Tag: tumkur

  • ಬಿಜೆಪಿ ಸರ್ಕಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ: ಸಿದ್ದರಾಮಯ್ಯ

    ಬಿಜೆಪಿ ಸರ್ಕಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ: ಸಿದ್ದರಾಮಯ್ಯ

    – ಜನ ಶಕ್ತಿ ಮುಂದೆ ರಾಜ ಶಕ್ತಿ ಏನು ಮಾಡಲು ಆಗಲ್ಲ

    ತುಮಕೂರು: ಬಿಜೆಪಿ ಸರ್ಕಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದರು.

    ಬಿಜೆಪಿ ಸರ್ಕಾರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ. ಇವತ್ತು ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ. ರೈತರು ಒಂದು ವರ್ಷದಿಂದ ಹೋರಾಟ ಮಾಡುತ್ತಿದ್ದಾರೆ. 700 ಜನ ರೈತರು ಪ್ರಾಣ ತ್ಯಾಗ ಮಾಡಿದ್ದಾರೆ. ಈಗ ಪ್ರಧಾನಿ ಮೋದಿ ಅವರಿಗೆ ಜ್ಞಾನೋದಯ ಆಗಿದೆ. ಅದಕ್ಕೆ ಕೃಷಿ ಕಾಯ್ದೆ ವಾಪಸ್ ಪಡೆಯುವ ಬಗ್ಗೆ ಹೇಳಿದ್ದಾರೆ. ಮುಂಚಿತವಾಗಿ ತಗೊಂಡ್ರೆ ರೈತರ ಪ್ರಾಣ ಉಳಿಯುತಿತ್ತು ಎಂದು ಆರೋಪಿಸಿದರು.

    ಪ್ರಾಣ ಹೋಗಲು ನೇರವಾಗಿ ಮೋದಿ ಮತ್ತು ಅವರ ಸರ್ಕಾರವೇ ಕಾರಣ. ರೈತ ಹೋರಾಟಕ್ಕೆ ಐತಿಹಾಸಿಕ ಜಯ ಸಿಕ್ಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಆಕ್ರೋಶಕ್ಕೆ ಸರ್ಕಾರ ಮಣಿಯಬೇಕಾಗುತ್ತದೆ. ಜನ ಶಕ್ತಿ ಮುಂದೆ ರಾಜ ಶಕ್ತಿ ಏನೂ ಮಾಡಲು ಆಗಲ್ಲ. ಜನ ಶಕ್ತಿ ಅಂಕುಶದಲ್ಲಿ ರಾಜ ಶಕ್ತಿ ಇರಬೇಕು. ರೈತರಿಗೆ ದೊಡ್ಡ ನಮಸ್ಕಾರ, ಮೃತ ರೈತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕೊಡಬೇಕು. ಮೋದಿ ಜೀ ನೀವು ರೈತರ ವಿರುದ್ಧ ಇರಲು ಸಾಧ್ಯವಿಲ್ಲ. ಇದನ್ನು ಅನ್ನದಾತರು ಸಹಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ:  70 ವರ್ಷದ ದೇಶದ ಸಾಧನೆಯನ್ನು ಪ್ರಶ್ನಿಸುತ್ತಿರುವುದು ದುರದೃಷ್ಟಕರ: ಭೂಪೇಶ್ ಬಘೇಲ್

    ನರೇಂದ್ರ ಮೋದಿ ಜೀ, ಅಮಿತ್ ಶಾ ಜೀ, ಯಡಿಯೂರಪ್ಪ ಜೀ, ನಿಮಗೆ ನಾಚಿಕೆ ಆಗಲ್ವಾ. ಸಿಲಿಂಡರ್ ಬೆಲೆ ಜಾಸ್ತಿ ಆದಾಗ ಶೊಭಾ ಕರಂದ್ಲಾಜೆ ಅವರು ತಲೆ ಮೇಲೆ ಹೊತ್ತು ಹೋರಾಟ ಮಾಡಿದ್ರು. ಈಗ ಶೋಭಾ ಜೀ ಆಪ್ ಕಂಹಾ ಹೈ(ಎಲ್ಲಿದ್ದೀರಾ ನೀವು?) ಎಂದು ಹಾಸ್ಯ ಮಾಡಿದರು.

    ಮೋದಿ ಅವರು ಒಳ್ಳೆ ದಿನ ಬರುತ್ತೆ ಅಂದರು. ಎಲ್ಲಿ ಮೋದಿ ಜೀ ಒಳ್ಳೆ ದಿನ. ಬಿಜೆಪಿ ಜನ ಸ್ವರಾಜ್ ಎಂದು ಶಂಖ, ಕೊಂಬು ಊದಿಕೊಂಡು ಹೊರಟಿದ್ದಾರೆ. ಶಂಖಕ್ಕೆ ಕೊಂಬುಗೆ ಮರ್ಯಾದೆ ಇದೆ. ಅದರ ಮರ್ಯಾದೆ ತೆಗೆಯಲು ಇವರು ಹೊರಟಿದ್ದಾರೆ. ಬಿಜೆಪಿಯವರಿಗೆ ಮಾನ ಮರ್ಯಾದೆ ಏನೂ ಇಲ್ಲ, ಲಜ್ಜೆಗೆಟ್ಟವರು. ಗ್ರಾಮ ಸ್ವರಾಜ್ ಯಾತ್ರೆ ಮಾಡಲು ಹೊರಟಿದ್ದಾರೆ. ಅಧಿಕಾರ ವಿಕೇಂದ್ರೀಕರಣಕ್ಕೆ ವಿರೋಧ ಬಿಜೆಪಿ ಅಂಥವರು ಗ್ರಾಮ ಸ್ವರಾಜ್ ಮಾಡಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.

    ಸಚಿವ ಈಶ್ವರಪ್ಪ ಒಬ್ಬ ಪೆದ್ದ. ಜನರಿಗೆ ನೀವು ಮತ ಕೊಟ್ಟರೆ ನಾವು ಗ್ಯಾರಂಟಿ ಕೊಡ್ತೀವಿ ಅಂದಿದ್ದಾರೆ. ಜನರ ದುಡ್ಡು ಜನರಿಗೆ ಕೊಡಲು ಈ ರೀತಿ ಹೇಳುತ್ತಾರೆ. ಕಳೆದ ಬಾರಿ ಪರಿಷತ್ ನಲ್ಲಿ ತುಮಕೂರಿನಲ್ಲಿ ಸೋತಿದ್ದಿವಿ. ಆದರೆ ಈ ಬಾರಿ ಗೆಲ್ತೀವಿ, ಆರ್. ರಾಜೇಂದ್ರ ಅವರು ಇಲ್ಲಿ ಅಭ್ಯರ್ಥಿಯಾಗಿದ್ದಾರೆ. ನೂರಕ್ಕೆ ನೂರು ಈ ಬಾರಿ ರಾಜೇಂದ್ರ ಗೆಲ್ಲುತ್ತಾರೆ. ಮಳೆಯಿಂದಾಗಿ 1 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಆ ಸಿಎಂ ಬೊಮ್ಮಾಯಿ ಚಲನಚಿತ್ರ ಬಿಡುಗಡೆ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಬೊಮ್ಮಾಯಿ ಅವರಿಗೆ ರೈತರ ಬಗ್ಗೆ ಕನಿಕರ ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ನಡುಗಡ್ಡೆಯಲ್ಲಿ ಸಿಲುಕಿದ 500 ದನಕರುಗಳು – ಹಸುಗಳನ್ನು ಕಾಪಾಡುವಂತೆ ಡಿಸಿಗೆ ಮನವಿ

    BJP - CONGRESS

    5 ಟ್ರಿಲಿಯನ್ ಆದಾಯ ಮಾಡ್ತೀನಿ ಅಂದರು. ಇನ್ನೂ ಮೋದಿ ಅವರ ಹೆಸರಲ್ಲಿ ಬದುಕುತ್ತಿದ್ದಾರೆ. ಬಿಜೆಪಿಗೆ ಅವರಿಗೆ ಧಮ್ ಇಲ್ಲ. ಹಾಗಾಗಿ ಮೋದಿ ಅವರ ಹೆಸರಲ್ಲೇ ಬದುಕುತಿದ್ದಾರೆ. ಕಾಂಗ್ರೆಸ್ ಸರ್ಕಾರ 10 ಪರ್ಸೆಂಟ್ ಸರ್ಕಾರ ಎಂದು ಮೋದಿ ಹೇಳಿದ್ರು. ಈಗ ಗುತ್ತಿಗೆದಾರರ ಅಧ್ಯಕ್ಷ ಕೆಂಪಣ್ಣ ಮೋದಿ ಅವರಿಗೆ ಪತ್ರ ಬರೆದು ರಾಜ್ಯ ಸರ್ಕಾರದ ಶೇಕಡಾವಾರು ತಿಳಿಸಿದ್ದಾರೆ. ಬೊಮ್ಮಾಯಿ ನಿಮಗೆ ಮಾನ ಮರ್ಯಾದೆ ಇದ್ರೆ, ಶೇ.30-40 ಲಂಚ ಪಡೀತಿದ್ದಾರೆ. ಇಂಥಹ ಸರ್ಕಾರ ಕಿತ್ತೊಗೆಯಬೇಕು. ಭ್ರಷ್ಟಾಚಾರ, ಕಪಟತನ ಬಯಲಿಗೆ ತಂದು ಅವರನ್ನು ಬೆತ್ತಲೆ ಮಾಡುವ ಕೆಲಸ ಮಾಡುತ್ತೇವೆ. ರೈತರಿಗೆ ಪರಿಹಾರ ಕೊಡಬೇಕು ಎಂದು ಒತ್ತಾಯ ಮಾಡುತ್ತೇವೆ ಎಂದು ಭರವಸೆಯನ್ನು ನೀಡಿದರು.

  • ಇಸ್ರೇಲ್‍ನಲ್ಲೇ ನನ್ನ ಪ್ರಾಣ ಹೋಗ್ಬೇಕಿತ್ತು: ಹೆಚ್‍ಡಿಕೆ

    ಇಸ್ರೇಲ್‍ನಲ್ಲೇ ನನ್ನ ಪ್ರಾಣ ಹೋಗ್ಬೇಕಿತ್ತು: ಹೆಚ್‍ಡಿಕೆ

    ತುಮಕೂರು: ಇಸ್ರೇಲ್‍ನಲ್ಲೇ ನನ್ನ ಪ್ರಾಣ ಹೋಗಬೇಕಿತ್ತು. ನನ್ನ ತಂದೆ ತಾಯಿಯ ಆರ್ಶಿವಾದದಿಂದ ನಾನು ಉಳಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ಗುಬ್ಬಿ ಸಮಾವೇಶದಲ್ಲಿ ಮಾತನಾಡಿದ ಅವರು, ಇವತ್ತಿನ ಈ ಕಾರ್ಯಕ್ರಮ ಬಯಸಿ ಬಂದ ಕಾರ್ಯಕ್ರಮ ಅಲ್ಲ. 2018 ಚುನಾವಣೆ ನಂತರ ಯಾವುದೇ ಬಹುಮತ ಬರಲಿಲ್ಲ. ಜೆಡಿಎಸ್‍ಗೆ ಬಂದಿದ್ದು 37 ಸ್ಥಾನಗಳು. ಕಾಂಗ್ರೆಸ್ ನಾಯಕರೇ ಬಂದು ಸರ್ಕಾರ ಮಾಡಲು ದುಂಬಾಲು ಬಿದ್ದರು. ಖರ್ಗೆ ಅವರನ್ನೇ ಸಿಎಂ ಮಾಡಿ ಎಂದು ದೇವೇಗೌಡರು ಹೇಳಿದರು. ಆದರೆ ದೆಹಲಿಯ ನಾಯಕರು ನೀವೇ ಮುಖ್ಯಮಂತ್ರಿ ಆಗಿ ಎಂದರು. ಲಕ್ಷಾಂತರ ಕಾರ್ಯಕರ್ತರು ಕಟ್ಟಿರುವ ಪಕ್ಷ ಇದು. ಆದರೆ ಬಿಜೆಪಿಯ ಬಿ ಟೀಂ ಆಗಿ ಜೆಡಿಎಸ್ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸಿಗರು ಆರೋಪಿಸಿಸುತ್ತಿದ್ದಾರೆ ಎಂದು ಕಿಡಿಕಾರಿದರು.

    HDD

    ಮುಸ್ಲಿಂ ಭಾಂದವರಲ್ಲಿ ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. 130 ಸ್ಥಾನ ಇದ್ದ ಕಾಂಗ್ರೆಸ್ ನಮ್ಮನ್ನು ಮುಗಿಸಲು ಬಂದು 78 ಸ್ಥಾನಕ್ಕೆ ಬಂದಿದೆ. ಮುಸ್ಲಿಂ ಭಾಂದವರೇನಾದರೂ ನಮ್ಮ ಜೊತೆ ಇದ್ದಿದ್ದರೇ 70 ಸ್ಥಾನ ಗೆಲ್ಲುತ್ತಿದ್ವಿ. ಈ ಜಿಲ್ಲೆಯಲ್ಲಿ ಏನೋ ಆಗೋಗಿದೆ, ಜೆಡಿಎಸ್ ಮುಗಿದೋಯ್ತು. ಅವರೇ ಆಚೆ ಕಳಿಸ್ತಿದ್ದಾರೆ ಅಂತೆಲ್ಲಾ ಹೇಳುತ್ತಿದ್ದಾರೆ. 23 ಸ್ಥಾನಕ್ಕೆ ಪೈಪೋಟಿ ನೀಡುತ್ತಿದ್ದಾರೆ ಅಂತ ಚರ್ಚೆ ಮಾಡಿದ್ದಾರೆ ಎಂದು ಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೇರೆ ಮನೆ ಮಾಡಲು ಒಪ್ಪದ ಪತಿ -ಕಂದನನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ

    1999ರಲ್ಲಿ ಗುಬ್ಬಿಯಲ್ಲಿ ವೀರಣ್ಣಗೌಡರು ಶಾಸಕರಾಗಿದ್ದರು. 10 ಜನರಲ್ಲಿ 6 ಜನರು ಜನತಾಪಕ್ಷದಿಂದ ಕಾಂಗ್ರೆಸ್ ಸೇರ್ಪಡೆಯಾದರು. 2004ರ ಚುನಾವಣೆ ಚನ್ನಿಗಪ್ಪ ಶಿವನಂಜಪ್ಪ ಅವರ ಮನೆಗೆ ದೇವೇಗೌಡರನ್ನು ಕರೆದುಕೊಂಡು ಹೋಗಿ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಅಂದೇ ಶಿವನಂಜಪ್ಪ ಅವರಿಗೆ ಟಿಕೆಟ್ ಕೊಡುತ್ತೇನೆ ಅಂತ ಮಾತು ಕೊಟ್ಟಿದ್ದರು. ಬಳಿಕ ಶ್ರೀನಿವಾಸ್ ಅವರು ಬಂದು ಗುಬ್ಬಿಗೆ ಟಿಕೆಟ್ ಕೇಳಿದ್ದರು. ಶಿವನಂಜಪ್ಪ ಅವರಿಗೆ ಮಾತು ಕೊಟ್ಟಿದ್ದರಿಂದ ಪಕ್ಷೇತರ ನಿಲ್ಲಿ ಎಂದು ನಾನೇ ಹೇಳಿದ್ದೆ. ಆ ಚುನಾವಣೆಯಲ್ಲಿ ನಿಮ್ಮೆಲರ ಆಶೀರ್ವಾದದಿಂದ ಗೆದ್ದರು. ಬಹಳ ಅನ್ಯೋನ್ಯವಾಗಿದ್ದರು, ನನ್ನ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ಗುಬ್ಬಿ ತಾಲೂಕಿನ ಯಾವುದೇ ಅಭಿವೃದ್ದಿ ಕೆಲಸಗಳಿಗೆ ಅವರೇನು ಕಾಯಬೇಕಿರಲಿಲ್ಲ. ಗುಬ್ಬಿ ತಾಲೂಕಿನ ಎಲ್ಲಾ ಅಭಿವೃದ್ದಿ ಕೆಲಸ ಮಾಡಿಕೊಟ್ಟಿದ್ದೇವೆ ಎಂದರು. ಇದನ್ನೂ ಓದಿ: ನಿಮ್ಮಿಂದ ಬೆಳೆದಿರೋದು ನಾವು – ಕಣ್ಣೀರು ಹಾಕಿದ ಹೆಚ್‍ಡಿಕೆ

    ಬಳಿಕ 2008ರಲ್ಲಿ ನಿಂತು ಗೆದ್ದರು. ನಾನು ಚಿಕ್ಕಬಳ್ಳಾಪುರದಲ್ಲಿ ಲೋಕಸಭೆಯಲ್ಲಿ ಸ್ಪರ್ಧಿಸಿದೆ. ನಾನು ಬೇರೆ ಕಡೆ ಪ್ರಚಾರಕ್ಕೆ ಹೋಗಿ, ಚಿಕ್ಕಬಳ್ಳಾಪುರದಲ್ಲಿ ಸೋತೆ. ಅದೇನೋ ಸೂಟ್ ಕೇಸ್, ನಾನೇ ಬೆಳೆಸ್ದೆ ಅಂತೆಲ್ಲಾ ಭಾಷಣ ಮಾಡಿದ್ರಲ್ಲಾ, 2013 – 14 ರಿಂದಲೇ ನನ್ನ ವಿರುದ್ಧ ಕೆಲವರು ಮಾತನಾಡುವುದಕ್ಕೆ ಶುರುಮಾಡಿದ್ರು. ನಾನು ಇವತ್ತು ದೇವಸ್ಥಾನಕ್ಕೆ ಹೋಗಿ ಬಂದಿದ್ದೇನೆ. ನನ್ನಿಂದ ಯಾವುದೇ ಅಪಚಾರವಾಗಿಲ್ಲ. ನಮ್ಮ ಕುಟುಂಬದಲ್ಲಿ ದುಡ್ಡು ಇಟ್ಟುಕೊಂಡು ನಾವು ರಾಜಕೀಯ ಮಾಡಿಲ್ಲ. ನಿಮ್ಮಂತ ಜನರನ್ನು ವಿಶ್ವಾಸದಲ್ಲಿಟ್ಟುಕೊಂಡು ಚುನಾವಣೆ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ರೋಹಿತ್ ಡ್ರಾಪ್ ಮಾಡ್ತೀರಾ – ಪ್ರಶ್ನೆಗೆ ತಲೆ ಕೆಳಗಡೆ ಹಾಕಿ Unbelievable ಎಂದ ಕೊಹ್ಲಿ

    ಇದೇ ವೇಳೆ ಇಸ್ರೇಲ್‍ನಲ್ಲೇ ನನ್ನ ಪ್ರಾಣ ಹೋಗಬೇಕಿತ್ತು. ನನ್ನ ತಂದೆ ತಾಯಿಯ ಆಶೀರ್ವಾದದಿಂದ ನಾನು ಉಳಿದೆ. ದೇವೇಗೌಡರು ಈ ವಯಸ್ಸಿನಲ್ಲೂ ಓಡಾಡುತ್ತಾರೆ ಎಂದು ಹೇಳುತ್ತಾ ಭಾಷಣ ಮಾಡುತ್ತಾ ಭಾವುಕರಾದರು.

  • ನಿಮ್ಮಿಂದ ಬೆಳೆದಿರೋದು ನಾವು – ಕಣ್ಣೀರು ಹಾಕಿದ ಹೆಚ್‍ಡಿಕೆ

    ನಿಮ್ಮಿಂದ ಬೆಳೆದಿರೋದು ನಾವು – ಕಣ್ಣೀರು ಹಾಕಿದ ಹೆಚ್‍ಡಿಕೆ

    ತುಮಕೂರು: ನಿಮ್ಮಿಂದ ಬೆಳೆದಿರೋದು ನಾವು ಎಂದು ಹೇಳಿ ಮಾಜಿ ಹೆಚ್.ಡಿ.ಕುಮಾರಸ್ವಾಮಿ ಭಾವುಕರಾಗಿದ್ದಾರೆ.

    ಗುಬ್ಬಿಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸಂಪರ್ಕ ಮುಗ್ಧ ಹಳ್ಳಿಗಳ ಜನರೊಂದಿಗೆ. ನಿಮ್ಮಿಂದ ನಾವು ಬೆಳೆದಿದ್ದೇವೆ. ನಮ್ಮ ಕುಟುಂಬದಲ್ಲಿ ದುಡ್ಡು ಇಟ್ಟುಕೊಂಡು ರಾಜಕಾರಣ ಮಾಡಿಲ್ಲ. ನಿಮ್ಮಂಥಹ ಲಕ್ಷಾಂತರ ಜನರ ಬೆಂಬಲ ಇಟ್ಟುಕೊಂಡು ರಾಜಕಾರಣ ಮಾಡಿದ್ದೇವೆ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಸೋಲಿಸಿ ಬಿಜೆಪಿ ಗೆಲ್ಲಿಸೋದೇ ಸಿದ್ದು & ಟೀಂನ ಉದ್ದೇಶ: ಹೆಚ್‍ಡಿಕೆ ಕಿಡಿ

    ಲಕ್ಷಾಂತರ ಕಾರ್ಯಕರ್ತರಿಂದ ನಾವು ಕೆಲಸ ಮಾಡಿದ್ದೇವೆ. ದುಡ್ಡಿನ ವ್ಯವಹಾರ ನಡೆಸಿ ನಾವು ಅಧಿಕಾರಕ್ಕೆ ಬಂದಿಲ್ಲ. ಒಮ್ಮೆ ರಾತ್ರಿ 10 ಗಂಟೆಗೆ ಈ ನಮ್ಮ ಸ್ನೇಹಿತರು ನಾನೇ ತಪ್ಪು ಮಾಡಿದ್ದೇನೆ ಎಂದು ಆರೋಪಿಸಿದರು. ನಾನೇ ತಪ್ಪು ಮಾಡಿದ್ದೇನೆ ಎಂದು ಕೆಲವರು ಪಂಚಾಯಿತಿಯನ್ನು ಮಾಡಿದ್ದಾರೆ. ಅದು ಏಕೆ? ಹಣಕಾಸಿನ ವಿಚಾರದಲ್ಲಿಯೇ ಈ ರೀತಿ ಪಂಚಾಯಿತಿಯಾಗಿದೆ ಎಂದರು. ಇದನ್ನೂ ಓದಿ: ಆಟೋ ಚಾಲಕರನ್ನ ಅವಾಚ್ಯ ಪದಗಳಿಂದ ನಿಂದಿಸಿದ ಸಿವಿಲ್ ಪೊಲೀಸ್

    ನಾವು ನಿಮ್ಮ ಆಶೀರ್ವಾದದಿಂದ ಕೆಲಸ ಮಾಡಿರೋರು ಎಂದು ಹೇಳುತ್ತಾ ಅವರು ಪಕ್ಷ ಕಟ್ಟಿದನ್ನು ನೆನೆದು ಕುಮಾರಸ್ವಾಮಿ ಭಾವುಕರಾದರು.

  • ಕುಮಾರಸ್ವಾಮಿ ಎಲ್ಲಾ ಕ್ಷೇತ್ರದಲ್ಲೂ ಇಬ್ಬಿಬ್ಬರನ್ನು ಇಟ್ಟಿರ್ತಾರೆ: ಎಸ್.ಆರ್ ಶ್ರೀನಿವಾಸ್

    ಕುಮಾರಸ್ವಾಮಿ ಎಲ್ಲಾ ಕ್ಷೇತ್ರದಲ್ಲೂ ಇಬ್ಬಿಬ್ಬರನ್ನು ಇಟ್ಟಿರ್ತಾರೆ: ಎಸ್.ಆರ್ ಶ್ರೀನಿವಾಸ್

    ತುಮಕೂರು: ನಮ್ಮ ನಾಯಕರಾಗಿರುವ ಹೆಚ್.ಡಿ ಕುಮಾರಸ್ವಾಮಿಯವರು ಎಲ್ಲಾ ಕ್ಷೇತ್ರದಲ್ಲೂ ಇಬ್ಬಿಬ್ಬರು ಅಭ್ಯರ್ಥಿಗಳನ್ನ ಇಟ್ಟಿರ್ತಾರೆ. ಅದು ನಮ್ಮ ನಾಯಕರ ಗುಣ ಎಂದು ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಮಾಜಿ ಮುಖ್ಯಮಂತ್ರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಗುಬ್ಬಿ ತಾಲೂಕಿನ ನಿಟ್ಟೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಾಯಕರ ಗುಣವೇ ಅಂತದ್ದು. ಎಲ್ಲಾ ಕ್ಷೇತ್ರದಲ್ಲೂ ಇಬ್ಬರು ಅಭ್ಯರ್ಥಿಗಳನ್ನ ಇಟ್ಟಿರುತ್ತಾರೆ. ನಮ್ಮ ತಾಲೂಕಿಗೆ ಬೇರೆಯವರನ್ನೂ ಕರೆತಂದು ಪರಿಚಯಿಸುತ್ತಿದ್ದಾರೆ. ಇರೋರ ಮೇಲೆ ಇನ್ನೊಬ್ಬರನ್ನು ಎತ್ತಿಕಟ್ಟೋದು ಪಕ್ಷದಲ್ಲಿ ನಿರಂತರವಾಗಿದೆ. ಪಕ್ಷದಲ್ಲಿ ಈ ಹಿಂದೆಯಿಂದಲೂ ಈ ಪ್ರಕ್ರಿಯೆಗಳು ನಡೆದುಕೊಂಡು ಬಂದಿದ್ದು, ಒಬ್ಬರ ಮೇಲೆ ಇನ್ನೊಬ್ಬರನ್ನು ಛೂ ಬೀಡಲಾಗುತ್ತಿದೆ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಅವರ ವಿರುದ್ಧ ಕಿಡಿಕಾರಿದರು.ಇದನ್ನೂ ಓದಿ: ಕಾಂಗ್ರೆಸ್ ಆಪರೇಷನ್ ಬಗ್ಗೆ ಯಡಿಯೂರಪ್ಪ ವಾರ್ನಿಂಗ್

    ರಾಜ್ಯದ ಎಲ್ಲಾ ಕ್ಷೇತ್ರದಲ್ಲೂ ಇದೇ ಪ್ರವೃತ್ತಿಯನ್ನು ಮುಂದುವರಿಸುತ್ತಿದ್ದಾರೆ. ಇಷ್ಟು ದಿನ ನಮ್ಮ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಗಳು ಸಿಕ್ಕಿರಲಿಲ್ಲ. ಈಗ ಸಿಕ್ಕಿದ್ದಾರೆ ಅದಕ್ಕೆ ನನ್ನ ಮೇಲೆ ಎತ್ತಿಕಟ್ಟಿದ್ದಾರೆ. ನನಗೆ ಕುಮಾರಸ್ವಾಮಿಯ ಮೇಲೆ ಸಿಟ್ಟಿಲ್ಲ. ಯಾವ ಮುನಿಸು ಕೂಡ ಇಲ್ಲ. ಅವರೇ ಎಲ್ಲವನ್ನೂ ಕ್ರಿಯೇಟ್ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಆಪರೇಷನ್ ಪಾಲಿಟಿಕ್ಸ್ ಶುರು – ಬಿಜೆಪಿ, ಜೆಡಿಎಸ್ ಶಾಸಕರಿಗೆ ಡಿಕೆಶಿ ಗಾಳ..?

    ನಾನು ಪಕ್ಷದಲ್ಲೇ ಇದ್ದೇನೆ. ಪಕ್ಷ ಬಿಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಮೊನ್ನೆ ತಾನೆ ಪಕ್ಷದ ಕಾರ್ಯಕ್ರಮಕ್ಕೆ ಹಾಜರಾಗಿ ದೇವೇಗೌಡರನ್ನು ಭೇಟಿ ಮಾಡಿದ್ದೇನೆ. ಇದಾದ ಮೇಲೂ ಇನ್ನೊಬ್ಬರನ್ನು ಚುನಾವಣೆಗೆ ನಿಲ್ಲಿಸಿದರೆ ಸಂತೋಷ ಎಂದರು.

     

  • ಪೆಟ್ರೋಲ್ ಸುರಿದು ಪತಿಯನ್ನು ಹತ್ಯೆಗೈದು ಚರಂಡಿಗೆ ಶವ ಎಸೆದ್ಳು

    ಪೆಟ್ರೋಲ್ ಸುರಿದು ಪತಿಯನ್ನು ಹತ್ಯೆಗೈದು ಚರಂಡಿಗೆ ಶವ ಎಸೆದ್ಳು

    ತುಮಕೂರು: ಮಹಿಳೆಯೊಬ್ಬರು ಪತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಕೊಂದು ಶವವನ್ನು ಚರಂಡಿಗೆ ಎಸೆದ ಘಟನೆ ತುಮಕೂರು ನಗರದ ಬಡ್ಡಿಹಳ್ಳಿಯಲ್ಲಿ ನಡೆದಿದೆ.

    ನಾರಾಯಣ್(52) ಮೃತ ದುರ್ದೈವಿ. ನಾರಾಯಣ್ ಪತ್ನಿ ಅನ್ನಪೂರ್ಣ ಈ ಗಂಭೀರ ಕೊಲೆ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಮೋದಿ ಸರ್ಕಾರದಿಂದ ಲವ್ ಲೆಟರ್ ಬಂದಿದೆ – ಆಪ್ ನಾಯಕ

    ಅನ್ನಪೂರ್ಣ ಅವರಿಗೆ ಅಕ್ರಮ ಸಂಬಂಧ ಇತ್ತು. ಇದೇ ವಿಚಾರಕ್ಕೆ ನಾರಾಯಣ್ ಮತ್ತು ಅನ್ನಪೂರ್ಣ ಅವರ ನಡುವೆ ಪ್ರತಿನಿತ್ಯ ಜಗಳ ಆಗುತ್ತಲೇ ಇತ್ತು. ಅನ್ನಪೂರ್ಣ ಇದೇ ವಿಚಾರಕ್ಕೆ ಗಂಡನನ್ನು ಹತ್ಯೆ ಮಾಡಿದ್ದಾಳೆ ಎಂಬ ಆರೋಪ ಬಂದಿದೆ.  ಇದನ್ನೂ ಓದಿ: ವೈಟ್ ಬೋರ್ಡ್ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸೋದು ಅಕ್ಷಮ್ಯ ಅಪರಾಧ: ಸುಧಾಕರ್

    ಮೃತ ನಾರಾಯಣ್ ನೆಲಮಂಗಲ ಬಳಿಯ ಟೋಲ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ತುಮಕೂರು ನಗರದ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನ್ನಪೂರ್ಣ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಎತ್ತಿನಹೊಳೆ ಯೋಜನೆ ಜಾರಿ ವಿಚಾರದಲ್ಲಿ ಸರ್ಕಾರಕ್ಕೆ ಬದ್ಧತೆಯೇ ಇಲ್ಲ: ಪರಮೇಶ್ವರ್

    ಎತ್ತಿನಹೊಳೆ ಯೋಜನೆ ಜಾರಿ ವಿಚಾರದಲ್ಲಿ ಸರ್ಕಾರಕ್ಕೆ ಬದ್ಧತೆಯೇ ಇಲ್ಲ: ಪರಮೇಶ್ವರ್

    ತುಮಕೂರು: ಎತ್ತಿನಹೊಳೆ ಯೋಜನೆ ತ್ವರಿತವಾಗಿ ಜಾರಿ ಮಾಡಲು ಸರ್ಕಾರಕ್ಕೆ ಬದ್ಧತೆಯೇ ಇಲ್ಲ ಎಂದು ಜಿ.ಪರಮೇಶ್ವರ್ ಹೇಳಿದ್ದಾರೆ.  

    ಮಧುಗಿರಿ ಪಟ್ಟಣದ ಹಾಲು ಶೇಖರಣ ಉಪಕೇಂದ್ರ ಆವರಣದಲ್ಲಿ ತುಮುಲ್ ಕಲ್ಯಾಣ ಟ್ರಸ್ಟ್ ಮತ್ತು ತುಮುಲ್‍ನಿಂದ ಕೋವಿಡ್‍ನಿಂದ ಮೃತಪಟ್ಟ ಹಾಲು ಉತ್ಪಾದಕ ಕುಟುಂಬಗಳಿಗೆ ಚೆಕ್ ವಿತರಿಸಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಕೊರಟಗೆರೆ ತಾಲ್ಲೂಕಿನ ಬೈರಗೊಂಡ್ಲು ಕೆರೆ ನಿರ್ಮಾಣಕ್ಕೆ ಸರ್ಕಾರ ಸಹಕಾರ ನೀಡುತ್ತಿಲ್ಲ. ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಪರಿಹಾರದ ವ್ಯತ್ಯಾಸವನ್ನು ಸರಿಪಡಿಸುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಆರೋಪಿಸಿದರು. ಇದನ್ನೂ ಓದಿ:  ಮೋದಿ ಆಪ್ತ ಭೂಪೇಂದ್ರ ಪಟೇಲ್ ಗುಜರಾತಿನ ಮುಂದಿನ ಸಿಎಂ

    ಕೋವಿಡ್‍ನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದ್ದರೂ, ಈವರೆಗೂ ಪರಿಹಾರ ನೀಡಿಲ್ಲ. ಆದರೆ ತುಮುಲ್ ಘೋಷಣೆ ಮಾಡದೇ ಕೋವಿಡ್ ಮೃತರ ಕುಟುಂಬಗಳಿಗೆ 1 ಲಕ್ಷ ಪರಿಹಾರ ನೀಡಿದೆ ಎಂದು ಇದು ಹೆಮ್ಮೆಯ ವಿಷಯ ಎಂದು ಹೇಳಿದರು.  ಇದನ್ನೂ ಓದಿ:ಮೈಸೂರಿನತ್ತ ಪ್ರಯಾಣ ಬೆಳೆಸಿದ ದಸರಾ ಗಜಪಡೆ

     

  • ಸಮಯ ಪ್ರಜ್ಞೆ ಮೆರೆದ KSRTC ಚಾಲಕ – 50ಕ್ಕೂ ಅಧಿಕ ಮಂದಿ ಪ್ರಯಾಣಿಕರು ಪಾರು

    ಸಮಯ ಪ್ರಜ್ಞೆ ಮೆರೆದ KSRTC ಚಾಲಕ – 50ಕ್ಕೂ ಅಧಿಕ ಮಂದಿ ಪ್ರಯಾಣಿಕರು ಪಾರು

    ತುಮಕೂರು: ಕೊರಟಗೆರೆಯಲ್ಲಿ KSRTC ಬಸ್ ಚಾಲಕನ ಜಾಗರೂಕತೆಯಿಂದ 50ಕ್ಕೂ ಅಧಿಕ ಮಂದಿ ಪ್ರಯಾಣಿಕರ ಪ್ರಾಣ ಉಳಿದಿದೆ.

    ಇಂದು ಮುಂಜಾನೆ ಕೊರಟಗೆರೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ KSRTC ಬಸ್ ಹಾಗೂ ಮುಂಬದಿಯಿಂದ ಬಂದ ಐ ಟೆನ್ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಪ್ರಪಾತಕ್ಕೆ ಇಳಿಯಬೇಕಾಗಿದ್ದ ಬಸ್, ಚಾಲಕನ ಜಾಗೃತೆಯಿಂದಾಗಿ ಹೊಲಕ್ಕೆ ಇಳಿದು ಹೆಚ್ಚಿನ ಅನಾಹುತ ತಪ್ಪಿದೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ ಐವತ್ತಕ್ಕೂ ಅಧಿಕ ಮಂದಿ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಬಸ್ ನಿರ್ವಾಹಕಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ. ಇದನ್ನೂ ಓದಿ:  ಕೋವಿಡ್ ಭೀತಿ ಮರೆತು ಕೋಟೆನಾಡಲ್ಲಿ ಮಟನ್ ಖರೀದಿಸಲು ಮುಗಿಬಿದ್ದ ಮಾಂಸ ಪ್ರಿಯರು 

    ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕೊರಟಗೆರೆ-ಬೆಂಗಳೂರು ಮಾರ್ಗದ ತಣ್ಣೇನಹಳ್ಳಿ ಬಳಿ ಘಟನೆ ನಡೆದಿದೆ. ಈ ಘಟನೆ ಕುರಿತು ಕೆಎಸ್‍ಆರ್‍ಟಿಸಿ ಬಸ್ ಚಾಲಕ ಮಾತನಾಡಿದ್ದು, ನಾನು ಎಷ್ಟೇ ಬಾರಿ ಶಬ್ಧ ಮಾಡಿದರೂ ಕೇಳಿಸದೆ ವೇಗವಾಗಿ ಬಂದ ಕಾರು ಹತ್ತಿರಕ್ಕೆ ಬಂದು ಬಿಟ್ಟಿತ್ತು. ಆದ್ದರಿಂದ ನಮ್ಮ ಬಸ್ ಗೆ ತಗುಲಿದ್ದರೆ ಕಾರಿನಲ್ಲಿ ಯಾರೂ ಕೂಡ ಬದುಕುತ್ತಿರಲಿಲ್ಲ. ಆದಷ್ಟು ನನ್ನ ಜಾಗರೂಕತೆಯಿಂದ ನಾನು ಬಸ್‍ನ್ನು ಎಡಗಡೆಗೆ ತಿರುಗಿಸಿದೆ ಎಂದರು. ಇದನ್ನೂ ಓದಿ: ಹದಗೆಟ್ಟ ರಸ್ತೆಯ ತಾತ್ಕಾಲಿಕ ದುರಸ್ತಿಗೆ ಗ್ರಾಮದ ಯುವಕರ ಶ್ರಮದಾನ

    ಈ ಪರಿಣಾಮ ಬಸ್ ಪಕ್ಕದ ಜಮೀನಿನ ಕಡೆ ಉರುಳಿತು. ಬಸ್ಸಿನಲ್ಲಿದ್ದವರಿಗೂ ಹಾಗೂ ಕಾರಿನಲ್ಲಿದ್ದವರಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲ. ಕಾರಿನ ಮಾಲೀಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಬಸ್ಸನ್ನು ಕ್ರೇನ್ ಮೂಲಕ ಮೇಲಕ್ಕೆತ್ತಿ ಕೊಡಲು ಒಪ್ಪಿಕೊಂಡಿದ್ದಾರೆ. ನಿರ್ವಾಹಕಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ:  ನೀಟ್ ಪರೀಕ್ಷೆ – ಲಾಠಿ ಹಿಡಿದು ಪೋಷಕರನ್ನು ಚದುರಿಸಿದ ಪೊಲೀಸರು

    ಸ್ಥಳೀಯರೊಬ್ಬರು ಈ ಕುರಿತು ಪ್ರತಿಕ್ರಿಯಿಸಿದ್ದು, ಇದರಲ್ಲಿ ಕಾರಿನ ಚಾಲಕನದ್ದೇ ತಪ್ಪು. ನಾನು ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದೆ. ನೋಡು ನೋಡುತ್ತಲೇ ಬಸ್ ಹಾಗೂ ಕಾರು ಡಿಕ್ಕಿ ಹೊಡೆಯಬೇಕಿತ್ತು. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಅಪಾಯಕಾರಿ ಅಪಘಾತ ತಪ್ಪಿದೆ. ಸ್ವಲ್ಪ ಯಾಮಾರಿದ್ದರೆ ಪಕ್ಕದ ಟ್ರಾನ್ಸ್ ಫರ್ಮ್ ಗೆ ಡಿಕ್ಕಿ ಹೊಡೆದು ದೊಡ್ಡ ಅವಘಡವೇ ಜರುಗುತ್ತಿತ್ತು. ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಪಾಯವಾಗಿಲ್ಲ ಎಂದು ತಿಳಿಸಿದರು.

  • ಶಾಲಾ ಕಟ್ಟಡ ನಿರ್ಮಾಣಕ್ಕೆ ಅಡ್ಡಿ – ಕ್ರೀಡಾಪಟುಗಳ ಮೇಲೆ ಮಾಧುಸ್ವಾಮಿ ಗರಂ

    ಶಾಲಾ ಕಟ್ಟಡ ನಿರ್ಮಾಣಕ್ಕೆ ಅಡ್ಡಿ – ಕ್ರೀಡಾಪಟುಗಳ ಮೇಲೆ ಮಾಧುಸ್ವಾಮಿ ಗರಂ

    ತುಮಕೂರು: ಶಾಲಾ ಕಟ್ಟಡ ನಿರ್ಮಾಣಕ್ಕೆ ಕ್ರೀಡಾಪಟುಗಳು ಅಡ್ಡಿ ಮಾಡಿದ್ದು, ಈ ಪರಿಣಾಮ ಅವರ ಮೇಲೆ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಗರಂ ಆದ ಪ್ರಸಂಗ ತುಮಕೂರಿನಲ್ಲಿ ನಡೆದಿದೆ.

    ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದಲ್ಲಿ ಶಾಲಾ ಕಟ್ಟಡ ಶಂಕುಸ್ಥಾಪನೆಗೆಂದು ಮಾಧುಸ್ವಾಮಿ ಅವರು ಆಗಮಿಸಿದ್ದು, ಈ ವೇಳೆ ಇಲ್ಲಿ ಶಾಲಾ ಕಟ್ಟಡ ಬೇಡ, ಬೇರೆ ಜಾಗದಲ್ಲಿ ನಿರ್ಮಿಸಿ ಎಂದು ಕ್ರೀಡಾಪಟುಗಳು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಜಾತಿಗಣತಿ ವರದಿ ಬಹಿರಂಗ ಆಗಬೇಕು: ಜಿ.ಪರಮೇಶ್ವರ್

    ಇಡೀ ಪಟ್ಟಣಕ್ಕೆ ಇದೊಂದೇ ದೊಡ್ಡ ಮೈದಾನ ಇರುವುದು. ಇಲ್ಲಿ ಕಟ್ಟಡ ನಿರ್ಮಿಸಿದರೆ ಇತರೆ ಕ್ರೀಡಾ ಚಟುವಟಿಕೆಗಳಿಗೆ ತೊಂದರೆಯಾಗುತ್ತೆ ಎಂದು ಕ್ರೀಡಾಪಟುಗಳು ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದಲೂ ಕಟ್ಟಡ ನಿರ್ಮಾಣಕ್ಕೆ ಅಡ್ಡಿ ಮಾಡುತ್ತಾ ಬಂದಿದ್ದ ಸ್ಥಳೀಯ ಕ್ರೀಡಾಪಟುಗಳು, ಶಂಕುಸ್ಥಾಪನೆಗೆ ಬಂದಿದ್ದ ಮಾಧುಸ್ವಾಮಿ ಅವರಿಗೂ ಅಡ್ಡಿ ಪಡಿಸಿದ್ದಾರೆ. ಇದನ್ನೂ ಓದಿ: ಹಳೆ ಬೆಳೆ ಕೊಚ್ಚಿ ಹೋಯ್ತು – ಹೊಸ ಬೆಳೆ ಬಿತ್ತನೆಗೆ ಪರದಾಡುತ್ತಿದ್ದಾರೆ ರೈತರು

    ಈ ವೇಳೆ ಸಿಟ್ಟಾದ ಸಚಿವ ಮಾಧುಸ್ವಾಮಿ, ಒಂದು ವರ್ಷದಿಂದಲೂ ಹೀಗೆ ಸಮಸ್ಯೆ ಮಾಡಿಕೊಂಡು ಬಂದಿದ್ದೀರಿ. ಇದು ಶಾಲಾ ಆವರಣ, ಮಕ್ಕಳಿಗೆಂದು ಇರುವುದು, ಮಕ್ಕಳ ಆಟದ ಮೈದಾನ ಇದು. ಶಾಲೆ ಉದ್ದೇಶಕ್ಕೆ ಬಳಕೆಯಾಗಬೇಕು ಎಂದು ಕ್ರೀಡಾಪಟುಗಳನ್ನು ತರಾಟೆಗೆ ತೆಗೆದುಕೊಂಡರು.

  • ಸಿಟಿ ಮಾತ್ರವಲ್ಲ ಗ್ರಾಮೀಣ ಭಾಗದ ಹೆಣ್ಮಕ್ಕಳಿಗೂ ಆದ್ಯತೆ ಕೊಡಿ: ಗೌರಿ ಶಂಕರ್

    ಸಿಟಿ ಮಾತ್ರವಲ್ಲ ಗ್ರಾಮೀಣ ಭಾಗದ ಹೆಣ್ಮಕ್ಕಳಿಗೂ ಆದ್ಯತೆ ಕೊಡಿ: ಗೌರಿ ಶಂಕರ್

    ತುಮಕೂರು: ಬರೀ ಸಿಟಿ ಹೆಣ್ಣು ಮಕ್ಕಳನ್ನ ಮಾತ್ರ ನೋಡಬೇಡಿ. ಗ್ರಾಮೀಣ ಹೆಣ್ಣು ಮಕ್ಕಳಿಗೂ ಜೀವವಿದೆ ಅನ್ನೋದು ಮರಿಬೇಡಿ ಎಂದು ಹೇಳುವ ಮೂಲಕ ತುಮಕೂರಿನ ಮಹಿಳೆಗೂ ನ್ಯಾಯ ಒದಗಿಸಿಕೊಡಿ ಎಂದು ಶಾಸಕ ಡಿ.ಸಿ ಗೌರಿ ಶಂಕರ್ ಆಗ್ರಹಿಸಿದರು.

    ಜಿಲ್ಲೆಯ ಗ್ರಾಮಾಂತರದ, ಚೋಟಸಾಬರ ಪಾಳ್ಯದಲ್ಲಿ ನಡೆದಿದ್ದ ಅತ್ಯಾಚಾರ ಹಾಗೂ ಕೊಲೆ ಶಂಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಗ್ರಾಮಾಂತರ ಶಾಸಕರ ನೇತೃತ್ವದಲ್ಲಿ ಇಂದು ತುಮಕೂರು ಜಿಲ್ಲಾ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಇದನ್ನೂ ಓದಿ: ಗ್ಯಾಂಗ್‍ರೇಪ್ ಪ್ರಕರಣ ಸಂಬಂಧ ಕಾಲಹರಣ ಮಾಡಿಲ್ಲ – ಗೃಹ ಸಚಿವ ಸ್ಪಷ್ಟನೆ

    ತುಮಕೂರು ವಿವಿ ಮುಂಭಾಗದಿಂದ ಹೊರಟ ಪ್ರತಿಭಟನಾ ಮೆರವಣಿಗೆ ತುಮಕೂರು ಜಿಲ್ಲಾ ಎಸ್ಪಿ ಕಚೇರಿವರೆಗೂ ಬಂದು ತಲುಪಿ, ಅಲ್ಲಿಂದ ಕಚೇರಿ ಮುಂದೆ ಸುಮಾರು ಒಂದು ಗಂಟೆಗಳಕಾಲ ಪ್ರತಿಭಟನೆ ನಡೆಸಿದ್ರು. ಈ ವೇಳೆ ಮಾತನಾಡಿದ ಶಾಸಕರು, ಚಾಮುಂಡಿ ಬೆಟ್ಟದಲ್ಲಿ ನಡೆದ ಗ್ಯಾಂಗ್ ರೇಪ್ ಗೆ ಸರ್ಕಾರ ಗಮನಕೊಟ್ಟು ಆರೋಪಿಗಳನ್ನ ಹಿಡಿಯಲು ಪ್ರಯತ್ನ ಮಾಡುತ್ತಿದೆ. ಇದೇ ರೀತಿಯಲ್ಲಿ ತುಮಕೂರಿನಲ್ಲಿ ನಡೆದ ಮಹಿಳೆಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಗಮನಹರಿಸಿ ತನಿಖೆ ತಂಡ ರಚಿಸಿ ಆರೋಪಿಗಳನ್ನ ಬಂಧಿಸಬೇಕು. ಆಗಿರುವ ಅನ್ಯಾಯಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಗ್ಯಾಂಗ್‍ರೇಪ್ ಪ್ರಕರಣದ ಸಂತ್ರಸ್ತೆ ತನಿಖೆಗೆ ಸ್ಪಂದಿಸುತ್ತಿಲ್ಲ: ಎಸ್‍ಟಿಎಸ್ ಆರೋಪ

    ಮುಖ್ಯಮಂತ್ರಿಗಳೇ, ಸನ್ಮಾನ್ಯ ಗೃಹ ಮಂತ್ರಿಗಳೇ ದಯವಿಟ್ಟು ಚಾಮುಂಡಿ ಬೆಟ್ಟದಲ್ಲಿ ನಡೆದ ಪ್ರಕರಣ ಕ್ಕೆ ತಾವೇ ಖುದ್ದಾಗಿ ಹೋಗಿದಿರಿ. ದೆಹಲಿಯಿಂದ ಸಿಎಂ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಆರೋಪಿಗಳನ್ನ ಬೇಗ ಬಂಧಿಸಿ ಅಂತ ಹೇಳಿದ್ದಿರಿ. ಬರೀ ಸಿಟಿ ಹೆಣ್ಣು ಮಕ್ಕಳನ್ನ ನೋಡಬೇಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೈಸೂರಿನಲ್ಲಿ ಗ್ಯಾಂಗ್‍ರೇಪ್ ಪ್ರಕರಣ – ಘಟನೆಯ ಬಗ್ಗೆ ಬಿಚ್ಚಿಟ್ಟ ಸಂತ್ರಸ್ತೆಯ ಸ್ನೇಹಿತ

  • ವಿದ್ಯಾರ್ಥಿಗಳು ಒತ್ತಾಯಪೂರ್ವಕವಾಗಿ ಶಾಲೆಗೆ ಬರಬೇಕೆಂದಿಲ್ಲ: ಬಿ.ಸಿ.ನಾಗೇಶ್

    ವಿದ್ಯಾರ್ಥಿಗಳು ಒತ್ತಾಯಪೂರ್ವಕವಾಗಿ ಶಾಲೆಗೆ ಬರಬೇಕೆಂದಿಲ್ಲ: ಬಿ.ಸಿ.ನಾಗೇಶ್

    ತುಮಕೂರು: ನಾಳೆಯಿಂದ 9 ರಿಂದ 12ನೇ ತರಗತಿವರೆಗೆ ತರಗತಿ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು ಒತ್ತಾಯ ಪೂರ್ವಕವಾಗಿ ಶಾಲೆಗೆ ಬರಬೇಕೆಂದು ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.

    ತುಮಕೂರಿನಲ್ಲಿ ಶಾಲೆಗಳ ಸಿದ್ಧತೆ ಪರಿಶೀಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಎಷ್ಟೇ ಪ್ರಯತ್ನ ಮಾಡಿದರೂ ಆನ್ ಲೈನ್ ನಲ್ಲಿ ಒಳ್ಳೆಯ ಶಿಕ್ಷಣ ಕೊಡಲು ಸಾಧ್ಯವಾಗಲಿಲ್ಲ. ಬೇರೆ, ಬೇರೆ ಕಾರಣಗಳಿಂದ ಉತ್ತಮ ಶಿಕ್ಷಣ ಕೊಡಲಾಗಿಲ್ಲ. ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮ ಇರುವುದರಿಂದ ತರಗತಿ ಆರಂಭ ಮಾಡುವಂತೆ ಸಿಎಂ ಘೋಷಣೆ ಮಾಡಿದ್ದಾರೆ ಹಾಗಾಗಿ ಶಾಲೆ ಆರಂಭಿಸಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ದೆಹಲಿಯ ರೈತ ಹೋರಾಟದ ಬಗ್ಗೆ ಜಾಗೃತಿಗೊಳಿಸಿ ಅಕ್ಟೋಬರ್ 2ರಿಂದ ಕಿಸಾನ್ ಸ್ವರಾಜ್ ಯಾತ್ರೆ

    ಶಾಲೆಗೆ ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿದೆ. ಇದಲ್ಲದೇ ಆನ್‍ಲೈನ್ ಮತ್ತು ಆಫ್‍ಲೈನ್ ನಲ್ಲಿಯೂ ತರಗತಿಗಳು ನಡೆಯಲಿವೆ. ಕೋವಿಡ್ ಮೂರನೇ ಅಲೆ ಮಕ್ಕಳಿಗೆ ಕಂಟಕವಾಗಲಿದೆ ಅನ್ನುವುದಿತ್ತು. ಈಗ ಒಂದು ತಿಂಗಳಿಂದ ಎಲ್ಲಾ ತಜ್ಞರು ಮಕ್ಕಳ ಮೇಲೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ. ಜೊತೆಗೆ ಸೋಂಕು ತಗುಲಿದರು ಪ್ರಾಣ ಹಾನಿಯಾಗುವುದಿಲ್ಲ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂದಿನ ಹಂತದಲ್ಲಿ 1 ರಿಂದ 8ನೇ ತರಗತಿವರೆಗೂ ಶಾಲೆ ತೆರೆಯುವ ಪ್ರಯತ್ನ ಮಾಡುತ್ತೇವೆ ಎಂದು ನುಡಿದಿದ್ದಾರೆ.

    ಪಾಸಿಟಿವಿಟಿ ರೇಟ್ ಶೇ. 2ಕ್ಕಿಂತ ಹೆಚ್ಚಿದ್ದರೆ ಆ ಜಿಲ್ಲೆಯ ಶಾಲೆಗಳನ್ನು ಪ್ರಾರಂಭಿಸುವುದಿಲ್ಲ. ರಾಜ್ಯದಲ್ಲಿ 5 ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ 2% ಕ್ಕಿಂತ ಹೆಚ್ಚಿದೆ ಎಂದು ಬಿ.ಸಿ ನಾಗೇಶ್ ಹೇಳಿದ್ದಾರೆ. ಇದನ್ನೂ ಓದಿ:ಕೆರೆ ಏರಿ ಒಡೆದು ನೂರಾರು ಎಕರೆ ಜಮೀನಿಗೆ ನುಗ್ಗಿದ ನೀರು- ರೈತರು ಕಂಗಾಲು