Tag: tumkur

  • ತೆಂಗಿನ ರೋಗ ತಡೆಗಟ್ಟಲು ಔಷಧಿ ಕೇಂದ್ರ ಆರಂಭ: ಬಿ.ಸಿ ನಾಗೇಶ್

    ತೆಂಗಿನ ರೋಗ ತಡೆಗಟ್ಟಲು ಔಷಧಿ ಕೇಂದ್ರ ಆರಂಭ: ಬಿ.ಸಿ ನಾಗೇಶ್

    ತುಮಕೂರು: ತೆಂಗಿನ ರೋಗಕ್ಕೆ ತಗುಲಿರುವ ವಿವಿಧ ಬಗೆಯ ರೋಗಗಳನ್ನು ತಡೆಗಟ್ಟುವ ಸಲುವಾಗಿ ಪರೋಪ ಜೀವಿಗಳ ಉತ್ಪಾದನಾ ಕೇಂದ್ರವನ್ನು ತಿಪಟೂರು ತಾಲೂಕಿನಲ್ಲಿ ಸ್ಥಾಪಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

    ನಗರದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ದೊಡ್ಡ ಪ್ರಮಾಣದ ಪರೋಪ ಜೀವಿಗಳ ಉತ್ಪಾದನಾ ಕೇಂದ್ರದ ಕಟ್ಟಡವನ್ನು ಉದ್ಘಾಟಿಸಿದ ಅವರು, ಇತ್ತೀಚಿನ ದಿನದಲ್ಲಿ ತೆಂಗು ಬೆಳೆಯಲ್ಲಿ ಬಿಳಿನೊಣದ ಹಾವಳಿ ಹೆಚ್ಚಾಗಿದೆ. ಹಿಂದೆ ಇದ್ದಂತಹ ಕಪ್ಪು ತಲೆ ಹುಳಕ್ಕಿಂತ ವಿಭಿನ್ನವಾಗಿದ್ದು ಫಸಲಿಗೆ, ಮರಕ್ಕೆ ತೊಂದರೆ ನೀಡುತ್ತಿದೆ. ಇದನ್ನು ತಡೆಗಟ್ಟಲು ಇಸರಿಯಾ ಪ್ಯೂಮೋಸೋರೋಸಿಯಾ ಪ್ರಬಲ ಜೈವಿಕ ನಿಯಂತ್ರಕ ಶಿಲೀಂಧ್ರವನ್ನು ಕಂಡು ಹಿಡಿಯಲಾಗಿದೆ. ಅದರ ಉತ್ಪಾದನಾ ಕೇಂದ್ರವನ್ನು ಪ್ರಾರಂಭಿಸಿದ್ದು, ತಾಲ್ಲೂಕಿನ ರೈತರಿಗೆ ಅನುಕೂಲವಾಗಲಿದೆ ಎಂದರು. ಇದನ್ನೂ ಓದಿ: ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗ ಖಚಿತ: ಅಖಿಲೇಶ್ ಯಾದವ್

    ಈ ಸಂದರ್ಭದಲ್ಲಿ ತೋಟಗಾರಿಕೆ ಉಪನಿರ್ದೇಶಕ ಬಿ.ರಘು, ಸಹಾಯಕ ತೋಟಗಾರಿಕೆ ನಿರ್ದೇಶಕಿ ಜಿ.ವಿಜಯ, ಪರೋಪ ಜೀವಿಗಳ ಉತ್ಪಾದನಾ ಕೇಂದ್ರದ ಅಧಿಕಾರಿ ಡಾ.ನವೀನ್ ಕುಮಾರ್, ನಗರಸಭೆಯ ಅಧ್ಯಕ್ಷ ಪಿ.ಜೆ.ರಾಮಮೊಹನ್, ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ಕೆರೆಗೋಡಿ ದೇವರಾಜು, ಕೆ.ವಿ.ಕೆ. ಕೊನೆಹಳ್ಳಿ ಕೇಂದ್ರದ ವಿಜ್ಞಾನಿ ಡಾ.ಶ್ರೀನಿವಾಸ್, ತೋಟಗಾರಿಕೆ ಇಲಾಖೆಯ ರೂಪ ಇದ್ದರು. ಇದನ್ನೂ ಓದಿ: ಮರಕ್ಕೆ ಕಾರು ಡಿಕ್ಕಿ – ಕಂದಮ್ಮ ಸೇರಿ ಒಂದೇ ಕುಟುಂಬದ ಮೂವರು ದುರ್ಮರಣ

  • ನಿಲ್ದಾಣವಿದ್ದರೂ ಸ್ಟಾಪ್ ಕೊಡಲ್ಲ: ಕೆಎಸ್‌ಆರ್‌ಟಿಸಿ ವಿರುದ್ಧ ಕಾಲೇಜು ವಿದ್ಯಾರ್ಥಿಗಳ ಆಕ್ರೋಶ

    ನಿಲ್ದಾಣವಿದ್ದರೂ ಸ್ಟಾಪ್ ಕೊಡಲ್ಲ: ಕೆಎಸ್‌ಆರ್‌ಟಿಸಿ ವಿರುದ್ಧ ಕಾಲೇಜು ವಿದ್ಯಾರ್ಥಿಗಳ ಆಕ್ರೋಶ

    ತುಮಕೂರು: ಬಸ್ ನಿಲ್ದಾಣವಿದ್ದರೂ ಅಲ್ಲಲ್ಲಿ ಸ್ಟಾಪ್ ಕೊಡಲ್ಲ. ನಿಗದಿತ ಸಮಯಕ್ಕೆ ಬಸ್‌ಗಳು ಬರುವುದಿಲ್ಲ ಎಂದು ಕೆಎಸ್‌ಆರ್‌ಟಿಸಿ ಬಸ್‌ಗಳ ವಿರುದ್ಧ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

    ತುಮಕೂರಿನ ಹೆಬ್ಬೂರು ಹೋಬಳಿಯ ಬನ್ನಿಮರದ ಕಟ್ಟೆ ಬಳಿ ಕಾಲೇಜು ವಿದ್ಯಾರ್ಥಿಗಳು ರಸ್ತೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತಡೆದು ಸರಿಯಾದ ಸಮಯಕ್ಕೆ ಬಸ್‌ಗಳು ಬರುವುದಿಲ್ಲ, ಬಂದರೂ ನಿಲ್ದಾಣಗಳಲ್ಲಿ ಸ್ಟಾಪ್ ಕೊಡೋದಿಲ್ಲ. ಇದರಿಂದ ಶಾಲೆ-ಕಾಲೇಜಿಗೆ ಸರಿಯಾದ ಸಮಯದಲ್ಲಿ ತಲುಪಲು ಕಷ್ಟವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ- ಹೈಕೋರ್ಟ್ ತೀರ್ಪಿನ ನಂತರ ಕ್ರಮ: ಬಿಸಿ ನಾಗೇಶ್

    ಈ ಸಮಸ್ಯೆಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ತಕ್ಷಣ ಪರಿಹಾರ ನೀಡಬೇಕು ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದು, ಬಳಿಕ ಸ್ಥಳಕ್ಕೆ ಹೆಬ್ಬೂರು ಡಿಪೋ ಮ್ಯಾನೇಜರ್ ಭೇಟಿ ನೀಡಿ ಕೂಡಲೇ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಹಿಜಬ್ ವಿರುದ್ಧ ಕೇಸರಿ ಶಾಲು ಧರಿಸಿ ಜೈ ಶ್ರೀರಾಮ್ ಘೋಷಣೆ ಕೂಗುತ್ತ ಆಗಮಿಸಿದ ವಿದ್ಯಾರ್ಥಿಗಳು

  • ಆರೋಗ್ಯ ಇಲಾಖೆಯಿಂದ ಸತ್ತ ವ್ಯಕ್ತಿಗೆ ಕೋವಿಡ್ ಲಸಿಕೆ ಸರ್ಟಿಫಿಕೆಟ್!

    ಆರೋಗ್ಯ ಇಲಾಖೆಯಿಂದ ಸತ್ತ ವ್ಯಕ್ತಿಗೆ ಕೋವಿಡ್ ಲಸಿಕೆ ಸರ್ಟಿಫಿಕೆಟ್!

    ತುಮಕೂರು: 6 ತಿಂಗಳ ಹಿಂದೆ ಮರಣ ಹೊಂದಿದ್ದ ವ್ಯಕ್ತಿಗೆ ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದಿದ್ದ ಸರ್ಟಿಫಿಕೆಟ್ ನೀಡಿ ಆರೋಗ್ಯ ಮಹಾ ಎಡವಟ್ಟು ಮಾಡಿದೆ.

    ತುಮಕೂರು ನಗರದ ಮೆಳೆಕೋಟೆ ನಿವಾಸಿ ಬಸಪ್ಪ(80) 2021ರ ಏಪ್ರಿಲ್ 9ರಂದು ಮೊದಲ ಡೋಸ್ ತೆಗೆದುಕೊಂಡಿದ್ದರು. ಈ ನಡುವೆ ಜು.16 ರಂದು ಅವರು ಮೃತಪಟ್ಟಿದ್ದಾರೆ. ಆದರೆ ನಿನ್ನೆ 29ರಂದು ಎರಡನೇ ಡೋಸ್ ತೆಗೆದುಕೊಂಡಿರುವ ಬಗ್ಗೆ ಮೆಸೆಜ್ ಬಂದಿದೆ. ಸಂಬಂಧಿಕರು ಸೈಟ್ ಓಪನ್ ಮಾಡಿದಾಗ ಸರ್ಟಿಫಿಕೆಟ್ ಅಪ್‍ಡೇಟ್ ಆಗಿತ್ತು.

    ವ್ಯಕ್ತಿ ಮರಣ ಹೊಂದಿ 6 ತಿಂಗಳಾದರೂ ಸತ್ತ ವ್ಯಕ್ತಿಗೆ ಹೇಗೆ ಲಸಿಕೆ ಕೊಟ್ರು ಎಂದು ಮೃತ ಬಸವಪ್ಪನ ಕುಟುಂಬ ಆಶ್ಚರ್ಯ ವ್ಯಕ್ತಪಡಿಸಿದೆ. ಜೊತೆಗೆ ಆರೋಗ್ಯ ಇಲಾಖೆಯ ಈ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕಿದ್ದಾರೆ. ಇದನ್ನೂ ಓದಿ: ಮತಾಂತರ ತಡೆಗೆ ಕಾನೂನು ಅಗತ್ಯ, ಅದು ದುರುಪಯೋಗವಾಗ್ಬಾರ್ದು: ಕೇಜ್ರಿವಾಲ್

  • ಆರೋಪಿ ಪತ್ತೆಗಾಗಿ ದೂರುದಾರನಿಂದ ಬಾಡಿಗೆ ಕಾರು ಕೇಳಿದ ಸಿಪಿಐ ಸಸ್ಪೆಂಡ್‌

    ಆರೋಪಿ ಪತ್ತೆಗಾಗಿ ದೂರುದಾರನಿಂದ ಬಾಡಿಗೆ ಕಾರು ಕೇಳಿದ ಸಿಪಿಐ ಸಸ್ಪೆಂಡ್‌

    ತುಮಕೂರು: ಹಲ್ಲೆ ಪ್ರಕರಣವೊಂದರಲ್ಲಿ ಆರೋಪಿಯನ್ನು ಬಂಧಿಸಲು ದೂರುದಾರನಿಂದಲೇ ಬಾಡಿಗೆ ಕಾರು ಕೇಳಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತುರುವೇಕೆರೆ ಸಿಪಿಐ ಒಬ್ಬರನ್ನು ಅಮಾನತುಗೊಳಿಸಲಾಗಿದೆ.

    POLICE

    ಸಿಪಿಐ ನವೀನ್‌ ಅಮಾನತುಗೊಂಡ ಅಧಿಕಾರಿ. ಕೇಂದ್ರವಲಯ ಐಜಿಪಿ ಚಂದ್ರಶೇಖರ್ ಅವರು ಅಮಾನತುಗೊಳಿಸಿ ಆದೇಶಿದ್ದಾರೆ. ಇದನ್ನೂ ಓದಿ: ರವಿ ಡಿ.ಚನ್ನಣ್ಣನವರ್‌ ಸೇರಿ 9 ಐಪಿಎಸ್ ಅಧಿಕಾರಿಗಳ ವರ್ಗಾವಣೆ

    ದಂಡಿನಶಿವರ ಠಾಣಾ ವ್ಯಾಪ್ತಿಯಲ್ಲಿ ನಾಗಮ್ಮ ಎನ್ನುವ ಮಹಿಳೆ ಮೇಲೆ ಹಲ್ಲೆ ನಡೆದಿತ್ತು. ಹಲ್ಲೆಗೆ ಸಂಬಂಧಿಸಿದಂತೆ ಆಕೆ ಪತಿ ನಾಗೇಂದ್ರಪ್ಪ, ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ‌ಆದರೆ ಆರೋಪಿಗಳನ್ನು ಬಂಧಿಸದೇ ಪೊಲೀಸರು ನಿರ್ಲಕ್ಷ್ಯವಹಿಸಿದ್ದರು. ಆರೋಪಿಗಳನ್ನು ಬಂಧಿಸಬೇಕೆಂದರೆ ಬಾಡಿಗೆ ಕಾರು ಮಾಡಿಕೊಂಡು ಬರುವಂತೆ ಸಿಪಿಐ ನವೀನ್ ದೂರುದಾರರಿಗೆ ತಾಕೀತು ಮಾಡಿದ್ದರು.

    ಆಗ ಎಸ್ಪಿ ರಾಹುಲ್ ಕುಮಾರ್ ಸ್ವತಃ ತಮ್ಮ ಕಾರನ್ನೇ ತುರುವೇಕೆರೆ ಠಾಣೆಗೆ ಕಳುಹಿಸಿ ಸಿಪಿಐ ನವೀನ್‌ಗೆ ಶಾಕ್ ನೀಡಿದ್ದಾರೆ. ಕರ್ತವ್ಯ ಲೋಪದ ಮೇಲೆ ನವೀನ್‌ರನ್ನು ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ: ಭಟ್ಕಳದಲ್ಲಿ ಪಾಕಿಸ್ತಾನಿ ಮಹಿಳೆಗೆ ಆಧಾರ್ ಕಾರ್ಡ್ – ಚುನಾವಣೆ ಆಯೋಗದಿಂದ 100ಕ್ಕೂ ಹೆಚ್ಚು ಅರ್ಜಿಗಳು ವಜಾ

  • ಕೈ ತಪ್ಪಿದ್ದಕ್ಕೆ ಅಸಮಾಧಾನ ಇಲ್ಲ, ತುಮಕೂರು ಸಿಕ್ಕಿದ್ರೆ ಖುಷಿಯಾಗ್ತಿತ್ತು: ಮಾಧುಸ್ವಾಮಿ

    ಕೈ ತಪ್ಪಿದ್ದಕ್ಕೆ ಅಸಮಾಧಾನ ಇಲ್ಲ, ತುಮಕೂರು ಸಿಕ್ಕಿದ್ರೆ ಖುಷಿಯಾಗ್ತಿತ್ತು: ಮಾಧುಸ್ವಾಮಿ

    ತುಮಕೂರು: ನನಗೆ ಉಸ್ತುವಾರಿ ತಪ್ಪಿದ್ದರಿಂದ ಯಾವುದೇ ರೀತಿಯ ಅಸಮಾಧಾನವಿಲ್ಲ. ಆದರೆ ತುಮಕೂರು ಕೊಟ್ಟಿದ್ರೆ ಸಂತೋಷವಾಗುತ್ತಿತ್ತು ಎಂದು ಜೆ.ಸಿ.ಪುರದ ನಿವಾಸದಲ್ಲಿ ಸಚಿವ ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

    ಉಸ್ತುವಾರಿ ಹಂಚಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಉಸ್ತುವಾರಿ ತಪ್ಪಿದ್ದರಿಂದ ಯಾವುದೇ ರೀತಿಯ ಅಸಮಾಧಾನವಿಲ್ಲ. ಆದರೆ ತುಮಕೂರು ಜಿಲ್ಲೆ ಕೊಟ್ಟಿದ್ರೆ ಸಂತೋಷ ಆಗ್ತಿತ್ತು. ಇನ್ನು ಏಳೆಂಟು ತಿಂಗಳಲ್ಲಿ ಚುನಾವಣೆ ಪರ್ವ ಪ್ರಾರಂಭವಾಗುತ್ತೆ. ಬೇರೆ ಜಿಲ್ಲೆಗೆ ಹೋಗಿ ನಾವು ಏನೂ ಮಾಡಕಾಗಲ್ಲ. ತವರು ಜಿಲ್ಲೆ ಉಸ್ತುವಾರಿ ಕೊಡದೇ ಇರುವುದು ಒಂದು ಹೊಸ ಪ್ರಯೋಗ. ಇದನ್ನು ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಮಾಡಿದ್ರು. ಆಗ ಅದು ವಿಫಲ ಆಯ್ತು ಎಂದು ವಿವರಿಸಿದರು. ಇದನ್ನೂ ಓದಿ: ಬೊಮ್ಮಾಯಿ ಸರ್ಕಾರಕ್ಕೆ 6 ತಿಂಗಳು – ರಿಪೋರ್ಟ್ ಕಾರ್ಡ್ ತರಿಸಿಕೊಂಡ ಹೈಕಮಾಂಡ್!

    ತುಮಕೂರು; ಪ್ರಸಾದ ಸೇವಿಸಿ ಓರ್ವ ಬಾಲಕ ಸಾವು, 20 ಮಂದಿ ಅಸ್ವಸ್ಥ | udayavani

    ಬೇರೆ ಜಿಲ್ಲೆಯಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಗೊತ್ತಾಗದೇ ಇರೋದ್ರಿಂದ, ಅಲ್ಲಿ ನಾವು ಬೇರೆಯವರ ಮೇಲೆ ಅವಲಂಬನೆಯಾಗ ಬೇಕಾಗುತ್ತೆ. ಇಲ್ಲ ಅಂದ್ರೆ ಅಧಿಕಾರಿಗಳು ಹೇಳಿದ ಹಾಗೆ ಕೇಳಬೇಕಾಗುತ್ತೆ. ಆರಂಭದಲ್ಲಿ ಹಾಸನ ಜಿಲ್ಲೆ ಉಸ್ತುವಾರಿ ಕೆಲಸ ಮಾಡಿದ್ದೆ, ಅದು ಹತ್ತಿರದ ಜಿಲ್ಲೆ ಅಂತಾ ಮಾಡಿದ್ದೆ. ತುಮಕೂರು ಜಿಲ್ಲೆ ಉಸ್ತುವಾರಿ ನನಗೆ ತೃಪ್ತಿ ತಂದಿದೆ. ಪಕ್ಷ ಭೇದ ಮರೆತು ಎಲ್ಲ ಶಾಸಕರ ಕ್ಷೇತ್ರದಲ್ಲೂ ಒಳ್ಳೆಯ ಕೆಲಸ ಮಾಡಿದ್ದೀನಿ ಎಂದು ಸಂತೋಷ ವ್ಯಕ್ತಪಡಿಸಿದರು.

    ಉಸ್ತುವಾರಿ ಸಚಿವರು ಹತ್ತಿರದಲ್ಲಿರಬೇಕು. ಜಿಲ್ಲಾಡಳಿತದ ಜೊತೆ ವಾರಕ್ಕೆ ಒಂದೆರಡು ಬಾರಿಯಾದರೂ ಸ್ಪಂದಿಸುವ ರೀತಿ ಇರಬೇಕು. ಯಾವುದೋ ಒಂದು ಕೆಡಿಪಿ ಸಭೆಗೆ ಮಾತ್ರ ಸೀಮಿತವಾಗುವುದು, ನ್ಯಾಷನಲ್ ಪ್ರೋಗ್ರಾಂನಲ್ಲಿ ಧ್ವಜಾರೋಹಣ ಮಾಡೋದು ಅಷ್ಟೇ ಆದ್ರೆ ಬೇರೆ ಜಿಲ್ಲೆಗೆ ಹೋಗಿ ಮಾಡಬಹುದು. ಆದ್ರೆ ಪ್ರತಿ ಜಿಲ್ಲೆಯಲ್ಲಿ ನಾಯಕತ್ವದ ಅಗತ್ಯವಿದೆ ಎಂದು ತಿಳಿಸಿದರು. ಇದನ್ನೂ ಓದಿ: ಶ್ರೀರಂಗಪಟ್ಟಣದಲ್ಲಿ ಎಸಿಬಿ ಬಲೆಗೆ ಬಿದ್ದ ಸರ್ವೇ ಅಧಿಕಾರಿ!

  • ಸಂಪುಟದಲ್ಲಿ ಖಾಲಿ ಸ್ಥಾನಗಳನ್ನು ಭರ್ತಿ ಮಾಡುತ್ತಾರೆ: ಮಾಧುಸ್ವಾಮಿ

    ಸಂಪುಟದಲ್ಲಿ ಖಾಲಿ ಸ್ಥಾನಗಳನ್ನು ಭರ್ತಿ ಮಾಡುತ್ತಾರೆ: ಮಾಧುಸ್ವಾಮಿ

    – ತುಮಕೂರಲ್ಲಿ ಜೆಡಿಎಸ್ ಕ್ಷೀಣಿಸುತ್ತಿರುವುದು ನಿಜ
    – ಕ್ಯಾಬಿನೆಟ್ ಸಭೆ ನಂತರ ಕೆಲವು ಬದಲಾವಣೆ

    ತುಮಕೂರು: ಸಂಪುಟ ಪುನಾರಚನೆ ಮಾಡುವ ವಿಚಾರ ಗೊತ್ತಿಲ್ಲ. ಆದರೆ ಖಾಲಿ ಇದ್ದ ಸ್ಥಾನಗಳನ್ನು ಭರ್ತಿ ಮಾಡುತ್ತಾರೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗ ಸಚಿವ ಸ್ಥಾನ ಖಾಲಿ ಬಿಡಬಾರದು. ಹಾಗಾಗಿ ಭರ್ತಿ ಮಾಡಬಹುದು ಎಂದ ಅವರು, ಇದೇ ತಿಂಗಳ 27ಕ್ಕೆ ಕ್ಯಾಬಿನೆಟ್ ಸಭೆ ಇದೆ. ಅದಾದ ಬಳಿಕ ಕೆಲ ನಿರ್ಧಾರ ಆಗಬಹುದು. ಜೊತೆಗೆ ಉಸ್ತುವಾರಿ ಸಚಿವರ ನೇಮಕ ಕೂಡ ಇದೇ ಸಭೆಯಲ್ಲಿ ನಿರ್ಧಾರ ಆಗಬಹುದು. ಆದರೆ ನಿಗಮ ಮಂಡಳಿಯ ಪುನಾರಚನೆ ಇಲ್ಲ. ಬದಲಾಗಿ ಖಾಲಿ ಇರುವ 18-20 ಸ್ಥಾನಗಳು ಭರ್ತಿಯಾಗಬಹುದು ಎಂದು ತಿಳಿಸಿದರು.

    ಸಿಎಂ ಬೊಮ್ಮಾಯಿ ಮುಂದುವರಿಯುತ್ತಾರೆ ಎಂಬ ವಾತಾವರಣವಿದೆ. ಅದನ್ನು ಹೊರತುಪಡಿಸಿ ಬೇರೆ ಏನೂ ಗೊತ್ತಿಲ್ಲ ಎಂದ ಅವರು, ಸಿದ್ದರಾಮಯ್ಯರ ಹೇಳಿಕೆಗೆ ದನಿಗೂಡಿಸಿ, ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಕ್ಷೀಣಿಸುತ್ತಿರುವುದು ನಿಜ. ನಾನು ಎಂಎಲ್‍ಸಿ ಚುನಾವಣೆಯಲ್ಲೇ ಈ ಬಗ್ಗೆ ಹೇಳಿದ್ದೆ. ಜೆಡಿಎಸ್ ನಾಯಕರಾದ ಗುಬ್ಬಿ ಶಾಸಕ ಶ್ರೀನಿವಾಸ್, ಮಾಜಿ ಎಂಎಲ್‍ಸಿ ಬೆಮೆಲ್ ಕಾಂತರಾಜು ಕಾಂಗ್ರೆಸ್‍ಗೆ ಹೋಗೋದು ಕೂಡ ಜೆಡಿಎಸ್ ಕ್ಷೀಣಿಸುತ್ತಿರುವ ಸಂಕೇತವಾಗಿದೆ. ಇದು ಜೆಡಿಎಸ್ ಪಾಳಯದಲ್ಲಿ ಆತಂಕ ಸೃಷ್ಟಿಸಿದೆ. ಆದರೆ ಅದರ ಲಾಭವನ್ನು ಕಾಂಗ್ರೆಸ್ ಅವರು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಬೆಳಗಾವಿಯ ಗೌಪ್ಯ ಸಭೆ ಬಿಜೆಪಿ ಅಧಿಕೃತ ಸಭೆಯಲ್ಲ: ಬಾಲಚಂದ್ರ ಜಾರಕಿಹೊಳಿ

    ಇದೇ ಸಂದರ್ಭದಲ್ಲಿ ಬಿಜೆಪಿಯ ಕುರಿತು ಮಾತನಾಡಿದ ಅವರು, ನಮ್ಮಲ್ಲಿ ಕೆಲ ಆಂತರಿಕ ಭಿನ್ನಾಭಿಪ್ರಾಯ ಇರಬಹುದು. ಅದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಲ್ಲ. ಹಾಗಾಗಿ ಪಕ್ಷಕ್ಕೆ ಯಾವುದೇ ತೊಂದರೆ ಇಲ್ಲ. ಇದರಿಂದ ಬಿಜೆಪಿಯಲ್ಲಿ ಯಾರೂ ವಲಸೆ ಹೋಗುವ ಸಾಧ್ಯತೆ ಇಲ್ಲ. ಹಾಗಾಗಿ ನಮಗೆ ಆತಂಕ ಅಷ್ಟಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸಂಪುಟ ಪುನಾರಚನೆ ವರಿಷ್ಠರು ನಿರ್ಧರಿಸುತ್ತಾರೆ: ಬೊಮ್ಮಾಯಿ

  • ನಾನು ಸಿಎಂ ಆಗಬೇಕು ಎಂದು ಕೂಗ್ಬೇಡಿ, ಒಳ ಸಂಚು ಶುರುವಾಗುತ್ತೆ: ಪರಮೇಶ್ವರ್

    ನಾನು ಸಿಎಂ ಆಗಬೇಕು ಎಂದು ಕೂಗ್ಬೇಡಿ, ಒಳ ಸಂಚು ಶುರುವಾಗುತ್ತೆ: ಪರಮೇಶ್ವರ್

    ತುಮಕೂರು: ನಾನು ಸಿಎಂ ಆಗಬೇಕು ಎಂದು ಕೂಗ್ಬೇಡಿ, ಒಳ ಸಂಚು ಶುರುವಾಗುತ್ತದೆ ಎಂದು ಅಭಿಮಾನಿಗಳಿಗೆ ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ ತಾಕೀತು ಮಾಡಿದರು.

    ಕಾಂಗ್ರೆಸ್‌ನಲ್ಲಿ ಮತ್ತೆ ದಲಿತ ಸಿಎಂ ವಿಚಾರ ಮುನ್ನೆಲೆಗೆ ಬಂದಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಪಾಲ್ಗೊಂಡಿದ್ದ ಕೊರಟಗೆರೆಯ ಚಿಕ್ಕಗುಂಡಗಲ್ ಗ್ರಾಮದ ಕಾರ್ಯಕ್ರಮದಲ್ಲಿ ನಡೆದಿದೆ.

    ಈ ವೇಳೆ ಮಾತನಾಡಿದ ಅವರು, ಸಿಎಂ ವಿಚಾರ ಎತ್ತಿದರೆ ನನಗೆ ಬಹಳ ಕಷ್ಟ ಆಗುತ್ತದೆ. ನೀವು ಇಲ್ಲಿ ಹೇಳೋಕೆ ಪ್ರಾರಂಭಿಸಿದರೆ. ಅಲ್ಲಿ ನನಗೆ ಹೊಡೆತ ಬೀಳೋಕೆ ಶುರುವಾಗುತ್ತದೆ. ನೀವು ಮನಸ್ಸಿನಲ್ಲಿ ಬೇಕಾದರೇ ಹೇಳಿಕೊಳ್ಳಿ ಎಂದ ಅವರು, ನಿಮ್ಮ ಆಶೀರ್ವಾದ ಹಾಗೂ ಪರಮಾತ್ಮನ ಇಚ್ಛೆ ಇದ್ದರೆ ನಾನು ಮುಖ್ಯಮಂತ್ರಿ ಆಗುತ್ತೇನೆ. ಮುಖ್ಯಮಂತ್ರಿ ಸ್ಥಾನ ಯಾರಿಗೆ ನೀಡಬೇಕು ಎನ್ನುವುದನ್ನು ವರಿಷ್ಠರು ತೀರ್ಮಾನಿಸುತ್ತಾರೆ ಎಂದರು. ಇದನ್ನೂ ಓದಿ: ಸೋಂಕಿನಿಂದ ಗುಣಮುಖರಾಗಿ 3 ತಿಂಗಳ ನಂತರ ಲಸಿಕೆ, ಬೂಸ್ಟರ್ ಡೋಸ್: ಕೇಂದ್ರ

  • ಮನೆಗಾಗಿ ವ್ಯಕ್ತಿಯೊಬ್ಬ ಹೈಟೆನ್ಷನ್ ವಿದ್ಯುತ್‌ ಕಂಬ ಏರಿ ಪ್ರತಿಭಟಿಸಿದ

    ಮನೆಗಾಗಿ ವ್ಯಕ್ತಿಯೊಬ್ಬ ಹೈಟೆನ್ಷನ್ ವಿದ್ಯುತ್‌ ಕಂಬ ಏರಿ ಪ್ರತಿಭಟಿಸಿದ

    ತುಮಕೂರು: ವ್ಯಕ್ತಿಯೊಬ್ಬ ಮನೆ ನೀಡುವಂತೆ ಒತ್ತಾಯಿಸಿ ಹೈ ಟೆನ್ಷನ್ ವಿದ್ಯುತ್‌ ಕಂಬ ಏರಿ ಪ್ರತಿಭಟನೆ ನಡೆಸಿದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಬೆಳಗ್ಗೆ 10 ಗಂಟೆಗೆ ಗ್ರಾಮದ ಸಮೀಪವೇ ಹಾದುಹೋಗಿರುವ ಹೈಟೆನ್ಷನ್ ಕಂಬವನ್ನು ಏರಿದ ಶ್ರೀನಿವಾಸ್ ನನಗೆ ಸರ್ಕಾರದಿಂದ ಮನೆ ಹಾಗೂ ರಸ್ತೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಮತ್ತು ಸರ್ಕಾರದ ವಿರುದ್ಧ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಪ್ರಸಂಗ ನಡೆದಿದೆ.

    ಸುಮಾರು 45 ನಿಮಿಷಕ್ಕೂ ಹೆಚ್ಚು ಕಾಲ ಹೈಟೆನ್ಷನ್ ಕಂಬದ ಅರ್ಧ ಭಾಗದಲ್ಲಿ ಕುಳಿತು ನನಗೆ ಮನೆ ನೀಡಬೇಕು. ಗುಬ್ಬಿ ತಹಶೀಲ್ದಾರ್ ಸ್ಥಳಕ್ಕೆ ಬರಬೇಕು ಎಂದು ಪಟ್ಟುಹಿಡಿದಿದ್ದಾರೆ. ಶ್ರೀನಿವಾಸ್ ಹೈಟೆನ್ಷನ್ ಕಂಬದ ಮೇಲೆ ಕುಳಿತಿರುವುದನ್ನು ನೋಡಲು ಹೊಸಹಳ್ಳಿ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕೆಲವರು ಕೆಳಗೆ ಇಳಿಯುವಂತೆ ಮಾಡಿದ ಮನವಿಗೆ ಶ್ರೀನಿವಾಸ್ ಕಿಮ್ಮತ್ತು ನೀಡಲಿಲ್ಲ.  ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅರೆಸ್ಟ್

    ಹೈಟೆನ್ಷನ್ ಕಂಬ ಏರಿ ಕುಳಿತಿರುವ ವಿಷಯವನ್ನು ತಿಳಿದ ತಹಶೀಲ್ದಾರ್ ಆರತಿ, ಸಿಪಿಐ ನದಾಫ್ ಸ್ಥಳಕ್ಕೆ ಬಂದು ಶ್ರೀನಿವಾಸ್ ಅವರ ಮನವೊಲಿಸಿದರು. ಅಧಿಕಾರಿಗಳಿಂದ ಸಕಾರಾತ್ಮಕ ಭರವಸೆ ಸಿಕ್ಕಿದ ನಂತರ ಶ್ರೀನಿವಾಸ್ ಕೆಳಗೆ ಇಳಿದರು. ಶ್ರೀನಿವಾಸ್ ಹೈಟೆನ್ಷನ್ ಕಂಬ ಏರಿರುವುದನ್ನು ನೂರಾರು ಮಂದಿ ಕುತೂಹಲದಿಂದ ವೀಕ್ಷಿಸಿದರು. ಅಧಿಕಾರಿಗಳ ಮಧ್ಯ ಪ್ರವೇಶದಿಂದ ಪ್ರಕರಣ ಸುಖಾಂತ್ಯ ಕಂಡಿದೆ. ಇದನ್ನೂ ಓದಿ:  ನೀವು ಲಂಚ ಪಡೆದಿಲ್ಲ ಅಂದ್ರೆ ಹ್ಯೂಬ್ಲೋಟ್ ವಾಚ್ ಎಲ್ಲಿಂದ ಬಂತು – ಸಿದ್ದುಗೆ ಬಿಜೆಪಿ ಪ್ರಶ್ನೆ

  • ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಕೋವಿಡ್ ಸೋಂಕಿತರಿಗೆ ಸರ್ಕಾರದ ಪರಿಹಾರ ಇಲ್ಲ: ಮಾಧುಸ್ವಾಮಿ

    ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಕೋವಿಡ್ ಸೋಂಕಿತರಿಗೆ ಸರ್ಕಾರದ ಪರಿಹಾರ ಇಲ್ಲ: ಮಾಧುಸ್ವಾಮಿ

    ತುಮಕೂರು: ಕೋವಿಡ್ ಸೋಂಕಿತರು ಸರ್ಕಾರಿ ಆಸ್ಪತ್ರೆಗೆ ಸೇರದೇ ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಸರ್ಕಾರದಿಂದ ಯಾವುದೇ ಪರಿಹಾರ ಸಿಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಕೋವಿಡ್ ಸೋಂಕಿತರು ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬೇಕು, ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಬಳಿಕ ಖಾಸಗಿ ಆಸ್ಪತ್ರೆಗೆ ರೆಫರ್ ಆಗಿರಬೇಕು. ಇವೆರಡೂ ಆಗದೇ ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಅದರ ಬಿಲ್ ಅನ್ನು ಸರ್ಕಾರಕ್ಕೆ ಕಳುಹಿಸಿದರೆ ಪರಿಹಾರ ನೀಡಲಾಗುವುದಿಲ್ಲ ಹಾಗೂ ಮರಣಾನಂತರ ಸಿಗುವ ಸೌಲಭ್ಯಗಳನ್ನು ಕೂಡ ನೀಡಲಾಗುವುದಿಲ್ಲ ಎಂದರು. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಎಣ್ಣೆ ದರ ಭಾರೀ ಇಳಿಕೆ – ಮನೆಯಲ್ಲೇ ಮಿನಿಬಾರ್‌ಗೆ ಅನುಮತಿ

    ಬುಧವಾರ ರಾಜ್ಯದಲ್ಲಿ 40,499 ಕೇಸ್ ವರದಿಯಾಗಿದ್ದು, ಒಟ್ಟು 21 ಮಂದಿ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಒಟ್ಟು 24,135 ಮಂದಿಗೆ ಸೋಂಕು ತಗುಲಿದ್ದು, 5 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,84,000ಕ್ಕೆ ತಲುಪಿದೆ. ಇದನ್ನೂ ಓದಿ: ಚೀನಾದಿಂದ ಅರುಣಾಚಲ ಪ್ರದೇಶದ ಹುಡುಗನ ಅಪಹರಣ – ಪ್ರಧಾನಿ ವಿರುದ್ಧ ರಾಗಾ ಕಿಡಿ

  • ವಿದ್ಯಾರ್ಥಿಗೆ ಹೊಡೆದ ಶಿಕ್ಷಕಿಗೆ 3 ವರ್ಷ ಜೈಲು ಶಿಕ್ಷೆ!

    ವಿದ್ಯಾರ್ಥಿಗೆ ಹೊಡೆದ ಶಿಕ್ಷಕಿಗೆ 3 ವರ್ಷ ಜೈಲು ಶಿಕ್ಷೆ!

    ತುಮಕೂರು: ಸರಿಯಾಗಿ ಓದಲಿಲ್ಲವೆಂದು ವಿದ್ಯಾರ್ಥಿಗೆ ಹೊಡೆದ ಶಿಕ್ಷಕಿಗೆ 3 ವರ್ಷ ಜೈಲು ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ.

    ತುಮಕೂರು ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಭಾರತ್ ಮಾತಾ ಶಾಲೆಯ ಫಹರತ್ ಫಾತಿಮಾ ಶಿಕ್ಷೆಗೆ ಒಳಗಾದ ಶಿಕ್ಷಕಿ.

    ಏನಿದು ಪ್ರಕರಣ?
    2011ರ ಫೆಬ್ರವರಿ 17ರ ಮಧ್ಯಾಹ್ನ 3:30ರ ವೇಳೆಗೆ ಈ ಘಟನೆ ನಡೆದಿತ್ತು. ಶಿಕ್ಷಕಿ ಫಹರತ್ ಫಾತಿಮಾ ಸರಿಯಾಗಿ ಓದಲಿಲ್ಲ ಎಂಬ ಕಾರಣಕ್ಕೆ ರೋಷಿನಿತಾಜ್(7) ವಿದ್ಯಾರ್ಥಿನಿಗೆ ಕೋಲಿನಿಂದ ಹೊಡೆದಿದ್ದರು. ಇದನ್ನೂ ಓದಿ:  24/7 ಸಂಚಾರಿ ಪರೀಕ್ಷಾ ಘಟಕಕ್ಕೆ ಚಾಲನೆ ನೀಡಿದ ಗೌರವ್ ಗುಪ್ತ

    ಈ ವೇಳೆ ವಿದ್ಯಾರ್ಥಿನಿಯ ಎಡಕಣ್ಣಿಗೆ ಗಾಯವಾಗಿತ್ತು. ಈ ಬಗ್ಗೆ ತಿಲಕ್ ಪಾರ್ಕ್ ಪಿಎಸ್‍ಐ ದಿನೇಶ್ ಪಾಟೀಲ್ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

    ಪ್ರಕರಣದ ವಿಚಾರಣೆ ನಡೆಸಿದ ತುಮಕೂರಿನ 3ನೇ ಅಧಿಕ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶೆ ಶಾರದ ಕೊಪ್ಪದ ಅವರು, ಶಿಕ್ಷಕಿಗೆ 3 ವರ್ಷಗಳ ಕಠಿಣ ಶಿಕ್ಷೆ ಮತ್ತು 10 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಜಿ.ಬಸವರಾಜು ವಾದ ಮಂಡಿಸಿದ್ದರು.