕೂಡಾ ವಿಶ್ವಾಸ ಹೆಚ್ಚಿದೆ. ಎರಡೂ ಕ್ಷೇತ್ರದಲ್ಲಿ ಅಧಿಕಾರ ಹಿಡಿಯುವ ನಿರೀಕ್ಷೆ ಇನ್ನೂ ಇದೆ ಎಂದು ಪರಮೇಶ್ವರ್ ತಿಳಿಸಿದರು.

    ರಾಹುಲ್ ಗಾಂಧಿ ಪ್ರಚಾರ ಮಾಡಿದ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಹೆಚ್ಚಿದೆ ಎನ್ನುವುದು ಸುಳ್ಳು. ಹಿಮಾಚಲದಲ್ಲಿ ಕಳೆದ 15 ವರ್ಷ ಗಳಿಂದ ನಮ್ಮ ಸರ್ಕಾರ ಇತ್ತು. ಹಾಗಾಗಿ ಸ್ವಾಭಾವಿಕವಾಗಿ ವಿರೋಧಿ ಅಲೆ ಬಂದಿರಬಹುದೇನೋ ಎಂದು ಪರಮೇಶ್ವರ್ ಪ್ರತಿಕ್ರಿಯಿಸಿದರು.

    ಇವಿಎಂನಲ್ಲಿ ಈಗಲೂ ಸಂಪೂರ್ಣ ನಂಬಿಕೆ ಇಲ್ಲ. ಇವಿಎಂ ಹೈಜಾಕ್ ಮಾಡಬಹುದು ಎಂದು ಅಮೆರಿಕದ ವಿಶ್ವವಿದ್ಯಾಲಯ ಹೇಳಿದೆ. ಕರ್ನಾಟಕದಲ್ಲಿ ಬ್ಯಾಲೆಟ್ ಪೇಪರ್ ತರುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇವೆ ಎಂದು ಜಿ.ಪರಮೇಶ್ವರ್ ಹೇಳಿದರು.

  • ಪುರುಷರಿಗೆ ನಾವೂ ಸೆಕ್ಯೂರಿಟಿ ಇದ್ದ ಹಾಗೆ: ಉಮಾಶ್ರೀ ಮಾತಿಗೆ ನಗೆಗಡಲಲ್ಲಿ ತೇಲಾಡಿದ ಜನ

    ಪುರುಷರಿಗೆ ನಾವೂ ಸೆಕ್ಯೂರಿಟಿ ಇದ್ದ ಹಾಗೆ: ಉಮಾಶ್ರೀ ಮಾತಿಗೆ ನಗೆಗಡಲಲ್ಲಿ ತೇಲಾಡಿದ ಜನ

    ತುಮಕೂರು: ಜಿಲ್ಲೆಯ ಕೊರಟಗೆರೆ ಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಸಮಾರಂಭದಲ್ಲಿ ನೆರೆದಿದ್ದ ಜನರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.

    ಸಮಾರಂಭದಲ್ಲಿ ಮಹಿಳೆಯರ ದಿನನಿತ್ಯದ ಕಾರ್ಯಕ್ರಮಗಳಲ್ಲಿ ಶ್ರಮವಹಿಸುವ ಕುರಿತು ಮತನಾಡಿದ ಅವರು, ನಾವು ಮಹಿಳೆಯರು ಇಲ್ಲದೆ ಇದ್ರೆ ಏನೂ ಆಗಲ್ಲ. ಪುರುಷರಿಗೆ ನಾವೂ ಸೆಕ್ಯೂರಿಟಿ ಇದ್ದ ಹಾಗೆ. ಬೆಳಗ್ಗೆ ಬ್ರೆಷ್, ಟೂತ್ ಪೇಸ್ಟ್ ಕೊಡುವುದರಿಂದ ಹಿಡಿದು ನಾವು ಪುರುಷರ ಸೇವೆ ಆರಂಭಿಸಬೇಕು. ಒಂದು ದಿನ ನಮ್ಮನ್ನು ಬಿಟ್ಟು ನೀವು ನಿಮ್ಮ ಕೆಲಸ ಮಾಡಿಕೊಳ್ಳಿ ಅಣ್ಣ ಎಂದು ವೇದಿಕೆ ಮೇಲಿದ್ದ ಜಿ.ಪರಮೇಶ್ವರ್, ಸಚಿವ ಟಿಬಿ ಜಯಚಂದ್ರರತ್ತ ನೋಡಿ ಹೇಳಿದರು. ಉಮಾಶ್ರೀ ಅವರ ಮಾತಿನಿಂದ ಏನು ಹೇಳಲು ಆಗದೇ ವೇದಿಕೆ ಮೇಲಿದ್ದ ಎಲ್ಲರೂ ನಗೆಗಡಲಲ್ಲಿ ತೇಲಿದರು.

    ಇದೇ ವೇಳೆ ಮಾಜಿ ಪ್ರಧಾನಿ ದೇವೆಗೌಡರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇವೇಗೌಡರು ಅನ್ನ ಭಾಗ್ಯ ರದ್ದು ಮಾಡಲು ಹೋರಟಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ ಯೋಜನೆಯನ್ನು ರದ್ದು ಪಡಿಸುತ್ತೇವೆ ಎಂದು ಹೇಳಿದ್ದಾರೆ. ಈ ಮೂಲಕ ಬಡವರ ತಲೆ ಮೇಲೆ ಚಪ್ಪಡಿ ಕಲ್ಲು ಇಡಲು ಹೊರಟಿದ್ದಾರೆ. ಅನ್ನ ನೀಡುವ ಕೈಗೆ ಕನ್ನ ಹಾಕಲು ಜೆಡಿಎಸ್ ಹೊರಟಿದೆ ಎಂದು ಆರೋಪಿಸಿದರು.

  • ಸಾಲ ತೀರಿಸುವಂತೆ ಬ್ಯಾಂಕ್‍ ನಿಂದ ನೋಟಿಸ್- ಹೃದಯಾಘಾತವಾಗಿ ರೈತ ಸಾವು

    ಸಾಲ ತೀರಿಸುವಂತೆ ಬ್ಯಾಂಕ್‍ ನಿಂದ ನೋಟಿಸ್- ಹೃದಯಾಘಾತವಾಗಿ ರೈತ ಸಾವು

    ತುಮಕೂರು: ಸಾಲ ತೀರಿಸುವಂತೆ ಬ್ಯಾಂಕ್ ನವರು ಕಳಿಸಿದ ನೋಟಿಸ್ ನೋಡಿ ಹೃದಯಾಘಾತಕ್ಕೊಳಗಾಗಿ ರೈತರೊಬ್ಬರು ಸಾವನ್ನಪ್ಪಿದ ಘಟನೆ ತುಮಕೂರಿನಲ್ಲಿ ನಡೆದಿದೆ.

    ಜಿಲ್ಲೆಯ ಶಿರಾ ತಾಲೂಕಿನ ಎಂ. ದಾಸರಹಳ್ಳಿಯ 65 ವರ್ಷದ ಬಡಯ್ಯ ಮೃತ ರೈತ. ವಿವಿಧ ಬ್ಯಾಂಕ್ ಗಳಲ್ಲಿ 6 ಲಕ್ಷ ರೂಪಾಯಿಗೂ ಹೆಚ್ಚು ಸಾಲ ಮಾಡಿದ್ದರು. ಆದರೆ ಬೆಳೆ ಹಾಳಾಗಿ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ.

    ಸೋಮವಾರ ಮಧ್ಯಾಹ್ನ ಬಡಯ್ಯನಿಗೆ ಸಾಲ ತೀರಿಸುವಂತೆ ಬ್ಯಾಂಕಿನಿಂದ ನೋಟಿಸ್ ಬಂದಿತ್ತು. ಅದನ್ನು ನೋಡಿ ಹೃದಯಾಘಾತಕ್ಕೆ ಒಳಗಾಗಿದ್ದರು. ಬಡಯ್ಯ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

  • ಎರಡು ಕೈ ಕಾಲು ಕಳೆದುಕೊಂಡ ಯುವಕನಿಗೆ ಸ್ವಾವಲಂಬಿ ಜೀವನ ನಡೆಸಲು ಬೇಕಿದೆ ಆಸರೆ

    ಎರಡು ಕೈ ಕಾಲು ಕಳೆದುಕೊಂಡ ಯುವಕನಿಗೆ ಸ್ವಾವಲಂಬಿ ಜೀವನ ನಡೆಸಲು ಬೇಕಿದೆ ಆಸರೆ

    ತುಮಕೂರು: ಒಂದು ವರ್ಷದ ಮಗುವಿದ್ದಾಗ ಪೊಲೀಯೋಗೆ ತುತ್ತಾಗಿ ಕೈಕಾಲುಗಳೆರಡೂ ಸ್ವಾಧೀನ ಕಳೆದುಕೊಂಡಿರುವ ಯುವಕ ನಂದೀಶ್. ಮೂಲತಃ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ದೊಡ್ಡಕೊಂಡ್ಲಿ ಗ್ರಾಮದ ನಿವಾಸಿ.

    ತಾನು ಅಂಗವಿಕಲನಾದ್ರೂ ಸ್ವಾಭಿಮಾನದಿಂದ ಬದುಕಬೇಕೆಂಬ ಛಲ ಹೊಂದಿದ್ದು, ಸಣ್ಣದೊಂದು ಚಿಲ್ಲರೆ ಅಂಗಡಿ ವ್ಯವಸ್ಥೆ ಮಾಡಿಕೊಟ್ಟರೆ ಯಾರಿಗೂ ಹೊರೆಯಾಗದಂತೆ ಬದುಕುತ್ತೇನೆ ಎಂದು ನಂದೀಶ್ ಹೇಳುತ್ತಾರೆ. ಊಟ ತಿಂಡಿ ಸೇರಿದಂತೆ ದಿನನಿತ್ಯದ ಕೆಲಸಕ್ಕೆಲ್ಲಾ ಬೇರೆಯವರನ್ನು ಅವಲಂಬಿಸಬೇಕು. 10ನೇ ತರಗತಿವರೆಗೆ ಓದಿರುವ ನಂದೀಶ್ ಗೆ ತಾನು ಮನೆಯವರಿಗೆ ಹೊರೆಯಾಗಬಾರದು, ಇನ್ನಾದರೂ ಸ್ವಂತ ದುಡಿಮೆ ಮಾಡಿ ಬದುಕಬೇಕು ಎಂಬ ಛಲ ಇದೆ. ಹಾಗಾಗಿ ಒಂದು ಪೆಟ್ಟಿಗೆ ಅಂಗಡಿ ಇಟ್ಟು, ಚಿಲ್ಲರೆ ಸಾಮಾನು ಕಲ್ಪಿಸಿ ಕೊಟ್ಟರೆ ಅದನ್ನು ಮಾರಿ ಸ್ವಾಭಿಮಾನದ ಜೀವನ ನಡೆಸಬಲ್ಲೆ ಎಂಬ ವಿಶ್ವಾಸವನ್ನು ಹೊಂದಿದ್ದಾರೆ.

    ಸರ್ಕಾರದ ಸೌಲಭ್ಯಗಳಿಂದ ವಂಚಿತ: ನಂದೀಶ್ ತಾಯಿ ಸುವರ್ಣಮ್ಮ ಅವರು ದುಡಿದು ಸಂಸಾರ ಸಾಗಿಸಬೇಕಾಗಿದೆ. ತಂದೆ ನಾರಾಣಪ್ಪರಿಗೆ ಅನಾರೋಗ್ಯದಿಂದ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ತಾಯಿಯ ಕಷ್ಟ ಕಂಡು ಕಣ್ಣೀರಿಡುವ ನಂದೀಶ್ ತಾನೂ ದುಡಿಮೆ ಮಾಡಬೇಕು. ತಾಯಿಗಾಗುವ ಕಷ್ಟವನ್ನು ಆದಷ್ಟು ಕಡಿಮೆ ಮಾಡಬೇಕು ಎಂಬ ಹಂಬಲವನ್ನು ಹೊಂದಿದ್ದಾರೆ. ಹಾಗಾಗಿ ಪೆಟ್ಟಿಗೆ ಅಂಗಡಿ ಇಟ್ಟು ಚಿಲ್ಲರೆ ವ್ಯಾಪಾರ ಮಾಡುವ ಮನಸ್ಸು ಮಾಡಿದ್ದಾರೆ. ಅಂಗಲವಿಕಲ ಸಹಾಯಧನ ಬಿಟ್ಟರೆ ಇನ್ಯಾವುದೇ ಸರ್ಕಾರದ ಸೌಲಭ್ಯ ನಂದೀಶ್ ಗೆ ಸಿಕ್ಕಿಲ್ಲ. ಹಲವು ಬಾರಿ ಅಧಿಕಾರಿಗಳಿಗೆ ಅರ್ಜಿ ನೀಡಿದ್ರು ಕನಿಷ್ಠ ಪಕ್ಷ ಅಂಗವಿಕಲ ವಾಹನವನ್ನೂ ನೀಡಿಲ್ಲ. ಅಂಗವಿಕಲರ ಆಧಾರ್ ಯೋಜನೆಯ ನೆರವೂ ಸಿಕ್ಕಿಲ್ಲ.

    ನಂದೀಶ್ ಮನೆ ಪಕ್ಕದಲ್ಲಿ ಖಾಲಿ ಜಾಗವಿದೆ. ಆ ಜಾಗದಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಟ್ಟರೆ ಅಲ್ಲೆ ವ್ಯಾಪಾರ ಮಾಡಿ, ಒಂದಿಷ್ಟು ಸಂಪಾದಿಸಿ ತಾಯಿ ಮೇಲಿರುವ ಭಾರವನ್ನು ತಪ್ಪಿಸುತ್ತೇನೆ ಅಂತಾರೆ ನಂದೀಶ್.

  • ಫೇಸ್ ಬುಕ್ ನಲ್ಲಿ ಕೋಮು ಜಾತಿ ಕಮೆಂಟ್: ತುಮಕೂರು ಪೇದೆ ಅಮಾನತು

    ಫೇಸ್ ಬುಕ್ ನಲ್ಲಿ ಕೋಮು ಜಾತಿ ಕಮೆಂಟ್: ತುಮಕೂರು ಪೇದೆ ಅಮಾನತು

    ತುಮಕೂರು: ಫೇಸ್ ಬುಕ್ ನಲ್ಲಿ ಕೋಮು ಭಾವನೆ ಕೆರಳಿಸುವಂತಹ ಕಾಮೆಂಟ್ ಮಾಡಿದ ಪೊಲೀಸ್ ಪೇದೆಯನ್ನು ತುಮಕೂರು ಎಸ್ಪಿ ಅಮಾನತುಗೊಳಿಸಿದ್ದಾರೆ.

    ತುಮಕೂರಿನ ಹೆಬ್ಬೂರು ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಮ್. ಸಿ ಮಹೇಶ್ ಅಮಾನತುಗೊಂಡಿರುವ ಪೇದೆ. ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್ ಅವರ ಉಚಿತ ಗ್ಯಾಸ್ ವಿತರಣಾ ಕಾರ್ಯಕ್ರಮವನ್ನು ಬೆಂಬಲಿಸುವ ಭರದಲ್ಲಿ ಮುಸ್ಲಿಂರಿಗೆ ಉಚಿತ ಗ್ಯಾಸ್ ಕೊಡಬೇಡಿ ಅವರು ಬಿಜೆಪಿಗೆ ಮತ ಹಾಕಲ್ಲ ಎಂದು ಮಹೇಶ್ ಕಮೆಂಟ್ ಮಾಡಿದ್ದರು.

    ಅಷ್ಟೇ ಅಲ್ಲದೇ ಜ್ಯೋತಿ ಗಣೇಶ್ ಮುಂದಿನ ಶಾಸಕ ಎಂಬುದಾಗಿ ಗುಣಗಾನ ಮಾಡಿದ ಪರಿಣಾಮ ಮಹೇಶ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ದಿವ್ಯ ಗೋಪಿನಾಥ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

  • ಆರತಕ್ಷತೆಯಲ್ಲಿ ನಗ್ತಿದ್ದ ವಧು ಧಾರೆಗೆ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

    ಆರತಕ್ಷತೆಯಲ್ಲಿ ನಗ್ತಿದ್ದ ವಧು ಧಾರೆಗೆ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

    ತುಮಕೂರು: ಮದುವೆ ಮಂಟಪದಿಂದಲೇ ವಧು ಓಡಿಹೋದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಿಯಕರನ ಟಿಟಿ ವಾಹನದಲ್ಲಿ ಬಂದಿದ್ದ ವಧು ಅದೇ ಟಿಟಿಯ ಡ್ರೈವರ್ ರಮೇಶ್ ಜೊತೆ ಓಡಿ ಹೋಗಿದ್ದಾಳೆ.

    ಮಧ್ಯರಾತ್ರಿಯೇ ತಾವು ಬಂದಿದ್ದ ಟಿಟಿಯಲ್ಲೇ ಇಬ್ಬರೂ ಎಸ್ಕೇಪ್ ಆಗಿದ್ದಾರೆ. ಭಾನುವಾರ ರಾತ್ರಿ ಆರತಕ್ಷತೆಯಲ್ಲಿ  ನಗುನಗುತ್ತಾ ಇದ್ದ ವಧು  ಬೆಳಗ್ಗೆ ನೋಡಿದ್ರೆ ನಾಪತ್ತೆಯಾಗಿದ್ದಾಳೆ.

    ಇಂದು ಬೆಳಗ್ಗೆ 9.30ಕ್ಕೆ ಹಸೆಮಣೆ ಏರಬೇಕಿದ್ದ ಯುವತಿ ನಾಪತ್ತೆಯಾಗಿರೋದನ್ನು ನೋಡಿ ವರನ ಕಡೆಯವರು ಫುಲ್ ಶಾಕ್ ಆಗಿದ್ದರು. ತುಮಕೂರು ಜಿಲ್ಲೆಯ ಯಡಿಯೂರು ದೇವಸ್ಥಾನದಲ್ಲಿ ಮದುವೆ ನಿಗದಿಯಾಗಿತ್ತು. ಬೆಂಗಳೂರಿನ ಕಾಮಾಕ್ಷಿಪಾಳ್ಯದ ಯುವತಿಗೆ ಯಡಿಯೂರಿನ ಆಟೋ ಡ್ರೈವರ್ ರಾಮಕೃಷ್ಣನನ್ನು ಇಂದು ಮದುವೆ ಆಗಬೇಕಿತ್ತು. ಹೀಗಾಗಿ ನಿನ್ನೆ ರಾತ್ರಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು.

    ಯುವತಿ ಓಡಿಹೋಗಿರೋ ಕಾರಣ ಇದೀಗ ಮದುವೆ ನಿಂತಿದೆ. ಆಕೆ ಯಾಕೆ ಗಾಯಬ್ ಆದ್ಲು ಅಂತಾ ಗೊತ್ತಿಲ್ಲ. ಯುವತಿ ಕಡೆಯವರು ಮದುವೆ ಹೆಸರಲ್ಲಿ ದುಡ್ಡು ತಗೊಂಡು ಮೋಸ ಮಾಡೋದೇ ದಂಧೆ ಮಾಡ್ಕೊಂಡಿದ್ದಾರೆ ಅಂತಾ ವರನ ಕಡೆಯವರು ಆರೋಪಿಸಿದ್ದಾರೆ.