Tag: tumkur

  • ಕಾಣೆಯಾಗಿ ಮತ್ತೆ ಸಿಕ್ಕಿದ್ದ ಗಿಳಿಯನ್ನು ಗುಜರಾತ್ ಝೂಗೆ ಬಿಟ್ಟ ಮಾಲೀಕರು

    ಕಾಣೆಯಾಗಿ ಮತ್ತೆ ಸಿಕ್ಕಿದ್ದ ಗಿಳಿಯನ್ನು ಗುಜರಾತ್ ಝೂಗೆ ಬಿಟ್ಟ ಮಾಲೀಕರು

    ತುಮಕೂರು: ಇತ್ತೀಚೆಗೆ ತುಮಕೂರು ನಗರದ ದಂಪತಿ ಸಾಕಿದ್ದ ಮುದ್ದಿನ ಗಿಳಿಯೊಂದು ಕಾಣೆಯಾಗಿದ್ದ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಆ ದಂಪತಿ ಗಿಳಿಗಳ ವಿಷಯದಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಎರಡು ಗಿಳಿಗಳನ್ನು ಗುಜರಾತ್‍ನ ಸರ್ದಾರ್ ಪಟೇಲ್ ಝುವಾಲಜಿಕಲ್ ಪಾರ್ಕ್‍ನಲ್ಲಿ ಬಿಟ್ಟು ಬಂದಿದ್ದಾರೆ.

    ತುಮಕೂರು ನಗರದ ಜಯನಗರದ ದಂಪತಿ ಅರ್ಜುನ್ ಹಾಗೂ ರಂಜನಾ ಅವರ ಮುದ್ದಿನ ಗಿಳಿಯಲ್ಲಿ ಒಂದಾದ ರುಸ್ತುಮಾ ಈ ಹಿಂದೆ ಅಚಾನಕ್ಕಾಗಿ ಹಾರಿ ಹೋಗಿತ್ತು. ಆಗ ಗಿಳಿಯನ್ನು ಹುಡುಕಿಕೊಟ್ಟವರಿಗೆ ಬರೋಬ್ಬರಿ 85 ಸಾವಿರ ರೂ. ಬಹುಮಾನವನ್ನೂ ಕೊಟ್ಟಿದ್ದರು. ಆದರೆ ಇದೀಗ ಅರ್ಜುನ್-ರಂಜನಾ ದಂಪತಿಯೇ ಸ್ವತಃ ಗಿಳಿಗಳನ್ನು ಹಾರಿ ಬಿಟ್ಟಿದ್ದಾರೆ. ಇದನ್ನೂ ಓದಿ: ಸುತ್ತೂರು ಮಠ ಧರ್ಮನಿಷ್ಠೆ, ಸಕರಾತ್ಮಕ ಶಕ್ತಿಗೆ ಪ್ರಸಿದ್ಧಿ: ರಾಜ್ಯಪಾಲ ಗೆಹ್ಲೋಟ್ ಶ್ಲಾಘನೆ

    ಹಾಗಂತ ಬೇಕಾಬಿಟ್ಟಿಯಾಗಿ ತಮ್ಮ ಪ್ರೀತಿಯ ಗಿಳಿಯನ್ನು ಬೀದಿಪಾಲು ಮಾಡಿಲ್ಲ. ತಾವು ನೋಡಿಕೊಳ್ಳುವುದಕ್ಕಿಂತಲೂ ಅದು ಸುರಕ್ಷಿತವಾಗಿರಲಿ ಎಂದು ಸುರಕ್ಷಿತ ತಾಣಕ್ಕೆ ಇವರೇ ಬಿಟ್ಟು ಬಂದಿದ್ದಾರೆ. ತಮ್ಮ ಗಿಳಿಗಳನ್ನು ಗುಜರಾತ್‍ನ ಸರ್ದಾರ್ ಪಟೇಲ್ ಝುವಾಲಜಿಕಲ್ ಪಾರ್ಕ್‍ನಲ್ಲಿ ಬಿಟ್ಟಿದ್ದಾರೆ. ಮತ್ತೆ ಈ ಗಿಳಿಗಳು ಹಾರಿ ಹೋಗಿ ಇತರೆ ಪ್ರಾಣಿಗಳ ಆಹಾರ ಆಗುವುದಕ್ಕಿಂತ ಪಾರ್ಕ್‍ನಲ್ಲಿ ಸುರಕ್ಷಿತವಾಗಿರಲಿ ಎಂದು ಬಿಟ್ಟು ಬಂದಿದ್ದಾರೆ. ಈ ಗಿಳಿಗಳನ್ನು ಪಾರ್ಕ್‍ಗೆ ಬಿಟ್ಟು ಬರಲು 8 ದಿನಗಳ ಕಾಲ ಕಾರಿನಲ್ಲಿ ಜರ್ನಿ ಮಾಡಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ಇದೆ ಎಂದು ತಿಳಿದು ಇಡೀ ಫ್ಯಾಮಿಲಿ ಆತ್ಮಹತ್ಯೆಗೆ ಶರಣು

    Live Tv
    [brid partner=56869869 player=32851 video=960834 autoplay=true]

  • ಸಿಎಂ ಹೇಳಿದರೆ ರಾಜೀನಾಮೆ ನೀಡುತ್ತೇನೆ: ಮಾಧುಸ್ವಾಮಿ

    ಸಿಎಂ ಹೇಳಿದರೆ ರಾಜೀನಾಮೆ ನೀಡುತ್ತೇನೆ: ಮಾಧುಸ್ವಾಮಿ

    ತುಮಕೂರು: ಸರ್ಕಾರ ನಡೆಯುತ್ತಿಲ್ಲ, ಮ್ಯಾನೇಜ್‍ಮೆಂಟ್ ಮಾಡುತ್ತಿದ್ದೇವೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಆಡಿಯೋ ಲೀಕ್ ವಿಚಾರವಾಗಿ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಸಿಎಂ ಹೇಳಿದರೆ ರಾಜೀನಾಮೆ ಕೊಡುತ್ತೇನೆ ಎಂದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಿಯೋ ತುಂಬಾ ಹಳೇಯದು. ಯಾವಾಗ ಮಾತನಾಡಿದ್ದೀನಿ ಅನ್ನೋದು ನನಗೆ ನೆನಪಿಲ್ಲ. ಆಡಿಯೋದಲ್ಲಿ ಇರುವ ಧ್ವನಿ ನನ್ನದೆ. ಆಡಿಯೋ ರೆಕಾರ್ಡಿಂಗ್ ಮಾಡಿದ ವ್ಯಕ್ತಿ ವಿರುದ್ಧ ದೂರು ನೀಡುತ್ತೇನೆ. ಗೊತ್ತಿಲ್ಲದೇ ಕಾಲ್ ರೆಕಾರ್ಡ್ ಮಾಡುವುದು ಕೂಡ ಅಪರಾಧವಾಗಿದೆ. ಹಾಗಾಗಿ ಪ್ರಸಾರ ಮಾಡಿದ ಮಾಧ್ಯಮದ ಮೇಲೂ ಕೇಸ್ ಹಾಕುತ್ತೇನೆ ಎಂದು ತಿಳಿಸಿದರು.

    bjP

    ಅಪರಿಚಿತ ವ್ಯಕ್ತಿಯ ದಾಖಲೆ ಮಾಧ್ಯಮದವರು ನೀಡಲಿ. ಯಾರೂ ನನ್ನ ವಿರುದ್ಧ ಷಡ್ಯಂತ್ರ ಮಾಡಿಲ್ಲ. ಯಾರನ್ನೂ ನಾನು ದೂಷಣೆ ಮಾಡುವುದಿಲ್ಲ. ಈಗಾಗಲೇ ಸಿಎಂಗೆ ಸ್ಪಷ್ಟನೆ ನೀಡಿದ್ದೇನೆ. ರಾಜೀನಾಮೆ ಕೊಡುವ ಪ್ರಮೇಯ ಇಲ್ಲ. ಸಿಎಂ ರಾಜೀನಾಮೆ ಕೇಳಿದರೆ ರಾಜೀನಾಮೆ ಕೊಡುತ್ತೇನೆ ಎಂದರು. ಇದನ್ನೂ ಓದಿ: ದಲಿತ ವಿದ್ಯಾರ್ಥಿ ಸಾವಿನಿಂದ ಮನನೊಂದು ಕಾಂಗ್ರೆಸ್ ಶಾಸಕ ರಾಜೀನಾಮೆ

    ಅನಾಮಿಕ ವ್ಯಕ್ತಿ ನನಗೆ ಪ್ರಚೋದನೆ ನೀಡುತ್ತಿದ್ದ. ಹಾಗಾಗಿ ನಾನು ಮ್ಯಾನೇಜ್ ಮಾಡುತ್ತಿದ್ದೇವೆ ಎಂದು ಹೇಳಿದೆ. ಸಚಿವ ಸೋಮಶೇಖರ್ ಕುರಿತು ನಾನು ಗೌರವಯುತವಾಗಿ ಮಾತನಾಡಿದ್ದೇನೆ. ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಸರ್ಕಾರದ ಬಗ್ಗೆ ಎರಡು ಮಾತಿಲ್ಲ. ಸಿಎಂ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕಾಶ್ಮೀರವನ್ನು ಬಿಟ್ಟು ಬನ್ನಿ: ಕಾಶ್ಮೀರಿ ಪಂಡಿತರ ಸಂಘರ್ಷ ಸಮಿತಿ ಒತ್ತಾಯ

    Live Tv
    [brid partner=56869869 player=32851 video=960834 autoplay=true]

  • ಗುರಾಯಿಸಿದ್ದಕ್ಕೆ ದೊಣ್ಣೆ ಹಿಡಿದು ನಡುರಸ್ತೆಯಲ್ಲಿ ಹೊಡೆದಾಡಿದ ಯುವಕರು

    ಗುರಾಯಿಸಿದ್ದಕ್ಕೆ ದೊಣ್ಣೆ ಹಿಡಿದು ನಡುರಸ್ತೆಯಲ್ಲಿ ಹೊಡೆದಾಡಿದ ಯುವಕರು

    ತುಮಕೂರು: ಕ್ಷುಲ್ಲಕ ವಿಚಾರಕ್ಕೆ ಯುವಕರ ಗುಂಪೊಂದು ದಾಂಧಲೆ ನಡೆಸಿದ ಘಟನೆ ತುಮಕೂರು ನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ.

    ರಿಂಗ್ ರಸ್ತೆಯ ಕ್ಲೌಡ್ 9 ಬಾರ್‌ನಲ್ಲಿ ಯುವಕರ ಗುಂಪು ಮದ್ಯವನ್ನು ಸೇವಿಸುತ್ತಿತ್ತು. ಈ ವೇಳೆ ಯುವಕನೊಬ್ಬ ಮದ್ಯ ಸೇವಸಿದ ಬಳಿಕ ಗುರಾಯಿಸಿದ್ದಾನೆ. ಇದನ್ನೆ ಕಾರಣವಾಗಿಟ್ಟುಕೊಂಡು ಯುವಕರ ಗುಂಪು ಗಲಾಟೆ ಮಾಡಲು ಆರಂಭ ಮಾಡಿದೆ. ಇದನ್ನೂ ಓದಿ: ನಾಗಪಂಚಮಿಯ ವಿಶೇಷ: ಬಾಯಲ್ಲಿಟ್ಟರೆ ಕರಗುವ ‘ಅಕ್ಕಿ ತಂಬಿಟ್ಟು’ ಮಾಡುವ ವಿಧಾನ

    ದೊಣ್ಣೆ ಹಿಡಿದುಕೊಂಡು ನಡುರಸ್ತೆಗೆ ಯುವಕರು ಇಳಿದಿದ್ದು, ಗಲಾಟೆಯಲ್ಲಿ ಯುವಕನೊಬ್ಬನ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಸ್ಥಳೀಯರು ಈ ಕುರಿತು ಪೊಲೀಸರಿಗೆ ತಿಳಿಸಿದ ತಕ್ಷಣ ಪೊಲೀಸರು ಧಾವಿಸಿದ್ದು, ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಕುಡಿದು ದಾಂಧಲೆ ಹಿನ್ನೆಲೆ ಪೊಲೀಸರು ಪ್ರಕರಣ ದಾಖಲಿಸಿಗೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ISIS ನಂಟು – ತುಮಕೂರಿನಲ್ಲೂ ಶಂಕಿತ ಉಗ್ರನ ಸೆರೆ

    ISIS ನಂಟು – ತುಮಕೂರಿನಲ್ಲೂ ಶಂಕಿತ ಉಗ್ರನ ಸೆರೆ

    ತುಮಕೂರು: ಐಸಿಸ್ ನಂಟು ಹೊಂದಿರುವ ಶಂಕೆಯ ಮೇರೆಗೆ ಎನ್‌ಐಎ ತಂಡ ಭಾನುವಾರ ತುಮಕೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದೆ. ಮಹಾರಾಷ್ಟ್ರ ಮೂಲದ ಸಾಜಿದ್ ಮಕ್ರಾನಿ ಬಂಧಿತ ಶಂಕಿತ ಉಗ್ರ.

    ಈತ ತುಮಕೂರಿನ ಹೆಚ್‌ಎಂಎಸ್ ಯುನಾನಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದು, ಸದಾಶಿವ ನಗರದ 9 ನೇ ತಿರುವಿನಲ್ಲಿರುವ ರಂಗಸ್ವಾಮಿಯವರ ಮನೆಯಲ್ಲಿ ಒಟ್ಟು 4 ಜನ ಸ್ನೇಹಿತರೊಂದಿಗೆ ವಾಸವಿದ್ದ. ಇದನ್ನೂ ಓದಿ: ISIS ನಂಟು – ಭಟ್ಕಳದಲ್ಲಿ ಶಂಕಿತ ಉಗ್ರ ವಶಕ್ಕೆ

    ಇಂದು ಬೆಳಗ್ಗಿನ ಜಾವ 4 ಗಂಟೆಗೆ ಸ್ಥಳಕ್ಕೆ ಆಗಮಿಸಿದ 20 ಜನ ಎನ್‌ಐಎ ತಂಡ ಆತನನ್ನು ಸೆರೆ ಹಿಡಿದು, ಸತತ 6 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಆತನ ಬಳಿ ಇದ್ದ ಲ್ಯಾಪ್‌ಟಾಪ್, ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಉಡುಪಿಯ ನಿರ್ಜನ ಪ್ರದೇಶದಲ್ಲಿ ಅಪರಿಚಿತ ಇಯಾನ್ ಕಾರ್ ಪತ್ತೆ 

    Live Tv
    [brid partner=56869869 player=32851 video=960834 autoplay=true]

  • ಬಹುಮಾನದ ಮೊತ್ತ 85 ಸಾವಿರಕ್ಕೆ ಏರಿಸಿದ ಕೆಲವೇ ಹೊತ್ತಲ್ಲಿ ಸಿಕ್ತು ಕಳೆದು ಹೋಗಿದ್ದ ಗಿಳಿ!

    ಬಹುಮಾನದ ಮೊತ್ತ 85 ಸಾವಿರಕ್ಕೆ ಏರಿಸಿದ ಕೆಲವೇ ಹೊತ್ತಲ್ಲಿ ಸಿಕ್ತು ಕಳೆದು ಹೋಗಿದ್ದ ಗಿಳಿ!

    ತುಮಕೂರು: ಜ್ಯೋತಿಷಿಯೊಬ್ಬರ ಸಲಹೆಯಂತೆ ಬಹುಮಾನದ ಮೊತ್ತವನ್ನು ಏರಿಕೆ ಮಾಡಿದಂತೆಯೇ ಕಳೆದು ಹೋಗಿದ್ದ ಗಿಳಿ ಕೆಲವೇ ಗಂಟೆಗಳಲ್ಲಿ ಮಾಲೀಕರ ಕೈ ಸೇರಿದೆ.

    ತುಮಕೂರಲ್ಲಿ ಜುಲೈ 16ರಂದು ಮಿಸ್ಸಿಂಗ್ ಆಗಿದ್ದ ಗಿಣಿ ಕೊನೆಗೂ ಮಾಲೀಕರ ಕೈ ಸೇರಿದೆ. ಜಯನಗರದ ಅರ್ಜುನ್, ರಂಜಿತಾ ದಂಪತಿಯ ರುಸ್ತುಮಾ ಎಂಬ ಹೆಸರಿನ ಗಿಳಿಯನ್ನು ಕಳೆದುಕೊಂಡಿದ್ದರು. ಗಿಳಿ ಪತ್ತೆಗಾಗಿ ತುಮಕೂರು ನಗರದ ಬೀದಿ ಬೀದಿ ಸುತ್ತುತ್ತಿದ್ದರು. ಗಿಳಿ ಹುಡುಕಿ ಕೊಟ್ಟರೆ 50 ಸಾವಿರ ಬಹುಮಾನ ನೀಡುವುದಾಗಿ ಕರಪತ್ರ ಹಂಚಿ, ಆಟೋದಲ್ಲಿ ಆನೌನ್ಸ್ ಕೂಡ ಮಾಡಿದ್ದರು. ಆದರೂ ಗಿಳಿ ಸಿಕ್ಕಿರಲ್ಲಿಲ್ಲ. ಇದನ್ನೂ ಓದಿ: ಸುರಕ್ಷತೆ ಮರೆತ ಬಿಎಂಟಿಸಿ – ಕಳ್ಳರ ಅಡ್ಡವಾದ ಬಸ್‍ಗಳು

    ಕೊನೆಗೆ ಗಿಳಿ ಮಾಲೀಕರು ಜ್ಯೋತಿಷಿಗಳ ಮೊರೆ ಹೋಗಿದ್ದರು. ಜ್ಯೋತಿಷಿಗಳು ಬಹುಮಾನದ ಮೊತ್ತವನ್ನು 50 ರಿಂದ 85 ಸಾವಿರಕ್ಕೆ ಏರಿಸಿದರೆ 5-6 ಗಂಟೆಯಲ್ಲಿ ನಿಮಗೆ ಗಿಳಿ ಸಿಗುತ್ತದೆ ಎಂದು ಭವಿಷ್ಯ ಹೇಳಿದ್ದರು. ಅದರಂತೆ ಅರ್ಜುನ ದಂಪತಿ ಬಹುಮಾನ ಮೊತ್ತ 85 ಸಾವಿರಕ್ಕೆ ಏರಿಸಿ ಅನೌನ್ಸ್ ಮಾಡಿದರು. ಕಾಕತಾಳಿಯ ಎಂಬಂತೆ ಹೀಗೆ ಘೋಷಣೆ ಮಾಡಿದ ಕೆಲವೇ ಗಂಟೆಯಲ್ಲಿ ಗಿಳಿ ಪತ್ತೆಯಾಗಿದೆ.

    ಬಂಡೇ ಪಾಳ್ಯದ ನಿವಾಸಿಗಳಾದ ಶ್ರೀನಿವಾಸ್ ಮತ್ತು ರಾಮಕೃಷ್ಣ ಎಂಬವರು ಬಸವಾಪಟ್ಟಣದ ಮರದ ಮೇಲಿದ್ದ ಗಿಳಿಯನ್ನು ರಕ್ಷಿಸಿ ಮನೆಯಲ್ಲಿಟ್ಟುಕೊಂಡಿದ್ದರು. ಕಾಣೆಯಾಗಿದ್ದ ಗಿಳಿಯ ಕರಪತ್ರ ನೋಡಿ ಮಾಲೀಕರಿಗೆ ಕಾಲ್ ಮಾಡಿ ಗಿಳಿಯನ್ನು ತಲುಪಿಸಿದ್ದಾರೆ. 85 ಸಾವಿರ ನಗದು ಬಹುಮಾನ ಪಡೆದುಕೊಂಡಿದ್ದಾರೆ. ಇಷ್ಟು ದಿನ ದುಃಖದಲ್ಲಿದ್ದ ಅರ್ಜುನ ದಂಪತಿ ಮೊಗದಲ್ಲಿ ಈಗ ಸಂತಸ ಮೂಡಿದೆ. ಇಷ್ಟು ದಿನದ ಒಂಟಿಯಾಗಿದ್ದ ಹೆಣ್ಣು ಗಿಳಿ ರಿಸ್ತಾ ಈಗ ಮತ್ತೆ ಜಂಟಿಯಾಗಿ ರುಸ್ತುಮಾ ಜೊತೆ ಡ್ಯುಯೆಟ್ ಹಾಡುತ್ತಿದೆ. ಇದನ್ನೂ ಓದಿ: ಕಸದ ವಾಹನಗಳ ಮೇಲೆ BBMP ನಾಮಫಲಕ ಹಾಕುವಂತಿಲ್ಲ – ಹೆಸರು ಹಾಕಿದ ವಾಹನಗಳ ಮೇಲೆ ಕ್ರಿಮಿನಲ್ ಕೇಸ್

    Live Tv
    [brid partner=56869869 player=32851 video=960834 autoplay=true]

  • ಕೆನಡಾ ಸಂಸದ ಚಂದ್ರ ಆರ್ಯ ಹುಟ್ಟೂರು ತುಮಕೂರಿಗೆ ಭೇಟಿ

    ಕೆನಡಾ ಸಂಸದ ಚಂದ್ರ ಆರ್ಯ ಹುಟ್ಟೂರು ತುಮಕೂರಿಗೆ ಭೇಟಿ

    ತುಮಕೂರು: ಕೆನಡಾ ಸಂಸದ ಚಂದ್ರ ಆರ್ಯ ಅವರು ತಮ್ಮ ಹುಟ್ಟೂರು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಗ್ರಾಮಕ್ಕೆ ಭೇಟಿ ನೀಡಿದರು.

    ಈ ವೇಳೆ ಮಾತನಾಡಿದ ಅವರು, ಗಜ್ಜಿಗರಹಳ್ಳಿ ನಮ್ಮ ತಾತ ಅವರ ಊರಾಗಿದೆ. ಇಲ್ಲಿಗೆ ಬರುವುದು ಎಂದರೆ ನಮಗೆ ತುಂಬಾ ಸಂತೋಷ. ಕಳೆದ ನಾಲ್ಕೈದು ವರ್ಷದಲ್ಲಿ ಹಲವು ಬಾರಿ ಇಲ್ಲಿಗೆ ಬಂದಿದ್ದೇನೆ. ಈ ಗ್ರಾಮದಲ್ಲಿ ರಸ್ತೆ ಆಗಬೇಕು. ಮೊದಲು ದೇವಸ್ಥಾನ ಇರಲಿಲ್ಲ. ಈಗ ಗ್ರಾಮದವರೇ ಕಟ್ಟಿಸಿದ್ದಾರೆ ಎಂದರು.

    ನಂತರ ಗಜ್ಜಿಗರಹಳ್ಳಿ ಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಚಂದ್ರ ಆರ್ಯ ಅವರು, ಕೆಲಕಾಲ ಗ್ರಾಮದ ಹಳೆ ಸ್ನೇಹಿತರೊಂದಿಗೆ ಕೂತು ಚರ್ಚೆ ನಡೆಸಿದರು. ಪತ್ನಿಯೊಂದಿಗೆ ಭೇಟಿ ಕೊಟ್ಟ ಚಂದ್ರ ಆರ್ಯ ಅವರನ್ನು ಗ್ರಾಮಸ್ಥರು ಹಾರ, ಪೇಟ ಹಾಕಿ ಸನ್ಮಾನಿಸಿದರು. ಇದನ್ನೂ ಓದಿ: ಎಐಡಿಎಂಕೆ ಕಾರ್ಯಕರ್ತರ ನಡುವೆ ಮಾರಾಮಾರಿ- ಕಚೇರಿಯ ಬಾಗಿಲು ಒಡೆದ ಬೆಂಬಲಿಗರು

    ಇತ್ತೀಚೆಗೆ ಕೆನಡಾ ಸಂಸತ್ತಿನಲ್ಲಿ ಮಾತೃಭಾಷೆ ಕನ್ನಡವನ್ನು ಮಾತನಾಡುವ ಮೂಲಕ ಚಂದ್ರ ಆರ್ಯ ಅವರು ತಮಗೆ ಕನ್ನಡದ ಮೇಲೆ ಇರುವ ಪ್ರೀತಿ, ಗೌರವ, ಅಭಿಮಾನವನ್ನು ವ್ಯಕ್ತಪಡಿಸಿದ್ದರು. ಈ ಮೂಲಕ ಕನ್ನಡ ಕಂಪನ್ನು ಕೆನಡಾ ಸಂಸತ್ತಿವರಿಗೂ ಪಸರಿಸಿದ್ದರು. ಇದನ್ನೂ ಓದಿ: ಗೋವಾದಲ್ಲೂ ಆಪರೇಷನ್‍ಗೆ ಮುಂದಾಗಿದ್ಯಾ ಬಿಜೆಪಿ..? – ಕಾಂಗ್ರೆಸ್ ಶಾಸಕರಿಗೆ 40 ಕೋಟಿ ಆಫರ್

    Live Tv
    [brid partner=56869869 player=32851 video=960834 autoplay=true]

  • ಟೀ ಅಂಗಡಿ ಮುಂದೆ ಕುಳಿತಿದ್ದ ಡಿಎಸ್‌ಎಸ್ ಮುಖಂಡನನ್ನು ಕೊಚ್ಚಿ ಕೊಂದ್ರು!

    ಟೀ ಅಂಗಡಿ ಮುಂದೆ ಕುಳಿತಿದ್ದ ಡಿಎಸ್‌ಎಸ್ ಮುಖಂಡನನ್ನು ಕೊಚ್ಚಿ ಕೊಂದ್ರು!

    ತುಮಕೂರು: ಹಾಡಹಗಲೇ ನಡುರಸ್ತೆಯಲ್ಲಿ ಡಿಎಸ್‌ಎಸ್ ಮುಖಂಡನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

    ಘಟನೆ ಜಿಲ್ಲೆಯ ಗುಬ್ಬಿ ಪಟ್ಟಣದ ಬಿಎಸ್ ರಸ್ತೆಯಲ್ಲಿ ನಡೆದಿದ್ದು, ಡಿಎಸ್‌ಎಸ್ ಸಂಘದ ತಾಲೂಕು ಸಂಚಾಲಕನಾಗಿದ್ದ ನರಸಿಂಹ ಮೂರ್ತಿ ಅಲಿಯಾಸ್ ಕುರಿ ಮೂರ್ತಿ(45) ಕೊಲೆಯಾಗಿದ್ದಾರೆ.

    ಬುಧವಾರ ಮಧ್ಯಾಹ್ನದ ವೇಳೆ ಟೀ ಅಂಗಡಿಯ ಮುಂದೆ ಕುಳಿತಿದ್ದ ಕುರಿ ಮೂರ್ತಿ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದರು. ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಆತ್ಮಹತ್ಯೆ

    ನರಸಿಂಹ ಮೂರ್ತಿ ಮೃತದೇಹವನ್ನು ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ಕಳುಹಿಸಲಾಗಿದ್ದು, ನೂರಾರು ಸಂಖ್ಯೆಯಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ನೆರೆದಿದ್ದಾರೆ. ಕುರಿ ಮೂರ್ತಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಟಿಎಸ್ ಪ್ರೇಮಾ ಭೇಟಿ ನೀಡಿ, ಮೃತರ ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ. ಇದನ್ನೂ ಓದಿ: ಅಣ್ಣನ ಹೆಸರಿಗೆ ಆಸ್ತಿ ಮಾಡಿಸ್ತಾನೆ ಅಂತ JDS ಕಾರ್ಯಕರ್ತನ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದ

    ಸ್ಥಳಕ್ಕೆ ಗುಬ್ಬಿ ಶಾಸಕ ಎಸ್‌ಆರ್ ಶ್ರೀನಿವಾಸ್ ಭೇಟಿ ನೀಡಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಬಳಿಕ ಮಾತನಾಡಿದ ಶ್ರೀನಿವಾಸ್, ಮೂರ್ತಿ ಕೊಲೆ ವೈಯಕ್ತಿಕ ದ್ವೇಶದ ಹಿನ್ನೆಲೆ ಆಗಿರುವ ಸಾಧ್ಯತೆ ಇದೆ. ಗುಬ್ಬಿ ಮೂಲದ ಯಾರೂ ಕೊಲೆ ಮಾಡಿರುವ ಸಾಧ್ಯತೆ ಇಲ್ಲ. ಹೊರಗಿನವರು ಕೊಲೆ ಮಾಡಿರುವ ಶಂಕೆ ಇದೆ ಎಂದು ಹೇಳಿಕೆ ನೀಡಿದರು.

    POLICE JEEP

    ನಿನ್ನೆ ಎಲ್ಲವೂ ಚೆನ್ನಾಗಿಯೇ ಇತ್ತು. ಅವರಿಗೆ ಯಾರೂ ಶತ್ರುಗಳು ಇರಲಿಲ್ಲ. ಆದರೆ ಇತ್ತೀಚೆಗೆ ರಾಜಕೀಯದಲ್ಲಿ ಮುಂದುವರಿದಿದ್ದರಿಂದ ಹೀಗಾಗಿದೆ. ಈ ಕೊಲೆಗೆ ಸರ್ಕಾರದ ವೈಫಲ್ಯವೇ ಕಾರಣ, ಸರ್ಕಾರ ನಮಗೆ ನ್ಯಾಯ ಒದಗಿಸಬೇಕು ಎಂದು ಕಟುಂಬಸ್ಥರು ಆಗ್ರಹಿಸಿದ್ದಾರೆ.

    Live Tv

  • ಕಾರು- ಟಿಟಿ ವಾಹನ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

    ಕಾರು- ಟಿಟಿ ವಾಹನ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

    ತುಮಕೂರು: ಇನ್ನೋವಾ ಕಾರು ಹಾಗೂ ಟಿಟಿ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಬೇಗೂರು ಬ್ರಿಡ್ಜ್ ಬಳಿ ನಡೆದಿದೆ.

    ಬೆಂಗಳೂರು ಕಡೆಯಿಂದ ಹಾಸನ ಕಡೆಗೆ ಕಾರು ತೆರಳುತ್ತಿತ್ತು. ಹಾಗೆಯೇ ರಸ್ತೆ ಡಿವೈಡರ್ ದಾಟಿ ಹಾಸನ ಕಡೆಯಿಂದ ಟಿಟಿ ವಾಹನ ಬರುತ್ತಿತ್ತು. ಈ ವೇಳೆ ಕಾರು ಹಾಗೂ ಟಿಟಿ ವಾಹನ ಡಿಕ್ಕಿಯಾಗಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಪಿಎಸ್‍ಐ ನೇಮಕಾತಿ ಅಕ್ರಮ- ಮತ್ತೋರ್ವನ ಬಂಧನ, ಬಂಧಿತ ಆರೋಪಿಗಳ ಸಂಖ್ಯೆ 39ಕ್ಕೆ ಏರಿಕೆ

    ಶುಕ್ರವಾರವಷ್ಟೇ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ ನಡೆದಿತ್ತು. ಖಾಸಗಿ ಬಸ್ ಹಾಗೂ ಕಂಟೈನರ್ ಮುಖಾಮುಖಿ ಡಿಕ್ಕಿಯಾಗಿ 7 ಮಂದಿ ಮೃತಪಟ್ಟಿರುವ ಘಟನೆ ಕಲಬುರಗಿಯ ಕಮಲಾಪುರ ಹೊರವಲಯದಲ್ಲಿ ನಡೆದಿತ್ತು. ಮತ್ತೊಂದು ಪಂಚರ್ ಆಗಿ ನಿಂತಿದ್ದ ಕ್ಯಾಂಟರ್‌ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ಬಳಿ ನಿಂತಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿ ನಡೆದಿತ್ತು. ಇದನ್ನೂ ಓದಿ: ಕಾರಿನಲ್ಲೇ ಅಪ್ರಾಪ್ತೆಯ ಮೇಲೆ ಗ್ಯಾಂಗ್‍ರೇಪ್ – ಓರ್ವ ಅರೆಸ್ಟ್, ಆರೋಪಿಗಳ ಪೈಕಿ ಮೂವರು ಅಪ್ರಾಪ್ತರು

  • ವಿದ್ಯಾಭ್ಯಾಸ ಕೊಡಿಸಲು ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮಗಳು ಯುಪಿಎಸ್‍ಸಿಯಲ್ಲಿ ಟಾಪರ್

    ವಿದ್ಯಾಭ್ಯಾಸ ಕೊಡಿಸಲು ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮಗಳು ಯುಪಿಎಸ್‍ಸಿಯಲ್ಲಿ ಟಾಪರ್

    ತುಮಕೂರು: ಸೋಮವಾರ ಯುಪಿಎಸ್‍ಸಿ ಫಲಿತಾಂಶ ಪ್ರಕಟವಾಗಿದ್ದು, ಹಲವರು ಉತ್ತಮ ಸಾಧನೆ ಮಾಡಿದ್ದಾರೆ.

    ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಅರುಣಾ ಅವರು ನ್ಯೂಸ್ ಕೆಫೆಯಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಎಸ್.ರಂಗನಾಥ್ ಅವರ ಜೊತೆ ಮಾತನಾಡಿದರು. ಈ ವೇಳೆ ನಮ್ಮ ಮನೆಯಲ್ಲಿ ನಡೆದಿದ್ದ ಕಹಿ ಘಟನೆ ಕುರಿತು ಹಂಚಿಕೊಂಡಿದ್ದಾರೆ.

    ಅರುಣಾ ಹೇಳಿದ್ದೇನು?
    ನಾನು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಸಣ್ಣ ಗ್ರಾಮದಲ್ಲಿ ವಾಸ ಮಾಡುತ್ತಿದ್ದೇನೆ. ನಮ್ಮ ಅಪ್ಪ ಮಹಾಲಿಂಗಪ್ಪ, ತಾಯಿ ವಿಮಲಾಕ್ಷಿ. ನಾವು 5 ಜನ ಮಕ್ಕಳು. ನನ್ನ ತಂದೆ ತಂದೆ ಬಡ ರೈತರಾಗಿದ್ದರೂ ನಮಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಾಲ ಮಾಡಿದ್ದರು. ಆದರೆ ಸಾಲದ ಶೂಲಕ್ಕೆ ಸಿಲುಕಿ 2009ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ರು. ಆದರೆ ನನ್ನ ತಂದೆಯ ಸಾವನ್ನು ನಾನು ಸವಾಲಾಗಿ ಸ್ವೀಕರಿಸಿ ರೈತರಿಗೆ ಸೇವೆ ಮಾಡಬೇಕು ಎಂದು ಯುಪಿಎಸ್‍ಸಿ ಪರೀಕ್ಷೆ ಬರೆಯಲು ನಿರ್ಧಾರ ಮಾಡಿದೆ. ಇದನ್ನೂ ಓದಿ:  ಸೆ.15ವರೆಗೆ ಪದ್ಮ ಪ್ರಶಸ್ತಿ ನಾಮನಿರ್ದೇಶನ ಮಾಡಿ 

    ಈ ವೇಳೆ ನಾನು ಪ್ರತಿಸಲ ನಾನು ಪ್ರಿಲಿಮ್ಸ್ ಪಾಸ್ ಆಗುತ್ತಿದೆ. 6 ಮೇನ್ಸ್ ಕೊಟ್ಟೆ. 3 ಮೇನ್ಸ್ ಸಮಯದಲ್ಲಿ ನನಗೆ ಆರೋಗ್ಯದಲ್ಲಿ ತೊಂದರೆ ಕಾಣಿಸಿತು. 5 ಸಲ ಫೇಲ್ ಆಯ್ತು. 6ನೇ ಪರೀಕ್ಷೆಯ ವೇಳೆ ಕೊರೊನಾ ಬಂದಿತ್ತು. ನಾನು ಆಸ್ಪತ್ರೆಗೆ ದಾಖಲಾಗಿ ಅಲ್ಲಿಂದಲೇ ಪರೀಕ್ಷೆಗೆ ಹೋಗುವಂತೆ ಆಯ್ತು. ಈ ಬಾರಿಯೂ ಪರೀಕ್ಷೆಯಲ್ಲಿ ಪಾಸ್ ಆಗುತ್ತೇನೆ ಎಂದು ತಿಳಿದಿರಲಿಲ್ಲ.

    ಅದಕ್ಕೆ ನಾನು ಅಕಾಡೆಮಿಯನ್ನು ತೆರೆದಿದ್ದೆ. ಇಲ್ಲಿ ನಾನು ಕನ್ನಡದಲ್ಲಿ ಬರೆಯುವ ಮತ್ತು ಹಳ್ಳಿಯಿಂದ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಹಾಯ ಮಾಡುತ್ತಿದ್ದೆ. ಅವರನ್ನು ಐಎಎಸ್ ಮಾಡಿ ನನ್ನ ಕನಸನ್ನು ಅವರ ಮೂಲಕ ನನಸು ಮಾಡಿಕೊಳ್ಳಬೇಕು ಎಂದು ತಿಳಿದುಕೊಂಡಿದ್ದೆ.

    ನನ್ನ ತಂದೆ 2009ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ಸಹ ಅವರು ತಮ್ಮ ಎಲ್ಲ 5 ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸವನ್ನು ಕೊಟ್ಟಿದ್ದಾರೆ. ಅವರು ನಮ್ಮನ್ನು ಅರ್ಧದಲ್ಲಿ ಕೈಬಿಟ್ಟು ಹೋಗಿಲ್ಲ. ಅವರ ಪರಿಶ್ರಮದಿಂದ ನಾನು, ನನ್ನ ತಮ್ಮ ಮತ್ತು ನನ್ನ 2ನೇ ಅಕ್ಕ ಇಂಜಿನಿಯರ್ ಮತ್ತು ನನ್ನ ತಂಗಿ ಎಂಬಿಬಿಎಸ್ ಓದಿದ್ದಳು. ಎಲ್ಲರಿಗೂ ಫೀಸ್ ಕಟ್ಟುವುದಕ್ಕೆ ಅವರು ಸಾಲ ಮಾಡಬೇಕಾಯಿತು. ನಾವು ಎಲ್ಲರೂ ಓದಿ ಉತ್ತಮ ಸ್ಥಿತಿಗೆ ಬರುವ ಸಮಯದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡರು. ಇದನ್ನೂ ಓದಿ: ಕಪಿಲೇಶ್ವರ ಮಂದಿರ ಕೆಡವಿ ಏನು ಕಟ್ಟಿದ್ದಾರೆ ಎಂಬ ಬಗ್ಗೆಯೂ ಸರ್ವೇ ಆಗಲಿ: ಲತೀಫ್‍ಖಾನ್ ಹೊಸ ಬಾಂಬ್

    ಸುದ್ದಿ ತಿಳಿದ ತಕ್ಷಣ ನಮ್ಮ ಅಮ್ಮ ಕಣ್ಣೀರು ಹಾಕಿದರು. ಅಪ್ಪನನ್ನು ನೆನೆದು ಖುಷಿಪಟ್ಟರು.

  • ಸಿದ್ದರಾಮಯ್ಯರ ಮುಖ ಮಾತ್ರ ರಾಮನದ್ದು, ಬುದ್ಧಿ ರಾವಣನದು: ಕಟೀಲ್

    ಸಿದ್ದರಾಮಯ್ಯರ ಮುಖ ಮಾತ್ರ ರಾಮನದ್ದು, ಬುದ್ಧಿ ರಾವಣನದು: ಕಟೀಲ್

    ತುಮಕೂರು: ಮಾಜಿ ಸಿಎಂ ಸಿದ್ದರಾಮಯ್ಯ ಮುಖ ಮಾತ್ರ ರಾಮನ ರೀತಿ ಇದೆ. ಆದರೆ ಅವರ ಬುದ್ಧಿ ರಾವಣನದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಪಕ್ಷ ನಾಯಕರನ್ನು ಟೀಕಿಸಿದರು.

    ತುಮಕೂರಿನಲ್ಲಿ ನಡೆದ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ತಮ್ಮ ಹೆಸರು ಬದಲಾವಣೆ ಮಾಡಿಕೊಳ್ಳಲಿ. ಅವರ ನಡವಳಿಕೆಯಿಂದ ರಾಮನಿಗೆ ಅಪಮಾನ ಆಗುತ್ತಿದೆ. ರಾಮನ ಹೆಸರು ಇಟ್ಟುಕೊಂಡ ಸಿದ್ದರಾಮಯ್ಯ ಅವರ ಬುದ್ಧಿ, ಆಲೋಚನೆ ಎಲ್ಲವೂ ರಾವಣನದು. ರೈತರಿಗೆ ಉಚಿತ ವಿದ್ಯುತ್, ಬೆಂಬಲ ಬೆಲೆ ಏನೂ ಕೊಡದೆ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ದರಾಮಯ್ಯ ಅವರೇ ಕಾರಣರಾದರು ಎಂದು ಆರೋಪಿಸಿದರು. ಇದನ್ನೂ ಓದಿ: 29 ಹೂಡಿಕೆದಾರರಿಗೆ 1.82 ಕೋಟಿ ರೂ. ವಂಚಿಸಿದ ಮಹಿಳೆ ಅರೆಸ್ಟ್ 

    ಅಷ್ಟೇ ಏಕೆ ಕುರುಬ ಸಮುದಾಯದವರ ಬಗ್ಗೆಯೂ ಸಿದ್ದಣ ಚಿಂತನೆ ಮಾಡಿಲ್ಲ. ಕನಕನ ಕ್ಷೇತ್ರ ಅಭಿವೃದ್ಧಿ ಮಾಡಿದ್ದು, ಮಾಜಿ ಸಿಎಂ ಯಡಿಯೂರಪ್ಪ ಅವರು. ನೀವು ಕುರುಬರಾಗಿ ಏನನ್ನು ಮಾಡಿದ್ರಿ? ಪರಮೇಶ್ವರನನ್ನು ಸೋಲಿಸಿ ದಲಿತರ ಬಲ ಸಮುದಾಯಕ್ಕೆ ಅನ್ಯಾಯ ಮಾಡಿದ್ರಿ. ಖರ್ಗೆ ಅವರ ವಿರುದ್ಧ ಪಿತೂರಿ ಮಾಡಿ ದಲಿತರಿಗೆ ಅನ್ಯಾಯ ಮಾಡಿದ್ರಿ. ಲಿಂಗಾಯತ ಧರ್ಮ ಒಡೆಯಲು ಹೋಗಿ ವೀರಶೈವ ಲಿಂಗಾಯತರಿಗೆ ಅನ್ಯಾಯ ಮಾಡಿದ್ದು, ಸಿದ್ದರಾಮಯ್ಯ. ಟಿಪ್ಪು ಜಯಂತಿ ಆಚರಣೆ ಮಾಡಿ ಹಿಂದೂ ಮುಸ್ಲಿಂ ಸಮುದಾಯವನ್ನು ಒಡೆದ್ರಿ. ಹಾಗಾಗ ರೈತರ ಶಾಪ ಸಿದ್ರಾಮಣ್ಣನ ಮೇಲೆ ಇದೆ ಹಾಗಾಗಿ ಮತ್ತೆ ಸಿಎಂ ಆಗಲ್ಲ ಎಂದು ಆಕ್ರೋಶ ಹೊರಹಾಕಿದರು.

    ಕಾಂಗ್ರೆಸ್ ಈ ದೇಶವನ್ನು ಮಾರಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಬರೊಬ್ಬರಿ 4 ಲಕ್ಷ ಕೋಟಿ ರೂ. ಭ್ರಷ್ಟಾಚಾರವಾಗಿದೆ. ಈ ಮೂಲಕ ದೇಶ ಮಾರಾಟ ಮಾಡಿದೆ. ದೇಶವನ್ನು ಲೂಟಿ ಮಾಡಿದೆ. ಆದರೆ ಈ ದೇಶ ಸಂಕಷ್ಟದಲ್ಲಿ ಇದ್ದಾಗ ದೇಶ ರಕ್ಷಣೆ ಮಾಡಿದ್ದು ಆರ್‌ಎಸ್‍ಎಸ್. ಕಾಂಗ್ರೆಸ್ ಕಳ್ಳಕಾಕರ ಪಕ್ಷ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಡಿ.ಕೆ.ಶಿವಕುಮಾರ್ ಎಲ್ಲರೂ ಬೇಲ್ ಮೇಲೆ ಇದ್ದಾರೆ. ಸಿದ್ದರಾಮಯ್ಯ ಅವರು ಕಳ್ಳರ ಸಂಘ ಇಟ್ಟುಕೊಂಡಿದ್ದಾರೆ. ಇಂಥವರಿಗೆ ಆರ್‌ಎಸ್‍ಎಸ್ ಬಗ್ಗೆ ಮಾತಾಡುವ ಯೋಗ್ಯತೆ, ನೈತಿಕತೆ ಎರಡೂ ಇಲ್ಲ ಎಂದು ಎಚ್ಚರಿಸಿದರು. ಇದನ್ನೂ ಓದಿ: ಮಹಿಳಾ ಶೌಚಾಲಯ ಪ್ರವೇಶಿಸಿ ಬಾಗಿಲು ಲಾಕ್ ಮಾಡಿಕೊಂಡ