Tag: tumkuru

  • ನನ್ನಕ್ಳು ಜೆಡಿಎಸ್‍ನವರನ್ನು ಹೆದರಿಸ್ಬೇಕು- ಹೇಳಿಕೆ ಸಮರ್ಥಿಸಿಕೊಂಡ್ರು ಸುರೇಶ್ ಗೌಡ

    ನನ್ನಕ್ಳು ಜೆಡಿಎಸ್‍ನವರನ್ನು ಹೆದರಿಸ್ಬೇಕು- ಹೇಳಿಕೆ ಸಮರ್ಥಿಸಿಕೊಂಡ್ರು ಸುರೇಶ್ ಗೌಡ

    ತುಮಕೂರು: ಯಾವನ್ ಬರ್ತಾನೋ ಬರ್ಲಿ, ನನ್ಮಕ್ಳು ಜೆಡಿಎಸ್‍ನವರನ್ನ ಹೆದರಿಸ್ಬೇಕು ಎಂಬ ಹೇಳಿಕೆಗೆ ಮಾಜಿ ಶಾಸಕ ಸುರೇಶ್ ಗೌಡ ಸಮರ್ಥಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಗೆ ಮಾತನಾಡಿದ ಸುರೇಶ್ ಗೌಡ, ನಾನೇ ಮಾತನಾಡಿರುವುದು. ನಾನು ಮಾತನಾಡಿದ್ದು ನಿಜ. ಅವರು ಈಗ ನಮ್ಮ ಕ್ಷೇತ್ರದ ಕೌರವನಾಗಿದ್ದಾನೆ. ಆತ ಚುನಾವಣಾ ಸಮಯದಲ್ಲಿ ಹಣ, ಹೆಂಡ, ಸೀರೆ ಹಂಚುತ್ತಾರೆ. ಚುನಾವಣಾ ಸಮಯದಲ್ಲಿ ಜನರಿಗೆ ಹಣದ ಆಮೀಶವೊಡ್ಡಿ ಕಳೆದ ಚುನಾವಣೆಯಲ್ಲಿ ಗೆದಿದ್ದಾರೆ. ಈ ವಿಷಯ ಈಗ ಕೋರ್ಟ್‍ನಲ್ಲಿ ಇದೆ. ಈ ಚುನಾವಣೆಯಲ್ಲೂ ಹೀಗೆ ಮಾಡುತ್ತಿದ್ದಾರೆ. ಹಾಗಾಗಿ ನಾನು ಊರಿಗೆ ಸೇರಿಸಬೇಡಿ. ಅವರ ಏನು ಕೆಲಸ ಮಾಡಿದ್ದಾರೆ ಎಂದು ಕೇಳಿ ಎಂದು ಹೇಳಿದೆ.

    ಹೇಮಾವತಿ ನೀರನ್ನು ನಮ್ಮ ಜೆಲ್ಲೆಗೆ ಒಂದು ಹನಿ ಕೂಡ ಬಿಟ್ಟಿಲ್ಲ. ಕೆರೆ ಪಕ್ಕದಲ್ಲಿದ್ದ ರೈತರು 5 ಕೋಟಿ ರೂ. ಒಟ್ಟು 50 ಕೋಟಿ ರೂ. ಬೋರ್ ವೆಲ್ ಹಾಕಿಸಿದ್ದಾರೆ. ಹಾಗಾಗಿ ದೇವೇಗೌಡ ಅವರನ್ನು ಕರೆದುಕೊಂಡು ಬಂದಾಗ ಪ್ರಶ್ನೆ ಮಾಡಿ. ನೀರು ಬಿಡದ ಶಾಸಕ, ಕೈ ಸಿಗದ ಶಾಸಕ ನೀನು ಊರಿಗೆ ಯಾಕೆ ಬರುತ್ತೀಯಾ. ಯಾವ ನೈತಿಕತೆಯಿಂದ ದೇವೇಗೌಡ ಅವರನ್ನು ಇಲ್ಲಿ ಕರೆದುಕೊಂಡು ಬಂದಿದ್ದೀಯಾ. ನೀನೇ ಕೆಲಸ ಮಾಡಿಲ್ಲ. ನಮ್ಮ ದುಡ್ಡಿನಲ್ಲಿ ಹೆಂಡ, ಸೀರೆ ಕೊಟ್ಟು ರಾಜಕಾರಣ ಮಾಡುತ್ತಿದ್ದೀಯಾ. ಇದನ್ನು ವಿರೋಧಿಸಿ ಎಂದು ರೈತರಿಗೆ ಸಲಹೆ ನೀಡಿದೆ.

    ನೇರವಾಗಿ ಜನರಿಗೆ ಹಣ, ಸೀರೆ, ಮೂಗುಬಟ್ಟು, ಕೋಳಿ ಮಾಂಸ, ಎಣ್ಣೆ ಬಾಟಲ್‍ಗಳನ್ನು ನೀಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆಯನ್ನು ನೇರವಾಗಿ ಸ್ಪರ್ಧಿಸಬೇಕು. ಲೋಕಕಲ್ಯಾಣ ಮಾಡಿ ವೋಟ್ ಕೇಳಬೇಕು. ಆಮೀಶವೊಡ್ಡಿ ವೋಟ್ ಕೇಳುವುದು ಸರಿಯಲ್ಲ. ನಾನು ಭಾವನಾತ್ಮಕವಾಗಿ ಮಾತನಾಡಿದ್ದೇನೆ. ರಾಜಕೀಯ ವಿಷಯದಲ್ಲಿ ನಮ್ಮ ಜನರಿಗೆ ಬೇಗ ಅರ್ಥವಾಗುವುದಿಲ್ಲ. ನಮ್ಮ ನೋವುಗಳನ್ನು ವ್ಯಕ್ತಪಡಿಸಿದ್ದಾಗ ಜನರು ಅವರಿಗೆ ತಿರುಗೇಟು ನೀಡುತ್ತಾರೆ ಎಂದು ಸುರೇಶ್ ಗೌಡ ಹೇಳಿದ್ದಾರೆ.

  • ಯಾವನ್ ಬರ್ತಾನೋ ಬರ್ಲಿ, ನನ್ಮಕ್ಳು ಜೆಡಿಎಸ್‍ನವರನ್ನ ಹೆದರಿಸ್ಬೇಕು: ಮಾಜಿ ಶಾಸಕ

    ಯಾವನ್ ಬರ್ತಾನೋ ಬರ್ಲಿ, ನನ್ಮಕ್ಳು ಜೆಡಿಎಸ್‍ನವರನ್ನ ಹೆದರಿಸ್ಬೇಕು: ಮಾಜಿ ಶಾಸಕ

    ತುಮಕೂರು: ಯಾವನ್ ಬರ್ತಾನೋ ಬರ್ಲಿ, ನನ್ಮಕ್ಳು ಜೆಡಿಎಸ್‍ನವರನ್ನ ಹೆದರಿಸ್ಬೇಕು ಎಂದು ಮಾಜಿ ಶಾಸಕ ಸುರೇಶ್ ಗೌಡ ಜೆಡಿಎಸ್ ವಿರುದ್ಧ ಗುಡುಗಿದ್ದಾರೆ.

    ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಸುರೇಶ್ ಗೌಡ ನಾಲಗೆ ಹರಿಬಿಟ್ಟಿದ್ದಾರೆ. ಒಂದೊಂದು ವೋಟು ಕೂಡ ಮುಖ್ಯ. ಯಾವುದಕ್ಕೂ ಎದೆಗುಂದದೆ ದೊಣ್ಣೆ ಹಿಡಿದು ನಿಂತುಕೊಳ್ಳಿ. ಯಾವನ್ ಬರ್ತಾನೋ ಬರಲಿ, ನನ್ಮಕ್ಳು ಜೆಡಿಎಸ್‍ನವರನ್ನು ಹೆದರಿಸಬೇಕು. ಅವರು ಮೋಸ ಮಾಡ್ತಾರೆ. ಅವರು ಕೌರವ ವಂಶಸ್ಥರು. ಅವರ ಮೇಲೆ ಯುದ್ಧ ಮಾಡಬೇಕಾದರೆ ಕೃಷ್ಣನಂತೆ ನಾನು ಇರುತ್ತೀನಿ. ನಿಂತ್ಕೊಂಡು ಯುದ್ಧ ಮಾಡಿ ಅವರನ್ನು ಸಂಹಾರ ಮಾಡೋಣ. ಅವರ ಟೆಕ್ನಿಕ್ಸ್ ನಂಗೆ ಗೊತ್ತಿದೆ ಎಂದು ಹೇಳಿದ್ದಾರೆ.

    ಗೌರಿಶಂಕರ್ ವಿರುದ್ಧ ವಾಗ್ದಾಳಿ:
    ಗೌರಿಶಂಕರ್ ನಮ್ ದುಡ್ಡೇ ಹೊಡೀತಾನೆ. ನಮ್ ದುಡ್ಡೇ ಹಂಚ್ತಾನೆ. ಅವನೇನು ಕೋಟ್ಯದೀಶ್ವರ ಅಲ್ಲ. ಅಪ್ಪ ಪೊಲೀಸ್ ಆಗಿದ್ದವನು. ಅವನೊಬ್ಬ ದೊಡ್ಡ ಕಳ್ಳ. ಗಣಿ ಧಣಿಯ 150 ಕೇಸಲ್ಲಿ ಲೂಟಿ ಹೊಡೆದಿದ್ದಾನೆ. ಇಂತಹ ಕಳ್ಳರನ್ನು ದೇವೇಗೌಡರು ಕರೆದುಕೊಂಡು ಬಂದು ನಾಟಿ ಮಾಡುತ್ತಾರೆ. ಚೆನ್ನಾಗಿ ಇಸ್ಕೊಳ್ಳಿ. ಚೆನ್ನಾಗಿ ತಿನ್ನಿ. ಎಲ್ಲಾ ಇಸ್ಕೊಂಡು ಬಿಜೆಪಿಗೆ ವೋಟು ಹಾಕಿ. ದುಡ್ಡು ಬಂದರೆ ಚೆನ್ನಾಗ್ ಇಸ್ಕೊಂಡು ತಿನ್ರಲೇ. ಅವನು ಕ್ಯಾನ್ವಸ್ ಗೆ ಬಂದರೆ ಊರಿನ ಒಳಗಡೆ ಬಿಡಬೇಡಿ. ನೀರ್ ಬಿಡಿಸ್ದಲೇ ಇರೋ ಕಳ್ಳ ಕಳ್ಳ ಎಂದು ಕೂಗಿ ಎಂದು ತಮ್ಮದೇ ಶೈಲಿಯಲ್ಲಿ ಕಿಡಿಕಾರಿದ್ದಾರೆ.

    ಅಲ್ಲದೆ ಸುರೇಶ್ ಗೌಡ ಅವರು ದೇವೇಗೌಡರು, ಚೆನ್ನಿಗಪ್ಪ, ಶಾಸಕ ಗೌರಿಶಂಕರ್ ವಿರುದ್ಧ ಕೂಡ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

  • ಏ.1ರಂದು ಶಿವೈಕ್ಯ ಸಿದ್ದಗಂಗಾ ಶ್ರೀಗಳ 112ನೇ ಜಯಂತಿ- 112 ಕಂದಮ್ಮಗಳಿಗೆ ನಾಮಕರಣ

    ಏ.1ರಂದು ಶಿವೈಕ್ಯ ಸಿದ್ದಗಂಗಾ ಶ್ರೀಗಳ 112ನೇ ಜಯಂತಿ- 112 ಕಂದಮ್ಮಗಳಿಗೆ ನಾಮಕರಣ

    ತುಮಕೂರು: ಏಪ್ರಿಲ್ 1ರಂದು ಶ್ರೀ ಸಿದ್ದಗಂಗಾ ಸ್ವಾಮೀಜಿಗಳ 112ನೇ ಜಯಂತಿ. ಈ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಸ್ವಾಮೀಜಿಗಳ ಜಯಂತಿ ಹಾಗೂ ಗುರುವಂದನೆ ಕಾರ್ಯಕ್ರಮಕ್ಕೆ ವಿವಿಧ ಸಿದ್ಧತೆಗಳು ನಡೆಯುತ್ತಿವೆ. ಸ್ವಾಮೀಜಿಗಳು ಇಲ್ಲ ಎನ್ನುವ ನೋವಿನಲ್ಲೂ ಅವರ ನೆನಪನ್ನು ಮರುಕಳಿಸುವ ಹಲವು ಕಾರ್ಯಕ್ರಮಗಳು ನಡೆಯಲಿವೆ. ವಿಶೇಷ ಅಂದರೆ “ದೇವರ” ಹುಟ್ಟುಹಬ್ಬದಂದು 112 ಮಕ್ಕಳಿಗೆ ಶಿವಕುಮಾರ ಶ್ರೀಗಳ ಹೆಸರನಿಟ್ಟು ನಾಮಕರಣ ಮಾಡಲಾಗುತ್ತಿದೆ.

    ನಡೆದಾಡುವ ದೇವರು ಶಿವೈಕ್ಯ ಶಿವಕುಮಾರ ಶ್ರೀಗಳು ಈಗ ನಮ್ಮೊಂದಿಗೆ ಇಲ್ಲ. ಅವರಿಲ್ಲದ ಮೊದಲ ಜನ್ಮದಿನ ಅಂದರೆ ಶಿವಕುಮಾರ ಶ್ರೀಗಳ ಜಯಂತಿಗೆ ಶ್ರೀಮಠ ಸಕಲ ಸಿದ್ಧತೆ ಮಾಡಿಕೊಂಡಿದೆ. ಏಪ್ರಿಲ್ 1 ರಂದು ಶ್ರೀಗಳ 112ನೇ ಜಯಂತಿ ನಡೆಯಲಿದೆ. ವಿವಿಧ ಮಠಾಧೀಶರು, ಮೈಸೂರು ರಾಜವಂಶಸ್ಥ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಶ್ರೀಗಳ ಸ್ಮರಣೆ, ಗದ್ದುಗೆ ಪೂಜೆ, ಪ್ರವಚನ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ಅಂದು ನಡೆಯಲಿದೆ.

    ಇಂದಿನಿಂದಲೇ ಹಲವು ಸಿದ್ಧತೆಗಳು ನಡೆಯುತ್ತಿವೆ. ಚುನಾವಣೆಯ ಹಿನ್ನೆಲೆ ಯಾವುದೇ ರಾಜಕೀಯ ನಾಯಕರು ಬರೋದಿಲ್ಲ. ವಿಶೇಷ ಅಂದರೆ ಶ್ರೀಗಳ 112ನೇ ಜಯಂತಿಯಂದು 112 ಮಕ್ಕಳಿಗೆ ನಾಮಕರಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. 112 ಮಕ್ಕಳಿಗೂ ಶಿವಕುಮಾರ ಸ್ವಾಮೀಜಿಗಳ ಹೆಸರನ್ನು ನಾಮಕರಣ ಮಾಡಲಾಗುವುದು. ಈಗಾಗಲೇ ನೂರಕ್ಕೂ ಹೆಚ್ಚು ಮಕ್ಕಳ ಹೆಸರು ನೋಂದಣಿಯಾಗಿದೆ. ನಾಮಕರಣದಲ್ಲಿ ಭಾಗಿಯಾದ ಮಕ್ಕಳಿಗೆ ಮಠದ ವತಿಯಿಂದ ತೊಟ್ಟಿಲು, ಹಾಸಿಗೆ ಹಾಗೂ ನಾಮಕರಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತಿದೆ.

    ಪ್ರತಿ ವರ್ಷ ಹುಟ್ಟುಹಬ್ಬಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬಂದು ಸ್ವಾಮೀಜಿಗಳ ದರ್ಶನ ಪಡೆಯುತ್ತಿದ್ದರು. ಆದರೆ ಈ ಬಾರಿ ಸ್ವಾಮೀಜಿಗಳು ಇಲ್ಲ ಎನ್ನುವ ನೋವಿನಲ್ಲಿಯೇ ಭಕ್ತಗಣ ಏಪ್ರಿಲ್ 1ಕ್ಕೆ ಬರಲು ಸಜ್ಜಾಗಿ ನಿಂತಿದೆ. ಈ ನಡುವೆ ಮಠದ ಆಡಳಿತ ಮಂಡಳಿ 112 ಮಕ್ಕಳಿಗೆ ಶ್ರೀಗಳ ಹೆಸರನ್ನೇ ನಾಮಕರಣ ಮಾಡುವುದರ ಮೂಲಕ ಶ್ರೀಗಳಿಲ್ಲದ ಮೊದಲ ಜಯಂತಿಯನ್ನು ಸದಾ ಸ್ಮರಿಸುವಂತೆ ಮಾಡುತ್ತಿರುವುದು ಶ್ಲಾಘನೀಯ.

  • ಎಚ್‍ಡಿಡಿ ಕೊನೆಯ ಚುನಾವಣೆಯಲ್ಲಿ ಸೋತು ಮಾನಸಿಕವಾಗಿ ಕುಗ್ಗುತ್ತಾರೆ: ವಿ.ಸೋಮಣ್ಣ

    ಎಚ್‍ಡಿಡಿ ಕೊನೆಯ ಚುನಾವಣೆಯಲ್ಲಿ ಸೋತು ಮಾನಸಿಕವಾಗಿ ಕುಗ್ಗುತ್ತಾರೆ: ವಿ.ಸೋಮಣ್ಣ

    ತುಮಕೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಮ್ಮ ಕೊನೆಯ ಚುನಾವಣೆಯಲ್ಲಿ ಸೋತು ಮಾನಸಿಕವಾಗಿ ಕುಗ್ಗುತ್ತಾರೆ. ಇದಂತು ಸತ್ಯ ಎಂದು ಬಿಜೆಪಿ ಶಾಸಕ ವಿ.ಸೋಮಣ್ಣ ವ್ಯಂಗ್ಯವಾಡಿದ್ದಾರೆ.

    ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜು ನಾಮಪತ್ರ ಸಲ್ಲಿಕೆ ವೇಳೆ ಶಾಸಕರು, ಈ ಬಾರಿಯ ಲೋಕಸಭಾ ಚುನಾವಣೆ ಎಚ್.ಡಿ.ದೇವೇಗೌಡ ಅವರಿಗೆ ಅವಶ್ಯಕವಿರಲಿಲ್ಲ. ಅನವಶ್ಯಕವಾಗಿ ಸ್ಪರ್ಧಿಸಿ ಯಾಕೆ ಗೊಂದಲ ಸೃಷ್ಟಿ ಮಾಡಿಕೊಂಡರು ಅಂತ ಗೊತ್ತಾಗುತ್ತಿಲ್ಲ. ಒಂದೇ ಕುಟುಂಬದವರು ಇಷ್ಟೊಂದು ಜನ ರಾಜಕೀಯಕ್ಕೆ ಬಂದಿರುವುದನ್ನು ನಾನು ಪ್ರಪಂಚದಲ್ಲಿಯೇ ನೋಡಿಲ್ಲ ಎಂದು ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಲೇವಡಿ ಮಾಡಿದರು.

    ಯಾವ ಅಸ್ತ್ರ ಹೋಗಿ ದೇವೇಗೌಡರ ತಲೆ ತಿಂದಿತು ಅಂತ ಗೊತ್ತಿಲ್ಲ. ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಫಲಿತಾಂಶ ಬಂದ ಮೇಲೆ ಮಾನಸಿಕವಾಗಿ ನೋವನ್ನ ಅನುಭವಿಸುತ್ತಾರೆ ಎಂದ ಅವರು, ರಾಜ್ಯದ ನಾಲ್ಕೈದು ಬೃಹತ್ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ. ಈ ಸಂಬಂಧ ಮೂರ್ನಾಲ್ಕು ದಿನಗಳಲ್ಲಿ ದಿನಾಂಕ ತಿಳಿಯಲಿದೆ ಎಂದರು.

    ಜಿಲ್ಲೆಯಲ್ಲಿ ಬಿಜೆಪಿ ಎಲ್ಲಾ ಕಾರ್ಯಕರ್ತರು ಒಂದಾಗಿದ್ದಾರೆ. ಇದು ಸಂತೋಷದ ವಿಚಾರ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ನಡೆದಿದೆ. ದೇಶ ಮೊದಲು, ನಂತರ ಬೇರೆ ಎಲ್ಲಾ ಎನ್ನುವ ಸಂದೇಶ ಇದಾಗಿದೆ. ಹಣದ ಹೊಳೆ ಹರಿಸಿ ಗೆಲ್ಲಲು ಯೋಚಿಸಿದರೆ ಅದು ಸಾಧ್ಯವಾಗಲ್ಲ. ಮತದಾರರು ಜಾಗೃತರಾಗಿದ್ದಾರೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ತುಮಕೂರು ಕ್ಷೇತ್ರದಿಂದ ಬಿಜೆಪಿ ಗೆಲುವು ಖಚಿತ. ಮತದಾರರು ಏಪ್ರಿಲ್ 18ರಂದು ಅಪವಿತ್ರ ಮೈತ್ರಿ ವ್ಯವಸ್ಥೆಗೆ ಉತ್ತರ ನೀಡಿ, ದೋಸ್ತಿ ಸರ್ಕಾರವನ್ನು ತಿರಸ್ಕಾರ ಮಾಡಲಿದ್ದಾರೆ. ರಾಜ್ಯದಲ್ಲಿ 20-22 ಸ್ಥಾನ ಗೆಲ್ಲುತ್ತೇವೆ ಎನ್ನುವ ಭರವಸೆಯಿದೆ ಎಂದರು.

  • ಸೋಮವಾರ ಎಚ್‍ಡಿಡಿ ತುಮಕೂರಿನಲ್ಲಿ ನಾಮಪತ್ರ ಸಲ್ಲಿಕೆ

    ಸೋಮವಾರ ಎಚ್‍ಡಿಡಿ ತುಮಕೂರಿನಲ್ಲಿ ನಾಮಪತ್ರ ಸಲ್ಲಿಕೆ

    ಬೆಂಗಳೂರು: ಮೊಮ್ಮಗನಿಗಾಗಿ ಹಾಸನ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ಸೋಮವಾರ  ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ.

    ತುಮಕೂರು ಲೋಕಸಭೆ ಕ್ಷೇತ್ರದಿಂದ ಮೈತ್ರಿ ಬೆಂಬಲಿತ ಅಭ್ಯರ್ಥಿಯಾಗಿ ದೇವೇಗೌಡರು ಕಣಕ್ಕೆ ಇಳಿಯುವುದು ಖಚಿತವಾಗಿದೆ. ಸೋಮವಾರ ಮಧ್ಯಾಹ್ನ 2 ರಿಂದ 3 ಗಂಟೆ ಅವಧಿಯಲ್ಲಿ ದೇವೇಗೌಡರು ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ವೇಳೆ ಕಾಂಗ್ರೆಸ್ ನಾಯಕರೂ ಕೂಡ ಉಪಸ್ಥಿತರಿರಲಿದ್ದಾರೆ ಎಂದು ಜೆಡಿಎಸ್ ವಕ್ತಾರರು ತಿಳಿಸಿದ್ದಾರೆ.

    ಗೌಡರ ನಾಮಪತ್ರ ಸಲ್ಲಿಕೆಗೆ ಜ್ಯೋತಿಷಿಗಳ ಸಲಹೆ ಮೇರೆಗೆ ಸಮಯ ನಿಗದಿಯಾಗಿದ್ದು, ಇದೇ ಸಮಯಕ್ಕೆ ನಾಮಪತ್ರ ಸಲ್ಲಿಸುವಂತೆ ತಂದೆಗೆ ಸಚಿವ ರೇವಣ್ಣ ಅವರು ತಿಳಿಸಿದ್ದಾರೆ ಎನ್ನಲಾಗಿದೆ. ಜ್ಯೋತಿಷಿಗಳು ತಿಳಿಸಿದ ಮುಹೂರ್ತದಲ್ಲಿಯೇ ದೇವೇಗೌಡರು ನಾಮಪತ್ರ ಸಲ್ಲಿಸಲಿದ್ದು, ಇಂದು ಬೆಳಗ್ಗೆ ದೇವೇಗೌಡರನ್ನು ಭೇಟಿ ಮಾಡಿ ವೇಳೆ ರೇವಣ್ಣ ಅವರು ಚರ್ಚೆ ನಡೆಸಿದ್ದರು ಎನ್ನಲಾಗಿದೆ.

    ಇತ್ತ ಕಾಂಗ್ರೆಸ್ ಪಕ್ಷದ ಹಾಲಿ ಸಂಸದ ಮುದ್ದಹನುಮೇಗೌಡ ಅವರು ಕೂಡ ಸೋಮವಾರ ನಾಮಪತ್ರ ಸಲ್ಲಿಸಿದು ಖಚಿತವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿಯೇ ಕಣಕ್ಕೆ ಇಳಿಯುತ್ತೇನೆ ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ.

  • ದೇವೇಗೌಡರ ಕುಟುಂಬ ರಾಕ್ಷಸರ ಕುಟುಂಬವಿದ್ದಂತೆ: ಸಚಿವ ಎಸ್‍ಆರ್ ಶ್ರೀನಿವಾಸ್

    ದೇವೇಗೌಡರ ಕುಟುಂಬ ರಾಕ್ಷಸರ ಕುಟುಂಬವಿದ್ದಂತೆ: ಸಚಿವ ಎಸ್‍ಆರ್ ಶ್ರೀನಿವಾಸ್

    ತುಮಕೂರು: ಜೆಡಿಎಸ್ ವರಿಷ್ಠ ಎಚ್‍ಡಿ ದೇವೇಗೌಡ ಅವರು ಎಲ್ಲಿ ಸ್ಪರ್ಧೆ ಮಾಡಿದರು ಗೆಲ್ಲುತ್ತಾರೆ. ಅವರದ್ದು ರಾಕ್ಷಸರ ಕುಟುಂಬ ಇದ್ದಂತೆ. 60 ವರ್ಷದ ರಾಜಕೀಯ ಜೀವನದಲ್ಲಿ ಅವರು ಸಾಕಷ್ಟು ಏಳು ಬೀಳು ಕಂಡಿದ್ದಾರೆ. ಈ ಬಾರಿ ಅವರು ಎಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತಾರೆ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್‍ಆರ್ ಶ್ರೀನಿವಾಸ್ ಹೇಳಿದ್ದಾರೆ.

    ತುಮಕೂರು ಕ್ಷೇತ್ರವನ್ನು ಮೈತ್ರಿಧರ್ಮದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಒತ್ತಡ ಹಾಕಿದ್ದೇವೆ. ನಮ್ಮ ಪಕ್ಷದಿಂದ ದೇವೇಗೌಡರೆ ಅಭ್ಯರ್ಥಿಯಾಗಿದ್ದು, 25 ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.

    ಮೈತ್ರಿಗಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಒಮ್ಮತ ಮೂಡದ ಪರಿಣಾಮ ಇಂದು ಕಾಂಗ್ರೆಸ್ ನಾಯಕರ ಬೆಂಬಲ ಕೋರಿ ಸಚಿವ ಶ್ರೀನಿವಾಸ್ ಮಾಜಿ ಕಾಂಗ್ರೆಸ್ ಶಾಸಕರಾದ ರಫಿಕ್ ಅಹಮದ್ ಅವರ ಮನೆಗೆ ಭೇಟಿ ನೀಡಿ ಸಭೆ ನಡೆಸಿದರು. ಆದರೆ ಸಭೆಯ ಬಳಿಕ ಕಾಂಗ್ರೆಸ್ ಮುಖಂಡರು ಬೆಂಬಲ ನೀಡುವ ಬಗ್ಗೆ ಸ್ಪಷ್ಟನೆಯನ್ನು ನೀಡಲಿಲ್ಲ.

    ಈ ವೇಳೆ ಬೆಂಗಳೂರು ಉತ್ತರದಲ್ಲಿ ಸೋಲುವ ಭೀತಿಯಿಂದ ತುಮಕೂರಿನಿಂದ ಸ್ಪರ್ಧೆ ಮಾಡುತ್ತಾ ಇದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ದೇವೇಗೌಡರ ಕುಟುಂಬ ರಾಕ್ಷಸ ಕುಟುಂಬ. ಅವರು ಯಾವುದಕ್ಕೂ ಅಂಜುವವರಲ್ಲ. ಸೋಲಲಿ-ಗೆಲ್ಲಲಿ ಹೋರಾಟ ಮಾಡೇ ಮಾಡುತ್ತಾರೆ ಎಂದು ದೊಡ್ಡಗೌಡರ ಕುಟುಂಬ ಹೊಗಳಲು ಹೋಗಿ ರಾಕ್ಷಸ ಕುಟುಂಬ ಎಂದು ಪದಪ್ರಯೋಗ ಮಾಡಿದ್ದಾರೆ.

  • ಎಚ್‍ಡಿಡಿಗೆ ಗಂಗೆ ಶಾಪವಿದ್ದು, ತುಮಕೂರಿನಿಂದ ಸ್ಪರ್ಧೆ ಮಾಡಿದ್ರೆ ಸೋಲು ಗ್ಯಾರಂಟಿ: ಮಾಜಿ ಶಾಸಕ

    ಎಚ್‍ಡಿಡಿಗೆ ಗಂಗೆ ಶಾಪವಿದ್ದು, ತುಮಕೂರಿನಿಂದ ಸ್ಪರ್ಧೆ ಮಾಡಿದ್ರೆ ಸೋಲು ಗ್ಯಾರಂಟಿ: ಮಾಜಿ ಶಾಸಕ

    ತುಮಕೂರು: ಮಾಜಿ ಪ್ರಧಾನಿ ದೇವೇಗೌಡರಿಗೆ ಗಂಗೆ ಶಾಪ ಇದ್ದು ತುಮಕೂರಿನಿಂದ ಅವರು ಸ್ಪರ್ಧೆ ಮಾಡಿದರೆ ಅವರ ಸೋಲು ಗ್ಯಾರಂಟಿ ಎಂದು ತುಮಕೂರು ಬಿಜೆಪಿ ಸಂಭಾವ್ಯ ಅಭ್ಯರ್ಥಿ ಮಾಜಿ ಶಾಸಕ ಸುರೇಶ್ ಗೌಡ ಭವಿಷ್ಯ ನುಡಿದಿದ್ದಾರೆ.

    ತುಮಕೂರಿನಲ್ಲಿ ಮಾತನಾಡಿದ ಸುರೇಶ್ ಗೌಡರು, ದೇವೇಗೌಡರಿಗೆ ಗಂಗೆ ಶಾಪ ಇರೋದಾಗಿ ಈಗಾಗಲೇ ಜ್ಯೋತಿಷಿಗಳು ಹೇಳಿದ್ದಾರೆ. ಈ ವಿಚಾರ ಸ್ವತಃ ದೇವೇಗೌಡರಿಗೆ ಗೊತ್ತು. ಈ ಶಾಪ ಹೊತ್ತುಕೊಂಡು ದೇವೇಗೌಡರು ತುಮಕೂರಿನಿಂದ ಸ್ಪರ್ಧೆ ಮಾಡಿದರೆ ಅವರ ಸೋಲು ಕಟ್ಟಿಟ್ಟ ಬುತ್ತಿ ಎಂದು ಸುರೇಶ್ ಗೌಡ ಪ್ರತಿಕ್ರಿಯಿಸಿದ್ದಾರೆ.

    ತುಮಕೂರು ಜಿಲ್ಲೆಗೆ ಹೇಮಾವತಿ ನೀರು ನೀಡದೆ ದೇವೇಗೌಡರು ವಂಚಿಸಿದ್ದಾರೆ. ಲಕ್ಷಾಂತರ ರೈತರ ಕಣ್ಣೀರ ಶಾಪದಿಂದಾಗಿ ಮಾತೆ ಗಂಗೆ ದೇವೇಗೌಡರ ಮೇಲೆ ಶಾಪ ಕೊಟ್ಟಿದ್ದಾಳೆ. ಹಾಗಾಗಿ ತೂಮಕೂರಿನಿಂದ ಸ್ಪರ್ಧೆ ಮಾಡಿದರೆ ಶಾಪದಿಂದಾಗಿ ಅವರ ಸೋಲು ಗ್ಯಾರಂಟಿ ಎಂದು ಸುರೇಶ್ ಗೌಡ ಹೇಳಿದ್ದಾರೆ.

    ಅಲ್ಲದೆ ತುಮಕೂರು ಕ್ಷೇತ್ರದ ಬಿಜೆಪಿ ಟಿಕೆಟ್ ಸಂಭಾವ್ಯ ಅಭ್ಯರ್ಥಿ ಪಟ್ಟಿಯ ನನ್ನ ಹೆಸರೂ ಇದೆ. ಸಾಮಾಜಿಕ ಜಾಲತಾಣದಲ್ಲಿ ನಡೆದ ಸರ್ವೆಯಲ್ಲಿ ನನ್ನ ಪರ ಒಲವು ತೋರಿದ್ದಾರೆ. ಅದರ ಜೊತೆಗೆ ನಾನು ಯಡಿಯೂರಪ್ಪ ನವರ ಶಿಷ್ಯ ಎನ್ನುವುದು ಜನರಿಗೆ ಗೊತ್ತು. ಹಾಗಾಗಿ ಟಿಕೆಟ್ ತಮಗೇ ಅಂತಿಮವಾಗುತ್ತೆ ಎಂದು ಸುರೇಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ವಾತಂತ್ರ್ಯದ ಅಮಲಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು – ದೇಶಭಕ್ತಿಯ ಅಮಲಿನಲ್ಲಿ ಮೋದಿ ಅಧಿಕಾರಕ್ಕೇರಲು ಪ್ರಯತ್ನ: ವಿಶ್ವನಾಥ್

    ಸ್ವಾತಂತ್ರ್ಯದ ಅಮಲಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು – ದೇಶಭಕ್ತಿಯ ಅಮಲಿನಲ್ಲಿ ಮೋದಿ ಅಧಿಕಾರಕ್ಕೇರಲು ಪ್ರಯತ್ನ: ವಿಶ್ವನಾಥ್

    ತುಮಕೂರು: ದೇಶದಲ್ಲಿ ಸ್ವಾತಂತ್ರ್ಯದ ಅಮಲಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಈಗ ದೇಶ ಭಕ್ತಿಯ ಅಮಲಿನಲ್ಲಿ ಅಧಿಕಾರಕ್ಕೆ ಬರಲು ಮೋದಿ ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಮಹಾಘಟಬಂಧನ ಕೋಮುವಾದವನ್ನ ಮಣಿಸುವ ಅಮಲಿನಲ್ಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ ಸರ್ಕಾರ ಯುವಕರಿಗೆ ಹಲವು ಆಸೆಗಳನ್ನು ಒಡ್ಡಿ ಅಧಿಕಾರಕ್ಕೆ ಬಂದಿತ್ತು. ಆದರೆ ಅವರಿಗೆ ನೀಡಿದ್ದ ಯಾವುದೇ ಆಸೆ ಈಡೇರಿಲ್ಲ. ಅಲ್ಲದೇ ದೇಶಗಳಲ್ಲಿ ಸೈನ್ಯದ ದುರುಪಯೋಗ ಆಗಿದ್ದು, ಇದು ಎಷ್ಟರ ಮಟ್ಟಿಗೆ ಸರಿ ಎಂಬುವುದು ನನ್ನ ಪ್ರಶ್ನೆ ಆಗಿದೆ. ಈ ಹಿಂದೆ ಸ್ವಾತಂತ್ರ್ಯದ ಅಮಲಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೆ, ಈಗ ದೇಶ ಭಕ್ತಿಯ ಅಮಲಿನಲ್ಲಿ ಅಧಿಕಾರಕ್ಕೆ ಬರಲು ಮೋದಿ ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಮಹಾಘಟಬಂಧನ ಕೋಮುವಾದವನ್ನ ಮಣಿಸುವ ಅಮಲಿನಲ್ಲಿದೆ ಎಂದರು.

    ಜೆಡಿಎಸ್‍ಗೆ 12 ಲೋಕಸಭಾ ಕ್ಷೇತ್ರ ಬಿಟ್ಟುಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದೇವೆ. 7 ಕ್ಷೇತ್ರಕ್ಕೆ ತೃಪ್ತಿಪಟ್ಟುಕೊಂಡಿದ್ದೇವೆ ಎಂಬ ವರದಿ ಸತ್ಯಕ್ಕೆ ದೂರವಾದದ್ದು ಎಂದು. ಈಗಲೂ ಜೆಡಿಎಸ್ 12 ಕ್ಷೇತ್ರಕ್ಕಾಗಿ ಬೇಡಿಕೆ ಇಟ್ಟಿದ್ದು, ಅಂತಿಮವಾಗಿ ಅದು 9 ಆಗಬಹುದು, 8 ಆಗಬಹುದು. ಅಂತಿಮ ಚರ್ಚೆಯ ಬಳಿಕವೇ ಸ್ಪಷ್ಟನೆ ನೀಡಲಿದ್ದೇವೆ ಎಂದರು.

    ದುಡುಕಿನ ತೀರ್ಮಾನ ಬೇಡ: ಇದೇ ವೇಳೆ ನಟ ಅಂಬರೀಷ್ ಪತ್ನಿ ಸುಮಲತಾ ಮಂಡ್ಯದ ಸೊಸೆ, ಮಗಳಾಗಿದ್ದಾರೆ ಎಂದ ಅವರು, ಚುನಾವಣೆ ವಿಚಾರದಲ್ಲಿ ದುಡುಕಿನ ನಿರ್ಧಾರ ಮಾಡಬಾರದು. ಆದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಅವರಿಗೆ ಬಿಟ್ಟಿದ್ದು. ಸುಮಲತಾ ಸ್ಪರ್ಧೆ ಮಾಡುವುದರಿಂದ ಜೆಡಿಎಸ್‍ಗೆ ಯಾವುದೇ ರೀತಿಯ ತೊಂದರೆ ಆಗಲ್ಲ ಎಂದರು.

    ದೇಶದಲ್ಲಿ ಕುಟುಂಬ ರಾಜಕಾರಣ ಅನ್ನುವುದು ಅರ್ಥಹೀನವಾಗಿದೆ. ಯಡಿಯೂರಪ್ಪರ ಮನೆಯವರೂ ಕುಟುಂಬ ರಾಜಕಾರಣ ಮಾಡುತ್ತಾರೆ. ಸಿದ್ದರಾಮಯ್ಯ ನವರು ಕುಟುಂಬ ರಾಜಕಾರಣ ಮಾಡುತ್ತಾರೆ ಎಂದರು. ಅಲ್ಲದೇ ಚೌಕಿದಾರ್ ಚೋರ್ ಅನ್ನುವ ಪದಕ್ಕೆ ಹೇಗೆ ಅರ್ಥ ಇಲ್ಲವೋ ಹಾಗೆಯೇ ಮಹಾಘಟ ಬಂಧನ್ ಮಹಾ ಠಕ್ ಬಂಧನ್ ಅನ್ನುವ ಮಾತಿಗೂ ಬೆಲೆ ಇಲ್ಲ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಹೇಳಿರುವ ಚೌಕಿದಾರ್ ಚೋರ್ ಅನ್ನುವ ಮಾತಿಗೆ ಬೆಲೆ ಇಲ್ಲ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದೇ ಕಾಲೇಜಿನಲ್ಲಿ ನಾಲ್ಕು ಅವಳಿ ಜೋಡಿಗಳು

    ಒಂದೇ ಕಾಲೇಜಿನಲ್ಲಿ ನಾಲ್ಕು ಅವಳಿ ಜೋಡಿಗಳು

    ತುಮಕೂರು: ಜಿಲ್ಲೆಯ ಕುಣಿಗಲ್‍ನ ಜ್ಞಾನಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಒಂದೇ ಕಾಲೇಜಿನಲ್ಲಿ ನಾಲ್ಕು ಅವಳಿ ಜೋಡಿ ಓದುತ್ತಿದ್ದು, ಕಾಲೇಜಿನ ವಿಶೇಷ ಆಕರ್ಷಣೆ ಆಗಿದ್ದಾರೆ.

    ಈ ಅವಳಿ-ಜವಳಿ ಜೋಡಿಗಳನ್ನು ನೋಡಿದರೆ ಹುಬ್ಬೇರದವರೇ ಇಲ್ಲ. ಏಕೆಂದರೆ ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ವರು ಅವಳಿ ಜವಳಿ ಚಹರೆ ಒಂದೇ ರೀತಿ ಇದೆ. ಅರುಣ್-ವರುಣ್, ಕಾವ್ಯ-ಕವನ, ಸಾನಿಯಾ-ಸಾಧಿಕಾ, ಕವಿತಾ-ಲಾವಣ್ಯ ಜೋಡಿ ನೋಡಿ ಎಲ್ಲರಿಗೂ ಕನ್‍ಫ್ಯೂಶನ್.

    ಈ ನಾಲ್ಕು ಅವಳಿ ಜೋಡಿಗಳ ಕಲರವ ಉಪನ್ಯಾಸಕರು ಹಾಗೂ ಸಹಪಾರಿಗಳಿಗೆ ಅವಳ್ಯಾರು ಇವನ್ಯಾರು ಎಂದು ತಕ್ಷಣಕ್ಕೆ ಗುರುತು ಹಚ್ಚಲು ಆಗದೇ ಪರದಾಡಬೇಕಾಗಿದೆ. ಎಷ್ಟೋ ನಾನು ಅವನಲ್ಲ, ನಾನು ಅವಳಲ್ಲ ಎಂದು ಅವರೇ ಹೇಳಿದ ಬಳಿಕ ಗೊತ್ತಾಗಿರುವ ಪ್ರಸಂಗಗಳು ನಡೆದಿವೆ.

    ಈ ಅವಳಿ ಜೋಡಿಗಳ ಇನ್ನೊಂದು ವಿಶೇಷ ಅಂದರೆ ಒಂದೇ ರೀತಿಯ ಯೂನಿಫಾರ್ಮ್, ಒಂದೇ ರೀತಿ ಹೇರ್ ಸ್ಟೈಲ್, ಒಂದೇ ರೀತಿಯ ಮಾತುಕತೆ. ಅದು ಅಲ್ಲದೇ ಯಾವಾಗಲೂ ಜೊತೆ ಜೊತೆಯಲ್ಲೇ ಇರುತ್ತಾರೆ. ಪರೀಕ್ಷೆ ವೇಳೆಯಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ವಿಶೇಷವಾಗಿ ” ಕುಟುಂಬ” ಪಾಠ ಮಾಡಲಾಗತ್ತದೆ.


    ಶಿಕ್ಷಕರು, ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಗುಣಮಟ್ಟ ಹೆಚ್ಚಿಸಲು ಕಾಳಜಿ ವಹಿಸಿದರೆ, ಇದೇ ಕಾಲೇಜಿನ ನಾಲ್ವರು ಅವಳಿ ಜೋಡಿಗಳು ಆ ಕಾಲೇಜಿನ ವಿಶೇಷ ಆಕರ್ಷಣೆಯಾಗಿದ್ದಾರೆ. ಒಂದೇ ಕಾಲೇಜಿನಲ್ಲಿ ಬರೋಬ್ಬರಿ ನಾಲ್ಕು ಜೋಡಿ ಅವಳಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರೋದ್ರಿಂದ ಕಾಲೇಜಿನ ವಿಶೇಷತೆಯೂ ಹೆಚ್ಚಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಮಠದಲ್ಲಿ ಜಾನುವಾರು ಜಾತ್ರೆಯ ಸಂಭ್ರಮ

    ಸಿದ್ದಗಂಗಾ ಮಠದಲ್ಲಿ ಜಾನುವಾರು ಜಾತ್ರೆಯ ಸಂಭ್ರಮ

    ತುಮಕೂರು: ತ್ರಿವಿಧ ದಾಸೋಹಕ್ಕೆ ಹೆಸರುವಾಸಿಯಾಗಿರುವ ಸಿದ್ದಗಂಗೆಯಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿದೆ.

    ಈಗಗಾಲೇ ಜಾನುವಾರುಗಳ ಜಾತ್ರೆ ನಡೆಯುತ್ತಿದ್ದು, ರಾಜ್ಯದ ಮೂಲೆ ಮೂಲೆಯಿಂದ ರೈತರು ತಮ್ಮ ಜಾನುವಾರುಗಳೊಂದಿಗೆ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದಾರೆ. ವಿವಿಧ ತಳಿಯ ರಾಸುಗಳು ಇಲ್ಲಿಗೆ ಬಂದಿದ್ದು ರಾಸುಗಳ ಸ್ಪರ್ಧೆ ನಡೆಯುತ್ತಿದೆ.

    ರಾಸುಗಳ ಮೈಕಟ್ಟು, ಆರೋಗ್ಯ, ಸ್ವಚ್ಛತೆ ಇವೆಲ್ಲಾಗಳನ್ನು ಪರಿಗಣಿಸಿ ಬಹುಮಾನ ನೀಡಲಾಗುತ್ತದೆ. ಪಶು ವೈದ್ಯರು ಸ್ಥಳಕ್ಕೆ ಬಂದು ಸ್ಪರ್ಧೆಯಲ್ಲಿ ಇದ್ದ ಎಲ್ಲಾ ರಾಸುಗಳ ಪರೀಕ್ಷೆ ನಡೆಸುತ್ತಾರೆ. ಬಳಿಕ ಹೆಚ್ಚು ದಕ್ಷತೆ, ಆರೋಗ್ಯ ಪೂರ್ಣವಾದ ರಾಸುಗಳಿಗೆ ಆದ್ಯತೆ ಮೇರೆಗೆ ಆಯ್ಕೆ ಮಾಡುತ್ತಿದ್ದಾರೆ. ಹೀಗೆ ಆಯ್ಕೆಯಾದ ರಾಸುಗಳ ಜೋಡಿಗೆ ಮಠದ ವತಿಯಿಂದ ಬಹುಮಾನ ವಿತರಿಸಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv