Tag: tumkur

  • ನಮ್ಮ ಜನರಿಗೆ ಸಿದ್ದರಾಮಯ್ಯ ಅವಶ್ಯಕತೆ ಇದೆ, ಅವರೇ ಸಿಎಂ ಆಗಬೇಕು: ಬೈರತಿ ಸುರೇಶ್

    ನಮ್ಮ ಜನರಿಗೆ ಸಿದ್ದರಾಮಯ್ಯ ಅವಶ್ಯಕತೆ ಇದೆ, ಅವರೇ ಸಿಎಂ ಆಗಬೇಕು: ಬೈರತಿ ಸುರೇಶ್

    ತುಮಕೂರು: ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂಬ ಕೂಗು ಎದ್ದಿದೆ. ಜಮೀರ್ ಬಳಿಕ ಈಗ ಸಿದ್ದು ಆಪ್ತ ಬೈರತಿ ಸುರೇಶ್ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದು ಹೇಳಿದ್ದಾರೆ.

    ನಮ್ಮ ಜನರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅವಶ್ಯಕತೆ ಇದೆ. ಮುಂದಿನ ಚುನಾವಣೆಯಲ್ಲಿ ಅವರೇ ಸಿಎಂ ಆಗಬೇಕು ಎಂದು ಬೆಂಗಳೂರಿನ ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಶಾಸಕ ಬೈರತಿ ಸುರೇಶ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆ ಪ್ರವೇಶಿಸುವಂತಿಲ್ಲ – ವೈರಲ್ ಆಯ್ತು ಬ್ಯಾನರ್

    ಜಮೀರ್ ಅಹಮದ್ ಖಾನ್ ಅವರು ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಕೇಳಿದ ಬೆನ್ನಲ್ಲೆ ತುಮಕೂರು ಕುರುಬ ಸಮಾವೇಶದಲ್ಲಿ ಬೈರತಿ ಸುರೇಶ್ ಸಹ ಅದೇ ರೀತಿ ಪತಿಕ್ರಿಯೆ ಕೊಟ್ಟಿದ್ದಾರೆ. ವೇದಿಕೆಯನ್ನು ಉದ್ದೇಶಿ ಮಾತನಾಡಿದ ಅವರು, ಕುರುಬ ಸಮಾವೇಶದಲ್ಲಿ ಭಾಗವಹಿಸಲು ಬಂದ ಎಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು ಎಂದು ಮಾತು ಪ್ರಾರಂಭಿಸಿದರು.

    ವೇದಿಕೆ ಮೇಲೆ ಕುಳಿತಿರುವ ಕೇಂದ್ರ ಬಿಂದು, ರಾಜ್ಯದ ಧೀಮಂತ ನಾಯಕ, ದೇಶ ಕಟ್ಟಿದ ಅಪ್ರತಿಮ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಜೊತೆಗೆ ಇದ್ದಾರೆ. ಇಂದು ಕುರುಬ ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿರುವುದು ಬಹಳ ಸಂತೋಷವಾಗುತ್ತಿದೆ. ಈ ಮೂಲಕ ಸಿದ್ದರಾಮಯ್ಯ ಅವರಿಗೆ ಕೈ ಹಿಡಿದು ಬಲ ಕೊಂಡುತ್ತಿದ್ದಿರಾ ಎಂಬುದಕ್ಕೆ ದೊಡ್ಡ ಉದಾಹರಣೆಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

    ಇದೇ ರೀತಿ ಇಡೀ ರಾಜ್ಯದಲ್ಲಿ ಮುಂದುವರೆಯಬೇಕು ಎಂಬುದು ನಮ್ಮ ಆಸೆ. 2023ರಲ್ಲಿ ಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಬೇಕು ಎಂಬುದು ಅವರ ಮನಸ್ಸಿನಲ್ಲಿ ಇಲ್ಲ. ಆದರೆ ನಿಮ್ಮ ಮನಸ್ಸಿನಲ್ಲಿದೆ. ಈ ನಾಡಿದ ಜನತೆಯ ಮನಸ್ಸಿನಲ್ಲಿದೆ ಎಂದು ಒತ್ತಿ ಹೇಳಿದರು.

    SIDDARAMAIAH

    ಮತ್ತೆ ಸಿದ್ದರಾಮಯ್ಯ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದರೆ ನೀವೆಲ್ಲ ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ಬೆಂಬಲಕೊಡಬೇಕು. ಎಲ್ಲರೂ ನಮ್ಮವರೆ ಆದ್ರೆ ಯಾರು ಸಿದ್ದರಾಮಯ್ಯ ಅವರ ಜೊತೆಗೆ ಇರುತ್ತಾರೆ, ರಾಜ್ಯ ಬೆಳೆಯಬೇಕು ಎಂದು ಇಷ್ಟಪಡುತ್ತೀರಾ ಅವರು ಸಿದ್ದರಾಮಯ್ಯ ಅವರು ಸಿಎಂ ಆಗಲು ಬೆಂಬಲ ಕೊಡಿ ಎಂದು ಕೇಳಿಕೊಂಡರು. ಇದನ್ನೂ ಓದಿ: ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಚುನಾವಣೆ ಸಮಿತಿ ಇದೆಯೇ? – ಡಿಕೆಶಿಗೆ ಪತ್ರ ಬರೆದ ಸ್ಥಾನ ವಂಚಿತರು 

    ಕ್ಷೀರ ಭಾಗ್ಯ, ಅಕ್ಕಿ ಭಾಗ್ಯ, ವಿದ್ಯಾರ್ಥಿ ವೇತನ, ರೈತರ ಸಾಲ ಮನ್ನಾ ಇದೇ ರೀತಿ ರಾಜ್ಯದ ಹಲವು ಸಮಸ್ಯೆಗಳಿಗೆ ಪರಿಹಾರ ಕೊಟ್ಟ ಏಕೈಕ ಮುಖ್ಯಮಂತ್ರಿ ನಮ್ಮ ಸಿದ್ದರಾಮಯ್ಯ ಎಂದು ಹೊಗಳಿದರು.

  • ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಕಿಂಗ್‍ಪಿನ್ ಅರೆಸ್ಟ್

    ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಕಿಂಗ್‍ಪಿನ್ ಅರೆಸ್ಟ್

    ಕೋಲಾರ: ಐಪಿಎಲ್ ಬೆಟ್ಟಿಂಗ್ ಕೋಲಾರದಲ್ಲಿ ಆಡಿಸುತ್ತಾ ತುಮಕೂರು ಬಳಿ ತಲೆ ಮರೆಸಿಕೊಂಡಿದ್ದ ಇಬ್ಬರು ಕ್ರಿಕೆಟ್ ಬೆಟ್ಟಿಂಗ್ ಕಿಂಗ್‍ಪಿನ್‍ಗಳನ್ನು ಕೋಲಾರ ನಗರ ಪೊಲೀಸರು ಬಂಧಿಸಿದ್ದಾರೆ.

    POLICE JEEP

    ಮುರುಗೇಶ್ ನಾಯಕ್, ರಾಹುಲ್ ಇಬ್ಬರನ್ನು ತುಮಕೂರಿನ ಕುಣಿಗಲ್ ಬಳಿ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಆರೋಪಿಗಳನ್ನು ಕೋಲಾರ ನಗರ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಾರ್ ಒಂದರಲ್ಲಿ ಸಪ್ಲೇಯರ್ ಆಗಿರುವ ಕಿಂಗ್‍ಪಿನ್ ಮುರುಗೇಶ್ ಕೋಲಾರ ನಗರ ವ್ಯಾಪ್ತಿಯಲ್ಲಿ ಲಕ್ಷಾಂತರ ರೂ. ಐಪಿಎಲ್ ಬೆಟ್ಟಿಂಗ್ ಆಡಿಸುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ:  ಬಿಜೆಪಿ ಬಳಿ ಯಾವುದೇ ಅಸ್ತ್ರ ಇಲ್ಲದೆ ಮತ್ತೆ ಹಿಜಬ್ ಸಂಘರ್ಷ ಹುಟ್ಟು ಹಾಕಿದೆ: ಧ್ರುವನಾರಾಯಣ್ 

    ಮುರುಗೇಶ್ ಜೊತೆ ಮತ್ತೊಬ್ಬ ಕಿಂಗ್‍ಪಿನ್ ರಾಹುಲ್‍ನನ್ನು ಕೂಡ ಬಂಧಿಸಲಾಗಿದ್ದು, ಎಸ್‍ಪಿಡಿ ದೇವರಾಜ್ ಅವರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ ನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಅಭಿಮಾನಿ ಮಗುವಿಗೆ ತಮ್ಮದೇ ಹೆಸರನ್ನಿಟ್ಟ ಸಿದ್ದರಾಮಯ್ಯ

    ಅಭಿಮಾನಿ ಮಗುವಿಗೆ ತಮ್ಮದೇ ಹೆಸರನ್ನಿಟ್ಟ ಸಿದ್ದರಾಮಯ್ಯ

    ತುಮಕೂರು: ತಮ್ಮ ಅಭಿಮಾನಿಯ ಒತ್ತಾಸೆ ಮೇರೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ತಮ್ಮ ಹೆಸರನ್ನೇ ಮಗುವಿಗೆ ನಾಮಕರಣ ಮಾಡಿರುವ ಅಪರೂಪದ ಪ್ರಸಂಗ ನಡೆದಿದೆ.

    ಭಾನುವಾರ ತುಮಕೂರಿನ ಬಾಲಭವನದಲ್ಲಿ ನಡೆದ ಗ್ರಂಥಾವಲೋಕನ ಸಂಕೀರ್ಣ ಸಂವಾದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ತಮ್ಮ ಅಭಿಮಾನಿಯ ಮಗುವಿಗೆ ನಾಮಕರಣ ಮಾಡಿದ್ದಾರೆ.

    ಮಧುಗಿರಿ ತಾಲೂಕಿನ ಐಡಿ ಹಳ್ಳಿ ಹೋಬಳಿಯ ತಿಪ್ಪಾಪುರ ಗ್ರಾಮದ ಅಭಿಮಾನಿ ಗಂಗಾಧರಯ್ಯ ತಮ್ಮ ಮಗುವಿಗೆ ಸಿದ್ದರಾಮಯ್ಯ ಅವರಿಂದ ನಾಮಕರಣ ಮಾಡಿಸಬೇಕೆಂದು ಬಹು ದಿನಗಳಿಂದ ಆಸೆ ಪಟ್ಟಿದ್ದರು. ಭಾನುವಾರ ಸಿದ್ದರಾಮಯ್ಯ ತುಮಕೂರಿಗೆ ಆಗಮಿಸುತ್ತಾರೆ ಎಂದು ತಿಳಿದ ಗಂಗಾಧರಯ್ಯ ಕುಟುಂಬ ಸಮೇತರಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಕೊರೊನಾ BA.4 ಮತ್ತು BA.5 ತಳಿ ದೃಢ

    ಅಭಿಮಾನಿ ಗಂಗಾಧರಯ್ಯ ಸಂವಾದದ ಮಧ್ಯೆಯೇ ತಮ್ಮ ಮಗುವಿಗೆ ಹೆಸರು ಇಡುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ ನಾಮಕರಣ ಮಾಡಿದರು.

    ತಮ್ಮ ಅಭಿಮಾನಿಯ ಒತ್ತಾಸೆಯ ಮೇರೆಗೆ ಸಿದ್ದರಾಮಯ್ಯ ಮಗುವಿಗೆ ತಮ್ಮ ಹೆಸರನ್ನೇ ಇಟ್ಟರು. ಮಾಜಿ ಶಾಸಕ ಕೆ.ಎನ್. ರಾಜಣ್ಣ, ವೈಎಸ್‌ವಿ ದತ್ತ ಹಾಗೂ ಹಲವು ಗಣ್ಯರ ಸಮ್ಮುಖದಲ್ಲಿ ಸಿದ್ದರಾಮಯ್ಯ ನಾಮಕರಣ ಮಾಡಿದ್ದು, ಬಳಿಕ ಮಗುವಿಗೆ ಉಡುಗೊರೆ ನೀಡಿದರು. ಇದನ್ನೂ ಓದಿ: ಮನೆಯಲ್ಲಿ ನಾಯಿ ಸಾಕುವವರಿಗೆ ಎಚ್ಚರಿಕೆ ನೀಡಿದ ಯೋಗಿ – ನಿಯಮ ಮೀರಿದರೆ ಕ್ರಮ

     

  • ಕೆನಡಾ ಸಂಸತ್ತಿನಲ್ಲಿ ಕನ್ನಡದ ಕಂಪು ಬೀರಿದ ಚಂದ್ರ ಆರ್ಯ ಮನೆಯಲ್ಲಿ ಸಂತಸ

    ಕೆನಡಾ ಸಂಸತ್ತಿನಲ್ಲಿ ಕನ್ನಡದ ಕಂಪು ಬೀರಿದ ಚಂದ್ರ ಆರ್ಯ ಮನೆಯಲ್ಲಿ ಸಂತಸ

    ಬೆಂಗಳೂರು: ನಮ್ಮ ನಾಡಿನಲ್ಲಿ ಹುಟ್ಟಿ ಬೆಳೆದು ದೂರದ ಕೆನಡಾದಲ್ಲಿ ಮೂರನೇ ಬಾರಿಗೆ ಸಂಸದರಾಗಿರುವ ಚಂದ್ರ ಆರ್ಯ ಅವರು, ಇಂದು ಮಾತೃಭಾಷೆ ಕನ್ನಡದಲ್ಲಿ ಕೆನಡಾ ಸಂಸತ್ತಿನಲ್ಲಿ ಮಾತನಾಡಿದ್ದಾರೆ. ಈ ಮೂಲಕ ಇಡೀ ಕನ್ನಡಿಗರಲ್ಲಿ ಹೆಮ್ಮೆಯ ಪುತ್ರ ಚಂದ್ರ ಆರ್ಯ ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿದೆ.

    ತುಮಕೂರು ಜಿಲ್ಲೆಯ ಶಿರಾ ಮೂಲದವರಾಗಿದ್ದು, ಪ್ರಸ್ತುತ ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯ ಆತ್ಮೀಯ ಗೆಳೆಯರ ಬಳಗದ ಬಡಾವಣೆಯಲ್ಲಿ ಚಂದ್ರ ಆರ್ಯ ಅವರ ತಂದೆ ಹಾಗೂ ಅಕ್ಕ ವಾಸವಾಗಿದ್ದಾರೆ. ಈ ಹಿನ್ನೆಲೆ ತಂದೆ ಗೋವಿಂದಯ್ಯ ಹಾಗೂ ಅಕ್ಕ ಲೀಲಾ ʼಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೊಲೀಸರ ಮುಂದೆ ಶರಣಾಗಲು ಹೆಚ್ಚಿನ ಸಮಯ ಕೇಳಿದ ಸಿಧು 

    ಮಧ್ಯಮ ವರ್ಗದಲ್ಲಿ ಹುಟ್ಟಿ ತುಮಕೂರು ಜಿಲ್ಲೆಯ ಶಿರಾ ಮೂಲದ ಚಂದ್ರ ಆರ್ಯ ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ್ದಾರೆ. ಇವರು ಸುಮಾರು 1 ನಿಮಿಷಗಳ ಕಾಲ ಕನ್ನಡದ ಕುರಿತು ಭಾಷಣ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಚಂದ್ರ ಆರ್ಯ ಬಿ.ಇ ಮತ್ತು ಎಂ.ಬಿ.ಎ ಪದವೀಧರರಾಗಿದ್ದಾರೆ. ಪ್ರಸ್ತುತ ಕೆನಡಾದ ನೇಪಿಯನ್ ಕ್ಷೇತ್ರದಿಂದ ಲಿಬರ್ಟಿ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿರುವ ಚಂದ್ರ ಆರ್ಯ, 2018ರಲ್ಲಿ ಕೆನಡಾ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದರು.

    ಚಂದ್ರ ಆರ್ಯ ಅವರು 2003ರಲ್ಲಿ ಕೆನಡಾದ ಖಾಸಗಿ ಕಂಪನಿಯಲ್ಲಿ ಹಣಕಾಸು ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಬಳಿಕ ರಾಜಕೀಯಕ್ಕೆ ಧುಮುಕಿದ ಚಂದ್ರ ಆರ್ಯ ಅವರು ಮೂರನೇ ಬಾರಿಯು ಬಹುಮತದಿಂದ ಗೆದ್ದು ಆಯ್ಕೆಯಾಗಿದ್ದಾರೆ. ಈ ವೇಳೆ ತಂದೆ ಹಾಗೂ ಅಕ್ಕ ಚಂದ್ರ ಆರ್ಯ ಸಾಧನೆ ಹಾಗೂ ಕನ್ನಡ ಭಾಷೆಯ ಪ್ರೇಮವನ್ನು ಹಾಡಿ ಹೊಗಳಿ ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಾವನ ಮೇಲೆ ಸೇಡು ತೀರಿಸಿಕೊಳ್ಳಲು ಹುಸಿ ಬಾಂಬ್ ಕರೆ ಮಾಡಿದ ಭೂಪ 

    ಇಂದು ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಭಾಷಣ ಮಾಡಿ, ಕನ್ನಡಿಗನಾಗಿ ನನಗೆ ಹೆಮ್ಮೆ ಇದೆ ಎಂದು ಹೇಳಿದರು. ಕುವೆಂಪು ಅವರ ‘ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ಪದ್ಯವನ್ನು ಓದುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.

  • ನಾಯಿಯ ಹಾಲು ಕುಡಿದ ಕರು

    ನಾಯಿಯ ಹಾಲು ಕುಡಿದ ಕರು

    ತುಮಕೂರು: ನಾಯಿಯ ಮೊಲೆ ಹಾಲು ಇದ್ದರೇನು ಎಂದು ಹೀಗಳೆಯುವವರ ಮಾತಿಗೆ ಉತ್ತರ ಎನ್ನುವಂತೆ ನಾಯಿಯೇ ಕರುವಿಗೆ ಹಾಲು ಕುಡಿಸುವ ಅಪರೂಪದ ಸನ್ನಿವೇಶ ನೋಡಿದ್ದೀರಾ?

    ಹೌದು.. ಕರುವೊಂದು ನಾಯಿಯ ಕೆಚ್ಚಲಿಗೆ ಬಾಯಿಟ್ಟು ಹಾಲು ಕುಡಿದಿರುವ ಅಚ್ಚರಿಯ ಘಟನೆಯೊಂದು ತುಮಕೂರಿನಲ್ಲಿ ಕಂಡುಬಂದಿದೆ. ಇಲ್ಲಿನ ಕುಂದೂರಿನಲ್ಲಿ ಅಪರೂಪದ ಸನ್ನಿವೇಶ ಕಂಡುಬಂದಿದ್ದು ಗ್ರಾಮಸ್ಥರಲ್ಲೂ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಬಂಧಿತ ಐಎಎಸ್ ಅಧಿಕಾರಿ ಜೊತೆಗಿದ್ದ ಅಮಿತ್ ಶಾ ಫೋಟೊ ಶೇರ್ – ನಿರ್ದೇಶಕನ ವಿರುದ್ಧ ಪ್ರಕರಣ ದಾಖಲು

    DOG

    ಈ ನಾಯಿ ಹಾಗೂ ಕರು ಕುಂದೂರಿನ ಬಸವರಾಜ-ಗೀತಾ ದಂಪತಿಯ ಸಾಕು ಪ್ರಾಣಿಗಳು. ನಾಯಿಯ ಕೆಚ್ಚಲಿಗೆ ಕರು ಬಾಯಿಟ್ಟು ಹಾಲು ಕುಡಿಯುತ್ತಿದ್ದಂತೆ, ನಾಯಿ ಕರುವಿನ ಮೈ ಸವರಿ ತಾಯಿ ವಾತ್ಸಲ್ಯ ತೋರಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಿಂದ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.

  • ಅಪಘಾತದಲ್ಲಿ ಪ್ರಿಯಕರ ಸಾವು- ಆಘಾತಗೊಂಡ ಪ್ರಿಯತಮೆ ಆತ್ಮಹತ್ಯೆ

    ಅಪಘಾತದಲ್ಲಿ ಪ್ರಿಯಕರ ಸಾವು- ಆಘಾತಗೊಂಡ ಪ್ರಿಯತಮೆ ಆತ್ಮಹತ್ಯೆ

    ತುಮಕೂರು: ಪ್ರಿಯಕರನ ಸಾವಿನಿಂದ ಮನನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತುಮಕೂರಿನಲ್ಲಿ ನಡೆದಿದೆ.

    ಧನುಷ್(23), ಸುಷ್ಮಾ(22) ಮದುವೆಯಾಗ ಬೇಕಾಗಿದ್ದ ಮೃತ ದುರ್ದೈವಿಗಳು. ಧನುಷ್ ಮತ್ತು ಸುಷ್ಮಾ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದು, ಇಬ್ಬರು ಸೇರಿ ಮದುವೆಗೆ ಮನೆಯವರನ್ನು ಒಪ್ಪಿಸಿದ್ದರು. ಆದರೆ ಮೇ 11 ರಂದು ಧನುಷ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಮೇ 14 ರಂದು ರಾತ್ರಿ ಸುಷ್ಮಾ ವಿಷ ಸೇವಿಸಿ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ:  ಕಾಳೇನ ಅಗ್ರಹಾರ ಕೆರೆಗೆ ಭೇಟಿ ನೀಡಿ ಸಸಿನೆಟ್ಟ ನಿರ್ಮಲಾ ಸೀತಾರಾಮನ್ 

    ನಡೆದಿದ್ದೇನು?
    ತುಮಕೂರುನ ಮಸ್ಕಲ್ ಗ್ರಾಮದ ಧನುಷ್, ಮೇ 11 ರಂದು ನೆಲಮಂಗಲ ಕುಲಾನಹಳ್ಳಿ ಬಳಿ ಊರಿನ ಜಾತ್ರೆಗೆ ಬರುವ ವೇಳೆ ಅಪಘಾತ ನಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅರೆಹಳ್ಳಿ ಗ್ರಾಮದ ಸುಷ್ಮಾ ಈ ಸುದ್ದಿ ಕೇಳಿ ಆಘಾತಗೊಂಡಿದ್ದು, ಪ್ರಿಯಕರನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಳು. ಅಂದಿನಿಂದ ಸುಷ್ಮಾ, ಧನುಷ್ ಸಾವಿನ ಯೋಚನೆಯಲ್ಲಿಯೇ ದುಃಖಿಸುತ್ತಿದ್ದಳು. ಈ ಹಿನ್ನೆಲೆ ಸುಷ್ಮಾ ಶನಿವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ.

    ತಕ್ಷಣ ಕುಟುಂಬಸ್ಥರು ಸುಷ್ಮಾಳನ್ನು ನಾಲ್ಕೈದು ಆಸ್ಪತ್ರೆಗೆ ಕರೆದುಕೊಂಡು ಸುತ್ತಿದ್ರೂ ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ 8 ಗಂಟೆ ಸುಮಾರಿನಲ್ಲಿ ಮೃತಪಟ್ಟಿದ್ದಾಳೆ. ಸುಷ್ಮಾ ಎಂ.ಕಾಂ ವಿದ್ಯಾಭ್ಯಾಸ ಮಾಡುತ್ತಿದ್ದು, ಬೆಂಗಳೂರಿನಲ್ಲಿ ಧನುಷ್ ಸ್ವಂತ ಬಟ್ಟೆ ಅಂಗಡಿ ಇಟ್ಟಿದ್ದರು. ಇವರಿಬ್ಬರ ಪ್ರೀತಿಯ ವಿಚಾರ ಮನೆಯಲ್ಲಿ ತಿಳಿದ ನಂತರ ಮನೆಯವರು ಮದುವೆ ನಿಶ್ಚಯ ಮಾಡಿದ್ದರು. ಆದರೆ ಈಗ ಇವರಿಬ್ಬರು ಸಾವಿನಲ್ಲಿ ಒಂದಾಗಿದ್ದಾರೆ.  ಇದನ್ನೂ ಓದಿ:  ಆ್ಯಸಿಡ್ ಹಾಕಿ ನಾಪತ್ತೆಯಾಗಿದ್ದ ನಾಗೇಶ್ ವಿದ್ಯಾರ್ಥಿಯಿಂದ ಅರೆಸ್ಟ್!

    ಪ್ರಸ್ತುತ ಪ್ರಕರಣ ಹೆಬ್ಬೂರು ಠಾಣೆಯಲ್ಲಿ ದಾಖಲಾಗಿದೆ.

  • ಯಾವಾಗ ಸಿಎಂ ಸ್ಥಾನಕ್ಕೆ ಕೂರ್ತೀವಿ ಎಂದು ಕನಸು ಕಾಣ್ತಿದ್ದಾರೆ: ಡಿಕೆಶಿಗೆ ಟಾಂಗ್ ಕೊಟ್ಟ ಬಿ.ವೈ.ವಿಜಯೇಂದ್ರ

    ಯಾವಾಗ ಸಿಎಂ ಸ್ಥಾನಕ್ಕೆ ಕೂರ್ತೀವಿ ಎಂದು ಕನಸು ಕಾಣ್ತಿದ್ದಾರೆ: ಡಿಕೆಶಿಗೆ ಟಾಂಗ್ ಕೊಟ್ಟ ಬಿ.ವೈ.ವಿಜಯೇಂದ್ರ

    ತುಮಕೂರು: ಯಾವಾಗ ಮುಖ್ಯಮಂತ್ರಿ ಸ್ಥಾನಕ್ಕೆ ಕೂರ್ತೀವಿ ಅಂತ ಕನಸು ಕಾಣ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಟೀಕಿಸಿದರು.

    ಸಚಿವ ಸಂಪುಟಕ್ಕೆ ವಿಜಯೇಂದ್ರ ಸೇರ್ಪಡೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ನಾಯಕರ ಅಪೇಕ್ಷೆ ಏನಿದೆ, ಸಮಯ ಸಂದರ್ಭ ನೋಡ್ಕೊಂಡು ನಿರ್ಧಾರ ಮಾಡ್ತಾರೆ. ಪಕ್ಷ ಯಾವುದೇ ಜವಾಬ್ದಾರಿ ನೀಡಿದ್ರು ನಿಭಾಯಿಸ್ತೀನಿ, ನಿಭಾಯಿಸ್ತಾನೂ ಇದೀನಿ, ಮುಂದೇನು ನಿಭಾಯಿಸ್ತೀನಿ ಎಂದು ಉತ್ತರಿಸಿದರು. ಇದನ್ನೂ ಓದಿ: ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗೆ ಸಕಾಲಕ್ಕೆ ಸಿಗದ ಚಿಕಿತ್ಸೆ 

    ಕಾಂಗ್ರೆಸ್ ಮಹಾನ್ ನಾಯಕರು ಅಂದು ಕೊಂಡವರು, ಯಾವಾಗ ಮುಖ್ಯಮಂತ್ರಿ ಸ್ಥಾನಕ್ಕೆ ಕೂರ್ತೀವಿ ಅಂತ ಕನಸು ಕಾಣ್ತಿದ್ದಾರೆ. ಈ ಮಹಾನ್ ನಾಯಕರು ಕೇವಲ ಬಿಜೆಪಿ ಪಕ್ಷದವರ ವಿರುದ್ಧ ಮಾತ್ರವಲ್ಲ, ತಮ್ಮ ಪಕ್ಷದ ಶಾಸಕರು, ಮುಖಂಡರ ವಿರುದ್ಧವೂ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಒಳಜಗಳ ಮತ್ತು ಪಕ್ಷದ ನಡುವೆ ಆವಿಶ್ವಾಸ ಹುಟ್ಟಿಸುತ್ತಿದ್ದಾರೆ. ಇದು ಬರುವ ದಿನಗಳಲ್ಲಿ ಬಿಜೆಪಿಗೆ ವರವಾಗುತ್ತೆ ಎಂದು ಟಾಂಗ್ ಕೊಟ್ಟರು.

    dkshivakumar

    ಈ ಕಾಂಗ್ರೆಸ್ ಮಹಾನಾಯಕರು ಯಾವುದೇ ರೀತಿಯ ರಿವೇಂಜ್ ತೀರಿಸ್ಕೊಂಡ್ರು ಕೂಡ, ರಾಜ್ಯದ ಪ್ರಜ್ಞಾವಂತ ಜನರು ಇದೆಲ್ಲದನ್ನ ವೀಕ್ಷಣೆ ಮಾಡ್ತಾ ಇರ್ತಾರೆ. ಬಿಜೆಪಿಗೆ ಇದು ವರವಾಗುತ್ತೆ ಎಂದರು.

    ತುಮಕೂರು ಜಿಲ್ಲೆಯಲ್ಲಿ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತೆ. ಶಿರಾ ಮತ್ತು ಕೆ.ಆರ್.ಪೇಟೆ ಚುನಾವಣೆಯಲ್ಲಿ ಕೆಲಸ ಮಾಡಿದ್ದೆ. ಕಾರ್ಯಕರ್ತರ ಜೊತೆ ಕೆಲಸ ಮಾಡಿದ್ದಕ್ಕೆ ಸಂತೋಷ ಇದೆ. ಸ್ವಾಮೀಜಿ ಹುಟ್ಟುಹಬ್ಬದ ನೆಪದಲ್ಲಿ ರಾಜಕೀಯ ಮಾಡುವ ಪ್ರಮೇಯ ಉದ್ಭವ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ:  ಪಾಕ್‍ನಲ್ಲಿ ಹಿಂದೂ ದೇವಾಲಯ ಧ್ವಂಸ ಮಾಡಿದ 22 ಮಂದಿಗೆ 5 ವರ್ಷ ಜೈಲು ಶಿಕ್ಷೆ

    EXAM

    ಪಿಎಸ್‍ಐ ನೇಮಕಾತಿಯಲ್ಲಿ ಅಕ್ರಮದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದ ಮುಖಂಡರು ಮೂರ್ಖರಿದ್ದಾರೆ. 50 ರಿಂದ 60 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವ ಮಾನಸಿಕತೆಯಲ್ಲಿ ಇಲ್ಲ. ಹೀಗಾಗಿ ಬಿಜೆಪಿ ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡ್ತಾರೆ. ಚುನಾವಣೆ ಯಾವಾಗ ಬರುತ್ತೆ, ಮತ್ತೆ ಯಾವಾಗ ಅಧಿಕಾರಕ್ಕೆ ಬರ್ತೀವೋ ಅಂತ ಆತುರದಲ್ಲಿ ಹಗಲುಗನಸು ಕಾಣ್ತಿದ್ದಾರೆ. ಅವರ ಕನಸು ನನಸಾಗಲ್ಲ, ಬಿಜೆಪಿ ಮತ್ತೆ ಹೆಚ್ಚು ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಕುಣಿಗಲ್‍ನಲ್ಲಿ ಭೀಕರ ಅಪಘಾತ- ಬೆಂಗಳೂರಿಗೆ ಹೋಗುತ್ತಿದ್ದ ಇಬ್ಬರು ಸಾವು

    ಕುಣಿಗಲ್‍ನಲ್ಲಿ ಭೀಕರ ಅಪಘಾತ- ಬೆಂಗಳೂರಿಗೆ ಹೋಗುತ್ತಿದ್ದ ಇಬ್ಬರು ಸಾವು

    ತುಮಕೂರು: ಬೆಳ್ಳಂಬೆಳಗ್ಗೆ ಕಾರು ಹಾಗೂ ಟಿಟಿ ವಾಹನದ ನಡುವೆ ಅಪಘಾತವಾಗಿದ್ದು, ಇಬ್ಬರು ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ.

    ಕುಣಿಗಲ್ ತಾಲೂಕಿನ ಬೆಗೂರು ಬೈಪಾಸ್ ಬಳಿ ಕಾರು- ಟಿಟಿ ವಾಹನ ಡಿಕ್ಕಿ ಆಗಿದ್ದು ಸ್ಥಳದಲ್ಲೇ ಕಾರಿನಲ್ಲಿದ್ದ ರಘು(27) ಸಂತೋಷ (21) ಮೃತಪಟ್ಟಿದ್ದಾರೆ. ಮೃತರು ಬೆಂಗಳೂರಿನ ಸಂಜಯ್ ನಗರದ ವಾಸಿಗಳಾಗಿದ್ದಾರೆ. ಇನ್ನೂಳಿದಂತೆ ವಿಜಯ್ (30) ಸ್ಥಿತಿ ಗಂಭೀರವಾಗಿದ್ದು, ಟಿಟಿ ವಾಹನದಲ್ಲಿದ್ದ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಕಾರಿನ ಗಾಜು ಪುಡಿ ಮಾಡಿದ ಕಿಡಿಗೇಡಿಗಳು- ಸಿಸಿ ಕ್ಯಾಮರಾದಲ್ಲಿ ದುಷ್ಕೃತ್ಯ ಸೆರೆ

    ಧರ್ಮಸ್ಥಳಕ್ಕೆ ಹೋಗುತಿದ್ದ ಟಿ.ಟಿ. ವಾಹನ ಹೋಗುತ್ತಿತ್ತು. ಈ ಸಂದರ್ಭದಲ್ಲಿ ಚಿಕ್ಕಮಗಳೂರಿನಿಂದ- ಬೆಂಗಳೂರಿಗೆ ವಾಪಸ್ ಹೋಗುತ್ತಿದ್ದ ಕಾರೊಂದು ಡಿವೈಡರ್ ದಾಟಿ ಟಿ.ಟಿ. ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿ ಕುಣಿಗಲ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಂಶಾಡಳಿತ ರಾಜಕಾರಣಕ್ಕೆ ಬಿಜೆಪಿಯಲ್ಲಿ ಸ್ಥಾನವಿಲ್ಲ: ಜ್ಯೋತಿರಾದಿತ್ಯ ಸಿಂಧಿಯಾ

  • ಕಾರು, ಲಾರಿ ನಡುವೆ ಡಿಕ್ಕಿ- ಒಂದೇ ಕುಟುಂಬದ ಮೂವರು ಸಾವು

    ಕಾರು, ಲಾರಿ ನಡುವೆ ಡಿಕ್ಕಿ- ಒಂದೇ ಕುಟುಂಬದ ಮೂವರು ಸಾವು

    ತುಮಕೂರು: ಕಾರು ಮತ್ತು ಲಾರಿ ನಡುವೆ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ದುರ್ಮರಣ ಹೊಂದಿರುವ ಘಟನೆ ಕುಣಿಗಲ್ ತಾಲೂಕಿನ ಬೀಸೆಗೌಡನದೊಡ್ಡಿಯಲ್ಲಿ ನಡೆದಿದೆ.

    car

    ಮೃತರು ಚನ್ನಪಟ್ಟಣ ಮೂಲದವರಾಗಿದ್ದು, ಶಾಮಿಯ ಮೊಹಲ್ಲಾದ ಸೈಯದ್ ಮಹಮ್ಮದ್ ನಜ್ಮಿ (45), ಪತ್ನಿ ನಾಜೀಯಾ (35) ಹಾಗೂ ಕುಂದನ್ ಅಸೀ (1) ಮೃತ ದುರ್ದೈವಿಗಳು. ಇನ್ನೊಂದು ಮಗು 3 ವರ್ಷದ ಸೈಯದ್ ಕುಂದನ್ ನಬೀ ತೀವ್ರವಾಗಿ ಗಾಯಗೊಂಡಿದ್ದು, ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಇದನ್ನೂ ಓದಿ: ಸೀಬೆ ಹಣ್ಣು ಕೀಳಲು ಹೋಗಿ ಪ್ರಾಣ ಕಳೆದುಕೊಂಡ ಸಹೋದರಿಯರು

    ಘಟನೆಯು ಹುಲಿಯೂರುದುರ್ಗ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: 5 ದಿನವಾದ್ರೂ ಸಿಗದ ಆ್ಯಸಿಡ್ ನಾಗನ ಸುಳಿವು- ಪಾಗಲ್ ಪ್ರೇಮಿಯ ಪ್ರೀಪ್ಲ್ಯಾನ್ ಕೇಳಿ ಪೊಲೀಸ್ರೇ ಶಾಕ್

  • ಸರ್ಕಾರಿ ಶಾಲೆ ಬಾಗಿಲು ಮುರಿದು ಪುಂಡರ ಎಣ್ಣೆ ಪಾರ್ಟಿ

    ಸರ್ಕಾರಿ ಶಾಲೆ ಬಾಗಿಲು ಮುರಿದು ಪುಂಡರ ಎಣ್ಣೆ ಪಾರ್ಟಿ

    ತುಮಕೂರು: ಕೆಲವು ಪುಂಡರು ಸರ್ಕಾರಿ ಶಾಲೆ ಬಾಗಿಲು ಮುರಿದು ಎಣ್ಣೆ ಪಾರ್ಟಿ ಮಾಡಿದ ಘಟನೆ ಕೊರಟಗೆರೆಯಲ್ಲಿ ನಡೆದಿದೆ.

    ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯ ಕರ್ನಾಟಕ ಪಬ್ಲಿಕ್ ಉರ್ದು ಶಾಲೆಯಲ್ಲಿ ಘಟನೆ ನಡೆದಿದ್ದು, ಈ ಶಾಲೆ ಪುಂಡರು, ಕುಡುಕರ ತಾಣವಾಗಿದೆ. ನಿನ್ನೆ ರಾತ್ರಿ ಕೆಲವು ಪುಂಡರು ಶಾಲೆಯ ಬಾಗಿಲು ಮುರಿದು ಕೊಠಡಿಯಲ್ಲಿ ಗುಂಡು ತುಂಡು ಪಾರ್ಟಿ ಮಾಡಿದ್ದಾರೆ. ಇದನ್ನೂ ಓದಿ: ಮಾನವನಿಗೆ ಹೆಚ್3ಎನ್8 ಹಕ್ಕಿಜ್ವರ – ಚೀನಾದಲ್ಲಿ ಮೊದಲ ಪ್ರಕರಣ ಪತ್ತೆ

    ಈ ಉರ್ದು ಶಾಲೆಯೂ ಉಪ ಪೊಲೀಸ್ ಠಾಣೆ ಹಾಗೂ ಗ್ರಾಮ ಪಂಚಾಯಿತಿ ಕಚೇರಿ ಪಕ್ಕದಲ್ಲಿಯೇ ಇದ್ರೂ ಈ ರೀತಿ ಘಟನೆ ನಡೆದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಶಾಲೆಯೂ ಕುಡುಕರ ಅನೈತಿಕ ಚಟುವಟಿಕೆಗೆ ತಾಣವಾಗುತ್ತಿದೆ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಘಟನೆ ನೋಡಿ ರೋಚಿಗೆದ ಸಾರ್ವಜನಿಕರು ಪುಂಡರ ಅನೈತಿಕ ಚಟುವಟಿಕೆಗಳಿಗೆ ಕೂಡಲೇ ತಡೆಯಬೇಕು ಎಂದು ಪೊಲೀಸರಿಗೆ ಗ್ರಾಮಸ್ಥರ ಒತ್ತಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಪತ್ನಿ ಸಂಬಳ ನೀಡದಿದ್ದಕ್ಕೆ ಶಿಕ್ಷಣ ಇಲಾಖೆಯ ಮಹಿಳಾ ಅಧಿಕಾರಿ ಮೇಲೆ ಪತಿಯಿಂದ ಹಲ್ಲೆ