Tag: tumkuru

  • ಮನೆ ಬಿಟ್ಟು ಹೋಗದ ಅತ್ತೆ ಮೇಲೆ ಸೊಸೆಯಿಂದ ಮಾರಣಾಂತಿಕ ಹಲ್ಲೆ – ವೃದ್ಧೆ ಸ್ಥಿತಿ ಚಿಂತಾಜನಕ

    ಮನೆ ಬಿಟ್ಟು ಹೋಗದ ಅತ್ತೆ ಮೇಲೆ ಸೊಸೆಯಿಂದ ಮಾರಣಾಂತಿಕ ಹಲ್ಲೆ – ವೃದ್ಧೆ ಸ್ಥಿತಿ ಚಿಂತಾಜನಕ

    ತುಮಕೂರು: ಮನೆ ಬಿಟ್ಟು ಹೋಗದ ಅತ್ತೆಯ ಮೇಲೆ ಸೊಸೆ ಕಬ್ಬಿಣ ಪೈಪ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಪಟ್ಟಣದ ಕೆಆರ್‌ಎಸ್ ಆಗ್ರಹಾರದಲ್ಲಿ (K.R.Agrahara) ನಡೆದಿದೆ.

    ಹಲ್ಲೆಗೊಳಗಾದ ಮಹಿಳೆಯನ್ನು 65 ವರ್ಷದ ಚಿಕ್ಕತಾಯಮ್ಮ ಎಂದು ಗುರುತಿಸಲಾಗಿದೆ. ಚಿಕ್ಕತಾಯಮ್ಮ ಅವರಿಗೆ ಶಿವಕುಮಾರ್ ಹಾಗೂ ಎನ್.ಶಂಕರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಶಿವಕುಮಾರ್ ಬೆಂಗಳೂರಿನಲ್ಲಿ (Bengaluru) ವಾಸವಾಗಿದ್ದರೆ, ಇನ್ನೊಬ್ಬ ಮಗ ಎನ್.ಶಂಕರ್ ಜೊತೆ ಚಿಕ್ಕತಾಯಮ್ಮ ಕೆ.ಆರ್.ಎಸ್ ಆಗ್ರಹಾರದ ರೇವಣ್ಣ ಎಂಬವರ ಮನೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತಾರೆ. ಶಂಕರ್ ಅವರು ಸೌಮ್ಯಳೊಂದಿಗೆ ಮದುವೆಯಾಗಿದ್ದು ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ ಹೊಡೆದು ಬೈಕ್‌ ಸವಾರ ಸಾವು – ಅಪಘಾತ ಜಾಗದಲ್ಲಿ ಬಿದ್ದಿತ್ತು ಮದ್ಯದ ಬಾಟಲಿಗಳು

    ಬೆಂಗಳೂರಿನಲ್ಲಿ ಇರುವ ಶಿವಕುಮಾರ್ ಅವರ ಮನೆಗೆ ಹೋಗು ಎಂದು   ಸೊಸೆ ಸೌಮ್ಯ, ತನ್ನ ಅತ್ತೆ ಚಿಕ್ಕತಾಯಮ್ಮನಿಗೆ ಒತ್ತಾಯ ಮಾಡುತ್ತಾ ಪದೇ, ಪದೇ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು. ಈ ಸಂಬಂಧ ಹಲವು ಬಾರಿ ಸೌಮ್ಯಳಿಗೆ ಮನೆಯ ಅಕ್ಕಪಕ್ಕದವರು ಬುದ್ದಿವಾದ ಹೇಳಿದರು. ಹೀಗಿದ್ದರೂ ನವೆಂಬರ್ 4ರಂದು ಶುಕ್ರವಾರ ಬೆಳಗ್ಗೆ 9-30 ಗಂಟೆ ಸಮಯದಲ್ಲಿ ಚಿಕ್ಕತಾಯಮ್ಮ ಅವರ ಮನೆಯಲ್ಲಿ ಏನೋ ಗಲಾಟೆ ನಡೆಯುತ್ತಿರುವ ಶಬ್ದ ಕೇಳಿ ಬಂದಿದೆ. ಅಷ್ಟರಲ್ಲಿ ಶಂಕರ್ ಅವರ ಮಕ್ಕಳಾದ ಗೌತಮಿ ಮತ್ತು ಸಹನಾ ಮನೆಯಿಂದ ಹೊರಗಡೆ ಬಂದು ನಮ್ಮ ಅಮ್ಮ ಅಜ್ಜಿಗೆ ಹೊಡೆಯುತ್ತಿದ್ದಾರೆ ಎಂದು ಅಳುತ್ತಿದ್ದರು.

    ಮನೆಯ ಪಕ್ಕದ ನಾಗೇಂದ್ರ ಹಾಗೂ ಹೆಚ್.ವಿ.ಲಕ್ಷ್ಮಣ್‍ಗೌಡ ಅವರು ಚಿಕ್ಕತಾಯಮ್ಮ ಅವರ ಮನೆ ಒಳಗೆ ಹೋಗಿ ನೋಡಿದಾಗ ಸೊಸೆ ಸೌಮ್ಯ ಅವರು ಕೈಯಲ್ಲಿ ಅತ್ತೆ ಜುಟ್ಟನ್ನು ಹಿಡಿದು ಎಳೆದಾಡುತ್ತಾ ಕಬ್ಬಿಣದ ಪೈಪ್‍ನಿಂದ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ರಕ್ತ ಬರುವಂತೆ ಹೊಡೆದಿರುವುದಲ್ಲದೇ ಬೆಂಗಳೂರಿಗೆ ಹೋಗು ಎಂದರೂ ಹೋಗಲ್ಲ ಅಂತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಕೊಲೆ ಮಾಡಿಯೇ ತೀರುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟ್ಯಾಟೂ ಹಾಕಿಸಿಕೊಂಡವರು 6 ತಿಂಗಳು ರಕ್ತದಾನ ಮಾಡ್ಬೇಡಿ – ವೈದ್ಯರ ಎಚ್ಚರಿಕೆ

    ಅಷ್ಟರಲ್ಲಿ ಎಚ್.ವಿ.ಲಕ್ಷ್ಮಣ್‍ಗೌಡ ಹಾಗೂ ನಾಗೇಂದ್ರ ಸೌಮ್ಯ ಕೈಯಲ್ಲಿದ್ದ ಕಬ್ಬಿಣದ ಪೈಪ್ ಅನ್ನು ಕಿತ್ತುಕೊಂಡು ತೀವ್ರವಾಗಿ ಗಾಯಗೊಂಡಿದ್ದ, ಚಿಕ್ಕತಾಯಮ್ಮನನ್ನು ಅಂಬುಲೆನ್ಸ್‌ನಲ್ಲಿ ಕರೆದೊಯ್ದು ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಚಿಕ್ಕತಾಯಮ್ಮನ ಸ್ಥಿತಿ ಚಿಂತಾಜನಕವಾಗಿದ್ದು, ಈ ಸಂಬಂಧ ಹೆಚ್.ವಿ.ಲಕ್ಷ್ಮಣಗೌಡ ಕುಣಿಗಲ್ ಠಾಣೆಗೆ ದೂರು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉದ್ಯೋಗಾಕಾಂಕ್ಷಿ ಮೇಲೆ DYSP ದರ್ಪ – ಕೆನ್ನೆಗೆ ಬಾರಿಸಿದ ಪೊಲೀಸ್ ಅಧಿಕಾರಿ

    ಉದ್ಯೋಗಾಕಾಂಕ್ಷಿ ಮೇಲೆ DYSP ದರ್ಪ – ಕೆನ್ನೆಗೆ ಬಾರಿಸಿದ ಪೊಲೀಸ್ ಅಧಿಕಾರಿ

    ತುಮಕೂರು: ಬಡಪಾಯಿಗಳ ಮೇಲೆ ತುಮಕೂರು (Tumkuru) ಡಿವೈಎಸ್‍ಪಿ (DYSP) ದರ್ಪ ಮೆರೆದ ಘಟನೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮುಂದೆಯೇ ನಡೆದಿದೆ.

    ಪೊಲೀಸ್ ಉದ್ಯೋಗಾಕಾಂಕ್ಷಿಗಳು ವಯೋಮಿತಿ ಸಡಿಲಿಸುವಂತೆ ಗೃಹಸಚಿವರಿಗೆ ಮನವಿ ಕೊಡಲು ಬಂದಿದ್ದರು. ಇವರನ್ನು ತಡೆಯುವ ಭರದಲ್ಲಿ ಡಿವೈಎಸ್‍ಪಿ ಶ್ರೀನಿವಾಸ್, ಉದ್ಯೋಗಾಕಾಂಕ್ಷಿಯೊಬ್ಬರಿಗೆ ಕಪಾಳಮೋಕ್ಷ ಮಾಡಿ, ದೂರ ತಳ್ಳಿ ಉದ್ಧಟತನದಿಂದ ವರ್ತಿಸಿದ್ದಾರೆ. ಇದನ್ನೂ ಓದಿ: ಗೋವಿಂದರಾಜನಗರದಲ್ಲಿ ಪುನೀತ್ ಹೆಸ್ರಲ್ಲಿ 205 ಬೆಡ್ ಸಾಮರ್ಥ್ಯದ ಆಸ್ಪತ್ರೆ: ಸೋಮಣ್ಣ

    ಇದರ ನಡುವೆಯೂ ವೇದಿಕೆಗೆ ನುಗ್ಗಿದ ಪೊಲೀಸ್ ಆಕಾಂಕ್ಷಿಗಳು, ಆರಗ ಜ್ಞಾನೇಂದ್ರ (Araga Jnanendra)ಕಾಲಿಗೆ ಬಿದ್ದು ಕಣ್ಣೀರಿಟ್ಟಿದ್ದಾರೆ. ದಯವಿಟ್ಟು ನೇಮಕಾತಿಯ ವಯೋಮಿತಿ ಹೆಚ್ಚಿಸಿ ಎಂದು ಕೋರಿದ್ದಾರೆ. ಇದಕ್ಕೆ ಸ್ಪಂದಿಸಿದ ಗೃಹ ಸಚಿವರು, ವಯೋಮಿತಿ ಸಡಿಲಿಕೆ ಬಗ್ಗೆ ಚಿಂತನೆ ಮಾಡುವ ಭರವಸೆಯನ್ನು ನೀಡಿದ್ದಾರೆ. ಆದರೆ ಡಿವೈಎಸ್‍ಪಿ ವರ್ತನೆಗೆ ಎಲ್ಲಾ ಕಡೆಯಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ದೇಶವ್ಯಾಪಿ ಸುದ್ದಿಯಾಗಿದೆ. ಇದನ್ನೂ ಓದಿ: ಬಂಡೇ ಮಠ ಶ್ರೀ ಆತ್ಮಹತ್ಯೆ ಪ್ರಕರಣ – ಮತ್ತೊಂದು ಪ್ರಭಾವಿ ಮಠದ ಶ್ರೀ ಭಾಗಿ?

    Live Tv
    [brid partner=56869869 player=32851 video=960834 autoplay=true]

  • ನನ್ನ ಅಪ್ಪನಾಣೆ ಇನ್ನೂ ಐದು ವರ್ಷ ನಾನೇ MLA ಆಗಿರ್ತೀನಿ: ಶ್ರೀನಿವಾಸ್

    ನನ್ನ ಅಪ್ಪನಾಣೆ ಇನ್ನೂ ಐದು ವರ್ಷ ನಾನೇ MLA ಆಗಿರ್ತೀನಿ: ಶ್ರೀನಿವಾಸ್

    ತುಮಕೂರು: ನನ್ನ ಅಪ್ಪನಾಣೆ ಇನ್ನೂ ಐದು ವರ್ಷ ನಾನೇ MLA ಆಗಿರುತ್ತೇನೆ ಎಂದು ಗುಬ್ಬಿ (Gubbi) ಜೆಡಿಎಸ್ (JDS) ಉಚ್ಛಾಟಿತ ಶಾಸಕ ಎಸ್.ಆರ್. ಶ್ರೀನಿವಾಸ್ (S. R. Srinivas) ಭವಿಷ್ಯ ನುಡಿದರು.

    ಗುಬ್ಬಿ ತಾಲೂಕಿನ ಯಕ್ಕಲಕಟ್ಟೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವ ಜ್ಯೋತಿ ಶಾಸ್ತ್ರದವರು ನನ್ನ ಕುಂಡಳಿ ನೋಡಿದ್ರೆ ಹೆದರಿ ಓಡ್ತಾರೆ ಹಂಗಿದೆ ನನ್ನ ಕುಂಡಳಿ. ಯಾರ ಊಹೆಗೂ ನಿಲುಕದ್ದು ನನ್ನ ಭವಿಷ್ಯವಾಗಿದೆ. ಚುನಾವಣೆ ಹತ್ತಿರ ಬಂದಾಗ ಕಾಗೆ, ಗೂಬೆಗಳೆಲ್ಲ ವೇಷ ಹಾಕಿಕೊಂಡು ಬರುತ್ತಾರೆ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು. ಇದನ್ನೂ ಓದಿ: 1 ವರ್ಷದಲ್ಲಿ 3 ಬಾರಿ ಭರ್ತಿ – ದಾಖಲೆ ಬರೆದ ಕೆಆರ್‌ಎಸ್ ಡ್ಯಾಂ

    ಮೊದಲು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದೆ. ಅದಾದ ಬಳಿಕ ನಾನು ಶಾಸಕನಾಗಿದ್ದೇನೆ. ನಮ್ಮಪ್ಪನಾಣೆ ನಾನೇ ಮುಂದಿನ ಐದು ವರ್ಷ ಶಾಸಕನಾಗಿರುತ್ತೇನೆ. ನನ್ನನು ಸುಲಭವಾಗಿ ಸೋಲಿಸಿ ಬಿಡುತ್ತೇನೆ ಅಂದುಕೊಂಡವರೆ ಅದು ಸಾಧ್ಯ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಾಲಕಿ ರೇಪ್ & ಮರ್ಡರ್ – ಅನಧಿಕೃತ ಟ್ಯೂಷನ್ ಸೆಂಟರ್‌ಗಳಿಗೆ ಡಿಡಿಪಿಐ ಎಚ್ಚರಿಕೆ

    Live Tv
    [brid partner=56869869 player=32851 video=960834 autoplay=true]

  • ಕೋಟ್ಯಧಿಪತಿ ಗಂಡನ ಮನೆ ಮುಂದೆ ಪತ್ನಿ ಧರಣಿ

    ಕೋಟ್ಯಧಿಪತಿ ಗಂಡನ ಮನೆ ಮುಂದೆ ಪತ್ನಿ ಧರಣಿ

    ತುಮಕೂರು: ಪ್ರೀತಿಸಿ ಮದುವೆಯಾದ(Love Marriage) ಪತ್ನಿಯೊಬ್ಬಳು ತನ್ನ ಕೋಟ್ಯಧಿಪತಿ ಪತಿಯ(Husband) ಮನೆ ಮುಂದೆ ಧರಣಿ(Protest) ಕುಳಿತ ಘಟನೆ ತುಮಕೂರು(Tumkuru) ನಗರದ ವಿದ್ಯಾ ನಗರದಲ್ಲಿ(Vidya Nagar) ನಡೆದಿದೆ.

    ವಿದ್ಯಾ ನಗರದ ನಾಲ್ಕನೇ ಕ್ರಾಸಿನಲ್ಲಿರುವ ಪತಿ ಜಿತೇಂದ್ರ ಕುಮಾರ್(Jitendra Kumar) ಅವರ ಬೃಹತ್ ಬಂಗಲೆ ಮುಂದೆ ಪತ್ನಿ ಮಂಜುಳಾ(Manjula) ಧರಣಿ ಕುಳಿತಿದ್ದಾರೆ. ಕಳೆದ ನಾಲ್ಕು ವರ್ಷದ ಹಿಂದೆ ರೈಸ್ ಮಿಲ್ (Rice Mill) ಮಾಲೀಕ ಜಿತೇಂದ್ರ ಕುಮಾರ್ ಹಾಗೂ ಮಂಜುಳಾ ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಅಂತರ್ ಜಾತಿ ವಿವಾಹ(Inter Caste Marriage) ಆಗಿದ್ದರು. ಇದನ್ನೂ ಓದಿ: ಮೊಬೈಲ್ ಕದಿಯಲು ಹೋಗಿ ಕಳ್ಳನ ಫಜೀತಿ – 10 ಕಿ.ಮೀ ಕಿಟಕಿಯಲ್ಲಿ ಜೋತಾಡ್ಕೊಂಡು ಬಂದ

    ಕುಡಿತಕ್ಕೆ ದಾಸನಾಗಿದ್ದ ಜಿತೇಂದ್ರ ಕುಮಾರ್ ಲಿವರ್ ಜಾಂಡಿಸ್‍ನಿಂದ (Liver Jaundice) ಜುಲೈ 2 ರಂದು ನಿಧನರಾಗಿದ್ದಾರೆ. ಅತ್ತ ಜಿತೇಂದ್ರ ಕುಮಾರ್ ನಿಧನವಾಗುತ್ತಿದ್ದಂತೆ ಇತ್ತ ಜಿತೇಂದ್ರ ಕುಮಾರ್ ಮನೆಯವರು ಮಂಜುಳಾರನ್ನು ತಮ್ಮ ಮನೆಯೊಳಗೆ ಸೇರಿಸಿಕೊಳ್ಳುತ್ತಿಲ್ಲ. ಕಳೆದ ಎರಡೂವರೆ ತಿಂಗಳಿನಿಂದ ಮಂಜುಳಾ ಪತಿಯ ಮನೆಗೆ ಬಂದು ಹೋಗುತ್ತಿದ್ದಾರೆ. ಮನೆಯೊಳಗೆ ಪ್ರವೇಶ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಜಿತೇಂದ್ರ ಕುಟುಂಬದವರು ಪ್ರವೇಶ ನಿಷೇಧಿಸಿದ್ದಾರೆ. ಇದರಿಂದ ಘಾಸಿಗೊಂಡ ಮಂಜುಳಾ ತನ್ನ ಎರಡೂವರೆ ವರ್ಷದ ಮಗಳೊಂದಿಗೆ ಪತಿ ಮನೆ ಮುಂದೆ ಧರಣಿ ಕುಳಿತಿದ್ದಾರೆ. ಇದನ್ನೂ ಓದಿ: 8 ವರ್ಷದ ಬಳಿಕ ಗೊತ್ತಾಯ್ತು ತನ್ನ ಪತಿ ಅವನಲ್ಲ ಅವಳು – ಗಂಡನ ಲಿಂಗ ಬದಲಾವಣೆ ತಿಳಿದು ಮಹಿಳೆ ಶಾಕ್

    Live Tv
    [brid partner=56869869 player=32851 video=960834 autoplay=true]

  • ನಿತ್ಯ ಎಣ್ಣೆ ಹಾಕಿ ಪಾಠ – ಮದ್ಯದೊಂದಿಗೆ ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಿಕ್ಷಕಿ

    ನಿತ್ಯ ಎಣ್ಣೆ ಹಾಕಿ ಪಾಠ – ಮದ್ಯದೊಂದಿಗೆ ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಿಕ್ಷಕಿ

    ತುಮಕೂರು: ಬೆಳ್ಳಂಬೆಳಗ್ಗೆ ಮದ್ಯಪಾನ ಮಾಡಿಕೊಂಡು ಪಾಠ ಮಾಡುತ್ತಿದ್ದ ಲೇಡಿ ಟೀಚರ್(Teacher) ಒಬ್ಬಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವಿಲಕ್ಷಣ ಘಟನೆ ತುಮಕೂರು(Tumkuru) ತಾಲೂಕಿನ ಚಿಕ್ಕಸಾರಂಗಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

    ಕಳೆದ 25 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕಿ ಗಂಗಲಕ್ಷ್ಮಮ್ಮ ಸೇವೆ ಸಲ್ಲಿಸುತ್ತಿದ್ದಾಳೆ. ಆದರೆ ಕಳೆದ 5 ವರ್ಷದಿಂದ ಮದ್ಯ ವ್ಯಸನಕ್ಕೆ ದಾಸಳಾಗಿದ್ದಳು. ಇದನ್ನೂ ಓದಿ: ಅರ್ಧಂಬರ್ಧ ಮೆಟ್ರೋ ಕಾಮಗಾರಿಯಿಂದಲೇ ಮುಳುಗಿತಾ ಬೆಂಗಳೂರು..?

    ಮದ್ಯಪಾನ(Alcohol) ಮಾಡಿ ಪಾಠ ಮಾಡಿ, ವಿದ್ಯಾರ್ಥಿಗಳಿಗೆ ಸುಖಾಸುಮ್ಮನೆ ಹೊಡೆಯುವುದು ಹಾಗೂ ಸಹೋದ್ಯೋಗಿಗಳ ಜೊತೆ ಜಗಳ ಮಾಡುತ್ತಿದ್ದಳು. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯುಂಟಾಗಿತ್ತು. ಇದನ್ನು ಮನಗಂಡ ಪೋಷಕರು ಶಿಕ್ಷಕಿ ಗಂಗಲಕ್ಷ್ಮಮ್ಮಗೆ ತಪ್ಪು ತಿದ್ದಿಕೊಳ್ಳುವಂತೆ ತಾಕೀತು ಮಾಡಿದ್ದರು. ಆದರೆ ಗಂಗಲಕ್ಷ್ಮಮ್ಮ ತನ್ನ ಚಾಳಿ ಬದಲಿಸಲಿಲ್ಲ. ಇದರಿಂದ ಪೋಷಕರು ಶಾಲೆಗೆ ಬೀಗ ಹಾಕಿ ಶಿಕ್ಷಕಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು.

    ಈ ವೇಳೆ ಸ್ಥಳಕ್ಕೆ ಬಿ.ಇ.ಒ ಹನುಮಾ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿಕ್ಷಕಿಯ ಟೇಬಲ್‍ನ ಡ್ರಾಯರ್ ಓಪನ್ ಮಾಡುವಂತೆ ಗ್ರಾಮಸ್ಥರು ಒತ್ತಾಯ ಮಾಡಿದರು. ಸ್ವತಃ ಬಿಇಒ ಡ್ರಾಯರ್ ಓಪನ್ ಮಾಡಲು ಹೋದಾಗ ಶಿಕ್ಷಕಿ ಪ್ರತಿರೋಧ ಒಡ್ಡಿದ್ದಾಳೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಟೇಬಲನ್ನು ಹೊರಕ್ಕೆ ತಂದು ಡ್ರಾಯರ್ ಬೀಗ ಮುರಿದಿದ್ದಾರೆ. ಆಗ ಡ್ರಾಯರ್‍ನಲ್ಲಿ ಒಂದು ಫುಲ್ ಮತ್ತು ಎರಡು ಖಾಲಿ ಮದ್ಯದ ಬಾಟಲ್‍ಗಳು ಪತ್ತೆಯಾಗಿದೆ. ಇದನ್ನೂ ಓದಿ: ಈ ಹಿಂದೆ ಹಾವಿನ ಮೊಟ್ಟೆ, ಇದೀಗ ಹಕ್ಕಿ ಗೂಡಿನಿಂದಾಗಿ ರಾ. ಹೆದ್ದಾರಿ ಕೆಲಸ ಸ್ಥಗಿತ!

    ಮದ್ಯದ ಬಾಟಲ್ ಪತ್ತೆಯಾಗುತಿದ್ದಂತೆ ಕೊಠಡಿ ಬೀಗಹಾಕೊಂಡು ಗಂಗ ಲಕ್ಷ್ಮಮ್ಮ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಮಾಡಿದ್ದಾಳೆ. ಬಳಿಕ ಪೊಲೀಸರು ಬಂದು ಮದ್ಯದ ಬಾಟಲನ್ನು ವಶಕ್ಕೆ ಪಡೆದಿದ್ದಾರೆ. ಶಿಕ್ಷಕಿ ಗಂಗಲಕ್ಷ್ಮಮ್ಮಳನ್ನು ಇಲಾಖಾ ವಿಚಾರಣೆಗೆ ಒಳಪಡಿಸಲಾಗಿದೆ. ಒಟ್ಟಾರೆ ಚಿಕ್ಕಸಾರಂಗಿ ಶಾಲೆಯ ಮುಂದೆ ನಡೆದ ಹೈಡ್ರಾಮಾಕ್ಕೆ ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ಮುಂದಾದ ತುಮಕೂರು ವಿವಿ

    ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ಮುಂದಾದ ತುಮಕೂರು ವಿವಿ

    ತುಮಕೂರು: ವೀರ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ತುಮಕೂರು ವಿಶ್ವ ವಿದ್ಯಾಲಯ ಒಪ್ಪಿಗೆ ಸೂಚಿಸಿದೆ.

    ಪ್ರಸಕ್ತ ಸಾಲಿನ 6ನೇ ಸಿಂಡಿಕೇಟ್ ಸಭೆಯಲ್ಲಿ ಸಾವರ್ಕರ್ ಅಧ್ಯಯನ ಪೀಠಕ್ಕೆ ಒಪ್ಪಿಗೆ ನೀಡಲಾಗಿದ್ದು, ಆಂತರಿಕ ನಿಧಿ ಬಳಸಿಕೊಳ್ಳಲು ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಶುಕ್ರವಾರ ನಡೆದ ಸಭೆಯಲ್ಲಿ ವಿವಿ ಸಿಂಡಿಕೇಟ್ ಸದಸ್ಯ ವಿನಯ್ ಸಭೆಯ ಅಜೆಂಡಾದಲ್ಲಿ ಸಾವರ್ಕರ್ ಪೀಠ ಸ್ಥಾಪನೆಯ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದರು. ಇದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ.

    ಈ ವೇಳೆ ಸಾವರ್ಕರ್ ಪೀಠ ಸ್ಥಾಪನೆಗೆ ಸದಸ್ಯ ವಿನಯ್ 1 ಲಕ್ಷ ರೂ. ಮೂಲ ಠೇವಣಿಯನ್ನು ಇಟ್ಟಿದ್ದಾರೆ. ಸಾವರ್ಕರ್ ಪೀಠ ಸ್ಥಾಪನೆಗೆ ಅಗತ್ಯ ಇರುವ ಕರಡು ಪರಿನಿಯಮ ಸಿದ್ಧಗೊಂಡಿದ್ದು, ಪೀಠ ಕಾರ್ಯಾರಂಭಕ್ಕೆ ಬೇಕಾಗಿರುವ 25 ಲಕ್ಷ ರೂ. ದಾನಿಗಳಿಂದ ಸಂಗ್ರಹಿಸಲು ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: 8ನೇ ತರಗತಿ ಪಠ್ಯದಲ್ಲಿ ಸಾವರ್ಕರ್‌ ಪಾಠ

    ಈ ಬಗ್ಗೆ ಸಿಂಡಿಕೇಟ್ ಸದಸ್ಯ ವಿನಯ್ ಮಾತನಾಡಿ, ನಿನ್ನೆ ನಡೆದ ಸಿಂಡಿಕೇಟ್ ಸಭೆಯಲ್ಲಿ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ನಿರ್ಧರಿಸಲಾಗಿದೆ. ನಾನು ಅದರ ಪ್ರಸ್ತಾವನೆಯನ್ನು ಸಭೆ ಮುಂದಿಟ್ಟಿದ್ದೆ. ಸರ್ವಾನುಮತದಿಂದ ಅನುಮೋದನೆಗೊಂಡಿದೆ. ಆರಂಭಿಕವಾಗಿ ನಾನು 1 ಲಕ್ಷ ರೂ. ಠೇವಣಿ ಇಟ್ಟಿದ್ದೇನೆ. ಮುಂದಿನದ ದಿನದಲ್ಲಿ ಎಲ್ಲವೂ ಅನುಷ್ಠಾನ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಪಠ್ಯ, ಪುಸ್ತಕ ಪರಿಷ್ಕರಣೆಗೆ ಮುಂದುವರಿದ ವಿರೋಧ- ತಮ್ಮ ಕವಿತೆಯನ್ನು ಬಳಸಬೇಡಿ: ರೂಪಾ ಹಾಸನ

    Live Tv
    [brid partner=56869869 player=32851 video=960834 autoplay=true]

  • ಮದುವೆ ಮನೆಯಲ್ಲಿ ನವಜೋಡಿಗೆ ಸಾವರ್ಕರ್ ಫೋಟೋ ಗಿಫ್ಟ್

    ಮದುವೆ ಮನೆಯಲ್ಲಿ ನವಜೋಡಿಗೆ ಸಾವರ್ಕರ್ ಫೋಟೋ ಗಿಫ್ಟ್

    ತುಮಕೂರು: ರಾಜ್ಯದಲ್ಲಿ ಸಾವರ್ಕರ್ ಫೋಟೋ ವಿವಾದ ನಡುವೆ ಮದುವೆ ಮನೆಯಲ್ಲಿ ನವಜೋಡಿಗೆ ಬಿಜೆಪಿ ಕಾರ್ಯಕರ್ತರು ಸಾವರ್ಕರ್ ಫೋಟೋ ಗಿಫ್ಟ್ ನೀಡಿದ್ದಾರೆ.

    ಈ  ತುಮಕೂರಿನ ಸಿದ್ದಿ ವಿನಾಯಕ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ದಯಾನಂದ- ಸೌಮ್ಯ ಮದುವೆ ನಡೆದಿದೆ. ಈ ಮದುವೆಯ ಆರತಕ್ಷತೆಯ ಸಮಯದಲ್ಲಿ ನವಜೋಡಿಗೆ ಬಿಜೆಪಿ ಎಸ್‍ಟಿ ಯುವ ಮೋರ್ಚಾ ಕಾರ್ಯಕರ್ತರು ಸಾವರ್ಕರ್ ಫೋಟೋವನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ವಿರೋಧಿಸಿ ಧಾರವಾಡದಲ್ಲಿ ಶುಕ್ರವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕೃತಿ ದಹಿಸಿ ಸಾವರ್ಕರ್ ಭಾವಚಿತ್ರಕ್ಕೆ ಮೊಟ್ಟೆಯಿಂದ ಹೊಡೆದಿದ್ದರು. ಅಷ್ಟೇ ಅಲ್ಲದೇ ಸಾವರ್ಕರ್ ಫೋಟೋಗಳನ್ನೂ ಕಾರ್ಯಕರ್ತರು ಸುಟ್ಟಿದ್ದರು.

    ಇದನ್ನೂ ಓದಿ: ಧರ್ಮದ ಹೆಸರಲ್ಲಿ ಬ್ರಾಹ್ಮಣರು ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ: ಬಿಜೆಪಿ ನಾಯಕ

    ಇತ್ತೀಚೆಗಷ್ಟೇ ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಎರಡು ಕೋಮಿನ ನಡುವೆ ಜಟಾಪಟಿ ನಡೆದಿತ್ತು. ಒಂದು ಗುಂಪು ಸಾವರ್ಕರ್ ಫೋಟೋ ತೆಗೆದು ಟಿಪ್ಪು ಫೋಟೋ ಇಡಲು ಹೊರಟಿತ್ತು. ಈ ವೇಳೆ ಯುವಕನೋರ್ವನಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದರು. ಇದೇ ವೇಳೆ ಸಾವರ್ಕರ್ ಫೋಟೊವನ್ನು ಬೀಳಿಸುವುರ ಜೊತೆಗೆ ಅಲ್ಲೇ ಪಕ್ಕದಲ್ಲಿದ್ದ ರಾಷ್ಟ್ರಧ್ವಜವನ್ನು ನೆಲಕ್ಕೆ ಬೀಳಿಸುವುದರ ಮೂಲಕ ರಾಷ್ಟ್ರಧ್ವಜಕ್ಕೂ ಅವಮಾನವನ್ನು ಮಾಡಿದ್ದರು. ಇದನ್ನೂ ಓದಿ: ಮೊಟ್ಟೆ ಕಾಳಗ: ಆ.26ಕ್ಕೆ ಮಡಿಕೇರಿಯಲ್ಲಿ ಕಾಂಗ್ರೆಸ್‌, ಬಿಜೆಪಿ ಮಧ್ಯೆ ಕೋಳಿ ಜಗಳ!

    Live Tv
    [brid partner=56869869 player=32851 video=960834 autoplay=true]

  • ಅರುಂಧತಿ ಸಿನಿಮಾ ನೋಡಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆ

    ಅರುಂಧತಿ ಸಿನಿಮಾ ನೋಡಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆ

    ತುಮಕೂರು: ಅರುಂಧತಿ ಸಿನಿಮಾ ನೋಡಿ ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧುಗಿರಿ ತಾಲ್ಲೂಕಿನ ಕೊಂಡವಾಡಿ ಗ್ರಾಮದ ರಸ್ತೆ ಬದಿಯಲ್ಲಿ ನಡೆದಿದೆ.

    ಮೃತ ಯುವಕನನ್ನು ರೇಣುಕಾ ಪ್ರಸಾದ್ (22) ಎಂದು ಗುರುತಿಸಲಾಗಿದೆ. ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಸ್ತೆ ಬದಿಯಲ್ಲಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ನೋವು ತಾಳಲಾರದೇ ರಸ್ತೆಯಲ್ಲಿ ಕಿರುಚಾಡುತ್ತಾ, ಒದ್ದಾಡುತ್ತಿದ್ದ ಯುವಕನನ್ನು ಸ್ಥಳೀಯರು ರಕ್ಷಿಸಿ ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.  ಇದನ್ನೂ ಓದಿ: ದೇವನಹಳ್ಳಿಯಲ್ಲಿ ಒಂಟಿ ಮಹಿಳೆ ಕೊಲೆ – ಕತ್ತು ಕೊಯ್ದು ನಗದು ದೋಚಿದ್ದ ಕೆಲಸಗಾರನ ಬಂಧನ

    ಇತ್ತೀಚೆಗೆ ಸಿನಿಮಾಗಳಿಗೆ ಅಡಿಕ್ಟ್ ಆಗಿದ್ದ ರೇಣುಕಾ ಪ್ರಸಾದ್, ಅರುಂಧತಿ ಸಿನಿಮಾ ನಾಯಕಿಯಂತೆ ದುಷ್ಟ ಸಂಸಾರಕ್ಕಾಗಿ ಪುನರ್ಜನ್ಮ ತಾಳಲು ಬೆಂಕಿ ಹಚ್ಚಿಕೊಂಡು ಮುಕ್ತಿ ಕೊಡಿ, ಮುಕ್ತಿ ಕೊಡಿ ಎನ್ನುತ್ತಿದ್ದ. ಈ ವಿಚಾರದ ಬಗ್ಗೆ ಹೆಚ್ಚು ಚಿಂತಿಸಿ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಆತನ ಪರಿಚಯಸ್ಥರು ಶಂಕಿಸಿದ್ದಾರೆ. ಇದನ್ನೂ ಓದಿ: ಮಧ್ಯರಾತ್ರಿ, ಮದ್ಯ ಸೇವಿಸಿದ ಅಮಲಿನಲ್ಲಿ ಕಾಂಗ್ರೆಸ್ ಐಟಿ ಸೆಲ್ ಟ್ವೀಟ್ ಮಾಡಿದೆ: ರೇಣುಕಾಚಾರ್ಯ

    Live Tv
    [brid partner=56869869 player=32851 video=960834 autoplay=true]

  • ಒಬ್ಬ ಹೆಂಡ್ತಿಗೆ ಒಬ್ಬನೇ ತಾಳಿ ಕಟ್ಟಬಹುದು, ಇಲ್ಲಿ ಒಬ್ಬ ಹೆಂಡ್ತಿಗೆ ಇಬ್ಬಿಬ್ರು ತಾಳಿ ಕಟ್ಟಿದ್ದಾರೆ: ಸಿ.ಎಂ.ಇಬ್ರಾಹಿಂ

    ಒಬ್ಬ ಹೆಂಡ್ತಿಗೆ ಒಬ್ಬನೇ ತಾಳಿ ಕಟ್ಟಬಹುದು, ಇಲ್ಲಿ ಒಬ್ಬ ಹೆಂಡ್ತಿಗೆ ಇಬ್ಬಿಬ್ರು ತಾಳಿ ಕಟ್ಟಿದ್ದಾರೆ: ಸಿ.ಎಂ.ಇಬ್ರಾಹಿಂ

    ತುಮಕೂರು: ಮಾಧುಸ್ವಾಮಿ ಮಾತು ಕೇಳಿ ಎಸ್.ಆರ್. ಶ್ರೀನಿವಾಸ್ ರಾಜ್ಯ ಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಹಾಕಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಆರೋಪಿಸಿದ್ದಾರೆ.

    ಗುಬ್ಬಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸಭೆ ಚುನಾವಣೆಯಲ್ಲಿ ಎಸ್.ಆರ್ ಶ್ರೀನಿವಾಸ್ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಮತ ಹಾಕಿದ್ದಾರೆ. ಒಬ್ಬ ಹೆಂಡತಿಗೆ ಒಬ್ಬನೇ ತಾಳಿ ಕಟ್ಟಬಹುದು. ಆದರೆ ಇಲ್ಲಿ ಒಬ್ಬ ಹೆಂಡತಿಗೆ ಇಬ್ಬಿಬ್ಬರು ತಾಳಿ ಕಟ್ಟಿದ್ದಾರೆ. ಇದರಲ್ಲಿ ಮಾಧುಸ್ವಾಮಿ ಕೈವಾಡ ಇದೆ. ಜೆಡಿಎಸ್, ಬಿಜೆಪಿ ಬಿ ಟೀಮ್ ಎನ್ನುವ ಕಾಂಗ್ರೆಸ್‍ನವರೇ ಬಿಜೆಪಿಗೆ ಸಹಕಾರ ನೀಡಿದ್ದಾರೆ. ಎರಡನೇ ಮತ ಕಾಂಗ್ರೆಸ್‍ಗೆ ಹಾಕಿಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: MVA ಸರ್ಕಾರವನ್ನು ಅಲುಗಾಡಿಸುತ್ತಿರುವ ಏಕನಾಥ್ ಶಿಂಧೆ ಯಾರು?

    ಕಾಂಗ್ರೆಸ್‍ನ ಈ ನೀತಿಯನ್ನು ನಾನು ಖಂಡಿಸಿ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದೇನೆ. ನಿಮ್ಮ ನಾಯಕರು ಮೊದಲ ವೋಟು ಮೋದಿಗೆ ಹಾಕಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದೇನೆ. ಆದರೆ ಸೋನಿಯಾಗಾಂಧಿಯಿಂದ ರಿಪ್ಲೈ ಬಂದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ MVA ಸರ್ಕಾರ ಪತನ? – ಶೀಘ್ರವೇ ಬಿಜೆಪಿ ಅಧಿಕಾರಕ್ಕೆ

  • ಟಿಪ್ಪು ಏನು ಕನ್ನಡದವರಾ? ಪರ್ಷಿಯನ್, ಉರ್ದು ಭಾಷೆ ಪ್ರಚಾರ ಮಾಡಿದವ್ರು: ಅಶೋಕ್

    ಟಿಪ್ಪು ಏನು ಕನ್ನಡದವರಾ? ಪರ್ಷಿಯನ್, ಉರ್ದು ಭಾಷೆ ಪ್ರಚಾರ ಮಾಡಿದವ್ರು: ಅಶೋಕ್

    ತುಮಕೂರು: ಟಿಪ್ಪು ಏನು ಕನ್ನಡದವರಾ? ಪರ್ಷಿಯನ್ ಹಾಗೂ ಉರ್ದು ಭಾಷೆಯನ್ನು ಹೆಚ್ಚು ಪ್ರಚಾರ ಮಾಡಿದ್ದವರು. ಕನ್ನಡವನ್ನು ಟಿಪ್ಪು ಎಂದೂ ಒಪ್ಪಿಕೊಂಡಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ.

    ಡಿಸಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಹಿನ್ನೆಲೆ ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ವಾಸ್ತವ್ಯ ಹೂಡಿರುವ ಆರ್. ಅಶೋಕ್ ಅವರು, ರಾತ್ರಿ ಬಿ.ಜಿ.ಎಸ್.ಆಶ್ರಮದಲ್ಲಿ ತಂಗಿದ್ದರು. ನಂತರ ಬೆಳಗ್ಗೆ ಎದ್ದು ಗ್ರಾಮದಲ್ಲಿ ವಾಕಿಂಗ್ ಮಾಡುತ್ತಾ ಗ್ರಾಮಸ್ಥರ ಅಹವಾಲು ಆಲಿಸಿದರು. ಇದೇ ವೇಳೆ ಅಶೋಕ್ ಅವರಿಗೆ ತುರುವೇಕೆರೆ ಶಾಸಕ ಮಸಾಲಾ ಜಯರಾಮ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಸಾಥ್ ನೀಡಿದರು. ಇದನ್ನೂ ಓದಿ: ರಾಜ್ಯಕ್ಕೆ ಮೋದಿ: ಕಾರ್ಯಕ್ರಮಗಳಲ್ಲಿ ಬದಲಾವಣೆ – ಪಟ್ಟಿ ಹೀಗಿದೆ..

    SIDDARAMAIAH

    ನಂತರ ಪಠ್ಯ ಪುಸ್ತಕ ವಿವಾದಕ್ಕೆ ಸಂಬಂಧಿಸಿದಂತೆ ಗೋಕಾಕ್ ಚಳವಳಿ ಮಾದರಿ ಹೋರಾಟ ಮಾಡಲು ವಿರೋಧ ಪಕ್ಷಗಳು ನಿರ್ಧರಿಸಿರುವ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವರಿಗೆ ಸರ್ಕಾರದ ನೆಗೆಟಿವ್ ಹುಡುಕುವುದೇ ಕೆಲಸ. ಬೇರೆ ಏನು ಕೆಲಸವಿರುವುದಿಲ್ಲ. ಒಳ್ಳೆಯದನ್ನು ಅವರು ಯಾವತ್ತೂ ಹೇಳಲ್ಲ. ಹಿಂದೆ ಕಾಗೇರಿಯವರು ಶಿಕ್ಷಣ ಸಚಿವರಾಗಿದ್ದಾಗ ಕುವೆಂಪು ಅವರ ಕುರಿತು ಎಂಟು ಪ್ಯಾರಗಳಲ್ಲಿ ವಿಚಾರ ತಿಳಿಸಿದ್ದರು. ಸಿದ್ದರಾಮಯ್ಯನವರ ಕಾಲದಲ್ಲಿ ಅದನ್ನು ಏಳು ಪ್ಯಾರಾಗೆ ಇಳಿಸಿದ್ದರು. ಆಗ ಸಿದ್ದರಾಮಯ್ಯ ಕಾಲದಲ್ಲಿ ಕುವೆಂಪು ಪಠ್ಯಕ್ಕೆ ಕತ್ತರಿ ಹಾಕಿದಾಗ ಯಾರು ಮಾತನಾಡಲಿಲ್ಲ. ಸಿದ್ದರಾಮಯ್ಯ ವಿರುದ್ಧ ಯಾರು ಹೋರಾಟ ಮಾಡಿಲ್ಲ. ಆದರೆ ಶಿಕ್ಷಣ ಸಚಿವ ನಾಗೇಶ್ ಕುವೆಂಪು ಅವರ ಬಗ್ಗೆ ಹತ್ತು ಪ್ಯಾರದಲ್ಲಿ ಹೇಳಿದ್ದಾರೆ. ಸಿದ್ದರಾಮಯ್ಯರ ಕಾಲದಲ್ಲಿ ಕೆಂಪೇಗೌಡರ ಬಗ್ಗೆ ಒಂದು ಅಧ್ಯಾಯ ಇರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

    tippu

    ಬೆಂಗಳೂರು, ಮೈಸೂರು ಅಂದ ತಕ್ಷಣ ಟಿಪ್ಪು ಹೆಸರನ್ನು ತೋರಿಸುತ್ತಿದ್ದರು. ಟಿಪ್ಪು ಏನು ಕನ್ನಡದವರಾ? ಅವರು ಪರ್ಷಿಯನ್ ಹಾಗೂ ಉರ್ದು ಭಾಷೆಯನ್ನು ಹೆಚ್ಚು ಪ್ರಚಾರ ಮಾಡಿದ್ದರು. ಕನ್ನಡವನ್ನು ಎಂದೂ ಒಪ್ಪಿಕೊಂಡಿರಲಿಲ್ಲ. ಅಂತಹವರನ್ನು ಸಿದ್ದರಾಮಯ್ಯ ಅವರ ಕಾಲದಲ್ಲಿ ವೈಭವೀಕರಿಸಿದ್ದರು. ಶಿಕ್ಷಣ ಸಚಿವ ನಾಗೇಶ್ ಮೊದಲ ಬಾರಿ ಪಠ್ಯದಲ್ಲಿ ಕೆಂಪೇಗೌಡರ ಕುರಿತು ವಿಚಾರ ಅಳವಡಿಸಿದ್ದಾರೆ. ಇವರಿಗೆ ಇದೆಲ್ಲ ಕಾಣುತ್ತಿಲ್ಲ, ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿನೇ ಎಂದು ಹೇಳುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸೈಕಲ್‌ನಿಂದ ಬಿದ್ದ ವಿಶ್ವದ ದೊಡ್ಡಣ್ಣ

    ಇದೇ ವೇಳೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪಠ್ಯ ಪುಸ್ತಕ ಹರಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸರ್ಕಾರ ನಡೆಸಿದಂತವರು, ಮಂತ್ರಿಯಾಗಿ ಕೆಲಸ ಮಾಡಿದವರು. ಪುಸ್ತಕ ಹರಿದರೆ ದೊಡ್ಡ ನ್ಯೂಸ್ ಆಗುತ್ತದೆ ಎಂದು ಹರಿದಿದ್ದಾರೆ. ಅವರಿಗೆ ನ್ಯೂಸ್ ಆಗಬೇಕು ಅಷ್ಟೇ. ಪಠ್ಯಪುಸ್ತಕವನ್ನು ಯಾರು ಸರಿಯಾಗಿ ಓದಿದ್ದಾರೆ. ಯಾರು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೋ ಅವರು ಈ ರೀತಿ ಮಾಡುವುದಿಲ್ಲ. ಯಾರೋ ಕೊಟ್ಟ ಪುಸ್ತಕ ಓದಿ ಮಾತನಾಡುತ್ತಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರು ಎರಡು ಸರ್ಕಾರದ ಅವಧಿಯ ಪುಸ್ತಕ ಓದಿ ಸತ್ಯ ಅರಿತು ಪ್ರತಿಕ್ರಿಯೆ ಕೊಡಲಿ ಎಂದು ಹರಿಹಾಯ್ದಿದ್ದಾರೆ.

    Live Tv