Tag: tulsibhai

  • WHO ಮುಖ್ಯಸ್ಥರಿಗೆ ʼತುಳಸಿಭಾಯ್‌ʼ ಎಂದು ಗುಜರಾತಿ ಹೆಸರಿಟ್ಟ ಮೋದಿ

    WHO ಮುಖ್ಯಸ್ಥರಿಗೆ ʼತುಳಸಿಭಾಯ್‌ʼ ಎಂದು ಗುಜರಾತಿ ಹೆಸರಿಟ್ಟ ಮೋದಿ

    ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ (WHO) ಮುಖ್ಯಸ್ಥ ಟೆಡ್ರೋಸ್ ಅಧಾನೊಮ್ ಗೆಬ್ರೆಯಸಸ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿ ಹೆಸರೊಂದನ್ನು ನಾಮಕರಣ ಮಾಡಿದ್ದಾರೆ.

    ಗೆಬ್ರೆಯಾಸಿಸ್‌ ಅವರ ಕೋರಿಕೆಯ ಮೇರೆಗೆ ಮೋದಿ ಅವರು ʼಗುಜರಾತಿ ಹೆಸರುʼ ನೀಡಿದ್ದಾರೆ. ನಾನು ನಿಮ್ಮನ್ನು ʻತುಳಸಿಭಾಯ್ʼ ಎಂದು ಕರೆಯಲು ಇಷ್ಟಪಡುತ್ತೇನೆ ಎಂದು ಗಾಂಧಿನಗರದಲ್ಲಿ ನಡೆದ ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ, ಡಬ್ಲ್ಯೂಹೆಚ್‌ಒ ಮುಖ್ಯಸ್ಥರಿಗೆ ಹೇಳಿದ್ದಾರೆ. ಇದನ್ನೂ ಓದಿ: ದ್ವೇಷದ ಬುಲ್ಡೋಜರ್‌ಗಳನ್ನು ಆಫ್ ಮಾಡಿ: ರಾಹುಲ್ ಗಾಂಧಿ

    ಟೆಡ್ರೋಸ್ ನನ್ನ ಒಳ್ಳೆಯ ಸ್ನೇಹಿತ. ನನಗೆ ಭಾರತೀಯ ಶಿಕ್ಷಕರು ಕಲಿಸಿದರು, ಅವರಿಂದಲೇ ನಾನು ಇಲ್ಲಿದ್ದೇನೆ ಅಂತ ಟೆಡ್ರೋಸ್‌ ಯಾವಾಗಲೂ ಹೇಳುತ್ತಿದ್ದರು. ‘ನಾನು ಪಕ್ಕಾ ಗುಜರಾತಿ ಆಗಿದ್ದೇನೆ. ನೀವು ನನಗೆ ಒಂದು ಹೆಸರಿಡಿʼ ಎಂದು ಕೇಳಿಕೊಂಡಿದ್ದರು. ಹಾಗಾಗಿ ಅವರನ್ನು ತುಳಸಿಭಾಯಿ ಎಂದು ಕರೆಯುತ್ತೇನೆ. ತುಳಸಿ ಎಂಬುದು ಆಧುನಿಕ ತಲೆಮಾರು ಮರೆಯುತ್ತಿರುವ ಸಸ್ಯವಾಗಿದೆ. ತಲೆಮಾರುಗಳಿಂದ ತುಳಸಿಯನ್ನು ಪೂಜಿಸಿಕೊಂಡು ಬರಲಾಗುತ್ತಿದೆ. ನೀವು ತುಳಸಿ ಗಿಡವನ್ನು ಮದುವೆಯಲ್ಲೂ ಬಳಸಬಹುದು ಎಂದು ಮೋದಿ ತಿಳಿಸಿದ್ದಾರೆ.

    ಗುಜರಾತ್‌ನಲ್ಲಿ ಮೂರು ದಿನಗಳ ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆಯನ್ನು ಉದ್ಘಾಟಿಸಿ ಪ್ರಧಾನಿ ಮಾತನಾಡಿದ್ದಾರೆ. WHO ಮಹಾನಿರ್ದೇಶಕರ ಜೊತೆಗೆ ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌತ್ ಕೂಡ ಉಪಸ್ಥಿತರಿದ್ದರು. ಇದನ್ನೂ ಓದಿ: ದೆಹಲಿಯಲ್ಲಿ ಮಾಸ್ಕ್ ಕಡ್ಡಾಯ – ಹಾಕದಿದ್ದರೆ 500 ರೂ. ದಂಡ

    MODi

    ಸಾಂಪ್ರದಾಯಿಕ ಔಷಧಕ್ಕಾಗಿ ದೇಶಕ್ಕೆ ಬರಲು ಬಯಸುವ ವಿದೇಶಿ ಪ್ರಜೆಗಳಿಗಾಗಿ ಭಾರತವು ಶೀಘ್ರದಲ್ಲೇ ವಿಶೇಷ ಆಯುಷ್ ವೀಸಾ ಪರಿಚಯಿಸಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.