Tag: tumkur

  • ನನ್ನ ಮಕ್ಕಳನ್ನು ದತ್ತು ಪಡೆಯಿರಿ- ನನಗೆ, ಪತ್ನಿಗೆ ದಯಾಮರಣ ನೀಡಿ ಎಂದು ಬಾಡಿಗೆದಾರನಿಂದ ಅರ್ಜಿ

    ನನ್ನ ಮಕ್ಕಳನ್ನು ದತ್ತು ಪಡೆಯಿರಿ- ನನಗೆ, ಪತ್ನಿಗೆ ದಯಾಮರಣ ನೀಡಿ ಎಂದು ಬಾಡಿಗೆದಾರನಿಂದ ಅರ್ಜಿ

    ತುಮಕೂರು: ನನ್ನ ಇಬ್ಬರು ಮಕ್ಕಳನ್ನು (Children) ದತ್ತು ತೆಗೆದುಕೊಳ್ಳಿ. ನನಗೂ, ನನ್ನ ಪತ್ನಿಗೆ (Wife) ದಯಾಮರಣ ಕೊಡಿ ಎಂದು ತುಮಕೂರು (Tumkur) ಜಿಲ್ಲಾಧಿಕಾರಿ (District Collector) ಕಚೇರಿ ಎಂದು ನೊಂದ ಬಾಡಿಗೆದಾರ ಅಳಲು ತೋಡಿಕೊಂಡರು.

    ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಮಕ್ಕಳೊಂದಿಗೆ ಹಾಗೂ ಸಂಬಂಧಿಕರ ಜೊತೆ ಬಂದ ನೊಂದ ಬಾಡಿಗೆದಾರ ಅಂತರಾಜು ಹಾಗೂ ಪತ್ನಿ ತೇಜಸ್ವಿನಿ ದಯಾಮರಣದ ಅರ್ಜಿಯನ್ನು ಮಾಧ್ಯಮದವರಿಗೆ ಪ್ರದರ್ಶಿಸಿ ನಂತರ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್‍ಗೆ ಸಲ್ಲಿಸಿದರು.

    ನಂತರ ಮಾಧ್ಯಮದವರ ಜೊತೆ ಮಾತನಾಡಿದ ಬಾಡಿಗೆದಾರ ಅಂತರಾಜು, ದೇಶದಲ್ಲಿ ನ್ಯಾಯಕ್ಕೆ ಬೆಲೆ ಇಲ್ಲ. ನೊಂದವರಿಗೆ ನ್ಯಾಯ ಕೊಡಿಸುವುದಕ್ಕೆ ಆಗಲ್ಲ. ನನ್ನ ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಳ್ಳಿ. ಅಷ್ಟಾದರೂ ಮಾಡಿ. ನನಗೆ ಹಾಗೂ ನನ್ನ ಪತ್ನಿ ತೇಜಸ್ವಿಗೆ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.

    ನಮಗೆ ಹೋಟೆಲ್‌ ಬಾಡಿಗೆ ಕೊಟ್ಟಂತಹ ಮಾಲೀಕರು ಎಷ್ಟು ಪ್ರಭಾವಶಾಲಿಯಾಗಿದ್ದಾರೆ ಅಂದ್ರೆ, ಸ್ಥಳೀಯ ಶಾಸಕರು, ಸಚಿವರು ಬರಲಿಲ್ಲ. ಜಿಲ್ಲಾಧಿಕಾರಿ, ಎಸ್ಪಿ ಕೂಡ ಬರಲಿಲ್ಲ. ಕೊನೆಗೆ ಒಬ್ಬ ಕಾರ್ಪೋರೇಟರ್ ಕೂಡ ಪ್ರತಿಭಟನೆಯ ಸ್ಥಳಕ್ಕೆ ಸುಳಿಯದಂತೆ ನೋಡಿಕೊಂಡಿದ್ದಾರೆ. 

    ಮಾಜಿ ಸಿಎಂ ಸಿದ್ದರಾಮಯ್ಯರ ಆಪ್ತನೆಂದುಕೊಂಡು ವೈ.ಸಿ. ಸಿದ್ದರಾಮಯ್ಯ ಹೋಟೆಲ್ ಬಾಡಿಗೆ ಕೊಟ್ಟು ಸುಮಾರು 2 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಭವಾನಿ ಅಕ್ಕ, ಪ್ರಜ್ವಲ್ ರೇವಣ್ಣ ನಶೆಯಲ್ಲಿರ್ತಾರೆ; ಥರ್ಟಿ, ಸಿಕ್ಸ್ಟಿ ಅಲ್ಲ 2 ಬಾಟ್ಲಿ ಕುಡಿತಾರೆ – ಪ್ರೀತಂ ಗೌಡ

    ಬಸವರಾಜ್ ಎಂಬವರ ತ್ರಿಸ್ಟಾರ್ ಹೋಟೆಲ್‍ನ್ನು ಅಂತರಾಜ್ ಬಾಡಿಗೆಗೆ ತಗೊಂಡು ನಡೆಸುತ್ತಿದ್ದರು. ಹೊಟೇಲ್ ಇಂಟಿರಿಯರ್ ಮತ್ತು ಪೀಠೋಪಕರಣಕ್ಕಾಗಿ ಅಂತರಾಜ್ 1 ಕೋಟಿ ರೂ. ಖರ್ಚು ಮಾಡಿದ್ದರು. ಜೊತೆಗೆ 50 ಲಕ್ಷ ರೂ. ಮುಂಗಡ ಹಣವನ್ನೂ ನೀಡಿದ್ದರೂ ಎನ್ನಲಾಗಿದೆ. ಆದರೆ ಹೊಟೇಲ್ ಆರಂಭವಾಗುತ್ತಿದ್ದಂತೆ ಅಂತರಾಜ್ ಜೊತೆ ಹೊಟೇಲ್ ಮಾಲೀಕ ಬಸವರಾಜ್ ಹಾಗೂ ವೈ.ಸಿ.ಸಿದ್ದರಾಮಯ್ಯ ಕ್ಯಾತೆ ತೆಗೆದಿದ್ದಾರೆ. ನಂತರ ಅಂತರಾಜ್‍ರನ್ನು ಹೋಟೆಲ್‍ನಿಂದಲೇ ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತರಾಜ್‌ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸ್ನೇಹ ನಂಬಿ ಕೋಟಿ ಕೋಟಿ ಸುರಿದ- ಹಣ ಆಗ್ತಿದ್ದಂತೆ ಉಲ್ಟಾ ಹೊಡೆದ ಮಿತ್ರದ್ರೋಹಿ

    Live Tv
    [brid partner=56869869 player=32851 video=960834 autoplay=true]

  • ಹಣೆಬರಹ ಸರಿ ಇದ್ದಿದ್ರೆ 2013ರಲ್ಲೇ ಸಿಎಂ ಆಗ್ತಿದ್ದೆ: ಪರಮೇಶ್ವರ್ ಬೇಸರ

    ಹಣೆಬರಹ ಸರಿ ಇದ್ದಿದ್ರೆ 2013ರಲ್ಲೇ ಸಿಎಂ ಆಗ್ತಿದ್ದೆ: ಪರಮೇಶ್ವರ್ ಬೇಸರ

    ತುಮಕೂರು: ಕ್ಷೇತ್ರದ ಜನ 2 ಬಾರಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಆದರೆ ಒಳ್ಳೆ ಟೈನಲ್ಲಿ ಪಲ್ಟಿ ಹೊಡೆಸಿದ್ದಾರೆ. ಹಣೆಬರಹ ಸರಿ ಇದ್ದಿದ್ದರೇ ನಾನು ಸಿಎಂ ಆಗುತ್ತಿದ್ದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ (G Parameshwara) ಬೇಸರ ವ್ಯಕ್ತಪಡಿಸಿದರು.

    ಕೊರಟಗೆರೆಯ (Koratagere) ತೋವಿನಕೆರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2013ರಲ್ಲಿ ಒಂದೇ ಒಂದು ಓಟ್‍ನಲ್ಲಿ ಗೆದ್ದಿದ್ದರೇ ಈ ರಾಜ್ಯದ ಮುಖ್ಯಮಂತ್ರಿ (Chief Minister) ಆಗುವ ಅವಕಾಶ ಇತ್ತು. ಆದರೆ ನನ್ನದು ಹಣೆಬರಹ ಇರಬೇಕಲ್ಲಾ ಬರೇ ನಿಮ್ಮದೇ ಹೇಳಿದ್ರೆ ಸರಿಯಾಗಲ್ಲ. ಹಣೆ ಬರಹ ಬಹುಶಃ ನನಗಿರಲಿಲ್ಲ ಅಂತಾ ಕಾಣಿಸುತ್ತೆ ಎಂದು ಮುಖ್ಯಮಂತ್ರಿ ಆಗುವ ಆಸೆ ನನಸಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಆಜಾದ್ ನಗರದಲ್ಲಿ ಕಾರು ಜಖಂ – ಹರ್ಷ ಸಹೋದರಿ ಅಶ್ವಿನಿ ವಿರುದ್ಧ FIR

    ಇಂದು ನನ್ನ ಕೈಲಾದ ಕೆಲಸ ಮಾಡಿದ್ದೇನೆ ಎನ್ನುವ ಅತ್ಮತೃಪ್ತಿ ನನಗಿದೆ. ತಮಗೆ ಇದೆಯೋ ಇಲ್ವೋ ಗೊತ್ತಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕಾರ್ಗಿಲ್ ಯುದ್ಧಭೂಮಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಮೋದಿ

    Live Tv
    [brid partner=56869869 player=32851 video=960834 autoplay=true]

  • ಕೊಲೆಗಾರರಿಗೆ ಜೀವಾವಧಿ ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಿದ ಕೋರ್ಟ್‌

    ಕೊಲೆಗಾರರಿಗೆ ಜೀವಾವಧಿ ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಿದ ಕೋರ್ಟ್‌

    ತುಮಕೂರು: ಕೊಲೆ (Murder) ಪ್ರಕರಣವೊಂದರಲ್ಲಿ ಇಬ್ಬರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 50 ಸಾವಿರ ರೂ. ದಂಡ (Fine) ವಿಧಿಸಿ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ (Judge) ಯಾದವ ಕರಕೇರ ಅವರು ತೀರ್ಪು ನೀಡಿದ್ದಾರೆ.

    ಪಾವಗಡ ತಾಲೂಕಿನ ನೇರಳೆಕುಂಟೆ ಗ್ರಾಮದ ರಾಮಾಂಜಿ ಬಿನ್ ರಾಮಪ್ಪ(40), ಸುಬ್ಬಮ್ಮ ಬಿನ್ ರಾಮಪ್ಪ (58) ಜೀವಾವಧಿ ಶಿಕ್ಷೆಗೊಳಗಾದವರು ಹಾಗೂ ಅಂಜಿನಪ್ಪ ಮೃತ ದುರ್ದೈವಿ. ಅಂಜಿನಪ್ಪ, ರಾಮಂಜಿ, ಸುಬ್ಬಮ್ಮ ಅವರು ಗ್ರಾಮದ ಮೂಗಪ್ಪ ಎಂಬವರ ಮೊಮ್ಮಕ್ಕಳಾಗಿದ್ದರು. 2019ರ ಫೆ.17ರಂದು ರಾತ್ರಿ 9 ಗಂಟೆಗೆ ತಾತಾ ಮೂಗಪ್ಪನ ತಿಥಿ ಕಾರ್ಯವನ್ನು ಅಂಜಿನಪ್ಪ ನಡೆಸಿ ಬಂದಿದ್ದ. ಆದರೆ ಉಳಿದ ಇಬ್ಬರು ಮೊಮ್ಮಕ್ಕಳು ನಾವೇ ತಾತ ಮೂಗಪ್ಪನ ತಿಥಿ ಕಾರ್ಯಗಳನ್ನು ಮಾಡಿದ್ದೇವೆ ಎಂದು ಅಂಜಿನಪ್ಪನೊಂದಿಗೆ ಜಗಳ ತೆಗೆದಿದ್ದಾರೆ.

    ಇದೇ ಜಗಳ ಮಿತಿ ಮೀರಿದ್ದು, ರಮಂಜಿ, ಸುಬ್ಬಮ್ಮ ಸೇರಿ ಮನೆಯ ಪಕ್ಕದಲ್ಲಿದ್ದ ಕೂಳೆ ಹೊಡೆದಿರುವ ಕಟ್ಟಿಗೆಯಿಂದ ಅಂಜಿನಪ್ಪನ ಹಣೆ ಮತ್ತು ಬಲಕಿವಿಯ ಬಳಿಗೆ ಜೋರಾಗಿ ಹೊಡೆದಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅಂಜಿನಪ್ಪ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ. ಪ್ರಕರಣದ ಬಗ್ಗೆ ಅಂದಿನ ತನಿಖಾಧಿಕಾರಿ ಸಿಪಿಐ ವೆಂಕಟೇಶ್ ಅಂತಿಮ ವರದಿಯನ್ನು ಸಲ್ಲಿಸಿದ್ದರು. ಇದನ್ನೂ ಓದಿ: ರಾಹುಲ್ ಗಾಂಧಿ ಎಂದರೆ ಯಾರು, ಏನು ಎನ್ನುವುದನ್ನು ಭಾರತ್ ಜೋಡೋ ತೋರಿಸಿಕೊಟ್ಟಿದೆ: ಸಿದ್ದರಾಮಯ್ಯ

    ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಮೇಲ್ಕಂಡಂತೆ ತೀರ್ಪು ನೀಡಿದ್ದು, ದಂಡದ ಹಣದಲ್ಲಿ ದೂರುದಾರರಾದ ರಾಮಾಂಜಿಗೆ 75 ಸಾವಿರ ರೂ.ಗಳನ್ನು ಪರಿಹಾರವಾಗಿ ನೀಡಲು ಆದೇಶಿಸಿದರು. ಸರ್ಕಾರದ ಪರವಾಗಿ ಅಭಿಯೋಜಕ ಬಿ.ಎಂ. ನಿರಂಜನಮೂರ್ತಿ ವಾದ ಮಂಡಿಸಿದ್ದರು. ಇದನ್ನೂ ಓದಿ: ಸ್ತ್ರೀ ನಿಂದನೆ, ಶೋಷಣೆ ಬಿಜೆಪಿಯವರ ಹುಟ್ಟುಗುಣ- ಗುಂಡೂರಾವ್ ಟೀಕೆ

    Live Tv
    [brid partner=56869869 player=32851 video=960834 autoplay=true]

  • ತೋಟದ ಕೆಲಸ ಮಾಡುವಂತೆ ತಂದೆ ಒತ್ತಡ – ಮಗ ಆತ್ಮಹತ್ಯೆ

    ತೋಟದ ಕೆಲಸ ಮಾಡುವಂತೆ ತಂದೆ ಒತ್ತಡ – ಮಗ ಆತ್ಮಹತ್ಯೆ

    ತುಮಕೂರು: ತಂದೆ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಣಿಗಲ್(Kunigal)  ತಾಲೂಕಿನಲ್ಲಿ ನಡೆದಿದೆ.

    ಕುಣಿಗಲ್ ತಾಲೂಕಿನ ಗಂಗೇನಹಳ್ಳಿ (Gangenahalli) ಗ್ರಾಮದ ಸುಹೇಲ್ ಖಾನ್ (21) ಮೃತ ದುರ್ದೈವಿ. ಮನೆಯಲ್ಲೇ ಇದ್ದ ಸುಹೇಲ್‍ಗೆ ಅಡಿಕೆ ಕೀಳುವ ಕೆಲಸಕ್ಕೆ ಹೋಗುವಂತೆ ತಂದೆ ಬುದ್ದಿವಾದ ಹೇಳಿದ್ದಾರೆ. ಇದರಿಂದ ಮನನೊಂದ ಯುವಕ ಗ್ರಾಮದ ಗಂಗಣ್ಣ ಎಂಬುವರ ಅಡಿಕೆ ತೋಟಕ್ಕೆ ಹೋಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ : ಅಡಿಕೆ ಬೆಳೆಯ ಎಲೆ ಚುಕ್ಕೆ ರೋಗ ಬಾಧೆ ಹಾವಳಿ ಬಗ್ಗೆ ಕೇಂದ್ರಕ್ಕೆ ನಿಯೋಗ – ಆರಗ ಜ್ಞಾನೇಂದ್ರ

    ವಿಷ ಸೇವಿಸಿ ತೀವ್ರ ಅಸ್ವಸ್ಥನಾಗಿದ್ದ ಯುವಕನನ್ನು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ತುಮಕೂರಿಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಕಿಡ್ನ್ಯಾಪ್‌ ಕಥೆ ಕಟ್ಟಿದ್ಳು – ಬಾಲಕಿ ಮಾಸ್ಟರ್‌ಮೈಂಡ್‌ಗೆ ಪೊಲೀಸರೇ ಶಾಕ್‌

    Live Tv
    [brid partner=56869869 player=32851 video=960834 autoplay=true]

  • ಮುಸ್ಲಿಮರಲ್ಲೂ ಜಾತಿ ಪದ್ಧತಿ – ಪಿಂಜಾರ, ನದಾಫ್ ಉಪಜಾತಿಗೆ ವಿಶೇಷ ಮೀಸಲಾತಿ ಕೊಡಲು ಒತ್ತಾಯ

    ಮುಸ್ಲಿಮರಲ್ಲೂ ಜಾತಿ ಪದ್ಧತಿ – ಪಿಂಜಾರ, ನದಾಫ್ ಉಪಜಾತಿಗೆ ವಿಶೇಷ ಮೀಸಲಾತಿ ಕೊಡಲು ಒತ್ತಾಯ

    ತುಮಕೂರು: ಹಿಂದೂ ಧರ್ಮದಲ್ಲಿ ಮಾತ್ರ ಜಾತಿ ಪದ್ಧತಿ ಎನ್ನಲಾಗುತ್ತಿದ್ದರೂ, ಅದೇ ರೀತಿ ಇಸ್ಲಾಂ ಧರ್ಮದಲ್ಲೂ ಜಾತಿ- ಉಪಜಾತಿಗಳು ಇವೆ. ಇದಕ್ಕೆ ಪುಷ್ಠಿ ನೀಡುವಂತೆ ಮುಸ್ಲಿಂ ಸಮುದಾಯದಲ್ಲಿನ ಪಿಂಜಾರ ಮತ್ತು ನದಾಫ್ ಉಪಜಾತಿಗಳು ವಿಶೇಷ ಮೀಸಲಾತಿಗಾಗಿ (Reservation) ಸರ್ಕಾರಕ್ಕೆ ಆಗ್ರಹಿಸಿದೆ.

    ಇಸ್ಲಾಂ ಧರ್ಮದಲ್ಲಿನ ಉಪಜಾತಿಗಳಾದ ಪಿಂಜಾರ ಮತ್ತು ನದಾಫ್ ಪಂಗಡಗಳಿಗೆ ಪ್ರವರ್ಗ 1ರ ಮೀಸಲಾತಿ ಕೊಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಮುಸ್ಲಿಂ ಸಮುದಾಯದಲ್ಲಿರುವ ಪಿಂಜಾರ, ನದಾಫ್ ಉಪಜಾತಿಯವರಿಗೆ ಪ್ರವರ್ಗ 1ರ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿ ಕೊರಟಗೆರೆ ತಹಸೀಲ್ದಾರ್ ನಹಿದ ಜಂಜಂ ಅವರಿಗೆ ಜಿಲ್ಲಾ ಪಿಂಜಾರ, ನದಾಫ್ ಸಂಘದ ಸದಸ್ಯರು ಮನವಿ ಸಲ್ಲಿಸಿದರು.

    ನಂತರ ಮಾತನಾಡಿದ ಸಂಘದ ಸದಸ್ಯರು, ಧಾರ್ಮಿಕವಾಗಿ ಇಸ್ಲಾಂ ಧರ್ಮದ ಅನುಯಾಯಿಗಳಾಗಿರುವ ಪಿಂಜಾರ, ನದಾಫ್ ಸಮುದಾಯದವರು ಶಾಲಾ ದಾಖಲಾತಿ ಪಡೆಯುವಾಗ ಮುಸ್ಲಿಂ ಎಂದಷ್ಟೇ ನಮೂದಿಸಲಾಗಿದೆ. ಉಪ ಜಾತಿ ನಮೂದಿಸಲಾಗಿಲ್ಲ. ಇದಕ್ಕೆ ಸಂಬಧಿಸಿದಂತೆ ರಾಜ್ಯ ಸರ್ಕಾರದ ಆದೇಶದಂತೆ ಪಿಂಜಾರ ಪಂಗಡದರು ಪ್ರವರ್ಗ 1ರ ಜಾತಿ ಪ್ರಮಾಣ ಪತ್ರ ಪಡೆಯಲು ಅರ್ಹರಾಗಿರುತ್ತಾರೆ ಎಂದರು. ಇದನ್ನೂ ಓದಿ: ಕಲ್ಯಾಣ ರಾವ್ ಮುಚಳಂಬಿ ಪ್ರಥಮ ಪುಣ್ಯ ಸ್ಮರಣೆ – ಐವರಿಗೆ ಕಲ್ಯಾಣಶ್ರೀ ಪ್ರಶಸ್ತಿ ಪ್ರದಾನ

    ತುಮಕೂರು (Tumkur) ಜಿಲ್ಲಾಧಿಕಾರಿಗಳ (DC) ಆದೇಶದ ಪ್ರಕಾರ ಅಲ್ಪಸಂಖ್ಯಾತರ ಆಯೋಗ ನೀಡಿರುವ ಆದೇಶದಲ್ಲಿ ಸ್ಪಷ್ಟವಾಗಿ ತಿಳಿದಿರುವಂತೆ ನಮ್ಮ ಸಂಘದ ಪ್ರಮಾಣ ಪತ್ರವನ್ನೇ ದಾಖಲೆಯನ್ನಾಗಿ ಪರಿಗಣಿಸಿ ಅಫಿಡೆವಿಟ್ ಪಡೆದುಕೊಂಡು ಜನಾಂಗಕ್ಕೆ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಭಾರೀ ಮಳೆ- KRS ಡ್ಯಾಂನ ಒಳ, ಹೊರ ಹರಿವು ಹೆಚ್ಚಳ

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ ಸಹೋದರನಿಂದ ಬ್ಲಾಕ್ ಮೇಲ್- ಜನರಿಂದ ಬಿತ್ತು ಗೂಸಾ

    ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ ಸಹೋದರನಿಂದ ಬ್ಲಾಕ್ ಮೇಲ್- ಜನರಿಂದ ಬಿತ್ತು ಗೂಸಾ

    ತುಮಕೂರು: ಮಹಾನಗರ ಪಾಲಿಕೆ ಸಿಬ್ಬಂದಿಗೆ ಬ್ಲಾಕ್ ಮೇಲ್ ಮಾಡಿದ್ದ ಆರೋಪದ ಮೇರೆಗೆ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ (Manju Pavagada) ಸಹೋದರ ಪ್ರದೀಪ್‍ಗೆ ಧರ್ಮದೇಟು ಹಾಕಿದ್ದಾರೆ.

    ಪ್ರದೀಪ್ ಸದ್ಯಕ್ಕೆ ವಾರಪತ್ರಿಕೆಯೊಂದರ ಸಂಪಾದಕನಾಗಿ ಕೆಲಸ ಮಾಡುತ್ತಿದ್ದಾನೆ. ಈತ ಸಬ್ಸಿಡಿ ಸಾಲ (Subsidized Loan) ಮಂಜೂರು ಮಾಡಿಕೊಡುವಂತೆ ನಗರ ಜೀವನೋಪಾಯ ಕೇಂದ್ರಕ್ಕೆ ಹೋಗಿದ್ದ. ಈ ವೇಳೆ ಲಂಚದಾಸೆ ತೋರಿಸಿ ವೀಡಿಯೋ ಮಾಡಿಕೊಂಡಿದ್ದ. ಬಳಿಕ ಈ ವೀಡಿಯೋ ತೋರಿಸಿ ನಗರ ಜೀವನೋಪಾಯ ಕೇಂದ್ರದಲ್ಲಿ ಸಿಆರ್‌ಸಿ ಆಗಿ ಕೆಲಸ ಮಾಡುತ್ತಿದ್ದ ಯುವತಿಗೆ ನಿರಂತರ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: PFIನಿಂದ ಬೆದರಿಕೆ – ಐವರು RSS ನಾಯಕರಿಗೆ Y ಭದ್ರತೆ

    ಘಟನೆ ಕುರಿತು ನಿನ್ನೆ ಸಂಜೆ ಆ ಯುವತಿ ಕೆಲಸ ಮಾಡುವ ಜಾಗಕ್ಕೆ ಬಂದು ಬೆದರಿಕೆ ಹಾಕುತ್ತಿದ್ದಾಗ ಅಲ್ಲಿದ್ದವರು ಧರ್ಮದೇಟು ಹಾಕಿದ್ದಾರೆ. ಅಷ್ಟೇ ಅಲ್ಲದೇ ಮಹಾನಗರ ಪಾಲಿಕೆ ಆವರಣದಲ್ಲಿ ಪ್ರದೀಪ್‍ನ ಜೊತೆ ಬಂದಿದ್ದ ನಕಲಿ ಪತ್ರಕರ್ತರು ಸೇರಿ ಹ್ಯೂಮನ್ ರೈಟ್ಸ್ ಎಂದು ಹೇಳಿಕೊಂಡು ಬಂದವರಿಗೂ ಗೂಸಾ ಬಿದ್ದಿದೆ. ಘಟನೆಗೆ ಸಂಬಂಧಿಸಿ ಬ್ಲಾಕ್ ಮೇಲ್‍ಗೆ ಮುಂದಾಗಿದ್ದ ನಾಲ್ವರು ತುಮಕೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತುಮಕೂರು (Tumkur) ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕರ್ನಾಟಕದ ಜನರಿಗೆ ಪವರ್ ಸ್ಟ್ರೋಕ್ – ನವರಾತ್ರಿ ಹಬ್ಬಕ್ಕೆ ಕರೆಂಟ್ ಶಾಕ್ ಗಿಫ್ಟ್

    Live Tv
    [brid partner=56869869 player=32851 video=960834 autoplay=true]

  • ಕ್ಷುಲಕ ವಿಚಾರಕ್ಕೆ ಯುವಕನಿಗೆ ಥಳಿಸಿದ ಬಿಜೆಪಿ ಪುರಸಭಾ ಸದಸ್ಯ, ಪತ್ನಿ

    ಕ್ಷುಲಕ ವಿಚಾರಕ್ಕೆ ಯುವಕನಿಗೆ ಥಳಿಸಿದ ಬಿಜೆಪಿ ಪುರಸಭಾ ಸದಸ್ಯ, ಪತ್ನಿ

    ತುಮಕೂರು: ಕ್ಷುಲ್ಲಕ ವಿಚಾರಕ್ಕೆ ಬಿಜೆಪಿ(BJP) ಪುರಸಭಾ ಸದಸ್ಯ ಹಾಗೂ ಆತನ ಪತ್ನಿ ಯುವಕನೊಬ್ಬನಿಗೆ ಥಳಿಸಿರುವ ಘಟನೆ ತುಮಕೂರು(Tumakuru) ಜಿಲ್ಲೆಯ ಗುಬ್ಬಿ ಪಟ್ಟಣದ ಸುಭಾಷ್ ನಗರದಲ್ಲಿ ನಡೆದಿದೆ.

    ನಗರದಲ್ಲಿ ಯುವಕರು ಗಣಪತಿ ವಿಸರ್ಜನೆ ಮಾಡಿ, ವಾಪಸ್ಸಾಗುತ್ತಿದ್ದ ವೇಳೆ ಕಾರ್ಪೋರೇಟರ್ ಕೃಷ್ಣಮೂರ್ತಿ ಹಾಗೂ ಆತನ ಪತ್ನಿ ಯುವಕನೊಬ್ಬನಿಗೆ ಥಳಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: ಬೆಂಗಳೂರಿನ ಎಕೋಸ್ಪೇಸ್‍ನಲ್ಲಿ ಮುಳುಗಿದ 40 ಐಷಾರಾಮಿ ಕಾರುಗಳು!

    ಕಾರ್ಪೋರೇಟರ್ ಹಾಗೂ ಆತನ ಪತ್ನಿ ಯುವಕನಿಗೆ ಥಳಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಗಣೇಶ ವಿಸರ್ಜನೆಯಲ್ಲಿ ಗಲಾಟೆ- ಯುವಕನ ಕೊಲೆಯಲ್ಲಿ ಅಂತ್ಯ

    Live Tv
    [brid partner=56869869 player=32851 video=960834 autoplay=true]

  • ಗಣೇಶ ವಿಸರ್ಜನೆ ವೇಳೆ ವಿದ್ಯಾರ್ಥಿ ಸಾವು

    ಗಣೇಶ ವಿಸರ್ಜನೆ ವೇಳೆ ವಿದ್ಯಾರ್ಥಿ ಸಾವು

    ತುಮಕೂರು: ಗಣೇಶ ವಿಸರ್ಜನೆ ವೇಳೆ ವಿದ್ಯಾರ್ಥಿ ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

    ತುಮಕೂರು ನಗರದ ಭೀಮಸಂದ್ರ ಮೂಲದ ಚೇತನ್(15) ಮೃತ ವಿದ್ಯಾರ್ಥಿ. ತುಮಕೂರು ತಾಲೂಕು ಮುದಿಗೆರೆ ಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಚೇತನ್ ಎವೆರೆಸ್ಟ್ ಇಂಗ್ಲಿಷ್ ಮೀಡಿಯಮ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದರು. ಗಣೇಶ ವಿಸರ್ಜನೆ ಮಾಡುವುದಕ್ಕೆ ಶಾಲೆಯ ಆಡಳಿತ ಮಂಡಳಿಯು ಚೇತನನ್ನು ಕಟ್ಟೆಗೆ ಇಳಿಸಿತ್ತು. ಇದನ್ನೂ ಓದಿ: ಕಾರವಾರ: ವರ್ಷಕ್ಕೊಮ್ಮೆ ದರ್ಶನ ನೀಡುವ ಸಾತೇರಿ ದೇವರ ಜಾತ್ರೆ ಆರಂಭ

    crime

    ಗಣೇಶ ವಿಸರ್ಜನೆ ವೇಳೆ ಈಜು ಬಾರದ ಚೇತನ್ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬೆಳ್ಳಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ನಮ್ಮ ಹೊಸ ಪಕ್ಷಕ್ಕೆ ಜಮ್ಮು-ಕಾಶ್ಮೀರದ ಜನರೇ ಹಿಂದೂಸ್ತಾನಿ ಹೆಸರಿಡಲಿ: ಆಜಾದ್‌

    Live Tv
    [brid partner=56869869 player=32851 video=960834 autoplay=true]

  • ಲಕ್ಷ್ಮೀನಾರಾಯಣ ಕಾಂಗ್ರೆಸ್‌ಗೆ ರಾಜೀನಾಮೆ- ಬಿಜೆಪಿ ಸೇರಲು ಸಿದ್ಧ

    ಲಕ್ಷ್ಮೀನಾರಾಯಣ ಕಾಂಗ್ರೆಸ್‌ಗೆ ರಾಜೀನಾಮೆ- ಬಿಜೆಪಿ ಸೇರಲು ಸಿದ್ಧ

    ತುಮಕೂರು: ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಪಕ್ಷಕ್ಕೆ ವಿದಾಯ ಹೇಳಿದ್ದು, ಬಿಜೆಪಿ ಸೇರಲು ಸಜ್ಜಾಗಿದ್ದಾರೆ.

    ಕಾಂಗ್ರೆಸ್ ಪಕ್ಷದ ಇತ್ತೀಚಿನ ನಡವಳಿಕೆಯಿಂದ ಬೇಸತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಹೇಳಿದರು.

    ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ವರ್ಷಗಳಿಂದ ಬಿಜೆಪಿಯಲ್ಲಿ ಕೆಲಸ ಮಾಡಿದ್ದೆ. ನಂತರ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದೆ. ಕಳೆದ 5 ವರ್ಷಗಳಿಂದ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಅಧ್ಯಕ್ಷನಾಗಿ ಪಕ್ಷ ನೀಡಿದ ಜವಾಬ್ದಾರಿ ನಿರ್ವಹಿಸಿದ್ದೇನೆ. ಎಲ್ಲಾ ಜಿಲ್ಲೆ, ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಹಿಂದುಳಿದ ವರ್ಗಗಳಲ್ಲಿ ಬರುವ 197 ಜಾತಿಗಳ ಪ್ರಮುಖರು ಹಾಗೂ ಸಮುದಾಯಗಳನ್ನು ಗುರುತಿಸಿ ಸಂಘಟನೆ ಮಾಡಿದ್ದೇನೆ. ಆ ಮೂಲಕ ಪಕ್ಷವನ್ನು ಬಲಪಡಿಸುವ ನಿಟ್ಟಿಲ್ಲಿ ಕೆಲಸ ಮಾಡಿದೆ ಎಂದರು. ಇದನ್ನೂ ಓದಿ: ಪಾದಪೂಜೆ ಪಾಲಿಟಿಕ್ಸ್- ಅತ್ತ ಬಿಜೆಪಿ ಶಾಸಕ, ಇತ್ತ ಕೈ ಮುಖಂಡನಿಂದ ಪೌರಕಾರ್ಮಿಕರಿಗೆ ಪಾದಪೂಜೆ

    ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಿಲುವು ಹಿಂದುತ್ವದ ವಿರೋಧಿಯಾಗಿದ್ದು, ಯಾವುದೇ ಹಿಂದೂ ಸಂಘಟನೆಗಳನ್ನು ಮೂಲೆ ಗುಂಪು ಮಾಡುವಲ್ಲಿ ತೆಗೆದುಕೊಂಡ ನಿರ್ಣಯವನ್ನು ವಿರೋಧಿಸಿದ್ದೆ. ಹಿಂದೆ ನಾನು ಸಂಘ ಪರಿವಾರದ ಮೂಲಕ ಬಂದಿದ್ದು, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷನಾಗಿ ಅನೇಕ ಹಿಂದೂ ಸಂಘನೆಗಳೊಂದಿಗೆ ಕೆಲಸ ಮಾಡಿರುವೆ ಎಂದು ತಿಳಿಸಿದರು.

    Congress

    ಕಾಂಗ್ರೆಸ್‌ನ ನಾಯಕರ ಜೊತೆ ಈ ಬಗ್ಗೆ ಚರ್ಚಿಸಿದಾಗ ಆರ್‌ಎಸ್‌ಎಸ್ ಮೂಲದ ವ್ಯಕ್ತಿಗಳು ಪಕ್ಷದಲ್ಲಿ ಹೊಂದಾಣಿಕೆಯಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಮಾತುಗಳು ಹೊರಬಂದ ನಂತರ ನನ್ನ ರಾಜಕೀಯ ಭವಿಷ್ಯ ಮತ್ತು ಮುಂದಿನ ದಾರಿಗಳ ಬಗ್ಗೆ ಚಿಂತಿಸಿದೆ ಎಂದು ಸ್ಪಷ್ಟಪಡಿಸಿದರು.

    ತುರುವೇಕೆರೆ ವಿಧಾಸಭಾ ಕ್ಷೇತ್ರದಿಂದ ನನ್ನನ್ನು ಹಿಂದೆ ಆಯ್ಕೆ ಮಾಡಿ ಕಳುಹಿಸಿದ ಅಭಿಮಾನಿಗಳ ಜೊತೆಗೆ ಚರ್ಚಿಸಿದೆ. ಕಳೆದ 20 ವರ್ಷಗಳಿಂದ ನೇಕಾರ ಸಮಾಜದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ರಾಜ್ಯದ ಎಲ್ಲಾ ನೇಕಾರ ಬಂಧುಗಳು, ಹಿಂದುಳಿದ ವರ್ಗಗಳ ಎಲ್ಲ ಪ್ರಮುಖರು ಹಾಗೂ ಹಿಂದುಳಿದ ನಾಯಕರ ಜತೆ ಚರ್ಚಿಸಿದೆ. ಅವರು ನನಗೆ ಸ್ಪಷ್ಟ ಸಲಹೆ ಕೊಟ್ಟರು ಎಂದು ಹೇಳಿದರು.

    bjP

    ಹಿಂದೆ ಬಿಜೆಪಿಯಲ್ಲಿ ಶಾಸಕನಾಗಿ, ವಿಧಾನ ಪರಿಷತ್ ಸದಸ್ಯನಾಗಿ, ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿ ಕೆಲಸ ಮಾಡಲು ಕಾರಣೀಭೂತರಾದ ಬಿಜೆಪಿಗೆ ಪುನಃ ಮರಳಬೇಕೆಂದು ತೀರ್ಮಾನಿಸಿದೆ. ಜತೆಗೆ ಹಿಂದುಳಿದ ವರ್ಗದ ರಾಜ್ಯಧ್ಯಕ್ಷನಾಗಿ 5 ವರ್ಷ ತುಂಬಿದ ಸಂರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ನಡೆವಳಿಕೆ ವಿರೋಧಿಸಿ ಗೌರಿ, ಗಣೇಶ ಹಬ್ಬದ ದಿನವೇ ರಾಜೀನಾಮೆ ನೀಡುತ್ತಿದ್ದೇನೆ ಎಂದು ಕಿಡಿಕಾರಿದರು.

    ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅವರು ಕೊಟ್ಟ ದಿನಾಂಕದಂದು ಬಿಜೆಪಿ ಸೇರುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಅಗ್ನಿಪಥ್ ದೈಹಿಕ ಪರೀಕ್ಷೆಗೆ ಪದವಿ ಪರೀಕ್ಷೆ ಅಡ್ಡಿ – 20 ದಿನ ಪದವಿ ಪರೀಕ್ಷೆ ಮುಂದೂಡಲು ಆಗ್ರಹ

    Live Tv
    [brid partner=56869869 player=32851 video=960834 autoplay=true]

  • ಮತಾಂತರಕ್ಕೆ ಯತ್ನಿಸಿದ್ದ ಅರ್ಚಕ ಮರಳಿ ಹಿಂದೂ ಧರ್ಮಕ್ಕೆ ವಾಪಸ್

    ಮತಾಂತರಕ್ಕೆ ಯತ್ನಿಸಿದ್ದ ಅರ್ಚಕ ಮರಳಿ ಹಿಂದೂ ಧರ್ಮಕ್ಕೆ ವಾಪಸ್

    ತುಮಕೂರು: ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುತ್ತೇನೆ ಎಂದಿದ್ದ ಅರ್ಚಕರೊಬ್ಬರು ವಾಪಸ್ ಹಿಂದೂ ಧರ್ಮಕ್ಕೆ ಬಂದಿರುವ ಘಟನೆ ತುಮಕೂರು ಗ್ರಾಮಾಂತರ ಹೀರೇಹಳ್ಳಿಯಲ್ಲಿ ನಡೆದಿದೆ.

    ಹೀರೇಹಳ್ಳಿಯ ಓಂಕಾರೇಶ್ವರ ದೇವಸ್ಥಾನದ ಅರ್ಚಕ ಎಚ್. ಆರ್. ಚಂದ್ರಶೇಖರಯ್ಯ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದೇನೆ. ಹೆಸರನ್ನು ಮುಬಾರಕ್ ಪಾಷಾ ಎಂದು ಬದಲಾಯಿಸಿಕೊಂಡಿದ್ದೇನೆ ಎಂದು ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟಿದ್ದರು.

    ಮತಾಂತರಕ್ಕೆ ಯತ್ನಿಸುವ ಮೊದಲಿನಿಂದಲೂ ಮುಸ್ಲಿಂ ಸಮುದಾಯದ ಏರಿಯಾದಲ್ಲೇ ಮನೆಕಟ್ಟಿಕೊಂಡಿದ್ದ ಇವರು ತುಮಕೂರು ಗ್ರಾಮಾಂತರದ ಜೆಡಿಎಸ್ ಮುಖಂಡ ತನ್ವಿರ್ ಸೇರಿದಂತೆ ಹಲವು ಮುಖಂಡರ ಜೊತೆ ಹೆಚ್ಚಿನ ಒಡನಾಟ ಹೊಂದಿದ್ದರು. ಹಾಗಾಗಿ ಮಸೀದಿಗೆ ಹೋಗಿ ಮತಾಂತರವಾಗಲು ನಿರ್ಧರಿಸಿದ್ದರು. ಇದನ್ನೂ ಓದಿ: ಮದುವೆ ಮನೆಯಲ್ಲಿ ನವಜೋಡಿಗೆ ಸಾವರ್ಕರ್ ಫೋಟೋ ಗಿಫ್ಟ್

    ಮತಾಂತರ ಯತ್ನದ ಸುದ್ದಿ ಕೇಳುತ್ತಿದ್ದಂತೆ ಮಾಜಿ ಸಚಿವ ಬಿಜೆಪಿ ಮುಖಂಡ ಸೊಗಡು ಶಿವಣ್ಣ ಮನೆಗೆ ದೌಡಾಯಿಸಿದ್ದರು. ಅದಾದ ಬಳಿಕ ಸೊಗಡು ಶಿವಣ್ಣರ ಮನವೊಲಿಕೆ ಹಾಗೂ ಮುಂಜಿಗೆ ಅಂಜಿ ಹಿಂದೂ ಧರ್ಮಕ್ಕೆ ವಾಪಸ್ ಆಗಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಚಂದ್ರಶೇಖರ್, ಸಹೋದರರ ನಡುವಿನ ಆಸ್ತಿ ಜಗಳದಿಂದ ಬೇಸತ್ತಿದ್ದೆ. ಯಾರೂ ನನ್ನ ಸಹಾಯಕ್ಕೆ ಬರುವುದಿಲ್ಲ. ಶವ ಸಂಸ್ಕಾರ ಮಾಡುವುದಿಲ್ಲ ಎಂದು ಮನನೊಂದು ಕಾನೂನು ಪ್ರಕಾರವಾಗಿಯೇ ಮತಾಂತರ ಆಗಲು ಬಯಸಿದ್ದೆ. ಆದರೆ ಮುಂಜಿ ಮಾಡಿದರೆ ಮಾತ್ರ ಮುಸ್ಲಿಮರಲ್ಲಿ ಶವ ಸಂಸ್ಕಾರ ಮಾಡಲಾಗುತ್ತದೆ. ನನಗೆ ಸಕ್ಕರೆ ಕಾಯಿಲೆ ಇರುವುರಿಂದ ಮುಂಜಿ ಮಾಡಲು ನಾನು ಹೆದರಿದ್ದೆ. ಇದರಿಂದಾಗಿ ಮತಾಂತರವಾಗಿಲ್ಲ. ಇನ್ನೂ ಮುಂದು ಮತಾಂತರಕ್ಕೆ ಪ್ರಯತ್ನಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್‌ಗೆ ಜೀವ ಬೆದರಿಕೆ- ಶಿರಚ್ಛೇದನ ಮಾಡುವುದಾಗಿ ಫೇಸ್‍ಬುಕ್‍ನಲ್ಲಿ ಪೋಸ್ಟ್

    Live Tv
    [brid partner=56869869 player=32851 video=960834 autoplay=true]