Tag: tumkuru

  • ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆ ಪತ್ತೆ

    ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆ ಪತ್ತೆ

    ತುಮಕೂರು: ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆ ಅನುಮಾನಸ್ಪದವಾಗಿ ಮೃತಪಟ್ಟ ಘಟನೆಯೊಂದು ತುಮಕೂರಿನ ಗೊಲ್ಲಹಳ್ಳಿಯಲ್ಲಿ ನಡೆದಿದೆ.

    ಲಾವಣ್ಯ(24) ನೇಣು ಬಿಗಿದ ರೀತಿಯಲ್ಲಿ ಪತ್ತೆಯಾದ ನವವಿವಾಹಿತೆ. ಲಾವಣ್ಯ ಕಳೆದ 7 ತಿಂಗಳ ಹಿಂದೆ ಗೊಲ್ಲಹಳ್ಳಿಯ ರೇಣುಕಾ ಪ್ರಸಾದ್ ಜೊತೆ ಮದುವೆಯಾಗಿದ್ದರು. ಪತಿ ಕುಟುಂಬವೇ ಕೊಲೆ ಮಾಡಿದೆ ಎಂದು ಲಾವಣ್ಯ ಪೋಷಕರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇತ್ತ ಕಲಬುರಗಿಯಲ್ಲಿ ಪತಿಯ ಮನೆಯವರ ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. 25 ವರ್ಷದ ಕಾವ್ಯ ನೇಣಿಗೆ ಶರಣಾದ ಗೃಹಿಣಿ. ಈಕೆಯನ್ನು ಅಗ್ರಿಕಲ್ಚರ್ ಫಿಲ್ಡ್ ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಬಸವರಾಜ್ ಜೊತೆ ಕಳೆದ ಒಂದೂವರೆ ವರ್ಷದ ಹಿಂದೆ ಮದುವೆ ಮಾಡಿಕೊಡಲಾಗಿತ್ತು.

    ಪತಿ ಬಸವರಾಜ್ ಮತ್ತು ಆಕೆಯ ಮನೆಯವರು, ತವರು ಮನೆಯಿಂದ ಎರಡು ಲಕ್ಷ ರೂಪಾಯಿ ತಗೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ. ಇದರಿಂದ ಮನನೊಂದು ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೂರುದಾರ ಮಹಿಳೆಗೆ ಅವಾಚ್ಯವಾಗಿ ಪಿಎಸ್‍ಐ ನಿಂದನೆ!

    ದೂರುದಾರ ಮಹಿಳೆಗೆ ಅವಾಚ್ಯವಾಗಿ ಪಿಎಸ್‍ಐ ನಿಂದನೆ!

    ತುಮಕೂರು: ದೂರುದಾರ ಮಹಿಳೆಗೆ ಪಿಎಸ್‍ಐ ಓರ್ವರು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅಶ್ಲೀಲ ಪದ ಪ್ರಯೋಗ ಮಾಡಿ ಬೈದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

    ನಗರದ ತಿಲಕ್ ಪಾರ್ಕ್ ಠಾಣೆಯ ಪಿಎಸ್‍ಐ ಲಕ್ಷ್ಮಯ್ಯರ ಮೇಲೆ ಈ ಆರೋಪ ಕೇಳಿ ಬಂದಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರು ನೀಡಿದ ಗಂಗಸಂದ್ರದ ಮಹಿಳೆ ರಾಧಾಗೆ ಪಿಎಸ್‍ಐ ಲಕ್ಷ್ಮಯ್ಯ ತುಚ್ಛವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ.

    ಗಂಗಸಂದ್ರದಲ್ಲಿ ನಡೆದಿದ್ದ ಗಲಾಟೆ ಸಂಬಂಧಿಸಿದಂತೆ ಹನುಮಂತರಾಜು-ರಾಧಾ ದಂಪತಿ ಶ್ರೀಕಾಂತ್ ಮತ್ತು ಅವರ ತಾಯಿ ಕೆಂಪಮ್ಮರ ವಿರುದ್ಧ ದೂರು ನೀಡಿದರು. ಪೊಲೀಸರು ಕೇವಲ ಕೆಂಪಮ್ಮರನ್ನು ಮಾತ್ರ ವಿಚಾರಣೆ ಮಾಡಿ ವಾಪಸ್ ಕಳುಹಿಸಿದ್ದರು. ಆದರೆ ಮೊದಲ ಆರೋಪಿ ಶ್ರೀಕಾಂತ್‍ನ ವಿಚಾರಣೆ ಮಾಡಿರಲಿಲ್ಲ.

    ಇದನ್ನು ಹನುಮಂತರಾಜು- ರಾಧಾ ದಂಪತಿ ಪಿಎಸ್‍ಐ ಲಕ್ಷ್ಮಯ್ಯರನ್ನು ಪ್ರಶ್ನಿಸಿದ್ದಾರೆ. ಆರೋಪಿ ಶ್ರೀಕಾಂತನನ್ನು ವಿಚಾರಣೆ ಮಾಡಿ ಎಂದು ಕೇಳಿಕೊಂಡಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಪಿಎಸ್‍ಐ ಲಕ್ಷ್ಮಯ್ಯ ಅವರನ್ನು ಕರೆಸಲ್ಲ ಏನಿವಾಗ… ನಮಗೆ ಹೇಗೆ ತೋಚತ್ತೋ ಹಾಗೆ ಮಾಡ್ತಿನಿ ಎಂದು ಗದರಿಸಿದ್ದಾರೆ. ಅಲ್ಲದೆ ಮಹಿಳೆ ಎನ್ನೋದನ್ನು ನೋಡದೆ ಸೂ… ಸೆ… ಎಂದು ಅಶ್ಲೀಲ ಪದ ಬಳಿಸಿ ನಿಂದಿಸಿದ್ದಾರೆ.

    ಪಿಎಸ್‍ಐ ಲಕ್ಷ್ಮಯ್ಯನ ಅವಲಕ್ಷಣದ ಮಾತಿನಿಂದ ನೊಂದ ಮಹಿಳೆ ಗೋಳೋ ಎಂದು ಕಣ್ಣಿರಿಟ್ಟಿದ್ದಾರೆ. ತನ್ನ ಮುಂದೆಯೇ ತನ್ನ ಪತ್ನಿಗೆ ಅವಾಚ್ಯ ಶಬ್ಧದಿಂದ ಪಿಎಸ್‍ಐ ನಿಂದಿಸುತಿದ್ದುದನ್ನು ಪತಿ ಹನುಮಂತರಾಜು ಅಸಾಹಯಕನಾಗಿ ನೋಡುತಿದ್ದ.

    ಈ ಘಟನೆಯಿಂದ ನೊಂದ ದಂಪತಿ ಪಿಎಸ್‍ಐ ಲಕ್ಷ್ಮಯ್ಯನ ದೌರ್ಜನ್ಯದ ವಿರುದ್ಧ ಈಗಾಗಲೇ ಎಸ್‍ಪಿ ದಿವ್ಯಾ ಗೋಪಿನಾಥ್ ಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ದೌರ್ಜನ್ಯ ಎಸಗಿದ ಪಿಎಸ್‍ಐ ವಿರುದ್ಧ ಕ್ರಮ ತೆಗೆದುಕೊಳ್ಳದೆ ಇದ್ದರೆ ಉಪವಾಸ ಸತ್ಯಾಗ್ರಹ ಕೂರೋದಾಗಿ ಹನುಮಂತರಾಜು ರಾಧಾ ದಂಪತಿ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿದ್ಯುತ್ ಕೇಬಲ್‍ಗೆ ಸಿಲುಕಿ 15 ನಿಮಿಷ ಕಂಬದಲ್ಲೇ ಒದ್ದಾಡಿದ ಯುವಕ

    ವಿದ್ಯುತ್ ಕೇಬಲ್‍ಗೆ ಸಿಲುಕಿ 15 ನಿಮಿಷ ಕಂಬದಲ್ಲೇ ಒದ್ದಾಡಿದ ಯುವಕ

    ತುಮಕೂರು: ವಿದ್ಯುತ್ ಕೇಬಲ್ ರಿಪೇರಿ ಮಾಡಲು ತೆರಳಿದ್ದ ಗುತ್ತಿಗೆ ಕಾರ್ಮಿಕ ವಿದ್ಯುತ್ ಕೇಬಲ್ ನಡುವೆ ಸಿಲುಕಿ ಒದ್ದಾಟ ನಡೆಸಿದ ಘಟನೆ ನಗರದ ಶಿರಾ ಗೇಟ್ ಬಳಿ ನಡೆದಿದೆ.

    ಸೋಯಬ್ (25) ವಿದ್ಯುತ್ ತಂತಿಗೆ ಸಿಲುಕಿ ಒದ್ದಾಡಿದ ಯುವಕ. ನಗರದಲ್ಲಿ ವಿದ್ಯುತ್ ತಂತಿ ಬದಲಾಗಿ ಕೇಬಲ್ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಸರ್ಕಾರದಿಂದ ಕಾಮಗಾರಿ ಗುತ್ತಿಗೆ ಪಡೆದಿದ್ದ ವ್ಯಕ್ತಿ ಕಾರ್ಮಿಕರೊಂದಿಗೆ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಕೇಬಲ್ ಅಳವಡಿಸಲು ಯುವಕನನ್ನು ವಿದ್ಯುತ್ ಕಂಬಕ್ಕೆ ಹತ್ತಿಸಿಲಾಗಿತ್ತು. ಈ ವೇಳೆ ಯುವಕನ ಕಾಲು ಜಾರಿ ಕೇಬಲ್ ನಡುವೆಯೇ ಸಿಕ್ಕಿಬಿದಿದ್ದ.

    ಕಂಬ ಏರಲು ತಂದಿದ್ದ ವಾಹನ ಬೇರೆ ಸ್ಥಳಕ್ಕೆ ತೆರಳಿದ ಕಾರಣ ಯುವಕ ಕೇಬಲ್ ನಡುವೆ ಸಿಕ್ಕಿ ನರಳುತ್ತಿದ್ರು ಸಹಾಯ ಮಾಡಲಾಗದೆ ಇತರೇ ಸ್ಥಳದಲ್ಲಿದ್ದ ಕಾರ್ಮಿಕರು ದಿಕ್ಕು ತೋಚದಾಗಿದ್ದರು. ಪರಿಣಾಮ ಸುಮಾರು 15 ನಿಮಿಷಗಳ ಕಾಲ ಯುವಕ ವಿದ್ಯುತ್ ಕಂಬದಲ್ಲೇ ಒದ್ದಾಟ ನಡೆಸಿದ್ದ. ಆ ಬಳಿಕ ಘಟನೆ ಸ್ಥಳಕ್ಕೆ ಜೆಸಿಪಿ ತರಿಸಿ ಆದರ ಮೂಲಕ ಯುವಕನನ್ನು ರಕ್ಷಣೆ ಮಾಡಿದರು.

    ಹೆಚ್ಚು ಸಮಯ ವಿದ್ಯುತ್ ಕಂಬದಲ್ಲೇ ಸಿಲುಕಿ ಒದ್ದಾಟ ನಡೆಸಿದ್ದ ಕಾರಣ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳಿಗೆ ಚೆನ್ನೈನಲ್ಲಿ ಚಿಕಿತ್ಸೆ

    ಸಿದ್ದಗಂಗಾ ಶ್ರೀಗಳಿಗೆ ಚೆನ್ನೈನಲ್ಲಿ ಚಿಕಿತ್ಸೆ

    ಬೆಂಗಳೂರು: ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಚೆನ್ನೈಗೆ ಕರೆದುಕೊಂಡು ಹೋಗಲು ನಿರ್ಧಾರ ಮಾಡಲಾಗಿದೆ ಎಂದು ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿ ಹೇಳಿದ್ದಾರೆ.

    ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದ ಕಿರಿಯ ಸ್ವಾಮೀಜಿ, ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಗೆ ಕಂಡಿದೆ. ಆದರೆ ಶ್ರೀಗಳು ಸಂಪೂರ್ಣವಾಗಿ ಗುಣಮುಖರಾಗಬೇಕಿದೆ. ಈಗಾಗಲೇ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ ಮತ್ತೆ ಆರೋಗ್ಯ ಸಮಸ್ಯೆ ಕಾಣಿಸಬಾರದು ಎಂಬ ಉದ್ದೇಶದಿಂದ ತಜ್ಞರೊಂದಿಗೆ ಚರ್ಚೆ ನಡೆಸಿ ಚೆನ್ನೈಗೆ ಕರೆಕೊಂಡು ಹೋಗಲು ತೀರ್ಮಾನಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಶ್ರೀಗಳನ್ನು ಇಲ್ಲಿಂದ ಚೆನ್ನೈಗೆ ಕರೆದ್ಯೊಯಲಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಾಳೆ ಬೆಳಗ್ಗೆ ನೀಡಲಾಗುವುದು. ಶ್ರೀಗಳ ಆರೋಗ್ಯ ವಿಚಾರದಲ್ಲಿ ಭಕ್ತರಿಗೆ ಯಾವುದೇ ಆತಂಕ ಬೇಡ ಎಂದರು.

    ಚೆನ್ನೈನ ಡಾ. ಮೊಹಮದ್ ರೇಲಾ ಅವರ ರೇಲಾ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೆಂಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಮೊಹಮದ್ ರೇಲಾ ಅವರು ವಿಶ್ವದ ಬೆಸ್ಟ್ ಡಾಕ್ಟರ್ ಆಗಿದ್ದಾರೆ. ಶ್ರೀಗಳಿಗೆ ಈಗಾಗಲೇ 6 ಸ್ಟಂಟ್ ಅಳವಡಿಕೆ ಮಾಡಿರುವುದರಿಂದ ಮತ್ತೆ ಸ್ಟಂಟ್ ಅಳವಡಿಸಲು ಸಾಧ್ಯವಿಲ್ಲ. ಅಲ್ಲದೇ ಪದೇ ಪದೇ ಎಂಡೋಸ್ಕೋಪಿ ಮಾಡಲು ಕೂಡ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಮತ್ತೆ ಯಾವುದೇ ರೀತಿಯ ಸೋಂಕು ತಗಲದಂತೆ ಚಿಕಿತ್ಸೆ ನೀಡಲು ಚೆನ್ನೈಗೆ ಕರೆಕೊಂಡು ಹೋಗಲು ನಿರ್ಧಾರ ಮಾಡಲಾಗಿದೆ ಎಂದು ಡಾ. ರವೀಂದ್ರ ಅವರು ಸ್ಪಷ್ಟನೆ ನೀಡಿದರು.

    https://www.youtube.com/watch?v=b6niH44BjXg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಂಗೆ ಎಷ್ಟು ವಯಸ್ಸು- 111 ಅಂದಾಗ, ಬಹಳಾಯ್ತು ಅಂದ್ರು ನಡೆದಾಡೋ ದೇವ್ರು

    ನಂಗೆ ಎಷ್ಟು ವಯಸ್ಸು- 111 ಅಂದಾಗ, ಬಹಳಾಯ್ತು ಅಂದ್ರು ನಡೆದಾಡೋ ದೇವ್ರು

    ತುಮಕೂರು: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಮಠದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಈ ವೇಳೆ ಸಿದ್ದಗಂಗಾ ಶ್ರೀ ನಂಗೆ ಎಷ್ಟು ವಯಸ್ಸಾಯ್ತು ಎಂದು ಪ್ರಶ್ನಿಸಿದ್ದಾರೆ. ಆಗ ಕಿರಿಯ ಶ್ರೀ 111 ಎಂದಾಗ ಬಹಳ ಆಯ್ತು ಎಂದು ನಡೆದಾಡುವ ದೇವರು ಹೇಳಿದ್ದಾರೆ.

    ಸಿದ್ದಗಂಗಾ ಶ್ರೀಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಡಿಸಿಎಂ ಜಿ.ಪರಮೇಶ್ವರ್ ಸಿದ್ದಗಂಗಾ ಮಠಕ್ಕೆ ಆಗಮಿಸಿದರು. ಡಿಸಿಎಂ ಶ್ರೀಗಳ ಆರೋಗ್ಯ ವಿಚಾರಿಸಿ ಸಿದ್ದಗಂಗಾ ಶ್ರೀಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಬೇಕೋ, ಬೇಡ್ವೋ ಎನ್ನುವುದನ್ನು ವೈದ್ಯರ ಸಲಹೆ ಪಡೆದು ತೀರ್ಮಾನ ಕೈಗೊಳ್ಳಲಾಗುತ್ತೆ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ.

    ಸಿದ್ದಗಂಗಾ ಮಠದಲ್ಲಿ ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಮಾತಾಡಿದರ ಅವರು, ಶ್ರೀಗಳು ನನ್ನ ಜೊತೆ ಮಾತಾಡಿದ್ರು. ಯಾವಾಗ ಬಂದ್ರಿ, ಚೆನ್ನಾಗಿದ್ದೀರಾ ಅಂತ ಕೇಳಿದ್ರು. ಕಿರಿಯ ಶ್ರೀಗಳ ಬಳಿ ತಮಗೆ ಎಷ್ಟು ವಯಸ್ಸಾಯ್ತು ಅಂತ ಪ್ರಶ್ನಿಸಿದ್ರು. ಆಗ ಕಿರಿಯ ಶ್ರೀಗಳು 111 ವರ್ಷ ಅಂದ್ರು. ಅದಕ್ಕೆ ಬಹಳ ಆಯ್ತು, ಬಹಳ ಆಯ್ತು ಅಂದ್ರು. ಶ್ರೀಗಳು ಎಂದಿನಂತೆ ಲವಲವಿಕೆಯಿಂದ ಮಾತನಾಡಿದ್ದಾರೆ ಅಂತ ಪರಮೇಶ್ವರ್ ಹೇಳಿದ್ದಾರೆ.

    ಸಿದ್ದಗಂಗ ಶ್ರೀ ಅವರನ್ನು ಬಿಜಿಎಸ್ ಆಸ್ಪತ್ರೆಯ ಡಾ. ರವೀಂದ್ರ ಅವರ ತಂಡ ಬಂದು ತಪಾಸಣೆ ನಡೆಸಿ ಚಿಕಿತ್ಸೆಯನ್ನು ನೀಡಿದೆ. ನಡೆದಾಡುವ ದೇವರು ಚೇತರಿಸಿಕೊಂಡಿದ್ದಾರೆ. ಸಿದ್ದಗಂಗಾ ಶ್ರೀಗಳು ಆರೋಗ್ಯರಾಗಿದ್ದಾರೆಂದು ಮಠದ ಕಿರಿಯ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳ ಆಪ್ತ ವೈದ್ಯ ಡಾ. ಪರಮೇಶ್ವರ್, ಹೃದಯ ಬಡಿತದಲ್ಲಿ ಸ್ವಲ್ಪ ಏರುಪೇರು ಕಂಡುಬಂದಿದ್ದು, ಜ್ವರದಿಂದ ಬಳಲುತ್ತಿದ್ದರು. ಬಳಿಕ ಬಿಜಿಎಸ್ ಆಸ್ಪತ್ರೆಯ ಡಾ.ರವೀಂದ್ರ ಅವರ ತಂಡ ಬಂದು ತಪಾಸಣೆ ನಡೆಸಿ ಏನು ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ. ಇಂಜೆಕ್ಷನ್ ನೀಡಿದ ಬಳಿ ಸ್ವಾಮೀಜಿ ಕೂಡ ಆರಾಮಗಿದ್ದಾರೆ. ಪೂಜೆಯನ್ನು ಕೂಡ ಮಾಡಿದ್ದಾರೆ ಎಂದು ಹೇಳಿದ್ದಾರೆ.

    2018 ಜನವರಿಯಲ್ಲಿ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು. ಅಂದು ಅಳವಡಿಸಿದ್ದ ಸ್ಟಂಟ್ ಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಡಿಸೆಂಬರ್ 1ರಂದು ಬಿಜಿಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಗೆ ಆಗಮಿಸಿದ್ದ ಶ್ರೀಗಳು ವ್ಹೀಲ್ ಚೇರ್ ನಲ್ಲಿ ಕುಳಿತುಕೊಳ್ಳಲು ಒಪ್ಪದೇ ನಡೆದುಕೊಂಡು ಹೋಗುವ ಮೂಲಕ ಎಲ್ಲರನ್ನು ಅಚ್ಚರಿಸಿಗೊಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಡಗೀತೆ ವೇಳೆ ಮೊಬೈಲ್ ವೀಕ್ಷಣೆಯಲ್ಲಿ ಸಚಿವರು ಫುಲ್ ಬ್ಯುಸಿ

    ನಾಡಗೀತೆ ವೇಳೆ ಮೊಬೈಲ್ ವೀಕ್ಷಣೆಯಲ್ಲಿ ಸಚಿವರು ಫುಲ್ ಬ್ಯುಸಿ

    ತುಮಕೂರು: ಗ್ರಾಮೀಣಾಭಿವೃದ್ಧಿ ಸಚಿವರು ನಾಡಗೀತೆಗೆ ಅಗೌರವ ತೋರಿದ ಘಟನೆ ತುಮಕೂರಿನ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆದಿದೆ.

    ಸಭೆಯ ಆರಂಭದ ಮುನ್ನ ಸಂಪ್ರದಾಯದಂತೆ ನಾಡಗೀತೆ ಹಾಡಲಾಯಿತು. ಆದರೆ ಈ ವೇಳೆ ಗ್ರಾಮೀಣಾಭಿವೃದ್ಧಿ ಸಚಿವರಾದ ಕೃಷ್ಣಬೈರೇಗೌಡರು ಮೊಬೈಲ್ ನೋಡುವುದರಲ್ಲಿ ತಲ್ಲೀನರಾಗಿದ್ದರು. ನಾಡಗೀತೆ ಆರಂಭದಿಂದ ಕೊನೆಯವರೆಗೂ ಮೊಬೈಲ್ ವೀಕ್ಷಣೆಯಲ್ಲಿ ಸಚಿವರು ಬ್ಯುಸಿಯಾಗಿದ್ದರು.

    ಸಚಿವರ ಈ ವರ್ತನೆ ಕೆಲವರ ಆಕ್ರೋಶಕ್ಕೆ ಕಾರಣವಾಗಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ನಾಡಗೀತೆಗೆ ಗೌರವ ನೀಡದೆ ಇದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಣೇಶ ಉತ್ಸವ ನೋಡಲು ಹೋದ ಯುವತಿ ಪಟಾಕಿಗೆ ಬಲಿ

    ಗಣೇಶ ಉತ್ಸವ ನೋಡಲು ಹೋದ ಯುವತಿ ಪಟಾಕಿಗೆ ಬಲಿ

    ತುಮಕೂರು: ಗಣೇಶ ಉತ್ಸವ ನೋಡಲು ಹೋದ ಯುವತಿ ಪಟಾಕಿಗೆ ಮೃತಪಟ್ಟ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರದಲ್ಲಿ ನಡೆದಿದೆ.

    ಸಿತಾರ(21) ಪಟಾಕಿಗೆ ಬಲಿಯಾದ ಯುವತಿ. ಸಿತಾರ ತುರುವೇಕೆರೆ ತಾಲೂಕಿನ ಅಮ್ಮ ಸಂದ್ರದ ಹಡವನಹಳ್ಳಿ ಗ್ರಾಮದವಳಾಗಿದ್ದು, ಜಿಲ್ಲೆಯ ತಿಪಟೂರು ನಗರದಲ್ಲಿ ಈ ದುರಂತ ಸಂಭವಿಸಿದೆ. ಪ್ರತಿ ವರ್ಷ ತಿಪಟೂರು ಗಣೇಶ ಉತ್ಸವ ನಡೆಯುತ್ತದೆ.

    ಭಾನುವಾರ ರಾತ್ರಿ ಗಣೇಶ ಉತ್ಸವ ನೋಡಲು ಸಿತಾರ ಹೋಗಿದ್ದಾಗ ಅಲ್ಲಿ ಪಟಾಕಿ ಹೊಡೆಯುತ್ತಿದ್ದರು. ಪಟಾಕಿ ಹೊಡೆಯುವ ವೇಳೆ ಸಿತಾರ ತಲೆ ಮೇಲೆ ಸರಪಟಾಕಿ ಬಿದ್ದಿದೆ. ಹೆಚ್ಚಿನ ಚಿಕಿತ್ಸೆ ಬೆಂಗಳೂರಿಗೆ ತೆರಳುವಾಗ ಸಿತಾರ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಸ್ಲಾಂಗೆ ಮತಾಂತರಿಸಿ, ಖುರಾನ್ ಪಠಣ ಮಾಡ್ಸಿ ಡಿವೋರ್ಸ್ ಕೊಟ್ಟ ಭೂಪ..!

    ಇಸ್ಲಾಂಗೆ ಮತಾಂತರಿಸಿ, ಖುರಾನ್ ಪಠಣ ಮಾಡ್ಸಿ ಡಿವೋರ್ಸ್ ಕೊಟ್ಟ ಭೂಪ..!

    ತುಮಕೂರು: ಬಡ ಹಿಂದೂ ಯುವತಿಯನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ, ಖುರಾನ್ ಪಠಣ ಮಾಡಿಸಿದ್ದಾನೆ. ಅಲ್ಲದೇ ಮದುವೆಯಾಗಿ ಎರಡು ವರ್ಷ ಕಳೆದ ಬಳಿಕ ನೀನು ನನಗೆ ಬೇಡ ಎಂದು ಪತಿರಾಯನೊಬ್ಬ ಡಿವೋರ್ಸ್ ನೋಟಿಸ್ ಕೊಟ್ಟ ಪ್ರಕರಣವೊಂದು ತುಮಕೂರಿನಲ್ಲಿ ನಡೆದಿದೆ.

    ಚಿಕ್ಕಪೇಟೆ ನಿವಾಸಿ ರಮ್ಯಾ(ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಯನ್ನು ಕ್ಯಾತಸಂದ್ರ ನಿವಾಸಿ ಮೊಹಮ್ಮದ್ ಅತಿಕ್ ಮತಾಂತರ ಮಾಡಿಸಿ ಮದುವೆಯಾಗಿ ಈಗ ಕೈ ಕೊಟ್ಟಿದ್ದಾನೆ. ತುಮಕೂರು ನಗರದಲ್ಲಿದ್ದ ಮೊಹಮ್ಮದ್ ಅತಿಕ್ ನ ಬಳೆ ಅಂಗಡಿಯಲ್ಲಿ ರಮ್ಯಾ ಕೆಲಸ ಮಾಡುತ್ತಿದ್ದಳು.

    ರಮ್ಯಾ ಬಡತನವನ್ನೇ ಬಂಡವಾಳ ಮಾಡಿಕೊಂಡ ಅತಿಕ್ ಇಸ್ಲಾಂ ಧರ್ಮಕ್ಕೆ ಬಂದರೆ ನಿನಗೆ ಒಳ್ಳೆದಾಗತ್ತೆ. ನಾನು ನಿನ್ನನ್ನು ಮದುವೆಯಾಗಿ ನಿನ್ನ ತಂದೆ-ತಾಯಿಯನ್ನು ಸಾಕ್ತೀನಿ ಎಂದು ಪುಸಲಾಯಿಸಿದ್ದಾನೆ. ರಮ್ಯಾಳ ತಂದೆ-ತಾಯಿಗೂ ಗೊತ್ತಿಲ್ಲದೆ ಆಂಧ್ರದ ಮದರಸಾದಲ್ಲಿ ಎರಡು ವರ್ಷಗಳ ಕಾಲ ಖುರಾನ್ ಪಠಣ ಮಾಡಿಸಿದ್ದಾನೆ.

    ಅತಿಕ್, ರಮ್ಯಾ ಹೆಸರನ್ನು ಸುಮಯಾ ಫರ್ವಿನ್ ಎಂದು ಬದಲಾಯಿಸಿದ್ದಾನೆ. ಬಳಿಕ 2016 ರಲ್ಲಿ ಈಕೆಯನ್ನು ಮದುವೆಯಾಗಿದ್ದಾನೆ. ನಂತರ ಖುರಾನ್ ಅಭ್ಯಾಸಕ್ಕಾಗಿ ಆಂಧ್ರಕ್ಕೆ ಕಳುಹಿಸಿದ್ದಾನೆ. ಈ ನಡುವೆ ಎರಡನೇ ಮದುವೆಯಾದ ಅತಿಕ್ ಈಗ ರಮ್ಯಾಳಿಗೆ ಕೈ ಕೊಟ್ಟಿದ್ದಾನೆ.

    ನೀನು ನನಗೆ ಬೇಡ ಎಂದು ರಮ್ಯಾಳಿಗೆ ಅತಿಕ್ ಡಿವೋರ್ಸ್ ನೋಟಿಸ್ ತಲುಪಿಸಿದ್ದಾನೆ. ಅತ್ತ ತವರು ಮನೆಯಲ್ಲಿ ಯಾರೂ ಸೇರಿಸಿಕೊಳ್ಳದೆ, ಇತ್ತ ಮದುವೆಯಾದ ಗಂಡನಿಂದಲೂ ತಿರಸ್ಕಾರಕೊಳಗಾದ ರಮ್ಯಾ ಈಗ ಬೀದಿಗೆ ಬಂದಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮನೆಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಾಯ- ಹೆತ್ತ ತಂದೆ ತಾಯಿಯನ್ನೇ ಹೊರ ಹಾಕಿದ ಪಾಪಿ ಮಗ

    ಮನೆಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಾಯ- ಹೆತ್ತ ತಂದೆ ತಾಯಿಯನ್ನೇ ಹೊರ ಹಾಕಿದ ಪಾಪಿ ಮಗ

    ತುಮಕೂರು: ಹೆತ್ತ ತಂದೆ ತಾಯಿಯನ್ನೇ ಪಾಪಿ ಮಗನೊಬ್ಬ ಮನೆಯಿಂದ ಹೊರಹಾಕಿರುವ ಘಟನೆಯೊಂದು ತುಮಕೂರಿನಲ್ಲಿ ನಡೆದಿದೆ.

    ತುಮಕೂರು ತಾಲೂಕಿನ ಲಕ್ಕೇನಹಳ್ಳಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾದ ನರಸಿಂಹಮೂರ್ತಿ ತನ್ನ ವೃದ್ಧ ತಂದೆ ವೆಂಕಟಪ್ಪ ಹಾಗೂ ತಾಯಿ ಗಂಗಮ್ಮನನ್ನ ದಿನನಿತ್ಯ ಹಿಂಸಿಸಿ ಮನೆಯಿಂದ ಹೊರದಬ್ಬಿದ್ದಾನೆ. ಬೀದಿಗೆ ಬಂದ ಹೆತ್ತವರು ಸೂರಿಲ್ಲದೇ ರಸ್ತೆಯಲ್ಲೇ ಕಾಲ ಕಳೆಯುವಂತಾಗಿದೆ.

    ಅಷ್ಟಕ್ಕೂ ಪಾಪಿ ಪುತ್ರ ನರಸಿಂಹಮೂರ್ತಿ ವಾಸವಿರುವ ಮನೆ ಸಹೋದರ ಮೂಡಲಗಿರಿಯಪ್ಪ ಕಟ್ಟಿಸಿದ್ದು, ಮೂಡಲಗಿರಿಯಪ್ಪ ಉದ್ಯೋಗದ ನಿಮಿತ್ತ ಬೆಂಗಳೂರಲ್ಲಿ ವಾಸ ಇದ್ದು ತಾನು ಕಟ್ಟಿಸಿದ ಮನೆಯಲ್ಲಿ ತಂದೆ ತಾಯಿಯನ್ನ ಇರಿಸಿದ್ದ. ಈ ನಡುವೆ ಬೇರೆ ಊರಲ್ಲಿ ವಾಸವಿದ್ದ ನರಸಿಂಹ ಮೂರ್ತಿ ತನ್ನ ತಂದೆ ತಾಯಿಯನ್ನು ನೋಡಿಕೊಳ್ಳುವ ನೆಪದಲ್ಲಿ ಮನೆಗೆ ಬಂದಿದ್ದಾನೆ.

    ಇದೀಗ ಆ ಮನೆಯನ್ನೇ ತನ್ನ ಹೆಸರಿಗೆ ಬರೆದುಕೊಂಡುವಂತೆ ತಂದೆ ತಾಯಿಗೆ ಇನ್ನಿಲ್ಲದ ಹಿಂಸೆ ನೀಡಿ ಅವರು ಒಪ್ಪದಿದ್ದಾಗ ಹೆಂಡತಿ ಜೊತೆ ಸೇರಿ ಮನೆಯಿಂದ ಹೊರಹಾಕಿದ್ದಾನೆ. ಈವರೆಗೂ ಪ್ರತಿನಿತ್ಯ ಮಗ ಹಾಗೂ ಸೊಸೆ ಲತಾ ವೃದ್ಧರಿಗೆ ದೊಣ್ಣೆಯಲ್ಲಿ ಹೊಡೆಯುತ್ತಿದ್ದರು ಅಂತಾ ವೃದ್ಧ ದಂಪತಿ ಕಣ್ಣೀರಿಡುತ್ತಿದ್ದಾರೆ.

    ಈ ಬಗ್ಗೆ ಹೆಬ್ಬೂರು ಪೊಲೀಸರಿಗೆ ದೂರು ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮ ಜರಿಗಿಸಲ್ಲ ಅಂತಾ ವೃದ್ಧ ದಂಪತಿ ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂಗ್ಲಿಷ್ ಪದ್ಯ ಹೇಳಿಲ್ಲವೆಂದು 1ನೇ ತರಗತಿ ವಿದ್ಯಾರ್ಥಿಯ ಮೇಲೆ ಹಲ್ಲೆ

    ಇಂಗ್ಲಿಷ್ ಪದ್ಯ ಹೇಳಿಲ್ಲವೆಂದು 1ನೇ ತರಗತಿ ವಿದ್ಯಾರ್ಥಿಯ ಮೇಲೆ ಹಲ್ಲೆ

                                                                  ಸಾಂದರ್ಭಿಕ ಚಿತ್ರ

    ತುಮಕೂರು: ಇಂಗ್ಲಿಷ್ ಪದ್ಯ ಹೇಳದ ವಿದ್ಯಾರ್ಥಿಗೆ ಶಿಕ್ಷಕಿಯೋರ್ವಳು ಬೆತ್ತದಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.

    ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಬ್ಯಾಲ್ಯದ ಸರ್ಕಾರಿ ಶಾಲೆಯ ಶಿಕ್ಷಕಿ ಸೌಮ್ಯ ಈ ರಾಕ್ಷಸಿ ಪ್ರವೃತ್ತಿ ತೋರಿದ್ದಾಳೆ. ಒಂದನೇ ತರಗತಿ ವಿದ್ಯಾರ್ಥಿ ಇಂಗ್ಲಿಷ್ ಪದ್ಯ ಹೇಳಲು ಹಾಗೂ ಇಂಗ್ಲಿಷ್ ಅಕ್ಷರ ಬರೆಯಲು ತಡವರಿಸಿದ್ದಾನೆ.

    ಇದರಿಂದ ಕೋಪಗೊಂಡ ಶಿಕ್ಷಕಿ ಬಾಲಕಿಗೆ ಮನಸ್ಸೋ ಇಚ್ಛೆ ಥಳಿಸಿದ್ದಾಳೆ. ಪರಿಣಾಮ ಬಾಲಕನ ಮೈಯಲ್ಲಿ ವಿಪರೀತ ಬಾಸುಂಡೆ ಎದ್ದಿದೆ. ಶಾಲೆಯಿಂದ ಮನೆಗೆ ವಾಪಸ್ ಬಂದ ನಂತರ ಬಾಲಕ ಪೋಷಕರಿಗೆ ವಿಷಯ ತಿಳಿಸಿದ್ದಾನೆ. ಆಗ ಶಿಕ್ಷಕಿ ಸೌಮ್ಯಾಳ ಕೃತ್ಯವನ್ನು ಪೋಷಕರು ಖಂಡಿಸಿದ್ದಾರೆ.

    ಸದ್ಯ ಗಾಯಗೊಂಡ ಬಾಲಕನಿಗೆ ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews