Tag: Tubelight

  • ಬಿಡುಗಡೆಗೆ ಮುನ್ನವೇ ಬಾಹುಬಲಿ-2 ದಾಖಲೆ ಮುರಿದ ಟ್ಯೂಬ್‍ಲೈಟ್!

    ಬಿಡುಗಡೆಗೆ ಮುನ್ನವೇ ಬಾಹುಬಲಿ-2 ದಾಖಲೆ ಮುರಿದ ಟ್ಯೂಬ್‍ಲೈಟ್!

    ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸ್ಕ್ರೀನ್ ಗಳಲ್ಲಿ ತೆರೆ ಕಾಣುವ ಮೂಲಕ ರಾಜಮೌಳಿ ನಿರ್ದೇಶನದ ಬಾಹುಬಲಿ ಹೊಸ ದಾಖಲೆ ಬರೆದಿತ್ತು. ಆದರೆ ಸಲ್ಮಾನ್ ಅಭಿನಯದ ಟ್ಯೂಬ್‍ಲೈಟ್ ಈ ದಾಖಲೆಯನ್ನು ಬ್ರೇಕ್ ಮಾಡಿದೆ.

    ಏಪ್ರಿಲ್ 28ಕ್ಕೆ ರಿಲೀಸ್ ಆಗಿದ್ದ ಬಾಹುಬಲಿ-2 ಒಟ್ಟು 9 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿತ್ತು. ಆದರೆ ಟ್ಯೂಬ್‍ಲೈಟ್ 10 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಸಿನಿ ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಾಲ ಟ್ವೀಟ್ ಮಾಡಿದ್ದಾರೆ.

    ಅಂತಾರಷ್ಟ್ರೀಯ ಮಾರುಕಟ್ಟೆಯಲ್ಲಿ 50ಕ್ಕೂ ಹೆಚ್ಚು ದೇಶಗಳಲ್ಲಿ ಟ್ಯೂಬ್‍ಲೈಟ್ ಬಿಡುಗಡೆಯಾದರೆ, ಅಮೆರಿಕದಲ್ಲಿ 330ಕ್ಕೂ ಅಧಿಕ ಸ್ಕ್ರೀನ್, ಇಂಗ್ಲೆಂಡಿನಲ್ಲಿ 205ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆ ಎಂದು ರಮೇಶ್ ಬಾಲ ತಿಳಿಸಿದ್ದಾರೆ.

    1962ರ ಭಾರತ ಚೀನಾ ಯುದ್ಧದ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಲಕ್ಷ್ಮಣ್ ಸಿಂಗ್ ಪಾತ್ರವನ್ನು ನಿರ್ವಹಿಸಿದ್ದಾರೆ. ಕಬೀರ್ ಖಾನ್ ನಿರ್ದೇಶನದ ಸಲ್ಮಾನ್ ಖಾನ್ ನಿರ್ಮಾಣದ ಟ್ಯೂಬ್‍ಲೈಟ್ ಜೂನ್ 23ರಂದು ಬಿಡುಗಡೆಯಾಗಲಿದೆ.

     

    https://twitter.com/rameshlaus/status/875539191270064128

  • ಹೊಟ್ಟೆ ಆಪರೇಷನ್‍ಗೆ ಒಳಗಾದ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್!

    ಹೊಟ್ಟೆ ಆಪರೇಷನ್‍ಗೆ ಒಳಗಾದ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್!

    ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಕಾಮಿಡಿ ಸ್ಟಾರ್ ಸುನಿಲ್ ಗ್ರೋವರ್‍ನಿಂದ ಹೊಟ್ಟೆ ಆಪರೇಷನ್ ಮಾಡಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಟ್ಯೂಬ್‍ಲೈಟ್ ಸಿನಿಮಾದ ಪ್ರಚಾರದ ವೇಳೆ ಸಲ್ಮಾನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

    ಸಲ್ಮಾನ್ ಖಾನ್ ತಮ್ಮ ಸಿನಿಮಾದ ಪ್ರಮೋಶನ್‍ಗಾಗಿ ಖಾಸಗಿ ಚಾನೆಲ್‍ನ ಕಾಮಿಡಿ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಕಾಮಿಡಿ ಸ್ಟಾರ್ ಸುನಿಲ್ ಗ್ರೋವರ್ ಡಾಕ್ಟರ್ ವೇಷದಲ್ಲಿ ಬಂದು ಸಲ್ಲುಗೆ ಆಪರೇಷನ್ ಮಾಡುವ ಮೂಲಕ ಎಲ್ಲರನ್ನು ನಗಿಸಿದ್ದಾರೆ.

    ಸೋನಿ ಚಾನೆಲ್ ಸಲ್ಮಾನ್ ಖಾನ್ ಅವರ ಟ್ಯೂಬ್‍ಲೈಟ್ ಸಿನಿಮಾದ ಪ್ರಚಾರಕ್ಕಾಗಿ `ಸೂಪರ್ ನೈಟ್ ವಿಥ್ ಟ್ಯೂಬ್‍ಲೈಟ್’ ಎಂಬ ವಿಶೇಷ ಕಾರ್ಯಕ್ರಮ ಏರ್ಪಡಿಸಿದೆ.

    ಸುನಿಲ್ ಗ್ರೋವರ್ ಇದಕ್ಕೂ ಮೊದಲು ಸೋನಿ ಚಾನೆಲ್ `ದಿ ಕಪಿಲ್ ಶರ್ಮಾ ಶೋ’ದಲ್ಲಿ ಡಾಕ್ಟರ್ ಮಶೂರ್ ಗುಲಾಟಿ ಹಾಗು ರಿಂಕು ಬಾಬಿ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರನ್ನು ನಗಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಕಪಿಲ್ ಶರ್ಮಾ ಮತ್ತು ಸುನಿಲ್ ಗ್ರೋವರ್ ಇಬ್ಬರ ನಡುವೆ ಜಗಳ ನಡೆದಿದ್ದು, ಸುನಿಲ್ ಕಾರ್ಯಕ್ರಮದಿಂದ ಹೊರ ಉಳಿದಿದ್ದಾರೆ.

    ಟ್ಯೂಬ್‍ಲೈಟ್ ಸಿನಿಮಾ ಇದೇ ತಿಂಗಳು ರಂಜಾನ್ ಹಬ್ಬದಂದು ತೆರೆಕಾಣಲಿದೆ. ಸಲ್ಮಾನ್ ಖಾನ್, ಸೋಹೆಲ್ ಖಾನ್ ಮತ್ತು ಚೀನಾ ನಟಿ ಝು ಝು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    https://www.youtube.com/watch?v=0cwrhTjjZJA

    https://www.youtube.com/watch?v=R21CzoBbmPE

    https://www.youtube.com/watch?v=wZu9tZ6Yph4

    https://www.youtube.com/watch?v=dPDjoC5ukuY

    https://www.youtube.com/watch?v=2ouZRkjBgxM

    https://www.youtube.com/watch?v=HChLxe1Qcsw

  • ಸಲ್ಮಾನ್ ಖಾನ್ ನಟನೆಯ `ಟ್ಯೂಬ್‍ಲೈಟ್’ ಚಿತ್ರದ ಟೀಸರ್ ಬಿಡುಗಡೆ

    ಸಲ್ಮಾನ್ ಖಾನ್ ನಟನೆಯ `ಟ್ಯೂಬ್‍ಲೈಟ್’ ಚಿತ್ರದ ಟೀಸರ್ ಬಿಡುಗಡೆ

    ಮುಂಬೈ: ಬಾಲಿವುಡ್‍ನ ಬಹುನಿರೀಕ್ಷಿತ ಸಲ್ಮಾನ್ ಖಾನ್ ನಟನೆಯ `ಟ್ಯೂಬ್‍ಲೈಟ್’ ಚಿತ್ರದ ಫಸ್ಟ್ ಟೀಸರ್ ಲಾಂಚ್ ಆಗಿದೆ.

    1962ರಲ್ಲಿ ಭಾರತ-ಚೀನಾ ನಡುವೆ ನಡೆದ ಯುದ್ಧದ ಸಂದರ್ಭದ ಕಥೆ ಇದಾಗಿದ್ದು ನಿರ್ದೇಶಕ ಕಬೀರ್ ಖಾನ್ ಕಲ್ಪನೆಯಲ್ಲಿ ಚಿತ್ರ ಮೂಡಿಬಂದಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಒಬ್ಬ ಪೆದ್ದನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಬಿಡುಗಡೆಯಾಗಿ ಕೆಲವೇ ಗಂಟೆಯಲ್ಲಿ 30ಲಕ್ಷಕ್ಕೂ ಹೆಚ್ಚಿ ಬಾರಿ ವೀಕ್ಷಣೆಯಾಗಿದೆ.

    ಸಲ್ಮಾನ್ ಖಾನ್ ಕೂಡ ಟೀಸರನ್ನ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು, ನಿರ್ದೇಶಕ ಕರಣ್ ಜೋಹರ್, ನಟಿಯರಾದ ಅಥಿಯಾ ಶೆಟ್ಟಿ, ದಿಯಾ ಮಿರ್ಜ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಹಾಗೂ ಸಿನಿರಸಿಕರು ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಜೂನ್ 23ಕ್ಕೆ `ಟ್ಯೂಬ್‍ಲೈಟ್’ ಚಿತ್ರ ವಿಶ್ವಾದ್ಯಂತ ಬೆಳ್ಳಿಪರದೆ ಮೇಲೆ ಬೆಳಗಲಿದೆ.

  • ಮುಗ್ದ ಮುಖದ ಸಲ್ಮಾನ್ ಖಾನ್ `ಟ್ಯೂಬ್‍ಲೈಟ್’ ಚಿತ್ರದ ಹೊಸ ಪೊಸ್ಟರ್ ರಿಲೀಸ್

    ಮುಗ್ದ ಮುಖದ ಸಲ್ಮಾನ್ ಖಾನ್ `ಟ್ಯೂಬ್‍ಲೈಟ್’ ಚಿತ್ರದ ಹೊಸ ಪೊಸ್ಟರ್ ರಿಲೀಸ್

    ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ತಮ್ಮ ಮುಂದಿನ ಚಿತ್ರ ಟ್ಯೂಬ್ ಲೈಟ್ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರದ ಪೋಸ್ಟರ್‍ನಲ್ಲಿ ಹಾಫ್ ಸ್ವೆಟರ್ ಜೊತೆ ನೀಲಿ ಬಣ್ಣದ ಚೆಕ್ಸ್ ಶರ್ಟ್ ಹಾಕಿ, ಕೊರಳಿಗೆ ಎರಡು ಶೂಗಳನ್ನು ಹಾಕಿಕೊಂಡು ನಮಸ್ತೆ ಮಾಡುವುದನ್ನು ನಾವು ಕಾಣಬಹುದು.

    ಸಲ್ಮಾನ್ ಖಾನ್ ತಮ್ಮ ಚಿತ್ರದ ಪೊಸ್ಟರ್‍ನ್ನು ತಮ್ಮ ಟ್ವೀಟ್ ಮಾಡಿದ್ದು, ಫೋಟೋ ಜೊತೆಗೆ `ಶಾಂತಿ, ಪ್ರೀತಿ, ಗೌರವ ಮತ್ತು ಬೆಳಕು ನಿಮ್ಮ ಜೀವನದಲ್ಲಿರಲಿ ಎಂದು ಟ್ಯೂಬ್‍ಲೈಟ್ ಚಿತ್ರತಂಡ ಹಾರೈಸುತ್ತದೆ’ ಎಂದು ಬರೆದಿದ್ದಾರೆ.

    ಈಗಾಗಲೇ ಟ್ಯೂಬ್‍ಲೈಟ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, 5 ಲಕ್ಷಕ್ಕೂ ಹೆಚ್ಚು ವ್ಯೂವ್ ಪಡೆದಿದೆ. ಚಿತ್ರಕ್ಕೆ ಕಬೀರ್ ಖಾನ್ ನಿರ್ದೇಶನವಿದ್ದು, ಸಲ್ಮಾನ್‍ಗೆ ಜೊತೆಯಾಗಿ ಚೈನಿಸ್ ನಟಿ ಜುಜು ಕಾಣಿಸಿಕೊಂಡಿದ್ದಾರೆ. ಏಕ್ ಥಾ ಟೈಗರ್ ಮತ್ತು ಭಜರಂಗಿ ಭಾಯಿಜಾನ್ ಚಿತ್ರಗಳನ್ನು ನೀಡಿದ್ದ ಹಿಟ್ ಜೋಡಿ ಸಲ್ಮಾನ್ ಮತ್ತು ಕಬೀರ್ ಖಾನ್ ಟ್ಯೂಬ್‍ಲೈಟ್ ಚಿತ್ರವನ್ನು ತೆರೆಗೆ ತರಲು ತಯಾರಾಗಿದೆ.

    ಟ್ಯೂಬ್‍ಲೈಟ್ ಸಿನಿಮಾ ಜೂನ್ ತಿಂಗಳಲ್ಲಿ ಈದ್ ಪ್ರಯುಕ್ತ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಸಲ್ಮಾನ ಸಹೋದರ ಸೋಹೆಲ್ ಖಾನ್ ಮತ್ತು ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸಹ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಸಿಗಲಿದ್ದಾರೆ.