Tag: tumkuru

  • ತುಮಕೂರಿನ ಬೈಪಾಸ್ ರಸ್ತೆಯಲ್ಲಿ ಕಂಡರಂತೆ ಉಗ್ರರು-ಫೇಕ್ ವಿಡಿಯೋ ನೋಡಿ ಬೆಚ್ಚಿಬಿದ್ದ ಜನತೆ

    ತುಮಕೂರಿನ ಬೈಪಾಸ್ ರಸ್ತೆಯಲ್ಲಿ ಕಂಡರಂತೆ ಉಗ್ರರು-ಫೇಕ್ ವಿಡಿಯೋ ನೋಡಿ ಬೆಚ್ಚಿಬಿದ್ದ ಜನತೆ

    ತುಮಕೂರು: ಜಿಲ್ಲೆಯ ಬೈಪಾಸ್ ರಸ್ತೆಯಲ್ಲಿ ಉಗ್ರರು ಕಾಣಿಸಿಕೊಂಡಿದ್ದಾರೆ. ಇಂಡಿಯನ್ ಆರ್ಮಿ ತಂಡ ನಾಲ್ವರ ಮೇಲೆ ದಾಳಿ ನಡೆಸಿದೆ. ಓರ್ವ ಉಗ್ರ ಹತನಾಗಿದ್ದು, ಇನ್ನುಳಿದ ಮೂವರನ್ನು ಬಂಧಿಸಲಾಗಿದೆ ಎಂಬ ಸುಳ್ಳು ಸುದ್ದಿಯೊಂದು ತುಮಕೂರು ಜನತೆಯನ್ನು ಬೆಚ್ಚಿಬೀಳಿಸಿದೆ.

    ಸೈನಿಕರು ಕಾರ್ಯಾಚರಣೆ ಮಾಡುವ ಮಾದರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಿಂದ ಸಾರ್ವಜನಿಕರು ಇನ್ನಷ್ಟು ಆತಂಕಗೊಂಡಿದ್ದಾರೆ. ಆದರೆ ಅಸಲಿಗೆ ಇದು ತಿರುಪತಿ ಪೊಲೀಸರು ಉಗ್ರರ ದಾಳಿಯಾದರೆ ಯಾವ ರೀತಿಯ ಕಾರ್ಯಾಚರಣೆ ಮಾಡಬೇಕು ಎಂಬ ಕುರಿತಂತೆ ಮಾಡಿದ ಅಣಕು ಪ್ರದರ್ಶನ.

    ಕೆಲ ಕಿಡಿಗೇಡಿಗಳು ಈ ವಿಡಿಯೋಗೆ ಸುಳ್ಳು ಕಥೆ ಕಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಆತಂಕಗೊಳಿಸಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ ತುಮಕೂರು ಎಸ್ಪಿ ವಂಶಿ ಕೃಷ್ಣ, ಇದೊಂದು ಸುಳ್ಳು ಸುದ್ದಿಯಾಗಿದ್ದು, ಯಾರು ಆತಂಕ ಪಡಬಾರದು. ಈ ರೀತಿ ಸುಳ್ಳು ಸುದ್ದಿ ಹರಿಡಿದವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀ ಚಿಕಿತ್ಸೆ ಪಡೆಯುತ್ತಿದ್ದ ಕೊಠಡಿ ಈಗ ಪ್ರಾರ್ಥನಾ ಮಂದಿರ

    ಸಿದ್ದಗಂಗಾ ಶ್ರೀ ಚಿಕಿತ್ಸೆ ಪಡೆಯುತ್ತಿದ್ದ ಕೊಠಡಿ ಈಗ ಪ್ರಾರ್ಥನಾ ಮಂದಿರ

    ತುಮಕೂರು: ಶಿವಕುಮಾರ ಸ್ವಾಮೀಜಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಸಿದ್ದಗಂಗಾ ಆಸ್ಪತ್ರೆಯ ವಿಶೇಷ ಕೊಠಡಿ ಇದೀಗ ಪ್ರಾರ್ಥನಾ ಮಂದಿರವಾಗಿ ಪರಿವರ್ತನೆಯಾಗಿದೆ.

    ಪ್ರಾರ್ಥನಾ ಮಂದಿರದ ಕೊಠಡಿಯಲ್ಲಿ ಶ್ರೀಗಳ ಭಾವಚಿತ್ರ ಇಟ್ಟು ದಿನ ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ಅಲ್ಲದೇ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡುವ ಮುನ್ನ ವೈದ್ಯರು, ರೋಗಿಗಳು ಸಂಬಂಧಿಕರು ಯಶಸ್ವಿ ಶಸ್ತ್ರಚಿಕಿತ್ಸೆಗಾಗಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಶ್ರೀಗಳು ಇದ್ದ ಕೊಠಡಿ ಪುಣ್ಯಸ್ಥಳವಾಗಿ ಮಾರ್ಪಟ್ಟಿದೆ.

    ಶ್ರೀಗಳಿಗೆ ಮ್ಯೂಸಿಕ್ ಪ್ಲೇಯರ್ ಮೂಲಕ ಕೇಳಿಸುತ್ತಿದ್ದ ಶಿವಸ್ತುತಿಯೂ ಸಹ ಹಾಗೆಯೇ ಮುಂದುವರಿದಿದೆ. ಕೋಟ್ಯಂತರ ರೂ. ವೆಚ್ಚ ಮಾಡಿ ನಿರ್ಮಾಣ ಮಾಡಿದ್ದ ಕೊಠಡಿ ಇದೀಗ ಬೇರೆ ಯಾವುದೇ ರೋಗಿಗಳಿಗೆ ನೀಡದೇ ಪ್ರಾರ್ಥನ ಮಂದಿರವಾಗಿ ಪರಿವರ್ತನೆ ಮಾಡಲಾಗಿದೆ.

    ಈ ಬಗ್ಗೆ ಸಿದ್ದಗಂಗಾ ಆಸ್ಪತ್ರೆ ಎಂಡಿ ಡಾ. ಪರಮೇಶ್ ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, “ಸ್ವಾಮೀಜಿ ಅವರ ಆರೋಗ್ಯದಲ್ಲಿ ಏರುಪೇರು ಕಂಡಾಗ ಅವರನ್ನು ಚೆನ್ನೈನ ರೇಲಾ ಅವರ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದ್ದೇವು. ಬಳಿಕ ಅವರನ್ನು ವಾಪಸ್ ಕರೆದುಕೊಂಡು ಬರುವಾಗ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು ಎಂದು ಎಲ್ಲಾ ತಯಾರಿ ಮಾಡಿಕೊಂಡಿದ್ದೇವು. ಆದರೆ ಸ್ವಾಮೀಜಿ ಅವರು ಮಠದಲ್ಲಿಯೇ ಚಿಕಿತ್ಸೆ ನೀಡಿ ಎಂದರು. ಆಗ ನಾವು ಅವರ ಇಚ್ಛೆಯಂತೆ ಮಠದಲ್ಲೇ 15 ದಿನ ಚಿಕಿತ್ಸೆ ನೀಡಿದ್ದೇವೆ” ಎಂದರು.

    ಮತ್ತೆ ಸ್ವಾಮೀಜಿ ಅವರ ಆರೋಗ್ಯದಲ್ಲಿ ಏರುಪೇರಾದಾಗ ಅವರ ಅನುಮತಿ ಪಡೆದುಕೊಂಡು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವು. ಸ್ವಾಮೀಜಿಗಾಗಿ ಆಸ್ಪತ್ರೆಯ ಕೊಠಡಿಯಲ್ಲೇ ದೇವರ ಮನೆ ಮಾಡಿದ್ದೇವು. ಬಳಿಕ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿದ್ದೇವು. ಅವರ ನೆನಪಿಗಾಗಿ ನಾವು ಈ ಕೋಣೆಯನ್ನು ಪ್ರಾರ್ಥನಾ ಮಂದಿರವಾಗಿ ಪರಿವರ್ತನೆ ಮಾಡಲಾಗಿದೆ. ಈ ಕೊಠಡಿಯಲ್ಲಿ ಯಾವ ರೋಗಿಗೂ ಚಿಕಿತ್ಸೆ ನೀಡುವುದಿಲ್ಲ. ಈಗ ಈ ಕೊಠಡಿ ಹೇಗೆ ಇದೆಯೋ ಹಾಗೇ ಇರಲಿದೆ. ದಿನನಿತ್ಯ ಸ್ವಾಮೀಜಿ ಅವರಿಗೆ ಇಲ್ಲಿ ಪೂಜೆ ನಡೆಯಲಿದೆ. ರೋಗಿಗಳ ಸಂಬಂಧಿಕರು ಬಂದು ಇಲ್ಲಿ ಪ್ರಾರ್ಥನೆ ಮಾಡಿಕೊಳ್ಳಬಹುದು ಎಂದು ಪರಮೇಶ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಡೆದಾಡುವ ದೇವರ ವಿಚಾರದಲ್ಲಿ ಸುಳ್ಳು ಹೇಳಿದ್ರಾ ಮೋದಿ..?

    ನಡೆದಾಡುವ ದೇವರ ವಿಚಾರದಲ್ಲಿ ಸುಳ್ಳು ಹೇಳಿದ್ರಾ ಮೋದಿ..?

    ಬೆಂಗಳೂರು: ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಅಂತಿಮ ದರ್ಶನಕ್ಕೆ ಬಾರದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಭಾರೀ ಆಕ್ಷೇಪ ವ್ಯಕ್ತವಾಗಿದ್ದು, ಇದೀಗ ಪ್ರಧಾನಿಯವರು ಸುಳ್ಳು ಹೇಳಿದ್ರಾ ಎಂಬ ಅನುಮಾನವೊಂದು ಮೂಡಿದೆ.

    ಹೌದು. ಸ್ವಾಮೀಜಿಗಳ ಅಂತಿಮ ದರ್ಶನಕ್ಕೆ ಬರಲು ಭದ್ರತೆ ಇಲ್ಲ. ಹೀಗಾಗಿ ಪ್ರಧಾನಿಗಳು ದೇವರ ಅಂತಿಮ ದರ್ಶನಕ್ಕೆ ಬರುತ್ತಿಲ್ಲ ಎಂದು ಹೇಳಲಾಗಿತ್ತು. ಆದ್ರೆ `ನಡೆದಾಡುವ ದೇವರ’ ಕೈಲಾಸ ಯಾತ್ರೆ ವೇಳೆ ಕಂಡುಕೇಳರಿಯದ ಭದ್ರತೆ ಒದಗಿಸಲಾಗಿತ್ತು. ತಾವು ನೀಡಿದ್ದ ಭದ್ರತೆಗೆ ‘ಆಪರೇಷನ್ ಆರೆಂಜ್ ಬುಕ್’ ಎಂದು ಪೊಲೀಸರು ಹೆಸರಿಟ್ಟಿದ್ದರು. ಇದರ ಪ್ರಕಾರ ವಿವಿಐಪಿ, ವಿಐಪಿಗಳಿಗೆಲ್ಲಾ ಭದ್ರತೆ ಪಕ್ಕಾ ಆಗಿತ್ತು. ಯಾರೆಲ್ಲಾ ವಿವಿಐಪಿಗಳು ಬರ್ತಾರೆ, ಅವರಿಗೆ ಭದ್ರತೆ ಹೇಗೆ, ಟ್ರಾಫಿಕ್ ಕಂಟ್ರೋಲ್ ಬಗ್ಗೆ ಸ್ಪಷ್ಟ ಸೂತ್ರವನ್ನು 1 ತಿಂಗಳ ಮುಂಚಿತವಾಗಿ ಪ್ಲಾನ್ ಮಾಡಲಾಗಿತ್ತು.

    ವಿಐಪಿಗಳು ಬಂದು ದರ್ಶನ ಪಡೆದು ಹೋಗುವವರೆಗೆ ಮಾಡಬೇಕಿದ್ದ ಭದ್ರತಾ ವ್ಯವಸ್ಥೆ ಅಂತಿಮವಾಗಿತ್ತು. ಪ್ರಧಾನಿ ಮೋದಿ ಸೇರಿದಂತೆ ಯಾರೇ ದೊಡ್ಡ ವ್ಯಕ್ತಿಗಳು ಬಂದಿದ್ದರೂ ಒಂದಷ್ಟು ಲೋಪಕ್ಕೂ ಅವಕಾಶ ಇರಲಿಲ್ಲ. ಭದ್ರತೆಯ ಬಗ್ಗೆ ಖಾಕಿಗಳು ಮಾಡಿಕೊಂಡಿದ್ದ ಸಿದ್ಧತೆ, ವ್ಯವಸ್ಥೆ ಎಲ್ಲರ ಪ್ರಶಂಸೆಗೂ ಪಾತ್ರವಾಗಿತ್ತು. ಆದ್ರೆ ಇದೀಗ ಭೇಷ್ ಅನ್ನಿಸಿಕೊಂಡಿದ್ದ ಭದ್ರತಾ ವ್ಯವಸ್ಥೆಯ ಬಗ್ಗೆಯೇ ಶಂಕಿಸಿ ಪ್ರಧಾನಿ ದೇವರ ದರ್ಶನದಿಂದ ದೂರ ಉಳಿದಿದ್ದು, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.  ಇದನ್ನೂ ಓದಿ: ಪ್ರತಿಷ್ಠಿತ ವ್ಯಕ್ತಿಗಳ ಮದ್ವೆಗೆ ಹೋಗ್ತಾರೆ, ಶ್ರೀಗಳ ನೋಡಲು ಮೋದಿಗೆ ಬರಲು ಸಮಯವಿಲ್ಲ- ಪರಮೇಶ್ವರ್

    ಶ್ರೀಗಳು ಕಾವಿ ಧರಿಸುತ್ತಿದ್ದರಿಂದ ಪೊಲೀಸರು ಆಪರೇಷನ್ ಆರೆಂಜ್ ಅಂತ ಯಾಕೆ ಹೆಸರಿಟ್ಟಿದ್ದಾರೆ. ಶ್ರೀಗಳೀಗೆ ಸಾವಿರಾರು ಭಕ್ತರಿದ್ದುದರಿಂದ ಭದ್ರೆತಯ ನಿಟ್ಟಿನಲ್ಲಿ 1 ತಿಂಗಳ ಮುಂಚಿತವಾಗಿಯೇ ಪೊಲೀಸರು ಈ ಪ್ಲಾನ್ ಮಾಡಿದ್ದರು ಎನ್ನಲಾಗಿದೆ.

    ಪ್ರಧಾನಿ, ರಾಷ್ಟ್ರಪತಿಗಳಿಲ್ಲದೇ ಈ ದೇಶದ 10-20 ಪ್ರಧಾನಿಗಳು ಕಾರ್ಯಕ್ರಮಕ್ಕೆ ಬರಬಹುದೆಂದು ಮೊದಲೇ ಭದ್ರತೆಗೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದರು. ಆದ್ರೆ ಮೋದಿ ಬರದೇ ಸೆಕ್ಯೂರಿಟಿ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಹೇಳಿರುವುದು ಸುಳ್ಳು ಎಂಬ ಮಾತುಗಳು ಪೊಲೀಸ್ ವಲಯದಲ್ಲಿ ಕೇಳಿಬರುತ್ತಿವೆ. ಪ್ರಧಾನಿಗಳ ಜೊತೆಗೆ ಬೇರೆ ದೇಶದ ಪ್ರಧಾನಿಗಳು ಬಂದಿದ್ದರೂ ಕೂಡ ನಾವು ಯಾವುದೇ ಲೋಪಗಳಿಲ್ಲದೇ ಅಚ್ಚುಕಟ್ಟಾಗಿ ಭದ್ರತೆ ಒದಗಿಸುತ್ತಿದ್ದೆವು. ಹೀಗಾಗಿ ಪ್ರಧಾನಿಯವರು ಪೊಲೀಸರ ಮೇಲೆ ಬೆರಳು ತೋರಿಸಿರುವುದು ಎಷ್ಟು ಸರಿ ಅನ್ನೋದು ಪೊಲೀಸರ ಪ್ರಶ್ನೆಯಾಗಿದೆ.

    ಎರಡು ದಿನದಲ್ಲಿ ದೇವರ ದರ್ಶನಕ್ಕೆ ಸರಿಸುಮಾರು 8 ರಿಂದ 10 ಲಕ್ಷ ಜನ ಬಂದಿದ್ದರು. ಎಲ್ಲರಿಗೂ ಎಲ್ಲೂ ಅಡಚಣೆಯಾಗದಂತೆ ಕೆಲಸ ನಿರ್ವಹಿಸಿದ್ದೇವೆ ಅಂತ ಪೊಲೀಸರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ್ರೆ ಶ್ರೀಗಳ ಅಂತಿಮ ದರ್ಶನಕ್ಕೆ ಬರಬೇಕು ಎಂದು ಪ್ರಧಾನಿಗಳು ನುಣುಚಿಕೊಂಡ್ರಾ ಅನ್ನೋ ಪ್ರಶ್ನೆ ಕಾಡುತ್ತಿದೆ. ಯಾಕಂದ್ರೆ ಅಂದೇ ಪ್ರಧಾನಿಗಳು ವಾರಣಾಸಿಯಲ್ಲಿ ಪ್ರವಾಸಿ ಭಾರತ್ ದಿವಸ್ ಕಾರ್ಯಕ್ರಮವಿತ್ತು. ಅಲ್ಲಿಗೆ ಪ್ರಧಾನಿ ಭೇಟಿ ನೀಡಿದ್ದರು. ಈ ವಿಚಾರ ಸಂಬಂಧ ಪ್ರಧಾನಿಗಳು ಸಾಕಷ್ಟು ಟೀಕೆಗೂ ಗುರಿಯಾಗಿದ್ದರು.

    https://www.youtube.com/watch?v=tap2rc83m7s

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಣೆಯಾಗಿದೆ ಸದಾ ಶ್ರೀಗಳ ಜೊತೆ ಓಡಾಡುತ್ತಿದ್ದ ನಾಯಿ!

    ಕಾಣೆಯಾಗಿದೆ ಸದಾ ಶ್ರೀಗಳ ಜೊತೆ ಓಡಾಡುತ್ತಿದ್ದ ನಾಯಿ!

    ತುಮಕೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರನ್ನು ಮನುಷ್ಯ ಕುಲ ಮಾತ್ರವಲ್ಲದೇ ಮೂಕ ಪ್ರಾಣಿಗಳು ಕೂಡ ಹಚ್ಚಿಕೊಂಡಿತ್ತು. ಭೈರ ಹೆಸರಿನ ಶ್ವಾನ ಮಠದಲ್ಲಿ ಸದಾ ಶ್ರೀಗಳೊಂದಿಗೆ ಓಡಾಡುತ್ತಿತ್ತು. ಸಿದ್ದಗಂಗಾ ಸ್ವಾಮೀಜಿಗಳು ಲಿಂಗೈಕ್ಯರಾದ ಬಳಿಕ ಭೈರ ಕಾಣೆಯಾಗಿದ್ದಾನೆ.

    ಇತ್ತೀಚಿಗೆ ಸ್ವಾಮೀಜಿ ಆಸ್ಪತ್ರೆಗೆ ದಾಖಲಾದಾಗ ಭೈರ ಶ್ರೀಗಳನ್ನು ಕಾಣದೇ ಅಳುತ್ತಾ ಊಳಿಡಲಾರಂಭಿಸಿತ್ತು. ಶ್ರೀಗಳು ಆಸ್ಪತ್ರೆಯಲ್ಲಿದ್ದಾಗಲೂ ಭೈರನ ಬಗ್ಗೆ ಕಿರಿಯ ಶ್ರೀಗಳಲ್ಲಿ ವಿಚಾರಿಸುತ್ತಿದ್ದರು. ಆಸ್ಪತ್ರೆಯಿಂದ ಮತ್ತೆ ಮಠಕ್ಕೆ ಬಂದಾಗ ಅವರನ್ನು ಕಾಣದೇ ಭೈರ ಶ್ರೀಗಳ ದೇಹಾಂತ್ಯಕ್ಕೂ ಮೂರು ದಿನಗಳ ಮುನ್ನವೇ ನೀರು ಆಹಾರ ತ್ಯಜಿಸಿತ್ತು ಎನ್ನುವ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: ನಿಮಗೆ ದೇವರ ದರ್ಶನ ಆಗಿದ್ಯಾ – ಶ್ರೀಗಳು ನೀಡಿದ ಉತ್ತರಕ್ಕೆ ಅಚ್ಚರಿಗೊಂಡ ಡಾ. ರೇಲಾ

    ಈ ಬಗ್ಗೆ ಸ್ಥಳೀಯರಾದ ಸೋಮನಾಥ್ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, “ಶ್ರೀಗಳು ಲಿಂಗೈಕ್ಯ ಆಗುವ ಮೂರು ದಿನ ಹಿಂದೆ ಭೈರ ನೀರು ಆಹಾರವನ್ನು ತ್ಯಜಿಸಿತ್ತು. ಶ್ರೀಗಳು ಲಿಂಗೈಕ್ಯರಾದ ದಿನದಿಂದ ಭೈರ ನಾಪತ್ತೆ ಆಗಿದ್ದಾನೆ. ಬಹುಶಃ ಈ ನಾಯಿ ಕೂಡ ಸಾವನ್ನಪ್ಪಿರುತ್ತದೆ. ಶ್ರೀಗಳು ಹೊರಗೆ ಹೋಗಿದ್ದಾಗ, ಭಕ್ತಾದಿಗಳಿಗೆ ದರ್ಶನ ನೀಡದಾಗ ಭೈರ ಶ್ರೀಗಳ ಜಾಗದಲ್ಲಿ ಹೋಗಿ ಅಲ್ಲಿ ಕುಳಿತು ಅಳುತ್ತಿತ್ತು ಎಂದು ಮಠದ ಸಿಬ್ಬಂದಿ ಹೇಳಿದ್ದರು. ಅಲ್ಲದೇ ಶ್ರೀಗಳು ಎಲ್ಲಾದರೂ ಪರಿಶೀಲನೆ ಮಾಡಲು ಹೋಗುವಾಗ ಭೈರ ಕೂಡ ಅವರ ಜೊತೆ ಹೋಗುತಿತ್ತು” ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜನ ಈಗ ಸಾಹುಕಾರರಾಗಿದ್ದಾರೆ, ಹೀಗಾಗಿ ಅನ್ನದ ಬೆಲೆ ಗೊತ್ತಿಲ್ಲ: ಸಿದ್ದಗಂಗಾ ಮಠದ ವಿದ್ಯಾರ್ಥಿ

    ಜನ ಈಗ ಸಾಹುಕಾರರಾಗಿದ್ದಾರೆ, ಹೀಗಾಗಿ ಅನ್ನದ ಬೆಲೆ ಗೊತ್ತಿಲ್ಲ: ಸಿದ್ದಗಂಗಾ ಮಠದ ವಿದ್ಯಾರ್ಥಿ

    ತುಮಕೂರು: ಭಕ್ತರೊಬ್ಬರು ಅನ್ನ ಚೆಲ್ಲಲು ಮುಂದಾದಾಗ ಸಿದ್ದಗಂಗಾ ಮಠದ ಬಾಲಕ ಅವರಿಗೆ ಅನ್ನದ ಮಹತ್ವವನ್ನು ತಿಳಿಸಿದ ವಿಡಿಯೋ ವೈರಲ್ ಆಗಿದೆ. ಈ ವಿಚಾರದ ಬಗ್ಗೆ 8ನೇ ತರಗತಿ ವಿದ್ಯಾರ್ಥಿ ಶಿವು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿ ಜನ ಈಗ ದುಡಿದು ಸಾಹಕಾರರಾಗಿದ್ದಾರೆ. ಹೀಗಾಗಿ ಅನ್ನದ ಬೆಲೆ ಗೊತ್ತಿಲ್ಲ ಎಂದು ತಿಳಿಸಿದ್ದಾನೆ.

    ಶಿವಕುಮಾರ ಸ್ವಾಮೀಜಿಯವರು ಶಿವೈಕ್ಯರಾದ ಬಳಿಕ ಸಿದ್ದಗಂಗಾ ಮಠಕ್ಕೆ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ದಾಸೋಹ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯಲು ಮಠದ ಸಿಬ್ಬಂದಿಯ ಜೊತೆ ಮಕ್ಕಳು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದರು.

    ಈ ಸಂದರ್ಭದಲ್ಲಿ ಭಕ್ತರ ಜೊತೆಗಿನ ತನ್ನ ಸಂಭಾಷಣೆಯ ವಿಡಿಯೋ ವೈರಲ್ ಆಗಿದ್ದಕ್ಕೆ ಪ್ರತಿಕ್ರಿಯಿಸಿದ ಶಿವು, ಶ್ರೀಗಳ ಅಂತಿಮ ದರ್ಶನಕ್ಕೆ ಬಂದ ಭಕ್ತರು ಮಂಗಳವಾರ ಎಂಟು ಗಂಟೆಯಿಂದ ಅನ್ನವನ್ನು ವ್ಯರ್ಥ ಮಾಡುತ್ತಿದ್ದರು. ಈ ವಿಚಾರ ಮಠದವರಿಗೆ ಗೊತ್ತಾಗಿ ಯಾರೂ ಊಟವನ್ನು ವ್ಯರ್ಥ ಮಾಡದಂತೆ ನೋಡಿಕೋ ಎಂದು ನನ್ನಲ್ಲಿ ಹೇಳಿದರು. ಈ ಸಮಯದಲ್ಲಿ ಭಕ್ತರೊಬ್ಬರು ಸಾಂಬರ್ ಇಲ್ಲ ಎಂದು ಹೇಳಿ ಅನ್ನ ಚೆಲ್ಲಲು ಬಂದಾಗ ನಾನು ಅನ್ನವನ್ನು ವ್ಯರ್ಥಮಾಡಬೇಡಿ ಎಂದು ಹೇಳಿದೆ ಎಂದು ಘಟನೆಯನ್ನು ವಿವರಿಸಿದ್ದಾನೆ.

    ಮಂಗಳವಾರ ಬಹಳಷ್ಟು ಭಕ್ತರು ಜಾಸ್ತಿ ಅನ್ನ ಬೇಕು ಎಂದು ಹಾಕಿಸಿಕೊಂಡು ಬಳಿಕ ಎಸೆಯುತ್ತಿದ್ದರು. ಅನ್ನವನ್ನು ಎಸೆಯುತ್ತಿದ್ದಾಗ ಎಷ್ಟು ಬೇಕೋ ಅಷ್ಟು ಅನ್ನವನ್ನು ಮಾತ್ರ ಹಾಕಬೇಕು ಎಂದು ಹೇಳುತ್ತಿದ್ದೆ. ಭಕ್ತರು ಎರಡನೇ ಸರಿ ಹೋದರೂ ಅವರಿಗೆ ಊಟ ಕೊಡುತ್ತಿದ್ದರು. ಆದರೆ ಕೆಲವರು ಮತ್ತೆ ಸಾಂಬರ್ ಹಾಕಿಸಿಕೊಳ್ಳಬೇಕೆಂದರೆ ಸರದಿಯಲ್ಲಿ ನಿಲ್ಲಬೇಕು. ಯಾರು ಸರದಿಯಲ್ಲಿ ನಿಲ್ಲುತ್ತಾರೆ ಎಂದು ಭಾವಿಸಿ ಅನ್ನವನ್ನು ಚೆಲ್ಲುತ್ತಿದ್ದರು. ಬಳಿಕ ನಾನೇ ಅವರ ತಟ್ಟೆಗೆ ಸಾಂಬಾರ್ ಹಾಕಿಸಿಕೊಡುತ್ತಿದ್ದೆ. ಕೆಲವರು ನನ್ನ ಜೊತೆ ಅನ್ನ ಸೇವಿಸಲು ಸಾಧ್ಯವಿಲ್ಲ ಎಂದು ವಾದಿಸುತ್ತಿದ್ದರು. ತಿನ್ನುವುದಕ್ಕೆ ಶಕ್ತಿ ಇಲ್ಲ ಎಂದು ಭಕ್ತರು ಹೇಳುತ್ತಿದ್ದರೂ ನಾನು ಎಸೆಯಲು ಬಿಡಲಿಲ್ಲ. ನೀವು ಅನ್ನ ತಿನ್ನುವವರೆಗೂ ನಾನು ತಟ್ಟೆಯನ್ನು ಎಸೆಯಲು ಬಿಡಲಿಲ್ಲ ಎಂದು ಭಕ್ತರಿಗೆ ಹೇಳುತ್ತಿದ್ದೆ ಎಂದು ಶಿವು ಆ ಸಂದರ್ಭವನ್ನು ವಿವರಿಸಿದ್ದಾನೆ.


    ನಗರಗಳಲ್ಲಿ ಹೆಚ್ಚು ಹಣ ನೀಡುವುದರಿಂದ ಜನ ಈಗ ಸಾಹುಕಾರರಾಗಿದ್ದಾರೆ. ಹಾಗಾಗಿ ಜನರಿಗೆ ಅನ್ನದ ಬೆಲೆ ಗೊತ್ತಿಲ್ಲ. ಜನಗಳು ಈಗ ನೀರು ಇಲ್ಲ ಎಂದು ಪರದಾಡುತ್ತಾರೆ. ಮುಂದೆ ಅನ್ನಕ್ಕಾಗಿಯೂ ಪರದಾಡಬಹುದು. ಈ ಹಿಂದೆ ಅನ್ನಕ್ಕಾಗಿ ಕಷ್ಟಪಡುತ್ತಿದ್ದರು. ನನ್ನ ಅಣ್ಣ ಓದುತ್ತಿದ್ದ ಕಾಲದಲ್ಲಿ ಆತ ಕೇವಲ ಗಂಜಿ ಕುಡಿದು ಶಾಲೆಗೆ ಹೋಗುತ್ತಿದ್ದ. ನಾವು ಶ್ರವಣಬೆಳಗೊಳಕ್ಕೆ ಹೋದಾಗ ನಮ್ಮ ಸರ್ ಅನ್ನವನ್ನು ವ್ಯರ್ಥ ಮಾಡಬಾರದು ಎಂದು ತಿಳಿಸಿದ್ದರು ಎಂದು ಗುರುಗಳು ಹೇಳಿಕೊಟ್ಟ ಪಾಠದ ವಿಚಾರವನ್ನು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡುವಾಗ ಶಿವು ತಿಳಿಸಿದ್ದಾನೆ.

    https://www.youtube.com/watch?v=5hHFioXJN0M

    https://www.youtube.com/watch?v=5uh3fpEysn8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅನ್ನ ಚೆಲ್ಲಲು ಬಂದ ಭಕ್ತನಿಗೆ ಮಠದ ವಿದ್ಯಾರ್ಥಿಯಿಂದ ಅನ್ನದ ಪಾಠ! – ವಿಡಿಯೋ ನೋಡಿ

    ಅನ್ನ ಚೆಲ್ಲಲು ಬಂದ ಭಕ್ತನಿಗೆ ಮಠದ ವಿದ್ಯಾರ್ಥಿಯಿಂದ ಅನ್ನದ ಪಾಠ! – ವಿಡಿಯೋ ನೋಡಿ

    ತುಮಕೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಹಿನ್ನೆಲೆಯಲ್ಲಿ ಭಕ್ತಾದಿಗಳಿಗೆ ಅನ್ನದಾಸೋಹ ಮಾಡಲಾಗಿತ್ತು. ಈ ವೇಳೆ ಭಕ್ತರೊಬ್ಬರು ಅನ್ನ ಚೆಲ್ಲಲು ಮುಂದಾದಾಗ ಮಠದ ಬಾಲಕ ಅವರಿಗೆ ಅನ್ನದ ಮಹತ್ವವನ್ನು ತಿಳಿಸಿದ್ದಾನೆ.

    ನಡೆದಾಡುವ ದೇವರು ಸಿದ್ದಗಂಗಾ ಅವರು ಮಠದಲ್ಲಿ ಮಕ್ಕಳಿಗೆ ಊಟ, ಶಿಕ್ಷಣ ನೀಡಿದ್ದು ಮಾತ್ರವಲ್ಲ, ಮಕ್ಕಳಿಗೆ ಅನ್ನದ ಮಹತ್ವ ತಿಳಿಸಿದ್ದಾರೆ. ಮಂಗಳವಾರ ಶ್ರೀಗಳ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ಉಚಿತ ಅನ್ನದಾಸೋಹ ಸಂದರ್ಭದಲ್ಲಿ ಮೇಲುಸ್ತುವಾರಿ ಮಾಡುತ್ತಿದ್ದ ಮಠದ ವಿದ್ಯಾರ್ಥಿ, ಅನ್ನದ ಮಹತ್ವ ತಿಳಿಸಿಕೊಟ್ಟಿದ್ದಾನೆ. ಅಲ್ಲದೇ ಪ್ರಸಾದ ಚೆಲ್ಲಬೇಡಿ, ಮುಂದೆ ಅನ್ನ ಸಿಗದ ಕಾಲ ಬರುತ್ತೆ ಎಂದು ಬಾಲಕ ಹೇಳಿದ್ದಾನೆ.

    ಮಠದ ವಿದ್ಯಾರ್ಥಿ: ಅಣ್ಣಾ ಅಣ್ಣಾ. ಸಾಂಬಾರ್ ಬೇಕಾ. ಸಾಂಬಾರ್ ಬೇಕಾದ್ರೆ ಅಲ್ಲಿ ಹೋಗಿ.
    ಭಕ್ತ : ಸಾಂಬಾರ್ ಜಾಸ್ತಿ ಆಯ್ತು.
    ಮಠದ ವಿದ್ಯಾರ್ಥಿ: ಅವರು ಸಾಂಬಾರ್ ಇಲ್ಲ ಅಂತಾರೆ. ನೀವು ಸಾಂಬಾರ್ ಜಾಸ್ತಿ ಆಯ್ತು ಅಂತೀರಾ.
    ಭಕ್ತ : ಏನು ಮಾಡೋದು?
    ಮಠದ ವಿದ್ಯಾರ್ಥಿ: ಯಾರು ಏನು ಮಾಡೋದಿಲ್ಲ. ವೇಸ್ಟ್ ಮಾಡಬೇಡಿ.
    ಭಕ್ತ : ಆಗಿದ್ದೇನು ಮಾಡಲಿ.
    ಮಠದ ವಿದ್ಯಾರ್ಥಿ: ನಮಗೆ ಗೊತ್ತಿಲ್ಲ. ಹೊಟ್ಟೆ ತುಂಬಾ ಊಟ ಮಾಡಿ. ಇನ್ನೊಂದು ತಾಲೂಕು ಜನ ಬರ್ತಾರೆ. ಅವರಿಗೆ ಪ್ರಸಾದ ಸಿಗದಂಗೆ ಆಗುತ್ತೆ.
    ಭಕ್ತ: ನನ್ನ ಕೈಲಿ ಆಗಲ್ಲ. ಶಕ್ತಿ ಇಲ್ಲಪ್ಪಾ.
    ಮಠದ ವಿದ್ಯಾರ್ಥಿ: ಊಟ ಮಾಡಿದರೆ ತಾನೆ ಶಕ್ತಿ ಬರೋದು. ಶಕ್ತಿ ಇಲ್ಲಂದ್ರೆ. ಹೊಟ್ಟೆ ತುಂಬಾ ಊಟ ಮಾಡಿ.

    ಬಾಲಕ ಭಕ್ತನಿಗೆ ಅನ್ನದ ಮಹತ್ವ ತಿಳಿಸುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    https://www.youtube.com/watch?v=5uh3fpEysn8&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಖಾಕಿಗಳಿಗೆ ಸರ್ಕಾರದಿಂದ ವೇತನ ಹೆಚ್ಚಳದ ಉಡುಗೊರೆ!

    ಖಾಕಿಗಳಿಗೆ ಸರ್ಕಾರದಿಂದ ವೇತನ ಹೆಚ್ಚಳದ ಉಡುಗೊರೆ!

    ತುಮಕೂರು: ಖಾಕಿಗಳಿಗೆ ಸರ್ಕಾರದಿಂದ ವೇತನ ಹೆಚ್ಚಳದ ಉಡುಗೊರೆ ಸಿಕ್ಕಿದೆ. ಮುಂದಿನ ಬಜೆಟ್ ನಲ್ಲಿ ವೇತನವನ್ನು ಹೆಚ್ಚಿಸಲಾಗುವುದು ಎಂದು ಗೃಹ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

    ಗುರು ಸೇವೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಕ್ಕೆ ಮುಂದಿನ ಬಜೆಟ್ ನಲ್ಲಿ ಔರದ್ಕರ್ ವರದಿ ಜಾರಿ ಮಾಡಿ ಪೊಲೀಸರ ಬದುಕು ಹಸನು ಮಾಡುವ ಯೋಜನೆ ರೂಪಿಸುವುದಾಗಿ ಗೃಹ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

    ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಕೊನೆಯ ದರ್ಶನಕ್ಕೆ ಲಕ್ಷಾಂತರ ಜನರು ಬಿಸಿಲ ಧಗೆ, ಕತ್ತಲೆಯ ಮೌನ, ಮುಂಜಾವು ಯಾವುದನ್ನು ಲೆಕ್ಕಿಸದೇ ಜನರು ಮಠದ ಆವರಣದಲ್ಲಿ ಸೇರಿದ್ದರು. ಲಕ್ಷಾಂತರ ಜನ ಸೇರಿದರೂ ಕಿಂಚಿತ್ತೂ ಮಠದ ಆವರಣದಲ್ಲಿ ಶಿಸ್ತಿಗೆ ಲೋಪ ಬಾರದಂತೆ, ಕಾನೂನಿಗೆ ಧಕ್ಕೆ ಬಾರದಂತೆ ನಡೆದಾಡುವ ದೇವರನ್ನು ಶ್ರದ್ಧೆ ಭಕ್ತಿ ಪ್ರೀತಿಯಿಂದ ಅಂತಿಮ ವಿಧಿವಿಧಾನ ನಡೆಸಲಾಯಿತು. ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಕಾಯಕ ಯೋಗಿಯ ವಿಧಿವಿಧಾನ ನಡೆಯಿತು. ಇದನ್ನೂ ಓದಿ:  ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ

    ತುಮಕೂರು ಪೊಲೀಸರ ಜೊತೆ ಚಿಕ್ಕಬಳ್ಳಾಪುರ ಹಾಗೂ ಸುತ್ತಮುತ್ತ ಜಿಲ್ಲೆಯ ಸುಮಾರು ಮೂವತ್ತು ಸಾವಿರದಷ್ಟು ಪೊಲೀಸರ ದಂಡು ಸ್ಥಳದಲ್ಲಿ ನಿಯೋಜನೆಗೊಂಡಿತ್ತು. ಪೊಲೀಸ್ ಮಹಾನಿರ್ದೇಶಕಿ ನೀಲಮಣಿರಾಜು, ಕಮಲ್ ಪಂಥ್, ಐಜಿ ದಯಾನಂದ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಂ ಹೂಡಿ ಪ್ರತಿ ಕ್ಷಣವೂ ಮಾರ್ಗದರ್ಶನ ಕೊಡುತ್ತಿದ್ದರು. ಪೇದೆಗಳು ಒಂದು ಕ್ಷಣವೂ ವಿರಮಿಸದೇ ಪಾಳಿಗಳನ್ನು ಲೆಕ್ಕಿಸದೇ ಕೆಲಸ ಮಾಡಿದ್ದಾರೆ.

    ಪೊಲೀಸರ ಕಾರ್ಯಕ್ಕೆ ಸಿಎಂ ಕುಮಾರಸ್ವಾಮಿ ಸಹ ಮೆಚ್ಚುಗೆ ಸೂಚಿಸಿದ್ದಾರೆ. ಶ್ರೀಗಳಿಗೆ ಸರ್ಕಾರದ ಗೌರವ ವಂದನೆ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ, ಭಕ್ತರು ಶ್ರೀಗಳ ದರ್ಶನ ಹಾಗೂ ಅಂತಿಮ ಕ್ರಿಯಾ ವಿಧಾನವರೆಗೂ ಪೊಲೀಸ್ ಇಲಾಖೆಗೆ ಸಹಕಾರ ನೀಡಿ ಶಾಂತಿಯಿಂದ ನಡೆದುಕೊಂಡ ಕಾರಣ ಧನ್ಯವಾದ ತಿಳಿಸಿದರು. ಅಲ್ಲದೇ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದ್ದ ಪೊಲೀಸ್ ಇಲಾಖೆಯ ಕಾರ್ಯವನ್ನು ಶ್ಲಾಘಿಸಿ ಔರಾದ್ಕಾರ್ ವರದಿ ಜಾರಿ ಮಾಡುವುದಕ್ಕೆ ಶ್ರಮಿಸುತ್ತೇನೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಗಳಿಗೆ ಯಾವುದೇ ಪ್ರಶಸ್ತಿ ನೀಡಿದ್ರೂ ಅದು ಕಡಿಮೆಯೇ: ಪುನೀತ್ ರಾಜ್‍ಕುಮಾರ್

    ಶ್ರೀಗಳಿಗೆ ಯಾವುದೇ ಪ್ರಶಸ್ತಿ ನೀಡಿದ್ರೂ ಅದು ಕಡಿಮೆಯೇ: ಪುನೀತ್ ರಾಜ್‍ಕುಮಾರ್

    ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾಗಿದ್ದು, ಅವರ ಅಂತಿಮ ದರ್ಶನ ಪಡೆಯಲು ಗಣ್ಯಾತಿಗಣ್ಯರು ಆಗಮಿಸುತ್ತಿದ್ದಾರೆ. ಸೋಮವಾರ ಸಂಜೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಇಂದು ನಟ ಜಗ್ಗೇಶ್, ಪ್ರಕಾಶ್ ರೈ ಮತ್ತಿತರರು ಶ್ರೀಗಳ ಅಂತಿಮ ದರ್ಶನ ಪಡೆದಿದ್ದಾರೆ.

    ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಪುನೀತ್ ರಾಜ್‍ಕುಮಾರ್, ಶ್ರೀ ಸಿದ್ದಗಂಗಾ ಸ್ವಾಮೀಜಿ ಅವರು ಲಕ್ಷಾಂತರ ಮಂದಿಗೆ ವಿದ್ಯಾದಾನ ಮತ್ತು ಅನ್ನದಾನ ಮಾಡಿದ ದೇವರು ಅವರು. ಅವರನ್ನು ನಡೆದಾಡುವ ದೇವರು ಎಂದೇ ಕರೆಯುತ್ತಾರೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದರು. ಇದೇ ವೇಳೆ ಶ್ರೀಗಳಿಗೆ ಭಾರತ ರತ್ನ ನೀಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ಶ್ರೀಗಳಿಗೆ ಯಾವುದೇ ಪ್ರಶಸ್ತಿ ನೀಡಿದರೂ ಅದು ಕಡಿಮೆಯೇ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಶ್ರೀಗಳು ಇಲ್ಲದ ರಾತ್ರಿ ಕಳೆದ ಮಠದ ಮಕ್ಕಳು- ಒಬ್ಬರಿಗೆ ಒಬ್ಬರು ಆಸರೆಯಾಗಿ ಮಲಗಿದ್ರು

    ಭಕ್ತರಿಗೆ ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂದು ಕೇಳಿಕೊಳ್ಳುತ್ತೇನೆ. ನನ್ನ ಕೆಲ ಸಿನಿಮಾಗಳ ಆಡಿಯೋಗಳು ಈ ಮಠದಲ್ಲಿಯೇ ರಿಲೀಸ್ ಆಗಿದೆ. ಆ ಕ್ಷಣಗಳನ್ನು ನಾನು ಎಂದಿಗೂ ಮರೆಯುವುದಿಲ್ಲ. ನಾನು ಮತ್ತು ನನ್ನ ಕುಟುಂಬದವರು ಬಂದು ಶ್ರೀಗಳ ಆಶೀರ್ವಾದ ಪಡೆದಿದ್ದೇವೆ. ಶ್ರೀಗಳ ಆಶೀರ್ವಾದ ಎಲ್ಲರ ಮೇಲೂ ಹೀಗೆ ಇರಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ:ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ

    ನಟ ಜಗ್ಗೇಶ್ ಕೂಡ ಶ್ರೀಗಳ ಅಂತಿಮ ದರ್ಶನ ಪಡೆದು, “ಶ್ರೀಗಳು ನಮ್ಮೊಂದಿಗೆ ಇಲ್ಲ. ದೇವರು ದೇವರ ಬಳಿ ಹೋಗಿದ್ದಾರೆ. ನಡೆದಾಡುವ ದೇವರಿಗೆ ವಿಶ್ವದ ಮೂಲೆ ಮೂಲೆಗಳಲ್ಲಿ ಶಿಷ್ಯವೃಂದ ಇದ್ದಾರೆ. ಸ್ವಾಮೀಜಿಗೆ ನನ್ನ ಕಡೆಯ ನಮಸ್ಕಾರ ಮಾಡಲು ಬಂದಿದ್ದೇನೆ. ಭಾಗಮಾಸ ಆರಂಭದಲ್ಲಿ ಸೋಮವಾರ ಒಳ್ಳೆಯದು. ಶ್ರೀಗಳು ಸೋಮವಾರ ಐಕ್ಯರಾಗಿದ್ದಾರೆ. ಅವರು ಶರಣರಾಗಿದ್ದಕ್ಕೆ ಸೋಮವಾರ ಐಕ್ಯರಾದರು. ಶ್ರೀಗಳು ಆಧುನಿಕ ಕೃಷ್ಣ, ಆಧುನಿಕ ಶಿವ ಆಗಿದ್ದಾರೆ” ಎಂದು ಬಣ್ಣಿಸಿದರು.

    https://www.youtube.com/watch?v=qTT9kbHS20M

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಠದಲ್ಲಿ ಅಚ್ಚುಕಟ್ಟಾಗಿ ನಡೆಯುತ್ತಿದೆ ದಾಸೋಹದ ವ್ಯವಸ್ಥೆ

    ಮಠದಲ್ಲಿ ಅಚ್ಚುಕಟ್ಟಾಗಿ ನಡೆಯುತ್ತಿದೆ ದಾಸೋಹದ ವ್ಯವಸ್ಥೆ

    ತುಮಕೂರು: ನಡೆದಾಡುವ ದೇವರು, ಕಲಿಯುಗದ ಬಸವಣ್ಣ ಶತಾಯುಷಿ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಯ ಅಂತಿಮ ದರ್ಶನ ಪಡೆಯಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಸಾಗರ ತುಮಕೂರು ಸಿದ್ದಗಂಗಾ ಮಠದತ್ತ ಹರಿದು ಬರುತ್ತಿದ್ದು, ಭಕ್ತರಿಗಾಗಿ ಅಚ್ಚುಕಟ್ಟಾಗಿ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ.

    ಶಿವಕುಮಾರ ಸ್ವಾಮೀಜಿಗಳು ಮಠಕ್ಕೆ ಆಗಮಿಸುವ ಭಕ್ತರಿಗೆ ದಾಸೋಹ ತಪ್ಪಬಾರದು. ತಡವಾದರೂ ದಾಸೋಹ ಸಿಗದೇ ಭಕ್ತರು ತೆರಳಬಾರದು ಎಂದು ಹೇಳುತ್ತಿದ್ದರು. ನಡೆದಾಡುವ ದೇವರ ಈ ವಾಕ್ಯ ಈಗಲೂ ಪಾಲನೆಯಾಗುತ್ತಿದ್ದು, ಅಂತಿಮ ದರ್ಶನಕ್ಕೆ ಬರುತ್ತಿರುವ ಭಕ್ತರಿಗೆ ಯಾವುದೇ ಅನಾನುಕೂಲ ಉಂಟಾಗದಂತೆ ಹಾಗೂ ಪ್ರಸಾದ ವ್ಯವಸ್ಥೆಯಲ್ಲಿ ಯಾವುದೇ ತೊಂದರೆಯಾಗದಂತೆ ರಾತ್ರಿಯಿಂದಲೇ ಪ್ರಸಾದವನ್ನ ತಯಾರಿಸಿ, ಊಟದ ವ್ಯವಸ್ಥೆಯನ್ನ ಅಚ್ಚುಕಟ್ಟಾಗಿ ನೀಡಲಾಗುತ್ತಿದೆ.  ಇದನ್ನೂ ಓದಿ:ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ

    ದಾಸೋಹದಲ್ಲಿ ಸಹಾಯ ಮಾಡಲು ಹಲವಾರು ಭಕ್ತರು ಕೂಡ ಕೈ ಜೋಡಿಸುತ್ತಿದ್ದಾರೆ. ದೇವರ ಮೇಲಿನ ಪ್ರೀತಿಗಾಗಿ ದಾಸೋಹ ಕೇಂದ್ರಕ್ಕೆ ಬಂದು ತರಕಾರಿ ಕತ್ತರಿಸಿಕೊಟ್ಟು, ಭಕ್ತ ಸಮೂಹ ಪ್ರಸಾದ ತಯಾರಿಗೆ ಸಹಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಶ್ರೀಗಳು ಇಲ್ಲದ ರಾತ್ರಿ ಕಳೆದ ಮಠದ ಮಕ್ಕಳು- ಒಬ್ಬರಿಗೆ ಒಬ್ಬರು ಆಸರೆಯಾಗಿ ಮಲಗಿದ್ರು

    ಸಿದ್ದಗಂಗಾ ಮಠದಲ್ಲಿ ಒಟ್ಟು 10 ಕಡೆ ದಾಸೋಹ ವ್ಯವಸ್ಥೆ ನಡೆಯುತ್ತಿದ್ದು, ಹೊಸ ಮಠ ದಾಸೋಹ ಭವನ ಹಾಗೂ ಹೊಸ ಮಠದ ಶ್ರೀಗಳ ಕಚೇರಿಯ ಬಳಿ ಕೂಡ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಹೊಸ ಮಠದ ಹಿಂಭಾಗದಲ್ಲಿ 3 ಕಡೆ, ಕ್ಯಾತಸಂದ್ರ ಸರ್ಕಲ್, ಮಠದ ಹಿಂದಿನ ಗೇಟ್, ಬಂಡೇಪಾಳ್ಯ, ಶ್ರೀನಗರ ಕ್ರಾಸ್ ಹಾಗೂ ವಜ್ರಮಹೋತ್ಸವ ಕಟ್ಟಡದ ಬಳಿ ತಲಾ ಒಂದೊಂದರಂತೆ ಒಟ್ಟು 10 ಕಡೆ ದಾಸೋಹದ ವ್ಯವಸ್ಥೆ ಮಾಡಲಾಗಿದೆ.

    ಸಿದ್ದಗಂಗಾ ಮಠಕ್ಕೆ ಬಂದ ಭಕ್ತರು ಖಾಲಿ ಹೊಟ್ಟೆಯಲ್ಲಿ ಹೋಗಬಾರದೆಂದು ಅನ್ನದಾಸೋಹ 24 ಗಂಟೆಯಿಂದ ನಡೆಯುತ್ತಿದೆ. ಇವರೆಗೆ 2.5 ಲಕ್ಷ ಜನ ಅನ್ನ ದಾಸೋಹ ಸಹ ಪಡೆದಿದ್ದಾರೆ. ಉಪ್ಪಿಟ್ಟು, ಕೇಸರಿ ಬಾತ್, ಅನ್ನ, ಸಾಂಬರ್ ಸೇರಿದಂತೆ ಹಲವು ಪದಾರ್ಥಗಳು ಸಿದ್ಧವಾಗುತ್ತಲೇ ಇದೆ. ಸಿದ್ದಗಂಗಾ ಮಠದಲ್ಲಿ ಅಡವಿ ಶ್ರೀಗಳು ಆರಂಭಿಸಿದ ಅನ್ನ ದಾಸೋಹ ಪದ್ಧತಿ ನೂರಾರು ವರ್ಷದಿಂದ ನಡೆದುಕೊಂಡು ಬಂದಿದ್ದು, ಇಂದು ಕೂಡ ಮುಂದುವರಿದಿದೆ.  ಇದನ್ನೂ ಓದಿ:ಜೀವಿತಾವಧಿಯಲ್ಲಿ 5 ಬಾರಿ ವಿಮಾನ ಪ್ರಯಾಣ – ಸರಳತೆಗೆ ಮತ್ತೊಂದು ಹೆಸರೇ ‘ನಡೆದಾಡುವ ದೇವರು’

    ಕೇವಲ ಸಿದ್ದಗಂಗಾ ಮಠದಲ್ಲಿ ಮಾತ್ರವಲ್ಲದೇ ತುಮಕೂರು ನಾಗರೀಕರ ವೇದಿಕೆಯಿಂದ ಉಚಿತ ಊಟ ಹಾಗೂ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಅಂತಿಮ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಉಪಹಾರ ಮತ್ತು ಊಟವನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಒಟ್ಟು ಜಿಲ್ಲೆಯಲ್ಲಿ 60 ಕಡೆ ರೈಸ್ ಮಿಲ್ ಮಾಲೀಕರ ಸಂಘ ಊಟ, ಉಪಹಾರ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ಹಾಗೆಯೇ ಜಿಲ್ಲೆಯ ಹಲವೆಡೆ ಹೋಟೆಲ್‍ಗಳ ಬಂದ್ ಹಿನ್ನಲೆ ಊಟ, ಉಪಹಾರಕ್ಕೆ ಸಮಸ್ಯೆಯಾಗದಂತೆ ನಾಗರೀಕರು ಹಾಗು ಸಂಘ, ಸಂಸ್ಥೆಗಳು ಕಾಳಜಿ ವಹಿಸಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹಾಗೂ ಬಸ್ ನಿಲ್ದಾಣದ ಬಳಿ ಊಟ, ಉಪಹಾರ ವ್ಯವಸ್ಥೆ ಮಾಡಲಾಗಿದೆ.

    https://www.youtube.com/watch?v=mxA9HE4qgJQ

    https://www.youtube.com/watch?v=WTHN3QhN8Zg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಗಳು ಇಲ್ಲದ ರಾತ್ರಿ ಕಳೆದ ಮಠದ ಮಕ್ಕಳು- ಒಬ್ಬರಿಗೆ ಒಬ್ಬರು ಆಸರೆಯಾಗಿ ಮಲಗಿದ್ರು

    ಶ್ರೀಗಳು ಇಲ್ಲದ ರಾತ್ರಿ ಕಳೆದ ಮಠದ ಮಕ್ಕಳು- ಒಬ್ಬರಿಗೆ ಒಬ್ಬರು ಆಸರೆಯಾಗಿ ಮಲಗಿದ್ರು

    ತುಮಕೂರು: ಸಿದ್ದಗಂಗಾ ಶ್ರೀ ಶಿವೈಕ್ಯಗೊಂಡ ಹಿನ್ನಲೆಯಲ್ಲಿ ಮಠದ ಮಕ್ಕಳು ಶ್ರೀಗಳು ಇಲ್ಲದ ರಾತ್ರಿಯನ್ನು ಕಳೆದಿದ್ದಾರೆ. ಒಬ್ಬರಿಗೆ ಒಬ್ಬರು ಆಸರೆಯಾಗಿ ಮಲಗಿರುವ ದೃಶ್ಯ ಮನಕಲುಕುವಂತೆ ಇತ್ತು.

    ಸೋಮವಾರ ಶ್ರೀಗಳು ಶಿವೈಕ್ಯ ವಿಚಾರ ತಿಳಿದು ಮಕ್ಕಳು ಭಾವುಕರಾಗಿದ್ದರು. ಸಿದ್ದಗಂಗಾ ಮಠದಲ್ಲೇ ಮಕ್ಕಳು ರಾತ್ರಿಯನ್ನು ಕಳೆದಿದ್ದಾರೆ. ಅಲ್ಲದೇ ಮಠದಲ್ಲೇ ಸಾವಿರಾರು ಭಕ್ತರು ಮಲಗಿದ್ದರು. ಬೇರೆ ಬೇರೆ ಜಿಲ್ಲೆಗಳಿಂದ ಶ್ರೀಗಳ ದರ್ಶನಕ್ಕೆ ಬಂದ ಭಕ್ತರು ಹೊಸ ಮಠದ ಆವರಣ ಸೇರಿದಂತೆ ಹಲವೆಡೆ ಮಲಗಿದ್ದರು.

    ಸಿದ್ದಗಂಗಾ ಮಠದ ವಿದ್ಯಾರ್ಥಿಗಳು ಹಾಸ್ಟೆಲ್ ಆವರಣದೊಳಗೆ ಸಾಮೂಹಿಕ ಪ್ರಾರ್ಥನೆ ನಡೆಸಿದ್ದಾರೆ. ಪ್ರಾಣಿಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಶ್ರೀಗಳು ಮಠದ ಆವರಣದಲ್ಲಿ ಅನೇಕ ಬೀದಿನಾಯಿಗಳಿಗೆ ಖುದ್ದು ಆಹಾರ ನೀಡುತ್ತಿದ್ದರು. ಇಂದು ವಿದ್ಯಾರ್ಥಿಗಳ ಪ್ರಾರ್ಥನೆಯ ಸಮಯದಲ್ಲಿ ಶಾಲಾ ಅವರಣದಲ್ಲಿ ನಾಯಿಯೊಂದು ಮಲಗಿದ್ದ ದೃಶ್ಯ ಕಂಡುಬಂತು.

    ಪ್ರತಿದಿನ ಬೆಳಗ್ಗೆ ಶಿವಕುಮಾರ ಸ್ವಾಮಿಜಿಗಳೇ ಮಕ್ಕಳಿಗೆ ಪ್ರಾರ್ಥನೆ ಹೇಳಿಕೊಡುತ್ತಿದ್ದರು. ಆದರೆ ಈಗ ಅವರ ಅಗಲಿಕೆಯಿಂದಾಗಿ ಮಕ್ಕಳು ಗೋಸಲ ಸಿದ್ದೇಶ್ವರ ವೇದಿಕೆ ಮುಂದೆ ಪ್ರಾರ್ಥನೆ ಮಾಡುತ್ತಿದ್ದಾರೆ. ಶಾಲಾ ಮಕ್ಕಳು ಶ್ರೀಗಳನ್ನು ನೆನೆದು ಬೆಳಗಿನ ಪ್ರಾರ್ಥನೆ ಸಲ್ಲಿಸಿದ್ದಾರೆ. ಸೋಮವಾರ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ವಿಷಯ ತಿಳಿದು ಮಠದ ಮಕ್ಕಳು ಬಿಕ್ಕಳಿಸಿ ಸುಡುಬಿಸಿಲಿನಲ್ಲಿಯೇ ನಿಂತು ಅಳುತ್ತಿದ್ದರು.

    ಶ್ರೀಗಳು ತಮ್ಮ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ. ತಾವು ಮೃತಪಟ್ಟರೆ ಮಕ್ಕಳು ಮಧ್ಯಾಹ್ನದ ಭೋಜನವನ್ನು ಸ್ವೀಕರಿಸಿದ ಬಳಿಕವಷ್ಟೇ ಘೋಷಣೆ ಮಾಡಬೇಕು. ಯಾಕಂದ್ರೆ ಅವರು ಹಸಿವಿನಿಂದ ಇರುವುದು ತಮಗೆ ಇಷ್ಟವಿಲ್ಲ ಎಂದು ಮಠದ ಸಿಬ್ಬಂದಿ ಬಳಿ ತಮ್ಮ ಕೊನೆಯ ಆಸೆಯನ್ನು ಹೇಳಿಕೊಂಡಿದ್ದರು. ಹಾಗಾಗಿ ಸೋಮವಾರ ಶ್ರೀಗಳು ಬೆಳಗ್ಗೆ 11.44ಕ್ಕೆ ಶಿವೈಕ್ಯರಾದ್ರೂ ಮಠದ ಸಿಬ್ಬಂದಿ, ಮಕ್ಕಳು ಊಟ ಮಾಡಿದ ಮೇಲೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಅಂದರೆ ಸುಮಾರು ಮಧ್ಯಾಹ್ನ 1.56ಕ್ಕೆ ವೈದ್ಯರು ಶ್ರೀಗಳು ಸಾವಿನ ವಿಚಾರವನ್ನು ಘೋಷಣೆ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv