Tag: tumkur

  • ಹಿಂದೂಗಳಂತೆ ಮುಸಲ್ಮಾನರೂ ಪೌರಕಾರ್ಮಿಕರಾಗಿ ದುಡಿಯಲಿ: ಸೊಗಡು ಶಿವಣ್ಣ

    ಹಿಂದೂಗಳಂತೆ ಮುಸಲ್ಮಾನರೂ ಪೌರಕಾರ್ಮಿಕರಾಗಿ ದುಡಿಯಲಿ: ಸೊಗಡು ಶಿವಣ್ಣ

    ತುಮಕೂರು: ಹಿಂದೂ ಪೌರಕಾರ್ಮಿಕರು ಮುಸಲ್ಮಾನರ ಅಂಗಡಿ, ಮನೆ ಮುಂದೆ ಕಸ ಗುಡಿಸುತ್ತಾರೆ. ಅವರ ಶೌಚಾಲಯವನ್ನು ಕ್ಲೀನ್ ಮಾಡುತ್ತಾರೆ. ಆದರೆ ಮುಸಲ್ಮಾನರೇಕೆ ಪೌರಕಾರ್ಮಿಕರ ಕೆಲಸ ಮಾಡಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಪ್ರಶ್ನಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾನತೆ ಅಂದ ಮೇಲೆ ಎಲ್ಲವೂ ಒಂದೇ ಆಗಬೇಕು. ಹಾಗಾದರೆ ಮುಸಲ್ಮಾನರೂ ಕೂಡ ಪೌರಕಾರ್ಮಿಕರಾಗಿ ಸೇರಿ ಹಿಂದೂಗಳ ಮನೆ ಮುಂದೆ ಕಸ ಗುಡಿಸಿ ಔದಾರ್ಯ ತೊರಲಿ ಎಂದು ಸವಾಲು ಹಾಕಿದರು.

    ಮಹಾರಾಷ್ಟ್ರದ ಆದಿತ್ಯ ಠಾಕ್ರೆ ಹೇಳಿರುವುದು ನೂರಕ್ಕೆ ನೂರು ಸತ್ಯವಾಗಿದೆ. ದೇಶದಲ್ಲಿ ಮೈಕ್‍ಗಳ ಹಾವಳಿ ವಿಪರೀತವಾಗಿದೆ. ನಾನು ಮಾಲಿನ್ಯ ಸಚಿವನಾಗಿದ್ದಾಗ ಕಾನೂನಿಗೆ ಗೌರವ ಕೊಡುವಂತೆ ಮಸೀದಿಗಳ ಮೇಲಿನ ಮೈಕ್‍ಗಳನ್ನು ತೆಗೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೆ. ಈ ಮೈಕ್‍ಗಳ ಶಬ್ಧದಿಂದಾಗಿ ಹಾರ್ಟ್ ಅಟ್ಯಾಕ್ ಮತ್ತು ವಿದ್ಯಾರ್ಥಿಗಳ ಓದಿಗೆ ತೊಡಕು ಆಗುತ್ತಿದೆ. ತುಮಕೂರು ನಗರದ ಸದಾಶಿವನಗರ, ಜಯಪುರದಲ್ಲಿ ಆಜನ್ ಕಾಟದಿಂದ ಹಿಂದೂಗಳು ಮನೆ ತೊರೆದಿದ್ದಾರೆ ಎಂದರು. ಇದನ್ನೂ ಓದಿ: ಸ್ಥಳೀಯ ಉಗ್ರರನ್ನು ಮುಂದಿಟ್ಟುಕೊಂಡು ಕಾಶ್ಮೀರದಲ್ಲಿ ಪಾಕಿಸ್ತಾನಿ ಭಯೋತ್ಪಾದಕರ ದಾಳಿ: ಉನ್ನತ ಅಧಿಕಾರಿ

    ತುಮಕೂರಿನ ಕೆಲ ಬಡಾವಣೆಗಳಲ್ಲಿ ಮನೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಹಿಂದೂಗಳ ಸ್ಮಶಾನಕ್ಕೆ ಹೋಗಿ ನಮ್ಮ ಶಾಸ್ತ್ರ ವಿಧಿವಿಧಾನ ಮಾಡುವ ವೇಳೆ ಆಜನ್‍ನಿಂದ ನಮಗೆ ತೊಂದರೆ ಆಗುತ್ತಿದ್ದು, ಬಿಜೆಪಿಯವರು ಕೇವಲ ಹತ್ತೇ ವರ್ಷ ಆಳ್ವಿಕೆ ನಡೆಸಿದ್ದಾರೆ. ಇದರೆ ಹಿಂದೆ 70 ವರ್ಷಗಳು ಆಳಿದವರು ಪಾಪಿಗಳು. ಅವರು ಸಮಾಜದಲ್ಲಿ ಜಾತಿ ವಿಂಗಡಣೆ ಮಾಡುತ್ತಿದ್ದಾರೆ ಎಮದು ವಾಗ್ದಾಳಿ ನಡೆಸಿದರು.

    SIDDARAMAIAH

    ಕುಮಾರಸ್ವಾಮಿ ಹಿಜಬ್ ಹಿಡಿದುಕೊಂಡಿದ್ದಾರೆ. ಸಿದ್ದರಾಮಯ್ಯ ಹಲಾಲ್ ಹಿಡ್ಕೊಂಡಿದ್ದಾರೆ. ಇನ್ನೊಬ್ಬರು ಮಾವಿನಹಣ್ಣು ಹಿಡ್ಕೊಂಡಿದ್ದಾರೆ. ಮೊದಲು ಶಬ್ಧ ಮಾಲಿನ್ಯ ತಡೆಗಟ್ಟಲಿ ದೇವಸ್ಥಾನದಲ್ಲೂ ಮೈಕ್‍ಗಳನ್ನು ಶಬ್ಧ ಮಾಲಿನ್ಯ ಆಗದಂತೆ ಹಾಕಿಕೊಳ್ಳಲಿ. ಸುಪ್ರೀಂ ಆದೇಶ ಯತಾವತ್ತು ಪಾಲನೆ ಆಗಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬೇರೆ ಪಕ್ಷಗಳು ಹಣಬಲದಲ್ಲಿ ಶ್ರೀಮಂತ, AAP ವಿಚಾರ ಧಾರೆಯಲ್ಲಿ ಶ್ರೀಮಂತ: ಭಾಸ್ಕರ್ ರಾವ್

    ಇದು ಪಾಕಿಸ್ತಾನ ಅಲ್ಲ, ಹಿಂದೂ ರಾಷ್ಟ್ರ. ಇಲ್ಲಿ ಹಿಂದೂ ಕಾನೂನು ಇರಬೇಕು. ಸರ್ಕಾರಕ್ಕೆ ಈಗಲೂ ಮನವಿ ಮಾಡಿಕೊಳ್ಳುತ್ತೇನೆ. ಕಾಂಗ್ರೆಸ್ ಮತ್ತು ಜೆಡಿಎಸ್ ದೇಶ ವಿಭಜನೆ ಮಾಡೋಕೆ ಹೊರಟಿದ್ದಾರೆ. ಮಾವಿನಹಣ್ಣನ್ನು ನಮ್ಮವರು ಬೆಳೆಯೋದು ಮುಸಲ್ಮಾನರು ಅದನ್ನ ಮಾರಿ ಲಾಭ ಮಾಡಿಕೊಳ್ಳುವುದು ಏಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮಾವಿನ ಹಣ್ಣನ್ನೂ ಕೂಡ ಇವರು ಮಾರಬಾರದು. ಅದನ್ನು ಬೆಳೆದ ರೈತರು ನಮ್ಮವರು ಮಾರಲಿ ಮುಸಲ್ಮಾನರು ಮಾವಿನಹಣ್ಣನ್ನ ಖರೀದಿ ಮಾಡದೆ ಇದ್ದರೇ, ರೈತರು ಕಂಗಾಲು ಆಗಲ್ಲ. ರೈತರಿಂದ ನಮ್ಮವರೇ ಖರೀದಿ ಮಾಡಿ, ಅದನ್ನು ಮಾರಲಿ ಎಂದರು.

    ಹೈಕೋರ್ಟ್ ತೀರ್ಪಿನ ವಿರುದ್ಧ ಇವರ ಅಂಗಡಿ ಬಂದ್ ಮಾಡಿದರು. ಇದರಿಂದ ನಮ್ಮವರಿಗೂ ಲಾಸ್ ಆಗಿದೆ. ರೇಷ್ಮೆ ಮಾರ್ಕೆಟ್‍ಗಳೂ ಬಂದ್ ಆಗೋದ್ದವು, ಇದರಿಂದ ನಮ್ಮವರಿಗೆ ತುಂಬಾ ತೊಂದರೆ ಆಗಿದೆ. ರೇಷ್ಮೆ ಗೂಡುಗಳು ನಾಶ ಆದವು ಎಂದು ಬೇಸರ ವ್ಯಕ್ತಪಡಿಸಿದರು.

  • ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿ ಅಪಘಾತದಲ್ಲಿ ಸಾವು

    ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿ ಅಪಘಾತದಲ್ಲಿ ಸಾವು

    ತುಮಕೂರು: ಎಸ್‍ಎಸ್‍ಎಲ್‌ಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತರೊಂದಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದ ವೇಳೆ ಬೈಕ್ ಅಪಘಾತಕ್ಕಿಡಾಗಿ ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ.

    ನವೀನ್ ಮೃತ ವಿದ್ಯಾರ್ಥಿ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಮೃತೂರು ಬಳಿ ಘಟನೆ ನಡೆದಿದೆ. ಇಂದು ನಡೆಯುತ್ತಿದ್ದ ಗಣಿತ ಪರೀಕ್ಷೆ ಬರೆಯಲು ಮೂವರು ತೆರಳುತ್ತಿದ್ದರು. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿದೆ.

    ಘಟನೆಯಲ್ಲಿ ನವೀನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕಿನಲ್ಲಿ ತೆರಳುತ್ತಿದ್ದ ಮತ್ತಿಬ್ಬರು ವಿದ್ಯಾರ್ಥಿಗಳಾದ ಶರತ್, ದರ್ಶನ್‍ಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿ ನವೀನ್ ಅಮೃತೂರು ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದ ಎನ್ನಲಾಗಿದೆ. ಡಾ. ರಾಜೇಂದ್ರಪ್ರಸಾದ್ ಹೈಸ್ಕೂಲ್‍ನಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಅಮೃತ್ತೂರು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 8 ಅಪರಾಧಿಳಿಗೆ ಜೀವಾವಧಿ ಶಿಕ್ಷೆ: ಬೆಳಗಾವಿ ಕೋಕಾ ನ್ಯಾಯಾಲಯ ಆದೇಶ

    ಕಳೆದ ಐದು ದಿನಗಳ ಹಿಂದೆ ಮೈಸೂರಿನಲ್ಲಿ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ಬರೆಯುವ ಸಂಬಂಧ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಬೆನ್ನಲ್ಲೇ ಹೃದಯಾಘಾತವಾಗಿ ಅಸುನೀಗಿದಳು. ಇನ್ನು ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿರುವುದು ನಿಜಕ್ಕೂ ದುರದೃಷ್ಟಕರ. ಇದನ್ನೂ ಓದಿ: ಮೈಕ್ ತೆಗೆಸದಿದ್ದರೆ, ನಾವೂ ಬೆಳಗ್ಗೆ 5ಕ್ಕೆ ಮಂದಿರಗಳಲ್ಲಿ ಈಶ್ವರನ ಭಜನೆ, ಓಂಕಾರ ಹಾಕಿಸುತ್ತೇವೆ: ಮುತಾಲಿಕ್

  • ಇಂದು ಶಿವಕುಮಾರ ಶ್ರೀಗಳ 115 ನೇ ಜನ್ಮ ದಿನೋತ್ಸವ – ಪೂಜಾ ಕೈಂಕರ್ಯಗಳು ಆರಂಭ

    ಇಂದು ಶಿವಕುಮಾರ ಶ್ರೀಗಳ 115 ನೇ ಜನ್ಮ ದಿನೋತ್ಸವ – ಪೂಜಾ ಕೈಂಕರ್ಯಗಳು ಆರಂಭ

    ತುಮಕೂರು: ನಡೆದಾಡುವ ದೇವರ 115 ನೇ ಜನ್ಮ ದಿನೋತ್ಸವದ ಹಿನ್ನೆಲೆ ತುಮಕೂರಿನಲ್ಲಿ ಹಬ್ಬದ ವಾತಾವರಣವಿದೆ. ಭಕ್ತಾದಿಗಳು ಶ್ರೀಗಳ ಹುಟ್ಟುಹಬ್ಬಕ್ಕಾಗಿ ಭಾರೀ ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ಇಂದು ಮುಂಜಾನೆಯೇ ಶ್ರೀಮಠದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಿದೆ.

    ಮುಂಜಾನೆಯೇ ಶ್ರೀಗಳ ಗದ್ದಿಗೆಗೆ ರುದ್ರಾಭಿಷೇಕ, ಪುಷ್ಪ ವೃಷ್ಟಿ ಮತ್ತು ಅರ್ಚಕರಿಂದ ಮಂತ್ರ ಪಠಣ ಕಾರ್ಯಗಳು ನಡೆದಿದೆ.  ಇದನ್ನೂ ಓದಿ: ಸಿದ್ದಗಂಗಾ ಮಠಕ್ಕೆ ರಾಹುಲ್‌ ಗಾಂಧಿ ಭೇಟಿ

    ಶಿವಕುಮಾರ ಶ್ರೀಗಳ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳುತ್ತಿದ್ದಾರೆ. ಶಾ ಅವರು ಬೆಳಗ್ಗೆ 10-30ಕ್ಕೆ ತುಮಕೂರು ವಿವಿಯ ಹೆಲಿಪ್ಯಾಡಲ್ಲಿ ಇಳಿಯುತ್ತಾರೆ. ಬಳಿಕ ರಸ್ತೆ ಮಾರ್ಗದ ಮೂಲಕ ಸಿದ್ದಗಂಗಾ ಮಠಕ್ಕೆ ಆಗಮಿಸಿ, ಮೊದಲು ಶ್ರೀಗಳ ಗದ್ದಿಗೆ ದರ್ಶನ ಹಾಗೂ ಪೂಜೆ ಮಾಡುತ್ತಾರೆ. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವೇದಿಕೆ ಕಾರ್ಯಕ್ರಮ 11 ಗಂಟೆಯಿಂದ 1 ಗಂಟೆವರೆಗೂ ನಡೆಯುತ್ತದೆ.

    ಕಾರ್ಯಕ್ರಮ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗಸ್ವಾಮೀಜಿ, ಸುತ್ತೂರು ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ನಡೆಯುತ್ತದೆ. ವೇದಿಕೆ ಮೇಲೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರಾದ ಖೂಬಾ, ಸಂಸದ ಜಿ.ಎಸ್.ಬಸವರಾಜ್ ಹಾಗೂ ಸಾಧು ಸಂತರು ಸೇರಿದಂತೆ ಒಟ್ಟು 22 ಜನರಿಗೆ ಅವಕಾಶವಿದೆ. ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯಿಂದ ಹಳೇ ಮಠದ ಪೂಜಾಗ್ರಹದಲ್ಲಿ ಇಷ್ಟಲಿಂಗ ಪೂಜೆ ನಡೆಯಲಿದೆ. ಪರಿಚಾರಕರು ಹಾಗೂ ಶಿಷ್ಯವೃಂದದೊಂದಿಗೆ ಇಷ್ಠಲಿಂಗ ಪೂಜೆ ಮಾಡಲಾಗುತ್ತಿದೆ. ಇದನ್ನೂ ಓದಿ: ಏ.1 ರಂದು ನಡೆದಾಡೋ ದೇವರ ಜನ್ಮ ದಿನಾಚರಣೆ- ಅಮಿತ್ ಶಾ ಕಾರ್ಯಕ್ರಮ ಉದ್ಘಾಟನೆ

    ಇಂದು ಸುಮಾರು 1.5 ರಿಂದ 2 ಲಕ್ಷ ಭಕ್ತಾಧಿಗಳು ಬರುವ ನಿರೀಕ್ಷೆ ಇದ್ದು, ಭಕ್ತಾದಿಗಳಿಗೆ ಎಂಟು ಕಡೆಗಳಲ್ಲಿ ಊಟ, ತಿಂಡಿಯ ವ್ಯವಸ್ಥೆ ಮಾಡಿಸಲಾಗಿದೆ. ಉಪ್ಪಿಟ್ಟು, ಕೇಸರಿಬಾತ್, ಬೋಂದಿ ಪಾಯಸ, ಅನ್ನಸಾಂಬಾರ್, ವಿವಿಧ ಖಾದ್ಯಗಳನ್ನು ಮಠದಲ್ಲಿ ತಯಾರು ಮಾಡಲಾಗಿದೆ.

  • ಸಿದ್ದಗಂಗಾ ಮಠಕ್ಕೆ ರಾಹುಲ್‌ ಗಾಂಧಿ ಭೇಟಿ

    ಸಿದ್ದಗಂಗಾ ಮಠಕ್ಕೆ ರಾಹುಲ್‌ ಗಾಂಧಿ ಭೇಟಿ

    ತುಮಕೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಎರಡು ದಿನ ಕರ್ನಾಟಕ ಪ್ರವಾಸ ಕೈಗೊಂಡಿದ್ದು, ಗುರುವಾರ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು.

    ತುಮಕೂರಿಗೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಕ್ಯಾತಸಂದ್ರ ಟೋಲ್ ಗೇಟ್ ಬಳಿ ಅದ್ಧೂರಿಯಾಗಿ ಸ್ವಾಗತಿಸಿದರು. ನಂತರ ಸಿದ್ದಗಂಗಾ ಮಠಕ್ಕೆ ಆಗಮಿಸಿದ ರಾಹುಲ್ ಗಾಂಧಿ ಶಿವಕುಮಾರ ಶ್ರೀಗಳ ಗದ್ದಿಗೆಗೆ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಏ.1 ರಂದು ನಡೆದಾಡೋ ದೇವರ ಜನ್ಮ ದಿನಾಚರಣೆ- ಅಮಿತ್ ಶಾ ಕಾರ್ಯಕ್ರಮ ಉದ್ಘಾಟನೆ

    ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ, ಮಾಜಿ ಸಚಿವ ಎಂ.ಬಿ.ಪಾಟೀಲ್, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಸೇರಿದಂತೆ ಹಲವರು ಸಾಥ್ ನೀಡಿದರು. ಇದೇ ವೇಳೆ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು.

    ಹಣೆಗೆ ವಿಭೂತಿ ಇಟ್ಟಿಕೊಂಡು ರಾಹುಲ್ ಗಾಂಧಿ, ಧ್ಯಾನ ಕೇಂದ್ರಕ್ಕೆ ಭೇಟಿ ನೀಡಿದರು. ಸಿದ್ದಗಂಗಾ ಶ್ರೀಗಳ ಭೇಟಿ ಬಳಿಕ ಉಪಾಹಾರ ಸೇವಿಸಿದರು. ಇಡ್ಲಿ, ದೋಸೆ, ಉಪ್ಪಿಟ್ಟು, ಬೋಂದಿ-ಪಾಯಸ ಸೇವಿಸಿದರು. ಇದನ್ನೂ ಓದಿ: ಇಂಧನ ಬೆಲೆ ಏರಿಕೆ ಖಂಡಿಸಿ ರಾಹುಲ್ ಗಾಂಧಿ ಪ್ರತಿಭಟನೆ

  • ರಾಜ್ಯದ ಹವಾಮಾನ ವರದಿ: 31-03-2022

    ರಾಜ್ಯದ ಹವಾಮಾನ ವರದಿ: 31-03-2022

    ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಿಗ್ಗೆ ಚಳಿಯ ವಾತಾವರಣ ಇರಲಿದ್ದು, ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ಇರಲಿದೆ.

    ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಅಲ್ಲದೆ, ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಜಿಲ್ಲೆಗಳಲ್ಲಿ ಮೋಡಕವಿದ ವಾತಾರಣ ಇರಲಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇರಲಿದೆ.

    Weather

    ಇನ್ನೂ ಯಾದಗಿರಿ, ಬೆಳಗಾವಿ, ಬಳ್ಳಾರಿ, ಗದಗ ಹಾಗೂ ಬಾಗಲಕೋಟೆ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಎಂದಿನಂತೆ ಬಿಸಿಲಿನ ವಾತಾವರಣ ಮುಂದುವರಿಯಲಿದೆ. ಈ ಭಾಗಗಳಲ್ಲಿ ಗರಿಷ್ಠ ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಹವಾಮಾನ ವರದಿ:

    ಬೆಂಗಳೂರು: 33-21
    ಮಂಗಳೂರು: 32-26
    ಶಿವಮೊಗ್ಗ: 36-22
    ಬೆಳಗಾವಿ: 38-21
    ಮೈಸೂರು: 34-22

    Weather

    ಮಂಡ್ಯ: 35-22
    ಕೊಡಗು: 28-19
    ರಾಮನಗರ: 34-20
    ಹಾಸನ: 32-20
    ಚಾಮರಾಜನಗರ: 34-22
    ಚಿಕ್ಕಬಳ್ಳಾಪುರ: 33-21
    ಕೋಲಾರ: 34-21

    Weather

    ತುಮಕೂರು: 33-21
    ಉಡುಪಿ: 33-27
    ಕಾರವಾರ: 32-27
    ಚಿಕ್ಕಮಗಳೂರು: 31-20
    ದಾವಣಗೆರೆ: 37-23

    Weather

    ಚಿತ್ರದುರ್ಗ: 36-22
    ಹಾವೇರಿ: 38-23
    ಬಳ್ಳಾರಿ: 39-26
    ಗದಗ: 39-23
    ಕೊಪ್ಪಳ: 38-24
    ರಾಯಚೂರು: 40-26

    Weather

    ಯಾದಗಿರಿ: 41-27
    ವಿಜಯಪುರ: 40-24
    ಬೀದರ್: 39-23
    ಕಲಬುರಗಿ: 41-25
    ಬಾಗಲಕೋಟೆ: 41-24

  • ಶ್ರೀಗಳ 115ನೇ ಜನ್ಮದಿನ ಐತಿಹಾಸಿಕ ಕಾರ್ಯಕ್ರಮ ಅಂದ್ರೆ ತಪ್ಪಾಗಲಾರದು: ಬಿ.ವೈ.ವಿಜಯೇಂದ್ರ

    ಶ್ರೀಗಳ 115ನೇ ಜನ್ಮದಿನ ಐತಿಹಾಸಿಕ ಕಾರ್ಯಕ್ರಮ ಅಂದ್ರೆ ತಪ್ಪಾಗಲಾರದು: ಬಿ.ವೈ.ವಿಜಯೇಂದ್ರ

    ತುಮಕೂರು: ಶ್ರೀ ಶಿವಕುಮಾರ ಶ್ರೀಗಳ 115ನೇ ಜನ್ಮದಿನ ಐತಿಹಾಸಿಕ ಕಾರ್ಯಕ್ರಮ ಅಂದ್ರೆ ತಪ್ಪಾಗಲಾರದು ಎಂದು ಸಿದ್ದಗಂಗಾ ಮಠದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ಕೊಟ್ಟರು.

    ಶ್ರೀ ಶಿವಕುಮಾರ ಶ್ರೀಗಳ 115ನೇ ಜನ್ಮದಿನ ಉತ್ಸವದ ಹಿನ್ನೆಲೆ ಬಿ.ವೈ.ವಿಜಯೇಂದ್ರ ಅವರು ಸಕಲ ಸಿದ್ದತೆಗಳನ್ನು ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಅವರು, ಶ್ರೀಗಳ ಜನ್ಮದಿನದಂದು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಸುತ್ತೂರು ದೇಶಿಕೇಂದ್ರ ಸ್ವಾಮೀಜಿಗಳ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಶ್ರೀ ಮಠದ ಸಿದ್ದಗಂಗಾ ಶ್ರೀಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಗುರುವಂದನಾ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್‍ಯಡಿಯೂರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ರಾಷ್ಟ್ರಮಟ್ಟದ ಜಂಪ್ ರೋಪ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ 5 ಚಿನ್ನ, 7 ಬೆಳ್ಳಿ ಪದಕ – ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ

    ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಹ್ಲಾದ್ ಜೋಶಿ, ಭಗವಂತ ಖೂಬಾ ಸೇರಿದಂತೆ ಹಲವು ಕೇಂದ್ರ ನಾಯಕರು ಆಗಮಿಸಲಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮ ಅಂದ್ರೆ ತಪ್ಪಾಗಲಾರದು. ಸಿಎಂ ಬೊಮ್ಮಾಯಿ ಸೇರಿದಂತೆ ರಾಜ್ಯದ ಹಲವು ಸಚಿವರುಗಳು ಆಗಮಿಸಲಿದ್ದಾರೆ. ಮಾಧುಸ್ವಾಮಿ, ಬಿ.ಸಿ.ನಾಗೇಶ್, ಡಾ.ಜಿ.ಪರಮೇಶ್ವರ್ ಸೇರಿದಂತೆ ಎಲ್ಲ ಪಕ್ಷದ ನಾಯಕರು ಪಕ್ಷಾತೀತವಾಗಿ ಆಗಮಿಸಲಿದ್ದಾರೆ. ನೂರಾರು ಸಂಖ್ಯೆಯಲ್ಲಿ ಎಲ್ಲ ಮಠಾಧಿಶರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು ಎರಡು ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

    ಎಲ್ಲರಿಗೂ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಜನರಿಗೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಮಿತ್ ಶಾ ಮೊದಲಿಗೆ ತುಮಕೂರು ಯೂನಿವರ್ಸಿಟಿ ಕ್ಯಾಂಪಸ್‍ಗೆ ಬರ್ತಾರೆ. ಬೆಳಗ್ಗೆ 10.45 ಯುನಿವರ್ಸಿಟಿ ಹೆಲಿಪ್ಯಾಡ್‍ಗೆ ಬರಲಿದ್ದಾರೆ. ನಂತರ ಶ್ರೀ ಶಿವಕುಮಾರ್ ಶ್ರೀಗಳ ಗದ್ದುಗೆ ದರ್ಶನ ಮಾಡಲಿದ್ದಾರೆ. ಆದಾದ ಬಳಿಕ ನೇರವಾಗಿ 11 ಗಂಟೆಗೆ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಎರಡು ಗಂಟೆಗಳ ಕಾಲ ಕಾರ್ಯಕ್ರಮದಲ್ಲಿ ಅಮಿತ್ ಶಾ ಇರಲಿದ್ದಾರೆ ಎಂದರು. ಇದನ್ನೂ ಓದಿ: ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು

    ಮಠದಲ್ಲಿ ಪ್ರಸಾದ ಸೇವಿಸಿದ ನಂತರ ಅಮಿತ್ ಶಾ ಬೆಂಗಳೂರು ಕಡೆ ಪ್ರಯಾಣ ಬೆಳಸಲಿದ್ದಾರೆ. ಅಮಿತ್ ಶಾ ಅವರನ್ನು ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ನಗರದಲ್ಲಿ ಬರಮಾಡಿಕೊಳ್ತಾರೆ ಎಂದು ಕಾರ್ಯಕ್ರಮದ ಪೂರ್ಣ ವಿವರವನ್ನು ಕೊಟ್ಟರು.

  • ಸಿದ್ದಗಂಗಾ ಶ್ರೀಗಳ ಪಾತ್ರಕ್ಕೆ ಅಮಿತಾಭ್ ಬಚ್ಚನ್?: ಕಾಲ್ ಶೀಟ್ ಗಾಗಿ ಕಾದಿದ್ದಾರೆ ಹಂಸಲೇಖ

    ಸಿದ್ದಗಂಗಾ ಶ್ರೀಗಳ ಪಾತ್ರಕ್ಕೆ ಅಮಿತಾಭ್ ಬಚ್ಚನ್?: ಕಾಲ್ ಶೀಟ್ ಗಾಗಿ ಕಾದಿದ್ದಾರೆ ಹಂಸಲೇಖ

    ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಸಿದ್ದಗಂಗಾ ಶ್ರೀಗಳ ಕುರಿತಾಗಿ ಸಿನಿ ಸೀರಿಸ್ ಸಿದ್ಧವಾಗುತ್ತಿದೆ. 52 ಕಂತುಗಳು ಮೆಗಾ ಸೀರಿಸ್ ಇದಾಗಿದ್ದು, ಹಂಸಲೇಖ ಅವರ ಸಾರಥ್ಯದಲ್ಲಿ ಮೂಡಿ ಬರಲಿದೆ. ಸಿದ್ದಗಂಗಾ ಶ್ರೀಗಳ 115ನೇ ಜಯಂತೋತ್ಸವದ ಪ್ರಯುಕ್ತ ಈ ಸೀರಿಸ್ ಸಿದ್ಧವಾಗುತ್ತಿದ್ದು, ಶ್ರೀಗಳ ಪಾತ್ರಕ್ಕಾಗಿ ಅಮಿತಾಭ್ ಬಚ್ಚನ್ ಅವರನ್ನು ಕೇಳಲಾಗಿದೆಯಂತೆ. ಆದರೆ ಇನ್ನೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸಂಗೀತ ಬ್ರಹ್ಮ ಹಂಸಲೇಖ ತಿಳಿಸಿದ್ದಾರೆ.

    ಶ್ರೀಗಳ ಜೀವನ ಚರಿತ್ರೆಯನ್ನು ಸಾರುವ ಸೀರಿಸ್ ಇದಾಗಿದ್ದರಿಂದ ದೊಡ್ಡ ಮಟ್ಟದಲ್ಲೇ ನಿರ್ಮಾಣ ಮಾಡುವ ಯೋಜನೆ ತಂಡದ್ದು. ಹಾಗಾಗಿ ಅಮಿತಾಭ್ ಬಚ್ಚನ್ ಅವರನ್ನು ನಿರ್ಮಾಣ ತಂಡ ಈಗಾಗಲೇ ಸಂಪರ್ಕ ಮಾಡಿದೆ. ಅಮಿತಾಭ್ ಅವರ ಆರೋಗ್ಯದಲ್ಲಿ ಏರುಪೇರಾಗಿರುವ ಕಾರಣದಿಂದಾಗಿ ಅವರ ಗ್ರೀನ್ ಸಿಗ್ನಲ್ ಗೆ ತಂಡ ಕಾಯುತ್ತಿದೆ. ಇದನ್ನೂ ಓದಿ: ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

    ಅಮಿತಾಭ್ ಈ ಹಿಂದೆ ಅಮೃತಧಾರೆ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಅಮಿತಾಭ್ ಕಾರಣದಿಂದಾಗಿ ಬಾಲಿವುಡ್ ಮಂದಿಗೂ ತಲುಪಿತ್ತು. ಹಾಗಾಗಿ ಅಮಿತಾಭ್ ಅವರು ಶ್ರೀಗಳ ಪಾತ್ರ ಮಾಡಿದರೆ, ಇನ್ನಷ್ಟು ಜನಕ್ಕೆ ಶ್ರೀಗಳ ಜೀವನ ತಿಳಿಸಿದ ಹಾಗೆ ಆಗುತ್ತೆ ಎನ್ನುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದಿದೆ ತಂಡ. ಇದನ್ನೂ ಓದಿ: ಅಪ್ಪ-ಮಗನ್ನ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳ ಕಾತರ : ‘ಆಚಾರ್ಯ’ದಲ್ಲಿ ಒಂದಾದ ಮಗಧೀರ ಜೋಡಿ

    ಈ ಸಿನಿ ಸಿರೀಸ್ ಕನ್ನಡವೂ ಸೇರಿದಂತೆ ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವುದು ಮತ್ತೊಂದು ವಿಶೇಷ. ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಹಾಗೂ ಸಂಸ್ಕೃತ ಭಾಷೆಯಲ್ಲೂ ಈ ಸೀರಿಸ್ ಅನ್ನು ತಯಾರಿಸಲಾಗುತ್ತಿದೆ. ಮುನ್ನೂರಕ್ಕೂ ಅಧಿಕ ತಂತ್ರಜ್ಞರು ಇದಕ್ಕಾಗಿ ಕೆಲಸ ಮಾಡಿದರೆ, ಏಳೇಳು ತಂಡಗಳಲ್ಲಿ ಈ ಕೆಲಸ ನಡೆಯಲಿದೆ.

  • ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇರಲ್ಲ: ಮಾಜಿ ಶಾಸಕ ರಾಜಣ್ಣ

    ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇರಲ್ಲ: ಮಾಜಿ ಶಾಸಕ ರಾಜಣ್ಣ

    ತುಮಕೂರು: ಸಿದ್ದರಾಮಯ್ಯ ಅವರು ಇಲ್ಲ ಅಂದರೆ ಕಾಂಗ್ರೆಸ್ ಪಕ್ಷ ಇರಲ್ಲ. ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಅನಿವಾರ್ಯ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದರು.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಸಾಮೂಹಿಕ ನಾಯಕತ್ವ ಇದೆ. ಅದರಂತೆ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಕೂಡ ಪ್ರಮುಖ ನಾಯಕರು ಅಂತ ರಾಜಣ್ಣ ಅವರು, ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.

    ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಅನಿವಾರ್ಯತೆ ಹೆಚ್ಚಿದೆ. ರಾಜ್ಯದಲ್ಲಿ ಯಡಿಯೂರಪ್ಪ ಇಲ್ಲ ಎಂದರೆ ಬಿಜೆಪಿ ಇರಲ್ಲ. ಮಾಜಿ ಪ್ರಧಾನಿ ದೇವೇಗೌಡರವರು ಇಲ್ಲ ಎಂದರೆ ಜೆಡಿಎಸ್ ಇರಲ್ಲ. ಅದರಂತೆ ರಾಜ್ಯದಲ್ಲಿ ಸಿದ್ದರಾಮಯ್ಯ ಇಲ್ಲ ಎಂದರೆ ಕಾಂಗ್ರೆಸ್ ಇರಲ್ಲ ಎಂದು ತಿಳಿಸಿದ್ದಾರೆ.

    ಸಿದ್ದರಾಮಯ್ಯನವರು ಸ್ವಾಮೀಜಿಗಳಿಗೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರ ಹೇಳಿಕೆಗೆ ಸಂಬಂಧಿಸಿದಂತೆ ಈಗಾಗಲೇ ಅವರು ಸ್ಪಷ್ಟನೆ ಕೂಡ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಸ್ವಾಮೀಜಿಗಳನ್ನು ದೇವರಂತೆ ನೋಡುತ್ತಾರೆ. ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರಿಗೂ ಸಹ ಸ್ವಾಮೀಜಿಗಳ ಬಗ್ಗೆ ಅಪಾರ ಗೌರವವಿದೆ. ಸ್ವಾಮೀಜಿಗಳಿಗೆ ಅಗೌರವ ತರುವ ಕೆಲಸವನ್ನು ಯಾವ ನಾಯಕರೂ ಮಾಡುವುದಿಲ್ಲ. ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಂತಿಲ್ಲ ಎನ್ನುವುದು ಶುದ್ಧ ಸುಳ್ಳು ಎಂದಿದ್ದಾರೆ.

    ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಬಂಧಿಸಿದಂತೆ ಹಲವು ನಾಯಕರು ಅದನ್ನೇ ದೊಡ್ಡ ವಿಷಯವನ್ನಾಗಿ ಮಾಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್, ಗಾಂಧಿ ಹಿಂದೂವಾದಿಗಳ ಪಕ್ಷ. ಬಿಜೆಪಿ ಗೋಡ್ಸೆ ಹಿಂದೂವಾದಿಗಳ ಪಕ್ಷ ಎಂದು ಬಿಜೆಪಿ ನಾಯಕರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

  • ಮೃತ ಶಂಕರಣ್ಣನ ಪತ್ನಿ ಮೇಘನಾ ಗರ್ಭಿಣಿ

    ಮೃತ ಶಂಕರಣ್ಣನ ಪತ್ನಿ ಮೇಘನಾ ಗರ್ಭಿಣಿ

    ತುಮಕೂರು: ಬೆಳಿಗ್ಗೆಯಷ್ಟೇ ಆತ್ಮಹತ್ಯೆಗೆ ಶರಣಾಗಿರುವ ಶಂಕರಣ್ಣನ ಪತ್ನಿ ಮೇಘನಾ 4 ತಿಂಗಳ ಗರ್ಭಿಣಿಯಾಗಿದ್ದಾರೆ ಎನ್ನುವ ವಿಚಾರ ಖಚಿತ ಮೂಲಗಳಿಂದ ತಿಳಿದು ಬಂದಿದೆ.

    ಮೇಘನಾ ಈಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾರೆ. ಮನೆಯಲ್ಲಿ ಖುಷಿ ಪಡಬೇಕಾದ ಈ ಸಂದರ್ಭದಲ್ಲಿ ಶಂಕರಣ್ಣನ ಅಗಲಿಕೆಯಿಂದ ಶೋಕಾಚರಣೆ ಮಾಡುವ ದುರ್ವಿಧಿ ಬಂದೊದಗಿದೆ ಎನ್ನಲಾಗಿದೆ. ಇದನ್ನೂ ಓದಿ: ಪತಿ ಶಂಕರಣ್ಣ ಸಾವಿಗೆ ಅತ್ತೆಯೇ ಕಾರಣ: ಪತ್ನಿ ಮೇಘನಾ ಆರೋಪ

    Shankaranna

    ಘಟನೆ ಕುರಿತು ಮಾತನಾಡಿರುವ ಶಂಕರಣ್ಣ ಅವರ ತಾಯಿ ರಂಗಮ್ಮ, ಸೊಸೆ ದಿನಾಲೂ ಜಗಳ ಮಾಡುತ್ತಿದ್ದಳು, ಕಿರಿಕಿರಿ ಕೊಡುತ್ತಿದ್ದಳು, ಮಗನಿಗಿದ್ದ 3 ಎಕರೆ ಜಮೀನು ಮಾರಿ ಬೆಂಗಳೂರಿಗೆ ಹೋಗೋಣ ಅನ್ನುತ್ತಿದ್ದಳು ಎಂದು ಮೇಘನಾ ವಿರುದ್ಧ ಆರೋಪಿಸಿದ್ದಾರೆ. ಇದನ್ನೂ ಓದಿ: ಶಂಕರಣ್ಣನ ಬಳಿ ಹೋಗಿ ಮದುವೆ ಆಗ್ತೀರಾ ಎಂದು ಕೇಳಿದ್ದ ಮೇಘನಾ

    ಅತ್ತೆ-ಸೊಸೆ ನಡುವೆ ಜಗಳ ಇರಲಿಲ್ಲ. ಮೇಘನಾ ಒಂದೊಮ್ಮೆ ನಾನು ಮಾತನಾಡುವುದನ್ನು ರೆಕಾರ್ಡ್ ಮಾಡಿಕೊಳ್ಳಲು ತಮ್ಮನನ್ನು ಕರೆಸಿದ್ದರು. ನಾನು ಆಗ ಏನೂ ಮಾತನಾಡದೇ ಆಚೆಗೆ ಬಂದುಬಿಟ್ಟಿದ್ದೆ. ಆಗ ಅವರಿಬ್ಬರ ನಡುವೆ ಜಗಳ ನಡೆದಿತ್ತು. ಮಗನಿಗೆ ವಿಷಯ ತಿಳಿಸಿದಾಗ, ನನ್ನ ತಮ್ಮನೊಂದಿಗೆ ಜಗಳ ಕಾದಿದ್ದಕ್ಕೆ ಏನಾಯ್ತು? ಎಂದು ಗದರಿದ್ದಳು. ಅಂದಿನಿಂದ ನನ್ನೊಂದಿಗೆ ಮಾತನಾಡುವುದನ್ನೂ ಬಿಟ್ಟು, ನನ್ನನ್ನು ಹೊರಹಾಕಿ – ಹೊರಹಾಕಿ ಎಂದು ಪೀಡಿಸುತ್ತಿದ್ದಳು. ಆದರೆ, ಮಗ ಮಾತ್ರ ನಾನು ನಮ್ಮಮ್ಮನನ್ನು ಬಿಟ್ಟು ಬರುವುದಿಲ್ಲ. ಇಲ್ಲಿಂದ ಆಚೆ ಬಂದರೆ ಸತ್ತು ಹೋಗುತ್ತೇನೆ ಎಂದು ಹೇಳಿದ್ದ ಎಂದು ಅಳಲು ತೋಡಿಕೊಂಡಿದ್ದಾರೆ.

  • ಪಾವಗಡ ಬಸ್ ದುರಂತ – ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಸಾವು

    ಪಾವಗಡ ಬಸ್ ದುರಂತ – ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಸಾವು

    ತುಮಕೂರು: ಪಳವಳ್ಳಿ ಕಟ್ಟೆಯ ಬಳಿ ಖಾಸಗಿ ಬಸ್ ಉರುಳಿ ಗಂಭೀರ ಗಾಯಗೊಂಡು ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬುಡ್ಡಾರೆಡ್ಡಿ ಗ್ರಾಮದ ಮಹೇಂದ್ರ (21) ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾನೆ.

    ಬಸ್ ಅಪಘಾತದಲ್ಲಿ ಸ್ಥಳದಲ್ಲಿಯೇ 4 ಸಾವನ್ನಪ್ಪಿ, ಇಬ್ಬರು ಚಿಕಿತ್ಸೆಗೆ ತೆರಳುತ್ತಿದ್ದ ವೇಳೆ ಸಾವನ್ನಪ್ಪಿದರು. ಮಹೇಂದ್ರ ಸಾವಿನ ಮೂಲಕ ಮೃತರ ಸಾವಿನ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ.

    ಮಹೇಂದ್ರ ಬೆನ್ನುಮೂಳೆ ಮುರಿದು, ತಲೆಗೆ ಗಂಭೀರವಾಗಿ ಪೆಟ್ಟಾಗಿ ಅರೆಪ್ರಜ್ಞಾವಸ್ಥೆಯಲ್ಲಿದ್ದರು. ಚಿಕಿತ್ಸೆಗೆ ಹಣವಿಲ್ಲದೆ ಪೋಷಕರು ಪರದಾಡಿದ್ದರು. ಈ ವೇಳೆ ಶಾಸಕರು ಸೇರಿದಂತೆ ಸಂಘಸಂಸ್ಥೆಗಳ ಮುಖಂಡರು ಹಣವನ್ನ ಒದಗಿಸಿದ್ದರು. ಜೊತೆಗೆ ಯುವಕನ ಸಂಪೂರ್ಣ ಚಿಕಿತ್ಸೆಯ ವೆಚ್ಚ ಸರ್ಕಾರವೇ ಭರಿಸಬೇಕೆಂದು ಶಾಸಕ ವೆಂಕಟರಮಣಪ್ಪ ಸದನದ ಬಾವಿಗಿಳಿದು ಪ್ರತಿಭಟನೆ ಕೂಡ ನಡೆಸಿದ್ದರು. ವಿಧಿ ಆಟವೇ ಬೇರೆಯಾಗಿ ಮಹೇಂದ್ರ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಬಸ್ ಪಲ್ಟಿ:8 ಮಂದಿ ಸಾವು

    ಕುಟುಂಬವು ಇರುವ ಒಬ್ಬ ಮಗನ ಜೀವಕ್ಕಾಗಿ ಹಲವರ ಮುಂದೆ ಚಿಕಿತ್ಸೆಯ ಹಣಕ್ಕಾಗಿ ಕೈಚಾಚಿದ್ದರು. ತಾಲೂಕಿನಾದ್ಯಂತ ಹಾಗೂ ಸ್ವಗ್ರಾಮ ಬುಡ್ಡಾರೆಡ್ಡಿ ಹಳ್ಳಿ ಗ್ರಾಮದಲ್ಲಿ ಚಂದಾ ಸಂಗ್ರಹಿಸಿ ಚಿಕಿತ್ಸೆಗೆ ಹಣ ಕಳಿಸಲಾಗಿತ್ತು. ಇದನ್ನೂ ಓದಿ:  ಮೊದಲೇ ಟಾರ್ಗೆಟ್ ರೀಚ್, ರಫ್ತಿನಲ್ಲಿ ಸಾಧನೆ – ಇದು ಆತ್ಮನಿರ್ಭರ್ ಭಾರತದ ಮೈಲುಗಲ್ಲು ಎಂದ ಮೋದಿ