Tag: tumkuru

  • ರಾಜ್ಯಾದ್ಯಂತ ವರುಣನ ಆರ್ಭಟ ಜೋರು- ತುಮಕೂರು ರೈತರಿಗೆ ಕೈಕೊಟ್ಟ ಮಳೆ

    ರಾಜ್ಯಾದ್ಯಂತ ವರುಣನ ಆರ್ಭಟ ಜೋರು- ತುಮಕೂರು ರೈತರಿಗೆ ಕೈಕೊಟ್ಟ ಮಳೆ

    ತುಮಕೂರು: ರಾಜ್ಯಾದ್ಯಂತ ವರುಣನ ಆರ್ಭಟ ಜೋರಾಗಿದೆ. ಆದರೆ ನಿಗದಿತ ಸಮಯದಲ್ಲಿ ಮಳೆ ಬಾರದೇ ರೈತನ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ. ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಹೆಸರು, ಅಲಸಂದೆ, ಉದ್ದು, ಎಳ್ಳು, ತೊಗರಿ ಈಗ ದನಕರುಗಳ ಪಾಲಾಗಿದೆ.

    ತುಮಕೂರು ಜಿಲ್ಲೆ ತಿಪಟೂರು ತಾಲೂಕಿನಲ್ಲಿ ಆರಿದ್ರಾ ಮಳೆ ಕೈ ಕೊಟ್ಟ ಪರಿಣಾಮ ಕಳೆಕಟ್ಟುವ ಹಂತದಲ್ಲಿದ್ದ ಮುಂಗಾರು ಬೆಳೆಗಳು ನಷ್ಟವಾಗಿದೆ. ಅಶ್ವಿನಿ ಭರಣಿ ಮಳೆ ಚೆನ್ನಾಗಿ ಸುರಿದಿದ್ರಿಂದ ಸಂತೋಷಗೊಂಡ ರೈತರು ಹೆಸರು, ಅಲಸಂದೆ, ಉದ್ದು, ಎಳ್ಳು ಬಿತ್ತನೆ ಮಾಡಿದ್ದರು.

    ಆರಂಭದಲ್ಲಿ ಮಳೆಯಾಗಿದ್ರಿಂದ ಹಚ್ಚಹಸಿರಾಗಿ ಬೆಳೆ ಬಂದಿತ್ತು. ಕಾಳುಗಟ್ಟುವ ಸಮಯದಲ್ಲಿ ಆರಿದ್ರಾ ಮಳೆ ಕೈಕೊಟ್ಟಿದ್ರಿಂದ ಬೆಳೆ ಸಂಪೂರ್ಣ ಹಾಳಾಗಿದ್ದು ರೈತರು ದನ ಕರುಗಳನ್ನ ಕಟ್ಟಿ ಮೇಯಿಸುತ್ತಿದ್ದಾರೆ. ಕಳೆದ ವರ್ಷವೂ ಸಹ ಆರಿದ್ರಾ ಮಳೆ ಕೈಕೊಟ್ಟು ಸಾವಿರಾರು ಎಕರೆ ಮುಂಗಾರು ಬೆಳೆ ನಷ್ಟವಾಗಿತ್ತು.

    ಈ ವರ್ಷವೂ ಸಹ ಬೆಳೆ ಹಾಳಾಗಿದ್ರಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ಜಮೀನು ಹದ ಮಾಡಿ ಗೊಬ್ಬರ ಹಾಕಿ ಬೀಜ ಬಿತ್ತನೆ ಮಾಡಿದ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕಳೆದ ವರ್ಷದ ಬೆಳೆ ನಷ್ಟದಿಂದಾದ ಫಸಲ್ ಭೀಮಾ ಯೋಜನೆಯಡಿ ಪರಿಹಾರ ಇನ್ನೂ ಸಿಕ್ಕಿಲ್ಲ ಈ ವರ್ಷವೂ ಬೆಳೆ ನಷ್ಟವಾಗಿದ್ದು ಈ ಭಾಗದ ರೈತರು ಕಂಗಾಲಾಗಿದ್ದಾರೆ.

  • ಸ್ಕೂಲ್ ಬಸ್ ಹರಿದು ವಿದ್ಯಾರ್ಥಿನಿ ಸಾವು!

    ಸ್ಕೂಲ್ ಬಸ್ ಹರಿದು ವಿದ್ಯಾರ್ಥಿನಿ ಸಾವು!

    ತುಮಕೂರು: ಸ್ಕೂಲ್ ಬಸ್ ಹರಿದು ವಿದ್ಯಾರ್ಥಿನಿ ಮೃತಪಟ್ಟ ಘಟನೆ ತುಮಕೂರಿನ ಶಿರಾದಲ್ಲಿ ಪಟ್ಟಣದಲ್ಲಿ ನಡೆದಿದೆ.

    ಜಾಹ್ನವಿ(4) ಮೃತ ವಿದ್ಯಾರ್ಥಿನಿ. ಜಾಹ್ನವಿ ಕದಂಬ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿನಿ. ಇದೇ ಶಾಲೆಯ ಬಸ್ ಹಿಂಬದಿಯಿಂದ ಬಂದು ಜಾಹ್ನವಿ ಮೇಲೆ ಹರಿದಿದೆ.

    ಜಾಹ್ನವಿ ತರಗತಿ ಮುಗಿಸಿ ವಾಪಸ್ ಹೋಗುತಿದ್ದಾಗ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಮೃತ ಬಾಲಕಿ ಜಾಹ್ನವಿ ಶಿರಾ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೇದೆ ಭಕ್ತಕುಮಾರ್ ಅವರ ಪುತ್ರಿ ಎನ್ನಲಾಗಿದೆ.

    ಸದ್ಯ ಈ ಬಗ್ಗೆ ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರ ದರ್ಪ – ಬಸ್ ಕೆಳಗೆ ತೂರಿದ ವಿದ್ಯಾರ್ಥಿ

    ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರ ದರ್ಪ – ಬಸ್ ಕೆಳಗೆ ತೂರಿದ ವಿದ್ಯಾರ್ಥಿ

    ತುಮಕೂರು: ಉಚಿತ ಬಸ್ ಪಾಸ್ ಗಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿ ದರ್ಪ ಮೆರೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ತುಮಕೂರು ಶಿವಕುಮಾರ ಸ್ವಾಮೀಜಿ ಸರ್ಕಲ್‍ನಲ್ಲಿ ಈ ಘಟನೆ ನಡೆದಿದ್ದು, ಸರ್ಕಲ್‍ನಲ್ಲಿ ಉಚಿತ ಬಸ್ ಪಾಸ್ ಗಾಗಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಏಕಾಏಕಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ.

    ಎಬಿವಿಪಿ ಸಂಘಟನೆಯೊಂದಿಗೆ ವಿದ್ಯಾರ್ಥಿಗಳು ತೆರಳಿದ್ದು, ಈ ವೇಳೆ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪೊಲೀಸರ ನಡೆಯನ್ನು ಖಂಡಿಸಿ ವಿದ್ಯಾರ್ಥಿಗಳು ರಸ್ತೆಗಳಿದರು, ಅಲ್ಲದೇ ದಿಢೀರ್ ಎಂದು ರಸ್ತೆ ತಡೆಗೆ ಮುಂದಾಗಿದ್ದರು. ಇದನ್ನು ತಡೆಯಲು ಯತ್ನಿಸಿದ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ.

    ಪೊಲೀಸರ ಲಾಠಿ ಚಾರ್ಜ್ ಗೆ ಬೆದರಿದ ವಿದ್ಯಾರ್ಥಿಗಳು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಕೆಲವರಂತೂ ಬಸ್ ನಡಿ ತೂರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ಘಟನೆ ಹೊಸಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ವೇದಿಕೆಯಲ್ಲಿ ಗಳಗಳನೇ ಕಣ್ಣೀರಿಟ್ಟ ಜೆಡಿಎಸ್ ಮಾಜಿ ಸಚಿವ ಚನ್ನಿಗಪ್ಪ

    ವೇದಿಕೆಯಲ್ಲಿ ಗಳಗಳನೇ ಕಣ್ಣೀರಿಟ್ಟ ಜೆಡಿಎಸ್ ಮಾಜಿ ಸಚಿವ ಚನ್ನಿಗಪ್ಪ

    ತುಮಕೂರು: ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ನಿರಿಕ್ಷೀತ ಸಾಧನೆ ಮಾಡದ ಹಿನ್ನೆಲೆಯಲ್ಲಿ ಕಾರ್ಯಕರ್ತರ ಎದುರು ಮಾಜಿ ಸಚಿವ ಹಾಗೂ ಜಿಲ್ಲಾಧ್ಯಕ್ಷ ಸಿ ಚನ್ನಿಗಪ್ಪ ಗಳಗಳನೇ ಕಣ್ಣೀರಿಟ್ಟಿದ್ದಾರೆ.

    ಇಂದು ನಗರದಲ್ಲಿ ನೂತನ ಶಾಸಕ, ಸಚಿವರಿಗಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ ಅವರು, ತುಮಕೂರು ಜೆಡಿಎಸ್ ಭದ್ರಕೋಟೆಯಾಗಿತ್ತು, ಜಿಲ್ಲೆಯಲ್ಲಿರುವ 11 ಸ್ಥಾನದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇತ್ತು. ಆದರೆ ಕೇವಲ 4 ಸ್ಥಾನ ಮಾತ್ರ ಗೆಲ್ಲುವಂತಾಯಿತು ಎಂದು ಕಾರ್ಯಕರ್ತರ ಎದುರು ಕಳಪೆ ಸಾಧನೆಗೆ ಆತ್ಮಾವಲೋಕನ ಮಾಡಿಕೊಡು ಕಣ್ಣೀರಿಟ್ಟರು.

    ಇದೇ ವೇಳೆ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡುವಲ್ಲೂ ಅನ್ಯಾಯ ಆಗಿದೆ ಎಂದು ಆರೋಪಿಸಿರುವ ಅವರು, ನಾಯಕರಿಗೆ ಎರಡು ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೆ. ಮೊದಲ ಆದ್ಯತೆ ಶಿರಾ ಶಾಸಕ ಬಿ.ಸತ್ಯನಾರಾಯಣ ಗೆ ನೀಡಿದ್ದೇವು. ಆದರೆ ಅವವರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ನೋವಾಗಿದೆ ಎಂದರು. ಅಲ್ಲದೇ ತಮ್ಮ ಭಾಷಣ ವೇಳೆ ಕೊರಟಗೆರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಸುಧಾಕರ್ ಲಾಲ್ ಅವರ ಸೋಲನ್ನ ಪ್ರಸ್ತಾಪಿಸಿದ ಅವರು, ಸುಧಾಕರ ಲಾಲ್ ಸೋಲಬಾರದಿತ್ತು. ಅವರು ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

    ಕೊರಟಗೆರೆ ಕ್ಷೇತ್ರದಲ್ಲಿ ಪಕ್ಷದ ಸೋಲಿಗೆ ಚನ್ನಿಗಪ್ಪ ಅವರೇ ಕಾರಣ ಎಂಬ ಆರೋಪವಿದ್ದು, ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿಸಿಎಂ ಜಿ ಪರಮೇಶ್ವರ್ ಅವರೊಂದಿಗೆ ಸೇರಿ ಸುಧಾಕರ್ ಲಾಲ್ ರನ್ನು ಸೋಲಿಸಿದ್ದಾರೆ ಎಂಬ ಆರೋಪ ಅಂದು ಕೇಳಿ ಬಂದಿತ್ತು.

  • ಅನೈತಿಕ ಸಂಬಂಧಕ್ಕೆ ಅಡ್ಡಿ- ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ!

    ಅನೈತಿಕ ಸಂಬಂಧಕ್ಕೆ ಅಡ್ಡಿ- ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ!

    ತುಮಕೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂದು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಪತಿಯನ್ನು ಹತ್ಯೆ ಮಾಡಿದ್ದ ಹಂತಕಿ ಪತ್ನಿ ಹಾಗೂ ಪ್ರಿಯಕರನನ್ನು ತುಮಕೂರಿನ ಕೋರಾ ಪೊಲೀಸರು ಬಂಧಿಸಿದ್ದಾರೆ.

    ಸಂಗೀತಾ ಹಾಗೂ ಆಕೆಯ ಪ್ರಿಯಕರ ತಿಪ್ಪೆಸ್ವಾಮಿ ಬಂಧಿತ ಆರೋಪಿಗಳು. ಜೂನ್ 16ರಂದು ಸೋಮಸಾಗರ ಗೇಟ್ ಬಳಿ ಹೊಗೆಯಾಡುತ್ತಿದ್ದ ಶವವೊಂದು ಪತ್ತೆಯಾಗಿತ್ತು. ಅದು ಆರೋಪಿ ಸಂಗೀತಾ ಪತಿ ನಾಗಾನಂದನ ಶವವಾಗಿತ್ತು.

    ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಪತ್ನಿ ಸಂಗಿತಾ ಹಾಗೂ ಪ್ರಿಯಕರ ತಿಪ್ಪೆಸ್ವಾಮಿ ತಮ್ಮೂರು ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ದಾರಿ ಮಧ್ಯೆ ಹತ್ಯೆ ಮಾಡಿದ್ದಾರೆ. ಮದ್ಯ ಕುಡಿಸಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಸಾಯಿಸಿದ್ದಾರೆ. ಬಳಿಕ ಪೆಟ್ರೋಲ್ ಹಾಕಿ ಸುಟ್ಟಿದ್ದಾರೆ.

    ಈ ಕೊಲೆಯ ಜಾಡು ಹಿಡಿದು ಹೊರಟ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಬ್ಬರು ಬೆಂಗಳೂರುನ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು.

  • ತಮಾಷೆಗಾಗಿ ಬುರ್ಖಾ ಧರಿಸಿದ ಬಾಲಕರಿಗೆ ಥಳಿಸಿದ ಸಾರ್ವಜನಿಕರು!

    ತಮಾಷೆಗಾಗಿ ಬುರ್ಖಾ ಧರಿಸಿದ ಬಾಲಕರಿಗೆ ಥಳಿಸಿದ ಸಾರ್ವಜನಿಕರು!

    ತುಮಕೂರು: ಇಬ್ಬರು ಬಾಲಕರು ತಮಾಷೆಗಾಗಿ ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಸುತ್ತಾಡಿ ಸಾರ್ವಜನಿಕರಿಂದ ಗೂಸಾ ತಿಂದ ಘಟನೆ ನಡೆದಿದೆ.

    ಕುಣಿಗಲ್ ಪಟ್ಟಣದ ವಾರ್ಡ್ ನಂಬರ್ 2ರಲ್ಲಿ ಬಾಲಕರ ಈ ಪ್ರಹಸನ ನಡೆದಿದೆ. ಬುರ್ಖಾ ಹಾಕಿ ಮಂಗಳಮುಖಿಯಂತೆ ನಟಿಸಲು ಆರಂಭಿಸಿದ ಇಬ್ಬರೂ ಬಾಲಕರು ಬೀದಿ ಬೀದಿ ಸುತ್ತಿದ್ದಾರೆ. ಬುರ್ಖಾಧಾರಿಗಳ ಬಗ್ಗೆ ಅನುಮಾನಗೊಂಡ ಸ್ಥಳೀಯರು ಬುರ್ಕಾ ತೆಗೆದು ಬಾಲಕರ ಮುಖ ನೋಡಿದ್ದಾರೆ.

    ಬುರ್ಖಾ ಧರಿಸಿ ವಂಚಿಸುತಿದ್ದೀರಾ ಎಂದು ಪ್ರಶ್ನಿಸಿದ ಸ್ಥಳೀಯರು ಇಬ್ಬರಿಗೂ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇಬ್ಬರೂ ಬಾಲಕರು ಕುಣಿಗಲ್ ಪಟ್ಟಣದವರೇ ಆಗಿದ್ದು, ತಾವು ಮಂಗಳಮುಖಿಯರಂತೆ ನಟನೆ ಮಾಡಲು ಹೋಗಿ ಬುರ್ಖಾ ಧರಿಸಿದ್ದೇವೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

  • ಬಟ್ಟೆ ತೊಳೆಯುತ್ತಿದ್ದ ಯುವತಿಯನ್ನು ಕಂಡು ಮೈಮುಟ್ಟಿ ಅತ್ಯಾಚಾರಕ್ಕೆ ಯತ್ನ!

    ಬಟ್ಟೆ ತೊಳೆಯುತ್ತಿದ್ದ ಯುವತಿಯನ್ನು ಕಂಡು ಮೈಮುಟ್ಟಿ ಅತ್ಯಾಚಾರಕ್ಕೆ ಯತ್ನ!

    ತುಮಕೂರು: ನೀರಿನ ಕಟ್ಟೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ಯುವತಿ ಮೇಲೆ ಅನ್ಯಕೋಮಿನ ಯುವಕನೋರ್ವ ಬಲತ್ಕಾರ ಮಾಡಲು ಪ್ರಯತ್ನಿಸಿ ಸಾರ್ವಜನಿಕರಿಂದ ಗೂಸಾ ತಿಂದ ಘಟನೆ ನಡೆದಿದೆ.

    ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಮೂಡಳಪಾಳ್ಯದಲ್ಲಿ ಈ ಪ್ರಕರಣ ನಡೆದಿದೆ. ಸಮೀರ್ ಎಂಬ ಯುವಕ ಮೂಡಳ ಪಾಳ್ಯದ ಕಟ್ಟೆಯಲ್ಲಿ ಏಕಾಂಗಿಯಾಗಿ ಬಟ್ಟೆ ತೊಳೆಯುತ್ತಿದ್ದ ಯುವತಿಯ ಕಂಡು ಚೇಷ್ಟೆ ಮಾಡಿದ್ದಾನೆ. ಅಲ್ಲದೆ ಯುವತಿಯ ಮೈಮುಟ್ಟಿ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ.

    ಸಂಕಷ್ಟದಲ್ಲಿದ್ದ ಯುವತಿ ಕೂಗಿ ಕೊಂಡಾಗ ಊರ ಜನರು ಸೇರಿದ್ದಾರೆ. ಯುವಕ ಸಮೀರ್ ಸೇರಿದಂತೆ ಆತನ ತಂದೆ ನಾಸೀರ್ ಹಾಗೂ ಸಹೋದರ ಉಸಾರತ್‍ಗೂ ಸಖತ್ ಗೂಸಾ ಕೊಟ್ಟಿದ್ದಾರೆ. ಟಿಂಬರ್ ವ್ಯಾಪಾರಿಯಾದ ನಾಸೀರ್ ಕುಟುಂಬ ತುರುವೇಕೆರೆ ತಾಲೂಕಿನಿಂದ ಮೂಡಳಪಾಳ್ಯಕ್ಕೆ ಬಂದಿದ್ದರು.

    ಸದ್ಯ ಆರೋಪಿ ಸಮೀರ್ ಸೇರಿಂದತೆ ಮೂವರನ್ನೂ ಚೇಳೂರು ಪೊಲೀಸರಿಗೆ ಒಪ್ಪಿಸಲಾಗಿದೆ.

  • ಕಾರು, KSRTC ಮುಖಾಮುಖಿ ಡಿಕ್ಕಿ- ಮೂವರು ಸ್ಥಳದಲ್ಲೇ ದುರ್ಮರಣ

    ಕಾರು, KSRTC ಮುಖಾಮುಖಿ ಡಿಕ್ಕಿ- ಮೂವರು ಸ್ಥಳದಲ್ಲೇ ದುರ್ಮರಣ

    ತುಮಕೂರು: ಕಾರು ಮತ್ತು ಕೆಎಸ್‍ಆರ್ ಟಿಸಿ ಬಸ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ತುಮಕೂರಿನ ಬದರಿಕಾಶ್ರಮದಲ್ಲಿ ನಡೆದಿದೆ.

    ಹೇಮಂತ್, ಶಿವಣ್ಣ ಹಾಗೂ ಚಂದ್ರ ಮೃತ ದುರ್ದೈವಿಗಳು. ಕಾರಿನಲ್ಲಿ ಒಟ್ಟು ಐದು ಮಂದಿ ಪ್ರಯಾಣಿಸುತ್ತಿದ್ದು, ಬಸ್ಸೊಂದು ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಮೃತರು ತಿಪಟೂರು ತಾಲೂಕಿನ ಈಚನೂರಿನವರಾಗಿದ್ದು, ಘಟನೆಯಿಂದಾಗಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಸದ್ಯ ಗಾಯಾಳುಗಳನ್ನು ತುರುವೇಕೆರೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಈ ಬಗ್ಗೆ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರೀತಿಸಿ ಮದುವೆಯಾದ ಜೋಡಿಗೆ ಪೋಷಕರಿಂದಲೇ ಕೊಲೆ ಬೆದರಿಕೆ!

    ಪ್ರೀತಿಸಿ ಮದುವೆಯಾದ ಜೋಡಿಗೆ ಪೋಷಕರಿಂದಲೇ ಕೊಲೆ ಬೆದರಿಕೆ!

    ತುಮಕೂರು: ಪ್ರೀತಿಸಿ ಮದುವೆಯಾದ ಪ್ರೇಮಿಗಳ ಜೀವನಕ್ಕೆ ಜಾತಿ ಅಡ್ಡಿಯಾಗಿದೆ. ಜಾತಿ ಬೇರೆ ಬೇರೆ ಎನ್ನುವ ಕಾರಣಕ್ಕೆ ಪೋಷಕರೇ ಪ್ರೇಮಿಗಳಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ತುಮಕೂರು ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಬಳಿ ನಡೆದಿದೆ.

    ಹುಲಿಯೂರುದುರ್ಗದ ನಿವಾಸಿ ಸಿಂಧು ಮತ್ತು ಹಂಗಾರಹಳ್ಳಿ ನಿವಾಸಿ ಜಗದೀಶ್ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಸಿಂಧು ಮತ್ತು ಜಗದೀಶ್ ನಡುವೆ ಪ್ರೇಮಾಂಕುರವಾಗಿದೆ. ಇತ್ತ ಸಿಂಧು ಪೋಷಕರು ಮಗಳಿಗೆ ಮದುವೆ ಮಾಡುವ ಸಲುವಾಗಿ ಹುಡುಗನನ್ನ ಹುಡುಕಿ ನಿಶ್ಚಿತಾರ್ಥ ತಯಾರಿ ನಡೆಸಿದ್ದಾರೆ.

    ವಿಷಯ ತಿಳಿದ ಸಿಂಧು ಪ್ರಿಯಕರ ಜಗದೀಶ್ ಗೆ ಎಂಗೇಜ್ಮೆಂಟ್ ವಿಚಾರ ತಿಳಿಸಿದ್ದಾಳೆ. ಇಬ್ಬರೂ ಮೇಜರ್ ಆಗಿರೋ ಕಾರಣದಿಂದಾಗಿ ಒಂದು ನಿರ್ಧಾರಕ್ಕೆ ಬಂದು ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ಬಳಿಕ ಮದುವೆಯನ್ನು ಯಲಹಂಕದಲ್ಲಿ ರಿಜಿಸ್ಟರ್ ಕೂಡ ಮಾಡಿಸಿದ್ದಾರೆ. ಇದರಿಂದ ಕೋಪಗೊಂಡಿರುವ ಪೋಷಕರು ಇದೀಗ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಿಂಧು ಆರೋಪಿಸಿದ್ದಾರೆ.

    ನಾವಿಬ್ಬರೂ ಎರಡು ವರ್ಷದಿಂದ ಪ್ರೀತಿಸಿ ಮದುವೆಯಾಗಿದ್ದೇವೆ. ಜೊತೆಗೆ ನಮ್ಮ ಜಾತಿ ಬೇರೆಯಾದ್ದರಿಂದ ನಮ್ಮ ಪೋಷಕರು ಮದುವೆಗೆ ಒಪೋದಿಲ್ಲ ಎಂದು ಮೊದಲೇ ನಾನು ಸಿಂಧುಗೆ ಹೇಳಿದ್ದೆ. ಆದರೆ ನಾನು ಮದುವೆಯಾಗದಿದ್ದರೆ ಆಕೆ ಬದುಕೋದಿಲ್ಲ ಎಂದಳು. ಹಾಗಾಗಿ ನಾವಿಬ್ಬರು ಮದುವೆಯಾಗಿದ್ದೀವಿ. ಈಗ ಆಕೆಯ ಪೋಷಕರು ನನ್ನ ಮನೆಯವರಿಗೆ ತೊಂದರೆ ನೀಡುತ್ತಿದ್ದಾರೆ. ನನ್ನ ವಿರುದ್ಧ ಕಿಡ್ನಾಪ್ ಪ್ರಕರಣ ದಾಖಲಿಸಿ, ಪೊಲೀಸರನ್ನ ಬಳಸಿಕೊಂಡು ಎದುರಿಸುತ್ತಿದ್ದಾರೆ. ಹಾಗಾಗಿ ರಕ್ಷಣೆ ಕೋರಿ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಬಂದಿದ್ದೇವೆ ಎಂದು ಜಗದೀಶ್ ಹೇಳಿದ್ದಾರೆ.

    ಒಟ್ಟಿನಲ್ಲಿ ಜಾತಿ ಭೇದದ ಎಲ್ಲೆ ಮೀರಿದ ಪ್ರೀತಿಗೆ, ಪೋಷಕರ ಕಾರಣದಿಂದಾಗಿ ಜಾತಿ ತಾರತಮ್ಯ ಉಂಟಾಗಿದೆ. ಅಂತರ್ಜಾತಿಯವರನ್ನು ಪ್ರೀತಿಸಿದರು ಎಂಬ ಕಾರಣಕ್ಕೆ ಪೋಷಕರೇ ಪ್ರೇಮಿಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಸದ್ಯ ರಕ್ಷಣೆ ಕೋರಿ ಬಂದಿರುವ ಪ್ರೇಮಿಗಳಿಗೆ ಪೊಲೀಸರು ಸಾಂತ್ವನ ಹೇಳಿದ್ದು, ಪ್ರೇಮಿಗಳ ಸಮಸ್ಯೆಗೆ ಸ್ಪಂದಿಸುವಂತೆ ಕುಣಿಗಲ್ ಪೊಲೀಸರಿಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

  • ಪುಟಗೋಸಿ ಬಹಳ ಮರ್ಯಾದೆ ಕಾಪಾಡುವ ವಸ್ತು, ಬಿಜೆಪಿಯಿಂದ ಅಗೌರವವಾಗಿದೆ- ಮುಖ್ಯಮಂತ್ರಿ ಚಂದ್ರು

    ಪುಟಗೋಸಿ ಬಹಳ ಮರ್ಯಾದೆ ಕಾಪಾಡುವ ವಸ್ತು, ಬಿಜೆಪಿಯಿಂದ ಅಗೌರವವಾಗಿದೆ- ಮುಖ್ಯಮಂತ್ರಿ ಚಂದ್ರು

    ತುಮಕೂರು: ಪುಟಗೋಸಿಗೆ ಬಹಳ ಮರ್ಯಾದೆ ಕಾಪಾಡುವ ವಸ್ತುವಾಗಿದ್ದು, ಬಿಜೆಪಿಯಿಂದ ಅಗೌರವವಾಗಿದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

    ಜೆಡಿಎಸ್ ಪಕ್ಷವನ್ನು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಪುಟಗೋಸಿಗೆ ಹೋಲಿಕೆ ಮಾಡಿ ಲೇವಡಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಂಸ್ಕೃತಿಯನ್ನ ಎತ್ತಿಹಿಡಿಯುವ ಪಕ್ಷದ ಬಾಯಿಯಲ್ಲಿ ಪುಟಗೋಸಿ ಪದ ಬರಬಾರದು. ಪುಟಗೋಸಿ ಕೆಟ್ಟದಲ್ಲ ಅವರ ಬಾಯಿಯಿಂದ ಬಂದಂತಹ ರೀತಿ ಕೆಟ್ಟದ್ದು ಎಂದು ಕಿಡಿಕಾರಿದರು.

    ಅಂಗಾಂಗ ಮುಚ್ಚಿಕೊಳ್ಳಲು ಪುಟಗೋಸಿ ಮಹತ್ವದ ಬಗ್ಗೆ ಈಗಾಗಲೇ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಪುಟಗೋಸಿ, ಉಡುದಾರ, ಲಂಗೋಟಿ, ತುಂಡುಬಟ್ಟೆಗೆ ಅದರದ್ದೆ ಆದ ಅರ್ಥವಿದೆ ಎಂದರು. ಇದನ್ನೂ ಓದಿ: ಅನಂತಕುಮಾರ್ ಹೆಗಡೆಗೆ ಪುಟಗೋಸಿ ರವಾನಿಸಿದ ಜೆಡಿಎಸ್ ಕಾರ್ಯಕರ್ತರು

    ಪುಟಗೋಸಿಗೆ ಇವರು ಅಗೌರವ ತಂದಿದ್ದಾರೆ. ಅದು ಬಹಳ ಮರ್ಯಾದೆ ಕಾಪಾಡುವ ವಸ್ತು. ಬಿಜೆಪಿಯಿಂದ ಪುಟಗೋಸಿಗೆ ಅಗೌರವವಾಗಿದೆ. ಲಂಗೋಟಿ ಬಲು ಒಳ್ಳೇಯದಣ್ಣ ಅಂಗಾಂಗ ಮುಚ್ಚಲು ಲಂಗೋಟಿ ಬೇಕಣ್ಣ ಎಂದು ದಾಸರ ಪದ ಹಾಡಿ ಮುಖ್ಯಮಂತ್ರಿ ಚಂದ್ರು ಹಾಡಿದರು.

    ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮಪ್ಪ ಪರ ಚುನಾವಣಾ ಪ್ರಚಾರಕ್ಕೆ ತುಮಕೂರಿಗೆ ಆಗಮಿಸಿದ್ದ ವೇಳೆ ಮುಖ್ಯಮಂತ್ರಿ ಚಂದ್ರು ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದರು.