Tag: Tumkur Police

  • ತುಮಕೂರು | ಕೆರೆಗೆ ಬಿದ್ದು ತಂದೆ, ಮಗಳು ಸೇರಿ ಮೂವರು ಸಾವು

    ತುಮಕೂರು | ಕೆರೆಗೆ ಬಿದ್ದು ತಂದೆ, ಮಗಳು ಸೇರಿ ಮೂವರು ಸಾವು

    ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸಮೀಪದ ಯರೇಕಟ್ಟೆ ಗ್ರಾಮದ ಕೆರೆಗೆ ಬಿದ್ದು ತಂದೆ, ಮಗಳು ಸೇರಿ ಮೂವರು ಇಂದು ಸಂಜೆ ಸಾವನ್ನಪ್ಪಿದ್ದಾರೆ.

    ಯರೇಕಟ್ಟೆ ಗ್ರಾಮದ ವೆಂಕಟೇಶ್ (47), ಮಗಳು ಶ್ರಾವ್ಯ (12) ಹಾಗೂ ವೆಂಕಟೇಶ್ ಅಣ್ಣನ ಮಗನ ಮಗಳು ಪುಣ್ಯ (11) ಮೃತ ದುರ್ದೈವಿಗಳು. ಇದನ್ನೂ ಓದಿ: ದೀಪಾವಳಿ ಸಂಭ್ರಮದಲ್ಲಿ ಅವಘಡ – ಬೆಂಗ್ಳೂರಲ್ಲಿ 68 ಮಂದಿ ಕಣ್ಣಿಗೆ ಗಾಯ

    ಸಂಜೆ 6 ಗಂಟೆಗೆ ಗ್ರಾಮದ ಬಳಿಯ ಕೆರೆ ಕಡೆ ಮೂವರು ಹೋಗಿದ್ದಾರೆ. ಕೆರೆಯಲ್ಲಿ ನೀರು ಮುಟ್ಟಲು ಹೋಗಿ ಶ್ರಾವ್ಯ ಹಾಗೂ ಪುಣ್ಯ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಮತ್ತೊಬ್ಬಳು ಬುದ್ಧಿಮಾಂದ್ಯಳಾಗಿದ್ದು ಮನೆಗೆ ಬಂದು ಕೆರೆಗೆ ಬಿದ್ದಿರುವ ವಿಷಯ ತಿಳಿಸಿದ್ದಾರೆ. ಕೂಡಲೇ ವೆಂಕಟೇಶ್ ಹಾಗೂ ಮಂಜುನಾಥ್ ರಕ್ಷಣೆಗೆ ತೆರಳಿದ್ದಾರೆ. ಈ ವೇಳೆ ವೆಂಕಟೇಶ್ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ವೆಂಕಟೇಶ್ ಹಾಗೂ ಶ್ರಾವ್ಯ ಮೃತಪಟ್ಟಿದ್ದರೆ, ಪುಣ್ಯ ಹುಳಿಯಾರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

    ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಭಾರತೀಯ ಸೇನೆಗೆ ಬ್ರಹ್ಮೋಸ್ ಕ್ಷಿಪಣಿ ಬ್ರಹ್ಮಾಸ್ತ್ರ – ಶೀಘ್ರದಲ್ಲೇ ಮಿಸೈಲ್ ಸಾಮರ್ಥ್ಯ 800 ಕಿಮೀಗೆ ಹೆಚ್ಚಳ

  • ಹೆಣ್ಣು ಮಗುವಿಗೆ ಜನ್ಮ ನೀಡಿದ 15ರ ಬಾಲಕಿ – ರೇಪ್‌ ಆರೋಪಿ ಅರೆಸ್ಟ್‌

    ಹೆಣ್ಣು ಮಗುವಿಗೆ ಜನ್ಮ ನೀಡಿದ 15ರ ಬಾಲಕಿ – ರೇಪ್‌ ಆರೋಪಿ ಅರೆಸ್ಟ್‌

    ತುಮಕೂರು: 15 ವರ್ಷದ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆಕೆ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಲು ಕಾರಣನಾದ ಆರೋಪದ ಮೇಲೆ ವಿನಯ್ (21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

    ಬಾಲಕಿ ಮತ್ತು ಯುವಕ ಅಕ್ಕಪಕ್ಕದ ಮನೆಯ ನಿವಾಸಿಗಳು. ‘ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ ವಿನಯ್ ವಿರುದ್ಧ ಕ್ರಮ ಕೈಗೊಳ್ಳುವಂತೆ’ ಕೋರಿ ಬಾಲಕಿ ತಾಯಿ ನೀಡಿದ ದೂರಿನ ಮೇರೆಗೆ ಕುಣಿಗಲ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

    ಮಗಳ ಆರೋಗ್ಯ ಸರಿ ಇಲ್ಲದಿದ್ದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಆಗ 8 ತಿಂಗಳ ಗರ್ಭಿಣಿ ಎಂಬುವುದು ಗೊತ್ತಾಯಿತು. ಆಕೆಯನ್ನು ವಿಚಾರಿಸಿದಾಗ ಎಲ್ಲ ವಿಷಯ ಹೇಳಿದಳು. ಕೂಡಲೇ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ ಎಂದು ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  • ಮಂಜುನಾಥಸ್ವಾಮಿಗೆ ಬೆದರಿಕೆ – ತುಮಕೂರಿನಲ್ಲಿ ಯೂಟ್ಯೂಬರ್‌ ಅರೆಸ್ಟ್‌

    ಮಂಜುನಾಥಸ್ವಾಮಿಗೆ ಬೆದರಿಕೆ – ತುಮಕೂರಿನಲ್ಲಿ ಯೂಟ್ಯೂಬರ್‌ ಅರೆಸ್ಟ್‌

    ತುಮಕೂರು: ಕುಣಿಗಲ್ ತಾಲ್ಲೂಕಿನ ಹಂಗರಹಳ್ಳಿ ವಿದ್ಯಾ ಚೌಡೇಶ್ವರಿ ಮಠದ ಬಾಲ ಮಂಜುನಾಥಸ್ವಾಮಿಗೆ ಬೆದರಿಕೆ ಹಾಕಿ 25 ಲಕ್ಷ ರೂ.ಗೆ ಬೇಡಿಕೆ ಇಟ್ಟ ಆರೋಪದಲ್ಲಿ ತುಮಕೂರಿನ ಯೂಟ್ಯೂಬರ್‌ (Youtuber) ಸುಧೀಂದ್ರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

    ಸುಧೀಂದ್ರ ಜನವರಿ 21 ರಿಂದಲೂ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಜೂನ್ 28ರಂದು ಮಠದ ಸಿಬ್ಬಂದಿ ಅಭಿಲಾಷ್, ಸುರೇಶ್ ಮತ್ತು ಭಕ್ತರಾದ ಬೀಚನಹಳ್ಳಿ ಕರಿಗೌಡ ಅವರನ್ನು ಸಂಪರ್ಕಿಸಿ ಮಠಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಹೊಂದಿದ್ದು, ಅವುಗಳನ್ನು ಪ್ರಕಟಿಸಿದರೆ ಮಠದ ಹೆಸರು ಹಾಳಾಗುತ್ತದೆ. ಇದನ್ನು ಪ್ರಸಾರ ಮಾಡದಿರಲು 25 ಲಕ್ಷ ರೂ. ನೀಡಿ ಎಂದು ಬೆದರಿಕೆ ಹಾಕಿದ್ದ ಎಂದು ಸ್ವಾಮೀಜಿ ದೂರಿದ್ದಾರೆ. ಇದನ್ನೂ ಓದಿ: ಸೆ.3-4ಕ್ಕೆ ಜಿಎಸ್‌ಟಿ ಕೌನ್ಸಿಲ್ ಸಭೆ; ಮೋದಿಯ ದೀಪಾವಳಿ ಗಿಫ್ಟ್ ಘೋಷಣೆಯ ಬಗ್ಗೆ ಸಭೆಯಲ್ಲಿ ಅಂತಿಮ ನಿರ್ಧಾರ

    ಹಣ ನೀಡದ ಕಾರಣ ಜುಲೈ 10ರಂದು ಸುಧೀಂದ್ರ ತನ್ನ ಯೂಟೂಬ್ ಚಾನಲ್‌ನಲ್ಲಿ ಪುಣ್ಯ ಕ್ಷೇತ್ರ- ಕ್ಷೇತ್ರ ಪಾಪಿ ಬಾಲ ಮೌಡ್ಯ ಲೀಲೆ- ಭಾಗ-1 ನಂತರ 17ರಂದು ಭಾಗ- 2 ಪ್ರಸಾರ ಮಾಡಿದ್ದಾನೆ. ಇವೆಲ್ಲವೂ ಕಲ್ಪಿತ ಮತ್ತು ಆಧಾರ ರಹಿತ ಆರೋಪ. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಾಲಮಂಜುನಾಥ ಸ್ವಾಮೀಜಿ ನೀಡಿದ್ದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸ್ವತಃ ದೇವರೇ ಹೇಳಿದ್ರೂ ಮತ್ತೆ ಚುನಾವಣೆಗೆ ನಿಲ್ಲಲ್ಲ: ಕೇಂದ್ರ ಸಚಿವ ವಿ.ಸೋಮಣ್ಣ ರಾಜಕೀಯ ನಿವೃತ್ತಿ ಮಾತು

  • Exclusive | ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ಕೇಸ್‌ – ಆಡಿಯೋದಲ್ಲಿ ಬಯಲಾಯ್ತು ಸಂಚಿನ ರಹಸ್ಯ

    Exclusive | ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ಕೇಸ್‌ – ಆಡಿಯೋದಲ್ಲಿ ಬಯಲಾಯ್ತು ಸಂಚಿನ ರಹಸ್ಯ

    ಬೆಂಗಳೂರು: ಸಚಿವ ಕೆ.ಎನ್‌ ರಾಜಣ್ಣ ಪುತ್ರನೂ ಆಗಿರುವ ಎಂಎಲ್‌ಸಿ ರಾಜೇಂದ್ರ (Rajendra Rajanna) ಹತ್ಯೆಗೆ ಸುಪಾರಿ ನೀಡಿದ್ದ ಪ್ರಕರಣದ ತನಿಖೆಯನ್ನು ಪೊಲೀಸರು (Tumakuru Police) ಚುರುಕುಗೊಳಿಸಿದ್ದಾರೆ. ಈ ನಡುವೆಯೇ ಸುಪಾರಿಗೆ ಸಂಚು ರೂಪಿಸಿದ್ದ ಸ್ಫೋಟಕ ಆಡಿಯೋ ʻಪಬ್ಲಿಕ್‌ ಟಿವಿʼಗೆ ಲಭ್ಯವಾಗಿದೆ.

    ರಾಜೇಂದ್ರ ರಾಜಣ್ಣ ಅವರು, ತುಮಕೂರು ಎಸ್ಪಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿ ಪೆನ್‌ಡ್ರೈವ್‌ನಲ್ಲಿ ನೀಡಿದ್ದ ಆಡಿಯೋ ಈಗ ʻಪಬ್ಲಿಕ್‌ ಟಿವಿʼಗೆ ಲಭ್ಯವಾಗಿದೆ. ಈ ಆಡಿಯೋದಲ್ಲಿ ಸುಪಾರಿ ಸಂಚಿನ ಇಂಚಿಂಚೂ ಮಾಹಿತಿ ಬಯಲಾಗಿದೆ. ತನ್ನ ಹತ್ಯೆಗೆ ಸುಪಾರಿ ನೀಡಿದ್ದ ವಿಚಾರ ರಾಜೇಂದ್ರ ರಾಜಣ್ಣ ಅವರಿಗೆ ತಿಳಿದಿದ್ದು ಸಹ ಇದೇ ಆಡಿಯೋದಿಂದ ಅನ್ನೋದು ಗೊತ್ತಾಗಿದೆ. ಇದನ್ನೂ ಓದಿ: ಸಚಿವ ರಾಜಣ್ಣ ಪುತ್ರನ ಹತ್ಯೆಗೆ ಯತ್ನ ಕೇಸ್‌ – 18 ನಿಮಿಷಗಳ ಸುಪಾರಿ ಆಡಿಯೋ FSLಗೆ

    ಇದೇ ಆಡಿಯೋ ಆಧರಿಸಿ ರಾಜೇಂದ್ರ ಅವರು ದೂರು ದಾಖಲಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಪುಷ್ಪಾ ಹಾಗೂ ರಾಕಿ ಎನ್ನುವವರ ನಡುವೆ ಸಂಭಾಷಣೆ ನಡೆದಿತ್ತು. ಈ ಆಡಿಯೋನಲ್ಲಿ ಪ್ರಕರಣದ ಎ1 ಆರೋಪಿ ಸೋಮನ ಪ್ಲ್ಯಾನ್‌ ಬಗ್ಗೆ ಪುಷ್ಪಾ ಎನ್ನುವ ಮಹಿಳೆ ಇಂಚಿಂಚೂ ಮಾಹಿತಿಯನ್ನ ಬಿಚ್ಚಿಟ್ಟಿದ್ದಾಳೆ.  ಇದನ್ನೂ ಓದಿ: ನನ್ನ ಕೊಲೆಗೆ 70 ಲಕ್ಷ ಸುಪಾರಿ ಕೊಡಲಾಗಿದೆ – ತುಮಕೂರು ಎಸ್ಪಿಗೆ ಸಚಿವ ರಾಜಣ್ಣ ಪುತ್ರ ದೂರು

    ಆರೋಪಿ ಸೋಮ ರಾಜೇಂದ್ರರನ್ನ ಹತ್ಯೆ ಮಾಡಲು ಸುಪಾರಿ ಪಡೆದಿರುವುದಾಗಿ ಪುಷ್ಪಾಳ ಬಳಿ ಹೇಳಿಕೊಂಡಿದ್ದಾನೆ. ಆ ಬಳಿಕವೇ ಪುಷ್ಪಾ ಸುಪಾರಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿದ್ದಳು. ಸೋಮನ ಜೊತೆಗಿದ್ದುಕೊಂಡೇ ಕೊಲೆ ಸಂಚಿನ ಮಾಹಿತಿ ಕಲೆಹಾಕಿದ್ದಳು, ಬಳಿಕ ಈ ವಿಚಾರವನ್ನ ರಾಜೇಂದ್ರ ಅವರಿಗೆ ತಿಳಿಸಲು ಪುಷ್ಪಾ ಮುಂದಾಗಿದ್ದಾಳೆ. ರಾಜೇಂದ್ರ ಅವರಿಗೆ ವಿಷಯ ತಿಳಿಸಲು ರಾಕಿ ಎನ್ನುವ ಹುಡುಗನ್ನ ಬಳಸಿಕೊಂಡಿದ್ದಾಳೆ. ಅದಕ್ಕಾಗಿ ಕೊಲೆ ಸಂಚಿನ ಬಗ್ಗೆ ಪುಷ್ಪ ಹೇಳಿದ್ದನ್ನ ರಾಕಿ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದ. ಬಳಿಕ ರಾಜೇಂದ್ರ ಅವರಿಗೆ ಈ ಆಡಿಯೋವನ್ನ ತಲುಪಸಿಲಾಗಿತ್ತು. ಆಡಿಯೋ ಕೇಳಿದ ಎಂಎಲ್‌ಸಿ ಶಾಕ್‌ ಆಗಿದರು, ಕೂಡಲೇ ಅಲರ್ಟ್ ಆದರು. ಬಳಿಕ ತುಮಕೂರು ಎಸ್ಪಿ ಬಳಿ ದೂರು ದಾಖಲಿಸಿದ್ದಾರೆ.

    ಸದ್ಯ ಆಡಿಯೋ ಪಡೆದುಕೊಂಡಿರುವ ಪೊಲೀಸರು ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಆರೋಪಿ ಸೋಮ, ಭರತ್, ಅಮಿತ್, ಗುಂಡಾ, ಯತೀಶ್ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ತುಮಕೂರು ಜಿಲ್ಲಾ ಕಾಂಗ್ರೆಸ್‌ನಲ್ಲಿ ಶೀತಲ ಸಮರ; ಡಾ.ರಂಗನಾಥ್-ರಾಜಣ್ಣ ಕುಟುಂಬ ನಡುವೆ ವಾರ್

    ಸ್ಫೋಟಕ ಮಾಹಿತಿ ನೀಡಿದ ಪುಷ್ಪಾ:
    ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿದ ವಿಚಾರದ ಬಗ್ಗೆ ಆಡಿಯೋನಲ್ಲಿ ಕೇಳಿಬಂದಿರುವ ಪುಷ್ಪಾ ಎಂಬ ಮಹಿಳೆ ಸ್ಪೋಟಕ ಮಾಹಿತಿ ಹಂಚಿಕೊಂಡಿರುವುದು ಬಯಲಾಗಿದೆ. ಕಳೆದ ನವೆಂಬರ್‌ನಲ್ಲಿ ರಾಜೇಂದ್ರ ಅವರ ಮಗಳ ಬರ್ತ್‌ಡೇ ಡೆಕೋರೇಷನ್‌ಗೆ ಜೈಪುರದ ಇಬ್ಬರು ಹುಡುಗರು ಬಂದಿದ್ದರು. ಆ ಇಬ್ಬರನ್ನೂ ಸೋಮ ಕಳುಹಿಸಿದ್ದ, ಆಗಲೇ ಹತ್ಯೆಗೆ ಯತ್ನ ನಡೆದಿತ್ತು ಅಂತ ಆಡಿಯೋನಲ್ಲಿ ಪುಷ್ಪಾ ಮಾಹಿತಿ ನೀಡಿದ್ದಾಳೆ. ಅಲ್ಲದೇ ಸೋಮನಿಗೆ 5 ಲಕ್ಷ ಹಣ ಬಂದಿರೋದು ಸತ್ಯ ಸತ್ಯ ಸತ್ಯ. ಪೊಲೀಸರು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ರೆ ಎಲ್ಲಾ ಗೊತ್ತಾಗುತ್ತೆ. ರಾಜೆಂದ್ರ ಅವ್ರ ಮುಂದೆ ನಾನೇ ಹೇಳ್ತೀನಿ, ನನ್ನ ಕರೆದುಕೊಂಡು ಹೋಗು ಅಂತ ರಾಕಿ ಎನ್ನುವವನೊಂದಿಗೆ ಪುಷ್ಪಾ ಹೇಳಿಕೊಂಡಿದ್ದಾಳೆ. ಜೊತೆಗೆ ಜೈಪುರದ ಮತ್ತೋರ್ವ ರೌಡಿಶೀಟರ್ ಪ್ರಸಿಯನ್ನೂ ಮರ್ಡರ್ ಮಾಡೋದಾಗಿ ಸೋಮ ಹೇಳಿದ್ದಾನೆ. ಅದಕ್ಕಾಗಿ ಬೆಂಗಳೂರಿನ ಕಲಾಸಿಪಾಳ್ಯದಿಂದ ಇಬ್ಬರು ತಮಿಳು ಹುಡುಗರನ್ನ ಸೋಮ ಕರೆಸಿಕೊಳ್ತಿದ್ದಾನೆ. ಜೈಲಿನಲ್ಲಿರುವ ಸ್ಟೀಫನ್ ಗುಂಡನನ್ನ ಪೆರೋಲ್ ಮೇಲೆ ಕರೆದುಕೊಂಡು ಬರಲು ಸೋಮ ಪ್ಲಾನ್ ಮಾಡಿದ್ದಾನೆ. ಅವನನ್ನ ಕರೆಸಿ ನೆಟ್‌ವರ್ಕ್ ಇಲ್ದೇ ಇರೋ ಜಾಗದಲ್ಲಿ ಇಡೋಕೆ ಮನೆ ಮಾಡ್ತಿದ್ದಾನೆ ಈ ಬಗ್ಗೆಯೂ ಆಡಿಯೋನಲ್ಲಿ ಪುಷ್ಪಾ ಎನ್ನುವ ಮಹಿಳೆ ಮಾಹಿತಿ ನೀಡಿದ್ದಾಳೆ. ಇದನ್ನೂ ಓದಿ: ಹನಿಟ್ರ್ಯಾಪ್‌ ಮಾಡಲು ಬಂದವರಿಗೆ ಕಪಾಳಕ್ಕೆ ಹೊಡೆದಿದ್ದು ನಿಜ – ವಿಷ ಕನ್ಯೆಯರ ರಹಸ್ಯ ಹೇಳಿದ ರಾಜಣ್ಣ

    ಆಡಿಯೋ ಸಂಭಾಷಣೆಯಲ್ಲಿ ರಹಸ್ಯ ಸ್ಫೋಟ

    ಪುಷ್ಪಾ: ಅಣ್ಣ ಏನಂತು..?
    ರಾಕಿ: ಏನ್ ವಿಷಯ ಹೇಳಬೇಕು.. ಎತ್ತಾ ಅಂತಾ..

    ಪುಷ್ಪಾ: ಸೋಮ ಈ ರೀತಿ ಎಲ್ಲಾ ಮಾಡ್ತಿದ್ದಾನೆ ಸಾರ್.. ಕಿವಿಗೆ ಬಿದ್ದಂತೆ.. ಆ ಹುಡುಗಿನೇ ಬಂದು ಹೇಳ್ತಾಳೆ ಸರ್.. ನಂಬಿಕೆ ಇಲ್ಲಾ ಅಂದ್ರೆ, ಅವಳ ಕಿವಿಗೆ ಬಿದ್ದಿರೋದನ್ನು ಹೇಳ್ತಾಳೆ ಸರ್ ಅನ್ನಿ.. ಸುಳ್ಳು ಪಳ್ಳು ಹೇಳಲ್ಲ… ಅವಳು ಇರೋದನ್ನು ಹೇಳ್ತಾಳೆ.. ಚಿಕ್ಕವರಿಂದ ನೋಡಿದ್ದೀವಿ ಹೇಳಿ ಅಂತಾ ಹೇಳಿ… ನಮಗೇನು ಆಗಬೇಕಿಲ್ಲ… ನಮಗೇನು ಆಸ್ತಿನೂ ಇದೆ… ಆ ವಯ್ಯಗೆ ಬಂದು ಹೇಳಿದ್ರೆ, ನಮಗೇನು ಕೊಡಲ್ಲ.. ಒಟ್ನಲ್ಲಿ ಈ ತರ ಮಾತನಾಡ್ಕೊಂಡಿರೋದು ಸತ್ಯ… ಅವನ ಮೇಲೆ ಒಂದು ಕಣ್ಣಿಡಿ ಸರ್.. ಪೊಲೀಸ್ ಅವರಿಗೆ ಹೇಳಿ.. ಅದರ ಮೇಲೆ ಅವನಿಷ್ಟ..

    ರಾಕಿ: ಅಡ್ವಾನ್ಸ್ ಬಂದಿರೋದು ನಿಜಾನಾ..?
    ಪುಷ್ಪಾ: ಹೌದು ನಮ್ಮ ಅಮ್ಮನ ಮೇಲೆ ಆಣೆ ಬಂದಿದೆ.. 5 ಲಕ್ಷ ಎಲ್ಲಿಂದ ಬಂತು ಅಂತಾ ತನಿಖೆ ಆಗಲಿ..

    ಪುಷ್ಪಾ: ಅಮಿತ್ ಮಾತ್ರ ಇರೋದು… ಎಲ್ಲಾ ಗೊತ್ತು, ಈ ನನ್ಮಂಗನ್ನ ಎತ್ತಾಕ್ಕೊಂಡು ಹೋದ್ರೆ ಎಲ್ಲಾ ಬಾಯಿ ಬಿಡ್ತಾನೆ…
    ರಾಕಿ: ಅವನು ಬಾಯಿ ಬಿಡಲ್ಲ..

    ಪುಷ್ಪಾ: ಅವನ ಜೀವ ಹೋದ್ರೂ ಅವನು ಬಾಯಿ ಬಿಡಲ್ಲ. ಅದಂತೂ ಸತ್ಯ.. ಅವನಿಗೆ ಎಲ್ಲಾ ಗೊತ್ತು… ಅವನ ಬಾಸ್‌ಗೋಸ್ಕರ ಜೈಲಿಗೋದ್ರೂ ಇದ್ದುಬಿಡ್ತಿನಿ ಅಂತಾನೆ… ಇವನನ್ನು ಎತ್ತಿ ಬಿಟ್ಟರೆ, ನಮ್ಮ ಬಾಸ್ ಜೈಪುರದಲ್ಲಿ ದೊಡ್ಡವರು ಅಂದವ್ನೆ.. ಇದನ್ನು ನಾನು ಅಣ್ಣಂಗೆ ಹೇಳೇ ಹೇಳ್ತಿನಿ… ಹಿಂಗೇ ಅಂದ ಅಣ್ಣ ಅಂತಾ ಹೇಳ್ತಿನಿ ನಾನು.. ಇವರ ಮುಂದೆ ಕರೆದುಕೊಂಡು ಹೋಗಪ್ಪಾ ನಿಂಗ್ಯಾಕೆ ನಾನು ಹೇಳೇ ಹೇಳ್ತಿನಿ…

  • Tumkur | ಗೌರಿ-ಗಣೇಶ ಹಬ್ಬ ಮುಗಿಸಿಕೊಂಡು ಬರುತ್ತಿದ್ದ ವೇಳೆ ಕಾರು ಅಪಘಾತ – ಐವರು ದಾರುಣ ಸಾವು!

    Tumkur | ಗೌರಿ-ಗಣೇಶ ಹಬ್ಬ ಮುಗಿಸಿಕೊಂಡು ಬರುತ್ತಿದ್ದ ವೇಳೆ ಕಾರು ಅಪಘಾತ – ಐವರು ದಾರುಣ ಸಾವು!

    ತುಮಕೂರು: ಗೌರಿ-ಗಣೇಶ ಹಬ್ಬ ಮುಗಿಸಿಕೊಂಡು ವಾಪಸ್‌ ಮನೆಗೆ ಬರುತ್ತಿದ್ದ ವೇಳೆ ಭೀಕರ ಕಾರು ಅಪಘಾತದಲ್ಲಿ (Car Accident) ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು ಐವರು ದಾರುಣ ಸಾವಿಗೀಡಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಒಂದು ಕಾರಿನಲ್ಲಿ ಮೂವರು, ಮತ್ತೊಂದು ಕಾರಿನಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.

    ತುಮಕೂರು (Tumkur) ಜಿಲ್ಲೆಯ ಮಧುಗಿರಿ ತಾಲೂಕಿನ ಕೆರೆಗಳಪಾಳ್ಯ ಹಾಗೂ ಕಾಟಗಾನಹಟ್ಟಿ ಬಳಿ ಘಟನೆ ನಡೆದಿದ್ದು, ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಇನ್ನುಳಿದವರ ಹೆಸರು ಪತ್ತೆಯಾಗಿಲ್ಲ, ಅಪಘಾತಕ್ಕೀಡಾದವರ ಪೈಕಿ ಕಾರಿನಲ್ಲಿದ ಮತ್ತೋರ್ವ ಮಹಿಳೆ ಮತ್ತು ಓರ್ವ ಬಾಲಕನ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕುಸ್ತಿಪಟುಗಳ ಬಗ್ಗೆ ಮಾತನಾಡಬೇಡಿ – ಬ್ರಿಜ್ ಭೂಷಣ್ ಸಿಂಗ್‍ಗೆ ಬಿಜೆಪಿ ಎಚ್ಚರಿಕೆ

    ತುಮಕೂರು ಕಡೆಯಿಂದ ಬರುತ್ತಿದ್ದ ಸಿಯಾಜ್ ಮಾರುತಿ ಕಾರು ಹಾಗೂ ಮಧುಗಿರಿ ಕಡೆಯಿಂದ ತುಮಕೂರು ಕಡೆಗೆ ಹೊರಟಿದ್ದ ಟಾಟಾ ಟಿಯಾಗೋ ಕಾರಿನ ನಡುವೆ ಅಫಘಾತ ಸಂಭವಿಸಿದೆ. ಸ್ಥಳಕ್ಕೆ ತುಮಕೂರು ಎಸ್ಪಿ ಕೆ.ವಿ ಅಶೋಕ್ ಹಾಗೂ ಮಧುಗಿರಿ ಠಾಣೆ ಪಿಎಸ್‌ಐ ವಿಜಯ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಂತರ ಅಪಘಾತಕ್ಕೀಡಾದ ಕಾರುಗಳನ್ನ ಸ್ಥಳದಿಂದ ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.  ಇದನ್ನೂ ಓದಿ: ಕ್ರಿಶ್ಚಿಯನ್ ಧರ್ಮದ ಉನ್ನತೀಕರಣಕ್ಕೆ ಸರ್ಕಾರದಿಂದ ಅಗತ್ಯ ಸಹಕಾರ – 5 ಕೋಟಿ ಅನುದಾನ ಘೋಷಿಸಿದ ಸಿಎಂ

    ಐವರ ದಾರುಣ ಸಾವು:
    ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು ಐವರು ಸಾವನ್ನಪ್ಪಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ. ಪಾವಗಡ ತಾಲೂಕಿನ ಎತ್ತಿನಹಳ್ಳಿ ಗ್ರಾಮದ ಯೋಗೆಶ್, ಯೋಗೆಶ್ ಪುತ್ರಿ ಸಿಂಧೂ (12) ಸೇರಿ ಒಂದೇ ಕುಟುಂಬದ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಇಂದು ರಾತ್ರಿಯೇ ಡಿಸಿಎಂ ಡಿಕೆಶಿ ಅಮೆರಿಕ ಪ್ರವಾಸ – ಕಮಲಾ ಹ್ಯಾರಿಸ್‌ರಿಂದ ಬಂತು ವಿಶೇಷ ಆಹ್ವಾನ?

    ಅಪಘಾತ ಆಗಿದ್ದು ಹೇಗೆ?
    ಮೃತ ಯೋಗೇಶ್‌ ಕುಟುಂಬಸ್ಥರು ಗೌರಿ-ಗಣೇಶ ಹಬ್ಬಕ್ಕೆಂದು ಊರಿಗೆ ತೆರಳಿದ್ದರು. ಬೆಂಗಳೂರಿನ ಜೆಪಿ ನಗರದಲ್ಲಿ ವಾಸವಾಗಿದ್ದ ಯೋಗೇಶ್‌ ಕುಟುಂಬ ಭಾನುವಾರ ಹಬ್ಬ ಮುಗಿಸಿಕೊಂಡು ವೈ.ಎನ್ ಹೊಸಕೋಟೆ ಕಡೆಯಿಂದ ಬೆಂಗಳೂರಿಗೆ ಹೊರಟಿತ್ತು. ಇತ್ತ ಮೃತ ನಾಗರಾಜ್ ಕೊರಟಗೆರೆ ಕಡೆಯಿಂದ ಮಧುಗಿರಿ ಕಡೆಗೆ ತೆರಳಿದ್ದರು. ಮಧುಗಿರಿ ತಾಲೂಕಿನ ಕಾಟಗಾನಹಟ್ಟಿ ಹಾಗೂ ಕೆರೆಗಳಪಾಳ್ಯ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಎರಡು ಕಾರಗಳು ಸಂಪೂರ್ಣ ಜಖಂ ಆಗಿವೆ.

  • ತನಿಖೆ ನೆಪದಲ್ಲಿ ಠಾಣೆಗೆ ಕರೆತಂದು ಹಲ್ಲೆ ಆರೋಪ; ಡಿವೈಎಸ್‌ಪಿ ಸೇರಿ ನಾಲ್ವರು ಪೊಲೀಸರ ವಿರುದ್ಧ ಪ್ರಕರಣ!

    ತನಿಖೆ ನೆಪದಲ್ಲಿ ಠಾಣೆಗೆ ಕರೆತಂದು ಹಲ್ಲೆ ಆರೋಪ; ಡಿವೈಎಸ್‌ಪಿ ಸೇರಿ ನಾಲ್ವರು ಪೊಲೀಸರ ವಿರುದ್ಧ ಪ್ರಕರಣ!

    ತುಮಕೂರು: ತನಿಖೆ ನೆಪದಲ್ಲಿ ಠಾಣೆಗೆ ಕರೆತಂದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಮೇರೆಗೆ ಕುಣಿಗಲ್ ಡಿವೈಎಸ್‌ಪಿ ಓಂಪ್ರಕಾಶ್, ಅಮೃತೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮಾದವನಾಯಕ್, ಸಬ್‌ಇನ್‌ಸ್ಪೆಕ್ಟರ್ ಶವಂತ್‌ಗೌಡ, ಹೆಡ್ ಕಾನ್‌ಸ್ಟೇಬಲ್ ದಯಾನಂದ್ ವಿರುದ್ಧ ಕುಣಿಗಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ತಾಲ್ಲೂಕಿನ ಹೊನ್ನಮಾಚನಹಳ್ಳಿ ಗ್ರಾಮ ಪಂಚಾಯಿತಿ ವಾಟರ್‌ಮ್ಯಾನ್ ಪಿ.ಜಿ ಗಂಗಾಧರ್ ಎಂಬುವರು ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕ್ರಿಮಿನಲ್‍ಗಳಿಗೆ ಇಲಾಖೆ ಮಾಹಿತಿ ರವಾನೆ – ಐವರು ಪೊಲೀಸ್ ಸಿಬ್ಬಂದಿ ಅಮಾನತು

    ‘ಮಾರ್ಚ್ 21ರಂದು ವಾಟರ್‌ಮ್ಯಾನ್ ಕೆಲಸಕ್ಕೆ ಹೋಗುವಾಗ ರಾಘವನ ಹೊಸೂರು ಕ್ರಾಸ್ ಬಳಿ ಸಬ್‌ಇನ್‌ಸ್ಪೆಕ್ಟರ್ ಶವಂತ್‌ಗೌಡ, ಹೆಡ್ ಕಾನ್‌ಸ್ಟೇಬಲ್ ದಯಾನಂದ್ ನನ್ನನ್ನು ತಡೆದು ನಿಲ್ಲಿಸಿ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಬೇಕಿದೆ ಎಂದು ಕುಣಿಗಲ್‌ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಅಲ್ಲಿ ಎಲ್ಲರೂ ಸೇರಿ ಹೊಡೆದಿದ್ದಾರೆ. ಹಲ್ಲೆಯ ನಂತರ ಅಮೃತೂರು ಠಾಣೆಗೆ ಕರೆದುಕೊಂಡು ಬಂದು ಸಂಜೆ 5.30 ಗಂಟೆ ವರೆಗೆ ವಶದಲ್ಲಿ ಇಟ್ಟುಕೊಂಡಿದ್ದರು ಎಂದು ಗಂಗಾಧ‌ರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಸ್ನೇಹಿತರಾದ ನವೀನ, ಶಿವಕುಮಾರ್ ಮುಖಾಂತರ ನಮ್ಮ ಕುಟುಂಬದವರಿಗೆ ಈ ಮಾಹಿತಿ ತಿಳಿದಿದೆ. ನಂತರ ಅಮೃತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು, ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಾಗಿದ್ದೆ ಎಂದು ಸಹ ತಿಳಿಸಿದ್ದಾರೆ.

    ಈ ಸಂಬಂಧ ದೂರು ದಾಖಲಿಸಿಕೊಳ್ಳಲು ನಿರ್ದೇಶನ ನೀಡುವಂತೆ ಕೋರಿ ಜೆಎಂಎಫ್‌ಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಕೋರ್ಟ್ ಆದೇಶದ ಮೇಲೆ ದೂರು ದಾಖಲಾಗಿದೆ. ಇದನ್ನೂ ಓದಿ: ಡಿಕೆಸು ಸೋಲಿಗೆ ಸಿದ್ದರಾಮಯ್ಯ & ಟೀಂ ಕಾರಣ: ಹೊಸ ಬಾಂಬ್ ಸಿಡಿಸಿದ ಸುರೇಶ್ ಗೌಡ