ತುಮಕೂರು: ಪಾವಗಡ ಪಟ್ಟಣದ ವೈಈಆರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ ಮೈಥಿಲಿ (18) ಶನಿವಾರ ಹೃದಯಾಘಾತದಿಂದ (Heart Attack) ಕುಸಿದು ಬಿದ್ದು ಮೃತಪಟ್ಟಿದ್ದಾಳೆ.
ಮಧುಗಿರಿ ತಾಲ್ಲೂಕು ಮಿಡಿಗೇಶಿಯ ವೈಥಿಲಿ ಪಾವಗಡದ ಕಾಲೇಜಿನಲ್ಲಿ ಓದುತ್ತಿದ್ದಳು. ತರಗತಿ ಮುಗಿಸಿಕೊಂಡು ಹೊರಟಿದ್ದ ಆಕೆ ಚಳ್ಳಕೆರೆ ಕ್ರಾಸ್ ಬಳಿ ಕುಸಿದು ಬಿದ್ದಿದ್ದಾಳೆ.
ಕೂಡಲೇ ವಿದ್ಯಾರ್ಥಿನಿಯನ್ನು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ತುಮಕೂರು: ಆನ್‌ಲೈನ್ ಗೇಮ್ (Online Game)ಆಡಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ಯುವಕನೊಬ್ಬ ನೇಣಿಗೆ ಶರಣಾದ ಘಟನೆ ತುಮಕೂರು (Tumkuru) ನಗರದ ಹೊರಪೇಟೆಯಲ್ಲಿ ನಡೆದಿದೆ.
ನೇಣಿಗೆ ಶರಣಾದ ಯುವಕನನ್ನು ಟಿ.ಎಸ್.ಭರತ್ (24) ಎಂದು ಗುರುತಿಸಲಾಗಿದೆ. ಯುವಕ ಇತ್ತೀಚೆಗೆ ಆನ್‌ಲೈನ್ ಗೇಮ್‌ನಲ್ಲಿ 20 ಸಾವಿರ ರೂ. ಹಣ ಕಳೆದುಕೊಂಡಿದ್ದ. ಈ ವಿಚಾರ ಆತನ ತಾಯಿಗೆ ಗೊತ್ತಾಗಿ ಇನ್ನೂ ಆನ್‌ಲೈನ್ ಗೇಮ್ ಆಡಬೇಡ ಎಂದು ಬುದ್ಧಿ ಹೇಳಿದ್ದರು. ಇದೇ ವಿಚಾರಕ್ಕೆ ಯುವಕ ತನ್ನ ಮನೆ ಬಳಿಯ ಹಳೆ ಹೆಂಚಿನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
– ಸಚಿವ ಕೆ.ಎನ್ ರಾಜಣ್ಣರಿಂದ ಗುದ್ದಲಿ ಪೂಜೆ, `ಪಬ್ಲಿಕ್ ಟಿವಿ’ಗೆ ಶ್ಲಾಘನೆ
– ಡಿಸೆಂಬರ್ 7 ರಂದು ಪ್ರಸಾರವಾಗಿದ್ದ ಬೆಳಕು ಕಾರ್ಯಕ್ರಮ
ತುಮಕೂರು: ನೊಂದವರಿಗೆ ನೆರವಾಗುವ, ಸಮಸ್ಯೆಗೆ ಪರಿಹಾರ ಆಗುವ ನಿಮ್ಮ `ಪಬ್ಲಿಕ್ ಟಿವಿ’ಯ ಬೆಳಕು ಕಾರ್ಯಕ್ರಮದಿಂದ (Belaku Program) ಬಹುದೊಡ್ಡ ಇಂಪ್ಯಾಕ್ಟ್ ಆಗಿದೆ. ವರದಿ ಪ್ರಸಾರವಾದ ಕೇವಲ 26 ದಿನದಲ್ಲೇ ಸರ್ಕಾರಿ ಶಾಲೆಯ ಕೊಠಡಿಗೆ ಶಂಕುಸ್ಥಾಪನೆ ನೆರವೇರಿದೆ. ಈ ಮೂಲಕ ಆ ಊರ ವಿದ್ಯಾರ್ಥಿಗಳ ನೆರವಿಗೆ `ಪಬ್ಲಿಕ್ ಟಿವಿ’ (Public TV) ಧಾವಿಸಿದೆ.
ಹೌದು. ತುಮಕೂರು (Tumkur) ಜಿಲ್ಲೆ ಮಧುಗಿರಿ ತಾಲೂಕು ಕಡಗತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಯಾಕಾರ‍್ಲಹಳ್ಳಿ ಶಾಲೆಯ ದುಸ್ಥಿತಿ ಯಾರಿಗೂ ಬೇಡವಾಗಿತ್ತು. ಎಲ್‌ಕೆಜಿಯಿಂದ 7ನೇ ತರಗತಿವರೆಗೆ ಇಲ್ಲಿ ಪಾಠ ನಡೆಯುತ್ತದೆ. ಸದ್ಯ 81 ವಿದ್ಯಾರ್ಥಿಗಳು (School Students) ಇದ್ದಾರೆ. ಇಡೀ ತಾಲೂಕಿಗೆ ಈ ಶಾಲೆ ಹೆಸರು ವಾಸಿ. ಅಷ್ಟರಮಟ್ಟಿಗೆ ಒಳ್ಳೆ ವಿದ್ಯಾಭ್ಯಾಸ ಇಲ್ಲಿಸಿಗುತ್ತದೆ. ಆದರೆ ಕೊಠಡಿಗಳ ಕೊರತೆಯೆ ಇಲ್ಲಿಯ ಪ್ರಮುಖ ಸಮಸ್ಯೆಯಾಗಿತ್ತು.
ಕಳೆದ ಅಕ್ಟೋಬರ್‌ನಲ್ಲಿ ಸುರಿದ ಭಾರೀ ಮಳೆಗೆ ಎರಡು ಕೊಠಡಿಯ ಛಾವಣಿ ಸಂಪೂರ್ಣ ಕುಸಿದಿತ್ತು. ಪರಿಣಾಮ ಅಕ್ಕಪಕ್ಕದ ಇನ್ನೆರಡೂ ಕೊಠಡಿಗೂ ಹಾನಿಯಾಗಿತ್ತು. ಇಂಥಹ ಪರಿಸ್ಥಿತಿಯಲ್ಲಿ ಜೀವ ಕೈಯಲ್ಲಿಡಿದು ವಿದ್ಯಾರ್ಥಿಗಳು ಪಾಠ ಕೇಳುತಿದ್ದರು. ವಿದ್ಯಾರ್ಥಿಗಳ ಸಂಕಷ್ಟ ಅರಿತ `ಪಬ್ಲಿಕ್ ಟಿವಿ’ ಅವರ ನೆರವಿಗೆ ಧಾವಿಸಿತ್ತು.
`ಬೆಳಕು’ ಕಾರ್ಯಕ್ರಮದಲ್ಲಿ ಈ ಸಮಸ್ಯೆಗೆ ಪರಿಹಾರ ನೀಡುವ ಪ್ರಯತ್ನ ಮಾಡಿತ್ತು. ನೂತನ ಕೊಠಡಿ ನಿರ್ಮಾಣ ಮಾಡಿಕೊಡುವಂತೆ ಮಧುಗಿರಿ ಶಾಸಕ ಹಾಗೂ ಸಹಕಾರಿ ಸಚಿವ ಕೆ.ಎನ್ ರಾಜಣ್ಣರಿಗೆ ಪಬ್ಲಿಕ್ ಟಿವಿ ದುಂಬಾಲು ಬಿದ್ದಿತ್ತು. ಸಚಿವ ರಾಜಣ್ಣರ ನಿರ್ದೇಶನದಂತೆ ಮಧುಗಿರಿ ಡಿಡಿಪಿಐ ಗಿರಿಜಾ ನಾಲ್ಕೈದು ತಿಂಗಳಲ್ಲಿ ಕೊಠಡಿ ನಿರ್ಮಾಣ ಮಾಡಿಸೋ ಭರವಸೆ ನೀಡಿದ್ರು. ಡಿಸೆಂಬರ್ 7 ರಂದು ವರದಿ ಪ್ರಸಾರ ಆಗಿತ್ತು. ಕೇವಲ 26 ದಿನದಲ್ಲಿ ಇಂದು ಸಚಿವ ರಾಜಣ್ಣ ನೂತನ ಎರಡು ಕೊಠಡಿ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿ ಕೊಟ್ಟ ಭರವಸೆ ಈಡೇರಿಸಿದ್ದಾರೆ.
ಕೊಠಡಿ ನಿರ್ಮಾಣಕ್ಕೆ ಯಾವುದೇ ಯೋಜಿತ ಗ್ರ‍್ಯಾಂಟ್ ಇರಲಿಲ್ಲ. ಇದು ಡಿಡಿಪಿಐ ಗಿರಿಜಾ ಹಾಗೂ ಕೆ.ಎನ್ ರಾಜಣ್ಣರಿಗೆ ತಲೆನೋವಾಗಿ ಪರಿಣಮಿಸಿತ್ತು. ಈ ಮಧ್ಯೆ ಸಲಹೆ ನೀಡಿದ ಜಿಪಂ ಸಿಇಒ ಜಿ.ಪ್ರಭು ಬೇರೊಂದು ಗ್ರ‍್ಯಾಂಟ್ ಸುಳಿವು ಕೊಟ್ಟಿದ್ರು. ಅದರ ತರುವಾಯ ಎರಡು ಕೊಠಡಿಗೆ ಒಟ್ಟು 28 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಹಾಗಾಗಿ ಇಂದು ಕೊಠಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದಾರೆ. ಈ ಕಾರ್ಯಕ್ರಮವನ್ನು ಜನರು ಅತ್ಯಂತ ಸಂಭ್ರಮದಿಂದ ಮಾಡಿದ್ದಾರೆ. ಅಲ್ಲದೇ ಸಚಿವ ಕೆ.ಎನ್ ರಾಜಣ್ಣ `ಪಬ್ಲಿಕ್ ಟಿವಿ’ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
– ತುಮಕೂರಿನಲ್ಲಿ ಚಿರತೆ ಓಡಾಟ – ಕತ್ತಲಾಗುತ್ತಿದ್ದಂತೆ ಮನೆ ಸೇರಿಕೊಳ್ತಿದ್ದಾರೆ ಜನ
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ದಿನೇ ದಿನೇ ಕಾಡಾನೆಗಳ (Wild Elephant) ಉಪಟಳ ಹೆಚ್ಚಾಗುತ್ತಿದೆ. ಹಾಸನದಲ್ಲೂ ಗಜಡಪೆ ಉಪಟಳ ಮಿತಿಮೀರಿದೆ. ಸುಮಾರು 60ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯೇಕವಾಗಿ ಬೀಡುಬಿಟ್ಟಿವೆ. ಪ್ರತಿನಿತ್ಯವೂ ಅಪಾರ ಪ್ರಮಾಣದ ಬೆಳೆ ನಾಶ ಮಾಡುತ್ತಿದ್ದು ರೈತರು ಹಾಗೂ ಕಾಫಿ ಬೆಳೆಗಾರರು ಇನ್ನಿಲ್ಲದ ನಷ್ಟ ಅನುಭವಿಸುತ್ತಿದ್ದಾರೆ. ಅತ್ತ ಆಂಧ್ರ-ತಮಿಳುನಾಡಿಗೆ ಹೊಂದಿಕೊಂಡಿರುವ ಗಡಿ ಗ್ರಾಮಗಳ ರೈತರ (Farmers) ನಿದ್ದೆಗೆಡಿಸಿರುವ ಗಜ ಪಡೆ, ಲಕ್ಷಾಂತರ ರೂಪಾಯಿ ಬೆಳೆ ನಾಶ ಮಾಡಿದೆ. ಆನೆಗಳ ತೊಂದ್ರೆ ಒಂದೆಡೆಯಾದ್ರೆ ತುಮಕೂರಿನಲ್ಲಿ ಚಿರತೆಗಳ (Leopard) ಓಡಾಟದ ದೃಶ್ಯ ಸಖತ್ ವೈರಲ್ ಆಗಿ ಜನ ಆತಂಕದಲ್ಲೇ ಜೀವನ ಸಾಗಿಸ್ತಿದ್ದಾರೆ.
ಸೈರನ್ ಮೂಲಕ ಬೆಳೆ ರಕ್ಷಣೆ ಹರಸಾಹಸ:
ಹಾಸನದ ಬೇಲೂರು ತಾಲ್ಲೂಕಿನಲ್ಲಿ ಕಾಡಾನೆಗಳ ಉಪಟಳಕ್ಕೆ ಬ್ರೇಕ್ ಹಾಕುವಲ್ಲಿ ಸರ್ಕಾರ ಹಾಗೂ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾದ ಹಿನ್ನೆಲೆ ಇದೀಗ ರೈತರೇ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ. ಹಗಲು ವೇಳೆ ಕಾಫಿ ತೋಟಗಳಲ್ಲಿ ಸೈರನ್ ಹಾಕುವ ಮೂಲಕ ಕಾಡಾನೆಗಳು ಬಾರದಂತೆ ಕ್ರಮ ಕೈಗೊಂಡಿದ್ದಾರೆ. ರಾತ್ರಿ ವೇಳೆ ತಮ್ಮ ಜಮೀನಿನ ಹಲವೆಡೆ ಬೆಂಕಿ ಹಾಕಿ ಕಾಡಾನೆಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಮಲೆನಾಡಿನ ಜನರು ಹಗಲಿನಲ್ಲಿ ಕಾಫಿ ತೋಟಗಳಲ್ಲಿ ಚಾರ್ಜಬಲ್ ಮೈಕ್‌ಗಳನ್ನು ಅಳವಡಿಸುತ್ತಿದ್ದು ಅದರಿಂದ ವಿವಿಧ ರೀತಿಯ ಹತ್ತು ಮಾದರಿಯ ಶಬ್ದ ಬರುತ್ತಿದೆ. ಈ ಶಬ್ದದಿಂದಾಗಿ ಕಾಡಾನೆಗಳ ಹಾವಳಿ ಕೊಂಚ ನಿಯಂತ್ರಣವಾಗುತ್ತಿದೆ. ಇದನ್ನೂ ಓದಿ: ಬೆಂಗಳೂರು – ತುಮಕೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಬಿಬಿಎಂಪಿ ಪ್ಲ್ಯಾನ್
ತಮಿಳುನಾಡಿನಿಂದ ರಾಜ್ಯಕ್ಕೆ ಕಾಡಾನೆ ಎಂಟ್ರಿ:
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಸುತ್ತಮುತ್ತ ಕಾಡಾನೆ ಹಾವಳೆ ಹೆಚ್ಚಾಗಿದ್ದು, ಪದೇ ಪದೇ ಈ ಭಾಗದಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡು ಜನರನ್ನ ಬೆಳಗಳನ್ನ ಆಹುತಿ ಪಡೆಯುತ್ತಲೇ ಇದೆ. ತಮಿಳುನಾಡು ಗಡಿ ಪ್ರದೇಶಗಳಲ್ಲೇ ಬೀಡು ಬಿಟ್ಟಿಟ್ಟಿದ್ದ 11 ಕಾಡಾನೆಗಳ ಹಿಂಡು ಭತ್ತಲಹಳ್ಳಿ ಸುತ್ತಮುತ್ತ ಕಾಣಿಕೊಂಡಿವೆ. ಪರಿಣಾಮ ಸುತ್ತಮುತ್ತಲ ಗ್ರಾಮಗಳ ಜನರು ಆತಂಕದಲ್ಲೇ ಜೀವನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಪ್ರತಿನಿತ್ಯ ಹತ್ತಾರು ಎಕರೆ ವಿವಿಧ ಬೆಳೆಗಳನ್ನು ನಾಶ ಮಾಡುತ್ತಿವೆ. ತಮಿಳುನಾಡು ಅರಣ್ಯ ಪ್ರದೇಶದಿಂದ ರಾಜ್ಯಕ್ಕೆ ಆಗಮಿಸಿರುವ ಕಾಡಾನೆಗಳಿಂದ ಎಚ್ಚರ ವಹಿಸುವಂತೆ ಅರಣ್ಯ ಇಲಾಖೆ ಹಾಗು ಪೊಲೀಸ್ ಇಲಾಖೆ ಕಾಡಂಚಿನ ಗ್ರಾಮಗಳ ಜನರಿಗೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: Hubballi| ಮಲಗಿದ್ದ ವೇಳೆ ಸಿಲಿಂಡರ್ ಗ್ಯಾಸ್ ಸ್ಫೋಟ – 9 ಅಯ್ಯಪ್ಪ ಮಾಲಾಧಾರಿಗಳಿಗೆ ಗಂಭೀರ ಗಾಯ
ತುಮಕೂರಿನಲ್ಲಿ ಚಿರತೆ ಆತಂಕ:
ಚಿರತೆ ಇದೆಯಂತೆ… ಓಡಾಡ್ತಾ ಇವೆಯಂತೆ.. ಕುಂದೂರು, ದೇವರಾಯಪಟ್ಟಣ, ಸಿದ್ದಗಂಗಾ ಮಠ, ಮಂಜುನಾಥ ನಗರದಲ್ಲಿ ಹಗಲೊತ್ತೂ ಕಾಣ್ತವಂತೆ ಹಿಗೊಂದು ಸಂದೇಶದ ವೀಡಿಯೋ ತುಮಕೂರು ನಗರದಲ್ಲಿ ಓಡಾಡ್ತಾ ಇದ್ದು ಜನರು ಗಾಬರಿಗೊಂಡಿದ್ದಾರೆ. ಇದರಿಂದ ಅಕ್ಕ-ಪಕ್ಕದ ಏರಿಯಾದವರು ಭಯದ ವಾತವರಣದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಜನ ಬೆಳಗಿನ ಜಾವ ಹಾಗೇ ಸಂಜೆ ವಾಕ್ ಬರುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ ಇದಲ್ಲದೇ ಮಕ್ಕಳನ್ನ ಸಂಜೆ 6 ಗಂಟೆ ನಂತರ ಆಚೆಯೇ ಕಳಿಸದಂತೆ ನಿಗಾವಹಿಸಿದ್ದಾರೆ. ನಿವೇಶನಗಳಲ್ಲಿ ಬೆಳೆದು ನಿಂತಿರುವ ಗಿಡಗಳನ್ನು ಕ್ಲೀನ್ ಮಾಡಿಸದೇ ನಿವೇಶನ ಮಾಲೀಕರಿಗೆ ಯಾವುದೇ ನೋಟಿಸ್ ಕೋಡದೇ ಪಾಲಿಕೆ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: 2025ರ ಹೊಸ ವರ್ಷಾಚರಣೆಗೆ ದಿನಗಣನೆ – ಬೆಂಗಳೂರಿನಲ್ಲಿ ಖಾಕಿ ಅಲರ್ಟ್, ಟಫ್ ರೂಲ್ಸ್ ಜಾರಿ
ಬೆಳ್ಳಾವಿ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಒಟ್ಟು ಮೂರು ಬಾರಿ ಶಾಸಕರಾಗಿದ್ದರು. ದಿ. ಎಸ್.ಎಮ್ ಕೃಷ್ಣ ಅವರು ಸಿಎಂ ಆಗಿದ್ದಾಗ ಹೌಸಿಂಗ್ ಬೋರ್ಡ್ ಚೇರ್ಮನ್ ಆಗಿ ಹಲವು ಗಮನಾರ್ಹ ಕೆಲಸ ಮಾಡಿದ್ದರು. ಇಂದು (ಡಿ.12) ಮಧ್ಯಾಹ್ನ 12 ಗಂಟೆಯಿಂದ ಅವರ ಗಾಂಧಿನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ – ರಾಜ್ಯದ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ತುಮಕೂರು: ಬ್ಯಾಟಿಂಗ್ ಮಾಡುವ ಮೂಲಕ ತುಮಕೂರಿನ (Tumkur) ಸೋರೆಕುಂಟೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ (International Cricket Stadium) ನಿರ್ಮಾಣ ಕಾಮಗಾರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಚಾಲನೆ ನೀಡಿದ್ದಾರೆ. ಈ ವೇಳೆ ಗೃಹಸಚಿವ ಪರಮೇಶ್ವರ್ ವಿಕೆಟ್ ಕೀಪಿಂಗ್ ಮಾಡಿದ್ದಾರೆ. ಬಳಿಕ ಟೋಪಿ ಹಾಕಿಕೊಂಡೇ ಕ್ರೀಡಾಪಟುವಂತೆ ವೇದಿಕೆಗೆ ಸಿಎಂ ಆಗಮಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಆಗುವುದರಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗುತ್ತದೆ. ಕ್ರಿಕೆಟ್ ಕ್ರೀಡಾಂಗಣಕ್ಕೆ 41 ಎಕರೆ ಜಮೀನಿದ್ದು, ಖರಾಬು ಸೇರಿ 50 ಎಕರೆ ಕ್ರಿಕೆಟ್ ಸಂಸ್ಥೆಗೆ ಸಿಗುತ್ತಿದೆ. ಇದು ಬೆಂಗಳೂರಿಗೆ ಸಮೀಪದ ಸ್ಥಳವಾಗಿದೆ. ಇಲ್ಲಿ ಕ್ರೀಡಾಂಗಣ ಆಗುತ್ತಿರುವುದು ಸಂತೋಷದ ವಿಚಾರ. ಸಂಸ್ಥೆಗೆ ಮೈಸೂರಿನಲ್ಲೂ ಸರ್ಕಾರಿ ಜಮೀನು ಕೊಡುತ್ತೇವೆ ಎಂದು ಇದೇ ವೇಳೆ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ಒಟ್ಟು 50 ಎಕರೆ ಜಾಗವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ನೀಡಿದ್ದೇವೆ. ಇದು ತುಮಕೂರು ಜಿಲ್ಲೆಯ ಆರ್ಥಿಕ ಬೆಳವಣಿಗೆ ಮತ್ತು ಕ್ರೀಡಾ ಪ್ರಗತಿಗೆ ಪೂರಕವಾಗಲಿದೆ.
ಆದಷ್ಟು ಶೀಘ್ರದಲ್ಲಿ ಕ್ರೀಡಾಂಗಣ ನಿರ್ಮಾಣ ಮುಗಿಸಿ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಪೂರೈಸುವಂತೆ ಸೂಚನೆ… pic.twitter.com/qhnfa5yLG0
ಕ್ರಿಕೆಟ್ ಬೆಳೆಯಲು ಅವಕಾಶ ಕಲ್ಪಿಸಬೇಕು. ಇಲ್ಲಿ ತಂಬಾ ಜನ ಕ್ರಿಕೆಟ್ ಆಟಗಾರರಿದ್ದಾರೆ. ಈ ಕ್ರೀಡಾಂಗಣ ಅನೇಕ ಹುದ್ದೆಗಳನ್ನು ಸೃಷ್ಟಿಸಲಿದೆ. ಕ್ರಿಕೆಟ್ ಕ್ರೀಡಾಂಗಣ ಆಗಲಿದೆ ಎಂಬ ಮಾಹಿತಿ ಬೆನ್ನಲ್ಲೇ, ಎಕರೆ ಜಮೀನಿಗೆ 50 ಲಕ್ಷ ರೂ. ಏರಿಕೆ ಕಂಡಿದೆ. ನೋಡಪ್ಪ ಸುರೇಶ್‍ಗೌಡ ಎಂದು ಹಾಸ್ಯ ಚಟಾಕಿ ಸಿಡಿಸಿದ್ದಾರೆ.
ವಿರೋಧ ಪಕ್ಷದವರನ್ನು ಎದುರಿಸುವ ಶಕ್ತಿ ನಮಗಿದೆ. ನಾನು ಎರಡು ಬಾರಿ ವಿರೋಧ ಪಕ್ಷದ ನಾಯಕ, ಸಿಎಂ ಆಗಿದ್ದೇನೆ. ಹೆದರುವ ಪ್ರಶ್ನೆಯೇ ಇಲ್ಲ. ನಿಮಗೆ ಹೆದರಿಸುವ ಶಕ್ತಿ ನಮಗಿದೆ. ಸುರೇಶ್ ಗೌಡ ನಿನ್ನೆಯ ವರೆಗೂ ಹೇಗೋ ಇದ್ದರು. ಇಂದು ಸರಿಯಾಗಿದ್ದಾರೆ ಎಂದು ಬಿಜೆಪಿ ಶಾಸಕ ಸುರೇಶ್‌ಗೌಡ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಸುರೇಶ್ ಗೌಡ ಅವರು ಬಿಜೆಪಿ, ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ತಾರತಮ್ಯ ವಿಚಾರಕ್ಕೆ ಸಿಎಂ ವಿರುದ್ಧ ಕಪ್ಪು ಪಟ್ಟಿ ಪ್ರದರ್ಶನದ ಎಚ್ಚರಿಕೆ ನೀಡಿದ್ದರು. ಇನ್ನೂ ಇದೇ ವೇಳೆ ಪರಮೇಶ್ವರ್ ಅವರು ಸುರೇಶ್ ಗೌಡರ ಕ್ಷೇತ್ರಕ್ಕೆ ಅನುದಾನ ನೀಡುವಂತೆ ಸಿಎಂಗೆ ವೇದಿಕೆ ಮೇಲೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಹಾಗೂ ಜಿಲ್ಲೆಯ ಶಾಸಕ, ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರಘುರಾಮ್ ಭಟ್ ಮತ್ತು ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
-ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕು; ಸಿಎಂ, ಡಿಸಿಎಂಗೆ ಮನವಿ
ತುಮಕೂರು: ಜಿಲ್ಲೆಯು ಬಹಳ ವೇಗವಾಗಿ ಬೆಳೆಯಲಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಮೆಟ್ರೋ ರೈಲು (Metro Train) ಸೇವೆ ಕಲ್ಪಿಸಲು ಸಮಗ್ರ ಯೋಜನಾ ವರದಿಯ (DPR) ಪರಿಶೀಲನೆ ನಡೆಯುತ್ತಿದೆ ಎಂದು ಜಿ. ಪರಮೇಶ್ವರ್ (G Parameshwara) ತಿಳಿಸಿದರು.
ತುಮಕೂರಿನಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಾವಿರಾರು ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಪರಮೇಶ್ವರ್ ಮಾತನಾಡಿದರು. ತುಮಕೂರು ಜಿಲ್ಲೆಯಲ್ಲಿ ಇವತ್ತಿನ ಕಾರ್ಯಕ್ರಮ ಇತಿಹಾಸ ಸೃಷ್ಟಿ ಮಾಡಿದೆ. ಇವತ್ತು 1,250 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. 1.5 ಲಕ್ಷ ಫಲಾನುಭವಿಗಳಿಗೆ ಸವಲತ್ತು ಹಂಚಿಕೆಯಾಗಿದೆ. ಕಂದಾಯ ಇಲಾಖೆಯಿಂದ 2 ಸಾವಿರ ಹಕ್ಕು ಪತ್ರ ಕೊಟ್ಟಿದ್ದೇವೆ. 891 ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ತುಮಕೂರು ಬೆಂಗಳೂರಿನ ಭಾಗವಾಗಿ ಅಭಿವೃದ್ಧಿಯಾಗುತ್ತಿದೆ ಎಂದು ಶ್ಲಾಘಿಸಿದರು.
ಈಗಾಗಲೇ ಏಷ್ಯಾ ಖಂಡದಲ್ಲೇ ದೊಡ್ಡ ಕೈಗಾರಿಕಾ ಘಟಕ ಸ್ಥಾಪನೆಗೆ ಕ್ರಮ ಆಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಅಡಿಗಲ್ಲು ಹಾಕಲಾಗಿದೆ. ಈ ಮೂಲಕ ತುಮಕೂರು ವಿಶ್ವದ ಭೂಪಟದಲ್ಲಿ ಕಾಣಿಸಿಕೊಳ್ಳಲಿದೆ. ತುಮಕೂರು ಜಿಲ್ಲೆಗೆ ಕಾಯಕಲ್ಪ ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಸಹಕಾರ ನೀಡುತ್ತಿದೆ. 2023 ರಲ್ಲಿ ಈ ರಾಜ್ಯದ ಜನತೆಗೆ 5 ಗ್ಯಾರಂಟಿ ಭರವಸೆ ಕೊಟ್ಟಿದ್ದೆವು. ಆ ಐದು ಗ್ಯಾರಂಟಿ ಪರಿಪೂರ್ಣವಾಗಿ ಜಾರಿ ಮಾಡಿದ್ದು ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರ. ಆದರೆ 10 ಕೆಜಿ ಅಕ್ಕಿ ಕೊಡಲು ಆಗಿಲ್ಲ, ಬದಲಾಗಿ ದುಡ್ಡು ಕೊಟ್ಟಿದ್ದೇವೆ ಎಂದು ನುಡಿದರು. ಇದನ್ನೂ ಓದಿ: ರಾಜ್ಯದಲ್ಲಿ ಹಣ, ಹೆಂಡ ಹಂಚಿಕೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಪೈಪೋಟಿ ನೀಡಿದೆ: ಚರ್ಚೆಗೆ ಗ್ರಾಸವಾಯ್ತು ಬಿಕೆ ಹರಿಪ್ರಸಾದ್ ಮಾತು
ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆ ಬಹಳ ವೇಗವಾಗಿ ಬೆಳೆಯಲಿ. ತುಮಕೂರು ಜಿಲ್ಲೆಗೆ ಮೆಟ್ರೋ ರೈಲು ಬರುವ ಕಾಮಗಾರಿಯ ಡಿಪಿಆರ್ ನಡೀತಿದೆ ಎಂದರು. ಅಲ್ಲದೇ ತುಮಕೂರು, ಬೆಂಗಳೂರಿನಿಂದ ಕೇವಲ 65 ಕಿಮಿ ದೂರದಲ್ಲಿದೆ. ಹಾಗಾಗಿ ತುಮಕೂರಿಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕು. ರಾಜ್ಯದ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನ ಇಲ್ಲಿಗೆ ಕೊಡಬೇಕು ಎಂದು ಸಿಎಂ, ಡಿಸಿಎಂಗೆ ವೇದಿಕೆಯಲ್ಲೇ ಮನವಿ ಮಾಡಿದರು. ಇದನ್ನೂ ಓದಿ: ಪವನ್ ಕಲ್ಯಾಣ್ ಮನವಿ – ಆಂಧ್ರದ ಅರಣ್ಯ ಸಿಬ್ಬಂದಿಗೆ ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ತರಬೇತಿ
ತುಮಕೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರು (H.D Kumaraswamy) ಸಿದ್ದಗಂಗಾ ಮಠಕ್ಕೆ (Siddaganga Mutt) ಭೇಟಿ ನೀಡಿ, ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಸಿದಲಿಂಗಸ್ವಾಮಿಗಳ ಆಶೀರ್ವಾದ ಪಡೆದಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಭಿವೃದ್ಧಿ ಹೆಸರಿನಲ್ಲಿ ಚುನಾವಣೆ ಮಾಡಿರುವುದು. ಚನ್ನಪಟ್ಟಣದಲ್ಲಿ ಸೀರೆ ಪಂಚೆ ಹಂಚಿರುವುದಕ್ಕೂ, ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಆ ಕೆಲಸ ಮಾಡುತ್ತಿರುವುದು ಕಾಂಗ್ರೆಸ್‍ನವರು ಎಂದು ಆರೋಪಿಸಿದ್ದಾರೆ.
ಕಳೆದ ಬಾರಿ ಕಾಂಗ್ರೆಸ್ ಕಾರ್ಡ್‍ಗಳನ್ನು ನೀಡಿದ್ದು ನೋಡಿಲ್ವಾ? ಈಗಲೂ ಕಾಂಗ್ರೆಸ್‍ನವರು ನಕಲಿ ಆಫರ್ ಕಾರ್ಡ್ ಹಂಚುವ ಪ್ರಯೋಗ ಮಾಡುತ್ತಿದ್ದಾರೆ. ಹೊಸದೊಡ್ಡಿ ಬಳಿ ಸೀರೆ ಶರ್ಟ್ ಗಳು ಸೀಜ್ ಆಗಿದ್ದು ನಮಗೆ ಸಂಬಂಧಿಸಿದ್ದಲ್ಲ. ನಿಖಿಲ್ ಮದುವೆ ಸಂದರ್ಭದಲ್ಲಿ ಉಡುಗೊರೆ ನೀಡಬೇಕಿತ್ತು. ಕೋವಿಡ್ ಕಾರಣದಿಂದ ಕೊಡಲು ಆಗಿರಲಿಲ್ಲ. ನಿಖಿಲ್ ಆರ್ಡರ್ ಮಾಡಿದ್ದೆಲ್ಲಾ ಮಾರ್ಕೆಟ್‍ಗೆ ವಾಪಸ್ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಮೂರು ಉಪಚುನಾವಣೆ ಇದ್ದರೂ ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಹೆಚ್ಚು ಕಾತರ ಇದೆ. ಎಷ್ಟೇ ಅಪಪ್ರಚಾರ ಮಾಡಿದರೂ, ಚನ್ನಪಟ್ಟಣದ ಜನರ ಆಶೀರ್ವಾದ ನಮ್ಮ ಮೇಲಿದೆ. ಎನ್‍ಡಿಎ ಅಭ್ಯರ್ಥಿ ಗೆಲ್ಲಲಿದ್ದಾರೆ. ನೀರಾವರಿ ಬಗ್ಗೆ, ಅಭಿವೃದ್ಧಿ ಬಗ್ಗೆ ಇಂದಿನ ಪತ್ರಿಕೆಯಲ್ಲಿ ಪುಟಗಟ್ಟಲೇ ಗಮನಿಸಿದ್ದೇನೆ. ಅಲ್ಲದೇ ಟೀಕೆ ಟಿಪ್ಪಣಿ ಬಗ್ಗೆ ನೋಡಿದ್ದೇನೆ. ಇದಕ್ಕೆ ಚನ್ನಪಟ್ಟಣದ ಮತದಾರರು ಉತ್ತರ ನೀಡುತ್ತಾರೆ ಎಂದಿದ್ದಾರೆ.
ನಿಖಿಲ್ ಸೋಲಿಗೆ ಅವರ ಅಪ್ಪ, ಅಮ್ಮ ಮಾಡಿದ ಪಾಪಗಳೇ ಕಾರಣ ಎಂದು ಡಿ.ಕೆ ಸುರೇಶ್ ಹೇಳಿಕೆ ವಿಚಾರವಾಗಿ, ಏನ್ ಪಾಪ ಮಾಡಿದ್ದಾರೆ, ಯಾರು ಏನ್ ಮಾಡಿದ್ದಾರೆ ಎಂದು ಗೊತ್ತಿದೆ. ಕಲ್ಲು ಗಣಿಗಾರಿಕೆಯಿಂದ ಇವರು ಎಷ್ಟು ಕುಟುಂಬ ಹಾಳು ಮಾಡಿದ್ದಾರೆ ಎಂದು ಗೊತ್ತಿದೆ. ಪಾಪದ ಕೆಲಸ ಮಾಡಿದವರು ಅವರು, ಅವರ ಪಾಪದ ಕೆಲಸದ ವಿರುದ್ಧ ಹೋರಾಟ ಮಾಡುತ್ತಿರುವವರು ನಾವು ಎಂದು ಟಾಂಗ್ ಕೊಟ್ಟಿದ್ದಾರೆ.
ಶಕ್ತಿ ಯೋಜನೆ ವಿಚಾರವಾಗಿ, ಕಾಂಗ್ರೆಸ್ ಆಡಳಿತ ಹೇಗೆ ನಡೆಯುತ್ತಿದೆ ಎಂದು ಖರ್ಗೆ ಹೇಳಿದ್ದಾರೆ. ಖರ್ಗೆಯವರು ಅಕ್ಕ ಪಕ್ಕ ಕೂರಿಸಿಕೊಂಡು ಹೇಳಿದ್ದಾರೆ. ಇದು ಆರಂಭದ ಹಂತ, ಗ್ಯಾರಂಟಿ ಒಂದೊಂದೆ ವಾಪಸ್ ಪಡೆಯುವ ಪ್ರಯತ್ನ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ದೇವಸ್ಥಾನದ ಆಸ್ತಿಯ ದಾಖಲೆಯಲ್ಲಿ ವಕ್ಫ್ ಬೋರ್ಡ್ ಹೆಸರಿನ ವಿಚಾರವಾಗಿ, ಇದು ಯಾಕೆ ಆರಂಭವಾಗಿದೆ ಎಂದರೆ, ಇಲ್ಲಿ ಕಾಂಗ್ರೆಸ್‍ನ ದುರಾಡಳಿತ ಪ್ರಾರಂಭವಾಗಿದೆ. ಕಾಂಗ್ರೆಸ್‍ನ ಅಕ್ರಮ ಮುಚ್ಚಿಕೊಳ್ಳುವ ಪ್ರಯತ್ನ ಇದು. ನ್ಯಾಯಾಂಗದಲ್ಲಿ ಚರ್ಚೆಗಳು ಆರಂಭವಾಗಿವೆ ಇದಕ್ಕೆ ಉತ್ತರ ಸಿಗಲಿದೆ ಎಂದಿದ್ದಾರೆ.
ತುಮಕೂರು: ನಿರಂತರ ಮಳೆಯಿಂದಾಗಿ (Rainfall) ರಾಜ್ಯಾದ್ಯಂತ ವರುಣನ ಆರ್ಭಟ ಮುಂದುವರಿದಿದೆ. ಕಳೆದ ಎರಡು-ಮೂರು ದಿನಗಳಿಂದ ನಿರಂತರ ಮಳೆಯಿಂದಾಗಿ ಒಳಹರಿವು ಹೆಚ್ಚಳವಾಗಿದ್ದು, ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯ (Markonahalli dam) ಭರ್ತಿಯಾಗಿದೆ. ಇದು ಸ್ಥಳೀಯ ರೈತರ ಮೊಗದಲ್ಲಿ ಮಂದಹಾಸ ತರಿಸಿದೆ.
ಎರಡು ಸ್ವಯಂ ಚಾಲಿತ ಸೈಫನ್ ಗೇಟ್ ಮೂಲಕ ಶಿಂಷಾ ನದಿಗೆ ನೀರು ಹರಿಸಲಾಗುತ್ತಿದೆ. ಆದ್ದರಿಂದ ಮಾರ್ಕೋನಹಳ್ಳಿ, ಕಾಡುಶೆಟ್ಟಿಹಳ್ಳಿ, ಬಿಸಿನೆಲೆ, ತೊರೆಹಳ್ಳಿ ಸೇರಿದಂತೆ ನದಿ ಪಾತ್ರದ ಗ್ರಾಮಗಳಲ್ಲಿರುವ ಜನರು ಎಚ್ಚರಿಕೆಯಿಂದ ಇರುವಂತೆ ತಹಶೀಲ್ದಾರ್ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿರೋ ದರ್ಶನ್‌ಗೆ ಮತ್ತೊಂದು ಸಂಕಷ್ಟ: ಪ್ರೊಡ್ಯೂಸರ್‌ಗೆ ಬೆದರಿಕೆ ಕೇಸ್‌ಗೆ ಮರುಜೀವ
ದಾವಣಗೆರೆಯಲ್ಲಿ ಮಳೆ ಅವಾಂತರ:
ರಾಜ್ಯಾದ್ಯಂತ ಹಿಂಗಾರು ಮಳೆ ಅಬ್ಬರ ಮುಂದುವರಿದಿದೆ. ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಗೆ ದಾವಣಗೆರೆ ನಲುಗಿ ಹೋಗಿದೆ. ಹರಿಹರದ ಕಾಳಿದಾಸ ನಗರ, ಬೆಂಕಿನಗರ, ಪ್ರಶಾಂತ್ ನಗರದಲ್ಲಿ ನೂರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಅಹೋರಾತ್ರಿ ಇಲ್ಲಿನ ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ಕಾಲ ಕಳೆಯುವಂತಾಗಿದೆ. ಮನೆಯ ವಸ್ತುಗಳೆಲ್ಲಾ ನೀರಿನಲ್ಲಿ ಚಿಲ್ಲಾಪಿಲ್ಲಿ ಆಗಿವೆ. ದಾವಣಗೆರೆ-ಹರಪನಹಳ್ಳಿ ರಾಜ್ಯ ಹೆದ್ದಾರಿಯಲ್ಲಿನ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ನಗರದ ಹಲವೆಡೆ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದ ಪರಿಣಾಮ ವಾಹನಗಳು ನೀರಿನಲ್ಲಿ ಮುಳುಗಡೆ ಆಗಿದ್ದವು. ಹರಿಹರ ಪಟ್ಟಣದ ಭೀಮ ನಗರದಲ್ಲಿ ಮನೆ ಗೋಡೆಯ ಸಿಮೆಂಟ್ ಇಟ್ಟಿಗೆ ಬಿದ್ದು ಮಗು ಸಾವು ಬದುಕಿನ ಮಧ್ಯ ಹೋರಾಡ್ತಿದೆ. ಇನ್ನೂ ನೀರು ನುಗ್ಗಿದ ಪ್ರದೇಶಗಳಿಗೆ ಶಾಸಕರು, ಅಧಿಕಾರಿಗಳು ಭೇಟಿ ನೀಡಿದ್ರು.
ತುಮಕೂರು: ಗೌರಿ-ಗಣೇಶ ಹಬ್ಬ ಮುಗಿಸಿಕೊಂಡು ವಾಪಸ್ ಮನೆಗೆ ಬರುತ್ತಿದ್ದ ವೇಳೆ ಭೀಕರ ಕಾರು ಅಪಘಾತದಲ್ಲಿ (Car Accident) ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು ಐವರು ದಾರುಣ ಸಾವಿಗೀಡಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಒಂದು ಕಾರಿನಲ್ಲಿ ಮೂವರು, ಮತ್ತೊಂದು ಕಾರಿನಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.
ತುಮಕೂರು (Tumkur) ಜಿಲ್ಲೆಯ ಮಧುಗಿರಿ ತಾಲೂಕಿನ ಕೆರೆಗಳಪಾಳ್ಯ ಹಾಗೂ ಕಾಟಗಾನಹಟ್ಟಿ ಬಳಿ ಘಟನೆ ನಡೆದಿದ್ದು, ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಇನ್ನುಳಿದವರ ಹೆಸರು ಪತ್ತೆಯಾಗಿಲ್ಲ, ಅಪಘಾತಕ್ಕೀಡಾದವರ ಪೈಕಿ ಕಾರಿನಲ್ಲಿದ ಮತ್ತೋರ್ವ ಮಹಿಳೆ ಮತ್ತು ಓರ್ವ ಬಾಲಕನ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕುಸ್ತಿಪಟುಗಳ ಬಗ್ಗೆ ಮಾತನಾಡಬೇಡಿ – ಬ್ರಿಜ್ ಭೂಷಣ್ ಸಿಂಗ್‍ಗೆ ಬಿಜೆಪಿ ಎಚ್ಚರಿಕೆ
ತುಮಕೂರು ಕಡೆಯಿಂದ ಬರುತ್ತಿದ್ದ ಸಿಯಾಜ್ ಮಾರುತಿ ಕಾರು ಹಾಗೂ ಮಧುಗಿರಿ ಕಡೆಯಿಂದ ತುಮಕೂರು ಕಡೆಗೆ ಹೊರಟಿದ್ದ ಟಾಟಾ ಟಿಯಾಗೋ ಕಾರಿನ ನಡುವೆ ಅಫಘಾತ ಸಂಭವಿಸಿದೆ. ಸ್ಥಳಕ್ಕೆ ತುಮಕೂರು ಎಸ್ಪಿ ಕೆ.ವಿ ಅಶೋಕ್ ಹಾಗೂ ಮಧುಗಿರಿ ಠಾಣೆ ಪಿಎಸ್‌ಐ ವಿಜಯ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಂತರ ಅಪಘಾತಕ್ಕೀಡಾದ ಕಾರುಗಳನ್ನ ಸ್ಥಳದಿಂದ ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದನ್ನೂ ಓದಿ: ಕ್ರಿಶ್ಚಿಯನ್ ಧರ್ಮದ ಉನ್ನತೀಕರಣಕ್ಕೆ ಸರ್ಕಾರದಿಂದ ಅಗತ್ಯ ಸಹಕಾರ – 5 ಕೋಟಿ ಅನುದಾನ ಘೋಷಿಸಿದ ಸಿಎಂ
ಅಪಘಾತ ಆಗಿದ್ದು ಹೇಗೆ?
ಮೃತ ಯೋಗೇಶ್ ಕುಟುಂಬಸ್ಥರು ಗೌರಿ-ಗಣೇಶ ಹಬ್ಬಕ್ಕೆಂದು ಊರಿಗೆ ತೆರಳಿದ್ದರು. ಬೆಂಗಳೂರಿನ ಜೆಪಿ ನಗರದಲ್ಲಿ ವಾಸವಾಗಿದ್ದ ಯೋಗೇಶ್ ಕುಟುಂಬ ಭಾನುವಾರ ಹಬ್ಬ ಮುಗಿಸಿಕೊಂಡು ವೈ.ಎನ್ ಹೊಸಕೋಟೆ ಕಡೆಯಿಂದ ಬೆಂಗಳೂರಿಗೆ ಹೊರಟಿತ್ತು. ಇತ್ತ ಮೃತ ನಾಗರಾಜ್ ಕೊರಟಗೆರೆ ಕಡೆಯಿಂದ ಮಧುಗಿರಿ ಕಡೆಗೆ ತೆರಳಿದ್ದರು. ಮಧುಗಿರಿ ತಾಲೂಕಿನ ಕಾಟಗಾನಹಟ್ಟಿ ಹಾಗೂ ಕೆರೆಗಳಪಾಳ್ಯ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಎರಡು ಕಾರಗಳು ಸಂಪೂರ್ಣ ಜಖಂ ಆಗಿವೆ.