Tag: tumkuru

  • ಪ್ರಚಾರ ಮಾಡಲು ಹೋದ ಬಿಜೆಪಿ ಶಾಸಕರ ಪುತ್ರಿಗೆ ಗ್ರಾಮಸ್ಥರಿಂದ ತರಾಟೆ!

    ಪ್ರಚಾರ ಮಾಡಲು ಹೋದ ಬಿಜೆಪಿ ಶಾಸಕರ ಪುತ್ರಿಗೆ ಗ್ರಾಮಸ್ಥರಿಂದ ತರಾಟೆ!

    ತುಮಕೂರು: ವಿಧಾನಸಭಾ ಚುನಾವಣೆಯಲ್ಲಿ ತಂದೆಯ ಪರ ಪ್ರಚಾರ ನಡೆಸಲು ತೆರಳಿದ್ದ ಶಾಸಕರ ಪುತ್ರಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆದಿದೆ.

    ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ ಸುರೇಶ್ ಗೌಡರ ಪುತ್ರಿ ಐಶ್ವರ್ಯ ತಮ್ಮ ತಂದೆಯ ಪರ ಮತಯಾಚನೆ ಮಾಡಲು ಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಗೊಲ್ಲಳ್ಳಿ ಗ್ರಾಮಸ್ಥರು ಶಾಸಕರು ತಮ್ಮ ಗ್ರಾಮಕ್ಕೆ ನೀರಿನ ಸೌಲಭ್ಯ ಕಲ್ಪಿಸಿಕೊಟ್ಟಿಲ್ಲ. ಅಭಿವೃದ್ಧಿ ಮಾಡದಿದ್ದರೂ ಮತ ಕೇಳಲು ಮಾತ್ರ ಬರುತ್ತೀರಿ ಎಂದು ಆರೋಪಿಸಿ ತರಾಟೆ ತೆಗೆದುಕೊಂಡಿದ್ದಾರೆ.

    ಈ ವೇಳೆ ಐಶ್ವರ್ಯ ಗ್ರಾಮಸ್ಥರ ಪ್ರಶ್ನೆಗಳ ಸುರಿಮಳೆಗೆ ಸಮಾಜಾಯಿಸಿ ನೀಡಲು ಯತ್ನಿಸಿದ್ದಾರೆ. ಆದರೆ ಬಳಿಕ ಗ್ರಾಮಸ್ಥರ ಅಸಮಾಧಾವನ್ನು ಶಮನಗೊಳಿಸಲು ವಿಫಲರಾಗಿ ಸ್ಥಳದಿಂದ ಹಿಂದಿರುಗಿದ್ದಾರೆ.

    https://www.youtube.com/watch?v=9lt3Z0DUPx8

  • ಜೆಡಿಎಸ್ ಸೇರ್ಪಡೆಗೊಂಡಿದ್ದಕ್ಕೆ ರೈತರ ಹಾಲು ತೆಗೆದುಕೊಳ್ಳಲು ಹಿಂದೇಟು!

    ಜೆಡಿಎಸ್ ಸೇರ್ಪಡೆಗೊಂಡಿದ್ದಕ್ಕೆ ರೈತರ ಹಾಲು ತೆಗೆದುಕೊಳ್ಳಲು ಹಿಂದೇಟು!

    ತುಮಕೂರು: ಕೆಲ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಕ್ಕೆ ರೈತರ ಹಾಲು ತೆಗೆದುಕೊಳ್ಳಲು ಮಧುಗಿರಿ ತಾಲೂಕಿನ ಯಾಕಾರಹಳ್ಳಿಯ ಕೆಎಂಎಫ್ ಡೈರಿ ಹಿಂದೇಟು ಹಾಕಿದೆ.

    ಕೆಲ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಕ್ಕೆ ಗುಣಮಟ್ಟವಿಲ್ಲವೆಂದು ಕೆಎಂಎಫ್‍ನ ಹಾಲು ಉತ್ಪಾದಕರ ಸಂಘ ಹಾಲು ಹಾಕಿಸಿಕೊಳ್ಳಲು ನಿರಾಕರಿಸುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

    ಸಿಬ್ಬಂದಿ ಡೈರಿ ಬಾಗಿಲನ್ನು ತೆಗೆಯದ ಕಾರಣ ಪ್ರತಿದಿನ 400 ರಿಂದ 350 ಲೀಟರ್ ಹಾಲು ನಷ್ಟವಾಗುತ್ತಿದ್ದು, ಹಾಲು ಉತ್ಪಾದಕರ ಸಂಘದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಬೈಕ್, ಖಾಸಗಿ ಬಸ್ ಡಿಕ್ಕಿ: ಅಪಘಾತದ ರಭಸಕ್ಕೆ ಹೊತ್ತಿ ಉರಿಯಿತು ಎರಡು ವಾಹನ

    ಬೈಕ್, ಖಾಸಗಿ ಬಸ್ ಡಿಕ್ಕಿ: ಅಪಘಾತದ ರಭಸಕ್ಕೆ ಹೊತ್ತಿ ಉರಿಯಿತು ಎರಡು ವಾಹನ

    ತುಮಕೂರು: ಬೈಕ್ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಅಪಘಾತದ ತೀವ್ರತೆ ಎರಡು ವಾಹನ ಧಗಧಗನೆ ಉರಿದು ಸಂಪೂರ್ಣ ಭಸ್ಮವಾದ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ಬರಕನಾಳ್ ಗೇಟ್ ಬಳಿ ನಡೆದಿದೆ.

    ರಂಗಸ್ವಾಮಿ(20) ಸಾವನಪ್ಪಿದ್ದ ಬೈಕ್ ಸವಾರ. ಹುಳಿಯಾರಿನಿಂದ ಚಿಕ್ಕನಾಯ್ಕನಹಳ್ಳಿಯತ್ತ ಬರುತ್ತಿದ್ದ ಬಸ್ ಹಾಗೂ ಚಿಕ್ಕನಾಯಕನಹಳ್ಳಿಯಿಂದ ಹುಳಿಯಾರ ಕಡೆಗೆ ಸಾಗುತಿದ್ದ ಬೈಕ್ ನಡುವೆ ಬರಕನಾಳ ಗೇಟ್ ಬಳಿ ಮುಖಾಮುಖಿ ಡಿಕ್ಕಿಯಾಗಿದೆ.

    ಡಿಕ್ಕಿಯ ಹೊಡೆದ ರಭಸಕ್ಕೆ ಬೈಕ್ 100 ಮೀಟರ್ ದೂರ ಎಳೆದುಕೊಂಡು ಹೋಗಿದೆ. ಈ ವೇಳೆ ಬೈಕಿನಿಂದ ಪೆಟ್ರೋಲ್ ರಸ್ತೆಗೆ ಚೆಲ್ಲಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ನಂತರ ಬೆಂಕಿ ಬಸ್ಸಿಗೂ ಹೊತ್ತಿಕೊಂಡಿದೆ. ಬೈಕ್ ಸಂಪೂರ್ಣ ಭಸ್ಮವಾದರೆ, ಬಸ್ ಭಾಗಶಃ ಸುಟ್ಟುಹೋಗಿದ್ದು ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸಿದೆ.

    ಈ ಸಂಬಂಧ ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಾಲ ಕೊಡ್ತೀವಿ ಕಾಂಗ್ರೆಸ್ ಗೆ ಓಟ್ ಹಾಕಿ – ಮತದಾರರಿಗೆ ಅಮಿಷ

    ಸಾಲ ಕೊಡ್ತೀವಿ ಕಾಂಗ್ರೆಸ್ ಗೆ ಓಟ್ ಹಾಕಿ – ಮತದಾರರಿಗೆ ಅಮಿಷ

    ತುಮಕೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ರೈತರಿಗೆ ಸಾಲ ವಿತರಣೆ ಮಾಡಿರುವ ಘಟನೆ ಮಧುಗಿರಿ ತಾಲೂಕಿನ ಕಡಗತ್ತೂರು ವಿಎಸ್‍ಎಸ್‍ಎನ್ ಬ್ಯಾಂಕಿನಲ್ಲಿ ನಡೆದಿದೆ. ಸಾಲ ವಿತರಣೆ ಮಾಡುವ ಮೂಲಕ ಮತದಾರರನ್ನು ಸೆಳೆಯುವ ಕಾರ್ಯ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

    ಸದ್ಯ ಘಟನೆಯ ಕುರಿತು ಮಧುಗಿರಿ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣನ ಕ್ಷೇತ್ರದಲ್ಲಿ ಮತದಾರರಿಗೆ ಸಾಲದ ರೂಪದಲ್ಲಿ ಆಮಿಷ ಒಡ್ಡುತ್ತಿದ್ದಾರೆ ಎನ್ನುವ ಆರೋಪ ಮಾಡಲಾಗಿದೆ. ಶಾಸಕ ರಾಜಣ್ಣ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಕಾರಣ ಈ ಕೃತ್ಯಕ್ಕೆ ಅಧಿಕಾರಿಗಳು ಸಾಥ್ ನೀಡಿದ್ದಾರೆ ಎನ್ನಲಾಗಿದೆ.

    ಮಧುಗಿರಿ ತಾಲೂಕಿನ ಕಡಗತ್ತೂರು ವಿಎಸ್‍ಎಸ್‍ಎನ್ ಬ್ಯಾಂಕ್ ನಲ್ಲಿ ಸಾಲ ವಿತರಣೆ ಮಾಡಲಾಗುತ್ತಿದೆ. ಅಲ್ಲದೇ ಚೆಕ್ ಅಥವಾ ಆರ್ ಟಿಜಿಎಸ್ ಮೂಲಕ ನೀಡಬೇಕಿದ್ದ ಸಾಲವನ್ನು ನಗದು ರೂಪದಲ್ಲಿ ಕೊಟ್ಟು ಕಾಂಗ್ರೆಸ್ ಗೆ ಮತಹಾಕುವಂತೆ ಹೇಳಲಾಗುತ್ತಿದೆ ಎಂದು ಆರೋಪ ಕೇಳಿಬಂದಿದೆ.

    ಜಮೀನಿನ ಪಹಣಿ ಹೊಂದಿರುವ ಕಾಂಗ್ರೆಸ್ ಬೆಂಬಲಿತ ರೈತರಿಗೆ ಮಾತ್ರ ಹಳೇ ದಿನಾಂಕ ನಮೂದಿಸಿ ಸಾಲ ವಿತರಣೆ ಮಾಡಲಾಗುತ್ತಿದೆ. ಈ ಮೂಲಕ ಕಾನೂನಿನ ಕ್ರಮದಿಂದ ತಪ್ಪಿಸಿಕೊಳ್ಳಲು ವಿಎಸ್‍ಎಸ್‍ಎನ್ ಅಧಿಕಾರಿಗಳ ಜಾಣ ನಡೆಗೆ ಮುಂದಾಗಿದ್ದಾರೆ. ರೈತರಿಗೆ ಸಾಲ ನೀಡುತ್ತಿರುವ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಸಿದ್ದಗಂಗಾ ಶ್ರೀಗಳ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದ ಫ್ಲೆಕ್ಸ್ ತೆರವು

    ಸಿದ್ದಗಂಗಾ ಶ್ರೀಗಳ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದ ಫ್ಲೆಕ್ಸ್ ತೆರವು

    ತುಮಕೂರು: ಚುನಾವಣಾ ನೀತಿ ಸಂಹಿತೆ ಜಾರಿ ಆದ ಹಿನ್ನೆಲೆಯಲ್ಲಿ ಸಿದ್ದಗಂಗಾ ಶ್ರೀಗಳ ಹುಟ್ಟುಹಬ್ಬಕ್ಕೆ ರಾಜಕೀಯ ನಾಯಕರು ಶುಭಾಶಯ ಕೋರಿದ್ದ ಫ್ಲೆಕ್ಸ್‍ಗಳನ್ನು ತೆರವುಗೊಳಿಸಲಾಗುತ್ತಿದೆ.

    ಸಿದ್ದಗಂಗಾ ಶ್ರೀಗಳ ಹುಟ್ಟುಹಬ್ಬಕ್ಕೆ ರಾಜಕೀಯ ಮುಖಂಡರು ಶುಭಾಶಯ ಕೋರಿ ಫ್ಲೆಕ್ಸ್ ಹಾಕಿದ್ದರು. ಆದರೆ ಈಗ ತುಮಕೂರು ಪಾಲಿಕೆಯಿಂದ ಫ್ಲೆಕ್ಸ್ ಗಳನ್ನು ತೆರವು ಮಾಡಿಸಲಾಗಿದೆ. ಏಪ್ರಿಲ್ 1 ರಂದು ಸಿದ್ದಗಂಗಾ ಶ್ರೀಗಳ 111ನೇ ಜನ್ಮದಿನೋತ್ಸವ ಆಚರಿಸಲಾಗುತ್ತಿದೆ.

    ಮೂರು ಪಕ್ಷದ ರಾಜಕೀಯ ಮುಖಂಡರು ಸಿದ್ದಗಂಗಾ ಶ್ರೀಗಳ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಫ್ಲೆಕ್ಸ್ ಗಳನ್ನು ಹಾಕಿಸಿದ್ದು, ನಗರದ ಬಿ.ಎಚ್. ರಸ್ತೆ ಸೇರಿದಂತೆ ನಗರದ ಹಲವೆಡೆ ಫ್ಲೆಕ್ಸ್ ಹಾಕಲಾಗಿತ್ತು. ಆದರೆ ಈಗ ಚುನಾವಣಾ ನೀತಿ ಸಂಹಿತೆ ಜಾರಿ ಆದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗುತ್ತಿದೆ.

  • ಐಸಿಯುವಿನಲ್ಲಿರುವ ಮಗುವಿನ ಆರೈಕೆ ಮಾಡಲು 500ರೂ. ಲಂಚ ಕೊಡಬೇಕೆಂದ ನರ್ಸ್!

    ಐಸಿಯುವಿನಲ್ಲಿರುವ ಮಗುವಿನ ಆರೈಕೆ ಮಾಡಲು 500ರೂ. ಲಂಚ ಕೊಡಬೇಕೆಂದ ನರ್ಸ್!

    ತುಮಕೂರು: ನಗರದ ಜಿಲ್ಲಾಸ್ಪತ್ರೆಯ ನರ್ಸ್ ಗಳು ಮಾನವೀಯತೆಯನ್ನೇ ಮರೆತಿದ್ದಾರೆ. ಐಸಿಯುನಲ್ಲಿದ್ದ ಮಗುವನ್ನು ಸರಿಯಾಗಿ ಆರೈಕೆ ಮಾಡಲು ಲಂಚಕ್ಕಾಗಿ ಕೈಯೊಡ್ಡಿರುವ ಆರೋಪವೊಂದು ಕೇಳಿಬಂದಿದೆ.

    ಈ ಸಂಬಂಧ ಶನಿವಾರ ವಸಂತ ಹಾಗೂ ಜ್ಯೋತಿ ಎಂಬ ಇಬ್ಬರು ನರ್ಸ್‍ಗಳು ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದಾರೆ. ಇವರ ಕೈ ಬಿಸಿಯಾಗದಿದ್ದರೆ ಆಗತಾನೇ ಹುಟ್ಟಿದ ನವಜಾತ ಶಿಶುಗಳು ಬದುಕುಳಿಯುವುದು ಕಷ್ಟ ಎನ್ನುವ ಮಟ್ಟಿಗೆ ಲಂಚಾವತಾರ ತಾಂಡವವಾಡುತ್ತಿದೆ. ಈ ಮೂಲಕ ನರ್ಸ್ ಗಳು ನರರಾಕ್ಷಸಿಯರಾಗಿದ್ದಾರೆ.

    ಶ್ವಾಸಕೋಶದ ತೊಂದರೆಯಿಂದ ನರಳುತಿದ್ದ ಶಿಶುವನ್ನು ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಮಾಡಲಾಗಿತ್ತು. ಮಗುವಿನ ಕೇರ್ ತಗೋಬೇಕಾದರೆ 500 ರೂ. ಕೊಡಬೇಕು ಎಂದು ನರ್ಸ ವಸಂತಾ ಮಗುವಿನ ಪೋಷಕರ ಬಳಿ ಬೇಡಿಕೆ ಇಟ್ಟಿದ್ದಾಳೆ ಎನ್ನಲಾಗಿದೆ.

    ಆದ್ರೆ ಮಗುವಿನ ಪೋಷಕರು ಬಡವರಾಗಿದ್ದು, ಹೀಗಾಗಿ ಮಗುವಿನ ತಂದೆ 100 ರೂ. ಕೊಡಲು ಹೋದಾಗ ತಿರಸ್ಕರಿಸಿದ್ದಾರೆ. ಪುಡಿಗಾಸು ನಮಗೆ ಬೇಡಾ…ನಾವೂ ದುಡ್ಡು ನೋಡಿದವರೇ ಎಂದು ಧಮ್ಕಿ ಹಾಕಿದ್ದಾಳೆ. ಬಳಿಕ 200 ರೂ. ಕೊಟ್ಟಾಗ ತೆಗೆದುಕೊಂಡು ಸಹನರ್ಸ್ ಜ್ಯೋತಿಗೂ ಹಂಚಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.

  • ಜಾತಿ ನೋಡಿ ಮತ ಹಾಕ್ಬೇಡಿ, ಜಾತಿ ನೋಡಿ ಮರ್ಯಾದೆ ಕೊಡ್ಬೇಡಿ- ಅಭಿಮಾನಿಗಳಿಗೆ ಶಿವಣ್ಣ ಸಲಹೆ

    ಜಾತಿ ನೋಡಿ ಮತ ಹಾಕ್ಬೇಡಿ, ಜಾತಿ ನೋಡಿ ಮರ್ಯಾದೆ ಕೊಡ್ಬೇಡಿ- ಅಭಿಮಾನಿಗಳಿಗೆ ಶಿವಣ್ಣ ಸಲಹೆ

    ತುಮಕೂರು: ಜಾತಿ ನೋಡಿ ಮತ ಹಾಕಬೇಡಿ, ಜಾತಿ ನೋಡಿ ಮರ್ಯಾದೆ ಕೊಡಬೇಡಿ ಎಂದು ನಟ ಶಿವರಾಜ್‍ಕುಮಾರ್ ಅಭಿಮಾನಿಗಳಗೆ ಸಲಹೆ ನೀಡಿದ್ದಾರೆ

    ಸಿದ್ದಗಂಗಾ ಮಠ ಆಧರಿಸಿದ ಭೂಸ್ವರ್ಗ ಚಿತ್ರದ ಧ್ವನಿ ಸುರುಳಿ ಬಿಡುಗಡೆಗೆಂದು ಭಾನುವಾರದಂದು ನಟ ಶಿವರಾಜ್ ಕುಮಾರ್ ತುಮಕೂರಿನ ಉಡುಪಿ ಡಿಲಕ್ಸ್ ಗೆ ಹೋಗಿದ್ದರು. ಧ್ವನಿ ಸುರುಳಿ ಬಿಡುಗಡೆ ವೇಳೆ ಮಾತನಾಡಿದ ಶಿವಣ್ಣ, ಜಾತಿ ನೋಡಿ ಮತ ಹಾಕಬೇಡಿ, ಜಾತಿ ನೋಡಿ ಮರ್ಯಾದೆ ಕೊಡಬೇಡಿ ಎಂದು ಅಭಿಮಾನಿಗಳಿಗೆ ಸಲಹೆ ನೀಡಿದ್ರು.

    ಸಿದ್ದಗಂಗಾ ಮಠಕ್ಕೆ ಏನೋ ಒಂದು ಪವರ್ ಇದೆ. ಮಠದ ಮಹಿಮೆಯೋ ಏನೋ ಎಲ್ಲಾ ಜಾತಿಗಳನ್ನು ಒಗ್ಗೂಡಿಸುತ್ತದೆ. ಮಠದಲ್ಲಿ ಜಾತಿ ಬೇಧ ಭಾವ ಇಲ್ಲಾ. ಅಂತಹ ಮಹಾನ್ ಮಠ ಹಾಕಿಕೊಟ್ಟ ಹಾದಿಯಲ್ಲಿ ನಾವು ಸಾಗಬೇಕು. ಹಾಗಾಗಿ ಜಾತಿ ನೋಡಿ ಮತ ಹಾಕಬೇಡಿ. ಒಳ್ಳೆ ಮನುಷ್ಯನಿಗೆ, ಒಳ್ಳೆ ಕೆಲಸ ಮಾಡೋರಿಗೆ ವೋಟ್ ಹಾಕಿ ಎಂದು ಹೇಳಿದ್ರು.

    ಈ ವೇಳೆ ಕಾರ್ಯಕ್ರಮ ನಡೆಯುತ್ತಿದ್ದಾಗ ಅಭಿಮಾನಿಗಳು ಮೊಬೈಲ್ ನಿಂದ ವಿಡಿಯೋ ಮಾಡುತ್ತಿದ್ದು, ಇದರಿಂದ ಕಿರಿಕಿರಿ ಅನುಭವಿಸಿದ ನಟ, ಪ್ಲೀಸ್ ಸೈಲೆನ್ಸ್ ಸೈಲೆನ್ಸ್ ಎಂದು ಒಂದೇ ಸಮನೇ ಕೂಗಿದ್ರು. ಅಲ್ಲದೇ ಮೊಬೈಲ್ ಯಾವ ಪುಣ್ಯಾತ್ಮ ಕಂಡು ಹಿಡಿದಿದ್ದಾನೋ ಎಂದು ಶಿವಣ್ಣ ರೇಗಿದ್ರು.

    ಶಿವರಾಜ್ ಕುಮಾರ್ ರನ್ನು ಸುತ್ತುವರಿದು ಅಭಿಮಾನಿಗಳು ಕಿರಿಕಿರಿ ಉಂಟು ಮಾಡಿದ್ದರಿಂದ ಅವರ ಮೇಲೆ ರೇಗಿದರು ಎಂದು ಹೇಳಲಾಗಿದೆ. ಇದನ್ನೂ ಓದಿ: ತುಮಕೂರಿನಲ್ಲಿ ಅಭಿಮಾನಿಗಳ ವಿರುದ್ಧ ಗರಂ ಆದ ಶಿವರಾಜ್ ಕುಮಾರ್!

  • ತುಮಕೂರಿನಲ್ಲಿ ಅಭಿಮಾನಿಗಳ ವಿರುದ್ಧ ಗರಂ ಆದ ಶಿವರಾಜ್ ಕುಮಾರ್!

    ತುಮಕೂರಿನಲ್ಲಿ ಅಭಿಮಾನಿಗಳ ವಿರುದ್ಧ ಗರಂ ಆದ ಶಿವರಾಜ್ ಕುಮಾರ್!

    ತುಮಕೂರು: ನಟ ಶಿವರಾಜ್ ಕುಮಾರ್ ಅವರು ತಮ್ಮ ಅಭಿಮಾನಿಗಳ ವಿರುದ್ಧ ತುಮಕೂರಿನಲ್ಲಿ ಗರಂ ಆಗಿದ್ದಾರೆ.

    ನಗರದ ಉಡುಪಿ ಡಿಲಕ್ಸ್ ನಲ್ಲಿ ಸಿದ್ಧಗಂಗಾ ಮಠ ಆಧರಿಸಿದ ಭೂ ಸ್ವರ್ಗ ಚಿತ್ರದ ಧ್ವನಿ ಸುರುಳಿ ಬಿಡುಗಡೆಗೆಂದು ಶಿವರಾಜ್ ಕುಮಾರ್ ಹೋಗಿದ್ದರು. ಈ ವೇಳೆ ಅಭಿಮಾನಿಗಳಿಂದ ಕಿರಿಕಿರಿಯಿಂದ ಅವರ ಮೇಲೆ ರೇಗಿದ್ದಾರೆ.

    ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದ್ದಾಗ ಅಭಿಮಾನಿಗಳು ಮೊಬೈಲ್ ನಿಂದ ವಿಡಿಯೋ ಮಾಡುತ್ತಿದ್ದರು. ಇದರಿಂದ ಕಿರಿಕಿರಿ ಅನುಭವಿಸಿದ ನಟ, ಪ್ಲೀಸ್ ಸೈಲೆನ್ಸ್ ಸೈಲೆನ್ಸ್ ಎಂದು ಒಂದೇ ಸಮನೇ ಕೂಗಿದ್ದಾರೆ. ಅಲ್ಲದೇ ಮೊಬೈಲ್ ಯಾವ ಪುಣ್ಯಾತ್ಮ ಕಂಡು ಹಿಡಿದಿದ್ದಾನೋ ಎಂದು ಶಿವಣ್ಣ ರೇಗಿದ್ದಾರೆ. ಶಿವರಾಜ್ ಕುಮಾರ್ ರನ್ನು ಸುತ್ತುವರಿದು ಅಭಿಮಾನಿಗಳು ಕಿರಿಕಿರಿ ಉಂಟು ಮಾಡಿದ್ದರಿಂದ ಅವರ ಮೇಲೆ ರೇಗಿದ್ದಾರೆ ಎಂದು ಹೇಳಲಾಗಿದೆ.

  • ಪವರ್ ಸ್ಟಾರ್ ರನ್ನು ನೋಡಿ ಓಡಾಡಲು ಪ್ರಯತ್ನಿಸುತ್ತಾರೆ ವಿಕಲಚೇತನ ಅಕ್ಕ- ತಮ್ಮ!

    ಪವರ್ ಸ್ಟಾರ್ ರನ್ನು ನೋಡಿ ಓಡಾಡಲು ಪ್ರಯತ್ನಿಸುತ್ತಾರೆ ವಿಕಲಚೇತನ ಅಕ್ಕ- ತಮ್ಮ!

    ತುಮಕೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಿನಿಮಾ ನೋಡಿ ವಿಕಲಚೇತನರಾದ ಅಕ್ಕ-ತಮ್ಮ ಓಡಾಡಲು ಪ್ರಯತ್ನಿಸುತ್ತಿದ್ದು, ಒಮ್ಮೆಯಾದರು ಪುನಿತ್ ರಾಜಕುಮಾರ್ ಅವರನ್ನು ಭೇಟಿ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ.

    ತುಮಕೂರು ಜಿಲ್ಲೆಯ ತಿಪಟೂರಿನ ಶೃತಿ ಹಾಗೂ ತೇಜಸ್ ಒಂದು ಬಾರಿಯಾದರೂ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಬೇಕೆಂಬ ಆಸೆಯಲ್ಲಿದ್ದಾರೆ.

    ಹುಟ್ಟಿದಾಗ ಎಲ್ಲರಂತೆ ಚೆನ್ನಾಗಿದ್ದ ಶೃತಿ ಹಾಗೂ ತೇಜಸ್ ನಾಲ್ಕನೇ ತರಗತಿ ನಂತರ ಬೆಳೆಯುತ್ತಾ ಅಂಗವಿಕಲರಾಗಿದ್ದಾರೆ. ತಿಪಟೂರಿನಲ್ಲಿ ಪೇಟಿಂಗ್ ಕೆಲಸ ಮಾಡುತ್ತಿರುವ ರಾಜಶೇಖರ್ ಹಾಗೂ ಜಯಮ್ಮ ದಂಪತಿಯ ಮಕ್ಕಳಿಗೆ ಪುನೀತ್ ಎಂದರೆ ಚಿಕ್ಕಂದಿನಿಂದಲೂ ಪಂಚಪ್ರಾಣ. ಈ ಇಬ್ಬರೂ ಮಕ್ಕಳಿಗೂ ಮಾತು ನಿಂತಿದ್ದು, ಓಡಾಡಲೂ ಆಗುತ್ತಿಲ್ಲ. ಹಾಸಿಗೆಯಲ್ಲೇ ಕಾಲಕಳೆಯುತ್ತಾರೆ.

    ಈ ಇಬ್ಬರೂ ಮಕ್ಕಳು ಪುನೀತ್ ರಾಜಕುಮಾರ್ ಅವರ ಸಿನಿಮಾ, ಕಾರ್ಯಕ್ರಮ ವಾಹಿನಿಗಳಲ್ಲಿ ಪ್ರಸಾರವಾದರೇ ಕಣ್ಣ ರೆಪ್ಪೆ ಮುಚ್ಚದೆ ನೋಡುತ್ತಾರೆ. ಪುನೀತ್ ಸಿನಿಮಾ ನೋಡುತ್ತಿದ್ದಂತೆ ಈ ವಿಕಲಚೇತನರಲ್ಲಿ ಒಂದು ಚೈತನ್ಯ ಬಂದು ಕಾಲನ್ನು ಬಡಿಯುವ ಮೂಲಕ ಓಡಾಡಲು ಪ್ರಯತ್ನಿಸುತ್ತಾರೆ ಎಂದು ಪೋಷಕರು ಹೇಳಿದ್ದಾರೆ. ಈ ಕಾರಣಕ್ಕಾಗಿ ಒಮ್ಮೆಯಾದರೂ ಪುನೀತ್ ರಾಜಕುಮಾರ್ ಅವರನ್ನು ಭೇಟಿ ಮಾಡಿದರೆ ತಮ್ಮ ಮಕ್ಕಳ ಬಾಳಲ್ಲಿ ಹೊಸ ಬೆಳಕು ಮೂಡಬಹುದು ಎಂದು ರಾಜಶೇಖರ್-ಜಯಮ್ಮ ದಂಪತಿ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

  • ದೇಗುಲಕ್ಕೆ ದಲಿತರನ್ನು ತಡೆಯಲು ಪ್ಲಾನ್- ಸತ್ತೋಗ್ತೀರಾ ಅಂತ ಸವರ್ಣೀಯ ಮಹಿಳೆ ಬೆದರಿಕೆ

    ದೇಗುಲಕ್ಕೆ ದಲಿತರನ್ನು ತಡೆಯಲು ಪ್ಲಾನ್- ಸತ್ತೋಗ್ತೀರಾ ಅಂತ ಸವರ್ಣೀಯ ಮಹಿಳೆ ಬೆದರಿಕೆ

    ತುಮಕೂರು: ದೇವಸ್ಥಾನವೊಂದಕ್ಕೆ ದಲಿತರು ಪ್ರವೇಶ ಮಾಡಿದ್ದರಿಂದ ಕುಪಿತಗೊಂಡ ಸವರ್ಣಿಯ ಮಹಿಳೆ ತನ್ನ ಮೇಲೆ ದೇವರು ಬಂದಂತೆ ನಾಟಕವಾಡಿ ದಲಿತರಿಗೆ ಬೆದರಿಕೆ ಹಾಕಿದ ವಿಲಕ್ಷಣ ಘಟನೆ ನಡೆದಿದೆ.

    ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಬಿಳಿದೇವಾಲಯದ ಕೆಂಕೇರಮ್ಮ ದೇವಸ್ಥಾನದಲ್ಲಿ ಈ ನಾಟಕೀಯ ಬೆಳವಣಿಗೆ ನಡೆದಿದೆ. ಬಿಳಿದೇವಾಲಯದ ಗ್ರಾಮದ ಸವರ್ಣೀಯರು ಸೇರಿದಂತೆ ದಲಿತರಿಂದ ವಂತಿಗೆ ಸಂಗ್ರಹಿಸಿ ಕೆಂಕೇರಮ್ಮನ ಜಾತ್ರೆ ಮಾಡುವುದು ಇಲ್ಲಿನ ವಾಡಿಕೆ. ಆದ್ರೆ ದಲಿತರು ವಂತಿಗೆ ಕೊಡಬೇಕೇ ಹೊರತು ದೇವಸ್ಥಾನದ ಒಳಕ್ಕೆ ಬರುವ ಹಾಗಿಲ್ಲ. ಇದನ್ನೂ ಓದಿ: ವಿಡಿಯೋ: ಶಾಲಾ ಮುಖ್ಯಸ್ಥೆಯ ಮೈಮೇಲೆ ಬಂತಂತೆ ಮಹಾಕಾಳಿ- ತ್ರಿಶೂಲ ಹಿಡಿದು ಅಧಿಕಾರಿಗಳಿಗೆ ಆಜ್ಞೆ

    ಭಾನುವಾರ ನಡೆದ ಜಾತ್ರೆಯಲ್ಲಿ ಪ್ರಜ್ಞಾವಂತ ಕೆಲ ದಲಿತ ಯುವಕರು ದೇವಸ್ಥಾನ ಪ್ರವೇಶ ಮಾಡಿದ್ರು. ಇನ್ನೂ ಕೆಲ ದಲಿತರು ಪ್ರವೇಶ ಮಾಡೋದಕ್ಕೆ ಸವರ್ಣೀಯ ಮುಖಂಡರು ಅಡ್ಡಿಪಡಿಸಿದ್ರು. ಪರಿಣಾಮ ಎರಡೂ ಸಮುದಾಯದ ನಡುವೆ ಮಾತಿನ ಚಕಮಕಿ ಉಂಟಾಯಿತು. ಈ ನಡುವೆ ಸವರ್ಣಿಯ ಮಹಿಳೆಯೋರ್ವಳು ಮೈ ಮೇಲೆ ದೇವರು ಬಂದ ನಾಟಕವಾಡಿ, ದಲಿತರು ದೇವಸ್ಥಾನ ಪ್ರವೇಶ ಮಾಡಿದ್ದೀರಾ..? ಇದರಿಂದ ದೇವಸ್ಥಾನ ಮೈಲಿಗೆ ಆಗಿದೆ. ನಿಮಗೆ ವಾಂತಿ ಭೇದಿ ಬಂದು ಸಾಯುತ್ತಿರಾ ಎಂದು ಬೆದರಿಸಿದ್ದಾಳೆ.

    ಸವರ್ಣೀಯ ಮಹಿಳೆಯ ಬೆದರಿಕೆಗೆ ಜಗ್ಗದೆ ದಲಿತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.