Tag: tumkur

  • ತುಮಕೂರಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ 33 ಷರತ್ತುಗಳು

    ತುಮಕೂರಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ 33 ಷರತ್ತುಗಳು

    ತುಮಕೂರು: ಗೌರಿ-ಗಣೇಶ ಮೂರ್ತಿ (Ganesha Idol) ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಸಮಯದಲ್ಲಿ ಆಯೋಜಕರು ಜಿಲ್ಲಾಧಿಕಾರಿಗಳ (Tumkur DC) ಆದೇಶದಂತೆ ಪ್ರಸಾದ ವಿತರಿಸಲು ಕಡ್ಡಾಯವಾಗಿ ಸಮಿತಿಯಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ತಿಪಟೂರು ತಾಲೂಕು ದಂಡಾಧಿಕಾರಿ ಪವನ್‌ಕುಮಾ‌ರ್ ತಿಳಿಸಿದ್ದಾರೆ.

    ತಾಲ್ಲೂಕು ಆಡಳಿತ ಸೌಧದಲ್ಲಿ ಗೌರಿ-ಗಣೇಶ ಮೂರ್ತಿ (Gowri Ganesha Idol) ಪ್ರತಿಷ್ಠಾಪನೆಗೆ ಸಂಬಧಿಸಿದಂತೆ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ನೆಡಸಿ ವಿವಿಧ ಇಲಾಖೆಗಳ ವತಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ನಗರ ವ್ಯಾಪ್ತಿಯಲ್ಲಿ ನಗರಸಭೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಆಯಾ-ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಏಕ ಗವಾಕ್ಷಿ ತಂತ್ರಾಶಗಳ ಮೂಲಕ ಅನುಮತಿ ಪಡೆಯಬೇಕು ಎಂದು ದಂಡಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪುಂಡರಿಂದ ವ್ಹೀಲಿಂಗ್‌ ಹುಚ್ಚಾಟ; ಬೈಕ್‌ಗಳನ್ನು ಕಿತ್ತುಕೊಂಡು ಫ್ಲೈಓವರ್‌ನಿಂದ ಎಸೆದ ಸಾರ್ವಜನಿಕರು

    ಏನು ಆ 33 ಷರತ್ತುಗಳು?
    ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಗಣೇಶ ಮೂರ್ತಿ ಪ್ರತಿಷ್ಟಾಪನೆ ಸಂದರ್ಭದಲ್ಲಿ ವಾಹನ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗದಂತೆ ಗಣೇಶ ಮಂಟಪದಲ್ಲಿ ನಿರ್ಮಿಸಬೇಕು. ಮಂಟಪದ ಹತ್ತಿರ ನೀರು, ಮರಳು ಸಂಗ್ರಹಿಸಬೇಕು. ಗಣೇಶ ಮಂಟಪದ ಹತ್ತಿರ ಬೆಳಕಿನ ವ್ಯವಸ್ಥೆ ಆಯೋಜನೆ, ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳನ್ನು ವಿದ್ಯುತ್ ಕಂಬ, ದೂರವಾಣಿ ಕಂಬಗಳಿಗೆ ಆಳವಡಿಸದಂತೆ ಎಚ್ಚರಿಕೆ ವಹಿಸಬೇಕು. ಜನಸಂದಣಿ ನಿಯಂತ್ರಿಸಲು ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಸಾಲುಗಳಿರಬೇಕು. ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಧ್ವನಿವರ್ಧಕಗಳನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಉಪಯೋಗಿಸಬೇಕು.

    ಡಿಜೆ ಹಾಗೂ ಪ್ರಚೋದನಕಾರಿ ಭಾಷಣಗಳಿಗೆ ಅವಕಾಶ ಇರುವುದಿಲ್ಲ, ಮಂಟಪಗಳ ಹತ್ತಿರ ಆಕ್ರಮ ಮಧ್ಯ ಸೇವನೆ ಮಾಡುವುದನ್ನು ಕಡ್ಡಾಯವಾಗಿ ನಿಯಂತ್ರಿಸಲಾಗಿದೆ. ಗಣಪತಿ ಮಂಟಪದ ಹತ್ತಿರ ಪ್ರಥಮ ಚಿಕಿತ್ಸಾ ಪಟ್ಟಿಗೆ ಇಡುವುದು, ಪಿಒಪಿ ಮತ್ತು ಬಣ್ಣಲೇಪಿತ ಗಣೇಶಗಳನ್ನು ಹೊರತುಪಡಿಸಿ ಮಣ್ಣಿನಿಂದ ಮಾಡಿರುವ ಗಣಪತಿಯನ್ನು ಸ್ಥಾಪನೆಗೆ ಅವಕಾಶ ಮಾಡಿಕೊಡುವುದು. ಇದನ್ನೂ ಓದಿ: ಕಂಠಪೂರ್ತಿ ಕುಡಿದು ಕಿರಿಕ್ – ಊಟ ನೀಡದ್ದಕ್ಕೆ ಡಾಬಾ ಮಾಲೀಕನಿಗೆ ಚಾಕು ಇರಿತ

    ನಗರ ಸಭೆಯಿಂದ ಸೂಚಿಸಿರುವ ಕೆರೆಯ ಆವರಣದ ಕಲ್ಯಾಣಿಯಲ್ಲಿ ಗಣಪತಿ ವಿಸರ್ಜನೆ ಮಾಡಬೇಕು ಹಾಗೂ ಪಂಚಾಯಿತಿಯ ಪಿಡಿಒ ತಿಳಿಸಿರುವಂತೆ ಗಣಪತಿಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ವಿಸರ್ಜನೆ ಮಾಡಲು ಅವಕಾಶ ಮಾಡಬೇಕು. ಪ್ರಸಾದ ವಿನಿಯೋಗ ಸಮಯದಲ್ಲಿ ಎಚ್ಚರಿಕೆ ವಹಿಸಬೇಕು ಮತ್ತು ಇಲಾಖೆ ವತಿಯಿಂದ ಅನುಮತಿ ಪಡೆದುಕೊಳ್ಳಬೇಕು. ಕಳೆದ ಸಾಲಿನಲ್ಲಿ 133 ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ.

    ಸಭೆಯಲ್ಲಿ ನಗರಸಭೆ ಪೌರಯುಕ್ತ ವಿಶ್ವೇಶ್ವರಯ್ಯ ಬದರಗಡೆ, ತಾಪಂ ಇಒ ಸುದರ್ಶನ್, ನಗರ ಆರಕ್ಷಕ ಅಧಿಕಾರಿ ವೆಂಕಟೇಶ್, ಬೆಸ್ಕಾಂ ಎಇಇ ಮನೋಹರ್, ತೋಟಗಾರಿಕೆ ಅಧಿಕಾರಿ ಚಂದ್ರಶೇಖರ್, ಆರ್‌ಟಿಒ ಅಧಿಕಾರಿ ಭಗವಂತ್ ದಾಸ್, ತಾಲೂಕು ಆರೋಗ್ಯ ಅಧಿಕಾರಿ ಕೃಷ್ಣಮೂರ್ತಿ, ಅಗ್ನಿಶಾಮಕ ದಳದ ಭರತ್ ಹಾಜರಿದ್ದರು. ಇದನ್ನೂ ಓದಿ: ಜಲ ಜೀವನ್ ಮಿಷನ್‌ ಯೋಜನೆಯಲ್ಲೂ ಅಕ್ರಮ ಆರೋಪ – 116 ಟೆಂಡ‌ರ್ ಹಣ ಮುಟ್ಟುಗೋಲು

  • ಜಲ ಜೀವನ್ ಮಿಷನ್‌ ಯೋಜನೆಯಲ್ಲೂ ಅಕ್ರಮ ಆರೋಪ – 116 ಟೆಂಡ‌ರ್ ಹಣ ಮುಟ್ಟುಗೋಲು

    ಜಲ ಜೀವನ್ ಮಿಷನ್‌ ಯೋಜನೆಯಲ್ಲೂ ಅಕ್ರಮ ಆರೋಪ – 116 ಟೆಂಡ‌ರ್ ಹಣ ಮುಟ್ಟುಗೋಲು

    ತುಮಕೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣ (MUDA Scam) ಹಾಗೂ ಕೋವಿಡ್‌ ಹಗರಣ ರಾಜ್ಯದಲ್ಲಿ ಸದ್ದು ಮಾಡುತ್ತಿವೆ. ಈ ಹೊತ್ತಿನಲ್ಲಿ ಕೇಂದ್ರ ಸರ್ಕಾರದ ಜಲ್‌ ಜೀವನ್‌ ಮೀಷನ್‌ ಯೋಜನೆಯಲ್ಲೂ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ.

    ಜಲ ಜೀವನ್ ಮಿಷನ್ (JJM) ಯೋಜನೆಯಲ್ಲಿ ಗುಣಮಟ್ಟದ ಕೆಲಸ ನಿರ್ವಹಿಸದ 116 ಕಾಮಗಾರಿಗಳ ಟೆಂಡ‌ರ್ ಹಣವನ್ನು ಈವರೆಗೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದ್ದಾರೆ. ಇದನ್ನೂ ಓದಿ: ಉಡುಪಿ | ಸಮುದ್ರದಲ್ಲಿ ಮುಳುಗುತ್ತಿದ್ದ ಮೀನುಗಾರ – ಸತತ 1 ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಣೆ

    ಜೆಜೆಎಂ ಯೋಜನೆಯಲ್ಲಿ ಅಕ್ರಮಗಳು ನಡೆದಿರುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಸ್ಪಷ್ಟನೆ ನೀಡಿದ್ದಾರೆ. ಕಳಪೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: MUDA Scam | ಕೋರ್ಟ್ ತೀರ್ಮಾನದ ಮೇಲೆ ಸಿಎಂ ಭವಿಷ್ಯ – ಕೋವಿಡ್ ಹಗರಣ ವರದಿಗೆ ಉತ್ತರ ಕೊಡ್ತೇವೆ: ಬೊಮ್ಮಾಯಿ

    ಜೆಜೆಎಂ ಯೋಜನೆಯಲ್ಲಿ ಕಳಪೆ ಗುಣಮಟ್ಟದ ಕಾಮಗಾರಿ ನಿರ್ವಹಿಸಿರುವ ಬಗ್ಗೆ ವ್ಯಾಪಕವಾಗಿ ದೂರುಗಳು ಬಂದ ನಂತರ ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಂಜಿನಿಯರುಗಳ ನೇತೃತ್ವದ ತಂಡ ತುಮಕೂರು, ಕೊರಟಗೆರೆ ತಾಲ್ಲೂಕಿಗೆ ಭೇಟಿನೀಡಿ ಪರಿಶೀಲನೆ ನಡೆಸಿದೆ. ತನಿಖೆಯ ವರದಿ ಆಧಾರದ ಮೇಲೆ ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಮದುವೆಯಾಗೋದಾಗಿ ನಂಬಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ – ಉಪನ್ಯಾಸಕ ವಶಕ್ಕೆ

  • Tumkur | ಹೊಸ ಮೆಮು ರೈಲು ಸಂಚಾರ ಆರಂಭ: ವಿ. ಸೋಮಣ್ಣ

    Tumkur | ಹೊಸ ಮೆಮು ರೈಲು ಸಂಚಾರ ಆರಂಭ: ವಿ. ಸೋಮಣ್ಣ

    – ಬೆಂಗಳೂರು-ತುಮಕೂರು-ಅರಸಿಕೆರೆ ಮಾರ್ಗಕ್ಕೆ ಬರಲಿದೆ ಆಟೋಮೆಟಿಕ್ ರೈಲ್ವೆ ಸಿಗ್ನಲ್

    ತುಮಕೂರು: ನಗರದ ರೈಲು ನಿಲ್ದಾಣದಿಂದ ಮುಂದಿನ ಹದಿನೈದು ದಿನಗಳಲ್ಲಿ ಹೊಸದಾಗಿ ಮೆಮು ರೈಲು (Memu Express Train) ಸಂಚಾರ ಆರಂಭವಾಗಲಿದೆ ಎಂದು ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ (V Somanna) ಇಲ್ಲಿ ತಿಳಿಸಿದರು.

    ರಾಜ್ಯದಲ್ಲಿ ಹೊಸದಾಗಿ ಮೂರು ಮೆಮು ರೈಲು ಆರಂಭವಾಗಲಿದ್ದು, ಇದರಲ್ಲಿ ಒಂದು ತುಮಕೂರು ನಿಲ್ದಾಣದಿಂದ (Tumkur Railway Station) ಶುರುವಾಗಲಿದೆ. ನಗರದಿಂದ ಬೆಳಗ್ಗೆ 9 ಗಂಟೆಗೆ ಹೊರಟು 10ಕ್ಕೆ ಬೆಂಗಳೂರಿನ ಯಶವಂತಪುರ ನಿಲ್ದಾಣ ತಲುಪಲಿದೆ. ಸಂಜೆ 6 ಗಂಟೆಗೆ ಯಶವಂತಪುರದಿಂದ ಹೊರಟು ಸಂಜೆ 7 ಗಂಟೆಗೆ ನಗರಕ್ಕೆ ಬರಲಿದೆ. ಇದರಲ್ಲಿ 1,500 ಜನ ಪ್ರಯಾಣಿಸಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ರೈಲ್ವೆ ಮಾರ್ಗದ ಸಾಮರ್ಥ್ಯ ಹೆಚ್ಚಿಸಿ ಬೆಂಗಳೂರು-ತುಮಕೂರು-ಅರಸಿಕೆರೆ ಮಾರ್ಗದಲ್ಲಿ 220 ಕೋಟಿ ರೂ. ವೆಚ್ಚದಲ್ಲಿ ಆಟೋಮೆಟಿಕ್ ರೈಲ್ವೆ ಸಿಗ್ನಲ್ ಅಳವಡಿಸುವ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಬೆಂಗಳೂರು-ತುಮಕೂರು ಭಾಗದ ಮುಂದಿನ 30 ವರ್ಷಗಳ ಬೆಳವಣಿಗೆ ದೃಷ್ಟಿಯಲ್ಲಿ ಇಟ್ಟುಕೊಂಡು ಯೋಜನೆ ರೂಪಿಸಲಾಗಿದೆ. ಇದರಿಂದ ರೈಲುಗಳ ಓಡಾಟ ಸುಲಭವಾಗುತ್ತದೆ ಎಂದು ವಿವರಿಸಿದರು. ಇದನ್ನೂ ಓದಿ: ಟ್ರೈನಿ ವೈದ್ಯೆ ಅತ್ಯಾಚಾರ & ಹತ್ಯೆ ಕೇಸ್‌; ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ

    ʻಅಮೃತ್‌ ಭಾರತ್ʼ ಯೋಜನೆಯಡಿ ರಾಜ್ಯದ 61 ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ನಗರದ ನಿಲ್ದಾಣಕ್ಕೆ 118 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಈಗಾಗಲೇ ಗುಬ್ಬಿ ನಿಲ್ದಾಣದ ಆಧುನೀಕರಣಕ್ಕೆ 7.50 ಕೋಟಿ ರೂ., ಹಾಸನದ ಶ್ರವಣಬೆಳಗೊಳ ನಿಲ್ದಾಣಕ್ಕೆ 9 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಗುಬ್ಬಿ ತಾಲ್ಲೂಕಿನ ದೊಡ್ಡಗುಣಿ ಹತ್ತಿರ ಸೈವಾಕ್ ನಿರ್ಮಾಣ ಕಾರ್ಯ ಒಂದು ತಿಂಗಳಲ್ಲಿ ಆರಂಭವಾಗಲಿದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಸದ್ಯಕ್ಕೆ ಪೊಲಿಟಿಕಲ್ ಸೇಫ್ – ಆದ್ರೆ ಮುಂದೇನು?

  • 100 ಕೋಟಿ ವೆಚ್ಚದ ನೂತನ ಬಸ್ ನಿಲ್ದಾಣಕ್ಕೆ ಕತ್ತಲೆ ಭಾಗ್ಯ; ಟಾರ್ಚ್‌ ಬೆಳಕಲ್ಲೇ ವರ್ತಕರ ವಹಿವಾಟು

    100 ಕೋಟಿ ವೆಚ್ಚದ ನೂತನ ಬಸ್ ನಿಲ್ದಾಣಕ್ಕೆ ಕತ್ತಲೆ ಭಾಗ್ಯ; ಟಾರ್ಚ್‌ ಬೆಳಕಲ್ಲೇ ವರ್ತಕರ ವಹಿವಾಟು

    – ವಿದ್ಯುತ್ ಸಂಪರ್ಕವಿಲ್ಲದೇ ಸಿಬ್ಬಂದಿ, ಪ್ರಯಾಣಿಕರು ಹೈರಾಣು

    ತುಮಕೂರು: 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಬಸ್ ನಿಲ್ದಾಣಕ್ಕೆ (Tumakuru Bus Stand) ಆರಂಭದಲ್ಲೇ ಗ್ರಹಣ ಹಿಡಿದಿದೆ. ವಿದ್ಯುತ್ (Electricity) ಸಂಪರ್ಕ ಇಲ್ಲದೇ ಕಗ್ಗತ್ತಲು ಕವಿದಿದೆ. ಪ್ರಯಾಣಿಕರು, ಸಿಬ್ಬಂದಿ ಹೈರಾಣಾಗಿದ್ದಾರೆ. ಇದನ್ನೂ ಓದಿ: ಉದ್ಘಾಟನೆ ದಿನವೇ ಬಾಗಿಲು ಮುಚ್ಚಿದ ತುಮಕೂರು KSRTC ಹೈಟೆಕ್‌ ಬಸ್ ನಿಲ್ದಾಣ!

    ಹೌದು. ಸ್ಮಾರ್ಟ್ ಸಿಟಿ ಯೋಜನೆ (Smart City Project) ಅಡಿಯಲ್ಲಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತುಮಕೂರಿನ ನೂತನ ಬಸ್ ನಿಲ್ದಾಣ ಆರಂಭದಲ್ಲೇ ಮುಗ್ಗರಿಸಿದೆ. ಬಸ್ ನಿಲ್ದಾಣದಲ್ಲಿ ಕಾಮಗಾರಿ ಸಂಪೂರ್ಣವಾಗಿ ಮುಗಿಯದಿದ್ದರೂ ಕೆಎಸ್‌ಆರ್‌ಟಿಸಿ (KSRTC) ನಿಗಮದ ಅಧಿಕಾರಿಗಳು ತರಾತುರಿಯಲ್ಲಿ ಬಸ್ ಸಂಚಾರ ಆರಂಭಿಸಿದ್ದು ಪ್ರಯಾಣಿಕರು ಇನ್ನಿಲ್ಲದಂತೆ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಶ್ರಾವಣ ಆದ್ಮೇಲೆ ಬಾಳು ಕೊಡ್ತೀನಿ ಅಂತ ಹೇಳಿ ಆಂಟಿಗೆ ವಂಚನೆ – ಪ್ರಜ್ವಲ್‌ ವಿರುದ್ಧ ದೂರು

    ಕಳೆದ ಆಗಸ್ಟ್ 27ರಂದು ಹೊಸ ಬಸ್ ನಿಲ್ದಾಣ ಆರಂಭವಾಗಿದ್ದು, ಇನ್ನೂ ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. ಇದರಿಂದ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾಗಳು ಅಳವಡಿಕೆಯಾಗಿಲ್ಲ. ಇದು ಜೇಬುಗಳ್ಳರಿಗೆ ವರದಾನವಾಗಿದ್ದು, ನಿತ್ಯ ಹತ್ತಾರು ಮಂದಿ ಪ್ರಯಾಣಿಕರು ತಮ್ಮ ಮೊಬೈಲ್, ಪರ್ಸ್ ಸೇರಿ ಇನ್ನಿತರ ಬೆಳೆಬಾಳುವ ವಸ್ತುಗಳನ್ನ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಸಿಸಿಟಿವಿ ಕಡ್ಡಾಯ – ಬೆಂಗಳೂರು ಪಿಜಿಗಳಿಗೆ ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ ಏನಿದೆ?  

    ವಿದ್ಯುತ್‌ ಸಂಪರ್ಕವಿಲ್ಲದ ಕಾರಣ ಬಸ್ ನಿಲ್ದಾಣಕ್ಕೆ ಹೈಟೆಕ್ ಲುಕ್ ನೀಡುವ ಎಸ್ಕ್ಯುಲೇಟರ್‌ಗಳು ಕೆಲಸ ಮಾಡುತ್ತಿಲ್ಲ. ಹಿರಿಯ ನಾಗರಿಕರು ಮೆಟ್ಟಿಲು ಹತ್ತಲು ಹರಸಾಹಸ ಪಡುವಂತಾಗಿದೆ. ಎರಡು ಹೊಸ ಎಟಿಎಂಗಳೂ ಪ್ರಯೋಜನಕ್ಕೆ ಬಾರದಂತಾಗಿವೆ. ಮಹಿಳೆಯರು ವಿಶ್ರಾಂತಿ ಪಡೆಯಲು ನಿರ್ಮಿಸಿರುವ ಸಖಿ ಕೊಠಡಿಯೂ ಸಾರ್ವಜನಿಕ ಬಳಕೆಗೆ ಮುಕ್ತವಾಗಿಲ್ಲ. ಇವೆಲ್ಲದರ ನಡುವೆ ಪ್ರತಿ ತಿಂಗಳು ನಿಗಮಕ್ಕೆ ಲಕ್ಷಾಂತರ ರೂ. ಬಾಡಿಗೆ ಪಾವತಿಸುವ ಅಂಗಡಿ ಮಳಿಗೆಗಳಿಗೂ ವಿದ್ಯುತ್ ಸಂಪರ್ಕ ನೀಡಿಲ್ಲ. ಹೀಗಾಗಿ ಇಲ್ಲಿನ ವರ್ತಕರು ಟಾರ್ಚ್ ಬೆಳಕಿನಲ್ಲಿ ವ್ಯಾಪಾರ ಮಾಡುವಂತಾಗಿದೆ. ಸದ್ಯಕ್ಕೆ ತಾತ್ಕಾಲಿಕ ವಿದ್ಯುತ್ ಸಂಪರ್ಕವೇ ಆಸರೆಯಾಗಿದ್ದು, ರಾತ್ರಿ ಹೊತ್ತು ಮಾತ್ರ ಸೀಮಿತ ಕಡೆಗಳಲ್ಲಿ ಮಂದಗತಿಯ ಲೈಟ್‌ಗಳನ್ನ ಆನ್ ಮಾಡಲಾಗುತ್ತಿದೆ.

    ಒಟ್ಟಿನಲ್ಲಿ ತುಮಕೂರಿನಲ್ಲಿ ಹೊಸ ಬಸ್ ನಿಲ್ದಾಣ ಸಾರ್ವಜನಿಕರಿಗೆ ಅನುಕೂಲವಾಗುವುದಕ್ಕೆ ಬದಲಾಗಿ ಅನಾನುಕೂಲವನ್ನೇ ಉಂಟು ಮಾಡುತ್ತಿದೆ. ಇನ್ನಾದರೂ ಈ ಸಮಸ್ಯೆಗೆ ಸರ್ಕಾರ ಪರಿಹಾರ ಒದಗಿಸಬೇಕು ಎಂಬುದು ಪ್ರಯಾಣಿಕರ ಆಗ್ರಹವಾಗಿದೆ. ಇದನ್ನೂ ಓದಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ – ಕುಸ್ತಿಯಲ್ಲಿ ಕಂಚು ಗೆದ್ದ ಅಮನ್ 

  • ಕೇಂದ್ರದಿಂದ ಕೊಬ್ಬರಿ ಹಣ ಬಿಡುಗಡೆ; 24 ಸಾವಿರ ರೈತರ ಖಾತೆಗೆ 346 ಕೋಟಿ ರೂ. ಜಮೆ: ಸೋಮಣ್ಣ

    ಕೇಂದ್ರದಿಂದ ಕೊಬ್ಬರಿ ಹಣ ಬಿಡುಗಡೆ; 24 ಸಾವಿರ ರೈತರ ಖಾತೆಗೆ 346 ಕೋಟಿ ರೂ. ಜಮೆ: ಸೋಮಣ್ಣ

    ತುಮಕೂರು: ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಿದ್ದ ಕೊಬ್ಬರಿ (Copra) ಬಾಕಿ ಹಣ 346.50 ಕೋಟಿ ರೂ.ಗಳನ್ನು 24,600 ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ (V Somanna) ತಿಳಿಸಿದ್ದಾರೆ.

    ಸುಮಾರು 27 ಸಾವಿರ ರೈತರಿಂದ ಒಟ್ಟು 3.15 ಲಕ್ಷ ಕ್ವಿಂಟಲ್ ಉಂಡೆ ಕೊಬ್ಬರಿಯನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲಾಗಿತ್ತು. ಜಿಲ್ಲೆಯ ರೈತರಿಗೆ (Farmers) ಒಟ್ಟು 378 ಕೋಟಿ ರೂ. ಹಣ ಪಾವತಿಸಬೇಕಿತ್ತು. ಆಗಸ್ಟ್ 5ರ ವರೆಗೆ 346.50 ಕೋಟಿ ರೂ. ಜಮೆ ಮಾಡಿಸಲಾಗಿದೆ. ಇದರಿಂದ ಶೇ.92ರಷ್ಟು ರೈತರಿಗೆ (Farmers) ಹಣ ಪಾವತಿಸಿದಂತಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಬಾಕಿ ಇರುವ 2,438 ರೈತರಿಗೆ 31.65 ಕೋಟಿ ರೂ.ಗಳನ್ನು ಪಾವತಿಸಬೇಕಿದೆ. ಬಾಕಿ ಹಣವನ್ನೂ ಪಾವತಿಸುವಂತೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: 138ಕ್ಕೆ ಆಲೌಟ್‌ – 27 ವರ್ಷಗಳಲ್ಲಿ ಭಾರತಕ್ಕೆ ಮೊದಲ ಸರಣಿ ಸೋಲು; 110 ರನ್‌ ಗೆಲುವಿನೊಂದಿಗೆ ಸರಣಿ ಗೆದ್ದ ಲಂಕಾ

    ನಾಫೆಡ್‌ನಿಂದ ರಾಜ್ಯಕ್ಕೆ 691 ಕೋಟಿ ರೂ. ಬರಬೇಕಿದ್ದು, ಶೀಘ್ರ ಹಣ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲೇ ವೈದ್ಯಕೀಯ ಕಾಲೇಜುಗಳಿಗೆ 650 ಸಹಾಯಕ ಪ್ರಾಧ್ಯಾಪಕರು, 1,200 ದಾದಿಯರ ನೇಮಕ: ಶರಣಪ್ರಕಾಶ್‌ ಪಾಟೀಲ್ 

    ಕೊಬ್ಬರಿ ಮಾರಾಟ ಮಾಡಿದ ರೈತರಿಗೆ ಹಣ ಬಿಡುಗಡೆಗೆ ಸಹಕರಿಸಿದ ಸಚಿವ ಸೋಮಣ್ಣ ಅವರಿಗೆ ಶಾಸಕ ಜಿ.ಬಿ ಜ್ಯೋತಿಗಣೇಶ್ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ವಿನೇಶ್ ತರಬೇತಿಗೆ ಕೇಂದ್ರ 75 ಲಕ್ಷ ರೂ. ಖರ್ಚು ಮಾಡಿದೆ – ಮನ್ಸುಖ್ ಮಾಂಡವಿಯಾ ಮಾಹಿತಿ

  • ಕಿಚ್ಚ ಸುದೀಪ್ ಗೌರವ ಡಾಕ್ಟರೇಟ್ ನಿರಾಕರಣೆ: ಏನಂದ್ರು ನಟ?

    ಕಿಚ್ಚ ಸುದೀಪ್ ಗೌರವ ಡಾಕ್ಟರೇಟ್ ನಿರಾಕರಣೆ: ಏನಂದ್ರು ನಟ?

    ನ್ನಡದ ಅನೇಕ ತಾರೆಯರಿಗೆ ನಾನಾ ವಿಶ್ವ ವಿದ್ಯಾಲಯಗಳು (University)  ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. ಬಹುತೇಕರು ಗೌರವ ಪೂರ್ವಕವಾಗಿಯೇ ಆ ಗೌರವವನ್ನು ಸ್ವೀಕರಿಸಿದ್ದಾರೆ. ಈ ಸಲ ತುಮಕೂರು (Tumkur) ವಿಶ್ವ ವಿದ್ಯಾಲಯವು ಕಿಚ್ಚ ಸುದೀಪ್ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿತ್ತು. ಈ ವಿಷಯವನ್ನು ಸುದೀಪ್ ಅವರಿಗೂ ತಿಳಿಸಲಾಗಿತ್ತು. ಆದರೆ, ಸುದೀಪ್ (Sudeep) ಆ ಗೌರವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.

    ವಿಶ್ವ ವಿದ್ಯಾಲಯವು ಸುದೀಪ್ ಅವರಿಗೆ ಕರೆ ಮಾಡಿ ಗೌರವ ಡಾಕ್ಟರೇಟ್ (Doctorate) ಆಯ್ಕೆಯ ವಿಷಯ ತಿಳಿಸಿದಾಗ, ‘ನನಗಿಂತಲೂ ಅರ್ಹರು ಸಾಕಷ್ಟು ಜನರು ಇದ್ದಾರೆ. ಅವರಿಗೆ ಈ ಗೌರವ ನೀಡಿ ಎಂದು ನಯವಾಗಿಯೇ ಗೌರವನ್ನು ನಿರಾಕರಿಸಿದ್ದಾರೆ. ಈ ಮೂಲಕ ರಾಹುಲ್ ದ್ರಾವಿಡ್ ಪರಂಪರೆಯನ್ನು ಮುಂದುವರೆಸಿದ್ದಾರೆ.

    ಈ ಹಿಂದೆ ಖ್ಯಾತ ಕ್ರಿಕೆಟ್ ಗೆ ರಾಹುಲ್ ದ್ರಾವಿಡ್ ಅವರಿಗೂ ಗೌರವ ಡಾಕ್ಟರೇಟ್ ನೀಡಲು ವಿವಿ ನಿರ್ಧಾರ  ಮಾಡಿತ್ತು. ಸುದೀಪ್ ಹೇಳಿದ ಮಾತುಗಳನ್ನೂ ಇವರು ಹೇಳಿ ಗೌರವ ಡಾಕ್ಟರೇಟ್ ನಿರಾಕರಿಸಿದ್ದರು. ಬೇಕಾದರೆ ಓದಿ ಡಾಕ್ಟರೇಟ್ ಪದವಿ ಪಡೆಯುವ ಮಾತುಗಳನ್ನೂ ಅವರು ಆಡಿದ್ದರು.

    ಸುದೀಪ್ ಈ ನಡೆ ಭಾರೀ ಮೆಚ್ಚುಗೆಗೆ ಕಾರಣವಾಗಿದೆ. ಅನೇಕರು ರಾಹುಲ್ ದ್ರಾವಿಡ್ ಅವರಿಗೆ ಕಿಚ್ಚನ ಹೋಲಿಕೆ ಮಾಡಿ ಪೋಸ್ಟ್ ಮಾಡ್ತಿದ್ದಾರೆ. ಈ ನಿರ್ಧಾರವನ್ನು ಎಲ್ಲವೂ ಗೌರವಿಸುತ್ತೇವೆ ಎಂದಿದ್ದಾರೆ.

  • ಮಗಳಿಗೆ ಜಮೀನು ಕೊಡುವುದಾಗಿ ಹೇಳಿದ್ದಕ್ಕೆ ತಾಯಿಯ ಹತ್ಯೆ – ಆರೋಪಿ ಅರೆಸ್ಟ್

    ಮಗಳಿಗೆ ಜಮೀನು ಕೊಡುವುದಾಗಿ ಹೇಳಿದ್ದಕ್ಕೆ ತಾಯಿಯ ಹತ್ಯೆ – ಆರೋಪಿ ಅರೆಸ್ಟ್

    ತುಮಕೂರು: ಮಗಳ ಹೆಸರಿಗೆ ಆಸ್ತಿ ವರ್ಗಾಯಿಸುವುದಾಗಿ ಹೇಳಿದ ತಾಯಿಯನ್ನು ವ್ಯಕ್ತಿಯೊಬ್ಬ ಹತ್ಯೆಗೈದ ಘಟನೆ ಪಾವಗಡದ ಮಾಚಮಾರನಹಳ್ಳಿಯಲ್ಲಿ ನಡೆದಿದೆ.

    ಗ್ರಾಮದ ಚಂದ್ರಕ್ಕ (50) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಜೂ.20 ರಂದು ಮಹಿಳೆಯ ಹತ್ಯೆ ನಡೆದಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಮಹಿಳೆಯ ಮಗ ಆಂಜನೇಯಲು ಹಾಗೂ ಆತನ ಬಾವ ಪ್ರಭಾಕರ್‍ನನ್ನು ಬಂದಿಸಿದ್ದಾರೆ. ವಿಚಾರಣೆ ವೇಳೆ ಆಸ್ತಿ ವಿಚಾರಕ್ಕೆ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಮನೆಯ ಗೋಡೆ ಕುಸಿದು ನಾಲ್ವರ ದುರ್ಮರಣ

    ಜೂ. 20ರಂದು ಚಂದ್ರಕ್ಕ ಬೇವಿನ ಬೀಜ ಸಂಗ್ರಹಿಸಲು ತೆರಳಿದ್ದ ವೇಳೆ, ಮಹಿಳೆಯನ್ನ ಕತ್ತುಕೊಯ್ದು ಹತ್ಯೆ ಮಾಡಲಾಗಿತ್ತು. ತನ್ನ ತಾಯಿಯನ್ನ ಹತ್ಯೆಗೈದವರನ್ನು ಬಂಧಿಸಿ ನ್ಯಾಯ ಕೊಡಿಸುವಂತೆ ಸ್ವತಃ ಹಂತಕ ಮಗನೇ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಪೊಲೀಸ್ ತನಿಖೆ ವೇಳೆ ಚಂದ್ರಕ್ಕನ ಮಗ ಆಂಜನೇಯಲುನೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

    ಪೊಲೀಸರು ಘಟನಾ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಯನ್ನು ವಿಚಾರಿಸಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು. ಯಾರಿಗೂ ಹೇಳದಂತೆ ಪ್ರತ್ಯಕ್ಷದರ್ಶಿಗೂ ಸಹ ಆರೋಪಿಗಳು ಬೆದರಿಕೆ ಹಾಕಿದ್ದರು ಎಂದು ತನೀಖೆ ವೇಳೆ ತಿಳಿದು ಬಂದಿದೆ.

    ಮೃತ ಚಂದ್ರಕ್ಕ ತನ್ನ ಹೆಸರಲ್ಲಿದ್ದ ಐದು ಎಕರೆ ಜಮೀನನ್ನು ಮಗಳ ಹೆಸರಿಗೆ ವರ್ಗಾಯಿಸುವುದಾಗಿ ಹೇಳಿದ್ದರು. ಇದೇ ವಿಷಯವಾಗಿ ತಾಯಿ ಮತ್ತು ಮಗನ ನಡುವೆ ಗಲಾಟೆಯಾಗಿತ್ತು. ಇದರಿಂದ ಆರೋಪಿಗಳು ಆಕೆಯನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಲಾಸ್ ವೇಗಾಸ್‌ನಲ್ಲಿ ಗುಂಡಿನ ದಾಳಿ- ಐವರ ದುರ್ಮರಣ

  • ತುಮಕೂರಲ್ಲಿ ಕಲುಷಿತ ನೀರು ಸೇವಿಸಿ ದುರ್ಮರಣ – ಸಾವಿಗೆ ಸರ್ಕಾರವೇ ನೇರ ಹೊಣೆ ಎಂದ ಅಶೋಕ್‌

    ತುಮಕೂರಲ್ಲಿ ಕಲುಷಿತ ನೀರು ಸೇವಿಸಿ ದುರ್ಮರಣ – ಸಾವಿಗೆ ಸರ್ಕಾರವೇ ನೇರ ಹೊಣೆ ಎಂದ ಅಶೋಕ್‌

    – ಕುಡಿಯೋಕೆ ನೀರು ಕೊಡೋ ಯೋಗ್ಯತೆಯೂ ಇಲ್ಲವೆಂದು ವಿಪಕ್ಷ ನಾಯಕ ವಾಗ್ದಾಳಿ

    ಬೆಂಗಳೂರು: ತುಮಕೂರಿನಲ್ಲಿ ಕಲುಷಿತ ನೀರು ಕುಡಿದು ಸಾವನ್ನಪಿರೋ ಘಟನೆಗೆ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್‌. ಅಶೋಕ್ (R Ashoka) ವಾಗ್ದಾಳಿ ನಡೆಸಿದ್ದಾರೆ. ಈ‌ ಸಾವಿಗೆ ಸರ್ಕಾರವೇ ಕಾರಣ ಅಂತ ಕಿಡಿಕಾರಿದ್ದಾರೆ.

    ವಿಧಾನಸೌಧದಲ್ಲಿ ‌ಮಾತಾಡಿದ ಅವರು, ಕಾಂಗ್ರೆಸ್ ಸರ್ಕಾರ (Congress Government) ಬಂದಾಗಿನಿಂದ ಗ್ಯಾರಂಟಿ ಗ್ಯಾರಂಟಿ ಅಂತ ಹೇಳಿಕೊಂಡು ಕುಡಿಯೋ ನೀರು ಕೊಡ್ತಿಲ್ಲ. ಕಲುಷಿತ ನೀರು (Contaminated Water) ಕುಡಿಯೋ ಸ್ಥಿತಿ ಬಂದಿದೆ. ಸಿಎಂ ಕ್ಷೇತ್ರದಲ್ಲಿ ಕಲುಷಿತ ನೀರು ಕುಡಿದು ಜನರಿಗೆ ಸಮಸ್ಯೆ ಆಗಿದೆ. ಕುಡಿಯೋ ನೀರು ಕೊಡೋ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರೀಲ್ ಗಜನ ಪಳಗಿಸಿದ ರಿಯಲ್ ಸಲಗ | ಆಪರೇಷನ್‌ ’36’ ಸೂಪರ್ ಕಾಪ್ಸ್ – ಸೂಪರ್ ಸ್ಟೋರಿ ಓದಿ

    ಇವತ್ತು ತುಮಕೂರಿನಲ್ಲಿ (Tumkur) ಇದೇ ರೀತಿ ಸಾವು ಆಗಿದೆ. ಡಿಸಿಗೆ ಮಾತಾಡಿದ್ರೆ ನೀರಿನ ಸಮಸ್ಯೆ ಇಲ್ಲ ಅಂತಿದ್ದಾರೆ.ಅವರಿಗೆ ಆರೋಗ್ಯ ಸಮಸ್ಯೆಯಿಂದ ಸತ್ತಿದ್ದಾರೆ ಅಂತ ಹೇಳ್ತಿದ್ದಾರೆ. ಡಿಸಿಗೆ ವರದಿ ಕೇಳಿದ್ದೇನೆ, ಸತ್ತವರಿಗೆ ಒಂದೊಂದು ಆರೋಗ್ಯ ಸಮಸ್ಯೆ ಅಂತ ಹೇಳಿದ್ದಾರೆ‌. ಕೊಪ್ಪಳದಲ್ಲೂ ಹೀಗೆ ಆಗಿದೆ. ಇಡೀ ರಾಜ್ಯದಲ್ಲಿ ಕಲುಷಿತ ನೀರು ಕುಡಿದು ಜನ ಸಾಯ್ತಿದ್ದಾರೆ. ಕರ್ನಾಟಕ ಸರ್ಕಾರ ಪಾಪರ್ ಆಗಿರೋದಕ್ಕೆ ಇದು ಉದಾಹರಣೆ. ಟ್ಯಾಂಕರ್ (Tanker) ಶುದ್ಧ ಮಾಡೋಕು ಸರ್ಕಾರದ ಬಳಿ ಹಣವಿಲ್ಲದಂತಾಗಿದೆ. ಏನಾದರೂ ಕೇಳಿದ್ರೆ ಗ್ಯಾರಂಟಿ ಗ್ಯಾರಂಟಿ ಅಂತಾರೆ. ಕಲುಷಿತ ನೀರು ಕುಡಿದವರ ಸಾವಿಗೆ ಸರ್ಕಾರವೇ ನೇರ ಹೊಣೆ. ಸಿಎಂ ಅವರೇ ಉತ್ತರ ಕೊಡಬೇಕು. ನಿಮ್ಮ ನಿರ್ಲಕ್ಷ್ಯವೇ ಕಾರಣ. ಇದು ದೇವರಿಂದ ಆಗಿಲ್ಲ. ನಿಮ್ಮಿಂದ ಸಾವು ಆಗಿರೋದು ಅಂತ ವಾಗ್ದಾಳಿ ನಡೆಸಿದರು.

    ಡಿಕೆ ಶಿವಕುಮಾರ್‌ಗೆ ಶಾಸಕರು ಹಣ ಕೇಳಿದ್ರೆ ಬಾಯಿ ಮುಚ್ಚಿಕೊಂಡಿರಿ ಅಂತಾರೆ. ಈ ಸರ್ಕಾರಕ್ಕೆ ನೀರು ಕೊಡಲು ಆಗ್ತಿಲ್ಲ. ಈ ಸಾವಿಗೆ ಸರ್ಕಾರ ಕಾರಣ‌. ರಾಜ್ಯದ ಜನತೆಗೆ ಸರ್ಕಾರ ಉತ್ತರ ಕೊಡಬೇಕು. ಈ ಸರ್ಕಾರಕ್ಕೆ ಕುಡಿಯೋ ನೀರು ಕೊಡೋ ಯೋಗ್ಯತೆ ಇಲ್ಲ‌. ಸಿಎಂ ಅವರೇ ನಿಮಗೆ ಮನುಷ್ಯತ್ವ ಇಲ್ಲವಾ? ಮನುಷ್ಯತ್ವ ಇಲ್ಲದೇ ಕುರ್ಚಿಯಲ್ಲಿ ಯಾಕೆ ಕೂತಿದ್ದೀರಾ? ಕುಡಿಯೋ ನೀರಿಗೂ ಹಣ ಕೊಡೋಕೆ ಆಗೋದಿಲ್ವಾ ನಿಮಗೆ? ಅಂತ ಸರ್ಕಾರದ ವಿರುದ್ಧ ಅಶೋಕ್ ಕಿಡಿಕಾರಿದರು. ಇದನ್ನೂ ಓದಿ: ನಾನು ಶೆಡ್‌ನಿಂದ ಬಂದ ಮೇಲೆ ಇವ್ರೆಲ್ಲಾ ಸೇರಿ ಹಿಂಗೆ ಮಾಡಿ ನನ್‌ ತಲೆಗೆ ತಂದಿದ್ದಾರೆ: ದರ್ಶನ್‌ ಅಳಲು

    ಕರ್ನಾಟಕ ಸರ್ಕಾರ ATM ಆಗಿ ಕೇಂದ್ರದ ನಾಯಕರಿಗೆ ಹಣ ಕಳಿಸಬೇಕು. ಹೀಗಾಗಿ ಟ್ಯಾಂಕರ್ ಮಾಫಿಯಾ ಮಾಡಿದ್ರು. ಹಣ ಮಾಡೋಕೆ ಇಂತಹ ಕೆಲಸ ಮಾಡ್ತಿದ್ದಾರೆ‌. ಹಣ ಮಾಡೋಕೆ ಈ ಸರ್ಕಾರ ಟ್ಯಾಂಕರ್ ಮಾಫಿಯಾ ಮಾಡ್ತಿದ್ದಾರೆ. ಈ ಸರ್ಕಾರ RDPR ಇಲಾಖೆಗೆ ಅನುದಾನ 25% ಕಡಿತ ಮಾಡಿದೆ. ವೋಟಿಗೋಸ್ಕರ ಇಂತಹ ಕೆಲಸ ಸರ್ಕಾರ ಮಾಡಿದೆ. ಹೀಗಾಗಿ ಇವತ್ತು ಕಲುಷಿತ ನೀರು ಸೇವಿಸಿ ಜನ ಸಾಯ್ತಿದ್ದಾರೆ. ಅಧಿಕಾರಿಗಳು ಕೈಚೆಲ್ಲಿ ಕೂತಿದ್ದಾರೆ. ಬೆಂಗಳೂರಿನಲ್ಲಿ ಬರಗಾಲ ಮುಂದುವರಿದಿದ್ದರೆ ಬೆಂಗಳೂರಿನಲ್ಲಿ ದೊಡ್ಡ ಸಮಸ್ಯೆ ಆಗ್ತಿತ್ತು ಅಂತ ವಾಗ್ದಾಳಿ ನಡೆಸಿದರು.

    ಸಿಎಂ ಮಾತಿಗೂ ಇವತ್ತು ಕಿಮ್ಮತ್ತಿಲ್ಲ. ಯಾರು ಸಿಎಂ ಇಲ್ಲಿ? ಇಬ್ಬರು ಸಿಎಂಗಾಗಿ ಕಿತ್ತಾಟ ಮಾಡ್ತಿದ್ದಾರೆ. ಸಿಎಂ ಮಾತಿಗೆ ಯಾವ ಅಧಿಕಾರಿಗಳು ಬೆಲೆ ಕೊಡ್ತಿಲ್ಲ. ಸಿಎಂ ಮಾತಿಗೆ ಯಾರು ಬೆಲೆ ಕೊಡ್ತಿಲ್ಲ. ಒಂದು ಕಾರಣ ಇಬ್ಬರು ಸಿಎಂ ಇರೋದು ಮತ್ತೊಂದು ಇವರ ಬಳಿ ದುಡ್ಡು ಇಲ್ಲದೆ ಇರೋದು. ಸಿಎಂಗಾಗಿ ಇಬ್ಬರು ಕಿತ್ತಾಟ ಮಾಡ್ತಿದ್ದಾರೆ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜಾಹೀರಾತು ವಿಚಾರದಲ್ಲಿ ರಾಹುಲ್ ಗಾಂಧಿ ವಿರುದ್ಧ ಕೇಸ್‌ ದಾಖಲಿಸಿರುವುದು ಯಾವ ರಾಜಕಾರಣ: ಬಿಜೆಪಿಗೆ ಡಿಕೆಶಿ ತಿರುಗೇಟು 

  • ತನಿಖೆ ನೆಪದಲ್ಲಿ ಠಾಣೆಗೆ ಕರೆತಂದು ಹಲ್ಲೆ ಆರೋಪ; ಡಿವೈಎಸ್‌ಪಿ ಸೇರಿ ನಾಲ್ವರು ಪೊಲೀಸರ ವಿರುದ್ಧ ಪ್ರಕರಣ!

    ತನಿಖೆ ನೆಪದಲ್ಲಿ ಠಾಣೆಗೆ ಕರೆತಂದು ಹಲ್ಲೆ ಆರೋಪ; ಡಿವೈಎಸ್‌ಪಿ ಸೇರಿ ನಾಲ್ವರು ಪೊಲೀಸರ ವಿರುದ್ಧ ಪ್ರಕರಣ!

    ತುಮಕೂರು: ತನಿಖೆ ನೆಪದಲ್ಲಿ ಠಾಣೆಗೆ ಕರೆತಂದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಮೇರೆಗೆ ಕುಣಿಗಲ್ ಡಿವೈಎಸ್‌ಪಿ ಓಂಪ್ರಕಾಶ್, ಅಮೃತೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮಾದವನಾಯಕ್, ಸಬ್‌ಇನ್‌ಸ್ಪೆಕ್ಟರ್ ಶವಂತ್‌ಗೌಡ, ಹೆಡ್ ಕಾನ್‌ಸ್ಟೇಬಲ್ ದಯಾನಂದ್ ವಿರುದ್ಧ ಕುಣಿಗಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ತಾಲ್ಲೂಕಿನ ಹೊನ್ನಮಾಚನಹಳ್ಳಿ ಗ್ರಾಮ ಪಂಚಾಯಿತಿ ವಾಟರ್‌ಮ್ಯಾನ್ ಪಿ.ಜಿ ಗಂಗಾಧರ್ ಎಂಬುವರು ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕ್ರಿಮಿನಲ್‍ಗಳಿಗೆ ಇಲಾಖೆ ಮಾಹಿತಿ ರವಾನೆ – ಐವರು ಪೊಲೀಸ್ ಸಿಬ್ಬಂದಿ ಅಮಾನತು

    ‘ಮಾರ್ಚ್ 21ರಂದು ವಾಟರ್‌ಮ್ಯಾನ್ ಕೆಲಸಕ್ಕೆ ಹೋಗುವಾಗ ರಾಘವನ ಹೊಸೂರು ಕ್ರಾಸ್ ಬಳಿ ಸಬ್‌ಇನ್‌ಸ್ಪೆಕ್ಟರ್ ಶವಂತ್‌ಗೌಡ, ಹೆಡ್ ಕಾನ್‌ಸ್ಟೇಬಲ್ ದಯಾನಂದ್ ನನ್ನನ್ನು ತಡೆದು ನಿಲ್ಲಿಸಿ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಬೇಕಿದೆ ಎಂದು ಕುಣಿಗಲ್‌ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಅಲ್ಲಿ ಎಲ್ಲರೂ ಸೇರಿ ಹೊಡೆದಿದ್ದಾರೆ. ಹಲ್ಲೆಯ ನಂತರ ಅಮೃತೂರು ಠಾಣೆಗೆ ಕರೆದುಕೊಂಡು ಬಂದು ಸಂಜೆ 5.30 ಗಂಟೆ ವರೆಗೆ ವಶದಲ್ಲಿ ಇಟ್ಟುಕೊಂಡಿದ್ದರು ಎಂದು ಗಂಗಾಧ‌ರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಸ್ನೇಹಿತರಾದ ನವೀನ, ಶಿವಕುಮಾರ್ ಮುಖಾಂತರ ನಮ್ಮ ಕುಟುಂಬದವರಿಗೆ ಈ ಮಾಹಿತಿ ತಿಳಿದಿದೆ. ನಂತರ ಅಮೃತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು, ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಾಗಿದ್ದೆ ಎಂದು ಸಹ ತಿಳಿಸಿದ್ದಾರೆ.

    ಈ ಸಂಬಂಧ ದೂರು ದಾಖಲಿಸಿಕೊಳ್ಳಲು ನಿರ್ದೇಶನ ನೀಡುವಂತೆ ಕೋರಿ ಜೆಎಂಎಫ್‌ಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಕೋರ್ಟ್ ಆದೇಶದ ಮೇಲೆ ದೂರು ದಾಖಲಾಗಿದೆ. ಇದನ್ನೂ ಓದಿ: ಡಿಕೆಸು ಸೋಲಿಗೆ ಸಿದ್ದರಾಮಯ್ಯ & ಟೀಂ ಕಾರಣ: ಹೊಸ ಬಾಂಬ್ ಸಿಡಿಸಿದ ಸುರೇಶ್ ಗೌಡ

  • ವಿಧಾನಸಭೆಯಲ್ಲಿ ಸೋತು ಕಣ್ಣೀರಿಟ್ಟಿದ್ದ ಸೋಮಣ್ಣಗೆ ರಾಷ್ಟ್ರ ರಾಜಕಾರಣಕ್ಕೆ ಆಶೀರ್ವದಿಸಿದ ಮತದಾರ

    ವಿಧಾನಸಭೆಯಲ್ಲಿ ಸೋತು ಕಣ್ಣೀರಿಟ್ಟಿದ್ದ ಸೋಮಣ್ಣಗೆ ರಾಷ್ಟ್ರ ರಾಜಕಾರಣಕ್ಕೆ ಆಶೀರ್ವದಿಸಿದ ಮತದಾರ

    ತುಮಕೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ಕಣ್ಣೀರಿಟ್ಟಿದ್ದ ಮಾಜಿ ಸಚಿವ ವಿ.ಸೋಮಣ್ಣಗೆ (V.Somanna) ಲೋಕಸಭಾ ಚುನಾವಣೆಯಲ್ಲಿ ಜನ ಆಶೀರ್ವಾದ ಮಾಡಿದ್ದಾರೆ. ತುಮಕೂರು (Tumkur) ಲೋಕಸಭಾ ಕ್ಷೇತ್ರದಿಂದ ಸೋಮಣ್ಣ ಅವರು 1,75,594 ಮತಗಳ ಅಂತರದಲ್ಲಿ ಗೆದ್ದಿದ್ದು, ಈ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ.

    ಸೋಮಣ್ಣ 7,20,946 ಮತಗಳಿಸಿದ್ದು, ಕಾಂಗ್ರೆಸ್ (Congress) ಅಭ್ಯರ್ಥಿ ಮುದ್ದುಹನುಮೇಗೌಡ ಅವರು 5,45,352 ಮತಗಳಿಸಿದ್ದರು. ಈ ಮೂಲಕ ಭಾರೀ ಅಂತರದ ಮೂಲಕ ಅವರು ಕೈ ಅಭ್ಯರ್ಥಿ ವಿರುದ್ಧ ಗೆದ್ದು ಬೀಗಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಸೋಮಣ್ಣ ತುಮಕೂರಿನ ಲೋಕಸಭಾ ಕ್ಷೇತ್ರದ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಗೆಲುವನ್ನು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಪ್ರಧಾನಿ ಮೋದಿಗೆ ಸಲ್ಲಿಸಲ್ಲಿಸುತ್ತೇನೆ. ಎರಡು ಬಾರಿ ಸೋತ ನನಗೆ ಅಮಿತ್ ಶಾ ಅವಕಾಶ ಕೊಟ್ಟರು ಅವರಿಗೆ ಹಾಗೂ ಯಡಿಯೂರಪ್ಪಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.

    ನನ್ನ ಆರಾಧ್ಯ ದೈವ ಶಿವಕುಮಾರ ಶ್ರೀಗಳು ಹಾಗೂ ಆದಿಚುಂಚನಗಿರಿ ಶ್ರೀಗಳ ಆಶೀರ್ವಾದದಿಂದ ಮತ್ತೆ ಜನ ಸೇವೆ ಮಾಡಲು ಅವಕಾಶ ಸಿಕ್ಕಿದೆ. ದೇಶದ ವ್ಯವಸ್ಥೆಯಲ್ಲಿ ಜನಪರ ಕಾರ್ಯಕ್ರಮದಿಂದ ನಾವೆಲ್ಲ ಗೆದ್ದಿದ್ದೇವೆ. ಹೊರಗಿನ ಅಭ್ಯರ್ಥಿ ಎಂದು ಪದೇ ಪದೇ ಎಚ್ಚರಿಕೆ ಕೊಡುತ್ತಿದ್ದರು. ಅದನ್ನು ಎಚ್ಚರಿಕೆ ಗಂಟೆ ಎಂದು ಭಾವಿಸಿ ಹೆಚ್ಚಿಗೆ ದುಡಿದ ಪರಿಣಾಮ ಗೆಲುವು ಸಾಧಿಸಿದ್ದೇನೆ. ದೇಶದಲ್ಲಿ ಸ್ವಲ್ಪ ಹಿನ್ನಡೆ ಆಗಿದೆ. ಇದಕ್ಕೆ ಇಂಡಿಯಾ ಒಕ್ಕೂಟದ ಅಪಪ್ರಚಾರ ಕಾರಣ ಎಂದು ಅವರು ದೂರಿದ್ದಾರೆ.