Tag: Tumakuru jail

  • ರೇಣುಕಾಸ್ವಾಮಿ ಕೊಲೆ ಪ್ರಕರಣ – ಬೇಲ್ ಸಿಕ್ಕರೂ ಆರೋಪಿ ರವಿಶಂಕರ್‌ಗೆ ಇಲ್ಲ ಬಿಡುಗಡೆ ಭಾಗ್ಯ

    ರೇಣುಕಾಸ್ವಾಮಿ ಕೊಲೆ ಪ್ರಕರಣ – ಬೇಲ್ ಸಿಕ್ಕರೂ ಆರೋಪಿ ರವಿಶಂಕರ್‌ಗೆ ಇಲ್ಲ ಬಿಡುಗಡೆ ಭಾಗ್ಯ

    ತುಮಕೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಎ8 ಆರೋಪಿಯಾಗಿ ತುಮಕೂರು ಜಿಲ್ಲಾ ಕಾರಾಗೃಹದಲ್ಲಿರುವ ರವಿಶಂಕರ್‌ಗೆ ಜಾಮೀನು (Bail) ಮಂಜೂರಾಗಿ 6 ದಿನ ಕಳೆದರೂ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.

    ಡಿ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ನಡೆಸಿ 57ನೇ ಸಿಸಿಹೆಚ್ ನ್ಯಾಯಾಲಯ ಕಳೆದ ಸೋಮವಾರ ಆರೋಪಿ ರವಿಶಂಕರ್‌ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಅಲ್ಲದೇ 2 ಲಕ್ಷ ರೂ. ಬಾಂಡ್ ಹಾಗೂ ಇಬ್ಬರ ಶ್ಯೂರಿಟಿಯನ್ನೂ ನ್ಯಾಯಾಲಯ ಕೇಳಿದೆ. ಆದರೆ ಶ್ಯೂರಿಟಿದಾರರು ಸಿಗದೇ ರವಿಶಂಕರ್ ಕುಟುಂಬ ಪರದಾಡುತ್ತಿದೆ. ಇದನ್ನೂ ಓದಿ: ಇಸ್ರೇಲ್‌ ಅಧ್ಯಕ್ಷ ನೆತನ್ಯಾಹು ನಿವಾಸದ ಮೇಲೆ ಹಿಜ್ಬುಲ್ಲಾ ಡ್ರೋನ್‌ ದಾಳಿ

    ಇಂದು ಬಹುತೇಕ ಶ್ಯೂರಿಟಿ ಪ್ರಕ್ರಿಯೆ ಮುಗಿಯುವ ಸಾಧ್ಯತೆಯಿದ್ದು, ಪ್ರಕ್ರಿಯೆ ಮುಗಿದ ಬಳಿಕ ತುಮಕೂರು ಜೈಲಾಧಿಕಾರಿಗೆ ಮೇಲ್ ಮೂಲಕ ಜಾಮೀನು ಪ್ರತಿ ತಲುಪಲಿದೆ. ಜಾಮೀನು ಪ್ರತಿ ಜೈಲಾಧಿಕಾರಿಗೆ ತಲುಪಿದ ಬಳಿಕ ಆರೋಪಿ ರವಿಶಂಕರ್ ಬಿಡುಗಡೆಯಾಗುವ ಸಾಧ್ಯತೆಯಿದೆ. ಬಹುತೇಕ ಇಂದು (ಶನಿವಾರ) ಸಂಜೆ ಒಳಗೆ ಆರೋಪಿ ರವಿಶಂಕರ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಮುಡಾ ಫೈಲ್‌ಗಳನ್ನು ಸುಟ್ಟು ಹಾಕಿರುವ ಬೈರತಿ ಸುರೇಶ್‌ರನ್ನು ಕೂಡಲೇ ಬಂಧಿಸಿ – ಶೋಭಾ ಕರಂದ್ಲಾಜೆ

  • ರೇಣುಕಾಸ್ವಾಮಿ ಕೊಲೆ ಪ್ರಕರಣ – ತುಮಕೂರು ಜೈಲಿನಿಂದ ಮೂವರು ರಿಲೀಸ್!

    ರೇಣುಕಾಸ್ವಾಮಿ ಕೊಲೆ ಪ್ರಕರಣ – ತುಮಕೂರು ಜೈಲಿನಿಂದ ಮೂವರು ರಿಲೀಸ್!

    – ಜಾಮೀನು ಆದೇಶ ಬಳಿಕ ಶ್ಯೂರಿಟಿಗಾಗಿ 9 ದಿನಗಳ ಕಾಲ ಪರದಾಡಿದ್ದ ಕುಟುಂಬಸ್ಥರು

    ತುಮಕೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಹಿನ್ನೆಲೆ ಜಾಮೀನು ಸಿಕ್ಕ ಬಳಿಕವೂ ಬಿಡುಗಡೆಯಾಗದೇ ಪರದಾಡುತ್ತಿದ್ದ ಮೂವರು ಆರೋಪಿಗಳು ಇಂದು (ಅ.2) ತುಮಕೂರು ಜೈಲಿನಿಂದ (Tumkuru Jail) ಬಿಡುಗಡೆಯಾಗಿದ್ದಾರೆ.

    ಸೆ.23 ರಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಮೂವರು ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್, ಹಾಗೂ ನಿಖಿಲ್‌ಗೆ ಷರತ್ತುಬದ್ಧ ಜಾಮೀನು ದೊರೆತಿತ್ತು.ಇದನ್ನೂ ಓದಿ: Israel | ಜಾಫಾದಲ್ಲಿ ಉಗ್ರರಿಂದ ಮನ ಬಂದಂತೆ ಗುಂಡಿನ ದಾಳಿಗೆ 8 ಬಲಿ

    ಎ-16 ಆರೋಪಿ ಕೇಶವಮೂರ್ತಿಗೆ ಹೈಕೋಟ್‌ನಿಂದ ಹಾಗೂ ಎ-15 ಆರೋಪಿ ಕಾರ್ತಿಕ್, ಎ-17 ಆರೋಪಿ ನಿಖಿಲ್‌ಗೆ 57ನೇ ಸಿಸಿಹೆಚ್ ಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಸಿಕ್ಕಿತ್ತು. ಕೋರ್ಟ್ ಆರೋಪಿಗಳ ಕುಟುಂಬಸ್ಥರಿಗೆ 2 ಲಕ್ಷ ರೂ. ಹಣ ಹಾಗೂ ಇಬ್ಬರು ಶೂರಿಟಿದಾರರನ್ನ ಹೊಂದಿಸಲು ಸೂಚಿಸಿತ್ತು. ಆದರೆ ಜಾಮೀನು ಶ್ಯೂರಿಟಿಗೂ ಹಣವಿಲ್ಲದೇ ಆರೋಪಿಗಳ ಕುಟುಂಬಸ್ಥರು ಪರದಾಡುತ್ತಿದ್ದರು.

    ಸತತ 9 ದಿನಗಳಿಂದ ಶ್ಯೂರಿಟಿದಾರರು ಸಿಗದೇ ಪರದಾಟ ನಡೆಸಿದ್ದ ಕುಟುಂಬಸ್ಥರಿಗೆ ಮಂಗಳವಾರ ಜಾಮೀನು ಶ್ಯೂರಿಟಿ ಪ್ರಕ್ರಿಯೆ ಪೂರ್ಣಗೊಂಡಿದೆ. ಮಂಗಳವಾರ ರಾತ್ರಿ ತುಮಕೂರು ಜೈಲಾಧಿಕಾರಿಗಳಿಗೆ ಜಮೀನು ಆದೇಶದ ಪ್ರತಿ ಮೇಲ್ ಮೂಲಕ ತಲುಪಿದ್ದು, ಬುಧವಾರ ಎ-16 ಆರೋಪಿ ಕೇಶವಮೂರ್ತಿ, ಎ-15 ಆರೋಪಿ ಕಾರ್ತಿಕ್, ಎ-17 ಆರೋಪಿ ನಿಖಿಲ್ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.ಇದನ್ನೂ ಓದಿ: ಪುಣೆಯಲ್ಲಿ ಹೆಲಿಕಾಪ್ಟರ್ ಪತನ – ಮೂವರು ದುರ್ಮರಣ

  • ಜಾಮೀನು ಸಿಕ್ಕರೂ ಇಲ್ಲ ಬಿಡುಗಡೆ ಭಾಗ್ಯ – ಮಕ್ಕಳನ್ನು ಬಿಡಿಸಿಕೊಳ್ಳಲು ಹಣವಿಲ್ಲದೇ ಪೋಷಕರ ಪರದಾಟ

    ಜಾಮೀನು ಸಿಕ್ಕರೂ ಇಲ್ಲ ಬಿಡುಗಡೆ ಭಾಗ್ಯ – ಮಕ್ಕಳನ್ನು ಬಿಡಿಸಿಕೊಳ್ಳಲು ಹಣವಿಲ್ಲದೇ ಪೋಷಕರ ಪರದಾಟ

    – 2 ಲಕ್ಷ, ಇಬ್ಬರು ಶೂರಿಟಿದಾರರನ್ನು ಒಪ್ಪಿಸುವಂತೆ ತಿಳಿಸಿದ್ದ ಕೋರ್ಟ್
    – ಜೈಲಲ್ಲೇ ಇರೋ ರೇಣುಕಾಸ್ವಾಮಿ ಕೊಲೆ ಆರೋಪಿಗಳು

    ತುಮಕೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಹಿನ್ನೆಲೆ ಮೂವರು ಆರೋಪಿಗಳಿಗೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ ಕೋರ್ಟ್ ಜಾಮೀನು (Bail) ನೀಡಿದ್ದರೂ ಬೆಲ್ ಶೂರಿಟಿಗೂ ಹಣವಿಲ್ಲದೇ ಆರೋಪಿಗಳ ಕುಟುಂಬಸ್ಥರು ಪರದಾಡುವಂತಾಗಿದೆ.

    ಕಳೆದ ಸೋಮವಾರ ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಮೂವರು ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್, ಹಾಗೂ ನಿಖಿಲ್‌ಗೆ ಷರತ್ತುಬದ್ಧ ಜಾಮೀನು ದೊರೆತಿತ್ತು. ಎ-16 ಆರೋಪಿ ಕೇಶವಮೂರ್ತಿಗೆ ಹೈಕೋಟ್‌ನಿಂದ ಹಾಗೂ ಎ-15 ಆರೋಪಿ ಕಾರ್ತಿಕ್, ಎ-17 ಆರೋಪಿ ನಿಖಿಲ್‌ಗೆ 57ನೇ ಸಿಸಿಹೆಚ್ ಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಸಿಕ್ಕಿತ್ತು.ಇದನ್ನೂ ಓದಿ: ನಂಬಿಕೆಗೆ ಧಕ್ಕೆಯಾಗದಂತೆ ಮಹಿಷ ದಸರಾ ಆಚರಿಸಿದ್ರೆ ನಮಗೂ ಸಂತೋಷ: ಯದುವೀರ್

    ಜಾಮೀನು ಸಿಕ್ಕಿ 5 ದಿನ ಕಳೆದರೂ ಆರೋಪಿಗಳಿಗೆ ಜೈಲಿನಿಂದ ಬಿಡುಗಡೆಯಾಗುವ ಭಾಗ್ಯ ದೊರೆತಿಲ್ಲ. 2 ಲಕ್ಷ ರೂ. ಹಣ ಹಾಗೂ ಇಬ್ಬರು ಶೂರಿಟಿದಾರರನ್ನು ಒಪ್ಪಿಸುವಂತೆ ಕೋರ್ಟ್ ತಿಳಿಸಿದೆ. ಜಾಮೀನು ನೀಡಲು ಶೂರಿಟಿದಾರರು ಸಿಗದೇ ಆರೋಪಿಗಳ ಕುಟುಂಬಸ್ಥರು ಪರದಾಡುವಂತಾಗಿದೆ. ಹೀಗಾಗಿ ಆರೋಪಿಗಳು ಇನ್ನೂ ತುಮಕೂರು ಜಿಲ್ಲಾ (Tumakuru Jail) ಕಾರಾಗೃಹದಲ್ಲಿದ್ದಾರೆ.

    ಕಳೆದ 6 ದಿನಗಳಿಂದ 2 ಲಕ್ಷ ರೂ. ಹಣ ಹಾಗೂ ಇಬ್ಬರು ಶೂರಿಟಿದಾರರನ್ನ ಹೊಂದಿಸಲು ಆರೋಪಿಗಳ ಕುಟುಂಬಸ್ಥರು ಪರದಾಡುತ್ತಿದ್ದಾರೆ. ಇನ್ನು ಜಾಮೀನಿನ ಕಾನೂನು ಪ್ರಕ್ರಿಯೆ ಮುಗಿಯದ ಹಿನ್ನೆಲೆ ಇಂದು ಕೂಡಾ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗುವುದು ಅನುಮಾನವಾಗಿದೆ. ಶೂರಿಟಿದಾರರನ್ನ ಹೊಂದಿಸಲು ಸಾಧ್ಯವಾಗದ ಕಾರಣ ಆರೋಪಿಗಳ ಕುಟುಂಬಸ್ಥರು ಇಲ್ಲಿಯ ತನಕ ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಈ ಬ್ಲ್ಯಾಕ್‌ಮೇಲರ್ ಹೇಗೆ ಲೂಟಿ ಮಾಡಿದ್ದಾನೆ ಅಂತಾ ಹೇಳಿದ್ದೀನಿ: ಎಡಿಜಿಪಿ ಚಂದ್ರಶೇಖರ್ ವಿರುದ್ಧ ಹೆಚ್‌ಡಿಕೆ ಕಿಡಿ

  • ರೇಣುಕಾಸ್ವಾಮಿ ಹತ್ಯೆ ಕೇಸ್ – ನಾಲ್ವರು ಆರೋಪಿಗಳು ತುಮಕೂರು ಜೈಲಿಗೆ ಶಿಫ್ಟ್

    ರೇಣುಕಾಸ್ವಾಮಿ ಹತ್ಯೆ ಕೇಸ್ – ನಾಲ್ವರು ಆರೋಪಿಗಳು ತುಮಕೂರು ಜೈಲಿಗೆ ಶಿಫ್ಟ್

    ತುಮಕೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ (Renukaswamy murder case) ನಾಲ್ವರು ಆರೋಪಿಗಳನ್ನ ತುಮಕೂರು ಜಿಲ್ಲಾ ಕಾರಾಗೃಹಕ್ಕೆ (Tumakuru jail) ಸ್ಥಳಾಂತರಿಸಲಾಗಿದೆ.

    ರೇಣುಕಾಸ್ವಾಮಿ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಾದ ರವಿಶಂಕರ್, ನಿಖಿಲ್, ಕೇಶವ್ ಹಾಗೂ ಕಾರ್ತಿಕ್‍ನನ್ನು ಸ್ಥಳಾಂತರಿಸಲಾಗಿದೆ. 24ನೇ ಎಸಿಎಂಎಂ ನ್ಯಾಯಾಲಯ (Court) ಆರೋಪಿಗಳನ್ನು ತುಮಕೂರು ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ಆದೇಶ ನೀಡಿದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ತುಮಕೂರು ಹೊರವಲಯದ ರಂಗಾಪುರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಆರೋಪಿಗಳನ್ನ ಸ್ಥಳಾಂತರಿಸಿದ್ದಾರೆ. ಕಾರಾಗೃಹ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಕೆಂಪೇಗೌಡ ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಕೈಬಿಟ್ಟ ವಿಚಾರ ನಾನು ಗಂಭೀರವಾಗಿ ಪರಿಗಣಿಸಲ್ಲ: ಹೆಚ್‌ಡಿಕೆ

    ಭದ್ರತಾ ದೃಷ್ಟಿಯಿಂದ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ಮನವಿಯನ್ನು ಪರಿಗಣಿಸಿದ್ದ ನ್ಯಾಯಾಲಯ ಈ ನಾಲ್ವರು ಆರೋಪಿಗಳನ್ನ ಪ್ರತ್ಯೇಕವಾಗಿಡಲು ಆದೇಶಿಸಿತ್ತು.

    ಈ ಬಗ್ಗೆ ಚಿತ್ರದುರ್ಗದಲ್ಲಿ ಮಾತನಾಡಿರುವ ಗೃಹಸಚಿವ ಜಿ.ಪರಮೇಶ್ವರ್ ಅವರು, ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ಎಲ್ಲರೂ ಒಂದೇ ಕಡೆ ಇರುವುದು ಸೂಕ್ತವಲ್ಲ ಎಂಬ ಉದ್ದೇಶದಿಂದ ಕೆಲವರನ್ನು ಪರಪ್ಪನ ಅಗ್ರಹಾರದಿಂದ ತುಮಕೂರು ಜೈಲಿಗೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೊದಲ ಕೇಸ್‌ನಲ್ಲೇ ಪ್ರಜ್ವಲ್ ರೇವಣ್ಣಗೆ ಶಾಕ್ – ಹೊಳೆನರಸೀಪುರ ಪ್ರಕರಣದ ಜಾಮೀನು ಅರ್ಜಿ ವಜಾ