Tag: tuition teacher

  • ಬೆಂಗಳೂರು| ಟ್ಯೂಷನ್ ಟೀಚರ್‌ನಿಂದಲೇ ವಿದ್ಯಾರ್ಥಿನಿ ಕಿಡ್ನ್ಯಾಪ್ – ಆರೋಪಿ ಸುಳಿವು ಕೊಟ್ಟವರಿಗೆ ಬಹುಮಾನ ಘೋಷಣೆ

    ಬೆಂಗಳೂರು| ಟ್ಯೂಷನ್ ಟೀಚರ್‌ನಿಂದಲೇ ವಿದ್ಯಾರ್ಥಿನಿ ಕಿಡ್ನ್ಯಾಪ್ – ಆರೋಪಿ ಸುಳಿವು ಕೊಟ್ಟವರಿಗೆ ಬಹುಮಾನ ಘೋಷಣೆ

    – ಫೋನ್ ಪೇ, ಗೂಗಲ್ ಪೇ, ಎಟಿಎಂ, ಆನ್ಲೈನ್‌ ಪೇಮೆಂಟ್ ಬಳಕೆ ಮಾಡದ ಆರೋಪಿ

    ಬೆಂಗಳೂರು/ರಾಮನಗರ: ಪ್ರೀತಿ-ಪ್ರೇಮದ ಹೆಸರಿನಲ್ಲಿ ಟ್ಯೂಷನ್ ಟೀಚರ್‌ನಿಂದಲೇ 10ನೇ ತರಗತಿ ವಿದ್ಯಾರ್ಥಿನಿ ಕಿಡ್ನ್ಯಾಪ್ ಆಗಿರುವ ಘಟನೆ ನಡೆದಿದೆ.

    ಕನಕಪುರ ಮೂಲದ ಬಾಲಕಿ ತಂದೆಯಿಂದ ಜೆ.ಪಿ.ನಗರ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಾಗಿದೆ. ಕನಕಪುರ ಮೂಲದ ಟ್ಯೂಷನ್ ಟೀಚರ್ ಅಭಿಷೇಕ್‌ನಿಂದ ವಿದ್ಯಾರ್ಥಿನಿ ಅಪಹರಣವಾಗಿದೆ. ಇದನ್ನೂ ಓದಿ: 17 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಶುದ್ಧೀಕರಣ ಘಟಕದಲ್ಲಿ ನಾಯಿ ಶವ ಪತ್ತೆ

    ಕಳೆದ ನ.23 ರಂದು ಎಂದಿನಂತೆ ಆರೋಪಿ ಬಳಿ ಟ್ಯೂಷನ್‌ಗೆ ವಿದ್ಯಾರ್ಥಿನಿ ಬಂದಿದ್ದಳು. ಟ್ಯೂಷನ್ ಮುಗಿದು ರಾತ್ರಿಯಾದರೂ ಮನೆಗೆ ವಾಪಸ್ ಆಗಿರಲಿಲ್ಲ. ರಾತ್ರಿ ಟ್ಯೂಷನ್ ಸೆಂಟರ್ ಬಳಿ ಹೋದಾಗ ಬಾಲಕಿಯನ್ನ ಟ್ಯೂಷನ್ ಟೀಚರ್ ಕರೆದೊಯ್ದಿರೋದು ಗೊತ್ತಾಗಿದೆ.

    ಬಾಲಕಿಯನ್ನ ಕರೆದೊಯ್ಯುವ ವೇಳೆ ಮನೆಯ ರೂಂನಲ್ಲೇ ಮೊಬೈಲ್ ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ. ಕಳೆದ ನಲವತ್ತು ದಿನಗಳಿಂದ ಸಣ್ಣ ಸುಳಿವು ಸಿಗದಂತೆ ಅಪ್ರಾಪ್ತೆ ಜೊತೆ ತಲೆಮರೆಸಿಕೊಂಡಿದ್ದಾನೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರಾಮನಗರ ಟೌನ್ ವ್ಯಾಪ್ತಿಯಲ್ಲಿ ಕಾಡಾನೆಗಳು ಪ್ರತ್ಯಕ್ಷ

    ಪೋನ್ ಬಳಕೆ ಮಾಡ್ತಿಲ್ಲ. ಪೋನ್ ಪೇ, ಗೂಗಲ್ ಪೇ, ಎಟಿಎಂ ಸೇರಿ ಆನ್ಲೈನ್ ಪೇಮೆಂಟ್ ಕೂಡ ಆರೋಪಿ ಮಾಡುತ್ತಿಲ್ಲ. ಕಳೆದ ನಲವತ್ತು ದಿನಗಳಿಂದ ಬೆಂಗಳೂರು ರಾಮನಗರ, ಕನಕಪುರ ಸೇರಿ ಹಲವು ಕಡೆ ಆರೋಪಿಗಾಗಿ ಪೊಲೀಸರು ತಲಾಶ್ ನಡೆಸಿದ್ದಾರೆ.

    ಸದ್ಯ ಆರೋಪಿ ಸುಳಿವು ಕೊಟ್ಟವರಿಗೆ ಬಹುಮಾನ ನೀಡುವುದಾಗಿ ಪೊಲೀಸ್ ಪ್ರಕಟಣೆಯಲ್ಲಿ ಘೋಷಿಸಲಾಗಿದೆ. ಆರೋಪಿ ಪತ್ತೆಯಾಗದ ಹಿನ್ನೆಲೆ ಪೊಲೀಸರು ಲುಕ್‌ಔಟ್ ನೋಟಿಸ್ ಹೊರಡಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಐಶ್ವರ್ಯ ಗೌಡಳಿಂದ ವಂಚನೆಗೆ ಒಳಗಾಗಿದ್ರೆ ದೂರು ನೀಡಿ: ಎಸ್ಪಿ

  • ಮಳವಳ್ಳಿ ಬಾಲಕಿ ಕುಟಂಬಕ್ಕೆ 10 ಲಕ್ಷ ಪರಿಹಾರ ಘೋಷಣೆ

    ಮಳವಳ್ಳಿ ಬಾಲಕಿ ಕುಟಂಬಕ್ಕೆ 10 ಲಕ್ಷ ಪರಿಹಾರ ಘೋಷಣೆ

    ಮಂಡ್ಯ: ಕಾಮುಕ ಟ್ಯೂಶನ್ ಶಿಕ್ಷಕನಿಂದ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಮಳವಳ್ಳಿ ಪಟ್ಟಣದ (Malavalli) ಬಾಲಕಿ ಕುಟುಂಬಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) 10 ಲಕ್ಷ ರೂಪಾಯಿ ಪರಿಹಾರ ಹಣವನ್ನು ಘೋಷಣೆ ಮಾಡಿದ್ದಾರೆ.

    ಮಂಡ್ಯ (Mandya ) ಜಿಲ್ಲೆಯ ಕೆಆರ್‌ಪೇಟೆ (K.R.Pete) ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಕುಂಭಮೇಳದಲ್ಲಿ (Kumbhamela)ಭಾಗಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು, ಕಾರ್ಯಕ್ರಮ ಮುಗಿಸಿ ಹೊರಡುವ ವೇಳೆ ವೇದಿಕೆಯಲ್ಲಿ ಮಳವಳ್ಳಿ (Malavalli) ಪಟ್ಟಣದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಬಾಲಕಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಹಣವನ್ನು ಘೋಷಿಸಿದ್ದಾರೆ. ಇದನ್ನೂ ಓದಿ: ಇದು ಜೈಲಲ್ಲ, ಚೀನಾದಲ್ಲಿರುವ ಕೋವಿಡ್ ಐಸೊಲೇಶನ್ ವಾರ್ಡ್- ವೀಡಿಯೋ ವೈರಲ್

    ಕಳೆದ ಮಂಗಳವಾರ ಟ್ಯೂಶನ್‍ಗೆ ಹೋಗಿದ್ದ 10 ವರ್ಷದ ಬಾಲಕಿಯನ್ನು ಟ್ಯೂಶನ್‍ನ ಮೇಲ್ವಿಚಾರಕ ಹಾಗೂ ಶಿಕ್ಷಕ ಕಾಂತರಾಜು ಅತ್ಯಾಚಾರ ವೆಸಗಿ ನಂತರ ಕೊಲೆ ಮಾಡಿದ್ದ. ಇದಾದ ನಂತರ ಕಾಮುಕ ಕಾಂತರಾಜು ಅನ್ನು ಪೊಲೀಸರು ಬಂಧಿಸಿದ್ದಾರೆ. ಹೆತ್ತವರು ತಮ್ಮ ಮಗಳನ್ನು ನೆನದು ಕಣ್ಣೀರು ಹಾಕುವುದರ ಜೊತೆಗೆ ಕಾಂತರಾಜುವನ್ನು ನೇಣು ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಸಾರ್ವಜನಿಕರು ಪ್ರತಿಭಟನೆ ನಡೆಸಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು. ಇದನ್ನೂ ಓದಿ: ಆರ್‌ಎಸ್‌ಎಸ್, ಬಿಜೆಪಿ ಬ್ರಿಟಿಷರ ಜೊತೆಗೆ ಶಾಮೀಲಾಗಿದ್ರು: ರಾಮಲಿಂಗಾ ರೆಡ್ಡಿ

    Live Tv
    [brid partner=56869869 player=32851 video=960834 autoplay=true]

  • ಹೋಂ ವರ್ಕ್ ಮಾಡ್ಲಿಲ್ಲ ಅಂತ ಮಕ್ಕಳಿಗೆ ಕ್ರೂರವಾಗಿ ಥಳಿಸಿದ ಟ್ಯೂಷನ್ ಟೀಚರ್

    ಹೋಂ ವರ್ಕ್ ಮಾಡ್ಲಿಲ್ಲ ಅಂತ ಮಕ್ಕಳಿಗೆ ಕ್ರೂರವಾಗಿ ಥಳಿಸಿದ ಟ್ಯೂಷನ್ ಟೀಚರ್

    ನವದೆಹಲಿ: ಹೋಂ ವರ್ಕ್ ಮಾಡದೇ ಇರುವ ಕಾರಣ ಇಬ್ಬರು ಬಾಲಕಿಯರಿಗೆ ಟ್ಯೂಷನ್ ಟೀಚರ್ ಕ್ರೂರವಾಗಿ ಥಳಿಸಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

    ನಗರದ ವಾಯುವ್ಯ ಭಾಗದಲ್ಲಿರುವ ಭಲ್ಸ್ವಾ ಡೈರಿಯಲ್ಲಿ ಈ ಘಟನೆ ನಡೆದಿದ್ದು, ಇದೀಗ ಬಾಲಕಿಯರ ತಂದೆ ನೀಡಿರುವ ದೂರಿನ ಆಧಾರದ ಮೇಲೆ ಟ್ಯೂಷನ್ ಟೀಚರ್ ಅನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಮುರುಘಾ ಮಠದ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರು ಬೇರೆಡೆಗೆ ಶಿಫ್ಟ್‌ – ಮಕ್ಕಳ ಆಯೋಗದಿಂದ ಮಾಹಿತಿ

    KILLING CRIME

    ಆರು ಮತ್ತು ಎಂಟು ವರ್ಷದ ಇಬ್ಬರು ಬಾಲಕಿಯರು ಸಹೋದರಿಯರಾಗಿದ್ದು, ಅಳುತ್ತ ಮನೆಗೆ ಹಿಂದಿರುಗಿದಾಗ ಅವರ ದೇಹದ ಮೇಲೆ ಏಟಿನ ಗುರುತುಗಳಿತ್ತು. ಅಲ್ಲದೇ ಓರ್ವ ಮಗಳು ಪ್ರಜ್ಞೆ ತಪ್ಪಿದಳು. ಇಬ್ಬರನ್ನೂ ರೂಮ್‍ನಲ್ಲಿ ಕೂಡಿ ಹಾಕಿಕೊಂಡು ಟ್ಯೂಷನ್ ಟೀಚರ್ ಪ್ಲಾಸ್ಟಿಕ್ ಪೈಪ್‍ನಿಂದ ಥಳಿಸಿದ್ದಾಳೆ ಎಂದು ಅವರ ತಂದೆ ಆರೋಪಿಸಿದ್ದಾರೆ. ಇದನ್ನೂ ಓದಿ: ಸಾಯಿಬಾಬಾನ 3ನೇ ಅವತಾರ ಅಂತ ಜನರಿಗೆ ವಂಚನೆ – ನಕಲಿ ಬಾಬಾ ವಿರುದ್ಧ FIR

    ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡ ದೆಹಲಿ ಮಹಿಳಾ ಆಯೋಗವು ಮೊದಲು ಪೊಲೀಸರಿಗೆ ನೋಟಿಸ್ ನೀಡಿತ್ತು ಮತ್ತು ಈ ಬಗ್ಗೆ ಪ್ರತಿಕ್ರಿಯಿಸಿದ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಇದೊಂದು ಭಯಾನಕ ಘಟನೆಯಾಗಿದ್ದು, ಬಾಲಕಿಯರಿಗೆ ಗಾಯಗಳಾಗಿರುವುದು ತುಂಬಾ ನೋವು ತರಿಸಿದೆ. ಒಬ್ಬ ಶಿಕ್ಷಕ ಈ ಪುಟ್ಟ ಹುಡುಗಿಯರನ್ನು ಹೇಗೆ ನಿರ್ದಯವಾಗಿ ಹೊಡೆಯುತ್ತಾನೆ? ಈ ಬಗ್ಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಸಮಿತಿಯು ಆರೋಪಿಗಳ ಬಂಧಿಸುವಂತೆ ಆಗ್ರಹಿಸಿದ್ದು, ಜೊತೆಗೆ ಎಫ್‍ಐಆರ್ ಪ್ರತಿಯನ್ನು ಸಹ ಕೇಳಿದೆ. ಸೆಪ್ಟೆಂಬರ್ 6ರೊಳಗೆ ಈ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ಮನವಿ ಮಾಡಿದೆ ಎಂದು ತಿಳಿಸಿದ್ದಾರೆ.

  • 15ರ ವಿದ್ಯಾರ್ಥಿನಿಯನ್ನೇ ಮದುವೆಯಾದ ಟ್ಯೂಷನ್ ಟೀಚರ್!

    15ರ ವಿದ್ಯಾರ್ಥಿನಿಯನ್ನೇ ಮದುವೆಯಾದ ಟ್ಯೂಷನ್ ಟೀಚರ್!

    – ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಗ್ರಾಮಸ್ಥರ ಹಿಂದೇಟು

    ಪಟ್ನಾ: ಟ್ಯೂಷನ್ ಕಲಿಸುತ್ತಿದ್ದ ಬಿಹಾರದ ಗ್ರಾಮವೊಂದರ ಶಿಕ್ಷಕನೊಬ್ಬ ತನ್ನ ಬಳಿ ಬರುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನೇ ಮದುವೆಯಾಗಿದ್ದಾನೆ.

    ನಾರಾಯಣ್‍ಪುರ ಗ್ರಾಮದಲ್ಲಿ ಶಿಕ್ಷಕ ಚಂದ್ರಪ್ರಕಾಶ್ ಮೆಹ್ತಾ(50) ವಿದ್ಯಾರ್ಥಿಗಳಿಗೆ ಖಾಸಗಿ ಟ್ಯೂಷನ್ ಕೇಂದ್ರವನ್ನು ನಡೆಸುತ್ತಿದ್ದನು. ಆತನ ಬಳಿ ಗ್ರಾಮದ ಹಲವು ಹೆಣ್ಣು ಮಕ್ಕಳು ಟ್ಯೂಷನ್‍ಗೆ ಹೋಗುತ್ತಿದ್ದರು. ಆದ್ರೆ ಕೆಲವು ದಿನಗಳ ಹಿಂದೆ ಚಂದ್ರಪ್ರಕಾಶ್ ಟ್ಯೂಷನ್‍ಗೆ ಬರುತ್ತಿದ್ದ 15 ವರ್ಷದ ವಿದ್ಯಾರ್ಥಿನಿಯೊಬ್ಬಳನ್ನು ಯಾರಿಗೂ ತಿಳಿಯದಂತೆ ವಿವಾಹವಾಗಿದ್ದನು. ಅಷ್ಟೇ ಅಲ್ಲದೆ ಅವಳ ಜೊತೆ ದೈಹಿಕ ಸಂಬಂಧವನ್ನು ಕೂಡ ಇಟ್ಟುಕೊಂಡಿದ್ದನು.

    ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಇಡೀ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ತಮ್ಮ ಮಕ್ಕಳಿಗೂ ಯಾರಾದರೂ ಮೋಡಿ ಮಾಡಿ ಮದುವೆಯಾಗಿಬಿಟ್ಟರೆ ಏನು ಗತಿ ಎಂದು ಹೆದರಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ.

    ಯಾರೋ ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ ಅಂತ ಶಿಕ್ಷಣದಿಂದ ವಂಚಿತರಾಗಿರುವ ಹೆಣ್ಣು ಮಕ್ಕಳು ಈಗ ಕಣ್ಣೀರಿಡುತ್ತಿದ್ದಾರೆ. ಘಟನೆ ಕುರಿತು ತಿಳಿಯುತ್ತಿದಂತೆ ಸ್ಥಳಕ್ಕೆ ಭೇಟಿ ನೀಡಿದ ಮಹಿಳಾ ಪರ ಸಂಘಟನೆಯ ಸದಸ್ಯರು ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೇ ಗ್ರಾಮಸ್ಥರು ಮಾತ್ರ ಯಾರ ಮೇಲೂ ನಮಗೆ ನಂಬಿಕೆ ಇಲ್ಲ. ನಮ್ಮ ಮಕ್ಕಳ ಭದ್ರತೆ ನಮಗೆ ಮುಖ್ಯ. ನಾವು ಅವರನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶೂ ಲೇಸ್‍ನಿಂದ ಬಾಲಕನ ಕುತ್ತಿಗೆ ಬಿಗಿದು ಕೊಲೆ

    ಶೂ ಲೇಸ್‍ನಿಂದ ಬಾಲಕನ ಕುತ್ತಿಗೆ ಬಿಗಿದು ಕೊಲೆ

    ಭೋಪಾಲ್: ಬಾಲಕನೊಬ್ಬನನ್ನು ಶಾಲೆಯಿಂದ ಕಿಡ್ನಾಪ್ ಮಾಡಿ, ಶೂ ಲೇಸ್‍ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಎರಡನೇ ತರಗತಿಯಲ್ಲಿ ಓದುತ್ತಿದ್ದ ಭರತ್ ಮೃತ ಬಾಲಕ. ಶಾಲೆಯಿಂದ ಸುಮಾರು 13 ಕಿ.ಮೀ ದೂರದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ಯೂಷನ್ ಶಿಕ್ಷಕ ವಿಶಾಲ್ ರೂಪಾನಿ (ಬಿಟ್ಟೂ)ನನ್ನು ಪೊಲೀಸರು ಸೋಮವಾರದಂದು ಬಂಧಿಸಿದ್ದಾರೆ.

    ಸೋಮವಾರ ಮಧ್ಯಾಹ್ನ ಶಾಲೆ ಮುಗಿದು ಎಷ್ಟು ಹೊತ್ತಾದ್ರೂ ಮಗ ಮನೆಗೆ ಬರದ ಹಿನ್ನೆಲೆಯಲ್ಲಿ ಭರತ್ ತಂದೆ ಪರಶುರಾಮ್ ಎಲ್ಲಾ ಕಡೆ ಹುಡುಕಾಡಿ ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಮಗ ಸುರಕ್ಷಿತವಾಗಿ ಮನೆಗೆ ವಾಪಸ್ ಬರುತ್ತಾನೆ ಎಂದುಕೊಂಡಿದ್ದ ತಂದೆಗೆ, ಭರತ್ ಹೆಣ ಗೋಣಿಚೀಲದಲ್ಲಿ ಸಿಕ್ಕಿದೆ ಎಂದು ಗೊತ್ತಾಗಿ ಶಾಕ್ ಆಗಿತ್ತು. ಬಾಲಕನನ್ನು ಆತನ ಶೂ ಲೇಸ್‍ನಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿತ್ತು. ಆತನ ಬ್ಯಾಗ್ ಮತ್ತು ಶೂ ಕೂಡ ಗೋಣಿಚೀಲದಲ್ಲೇ ತುಂಬಲಾಗಿತ್ತು. ಪೊಲೀಸರು ಗೋಣಿಚೀಲದಿಂದ ಶವವನ್ನು ಹೊರತೆಗೆದಾಗ ಶೂ ಲೇಸ್ ಬಾಲಕನ ಕುತ್ತಿಗೆಯಲ್ಲಿತ್ತು. ಪೊಲೀಸರು ಕೂಡ ಶೂ ಲೇಸನ್ನು ತೆಗೆಯಲು ಸಾಧ್ಯವಾಗದಂತೆ ತುಂಬಾ ಬಿಗಿಯಾಗಿ ಕಟ್ಟಲಾಗಿತ್ತು. ಕೊಲೆ ಮಾಡಿದ ನಂತರ ಆರೋಪಿ ಮೃತದೇಹವನ್ನು ಗೋಣಿಚೀಲದೊಳಗೆ ತುಂಬಿ ಹೊಲಿಗೆ ಹಾಕಿದ್ದ.

    ಬೈಕ್‍ನಲ್ಲಿ ಬಂದ ವ್ಯಕ್ತಿಯೊಬ್ಬ ಗೋಣಿ ಚೀಲ ಎಸೆದು ಹೋಗಿದ್ದನ್ನು ನೋಡಿದೆ. ಆದ್ರೆ ಹೆಚ್ಚೇನೂ ತಲೆಕೆಡಿಸಿಕೊಳ್ಳಲಿಲ್ಲ. ಅನಂತರ ನಾನು ಮನೆಗೆ ಹೋದೆ. ಸಂಜೆ ಸುಮಾರು 6.30ರ ಹೊತ್ತಿಗೆ ಇಬ್ಬರು ಹುಡುಗರು ಬ್ಯಾಗ್ ತೆರೆದು ನೋಡಿ ಕಿರುಚಿಕೊಂಡ್ರು. ನಾನು ಏನಾಗಿದೆ ಎಂದು ನೋಡಲು ಅಲ್ಲಿಗೆ ಹೋದಾಗ ಶಾಲಾ ಸಮವಸ್ತ್ರದಲ್ಲಿದ್ದ ಬಾಲಕನ ಶವ ನೋಡಿದೆ ಎಂದು ಇಲ್ಲಿನ ನಿವಾಸಿ ಭೈರೋನ್ ಕುಶ್ವಾಹ್ ಹೇಳಿದ್ದಾರೆ.

    ಟ್ಯೂಷನ್ ಶಿಕ್ಷಕ ಬಿಟ್ಟೂ ನನ್ನನ್ನು ಇಷ್ಟಪಡುತ್ತಿದ್ದ. ಮಗ ಭರತ್‍ನನ್ನು ಆತನೇ ಕೊಲೆ ಮಾಡಿದ್ದಾನೆಂದು ತಾಯಿ ಸವಿತಾ ಹೇಳಿದ್ದಾರೆ. ನೀನು ನಿನ್ನ ಗಂಡನನ್ನು ಬಿಟ್ಟು ಬಂದು ನನ್ನ ಜೊತೆ ಜೀವನ ನಡೆಸಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೊಲೆಗೆ ಎರಡು ದಿನಗಳ ಮುಂಚೆ ಬಿಟ್ಟೂ ಬೆದರಿಕೆ ಹಾಕಿದ್ದ ಎಂದು ಸವಿತಾ ಹೇಳಿದ್ದಾರೆ.

    ಎರಡು ದಿನಗಳ ಹಿಂದೆ ಟ್ಯೂಷನ್ ಶಿಕ್ಷಕನ ವಿರುದ್ಧ ದೂರು ನೀಡಿದ್ದರೂ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು ಎಂದು ಬಾಲಕನ ತಂದೆ ಪರಶುರಾಮ್ ಹೇಳಿದ್ದಾರೆ. ಟ್ಯೂಷನ್ ಶಿಕ್ಷಕನ ಬಗ್ಗೆ ಕೆಲವು ಅನುಮಾನಾಸ್ಪದ ಮಾಹಿತಿ ತಿಳಿದ ನಂತರ ಆತನಿಗೆ ಟ್ಯೂಷನ್ ಮಾಡಲು ಮನೆಗೆ ಬರುವುದು ಬೇಡ ಎಂದು ಹೇಳಿದ್ದೆವು. ಆದ್ರೂ ಆತ ಒಂದು ದಿನ ನಸುಕಿನ ಜಾವ 3 ಗಂಟೆ ವೇಳೆ ಮನೆಗೆ ನುಗ್ಗಿದ್ದ. ಇದಾದ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆವು. ಆಗ ನನ್ನ ಹೆಂಡತಿಯನ್ನ ಕಿಡ್ನಾಪ್ ಮಾಡಿ ಕುಟುಂಬವನ್ನ ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದ. ಪೊಲೀಸರು ಆಗಲೇ ಸೂಕ್ತ ಕ್ರಮ ಕೈಗೊಂಡಿದ್ದರೆ ಇವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಪರಶುರಾಮ್ ಹೇಳಿದ್ದಾರೆ.

    ಸದ್ಯ ಆರೋಪಿಯನ್ನ ಬಂಧಿಸಿರೋ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

  • 3 ವರ್ಷದ ಬಾಲಕನ ಮುಖ ಊದಿಕೊಳ್ಳುವಂತೆ ಥಳಿಸಿದ್ಳು ಟ್ಯೂಷನ್ ಟೀಚರ್

    3 ವರ್ಷದ ಬಾಲಕನ ಮುಖ ಊದಿಕೊಳ್ಳುವಂತೆ ಥಳಿಸಿದ್ಳು ಟ್ಯೂಷನ್ ಟೀಚರ್

    ಪುಣೆ: 3 ವರ್ಷದ ಬಾಲಕನ ಮೇಲೆ ಟ್ಯೂಷನ್ ಶಿಕ್ಷಕಿ ಮನಬಂದಂತೆ ಥಳಿಸಿರುವ ಅಮಾನವೀಯ ಘಟನೆ ಪುಣೆಯಲ್ಲಿ ನಡೆದಿದೆ.

    ಶಿಕ್ಷಕಿ ಮಗುವಿಗೆ ಹೇಗೆ ಥಳಿಸಿದ್ದಾಳೆಂದರೆ ಘಟನೆ ನಡೆದು ಮೂರು ದಿನಗಳಾದ್ರೂ ಮಗುವಿನ ಮುಖದಲ್ಲಿ ಊತ ಇಳಿದಿಲ್ಲ. ಸೆಪ್ಟೆಂಬರ್ 11ರಂದು ಇಲ್ಲಿನ ಪಿಂಪಲ್ ಸೌದಾನಗರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬುಧವಾರ ರಾತ್ರಿ ಪೊಲೀಸರು ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಮಗುವಿನ ಪೋಷಕರ ದೂರಿನನ್ವರ ಪೊಲೀಸರು ಶಿಕ್ಷಕಿ ಭಾಗ್ಯಶ್ರೀ ಪಿಳ್ಳೈನನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 324 ಹಾಗೂ 2015ರ ಬಾಲನ್ಯಾಯ ಕಾಯ್ದೆಯ ಸೆಕ್ಷನ್ 75ರಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಆರೋಪಿ ಶಿಕ್ಷಕಿ ಭಾಗ್ಯಶ್ರೀ ಪಿಳ್ಳೈ ವಾಸವಿರುವ ಸೌದಾನಗರ್ ಪ್ರದೇಶದಲ್ಲೇ ಮಗುವಿನ ಪೋಷಕರು ವಾಸವಿದ್ದಾರೆ. ಬಾಲಕನ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ತಮ್ಮ ಮಗ ಚೆನ್ನಾಗಿ ಓದಲೆಂದು ಶಿಕ್ಷಕಿಯ ಬಳಿ ಟ್ಯೂಷನ್‍ಗೆ ಕಳಿಸುತ್ತಿದ್ದರು.

    ಸೋಮವಾರದಂದು ಬಾಲಕ ಭಾಗ್ಯಶ್ರೀ ಅವರ ಮನೆಗೆ ಹೋಗಿದ್ದ. ಪೋಷಕರು ಮನೆಗೆ ಹಿಂದಿರುಗಿದ ನಂತರ ಮಗುವಿನ ಮುಖ ತುಂಬಾ ಊದಿಕೊಂಡಿರುವುದನ್ನ ನೋಡಿದ್ದರು. ಈ ಬಗ್ಗೆ ಬಾಲಕನನ್ನು ಕೇಳಿದಾಗ ತನ್ನ ಶಿಕ್ಷಕಿ ಮರದ ಸ್ಕೇಲ್‍ನಿಂದ ಕೈ, ಬೆನ್ನು ಹಾಗೂ ತಲೆಗೆ ಹೊಡೆದಿದ್ದಾಗಿ ಹೇಳಿದ್ದಾನೆ ಎಂದು ಸಾಂಗ್ವಿ ಪೊಲೀಸ್ ಠಾಣೆಯ ಹಿರಿಯ ಇನ್‍ಸ್ಪೆಕ್ಟರ್ ಅಜಯ್ ಚಾಂದ್‍ಖೇಡೇ ಹೇಳಿದ್ದಾರೆ.

    ಮಗುವಿನ ಪರಿಸ್ಥಿತಿ ನೋಡಿ ಪೋಷಕರು ಶಿಕ್ಷಕಿ ವಿರುದ್ಧ ದೂರು ದಾಖಲಿಸಲು ಸಾಂಗ್ವಿ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಆದ್ರೆ ಪೊಲೀಸರು ಕೂಡಲೇ ಪ್ರಕರಣ ದಾಖಲಿಸಿಕೊಳ್ಳಲಿಲ್ಲ. ಸಸೂನ್ ಆಸ್ಪತ್ರೆಗೆ ಕಳಿಸಿದ್ರು ಎಂದು ಪೋಷಕರು ಹೇಳಿದ್ದಾರೆ.

    ಟ್ಯೂಷನ್ ಟೀಚರ್ ಮಗುವಿನ ಚಿಕಿತ್ಸೆಗೆ ಹಣ ಕೊಡಲು ಒಪ್ಪಿದ್ದರಿಂದ ಪೋಷಕರು ಪ್ರಕರಣ ದಾಖಲಿಸಬೇಕೋ ಬೇಡವೋ ಎಂಬ ಬಗ್ಗೆ ದ್ವಂದ್ವದಲ್ಲಿದ್ದರು. ಆದ್ರೆ ಬುಧವಾರದಂದು ಪ್ರಕರಣ ದಾಖಲಿಸಲು ತೀರ್ಮಾನಿಸಿದ್ರು. ಅವರು ನಮ್ಮ ಬಳಿ ಬಂದ ಕೂಡಲೇ ಪ್ರಕರಣ ದಾಖಲಿಸಿದ್ದೇವೆ. ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಿದ್ದೇವೆ ಎಂದು ಅಜಯ್ ಹೇಳಿದ್ದಾರೆ.

    ದೂರು ಸ್ವೀಕರಿಸಿದ ನಂತರ ಆರೋಪಿ ಶಿಕ್ಷಕಿ ಭಾಗ್ಯಶ್ರೀಯನ್ನು ಪೊಲೀಸರು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಒಂದು ದಿನ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.