Tag: tumkuru

  • ಮಕ್ಕಳ ದಿನಾಚರಣೆಯಂದು ತ್ರಿವಳಿ ಮಕ್ಕಳಿಗೆ ಜನ್ಮ- ಮತ್ತೊಂದೆಡೆ ಮಗುವನ್ನೇ ಬಿಟ್ಟು ಹೋದ ತಾಯಿ

    ಮಕ್ಕಳ ದಿನಾಚರಣೆಯಂದು ತ್ರಿವಳಿ ಮಕ್ಕಳಿಗೆ ಜನ್ಮ- ಮತ್ತೊಂದೆಡೆ ಮಗುವನ್ನೇ ಬಿಟ್ಟು ಹೋದ ತಾಯಿ

    ತುಮಕೂರು/ಯಾದಗಿರಿ: ಮಕ್ಕಳ ದಿನಾಚರಣೆಯಂದು ತುಮಕೂರಿನಲ್ಲಿ ತಾಯಿಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದರೆ, ಯಾದಗಿರಿಯಲ್ಲಿ ತಾಯಿಯೇ ತನ್ನ ನವಜಾತ ಹೆಣ್ಣು ಶಿಶುವನ್ನು ಬಿಟ್ಟು ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ.

    ತುಮಕೂರು ಜಿಲ್ಲೆ ಶಿರಾ ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಅಪರೂಪದ ಘಟನೆ ನಡೆದಿದೆ. ಮಕ್ಕಳ ದಿನಾಚರಣೆಯಂದೇ ತಾಯಿಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. 24 ವರ್ಷದ ಶೈಲಾ ಅವರು ಮೂವರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಹಾಗೂ ಮಕ್ಕಳು ಆರೋಗ್ಯದಿಂದ ಇದ್ದಾರೆ. ಡಾ. ಶಿಲ್ಪಾಶ್ರೀ ನೇತೃತ್ವದ ವೈದ್ಯರ ತಂಡದಿಂದ ಡೆಲಿವರಿ ಮಾಡಿಸಿದೆ.

    ಇತ್ತ ಯಾದಗಿರಿಯಲ್ಲಿ ಮಕ್ಕಳ ದಿನಾಚರಣೆ ದಿನವೇ ತಾಯಿಯೊಬ್ಬರು ನವಜಾತ ಹೆಣ್ಣು ಶಿಶುವನ್ನು ಬಿಟ್ಟು ಹೋಗಿದ್ದಾಳೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ದಾಖಲಾಗಿದ್ದಳು. ಹೆರಿಗೆ ನಂತರ ಬೆಳಿಗ್ಗೆ ತಾಯಿ ಹೆತ್ತ ಮಗುವನ್ನು ಬಿಟ್ಟು ಪರಾರಿಯಾಗಿದ್ದಾಳೆ.

    ಸದ್ಯ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳಿಂದ ನವಜಾತ ಹೆಣ್ಣು ಶಿಶು ರಕ್ಷಿಸಿದ್ದು, ಹೆತ್ತಮ್ಮಳ ಮಡಿಲು ಸೇರಲು ಮಗು ಹಂಬಲಿಸುತ್ತಿದೆ. ಮಗುವನ್ನು ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದು, ಗುರುಮಠಕಲ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮೂಲಸೌಕರ್ಯ, ಶುಲ್ಕ ವಸೂಲಿ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿದ್ದಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆ

    ಮೂಲಸೌಕರ್ಯ, ಶುಲ್ಕ ವಸೂಲಿ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿದ್ದಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆ

    ತುಮಕೂರು: ವಿದ್ಯಾರ್ಥಿಯೊಬ್ಬ ತಾನು ಓದುತ್ತಿರುವ ಕಾಲೇಜಿನಲ್ಲಿ ಮೂಲಸೌಕರ್ಯ ಸಮಸ್ಯೆ ಹಾಗೂ ಹೆಚ್ಚಿನ ಶುಲ್ಕ ವಸೂಲಿ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿದ್ದಕ್ಕೆ ಪ್ರಾಂಶುಪಾಲ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಆತನ ಮೇಲೆ ಹಲ್ಲೆ ನಡೆಸಿದ ಪ್ರಕರಣವೊಂದು ತುಮಕೂರಿನಲ್ಲಿ ನಡೆದಿದೆ.

    ಗೋವಿಂದಪ್ಪ ಪಾವಗಡ ತಾಲೂಕಿನ ಕಡಮಲಕುಂಟೆ ನಿವಾಸಿಯಾಗಿದ್ದು, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿಎ ಓದುತ್ತಿದ್ದಾನೆ. ಗೋವಿಂದಪ್ಪ ಗಾರೇ ಕೆಲಸ ಮಾಡಿಕೊಂಡು ಅಪ್ಪ-ಅಮ್ಮನಿಗೆ ನೆರವಾಗುತ್ತಿದ್ದ. ಕಾಲೇಜಿನಲ್ಲಿ ಹೆಚ್ಚಿನ ಶುಲ್ಕ ವಸೂಲಿ ಹಾಗೂ ಮೂಲಸೌಕರ್ಯದ ಬಗ್ಗೆ ಮಾಧ್ಯಮದವರ ಬಳಿ ಹೇಳಿಕೊಂಡಿದ್ದಾನೆ. ಇತರ ವಿದ್ಯಾರ್ಥಿಗಳು ಕೂಡ ಕಾಲೇಜಿನ ಸಮಸ್ಯೆ ಬಗ್ಗೆ ಮೀಡಿಯಾದವರಲ್ಲಿ ಹೇಳಿಕೊಂಡಿದ್ದಾರೆ. ಆದರೆ ಈ ವಿದ್ಯಾರ್ಥಿಯ ಹೇಳಿಕೆ ಪತ್ರಿಕೆ, ಟಿವಿಯಲ್ಲಿ ಪ್ರಸಾರವಾಗಿದ್ದರಿಂದ ಸಿಟ್ಟಿಗೆದ್ದ ಕಾಲೇಜು ಪ್ರಾಂಶುಪಾಲ ಹಾಗೂ ದೈಹಿಕ ಶಿಕ್ಷಕ ವಿದ್ಯಾರ್ಥಿಯನ್ನು ಟಾರ್ಗೆಟ್ ಮಾಡಿ ಸ್ಟಾಫ್ ರೂಂನಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ.

    ವಿದ್ಯಾರ್ಥಿ ಗೋವಿಂದಪ್ಪ ರ್ಯಾಗಿಂಗ್ ಮಾಡಿದ್ದಾನೆ ಎಂದು ವಿದ್ಯಾರ್ಥಿನಿಯೊಬ್ಬಳಿಂದ ಸುಳ್ಳು ದೂರು ಕೊಡಿಸಿದ್ದಾರೆ. ವಿಚಾರಣೆಗಾಗಿ ಪ್ರಾಂಶುಪಾಲ ನಾರಾಯಣ್ ಹಾಗೂ ದೈಹಿಕ ಶಿಕ್ಷಕ ರವಿಕುಮಾರ್ ಗೋವಿಂದಪ್ಪನನ್ನು ಸ್ಟಾಫ್ ರೂಂಗೆ ಕರೆದಿದ್ದಾರೆ. ಅಲ್ಲಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ರವಿಕುಮಾರ್ ಬೂಟುಕಾಲಿನಿಂದ ಒದ್ದು ಹಲ್ಲೆ ಮಾಡಿದರೆ, ಪ್ರಾಂಶುಪಾಲರು ನೂಕಿ ತಳ್ಳಾಡಿದ್ದಾರೆ. ಪರಿಣಾಮ ವಿದ್ಯಾರ್ಥಿ ಗೋವಿಂದಪ್ಪನ ಬೆನ್ನ ಮೇಲೆ ಗಾಯವಾಗಿದ್ದು, ಸೊಂಟಕ್ಕೆ ಗಂಭೀರ ಗಾಯವಾಗಿ ನಡೆದಾಡಲು ಆಗದೇ ಸಂಕಟ ಪಡುತ್ತಿದ್ದಾನೆ.

    ತಮ್ಮ ಮೇಲಿನ ಆರೋಪವನ್ನು ಪ್ರಾಂಶುಪಾಲ ನಾರಾಯಣ್ ಹಾಗೂ ದೈಹಿಕ ಶಿಕ್ಷಕ ರವಿಕುಮಾರ್ ತಳ್ಳಿಹಾಕಿದ್ದಾರೆ. ವಿದ್ಯಾರ್ಥಿ ಗೋವಿಂದಪ್ಪನ ವರ್ತನೆಯೇ ಸರಿಯಿಲ್ಲ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಗಾಯಗೊಂಡ ಗೋವಿಂದಪ್ಪ ಪಾವಗಡ ಪೊಲೀಸರಿಗೆ ದೂರು ಕೊಟ್ಟರೂ ಕೇಸ್ ದಾಖಲಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಘಟನೆ ಕುರಿತಂತೆ ಆರೋಪ ಪ್ರತ್ಯಾರೋಪ ಏನೇ ಇದ್ದರೂ ಮಾಧ್ಯಮಕ್ಕೆ ಹಲವಾರು ವಿದ್ಯಾರ್ಥಿಗಳು ಹೇಳಿಕೆ ಕೊಟ್ಟಿದ್ದಾರೆ. ಆದರೆ ಗೋವಿಂದಪ್ಪನನ್ನು ಮಾತ್ರ ಯಾಕೆ ಟಾರ್ಗೆಟ್ ಮಾಡಿದ್ದರು ಅನ್ನೋ ಪ್ರಶ್ನೆ ಮೂಡಿದೆ. ಸದ್ಯ ಗೋವಿಂದಪ್ಪ ತನಗಾದ ಅನ್ಯಾಯದ ವಿರುದ್ಧ ಹೋರಾಟ ಮುಂದುವರಿಸಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಮ್ಯಾ ಚಿಕ್ಕ ಮಕ್ಕಳ ಶೌಚಕ್ಕೂ ಸಮಾನಳಲ್ಲ – ಸೊಗಡು ಶಿವಣ್ಣ ಕಿಡಿ

    ರಮ್ಯಾ ಚಿಕ್ಕ ಮಕ್ಕಳ ಶೌಚಕ್ಕೂ ಸಮಾನಳಲ್ಲ – ಸೊಗಡು ಶಿವಣ್ಣ ಕಿಡಿ

    ತುಮಕೂರು: ರಮ್ಯಾ ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಬಿಜೆಪಿ ಮುಖಂಡ ಸೊಗಡು ಶಿವಣ್ಣ ಕಿಡಿಕಾರಿದ್ದಾರೆ.

    ಆ ಯಮ್ಮ ಎಂತವಳು ಎನ್ನುವುದು ಎಲ್ಲರಿಗೂ ಗೊತ್ತಿದೆ. ಈಗ ಕೆಲವು ರಾಜಕಾರಣಿಯರು ಹಾಗೂ ಹಿರಿಯರ ಬಗ್ಗೆ ಹದ್ದು ಮೀರಿ ಮಾತನಾಡ್ತಾಳೆ. ಈಗಾಗಲೇ ಅವಳು ಹದ್ದು ಮೀರಿದ್ದಾಳೆ. ಅವಳಿಗೆ ಯಾರೂ ಬೆಲೆ ಕೊಡುವುದಿಲ್ಲ ಎಂದರು.

    ಪಟೇಲ್ ಅಂತಹ ಮಹಾನುಭಾವನ ಹತ್ತಿರ ನಿಲ್ಲುವುದ್ದಕ್ಕೆ ನಾವು ಯೋಗ್ಯರಲ್ಲ. ದೇಶ ಸ್ವತಂತ್ರ ಆಗುವ ಕಾಲದಲ್ಲಿ ಸಂಸ್ಥಾನಗಳನ್ನು ಜೋಡಿಸಿದ ಮಹಾನ್ ವ್ಯಕ್ತಿ ಪಟೇಲ್. ಆ ಯಮ್ಮನಿಗೆ ನಾಚಿಕೆಯಾಗಬೇಕು. ನಾಚಿಕೆ ಎಲ್ಲ ಬಿಟ್ಟು ಪ್ರಧಾನಿಯವರಿಗೆ ಹಿಕ್ಕೆ ಎಂಬ ಪದ ಉಪಯೋಗಿಸಿದ್ದಾಳೆ. ಆ ಯಮ್ಮ ಹಿಕ್ಕೆಗೂ ಸಾಟಿಯಿಲ್ಲ. ಲಜ್ಜೆಗೆಟ್ಟು ನಡೆಯುತ್ತಾಳೆ. ಇನ್ನೂ ಆಕೆ ನಡತೆ ಸರಿಪಡಿಸಿಕೊಳ್ಳದೆ ಇದರೆ ಆಕೆಯ ಇತಿಹಾಸ ಬಿಚ್ಚಿಡಬೇಕಾಗುತ್ತದೆ. ರಮ್ಯಾ ಚಿಕ್ಕ ಮಕ್ಕಳ ಶೌಚಕ್ಕೂ ಸಮಾನಳಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ವಾಗ್ದಾಳಿ ನಡೆಸಿದರು.

    https://twitter.com/divyaspandana/status/1057842482975817728?ref_src=twsrc%5Etfw%7Ctwcamp%5Etweetembed%7Ctwterm%5E1057842482975817728&ref_url=https%3A%2F%2Fpublictv.jssplgroup.com%2Fcontroversy-over-ramya-bird-dropping-on-modi%2Famp

    ಬುಧವಾರ ಗುಜರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸರ್ದಾರ್ ವಲ್ಲಭಭಾಯಿ ಪಟೇಲರ 182 ಅಡಿ ಎತ್ತರದ ಏಕತಾ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದರು. ನರೇಂದ್ರ ಮೋದಿಯವರು ಪ್ರತಿಮೆ ಕಾಲ ಬಳಿ ನಿಂತು ತೆಗೆಸಿಕೊಂಡಿದ್ದ ಫೋಟೋವನ್ನು ನಟಿ ರಮ್ಯಾ ತಮ್ಮ ಟ್ವಿಟ್ಟರ್ ನಲ್ಲಿ ಹಾಕಿ, ಹಕ್ಕಿ ಹಿಕ್ಕೆ ಹಾಕಿದ್ಯಾ ಎಂದು ಎಂದು ಪ್ರಶ್ನಿಸಿ ಕಾಲೆಳೆಯಲು ಹೋಗಿದ್ದಾರೆ.

    ಟ್ವೀಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರಮ್ಯಾರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿರುವ ಎಲ್ಲಾ ನಾಯಕರ ಸಂಸ್ಕೃತಿಯು ಹೀಗೆಯೇ? ರಾಹುಲ್ ಗಾಂಧಿ ಹೀಗೆ ಮಾಡಿ ಎಂದು ನಿಮಗೆ ಸಲಹೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿ ರಮ್ಯಾ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 2 ವರ್ಷ ಪ್ರೀತಿಸಿ ಮರಕ್ಕೆ ನೇಣು ಬಿಗಿದುಕೊಂಡ ಅಪ್ರಾಪ್ತರು..!

    2 ವರ್ಷ ಪ್ರೀತಿಸಿ ಮರಕ್ಕೆ ನೇಣು ಬಿಗಿದುಕೊಂಡ ಅಪ್ರಾಪ್ತರು..!

    ತುಮಕೂರು: ಅಪ್ರಾಪ್ತ ಪ್ರೇಮಿಗಳು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧುಗಿರಿ ತಾಲೂಕಿನ ಸುದ್ದೇಗುಂಟೆ ಗ್ರಾಮದ ಹೊರವಲಯದ ತೋಟದಲ್ಲಿ ನಡೆದಿದೆ.

    ಸಂದೇಶ್(17) ಹಾಗೂ ಮೀನಾಕ್ಷಿ(17) ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತ ಪ್ರೇಮಿಗಳು. ಸಂದೇಶ್ ಹಾಗೂ ಮೀನಾಕ್ಷಿ ಕಳೆದ ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಇದೀಗ ಕುಟುಂಬದವರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗುತ್ತಿದೆ.

    ಸದ್ಯ ಈ ಸಂಬಂಧ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯುವಕರ ಬೈಕ್ ವೀಲಿಂಗ್‍ಗೆ ಬ್ರೇಕ್- 37 ಬೈಕ್ ಗಳನ್ನು ಸೀಜ್ ಮಾಡಿದ ಪೊಲೀಸರು

    ಯುವಕರ ಬೈಕ್ ವೀಲಿಂಗ್‍ಗೆ ಬ್ರೇಕ್- 37 ಬೈಕ್ ಗಳನ್ನು ಸೀಜ್ ಮಾಡಿದ ಪೊಲೀಸರು

    ತುಮಕೂರು: ಜಿಲ್ಲೆಯ ಶಿರಾದಲ್ಲಿ ಯುವಕರ ಬೈಕ್ ವೀಲಿಂಗ್ ಕ್ರೇಜ್ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿತ್ತು. ವೀಲಿಂಗ್ ಪರಿಣಾಮ ಪ್ರತಿದಿನ ಒಂದಲ್ಲಾ ಒಂದು ಅಪಘಾತಗಳು ನಡೆಯುತ್ತಿತ್ತು ಈಗ ವೀಲಿಂಗ್ ಪುಂಡರಿಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಬೈಕ್ ವೀಲಿಂಗ್ ಮಾಡುತ್ತಿದ್ದ ಯುವಕರ ಸಹಿತ 37 ಬೈಕ್ ಗಳನ್ನ ಪೊಲೀಸರು ಸೀಜ್ ಮಾಡಿದ್ದಾರೆ.

    ಶಿರಾನಗರ ಹಾಗೂ ರಾಷ್ಟ್ರೀಯ ಹೆದ್ದಾರಿ 04ರಲ್ಲಿ ವ್ರೂಂ… ವ್ರೂಂ… ಅಂತಾ ಕ್ರೇಜಿ ಬಾಯ್ಸ್ ಪಡೆ ಬೈಕ್ ವೀಲಿಂಗ್ ನಡೆಸಿ ಹಲವರ ಪ್ರಾಣಕ್ಕೆ ಸಂಚಕಾರ ತಂದಿದ್ದರು. ವೀಲಿಂಗ್ ಮಾಡುವ ಭರದಲ್ಲಿ ಚಿಗುರು ಮೀಸೆಯ ಯುವಕರು ಹೈವೇ ಎನ್ನದೇ, ಜನನಿಬಿಡ ರಸ್ತೆ ಎನ್ನದೇ ಅಡ್ಡಾದಿಡ್ಡಿಯಾಗಿ ವೀಲಿಂಗ್ ಮಾಡುತ್ತಾ ಶೋ ಕೊಡುತ್ತಿದ್ದರು. ಇವರ ವೀಲಿಂಗ್ ಕಾಟಕ್ಕೆ ಹಲವಾರು ಅಪಘಾತಗಳು ನಡೆದು ಕೆಲ ಜೀವಗಳೂ ಬಲಿಯಾಗಿವೆ. ಇದರಿಂದ ಎಚ್ಚೆತ್ತುಕೊಂಡ ಶಿರಾನಗರ ಪೊಲೀಸರು ಬೈಕ್ ವೀಲಿಂಗ್‍ಗೆ ಬ್ರೇಕ್ ಹಾಕಿದ್ದಾರೆ. ವೀಲಿಂಗ್ ಮಾಡುತ್ತಿದ್ದ 37 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. 37 ಯುವಕರ ಮೇಲೂ ಕೇಸ್ ಹಾಕಲಾಗಿದೆ.

    ಕೇವಲ ಬೈಕ್ ವೀಲಿಂಗ್ ಶೂರರಿಗೆ ಮಾತ್ರ ಬ್ರೇಕ್ ಬಿದ್ದಿಲ್ಲ. ಅಪ್ರಾಪ್ತ ಬೈಕ್ ಸವಾರರ ಮೇಲೂ ಶಿರಾ ಪೊಲಿಸರು ಕಣ್ಣಿಟ್ಟು ಕೆಲವರಿಗೆ ದಂಡ ಹಾಕಲಾಗಿದೆ. ಅಪ್ರಾಪ್ತರ ಪೋಷಕರಿಗೆ ಕರೆದು ಸಭೆ ನಡೆಸಿ ಮಕ್ಕಳಿಗೆ ತಿಳಿ ಹೇಳುವಂತೆ ತಾಕೀತು ಮಾಡಲಾಗಿದೆ. ಬೈಕ್ ವೀಲಿಂಗ್‍ಗೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರಿಂದ ಶಿರಾನಗರದ ಜನತೆ ಹಾಗೂ ಹೆದ್ದಾರಿ ಸವಾರರು ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಶಿರಾ ಪೊಲೀಸರ ಬೈಕ್ ವೀಲಿಂಗ್ ವಿರುದ್ಧ ಕಾರ್ಯಾಚರಣೆಯಿಂದಾಗಿ ನಗರದಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ. ಅಲ್ಲದೆ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲವ್ ಮಾಡು ಇಲ್ಲದಿದ್ದರೆ ರೇಪ್ ಮಾಡ್ತೀನಿ- ಅಣ್ಣನಿಂದ್ಲೇ ತಂಗಿಗೆ ಬೆದರಿಕೆ

    ಲವ್ ಮಾಡು ಇಲ್ಲದಿದ್ದರೆ ರೇಪ್ ಮಾಡ್ತೀನಿ- ಅಣ್ಣನಿಂದ್ಲೇ ತಂಗಿಗೆ ಬೆದರಿಕೆ

    ತುಮಕೂರು: ಲವ್ ಮಾಡು ಅಂತ ಸ್ವತಃ ದೊಡ್ಡಪ್ಪನ ಮಗನೇ ಒತ್ತಾಯಿಸಿ ಹಲ್ಲೆ ಮಾಡಿ ಕಿರುಕುಳ ನೀಡಿದ ಪ್ರಕರಣವೊಂದು ತುಮಕೂರಿನಲ್ಲಿ ಬೆಳಕಿಗೆ ಬಂದಿದೆ.

    ರಮೇಶ್, ಸಹೋದರಿಯನ್ನು ಪ್ರೀತಿಸು ಎಂದು ಹಲ್ಲೆ ಮಾಡಿದ ಸಹೋದರ. ರಮೇಶ್ ತನ್ನ ಅಪ್ರಾಪ್ತ ಸಹೋದರಿಯನ್ನು ಲವ್ ಮಾಡು ಎಂದು ಪೀಡಿಸುತ್ತಿದ್ದನು. ಲವ್ ಮಾಡು ಇಲ್ಲದಿದ್ದರೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೆ ಬಾಲಕಿ ತನ್ನ ಸಹೋದರನನ್ನು ಲವ್ ಮಾಡಲು ನಿರಾಕರಿಸಿದ್ದಾಳೆ.

    ರಮೇಶ್ ನೀಡುತ್ತಿದ್ದ ಕಿರುಕುಳವನ್ನು ತಾಳಲಾರದೇ ಬಾಲಕಿ ಈ ವಿಷಯವನ್ನು ತನ್ನ ಶಾಲಾ ಶಿಕ್ಷಕರಿಗೆ ಹಾಗೂ ಪೋಷಕರಿಗೆ ತಿಳಿಸಿದ್ದಳು. ಪೋಷಕರಿಗೆ ಹಾಗೂ ಶಿಕ್ಷಕರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಆರೋಪಿ ಬಾಲಕಿ ಮೇಲೆ ಹಲ್ಲೆ ಮಾಡಿದ್ದಾನೆ. ಆರೋಪಿ ರಮೇಶ್ ತನ್ನ ಅಪ್ರಾಪ್ತ ಸಹೋದರಿ ಮೇಲೆ ರಾಡ್‍ನಿಂದ ಹಲ್ಲೆ ಮಾಡಿದ್ದಾನೆ.

    ಹಲ್ಲೆಯಿಂದ ಬಾಲಕಿಗೆ ತೀವ್ರ ಪೆಟ್ಟು ಬಿದ್ದಿದೆ. ಸದ್ಯ ಬಾಲಕಿಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ತುಮಕೂರು ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾರಕ ರೋಗ ಎಚ್1ಎನ್1ಗೆ ಬಾಣಂತಿ ಸೇರಿ ಅವಳಿ ಹೆಣ್ಣು ಶಿಶು ಸಾವು

    ಮಾರಕ ರೋಗ ಎಚ್1ಎನ್1ಗೆ ಬಾಣಂತಿ ಸೇರಿ ಅವಳಿ ಹೆಣ್ಣು ಶಿಶು ಸಾವು

    ತುಮಕೂರು: ಜಿಲ್ಲೆಯಲ್ಲೂ ಮಾರಕ ರೋಗ ಎಚ್1ಎನ್1 ಗೆ ಬಾಣಂತಿ ಸೇರಿ ಆಕೆಯ ಅವಳಿ ನವಜಾತ ಶಿಶು ಸಾವನ್ನಪ್ಪಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆದರೆ ಈ ಸಾವನ್ನು ಆರೋಗ್ಯ ಇಲಾಖೆ ತಡವಾಗಿ ದೃಢಿಕರಿಸಿದೆ.

    ತುಮಕೂರು ತಾಲೂಕಿನ ಕುಪ್ಪೂರು ಗ್ರಾಮದ ರಂಗನಾಥ್ ಅವರ ಪತ್ನಿ ಕಾವ್ಯಾ ಹಾಗೂ ಆಕೆಯ ನವಜಾತ ಅವಳಿ ಹೆಣ್ಣು ಶಿಶುಗಳು ಆಗಸ್ಟ್ 27 ರಂದೇ ಎಚ್1ಎನ್1 ಗೆ ಬಲಿಯಾಗಿದ್ದರು. ಆದರೆ ನ್ಯುಮೋನಿಯಾದಿಂದ ಸಾವನ್ನಪ್ಪಿದ್ದರು ಎಂದು ಹೇಳಲಾಗಿತ್ತು. ಈಗ ಬಂದ ವರದಿ ಪ್ರಕಾರ ಎಚ್1ಎನ್1 ನಿಂದಲೇ ಅಸುನೀಗಿದ್ದಾರೆ ಎಂದು ಆರೋಗ್ಯ ಇಲಾಖೆ ದೃಢೀಕರಿಸಿದೆ. ಇದನ್ನು ಓದಿ: ಏನಿದು ಎಚ್1ಎನ್1? ಹಂದಿ ಜ್ವರ ಬಂದ ಮೇಲೆ ಏನು ಮಾಡಬೇಕು?

    7 ತಿಂಗಳ ಗರ್ಭಿಣಿಯಾದ ಕಾವ್ಯಾರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೊದಲು ತುಮಕೂರು ದೊಡ್ಡಮನೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಜ್ವರ ಹತೋಟಿಗೆ ಬಾರದೇ ಇದ್ದಾಗ ಕ್ರಮವಾಗಿ ಬೆಂಗಳೂರಿನ ವಾಣಿ ವಿಲಾಸ್, ಚಿನ್ಮಯ, ಹಾಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಮಣಿಪಾಲ್ ಆಸ್ಪತ್ರೆಯಲ್ಲಿ ಕಾವ್ಯಾ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದರೂ ಅವು ಎಚ್1ಎನ್1 ಗೆ ಬಲಿಯಾಗಿದೆ.

    ಆಗ ತಕ್ಷಣ ಕಾವ್ಯಾರನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಅಲ್ಲಿ ಕಾವ್ಯಾಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಸಾವಿನಿಂದಾಗಿ ಜಿಲ್ಲೆಯ ಜನತೆಯಲ್ಲಿ ಮಾರಕ ರೋಗ ಎಚ್1ಎನ್1 ರ ಭೀತಿ ಶುರುವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆಲ್ಮೆಟ್ ಇಲ್ಲದೆ ತ್ರಿಬಲ್ ರೈಡ್ ಮಾಡಿದ ಸಚಿವರು, ಶಾಸಕರು

    ಹೆಲ್ಮೆಟ್ ಇಲ್ಲದೆ ತ್ರಿಬಲ್ ರೈಡ್ ಮಾಡಿದ ಸಚಿವರು, ಶಾಸಕರು

    ತುಮಕೂರು: ಹೆಲ್ಮೆಟ್ ಇಲ್ಲದೆ ಸಚಿವರು ಹಾಗೂ ಶಾಸಕರು ತುಮಕೂರಿನ ಕುಣಿಗಲ್ ಪಟ್ಟಣದಲ್ಲಿ ತ್ರಿಬಲ್ ರೈಡ್ ಮಾಡಿದ್ದಾರೆ.

    ಆಹಾರ ಸಚಿವ ಜಮೀರ್ ಅಹಮದ್ ಹಾಗೂ ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ತ್ರಿಬಲ್ ರೈಡ್ ಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಜಮೀರ್ ಅಹಮದ್ ಸಂಬಂಧಿಕರ ಮದುವೆಗೆ ಬಂದಿದ್ದರು. ಈ ವೇಳೆ ತ್ರಿಬಲ್ ರೈಡ್ ಮಾಡಿದ್ದಾರೆ.

    ಗ್ರಾಮದೇವತೆ ಸರ್ಕಲ್ ನಿಂದ ದಿವ್ಯಾ ಕಲ್ಯಾಣ ಮಂಟಪದವರೆಗೆ ಹೆಲ್ಮೆಟ್ ಇಲ್ಲದೆ ಜಮೀರ್ ತ್ರಿಬಲ್ ರೈಡ್ ಮಾಡಿದ್ದಾರೆ. ಜಮೀರ್ ಬುಲೆಟ್ ನಲ್ಲಿ ಶಾಸಕ ರಂಗನಾಥ್ ಹಾಗೂ ಇನ್ನೋರ್ವ ಕಾರ್ಯಕರ್ತ ಸಾಥ್ ನೀಡಿದ್ದಾರೆ. ಇದ್ನನೂ ನೋಡಿಯೂ ಪೊಲೀಸರು ನೋಡದಂತೆ ಮೂಕ ಪ್ರೇಕ್ಷಕರಾಗಿದ್ದರು.

    ಸಚಿವ ಜಮೀರ್ ಪೊಲೀಸರ ಭದ್ರತೆಯಲ್ಲೇ ಕಲ್ಯಾಣ ಮಂಟಪಕ್ಕೆ ತಲುಪಿದ್ದಾರೆ.

    ಸಚಿವರು ಹಾಗೂ ಶಾಸಕರ ಈ ನಡೆಯ ಬಗ್ಗೆ ನೀವೇನು ಹೇಳುತ್ತೀರಿ? ಕಮೆಂಟ್ ಮಾಡಿ..

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಶೇಷ ತರಗತಿಯಲ್ಲಿ ವಿದ್ಯಾರ್ಥಿನಿಯರಿಗೆ ಕಾಮ ಪಾಠದ ಜೊತೆ ಕಿಸ್ಸಿಂಗ್ ತರಬೇತಿ!

    ವಿಶೇಷ ತರಗತಿಯಲ್ಲಿ ವಿದ್ಯಾರ್ಥಿನಿಯರಿಗೆ ಕಾಮ ಪಾಠದ ಜೊತೆ ಕಿಸ್ಸಿಂಗ್ ತರಬೇತಿ!

    ತುಮಕೂರು: ಶಿಕ್ಷಕನೊಬ್ಬ ವಿಶೇಷ ತರಗತಿ ನೆಪದಲ್ಲಿ ವಿದ್ಯಾರ್ಥಿನಿಯನ್ನು ಶಾಲೆಗೆ ಕರೆಸಿಕೊಂಡು ಕಾಮ ಪಾಠದ ಜೊತೆ ಕಿಸ್ಸಿಂಗ್ ತರಬೇತಿ ಕೊಡುತ್ತಿದ್ದ ಪ್ರಕರಣವೊಂದು ತುಮಕೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಚಂದ್ರಶೇಖರ್ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ ಕನ್ನಡ ಶಿಕ್ಷಕ. ಜಿಲ್ಲೆಯ ಮಧುಗಿರಿ ತಾಲೂಕಿನ ರೆಡ್ಡಿಹಳ್ಳಿ ಗ್ರಾಮದ ಸುವರ್ಣ ಮುಖಿ ಪ್ರೌಢಶಾಲೆಯ ಕನ್ನಡ ಶಿಕ್ಷಕನಾಗಿರುವ ಚಂದ್ರಶೇಖರನ ಕಾಮಚೇಷ್ಟೆ ಬೆಳಕಿಗೆ ಬಂದಿದೆ.

    ಚಂದ್ರಶೇಖರ್ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ನೀಡಿ ಈ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ. ಅಲ್ಲದೇ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಮಾಟ ಮಂತ್ರ ಮಾಡಿ ನಿಮ್ಮ ತಂದೆ-ತಾಯಿಯರನ್ನು ಸಾಯಿಸುತ್ತೇನೆ ಎಂದು ಮಕ್ಕಳನ್ನು ಹೆದರಿಸಿದ್ದ.

    ವಿಶೇಷ ತರಗತಿಗೆಂದು ನಮ್ಮನ್ನು ಕರೆಸಿಕೊಂಡು ಕಿಸ್ ಕೊಡು ಎಂದು ಬಲವಂತ ಮಾಡುತ್ತಾರೆಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಚಂದ್ರಶೇಖರ್ ಕೆಲ ವಿದ್ಯಾರ್ಥಿನಿಯರನ್ನು ಡಾರ್ಲಿಂಗ್ ಅಂತಾನೂ ಕರಿಯುತ್ತಾನೆ ಎಂಬುದು ತಿಳಿದು ಬಂದಿದೆ.

    ಸದ್ಯ ಈ ವಿಷಯ ತಿಳಿದ ಗ್ರಾಮಸ್ಥರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡು ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನ್ನ ಕಾಮುಚೇಷ್ಟೆ ಬಟಾಬಯಲಾಗುತ್ತಿದ್ದಂತೆ ಕನ್ನಡ ಶಿಕ್ಷಕ ಪರಾರಿಯಾಗಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮದ್ವೆ ಸಮಾರಂಭಕ್ಕೆ ತಂದಿದ್ದ ಮಿನರಲ್ ವಾಟರ್ ಬಾಟಲಿಯಲ್ಲಿ ಕಸಕಡ್ಡಿ, ಹುಳು

    ಮದ್ವೆ ಸಮಾರಂಭಕ್ಕೆ ತಂದಿದ್ದ ಮಿನರಲ್ ವಾಟರ್ ಬಾಟಲಿಯಲ್ಲಿ ಕಸಕಡ್ಡಿ, ಹುಳು

    ತುಮಕೂರು: ಮದುವೆ ಸಮಾರಂಭಕ್ಕೆ ತಂದಿದ್ದ ಮಿನರಲ್ ವಾಟರ್ ಬಾಟಲಿಯಲ್ಲಿ ಕಸಕಡ್ಡಿ, ಹುಳು ಕಂಡು ಬಂದಿದ್ದರಿಂದ ಮದುವೆ ಬಂದ ಅತಿಥಿಗಳು ಹೌಹಾರಿದ ಘಟನೆ ನಡೆದಿದೆ.

    ತುಮಕೂರು ನಗರದ ತಿರುಮಲ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ನಡೆಯುತಿತ್ತು. ಇಲ್ಲಿ ಬ್ಲೂ ಬ್ರೀಜ್ ಹೆಸರಿನ ನೀರಿನ ಬಾಟಲನ್ನು ತರಿಸಲಾಗಿತ್ತು. ಅದರಲ್ಲಿ 7 ಬಾಕ್ಸನಲ್ಲಿರುವ ಬಾಟಲ್ ಗಳಲ್ಲಿ ಕಸಕಡ್ಡಿಗಳು ಕಂಡು ಬಂದಿದೆ.

    ನೂರಾರು ಅಥಿತಿಗಳು ಅರಿವಿಗೆ ಬಾರದೇ ಈ ನೀರನ್ನು ಕುಡಿದಿದ್ದು ಕಾಯಿಲೆ ಬರುವ ಆತಂಕದಲ್ಲಿದ್ದಾರೆ. ಶೈಲಾ ಇಂಡಸ್ಟ್ರೀಸ್ ಗೆ ಸೇರಿದ ನೀರಿನ ಬಾಟಲ್ ಇದಾಗಿದ್ದು ತುಮಕೂರಿನ ರಂಗಾಪುರ ಕೈಗಾರಿಕಾ ಪ್ರದೇಶದಲ್ಲಿ ತಯಾರು ಮಾಡಲಾಗುತ್ತಿದೆ. ತಯಾರಿಕಾ ಘಟಕದಲ್ಲಿ ಮುಂಜಾಗೃತೆ ವಹಿಸದೇ ಜನರ ಆರೋಗ್ಯದ ಜೊತೆ ಚೆಲ್ಲಾಟ ಆಡುತ್ತಿರುವ ಕಂಪೆನಿ ವಿರುದ್ಧ ದೂರು ನೀಡಲು ಗ್ರಾಹಕರು ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv