Tag: TSRTC

  • 12 ವರ್ಷದೊಳಗಿನ ಮಕ್ಕಳಿಗೆ ಉಚಿತ ಬಸ್ ಪ್ರಯಾಣ: TSRTC ಸಾರಿಗೆ ಸಂಸ್ಥೆ

    12 ವರ್ಷದೊಳಗಿನ ಮಕ್ಕಳಿಗೆ ಉಚಿತ ಬಸ್ ಪ್ರಯಾಣ: TSRTC ಸಾರಿಗೆ ಸಂಸ್ಥೆ

    ಹೈದರಾಬಾದ್: 12 ವರ್ಷದೊಳಗಿನ ಮಕ್ಕಳಿಗೆ ಉಚಿತ ಬಸ್‌ ಪ್ರಯಾಣ ಸೌಲಭ್ಯ ನೀಡಲಾಗುವುದೆಂದು ತೆಲಂಗಾಣ ಸಾರಿಗೆ ಇಲಾಖೆ ಘೋಷಿಸಿದೆ.

    ಟಿಎಸ್‍ಆರ್‌ಟಿಸಿ(Telangana State Road Transport Corporation) ಕೇಂದ್ರ ಕಚೇರಿಯ ಬಸ್ ಭವನದಲ್ಲಿ ನಡೆದ ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಟಿಎಸ್‍ಆರ್‌ಟಿಸಿ(TSRTC) ಅಧ್ಯಕ್ಷ ಬಾಜಿರೆಡ್ಡಿ ನೂತನ ಸವಲತ್ತನ್ನು ಘೋಷಿಸಿದರು. ತಮ್ಮ ಪೋಷಕರೊಂದಿಗೆ ಪ್ರಯಾಣಿಸುವ ಮಕ್ಕಳಿಗೆ ಈ ಅವಕಾಶವನ್ನು ನೀಡಲಾಗುತ್ತಿದೆ. 12 ವರ್ಷದ ಒಳಗಿನ ಮಕ್ಕಳು ಉಚಿತವಾಗಿ ಬಸ್‍ನಲ್ಲಿ ಪ್ರಯಾಣಿಸಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಂಜನಾ ಗಲ್ರಾನಿ

    ಹಂತ ಹಂತವಾಗಿ ಟಿಎಸ್‍ಆರ್‌ಟಿಸಿ ಆದಾಯ ಹೆಚ್ಚಿಸಿಕೊಳ್ಳುವತ್ತ ತಾವು ಗಮನಹರಿಸಿಸಲಾಗುತ್ತದೆ. ಸಂಕ್ರಾಂತಿ, ಹಬ್ಬದ ವಿಶೇಷ ಬಸ್‍ಗಳಲ್ಲಿ ಸಾಮಾನ್ಯ ದರವನ್ನು ಮಾತ್ರ ವಿಧಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ, ನಿರೀಕ್ಷಿತ ಮಟ್ಟದಲ್ಲಿ ಆದಾಯವನ್ನು ಹೆಚ್ಚಿಸಲು ಸಾಧ್ಯವಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಕುಟುಂಬಕ್ಕೆ ಹೊಸ ಅತಿಥಿಯ ಆಗಮನದ ನೀರಿಕ್ಷೆಯಲ್ಲಿದ್ದಾರೆ ಕಾಜಲ್ ಅಗರ್ವಾಲ್

  • ಸರ್ಕಾರಿ ಬಸ್‍ನಲ್ಲಿ ಇಬ್ಬರು ಮಕ್ಕಳ ಜನನ – ಗಿಫ್ಟ್ ಆಗಿ ಸಿಕ್ತು  ಜೀವನಪರ್ಯಂತ ಉಚಿತ ಪಾಸ್

    ಸರ್ಕಾರಿ ಬಸ್‍ನಲ್ಲಿ ಇಬ್ಬರು ಮಕ್ಕಳ ಜನನ – ಗಿಫ್ಟ್ ಆಗಿ ಸಿಕ್ತು ಜೀವನಪರ್ಯಂತ ಉಚಿತ ಪಾಸ್

    ಹೈದರಾಬಾದ್: ಸರ್ಕಾರಿ ಬಸ್‍ಗಳಲ್ಲಿ ಜನಿಸಿದ ಇಬ್ಬರು ಹೆಣ್ಣು ಮಕ್ಕಳಿಗೆ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಟಿಎಸ್‌ಆರ್‌ಟಿಸಿ) ಜೀವನಪರ್ಯಂತ ಪ್ರಯಾಣಿಸಲು ಉಚಿತ ಬಸ್ ಪಾಸ್ ನೀಡಿದೆ.

    ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಯು ಬಸ್‍ನಲ್ಲಿ ಜನಿಸಿದ ಎರಡು ಶಿಶುಗಳಿಗೆ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ಉಚಿತ ಜೀವಮಾನ ಪಾಸ್‍ಗಳನ್ನು ಘೋಷಿಸಿದೆ. ನವೆಂಬರ್ 30ರಂದು ನಾಗರಕರ್ನೂಲ್ ಡಿಪೋಗೆ ಸೇರಿದ ಬಸ್‍ನಲ್ಲಿ ಪೆದ್ದಕೋತಪಲ್ಲಿ ಗ್ರಾಮದ ಬಳಿ ಮಹಿಳೆಯೊಬ್ಬರಿಗೆ ಹೆಣ್ಣು ಮಗು ಜನಿಸಿತ್ತು. ನಂತರ ಡಿಸೆಂಬರ್ 7ರಂದು ಸಿದ್ದಿಪೇಟೆ ಬಳಿ ಆಸಿಫಾಬಾದ್ ಡಿಪೋಗೆ ಸೇರಿದ ಬಸ್‍ನಲ್ಲಿ ಇನ್ನೋರ್ವ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

    ಈ ಇಬ್ಬರು ಮಹಿಳೆಯರಿಗೆ ಅನಿರೀಕ್ಷಿತವಾಗಿ ಬಸ್‍ನಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಟಿಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರು ಮಹಿಳೆಯರಿಗೆ ಹೆರಿಗೆ ಸಮಯದಲ್ಲಿ ಸಹಾಯ ಮಾಡಿದ್ದರು. ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಪತನ – ಬದುಕುಳಿದಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಯಾರು ಗೊತ್ತಾ?

    ಬಳಿಕ ಟಿಎಸ್‌ಆರ್‌ಟಿಸಿ ಸಿಬ್ಬಂದಿ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ತಾಯಂದಿರು ಮತ್ತು ನವಜಾತ ಶಿಶುಗಳಿಗೆ ಹೆಚ್ಚಿನ ಚಿಕಿತ್ಸೆ ಗಾಗಿ ಆಂಬುಲೆನ್ಸ್ ಮೂಲಕ ಸಮೀಪದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಇದೀಗ ತಾಯಿ ಮಕ್ಕಳು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:  ವೆಲ್ಲಿಂಗ್ಟನ್‍ನಲ್ಲಿ ಹುತಾತ್ಮ ಯೋಧರಿಗೆ ಅಂತಿಮ ನಮನ, ಸೇನಾ ಗೌರವ

    BUS

    ಟಿಎಸ್‌ಆರ್‌ಟಿಸಿ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿ. ಸಿ. ಸಜ್ಜಾನರ್ ಟಿಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಪ್ರಯಾಣಿಕರ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಇಬ್ಬರು ಇಬ್ಬರು ಹೆಣ್ಣು ಮಕ್ಕಳಿಗೆ ಜೀವನಪರ್ಯಂತ ಉಚಿತವಾಗಿ ಪ್ರಯಾಣಿಸಲು ಬಸ್ ಪಾಸ್ ನೀಡುವುದಾಗಿ ಘೋಷಿಸಿದರು.