Tag: tulu films

  • ತುಳು ಭಾಷೆಯಲ್ಲಿ ಅವಕಾಶ ಸಿಕ್ಕರೆ ನಟಿಸುತ್ತೇನೆ- ಅನಂತ್ ನಾಗ್

    ತುಳು ಭಾಷೆಯಲ್ಲಿ ಅವಕಾಶ ಸಿಕ್ಕರೆ ನಟಿಸುತ್ತೇನೆ- ಅನಂತ್ ನಾಗ್

    ನ್ನಡ ಚಿತ್ರರಂಗದ ಲೆಜೆಂಡರಿ ನಟ ಅನಂತ್ ನಾಗ್ (Ananth Nag) ಅವರಿಗೆ ಇಂದು (ಸೆ.4) 75 ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಅನಂತ್ ನಾಗ್ ಇದೀಗ ನೀಡಿರುವ ಹೇಳಿಕೆ ಸಖತ್ ಸದ್ದು ಮಾಡ್ತಿದೆ. ತುಳು ಭಾಷೆಯಲ್ಲಿ ಅವಕಾಶ ಸಿಕ್ಕರೆ ಖಂಡಿತಾ ನಟಿಸುತ್ತೇನೆ ಎಂದು ಖುಷಿಯಿಂದ ಮಾತನಾಡಿದ್ದಾರೆ.

    ಮಂಗಳೂರಿನ ಟಿ.ವಿ ರಮಣ್ ಪೈ ಸಭಾಂಗಣದಲ್ಲಿ ಭಾನುವಾರ (ಸೆ.3) ಮಂಗಳೂರಿನ ಅನಂತನಾಗ್-75 ಅಭಿನಂದನಾ ಸಮಿತಿ ಹಾಗೂ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ಅನಂತ್ ನಾಗ್ ಅವರು ಮಾತನಾಡಿದರು. ನನ್ನ ಕರ್ಮಭೂಮಿ ಕರ್ನಾಟಕ ಕರಾವಳಿ. ಕರಾವಳಿಯ ಸೊಗಡು ಆಗಿರುವ ತುಳು ಭಾಷೆಯಲ್ಲಿ (Tulu Language) ಅವಕಾಶ ಸಿಕ್ಕಿದರೆ ಪೂರ್ಣ ಪ್ರಮಾಣದಲ್ಲಿ ನಾನು ನಟಿಸಲು ಸಿದ್ಧನಿದ್ದೇನೆ. ಇದು ತುಳು ಭಾಷೆಯ ಸಿನಿಮಾದಲ್ಲಿ ನಟಿಸುವ ಬಗ್ಗೆ ಹಿರಿಯ ನಟ ಅಭಿಮಾನದಿಂದ ಮಾತನಾಡಿದ್ದಾರೆ. ಇದನ್ನೂ ಓದಿ:ರಾಘವ, ಕಂಗನಾ ನಟನೆಯ ಚಂದ್ರಮುಖಿ‌ 2 ಟ್ರೈಲರ್ ರಿಲೀಸ್

    ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ (Vedavyas Kamath) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಸಂವಾದದಲ್ಲಿ ಈ ಕುರಿತು ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಅನಂತನಾಗ್, ಆಳವಾದ ಪಾತ್ರವಿದ್ದರೆ, ಅನುಭವ ಉತ್ತಮವಾಗಿರುತ್ತದೆ. ಅನುಭವಕ್ಕೆ ತಕ್ಕಂತೆ ನಟನೆಗೆ ನಾನು ಯಾವತ್ತೂ ಸಿದ್ಧನಿದ್ದೇನೆ ಎಂದು ಮಾತನಾಡಿದರು.

    ತಮ್ಮ ಸಹಜ ಅಭಿನಯದ ಮೂಲಕ ಮನೆ ಮಾತಾಗಿರುವ ನಟ ಅನಂತ್ ನಾಗ್ ಅವರ ಹುಟ್ಟುಹಬ್ಬಕ್ಕೆ (ಸೆ.4) ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಅವರ ಮುಂಬರುವ ಸಿನಿಮಾಗಳಿಗೆ ಫ್ಯಾನ್ಸ್ ಕಾಯ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಗಜಾನನ ಕ್ರಿಕೆಟರ್ಸ್’ ಚಿತ್ರೀಕರಣ ಮೇ18ರಿಂದ ಶುರು

    ‘ಗಜಾನನ ಕ್ರಿಕೆಟರ್ಸ್’ ಚಿತ್ರೀಕರಣ ಮೇ18ರಿಂದ ಶುರು

    ಪ್ರಜ್ವಲ್ ಫಿಲಂಸ್ ನಿರ್ಮಾಣದ ಕೀರ್ತನ್ ಭಂಡಾರಿ (Keerthan Bhandary) ರಚಿಸಿ ನಿರ್ದೇಶಿಸುತ್ತಿರುವ ‘ಗಜಾನನ ಕ್ರಿಕೆಟರ್ಸ್’ ತುಳು ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಸೋಮವಾರ (ಮೇ 15)ರಂದು ಸಂಜೆ ಲಾಲ್ ಭಾಗ್‌ನಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು.

    ಚಿತ್ರರಂಗದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಅಂಡರ್ ಆರ್ಮ್ ಕ್ರಿಕೆಟ್ ಜಗತ್ತನ್ನು ತೆರೆದಿಡುವಂತಹ ಪ್ರಯತ್ನವನ್ನು ಈ ಚಿತ್ರತಂಡ ಮಾಡುತ್ತಿದ್ದು, ಚಿತ್ರವು ಹಾಸ್ಯಮಯ ಕಥಾಹಂದರವನ್ನು ಹೊಂದಿದ್ದು ಕುಟುಂಬ ಸಮೇತ ನೋಡುವಂತಹ ಚಿತ್ರ ಇದಾಗಿರುತ್ತದೆ. ಕ್ರಿಕೆಟ್ ಪ್ರೇಮಿಗಳಿಗೆ ಮನೋರಂಜನೆ ನೀಡುವಂತಹ ಹಲವಾರು ಸನ್ನಿವೇಶಗಳು ಚಿತ್ರದಲ್ಲಿದೆ. ಈ ಚಿತ್ರದ ಚಿತ್ರೀಕರಣವು ಮೇ 18ರಿಂದ ಮಂಗಳೂರಿನಾದ್ಯಂತ ನಡೆಯಲಿದ್ದು, ಅತೀ ಶೀಘ್ರದಲ್ಲಿ ಬೆಳ್ಳಿತರೆಗೆ ಬರಲಿದೆ. ನಾನು ಚಿತ್ರದ ಕಥೆಯನ್ನು ಒಪ್ಪಿಕೊಂಡು ಅದರ ಭಾಗವಾಗಿದ್ದೇನೆ ಎಂದು ತುಳು ರಂಗಭೂಮಿಯ ಹಿರಿಯ ನಟ ಭೋಜರಾಜ್ ವಾಮಂಜೂರ್ ಹೇಳಿದರು. ಇದನ್ನೂ ಓದಿ:ಮುರಿದು ಬಿತ್ತಾ ತೆಲುಗು ನಟ ಶರ್ವಾನಂದ್ ನಿಶ್ಚಿತಾರ್ಥ?

    ಚಿತ್ರದ ನಾಯಕ ನಟನಾಗಿ ವಿನೀತ್ ಕುಮಾರ್ (Vineeth Kumar) ನಟಿಸುತ್ತಿದ್ದು, ಇವರಿಗೆ ನಾಯಕಿಯರಾಗಿ ಅನ್ವಿತಾ ಸಾಗರ್ – ಸಮತ ಅಮೀನ್ ಜೊತೆಯಾಗಲಿದ್ದಾರೆ. ತಾರಾಗಣದಲ್ಲಿ ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ ವಾಮಂಜೂರು, ಪ್ರಕಾಶ್ ತುಮಿನಾಡು, ದೀಪಕ್ ರೈ, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಕಾಣಿಸಿಕೊಳ್ಳಲಿದ್ದಾರೆ. ಪ್ರಸನ್ನ ಶೆಟ್ಟಿ ಬೈಲೂರು ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಮಾಡಲಿಂಗ್ ಕ್ಷೇತ್ರದಲ್ಲಿ ಖ್ಯಾತಿ ಪಡೆದಿರುವ 2018ರ ಮಿಸ್ಟರ್ ದುಬೈ ಕಿರೀಟ ಮುಡಿಗೇರಿಸಿಕೊಂಡಿರುವ ಪ್ರಜ್ವಲ್ ಶೆಟ್ಟಿ ಅವರು ಮೊಟ್ಟ ಮೊದಲ ಬಾರಿಗೆ ಖಳನಾಯಕರಾಗಿ ನಟಿಸಲಿದ್ದಾರೆ ಎಂದು ಚಿತ್ರ ನಿರ್ದೇಶಕ ಕೀರ್ತನ್ ಭಂಡಾರಿ ಮಾಹಿತಿ ನೀಡಿದರು.

    ಚಾರ್ಲಿ 777, ಒಂದು ಮೊಟ್ಟೆಯ ಕಥೆ, ಗಿರಿಗಿಟ್ (Girgit) ಹಾಗೂ ಹಲವಾರು ಕನ್ನಡ ಮತ್ತು ತುಳು ಚಿತ್ರಗಳಿಗೆ (Tulu Films) ಸಾಹಿತ್ಯ ಬರೆದಿರುವ ಕೀರ್ತನ್ ಭಂಡಾರಿ ಅವರು ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ 5 ಹಾಡುಗಳಿದ್ದು ಸೃಜನ್ ಕುಮಾರ್ ತೋನ್ಸೆ ಸಂಗೀತ ಸಂಯೋಜನೆ ಮಾಡುತ್ತಿದ್ದು, ಚಿತ್ರಕ್ಕೆ ನಿರಂಜನ್ ದಾಸ್ ಛಾಯಾಗ್ರಹಣ ಇರಲಿದೆ.

  • ಕನ್ನಡದ `ಕಾಂತಾರ’ ತುಳು ಭಾಷೆಯಲ್ಲಿ ಇಂದು ರಿಲೀಸ್

    ಕನ್ನಡದ `ಕಾಂತಾರ’ ತುಳು ಭಾಷೆಯಲ್ಲಿ ಇಂದು ರಿಲೀಸ್

    ರಿಷಬ್ ಶೆಟ್ಟಿ (Rishab Shetty)ನಿರ್ದೇಶನದ ‘ಕಾಂತಾರ’ (Kantara) ಕನ್ನಡ ಚಿತ್ರ ದೇಶ, ವಿದೇಶಗಳಲ್ಲೂ ಭಾರಿ ಪ್ರಮಾಣದಲ್ಲಿ ಗಲ್ಲಾಪೆಟ್ಟಿಗೆ ಕಲೆಕ್ಷನ್ ಮಾಡಿ, ಮುಂದುವರಿಯುತ್ತಿದ್ದಂತೆ ಇತ್ತ ಕರಾವಳಿಯ ತುಳು ಭಾಷೆಗೂ ಡಬ್ಬಿಂಗ್ ಆಗಿ ‘ಕಾಂತಾರ’ ಹೆಸರಿನಲ್ಲೆ (ಡಿ.2) ಇಂದಿನಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.

    ಈಗಾಗಲೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತಿತರ ಭಾಷೆಗಳಲ್ಲಿ ಡಬ್ ಆಗಿ ಕೋಟ್ಯಾಂತರ ಮೊತ್ತ ಬಾಚುತ್ತಿರುವ, ಹಿಂದಿನ ಎಲ್ಲ ಸಿನಿಮಾಗಳ ದಾಖಲೆ ಹಿಂದಿಕ್ಕುತ್ತಿರುವ `ಕಾಂತಾರ’ ಸಿನಿಮಾ ಕರಾವಳಿ ನೆಲದ ಭಾಷೆಯಲ್ಲಿ ಇದೇ ಮೊದಲ ಬಾರಿಗೆ ತೆರೆ ಕಾಣುತ್ತಿದೆ. ಅದು ಕೂಡ ಕರಾವಳಿ ಹಾಗೂ ಕರಾವಳಿಗರೇ ಹೆಚ್ಚಾಗಿ ಇರುವ ವಿದೇಶಿ ಟಾಕೀಸ್‌ಗಳಲ್ಲಿ ಎಂಬುದು ಗಮನಾರ್ಹ. ದುಬೈನಲ್ಲಿ ಈಗಾಗಲೇ ತುಳುವಿನಲ್ಲಿ ತೆರೆ ಕಂಡಿದೆ. ಇದನ್ನೂ ಓದಿ: `ಬಿಗ್ ಬಾಸ್’ ಜಯಶ್ರೀ ಆರಾಧ್ಯ ಮನೆ ಗೃಹಪ್ರವೇಶದ ಸಂಭ್ರಮ

     

    View this post on Instagram

     

    A post shared by Hombale Films (@hombalefilms)

    ಬುಕ್ ಮೈ ಶೋದಲ್ಲಿ `ಕಾಂತಾರ’ ತುಳು ಪೋಸ್ಟರ್ ಸದ್ದು ಮಾಡುತ್ತಿದೆ. ಟಿಕೆಟ್ ಸೋಲ್ಡ್ ಔಟ್ ಆಗಿದೆ. ದಕ್ಷಿಣ ಕನ್ನಡದಲ್ಲಿ ಮಂಗಳೂರು, ಉಡುಪಿ ಸೇರಿದಂತೆ ಎಲ್ಲಾ ಭಾಗಗಳಲ್ಲೂ ಸಿನಿಮಾ ತೆರೆ ಕಂಡಿದ್ದು, ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬೆಂಗಳೂರಿನ ಹಲವು ಮಾಲ್‌ಗಳಲ್ಲಿ `ಕಾಂತಾರ’ (Kanatara Tulu) ತುಳುವಿನಲ್ಲಿ ರಿಲೀಸ್ ಆಗಿದೆ.

     

    View this post on Instagram

     

    A post shared by Hombale Films (@hombalefilms)

    ದೈವದ ಕಥೆ ಹೊತ್ತ `ಕಾಂತಾರ’ ತುಳು ನಾಡಿನಲ್ಲಿಯೇ ತೆರೆ ಕಂಡಿದೆ. ರಿಷಬ್ ಶೆಟ್ಟಿ ನಟನೆಯ ಮೊದಲ ಸಿನಿಮಾ ಇದಾಗಿದ್ದು, ಅದೆಷ್ಟರ ಮಟ್ಟಿಗೆ ಸೌಂಡ್ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಂತಾರ `ತುಳು’ ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್: ರಿಲೀಸ್ ಡೇಟ್ ಔಟ್

    ಕಾಂತಾರ `ತುಳು’ ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್: ರಿಲೀಸ್ ಡೇಟ್ ಔಟ್

    ನ್ನಡದ ಜೊತೆ ಬಹುಭಾಷೆಗಳಲ್ಲಿ ‌ʻಕಾಂತಾರʼ (Kantara Film) ಭರ್ಜರಿ ಸೌಂಡ್ ಮಾಡಿತ್ತು. ಇದೀಗ ತುಳುನಾಡಿನಲ್ಲೂ ದೈವದ ಕಥೆ ತೆರೆಯ ಮೇಲೆ ತೋರಿಸಲು ರೆಡಿಯಾಗಿದ್ದಾರೆ. ತುಳುವಿನಲ್ಲಿ ತೆರೆಗೆ ಅಬ್ಬರಿಸಲು ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ. ಸದ್ಯ `ಕಾಂತಾರ’ ತುಳು ಟ್ರೈಲರ್(Tulu Trailer) ರಿಲಿಸ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ವಿವ್ಸ್ ಗಿಟ್ಟಿಸಿಕೊಳ್ಳುತ್ತಿದೆ.

    ರಿಷಬ್ ಶೆಟ್ಟಿ (Rishab Shetty) ನಟನೆ ಮತ್ತು ನಿರ್ದೇಶನದ `ಕಾಂತಾರ’ ಅಪ್ಪಟ ತುಳುನಾಡಿನ ದೈವದ ಕಥೆಯಾಗಿದೆ. ಪಂಜುರ್ಲಿ, ಗುಳಿಗ ಕೊರಗಜ್ಜ ದೈವವನ್ನು ಆರಾಧಿಸುವ ತುಳು ಪ್ರೇಕ್ಷಕರಿಗಾಗಿ `ಕಾಂತಾರ’ ಚಿತ್ರ ರಿಲೀಸ್ ಮಾಡಲು ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಸದ್ಯ ಚಿತ್ರದ ಝಲಕ್ ಎಂಬಂತೆ ಟ್ರೈಲರ್ ಕೂಡ ರಿಲೀಸ್ ಆಗಿ ವ್ಯಾಪಕ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಿದೆ. ಟ್ರೈಲರ್‌ನಲ್ಲಿ ಎಲ್ಲೂ ಕೂಡ ದೋಷ ಬರದೇ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಇದನ್ನೂ ಓದಿ: ನಾನು ಮದುವೆ ಆಗಲ್ಲ ಎಂದ ಮೋಹಕತಾರೆ ರಮ್ಯಾ

    ಹೊಂಬಾಳೆ ಸಂಸ್ಥೆ (Hombale Films) ನಿರ್ಮಾಣ `ಕಾಂತಾರ’ ತುಳು ವರ್ಷನ್ ಚಿತ್ರವನ್ನು ಡಿಸೆಂಬರ್ 2ರಂದು 2022ಕ್ಕೆ ಭಾರತದಲ್ಲಿ ತೆರೆ ಕಾಣುತ್ತಿದೆ. ನವೆಂಬರ್ 25ರಂದು ವಿದೇಶದಲ್ಲಿ ಸಿನಿಮಾ ತೆರೆ ಕಾಣುತ್ತಿದೆ.

    ಕಾಂತಾರ ಈಗಾಗಲೇ 50 ದಿನ ಪೂರೈಸಿ 400 ಕೋಟಿಗೂ ಅಧಿಕ ಕಲೆಕ್ಷನ್ ಹೊಸ ದಾಖಲೆ ಬರೆದಿದೆ. ಒಟಿಟಿಯಲ್ಲೂ ತೆರೆಕಂಡು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ತುಳುವಿನಲ್ಲೂ ರಿಲೀಸ್ ಆಗಲಿದೆ `ಕಾಂತಾರ’: ರಿಲೀಸ್ ಡೇಟ್ ಫಿಕ್ಸ್

    ತುಳುವಿನಲ್ಲೂ ರಿಲೀಸ್ ಆಗಲಿದೆ `ಕಾಂತಾರ’: ರಿಲೀಸ್ ಡೇಟ್ ಫಿಕ್ಸ್

    ರಿಷಬ್ ಶೆಟ್ಟಿ(Rishab Shetty) ನಿರ್ದೇಶಿಸಿ, ನಟಿಸಿರುವ `ಕಾಂತಾರ'(Kantara Film) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. `ಕಾಂತಾರ’ ಕನ್ನಡದಲ್ಲಿ ಕಮಾಲ್ ಮಾಡಿದ ಬೆನ್ನಲ್ಲೇ ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲೂ ಡಬ್ ಆಗಿ ತೆರೆಕಂಡಿತ್ತು. ಇದೀಗ ತುಳು ಭಾಷೆಯಲ್ಲೂ ಡಬ್ ಆಗಲಿದೆ. ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ.

    ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ `ಕಾಂತಾರ’ ಸೂಪರ್ ಸಕ್ಸಸ್ ಖುಷಿಯಲ್ಲಿದ್ದಾರೆ. ಕನ್ನಡದ `ಕಾಂತಾರ'(Kantara Film) ಕಂಪು ಪಸರಿಸಿದ ಮೇಲೆ ಬಹುಭಾಷೆಯಲ್ಲಿ ಡಬ್ ಆಗಿ ರಿಲೀಸ್ ಬಳಿಕ ಗಲ್ಲಾಪೆಟ್ಟಿಗೆ ಕೋಟಿಗಟ್ಟಲ್ಲೇ ಕಲೆಕ್ಷನ್ ಮಾಡಿತ್ತು. ದೈವದ ಕಥೆಯಾಗಿರುವ `ಕಾಂತಾರ’ ತುಳುವಿನಲ್ಲಿಯೂ ತೆರೆ ಕಾಣುತ್ತಿದೆ. ಇದನ್ನೂ ಓದಿ:ಧ್ರುವ ಸರ್ಜಾ ಚಿತ್ರಕ್ಕೆ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿ

    ಹೊಂಬಾಳೆ ಬ್ಯಾನರ್‌ನ `ಕಾಂತಾರ’ ಸಿನಿಮಾ ತುಳು ಭಾಷೆಯಲ್ಲೂ ಕೂಡ ಡಬ್ ಆಗಲಿದೆ. ಈಗಾಗಲೇ ಡಬ್ಬಿಂಗ್ ಪ್ರಕ್ರಿಯೆ ಕೂಡ ಶುರುವಾಗಿದೆ. ಸೆನ್ಸಾರ್ ಬಳಿಕ ಡಿಸೆಂಬರ್ ಮೊದಲ ವಾರದಲ್ಲಿ `ಕಾಂತಾರ’ ತುಳುವಿನಲ್ಲಿ ತೆರೆ ಕಾಣಲಿದೆ.

    ಇನ್ನೂ `ಕಾಂತಾರ’ ದೇಶದ ಎಲ್ಲೆಡೆ ಸಂಚಲನ ಮೂಡಿಸುತ್ತಿದೆ. ವರ್ಲ್ಡ್ ವೈಡ್ ಕಲೆಕ್ಷನ್ 367 ಕೋಟಿ ರೂ. ಕಲೆಕ್ಷನ್ ಮಾಡಿ 400 ಕೋಟಿ ರೂ. ಕಲೆಕ್ಷನ್ ಮಾಡುತ್ತ ರಿಷಬ್ ಶೆಟ್ಟಿ ಸಿನಿಮಾ ಮುನ್ನುಗ್ಗುತ್ತಿದೆ.

    Live Tv
    [brid partner=56869869 player=32851 video=960834 autoplay=true]